Categories
e-ದಿನ

ನವೆಂಬರ್-12

 

ಪ್ರಮುಖ ಘಟನಾವಳಿಗಳು:

1555: ಇಂಗ್ಲಿಷ್ ಸಂಸತ್ತು “ಕ್ಯಾಥೋಲಿಕ್” ವ್ಯವಸ್ಥೆಯನ್ನು ಪುನರ್-ಸ್ಥಾಪಿಸಿತು.

1823: ಆಮ್ಸ್ಟರ್ ಡ್ಯಾಂ ಕಾಲುವೆಯನ್ನು ತೆರೆಯಲಾಯಿತು.

1833: ಮಹಾನ್ ಲಿಯೊನಿಡ್ ಉಲ್ಕೆಯ ಮಳೆಯನ್ನು ದಾಖಲಿಸಲಾಯಿತು.

1847: ಸರ್ ಜೇಮ್ಸ್ ಯಂಗ್ ಸಿಂಸನ್ ಕ್ಲೋರೋಫೋಮನ್ನು ಅರಿವಳಿಕೆಯನ್ನಾಗಿ ಮೊದಲ ಬಾರಿ ಬಳಸಿದ ವೈದ್ಯರಾದರು.

1910: ಬೆಂಕಿಯುಳ್ಳ ಬಲೂನಿನಿಂದ ಹಡ್ಸನ್ ನದಿಗೆ ಜಿಗಿದ ಮನುಷ್ಯ-ಮೊದಲ ಸಂಭವನೀಯ ಚಲನಚಿತ್ರ ಸಾಹಸವಾಯಿತು.

1922: ಸಿಗ್ಮಾ ಗಾಮಾ ರೋ ಸೊರೊರಿಟಿಯನ್ನು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು.

1933: ಲೊಚ್ ನೆಸ್ ದೈತ್ಯ ಎಂದು ಕರೆಯಲ್ಪಡುವ ರಾಕ್ಷಸನ ಛಾಯಾಚಿತ್ರವನ್ನು ಸೆರೆಹಿಡಿಯಲಾಯಿತು.

1935: ಎಗಾಸ್ ಮೊನಿಸ್ ಅವರು ಮಾನಸಿಕ ಅಸ್ವಸ್ಥಯನ್ನು ಸರಿ ಮಾಡಲು ಮಿದುಳಿನ ಶಸ್ತ್ರ ಚಿಕಿತ್ಸೆಯನ್ನು ಪೋರ್ಚುಗಲ್ಲಿನಲ್ಲಿ ಮಾಡಲಾಯಿತು.

1946: ಚಿಕಾಗೋದ ದಿ ಎಕ್ಸ್ಚೇಂಜ್ ನ್ಯಾಷನಲ್ ಬ್ಯಾಂಕ್ ಅಮೇರಿಕಾದ ಮೊದಲ ಬ್ಯಾಂಕಿಂಗ್ ಸೇವೆಯನ್ನು ಸ್ಥಾಪಿಸಿತು.

1956: 60 ಮೈಲಿ ದೂರದಿಂದ ವೀಕ್ಷಿಸಬಹುದಾದ ಮೊದಲ ಮಂಜು ಗಡ್ಡೆಯನ್ನು ಪತ್ತೆ ಮಾಡಲಾಯಿತು.

1970: ವಿಜ್ಞಾನಿಗಳು ಮೊದಲ ಜೀವಂತ ಜೀವಕೋಶದ ಕೃತಕ ಸಂಶ್ಲೇಷಣೆಯನ್ನು ಮಾಡಿದರು.

1990: ರಾಬರ್ಟ್ ಕೈಲಿಯಾವ್ ಅವರ ಸಹಾಯದಿಂದ ಸರ್ ಟಿಮ್ ಬರ್ನರ್ಸ್ ಲೀ “ವರ್ಲ್ಡ್ ವೈಡ್ ವೆಬ್’ (ಅಂತರ್ಜಾಲದಲ್ಲಿ ವ್ಯಾಪಕ ಮಾಹಿತಿ ವ್ಯವಸ್ಥೆ)ಗೆ ಔಪಚಾರಿಕ ಪ್ರಸ್ತಾಪವನ್ನು ಪ್ರಕಟಿಸಿದರು.

ಪ್ರಮುಖ ಜನನ/ಮರಣ:

1882: ಮಹಾರಾಷ್ಟ್ರದ ಖ್ಯಾತ ಬರಹಗಾರ, ಲೇಖಕ ಶ್ರೀ ಪುರೋಹಿತ್ ಸ್ವಾಮಿ ಜನಿಸಿದರು.

1896: ಭಾರತದ ಪಕ್ಷಿ ಮಾನವ ಎಂದೇ ಖ್ಯಾತಿ ಪಡೆದ ಪಕ್ಷಿ ವಿಜ್ಞಾನಿ ಮತ್ತು ನಿಸರ್ಗವಾದಿ ಸಲೀಮ್ ಮೌಜುದ್ಧಿನ್ ಅಬ್ದುಲ್ ಅಲಿ ಜನಿಸಿದರು.

1940: ಬಾಲಿವುಡಿನ ಖ್ಯಾತ ಖಳನಟ ಅಮ್ಜದ್ ಖಾನ್ ಜನಿಸಿದರು.

1942: ಆಂಧ್ರಪ್ರದೇಶದ ಮಾಜಿ ಸಚಿವರಾಗಿದ್ದ ಸಾಣಿಗರಂ ಸಂತೋಷ್ ರೆಡ್ಡಿ ಜನಿಸಿದರು.

1946: ಭಾತರದ ಶಿಕ್ಷಣ ತಜ್ಞ ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮದನ್ ಮೋಹನ್ ಮಾಳವಿಯಾ ನಿಧನರಾದರು.

1947: ಒರಿಯಾ ಚಿತ್ರರಂಗದ ಚಿತ್ರ ನಿರ್ದೇಶಕ ನಿರಾದ್ ಎನ್. ಮೋಹಪಾತ್ರಾ ಜನಿಸಿದರು.

1965: ಭಾರತೀಯ ಆಧ್ಯಾತ್ಮಿಕ ನಾಯಕ ತಹೇರ್ ಸೈಫುದ್ಧಿನ್ ನಿಧನರಾದರು.

1969: ಪಾಕಿಸ್ತಾನದ ಮೊದಲ ರಾಷ್ಟ್ರಪತಿ ಇಸ್ಕಂದರ್ ಮಿರ್ಜಾ ನಿಧನರಾದರು.

2007: ಭಾರತದ ಕ್ರಿಕೆಟ್ ಆಟಗಾರ ಕೆ.ಸಿ.ಇಬ್ರಾಹಿಂ ನಿಧನರಾದರು.

2014: ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರವಿ ಚೋಪ್ರಾ ನಿಧನರಾದರು.