Categories
e-ದಿನ

ಸೆಪ್ಟೆಂಬರ್-4

 

ಪ್ರಮುಖ ಘಟನಾವಳಿಗಳು:

1665: ಪುರಂದರದ ರಾಜಾ ಜೈಸಿಂಗ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

1682: ಆಂಗ್ಲ ಖಗೋಳಶಾಸ್ತ್ರಜ್ಞ ಎಡ್ಮಂಡ್ ಹ್ಯಾಲಿ ಒಂದು ಧೂಮಕೇತು ನೋಡಿದರು. ನಂತರ ಆ ಧೂಮಕೇತುವಿಗೆ ಅವರ ಹೆಸರೇ ನೀಡಲಾಯಿತು.

1882: ಥಾಮಸ್ ಆಲ್ವಾ ಎಡಿಸನ್ ತನ್ನ ಬೆಳಕಿನ ಬಲ್ಬಿನ ಪರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ನ್ಯೂಯಾರ್ಕಿನ ಪರ್ಲ್ ಸ್ಟ್ರೀಟ್ ಸ್ಟೇಷನ್ನಿನಲ್ಲಿ ಮಾಡಿದರು.

1888: ಮಹಾತ್ಮಾ ಗಾಂಧಿಜಿಯವರು ಇಂಗ್ಲೆಂಡಿಗೆ ತೆರಳಿದರು.

1888: ಜಾರ್ಜ್ ಈಸ್ಟ್ ಮೆನ್ ಮೊದಲ ರೋಲ್-ಫಿಲ್ಮ್ ಕ್ಯಾಮೆರಾವನ್ನು ನೊಂದಾಯಿಸಿ “ಕೊಡಾಕ್” ಎಂದು ಹೆಸರಿಸಿದರು.

1921: ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಬಂಡುಕೋರರಿಗೆ “ಅಲ್ಟಿಮೇಟಮ್” ಕಳುಹಿಸಿ 48 ಗಂಟೆಗಳೊಳಗೆ ಮಡ್ರಾಸಿನಲ್ಲಿ ಶರಣಾಗುವಂತೆ ಹೇಳಿದರು.

1927: ವಿಶ್ವ ಫ್ಲಯರ್ಸ್ ಭಾರತದ ಕರಾಚಿ ತಲುಪಿದರು.

1937: ಶಿಕಾಗೋ ನಗರದಲ್ಲಿ ಪೋರಿಯೋ ಸಾಂಕ್ರಾಮಿಕದಿಂದ ಬಹಳಷ್ಟು ಮಕ್ಕಳು ಈ ರೋಗಕ್ಕೆ ತುತ್ತಾದರು.

1959: ಅಮೇರಿಕಾದ ಕಾಂಗ್ರೆಸ್ ಕಾರ್ಮಿಕ ಸುಧಾರಣೆ ಕಾಯಿದೆಯನ್ನು ಅನುಮೋದಿಸಿದರು.

1964: ಯೂರೋಪಿನ ಅತ್ಯಂತ ಉದ್ದದ ಸೇತುವೆಯನ್ನು ತೆರೆಯಲಾಯಿತು.

1967: ಮಹಾರಾಷ್ಟ್ರದ ಕೋಯ್ನಾ ಅಣೆಕಟ್ಟೆಯ ಬಳಿ 6.5 ಭೂಕಂಪ ಉಂಟಾದ ಕಾರಣ 200 ಜನ ಮೃತಪಟ್ಟರು.

1985: ಸಮುದ್ರದಲ್ಲಿ ಮುಳುಗಿದ ಟೈಟಾನಿಕ್ ಹಡಗಿನ ಭಾವಚಿತ್ರಗಳನ್ನು ಬಹಿರಂಗಪಡಿಸಲಾಯಿತು.

1998: ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಒಟ್ಟಿಗೆ ಸೇರಿ ಗೂಗಲ್ ಅನ್ನು ಅಭಿವೃದ್ಧಿ ಪಡಿಸಲು ಗೂಗಲ್ ಸಂಸ್ಥೆಯನ್ನು ನೊಂದಾಯಿಸಿ ಇದಕ್ಕಾಗಿ ಒಂದು ಬ್ಯಾಂಕ್ ಖಾತೆಯನ್ನು ತೆರೆದರು.

2012: ಉತ್ತರ ಭಾರತದ ಅಮೃತ್ಸರದಲ್ಲಿ ಮೆಕ್ ಡೊನಾಲ್ಡ್ ತನ್ನ ಮೊದಲ ಸಸ್ಯಹಾರಿ ರೆಸ್ಟೋರೆಂಟ್ ತೆರೆಯಲಿದೆ ಎಂದು ಹೇಳಿಕೆ ನೀಡಿತು.

2013: ಭಾರತದ ರಿಸರ್ವ ಬ್ಯಾಂಕಿನ 23ನೇ ರಾಜ್ಯಪಾಲರಾಗಿ ರಘುರಾಮ್ ರಾಜನ್ ಆಯ್ಕೆಯಾದರು.

ಪ್ರಮುಖ ಜನನ/ಮರಣ:

1825: ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಎಂದೇ ಖ್ಯಾತರಾಗಿದ್ದ ದಾದಾಭಾಯಿ ನವರೋಜಿ ಜನಿಸಿದರು.

1880: ಬೆಂಗಾಲಿ ಲೇಖಕ ಮತ್ತು ರಾಜಕಾರಣಿ ಭೂಪೇಂದ್ರನಾಥ್ ದತ್ ಜನಿಸಿದರು.

1923: ರಾಜಕಾರಣಿ ಮತ್ತು ವಕೀಲರಾಗಿದ್ದ ರಾಮ್ ಕಿಶೋರ್ ಶುಕ್ಲ ಜನಿಸಿದರು.

1929: 1978-84ರ ವರೆಗೆ ಕ್ರಿಕೆಟ್ ಟೆಸ್ಟ್ ನಲ್ಲಿ ಅಂಪೈರ್ ಆಗಿದ್ದ ಎನ್.ಹನುಮಂತರಾವ್ ಜನಿಸಿದರು.

1941: ಆಂಧ್ರಪ್ರದೇಶದ 19ನೇ ರಾಜ್ಯಪಾಲರಾಗಿದ್ದ ಸುಶಿಲ್ ಕುಮಾರ್ ಶಿಂಧೆ ಅವರು ಜನಿಸಿದರು.

1952: ಭಾರತದ ಖ್ಯಾತ ನಟ ರಿಷಿ ಕಪೂರ್ ಜನಿಸಿದರು.

1962: ಭಾರತದ ಕ್ರಿಕೆಟ್ ಆಟಗಾರ ಕಿರಣ್ ಮೋರೆ ಜನಿಸಿದರು.

1964: ಗೀತ ರಚನೆಕಾರ ಮತ್ತು ಹಾಡುಗಾರ ಆಗಿದ್ದ ಆದೇಶ್ ಶ್ರೀವಾತ್ಸವ ಜನಿಸಿದರು.

1997: ಭಾರತೀಯ ಕವಿ, ಲೇಖಕ ಮತ್ತು ಚಿತ್ರಕಥೆಕಾರ ಧರಂವೀರ್ ಭಾರತಿ ನಿಧನರಾದರು.

2006: ಪರಿಸರವಾದಿ ಸ್ಟೀವ್ ಐರ್ವಿನ್ ಸಮುದ್ರದ ಮೀನು ಕಡಿದು ಮೃತಪಟ್ಟರು.

2015: ಗೋವಾದ 7ನೇ ಮುಖ್ಯಮಂತ್ರಿಯಾಗಿದ್ದ ವಿಲ್ಫ್ರೆಡ್ ಡಿಜೋಜ ನಿಧನರಾದರು.