ವೈಜ್ಞಾನಿಕ ಹೆಸರು: ಹೋಲೋಪ್ಟೆಲಿಯ ಇಂಟೆಗ್ರಿಫೋಲಿಯ
ಕುಟುಂಬ: ಉಲ್ಮೇಸಿ

ಇದು ಎಲೆ ಉದುರುವ ಮರವಾಗಿದ್ದು, ಕಾಡುಗಳಲ್ಲಿ ಬೆಳೆಯುತ್ತದೆ. ಉತ್ತಮ ಪರಿಸರದಲ್ಲಿ ಇದು ಸುಮಾರು ೨೦ ಮೀ. ಎತ್ತರ ಬೆಳೆಯುತ್ತದೆ. ಇದರ ತೊಗಟೆ ನಯವಾದುದು, ಆದರೆ ಇದರ ಕೆತ್ತಿದ ತೊಗಟೆ ಕೆಟ್ಟವಾಸನೆ ಹೊಂದಿರುತ್ತದೆ. ಸಣ್ಣರೆಂಬೆಗಳು ಮತ್ತು ಹಿಚುಕಿದ ಎಲೆಗಳೂ ಈ ಕೆಟ್ಟ ವಾಸನೆ ಹೊಂದಿರುತ್ತವೆ.

ಚೇಗು ಕೆನೆ ಬಣ್ಣ, ಎಲೆಗಳು ಸುಮರು ೫ ಸೆ.ಮೀ. ಉದ್ದ, ಅಖಂಡ, ಹೃದಯಾಕಾರ, ಬುಡದಲ್ಲಿ ದುಂಡು, ತುದಿಯಲ್ಲಿ ಸ್ವಲ್ಪ ಮೊನಚು, ಹೂಗಳು ಹಸಿರು-ಗುಲಾಬಿ ಬಣ್ಣ, ೦.೫ ಸೆಂ.ಮೀ . ಉದ್ದ , ಹೂಗೊಂಚಲು ಸುಮರು ೨೦ ಸೆಂ.ಮೀ. ಉದ್ದ, ಫಲಗಳು ಚಪ್ಪಟೆ, ಹಳದಿ ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ ಹಾಗೂ ಹಗುರವಾಗಿರುತ್ತವೆ. ಹೂಗಳನ್ನು ಫೆಬ್ರವರಿ-ಮಾರ್ಚ್‌‌ನಲ್ಲಿ ಹಾಗೂ ಫಲಗಳನ್ನು ಜೂನ್‌ಆಗಸ್ಟ್‌ ತಿಂಗಳುಗಳಲ್ಲಿ ಕಾಣಬಹುದು.

ಪುನರುತ್ಪತ್ತಿ: ಬೀಜಗಳು ಬಹಳ ಸಣ್ಣವಾದ್ದರಿಂದ ಗಾಳಿಯಲ್ಲಿ ಬಹಳ ದೂರ ಹಾರಿಕೊಂಡು ಹೋಗಿ, ನೆಲದ ಮೇಲೆ ಬಿದ್ದು, ನೈಸರ್ಗಿಕವಾಗಿ ಪುನರಾಭಿವೃದ್ಧಿ ಹೊಂದುತ್ತವೆ. ಬೀಜಗಳು ಪಾತಿಗಳಲ್ಲಿ ಮೊಳೆಯಲು  ೬-೧೨ ದಿನಗಳು ಬೇಕು. ಬೀಜಗಳನ್ನು ಬಿತ್ತುವುದಕ್ಕೆ ಮುಂಚೆ ಕ್ರಿಮಿನಾಶಕದಿಂದ ಉಪಚರಿಸಬೇಕು. ಮೊಳೆಯುತ್ತಿರುವ ಸಣ್ಣ ಸಸಿಗಳಿಗೆ ನೆರಳು ಕೊಡಬೇಕು. ಪುನರುತ್ಪತ್ತಿಯನ್ನು ಬೀಜಗಳಿಂದ ಮತ್ತು ಒಂದು ವರ್ಷದ ಸಸಿಗಳಿಂದ ಅಥವಾ ರೆಂಬೆ/ಕಾಂಡದ ತುಂಡುಗಳಿಂದ ಮಾಡಬಹುದು. ಕತ್ತರಿಸಿದ ಬುಡದ ಚಿಗುರುಗಳಿಂದ ಗಿಡಗಳನ್ನು ಬೆಳೆಸಬಹುದು.

ಉಪಯೋಗಗಳಲು: ಇದರ ದಾರು ೨ನೆಯ  ದರ್ಜೆಗೆ ಸೇರಿದ್ದು, ಇದರಿಂದ ಪ್ಯಾಕಿಂಗ್‌ ಪೆಟ್ಟಿಗೆಗಳನ್ನು, ಬಾಬಿನ್‌ಗಳನ್ನು ಮತ್ತು ಪದರದ ಹಲಗೆಗಳನ್ನು ತಯಾರಿಸುತ್ತಾರೆ. ಇದರ ಎಲೆಗಳನ್ನು ಜಾನುವಾರುಗಳಿಗೆ ಮೇವಿನಂತೆ ಬಳಸಬಹುದು.