ಫರಾಳ ಹಾಡು-1

ಗೌರವ್ವ ಗೌರವ್ವ ಹೂವಾ ಮುಡಿಯವ್ವ
ಅವರಿ ಹಂತಾ ಅಣ್ಣಿರಲಿ ತೊಗರಿ ಹಂತಾ ತಮ್ಮಿರಲಿ
ಮನ್ನೇರಂತಾ ಮಾವಿರಲಿ ಸೆಟ್ಟೆರಂಥಾ ಭಾವಿರಲಿ
ತಾಯಿನೆ ಸುಕುಲಿರಲಿ ಗೌರವ್ವ ತಂದಿನೆ ಸುಕುಲಿರಲಿ
ಮತ್ತೈದು ಹೂವಾನೇರುಸ್ತ ಮಕ್ಕಳು ಸುಕುಲಿರಲಿ
ಸುತ್ತೈದು ಹೂವಾನೇರುಸ್ತಾ ಗೌರವ್ವ ಮುತ್ತೈತನ ಸುಕುಲಿರಲಿ.

ಫರಾಳ ಹಾಡು-2

ಕಾಚಕಲ್ಲಪ್ಪ ಚಿಕಣಿ ಮಲ್ಲಪ್ಪ
ಸೋತೆನೆ ತಾಯಿ ಸೋತಿಲೆ ತಾಯಿ
ಗೆದ್ದೆನೆ ತಾಯಿ ಗೆದಿಯಲಿ ಬೇಕೆ
ಕೂಡಲಿ ಬೇಕೆ ಕುದ್ದರಿ ಬೇಕೆ
ಅತಿಮನಿ ಸೊಸಿ ನಡಿಯಲಿ ಬೇಕೆ
ಹೆಣ್ಣೊಂದು ಗಂಡೊಂದು ಹಡಿಯಲಿ ಬೇಕೆ.

ಫರಾಳ ಹಾಡು-3

ಯಾರ ಗವರವ್ವ ನೀಲಗಾರ ಗವರವ್ವ
ನಮ್ಮ ಗವರವ್ವ ಮುಟ್ಟಾಗ್ಯಾಳಂದು
ಹಾಲಿಲಿ ತೊಳುದಾರೆ ಹಾಲಾಲಾಗ್ಯಾಳೆ
ತುಪ್ಪುದಿಲಿ ತೊಳುದಾರೆ ತುಪ್ಪತುಪ್ಪಾಗ್ಯಾಳೆ
ಕಾಚಕಲ್ಲಪ್ಪ ಚಿಕಣಿ ಮಲ್ಲಪ್ಪ
ಭಾವ ಮೈದುನ ಕೂಡಿ ದಂಡಾಡ್ಯರೆನೆ
ಸೋತೆನೆತಾಯಿ ಸೋತು ಬೆಳಗಾಗಿ
ಗೆದ್ದೆನೆ ತಾಯಿ ಗೆಲ್ಲಂತುರ ಬೆಳಗಾಗಿ
ಹೆಣ್ಣೊಂದ್ಹಡಿ ಗಂಡೊಂದ್ಹಡಿ ಅತ್ತಿಮಾವುನ್ಹೆಸುರ‌್ಹೇಳು.

ಫರಾಳ ಹಾಡು-4

ಪಡಪತ್ತರುಳ್ಳ ಕಂದನ ಕಳಸಂದೆ
ದೇವರ ದೇವಕ್ಕಿ ಯಾರು ಯಾರ ಮಾಡಿ
ಜಲಗಾರನ ಮಗಳ ಗಂಗಮ್ಮ ಬಂದಾಳೆ
ಹಾಲಿಲಿ ಮುಟ್ಟಾಗಿ ಹರಸುನಾಗ್ಯಾಳೆ
ತುಪ್ಪುಲೆರದಾಳೆ ತಪ್ಪವನಾಗ್ಯಾಳೆ
ಅತ್ತಿನೆರೆಡು ಬಂದಾವೆ ಮುತ್ತಿನೆಡ್ಡಾರುತಗಿ
ಇತ್ತಿನೆರಡು ಬಂದಾವೆ ಮುತ್ತಿನೆಡ್ಡಾರುತಗಿ
ಸತಿ ಬಂದೆನೆ ತಾಯಿ ಸೇಲತ್ಗಿ ಮಾಡಿ
ಗೆದಿ ಬಂದೆನೆ ತಾಯಿ ಗೇಲತ್ಗಿ ಮಾಡಿ
ಕುದರಿಯ ಮ್ಯಾಲ ಕೂಡಲಿ ಬೇಕೆ
ಹೆಣ್ಣೊಂದು ಗಂಡೊಂದು ಹಡಿಯಲಿ ಬೇಕೆ
ರೇವಣಸಿದ್ಧಯ್ಯಗ ನೆನೆಯಲಿ ಬೇಕೆ

* * *