Loading Events

« All Events

  • This event has passed.

ಬಾಳಪ್ಪ ಹುಕ್ಕೇರಿ

August 21, 2023

೨೧.೦.೧೯೧೧ ೧೫.೧೧.೧೯೯೨ ಸಾವಿರ ಹಾಡಿನ ಸರದಾರರೆಂದೇ ಪ್ರಸಿದ್ಧರಾಗಿದ್ದ ಬಾಳಪ್ಪನವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲ್ಲೂಕಿನ ಮುರಗೋಡು ಗ್ರಾಮದಲ್ಲಿ. ತಂದೆ ವೀರಭದ್ರಪ್ಪ, ತಾಯಿ ಚನ್ನವೀರಮ್ಮ. ಜಾನಪದ ಹಾಡುಗಾರ್ತಿ ತಾಯಿಯಿಂದ ಬಂದ ಹಾಡುವ ಕಲೆ. ಪಕ್ಕದ ಮನೆಯ ಶಿವಲಿಂಗಪ್ಪನವರಿಂದ ಸಂಗೀತದ ಪಾಠ. ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಶಿ.ಶಿ. ಬಸವನಾಳರು, ಸಿದ್ಧಯ್ಯ ಪುರಾಣಿಕರೆಲ್ಲರ ಸಲಹೆಯಂತೆ ಆಯ್ದುಕೊಂಡದ್ದು ಲಘುಸಂಗೀತ ಕ್ಷೇತ್ರ. ಕಾಯಿದೆ ಭಂಗ ಚಳುವಳಿಯಲ್ಲಿ ಭಾಗವಹಿಸಿ ಅನುಭವಿಸಿದ ಕಾರಾಗೃಹವಾಸ. ಜನತೆಗೆ ಸ್ವಾತಂತ್ಯ್ರದ ಬಗ್ಗೆ ಅರಿವು ಮೂಡಿಸಲು ಲಾವಣಿ, ಜಾನಪದ ಗೀತೆ, ಭಕ್ತಿಗೀತೆಗಳನ್ನು ಹಾಡುತ್ತಾ ದೇಶದ ಉದ್ದಗಲಕ್ಕೂ ಸಂಚಾರ. ಮಹಾತ್ಮ ಸೇವಾ ಸಂಗೀತ ನಾಟಕ ಮಂಡಲಿ ಕಟ್ಟ ಸ್ವಾತಂತ್ರ ಸಂಗ್ರಾಮದ ಸಂದೇಶ ಸಾರುವ ನಾಟಕ ರಚಿಸಿ, ಅಭಿನಯಿಸಿ, ನಾಟಕ ಪ್ರದರ್ಶನ. ಸ್ವಾತಂತ್ಯ್ರಾನಂತರ ಉದ್ಯೋಗಕ್ಕೆ ಸೇರಿದ್ದು ವ್ಯವಸಾಯ ಇಲಾಖೆ. ಕ್ಷೇತ್ರ ಪ್ರಚಾರದ ಕಾರ್ಯನಿರ್ವಹಣೆ. ಕೃಷಿ ವಿಷಯವಾಗಿ ಬೋಧಪ್ರದ ಹಾಡುಗಳಿಂದ ಜನರಿಗೆ ನೀಡಿದ ತಿಳುವಳಿಕೆ. ವಚನಗಳಿಗೆ ತಮ್ಮದೇ ಆದ ಜಾನಪದ ಧಾಟಿ ಹಚ್ಚಿ, ಹಾಡಿ ಗಳಿಸಿದ ಜನಮನ್ನಣೆ. ಚೀನಾ ಮತ್ತು ಪಾಕಿಸ್ತಾನ ಆಕ್ರಮಣ ಕಾಲದಲ್ಲಿ ಲಾವಣಿಯ ಮೂಲಕ ಯುವ ಜನಾಂಗಕ್ಕೆ ತುಂಬಿದ ಹುಮ್ಮಸ್ಸು. ಬಂಗಾರದ ಪದಕವನ್ನು ಸೈನಿಕ ನಿಧಿಗೆ ನೀಡಿ ತೋರಿದ ದೇಶಭಕ್ತಿ. ಮೈಸೂರು ಅರಸರು, ಪ್ರಧಾನ ಮಂತ್ರಿ, ರಾಷ್ಟ್ರಪತಿಗಳ ಮುಂದೆ ಹಾಡಿದ ಹೆಗ್ಗಳಿಕೆ. ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಹಿಂದೂಸ್ತಾನ ಸಾಂಸ್ಕೃತಿಕ ಸಂಸ್ಥೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಧ್ಯಪ್ರದೇಶದ ತುಳಸಿ ಸಮ್ಮಾನ ಪ್ರಶಸ್ತಿಗಳಲ್ಲದೆ ಜನ ಪ್ರೀತಿಯಿಂದ ಕರೆದದ್ದು ಜಾನಪದ ಜಾದೂಗಾರ, ಮುರಗೋಡು ಮುಂಗೋಳಿ, ಜನಪದಕಲಾನಿಧಿ, ಜೇನದನಿ ಬಾಳಪ್ಪ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು ಲಕ್ಷ್ಮಣ ಗೌಡ್ರು – ೧೯೨೧ ಪಂಕಜ ರಾಮಚಂದ್ರ – ೧೯೫೫ ಶಶಿಧರಕೋಟೆ – ೧೯೬೫

* * *

Details

Date:
August 21, 2023
Event Category: