8. ಸರಾವಣ ಕುಮಾರನ ಹಾಡು
ಸರಾವಣನ ತಾಯಿ ತಂದಿs ಕಣ್ಣಿಲ್ಲ ಕುರುಡಾರೆ ಕೋsಲು ಕೋsಲೆ
ಮಗಾ ನನ್ನ ಸರಾವಣ ಕಾಶಿಯ ಜಾತ್ರಿಗೊಯ್ಯೋ ಕೋsಲು ಕೋsಲೆ
ತಾಯಿ ತಂದೆ ಮಾತ ಕೇಳಿs ಕಾವಡಿ ಕಟ್ಟ್ಯಾರೆs
ಹೆಗಲ ಮ್ಯಾಲ ಇಟ್ಟ ಕೊಂಡಾರೆs ಕೋsಲು ಕೋsಲೆ
ಆಟೋದುರೆ ಇsಟೋದುರೆ ಬಾರಾ ಹರದಾರಿ ಹೋದುರೆs ಕೋsಲು ಕೋsಲೆ
ಅಟ್ಟಾನೆ ಅರಣ್ಯದಾಗೆs ಘಟ್ಟನೆ ಗಂವ್ವರದಾಗೆs ಕೋsಲು ಕೋsಲೆ
ಮಗಾ ನನ್ನ ಸರವಣಾ ನೀರಡಕಿ ಆಗ್ಯಾವಲ್ಲೊ ಕೋsಲು ಕೋsಲೆ
ಒಂದನೆ ಗಿಡ ಕೆಳಗs ಕಾವಡಿ ಇಳಸ್ಯಾರೆ ಕೋsಲು ಕೋsಲೆ
ಕಾವಡಿ ಇಳಸ್ಯಾರೆs ಝರಿ ಥಮಗಿ
ತಗೊಂಡಾರೆs ಕೋಲು ಕೋಲೆ
ಅಟ್ಟಾನೆ ಅರಣ್ಯದಾಗs ದಸರತ ರಾಜ
ಕಟ್ಟ್ಯಾರ ಕೆರಿಯೆs ಕೋಲು ಕೋಲೆ
ಕೆರಿಯಾರ ಕಟ್ಟ್ಯಾರೆs ಕಾವಲಿಗಿ ಕುಂತಾರೆs
ಕೋಲು ಕೋಲೆ
ಹುಲ್ಲಿಗಿ ಗಂಟ್ಹಾಕೋತೆs ಕಲ್ಲಿಗಿ
ಖೂನಿಟ ಕೊತೆs ಕೋಲು ಕೋಲೆ
ಕಲ್ಲಿಗಿ ಖೂನಿಟಕೋತೆs ಕೆರಿಗಾರ ಹೋಗ್ಯಾರೆs
ಕೋಲು ಕೋಲೆ
ಕೆರಿಗಾರ ಹೋಗ್ಯಾರೆs ಝರಿ ಥಮಗಿ ಮುಣು
ಗಸ್ಯಾsರೆ ಕೋಲೆ ಕೋಲೆ
ಝರಿ ಥಮಗಿ ಮುಣಗಸಳಗೆs ಬುಡು ಬುಡು ಸಪ್ಪಳಾಗಿs
ಕೋಲು ಕೋಲೆ
ಬುಡು ಬುಡು ಸಪ್ಪಳ ಕೇಳಿs ಬಾಣರ
ಬಿಟ್ಟಾರೆs ಕೋಲು ಕೋಲೆ
ಆದೆ ಬಾಣ ಬಂದಾsದ ಸರಾವಣನ
ಎದ್ಯಾಗತ್ತಿ ಕೋಲು ಕೋಲೆ
ಬಾಣರ ಹsತ್ತ್ಯಾsದ ರಾಮಂತ ಬಿದ್ದಾರ
ನೆಲಕs ಕೋಲು ಕೋಲೆ
ರಾಮಾನೆ ಅಂsಬವರುs ನಮ್ಮಾನ
ವಂಶದವರೆs ಕೋಲು ಕೋಲೆ
ಅಲ್ಲಿಂದ ದಸರಥ ರಾಜಾs ಸರಾವಣನ
ಬಲಿಕಿ ಬಂದುಲೆs ಕೋಲು ಕೋಲೆ
ತಾಯಿ ಹೆಸರು ಎನೋs ಬಾಲ ತಂದಿ ಹೆಸರು
ಎನೋs ಬಾಲ ಕೋಲು ಕೋಲೆ
ತಂದಿ ಹೆಸರು ಎನೋs ಬಾಲ ನಿನ್ನ ಹೆಸರು ಎನೋs
ಬಾಲ ಕೋಲು ಕೋಲೆ
ತಾಯಿ ಹೆಸರು ರುಕಮಿಣಿs ತಂದೆ ಹೆಸರು
ಶೇಷರಾವs ಕೋಲು ಕೋಲೆ
ತಂದೆ ಹೆಸರು ಶೇಷರಾವs ನನ್ನ ಹೆಸರು
ಸರಾವಣಾs ಕೋಲು ಕೋಲೆ
ರುಕಮಿಣಿ ನಮ್ಮಕ್ಕs ಶೇಷರಾವ ನಮ್ಭಾವs
ಕೋಲು ಕೋಲೆ
ಶೇಷರಾವs ನಮ್ಭಾವs ಸರಾವಣ ಸಹೋದರಳಿಯs
ಕೋಲು ಕೋಲೆ
ನಿನ್ನಾನೆ ತಾಯಿ ತಂದಿs ಎಲ್ಯ್ರ ನನಗ್ಹೇಳೋs
ಕೋಲು ಕೋಲೆ
ಹುಲ್ಲಿಗಿ ಗಂಟ್ಹಾಕೋತೆs ಕಲ್ಲಿಗಿ
ಖೂನಿಟಕೋತೆs ಕೋಲು ಕೋಲೆ
ಕಲ್ಲಿಗಿ ಖೂನಿಟಕೋತೆ ಇಲ್ಲಿಗರ
ಬಂದಿದ ನಾನುs ಕೋಲು ಕೋಲೆ
ಝರಿ ತಮಗಿ ತಕ್ಕೊಂಡಾರs ನೀರರ
ತುಂಬಕೊಂಡಾರೆs ಕೋಲು ಕೋಲೆ
ಆವ ನೀರ ಒಯ್ದರs ಭಾವನ ಬಾಯಿಗಿ
ಹಚ್ಚಿs ಕೋಲು ಕೋಲೆ
ಮಗಾ ನನ್ನ ಸರಾವಣಾs ಬ್ಯಾಜರ ಅದೆವೇನೋs
ಕೋಲು ಕೋಲೆ
ಅವೆ ನೀರ ಒಯ್ದರ ಅಕ್ಕನ ಬಾಯಿಗಿ
ಹಚ್ಚಿs ಕೋಲು ಕೋಲೆ
ಮಗಾ ನನ್ನ ಸರಾವಣಾ ಬ್ಯಾಜರ ಆದೆವೇನೋs
ಕೋಲು ಕೋಲೆ
ಸರಾವಣಾ ಇಲ್ಲಕ್ಕs ದಸರಥ ರಾಜಾ
ಇದ್ದ ನಾನುs ಕೋಲು ಕೋಲೆ
ದಶರಥ ರಾಜಾ ಇದ್ದೀ ನೀನುs ಸರಾವಣ
ಎಲ್ಲಾನೊs ಕೋಲು ಕೋಲೆ
ಅಟ್ಟಾನೆ ಆರಣ್ಯದಾಗs ಕೆರಿಯಾರ ಕಟ್ಟಿಸಿದಾ
ನಾನುs ಕೋಲು ಕೋಲೆ
ರಿಯರಾ ಕಟ್ಟಿಸಿದಾs ಕಾವಲಿಗಿ ಕುಂತಿದಾs
ಕೋಲು ಕೋಲೆ
ಸರಾವಣ ಬಂದಾನs ಬುಡು ಬುಡು ಮುಣಗ
ಸ್ಯಾನs ಕೋಲು ಕೋಲೆ
ಬುಡು ಬುಡು ಸಪ್ಪಳ ಕೇಳಿ ಬಾಣಾರs ಬಿಟ್ಟಿದಾ
ನಾನುs ಕೋಲು ಕೋಲೆ
ಆ ಬಾಣ ಬಂದಾದs ಸರಾವಣನ ಎದಿಗತ್ತಿs
ಕೋಲು ಕೋಲೆ
ಎಲೋ ಎಲೋ ದುಸಮಾನs ಸರಾವಣನ
ಬಲಿಕೊಯ್ಯೋs ಕೋಲು ಕೋಲೆ
ಕಾವಡಿ ತಕ್ಕೊಂಡಾರೆs ಹೆಗಲ ಮ್ಯಾಲ ಇಟ್ಟೆ
ಕೊಂಡಾರೆ ಕೋಲು ಕೋಲೆ
ಸರಾವಣನ ಬಲಿಕೊಯ್ದು ಕಾವಡಿ ಇಳು
ಸ್ಯಾರೆs ಕೋಲು ಕೋಲೆ
ಸರಾವಣ ಸತ್ತ ಮ್ಯಾಲs ತಾಯಿ ತಂದಿಗಿ
ಕಣ್ಣ ಬಂದು ಕೋಲು ಕೋಲೆ
ಎಲೋ ಎಲೋ ದಸರತ ರಾಜಾs ಸರಾಪರ
ಕುಡುತಾs ನಿನಗ ಕೋಲು ಕೋಲೆ
ರಾಮನೆ ಲಕ್ಷಮಣs ಇಬ್ಬರು ಮಕ್ಕಳ
ಹುಟ್ಟಲ್ಯೋs ಕೋಲು ಕೋಲೆ
ಇಬ್ಬರು ಮಕ್ಕಳ ಹುಟ್ಟಲ್ಯೋ ಬಾರ ವರ್ಷ
ವನವಾಸಕ್ಕೋಗಲ್ಯೋs ಕೋಲು ಕೋಲೆ
* * *
9. ಮೇಘರಾಜನ ಹಾಡು
ಊರಾನೆ ಹೊರಗೊಂದು ನಾಟಿವಾರನ ಆಟ ಹೂಡಿ
ನಾಟಿವಾರನ ಆಟಹೂಡಿ ಕೋಲೆಣ್ಣ ಕೋಲ.
ನಾಟಿವಾರನ ನಾಟಿ ಹೂಡಿ ಝಡಿ ಝಡಿ ಮಳೆಯವ ಬಂತ
ಝಡಿ ಝಡಿ ಮಳೆಯವ ಬಂತ ಕೋಲೆಣ್ಣ ಕೋಲ.
ಝಡಿ ಝಡಿ ಮಳೆಯವ ಬಂತ ರಾಜನ ಮಗಳು
ಮಾಡ್ಯಾದ ಮ್ಯಾಲ ಕೋಲೆಣ್ಣಾ ಕೋಲ.
ಆಗ ಬರುವದು ಮಳೆಯೇ ಈಗ ಬರುವದು ಮಳಿಯೇ
ಛಂಜಿಗಾದರ ಬರುಬಾರದೇನ ಕೋಲೆಣ್ಣಾ ಕೋಲ.
ರಾಜನ ಮಗಳು ಅನ್ನುವದು ಮೇಘರಾಜ ಕೇಳಿದಾರೆ
ಹಿಂದಿಕ ತಿರುಗ್ಯಾರ ಕೋಲೆಣ್ಣಾ ಕೋಲ.
ಹಿಂದಾಕ ದಿರುಗ್ಯಾರ ಮನಿಗಾದರ ಹೋಗಿದಾರ
ಮನಿಗಾದರ ಹೋಗಿದಾರ ಕೋಲೆಣ್ಣಾ ಕೋಲ.
ಹಿಂದಾಗ ತಿರುಗ್ಯಾರ ಮನಿಗಾದರ ಹೋಗಿದಾರ
ಮುಖ ಮಜ್ಜನ ಮಾಡಿದಾರೆ ಕೋಲೆಣ್ಣಾ ಕೋಲ.
ಮುಖ ಮಜ್ಜನ ಮಾಡಿದಾರ ಧಡಿ ದೋತರುಟ್ಟಿದಾರ
ಧಡಿ ಧೋತರುಟ್ಟಿದಾರ ಕೋಲೆಣ್ಣಾ ಕೋಲ.
ಧಡಿ ಧೋತರುಟ್ಟಿದಾರ ಜರ್ದ ರುಮಾಲ ತೊಟ್ಟಿದಾರ
ಜರ್ದ ರುಮಾಲ ತೊಟ್ಟಿದಾರ ಕೋಲೆಣ್ಣಾ ಕೋಲ.
ಜರ್ದ ರುಮಾಲ ಕಟ್ಟಿದಾರ ಅಬಿರ ಗುಲಾಲ
ತೊಗೊಂಡಾರ ಕರಿ ಕಾಚ ಬಿಳಿಯಲಿ ಕೋಲೆಣ್ಣಾ ಕೋಲ.
ಕರಿ ಕಾಚ ಬಿಳಿಯಲಿ ತೊಗೊಂಡಾರ ಮೇಘರಾಜ
ಆಕೆಯ ಮನಿಗೆ ಬಂದಿದಾರೆ ಕೋಲೆಣ್ಣಾ ಕೋಲ.
ಆಕೆಯ ಮನಿಗೆ ಬಂದಿದ್ದಾರೆ ಆಲಕ ಅಂತ ನಿಂತಿದಾರೆ
ಆಲಕ್ಕೆಂತ ನಿಂತಿದಾರೆ ಕೋಲೆಣ್ಣಾ ಕೋಲ.
ಗಂಡಸರಿಲ್ಲದ ಮನಿಗೆ ಕಳ್ಳರು ಬಂದಾರ ಶಿವನೇ
ಕಳ್ಳರು ಬಂದಾರ ಶಿವನೇ ಕೋಲೆಣ್ಣಾ ಕೋಲ.
ಕಳ್ಳನಲ್ಲ ಸುಳ್ಳನಲ್ಲ ಮಾಲೋಕದ ಮಂದಿನಲ್ಲ
ನಾನಿದ್ದ ಮೇಘರಾಜ ಕೋಲೆಣ್ಣಾ ಕೋಲ.
ತಟ್ಯಾರ ತೆರೆದಾಳ ಸಳಮಂಚ ಹಾಕಿದಾಳ, ಸಳಮಂಚ
ಹಾಕಿದಾಳೆ ಕೋಲೆಣ್ಣಾ ಕೋಲ.
ಸಳಮಂಚ ಹಾಕಿದಾಳ ಮಲ್ಲಿಗೆ ಹರವ್ಯಾಳ
ಮಲ್ಲಿಗೆ ಹರವ್ಯಾಳ ಕೋಲೆಣ್ಣಾ ಕೋಲ.
ಮಲ್ಲಿಗೆ ಹರವ್ಯಾಳೆ ಜೋಡ ಸಮಯಾ ಹಚ್ಚಿಟ್ಟಾಳ,
ಜೋಡ ಸಮಯಾ ಹಚ್ಚಿಟ್ಟಾಳ ಕೋಲೆಣ್ಣಾ ಕೋಲ.
ಜೋಡಿ ಸಮಯ ಹಚ್ಚಿಟ್ಟಾಳ ಅಬಿರ್ಗುಲ್ಲಾಲ ಛಲ್ಲಿದಾರ
ಇಳ್ಯಾ ಅಡಿಕೆ ಮೇಲ್ಲತಾರ ಕೋಲೆಣ್ಣಾ ಕೋಲ.
ಅಡಿವಿದಾಗಿನ ದನ-ಕರು ನೀರಿಲ್ಲದ ಒಳ್ಳುತಾವ
ನಾ ಹೋಯಿತಾ ಮರುತ್ಯಾಕ, ಕೋಲೆಣ್ಣಾ ಕೋಲ.
ನಾನು ಹೋಗದು ಹೋಯ್ತ ನೀ ಏನು ಬೇಡುತಿ ಬೇಡ
ನೀನೇನು ಬೇಡುತಿ ಬೇಡ ಕೋಲೆಣ್ಣಾ ಕೋಲ.
ನಮ್ಮಾನೆ ತೌರ್ಮಾನೆಗ ಬಂಗಾರದ ಮಾಲಾಗೊಳು
ನಮಗೇನು ಬೇಕಾಗಿಲ್ಲ ಸ್ವಾಮಿ ಕೋಲೆಣ್ಣಾ ಕೋಲ.
ಸ್ವಾತಿ ಮಳಿ ಬಂದಿದಾವ ಬಂಗಾರ-ಮಾಲಾ
ಹವರಾಗ್ಯಾವ ನೀನೇನು ಬೇಡುತಿ ಬೇಡ ಕೋಲೆಣ್ಣಾ ಕೋಲ.
ಊರಾಗಿನ ಮಂದಿಯರು ನೀರಿಲ್ಲದೆ ಒಳ್ಳುತಾವ
ನಾ ಹೊಯ್ತ ಮರುತ್ಯಾಕ ಕೋಲೆಣ್ಣಾ ಕೋಲ.
ನಾನು ಹೋಗುವದು ಹೋಯ್ತ ನೀ ಏನು ಬೇಡುತಿ ಬೇಡ
ನೀ ಏನು ಬೇಡುತಿ ಬೇಡ ಕೋಲೆಣ್ಣಾ ಕೋಲ.
ನಮ್ಮನೆ ತೌರ್ಮನೇಗಾ ಬೆಳ್ಳಿಯ ಮಾಲಾಗೋಳು
ನಮಗೇನು ಬೇಕಾಗಿಲ್ಲ ಸ್ವಾಮಿ ಕೋಲೆಣ್ಣಾ ಕೋಲ.
ಉತ್ರಿ ಮಳಿ ಬಂದಿದಾವ ಬೆಳ್ಳಿ ಮಾಲಾ ಹವರಾಗ್ಯಾವ
ನೀ ಏನು ಬೇಡುತಿ ಬೇಡ ಕೋಲೆಣ್ಣಾ ಕೋಲ.
ಮುತ್ತಿನ ಕುಬಸಾ ನೇಯ್ದೇ ಖಳಿರಿ ಕೋಲೆಣ್ಣಾ ಕೋಲ.
ಅಲ್ಲಂದ ಮೇಘರಾಜ ಮನಿಗಾದರ ಹೋಗಿದಾರ
ಮುಖ ಮಜ್ಜನ-ಮಡಿದಾರ ಕೋಲೆಣ್ಣಾ ಕೋಲ.
ಮುಖ-ಮಜ್ಜನ ಮಾಡಿದಾರ ಧಡಿ ಧೋತರ
ಉಟ್ಟಿದಾರ ನೀಲದಂಗಿ ತೊಟ್ಟಿದಾರ ಕೋಲೆಣ್ಣಾ ಕೋಲ.
ನೀಲದಂಗಿ ತೊಟ್ಟಿದಾರ ಗುಂಡ ರೂಮಾಲ ಕಟ್ಟಿದಾರ
ಗುಂಡ ರೂಮಾಲ ಕಟ್ಟಿದಾರ ಕೋಲೆಣ್ಣಾ ಕೋಲ.
ಗುಂಡ ರೂಮಾಲ ಕಟ್ಟಿದಾರ ಬಿದುರ ಬೆತ್ತ ಹಿಡಿದಾರ
ಕುದುರ್ಯಾರ ಏರಿದಾರ ಕೋಲೆಣ್ಣಾ ಕೋಲ.
ಕುದೂರ್ಯಾರ ಎರಿದಾರ ಸಮುದ್ರಕ ಹೋಗಿದಾರ
ಸಮುದ್ರಕ ಹೋಗಿದಾರ ಕೋಲೆಣ್ಣಾ ಕೋಲ.
ಎಂದಿಲ್ಲದ ಮೇಘರಾಜ ಇಂದ್ಯಾಕೆ ಬಂದಾರೆಂದು
ಕುಂಡ್ರಲ್ಹಾಕೆರೆ ಮಣಿಚೌಕಿ ಕೋಲೆಣ್ಣಾ ಕೋಲ.
ಕುಂಡ್ರಲಿ ಬಂದಿಲ್ಲ, ನಿಂದ್ರಲಿ ಬಂದಿಲ್ಲ ಒಮ್ಮುನ
ಮುತ್ತ ಅಳದೇ ಕೊಡರಿ ಕೋಲೆಣ್ಣಾ ಕೋಲ.
ಆ ಮುತ್ತ ತೊಗೊಂಡಾರ ಚಟ್ಟರ ಓಣಿಗೆ
ಹೋಗಿದಾರ ಕೋಲೆಣ್ಣಾ ಕೋಲ.
ಎಂದಿಲ್ಲದ ಮೇಘರಾಜ ಇಂದ್ಯಾಕೆ ಬಂದಾರೆಂದು ಕುಂಡ್ರಲ್ಹಾಕ್ಯಾರೆ
ಮಣಿ ಚೌಕಿ ಕೋಲೆಣ್ಣಾ ಕೋಲ.
ಕುಂಡ್ರಲಿ ಬಂದಿಲ್ಲ ನಿಂದ್ರಲಿ ಬಂದಿಲ್ಲ ಜರ್ದ ಖಣಾ
ಹರದೇ ಕೊಡರಿ ಕೋಲೆಣ್ಣಾ ಕೋಲ.
ಆ ಕುಬಸ ತೊಗೊಂಡಾರ ಸಿಂಪಿಗೇರ ಓಣಿಗೆ ಹೋಗಿದಾರ
ಕೋಲೆಣ್ಣಾ ಕೋಲ.
ಎಂದಿಲ್ಲದೆ ಮೇಘರಾಜ ಇಂದ್ಯಾಕೆ ಬಂದಾರೆಂದು
ಕುಂಡ್ರಲ್ಹಾಕ್ಯಾರೆ ಮಣಿ ಚೌಕಿ ಕೋಲೆಣ್ಣಾ ಕೋಲ.
ಕುಂಡ್ರಲಿ ಆನ ಬಂದಿಲ್ಲ ನಿಂದ್ರಲಿ ನಾಬಂದಿಲ್ಲ
ಮುತ್ತಿನ ಕುಬಸ ನೇಯ್ದೇ ಕೊಡದಿ ಕೋಲೆಣ್ಣಾ ಕೋಲ.
ಆ ಕುಬಸ ತೊಗೊಂಡಾರ ಮನಿಗಾರ ಬಂದಿದಾರ
ಸರದಾರ ಕುಬಸ ತುರುಕ್ಯಾರ (ಇಟ್ಟಾರು) ಕೋಲೆಣ್ಣಾ ಕೋಲ.
ಮೇಘರಾಜನ ಹೆಂಡರು ಏಳು ಮಂದಿ ಇದ್ದಿದಾರು
ಮನಿ ಮಾರಾ ಸಾರುಸ್ತಾರ ಕೋಲೆಣ್ಣಾ ಕೋಲ.
ಮನಿ ಮಾರಾ ಸಾರುಸ್ತಾರ ಖಂಬ ಭೋದ ತೂಳಿತಾರ
ಸರದಾನ ಕುಬಸ ತೆಗೆದಾರ ಕೋಲೆಣ್ಣಾ ಕೋಲ.
ಸರದಾನ ಕುಬಸ ತೆಗೆದಾರ ತೊಟ್ಟು ತೊಟ್ಟು
ನೋಡುತಾರ, ತೊಟ್ಟು ತೊಟ್ಟು ನೋಡುತಾರ ಕೋಲೆಣ್ಣಾ ಕೋಲ.
ಯಾರಂಡಿಗಿ ಹೊಲಸ್ಯಾರ ಶಿವನೆ, ಯಾ ಸೂಳಿಗೆ ಹೊಲಸ್ಯಾರ ಶಿವನೆ
ಸರದಾಗ ಕುಬಸ ತುರುಕ್ಯಾರ ಕೋಲೆಣ್ಣಾ ಕೋಲ.
ಮಾಯಾವಿಷಒರಸ್ಯಾರ ಕೋಲ.
ಮೇಘರಾಜನ ಮನಿದಾಗ ಮಾತಿಂದೊಂದು ಗಿಳಿಯಾದ
ಕೋಲೆಣ್ಣಾ ಕೋಲ.
ಎಲೆ ಎಲೆ ಗಿಳಿರಾಮ ಕುಬಸ ಒಯ್ದು ಕೊಟ್ಟೇ ಬಾರೋ
ಕೋಲೆಣ್ಣಾ ಕೋಲ.
ಆ ಕುಬಸ ತೊಗೊಂಡಾದ ಆಕೆಯ ಮನಿಗೆ
ಹೋಗಿದಾತ್ತು ಕೋಲೆಣ್ಣಾ ಕೋಲ.
ಎಂದಿಲ್ಲದ ಗಿಳಿರಾಮ ಇಂದ್ಯಾಕ ಬಂದಾರೆಂದು ಕುಂದ್ರಲ್ಹಾಕ್ಯಾರೆ
ಮಣಿ ಚೌಕಿ ಕೋಲೆಣ್ಣಾ ಕೋಲ.
ಕುಂಡ್ರಲಿ ಬಂದಿಲ್ಲ ನಿಂದ್ರಲಿ ನಾ ಬಂದಿಲ್ಲ ಕುಬಸ ಹೊಲಿದು
ಖಳವ್ಯಾರ ಕೋಲೆಣ್ಣಾ ಕೋಲ.
ಆ ಕುಬಸ ತೊಗೊಂಡಾಳ ತೊಟ್ಟು ತೊಟ್ಟು
ನೋಡುತಾಳ ಮೈಯ ಉರುಪ, ಕೈಯ ಉರುಪ ಕೋಲೆಣ್ಣಾ ಕೋಲ.
ಇಂತಹ ಕುಬಸ ಖಳಸಲಿಕ್ಕೆ ಅಂತಹುದೇನು ಮಾಡಿದ ನಾನು ಕುಬಸ ವಾಪೀಸು
ಖಳವ್ಯಾಳ ಕೋಲೆಣ್ಣಾ ಕೋಲ.
ಅಲ್ಲಿಂದ ಗಿಳಿರಾಮ ಮನಿಗಾದರ ಹೋಗಿದಾರೆ ಈ
ಕುಬಸ ತೊಟ್ಟನಂತರ ಮೈಯ ಉರುಪ ಕೈಯ ಉರುಪ
ವಾಪೀಸು ಖಳವ್ಯಾರೆ ಕೋಲೆಣ್ಣಾ ಕೋಲ.
ಮೇಘರಾಜನ ಹೆಂಡರು ಏಳುಮಂದಿ ಇದ್ದೀದಾರು
ಏಳುಮಂದಿ ಇದ್ದೀದಾರು ಕೋಲೆಣ್ಣಾ ಕೋಲ.
ಏಳುಮಂದಿ ಹೆಂಡರೀಗ ಏಳುಮಂದಿ ಅರಬ್ಬರು
ಮಳದಾಗ ಕಿಚ್ಚು ನೆರನಡಿರಿ, ಕೋಲೆಣ್ಣಾ ಕೋಲ.
ಏಳು ಮಂದಿ ಹೆಂಡರೀಗಿ ಏಳು ಮಂದಿ ಅರಬ್ಬರು
ಮಳದಾಗ ಒಯ್ದಿದಾರು ಕೋಲೆಣ್ಣಾ ಕೋಲ.
ಮಳದಾಗ ಒಯ್ದಿದಾರ ಕಿಚ್ಚಿನಾಗ ಹಾಕಿದಾರ
ಉರಿಯಾದರ ಹಚ್ಚಿದಾರ ಕೋಲೆಣ್ಣಾ ಕೋಲ.
ಊರನೇ ಹೊರಗೊಂದು ಹಾಳ ಹಣಮನ ಗುಡಿಯೆ
ಹಾಳ ಹಣುಮನ ಗುಡಿಯೇ ಕೋಲೆಣ್ಣಾ ಕೋಲ.
ಉಟ್ಟ ಧೋತರ ಕಳದಾರ ಸುಟ್ಟು ಬೂದಿ ಮಾಡಿದಾರ
ಮೈಯ ಬೂದಿ ಒರಸ್ಯಾರ ಕೋಲೆಣ್ಣಾ ಕೋಲ.
ಕೈಯ ಬೂದಿ ಒರಸ್ಯಾರ ಕೋಲೆಣ್ಣಾ ಕೋಲ.
ಬಲಗೈಯಲ್ಲಿ ಗುಡಗುಡಿ ಎಡಗೈಯಲ್ಲಿ ಹುಲಿ ಚರ್ಮ
ಬಾವನ ಸೊರಿಗೆ ಹಾಕಿದಾರೆ ಕೋಲೆಣ್ಣಾ ಕೋಲ.
ಬಾವನ ಸೋರಿಗೆ ಹಾಕಿದಾರ ಅಕಿನ ಮನಿಗ ಹೋಗಿದಾರ
ಅಲಕ್ಕಂತ ನಿಂತೀದಾರ ಕೋಲೆಣ್ಣಾ ಕೋಲ.
ದಾನರ ಹಿಡಿರಿ, ಜೋಗಿ ಧರ್ಮ ನಾದರ ಹಿಡಿರಿ
ಜೋಗಿ ಧರ್ಮ ನಾದರ ಹಿಡಿರಿ, ಜೋಗಿ ಕೋಲೆಣ್ಣಾ ಕೋಲ.
ದಾನರ ತೊಗೊಮ್ಮಲರು ನೆಲಕರ ನೋಡೆವಲ್ಲರು
ನೀ ನಡಿಯೆ ನಮ್ಮ ಸರಿ ಕೋಲೆಣ್ಣಾ ಕೋಲ.
ಸಣ್ಣ ತಮ್ಮನ ಬಿಟ್ಟು, ಮುದಕಿ ತಾಯಿನ
ಬಿಟ್ಟು ನಾ ಹ್ಯಾಂಗ ಬರಲಿ ಸ್ವಾಮಿ ಕೋಲೆಣ್ಣಾ ಕೋಲ.
ಸಣ್ಣ ತಮ್ಮನ ತೊಗೋ ಮುದುಕಿ ತಾಯಿನ ತೊಗೋ
ನೀ ನಡೆಯೆ ನನ್ನ ಸರಿ ಕೋಲೆಣ್ಣಾ ಕೋಲ.
ಅಲ್ಲಿಂದ ರಾಜನ ಮಗಳು ಮೇಘರಾಜನ ಮಾತಿಗೆ ಒಪ್ಪಿದಾಳು
ಹೂವಿನ ಥೇರು ಬಂದಿದಾತು ಕೋಲೆಣ್ಣಾ ಕೋಲ.
ಸಣ್ಣ ತಮ್ಮನು ಕುಂತ ಮುದಕಿ ತಾಯಿಯೂ
ಕುಂತಳು, ತಾನು ಮೇಘರಾಜ ಕುಂತೀದಾರ ಕೋಲೆಣ್ಣಾ ಕೋಲ.
ತಾನು ಮೇಘರಾಜ ಕುಂತಿದಾರು ಕೈಲಾಸಕ್ಕೆ
ಹೋಗಿದಾರು, ಕೈಲಾಸಕ್ಕೆ ಹೋಗಿದಾರು ಕೋಲೆಣ್ಣಾ ಕೋಲ.
* * *
an lz6��K P���nt-size:12.0pt;font-family:Tunga;mso-bidi-language:KN’>ಬಾಲಾ ಅವಹಾನೆ
ಎನ ಮಾಡಿ ಚಾಕರಿs ಗಳಿತಾನೆ ಕೋಲೆ ಎನ ಮಾಡಿ ಚಾಕರಿs ॥
ಕಾಮಣ್ಣ ಭೀಮಣ್ಣs ಜೋಡಿಲೆ ಗೆಳೆಯರೆ
ಪೂಜಾಕ ಹೂವಾs ತರುತಾರೆ ಕೋಲೆ ಪೂಜಾಕ ಹೂವs ॥
ಅವರ ಸರಿ ನನ್ನ ಬಾಲಾs ತರುತಾನರಿ ಕೋಲೆ
ಅವರ ಸರಿ ನನ್ನ ಬಾಲಾs ತರುತಾನರಿ ಕೋಲೆ
ಅದರಯಿತಂದs ಇಟ್ಟುಕೊಂಡುರೆ ಕೋಲೆ
ಅದರಾಯಿತೆಂದುs ಇಟ್ಟುಕೋಂಡುರೆ ಕೋಲೆ
ಹಾರೂರ ಅವದೆರೆs ಹಾರೂರ ಅಕ್ಕದೇರs
ನನ್ನಗ ಚಾಕರಿs ಇಟ್ಟುಕೋರಿ ಕೋಲೆ ನನ್ನಗ ಚಾಕರಿs ॥
ಅನುಲಾಯ ತಾರವತಿs ನೀ ಇದ್ದಿ ಸತಿವಂತಿ
ಎನ ಮಾಡಿ ಚಾಕರಿs ಗಳಿತೆವ್ವ ಕೋಲೆ ಎನ ಮಾಡಿ ಚಾಕರಿs ॥
ಹೇಳಿಂದು ಕೇಳತೆನರೀs ಮಾಡಂದಿದ ಮಾಡತೇನರಿ
ಗಂಗಾಳs ಥೆಮಗಿ ಬೆಳುಗುತೇನರಿ ಕೋಲೆ ಗಂಗಾಳs ಥೆಮಗಿ ॥
ಆದರಾಯಿತೆಂದುs ಇಟ್ಟುಕೊಂಡರು ಕೋಲೆ
ಆದರಾಯಿತೆಂದುs ಇಟ್ಟುಕೊಂಡರು ಕೋಲೆ
ಕಾಮಣ್ಣ ಭೀಮಣ್ಣs ಜೋಡಿಲೆ ಗೆಳೆಯರೆ
ಹೂವಾ ತರಲಾಕೆs ಹೋಗ್ಯಾರೆ ಕೋಲೆ ಹೂವಾ ತರಲಾಕೆs ॥
ಅವರ ಸರಿ ರೋಹಿದಾಸs ಹೋಗ್ಯಾರೆ ಕೋಲೆ
ಅವರ ಸರಿ ರೋಹಿದಾಸs ಹೋಗ್ಯಾರೆ ಕೋಲೆ
ಬಿಳಿಯಾನೆ ಹೂವುದಾಗs ಕೆಂಪುವನಾಗ್ಯಾದೆ
ಮಿಡಿ ನಾಗಣ್ಣಾಗಿs ಸವರ್ಯಾದೆ ಕೋಲೆ ಮಿಡಿ ನಾಗಣ್ಣಾಗಿs ॥
ಅನುಲಾಯ ತಾರವತೀs ಎದಿ ಬಾಯಿ ಗುದ್ದಿಕೋತೆ
ಭೂಮಿ ಸಾಲಲ್ದೇs ಹೊರುಳುತ ಕೋಲೆ ಭೂಮಿ ಸಾಲದ್ದೇ ॥
ಅತ್ತಾಳ ಕರದಾಳs ಝಟ್ಟಂತೆ ಎದ್ದಾಳ ಹೂವಿನ
ಬಾಗ ಸೈಯಿಗಿs ಹೋಗ್ಯಾಳೆ ಕೋಲೆ ಹೂವಿನ ಬಾಗ ಸೈಯಿಗಿs ॥
ರೊಹಿದಾಸಗ ತಕ್ಕೊಂಡುs ಕೊರಳಿಗಿ ಹಾಯಿಕೊಂಡು
ಅನುಗಾಲ ದುಃಖs ಮಾಡ್ಯಾಳೆ ಕೋಲೆ ಅನುಗಾಲ ದುಃಖs ॥
ಅತ್ತಾಳ ಕರದಾಳs ಝಟ್ಟಂತೆ ಎದ್ದಾಳ ಕಿಚ್ಚು ಕಟ್ಟಗಿ
ಅಕಿs ಗೊಳೆ ಮಾಡಿ ಕೋಲೆ ಕಿಚ್ಚು ಕಟ್ಟಗಿ ಅಕಿs ॥
ಕಿಚ್ಚ ಕಟ್ಟಿಗಿ ಗೊಳೆ ಮಾಡಿs ಎನಂತ ಕೇಳತಾಳ
ನನ್ನ ಬಾಲಾಗ ಕಿಚ್ಚುs ಕುಡತೇನ್ರಿ ಕೋಲೆ ॥ನನ್ನ ಬಾಲಾಗ ॥
ಕಿಚ್ಚರ ಕುಡಲಾಕs ರೊಕ್ಕ ಬೇಕಮ್ಮ ಮೂರ ಬಣ್ಣಿ ಕೊಕ್ಕs
ಕುಡೆ ಮೊದಲ ಕೋಲೆ ॥ಮೂರ ಬಣ್ಣಿ ರೊಕ್ಕ ॥
ರೊಕ್ಕಾರ ನಂಬಲ್ಲಿಲ್ಲs ರೂಪಾಯಿ ನಂಬಲ್ಲಿಲ್ಲ
ಹರಿಚಂದ್ರನ ತಾಳಿs ಹಿಡಿರೆಂದ ಕೋಲೆ ಹರಿಚಂದ್ರನ ತಾಳೀs ॥
ಹರಿಚಂದ್ರ ರಾಜೇರುs ಖೂನಾರ ಹಿಡುದಾರ ಕೊರಳಿಗೆ
ಹಾಯಿಕೊಂಡೆs ಅಳುತಾರ ಕೋಲೆ ಕೊರಳಿಗೆ ಹಾಯಿಕೊಂಡೆs ॥
ಅತ್ತಾರ ಕರದಾರs ಕಿಚ್ಚು ಕಟ್ಟಿಗಿ, ಗ್ವಾಳೆ ಮಾಡಿಹ್ವಾಮರ
ಬೆಂಕಿ ಹಚ್ಚ್ಯಾರ ಕೋಲೆ ಹ್ವಾಮಾರ ಬೆಂಕಿs ॥
ಹ್ವಾಮರ ಎಲೆ ಬೆಂಕಿs ಹಚ್ಚಿನೆ ಅನುತಾರ ಇದರಾಗ
ನಾವುs ಛಿಡಿಯಾರ ಕೋಲೆ ಇದರಾಗ ನಾವುs ॥
ವಿಠಲದಾಸ ಗುರುs ವಿಶ್ವಾಮಿತ್ರಮುನಿ ಬಂದುs ಎನಬೇಡತಿ
ಬೇಡೊ ಭಗತ ಕೋಲೆ ಎನ ಬೇಡತಿs ಬೇಡೋ ॥
ನಿಮ್ಮಂತಹ ಗುರು ಇರಲಿs ನನ್ನಂತ ಶಿಷ್ಯ ಇರಲಿs
ಕಾಡಸಾ ಗುರುs ಕಡೆಗಿರಲಿ ಕೋಲೆ ಕಾಡಸಾ ಗುರುs ॥
ರೋಹಿದಾಸ ಬಾಲಾಗs ಅಮರುತ ಹಾಕ್ಯಾರೆ
ಶಿವ ಶಿವನಂತೆs ಎದ್ದಾನ ಕೋಲೆ ಶಿವ ಶಿವನಂತೆs ॥
ಹರಿಚಂದ್ರ ರಾಜೇರುs ಅನುಲಾಯ ತಾರಾವತೀ ರೋಹಿದಾಸ
ಬಾಲಾಗs ಕರಕೊಂಡು ಕೋಲೆ ರೋಹಿದಾಸ ಬಾಲಾಗs ॥
ರೋಹಿದಾಸ ಬಾಲಾಗ ಕರಕೊಂಡು ಹೋಗ್ಯಾರೇ
ತಮ್ಮ ಮಹಲಿಗಿs ನಡದಾರೆ ಕೋಲೆ ತಮ್ಮ ಮಹಲಿಗಿs ॥
ರಾಜ ಮಹಲಿಗೀs ರಾಜರು ಹೋಗ್ಯಾರ
ಇಲ್ಲಿಗೀs ಸರಿತs ಅವರ ಕಥಿ ಕೋಲೆ ಇಲ್ಲಿಗೀ ಸರಿತs ॥
* * *
Leave A Comment