1. ವಾಡಿಕೆ ಹಾಡುಗಳು

 

ಶೀಗಮ್ಮನಿಗೆ ಆಮಂತ್ರಣ

ಕುತನಿಧsರಿ ಕುಬ್ಬಸ ತೊಟ್ಟು ಕುಕಮಬಟ್ಟು ಹಣಿಮ್ಯಾಲಿಟ್ಟು
ಕುತನಿಧsರಿ ಕುಬ್ಬಸ ತೊಟ್ಟು ಕುಕಮಬsಟ್ಟು ಹಣಿಮ್ಯಾಲಿಟ್ಟು
ವಾಲಿಕsಪ್ಪು ಕಿವಿದಲಿಟ್ಟು ಒಲಪೆದಿಂದೆ ಕರಿಯಬಂದ
ಮನಿಗಿ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ
ವಾಲಿಕsಪ್ಪು ಕಿವಿದಲಿಟ್ಟು ಒಲಪೆದಿಂದೆ ಕರಿಯಬಂದ
ಮನಿಗಿ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ

ಕೆತ್ತಿದ ಪಿಲ್ಲೆ ಕಾಲಲಿಟ್ಟು ನಾಕಡಾಬು ನಡವಿಗಿsಟ್ಟು
ಕೆತ್ತಿದ ಪಿಲ್ಲೆ ಕಾಲಲಿಟ್ಟು ನಾಕಡಾಬು ನಡವಿಗಿsಟ್ಟು
ಹಲಗಿ ಸಿಂಗಿ ತsಕೊಂಡು ಹರುಷಲಿಂದೆ ಕರಿಯಬಂದ
ಮನಿಗಿ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ
ಹಲಗಿ ಸಿಂಗಿ ತsಕೊಂಡು ಹರುಷಲಿಂದೆ ಕರಿಯಬಂದ
ಮನಿಗಿ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ

ಕಂಚಿನ ಕಳಸ ಥುಂಬನಿಟ್ಟು ಕೆಂಚನಾಂವಂದೈವರು
ಕಂಚಿನ ಕಳಸ ಥುಂಬಿನಿಟ್ಟು ಕೆಂಚನಾಂವಂದೈವರು
ಸತಿಪತಿ ಹರುಷಲಿಂದೆ ಹರುಷಲಿಂದೆ ಕರಿಯ ಬಂದ
ಮನಿಗಿ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ
ಸತಿಪತಿ ಹರುಷಲಿಂದೆ ಹರುಷಲಿಂದೆ ಕರಿಯಬಂದ
ಮನಿಗೆ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ

ಪೀತಾಂಬರ ಸೀರೆನುಟ್ಟು ಜsರತಾರಿ ಕುಬ್ಬಸತೊಟ್ಟು
ಪೀತಂಬರ ಸೀರೆನುಟ್ಟು ಜsರತಾರಿ ಕುಬ್ಬಸತೊಟ್ಟು
ಭಂಗಾರ ಡಾsಬು ನಡುವಿಗಿಟ್ಟು ಹರುಷಲಿಂದೆ ಕರಿಯಬಂದ
ಮನಿಗಿ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ
ಭಂಗಾರ ಡಾsಬು ನಡುವಿಗಿಟ್ಟು ಹರುಷಲಿಂದೆ ಕರಿಯಬಂದ
ಮನಿಗಿ ನಡಿಯಮ್ಮ  ಶೀಗಿ ಮನಿಗಿ ನಡಿಯಮ್ಮ

ಗಂಗಮ್ಮನ ಥಡಿ

ಚುಕ್ಕ ಚೆಂಡೆನ ಹೂವಾ ಥುಂಬುತ ತುಳಕುತ
ಘಂದದ ಮಡವ ಡುಳಕೂತ ಕೋಲೆ
ಘಂದು ಅದ ಮಡವ ಝಳಕಿ ಜಾಳಿಗಿದಂಡಿ
ಹಿಂಗೇ ನಡಿರಯ್ಯ ಥಡಿಯೊಳಗೆ ಕೋಲೆ
ನಮಗೆಲ್ಲಿ ಜಡಿಗೋಳು ನಮಗೆಲ್ಲಿ ಥಡಿಗೋಳು
ಗಂಗಮ್ಮನ ಥಡಿಲಿ ಸಳಮಂಚ ಕೋಲೆ
ಗಂಗಮ್ಮನ ಥಡಲಿ ಸಳಮಂಚ ಕೋಲೆ

ಎಡ್ಡ ಚುಕ್ಕ ಚೆಂಡೆನ ಹೂವಾ ಥುಂಬುತ ತುಳಕುತ
ಘಂದದ ಮಡವ ಡುಳಕೂತ ಕೋಲೆ
ಘಂದು ಅದ ಮಡವ ಝಳಕಿ ಜಾಳಿಗುದಂಡಿ
ಹಿಂಗೇ ನಡಿರಯ್ಯ ಥಡಿದೊಳಗೆ ಕೋಲೆ
ನಮಗೆಲ್ಲಿ ಜಡಿಗೋಳು ನಮಗೆಲ್ಲಿ ಥಡಿಗೋಳು
ಗಂಗಮ್ಮನ ಥಡಿಲಿ ಸಳಮಂಚ ಕೋಲೆ
ಗಂಗಮ್ಮನ ಥಡಿಲಿ ಸಳಮಂಚ ಕೋಲೆ

ಮೂರ ಚುಕ್ಕ ಚಂಡೆನ ಹೂವಾ ಥುಂಬುತ ತುಳಕುತ
ಘಂದದ ಮಡವ ಡುಳಕೂತ ಕೋಲೆ
ಘಂದ ಅದ ಮಡವ ಝಳಕಿ ಜಾಳಿಗಿದಂಡಿ

ಹಿಂಗೇ ನಡಿರಯ್ಯ ಥಡಿಯೊಳಗೆ ಕೋಲೆ
ನಮಗೆಲ್ಲಿ ಜಡಿಗೋಳು ನಮಗೆಲ್ಲಿ ಥಡಿಗೋಳು
ಗಂಗಮ್ಮನ ಥಡಿಲಿ ಸಳಮಂಚ ಕೋಲೆ
ಗಂಗಮ್ಮನ ಥಡಿಲಿ ಸಳಮಂಚ ಕೋಲೆ

ನಾಕ ಚುಕ್ಕ ಚೆಂಡೆನ ಹೂವಾ ಥುಂಬುತ ತುಳಕುತ
ಘಂದದ ಮಡವ ಡುಳಕೂತ ಕೋಲೆ
ಘಂದು ಅದ ಮಡವ ಝಳಕಿ ಜಾಳಿಗಿ ದಂಡಿ
ಹಿಂಗೇ ನಡಿರಯ್ಯ ಥಡಿದೊಳಗೆ ಕೋಲೆ
ನಮಗೆಲ್ಲಿ ಜಡಿಗೋಳು ನಮಗೆಲ್ಲಿ ತಡಿಗೋಳು
ಗಂಗಮ್ಮನ ಥಡಿಲಿ ಸಳಮಂಚ ಕೋಲೆ
ಗಂಗಮ್ಮನ ಥಡಿಲಿ ಸಳಮಂಚ ಕೋಲೆ

ಐದ ಚುಕ್ಕ ಚೆಂಡೆನೆ ಹೂವಾ ಥುಂಬುತ ತುಳಕುತ
ಘಂದದ ಮಡವ ಡುಳಕುತ ಕೋಲೆ
ಘಂದು ಅದ ಮಡವ ಝಳಕಿ ಜಾಳಿಗಿ ದಂಡಿ
ಹಿಂಗೇ ನಡಿರಯ್ಯ ಥಡಿಯೊಳಗೆ ಕೋಲೆ
ನಮಗೆಲ್ಲಿ ಜಡಿಗೋಳು ನಮಗೆಲ್ಲಿ ಥಡಿಗೋಳು
ಗಂಗಮ್ಮನ ಥಡಿಲಿ ಸಳಮಂಚ ಕೋಲೆ
ಗಂಗಮ್ಮನ ಥಡಿಲಿ ಸಳಮಂಚ ಕೋಲೆ

ವೀರೇಶನಿಗೆ ಆಮಂತ್ರಣ

ಕೋಲು ಹಾಕುತ್ತ ನಾನ ಖಾನಾನ ಮನಿಗ್ಹೋದ
ಖಾನಾ ಈರೇಶ ಒಳಗಿಲ್ಲ ಕೋಲೆ
ಖಾನಾನ ಈರೇಶ ಒಳಗಿಲ್ಲದ್ಹೋದರ
ಈಳಿಯವ ಕೊಟ್ಟು ಕರಸಿದ ಕೋಲೆ
ಈಳಿಯವ ಕುಡುಲಾಕ ಸರಿಯಾಗಿ ಬರುಲಾಕ
ಕುಡು ನನ್ನ ಹಬ್ಬ ದಸರಿಯ ಕೋಲೆ

ಕುಡು ನನ್ನ ಹಬ್ಬ ದಸರಿ ಮಾನಂಬಿ ದಿನ
ಹೊಸ (ಹಸು) ಮಕ್ಕಳೆಲ್ಲ ಗವರ‌್ಯಾಡಿ ಕೋಲೆ

ಹೊಸ (ಹಸು)ಮಕ್ಕಳೆಲ್ಲ ಗವರ‌್ಯಾಡಿ ಬರುವಳಗೆ
ಹಸನಗಟ್ಟಿತ್ತೆ ಹಳಖ್ಯಾಡ ಕೋಲೆ

ಹಸನಾನೆಗಟ್ಟಿತ್ತೆ ಹಳಖ್ಯಾಡ ಅಗಸಿಮುಂದ
ಚಿನ್ನಗಟ್ಟಿತ್ತೆ ಚಿಡಗುಪ್ಪಿ ಕೋಲೆ

ಚಿನ್ನನೆಗಟ್ಟಿತ್ತೆ ಚಿಡಗುಪ್ಪಿ ಅಗಸಿಮುಂದ
ಹೂವ ಮಾರ‌್ಯಾವೇ ಹುಮನಾಬಾದಿ ಕೋಲೆ

ಹೂವಾನೆ ಮಾರ‌್ಯಾವೆ ಹುಮನಾಬಾದಿ ಅಗಸಿಮುಂದ
ತುಪ್ಪ ಮಾರ‌್ಯಾದೆ ತುಳಜಾಪೂರ ಕೋಲೆ

ತುಪ್ಪಾನೆ ಮಾರ‌್ಯಾದೆ ತುಳಜಾಪೂರ ಅಗಸಿಮುಂದ
ಬೆಲ್ಲ ಮಾರ‌್ಯಾದೆ ಬೆನ್ನಕನಳ್ಳಿ ಕೋಲೆ

ಬೆಲ್ಲನೆ ಮಾರ‌್ಯಾದೆ ಬೆನ್ನಕನಹಳ್ಳಿ ಅಗಸಿಮುಂದ
ಕುಸಬಿ ಮಾರ‌್ಯಾವೇ ಕುಸ(ಶ)ನೂರ ಕೋಲೆ

ದಸರಿಯ ಸೌಭಾಗ್ಯ

ಒಂದರತ್ಯಾಗ ಒಂದರತಿಟ್ಟು
ಮ್ಯಾಲ ಮಾಣಿಕದ ಹರಳೀಟ್ಟು
ಇಗೊತ್ತಿನ ದಿನ ನಮ್ಮನಿದಾಗ
ದಸರಿ ಸೌಭಾssಗ್ಯ

ಎಡ್ಡರತ್ಯಾಗ ಎಡ್ಡರತಿಟ್ಟು
ಮ್ಯಾಲ ಮಾಣಿಕದ ಹರಳೀಟ್ಟು
ಇಗೊತ್ತಿನ ದಿನ ನಮ್ಮನಿದಾಗ
ದಸರಿ ಸೌಭಾssಗ್ಯ

ಮೂರರತ್ಯಾಗ ಮೂರರತಿಟ್ಟು
ಮ್ಯಾಲ ಮಾಣಿಕದ ಹರಳೀಟ್ಟು
ಇಗೊತ್ತಿನ ದಿನ ನಮ್ಮನಿದಾಗ
ದಸರಿ ಸೌಭಾssಗ್ಯ

ನಾಕರತ್ಯಾಗ ನಾಕರತಿಟ್ಟು
ಮ್ಯಾಲ ಮಾಣಿಕದ ಹರಳೀಟ್ಟು
ಇಗೊತ್ತಿನ ದಿನ ನಮ್ಮನಿದಾಗ
ದಸರಿ ಸೌಭಾssಗ್ಯ

ಐದರತ್ಯಾಗ ಐದರತಿಟ್ಟು
ಮ್ಯಾಲ ಮಾಣಿಕದ ಹರಳೀಟ್ಟು
ಇಗೊತ್ತಿನ ದಿನ ನಮ್ಮನಿದಾಗ
ದಸರಿ ಸೌಭಾssಗ್ಯ

ಏಳು ಸುತ್ತಿನ ಕೋಟೆ

ಒಂದ ಸುತ್ತಿನ ಕ್ವಾಟಿ ಅದರಾಗ ಕುಂತಾನೆ ಬಸವ
ಬಸವಗ ಬಸವನ್ನಿರೇss ಬಸವನ ಪಾದಕ ಶರಣೆನ್ನಿರೆss
ಹೋಗೆ ಹೊನ್ನ ಬಿಸುಲೆss ಬಾರೆ ಬನ್ನ ಬಿಸುಲೆ
ಅಲ್ಲಟ ಪಲ್ಲಟ ಮಟಕ್ಹೋಗಿ ಹೂಗಾರ ತೋಟಕ್ಹೋಗಿ
ಹೂಕಂತ್ಹೋಗಿ ಹೂ ಹೇಳಿ ಸಳಕ್ಷಿ ಬೆಳದಿಂಗುಳೆ

ಎಡ್ಡ ಸುತ್ತಿನ ಕ್ವಾಟಿ ಅದರಾಗ ಕುಂತಾನೆ ಬಸವ
ಬಸವಗ ಬಸವನ್ನಿರೆss ಬಸವನ ಪಾದಕ ಶರಣೆನ್ನಿರೆss
ಹೋಗ ಹೊನ್ನ ಬಿಸುಲೆss ಬಾರೆ ಬನ್ನ ಬಿಸುಲೆ
ಅಲ್ಲಟ ಪಲ್ಲಟ ಮಟಕ್ಹೋಗಿ ಹೂಗಾರ ತೋಟಕ್ಹೋಗಿ
ಹೂಕಂತ್ಹೋಗಿ ಹೂ ಹೇಳಿ ಸಳಕ್ಷಿ ಬೆಳದಿಂಗುಳೆ

ಮೂರ ಸುತ್ತಿನ ಕ್ವಾಟಿ ಅದರಾಗ ಕುಂತಾನೆ ಬಸವ
ಬಸವಗ ಬಸವನ್ನಿರೆss ಬಸವನ ಪಾದಕ ಶರಣೆನ್ನಿರೆss
ಹೋಗೆ ಹೊನ್ನ ಬಿಸುಲೆss ಬಾರೆ ಬನ್ನ ಬಿಸುಲೆ
ಅಲ್ಲಟ ಪಲ್ಲಟ ಮಟಕ್ಹೋಗಿ ಹೂಗಾರ ತೋಟಕ್ಹೋಗಿ
ಹೂಕಂತ್ಹೋಗಿ ಹೂ ಹೇಳಿ ಸಳಕ್ಷಿ ಬೆಳದಿಂಗುಳೆ

ನಾಕ ಸುತ್ತಿನ ಕ್ವಾಟಿ ಅದರಾಗ ಕುಂತಾನೆ ಬಸವ
ಬಸವಗ ಬಸವನ್ನಿರೆss ಬಸವನ ಪಾದಕ ಶರಣೆನ್ನಿರೆss
ಹೋಗೆ ಹೊನ್ನ ಬಿಸುಲೆss ಬಾರೆ ಬನ್ನ ಬಿಸುಲೆ
ಅಲ್ಲಟ ಪಲ್ಲಟ ಮಟಕ್ಹೋಗಿ ಹೂಗಾರ ತೋಟಕ್ಹೋಗಿ
ಹೂಕಂತ್ಹೋಗಿ ಹೂ ಹೇಳಿ ಸಳಕ್ಷ ಬೆಳದಿಂಗುಳ

ಐದ ಸುತ್ತಿನ ಕ್ವಾಟಿ ಅದರಾಗ ಕುಂತಾನೆ ಬಸವ
ಬಸವಗ ಬಸವನ್ನಿರೆss ಬಸವನ ಪಾದಕ ಶರಣೆನ್ನಿರೆss
ಹೋಗೆ ಹೊನ್ನ ಬಿಸುಲೆss ಬಾರೆ ಬನ್ನ ಬಿಸುಲೆ
ಅಲ್ಲಟ ಪಲ್ಲಟ ಮಟಕ್ಹೋಗಿ ಹೂಗಾರs ತೋಟಕ್ಹೋಗಿ
ಹೂಕಂತ್ಹೋಗಿ ಹೂ ಹೇಳಿ ಸಳಕ್ಷಿ ಬೆಳದಿಂಗುಳೆ

ಆರ ಸುತ್ತಿನ ಕ್ವಾಟಿ ಅದರಾಗ ಕುಂತಾನೆ ಬಸವ
ಬಸವಗ ಬಸವನ್ನಿರೆss ಬಸವನ ಪಾದಕ ಶರಣೆನ್ನಿರೆ
ಹೋಗೆ ಹೊನ್ನ ಬಿಸುಲೆss ಬಾರೆ ಬನ್ನ ಬಿಸುಲೆ
ಅಲ್ಲಟ ಪಲ್ಲಟ ಮಟಕ್ಹೋಗಿ ಹೂಗಾರ ತೋಟಕ್ಹೋಗಿ
ಹೂಕಂತ್ಹೋಗಿ ಹೂ ಹೇಳಿ ಸಳಕ್ಷಿ ಬೆಳದಿಂಗುಳೆ

ಏಳ ಸುತ್ತಿನ ಕ್ವಾಟಿ ಅದರಾಗ ಕುಂತಾನೆ ಬಸವ
ಬಸವಗ ಬಸವನ್ನಿರೆss ಬಸವನ ಪಾದಕ ಶರಣೆನ್ನಿರೆss
ಹೋಗೆ ಹೊನ್ನ ಬಿಸುಲೆss ಬಾರೆ ಬನ್ನ ಬಿಸುಲೆ
ಅಲ್ಲಟ ಪಲ್ಲಟ ಮಟಕ್ಹೋಗಿ ಹೂಗಾರ ತೋಟಕ್ಹೋಗಿ
ಹೂಕಂತ್ಹೋಗಿ ಹೂ ಹೇಳಿ ಸೆಳಕ್ಷಿ ಬೆಳದಿಂಗಳೆ

[1]

ಗವರಮ್ಮ (ಶೀಗಮ್ಮ)ನಿಗೆ ಬೀಳ್ಕೊಡುಗೆ

ಒಂದ ಸೇರಕ್ಕಿ ತರುಲೇs
ಗವರವ ಒಂದೇ ಮಂಡಾಲ ಬರಿಲೇs
ಹಾಲಗುಂಜಿ-ನೀಲಗುಂಜಿ ಹೂವಾ ತರುಲೇs
(ಹಾಲಚುಕ್ಕಿ-ನೀಲಚುಕ್ಕಿ ಹೂವಾ ತರುಲೇs)
ಗವರವ ನಿಂಗ ಹುಣ್ಣಿ ಮಾಡಿ ಖಳಕೂಡಲೇs

ಎಡ್ಡ ಸೇರಕ್ಕಿ ತರುಲೇs
ಗವರವ ಒಂದೇ ಮಂಡಾಲ ಬರಿಲೇs
ಹಾಲಗುಂಜಿ-ನೀಲಗುಂಜಿ ಹೂವಾ ತರುಲೇs
(ಹಾಲಗುಂಜಿ-ನೀಲಚುಕ್ಕಿ ಹೂವಾ ತರುಲೇs)
ಗವರವ ನಿಂಗ ಹುಣ್ಣಿ ಮಾಡಿ ಖಳಕೂಡಲೇs

ಮೂರ ಸೇರಕ್ಕಿ ತರುಲೇ
ಗವರವ ಒಂದೇ ಮಂಡಾಲ ಬರಿಲೇ
ಹಾಲಗುಂಜಿ-ನೀಲಗುಂಜಿ ಹೂವಾ ತರುಲೇ

ಸೀಗೀ ಹುಣ್ಣಿಮೆಯ ಹಾಡು*[2]

ಗೌರಿ ಹಾಡಲಾರನೆ

ಗೌರಿ ಪಾಡಲಾರನೆ
ಗೌರಿ ಕೋಲ್ ಗೌರಿ ಕೋಲೆ ಕಂಚಿನ ಗೌರಿ ಕೋಲೆ

ಒಂದೇ ಸುತ್ತಿನ ಕೋಟೆ
ಅದರೊಳಗೊಂದೇ ಸುತ್ತಿನ ಬಸವ
ಬಸವಗ ಬಸವನ್ನಿರಿ ಬಸವನ ಪಾದಕ ಶರಣೆನ್ನಿರಿ

ಎರಡೆ ಸುತ್ತಿನ ಕೋಟೆ
ಅದರೊಳಗೆರೆಡೆ ಸುತ್ತಿನ ಬಸವ
ಬಸವಕ ಬಸವನ್ನಿರೀ
ಬಸವನ ಪಾದಕ ಹೊಸ ಮುತ್ತು ಹುಲಿಗೆಜ್ಜೆನ್ನಿರಿ

ಒಂದೇ ಮೆಟ್ಲು ಹತ್ತುತಾ
ಒಂದೇ ಮೆಟ್ಲು ಇಳಿಯುತಾ
ಕೋಲ್ ಗೌರಿ ಕೋಲೆ ಕಂಚಿನ ಗೌರಿ ಕೋಲೆ

ಎರಡೇ ಮೆಟ್ಲು ಹತ್ತುತಾ
ಎರಡ್ನೇ ಮೆಟ್ಲು ಇಳಿಯುತಾ
ಕೋಲ್ ಗೌರಿ ಕೋಲೆ ಕಂಚಿನ ಗೌರಿ ಕೋಲೆ

ಬಾಬಾರೆ ಗೌರವ್ವ ಗಂಡಾನ ಮನೆಗೆ
ಹೊಗೋಗೆ ಗೌರವ್ವ ತೌರೂರ ಮನೆಗೆ
ನಿನ್ನ ವಂಶ ಸ್ಥಿರವಾಗಲಿ ಸ್ಥಿರವಾಗಲಿ[1]ಸಿಂಪಿ ಲಿಂಗಣ್ಣ ಅವರ ಗರತಿಯ ಬಾಳ ಸಂಹಿತೆ ಪುಟ-87

ಪ್ರಕಾಶನ : ಅರವಿಂದ ಗ್ರಂಥಾಲಯ ಚಡಚಣ : ಇಲ್ಲಿಯೂ ಕಾಣಬಹುದು. ಇದರಿಂದ ಜನಪದರ ಹಾಡಿನ ರೀತಿ, ಚಲನಶೀಲತೆ, ಪರಿವರ್ತನೆ, ನಿತ್ಯ ಸಂಜೀವಿನಿ ಎಂಬುವುದನ್ನು ಗಮನಿಸಬಹುದಾಗಿದೆ. (ಈ ಕೆಳಗೆ 3 ಸಾಲುಗಳು (ಪಾಠಾಂತರ) ಗಮನಕ್ಕಾಗಿ ಕೊಡಲಾಗಿದೆ).

ಒಂದು ಸುತ್ತಿನ ಕ್ವಾಟಿ  ಅದರಾಗ  ಬಂದು ಕೂತಾನ ಬಸವ
ಎರಡು ಸುತ್ತಿನ ಕ್ವಾಟಿ  ಅದರಾಗ  ಬಂದು ಕೂತಾನ ಬಸವ
ಮೂರು ಸುತ್ತಿನ ಕ್ವಾಟಿ  ಅದರಾಗ  ಬಂದು ಕೂತಾನ ಬಸವ

 

 

[2] * ದಾವಣಗೆರೆಯಲ್ಲಿ ಹಾಡುವ ಗೀತೆ