Categories
ಬಾಲವಿಜ್ಞಾನ ಮಾಸ ಪತ್ರಿಕೆ - ನವೆಂಬರ್ ೨೦೧೦ ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ ಮ್ಯಾಗಜಿನ್‌ಗಳು ವಿಜ್ಞಾನ

ನಕ್ಷತ್ರದ ಕಾಂತಿಮಾನದ ಮೇಲೊಂದು ಕ್ಷಕಿರಣ

‘ಈ ಸಾಬೂನು ಬಳಸಿ ನಿಮ್ಮ ಮೈ ಕಾಂತಿಯನ್ನು ಹೆಚ್ಚಿಸಿಕೊಳ್ಳಿ’ಇದು ದೂರದರ್ಶನದಲ್ಲಿ ಬಂದ ಒಂದು ಜಾಹೀರಾತು. ಆಗ, ಮನಸ್ಸಿಗೆ ಮೈಕಾಂತಿಯ ವಿಚಾರಬಂತು. ಅದೇ ವಿಚಾರ ಲಹರಿ ಮುಂದುವರಿದು ನಕ್ಷತ್ರದ ಕಾಂತಿಯಲ್ಲಿ ಹೊಳೆಯಿತು. ನಕ್ಷತ್ರಗಳು ಆಕಾಶದಲ್ಲಿ ಹೊಳೆಯುತ್ತವೆ. ಅವುಗಳ ಕಾಂತಿ ಬೇರೆ ಬೇರೆ ನಕ್ಷತ್ರಗಳಿಗೆ ಬೇರೆ ಬೇರೆ. ಅದನ್ನು ಅಳೆಯಲು ‘ಕಾಂತಿ ಮಾನ’ (ಮ್ಯಾಗ್ನಿಟ್ಯೂಡ್)ವನ್ನು ಬಳಸುತ್ತಾರೆ.

ವಿಜ್ಞಾನಿ ಹಿಪಾರ್ಕಸ್ ಈ ಕಾಂತಿಮಾನದ ಬಗ್ಗೆ ವಿವರಣೆಯನ್ನು ಮೊದಲು ಕೊಟ್ಟವನು. ಗ್ರೀಕ್ ಖಗೋಲತಜ್ಞ ಹಿಪಾರ್ಕಸ್ (ಕ್ರಿ.ಪೂ. 190 – ಕ್ರಿ.ಪೂ. 120). ಇಂಗ್ಲೆಂಡಿನ ವಿಲಿಯಂ ಹರ್ಷಲ್ (1738-1822), 18ನೇ ಶತಮಾನದಲ್ಲಿ ಬೆಳಕು (ಕಾಂತಿ)ಹಾಗೂ ಕಾಂತಿಮಾನಕ್ಕೆ ಇರುವ ಕೆಳಗಿನ ಸಂಬಂಧವನ್ನು ವಿವರಿಸಿದನು.

1ಕಾಂತಿಮಾನ ವ್ಯತ್ಯಾಸವು ಖಗೋಲಕಾಯವು ಹೊಮ್ಮಿಸುವ ಬೆಳಕು 2.512 ಪಟ್ಟು ಹೆಚ್ಚು ಅಥವಾ ಕಡಿಮೆಯಾಗುವುದನ್ನು ಸೂಚಿಸುತ್ತದೆ. ನಕ್ಷತ್ರಗಳ ಕಾಂತಿಮಾನಗಳಲ್ಲಿ ಎರಡು ಬಗೆ: (1) ವ್ಯಕ್ತ ಕಾಂತಿಮಾನ, (2) ನೈಜ ಕಾಂತಿಮಾನ.

(1) ವ್ಯಕ್ತ ಕಾಂತಿಮಾನ :ನಕ್ಷತ್ರಗಳಿಂದ ವೀಕ್ಷಕನೆಡೆ ಬರುವ ಬೆಳಕಿನ ಪ್ರಮಾಣವು, ಅವು (i) ಹೊರಸೂಸುವ ಶಕ್ತಿಯ ಪ್ರಮಾಣ ಮತ್ತು (ii) ನಮ್ಮಿಂದ ನಕ್ಷತ್ರಗಳಿರುವ ದೂರವನ್ನು ಅವಲಂಬಿಸಿದೆ. ಅಂದರೆ ಹೀಗೆ ನಾವು ನೋಡುವ ನಕ್ಷತ್ರದ ಬೆಳಕಿನ ಪ್ರಮಾಣಕ್ಕೆ ಅನುಗುಣವಾಗಿ ಅದರ ವ್ಯಕ್ತ ಕಾಂತಿಮಾನ ಹೆಚ್ಚು ಕಡಿಮೆಯಾಗುತ್ತದೆ.  ಇದನ್ನು ಕೆಳಗಿನ ಸೂತ್ರದಿಂದ ಕಂಡುಕೊಳ್ಳಬಹುದು.

m = –2.512 log F

m = ವ್ಯಕ್ತ ಕಾಂತಿಮಾನ
F = ಭೂಮಿಗೆ ತಲುಪುವ ಬೆಳಕಿನ ಪ್ರಮಾಣ

ನಕ್ಷತ್ರಗಳು             ಕಾಂತಿಮಾನ           ನಕ್ಷತ್ರಗಳು     ಕಾಂತಿಮಾನ

ಸೂರ್ಯ                   – 26.7                     ರೋಹಿಣಿ          +1

ಲುಬ್ಧಕ                      – 1.58                     ಕಪೆಲ್ಲಾ           +0.09

ಅಲ್ಫಾ ಸೆಂಟಾರಿ           – 0.27                     ರೀಗಲ್           +0.15

ಅಗಸ್ತ್ಯ                      – 0.73                     ಆರ್ದ್ರಾ           +0.7

ಸ್ವಾತಿ                      – 0.06                     ಪೂರ್ವಶ್ವಾನ     +0.35

(b)  ನೈಜ ಕಾಂತಿಮಾನ :ಸೂರ್ಯನ ವ್ಯಕ್ತ ಕಾಂತಿಮಾನ -26.7ಅಂದರೆ ಬೆಳಕು.  ಸೂರ್ಯನು ನಮ್ಮಿಂದ ಕೇವಲ 8.3ಜ್ಯೋತಿ ಮಿನಿಟ್‌ನ ದೂರದಲ್ಲಿ ಇರುವುದರಿಂದ ನಾವು ಹೆಚ್ಚು ಬೆಳಕನ್ನು ಸೂರ್ಯನಿಂದ ಪಡೆಯುತ್ತಿದ್ದೇವೆ. ಸೂರ್ಯನಿಗಿಂತ ಹೆಚ್ಚು ಬೆಳಕು ಸೂಸುವ ಅನೇಕ ನಕ್ಷತ್ರಗಳು ಇವೆ. ಅವು ನಮ್ಮಿಂದ ಅಧಿಕ ದೂರದಲ್ಲಿವೆ.  ಆದ್ದರಿಂದ ಅವುಗಳ ವ್ಯಕ್ತ ಕಾಂತಿಮಾನ ಕಡಿಮೆ.  ನಕ್ಷತ್ರಗಳು ನಮ್ಮಿಂದ ಸಮ ದೂರದಲ್ಲಿವೆ ಎಂದು ಭಾವಿಸಿ ಕಾಂತಿಮಾನವನ್ನು ಅಳೆದಾಗ ನೈಜ ಅಥವಾ ನಿರಪೇಕ್ಷ ಕಾಂತಿಮಾನ ಸಿಗುತ್ತದೆ.  ಇದಕ್ಕಾಗಿ ನಮ್ಮಿಂದ 10ಪಾರ್‌ಸೆಕ್ ದೂರದಲ್ಲಿ ನಕ್ಷತ್ರಗಳಿವೆ ಎಂದು ಭಾವಿಸಿ ಲೆಕ್ಕ ಹಾಕುತ್ತಾರೆ.

ಈ ಸೂತ್ರದಿಂದ ವ್ಯಕ್ತ ಕಾಂತಿಮಾನ ತಿಳಿದಿದ್ದರೆ, ನಕ್ಷತ್ರದ ನೈಜ ಕಾಂತಿಮಾನವನ್ನು ಈ ಕೆಳಗಿನ ಸೂತ್ರದಿಂದ ಕಂಡುಕೊಳ್ಳಬಹುದು.

m = M + 5 [log d-1]

m = ವ್ಯಕ್ತ ಕಾಂತಿಮಾನ
M = ನಿಜವಾದ ಕಾಂತಿಮಾನ
d = ನಮ್ಮಿಂದ ನಕ್ಷತ್ರದ ದೂರ (ಪಾರ್‌ಸೆಕ್‌ದಲ್ಲಿ)

ಉದಾಹರಣೆಗಳು :(1) 2.7ಪಾರ್‌ಸೆಕ್ ದೂರದಲ್ಲಿರುವ ಲುಬ್ಧಕ ನಕ್ಷತ್ರದ ವ್ಯಕ್ತ ಕಾಂತಿಮಾನ -1.58 ಅದರ ನೈಜ ಕಾಂತಿಮಾನ ಎಷ್ಟು?

m = M + 5 [log d-1]

m = -1.58
M = ?
d = 2.7 pc

-1.58 = M + 5 (log 2.7 – 1]
= M + 5 [0.4314 – 1]
= M + 5 [- 0.5686]

-1.58 = M – 2.8430
M = -1.58 + 2.8430
M = +1.2630

ಲುಬ್ಧಕ ನಕ್ಷತ್ರದ ನೈಜ ಕಾಂತಿಮಾನ = M = +1.2630

(2) 200 ಪಾರ್‌ಸೆಕ್ ದೂರದಲ್ಲಿರುವ ಆರ್ದ್ರಾ ನಕ್ಷತ್ರದ ವ್ಯಕ್ತ ಕಾಂತಿಮಾನ +0.8. ಅದರ ನೈಜ ಕಾಂತಿಮಾನ ಎಷ್ಟು ?

m = M + 5 [log d-1]

m = +0.8
M = ?
d = 200 pc

+ 0.8 = M+5 [log 200 – 1]
+ 0.8 = M + 5 [2.3010 – 1]
= M + 5 [1.3010]
+0.8 = M + 6.5050
M = +0.8 – 6.5
M = – 5.7

ಆರ್ದ್ರಾ ನಕ್ಷತ್ರದ ನೈಜ ಕಾಂತಿಮಾನ M = – 5.7

ಮೇಲಿನ ಸೂತ್ರವನ್ನು ಉಪಯೋಗಿಸಿ, ನಕ್ಷತ್ರದ ವ್ಯಕ್ತ ಕಾಂತಿಮಾನ ಮತ್ತು ನೈಜ ಕಾಂತಿಮಾನ ತಿಳಿದಿದ್ದರೆ ಅದರ ದೂರವನ್ನು ಲೆಕ್ಕಹಾಕಬಹುದು.

ಉದಾ: ಒಂದು ನಕ್ಷತ್ರದ ವ್ಯಕ್ತ ಕಾಂತಿಮಾನ + 17 ಮತ್ತು ನೈಜ ಕಾಂತಿಮಾನ – 3. ಆ ನಕ್ಷತ್ರದ ದೂರವೆಷ್ಟು ?

 

 

 

 

 

 

 

 

 

 

 

 

 

ನಕ್ಷತ್ರದ ದೂರ = d = 1,00,000 ಪಾರ್‌ಸೆಕ್‌ಗಳು