Categories
e-ದಿನ

ನವೆಂಬರ್-6

 

ಪ್ರಮುಖ ಘಟನಾವಳಿಗಳು:

1850: ಹವಾಯಿಯ ಮೊದಲ ಅಗ್ನಿಶಾಮಕ ಯಂತ್ರ ತರಲಾಯಿತು.

1860: ಅಬ್ರಹಾಮ್ ಲಿಂಕನನ್ನು ಅಮೇರಿಕಾದ 16ನೇ ಅಧ್ಯಕ್ಷ ಮತ್ತು ಮೊದಲ ರಿಪಬ್ಲಿಕನ್ ಆಗಿ ಆಯ್ಕೆ ಮಾಡಲಾಯಿತು.

1894: ಇಲಿ ಹಿಡಿಯುವ ಬಲೆಗೆ ವಿಲ್ಲಿಯಂ ಸಿ ಹುಕ್ಕರ್ ಪೇಟೆಂಟ್ ಪಡೆದರು.

1904: ಗಣಿಗಾರರ ಮೆರವಣಿಗೆಯನ್ನು ಮುನ್ನಡೆಸಿದ ಕಾರಣದಿಂದ ಮಹಾತ್ಮ ಗಾಂಧಿಯವರನ್ನು ಆಫ್ರಿಕಾದಲ್ಲಿ ಬಂಧಿಸಲಾಯಿತು.

1917: ನ್ಯೂಯಾರ್ಕಿನಲ್ಲಿ ಮಹಿಳೆಯರಿಗೆ ಮತ ಹಾಕಲು ಅನುಮತಿ ನೀಡಲಾಯಿತು.

1923: ವಿದ್ಯುತ್ ಕ್ಷೌರಿಕ ಯಂತ್ರಕ್ಕೆ ಜೇಕಬ್ ಕ್ಷಿಕ್ ಪೇಟೆಂಟ್ ಪಡೆದರು.

1952: ಪೆಸಿಫಿಕ್ ಮಹಾಸಾಗರದ ಎನ್ವಿಟಾಕ್ ಅಟಾಲಿನಲ್ಲಿ ಮೊದಲ ಹೈಡ್ರೋಜನ್ ಬಾಂಬ್ ಸ್ಫೋಟವಾಯಿತು.

1962: ಸೌಧಿ ಅರೇಬಿಯಾದಲ್ಲಿ ಗುಲಾಮಗಿರಿಯನ್ನು ಕಾನೂನಿನ ಮೂಲಕ ನಿರ್ಮೂಲನೆ ಮಾಡಲಾಯಿತು.

1996: ಭಾರತದಲ್ಲಿ ಚಂಡಮಾರುತದಿಂದ ಆಂಧ್ರ ಪ್ರದೇಶದಲ್ಲಿ ಸುಮಾರು 2000 ಜನ ಮೃತ ಪಟ್ಟರು.

2016: ದೆಹೆಲಿಯಲ್ಲಿ ವಾಯು ಮಾಲಿನ್ಯದ ಮಟ್ಟವನ್ನು ತುರ್ತು ಪರಿಸ್ಥಿತಿ ಎಂದು ಘೋಷಿಸಿ ಶಾಲಾ ಕಾಲೇಜು ಮತ್ತು ನಿರ್ಮಾಣದ ಕಟ್ಟಡವನ್ನು ಸ್ಥಗಿತಗೊಳಿಸಲು ಘೋಷಿಸಲಾಯಿತು.

ಪ್ರಮುಖ ಜನನ/ಮರಣ:

1840: ಸಿಖ್ಖರ ಸಾಮ್ರಾಜ್ಯದ ಪಂಜಾಬಿನ ನಾಯಕ ಮಹಾರಾಜ ನಾವ್ ನಿಹಾಲ್ ಸಿಂಗ್ ನಿಧನರಾದರು.

1861: ಬಾಸ್ಕೆಟ್ ಬಾಲ್ ಆಟದ ಸಂಶೋಧಕ ಜೇಮ್ಸ್ ನೈಸ್ಮಿತ್ ಜನಿಸಿದರು.

1915: ಮರಾಠಿ ಚಿತ್ರರಂಗದ ನಿರ್ದೇಶಕ, ಚಿತ್ರಕಥೆಗಾರ ಮತ್ತು ಸಂಭಾಷಣೆಕಾರ ದಿನಕರ್ ಡಿ ಪಾಟಿಲ್ ಜನಿಸಿದರು.

1934: ಖ್ಯಾತ ಕೊಂಕಣಿ ಕಾರ್ಯಕರ್ತ, ಲೇಖಕ ಮತ್ತು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾದ ಬಸ್ತಿ ವಾಮನ ಶೆಣೈ ಅವರು ಜನಿಸಿದರು.

1940: ಗಾಯಕಿ, ಗೀತ ರಚನೆಕಾರ್ತಿ ಸೂಲಮಂಗಲಂ ರಾಜಲಕ್ಷ್ಮಿ ಜನಿಸಿದರು.

1982: ಮದ್ರಾಸ್ ಮತ್ತು ಮೈಸೂರು ತಂಡದ ಕ್ರಿಕೆಟ್ ಆಟಗಾರ ಬಿ.ಸಿ.ಆಳ್ವಾ ನಿಧನರಾದರು.

1985: ಖ್ಯಾತ ಹಿಂದಿ ಚಲನಚಿತ್ರ ನಟ ಸಂಜೀವ್ ಕುಮಾರ್ ನಿಧನರಾದರು.

1987: ಮರಾಠಿ ಲೇಖಕ, ನಟ ಬಾಲಚಂದ್ರ ವಾಮನ ಕೇಲ್ಕರ್ ನಿಧನರಾದರು.

2010: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸಿದ್ದಾರ್ಥ ಶಂಕರ್ ರೇ ನಿಧನರಾದರು.

2013: ಖ್ಯಾತ ಪಾಕಪ್ರವೀಣೆ ಮತ್ತು ಲೇಖಕಿ ತರ್ಲಾ ದಲಾಲ್ ನಿಧನರಾದರು.