ಹಂಡಬಂಡದ ಆಕಳು
ಹಂಬಂಡನಾಕಳಿತ್ತು ಹರಡಖೋಡಿನ ಮಣಕನಿತ್ತು
ನೆಲಕ ಬಾಲ ಎಳೆಯದಿತ್ತು
ಆಕಳ ತಾರೋ ಗೋಪಿನಮ್ಮ ಆಕಳತಾರೋ
ಹಂಡಬಂಡನಾಕಳಿಲ್ಲ ಹರಡಖೋಡಿನ ಮಣಕನಿಲ್ಲ
ನೆಲಕ ಬಾಲ ಎಳಿಯದಿಲ್ಲ
ಆಕಳ ಇಲ್ಲೇ ಗೋಪಿ ನಿಮ್ಮ ಆಕಳ ಇಲ್ಲೆ
ಕಡ್ಡೆ ಸಾಲ ಮೇಯಿತಿತ್ತು ಕರಿನ ಧ್ಯಾನ ಮಾಡತಿತ್ತು
ಮನಿಯ ಹಾದಿ ಹಿಡಿತ್ತಿತ್ತು.
ಆಕಳ ತಾರೋ ಗೋಪಿ ನಮ್ಮ ಆಕಳ ತಾರೋ
ಕಡ್ಡೆಸಾಲ ಮೆಯಣಿಲ್ಲ ಕರಿನ ಧ್ಯಾನ ಮಾಡಣಿಲ್ಲ
ಮನಿಯ ಹಾದಿ ಹಿಡಿಯಣಿಲ್ಲ
ಆಕಳ ಇಲ್ಲೇ ಗೋಪಿ ನಿಮ್ಮ ಆಕಳ ಇಲ್ಲೆ
ಹಂಡಬಂಡನಾಕಳಿತ್ತು ಹರಡಖೋಡಿನ ಮಣಕನಿತ್ತು
ನೆಲಕ ಬಾಲ ಎಳೆಯದಿತ್ತು
ಆಕಳ ತಾರೋ ಗೋಪಿ ನಮ್ಮ ಆಕಳ ತಾರೋ
ಹಂಡಬಂಡನಾಕಳಿಲ್ಲ ಹರಡಖೋಡಿನ ಮಣಕನಿಲ್ಲ
ನೆಲಕ ಬಾಲ ಎಳೆಯದಿಲ್ಲ
ಆಕಳ ಇಲ್ಲೇ ಗೋಪಿ ನಿಮ್ಮ ಆಕಳ ಇಲ್ಲೆ
ಘೋದೆ ಸಾಲ ಮೇಯಿತಿತ್ತು ಕರಿನ ಧ್ಯಾನ ಮಾಡತಿತ್ತು
ಮನಿಯ ಹಾದಿ ಹಿಡಿತಿತ್ತು
ಆಕಳ ತಾರೋ ಗೋಪಿ ನಮ್ಮ ಆಕಳ ತಾರೋ
ಘೋದೆ ಸಾಲ ಮೆಯೆಣಿಲ್ಲ ಕರಿನ ಧ್ಯಾನ ಮಾಡಣಿಲ್ಲ
ಮನಿಯ ಹಾದಿ ಹಿಡಿಯಣಿಲ್ಲ
ಆಕಳ ಇಲ್ಲೇ ಗೋಪಿ ನಿಮ್ಮ ಆಕಳ ಇಲ್ಲೆ.
ಕೊರವಂಜಿ ಹಾಡು
ಬಸವಣ್ಣ ಬಾರೊ ಬಸವ ಮೂರುತಿ ಬಾರೊ
ಬಸವಣ್ಣ ಬಾರೊ ವಚುನಕ
ಕೋಲು ಕೋಲ ಎನ್ನ ಕೋಲs
ಬಸವಣ್ಣ ಬಾರೊ ವಚನಕ ಬಾಗೋಡಿ
ಗಿರಿಯ ಘಂದದ ಹೊಸಲಾಲ
ಕೋಲು ಕೋಲ ಎನ್ನ ಕೋಲs
ಈರುವಯ್ಯ ಬಾರೊ ಈರು ಮೂರುತಿ ಬಾರೊ
ಈರುವಯ್ಯ ಬಾರೊ ವಚುನಕ
ಕೋಲು ಕೋಲ ಎನ್ನ ಕೋಲs
ಈರುವಯ್ಯ ಬಾರೊ ವಚುನಕ ಬಾಗೋಡಿ
ಗಿರಿಯ ಘಂದದ ಹೊಸಲಾಲ
ಕೋಲು ಕೋಲ ಎನ್ನ ಕೋಲs
ತೊಟ್ಟ ಕುಬ್ಬಸ ಕಳದು ಒತ್ತಿಸಿಂಬ್ಯಾವ ಮಾಡಿ
ಹೊತ್ತಳ ಕೊರವಂಜಿ ತಾನ ಬುಟ್ಟಿ
ಕೋಲು ಕೋಲ ಎನ್ನ ಕೋಲs
ಹೊತ್ತಳ ಕೊರವಂಜಿ ತಾನ ಬುಟ್ಟಿ ತಾನು
ತಿರುಗ್ಯಾಳ ಕೊರವಂಜಿ ಕೇರಿ ಕೇರಿ
ಕೋಲು ಕೋಲ ಎನ್ನ ಕೋಲs
ಹಾರೂರಗೇರಿ ಏರಿ ನೋಡುವಳಗೆ
ಬ್ಯಾಳಿಯ ಹೇರು ನಿಜ ನಿಜ
ಕೋಲು ಕೋಲ ಎನ್ನ ಕೋಲs
ವಕ್ಕುಲಗೇರಿ ಹೊಕ್ಕಿ ನೋಡುವಳಗೆ
ಅಕ್ಕಿಯ ಹೇರು ನಿಜ ನಿಜ
ಕೋಲು ಕೋಲ ಎನ್ನ ಕೋಲs
ಅರಕಾಲಿನ ನೆಲವು ಆರ್ಯಾಣದಲ್ಲಿ ನೆಯಿದಿದಾ
ಹಾಲಿಗೋಪ್ಪಂಥ ಹೊಸ ನೆಲವ
ಕೋಲು ಕೋಲ ಎನ್ನ ಕೋಲs
ಎಂಟಕಾಲಿನ ಕೆಲವು ಮಂಟಪದಲ್ಲಿ ನೆಯಿದಿದಾ
ತುಪ್ಪಕೋಪ್ಪಂಥ ಹೊಸ ನೆಲವ
ಕೋಲು ಕೋಲ ಎನ್ನ ಕೋಲs
ಅತ್ತಿ ನೋಡಲದ್ಹಂಗ ಮಾವ ಬೆಯೇಲದ್ಹಂಗ
ನೀನೆ ಬಾರ ನನ್ನ ಅರಮನಿಗಿ
ಕೋಲು ಕೋಲ ಎನ್ನ ಕೋಲs
ಅಂಗು ಅಳುದಾಗ ಹಂಗುವಳಕಿ ಮ್ಯಾಲ
ಅಂಗುಅಯಿತಾರ ಕಯ್ಯನೋಡ
ಕೋಲು ಕೋಲ ಎನ್ನ ಕೋಲs
ಅಂಗುಅಯಿದಾಗ ಲಿಂಗಮೂರುತಿಹಾರೆ
ಜಂಗುಅಮರರ್ಹಾರೆ ಜಗತ್ಯಾಕ
ಕೋಲು ಕೋಲ ಎನ್ನ ಕೋಲs
ಜಂಗುಅಮರ್ಹಾರೆ ಜಗತ್ಯಕ ಮುಂದಿರುವ
ಕಂದಹಾನ ನಿನ್ನ ಗಣಪಯ್ಯ
ಕೋಲು ಕೋಲ ಎನ್ನ ಕೋಲs
ಕಂದಹಾನ ನಿನ್ನ ಗಣಪಯ್ಯನ ಮುಂದಿರುವ
ಚವಡಾಸೂರಿ ನಿನ್ನ ಮಲು ಮಗಳ
ಕೋಲು ಕೋಲ ಎನ್ನ ಕೋಲs
ಇದ್ದಿದೊಂದು ಹೇಳಂದ್ರ ಇಲ್ಲದೊಂದ್ಹೇಳೂತಿ
ಯಾವ ದೇಶದ ಕೊರವಂಜಿ
ಕೋಲು ಕೋಲ ಎನ್ನ ಕೋಲs
ಕೋತಿ ಕಲ್ಲಾಪೂರು ಸೀತಿ ಸಿದ್ದಾಪೂರು
ಮ್ಯಾಲಿನ ಕುಪಿಯೆ ನಮಥಕಿಯೆ
ಕೋಲು ಕೋಲ ಎನ್ನ ಕೋಲs
ಕೊರವಂಜಿ ಹಾಡು
ಒಗಟು
ಅದರ ಬುಡವ ನೋಡಿದುರ ಕರಿ ಖಬ್ಬಿನೊರುಣ
ಕೋಲು ಕೋಲೆ ಹೂವಿನ ಕೋಲು ಕೋಲೆ
ಅದರ ಘಂಟ್ಯಾವ ನೋಡಿದುರ ಬಿಳಿ ಖಬ್ಬಿನೊರುಣ
ಕೋಲು ಕೋಲೆ ಹೂವಿನ ಕೋಲು ಕೋಲೆ
ಅದರ ಎಲಿಯಾವ ನೋಡಿದುರ ಅಂಗಯಿ ವರುಣ
ಕೋಲು ಕೋಲೆ ಹೂವಿನ ಕೋಲು ಕೋಲೆ
ಅದರ ಹೂವಾರ ನೋಡಿದುರ ಲಾವಂಗದೊರುಣ
ಕೋಲು ಕೋಲೆ ಹೂವಿನ ಕೋಲು ಕೋಲೆ
ಅದರ ಕಾಯಾರ ನೋಡಿದುರ ರೂದ್ರಾಕ್ಷಿದೊರುಣ
ಕೋಲು ಕೋಲೆ ಹೂವಿನ ಕೋಲು ಕೋಲೆ
ಕಾಲಿಲ್ಲದಣ್ಣ ಬಂದು ಏರಿ ನೋಡ್ಯಾನ್ಹಣ್ಣಿಗೆ
ಕೋಲು ಕೋಲೆ ಹೂವಿನ ಕೋಲು ಕೋಲೆ
ಕಯಿಲ್ಲದಣ್ಣ ಬಂದು ಕಡದು ನೋಡ್ಯಾನ್ಹಣ್ಣಿಗೆ
ಕೋಲು ಕೋಲೆ ಹೂವಿನ ಕೋಲು ಕೋಲೆ
ಆ ಹೆಣ್ಣು ಕಡದರ ಬಿದ್ರ ಬುಟ್ಟಿ ಥುಂಬ್ಯಾರ
ಕೋಲು ಕೋಲೆ ಹೂವಿನ ಕೋಲು ಕೋಲೆ
ಬಿದ್ರ ಬುಟ್ಟಿ ಥುಂಬ್ಯಾರ ಸಂಬುಲ ಸಂತಿಗೊಯಿದಾರ
ಕೋಲು ಕೋಲೆ ಹೂವಿನ ಕೋಲು ಕೋಲೆ
ರೊಕ್ಕಿಲ್ಲದಣ್ಣ ಬಂದು ಲೆಕ್ಕ ಮಾಡ್ಯಾರ್ಹಣ್ಣಿಗೆ
ಕೋಲು ಕೋಲೆ ಹೂವಿನ ಕೋಲು ಕೋಲೆ
ಪಾಕಿಯಿಲ್ಲದಣ್ಣ ಬಂದು ಪಟ್ಟಿ ಮಾಡ್ಯಾರ್ಹಣ್ಣಿಗೆ
ಕೋಲು ಕೋಲೆ ಹೂವಿನ ಕೋಲು ಕೋಲೆ
ಬಂಜೆಯ ಗೋಳು
ಏಳಮಂದಿ ನೆಗೆಣೆದೇರು ಹೊಳಿ ನೀರಿಗ್ಹೋಗಿದಾರೆ
ಹಾದ್ಯಾಗ್ಹೊನ್ನಮ್ಮ ಮೈನೆರುದಾಳೆ ಕೋಲೆನ್ನ ಕೋಲೆ
ಹಾದ್ಯಾಗ್ಹೊನ್ನಮ್ಮ ಮೈನೆರುದಾಳೆ ಕೋಲೆನ್ನ ಕೋಲೆ
ಏಳಮಂದಿ ನೆಗೆಣೆದೇರು ಹೊನ್ನಮ್ಮನ ಸೀರಿ ಕಳದಾರೆ
ಕಂಟಿ ಕಮರಿಗ್ಹಾಕಿದಾರೆ ಕೋಲೆನ್ನ ಕೋಲೆ
ಕಂಟಿ ಕಮರಿಗ್ಹಾಕಿದಾರೆ ಕೋಲೆನ್ನ ಕೋಲೆ
ಕೊರವಂಜಿ ಹಾಡು
ದೊಡ್ಡ ದೊಡ್ಡ ಗುಡ್ಡಕ್ಹೋಗಿ ದೊಡ್ಡೊಡ್ಡ ಬಿದರ್ತಂದು
ದೊಡ್ಡೊಡ್ಡ ಪುಟ್ಟಿ ಹೆಣಿಯೆಂದೆ ನಾ ಹೇಳಿಬಂದೆ ॥ ॥ಪ ॥
ಸಣ್ಣ ಸಣ್ಣ ಗುಡ್ಡಕ್ಹೋಗಿ ಸಣ್ಸಣ್ಣ ಬಿದರ್ತಂದೆ
ಸಣ್ಸಣ್ಣ ಪುಟ್ಟಿ ಹೆಣಿಯೆಂದೆ ನಾ ಹೇಳಿ ಬಂದೆ ॥ ॥ಅ ॥
ನಾಳೆ ಬಾ ಕೊರವಂಜಿ ಹಾಲು ಅನ್ನವ ಕೊಡುವೆ
ಹಾಲಿನ ತಕ್ಕ ಹೊಸ ನೆಲುವ ನಾ ಹೇಳಿಬಂದೆ
ಹಾಲಿನ ತಕ್ಕ ಹೊಸ ನೆಲುವ ಕೊರವಂಜಿ
ಬಾಲನ ತಕ್ಕ ಗಿಲಗಿಂಚಿ ನಾ ಹೇಳಿಬಂದೆ ॥ ॥1 ॥
ಮತ್ತೆ ಬಾ ಕೊರವಂಜಿ ತುಪ್ಪ ಅನ್ನವ ಕೊಡುವೆ
ತುಪ್ಪಿನ ತಕ್ಕ ಹೊಸ ನೆಲವು ನಾ ಹೇಳಿ ಬಂದೆ
ತುಪ್ಪಿನ ತಕ್ಕ ಹೊಸ ನೆಲುವ ಕೊರವಂಜಿ
ಪುತ್ರsನ ತಕ್ಕ ಗಿಲಗಿಂಚಿ ನಾ ಹೇಳಿಬಂದೆ ॥ ॥2 ॥
ಆಖಡದ್ಹಬ್ಬ ನಾಗಯ್ಯಸ್ವಾಮಿ ಈಬವರ್ಯಾಡುತ ಹೊಂಟಿದಾನೆ
ಯಾವ ಪಾಪಿ ಹಾಕ್ಯಾದಿಲ್ಲಿ ಕೋಲೆನ್ನ ಕೋಲೆ
ಯಾವ ಖರಮಿ ಹಾಕ್ಯಾದಿಲ್ಲಿ ಕೋಲೆನ್ನ ಕೋಲೆ
ಯಾವ ಖರಮಿ ಹಾಕ್ಯಾದಿಲ್ಲಿ ಈಬಟ್ಟಲ್ಹಿಡದು ಬೀರುಹರದು
ತೊಟ್ಟಲ್ಹಿಡದು ತೂಗುಹರದು ಕೋಲೆನ್ನ ಕೋಲೆ
ತೊಟ್ಟಲ್ಹಿಡದು ತೂಗುಹರದು ಕೋಲೆನ್ನ ಕೋಲೆ
ಏಳಮಂದಿ ನೆಗೆಣದೇರು ಅಡಗಿ ಮನ್ಯಾಗ ಮಾತಾಡುತಾರೆ
ಗೊಡ್ಡಿನೆಳ್ಳ ಬಿಳಬಾರದವ್ವ ಕೋಲೆನ್ನ ಕೋಲೆ
ಬಂಜಿನೆಳ್ಳ ಬಿಳಬಾರದವ್ವ ಕೋಲೆನ್ನ ಕೋಲೆ
ಏಳಮಂದಿ ನೆಗೆಣದೇರು ಹೆಂಡಿ ಬಡಿಯಲ್ಲಿ ಮಾತಾಡುತಾರೆ
ಗೊಡ್ಡಿನೆಳ್ಳ ಬಿಳಬಾರದವ್ವ ಕೋಲೆನ್ನ ಕೋಲೆ
ಬಂಜಿನೆಳ್ಳ ಬಿಳಬಾರದವ್ವ ಕೋಲೆನ್ನ ಕೋಲೆ
ಅಯ್ಯಯೋ ಸಾದಾಶಿವನೆ ಆರ್ಯಾಣ್ಹಾದಿ ಹಿಡುದಾಳೆ ಹೊನ್ನ
ಆರ್ಯಾಣ್ಹಾದಿ ಹಿಡುದಾಳೆ ಕೋಲೆನ್ನ ಕೋಲೆ
ಆರ್ಯಾಣ್ಹಾದಿ ಹಿಡುದಾಳೆ ಕೋಲೆನ್ನ ಕೋಲೆ
ಆರ್ಯಾಣದಾರಿದಾಗೆ ಹುಲಿರಾಜಾ ಹೊಂಟಿದಾರೆ
ನನ್ನ ಗಾದಾರ ನುಂಗಬಾರದೇನೋ ಕೋಲೆನ್ನ ಕೋಲೆ
ನನ್ನಗಾದಾರ ನುಂಗಬಾರದೇನೋ ಕೋಲೆನ್ನ ಕೋಲೆ
ನುಂಗಲಾಕ ನುಂಗುತ್ತಿದ್ದ ಗೊಡ್ಡಿ ನೆಳ್ಳ ಬಿಳುಬಾರದವ್ವ
ಬಂಜಿನೆಳ್ಳ ಬಿಳುಬಾರದವ್ವ ಕೋಲೆನ್ನ ಕೋಲೆ
ಬಂಜಿನೆಳ್ಳ ಬಿಳುಬಾರದವ್ವ ಕೋಲೆನ್ನ ಕೋಲೆ
ಅಯ್ಯಯೋ ಸಾದಾ ಶಿವನೆ ಆರ್ಯಾಣ್ಹಾದಿ ಹಿಡುದಾಳೆ ಹೊನ್ನ
ನಾಗಯ್ಯಸ್ವಾಮಿ ಹೊಂಟಿದಾನೆ ಕೋಲೆನ್ನ ಕೋಲೆ
ನಾಗಯ್ಯಸ್ವಾಮಿ ಹೊಂಟಿದಾನೆ ಕೋಲೆನ್ನ ಕೋಲೆ
ನಾಗಯ್ಯಸ್ವಾಮಿ ಹೊಂಟಿದಾರೆ ನನ್ನಗಾದರ ಕಚ್ಚುಬಾರದೇನೋ
ನನ್ನಗಾದರ ಮುಟ್ಟು ಬಾರದೇನೊ ಕೋಲೆನ್ನ ಕೋಲೆ
ನನ್ನಗಾದರ ಮುಟ್ಟು ಬಾರದೇನೊ ಕೋಲೆನ್ನ ಕೋಲೆ
ಕಚ್ಚುಲಾಕ ಕಚ್ಚುತಿದ್ದ ಗೊಡ್ಡಿನೆಳ್ಳ ಬಿಳುಬಾರದವ್ವ
ಬಂಜಿ ನೆಳ್ಳ ಬಿಳುಬಾರದವ್ವ ಕೋಲೆನ್ನ ಕೋಲೆ
ಬಂಜಿ ನೆಳ್ಳ ಬಿಳುಬಾರದವ್ವ ಕೋಲೆನ್ನ ಕೋಲೆ
ಅಯ್ಯಯೋ ಸಾದಾಶಿವನೆ ಆರ್ಯಾಣ್ಹಾದಿ ಹಿಡುದಾಳೆ ಹೊನ್ನ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣದಾರಿದಾಗ ಖಟ್ಟಂಬೊ ಬಾರಿಯ ಗಿಡ
ಗಿಡದ ಬುಡಕ ಕುಂತಾಳೆ ಹೊನ್ನ ಕೋಲೆನ್ನ ಕೋಲೆ
ಗಿಡದ ಬುಡಕ ಕುಂತಾಳೆ ಹೊನ್ನ ಕೋಲೆನ್ನ ಕೋಲೆ
ಗಿಡದ ಬುಡಕ ಕುಂತಾಳೆ ಹೊನ್ನ ಗಿಡ ಒಣಗಿ ಗಾಳಗಾಳ
ಗಿಡ ಒಣಗಿ ಗಾಳಗಾಳ ಕೋಲೆನ್ನ ಕೋಲೆ
ಗಿಡ ಒಣಗಿ ಗಾಳಗಾಳ ಕೋಲೆನ್ನ ಕೋಲೆ
ಅಯ್ಯಯೋ ಸಾದಾಶಿವನೆ ಆರ್ಯಾಣ್ಹಾದಿ ಹಿಡುದಾಳೆ ಹೊನ್ನ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣದ್ಹಾರಿದಾಗೆ ಖಟ್ಟಂಬೊ ಭಾರಂಭಾಯಿ
ಭಾಯಿ ನೀರಿಗಿ ಇಳುದಾಳೆ ಹೊನ್ನ ಕೋಲೆನ್ನ ಕೋಲೆ
ಭಯಿ ನೀರಿಗಿ ಇಳುದಾಳೆ ಹೊನ್ನ ಕೋಲೆನ್ನ ಕೋಲೆ
ಒಂದ ಛಿಡಿ ಇಳುದಾಳೆ ಹೊನ್ನ ಎರಡು ಛಿಡಿ ನೀರಿಳುದಾವೆ
ಮೂರ ಛಿಡಿ ನೀರಿಳುದಾವೆ ಕೋಲೆನ್ನ ಕೋಲೆ
ಮುರ ಛಿಡಿ ನೀರಿಳುದಾವೆ ಕೋಲೆನ್ನ ಕೋಲೆ
ಮೂರ ಛಿಡಿ ಇಳುದಾಳೆ ಹೊನ್ನ ನಾಕ ಛಿಡಿ ನೀರಿಳುದಾವೆ
ಐದ ಛಿಡಿ ನೀರಿಳುದಾವೆ ಕೋಲೆನ್ನ ಕೋಲೆ
ಐದ ಛಿಡಿ ನೀರಿಳುದಾವೆ ಕೋಲೆನ್ನ ಕೋಲೆ
ಓಸು ಛಿಡಿ ಇಳುದಾಳೆ ಹೊನ್ನ ಭಾಯನ್ನೀರ ಬತ್ತೇ ಹೋದು
ಭಾಯನ್ನೀರ ಬತ್ತೇ ಹೋದು ಕೋಲೆನ್ನ ಕೋಲೆ
ಭಾಯನ್ನೀರ ಬತ್ತೇ ಹೋದು ಕೋಲೆನ್ನ ಕೋಲೆ
ಅಯ್ಯಯೋ ಸಾದಾಶಿವನೆ ಆರ್ಯಾಣದ್ಹಾದಿ ಹಿಡುದಾಳೆ ಹೊನ್ನ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಊರದಾರಿ ಹಿಡುದಾಳೆ ಹೊನ್ನ
ಮನಿಗಾದರ ಬಂದಾಳೆ ಹೊನ್ನ ಕೋಲೆನ್ನ ಕೋಲೆ
ಮನಿಗಾದರ ಬಂದಾಳೆ ಹೊನ್ನ ಕೋಲೆನ್ನ ಕೋಲೆ
ಮನಿಗಾದರ ಬಂದಾಳೆ ಹೊನ್ನ ತಾಯಿ ನೋಡಿ ತಟ್ಟಿ ಮುಚ್ಯಾಳೆ
ತಾಯಿ ನೋಡಿ ತಟ್ಟಿ ಮುಚ್ಯಾಳೆ ಕೋಲೆನ್ನ ಕೋಲೆ
ತಾಯಿ ನೋಡಿ ತಟ್ಟಿ ಮುಚ್ಯಾಳೆ ಕೋಲೆನ್ನ ಕೋಲೆ
ಒಂದ ರೊಟ್ಟಿ ಕುಡುತಾಯಿ ತಂಬಿಗಿ ನೀರ ಕುಡುತಾಯಿ
ಹಸುಭಾಳ ಆಗ್ಯಾವೆ ತಾಯಿ ಕೋಲೆನ್ನ ಕೋಲೆ
ಕಸವಿಸಿ ಇಟ್ಟಾದೆ ತಾಯಿ ಕೋಲೆನ್ನ ಕೋಲೆ
ಒಂದರೊಟ್ಟಿ ಮಕ್ಕಳುಂಡಾರೆ ಥೆಂಬಗಿ ನೀರ ಮಕ್ಕಳ ಕೊಂಡಾರೆ
ಒಂದರೊಟ್ಟಿ ಮಕ್ಕಳುಂಡಾರೆ ಕೋಲೆನ್ನ ಕೋಲೆ
ಒಂದರೊಟ್ಟಿ ಮಕ್ಕಳುಂಡಾರೆ ಕೋಲೆನ್ನ ಕೋಲೆ
ಹಿಡಿನುಚ್ಚ ನೀಡೆತಾಯಿ ಅಮಗಿ ಮಜ್ಜಿಗಿ ನೀಡು ತಾಯಿ
ಹಸುಬಾಳ ಆಗ್ಯಾವೆ ತಾಯಿ ಕೋಲೆನ್ನ ಕೋಲೆ
ಕಸವಿಸಿ ಇಟ್ಟಾದೆ ತಾಯಿ ಕೋಲೆನ್ನ ಕೋಲೆ
ಹಿಡಿನುಚ್ಚ ಸೊಸೆತೇರುಂಡಾರೆ ಅಮಗಿ ಮಜ್ಜಿಗಿ ಸೊಸತೇರುಂಡಾರ
ಹಿಡಿನುಚ್ಚ ಸೊಸೆತೇರುಂಡಾರೆ ಕೋಲೆನ್ನ ಕೋಲೆ
ಅಮಗಿ ಮಜ್ಜಿಗಿ ಸೊಸತೇರುಂಡಾರೆ ಕೋಲೆನ್ನ ಕೋಲೆ
ಅಯ್ಯಯೋ ಸಾದಾಶಿವನೆ ಆರ್ಯಾಣ್ಹಾದಿ ಹಿಡದಾಳೆ ಹೊನ್ನ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣದಾರಿದಾಗೆ ಅಣ್ಣನ ಗೆಳೆಯ ಆರ್ಹೂಡ್ಯಾನೆ
ಅಣ್ಣನ ಗೆಳೆಯ ಆರ್ಹೂಡ್ಯಾನೆ ಕೋಲೆನ್ನ ಕೋಲೆ
ಅಣ್ಣನ ಗೆಳೆಯ ಆರ್ಹೂಡ್ಯಾನೆ ಕೋಲೆನ್ನ ಕೋಲೆ
ಒಂದ ರೊಟ್ಟಿ ಕುಡು ಅಣ್ಣ ಥೆಮಗಿ ನೀರ ಕುಡು ಅಣ್ಣ
ಹಸುಭಾಳ ಆಗ್ಯಾವಣ್ಣ ಕೋಲೆನ್ನ ಕೋಲೆ
ಕಸವಿಸಿ ಇಟ್ಟಾದಣ್ಣ ಕೋಲೆನ್ನ ಕೋಲೆ
ಒಂದ ರೊಟ್ಟಿಕೊಟ್ಟಿದಾರೆ ಥೆಂಬಗಿ ನೀರ ಕೊಟ್ಟಿದ್ದಾರೆ
ಒಂದ ರೊಟ್ಟಿ ಉಂಡಾಳೆ ಹೊನ್ನ ಕೋಲೆನ್ನ ಕೋಲೆ
ಒಂದ ರೊಟ್ಟಿ ಕೊಂಡಾಳೆ ಹೊನ್ನ ಕೋಲೆನ್ನ ಕೋಲೆ
ಆಸಿವಂತವನಾಗೊ ಐದು ಗೊಲ್ಯವನಾಗೋ
ಐದಗೊಲ್ಯವನಾಗೋ ಕೋಲೆನ್ನ ಕೋಲೆ
ಐದಗೊಲ್ಯವನಾಗೋ ಕೋಲೆನ್ನ ಕೋಲೆ
ಅಲ್ಲಿಂದು ಬಂದಾಳೆ ಹೊನ್ನ ಆರ್ಯಾಣ್ಹಾದಿ ಹಿಡುದಾಳೆ ಹೊನ್ನ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣ್ಹಾದಿ ಹಿಡುದಾಳೆ ಹೊನ್ನ ಕೋಲೆನ್ನ ಕೋಲೆ
ಆರ್ಯಾಣದಾರಿದಾಗ ಸಿದ್ಲಂಬಪೂರಂಬ ದೇವರ ಗುಡಿಯೇ
ದೇವರ ಸೇವಾ ಮಾಡ್ಯಾಳೆ ಹೊನ್ನ ಕೋಲೆನ್ನ ಕೋಲೆ
ದೇವರ ಸೇವಾ ಮಾಡ್ಯಾಳೆ ಹೊನ್ನ ಕೋಲೆನ್ನ ಕೋಲೆ
ಬೆಳ್ಳಿ ಕೂಡಲಿ ಮಗಳೆ ಬಂಗಾರ ಕೂಡಲಿ ಮಗಳೆ
ಏನ ಬೇಡುತಿ ಬೇಡೆ ಮಗಳೆ ಕೋಲೆನ್ನ ಕೋಲೆ
ಏನ ಬೇಡುತಿ ಬೇಡೆ ಮಗಳೆ ಕೋಲೆನ್ನ ಕೋಲೆ
ಬೆಳ್ಳಿಯ ನಾವಲ್ಯ ತಂದಿ ಭಂಗಾರ ನಾವಲ್ಯ ತಂದಿ
ಬಟ್ಟಲ್ಹಿಡದು ಬೀರೆಯಿಲ್ಲ ಕೋಲೆನ್ನ ಕೋಲೆ
ತೊಟ್ಟಲ್ಹಿಡದು ತೂಗೆಯಿಲ್ಲ ಕೋಲೆನ್ನ ಕೋಲೆ
ಸಾಧು-ಸಂತರ ಕೂಡಿ ಹೊನ್ನಮ್ಮನ ಮದಿಯ ಮಾಡಿದಾರೆ
ಬಟ್ಟಲ್ಹಿಡದು ಬೀರಿದಾಳೆ ಕೋಲೆನ್ನ ಕೋಲೆ
ತೊಟ್ಟಲ್ಹಿಡದು ತೂಗಿದಾಳೆ ಕೋಲೆನ್ನ ಕೋಲೆ
ಸತಿ ಬೀಳುವುದು ಶಿವನು ಎಬ್ಬಿಸುವುದು
1
ಹಕ್ಕಿಗಿ ಹಕ್ಕಿ ಉಂಟ ಪತಿವರತಿ ನೇರಕುಂಟ
ಯಾವ ದೇಶಿಯಾದ ಮಗವ ನೀನೆ
ಯಾವ ದೇಶಿಯಾದ ಮಗವ ನೀನೆ
ಕುರಿಕಾಯ ಅಣ್ಣದೇರೆ ಕುರಿಕಾಯ ತಮ್ಮದೇರೆ
ಆಚಿಯ ಕರವ ಈಚಿಗ್ಹೊಡಿರ್ಯೊ
ಆಚಿಯ ಕರವ ಈಚಿಗ್ಹೊಡಿರ್ಯೊ
2
ಆಚಿಯ ಕರವ ಈಚಿಗಿ ಹೊಡಿಲಾಕ
ನಿಮ್ಮಪ್ಪ ಇಟ್ಟ ಆಳಯಾನೆ ?
ನಿಮ್ಮಪ್ಪ ಇಟ್ಟ ಆಳಯಾನೆ ?
ನಮ್ಮಪ್ಪ ಇಟ್ಟ ಆಳಾನ ಇದ್ದಿದಾರ
ಉಪ್ಪುರಗಿ ಮಣ್ಣ ಉದುಸೆನಲ್ಲೊ
ಉಪ್ಪುರುಗಿ ಮಣ್ಣ ಉದುಸೆನಲ್ಲೊ
ಕುರಿಕಾಯ ಅಣ್ಣದೇರೆ ಕುರಿಕಾಯ ತಮ್ಮದೇರೆ
ಆಚಿಯ ಕರವ ಈಚಿಗ್ಹೊಡಿರ್ಯೊ
ಆಚಿಯ ಕರವ ಈಚಿಗ್ಹೊಡಿರ್ಯೊ
ಆಚಿಯ ಕರವ ಈಚಿಗಿ ಹೊಡಿಲಾಕ
ನಿಮ್ಮವ್ವ ಇಟ್ಟ ಆಳಯಾನ ?
ನಿಮ್ಮವ್ವ ಇಟ್ಟ ಆಳಯಾನ ?
ನಮ್ಮವ್ವ ಇಟ್ಟ ಆಳಾನ ಇದ್ದಿದಾರ
ಉಪ್ಪುರುಗಿ ನೀರ ಕುದುಸೆಳಲ್ಲೊ
ಉಪ್ಪುರುಗಿ ನೀರ ಕುದುಸೆಳಲ್ಲೊ
3
ನೀ ಊಡಂಥ ಸೀರ್ಯಾವ ತಂದಿದಾನೆ
ಊಡಲ್ಲಿ ಬಾರೆ ಮುದ್ದಗಿಣಿಯೇ
ಊಡಲ್ಲಿ ಬಾರೆ ಮುದ್ದಗಿಣಿಯೇ
ನಿಮ್ಮವ್ವ ಉಟ್ಟಿದಾಳೊ ನಿಮ್ಮಕ್ಕ ಉಟ್ಟಿದಾಳೊ
ಉಟ್ಟಾಳೊ ನಿನ್ನ ಕಿರಿಯ ತಂಗೆ
ಉಟ್ಟಾಳೊ ನಿನ್ನ ಕಿರಿಯ ತಂಗೆ
ನೀ ತೋಡಂಥ ಕುಬ್ಬಸ ತಂದಿದಾನೆ
ತೋಡಲ್ಲಿ ಬಾರೆ ಮುದ್ದಗಿಣಿಯೇ
ತೋಡಲ್ಲಿ ಬಾರೆ ಮುದ್ದಗಿಣಿಯೇ
ನೀ ಈಡಂಥ ವಸ್ತಾರ ತಂದಿದಾನೆ
ಈಡಲ್ಲಿ ಬಾರೆ ಮುದ್ದಗಿಣಿಯೇ
ಈಡಲ್ಲಿ ಬಾರೆ ಮುದ್ದಗಿಣಿಯೇ
ನಿಮ್ಮವ್ವ ಇಟ್ಟಿದಾಳೊ ನಿಮ್ಮಕ್ಕ ಇಟ್ಟಿದಾಳೊ
ಇಟ್ಟಾಳೊ ನಿನ್ನ ಕಿರಿಯ ತಂಗೆ
ಇಟ್ಟಾಳೊ ನಿನ್ನ ಕಿರಿಯ ತಂಗೆ
ನೀ ಕೂಡಂಥ ಕುದ್ದರಿ ತಂದಿದಾನೆ
ಕೂಡಲ್ಲಿ ಬಾರೆ ಮುದ್ದಗಿಣಿಯೇ
ಕೂಡಲ್ಲಿ ಬಾರೆ ಮುದ್ದಗಿಣಿಯೇ
ನಿಮ್ಮವ್ವ ಕುಂತಿದಾಳೊ ನಿಮ್ಮಕ್ಕ ಕುಂತಿದಾಳೊ
ಕುಂತಾಳೊ ನಿನ್ನ ಕಕರಿಯ ತಂಗೆ
ಕುಂತಾಳೊ ನಿನ್ನ ಕಿರಿಯ ತಂಗೆ
4
ಮುದ್ದಾನೆ ಯಮುನ ತಂಗಿ ಕೈಸೇರಿ ಹೋಗಿದಾಳಂತ್ಹೋಗಿನೆ ಹೇಳರಿ
ನಮ್ಮಣ್ಣದೆರಿಗೆ ಹೋಗಿನೆ ಹೆಳರಿ ನಮ್ಮಣ್ಣದೆರಿಗೆ
ಕುರಿಕಾಯ ಅಣ್ಣದೇರು ಅಲ್ಲಿಗೆ ಹೋಗಿದಾರ
ನಿಮ್ಮ ತಂಗಿ ಯಮುನ ಕೈ ಸೇರಿ ಹೋಗ್ಯಾಳ
ನಿಮ್ಮ ತಂಗಿ ಯಮುನ ಕೈ ಸೇರಿ ಹೋಗ್ಯಾಳ
ಕೆಂಪ ಮಡ್ಡಿ ಮ್ಯಾಲ ಕೆಂಪ ಕುದರಿ ಹಾರವುತ್ತ
ಹೊಂಟಾರೆ ಅಕಿನ ಅಣ್ಣದೇರೇ
ಹೊಂಟಾರೆ ಅಕಿನ ಅಣ್ಣದೇರೇ
ಬಿಳೆ ಮಡ್ಡಿ ಮ್ಯಾಲ ಬಿಳೆ ಕುದರಿ ಹಾರವುತ್ತ
ಹೊಂಟಾರೆ ಅಕಿನ ಅಣ್ಣದೇರೇ
ಹೊಂಟಾರೆ ಅಕಿನ ಅಣ್ಣದೇರೇ
ಹೊಂಟಾರೆ ಅಕಿನ ಅಣ್ಣಾನೆ ಅಲ್ಲಿಗಾರ
ಕಚಕಚ ಅವರು ಕಡುದಾರಲ್ಲೇ
ಕಚಕಚ ಅವರು ಕಡುದಾರಲ್ಲೇ
ಕಚಕಚ ಕಡದು ಬಾಯಿಲಿ ಅನುತಾರೆ
ಬಾಯಿಲಿ ಕಳ್ಳ ಸುಲುದಾರಲ್ಲೇ
ಬಾಯಿಲಿ ಕಳ್ಳ ಸುಲುದಾರಲ್ಲೇ
ಬಾಯಿಲಿ ಕಳ್ಳ ಸಲುದುನೆ ಅನುತಾಳೆ
ಹಾರರ ಮಗಳ ಸತಿ ಬಿದ್ದೇ
ಹಾರರ ಮಗಳ ಸತಿ ಬಿದ್ದೇ
ಹಾರಾರ ಮಗಳ ಸತಿ ಬಿದ್ದು ನಂಬಾದು ಕೇಳಿ
ಹಡದಪ್ಪ ಬಂದು ಕೂsದರೇರೇ
ಹಡದಪ್ಪ ಬಂದು ಕೂsದರೇರೇ
ಹಡದಪ್ಪ ಬಂದು ಕುದರೇರಿ ಅನುತಾರೆ
ಬಡವಾಗೆ ಮಗಳ ಕೂಡಣಿಲ್ಲೇ
ಬಡವಾಗೆ ಮಗಳ ಕೂಡಣಿಲ್ಲೇ
ಬಡವನಾದರು ಪುರುಷರು ಭಲ್ಯಾವನಾದರು ಪುರುಷರು
ಒಲ್ಹೋಗೊ ತಂದಿ ಸುಮ್ಮನ್ಹೋಗೋ
ಒಲ್ಹೋಗೊ ತಂದಿ ಸುಮ್ಮನ್ಹೋಗೋ
ಹಾರಾರ ಮಗಳ ಸತಿಬಿದ್ದುನಂಬದು ಕೇಳಿ
ಹಡದವ್ವ ಬಂದು ಕುದರೇರೇ
ಹಡದವ್ವ ಬಂದು ಕುದರೇರೇ
ಹಡದವ್ವ ಬಂದು ಕುದರೇರಿ ಅನುತಾಳೆ
ಬಡವಾಗೆ ಮಗಳ ಕೂಡಣಿಲ್ಲೇ
ಬಡವಾಗೆ ಮಗಳ ಕೂಡಣಿಲ್ಲೇ
ಬಡವನಾದರು ಪುರುಷರು ಭಲ್ಯಾವನಾದರು ಪುರುಷರು
ಒಲ್ಹೋಗೆ ತಾಯಿ ಸುಮ್ಮನ್ಹೋಗೇ
ಒಲ್ಹೋಗೆ ತಾಯಿ ಸುಮ್ಮನ್ಹೋಗೇ
5
ಹಾರರ ಮಗಳು ಸತಿ ಬಿದ್ದು ನಂಬಾದು ಕೇಳಿ
ಶಿವನು ಬಂದಾರಲ್ಲಿಗಿ ಶಿವನು ಬಂದಿದಾರೆ
ಅಲ್ಲಿಗಿ ಶಿವನು ಬಂದುನೆ ಅನುತಾರೆ
ಹೆಬ್ಬೊಟ್ಟ ಶೀಳಿ ಅಂಬರುತ ಥುಂಬೀ
ಹೆಬ್ಬೊಟ್ಟ ಶೀಳಿ ಅಂಬರುತ ಥುಂಬೀ
ಹೆಬ್ಬೊಟ್ಟ ಶೀಳಿ ಅಂಬರುತ ಥುಂಬಿದಾರೆ
ಶಿವ ಶಿವನಂತ ಎದ್ದೆ ಕುಂತುರೇ
ಶಿವ ಶಿವನಂತ ಎದ್ದೆ ಕುಂತುರೇ
* * *
Leave A Comment