ಬಿತ್ತನೆ ಬಿತ್ತಿ ಬಂದ

 

ನಮ್ಮಣ್ಣ ಕಡ್ಡಿ ಬಿತ್ತು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ಕಡ್ಡೆ ಮಳಕಿ ತಿರುಮಲಗಡ್ಡಿ
ಹಾರುರ ಚಿಮಣಿ ಕಯಕಟ ರಮಣಿ
ಬಾರಕ ಬೆಳಗಯಿತೆ ಗವರವ ತೇರಕ ಬೆಳಗಯಿತೆ

ನಮ್ಮಣ್ಣ ಚೆಣಗಿ ಬಿತ್ತು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ಚೆಣಗೆ ಮಳಕಿ ತಿರುಮಲಗಡ್ಡಿ
ಹಾರುರ ಚಿಮಣಿ ಕಯಕಟ ರಮಣಿ
ಬಾರಕ ಬೆಳಗಯಿತೆ ಗವರವ ತೇರಕ ಬೆಳಗಯಿತೆ

ನಮ್ಮಣ್ಣ ವಟಣೆ ಬಿತ್ತು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ವಟಣೆ ಮಳಕಿ ತಿರುಮಲಗಡ್ಡಿ
ಹಾರುರ ಚಿಮಣಿ ಕಯಕಟ ರಮಣಿ
ಬಾರಕ ಬೆಳಗಯಿತೆ ಗವರವ ತೇರಕ ಬೆಳಗಯಿತೆ

ನಮ್ಮಣ್ಣ ಕುಸಬಿ ಬಿತ್ತು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ಮಳ್ಯಾಗ ತೊಯಿದು ಬಂದಾನೆ ಗವರವ
ಘೋದೆ ಮಳಕಿ ತಿರುಮಲಗಡ್ಡಿ
ಹಾರುರ ಚಿಮಣಿ ಕಯಕಟ ರಮಣಿ
ಬಾರಕ ಬೆಳಗಯಿತೆ ಗವರವ ತೇರಕ ಬೆಳಗಯಿತೆ

ಧಾನ್ಯದ ಹೇರು

ಕಡ್ಡಿಯ ಹೇರು ಬಂದಾವಕ್ಕ
ಬಂದ ಬಂದಿ ಬಾಗಿಲಿಗಿ ಬಿದ್ದಾವಕ್ಕ
ಹಾರೂರ ಪಾರಾ ದಂಡಿಗೆ ಬಂತು
ದಂಡಿನ ಚೆಂಡು ಆಡೂತ ಬಂತು
ಊದಿನ ಖಡ್ಡಿ ಉರಿವುತ ಬಂತು
ಹಾಲೇಂದು ಹರುದಾವೆ
ನೀರೇಂದು ನಿಂತಾವೆ

ಚೆಣಗೆಯ ಹೇರು ಬಂದಾವಕ್ಕ
ಬಂದ ಬಂದಿ ಬಾಗಿಲಿಗಿ ಬಿದ್ದಾವಕ್ಕ
ಹಾರೂರ ಪಾರಾ ದಂಡಿಗೆ ಬಂತು
ದಂಡಿನ ಚೆಂಡು ಆಡೂತ ಬಂತು
ಊದಿನ ಖಡ್ಡಿ ಉರಿವುತ ಬಂತು
ಹಾಲೇಂದು ಹರುದಾವೆ
ನೀರೇಂದು ನಿಂತಾವೆ

ವಟಣೆಯ ಹೇರು ಬಂದಾವಕ್ಕ
ಬಂದ ಬಂದಿ ಬಾಗಿಲಿಗಿ ಬಿದ್ದಾವಕ್ಕ
ಹಾರೂರ ಪಾರಾ ದಂಡಿಗೆ ಬಂತು
ದಂಡಿನ ಚೆಂಡು ಆಡೂತ ಬಂತು
ಊದಿನ ಖಡ್ಡಿ ಉರಿವುತ ಬಂತು
ಹಾಲೇಂದು ಹರುದಾವೆ
ನೀರೇಂದು ನಿಂತಾವೆ

ಕುಸುಬೆಯ ಹೇರು ಬಂದಾವಕ್ಕ
ಬಂದ ಬಂದಿ ಬಾಗಿಲಿಗಿ ಬಿದ್ದಾವಕ್ಕ
ಹಾರೂರ ಪಾರಾ ದಂಡಿಗೆ ಬಂತು

ದಂಡಿನ ಚೆಂಡು ಆಡೂತ ಬಂತು
ಊದಿನ ಖಡ್ಡಿ ಉರಿವುತ ಬಂತು
ಹಾಲೇಂದು ಹರುದಾವೆ
ನೀರೇಂದು ನಿಂತಾವೆ

ಘೋದಿಯ ಹೇರು ಬಂದಾವಕ್ಕ
ಬಂದ ಬಂದಿ ಬಾಗಿಲಿಗಿ ಬಿದ್ದಾವಕ್ಕ
ಹಾರೂರ ಪಾರಾ ದಂಡಿಗೆ ಬಂತು
ದಂಡಿನ ಚೆಂಡು ಆಡೂತ ಬಂತು
ಊದಿನ ಖಡ್ಡಿ ಉರಿವುತ ಬಂತು
ಹಾಲೇಂದು ಹರುದಾವೆ
ನೀರೇಂದು ನಿಂತಾವೆ

ಬನಬನಕ್ಕೆ

ಖಾರೀಕ ಬನಗೊಂಟ ನಡದಾವೋ ಗಿಳಿರಾಮ
ಕಾಲಶೆಣ್ಣ ಕಪ್ಪುರಿ ಬಣ್ಣ ನಡಿ ಹೋಗೋದಿಮುಳ್ಳ
ನಡಿ ಹೋಗೋದಿಮುಳ್ಳ

ಈಲಂಚೆ ಬನಗೊಂಟ ನಡದಾವೋ ಗಿಳಿರಾಮ
ಕಾಲಶೆಣ್ಣ ಕಪ್ಪುರಿ ಬಣ್ಣ ನಡಿ ಹೋಗೋದಿಮುಳ್ಳ
ನಡಿ ಹೋಗೋದಿಮುಳ್ಳ

ಬಾದಮ ಬನಗೊಂಟ ನಡದಾವೋ ಗಿಳಿರಾಮ
ಕಾಲಶೆಣ್ಣ ಕಪ್ಪುರಿ ಬಣ್ಣ ನಡಿ ಹೋಗೋದಿಗಮುಳ್ಳ
ನಡಿ ಹೋಗೋದಿಗಮುಳ್ಳ

ಲವಂಗ ಬನಗೊಂಡ ನಡದಾವೋ ಗಿಳಿರಾಮ
ಕಾಲಶೆಣ್ಣ ಕಪ್ಪುರಿ ಬಣ್ಣ ನಡಿ ಹೋಗೋದಿಮುಳ್ಳ
ನಡಿ ಹೋಗೋದಿಮುಳ್ಳ

ಅಡಕೀಯ ಬನಗೊಂಡ ನಡದಾವೋ ಗಿಳಿರಾಮ
ಕಾಲಶೆಣ್ಣ ಕಪ್ಪುರಿ ಬಣ್ಣ ನಡಿಹೋಗೋದಿಮುಳ್ಳ
ನಡಿ ಹೋಗೋದಿಗಮುಳ್ಳ

ರಾಜರ ಮನೆಯ ಮುಂದೆ

ನಮ್ಮ ರಾಜರ ಮನಿಮುಂದ ಖಾರಿಕ ಗಿಡ ಹುಟ್ಟಿ
ಖಾರಿಕಗೊಲ್ಲೆ ಕಡಿಲಕ ಹೋದರ ಮುಳ್ಳೆ ಮುರಿತಲ್ಲೆ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಮುಳ್ಳ ಮುರಿಲಾಕ ರಾಜೇರು ಬರಲಾಕ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ

ನಮ್ಮ ರಾಜರ ಮನಿಮುಂದ ಬಾದಮ ಗಿಡ ಹುಟ್ಟಿ
ಬಾದಮಗೊಲ್ಲೆ ಕಡಿಲಕ ಹೋದರ ಮುಳ್ಳೆ ಮುರಿತಲ್ಲೆ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ

ನಮ್ಮ ರಾಜರ ಮನಿಮುಂದ ಇಲಾಂಚೆ ಗಿಡಹುಟ್ಟಿ
ಇಲಾಂಚೆಗೊಲ್ಲೆ ಕಡಿಲಾಕ ಹೋದರ ಮುಳ್ಳೆ ಮುರಿತಲ್ಲೆ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ
ಕಳಸಲಿಂಬೆ ಕಳವೆ ಹವ ನಮ್ಮ ರಾಜೇರ ಗವರಿಗೆ

ನಮ್ಮ ರಾಜರ ಮನಿಮುಂದ ಲಿಂಬೆ ಗಿಡಹುಟ್ಟಿ
ಲಿಂಬೆಗೊಲ್ಲೆ ಕಡಿಲಾಕ ಹೋದರ ಮುಳ್ಳೆ ಮುರಿತಲ್ಲೆ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ

ನಮ್ಮ ರಾಜೇರ ಮನಿಮುಂದ ಬಾಳೆಯ ಗಿಡ ಹುಟ್ಟಿ
ಬಾಳೆಗೊಲ್ಲೆ ಕಡಿಲಕ ಹೋದರ ಮುಳ್ಳೆ ಮುರಿತಲ್ಲೆ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಮುಳ್ಳ ಮುರಿಲಾಕ ರಾಜೇರು ಬರುಲಾಕ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ
ಕಳಸಲಿಂಬೆ ಕಳವೆ ಹೂವ ನಮ್ಮ ರಾಜೇರ ಗವರಿಗೆ

ಹೊನ್ನಖೋಡಿನ ಎಮ್ಮೆ

 ॥        ಕೆಂಪ ಮಡ್ಡಿಯ ಮ್ಯಾಲ ಕೆಂಪೆತ್ತು ಕಾಯುವ
ಕೆಂಪ ಚಲ್ಲೋಣಿ ಅವರಂಗ ಕೋಲೆ

ಕೆಂಪಾನೆ ಚಲ್ಲೋಣಿ ಅವರಂಗ ಸಂಗಡ
ಸರಿ ಸರಿ ಬಳಿಯೇ ಒಡಕೊಂಡಿ ಕೋಲೆ

ನಿನ್ನ ಇಡಸೀದ ಬಳಿ ಹೊನ್ನ-ಹೂವಿನ ಬಳಿ
ಏನೇನು ಮಾಡಿ ಒಡಕೊಂಡಿ ಕೋಲೆ

ಅಣ್ಣನ ತೋಟಕ ಹೊಕಲ್ಯಾಡಿ ಹೋದರ
ಹೊನ್ನ ಖೋಡ್ಯಾಮ್ಮಿ ಹೊಡದಿತ್ತಕೋಲೆ

ಆ ಎಮ್ಮಿ ಹೊಡಿಯಲಿ ಆ ಎಮ್ಮಿ ಬಡಿಯಲಿ
ಆ ಎಮ್ಮಿ ಖೋಡ ಕೊಯಸಲಿ ಕೋಲೆ

ನನ್ನ್ಯಾಕ ಹೋಡಿತಿರಿ ನನ್ನ್ಯಾಕ ಬಡಿತಿರಿ
ನನ್ನ ಖೋಡ್ಯಾಕ ಕೊಯಸ್ತಿರಿ ? ಕೊಲೆ
ಹೊರಿ ಹುಲ್ಲು ತಿನ್ನುತ ಕೊಡ ನೀರು ಕುಡಿಯುತ
ಗಿಡದ ನೆರಳಿಗಿ ಒರಗುತ ಕೋಲೆ

॥        ಕರಿಯ ಮಡ್ಡಿಯ ಮ್ಯಾಲ ಕರಿಯೆತ್ತು ಕಾಯುವ
ಕರಿಯ ಚಲ್ಲೋಣಿ ಅವರಂಗ ಕೋಲೆ

ಕರಿಯ ಚಲ್ಲೋಣಿ ಅವರಂಗ ಸಂಗಡ
ಸರಿ ಸರಿ ಬಳಿಯೇ ಒಡಕೊಂಡಿ ಕೋಲೆ

ನಿನ್ನ ಇಡಸೀದ ಬಳಿ ಹೊನ್ನ-ಹೂವಿನ ಬಳಿ-
ಏನೇನು ಮಾಡಿ ಒಡಕೊಂಡಿ ಕೋಲೆ ?

ಅಣ್ಣನ ತೋಟಕ ಹೊಕಲ್ಯಾಡಿ ಹೋದರ
ಹೊನ್ನ ಖೋಡ್ಯಾಮ್ಮಿ ಹೊಡದಿತ್ತ ಕೋಲೆ

ಆ ಎಮ್ಮಿ ಹೊಡಿಯಲಿ ಆ ಎಮ್ಮಿ ಬಡಿಯಲಿ
ಆ ಎಮ್ಮಿ ಖೋಡ ಕೊಯಸಲಿ ಕೋಲೆ

ನನ್ನ್ಯಾಕ ಹೋಡಿತಿರಿ ನನ್ನ್ಯಾಕ ಬಡಿತಿರಿ
ನನ್ನ ಖೋಡ್ಯಾಕ ಕೊಯಸ್ತಿರಿ ? ಕೊಲೆ

ಹೊರಿ ಹುಲ್ಲು ತಿನ್ನುತ ಕೊಡ ನೀರು ಕುಡಿಯುತ
ಗಿಡದ ನೆರಳಿಗಿ ಒರಗುತ ಕೋಲೆ

॥        ಬಿಳಿಯ ಮಡ್ಡಿಯ ಮ್ಯಾಲ ಬಿಳಿಯೆತ್ತು ಕಾಯುವ
ಬಿಳಿಯ ಚಲ್ಲೋಣಿ ಅವರಂಗ ಕೊಲೆ

ಬಿಳಿಯ ಚಲ್ಲೋಣಿ ಅವರಂಗ ಸಂಗಡ
ಸರಿ ಸರಿ ಬಳಿಯೇ ಒಡಕೊಂಡಿ ಕೋಲೆ

ನಿನ್ನ ಇಡಸೀದ ಬಳಿ ಹೊನ್ನ-ಹೂವಿನ ಬಳಿ-
ಏನೇನು ಮಾಡಿ ಒಡಕೊಂಡಿ ಕೋಲೆ ?

ಅಣ್ಣನ ತೋಟಕ ಹೊಕಲ್ಯಾಡಿ ಹೋದರ
ಹೊನ್ನ ಖೋಡ್ಯಾಮ್ಮಿ ಹೊಡದಿತ್ತ ಕೋಲೆ

ಆ ಎಮ್ಮಿ ಹೊಡಿಯಲಿ ಆ ಎಮ್ಮಿ ಬಡಿಯಲಿ
ಆ ಎಮ್ಮಿ ಖೋಡ ಕೊಯಸಲಿ ಕೋಲೆ

ನನ್ನ್ಯಾಕ ಹೋಡಿತಿರಿ ನನ್ನ್ಯಾಕ ಬಡಿತಿರಿ
ನನ್ನ ಖೋಡ್ಯಾಕ ಕೊಯಸ್ತಿರಿ ? ಕೋಲೆ

ಹೊರಿ ಹುಲ್ಲು ತಿನ್ನುತ ಕೊಡ ನೀರು ಕುಡಿಯುತ
ಗಿಡದ ನೆರಳಿಗಿ ಒರಗುತ ಕೋಲೆ

ಗಿsಜಗ್ಯ

ಗಿಜಗ್ಯನ ಹುಲ್ಲ ತಂದು ನೂರೆಂಟು ಮನಿಕಟ್ಟಿ
ನೂರೆಂಟು ಮನಿಗಿ ಬಾಗಲೆಲ್ಯಾವೂ ಭಾಳ ಗೀಜಗ್ಯ

ಬ್ಯಾಟಿಕಾರನ ಮಗಳ ಬೆನ್ಹತ್ತಿ ಹೋಗುವಾಗ
ಅರಸೀಣ ಮಳುಗ್ಯಾಗಡಗಿದನೊ ಭಾಳ ಗೀಜಗ್ಯ

ಮಲ್ಲಿಗ್ಹೂವಾ ತಂದು ಚೆಲುವಾಗಿ ಮನಿಕಟ್ಟಿ
ಮಲ್ಲಿಗಿ ಹೂವಿನ ಬಾಗಲೆಲ್ಯಾದೊ ಭಾಳ ಗೀಜಗ್ಯ

ಬ್ಯಾಟಿಕಾರನ ಮಗಳ ಬೆನ್ಹತ್ತಿ ಹೋಗುವಾಗ
ಕುಕುಮ ಮಳುಗ್ಯಾಗಡಗಿದನೊ ಭಾಳ ಗೀಜಗ್ಯ

ಚೆಂಡೆನ ಹೂವ ತಂದು ದುಂಡಾಗಿ ಮನಿಕಟ್ಟಿ
ಚೆಂಡೆನ ಹೂವಿನ ಬಾಗಿಲೆಲ್ಯಾದೊ ಭಾಳ ಗೀಜಗ್ಯ

ಬ್ಯಾಟಿಕಾರನ ಮಗಳ ಬೆನ್ಹತ್ತಿ ಹೋಗುವಾಗ
ಘಂದದ ಮಳುಗ್ಯಾಗಡಗಿದನೊ ಭಾಳ ಗೀಜಗ್ಯ

ಮಲ್ಲಿಗಿ ಹೂವ ತಂದು ಚೆಲುವಾಗಿ ಮನಿಕಟ್ಟಿ
ಮಲ್ಲಿಗ್ಹೂವಿನ ಬಾಗಲೆಲ್ಯಾದೊ ಭಾಳ ಗೀಜಗ್ಯ

ಮಲ್ಲಿಗಿ ಹೂವಿನ ಮನಿಯಲ್ಲಿ ಹುಡುಕಳಗೆ
ಹೂವಿನ ಒಳಗೆ ಅಡಗಿದನೊ ಭಾಳ ಗೀಜಗ್ಯ