ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ವಾಲ್ಮೀಕಿ ಮತ್ತು ಆತನ ರಾಮಾಯಣಕ್ಕೆ ಮೊದಲ ಪ್ರಶಸ್ತ್ಯವಿದೆ. ಆದಿಯಲ್ಲಿ ವಾಲ್ಮೀಕಿಯನ್ನು ಒಬ್ಬ ದರೋಡೆಕೋರ, ಕಳ್ಳ ಎಂದು ಕರೆಯಲಾಗಿತ್ತು. ಈ ಬಗ್ಗೆ ಕೆಲವು ಅಧ್ಯಯನಗಳು ನಡೆದ ಕ್ರಿ.ಶ ೧೧ನೆಯ ಶತಮಾನಕ್ಕೂ ಪೂರ್ವದಲ್ಲಿ ವಾಲ್ಮೀಕಿ ಬೇಟೆಗಾರನು ಅಲ್ಲ, ದರೋಡೆಕೋರನು ಅಲ್ಲ ಎಂದು ತಿಳಿಯುತ್ತದೆ. ಆದರೆ ಅತನೊಬ್ಬ ಆದಿಕವಿ, ಮಹಾಋಷಿಯಾಗಿದ್ದನೆಂದು ಪ್ರಚುರಪಡಿಸಲಾಗಿದೆ. ಆತನನ್ನು ಭಗವಾನ್, ಋಷಿ, ಸಂತನೆಂದು ಕರೆಯಲಾಗಿದೆ (ದಿನಾಂಕ ೧೬.೯.೦೯ರಂದು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಬೆಂಗಳೂರಿನಲ್ಲಿ ನಡೆದಾಗ ಅಧ್ಯಕ್ಷರಾದ ಕಮಲಾ ಸಹನಿ ಅವರ ಅಭಿರಾಯ). ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ವಾಲ್ಮೀಕಿಗೆ ರತ್ನಾಕರ ಎಂಬ ಭಿನ್ನ ಹೆಸರು ಇದ್ದಿತು. ಶಾಲಾ ಪಠ್ಯಪುಸ್ತಕಗಳಲ್ಲಿ ವಾಲ್ಮೀಕಿಯನ್ನು ಕಳ್ಳ ದರೋಡೆ ಕೋರನೆಂದು ಈ ರೆಗೆ ಅಪಪ್ರಚಾರ ಮಾಡಲಾಗಿದೆ. ವಾಲ್ಮೀಕಿ ಭಾರತ ಸಂಸ್ಕೃತಿಯ ನಿರ್ಮಾಪಕ ಮಹಾಶಯ. ಮಾನವ ಜನಾಂಗ, ಹಿಂದೂ ಧರ್ಮ, ವ್ಯವಸ್ಥೆ, ಸಂಸ್ಕೃತಿ, ರಾಜಕೀಯವನ್ನು ಆಕಸ್ಮಿಕವೆಂಬಂತೆ ಚಿತ್ರಿಸಲಾಗಿದೆ. ಪ್ರತಿಯೊಬ್ಬರು ರಾಮಾಯಣ ದರ್ಶನದಿಂದ ಸಂತೋಷಗೊಳ್ಳುತ್ತಾರೆ. ಗತಕಾಲದ ಋಷಿ ಕಲ್ಪನೆ, ಸುಂದರ ಸಮಜ ನಿರ್ಮಾಣಕ್ಕೆ ಋಷಿ ದರ್ಶನವಾದ ಬಗ್ಗೆ ಪರಂಪರೆ ಮೂಲಕ ತಿಳಿದು ಬರುತ್ತದೆ. ಇಲ್ಲ ಮಹಾನ್ ಕವಿಯಾದ ವ್ಯಾಸ, ಕಾಳಿದಾಸಗಿಂತ ಮೊದಲು ತಿಳಿದು ಬರುತ್ತದೆ. ಇಲ್ಲ ಮಹಾನ್ ಕವಿಯಾದ ವ್ಯಾಸ, ಕಾಳಿದಾಸಗಿಂತ ಮೊದಲು ವಾಲ್ಮೀಕಿ ಉತ್ತುಂಗ ಸ್ಥಾನವನ್ನು ಅಲಂಕರಿಸಿದ್ದಾನೆ. ಜಗತ್ತಿನ ಆರು ಜನ ಮಹಾಕವಿಗಲಲ್ಲಿ ವಾಲ್ಮೀಕಿಯು ಸಹ ಒಬ್ಬರು. ತನ್ನ ಕಾವ್ಯದಲ್ಲಿ ವಿಚಾರ. ಹಾಸ್ಯ. ಸತ್ಯ. ನಿಷ್ಟೆ ಹೇಳುತ್ತ ರಾಮಾಯಣವು ಕಲ್ಪವೃಕ್ಷವಾಗಿದೆ. ದಕ್ಷಿಃಣ ಏಶಿಯಾ ದೇಶಗಳಲ್ಲಿ ರಾಮ ಕಥೆ (ರಾಮ ಸ್ಟೋರಿ) ದೇಶದಿಂದ ದೇಶಕ್ಕೆ ಭಿನ್ನವಾದ ಸಾಹಿತ್ಯ, ಕಥೆಗಳು ಹುಟ್ಟಿಕೊಂಡಿವೆ. ಜನಪದ ಕಥೆಗಳಲ್ಲಿ ರಾಮಾಯಣದ ಬಗ್ಗೆ ಬಹುಜ್ಞಾನ ಶಿಸ್ತು ಮುಖ್ಯವಾಗಿದೆ.

ವಾಲ್ಮೀಕಿಯನ್ನು ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಚಿತ್ರಿಸಿರುವುದಕ್ಕಿಂತ ಹೆಚ್ಚು ಭಿನ್ನವಾಗಿ ಕನ್ನಡದಲ್ಲಿ ಪ್ರಕಟಣೆಗಳಿವೆ. ಇಲ್ಲಿ ರಾಮಾಯಣವನ್ನು ಆರ್ಯ ಹಾಗೂ ದ್ರಾವಿಡ ಪರಿಕಲ್ಪನೆ ಹಿನ್ನಲೆಯಲ್ಲಿ ನೋಡಲಾಗಿದೆ. ರಾಮನು ಆರ್ಯ, ರಾವಣನು ದ್ರಾವಿಡ ಎಂಬ ನಂಬಿಕೆಯಿದೆ. ಇವರು ಯಾರೇ ಆದರೂ ಭಾರತೀಯರು, ಸಂಸ್ಕೃತಿ ನಿರ್ಮಾಪಕರು ಎಂದು ಈಗಾಗಲೇ ಒಪ್ಪಲಾಗಿದೆ. ಹಾಗಾಗಿ ವಾಲ್ಮೀಕಿಯು ಚಿತ್ರಿಸಿರುವ ಹಲವು ಸಂಗತಿಗಳಲ್ಲಿ ರಾಜನೀತಿ, ಕುಟುಂಬ, ಸಮಾನತೆ, ರಾಜಪ್ರಭುತ್ವ, ಪ್ರಜಾಪಾಲನೆ ಮೊದಲಾದ ಲಕ್ಷಣಗಳನ್ನು ಚರ್ಚಿಸಲಾಗಿದೆ. ಹಾಗೆಯೇ ತಿರುವಳ್ಳುವರ್ ಅವರ ರಾಜನೀತಿ ಕುರಿತ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ದಕ್ಷಿಣ ಭಾರತದಲ್ಲಿ ದ್ರಾವಿಡ ಸಂಸ್ಕೃತಿಯನ್ನು, ಉತ್ತರ ಭಾರತದಲ್ಲಿ ಆರ್ಯ (ವೈದಿಕ) ಸಂಸ್ಕೃತಿಯನ್ನು ನೋಡಲಾಗುತಿತ್ತು. ತಮಿಳು ಸಾಹಿತ್ಯ ಚರಿತ್ರೆಯಲ್ಲಿ “ಸಂಗಂ ಸಾಹಿತ್ಯ”ದ ಸುವರ್ಣ ಯುಗವೇ ದಕ್ಷಿಣ ಭಾರತದ ಚರಿತ್ರೆಯಲ್ಲಿ ಕಂಡುಬರುತ್ತದೆ. ಈ ಯುಗದ ನಂತರ ಕ್ರಿ.ಶ. ೧೦೦ರಿಂದ ಕ್ರಿ.ಶ. ೫೦೦ರ ವರೆಗೆ “ನೀತಿ ಗ್ರಂಥಗಳ ಕಾಲ” ಬರುತ್ತದೆ. ಈ ಕಾಲ ಘಟ್ಟದಲ್ಲಿ ಪ್ರೇಮ, ವಿರಸ, ವೀರತ್ವ, ಧಾನ ಮೊದಲಾದ ಭಾವನೆಗಳನ್ನು ಕೈ ಬಿಟ್ಟು ನೀತಿ ಗ್ರಂಥಗಳನ್ನು ರಿಚಿಸಿದರು. ಮಾನವನ ಸಮಾಜ ದುಃಖಕ್ಕೆ ಕಾರಣಗಳೇನು? ಪ್ರಭುತ್ವದ ರಾಜನೀತಿ ಏನು? ನಮ್ಮ ಕಟ್ಟುಪಾಡುಗಳೇನು? ಎಂದು ಕವಿ, ವಿದ್ವಾಂಸರು ಈ ಬಗ್ಗೆ ಚರ್ಚಿಸಿದ್ದಾರೆ. ಈ ತಿರುಕ್ಕುರಳ್ ಎಂಬ ನೀತಿ ಗ್ರಂಥವನ್ನು ಬರೆದವರು ಯಾರು? ಎಂದು “ತಿರುವಳ್ಳುವರ್” ಎಂಬ ಹೆಸರನ್ನು ಶೋಧಿಸಿದರು. ತಿರುವಳ್ಳುವರ್ ಬರೆದ ಕೃತಿ “ತಿರುಕ್ಕುರಳ್” ನಲ್ಲಿ ನಾಲ್ಕು ಭಾಗಗಳಿವೆ: ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇದರಲ್ಲಿ ಶಿಕ್ಷಣ ಪಡೆದರು. ಪ್ರಾಪಂಚಿಕ ಜೀವನ ಸವಿದರು, ರಾಜಕೀಯ ಅನುಭವಿಗಳೂ, ಹಿರಿಯರು ಮುಖಂಡರು, ಮತ – ಧರ್ಮಗಳ ಸೌಹಾರ್ದ ಮನಸ್ಸುಳ್ಳವರು. ಧಾರ್ಮಿಕ ನಂಬಿದೆ ಇರುವವರ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಮುಕ್ತಿ ಅಥವಾ ಮೋಕ್ಷ ಕುರಿತು ನಾಲ್ಕು ಪುರುಷಾರ್ಥಗಳನ್ನು ತಿಳಿಸುತ್ತಾ “ಸನ್ಮಾರ್ಗದಲ್ಲಿ ಮನುಷ್ಯ ಬಾಳಿದರೆ ಮುಕ್ತಿ ಸಿಗುತ್ತದೆಂದು ಅಭಿಪ್ರಾಯ ಪಟ್ಟಿರುವನು”. ಹೀಗೆ ಬೆಟ್ಟ, ಗುಟ್ಟ, ನದಿ, ಸರೋವರ, ಪ್ರೇಮಿಗಳು, ಸಮಾಜ, ರಾಜಪ್ರಭುತ್ವ ಇತರ ಸಂಗತಿಗಳನ್ನು ಇಲ್ಲಿ ಮೆಲಕು ಹಾಕಲಾಗಿದೆ.

ಇಲ್ಲಿ ವಾಲ್ಮೀಕಿ ಮತ್ತು ತಿರುವಳ್ಳುವರ್ ಅವರ ಕಾಲಮಾನಗಳು ಬೇರೆ ಬೇರೆ. ವಾಲ್ಮೀಕಿ ವೈದಿಕ ಧರ್ಮ, ಸಂಸ್ಕೃತದಲ್ಲಿ ಕಾವ್ಯ ರಚಿಸಿದರು. ತಿರುವಳ್ಳುವರ್ ದ್ರಾವಿಡ ಜನಜೀವನವನ್ನು, ತಮಿಳು ಭಾಷೆಯನ್ನು ಪ್ರತಿನಿಧಿಸಿದ್ದರು. ತಮಿಳು ಆದಿ ದ್ರಾವಿಡ ಭಾಷೆ. ಭಾರತೀಯ ಸಂಸ್ಕೃತಿಯನ್ನು ಇಬ್ಬರು ಪ್ರತಿಪಾದಿಸಿರುವರು. ಆದರೆ ಅವರ ನೆಲೆ, ದೃಷ್ಟಿಕೋನ, ಚಿಂತನೆಗಳು ಬೇರೆ ಬೇರೆ. ಕಥಾ ವಸ್ತು ರಾಜನೀತಿ ಹೇಳುವಾಗಲೂ ಅವರ ಮೇಲೆ ಬೀರಿದ ಪರಿಣಾಮ, ರಾಜಕೀಯ, ಸಾಮಾಜಿಕ, ಆರ್ಥಿಕ ಮೊದಲಾದ ಸಂಗತಿಗಳನ್ನು ಇಲ್ಲಿ ಸಿಂಹಾವಲೋಕನ ಮಾಡಲಾಗಿದೆ.

ರಾಜನೀತಿ ಪರಿಕಲ್ಪನೆಯನ್ನು ಇಂದು ಊಹಿಸಿಕೊಳ್ಳಲು ಅಸಾಧ್ಯ ಏಕೆಂದರೆ ಇಂದಿನ ವ್ಯವಸ್ಥೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ರಾಜಪ್ರಭುತ್ವದ ನೀತಿ, ನಡತೆ, ಮೌಲ್ಯ, ಸತ್ಯ ಪ್ರಾಮಾಣಿಕತೆ, ಆಳುವ ಮತ್ತು ಆಳಿಸಿಕೊಳ್ಳುವವರ ಮಧ್ಯೆ ಹೇಗಿರಬೇಕೆಂದು ಈ ಇಬ್ಬರು ಮಹಾನೀಯರು ಕೆಲವು ಸಂಗತಿಗಳನ್ನು ತಿಳಿಸಿರುವರು. ಒಂದು ಸುಂದರ ಸಮಾಜ ನಿರ್ಮಿಸುವ ಕನಸು ಇಬ್ಬರು ಹೊಂದಿದ್ದಾರೆ. ಇಲ್ಲಿ ಸಾಮಾಜಿಕ ಮೌಲ್ಯಗಳೂ ಬಹುಮುಖ್ಯ ಅವು ಬೀರಿದ ಪರಿಣಾಮದಿಂದಲೇ ಸೌಹಾರ್ಧಯುತ ಪರಿಸರ, ಅಹಿಂಸೆ, ಪ್ರಾಮಾಣಿಕತೆ, ಸತ್ಯ, ಕಾಯಕಗಳನ್ನು ಪರಿಪಾಲಿಸುತ್ತಿದ್ದರು. ದುಷ್ಟತೆಯನ್ನು ಹೋಗಲಾಡಿಸಲು ಏನೆಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಅದು ಸನ್ಯಾಸಿ, ಋಷಿ, ತ್ಯಾಗಿ, ಪರೋಪಕಾರಿ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ನೆಲೆಯೂರಿತ್ತು. ಪ್ರಾಪಂಚಿಕ ಅಥವಾ ಲೌಖಿಕ ಜೀವನದಿಂದ ಪಾರಮಾರ್ಥ್ಯಕ್ಕೆ (ಅಲೌಕಿಕ) ವ್ಯಕ್ತಿ ಏರಲು ಅನುಸರಿಸಬೇಕಾದ ಕೆಲವು ನೀತಿ ಮಾರ್ಗಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಯಾವ ಕಾಲಕ್ಕೂ ಸುಭೀಕ್ಷೆ, ಸುವರ್ಣಯುಗ ಅನ್ನುವುದು ಇರಲಿಲ್ಲ. ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯನ್ನು ಅವಲೋಕಿಸಿದರೆ ಉಳ್ಳವರು ಮತ್ತು ಇಲ್ಲದವರು (ಶ್ರೀಮಂತರು, ಬಡವರು) ಎಲ್ಲೆಲ್ಲೂ ಕಂಡುಬರುತ್ತಾರೆ. ಇಲ್ಲಿ ಶ್ರೀಮಂತರು ಮತ್ತು ರಾಜಪರಿವಾರದ ಸ್ವಾರ್ಥಕ್ಕಾಗಿ ಆಳ್ವಿಕೆ ವಿವಿಧ ಆಯಾಮಗಳನ್ನು ಪಡೆದುಕೊಂಡಿತ್ತು. ಅದಕ್ಕೆ ಯಾವುದೇ ನಿಯಂತ್ರಣ ಇರಲಿಲ್ಲ. ಅಂಥ ಪರಿಸ್ಥಿತಿಯಲ್ಲಿ ಬುದ್ಧಿಜೀವಿಗಳು, ಕವಿ, ಸಾಹಿತಿಗಳು ತಮಗೆ ತೋರಿದ ಹಲವು ಸಂಗತಿಗಳನ್ನು ಇಲ್ಲಿ ಅವಲೋಕಿಸಿದ್ದಾರೆ. ಅವರಲ್ಲಿ ವಾಲ್ಮೀಕಿ ಮತ್ತು ತಿರುವಳ್ಳುವರ್ ಪ್ರಮೂಖರು. ವಾಲ್ಮೀಕಿ ಮಹಾಕಾವ್ಯವನ್ನು ಆರ್ಯ – ದ್ರಾವಿಡರ ಸಂಗರ್ಷ, ಹೆಣ್ಣಿನ ಶೀಲ ಸೌಂದರ್ಯದ ಮೂಲಕ ರಾಜ ಹೇಗಿರಬೇಕೆಂದು, ಅಣ್ಣ – ತಮ್ಮಂದಿರು, ಕುಟುಂಬ, ಹೇಗಿರಬೇಕೆಂದು ಚಿಂತಿಸಿದರೆ, ತಿರುವಳ್ಳುವರ್ ನೀತಿಕಥೆಗಳ ಮೂಲಕ ರಾಜಪ್ರಭುತ್ವದ ಇತಿ – ಮಿತಿಗಳನ್ನು ಅರ್ಥ ಮಾಡಿಕೊಂಡು ತಮ್ಮ ಕನಸುಗಳನ್ನು, ವಿಚಾರಗಳನ್ನು ವಿಶ್ಲೇಷಿಸಿದ್ಧಾರೆ.

ರಾಜನೀತಿ, ಸಮಾನತೆ, ಸಂಘಟನೆ, ಆಳ್ವಿಕೆ, ಪ್ರಭುತ್ವ, ಕುಟುಂಬ ಮೊದಲಾದ ಸಂಗತಿಗಳ ಮೂಲಕ ಈ ಇಬ್ಬರು ಇಂದು ಆದರ್ಶ ರಾಜ್ಯ, ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ. ಇಂದು ಅವುಗಳ ಮೂಲಕ ತಮ್ಮ ಮೌಲ್ಯಗಳನ್ನು ತುಲನೆ ಮಾಡಿದಾಗ ನಾವು ಎಲ್ಲಿ ಎಡವಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಪ್ರಾಚೀನ ಕಾಲದ ಸಮಾಜ, ಸಂಸ್ಕೃತಿ ಪ್ರಭುತ್ವವನ್ನು ವಿವಿಧ ಆಯಾಮಗಳ ಮೂಲಕ ನೋಡುವ ವಿನೂತನ ಪರಿಪಾಠ ಬೆಳವಣಿಗೆಯಲ್ಲಿ ಹೊಸದನ್ನು ಹುಡುಕುತ್ತವೆ ಈ ಇಬ್ಬರ ರಾಜನೀತಿಯ ಪರಿಕಲ್ಪನೆಗಳು.