Categories
e-ದಿನ

ಫೆಬ್ರವರಿ-0 8

ಪ್ರಮುಖಘಟನಾವಳಿಗಳು:

[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1238: ಮೊಂಗೋಲರು ರಷ್ಯಾದ ವ್ಲಾಡಿಮರ್ ನಗರವನ್ನು ಸುಟ್ಟುಹಾಕಿದರು” open=”no”]ಮೊಂಗೋಲರು ರಷ್ಯಾದ ವ್ಲಾಡಿಮರ್ ನಗರವನ್ನು ಸುಟ್ಟುಹಾಕಿದರು[/fusion_toggle][fusion_toggle title=”1575: ನೆದರ್ಲ್ಯಾಂಡಿನ ಪ್ರಸಿದ್ಧ ಲೀಡನ್ ವಿಶ್ವವಿದ್ಯಾಲಯವು ಪ್ರಾರಂಭಗೊಂಡಿತು” open=”no”]ನೆದರ್ಲ್ಯಾಂಡಿನ ಪ್ರಸಿದ್ಧ ಲೀಡನ್ ವಿಶ್ವವಿದ್ಯಾಲಯವು ಲೀಡನ್ ನಗರದಲ್ಲಿ ಪ್ರಾರಂಭಗೊಂಡಿತು. ಪ್ರೇಸಿಡಿಯಂ ಲಿಬರ್ಟಾಟಿಸ್ (Praesidium Libertatis) ಅಂದರೆ ‘ಸ್ವಾತಂತ್ರ್ಯದ ಭದ್ರಕೋಟೆ’ ಎಂಬ ಧ್ಯೇಯವನ್ನು ಈ ವಿಶ್ವವಿದ್ಯಾಲಯ ಭಿತ್ತರಿಸಿತ್ತು.[/fusion_toggle][fusion_toggle title=”1665: ಬಾಂಬೆ ಬ್ರಿಟಿಷರ ವಶಕ್ಕೆ ಸೇರಿತು” open=”no”]ಬ್ರಿಟಿಷರು ಈಗ ಮುಂಬೈ ಎನಿಸಿರುವ ಬಾಂಬೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮೊದಲು ಎರಡನೇ ಚಾರ್ಲ್ಸ್ ದೊರೆಯ ಕೈಗೆ ಬಂದ ಇದು 1668ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಆಡಳಿತಕ್ಕೆ ಒಳಪಟ್ಟಿತು.[/fusion_toggle][fusion_toggle title=”1872: ಅಂಡಮಾನ್ ದ್ವೀಪದಲ್ಲಿ ಖೈದಿಯೊಬ್ಬ ಭಾರತದ ಗವರ್ನರ್ ಜನರಲ್ ಮೇಯೋ ಅನ್ನು ಹತ್ಯೆ ಮಾಡಿದ.” open=”no”]ಅಂಡಮಾನ್ ದ್ವೀಪದಲ್ಲಿ ಖೈದಿಯೊಬ್ಬ ಭಾರತದ ಗವರ್ನರ್ ಜನರಲ್ ಮೇಯೋ ಅನ್ನು ಹತ್ಯೆ ಮಾಡಿದ[/fusion_toggle][fusion_toggle title=”1879: ಸ್ಟಾಂಡ್ಫೋರ್ಡ್ ಫ್ಲೆಮಿಂಗ್ ಅವರಿಂದ ‘ಯೂನಿವರ್ಸಲ್ ಸ್ಟಾಂಡರ್ಡ್ ಟೈಮ್’ ಅಳವಡಿಸುವ ಪ್ರಸ್ತಾಪ ” open=”no”]ರಾಯಲ್ ಕೆನಡಿಯನ್ ಇನ್ಸ್ಟಿಟ್ಯೂಟಿನಲ್ಲಿ ನಡೆದ ಸಭೆಯಲ್ಲಿ ಸ್ಟಾಂಡ್ಫೋರ್ಡ್ ಫ್ಲೆಮಿಂಗ್ ಅವರು ‘ಯೂನಿವರ್ಸಲ್ ಸ್ಟಾಂಡರ್ಡ್ ಟೈಮ್’ ಅಳವಡಿಸುವ ಪ್ರಸ್ತಾಪವನ್ನು ಮುಂದಿಟ್ಟರು[/fusion_toggle][fusion_toggle title=”1910: ವಿಲಿಯಂ ಡಿ. ಬಾಯ್ಸ್ ಅವರಿಂದ ದಿ ಬಾಯ್ಸ್ ಸ್ಕೌಟ್ಸ್ ಆಫ್ ಅಮೆರಿಕ ಸ್ಥಾಪನೆ” open=”no”]ವಿಲಿಯಂ ಡಿ. ಬಾಯ್ಸ್ ಅವರು ದಿ ಬಾಯ್ಸ್ ಸ್ಕೌಟ್ಸ್ ಆಫ್ ಅಮೆರಿಕವನ್ನು ಸ್ಥಾಪಿಸಿದರು[/fusion_toggle][fusion_toggle title=”1921: ಭಾರತದಲ್ಲಿ `ಚೇಂಬರ್ ಆಫ್ ಪ್ರಿನ್ಸಸ್’ (ರಾಜಕುಮಾರರ ಒಕ್ಕೂಟ) ಸ್ಥಾಪನೆ” open=”no”]ಭಾರತದಲ್ಲಿ ‘ಚೇಂಬರ್ ಆಫ್ ಪ್ರಿನ್ಸಸ್’ ಸ್ಥಾಪನೆಗೊಂಡಿತು. ವೈಸ್ ರಾಯ್ ಅಧ್ಯಕ್ಷರಾಗಿದ್ದ ಈ ಒಕ್ಕೂಟದಲ್ಲಿ 120 ಸದಸ್ಯರಿದ್ದರು.[/fusion_toggle][fusion_toggle title=”1922: ಅಮೆರಿಕದ ಶ್ವೇತಭವನದಲ್ಲಿ ಮೊದಲ ಬಾರಿಗೆ ರೇಡಿಯೋ ಪ್ರತಿಷ್ಟಾಪನೆ” open=”no”]ಅಮೆರಿಕದ ಅಧ್ಯಕ್ಷ ವಾರೆನ್ ಜಿ. ಹಾರ್ಡಿಂಗ್ ಅವರು ವೈಟ್ ಹೌಸಿನಲ್ಲಿ ಪ್ರಥಮ ರೇಡಿಯೋ ಸೆಟ್ ಸ್ಥಾಪಿಸಿದರು.[/fusion_toggle][fusion_toggle title=”1950: ಪೂರ್ವ ಜರ್ಮನಿಯಲ್ಲಿ ‘ಸ್ಟೇಸಿ’ ಎಂಬ ಗುಪ್ತ ಪೋಲೀಸ್ ದಳ ಸ್ಥಾಪನೆಗೊಂಡಿತು.” open=”no”]ಪೂರ್ವ ಜರ್ಮನಿಯಲ್ಲಿ ‘ಸ್ಟೇಸಿ’ ಎಂಬ ಗುಪ್ತ ಪೋಲೀಸ್ ದಳ ಸ್ಥಾಪನೆಗೊಂಡಿತು.[/fusion_toggle][fusion_toggle title=”1955: ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಜಾಗೀರ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಲಾಯಿತು.” open=”no”]ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಜಾಗೀರ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಲಾಯಿತು. ಇದರಿಂದ ಅಲ್ಲಿ ವಶಪಡಿಸಿಕೊಂಡ ಒಂದು ದಶಲಕ್ಷ ಎಕರೆ ಭೂಮಿಯನ್ನು ಬಡಬಗ್ಗರಿಗೆ ಹಂಚಲಾಯಿತು.[/fusion_toggle][fusion_toggle title=”1971: ‘ನಾಸ್ಡಾಕ್’ ಷೇರು ಮಾರುಕಟ್ಟೆಯ ಸೂಚ್ಯಂಕ ಮೊದಲಬಾರಿಗೆ ತೆರೆದುಕೊಂಡಿತು” open=”no”]ಅಮೆರಿಕದ ಎರಡನೇ ದೊಡ್ಡ ಷೇರು ಮಾರುಕಟ್ಟೆಯಾದ ‘ನಾಸ್ಡಾಕ್’ (NASDAQ) ಸೂಚ್ಯಂಕವು ಮೊದಲ ಬಾರಿಗೆ ತೆರೆದುಕೊಂಡಿತು.[/fusion_toggle][fusion_toggle title=”1974: 84 ದಿನಗಳ ಗಗನ ವಾಸದ ನಂತರದಲ್ಲಿ ಭೂಲೋಕಕ್ಕೆ ಹಿಂದಿರುಗಿದ ಸ್ಕೈಲ್ಯಾಬ್ ತಂತ್ರಜ್ಞರು” open=”no”]84 ದಿನಗಳ ಗಗನ ವಾಸದ ನಂತರದಲ್ಲಿ ಸ್ಕೈಲ್ಯಾಬ್ ಬಾಹ್ಯಾಕಾಶ ಪ್ರಯೋಗಾಲಯದಿಂದ ನಾಸಾದ ತಂತ್ರಜ್ಞರು ಭುವಿಗೆ ವಾಪಸ್ಸಾದರು.[/fusion_toggle][fusion_toggle title=”1978: ಅಮೆರಿಕದ ಸೆನೆಟ್ಟಿನ ಕಾರ್ಯಕಲಾಪಗಳು ಮೊದಲ ಬಾರಿಗೆ ರೇಡಿಯೋದಲ್ಲಿ ನೇರ ಪ್ರಸಾರ” open=”no”]ಅಮೆರಿಕದ ಸೆನೆಟ್ಟಿನ ಕಾರ್ಯಕಲಾಪಗಳು ಮೊದಲ ಬಾರಿಗೆ ರೇಡಿಯೋದಲ್ಲಿ ನೇರ ಪ್ರಸಾರಗೊಂಡವು[/fusion_toggle][fusion_toggle title=”1994: ರಿಚರ್ಡ್ ಹ್ಯಾಡ್ಲಿ ಅವರ ಹೆಸರಿನಲ್ಲಿದ್ದ ಅತಿ ಹೆಚ್ಚು ವಿಕೆಟ್ ದಾಖಲೆ ಅಳಿಸಿದ ಕಪಿಲ್ ದೇವ್ ” open=”no”]ಅಹಮದಾಬಾದಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕೆಯ ಹಷನ್ ತಿಲಕರತ್ನೆ ಅವರ ವಿಕೆಟ್ ಉರುಳಿಸುವ ಮೂಲಕ ಭಾರತೀಯ ಕ್ರಿಕೆಟಿಗ ಕಪಿಲ್ ದೇವ್ ಅವರು ಟೆಸ್ಟ್ ಕ್ರಿಕೆಟಿನಲ್ಲಿ 431 ವಿಕೆಟ್ ಗಳಿಸಿ ದಾಖಲೆ ಸ್ಥಾಪಿಸಿದ್ದ ಸರ್ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯನ್ನು ಮುರಿದರು.[/fusion_toggle][fusion_toggle title=”2006: ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಮೊದಲ ಅಭಿಷೇಕ” open=”no”]ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ 1,025 ವರ್ಷಗಳಿಂದ ತಲೆ ಎತ್ತಿ ನಿಂತಿರುವ ಭಗವಾನ್ ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಮೊದಲ ಅಭಿಷೇಕ ಸಹಸ್ರಾರು ಮಂದಿ ಭಕ್ತ ಸಮೂಹದ ನಡುವೆ ಆರಂಭಗೊಂಡಿತು. ಮೊದಲ ಕಲಶದ ಅಭಿಷೇಕ ಭಾಗ್ಯ ರಾಜಸ್ಥಾನ ರಾಜ್ಯದ ಅಜಮೇರ್ ಬಳಿಯ ಕಿಷನ್ ಗಢ ಊರಿನ ಅಶೋಕ ಪಾಟ್ನಿ ಅವರದಾಯಿತು. ಈ ಕಲಶವನ್ನು ಅವರು ಹರಾಜಿನಲ್ಲಿ 1.08 ಕೋಟಿ ರೂಪಾಯಿ ನೀಡಿ ಖರೀದಿಸಿದರು.[/fusion_toggle][fusion_toggle title=”2007: ಸ್ವತಃ ಅಮೆರಿಕ ವಾಯುಪಡೆಯ ಪ್ರತಿಷ್ಠಿತ ಎಫ್-16 ಯುದ್ಧ ವಿಮಾನವನ್ನು ಚಾಲನೆ ಮಾಡಿದ ರತನ್ ಟಾಟಾ ” open=”no”]ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ -2007 ಉತ್ಸವದಲ್ಲಿ ಟಾಟಾ ಉದ್ಯಮ ಸಮೂಹದ ಮುಖ್ಯಸ್ಥರಾದ 69 ವರ್ಷದ ರತನ್ ಟಾಟಾ ಅವರು ಸ್ವತಃ ಅಮೆರಿಕ ವಾಯುಪಡೆಯ ಪ್ರತಿಷ್ಠಿತ ಎಫ್-16 ಯುದ್ಧ ವಿಮಾನವನ್ನು ಚಾಲನೆ ಮಾಡಿದರು.ಈ ಮೂಲಕ ಎಫ್- 16 ಚಾಲನೆ ಮಾಡಿದ ಪ್ರಪ್ರಥಮ ಭಾರತೀಯ ಪ್ರಜೆ ಎಂಬ ಕೀರ್ತಿಗೆ ಅವರು ಭಾಜನರಾದರು.[/fusion_toggle][fusion_toggle title=”2008: ರಾಷ್ಟ್ರಪತಿ ಹಾಗೂ ರಾಜ್ಯಪಾಲರು ತಮಗಿರುವ ಕ್ಷಮಾದಾನದ ಅಧಿಕಾರವನ್ನು ಸ್ವಚ್ಛಂದವಾಗಿ ಬಳಸುವಂತಿಲ್ಲ ಎಂದು ತೀರ್ಮಾನಿಸಿದ ಕೋರ್ಟು” open=”no”]ರಾಷ್ಟ್ರಪತಿ ಹಾಗೂ ರಾಜ್ಯಪಾಲರು ತಮಗಿರುವ ಕ್ಷಮಾದಾನದ ಅಧಿಕಾರವನ್ನು ಸ್ವಚ್ಛಂದವಾಗಿ, ಅಸಂವಿಧಾನಿಕವಾಗಿ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯ ಪೀಠವು ಆಂಧ್ರಪ್ರದೇಶ ಸರ್ಕಾರದ ಖೈದಿಗಳ ಬಿಡುಗಡೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ನೀಡಿತು.[/fusion_toggle][fusion_toggle title=”2008: ಭಾರತ ಮತ್ತು ರಷ್ಯಾ ಜಂಟಿ ಬಾಹ್ಯಾಕಾಶ ಯೋಜನೆಯಲ್ಲಿ 1984ರ ವರ್ಷದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದ ಭಾರತದ ರಾಕೇಶ್ ಶರ್ಮಾ ಹಾಗೂ ರಷ್ಯಾದ ಅಂತೋಲಿ ಬೊರೋಜೊವೊಯ್ ಅವರ 24 ವರ್ಷಗಳ ನಂತರದ ಭೇಟಿ” open=”no”]1984ರ ವರ್ಷದಲ್ಲಿ ಭಾರತ ಮತ್ತು ರಷ್ಯಾ ಜಂಟಿ ಬಾಹ್ಯಾಕಾಶ ಯೋಜನೆಯಲ್ಲಿ 1984ರ ವರ್ಷದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದ ಭಾರತದ ರಾಕೇಶ್ ಶರ್ಮಾ ಹಾಗೂ ರಷ್ಯಾದ ಅಂತೋಲಿ ಬೊರೋಜೊವೊಯ್ ಅವರು 24 ವರ್ಷಗಳ ನಂತರ ನವದೆಹಲಿಯಲ್ಲಿ ಮುಖಾಮುಖಿಯಾದರು. ರಾಜಧಾನಿಯಲ್ಲಿ ನಡೆದ 18ನೇ ವಿಶ್ವ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಬಾಹ್ಯಾಕಾಶ ಕುರಿತು ಪಾಠ ಹೇಳಲು ಹಾಗೂ ತರಬೇತಿ ನೀಡಲು ಇವರಿಬ್ಬರೂ ದೆಹಲಿಗೆ ಆಗಮಿಸಿದ್ದರು.

ಪ್ರಮುಖಜನನ/ಮರಣ:

120: ಗ್ರೀಕ್ ಖಗೋಳ ಶಾಸ್ತ್ರಜ್ಞ, ಗಣಿತಜ್ಞ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞ ವೆಟ್ಟಿಯಸ್ ವಾಲೆನ್ಸ್ ಜನನ” open=”no”]ಗ್ರೀಕ್ ಖಗೋಳ ಶಾಸ್ತ್ರಜ್ಞ, ಗಣಿತಜ್ಞ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞ ವೆಟ್ಟಿಯಸ್ ವಾಲೆನ್ಸ್ ಜನಿಸಿದರು. ಇವರು ಜ್ಯೋತಿಷ್ಯಾಸ್ತರದ ಕುರಿತು ಹತ್ತು ಬೃಹತ್ ಸಂಪುಟಗಳ ಗ್ರಂಥವನ್ನು ರಚಿಸಿದ್ದರು.[/fusion_toggle][fusion_toggle title=”412: ಗ್ರೀಕ್ ಗಣಿತಜ್ಞ ಮತ್ತು ತತ್ವಶಾಸ್ತ್ರಜ್ಞ ಪ್ರೋಕ್ಲಸ್ ಜನನ” open=”no”]ಗ್ರೀಕ್ ಗಣಿತಜ್ಞ ಮತ್ತು ತತ್ವಶಾಸ್ತ್ರಜ್ಞ ಪ್ರೋಕ್ಲಸ್ ಕಾನ್ ಸ್ಟಾಂಟಿನೋಪಲ್ ನಗರದಲ್ಲಿ ಜನಿಸಿದರು.[/fusion_toggle][fusion_toggle title=”1897: ಭಾರತದ ಮೂರನೆಯ ರಾಷ್ಟ್ರಪತಿಗಳೂ, ಬೋಧಕರೂ ಆದ ಜಕೀರ್ ಹುಸೇನ್ ಜನನ” open=”no”]ಭಾರತದ ಮೂರನೆಯ ರಾಷ್ಟ್ರಪತಿಗಳೂ, ಬೋಧಕರೂ ಆಗಿದ್ದ ಜಕೀರ್ ಹುಸೇನ್ ಈಗಿನ ತೆಲಂಗಾಣದ ಹೈದರಾಬಾದಿನಲ್ಲಿ ಜನಿಸಿದರು. 1967ರಲ್ಲಿ ರಾಷ್ಟ್ರಪತಿಗಳಾದ ಇವರು ಅಧಿಕಾರದಲ್ಲಿದ್ದಾಗಲೇ 1969ರ ವರ್ಷದಲ್ಲಿ ನಿಧನರಾದರು. ಈ ಹಿಂದೆ ಅವರು ಉಪರಾಷ್ಟ್ರಪತಿ ಮತ್ತು ಬಿಹಾರ ರಾಜ್ಯದ ರಾಜ್ಯಪಾಲರ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇವರಿಗೆ 1963ರ ವರ್ಷದಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.[/fusion_toggle][fusion_toggle title=”1906: ಎಲೆಕ್ಟ್ರೋ ಫೋಟೋಗ್ರಫಿ ಕಂಡುಹಿಡಿದ ಚೆಸ್ಟರ್ ಕಾರ್ಲ್ಸನ್ ಜನನ” open=”no”]ಎಲೆಕ್ಟ್ರೋ ಫೋಟೋಗ್ರಫಿ ಕಂಡುಹಿಡಿದು ‘ಸೇರೋಗ್ರಫಿ(Xerography) ಅಭಿವೃದ್ಧಿಪಡಿಸಿದ ಅಮೇರಿಕದ ವೈದ್ಯ ಶಾಸ್ತ್ರಜ್ಞ ಚೆಸ್ಟರ್ ಕಾರ್ಲ್ಸನ್ ಅವರು ವಾಷಿಂಗ್ಟನ್ ಬಳಿಯ ಸೀಟಲ್ನಲ್ಲಿ ಜನಿಸಿದರು.[/fusion_toggle][fusion_toggle title=”1914: ಸಾಹಿತಿ ಎಸ್. ವಿ. ಪರಮೇಶ್ವರ ಭಟ್ ಜನನ” open=”no”]‘ಕನ್ನಡದ ಕಾಳಿದಾಸ’ರೆಂದೇ ಹೆಸರು ಮಾಡಿದ್ದ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ತೀರ್ಥಹಳ್ಳಿಯಲ್ಲಿ ಜನಿಸಿದರು. ಎಸ್. ವಿ. ಪರಮೇಶ್ವರ ಭಟ್ಟರು ಕನ್ನಡ ನವೋದಯದ ಕಾಲದ ಬಹುಶ್ರುತ ವಿದ್ವಾಂಸ ಬರಹಗಾರರು, ಕವಿಗಳು, ಭಾವಗೀತೆ, ವಚನ, ಮುಕ್ತಕಗಳೇ ಮೊದಲಾಗಿ ಸಾವಿರಾರು ಸಂಖ್ಯೆಯ ಸೃಜನಶೀಲ ಕಾವ್ಯಗಳನ್ನು ಸೃಷ್ಟಿಸಿದರಲ್ಲದೆ, ಸಂಸ್ಕೃತ ಮಹಾಕವಿಗಳ ಕಾವ್ಯ, ನಾಟಕ, ಗೀತೆ, ಮುಕ್ತಕಗಳನೇಕವನ್ನು ಅನುವಾದಗಳಲ್ಲಿ ತಂದು ಮರುಸೃಷ್ಟಿ ಮಾಡಿದ್ದಾರೆ. 2000ದ ವರ್ಷದಲ್ಲಿ ನಿಧನರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು.[/fusion_toggle][fusion_toggle title=”1920: ಅಮೆರಿಕದ ಚಿತ್ರನಟಿ ಲಾರಾ ಟರ್ನರ್ ಜನನ” open=”no”]‘ಸಿಹಿ ಹುಡುಗಿ’ (ಸ್ವೀಟರ್ ಗರ್ಲ್) ಎಂದೇ ಖ್ಯಾತಳಾಗಿದ್ದ ಅಮೆರಿಕಾದ ಚಿತ್ರನಟಿ ಲಾರಾ ಟರ್ನರ್ ಜನಿಸಿದರು[/fusion_toggle][fusion_toggle title=”1924: ಭಾರತೀಯ ಉದ್ಯಮಿ ವಿಠ್ಠಲ್ ಮಲ್ಯ ಜನನ” open=”no”]ಬಾರತೀಯ ಉದ್ಯಮಿ ವಿಠ್ಠಲ್ ಮಲ್ಯ ಈಗ ಬಾಂಗ್ಲಾ ದೇಶಕ್ಕೆ ಸೇರಿರುವ ಡಾಕ್ಕಾದಲ್ಲಿ ಜನಿಸಿದರು.[/fusion_toggle][fusion_toggle title=”1934: ಸುಗಮ ಸಂಗೀತ ಕಲಾವಿದೆ ಎಚ್.ಆರ್. ಲೀಲಾವತಿ ಜನನ” open=”no”]ಸುಗಮ ಸಂಗೀತದ ಪ್ರಖ್ಯಾತ ಕಲಾವಿದೆ ಎಚ್.ಆರ್. ಲೀಲಾವತಿ ಬೆಂಗಳೂರಿನಲ್ಲಿ ಜನಿಸಿದರು. ಆಕಾಶವಾಣಿಯ ಸೇವೆಯಲ್ಲಿ ಪ್ರಮುಖ ಗಾಯನ ಕಲಾವಿದರಾಗಿದ್ದ ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂತ ಶಿಶುನಾಳ ಶರೀಫ ಪ್ರಶಸ್ತಿಗಳು ಸಂದಿವೆ. ಇವರು ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.[/fusion_toggle][fusion_toggle title=”1941: ಘಜಲ್ ಸಂಗೀತಗಾರ ಜಗಜಿತ್ ಸಿಂಗ್ ಜನನ” open=”no”]ಪ್ರಸಿದ್ಧ ಘಜಲ್ ಸಂಗೀತ ಗಾಯಕ ಮತ್ತು ಸಂಯೋಜಕ ಜಗಜಿತ್ ಸಿಂಗ್ ಬಿಕನೇರ್ ಬಳಿಯ ಶ್ರೀ ಗಂಗಾನಗರ್ ಎಂಬಲ್ಲಿ ಜನಿಸಿದರು. ತಮ್ಮ ಪತ್ನಿ ಚಿತ್ರಾ ಸಿಂಗ್ ಅವರೊಂದಿಗೆ ಅನೇಕ ಕಛೇರಿಗಳನ್ನು ನೀಡಿದ್ದಲ್ಲದೆ ಅನೇಕ ಪ್ರಖ್ಯಾತ ಸಂಗೀತದ ಆಲ್ಬಂಗಳನ್ನು ಇವರು ಹೊರತಂದಿದ್ದರು. 1984ರ ವರ್ಷದಲ್ಲಿ 2011ರ ವರ್ಷದಲ್ಲಿ ಈ ಲೋಕವನ್ನಗಲಿದ ಇವರಿಗೆ ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.[/fusion_toggle][fusion_toggle title=”1963: ಭಾರತೀಯ ಕ್ರಿಕೆಟ್ ಆಟಗಾರ ಮಹಮ್ಮದ್ ಅಜರುದ್ದೀನ್ ಜನನ” open=”no”]ಭಾರತದ ಕ್ರಿಕೆಟ್ ಆಟಗಾರ ಮಹಮ್ಮದ್ ಅಜರುದ್ದೀನ್ ಹೈದರಾಬಾದಿನಲ್ಲಿ ಜನಿಸಿದರು. ಏಕದಿನ ಕ್ರಿಕೆಟಿನಲ್ಲಿ 9000 ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಟೆಸ್ಟ್ ಕ್ರಿಕೆಟ್ಟಿನಲ್ಲಿ 6216ರನ್ ಗಳಿಸಿರುವ ಇವರು ಭಾರತ ತಂಡದ ನಾಯಕತ್ವವನ್ನೂ ನಿರ್ವಹಿಸಿದ್ದರು.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1957: ನೊಬೆಲ್ ಪುರಸ್ಕೃತ ಭೌತ ವಿಜ್ಞಾನಿ ವಾಲ್ತರ್ ಬೋಥೆ ನಿಧನ” open=”no”]ಜರ್ಮನಿಯ ಭೌತ ವಿಜ್ಞಾನಿ ವಾಲ್ತರ್ ಬೋಥೆ ಹೀಡೆಲ್ ಎಂಬಲ್ಲಿ ನಿಧನರಾದರು. ಇವರಿಗೆ 1954 ವರ್ಷದ ಭೌತಶಾಸ್ತ್ರ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1975: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ರಾಬರ್ಟ್ ರಾಬಿನ್ಸನ್ ನಿಧನ” open=”no”]ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ರಾಬರ್ಟ್ ರಾಬಿನ್ಸನ್ ಅವರು ಬಕ್ಕಿಂಗ್ ಹ್ಯಾಮ್ ಶೈರ್ ಬಳಿಯ ಗ್ರೇಟ್ ಮಿಸೆನ್ಡೆನ್ ಎಂಬಲ್ಲಿ ನಿಧನರಾದರು. ಅಲ್ಕಲಾಯ್ದ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1947 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1979: ನೊಬೆಲ್ ಪುರಸ್ಕೃತ ಡೆನ್ನಿಸ್ ಗಬೋರ್ ನಿಧನ” open=”no”]ಹಂಗೇರಿ ದೇಶದಲ್ಲಿ ಜನಿಸಿದ ಭೌತವಿಜ್ಞಾನಿ ಡೆನ್ನಿಸ್ ಗಬೋರ್ ಲಂಡನಿಧನರಾದರುನ್ನಿನಲ್ಲಿ . ಹೋಲೋಗ್ರೆಫಿ ಕಂಡುಹಿಡಿದ ಇವರಿಗೆ 1971ರ ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1998: ನೊಬೆಲ್ ಪುರಸ್ಕೃತ ಸಾಹಿತಿ ಹಾಲ್ಡರ್ ಲಾಕ್ಸೆನ್ಸ್ ನಿಧನ” open=”no”]ಐಲೆಂಡ್ ದೇಶದ ಹಾಲ್ಡರ್ ಲಾಕ್ಸೆನ್ಸ್ ರೇಕ್ ಜೆವಿಕ್ ಎಂಬಲ್ಲಿ ನಿಧನರಾದರು. ಇವರಿಗೆ 1955 ವರ್ಷದ ಸಾಹಿತ್ಯಕ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1999: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರಾಗಿದ್ದ ಮೇಜರ್ ಕೃಷ್ಣಸ್ವಾಮಿ ಸುಂದರ್ಜಿ ನಿಧನ” open=”no”]ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಕೃಷ್ಣಸ್ವಾಮಿ ಸುಂದರ್ಜಿ ನಿಧನರಾದರು. ಇವರ ಅಧಿಕಾರಾವಧಿಯಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ ಉಗ್ರಗಾಮಿಗಳನ್ನು ತೆರವು ಮಾಡುವ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಯಿತು.[/fusion_toggle][fusion_toggle title=”2008: ಖ್ಯಾತ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಗಾಯಕ ಎಚ್. ಕೆ.ನಾರಾಯಣ ನಿಧನ” open=”no”]ಖ್ಯಾತ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಸಂಗೀತ ಸಂಯೋಜಕ ಎಚ್. ಕೆ.ನಾರಾಯಣ ಬೆಂಗಳೂರಿನಲ್ಲಿ ನಿಧನರಾದರು. ಆಕಾಶವಾಣಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರಿಗೆ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂತ ಶಿಶುನಾಳ ಶರೀಫ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿದ್ದವು..[/fusion_toggle][fusion_toggle title=”2016: ಪ್ರಖ್ಯಾತ ಹಿಂದಿ ಮತ್ತು ಉರ್ದು ಕವಿ ಹಾಗೂ ಗೀತ ರಚನಕಾರ ನಿಡಾ ಫಾಜಿಲ್ ನಿಧನ” open=”no”]ಪ್ರಖ್ಯಾತ ಹಿಂದಿ ಮತ್ತು ಉರ್ದು ಕವಿ ಹಾಗೂ ಗೀತ ರಚನಕಾರ ನಿಡಾ ಫಾಜಿಲ್ ಮುಂಬೈನಲ್ಲಿ ನಿಧನರಾದರು. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹಾಗೂ ಚಲನಚಿತ್ರರಂಗದ ಹಲವಾರು ಪಶಸ್ತಿಗಳು ಸಂದಿದ್ದವು.[/fusion_toggle][/fusion_accordion]