ವೈಜ್ಞಾನಿಕ ಹೆಸರು: ಆಲ್ಬೀಜಿಯಾ ಓಡೊರಟಿಸ್ಸಿಮ
ಕುಟುಂಬ: ಫೇಬೇಸಿ

ಇದು ಮಧ್ಯಮ ಗಾತ್ರದ ಮತ್ತು ೧೫-೧೮ ಮೀ. ಎತ್ತರ ಬೆಳೆಯುವು ಮರ. ತೇವ ಹೆಚ್ಚಾಗಿರುವ ಕಡೆಗಳಲ್ಲಿ ಮತ್ತು ಒಣಹವೆಯಲ್ಲಿಯೂ ಬೆಳೆಯುವ ಮರ. ಇದರ ಎಲೆಗಳು ಅಚ್ಚ ಹಸುರು, ಹೂಗಳು ಹಳದಿ ಮತ್ತು ಸುವಾಸನೆಯವು ಮತ್ತು ಇವು ಏಪ್ರಿಲ್‌ ಜೂನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಡಿಸೆಂಬರ್ ಹೊತ್ತಿಗೆ ಕಾಯಿಗಳು ಬಲಿತಿರುತ್ತವೆ. ಜನವರಿ-ಮಾರ್ಚ್‌‌ನಲ್ಲಿ ಎಲೆಗಳು ಪೂರ್ತಿಯಾಗಿ ಉದುರುತ್ತವೆ.

ಪುನರುತ್ಪತ್ತಿ: ಈ ಮುಂದಿನ ವಿಧಾನಗಳಿಂಧ ಈ ಮರದ ಪುನರುತ್ಪತ್ತಿ ಮಾಡಬಹುದು:

೧) ನೆಟ್ಟಗೆ ಬೀಜಗಳನ್ನು ಬಿತ್ತುವುದರಿಂದ

೨) ಸಸಿಗಳನ್ನು ನೆಡುವುದರಿಂದ

೩) ರೆಂಬೆ/ಕಾಂಡದ ತುಂಡುಗಳನ್ನು ನೆಡುವುದರಿಂದ

ಬೀಜಗಳನ್ನು ಬಿತ್ತುವುದಕ್ಕೆ ಮುಂಚೆ ೨೪ ತಾಸುಗಳು ನೀರಿನಲ್ಲಿ ನೆನೆಸಿಟ್ಟರೆ ಬೇಗೆ ಮೊಳೆಯುತ್ತವೆ. ಚೆನ್ನಾಗಿ ಬೇರು ಬೆಳೆದಿರುವ ತುಂಡುಗಳನ್ನೇ ನೆಡಬೇಕುಕ. ಈ ಮೂರು ವಿಧಗಳಲ್ಲಿ ಬೀಜಗಳನ್ನು ಬಿತ್ತಿ ಗಿಡಗಳನ್ನು ಬೆಳೆಸುವುದೇ ಉತ್ತಮಜ. ಈ ಮರವನ್ನು ಕಟಾವು ಮಾಡಿದ ಮೇಲೆ ಬುಡಚಿಯಿಂದ ಚಿಗುರುಗಳು ಹುಟ್ಟಿ,ಲ ಬೆಳೆದು ಮರಗಳಾಗುತ್ತವೆ.

ಉಪಯೋಗಗಳು: ಇದರ ಚೇಗು ಗಟ್ಟಿಯಾಗಿದ್ದು ಸುಮಾರು ಭಾರವಾದದ್ದು, ಇದನ್ನು ಮನೆ ಕಟ್ಟಲು ಉಪಯೋಗಿಸಬಹುದು. ಎಣ್ಣೆಯ ಗಾಣಗಳ, ಪೀಠೋಪಕರಣಗಳು, ಬಂಡಿ ಚಕ್ರದ ಗುಂಭಗಳು ಹಾಗೂ ವ್ಯವಸಾಯದ ಮುಟ್ಟುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ . ಇದರ ಎಲೆಗಳು ಜಾನುವಾರುಗಳ ಮೇವು. ಇದರ ತೊಗಟೆಯನ್ನು ಔಷಧವಾಗಿ ಉಪಯೋಗಿಸುತ್ತಾರೆ.