Categories
e-ದಿನ

ಡಿಸೆಂಬರ್-2

 

ಪ್ರಮುಖ ಘಟನಾವಳಿಗಳು:

1816: ಅಮೇರಿಕಾದಲ್ಲಿ ಮೊದಲ ಉಳಿತಾಯ ಬ್ಯಾಂಕ್ ತೆರೆಯಲಾಯಿತು.

1942: ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಸ್ವಯಂ ನಿರಂತರ ಪರಮಾಣು ಸರಪಳಿ ಕ್ರಿಯೆಯನ್ನು ಪ್ರದರ್ಶಿಸಲಾಯಿತು.

1970: ಪರಿಸರ ಸಂರಕ್ಷಣೆ ಏಜೆನ್ಸಿಯನ್ನು ಸ್ಥಾಪಿಸಲಾಯಿತು.

1971: ಅಬುಧಾಬಿ, ಅಜ್ಮಾನ್, ದುಬೈ, ಫ್ಯುಜೈರಾ, ರಸ್ ಅಲ್ ಖೈಮಾ, ಶಾರ್ಜಾ, ಮತ್ತು ಉಮ್ ಅಲ್ ಕ್ವಾವಾನ್ನ ಏಳು ಎಮಿರೈಟುಗಳಿಂದ ಸಂಯುಕ್ತ ರಾಷ್ಟ್ರವಾಗಿ ಯುನೈಟೆಡ್ ಅರಬ್ ಎಮಿರೈಟ್ಸ್ (ಯು.ಎ.ಇ) ಸಂಯುಕ್ತವಾಗಿ ರೂಪುಗೊಂಡಿತು.

1982: ಉತಾಹ್ ಮೆಡಿಕಲ್ ಸಂಟರ್ ವಿಶ್ವವಿದ್ಯಾಲಯದ ವೈದ್ಯರು ಶಾಶ್ವತ ಕೃತಕ ಹೃದಯವನ್ನು ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದರು.

1984: ಭೊಪಾಲದ ಗ್ಯಾಸ್ ಅಪಘಾತ ಸಂಭವಿಸಿತು.

1989: ವಿ.ಪಿ.ಸಿಂಗ್ ಭಾರತದ 7ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1993: ಹಬಲ್ ಬಾಹ್ಯಾಕಾಶ ದೂರದರ್ಶಕವನ್ನು ಸರಿಪಡಿಸಲು ನಾಸಾ ಸ್ಪೇಸ್ ಶಟಲ್ ಅನ್ನು ಪ್ರಾರಂಭಿಸಿತು.

1999: ಭಾರತದ ಕ್ರಿಕೆಟ್ ಆಟಗಾರ ನವ್ಜೋತ್ ಸಿಂಗ್ ಸಿದ್ದು ಕ್ರಿಕೆಟ್ ಆಟದಿಂದ ನಿವೃತ್ತರಾದರು.

2000: ಪಂಜಾಬಿನಲ್ಲಿ ರೈಲು ಅಪಘಾತದಿಂದ 36 ಜನ ಮೃತ ಪಟ್ಟರು.

ಪ್ರಮುಖ ಜನನ/ಮರಣ:

1898: ಭಾರತದ ಲೆಫ್ಟನೆಂಟ್ ಮತ್ತು ಪೈಲೆಟ್ ಆಗಿದ್ದ ಇಂದ್ರ ಲಾಲ್ ರಾಯ್ ಜನಿಸಿದರು.

1935: ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮತ್ತು ದೆಹೆಲಿ ಹೈಕೋರ್ಟಿನ ಮತ್ತು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಎಂ.ಜಗನ್ನಾಥ ರಾವ್ ಜನಿಸಿದರು.

1937: ಮಹಾರಾಷ್ಟ್ರದ 15ನೇ ಮುಖ್ಯಮಂತ್ರಿ ಆಗಿದ್ದ ಮನೋಹರ್ ಜೋಷಿ ಜನಿಸಿದರು.

1947: ಐಸಿಐಸಿಐ ಬ್ಯಾಂಕಿನ ಸಿ.ಇ.ಓ ಆಗಿದ್ದ ಕೆ.ವಿ.ಕಾಮತ್ ಜನಿಸಿದರು.

1959: ಹಿಂದಿ ಖ್ಯಾತ ನಟ ಬೊಮ್ಮನ್ ಇರಾನಿ ಜನಿಸಿದರು.

1963: ಸಿಕ್ಕಿಂನ ನಂಗ್ಯಾಲ್ ರಾಜವಂಶದ ರಾಜ ತಾಶಿ ನಂಗ್ಯಾಲ್ ನಿಧನರಾದರು.

1980: ಪಾಕಿಸ್ತಾನದ 4ನೇ ಪ್ರಧಾನಿ ಆಗಿದ್ದ ಚೌಧರಿ ಮೊಹಮ್ಮದ್ ಅಲಿ ನಿಧನರಾದರು.

1990: ಯೋಗ, ವೇದಾಂತ, ಯಂತ್ರ, ತಂತ್ರ ಮತ್ತು ಮಂತ್ರ ಕ್ಷೇತ್ರದಲ್ಲಿ ಅಸಮಾನ್ಯ ಆಚಾರ್ಯರಾಗಿದ್ದ ಕನ್ನಿಯ ಯೋಗಿ ನಿಧನರಾದರು.

2014: ಮಹಾರಾಷ್ಟ್ರದ 8ನೇ ಮುಖ್ಯಮಂತ್ರಿ ಆಗಿದ್ದ ಎ.ಆರ್.ಅಂತುಲೇ ನಿಧನರಾದರು.

2014: ಖ್ಯಾತ ನಟ ದೇವೆನ್ ವರ್ಮ ನಿಧನರಾದರು.