Categories
e-ದಿನ

ಡಿಸೆಂಬರ್- 4

 

ಪ್ರಮುಖ ಘಟನಾವಳಿಗಳು:

1783: ಅಮೇರಿಕಾದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ತಮ್ಮ ಕಛೇರಿಯ ಸಿಬ್ಬಂದಿಯವರಿಗೆ ತಮ್ಮ ಬೀಳ್ಕೊಡುಗೆಯನ್ನುದ್ದೇಶಿಸಿ ಮಾತನಾಡಿದರು.

1791: ಬ್ರಿಟನ್ನಿನ “ಅಬ್ಸರ್ವರ್” ವಿಶ್ವದ ಅತ್ಯಂತ ಹಳೆಯ ಭಾನುವಾರದ ವೃತ್ತಪತ್ರಿಕೆ ಮೊದಲ ಬಾರಿಗೆ ಪ್ರಕಟಿಸಲಾಯಿತು.

1812: ಕುದುರೆ ಎಳೆದ ಗಾಡಿಗೆ ಪೀಟರ್ ಗೈಲಾರ್ಡ್ ಪೇಟೆಂಟ್ ಪಡೆದರು.

1843: ಹಡಗು, ಕ್ಯಾನ್ವಾಸ ಮತ್ತು ಹಗ್ಗಗಳಿಂದ ತಯಾರಿಸಲ್ಪಟ್ಟ ಮನಿಲಾ ಪೇಪರಿಗೆ ಪೇಟೆಂಟ್ ನೀಡಲಾಯಿತು.

1829: ಬ್ರಿಟೀಷರು, ಭಾರತದಲ್ಲಿ “ಸತಿ” ಪದ್ದತಿಯನ್ನು ನಿಷೇಧಿಸಿದರು.

1924: ಲಾರ್ಡ್ ರೈಡಿಂಗ್ ಅವರು “ಗೇಟ್ ವೇ ಆಫ್ ಇಂಡಿಯಾ” ಅನ್ನು ಉದ್ಘಾಟಿಸಿದರು.

1930: ಜನನ ನಿಯಂತ್ರಣಕ್ಕೆ ರಿದಮ್ ವಿಧಾನವನ್ನು ವ್ಯಾಟಿಕನ್ ಅನುಮೋದಿಸಿತು.

1971: ಭಾರತದ ನೌಕಾಪಡೆಯು ಪಾಕಿಸ್ತಾನದ ನೌಕಾ ಪಡೆಯನ್ನು ಕರಾಚಿಯಲ್ಲಿ ದಾಳಿ ಮಾಡಿತು.

1982: ನವ ದೆಹೆಲಿಯಲ್ಲಿ ಏಷಿಯನ್ ಗೇಮ್ಸ್ ಸ್ಪರ್ಧೆ ಮುಕ್ತಾಯಗೊಂಡಿತು.

1982: ಚೀನಾ ದೇಶ ತನ್ನ ಸಂವಿಧಾನವನ್ನು ಅಳವಡಿಸಿತು.

ಪ್ರಮುಖ ಜನನ/ಮರಣ:

1898: ರಾಮನ್ ಸ್ಕಾಟರಿಂಗ್ (ರಾಮನ್ ಎಫೆಕ್ಟ್) ಸಹ-ಸಂಶೋಧಕ ಕೆ.ಎಸ್.ಕೃಷ್ಣನ್ ಜನಿಸಿದರು.

1910: ಭಾರತದ 6ನೇ ರಾಷ್ಟ್ರಪತಿ ಆಗಿದ್ದ ಆರ್.ವೆಂಕಟರಾಮನ್ ಜನಿಸಿದರು.

1910: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಅಮರ್ ಸಿಂಗ್ ಜನಿಸಿದರು.

1919: ಭಾರತದ 12ನೇ ಪ್ರಧಾನ ಮಂತ್ರಿ ಆಗಿದ್ದ ಐ.ಕೆ.ಗುಜರಾಲ್ ಜನಿಸಿದರು.

1962: ಅವಧಾನ ಕಲೆಯ ಅಭ್ಯರ್ಥಿ, ಸಂಸ್ಕೃತ ಮತ್ತು ಕನ್ನಡದ ಲೇಖಕರು, ಬಹುಭಾಷಾ ಕವಿ ಶತಾವಧಾನಿ ಗಣೇಶ್ ಜನಿಸಿದರು.

1963: ಹಿಂದಿ ಚಿತ್ರರಂಗದ ನಟ, ಕಿರುತೆರೆಯ ನಿರೂಪಕ, ಹಾಸ್ಯ ನಟ ಜಾವೇದ್ ಜಫ್ರೆ ಜನಿಸಿದರು.

1974: ಹಿಂದಿ ಚಿತ್ರರಂಗದ ನಟಿ, ಮಾಡೆಲ್ ಅನುಪಮ ಕುಮಾರ್ ಜನಿಸಿದರು.

1977: ಭಾರತದ ಕ್ರಿಕೆಟ್ ಆಟಗಾರ ಅಜಿತ್ ಅಗಾರ್ಕರ್ ಜನಿಸಿದರು.

1982: ಕನ್ನಡ ಚಿತ್ರರಂಗದ ನಟಿ ಡೈಸಿ ಬೋಪಣ್ಣ ಜನಿಸಿದರು.

2014: ಭಾರತದ ವಕೀಲರು ಮತ್ತು ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ನಿಧನರಾದರು.