Categories
e-ದಿನ

ಡಿಸೆಂಬರ್-21

 

ಪ್ರಮುಖ ಘಟನಾವಳಿಗಳು:

1846: ರಾಬರ್ಟ್ ಲಿಸ್ಟನ್ ಅವರು ಲಂಡನ್ನಿನ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಅರಿವಳಿಕೆಯನ್ನು ಬಳಸಲಾಯಿತು.

1849: ಅಮೇರಿಕಾದ ಮೊದಲ ಸ್ಕೇಟಿಂಗ್ ಕ್ಲಬ್ ರೂಪುಗೊಂಡಿತು.

1898: ವಿಜ್ಞಾನಿಗಳಾದ ಪೈರಿ ಮತ್ತು ಮೇರಿ ಕ್ಯೂರಿ ರೇಡಿಯಂ ಅನ್ನು ಕಂಡುಹಿಡಿದರು.

1909: ಮೊದಲ ಕಿರಿಯ ಪ್ರೌಢ ಶಾಲೆಯನ್ನು ಸ್ಥಾಪಿಸಲಾಯಿತು.

1911: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವನ್ನು ಸ್ಥಾಪಿಸಲಾಯಿತು.

1929: ಮೊದಲ ಗುಂಪು ಆಸ್ಪತ್ರೆ ವಿಮೆ ಯೋಜನೆ ನೀಡಲಾಯಿತು.

1952: ಸೈಫುದ್ದಿನ್ ಕಿಚ್ಲು ರಷ್ಯಾದ ಲೆನಿನ್ ಶಾಂತಿ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ.

1972: ಎರಡು ದಶಕಗಳ ಶೀತಲ ಸಮರದ ನಂತರ ಪೂರ್ವ ಮತ್ತು ಪಶ್ಚಿಮ ಜರ್ಮನಿಯು ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿತು.

1995: ಬೆತ್ಲೆಹೆಮ್ ನಗರವು ಇಸ್ರೇಲಿನ ಪ್ಯಾಲೆಸ್ಟೈನ್ ನಿಯಂತ್ರಣಕ್ಕೆ ಬಂದಿತು.

1998: ಲೈಮ್ ರೋಗದ ಮೊದಲ ಲಸಿಕೆಯನ್ನು ಅಂಗೀಕರಿಸಲಾಯಿತು.

ಪ್ರಮುಖ ಜನನ/ಮರಣ:

1928: ಖ್ಯಾತ ಲೇಖಕ ಸದ್ಗುರು ಶಿವಾನಂದ ಮೂರ್ತಿ ಜನಿಸಿದರು.

1932: ಖ್ಯಾತ ಲೇಖಕ, ಕವಿ ಮತ್ತು ವಿಮರ್ಶಕ ಯು.ಆರ್.ಅನಂತಮೂರ್ತಿ ಜನಿಸಿದರು.

1959: ಭಾರತದ ಕ್ರಿಕೆಟ್ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಜನಿಸಿದರು.

1963: ಬಾಲಿವುಡಿನ ಖ್ಯಾತ ನಟ ಗೋವಿಂದ ಜನಿಸಿದರು.

1972: ಭಾರತದ ಪತ್ರಕರ್ತ ಮತ್ತು ರಾಜಕಾರಣಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಜನಿಸಿದರು.

2003: ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಜಿ.ವಿ.ಐಯ್ಯರ್ ನಿಧನರಾದರು.

2004: ಭಾರತೀಯ ಶರೀರಶಾಸ್ತ್ರಜ್ಞ ಮತ್ತು ಖ್ಯಾತ ನರವಿಜ್ಞಾನಿ ಅವ್ತುರ್ ಸಿಂಗ್ ಪೈಂತಲ್ ನಿಧನರಾದರು.

2007: ಸಾಮಾಜಿಕ ಕಾರ್ಯಕರ್ತೆ ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ತಾಯಿ ತೇಜಿ ಬಚ್ಚನ್ ನಿಧನರಾದರು.

2011: ಶ್ರೇಷ್ಠ ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಪಿ.ಕೆ.ಐಯ್ಯಂಗಾರ್ ನಿಧನರಾದರು.