ಹಸಿವರಿತು ತಾಯಿ ತನ್ನ ಶಿಶುವಿಗೆ ವಸೆದು
ಮೊಲೆ ಕೊಡುವಂತೆ ನೀ ಪೋಷಿಸಿದೆ ಬೇರಾರು
ಪೋಷಕರು ಗುರುವೇ ||

ಬಸುರೊಳಗೆ ಬ್ರಹ್ಮಾಂಡ ಕೋಟಿಯ ಪಸರಿಸಿದ
ಪರಮಾತ್ಮ ನೀನೆಂದು ಸಾರುತಿದೆ ವೇದನೆಗಳು
ನಾನೇನು ಬಲ್ಲೆನು ನಿನ್ನ ನಾಮಸ್ಮರಣೆಯನು
ಅಕ್ರೂರ ತಾಬಲ್ಲ ವಿದುರ ಭಕ್ತನು ಬಲ್ಲ ವಾಲಿಕೆ
ಋಷಿ ಬಲ್ಲ ಗಜದಾಸ ಬಲ್ಲ ದ್ರೌಪತಿ ಬಲ್ಲಳು
ನಾನೇನು ಬಲ್ಲೆನು ನಿನ್ನ ನಾಮಸ್ಮರಣೆಯನು ಗುರುವೆ ||

ಆಗುತಿದೆ ನುಡಿಯಲ್ಲಿ ತಪ್ಪುಗಳು ಆಗುತಿವೆ
ನಡೆಯಲ್ಲಿ ತಪ್ಪುಗಳು ಆಗುತಿವೆ ಸಂಸಾರದಲ್ಲಿ
ಬಹುತರದ ತಪ್ಪು | ನಿಹೊಳಹೊಕ್ಕು ಏನನು
ನಡೆಸಿದೊಡೆ ಅದೆನೇ ನಾನುಣದಲ್ಲಿ ನುಡಿವೆ