29. Lesser Whistling-Duck (Dendrocygna javanica) Lesser Whistling Teal, Tree Duck R Duck- ಸಿಳ್ಳೆಬಾತು (ನೀರ್ ಬಾತ್)

42 ಸೆಂಮೀ. ಕಂದು ದೇಹಕ್ಕೆ ಕಡುಗಂದು ತಲೆ, ರೆಕ್ಕೆಗಳು; ಬೂದು ಕೊಕ್ಕು, ಕಾಲುಗಳು; ರೆಕ್ಕೆಗಳಲ್ಲಿ ಕ್ಪ; ದುರ್ಬಲ ಹಾರಾಟ; ಹಾರುವಾಗ ರೈಲು ಶಿಳ್ಳೆಯಂತೆ ಸ್ವೀಸಿಕ್.. ಅಥವಾ ವ್ಹಿ.ವ್ಹೀ…. ಕೂಗು. ಗುಂಪಾಗಿ ಕೆರೆತೀರಗಳಲ್ಲಿ ರಾತ್ರಿಬೇಟೆ. ಕೀಟ, ಕಾಂಡ, ಜಲಚರಗಳೇ ಆಹಾರ. ಒಳ್ಳೆಯ ಈಜುಗಾರ ಮತ್ತು ಮರವಾಸಿ.