Categories
e-ದಿನ

ನವೆಂಬರ್-15

 

ಪ್ರಮುಖ ಘಟನಾವಳಿಗಳು:

1806: ಅಮೇರಿಕಾದ ಕಾಲೇಜಿನ ಮೊದಲ ನಿಯತಕಾಲಿಕೆ ಯೇಲ್ ಲಿಟರರಿ ಗವರ್ನ್ಮೆಂಟ್ ತನ್ನ ಮೊದಲ ಸಂಚಿಕೆಯನ್ನು ಪ್ರಕಟಿಸಿತು.

1837: ಐಸಾಕ್ ಪಿಟ್ಮ್ಯಾನ್ ತನ್ನ ಶೀಘ್ರಲಿಪಿ ಬರವಣಿಯನ್ನು ಪರಿಚಯಿಸಿದರು.

1869: ಉಚಿತ ಅಂಚೆ ವಿತರಣೆಯನ್ನು ಔಪಚಾರಿಕವಾಗಿ ಉದ್ಘಾಟಿಸಲಾಯಿತು.

1920: ಲೀಗ್ ಆಫ್ ನೇಷನ್ಸ್ ಮೊದಲ ಬಾರಿಗೆ ಭೇಟಿ ಮಾಡಿತು.

1932: ವಾಲ್ಟ್ ಡಿಸ್ನಿ ಕಲೆಯ ಶಾಲೆಯನ್ನು ತೆರೆಯಲಾಯಿತು.

1949: ಮಹಾತ್ಮಾ ಗಾಂಧಿಯವರನ್ನು ಕೊಲೆ ಮಾಡಿದ ನಾಥೂರಾಮ ಗೋಡ್ಸೆ ಅವರನ್ನು ನೇಣಿಗೇರಿಸಲಾಯಿತು.

1971: ಇಂಟೆಲ್ ಸಂಸ್ಥೆಯು ತನ್ನ 4004 ಪ್ರೊಸೆಸ್ಸರ್ ಅನ್ನು ಮೊದಲ ಬಾರಿಗೆ ಜಾಹಿರಾತು ಮಾಡಿತು.

2000: ಝಾರ್ಖಂಡ್ ರಾಜ್ಯವು ಅಸ್ತಿತ್ವಕ್ಕೆ ಬಂದಿತು.

2013: ಸೋನಿ ಸಂಸ್ಥೆಯು ಪ್ಲೇ ಸ್ಟೇಷನ್ 4 ಅನ್ನು ಬಿಡುಗಡೆಗೊಳಿಸಿತು, ಹಾಗೂ ಒಂದೇ ದಿನದಲ್ಲಿ 1 ದಶಲಕ್ಷ ಘಟಕಗಳನ್ನು ಮಾರಾಟ ಮಾಡಿತು.

ಪ್ರಮುಖ ಜನನ/ಮರಣ:

1876: ಸಂಭಾವ್ಯ ಸಿದ್ದಾಂತದಲ್ಲಿ ಪರಿಣಿತಿಯನ್ನು ಹೊಂದಿದ ಭಾರತೀಯ ಗಣಿತತಜ್ಞ ಗಣೇಶ್ ಪ್ರಸಾದ್ ಜನಿಸಿದರು.

1914: ಭಾರತೀಯ ವಕೀಲ ಮತ್ತು ನ್ಯಾಯಾಧೀಶರಾಗಿದ್ದ ವಿ.ಆರ್.ಕೃಷ್ಣ ಅಯ್ಯರ್ ಜನಿಸಿದರು.

1949: ಭಾರತೀಯ ಕಾರ್ಯಕರ್ತ ಮತ್ತು ಗಾಂಧಿಯವರ ಕೊಲೆಯಲ್ಲಿ ಭಾಗಿ ಆಗಿದ್ದ ನಾರಾಯಣ್ ಆಪ್ಟೆ ನಿಧನರಾದರು.

1949: ಭಾರತೀಯ ಕಾರ್ಯಕರ್ತ ಮತ್ತು ಗಾಂಧಿಯವರ ಕೊಲೆ ಮಾಡಿದ ನಾಥುರಾಮ್ ಗೋಡ್ಸೆ ಅವರನ್ನು ಗಲ್ಲಿಗೆ ಏರಿಸಲಾಯಿತು.

1936: ಭಾರತ-ಕೆನೆಡಿಯನ್ ಪತ್ರಕರ್ತೆ ಮತ್ತು ಪ್ರಕಾಶಕಿ ತಾರಾ ಸಿಂಗ್ ಹಾಯರ್ ಜನಿಸಿದರು.

1982: ಭಾರತೀಯ ತತ್ವಗುರು, ಗಾಂಧಿ ವಾದಕ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿನೋಭಾ ಬಾವೆ ನಿಧನರಾದರು.

1985: ತೆಲುಗು ಮತ್ತು ತಮಿಳು ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ದೇಶಕ ಎಸ್.ತಮನ್ ಜನಿಸಿದರು.

1986: ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜನಿಸಿದರು.

1986: ಭಾರತೀಯ ನಾಟಕಕಾರ, ಸಾಹಿತಿ ಮತ್ತು ಪತ್ರಕರ್ತ ಬಿದಾಯಕ್ ಭಟ್ಟಾಚಾರ್ಯ ನಿಧನರಾದರು.

2012: ಭಾರತದ 18ನೇ ರಕ್ಷಣಾ ಸಚಿವರಾಗಿದ್ದ ಕೆ.ಸಿ.ಪಂತ್ ನಿಧನರಾದರು.