1. ಹೋರಿ ಹಾಡು
ಕಾಶಾಳ ಕಾಶಿ ಮಾಶಾಳಮಾಸಿ
ಕಾಶಿಗಿ ಹೋಗಾದು ಯ್ಯ ಹೋರಿ
ಹೋರಿ ಹೆಸರ ಚಾಮಚಾಮಕ
ಬಸವಪ್ಪ ಅವನ ಹೆಸರ
ರಾಂತರಾಗಿತ್ತು ಕಂದನ ಸಾಕ
ಹೇಳಲಿಕೇನು ? ಕೇಳಲಿಕೇನು ?
ಕಾಲಿಗಿ ನಾಲ ಬೆನ್ನಿಗಿ ಧೂಲಾ
ಮೋತಿಗಿ ಹಾಕ್ಯಾರ ಯಾತರ ಮಗಡ
ಬೆಳ್ಳಿ ತಗಡಿನ ಭಾಸಿಂಗ ಮಗಡ
ಮ್ಯಾಲ ಕುಂತಾಳ ಪಾರ್ವತಿ
ಹಿಂದ ಹೊಡಿತಾನ ಪರಮೇಶ್ವರ
ಲಕ್ಕಪ್ಪ ಲಕ್ಕಪ್ಪ ಲಾಲೊ
ಲಕ್ಕಿ ಕಂಟ್ಯಾಗ ಜೇನೊ
ಜೇನು ಬಿಡಿಸಾಂವ ಜಾಣಿರಬೇಕು
ಜಾಣ್ಗೊಂದು ಅಂಗಿರಬೇಕು
ಅಂಗಿಗೊಂದು ಕಿಸೆಯಿರಬೇಕು
ಕಿಸ್ಯಾದಾಗೊಂದು ದುಡ್ಡಿರಬೇಕು
ದುಡ್ಡಿನ ಬೆಲ್ಲ ತರಸಿರಬೇಕು
ಆಕಳ ಗಿಣ್ಣ ಕಾಸಿರಬೇಕು
ಫರಕ ಫುರಕ್ ಸುರದಿರಬೇಕು
ಅಡಕಲ ಸಂದ್ಯಾಗ ಹೇತಿರಬೇಕು
ಅತ್ತಿ ಕೈಲೆ ಬಳಸಿರಬೇಕು.
ಮಾವನ ತಲಿಮ್ಯಾಲ ಹೊರಸಿರಬೇಕು.
ಆಣಿಪೀಣಿ ನಮ್ಮ ಆಕಳ ಮ್ಯಾಲ ಚೆಕ್ಕೋ20
ಹಂಡಕಾಳೋ ಭಂಡಾಕಳೊ
ಕಲಬುರಗಿ ಕಾಶಾಕಳೊ
ಕಳ್ಳರ ಕೈಯ್ಯಗ ಬೆಳ್ಳಿಯ ಕುಡ್ಗೋಲು
ಬೆಳ್ಳಿಯ ಕುಡ್ಗೋಲಿಗಿ ಮಾರಮಾರಹುಲ್ಲು
ಮಾರ ಮಾರ ಹುಲ್ಲಿಗಿ ಬೋರ ಬೋರೆ ಹಾಲು
ಬೋರ ಬೋರ ಹಾಲಿಗಿ ಘಟ್ಟಿ ಘಟ್ಟಿ ಮಸರ
ಘಟ್ಟಿ ಘಟ್ಟಿ ಮಸರೀಗಿ ಕಳ್ ಕಳ್ ತುಪ್ಪ
ಕಳ್ ಕಳ್ ತುಪ್ಪಿಗಿ ಬಳ್ ಬಳ್ ರೊಕ್ಕ
ಆಣಿಪೀಣಿ ನಮ್ಮ ಆಕಳ ಪೀಡಾವಳಿಚಿಕ್ಕೋ21*
ಆಕಳ ಆಕಳ ಇದಿರಬೇಕು 2. ಕುರಿಯ ಹಾಡು ಛೈ ಛೈ ಕೆಚ್ಚಗ ಕೈ ಛೈ ಛೈ ಜಾಲಿಕಾಯಿ 3. ಕೋಣಿನ ಹಾಡು ಕುಡ್ಡ ಕುಂಬಾರ ಕ್ವಾಣತಂದಾನ ಲಕ್ಕಪ್ಪ ಲಕ್ಕಪ್ಪ ಲಾಲೊ 4. ಎಮ್ಮೆ ಹಾಡು ಟುರ ಟುರ ಎಮ್ಮಿ ಕಾಯಿದೇವಣ್ಣ ಟ್ರು ಟ್ರು ಎಮ್ಮೆ ಕಾಯುತಾ ಬಂದೆ 20,21,22 ಸಾಯಬಣ್ಣ ಮಕ್ತಪ್ಪ ಗ್ಯಾಂಗಮೆನ್, ಮಲ್ಲಾಬಾದ್–ಅಂಚೆ, ಅಫಜಲಪುರ ತಾಲ್ಲೂಕು, ಗುಲ್ಬರ್ಗ ಜಿಲ್ಲೆ 23,24 ಬಸಪ್ಪ ಭೀಮಪ್ಪಾ ಮೋಟಗಿ, ಮಲ್ಲಾಬಾದ್–ಅಂಚೆ, ಅಫಜಲಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ. 25) ಶರಣಪ್ಪ ಲಕ್ಕಪ್ಪಸಿಂಗೆ, ಮಲ್ಲಾಬಾದ್–ಅಂಚೆ, ಅಫಜಲಪುರ ತಾಲ್ಲೂಕು, ಗುಲ್ಬಾರ್ಗ ಜಿಲ್ಲೆ. [4] 26,27,28) ಶರಣಪ್ಪ ಲಕ್ಕಪ್ಪಸಿಂಗೆ, ಮಲ್ಲಾಬಾದ್–ಅಂಚೆ, ಅಫಜಲಪುರ ತಾಲ್ಲೂಕು, ಗುಲ್ಬರ್ಗ ಜಿಲ್ಲೆ.
ಆಕಳ ಗಿಣ್ಣ ಕಾಸಿರಬೇಕು
ಫರಕs ಫುರಕs ಸುರದಿರಬೇಕು
ಮೂಲ್ಯಾಗ ಕುಂತು ಹೇತಿರಬೇಕು
ಅತ್ತಿಕೈಲೆ ಬಳಸಿರಬೇಕು
ಮಾವನ ತಲಿಮ್ಯಾಲ ಹೊರಸಿರಬೇಕೊ
ಆಣಿಪೀಣಿ ನಮ್ಮ ಆಕಳ ಪೀಡಾವಳಿ ಚೆಕ್ಕೋ22
ನಾಳೀಗಿ ಬಂದು ಜ್ವಾಳ ಕೊಯ್ಯಿ
ನಾಡಿದ್ದು ಬಂದು ಕೂಲಿ ಒಯ್ಯಿ
ಆಣಿಪೀಣಿ ನಮ್ಮ ಕುರಿಪೀಡಾವಳಿ ಚೆಕ್ಕೋ23*
ನಾಳೀಗಿ ಬಂದು ಕೊನಿ ಕೊಯ್ಯಿ
ನಾಡದ್ದು ಬಂದು ಕೂಲಿ ಒಯ್ಯಿ
ಆಣಿಪೀಣಿ ನಮ್ಮ ಕುರಿ ಮ್ಯಾಲಿಚೆಕ್ಕೋ24[2]*
ತೊಡ್ಡ ಬಡಿಲಾರದೆ ತಾನೆ ತಿಂದಾನ
ಮಕ್ಕಳ ಬಂದರ ಝಾಡಿಸಿ ಒದ್ದಾನ
ಹೆಂಡತಿಬಂದರ ಕರ್ಕೊಂಡು ಉಂಡಾನ
ಆಣಿಪೀಣಿ ನಮ್ಮ ಕ್ವಾಣಿನ ಮ್ಯಾಲ ಚೆಕ್ಕೋ25[3]*
ಲಕ್ಕಿ ಕಂಟಿ ಸಾಲೊ
ಸಾಲನ್ಯಾಗೊಂದು ಕ್ವಾಣ
ಆ ಕ್ವಾಣ ತರಿಸಿ
ಊರ ತುಂಬಾ ಮೆರಸಿ
ಆಣಿಪೀಣಿ ನಮ್ಮ ಕ್ವಾಣಿನ ಪೀಡಾವಳಿಚೆಕ್ಕೊ26*
ಘಟ್ಟಿ ಘಟ್ಟಿ ಮೊಸರ ಉಂಡೇವಣ್ಣ
ಸರ ಸರ ಮಜ್ಜಿಗಿ ಕುಡದೇವಣ್ಣ
ಕಳ್ ಕಳ ತುಪ್ಪ ಸುರದೇವಣ್ಣ
ಆಣಿಪೀಣಿ ನಮ್ಮ ಎಮ್ಮಿ ಪೀಡಾವಳಿಚೆಕ್ಕೋ27*
ಗುಡ್ಡಾ ಗುಡ್ಡಾ ಮೇಯಿಸುತ ಬಂದೆ
ಹೊರಿ ಹೊರಿ ಹುಲ್ಲ ಎಮ್ಮೆಗೆ ತಂದೆ
ಆಣಿಪೀಣಿ ನಮ್ಮ ಎಮ್ಮಿ ಪೀಡಾವಳಿಚೆಕ್ಕೋ28[4]*
Leave A Comment