ವೈಜ್ಞಾನಿಕ ಹೆಸರು: ಮಿಲಿಯೂಸ ಟೊಮೆಂಟೋಸ
ಕುಟುಂಬ: ಮೀಲಿಯೇಸಿ

ಇದು ಎಲೆ ಉದುರುವ ದೊಡ್ಡ ಮರ . ಪಶ್ಚಿಮ ಘಟ್ಟ ಪ್ರದೇಶದ ಮತ್ತು ಇತರ ತೇವ ಪ್ರದೇಶದ ಕಾಡುಗಳಲ್ಲಿ ಸಾಧಾರಣವಾಗಿ ಬೆಳೆಯುತ್ತದೆ.

ತೊಗಟೆ ಸುಮಾರು ಒಂದು ಸೆಂ.ಮೀ. ದಪ್ಪ ಸುಮಾರು ಕಪ್ಪು, ಆಳವಾದ ಸೀಳುಗಳನ್ನು ಹೊಂದಿದೆ. ಎಲೆಗಳು ಅಖಂಡ, ೧೦-೩೦ ಸೆಂ.ಮೀ. ಉದ್ದ ಮತ್ತು ೬.೫ -೧೦ ಸೆಂ.ಮೀ.  ಅಗಲ. ಹೂಗಳು ಹಸಿರು-ಹಳದಿ ಮತ್ತು ಕಂದು ಗೆರೆಗಳನ್ನು ಮತ್ತು ೨ ಸುತ್ತು ದಳಗಳನ್ನು ಹೊಂದಿವೆ. ಹೂಗಳನ್ನು ಏಪ್ರಿಲ್‌ನಿಂದ ಜೂನ್‌ವರೆಗೂ ಮತ್ತು ಫಲಗಳನ್ನು ಜೂನ್‌ಜುಲೈ ತಿಂಗಳುಗಳಲ್ಲಿ ಕಾಣಬಹುದು.

ಪುನರುತ್ಪತ್ತಿ: ಕಡಿದ ಮರದ ಬುಡಚಿಯಿಂದ ಚಿಗುರು ಮೊಳೆತು ಗಿಡಗಳಾಗುತ್ತವೆ. ಬೀಜಗಳನ್ನು ನೇರವಾಗಿ ಬಿತ್ತಿ ಅಥವಾ ಮಡಿಗಳಲ್ಲಿ ಬೆಳೆಸಿದ ಒಂದು ವರ್ಷದ ಸಸಿಗಳನ್ನು ನೆಡುತೋಪುಗಳಲ್ಲಿ ಬೆಳೆಸಬಹುದು.

ಉಪಯೋಗಗಳು: ಮರದ ದಾರುವಿನಲ್ಲಿ ಚೇಗು ಕಾಣುವುದಿಲ್ಲ. ದಾರು ಹಳದಿ ಅಥವಾ ಹಳದಿ-ಕಂದು, ಸುಮಾರು ಬಾಳಿಕೆಯದು. ದಾರುವಿನಿಂದ ಆಟದ ಸಾಮಾನುಗಳು, ಪದರದ ಹಲಗೆ, ಕೆತ್ತನೆ ಕೆಲಸ , ಪೀಠೋಪಕರಣಗಳು ಮತ್ತು ಬಲಿಯರ್ಡ್ಸ್ ಚೆಂಡುಗಳನ್ನು ತಯಾರಿಸುತ್ತಾರೆ.  ಎಲೆಗಳು ದನಕರುಗಳ ಮೇವು.