Loading Events

« All Events

  • This event has passed.

ಡಾ. ನಾ. ಮೊಗಸಾಲೆ

August 27, 2023

೨೭-೮-೧೯೪೪ ಗ್ರಾಮೀಣ ವೈದ್ಯರಾಗಿ, ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಪ್ರಸಿದ್ಧರಾಗಿರುವ ನಾ.ಮೊಗಸಾಲೆಯವರು ಹುಟ್ಟಿದ್ದು ಕಾಸರಗೋಡಿನ ಮಂಜೇಶ್ವರದ ಬಳಿಯ ಮೊಗಸಾಲೆ ಎಂಬ ಪ್ರದೇಶದಲ್ಲಿ. ತಂದೆ ವಿಠಲಭಟ್ಟರು, ತಾಯಿ ಸರಸ್ವತಿ. ಪ್ರಾರಂಭಿಕ ಶಿಕ್ಷಣ ಕೋಳ್ಯೂರು, ಹೈಸ್ಕೂಲಿಗೆ ಸೇರಿದ್ದು ಕನ್ಯಾನದಲ್ಲಿ. ಉಡುಪಿಯ ಆಯುರ್ವೇದ ಕಾಲೇಜಿನಿಂದ ಡಿ.ಎಸ್.ಎ.ಸಿ. ಡಿಪ್ಲೊಮ ಪದವಿ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ಕೃಷಿ ಆರಂಭ. ಭಾರತಿ, ಗೋಕುಲ, ಕೈಲಾಸ, ವಿಕ್ರಮ, ಯುಗಪುರುಷ, ನವಭಾರತ ಪತ್ರಿಕೆಗಳಿಗೆ ಬರೆದ ಕಥೆ, ಕವನ ಪ್ರಕಟಿತ. ಡಿ.ಎಸ್.ಎ.ಸಿ. ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಕಾರ್ಕಳ ತಾಲ್ಲೂಕು ಬೋರ್ಡ್ ನಡೆಸುತ್ತಿದ್ದ ‘ರೂರಲ್ ಡಿಸ್ಪೆನ್ಸರಿ’ಯಲ್ಲಿ ಅರೆಕಾಲಿಕ ವೈದ್ಯರಾಗಿ. ಹುದ್ದೆಯ ಜೊತೆಗೆ ತೆರೆದ ಖಾಸಗಿ ಚಿಕಿತ್ಸಾಲಯ ‘ಕರ್ನಾಟಕ ಕ್ಲಿನಿಕ್’, ವೈದ್ಯಕೀಯದ ಜೊತೆಗೆ ರೂಢಿಸಿಕೊಂಡ ಸಾಹಿತ್ಯ ಸಂಘಟನೆಯ ಕಾರ‍್ಯಕ್ರಮ. ೧೯೬೬ರಲ್ಲಿ ಕಾಂತಾವರದಲ್ಲಿ ರೈತ ಯುವಕ ಸಂಘ ಸ್ಥಾಪನೆ. ೧೯೭೬ರಲ್ಲಿ ಬೇಲಾಡಿಯಲ್ಲಿ ಕಾಂತಾವರ ಕನ್ನಡ ಸಂಘ ಪ್ರಾರಂಭ. ೧೯೭೮ರಲ್ಲಿ ಮೂಡಬಿದಿರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪನೆಗ ಮೂಲ ಪ್ರೇರಕರು. ಕಾಂತಾವರ ಕನ್ನಡ ಸಂಘ ಮುದ್ದಣ ಪ್ರಶಸ್ತಿ ಯೋಜನೆಯಿಂದ ಸಾಹಿತ್ಯೋತ್ಸವ, ವಿಚಾರ ಸಂಕಿರಣ, ಕೃತಿ ಪ್ರಕಟಣೆಯ ಕಾರ‍್ಯ. ವರ್ಧಮಾನ ಪ್ರಶಸ್ತಿ ಪೀಠ ತನ್ನ ವಾರ್ಷಿಕ ಪ್ರಶಸ್ತಿ ಯೋಜನೆಯಿಂದ ನಾಡಿನಾದ್ಯಂತ ಪರಿಚಿತ. ಸಾಹಿತ್ಯ ಸಂಘಟನೆಯೊಂದಿಗೆ ಸೃಜನಶೀಲ ಸಾಹಿತ್ಯ ಕೃಷಿ ರಚನೆ, ಕಾದಂಬರಿಗಳು-‘ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದ್ದು, ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ತೊಟ್ಟಿ, ಉಪ್ಪು, ಅರ್ಥದವರೆಗೆ ೧೪ ಕೃತಿ ಪ್ರಕಟಿತ. ಕವನ ಸಂಕಲನ-ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ. ಸಂಪಾದಿತ- ರತ್ನಾಕರ, ಪ್ರಸ್ತುತ, ಮುದ್ದಣ, ಮನೋರಮಾ, ವಾಣಿ, ಸ್ವರ್ಣ ನಂದಾದೀಪ, ದರ್ಪಣ, ಕೋಳ್ಯೂರು. ಇದೀಗ ಆತ್ಮಚರಿತ್ರೆ ‘ಬಯಲಬೆಟ್ಟ’ ಪ್ರಕಟಿತ. ಬಂದ ಪ್ರಶಸ್ತಿಗಳು ಹಲವಾರು-ಪ್ರಭವ ಕವನ ಸಂಕಲನಕ್ಕೆ ಕಡೆಂಗೋಡ್ಲು ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ. ನನ್ನದಲ್ಲದ್ದು ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ. ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಸಾಹಿತಿ : ಸುನಂದ ಪ್ರಕಾಶ ಕಡಮೆ – ೧೯೬೭ ಸುಭಾಷಿಣಿ – ೧೯೬೯

Details

Date:
August 27, 2023
Event Category: