ಮೊದಲಿಂದ ನೆನದೇನ ಜಗದಂಬ
ಮೊದಲಿಂದ ನೆನದೇನ ಕರಿಯಲ್ಲ            ಪಲ್ಲ

ಮತಿ ಎನಗ ಕೊಡಬೇಕ ಮಾಯಕಾರ್ತಿ
ಹಸರ ಸೀರೆಯ ಉಟ್ಟಿದೆ ಜಗದಂಬ
ಹಸರ ಸೀರೆಯನ್ನುಟ್ಟಿದೆ ಕರಿಯಲ್ಲ
ಕುಂಕುಮ ಬಟ್ಟೊಂದ ಹಚ್ಚಿದೆವ್ವ ಮಾಯಕಾರ್ತಿ
ಗಂಜಿ ಸೀರೆಯ ಉಟ್ಟಿದೆ ಜಗದಂಬ
ಗಂಜಿ ಸೀರೆಯನ್ನುಟ್ಟಿದೆವ್ವ ಕರಿಯಲ್ಲ
ಗಂಧದ ಬಟ್ಟೊಂದ ಇಟ್ಟಿದೆವ್ವ  ಮಾಯಕಾರ್ತಿ
ಮುತ್ತಿನ ಗದ್ದಿಗಿ ಉಚ್ಚಾಯ ಹೂವ ತುಂಬ
ದೀಪ ದೀವಿಗಿ ಹಚ್ಚ್ಯಾರ ತಾಯಿ ಮುಂದ
ಗಚ್ಚಿನ ಗುಡಿಯ ಉಚ್ಚಾಯ ಮೂರುತಿ
ಸೇವೆಯೊಳಗ ಬರಬೇಕ ಮಾಯಕಾರ್ತಿ
ರಂಡಿ ಹುಣ್ಣಿವಿ ಜಾತುರಿ ಗುಡ್ಡದ ತುಂಬ
ಕೊಬರಿ ಭಂಡಾರ ಹಾರ‍್ಯಾವ ಪವಳಿ ತುಂಬ
ಕೊಬರಿ ಕಾರೀಕ ಹಾರ್ಯಾವ ಪಲ್ಲಕ್ಕಿ ತುಂಬ
ಕಾಮ ಜನಗಿ ಮಾತಂಗಿ ಗುಡಿಯ ಮುಂದೆ
ಬಂಗಾದ ಹಸ್ತವ ತೋರಿದೆವರ ಕಣ್ಣ ತುಂಬ
ಉಗರಗೊಳ್ಳ ಸವದತ್ತಿ ಸೀಮಿ ತುಂಬ
ನಿನ್ನ ಮೊದಲಿಂದ ನೆನದೇನ ಜಗದೆಂಬ