Categories
e-ದಿನ

ಡಿಸೆಂಬರ್-18

 

ಪ್ರಮುಖ ಘಟನಾವಳಿಗಳು:

1849: ದೂರದರ್ಶಕದ ಮೂಲಕ ಚಂದ್ರನ ಮೊದಲ ಛಾಯಾಚಿತ್ರವನ್ನು ವಿಲಿಯಂ ಬಾಂಡ್ ಪಡೆದುಕೊಂಡರು.

1862: ಮೊದಲ ಮೂಳೆ ಚಿಕಿತ್ಸಾ ಆಸ್ಪತ್ರೆಯನ್ನು ನ್ಯೂಯಾರ್ಕಿನಲ್ಲಿ ಸ್ಥಾಪಿಸಲಾಯಿತು.

1865: ಅಮೇರಿಕಾದಲ್ಲಿ ಮೊದಲ ಜಾನುವಾರು ಆಮದು ಕಾನೂನು ಜಾರಿಗೆ ತರಲಾಯಿತು.

1935: ಅಮೇರಿಕಾದಲ್ಲಿ ಮೊದಲ ಬಾರಿಗೆ 1 ಡಾಲರ್ ಬೆಳ್ಳಿ ಪ್ರಮಾಣಪತ್ರವನ್ನು ನೀಡಲಾಯಿತು.

1957: ಪೆನ್ಸಿಲ್ವೇನಿಯಾದಲ್ಲಿ ಶಿಪ್ಪಿಂಗ್ ಪೋರ್ಟಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ ಉದ್ಘಾಟಿಸಲಾಯಿತು. ಇದು ಪರಮಾಣು ಸೌಲಭ್ಯದ ಮೂಲಕ ವಿದ್ಯುತ್ ಉತ್ಪಾದಿಸಿದ ಮೊದಲ ಘಟಕ.

1961: ಗೋವಾ, ದಾಮನ್ ಮತ್ತು ಡಿಯುವನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಭಾರತ ಸೇನೆ ಆಪರೇಷನ್ “ವಿಜಯ್” ಕ್ರಮ ಕೈಗೊಂಡಿತು.

1969: ಬ್ರಿಟನ್ನಿನ ಸಂಸತ್ತು ಕೊಲೆಗೆ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿತು.

1970: ಇಟಲಿಯಲ್ಲಿ ವಿಚ್ಛೇಧನವನ್ನು ಕಾನೂನು ಬದ್ದಗೊಳಿಸಲಾಯಿತು.

1996: ಟೆಲಿವಿಷನ್ ಉದ್ಯಮದ ಕಾರ್ಯನಿರ್ವಾಹಕರು ರೇಟಿಂಗ್ ವ್ಯವಸ್ಥೆಯನ್ನು ಅಳವಡಸಿಕೊಳ್ಳಲು ಒಪ್ಪಿದರು.

ಪ್ರಮುಖ ಜನನ/ಮರಣ:

1645: ಮುಘಲ್ ಸಾಮ್ರಾಜ್ಯದ ರಾಜ ಶಹಜಹಾನ್ ಅವರ ಪತ್ನಿ ನೂರ್ ಜಹಾನ್ ನಿಧನರಾದರು.

1887: ಭಾರತದ, ನಟ, ಗಾಯಕ, ಚಿತ್ರಕಥೆಗಾರ ಬಿಕಾರಿ ಠಾಕುರ್ ಜನಿಸಿದರು.

1928: ಭಾರತದ ಕಲೀಫ ಮತ್ತು ಲೇಖಕ ಮಿರ್ಜಾ ತಹೀರ್ ಅಹಮದ್ ಜನಿಸಿದರು.

1955: ಭಾರತದ ಉದ್ಯಮಿ ವಿಜಯ ಮಲ್ಯ ಜನಿಸಿದರು.

1955: ಭಾರತೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಪಬ್ಲೋ ಬರ್ಥೋಲೋಮೊ ಜನಿಸಿದರು.

1973: ಭಾರತೀಯ ಮೂಲದ ಪಾಕಿಸ್ತಾನಿ ಧಾರ್ಮಿಕ ನಾಯಕ ಮತ್ತು ತತ್ವಜ್ಞಾನಿ ಅಲ್ಲಮ್ಮ ರಶೀದ್ ತುರಬಿ ನಿಧನರಾದರು.

1977: ಬಾಲಿವುಡಿನ ಮತ್ತು ಕಿರುತೆರೆಯ ನಾಯಕಿ ಶ್ರುತಿ ಸೇಥ್ ಜನಿಸಿದರು.

1982: ಭಾರತದ ಮಾಡೆಲ್ ನಮನ್ ಶಾ ಜನಿಸಿದರು.

2004: ಭಾರತೀಯ ಟೆಸ್ಟ್ ಕ್ರಿಕೆಟ್ ಆಟಗಾರ ವಿಜಯ್ ಹಜಾರೆ ನಿಧನರಾದರು.