Categories
e-ದಿನ

ಡಿಸೆಂಬರ್-13

ಪ್ರಮುಖ ಘಟನಾವಳಿಗಳು:

1642: ಡಚ್ ನಾವಿಕ ಏಬಲ್ ತಾಸ್ಮಾನ್ ನ್ಯೂಜಿಲ್ಯಾಂಡ್ ದೇಶವನ್ನು ಕಂಡುಹಿಡಿದರು.

1809: ಅರಿವಳಿಕೆ ಇಲ್ಲದ ಮೊದಲ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

1816: ಜಾನ್ ಆಡಮ್ಸನ್ ಶುಷ್ಕ ಹೆಗು ನಿಲ್ಲುವ ಸ್ಥಳಕ್ಕೆ ಪೇಟೆಂಟ್ ಪಡೆದರು.

1883: ಒಂಟಾರಿಯೋ ಮತ್ತು ಮನಿಟೋಬದ ನಡುವಿನ ಗಡಿಯನ್ನು ಸ್ಥಾಪಿಸಲಾಯಿತು.

1884: ನಾಣ್ಯವನ್ನು ಬಳಸಿ ತೂಕ ನೋಡುವ ಯಂತ್ರಕ್ಕೆ ಪರ್ಸಿ ಏವರಿ ಪೇಟೆಂಟ್ ಪಡೆದರು.

1913: ಅಮೇರಿಕಾದಲ್ಲಿ ಫೆಡರಲ್ ರಿಸರ್ವ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.

1920: ಲೀಗ್ ಆಫ್ ನೇಷನ್ಸ್ ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಸ್ಥಾಪಿಸಿತು.

1928: ಟೈ ಮೇಲೆ ಕ್ಲಿಪ್ ಅನ್ನು ವಿನ್ಯಾಸಗೊಳಿಸಲಾಯಿತು.

1983: ಬ್ರಿಟಿಷ್ ವಿಮಾನ ಸಂಸ್ಥೆಯಾದ ಬ್ರಿಟಿಷ್ ಏರ್ವೇಸ್ ಅನ್ನು ಸ್ಥಾಪಿಸಲಾಯಿತು.

2001: ಭಾರತೀಯ ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ಕಾರಣ 12 ಜನ ಮೃತಪಟ್ಟರು.

ಪ್ರಮುಖ ಜನನ/ಮರಣ:

1940: ಭಾರತದ ಅರ್ಥಶಾಸ್ತ್ರಜ್ಞ ಸಂಜಯ್ ಲಾಲ್ ಜನಿಸಿದರು.

1952: ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟಿ ಲಕ್ಷ್ಮಿ ಜನಿಸಿದರು.

1954: ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಹರ್ಷ್ ವರ್ಧನ್ ಜನಿಸಿದರು.

1955: ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕರ್ ಜನಿಸಿದರು.

1960: ತೆಲುಗು ಚಿತ್ರರಂಗದ ಖ್ಯಾತ ನಟ ವೆಂಕಟೇಶ್ ಜನಿಸಿದರು.

1963: ಕೇಂದ್ರ ಸರ್ಕಾರದ ರೈಲ್ವೆ ಮತ್ತು ಜವಳಿ ಸಚಿವರಾಗಿದ್ದ ಬಸನಗೌಡ ಪಾಟಿಲ್ ಜನಿಸಿದರು.

1969: ಆರ್.ಬಿ.ಐಯ 4ನೇ ಗವರ್ನರ್ ಆಗಿದ್ದ ಬೆನಗಲ್ ರಾಮರಾವ್ ನಿಧನರಾದರು.

1981: ಭಾರತದ ಕ್ರಿಕೆಟ್ ಆಟಗಾರ ಅಜಯ್ ರಾತ್ರ ಜನಿಸಿದರು.

1986: ಭಾರತೀಯ ಸಮಾನಾಂತರ ಚಿತ್ರಗಳಲ್ಲಿ ಪ್ರಭಲ ಮಹಿಳಾ ಪಾತ್ರಗಳಲ್ಲಿ ನಟಿಸುತ್ತಿದ್ದ ನಟಿ ಸ್ಮಿತಾ ಪಾಟಿಲ್ ನಿಧನರಾದರು.