ಕಣಜ: ಕನ್ನಡದಲ್ಲಿ ಮಾಹಿತಿ ಸಂಗ್ರಹ, ಆನ್ಲೈನ್ ಪ್ರಕಟಣೆ
ಕಣಜ ಎಂದರೆ ಕನ್ನಡ ಭಾಷೆಯಲ್ಲಿ ಎಲ್ಲ ಬಗೆಯ ಅರಿವಿನ ಹರಿವುಗಳು ಮುಕ್ತವಾಗಿ ಸಿಗುವ ವಿಶ್ವವ್ಯಾಪಿ ಜಾಲತಾಣ (ವೆಬ್ಸೈಟ್). ಇರುವ (ಈಗಾಗಲೇ ಪ್ರಕಟಿತ) ಜ್ಞಾನದ ಸಂಗ್ರಹ, ಪರಿಷ್ಕಾರ ಮತ್ತು ಹೊಸ ಜ್ಞಾನದ ಸೃಷ್ಟಿ – ಇವು ಕಣಜದ ಸ್ಥೂಲ ಚಟುವಟಿಕೆಗಳು. `ಕಣಜ’ವನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆಯನ್ನು ಪರಿಕಲ್ಪಿಸಿ, ರೂಪಿಸಿದ್ದು ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ) ಇವರು ಜಾರಿಗೊಳಿಸುತ್ತಿದ್ದಾರೆ.
- ಪಠ್ಯ, ಚಿತ್ರ, ಧ್ವನಿ ಮತ್ತು ಚಲನಚಿತ್ರ – ಹೀಗೆ ಬಹುಮಾಧ್ಯಮಗಳಲ್ಲಿ ಕನ್ನಡ ಮಾಹಿತಿಯನ್ನು ಪ್ರಕಟಿಸಲು ಬೇಕಾದ ಎಲ್ಲ ಮಾಹಿತಿ ಸಂಗ್ರಹ ಮತ್ತು ತಂತ್ರಜ್ಞಾನದ ಕ್ರಮಗಳನ್ನೂ ಕಣಜ ಜಾಲತಾಣದಲ್ಲಿ ಅಳವಡಿಸಲಾಗುತ್ತದೆ.
- ವಿವಿಧ ವಿಶ್ವವಿದ್ಯಾಲಯಗಳು, ಅಧ್ಯಯನ ಸಂಸ್ಥೆಗಳನ್ನು ವಿನಂತಿಸಿಕೊಂಡು ಈಗಾಗಲೇ ಸಿದ್ಧಪಡಿಸಿದ ಮಾಹಿತಿಗಳನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿ ಪ್ರಕಟಿಸಲಾಗುವುದು.
- ವಿವಿಧ ಸಾಹಿತಿಗಳು, ಲೇಖಕರು, ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳನ್ನು ಅವರ ಸಮ್ಮತಿ ಪಡೆದು ಪ್ರಕಟಿಸಲಾಗುತ್ತದೆ. ನೀವು ಲೇಖಕರಾಗಿದ್ದರೆ, `ಕಣಜ’ಕ್ಕೆ ನಿಮ್ಮ ಸಿದ್ಧ ಲೇಖನ ಕಳಿಸಿಕೊಡಬಹುದು; ಪುಸ್ತಕಗಳನ್ನು ಕೊಡಬಹುದು; `ಕಣಜ’ಕ್ಕಾಗಿಯೇ ಹೊಸದಾಗಿ ಲೇಖನಗಳನ್ನು ಬರೆಯಬಹುದು.
- ಪ್ರಸಕ್ತ ಕಾಲಮಾನಕ್ಕೆ ಬೇಕಾದ ಸಂಗತಿಗಳ ಬಗ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಸಿ ಪ್ರಕಟಿಸಲಾಗುವುದು. ಸ್ವತಂತ್ರ ಲೇಖನಗಳಲ್ಲದೆ ಅನುವಾದಿತ ಕೃತಿಗಳನ್ನೂ ಸಂಗ್ರಹಿಸಲಾಗುವುದು.
- ಸಾರ್ವಜನಿಕರು ಜಾಲತಾಣದಲ್ಲೇ ತಮ್ಮ ಲೇಖನಗಳನ್ನು, ಪ್ರತಿಕ್ರಿಯೆಗಳನ್ನು ಬರೆಯುವುದಕ್ಕೆ ಸಾಧನಗಳನ್ನು ಒದಗಿಸಿ ಸಾರ್ವಜನಿಕ ಭಾಗಿತ್ವವನ್ನು ಹೆಚ್ಚಿಸಲಾಗುವುದು.
- ಮಾಹಿತಿಗಳು ಆದಷ್ಟೂ ಅಧಿಕೃತವೂ, ಖಚಿತವೂ, ಸಂರ್ಣವೂ, ಗುಣಮಟ್ಟದ್ದೂ ಆಗಿರುವಂತೆ ತಜ್ಞರ ನೆರವನ್ನು ಪಡೆದು ಎಲ್ಲ ಮಾಹಿತಿಗಳನ್ನೂ ಪರಾಮರ್ಶೆಗೆ ಒಳಪಡಿಸಿಯೇ ಪ್ರಕಟಿಸಲಾಗುತ್ತದೆ.
- ದೃಷ್ಟಿಸವಾಲು ಎದುರಿಸುತ್ತಿರುವವರು ಮತ್ತು ಅನಕ್ಷರಸ್ತರು ಧ್ವನಿಯ ಮೂಲಕ, ಕನ್ನಡ ಭಾಷೆಯಲ್ಲಿ ಲೇಖನಗಳನ್ನು ಓದಲು `ಕಣಜ’ದಲ್ಲಿ ತಂತ್ರಜ್ಞಾನ ಅಳವಡಿಸಲಾಗುತ್ತದೆ.
- ಅರಿವಿನ ದಾಖಲೆಗಳ ಪ್ರಕಟಣೆಯ ಜೊತೆಗೇ ವಿವಿಧ ಜ್ಞಾನಪ್ರವಾಹಗಳ ಸಂರಕ್ಷಣೆಗೆ ಪ್ರಯತ್ನಿಸಲಾಗುತ್ತದೆ.
`ಕಣಜ’ ಸಂಚಾಲನಾ ಸಮಿತಿ
ಅಧ್ಯಕ್ಷರು:
ಡಾ. ಚಿರಂಜೀವಿ ಸಿಂಗ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಸದಸ್ಯರು:
- ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ಪ್ರೊ|| ರಾಮಮೂರ್ತಿ ವಿ ಎಸ್, ನಿರ್ದೇಶಕರು, ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್
- ನಿರ್ದೇಶಕರು, ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜೆನ್ ಸರ್ವಿಸಸ್ (ಇಡಿಸಿಎಸ್)
- ಪ್ರೊ|| ಎಚ್ ಪಿ ಕಿಂಚ, ಅಧ್ಯಕ್ಷರು, ಎಲೆಕ್ಟ್ರಿಕಲ್ಸ್ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆ
- ಶ್ರೀ ಪ್ರಸಾದ್ ರಾಮ್, ಸ್ಥಾಪಕರು, ಎಡ್ನೋವೋ ಕಲಿಕಾ ಸಂಸ್ಥೆ
- ಉಪಕುಲಪತಿಯವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ
(ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿಯವರು, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ(ನಿ)ದ ಕಾರ್ಯಪಾಲಕ ನಿರ್ದೇಶಕರು ಮತ್ತು ಐಸೋಲ್ ಕನ್ಸಲ್ಟಿಂಗ್ ಪ್ರೈ.ಲಿ., ಇದರ ವ್ಯವಸ್ಥಾಪಕ ನಿರ್ದೇಶಕರು – ಇವರು ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರು)
`ಕಣಜ’ದಿಂದ ಎಲ್ಲರಿಗೂ ಉಪಯೋಗವಿದೆ
- `ಕಣಜ’ವು ವಿಶ್ವವ್ಯಾಪಿ ಜಾಲತಾಣದಲ್ಲಿ, ಸರ್ವರೂ ಬಳಸಬಹುದಾದ ಯೂನಿಕೋಡ್ ಫಾಂಟ್ನಲ್ಲಿ ಇರುತ್ತದೆ. ಕನ್ನಡ ಓದಬಲ್ಲ ಯಾರಾದರೂ ಈ ಮಾಹಿತಿಯನ್ನು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಬಳಸಬಹುದು.
- ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರು, ಉನ್ನತ ಶಿಕ್ಷಣ ಪಡೆದವರು ಅಥವಾ ಕನಿಷ್ಟ ಶಿಕ್ಷಣ ಪಡೆದವರು, ಶಿಕ್ಷಕರು ಮತ್ತು ಶಾಲಾ / ಕಾಲೇಜು ವಿದ್ಯಾಗಳು, ಸಾರ್ವಜನಿಕ ಸೇವಾನಿರತರು, ವೃತ್ತಿಪರರು ಮತ್ತು ಮನೆಕಾರ್ಯಗಳಲ್ಲಿ ನಿರತರು – ಹೀಗೆ ಎಲ್ಲ ಸ್ತರದ ಜನರಿಗೂ ಈ ಮಾಹಿತಿಗಳು ಉಪಯುಕ್ತವಾಗುತ್ತವೆ.
- ಪ್ರತಿಯೊಂದೂ ಮಾಹಿತಿಯನ್ನು ತತ್ಸಾಮಯಿಕಗೊಳಿಸಿ, ಸದಾಕಾಲವೂ ಸರಿಯಾದ ಮತ್ತು ಸಮಕಾಲೀನವಾದ ಮಾಹಿತಿ ದೊರಕುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ.
`ಕಣಜ’ಕ್ಕೆ ಪುಸ್ತಕ, ಲೇಖನ ಕಳಿಸಿ; ಕನ್ನಡ ಬೆಳೆಸಿ
- ನೀವು ಯಾವ ವಿಷಯದ ಮೇಲೆ ಲೇಖನ ಬರೆಯುತ್ತಿದ್ದೀರಿ ಎಂಬುದನ್ನು `ಕಣಜ’ದ ನಿರ್ವಾಹಕರಿಗೆ developkanaja@gmail.com ಈ ಮಿಂಚಂಚೆಯ (ಈಮೈಲ್) ಮೂಲಕ (ನಿಮ್ಮ ದೂರವಾಣಿ ಸಂಖ್ಯೆ, ಅಂಚೆ ವಿಳಾಸ ಸೇರಿಸಿ) ತಿಳಿಸಿ. ಅಥವಾ `ಕಣಜ’ದ ಕಚೇರಿಗೆ ಪತ್ರ ಬರೆದು ವಿಚಾರಿಸಿ ಮುಂದುವರೆಯಿರಿ.
- ಗಣಕವನ್ನು ಬಳಸಿ ಅಕ್ಷರ ಜೋಡಿಸಿದ ಲೇಖನಗಳನ್ನು ಕಳಿಸಿದರೆ ತುಂಬಾ ಒಳ್ಳೆಯದು. ಅಂಥ ಲೇಖನಗಳನ್ನು ನೀವು `ಕಣಜ’ದ ಮಿಂಚಂಚೆ (ಈ ಮೈಲ್) ಬಳಸಿ, ಕಾಗದದ ಅಂಚೆ ಮೂಲಕ ಕಳಿಸಬಹುದು. ಗಣಕದಲ್ಲಿ ನೀವು ಬರಹ, ನುಡಿ, ಯೂನಿಕೋಡ್ ವಿಧಾನಗಳಲ್ಲಿ ಕಳಿಸಿದರೆ ಅನುಕೂಲ.
- ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ (ರೈತರು, ವಿದ್ಯಾಗಳು, ವಕೀಲರು, ಇಂಜಿನಿಯರುಗಳು. ಕರಕುಶಲ ವೃತ್ತಿಯವರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು.. ಹೀಗೆ) ನಿಮ್ಮ ಬದುಕಿನ, ವೃತ್ತಿಯ ಅನುಭವಗಳನ್ನು ಕಳಿಸಿಕೊಡಬಹುದು.
- ನೀವು ಕಳಿಸಿದ ಯಾವುದೇ ಮಾಹಿತಿ ಲೇಖನವನ್ನು/ಪುಸ್ತಕವನ್ನು `ಕಣಜ’ ಸಂಪಾದಕೀಯ ತಂಡವು ಸೂಕ್ತವಾಗಿ ಪರಾಮರ್ಶಿಸಿದ ನಂತರ ಸಂಪಾದಿಸಿ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಳಿಗಾಗಿ ನೀವು ಸಂಪರ್ಕಿಸಬೇಕಾದ ಮತ್ತು ಬರಹಗಳನ್ನು ಕಳಿಸಬೇಕಾದ ವಿಳಾಸ:
ಶ್ರೀ ಬೇಳೂರು ಸುದರ್ಶನ
ಸಲಹಾ ಸಮನ್ವಯಕಾರ
`ಕಣಜ‘ ಅಂತರಜಾಲ ಕನ್ನಡ ಜ್ಞಾನಕೋಶ
(ಕರ್ನಾಟಕ ಜ್ಞಾನ ಆಯೋಗದ ಯೋಜನೆ)
ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ – ಬೆಂಗಳೂರು (ಐಐಐಟಿ-ಬಿ)
26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು 560100
ದೂರವಾಣಿ: 080-41407777 ಮೊಬೈಲ್: 9741976789
ಮಿಂಚಂಚೆ (ಈಮೈಲ್): developkanaja@gmail.com, beluru@beluru.com