Categories
e-ದಿನ

ಸೆಪ್ಟೆಂಬರ್-22

 

ಪ್ರಮುಖ ಘಟನಾವಳಿಗಳು:

1772: ಪೋಲೆಂಡಿನ ಮೊದಲ ವಿಭಜನೆಯು ಆಸ್ಟ್ರಿಯಾ, ಪ್ರಶಯ್ಯಾ ಮತ್ತು ರಷ್ಯಾದಿಂದ ಅಂಗೀಕರಿಸಲ್ಪಟ್ಟಿತು.

1789: ಪೋಸ್ಟ್ ಮಾಸ್ಟರ್ ಜೆನರಲ್ ಕಛೇರಿಯನ್ನು ಖಜಾನೆ ವಿಭಾಗ ಅಡಿಯಲ್ಲಿ ರಚಿಸಲಾಯಿತು.

1903: ಇಟಲೋ ಮಾಚ್ಯೂರ್ನಿ ಐಸ್ ಕ್ರೀಂ ಕೋನಿಗೆ ಪೇಟೆಂಟ್ ಪಡೆದರು.

1910: ಇಂಗ್ಲೆಂಡಿನ ಮೊದಲ ವಿಮಾನಯಾನ ಆರಂಭ ಮಾಡಲಾಯಿತು.

1965: 1965ರ ಭಾರತ-ಪಾಕಿಸ್ತಾನಿ ಯುದ್ಧ ಕಾಶ್ಮೀರದ ಮೇಲೆ ಮತ್ತು ಪಾಕಿಸ್ತಾನದ ನಡುವೆ ಯುನೈಟೆಡ್ ನೇಷನ್ಸ್ ಕದನ ವಿರಾಮಕ್ಕೆ ಕರೆಯಂತೆ ಮುಕ್ತಾಯಗೊಂಡಿತು.

1968: ಇರಾಕ್ ಸಂವಿಧಾನವನ್ನು ಅಳವಡಿಸಿಕೊಂಡಿತು.

1980: ಇರಾನ್ ಮತ್ತು ಇರಾಕ್ ನಡುವಿನ ಮೂರು ವಾರಗಳ ವಿರಳ ಯುದ್ಧದ ನಂತರ, ಪಶ್ಚಿಮ ಏಷಿಯಾದ ಎರಡು ದೇಶಗಳ ನಡುವೆ ಧೀರ್ಘ ಯುದ್ಧ ಆರಂಭವಾಯಿತು.

1988: ನ್ಯಾಷನಲ್ ಜಿಯೋಗ್ರಫಿಕ್ ನಿಯತಕಾಲಿಕೆಯ ಪ್ರಕಟಣೆ ಆರಂಭವಾಯಿತು.

2002: ಫ್ರಾನ್ಸ್ ತನ್ನ ಸೈನ್ಯವನ್ನು ಐವರಿಕೋಸ್ಟಿಗೆ ಕಳುಹಿಸಿತು.

2011: ಸಿ.ಇ.ಆರ್.ಎನ್ ವಿಜ್ಞಾನಿಗಳು ನ್ಯೂಟ್ರಿನೋಗಳ ಬೆಳಕಿನ ವೇಗವನ್ನು ಮುರಿಯುವುದನ್ನು ಪತ್ತೆ ಮಾಡಿದರು.

ಪ್ರಮುಖ ಜನನ/ಮರಣ:

1539: ಸಿಖ್ ಪಂಥದ ಗುರು ಗುರುನಾನಕ್ ದೇವ್ ನಿಧನರಾದರು.

1791: ಭೌತವಿಜ್ಞಾನಿ ಮೈಕೆಲ್ ಫ್ಯಾರಡೇ ನಿಧನರಾದರು.

1887: ಭಾರತೀಯ ಶಿಕ್ಷಣ ತಜ್ಞ ಭಾವ್ರಾವ್ ಪಾಟಿಲ್ ಜನಿಸಿದರು.

1930: ಖ್ಯಾತ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ ಜನಿಸಿದರು.

1956: ಪಂಜಾಬಿ ನಟಿ ರಂಜಿತಾ ಕೌರ್ ಜನಿಸಿದರು.

1970: ಖ್ಯಾತ ಬಂಗಾಲಿ ಲೇಖಕ ಶರದೇಂದು ಬಂಡೋಪಾಧ್ಯಾಯ ನಿಧನರಾದರು.

1976: ನಟ, ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಜನಿಸಿದರು.

1991: ಮರಾಠ ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಪ್ರಖ್ಯಾತ ಭಾರತೀಯ ನಟಿ ದುರ್ಗಾ ಕೋಟೆ ಅವರು ನಿಧನರಾದರು.

2009: ತೆಲುಗು ಮತ್ತು ತಮಿಳು ಭಾಷೆಯ ನಟಿ, ಗಾಯಕಿ ಎಸ್.ವರಲಕ್ಷ್ಮಿ ನಿಧನರಾದರು.

2011: ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನರಾದರು.