Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಕಾವ್ಯ

ದುರಂತ

ಅವನೆ, ಅವನು ಲಿಂಗಾಯಿತ, ಇವನು
ಬ್ರಾಹ್ಮಣ, ಅವನೊಬ್ಬ ಒಕ್ಕಲಿಗ.
ಏನು? ಬೆಡ್ ನಂಬರ್ ಎಷ್ಟೆಂದು ಕೇಳಿದಿರ ?
ನಲವತ್ತೆಂಟು.

ಜೈಲಿನಲ್ಲಿ ಇವನೊಬ್ಬ ಖೈದಿ
ಅವನ ನಂಬರ್ ನನಗೆ ಗೊತ್ತಿಲ್ಲ ;
ಏ ಕೂಲಿ, ಬಾ ಇಲ್ಲಿ ಹೊತ್ತುಕೋ ಈ
ಪೆಟ್ಟಿಗೆಯನ್ನು ; ಬರೆದಿಟ್ಟುಕೋ ಇವನ
ನಂಬರ್ ಅನ್ನು, ಕಂಪ್ಲೇಂಟು ಕೊಡಲಿಕ್ಕೆ
ಬೇಕಾದೀತು.

ನಿಮ್ಮ ಟೋಕನ್ ನಂಬರ್ ಪ್ಲೀಸ್…..
ಮನಸ್ಸಿನಲ್ಲಿ ಕಸಿವಿಸಿ ; ಈ ‘ನಾನು’
ಎನ್ನುವುದು ಎಲ್ಲಿಗೆ ಬಂತು !