Categories
e-ದಿನ

ಡಿಸೆಂಬರ್-19

 

ಪ್ರಮುಖ ಘಟನಾವಳಿಗಳು:

1854: ಬಾಗುವ ಸ್ಥರಗಳನ್ನು ಹೊಲಿಯಲು ಹೊಲಿಗೆ ಯಂತ್ರಕ್ಕೆ ಅಲೆನ್ ವಿಲ್ಸನ್ ಪೇಟೆಂಟ್ ಪಡೆದರು.

1903: ಮುಖ್ಯ ಕೇಬಲ್ ಗಳಿಗೆ ಪೂರಕವಾಗಿರುವ ಉಕ್ಕಿನ ಗೋಪುರಗಳನ್ನು ಹೊಂದಿ ಮೊದಲ ತೂಗು ಸೇತುವೆಯಾದ ದಿ ವಿಲಿಯಂಸ್ಬರ್ಗ್ ಸೇತುವೆಯನ್ನು ತೆರೆಯಲಾಯಿತು.

1927: ಮೂರು ಭಾರತೀಯ ಕ್ರಾಂತಿಕಾರಿಗಳಾದ ರಾಮಪ್ರಸಾದ್ ಬಿಸ್ಮಿಲ್ಲಾ, ರೋಷನ್ ಸಿಂಗ್, ಅಶ್ಫಾಖುಲ್ಲ ಖಾನ್ ಅವರನ್ನು ಬ್ರಿಟೀಷರು ಮರಣದಂಡನೆಗೆ ಗುರಿ ಮಾಡಿದರು.

1929: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಲಾಹೋರಿನ ಅಧಿವೇಶನದಲ್ಲಿ ಅಧ್ಯಕ್ಷರಾದ ಜವಹರಲಾಲ್ ನೆಹರು ಪೂರ್ಣ ಸ್ವರಾಜ್ ಘೋಷಿಸಿದರು.

1933: 22ನೇ ವೈಸರಾಯ್ ಮತ್ತು ಭಾರತದ ಗವರ್ನರ್ ಜೆನೆರಲ್ ಆಗಿದ್ದ ಲಾರ್ಡ್ ವಿಲ್ಲಿಂಗ್ಟನ್ ವಿಶಾಖಪಟ್ಟಣದ ಬಂದರನ್ನು ಉದ್ಘಾಟಿಸಿದರು.

1957: ಲಂಡನ್ ಮತ್ತು ಮಾಸ್ಕೋ ನಡುವಿನ ವಿಮಾನ ಸೇವೆಯನ್ನು ಉದ್ಘಾಟಿಸಲಾಯಿತು.

1961: ಭಾರತವು ಡಾಮನ್ ಮತ್ತು ಡಿಯುವನ್ನು ಭಾರತದ ಭಾಗವಾಗಿ ವಶಪಡಿಸಿಕೊಳ್ಳಲಾಯಿತು.

1961: ಪೋರ್ಚುಗೀಸ್ ನಿಯಂತ್ರಣದಲ್ಲಿದ್ದ ಗೋವಾ ಅನ್ನು ಭಾರತದ ಭಾಗ ಮಾಡಲಾಯಿತು. ಇದನ್ನು ಗೋವಾ ಸ್ವಾತಂತ್ರ ದಿನ ಎಂದು ಕರೆಯಲಾಯಿತು.

1978: ಇಂದಿರಾಗಾಂಧಿಯನ್ನು ಲೋಕಸಭೆಯ ಸದಸ್ಯತ್ವ ಅನೂರ್ಜಿತಗೊಳಿಸಲಾಯಿತು ಮತ್ತು ಸೆರೆಗೆ ಕಳುಹಿಸಲಾಯಿತು.

ಪ್ರಮುಖ ಜನನ/ಮರಣ:

1873: ಭಾರತೀಯ ವಿಜ್ಞಾನಿ ಮತ್ತು ಪ್ರಮುಖ ವೈದ್ಯರಾಗಿದ್ದ ಉಪೇಂದ್ರನಾಥ್ ಬ್ರಹ್ಮಾಚಾರಿ ಜನಿಸಿದರು.

1894: ಭಾರತೀಯ ಖ್ಯಾತ ಉದ್ಯಮಿ ಕಸ್ತೂರಿಬಾಯಿ ಲಾಲ್ ಬಾಯಿ ಜನಿಸಿದರು.

1919: ಬಾಲಿವುಡಿನ ಹಿರಿಯ ನಟ ಓಂ ಪ್ರಕಾಶ್ ಜನಿಸಿದರು.

1934: ಭಾರತದ 12ನೇ ರಾಷ್ಟ್ರಪತಿ ಮತ್ತು ಮೊದಲ ಮಹಿಳಾ ರಾಷ್ಟ್ರಪತಿ ಆಗಿದ್ದ ಪ್ರತಿಭಾ ಪಾಟಿಲ್ ಜನಿಸಿದರು.

1966: ಭಾರತದ ಕ್ರಿಕೆಟ್ ಆಟಗಾರ ರಾಜೇಶ್ ಚೌಹಾನ್ ಜನಿಸಿದರು.

1969: ಭಾರತದ ಕ್ರಿಕೆಟ್ ಆಟಗಾರ ನಯನ್ ಮೊಂಗಿಯಾ ಜನಿಸಿದರು.

1984: ಹಿಂದಿ ಕಿರುತೆರೆಯ ನಾಯಕಿ ಅಂಕಿತಾ ಲೊಖಂಡೆ ಜನಿಸಿದರು.

1999: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಬಾಲ್ ದಾಣಿ ನಿಧನರಾದರು.

2009: ಭಾರತೀಯ ಉದ್ಯಮಿ ಮತ್ತು ವಾಣಿಜ್ಯೋದ್ಯಮಿ ಗಿರಿದರಿಲಾಲ್ ಕೇಡಿಯಾ ನಿಧನರಾದರು.

2014: ಭಾರತದ ಪತ್ರಕರ್ತ ಮತ್ತು ನಿರ್ದೇಶಕ ಎಸ್.ಬಾಲಸುಬ್ರಮಣಿಯಂ ನಿಧನರಾದರು.