19
ಚಾಲ॥
ಬಂದ ಹೊಕ್ಕಳ ಮನಿಯ ಚಂದ ಮಂಚದ ಮ್ಯಾಲೆ
ಗಂಧ ಕಸ್ತೂರಿ ತಾಂಬೂಲ
ಪಟ್ಟೆ ಮಂಚದ ಮ್ಯಾಲೆ ಅಷ್ಟಗಂಧ ಉತ್ಕೃಷ್ಟವಾದ
ತಾಂಬೂಲ ಕೊಟ್ಟಾಳ ಶ್ರೇಷ್ಠ ಗೆಳೆಯಾಗ
ಮುಟ್ಟಿದ ಕುಚ ಬಿಟ್ಟ ಅಮಕಿ
ಏರಿ ಮನ್ಮಥ ಮಹಾ ಜ್ವಾಲಾ
ಇಬ್ಬರ ಸುರತ ಕ್ರೀಡಾ ಮೇಲ್ಮೆಲಾ
ಭೃಂಗ ಕುಂತಳಿ ಅಂಗ ಶೃಂಗಾರ ರಂಗಬಾಣಗಳ ತಲಾ
ಮನ್ಮಥ ಹೇಂಗ ಮಾಡೋದು ಪ್ರಬಲ
ನಡಸ್ಯಾರ ಅಂಗಜಾರ ನಾಟಕಾ ಕಬರಿಲ್ಲಾ ನಗನಗತ
ತೆಕ್ಕೆ ಹಾಯುವಳಲ್ಲಾ ಉಮೇದ ಉಕ್ಕುತೈತಿ ಅಳತಿಲ್ಲ ॥
ಏರ॥
ಗಂಧ ಕಸ್ತೂರಿ ಗೆಳೆಯನಿಗೆ
ತಂದ ಸಲಿಸಿದಳು ಪ್ರೀತಯಲಿ ॥
20
ಚಾಲ॥
ಪ್ರೀತಿ ಗೆಳೆಯನೆ ನಿನ್ನ ಆಸೆ ತೀರಿಸಿಕೊಳ್ಳು
ಸುರತ ಸುಖದಲ್ಲಿ ಸೂರ್ಯಾಡೋ
ಹೊರಸಿನ ಮ್ಯಾಲ ಸರ ಸರದಾಡಿ ಬಿರುಸು ಬಾಣ ಹಚ್ಚಿದಂಗ
ನಿರಸ ಮಾಡಿ ಹೊಡಿತಾನ ಏನ ಕಾಸಾ
ಎನ್ನರಸ ಬಿಡೋ ಶಾಂತಿ ಆದೀತೋ ಮನಸಾ
ಗಂಧದೆಣ್ಣಿ ಸುವಾಸ ವರಸತಾಳ ಊದದೆಣ್ಣಿ ಒಂದು ತುಸಾ
ತೊರದ ಎಮ್ಮಿ ಹಿಂಡಿದಂಗ ನೆರೆದ ಹೆಣ್ಣ ದೊರೆತನ
ನಿನಗ ಕರದ ಕರಚಿಕಾಯಿ ಉಂಡಂಗ ಜೀನಸಾ
ನೀರ ಎರದ ಮಲಗಿಸಿದಂಗ ಹಸಗೂಸಾ
ನನ್ನ ಜರದ ಸೀರಿಯೆಲ್ಲಾ ತೋದ ಆತ ಹೊಲಸಾ
ಹಿಂದ ಕೆಂಚನಾಯ್ಕ ಕವಿಯ ಕಳಸಾ ॥
ಏರ॥
ಸುರತ ಸುಖದಲ್ಲಿ ಸುರ್ಯಾಡೋ ಗೆಣಿಯಾ
ಬೆರತೇನೋ ಮನಿಯ ಮರತೇನೋ ॥
21
ಚಾಲ॥ ಮರತರೇನಾಯಿತು ಗುರತ ಇರಬೇಕಾಜಾಣಿ
ವ್ಯರ್ಥ ಈ ಬಾಳೆ ಸಂಸಾರ
ಬೆಳಕಾಯಿತು ಜಾಣ ಕೋಳಿ ಕೂಗತಾವ ದನಿ ಕೇಳತಾವ
ಗಾಳಿ ಕಿಡಕಿಯೊಳಗ ಸುನಾದಾ ವೃಕ್ಷದಲಿ ಕೇಳತಾವ
ಅಳಿ ಗಿಳಿ ಶಬ್ದ ನಾಗವೇಣಿ ವೇಳೆ ಆತ ಹೋಗ ನಿಮ್ಮನಿಗಿ
ಇನ್ನು ಬೇಗ ಹೇಳುವೆನ ಮಮತದಿಂದ
ಇರಬಾರದೀ ಜಾಗಾದಾಗ ಬರುವದಪವಾದ
ಜಾಣಿ ಕೇಳ ನನ್ನ ಮಾತ ಓಣ್ಯಾಗ ಮಂದಿ ನೋಡಿಗೀಡ್ಯಾರ
ಕಾಣಾ ಕಾಣಾಧಂಗ ತಲೆ ಶೋಧಾ ॥
ಏರ॥
ಮುಚ್ಚಕ್ಕಿ ಹಂಗ ನಾವು ಇರಬೇಕ
ಆದರದ ವ್ಯರ್ಥ ಈ ಬಾಳ್ವೆ ಸಂಸಾರ ನನ ಗೆಣತಿ
ತುರ್ತು ಹೋಗ ವೇಳೆ ಆಗೇತಿ
22
ಚಾಲ॥ ಆಗೋದಾಗಲಿ ಗೆಳೆಯಾ ಹೋಗಲಾರೆನು
ನಾನು ಭೋಗ ಮಂದಿರವನು ಬಿಡಲಾರೆನು
ಕ್ರೀಡಾ ಆಗಿಲ್ಲ ನನಗ ಬೆಸರಾ
ಇನ್ನೂ ಕಾಮತ್ವ ಏರಿ ಇಳದಿಲ್ಲ
ನಿನ್ನ ಮ್ಯಾಲೆ ನನ್ನ ಹಂಬಲ ಸಮರಸವಾತ ಮನ್ಮಥನ ಅಮಲ
ಹೆಂಗ ಹೋಗಲಿ ಗೆಣೆಯಾ ಅಂಗಜನಾಟಕ ಸಾಕಿಲ್ಲಾ
ಆಟ ಸಾಕಿಲ್ಲಾ ನಿನ್ನ ಮ್ಯಾಲೆ ಐತೆ ನನ ಧ್ಯಾಸಾ ಮಾಡೋ
ವಿಲಾಸ ಇನ್ನೊಮ್ಮೆ ಗುರಿ ಹೂಡೋ ಗುರಿ ಹುಡೋ ॥
ಎಲ್ಲಿ ಕಲತೆ ಬಂಗಾರ ಪುತ್ಥಳಿ
ಪರಿಪರಿ ಭೋಗದ ಅರಗಿಳಿ
ನಿನ್ನಂಥ ಪ್ರಿಯ ಎಂದೆಂದೂ ಹುಟ್ಟಾಕಿಲ್ಲೊ ಗೆಣೆಯಾ
ಧರಿಮ್ಯಾಗ ಬ್ರಹ್ಮ ಬರಿ ನಮ ನಿಮಗ ಸಕ್ರಿ
ಹಣ್ಣು ಹಾಲು ಕೂಡಿದಂಗ ನಿನ್ನನಗಲಿ ನಾನೀ ಕ್ಷಣದಲಿ ಮನಿಗಿ ಹೋಗಲೆಂಗ ॥
ಏರ॥
ಭೋಗ ಮಂದಿರವನು ಬಿಡಲಾರೆ
ಹೇ ಪ್ರಿಯಾ ಸಾಗವಲ್ಲದು ದಾರಿ ನನಗ ॥
23
ಚಾಲ॥
ದಾರಿ ಹಿಡಿ ನನ ಕಾಂತಿ ನೆರೆ ಹೊರೆಯ ನೋಡ್ಯಾರ
ಆರೇರ ಈರಿ ಬಲು ಕೆಡಕಿ
ಹಾದರ ಮಾಡುವ ಚದುರಿಯರೊಳಗ
ಅದರಿಂದ ಆ ಈರಿ ಬಲ್ಲಾಕ್ಕಿ
ಮಧುರ ಮಾತಾಡುವ ನಿವುಳ ಹೆಂಗಸರೊಳಗ
ಭಾಳ ಬೆರಿಕಿ ಇಲ್ಲಿ ಅಂಥವಳು ಸ್ವಲ್ಪ ನೋಡಿದರ
ಬಾಜಾರ ಮಾಡ್ಯಾಳ ಅಲ್ಪ ಬುದ್ಧಿ ರಂಡಿ
ಹಂಚಿಕೆ ಕಲ್ಪಿಸಿ ತಗದ ಹಾಕೋಳ ಗೋಳಾ
ನೀ ದಾಟಿ ಹೋಗ ಬೆಳಕಾಗಿ ಹರದೀತ ಕತ್ತಲ ಕಾಳಾ ॥
ಎಷ್ಟು ಹೇಳಿದರೇನ ಇಲ್ಲೆ ಗಟ್ಟಿಯಾಗಿ ಕುಂತಿಯ ನಾರಿ
ಬಿಟ್ಟ ಹೋಗ ಮನಿಮಾರಾ
ಅದಾವ ಹಾಳು ನಿಮ್ಮವರು ಕೇಳಿ ಕೆಟ್ಟ ಮಾಡ್ಯಾರ
ನಮ್ಮ ವ್ಯಾಪಾರ ॥
ಏರ॥
ಆ ಕೇರೀಲಿ ಬಲು ಕೆಡಕಿ ಹಾಳ
ಅವಳಿಗಿ ಮಾರಿ ತಪ್ಪಿಸಿ ಮನಿಗೋಗ ॥
24
ಚಾಲ॥
ಹೋಗತೇಮ ಸುಖಜಾಣಾ
ದಾಗ ಹತ್ತದಂಗ ಮ್ಯಾಗ ಮ್ಯಾಗ ಬಾರೋ ನಮ್ಮನಿಗೆ
ರಂಭಿ ಪುತ್ಥಳಿ ಗೊಂಬೆ ಬಾರೆ ಮುಖವು ತೋರೆ
ಹೆ ರಂಗಾ ಬಾರೊ ಅಂಗ ಸಂಗ ಮುಖವ ತೋರೋ ॥
ಧಂಗ ಬಡದೇನ ಭೃಂಗ ಕುಂತಳಿ
ತುಂಗ ತುಟಿಗಳ ಹೀರೋ ಅಂಗಸಂಗದ ಮುಖವ ತೋರೋ ॥
ಬೇಸರಿಲ್ಲದ ಗಾಸಿ ಮಾಡೋ ಎನ್ನೊಡನೆ ಬಾಳೋ
ಸಾಸ ಮಾಡಿ ಬಂದ ಕೂಡೋ ॥
ಬಲು ಮೋಸವಾದೇನು ಕಾಸ ಮನ್ಮಥನಾಟ ಆಡೋ
ವರ ರತಿಯ ಕೊಡೋ
ಏಸು ಕಾಲಕೆ ಸಂಶಯವಿಲ್ಲ ಈ ಸತೀಯಳ ಸೇರೋ
ಅಂಗಸಂಗದ ಮುಖವ ತೋರೋ
ದುರುಳ ಕಾಮನ ಸರಳ ಹಗಲೆಲ್ಲಾ
ಇನ್ನಿರುಳು ಹಗಲಿ ಬಳಲತೈತಿ ಜಲ್ಮ ॥
ನಾ ಮರುಳ ಗೊಂಡೇನು
ಕರುಳು ನಿನಗ ಸ್ವಲ್ಪಾದರೂ ಇಲ್ಲಾ ಮನ್ಮಥ ಲೀಲಾ ॥
ಹರಳ ಮುತ್ತಿನ ಹಾರದಂತೇರು ॥
ಕೊರಳ ಮುಟ್ಟಿ ಸವಿದೋರೋ
ಎಂದ ಮಾಡುವೆ ದುಂದ ಪ್ರೇಮಾ
ಶ್ರೀ ಚಂದ್ರರಾಮ ಇಂದ್ರನಂಥಾ ಹೋಳಿ ಕಾಮಾ ॥
ಸುಂದರ ಇಂಚಲ ತಂದಿ ಬಂಕೇಶನಿಂದ ಈ ಜಲ್ಮ ॥
ಏರ॥
ಮಾಡಿದ ಕ್ಷೇಮ ದ್ವಂದ್ವ ಚರಣಕ್ಕಂತ ಎರಗಿ ಮುಂದೆ ಭವಿ ಬೇಡ
ಬಾರೋ ಅಂಗಸಂಗವ ಮುಖವ ತೋರೋ ॥
25
ಚಾಲ॥
ಜಾಣೆ ಕೇಳೆನ್ನ ಮಾತ ಮಣಿಯಂತವಳೆ
ಥಾಣದೀವಿಗೆಯ ಪರಿಯಂತೆ
ಸುಂದರಿ ಕೇಳೆನ್ನ ಮಾತ ಮಂದಿರಕೆ ನೀ ಬರಬೇಡ
ಬಂದ್ರ ಮಾತನಾಡಿ ಕೆಡಬೇಡ
ಆಗಸುಳ್ಳೆ ಪಂದ್ರಾ ಸುತ್ತ ಸುಳ್ಳ ಹೇಳ ಬ್ಯಾಡಾ ॥
ಕೇಳೆ ಎನ್ನ ಮಾತ ನಿನ್ನ ಬಾಳೇಕ್ಹಚ್ಚೇನ
ಆಗೋದಾತು ಸುಳ್ಳ ಬಾಯೊಳಗ ಬೇಯ ಬ್ಯಾಡಾ ॥
ಏರ॥
ನೆರಿಹೊರಿಗೆ ನನ್ನ ಬಾಳೆ ಮಾಡಿ ಸಂಗ ಬಿಟ್ಟ ಬಿಡ
ಒಲ್ಲೆನೆಂದ್ರ ಜುಲುಮಿಯಿಂದ ಅಲ್ಲದ್ದ ಮಾತಾಡಬ್ಯಾಡ
ಸಲ್ಲದ್ದನ್ನು ತಿಳದ ಒಳಗ ನೋಡ ಇಂಥಾದಕ
ಹಲ್ಲ ಮುರಿಸಿ ಕೊಂಡೀಯ ಆದೀಯ ಕೇಡ
ಠಾಣ ದೀವಿಗೆಯ ಪರಿಯಂತೆ ಹಾದರಕ ॥
26
ಚಾಲ॥
ಶಾಣೇರು ಪಾರಾಗುವರು ಪಾರಾಗಿ ಹೋದಾನೋ
ಪರ ನಾರಿಯ ಸಲುವಾಗಿ ಪಾರಗಂಡನೋ ಅನಿರುದ್ಧ
ಒಲ್ಲೆನೆನುವ ರೋ ನಲ್ಲ
ವಲ್ಲಭಿಗೆ ಆಗಿಸಲ್ಲ ಒಲ್ಲೆನೆನುವರೋ ನಲ್ಲ
ಯಾರ್ಯಾರು ಮನಿಯಾಗಿಲ್ಲ ಒಲ್ಲೆನೆನುವರೋ ನಲ್ಲ
ಅಂಗಜನಾಟಾರಂಗಜನಾಗಿ
ಕೂಟಶರಗ ಇರೋಲ್ಲ ಇಲ್ಲೆನೆನುವರೋ ನಲ್ಲ
ನಾರೇರ ತಾಪ ಪುರುಷರಿಗೋಪ ಬಾರೆ
ಬಾರಿಗೇನಕಲಾ ಒಲವಿಗಾಗಿ ಸಲ್ಲ ಒಲ್ಲೆನೆನುವರೋ ನಲ್ಲ
ಏರ॥
ಬಡಸದ ಗ್ರಾಮ ಒಡಿಯ ನಮ್ಮ ಕಲ್ಮೇಶ
ಆಡಿ ಆಣಿ ಕೊಟ್ಟಿದ್ದೆಲ್ಲ ಒಲ್ಲೆನೆನುವರೋ ನಲ್ಲ ॥
27
ಏರ॥
ಪಾರಾಗಿ ಹೋದ ಅನಿರುದ್ಧ
ಭೇತ ತಗದ ಯಾರಾದರೂ ಹೇಳುವರು ॥
28
ಚಾಲ॥
ಯಾರ ಗೊಡವಿ ನನಗ ತೋರಬ್ಯಾಡೆಲೆಗ
ಯರೆಂದರೆ ಮಡಿಯನ್ನೊನೆ ನಲ್ಲ
ಚಂದ್ರಮುಖಿ ಸಾಕ ಇನ್ನು ಚಂದ ಮಂದಿ ನೋಡ್ಯಾರಂತೇನ
ತೊಂದರಿ ಬ್ಯಾಡ ನಮ ನಿಮಗ ಹಗಲೆಲ್ಲಾ
ನೀ ಬಂದ್ರ ಅಗದಿ ನನ್ನ ಜೀವ ಸರೇ ನಿಲ್ಲಾ
ಹಾಳ ಮಂದಿರದಾಗ ಬಿದಂಗ ಆಗೇದ ಸಕಲ
26
ಚಾಲ॥
ಹೇ ಸಖಿ ಕೇಳ ನಿನ್ನ ಕಕ್ಕಸ ಕುಚಗಳನ್ನು
ತಿಕ್ಕಿ ತೀಡಿ ಹಿಚಕುವೆ
ಅಕ್ಕರತೇಲೆ ಮಾಡುವೆ ಕದ್ದ ಕದ್ದ ಇದ್ರು
ಹೇಸಿ ಸುದ್ದಿ ಹಾದರ ಹೋಗೋದ ಮಾನಾ
ಬದ್ದು ಆದೀ ತಂತ ಹೇಳತೇನ ನಾನಾ
ಇದ್ದ ಕಷ್ಟ ಇರಬೇಕ ಸಮಾಧಾನಾ
ನಾರಿ ನಿನ್ನ ಮಾರಿ ನೋಡಿ ಧೀರ ಹೊತ್ತಗಳದೇನ
ಸಾಕು ಕುಚಗಳನು ಎತ್ತಿ ಹಿಡಿಯುವೆನೊತ್ತೊತ್ತಿ
ವೈಯಾರಿ ನಿನಮ್ಯಾಗ ಭಾಳ ನನ್ನ ಪ್ರೀತಿ
ಹೇ ವಾರಿಜಾಕ್ಷಿ ಮಂದಿ ನೋಡ್ಯಾರಂತು
ಮಳ್ಳಿ ಸುಮ್ಮನಿರ ಮನ್ಯಾಗ ॥
ಏರ॥
ಒಮ್ಮೆ ಆದದ್ದಾಗಿ ಹೋಗಿ ಕಮ್ಮಗಿರು ಮನಿಯ ಒಳಗ
ಕಾಂತಿ ನೀ ನೇಮ ಮಾಡಿಕೊಂತಿ ಇರಬ್ಯಾಡ ಚಿಂತಿ
ಮರೀ ಅಂದರ ಮರಿ ಒಲ್ಲೇನ
ನಿನ್ನ ಸಂಗ ಯಾಕ ಮಾಡೇನ ದುಗ್ಗಾಣಿ ॥
30
ಚಾಲ॥
ದುಗ್ಗಾಣಿ ಅನಬ್ಯಾಡೋ ಹಿಗ್ಗುವೆನು
ಮಲ್ಲಿಗೆಯ ಮಗ್ಗಿಯಂಥವನೇ ಮುಖ ತೋರೋ
ಬಗರಿ ಮಗ್ಗಿ ಮಲಿ ನಿಗರಿ ಹೂವ ಬಾಡತಾವ
ಉಗರ ಊರಿ ನೋಡ್ರಿ ಮನ್ಮಥ ಹಗರ ಮಾಡೋ ನನ್ನ ದೊರಿ ॥
ಧರಿಸುವೆ ಅಗರ ಗಂಧ ಕಸ್ತೂರಿ
ಚಿಗರ್ದುಟಿ ಚುಂಬನ ಹೀರಿ
ಅದರ ಒಗರ ತಕ್ಕೊ ಕಾಮನ್ಯಾಪಾರಿ ॥
ಕೊಕ್ಕರ ಮೀಸಿಒಳಗ ನಕ್ಕರ ನನಗ
ಅಕ್ಕರತಿ ಬರೋದ ನನಗ ಉಮೇದವಾರಿ
ಹಾಲು ಸಕ್ಕರಿಯಂಥಾ ಹಾದರ ಸೌತಿ
ಬಕ್ಕಳ ಹರೇ ಮಾಡೋ ಸೂರಿ
ತೆಕ್ಕಿ ಮುಕ್ಕಿ ಹಾದ ತಕ್ಕೋರಿ ಹಕ್ಕಿಯಂಗ ಆಗಿ ಇರೂನ ಇಬ್ರುಸರಿ ॥
ಏರ॥
ಮಗ್ಗಿಯಂಥವನೇ ಮುಖದೋರೋ
ನಾ ನಿನ್ನ ಮಗ್ಗುಲಕ ಒಪ್ಪು ಸಖೀಯಳೊ ॥
31
ಚಾಲ॥
ಸತಿಯರ ಸಲುವಾಗಿ ಗತಿಗೆಟ್ಟ ಬಹು ಜನರು
ಮತಿಮಾನ್ಯರೊಳಗ ಯಜಮಾನ
ಮಾನಿನಿ ನಾ ಒಲ್ಲೆನ ನೀನ ಕೂಡ ಪ್ರಾಣವನು
ಕೊಡಲಾರೆನ ಮೀನಾಕ್ಷಿ ನಿನ ಗಂಡ
ಜ್ಞಾನವಂತನ ಕೂಡ ನೀನೇ ಬಾಳೇವ ಮಾಡ
ಹಂಬಲ ರಂಡಿ ಒಲ್ಲೇನ
ನೀ ನನ್ನ ಮುಂದ ಜಂಬ ಮಾಡತೀ ಹಂಬಲ ಇಟ್ಟ
ನನ್ನ ದುಂಬಾಲ ಬೀಳ ಬ್ಯಾಡಾ
ಹಂಬ್ಲಾಗಿ ದೂರ ಹೋದೇನ ಕೂನ ಇಲ್ಲದಂಗ ಇರ ಒಳಗ
ತಿಳಿದ ನೋಡ ಕೂನ ಹಿಡದರ ನಮ್ಮ ಮಾನಾ ಸಖಿಯೆ
ಹಾನಿಯೆ ಬಂದು ತಟ್ಟುವದು
ಹೆಣ್ಣಿನ ಮೋಹ ಸುಡಲೆ ಬಣ್ಣಕ್ಕಾಗಿ ಕಣ್ಣ ಬಿತ್ತ
ಹೆಣ್ಣ ನೀ ನನ್ನ ಮ್ಯಾಗ ಕಣ್ಣ ಇಡಬ್ಯಾಡ
ಸರಿಮಣ್ಣಗೂಡಿಸಿ ಬಿಟ್ಟೆನಂತಲೇ ॥
ಏರ॥
ಮಾನ್ಯರೊಳಗ ಯಜಮಾನ
ಮನ್ಮಥನಾದ ಹೊಲೆಯರ ಮನಿಯೊಳಗ
32
ಚಾಲ॥
ಹೊಲಿಯ ಕಾಮನು ನನಗ ಬಲಿಯ ಹಾಕಿದನು ಜಾಣ
ತಲಿ ನೆಲ ತೊಡೆಗಾಗಿ ಪುಂಡ ನೀನು ಬಂಧನ ಸುಟ್ಟು
ಉಂಡೆನಂದ್ರ ಹಸಿವಿಲ್ಲ ಗಂಡ ನನ್ನ ಕೂಡ ಜಗಳ ಹಗಲೆಲ್ಲಾ
ಸ್ವಲ್ಪ ಉಂಡೇನೆಂದ್ರ ಬಳಗ ಬರಗೊಡವೊಲ್ಲಾ
ಹರಲಿ ಮಾಡಿದೊ ನನ್ನ ಹೊಲಸ ಮಾಡಿದೊ ಇನ್ನ
ಯಾವಲ್ಲಿರಲಿ ನಗಿಗೇಡಾಗೋ ಹೊತ್ತ ಬಂತೊ ಇಂಥಾ ಕಾಲಾ ॥
ಏರ॥
ನಿನ್ನ ಅಂತ ತಿಳಿಯವಲ್ಲದೊ
ಹಾಕಿದಿ ಗಾಲಾ ಕರಿನೆಲ ತೋರಿ ಕಡಿಗಾದೆ ನೀ ಇಂದ
ಅಲಬತ್ತ ಬಾರೋ ಕೈ ಮುಗಿವೆ ॥
33
ಚಾಲ॥
ಕೈಯ ಮುಗಿಯಲಿ ಬ್ಯಾಡ ನ್ಯಾಯಮಾಡಲಿ ಬ್ಯಾಡಾ
ಬಾಯಿ ತೆರೆದೆನ್ನ ಕರಿಬ್ಯಾಡಾ
ಒಳ್ಳೆ ಮಾತಿಲಿ ಕೇಳವಳಲ್ಲ
ತಳ್ಳಿ ಮಾಡಿ ನಿನ್ನ ಮ್ಯಾಲ ಮುಳ್ಳ ಹಾಕಬೇಕ ಬಾಳ ದಂದಲ
ಹಂಗಾದರ ನೀನೊಬ್ಳೆ ಹೋಗತಿ ಮತ್ತು ಕರಿಯವನಲ್ಲಾ
ಹಿತವಿಲ್ಲದ ಮಾನಿನಿ ನೀನು
ಗತಿಯೆಂದು ಕುಂದ್ರ ಬ್ಯಾಡಾ
ಮರಿಗೇಡಿ ಮರುಳನ್ನತಾರಾ ॥
ಏರ॥
ಹೆಣ್ಣಿಗಾಗಿ ಕ್ಷತಿ ಮ್ಯಾಲೆ ಕೆಟ್ಟಾರ ಎಂಥೆಂಥವರಾ
ಬಾಯಿ ತೆರೆದೆನ್ನ ಕರೀ ಬ್ಯಾಡಾ
ಬರಲಾರೆ ಬಾಲಿ ಉಡಿಯ ಒಡ್ಡ ಬ್ಯಾಡಾ ॥
34
ಚಾಲ॥
ಕರದ ಬ್ಯಾಸತ್ತೇನು ಮರ್ಯಾದೆ ಕಳಕೊಂಡೇನು
ಮರಮರಾ ಮರುಗಿ ಬಳಲುವೇನು
ಪುಂಡ ನಿನ್ನ ಸಂಶೆ ಮಂದಿ ಕಂಡಂಗ ಮಾತಾಡತಾರ
ಗಂಡನ ಮ್ಯಾಲ ಇಲ್ಲೊ ನನ ಧ್ಯಾಸಾ
ಇಳಸೋ ಕಾಮದಂಡ ಕುಚಾ ಹಿಚಕಿ ರಂಗರಸಾ
ಧೀರ ನಿನ್ನ ಸುರತ ಮಾರಿ ನೋಡಿದರ ಎನಗ
ನ್ಯಾರಿ ಮಾಡಿದಂಗ ಆತಿ ಹರುಷಾ
ಪ್ರಿಯ ನಿನ್ನ ಮ್ಯಾಲ ನನ್ನ ಉಲ್ಲಾಸಾ
ಒಲ್ಲೆನೆನ್ನುವ ಕಾರಣವೇನು
ಕಲ್ಲುಸಕ್ರಿಯಂಥಾ ಪ್ರಿಯಾ ನಿಲ್ಲ ಹೋಗಬ್ಯಾಡೋ ರಾಜಹಂಸ
ನಿನ್ನ ಮ್ಯಾಲಿನ ಪ್ರೀತಿ ಮಲ್ಲಿಗೆ ಹೂವಿನಂತೆ ಸುವಾಸಾ ॥
ಏರ॥
ಮರ ಮರ ಮರಗಿ ಬಳಲುವೆನು ನನ ಗೆಳೆಯಾ
ವರ ಪುರುಷ ಒಲ್ಲೆನೆನಬ್ಯಾಡೋ ॥
35
ಚಾಲ॥
ಒಲ್ಲಾಳಿ ಸಲುವಾಗಿ ಊರ ಕೆಟ್ಟೆತ ಕೇಳ
ವಿಜಯಭೂಪ ಅಲ್ಲಿ ಮಡದಾನ
ಅಗ್ಗದ ರಂಡೆ ಮನಿಗೆ ಹೋಗ ಮಗ್ಗಲ ಎಲವ ಮುರಿಸಿಕೊಂಡಿ
ಜಗ್ಗ ಬ್ಯಾಡಾ ಹಿಡದ ಧೋತರ ಪದರ
ಅಗದಿ ನೀಗವಲ್ಯಾದಂತೆ ಬಿಟ್ಟ ವಿಚಾರಾ
ಅಲ್ಲ ಲಗ್ಗ ಹೋಗ ಬೇದಾರ ನಿಮ್ಮವರ
ಕದನಗಡಕಿ ಕೇಳ ನಿನ್ನ ವದನ ಯಾರ ನೋಡಬೇಕ
ಹದ ಬಂದಲ್ಲೆ ಅನಿವಾರ್ಯ ನಿನಗ ಅದ ಆದಮೇಲೆ
ಮದ ಬಂದಲ್ಲೆ ಕರದರ ಅದನ ಇಳಸವರ್ಯಾರಾ ॥
ಏರ॥
ವಿಜಯ ಭೂಪ ಅಲ್ಲಿ ಮಾಡದಾನ
ನನ ಕೂಡ ಗೋಜಗಟ್ಟಿ ಬ್ಯಾಡ ಮನಿಗ್ಹೋಗ ॥
36
ಚಾಲ॥
ಮನಿ ಮಾರ ಮರತೇನ ವಿನಯ ನಿನ ಸಲುವಾಗಿ
ಘನ ರೋಷದಿಂದ ಬಯ್ಯುವರೇ
ಸುಂದರ ನಿನ್ನ ಸಲುವಾಗಿ ಮಂದಿರದಿ ನಾ ಪೋಗಿ
ತೊಂದ್ರಿ ಒಡಲೊಳಗ ಪಂದ್ರಾ ದಿವಸಾತ ತಿರಗಿ
ನಾ ಬಂದ್ರ ನೋಡವಲ್ಲಿ ಇಂದ್ರಲೋಕದ ರಂಭಾ ನನ ರೂಪ
ಪ್ರಿಯ ಎಂದೆಂದೂ ಬ್ಯಾಡೋ ರೋಷಾ
ಆಣಿ ಭಾಷೆಯ ಕೊಟ್ಟು ಜಾಣೀನ ಕೈಬಿಟ್ಟೆ
ಜಾಣ ಅದಂಬರಿ ಕಟ್ಟಿ ಪ್ರಾಣ ಮಾಡಿದ ಲೂಟಿ
ನಾನು ಮನಗೇಡಾದೇನು ಜಾಣ ಶೇಖರ ಬಲ್ಲ
ಮಾನಿನಿಯ ಹಾಸ್ಯ ಮಾಡಿ ಬಾರೋ ಸಾನಂದದೋಡಿ
ಮುನ್ನೋಡಿ ಬಾರ ಪ್ರಾಯದ ನಾರಿ
ಚಾರು ಮನ್ಮಥ ವೈರಿ ಪೂರಾ ಆದಾನ ಬರ್ರಿ
ವಾರಿಜಾಕ್ಷಾರಿಯ ಮಾರಿ ನೋಡು ಆರಿಗರಿಯುವೆ ನಾನು
ದೂರ ನೋಡಲು ಬ್ಯಾಡಾ ಕಾರಣ ಕರ್ತ ಬಾರೋ
ಶರಧಿ ವಾಣಿಜೋಧ್ಬವನ ನೀ ತೋರೋ
Leave A Comment