ಹೂವು ಸಿಗಲಿಲ್ಲ

 

ಝೆಂಡೆನ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಝೆಂಡೆನ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಝೆಂಡೆನ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ
ಝೆಂಡೆನ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ

ಕಾರಳ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕಾರಳ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕಾರಳ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ
ಕಾರಳ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ

ಕುಕ್ಕೆನ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕುಕ್ಕೆನ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕುಕ್ಕೆನ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ
ಕುಕ್ಕೆನ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ

ಕಣಗಿಲ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕಣಗಿಲ್ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕಣಗಿಲ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ
ಕಣಗಿಲ್ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ

ಕನಕಮ್ರಿ ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕನಕಮ್ರಿ ಹೂವುಕಾ ಗಲ್ಲಿ ಗಲ್ಲಿ ತಿರುಗಿದಾ
ಕನಕಮ್ರಿ ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ
ಕನಕಮ್ರಿ ಹೂವಾ ಸಿಗಣಿಲ್ಲೆ ಗವರಿ ಗಾಬರಾಗ್ಯಾಳೆ

ಹೂವು ತಂದಿರುವೆ

ಕುಕ್ಕೆನ್ಹೂವಾ ಕಡ ತಂದಿದಾ
ಗೌರಿ ನಿನುಗ ಕುಕ್ಕುರ್ಸ್ತ ಕರೆ ತಂದಿದಾ
ಬಂದಳೆಂದು ಬರಲಂದಿದಾ
ಗೌರಿ ನಿನುಗ ಪಂಜರಂಥಾ ಗಿಳಿ ತಂದಿದಾ

ಕಾರಳ್ಹೂವಾ ಕಡ ತಂದಿದಾ
ಗೌರಿ ನಿನುಗ ಕಾರುಸ್ತ ಕರ ತಂದಿದಾ
ಬಂದಳೆಂದು ಬರಲಂದಿದಾ
ಗೌರಿ ನಿನುಗ ಪಂಜರಂಥಾ ಗಿಳಿ ತಂದಿದಾ

ಹೀರೆ ಹೂವಾ ಕಡ ತಂದಿದಾ
ಗೌರಿ ನಿನುಗ ಹೀರುಸ್ತ ಕರತಂದಿದಾ
ಬಂದಳೆಂದು ಬರಲಂದಿದಾ
ಗೌರಿ ನಿನುಗ ಪಂಜರಂಥಾ ಗಿಳಿ ತಂದಿದಾ

ಸ್ವಾರೆ ಹೂವಾ ಕಡ ತಂದಿದಾ
ಗೌರಿ ನಿನುಗ ಸ್ವಾರುಸ್ತ ಕರ ತಂದಿದಾ
ಬಂದಳೆಂದು ಬರಲಂದಿದಾ
ಗೌರಿ ನಿನುಗ ಪಂಜರಂಥಾ ಗಿಳಿ ತಂದಿದಾ

ಝೆಂಡೆನ್ಹೂವಾ ಕಡ ತಂದಿದಾ
ಗೌರಿ ನಿನುಗ ಝಾಡುಸ್ತ ಕರ ತಂದಿದಾ
ಬಂದಳೆಂದು ಬರಲಂದಿದಾ
ಗೌರಿ ನಿನುಗ ಪಂಜರಂಥಾ ಗಿಳಿ ತಂದಿದಾ

ಹೂವಿಗೆ ಬಹಳ ಪರಿಮಾಡಿ

ಕುಕ್ಕೆನ್ಹೂವುಕಾ ಭಾಳ ಭಾಳ ಪರಿಮಾಡಿ
ಯಾಕೊ ರಂಗಯ್ಯ ನಿನ್ನ ಕಾಕ ಬದಿಗಳೊ
ಯಾಕೊ ರಂಗಯ್ಯ ನಿನ್ನ ಕಾಕ ಬದಿಗಳೊ
ಸಾಕ ನಡಿ ನಡಿ ಸರಿಯ ಸವತೆ ಮನಿಕಡಿ
ಸಾಕ ನಡಿನಡಿ ಸರಿಯ ಸವಿತೆ ಮನಿಕಡಿ
ಹರಿಯ ಹಾಯಲ್ಯೊ ದೊಡ್ಡ ಮಡಗ ಡುಮಕಲ್ಯೊ
ಹರಿಯ ಹಾಯಲ್ಯೊ ದೊಡ್ಡ ಮಡಗ ಡುಮಕಲ್ಯೊ

ಕಾರಳ್ಹೂವುಕಾ ಭಾಳ ಭಾಳ ಪರಿಮಾಡಿ
ಕಾರಳ್ಹೂವುಕಾ ಭಾಳ ಭಾಳ ಪರಿಮಾಡಿ
ಯಾಕೊ ರಂಗಯ್ಯ ನಿನ್ನಕಾಕ ಬದಿಗಳೊ
ಸಾಕ ನಡಿ ನಡಿ ಸರಿಯ ಸವತೆ ಮನಿಕಡಿ
ಸಾಕ ನಡಿ ನಡಿ ಸರಿಯ ಸವತೆ ಮನಿಕಡಿ
ಹರಿಯ ಹಾಯಲ್ಯೊ ದೊಡ್ಡ ಮಡಗ ಡುಮಕಲ್ಯೊ
ಹರಿಯ ಹಾಯಲ್ಯೊ ದೊಡ್ಡ ಮಡಗ ಡುಮಕಲ್ಯೊ

* * *