ಗೌರಿಯ ಕಂಡೆ

ಒಂದ ಸೌಟೆಣ್ಣಿ ತಂದು ಬತ್ತಿ ಮಾಡಿ
ಕರಣರ ಕ್ವಾಟ್ಯಾಗ ಮಂಗಳವಾರ ಪ್ಯಾಟ್ಯಾಗ
ರಾಯೇರಾಡಾರದ ಬೀದ್ಯಾಗ
ಚೆಟ್ಟೇರಾಡಾ ಪಟ್ಟಣದಾಗ
ಗೌರಿನೀ ಕಂಡೆನೇ ಹೂವಿನ ಬನದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ

ಎಡ್ಡ ಸೌಟಿಣ್ಣಿ ತಂದು ಎಡ್ಡ ಬತ್ತಿ ಮಾಡಿ
ಕರಣರ ಕ್ವಾಟ್ಯಾಗ ಮಂಗಳಾರ ಪ್ಯಾಟ್ಯಾಗ
ರಾಯೇರಾಡಾರದ ಬೀದ್ಯಾಗ
ಚೆಟ್ಟೇರಾಡಾ ಪಟ್ಟಣುದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ

ಮೂರ ಸೌಟೆಣ್ಣಿ ತಂದು ಮೂರ ಬತ್ತಿ ಮಾಡಿ
ಕರಣರ ಕ್ವಾಟ್ಯಾಗ ಮಂಗಳಾರ ಪ್ಯಾಟ್ಯಾಗ
ರಾಯೇರಾಡಾರದ ಬೀದ್ಯಾಗ
ಚೆಟ್ಟೇರಾಡಾ ಪಟ್ಟಣದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ

ನಾಕ ಸೌಟೆಣ್ಣಿ ತಂದು ನಾಕ ಬತ್ತಿ ಮಾಡಿ
ಕರಣರ ಕ್ವಾಟ್ಯಾಗ ಮಂಗಳಾರ ಪ್ಯಾಟ್ಯಾಗ
ರಾಯೇರಾಡಾರದ ಬೀದ್ಯಾಗ
ಚೆಟ್ಟೇರಾಡಾ ಪಟ್ಟಣುದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ

ಐದು ಸೌಟಿಣ್ಣಿ ತಂದು ಐದ ಬತ್ತಿ ಮಾಡಿ
ಕರಣರ ಕ್ವಾಟ್ಯಾಗ ಮಂಗಳಾರ ಪ್ಯಾಟ್ಯಾಗ
ರಾಯೇರಾಡಾರದ ಬೀದ್ಯಾಗ
ಚೆಟ್ಟೀರಾಡಾ ಪಟ್ಟಣುದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ
ಗೌರಿ ನೀ ಕಂಡೆನೇ ಹೂವಿನ ಬನದಾಗ

ಕಂಡಿದೆ ಗೌರಮ್ಮ (ಶೀಗಮ್ಮ)ನಿಗೆ

ಒಂದ ಸೌಟ ಎಣ್ಣಿ ತಂದಿರೆ ಗೌರಮ್ಮಗೊಂದೆ ಮಂಡಾಲ ಬರದಿರೆ
ಗೌವರಮ್ಮಗೊಂದೆ ಮಂಡಾಲ ಬರದಿರೆ
ಘಲಂಗ್ಹೂಡೆದ ಘಲಂಗ್ಹೂಡೆದ
ರಾಯೇರಾಗ(ಡ)ರದಬೀದ್ಯಾಗ ಪಟ್ಟಣುದಾಗ ಸೆಟ್ಟಣುದಾಗ
ಹಾಂಹಾ ಕಂಡಿದ ಗವರಮ್ಮುನೆ  ಹಾಂಹಾ ಕಂಡಿದ ಶೀಗಮ್ಮುನೆ

ಎಡ ಸೌಟ ಎಣ್ಣಿ ತಂದಿರೆ ಎಡ್ಡ ಮಂಡಾಲ ಬರದಿರೆ
ಗವರಮ್ಮಗೆಡ್ಡೆ ಮಂಡಾಲ ಬರದಿರೆ
ಘಲಂಗ್ಹೂಡೆದ ಘಲಂಗ್ಹೂಡೆದ
ರಾಯೇರಾಗ(ಡ) ರದಬೀದ್ಯಾಗ ಪಟ್ಟಣುದಾಗ ಸೆಟ್ಟಣುದಾಗ
ಹಾಂಹಾ ಕಂಡಿದ ಗವರಮ್ಮುನೆ  ಹಾಂಹಾ ಕಂಡಿದ ಶೀಗಮ್ಮುನೆ

ಮೂರ ಸೌಟ ಎಣ್ಣಿ ತಂದಿರೆ ಮೂರೆ ಮಂಡಾಲ ಬರದಿರೆ
ಗವರಮ್ಮಗ್ಮೂರೆ ಮಂಡಾಲ ಬರದಿರೆ
ಘಲಂಗ್ಹೂಡೆದ ಘಲಂಗ್ಹೂಡೆದ
ರಾಯೇರಾಗ(ಡ) ರದಬೀದ್ಯಾಗ ಪಟ್ಟಣುದಾಗ ಸೆಟ್ಟಣುದಾಗ
ಹಾಂಹಾ ಕಂಡಿದ ಗವರಮ್ಮುನೆ  ಹಾಂಹಾ ಕಂಡಿದ ಶೀಗಮ್ಮುನೆ

ನಾಕ ಸೌಟ ಎಣ್ಣಿ ತಂದಿರೆ ನಾಕ ಮಂಡಾಲ ಬರದಿರೆ
ಗವರಮ್ಮಗ ನಾಕೆ ಮಂಡಾಲ ಬರದಿರೆ
ಘಲಂಗ್ಹೂಡೆದ ಘಲಂಗ್ಹೂಡೆದ
ರಾಯೇರಾಗ(ಡ) ರದಬೀದ್ಯಾಗ ಪಟ್ಟಣುದಾಗ ಸೆಟ್ಟಣುದಾಗ
ಹಾಂಹಾ ಕಂಡಿದ ಗವರಮ್ಮುನೆ  ಹಾಂಹಾ ಕಂಡಿದ ಶೀಗಮ್ಮುನೆ

ಐದ ಸೌಟು ಎಣ್ಣಿ ತಂದಿರೆ ಐದೆ ಮಂಡಾಲ ಬರದಿರೆ
ಗವರಮ್ಮಗೆ ಐದೆ ಮಂಡಾಲ ಬರದಿರೆ
ಘಲಂಗ್ಹೂಡೆದ ಘಲಂಗ್ಹೂಡೆದ

ರಾಯೇರಾಗ(ಡ) ರದಬೀದ್ಯಾಗ ಪಟ್ಟಣುದಾಗ ಸೆಟ್ಟಣುದಾಗ
ಹಾಂಹಾ ಕಂಡಿದ ಗವರಮ್ಮುನೆ  ಹಾಂಹಾ ಕಂಡಿದ ಶೀಗಮ್ಮುನೆ

ಗೌರಮ್ಮನ ಪೂಜೆಗೆ

ಒಂದಸೇರಕ್ಕಿಗೇ ನಮಗೌರನ ಪೂಜಿಗೇ
ಆಕಿನ ತೋಡಿ ಮ್ಯಾಲ ಬೆಳ್ಳಿ ಛತ್ತರಿ
ಭಂಗಾರ‌್ಹೇರಿಕೊಂಡು ಅಣ್ಣ ಮಾಲಿಂಗ
ದಂಡಿಗ್ಹೋದರ ಪಂಚ ಫಾತರಿ
ಸಂಕರಾತರಿ ಓ ಎಂಬss ಕೋಗಿಲೆ

ಯಡ್ಡಸೇರಕ್ಕಿಗೇ ನಮಗೌರನ ಪೂಜಿಗೇ
ಆಕಿನ ತೋಡಿ ಮ್ಯಾಲ ಬೆಳ್ಳಿ ಛತ್ತರಿ
ಭಂಗಾರ‌್ಹೇರಿಕೊಂಡು ಅಣ್ಣ ಮಾಲಿಂಗ
ದಂಡಿಗ್ಹೋದರ ಪಂಚ ಫಾತರಿ
ಸಂಕರಾತರಿ ಓ ಎಂಬss ಕೋಗಿಲೆ

ಮೂರಸೇರಕ್ಕಿಗೇ ನಮಗೌರನ ಪೂಜಿಗೇ
ಆಕಿನ ತೋಡಿ ಮ್ಯಾಲ ಬೆಳ್ಳಿ ಛತ್ತರಿ
ಭಂಗಾರ‌್ಹೇರಿಕೊಂಡು ಅಣ್ಣ ಮಾಲಿಂಗ
ದಂಡಿಗ್ಹೋದರ ಪಂಚ ಫಾತರಿ
ಸಂಕರಾತರಿ ಓ ಎಂಬss ಕೋಗಿಲೆ

ನಾಕಸೇರಕ್ಕಿಗೇ ನಮಗೌರನ ಪೂಜಿಗೇ
ಆಕಿನ ತೋಡಿ ಮ್ಯಾಲ ಬೆಳ್ಳಿ ಛತ್ತರಿ
ಭಂಗಾರ‌್ಹೇರಿಕೊಂಡು ಅಣ್ಣ ಮಾಲಿಂಗ
ದಂಡಿಗ್ಹೋದರ ಪಂಚ ಫಾತರಿ
ಸಂಕರಾತರಿ ಓ ಎಂಬss ಕೋಗಿಲೆ

ಐದಸೇರಕ್ಕಿಗೇ  ನಮಗೌರನ ಪೂಜಿಗೆ
ಆಕಿನ ತೋಡಿ ಮ್ಯಾಲ ಬೆಳ್ಳಿ ಛತ್ತರಿ
ಭಂಗಾರ‌್ಹೇರಿಕೊಂಡು ಅಣ್ಣ ಮಾಲಿಂಗ
ಸಂಕರಾತರಿ ಓ ಎಂಬss ಕೋಗಿಲೆ

* * *

ಒಂದೆಲೆಯ ಕೇದಗೆ

ಒಂದ್ಯಾಲೆಂಬ ಹೆಸರ ಕ್ಯಾದಗೇ
ಅದರ ಮ್ಯಾಲೊಂದಲಕಿಲಮಲಕಿಲ ಮಂಚವ ಹಾಕಿಲೆ (ದೆ)
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಸೋತ ಗಂಗಿಶಿವನ ಮ್ಯಾಲೊಂದ ಎಲಿಯೊ ಬಾಡಿವೆ
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ

ಎಡ್ಡ್ಯಾಲೆಂಬ ಹೆಸರ ಕ್ಯಾದಗೇ
ಅದರ ಮ್ಯಾಲೊಂದಲಕಿಲಮಲಕಿಲ ಮಂಚವ ಹಾಕಿಲೆ (ದೆ)
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ

ಮೂರ‌್ಯಾಲೆಂಬ ಹೆಸರ ಕ್ಯಾದಗೇ
ಅದರ ಮ್ಯಾಲೊಂದಲಕಿಲಮಲಕಿಲ ಮಂಚವ ಹಾಕಿಲೆ (ದೆ)
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಸೋಗ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ

ನಾಕ್ಯಾಲೆಂಬ ಹೆಸರ ಕ್ಯಾದಗೇ
ಅದರ ಮ್ಯಾಲೊಂದಲಕಿಲಮಲಕಿಲ ಮಂಚವ ಹಾಕಿಲೆ (ದೆ)
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ

ಐದ್ಯಾಲೆಂಬ ಹಸರ ಕ್ಯಾದಗೇ
ಅದರ ಮ್ಯಾಲೊಂದಲಕಿಲಮಲಕಿಲ ಮಂಚವ ಹಾಕಿಲೆ (ದೆ)
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಓಂೆುಂಬ ರಾತ್ರಿ ಒಬ್ಬಳೆs ಶಿವನೇss
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ
ಸೋತ ಗಂಗಿ ಶಿವನ ಮ್ಯಾಲೊಂದ ಎಲಿಯೊ ಬಾಡಿವೆ

* * *

ಸಿತಾಳ ಕೊಡು ಏಳು

ಒಂದ ಪುಡಿ ಹಾಕುತಾ ರಂಬೇರಿಗಿ ಕರಿತಾ
ಒಂದ ಪುಡಿ ಹಾಕುತಾ ರಂಬೇರಿಗಿ ಕರಿತಾ
ಶ್ರೀ ಗುರು ಶಿವ ಬಂದನೇ ಗವರವ
ಸಿತಾಳ ಕುಡು ಏಳೆ ಗವರವ
ಸಿತಾಳ ಕುಡು ಏಳೆ

ಎಡ್ಡ ಪುಡಿ ಹಾಕುತಾ ರಂಬೇರಿಗಿ ಕರಿತಾ
ಎಡ್ಡ ಪುಡಿ ಹಾಕುತಾ ರಂಬೇರಿಗಿ ಕರಿತಾ
ಶ್ರೀ ಗುರು ಶಿವ ಬಂದನೇ ಗವರವ
ಸಿತಾಳ ಕುಡು ಏಳೆ ಗವರವ
ಸಿತಾಳ ಕುಡು ಏಳೆ

ಗಂಡನ ಮನೆಗೆ ನಡೆ

ಒಂದ ಸೇರಕ್ಕಿ ಥಳುಸಲೆ ಕೇರಲೆ ಬೀದರ ಮರುದಲೆ
ಕಂಚಿ ಕಳಿಸಲೆ ಕಂಚಿನೊಳಿಯಲೆ
ಬುತ್ತಿ ಕಟ್ಟಲೆ ಪಟ್ಟಣ ಸೇರಲೆ
ಆನಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ
ನಂದಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ

ಎರಡ ಸೇರಕ್ಕಿ ಥಳುಸಲೆ ಕೇರಲೆ ಬೀದರ ಮರುದಲೆ
ಕಂಚಿ ಕಳಿಸಲೆ ಕಂಚಿನೊಳಿಯಲೆ
ಬುತ್ತಿ ಕಟ್ಟಲೆ ಪಟ್ಟಣ ಸೇರಲೆ
ಆನಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ
ನಂದಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ

ಮೂರ ಸೇರಕ್ಕಿ ಥಳುಸಲೆ ಕೇರಲೆ ಬೀದರ ಮರುದಲೆ
ಕಂಚಿ ಕಳಿಸಲೆ ಕಂಚಿನೊಳಿಯಲೆ
ಬುತ್ತಿ ಕಟ್ಟಲೆ ಪಟ್ಟಣ ಸೇರಲೆ
ಆನಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ
ನಂದಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ

ನಾಕ ಸೇರಕ್ಕಿ ಥಳುಸಲೆ ಕೇರಲೆ ಬೀದರ ಮರುದಲೆ
ಕಂಚಿ ಕಳಿಸಲೆ ಕಂಚಿನೊಳಿಯಲೆ
ಬುತ್ತಿ ಕಟ್ಟಲೆ ಪಟ್ಟಣ ಸೇರಲೆ
ಆನಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ
ನಂದಿ ಏರಿ ಶಿವ ಬಂದರ ನಡಿ ಗವರಮ್ಮ  ಗಂಡನ ಮನಿಗೆ

ಗಂಡನ ಮನೆಗೆ ನಡೆದಳು

ಒಂದ್ಸೇರಕ್ಕಿ ತಾ ನಮ್ಮ ಕೇರಿಗೆ
ಒಂದ್ಸೇರಕ್ಕಿ ತಾ ನಮ್ಮ ಕೇರಿಗೆ
ನಾವು ಕುಟ್ಟಲ್ಲಿ ಚೆಂದನ ಒಣಕಿಲ್ಲಿ
ನಾವು ಕೇರಲ್ಲಿ ಗಿಲಿ ಗಿಲಿ ಮರದಲ್ಲಿ
ನಾವು ಬೀಸಲ್ಲಿ ತ್ವಾರಣ ಕಲ್ಲಿಲ್ಲಿ
ನಾವು ರೊಟ್ಟಿ ಕಟ್ಟಲ್ಲಿ ಪಾತಳ ಸೀರೆಲ್ಲಿ
ನಾವು ಹಾದಿ ನಡಿಯಲ್ಲಿ ಸಮದುರ ಹೊಳಿಯಲ್ಲಿ
ಧಿರ ಧಿರ ಪಯಿನಾ ಧಿರಂಗ ಪಯಿನಾ
ನಡುದಳ ಗಂಡನ ಮನಿಗೆ
ಧಿರ ಧಿರ ಪಯಿನಾ ಧಿರಂಗ ಪಯಿನಾ
ನಡುದಳ ಗಂಡನ ಮನಿಗೆ

ಎಡ್ಸೇರಕ್ಕಿ ತಾ ನಮ್ಮ ಕೇರಿಗೆ
ಎಡ್ಸೇರಕ್ಕಿ ತಾ ನಮ್ಮ ಕೇರಿಗೆ
ನಾವು ಕುಟ್ಟಲ್ಲಿ ಚಂದನ ಒಣಕಿಲ್ಲಿ
ನಾವು ಕೇರಲ್ಲಿ ಗಿಲಿಗಿಲಿ ಮರದಲ್ಲಿ
ನಾವು ಬೀಸಲ್ಲಿ ತ್ವಾರಣ ಕಲ್ಲಿಲ್ಲಿ
ನಾವು ರೊಟ್ಟಿ ಕಟ್ಟಲ್ಲಿ ಪಾತಳ ಸೀರೆಲ್ಲಿ
ನಾವು ಹಾದಿ ನಡಿಯಲ್ಲಿ ಸಮದುರ ಹೊಳಿಯಲ್ಲಿ
ಧಿರ ಧಿರ ಪಯಿನಾ ಧಿರಂಗ ಪಯಿನಾ
ನಡುದಳ ಗಂಡನ ಮನಿಗೆ
ಧಿರ ಧಿರ ಪಯಿನಾ ಧಿರಂಗ ಪಯಿನಾ
ನಡುದಳ ಗಂಡನ ಮನಿಗೆ

(ಇದೇ ರೀತಿ ಐದ್ಸೇರಕ್ಕಿ ತಾ ನಮ್ಮ ಕೇರಿಗೆ ತನಕ ಹೇಳುತ್ತಾರೆ).

ವರಾಪೇಕ್ಷೆ

ಒಂದ ಖಂಬದ ಪಡಸಲಿ ಒಳಗ ತಾಯಿ ಭೌವನಿ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ
ಆಕಿನ ಶಾಯ ಮಾಡಲೇ ಶಾರ ದೊಡ್ಡಿ (ಗೊಡ್ಡಿ) ಬೇಡಲೇ

ಯಡ್ಡ ಖಂಬದ ಪಡಸಲಿ ಒಳಗ ತಾಯಿ ಭೌವನಿ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ

ಮೂರ ಖಂಬದ ಪಡಸಲಿ ಒಳಗ ತಾಯಿ ಭೌವನಿ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ

ನಾಕ ಖಂಬದ ಪಡಸಲಿ ಒಳಗ ತಾಯಿ ಭೌವನಿ
ಆಕಿನ ಶಾಯ ಮಾಡಲೇ ಶಾರದೊಡ್ಡ (ಗೊಡ್ಡಿ) ಬೇಡಲೇ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ

ಐದ ಖಂಬದ ಪಡಸಲಿ ಒಳಗ ತಾಯಿ ಭೌವನಿ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ
ಆಕಿನ ಶಾಯ ಮಾಡಲೇ ಶಾರದೊಡ್ಡಿ (ಗೊಡ್ಡಿ) ಬೇಡಲೇ

ಜೋಳದ ಬಿತ್ತನೆ

ಒಂದ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ
ಒಂದ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ

ಒಂದಡ್ಡಿ ಜ್ವಾಳಾ ಒಂದ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ
ಒಂದಡ್ಡಿ ಜ್ವಾಳಾ ಒಂದ ತಿಂಗಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ

ಎಡ್ಡ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ
ಎಡ್ಡ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ

ಎಡ್ಡಡ್ಡಿ ಜ್ವಾಳಾ ಎಡ್ಡ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ
ಎಡ್ಡಡ್ಡಿ ಜ್ವಾಳಾ ಎಡ್ಡ ತಿಂಗುಳು ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ
ಮೂರ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ
ಮೂರ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ

ಮೂರಡ್ಡಿ ಜ್ವಾಳ ಮೂರ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ
ಮೂರಡ್ಡಿ ಜ್ವಾಳ ಮೂರ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ

ನಾಕ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ
ನಾಕ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ

ನಾಕಡ್ಡಿ ಜ್ವಾಳಾ ನಾಕ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ
ನಾಕಡ್ಡಿ ಜ್ವಾಳಾ ನಾಕ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ

ಐದ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ
ಐದ ಮುಟ್ಟಿ ಬಿತ್ತುತಾ ಹಿಂದ ಮುಂದ ನೋಡುತಾ

ಐದಡ್ಡಿ ಜ್ವಾಳಾ ಐದ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ
ಐದಡ್ಡಿ ಜ್ವಾಳಾ ಐದ ತಿಂಗುಳ ಬಿತ್ತುತಾ ಕ್ಷೆಳಕ್ಷಿ ಬೆಳದಿಂಗುಳೆ