ವೈಜ್ಞಾನಿಕ ಹೆಸರು: ಸೆಸ್ಬೇನಿಯಾ ಗ್ರಾಂಡಿಫ್ಲೋರ
ಕುಟುಂಬ: ಫೇಬೇಸಿ 

ದು ವೇಗವಾಗಿ ಬೆಳೆಯುವ ಮರ, ಎರಡು ವರ್ಷಗಳಲ್ಲಿ ಸುಮಾರು ೬ ಮೀ. ಬೆಳೆಯುತ್ತದೆ. ಇದರ ಮರ ಚಿಕ್ಕದು, ಇದರ ಕಾಂಡ ನೆಟ್ಟಗಿರುತ್ತದೆ. ಹಸುರೆಲೆಗಳಿಂದ ಮತ್ತು ದೊಡ್ಡ ಹೂಗಳಿಂದ ಕೂಡಿದ ನೆತ್ತಿಯುಳ್ಳ ಈ ಮರ ಅಂದವಾದದ್ದು. ಇದರ ಹೂಗಳು ಬಿಳುಪಿನ ಬಣ್ಣದ್ದು, ಇದು ಹೆಚ್ಚು ಕಾಲ ಬಾಳುವ ಮರವಲ್ಲ.

ಪುನರುತ್ಪತ್ತಿ: ಇದರ ಬೀಜಗಳಿಗೆ ಯಾವ ತರಹದ ಬೀಜೋಪಚಾರ ಬೇಕಾಗಿಲ್ಲ. ಹದ ಮಾಡಿದ ಭೂಮಿಯಲ್ಲಿ ಬೀಜವನ್ನು ನೆಟ್ಟು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೀರು ಹಾಕಿದರೆ ಸುಮಾರು ೭ ರಿಂದ ೧೦ ದಿನಗಳಲ್ಲಿ ಮೊಳಕೆಯೊಡೆಯುತ್ತದೆ. ಸಸಿಮಡಿಗಳಲ್ಲಾಗಲೀ, ಪಾಲಿಥೀನ್‌ ಚೀಲಗಳಲ್ಲಾಗಲೀ ಸಸಿಗಳನ್ನು ಬೆಳೆಸಿ, ಪ್ಲಾಂಟೇಷನ್‌ ಜಾಗದಲ್ಲಿ ನೆಡಬೇಕಾಗಿಲ್ಲ. ಬೀಜಗಳನ್ನು ಸರಿಯಾದ ರೀತಿಯಲ್ಲಿ ಬಿತ್ತಿ ಪೋಷಣೆ ಕೊಟ್ಟರೆ ಅವು ಬೆಳೆದು ಮರಗಳಾಗುತ್ತವೆ.

ಉಪಯೋಗಗಳು: ಇದರ ಹೂವು, ಚಿಗುರೆಲೆ ಮತ್ತು ಕಾಯಿಗಳನ್ನು ತರಕಾರಿಯ ಹಾಗೆ ಉಪಯೋಗಿಸುತ್ತಾರೆ. ಇದರ ಎಲೆ, ತೊಗಟೆ ಮತ್ತು ಹೂವಿನ ರಸವನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಚೇಗು ಬಿಳುಪು, ಹಗುರ ಮತ್ತು ಮೃದು. ಇದರ ಕಾಂಡವನ್ನು ತಾತ್ಕಾಲಿಕ ಗುಡಿಸಿಲಿನ ಕಂಬವಾಗಿ ಉಪಯೋಗಿಸುತ್ತಾರೆ. ಇದರ ದಾರುವನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ವೀಳೆಯದೆಲೆ ತೋಟಗಳಲ್ಲಿ ಆಸರೆ ಮರವಾಗಿ ಈ ಮರವನ್ನು ಬೆಳಸುವುದುಂಟು.