Categories
ಪತ್ರಿಕೋದ್ಯಮ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ಯು. ಬಿ. ರಾಜಲಕ್ಷ್ಮಿ

ಪತ್ರಿಕಾ ಕ್ಷೇತ್ರದಲ್ಲಿ ಸುಮಾರು ೩೮ ವರ್ಷಗಳ ಅನುಭವವಿರುವ ಡಾ. ಯು. ಬಿ. ರಾಜಲಕ್ಷ್ಮಿಯವರು ಪ್ರಸ್ತುತ ‘ತರಂಗ’ವಾರಪತ್ರಿಕೆಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕನ್ನಡ ಪತ್ರಿಕೋದ್ಯಮದಲ್ಲಿ ಡಿ. ಅಟ್ ಪಡೆದಿರುವ ಮೊದಲ ಪತ್ರಕರ್ತೆ.

ಮುಂಗಾರು, ಹೊಸದಿಗಂತ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿರುವ ಇವರು, ಹಲವು ಕೃತಿಗಳನ್ನು ಹೊರತಂದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆಯಾಗಿದ್ದು, ‘ತುಲಾ ಪ್ರಕಾಶನ’ವನ್ನು ನಿರ್ವಹಣೆ ಮಾಡುತ್ತ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಂದ್ರಶೇಖರ ಪಾಲೆತ್ತಾಡಿ

ಪುತ್ತೂರು ತಾಲ್ಲೂಕಿನ ಬಜೆತ್ತೂರು ಗ್ರಾಮದ ಶ್ರೀ ಚಂದ್ರಶೇಖರ ಪಾಲೆತ್ತಾಡಿ ಹೆಸರಾಂತ ಪತ್ರಕರ್ತರು, ಹೊಸದಿಗಂತ, ಮಂಗಳೂರು ಮಿತ್ರ, ಕರ್ನಾಟಕ ಮಲ್ಲ, ಉದಯದೀಪ, ಮುಂತಾದ ಪತ್ರಿಕೆಗಳಲ್ಲಿ ಅಂಕಣಗಳನ್ನು ಹಾಗೂ ವರದಿಗಳನ್ನು ಬರೆದು ಓದುಗರಿಗೆ ಹತ್ತಿರವಾದವರು. ಮುಂಬೈನಲ್ಲಿ ನೆಲೆಸಿರುವ ಇವರು, ಮುಂಬೈನಿಂದ ಪ್ರಕಟವಾಗುವ ಏಕೈಕ ಕನ್ನಡ ಪತ್ರಿಕೆ ‘ಕರ್ನಾಟಕ ಮಲ್ಲ’ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕನ್ನಡಿಗರ ಧ್ವನಿಯನ್ನು ಒಗ್ಗೂಡಿಸುವ ಮಹಾನ್ ಕಾರ್ಯವನ್ನು ಮಾಡುತ್ತಿದ್ದಾರೆ. ಇವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ, ತುಳುವ ಸಿರಿ ಪ್ರಶಸ್ತಿ, ಮುಂತಾದ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಸಂದಿವೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಂಜುನಾಥ ಅಜ್ಜಂಪುರ

ಕಳೆದ ನಾಲ್ಕು ದಶಕಗಳಿಂದ ಪತ್ರಿಕಾ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಶ್ರೀ ಮಂಜುನಾಥ ಅಜ್ಜಂಪುರ ಅವರು ವಿವಿಧ ದಿನಪತ್ರಿಕೆ, ವಾರಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ೯೦೦ ಕ್ಕೂ ಹೆಚ್ಚು ಅಂಕಣ, ಲೇಖನ,ಕಥೆ ಮತ್ತು ಪ್ರಬಂಧಗಳನ್ನು ಬರೆದವರು.
ಇವರ ಅನುವಾದಿತ ಕೃತಿಗಳು, ಅಂಕಣ ಸಂಕಲನಗಳು ಹಾಗೂ ಜೀವನ ಚರಿತ್ರೆಗಳು ಬಿಡುಗಡೆಗೊಂಡು ಪ್ರಸಿದ್ಧಿ ಪಡೆದಿವೆ. ವಾಟ್ಸ್ ಆಫ್ ಇಂಡಿಯ ಸಾಹಿತ್ಯ ಸರಣಿಯಲ್ಲಿ ಒಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದು, ಪ್ರಸ್ತುತ ವಾಟ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿ ಮತ್ತು ಅರುಣ್ ಶೌರಿ ಸಾಹಿತ್ಯ ಸರಣಿಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್‌.ಆರ್. ಶ್ರೀಶಾ

ಪತ್ರಿಕೋದ್ಯಮದಲ್ಲಿ ‘ಕರೆಂಟ್ ಮಾತು’ನಿಂದಲೇ ಹೆಸರಾದ ಹಿರಿಯ ವಿಷಯತಜ್ಞ ಪತ್ರಕರ್ತರು ಎಚ್‌.ಆರ್.ಶ್ರೀಶಾ, ಬಹುಪತ್ರಿಕೆಗಳಲ್ಲಿ ಛಾಪು ಮೂಡಿಸಿದ ಅಂಕಣಕಾರರು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ೧೯೫೧ರಲ್ಲಿ ಜನಿಸಿದ ಶ್ರೀಶ ಕನ್ನಡ ಮತ್ತು ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು. ಖಾದ್ರಿ ಶಾಮಣ್ಣರ ಗರಡಿಯಲ್ಲಿ ಪಳಗಿದ ಪತ್ರಕರ್ತರು, ಹಾಸನದ ಜನಮಿತ್ರ, ಸಂಯುಕ್ತಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕದಲ್ಲಿ ಪತ್ರಿಕಾಸೇವೆ. ವಿಷಯತಜ್ಞರು ವಿರಳವಾಗುತ್ತಿರುವ ಪತ್ರಿಕಾರಂಗದಲ್ಲಿ ಎಚ್.ಆರ್.ಶ್ರೀಶ ಅವರದ್ದು ವಿಶೇಷ ಹೆಸರು. ವಿದ್ಯುತ್ ಕ್ಷೇತ್ರದ ಬಗ್ಗೆ ಅವರದ್ದು ತಳಸ್ಪರ್ಶಿ ಅಧ್ಯಯನ, ನಿಖರ ಜ್ಞಾನ, ವ್ಯಕ್ತಿತ್ವದಂತೆ ಬರವಣಿಗೆಯೇ ಸರಳ, ಪದಗಳಂತೆ ಮಾತು ಮೃದು. ಇಂಧನ ವಲಯ ವಿದ್ಯಮಾನ, ಸಮಸ್ಯೆ, ಸವಾಲುಗಳು ಬರೆದ ಲೇಖನಸರಮಾಲೆಗೆ ಲೆಕ್ಕವಿಲ್ಲ. ಸರ್ಕಾರದ ಕಣ್ಣಿರೆಸಿದವರು. ಜನಪ್ರಿಯ ಕರೆಂಟ್ ಮಾತು’ ಅಂಕಣಕಾರರು. ಕೆಇಆರ್‌ಸಿ, ಕೆಪಿಸಿಎಲ್‌ ಕೈಪಿಡಿಗಳ ರಚನಕಾರರು. ವಿದ್ಯುತ್ ರಂಗ ಕುರಿತ ಗ್ರಂಥಕರ್ತರು. ಖಾದ್ರಿ ಶಾಮಣ್ಣ ಟ್ರಸ್ಟ್‌ನ ಅನನ್ಯ ಭಾಗವಾಗಿ ಧೀಮಂತ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿದವರು. ವಾದ-ವಿವಾದಗಳಲ್ಲದೇ ನಾಲ್ಕು ದಶಕಕ್ಕೂ ಮೀರಿ ಪತ್ರಿಕೋದ್ಯಮದಲ್ಲಿ ಸೇವೆಗೈಯುತ್ತಿರುವ ಅಪ್ಪಟ ಪತ್ರಿಕಾಜೀವಿ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ವಿ. ಮಲ್ಲಿಕಾರ್ಜುನಯ್ಯ

ಪತ್ರಿಕೋದ್ಯಮದ ಹಲವು ಸ್ತರಗಳಲ್ಲಿ ದಕ್ಷತೆ ಮೆರೆದವರು ಬಿ.ವಿ.ಮಲ್ಲಿಕಾರ್ಜುನಯ್ಯ. ಐದು ದಶಕಗಳ ಸುದೀರ್ಘ ಸೇವೆಯ ಪತ್ರಕರ್ತರು, ಪತ್ರಿಕಾ ಸಂಘಟನೆಗಳಲ್ಲೂ ಕ್ರಿಯಾಶೀಲರು.
ತುಮಕೂರು ಜಿಲ್ಲೆಯ ಬ್ರಹ್ಮಸಂದ್ರದವರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಕನ್ನಡಪ್ರಭ ಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭ.ಉಪಸಂಪಾದಕ ಸ್ಥಾನದಿಂದ ಸಂಪಾದಕ ಹುದ್ದೆವರೆಗೆ ವಿವಿಧ ಸ್ಥಾನಗಳಲ್ಲಿ ಅಕ್ಷರಸೇವೆ. ಉದಯವಾಣಿಯಲ್ಲಿಯೂ ಆರು ವರ್ಷಗಳ ಕಾಲ ಸಹಾಯಕ ಸಂಪಾದಕರಾಗಿ, ಸುವರ್ಣ ನ್ಯೂಸ್‌ನಲ್ಲಿ ಒಂದೂಕಾಲು ವರ್ಷ ವಾರ್ತಾ ಸಂಯೋಜಕರಾಗಿ ಸೇವೆ. ಬರವಣಿಗೆಯ ಜೊತೆಗೆ ಪತ್ರಿಕಾ ಸಂಘಟನೆಗಳಲ್ಲೂ ಪರಿಶ್ರಮ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೇಂದ್ರ ಪತ್ರಿಕಾ ಮಾನ್ಯತಾ ಸಮಿತಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ರಾಜ್ಯ ಪತ್ರಿಕಾ ಅಕಾಡೆಮಿ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮುಂತಾದ ಸಂಘಟನೆಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿ ದುಡಿದವರು.ಪತ್ರಿಕೋದ್ಯಮದ ಉನ್ನತ ಅಧ್ಯಯನಕ್ಕಾಗಿ ವಿದೇಶಗಳ ಪ್ರವಾಸ ಕೈಗೊಂಡವರು.ಸದ್ಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿ ಸೇವಾನಿರತರಾಗಿರುವ ಮಲ್ಲಿಕಾರ್ಜುನಯ್ಯ ಅವರು ಮಾಧ್ಯಮ ಆಕಾಡೆಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಗೂ ಭಾಜನರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಅಮ್ಮೆಂಬಳ ಆನಂದ

ಉಡುಪಿ ಜಿಲ್ಲೆಯ ಅಮ್ಮೆಂಬಳದವರಾದ ಅಮ್ಮೆಂಬಳ ಆನಂದ ಮಾಧ್ಯಮ ಕ್ಷೇತ್ರದಲ್ಲಿ ಅವಿರತವಾಗಿ ದುಡಿದ ಹಿರಿಯ ಜೀವ, ತತ್ವನಿಷ್ಠ ಪತ್ರಕರ್ತರು.
ಬಂಟ್ವಾಳದಲ್ಲಿ ೧೯೨೬ರಲ್ಲಿ ಜನಿಸಿದ ಆನಂದ ಅವರು ಮಾಧ್ಯಮ ಲೋಕದಲ್ಲಿ ಕೃಷಿಗೈದವರು. ಕೇಂದ್ರದ ಮಾಜಿ ಸಚಿವರಾದ ಜಾರ್ಜ್ ಫರ್ನಾಂಡಿಸ್ ಅವರ ಸಹಪಾಠಿ. ದಿನಕರ ದೇಸಾಯಿ ಅವರ ಜನಸೇವಕ ಪತ್ರಿಕೆಯಲ್ಲಿ ಹದಿನೆಂಟು ವರ್ಷಗಳ ಕಾಲ ಸಂಪಾದಕರಾಗಿ ದುಡಿದವರು. ನವಭಾರತ, ಪ್ರಜಾವಾಣಿ, ಸಂಯುಕ್ತಕರ್ನಾಟಕ ಹಾಗೂ ಉದಯವಾಣಿಯ ವರದಿಗಾರರಾಗಿ ಅಕ್ಷರ ಸೇವೆ ಸಲ್ಲಿಸಿದವರು. ೪೦ರ ದಶಕದಲ್ಲಿ ಮುಂಬಯಿ ಹೊಟೇಲ್ ಮಾಣಿಗಳಿಗಾಗಿ ರಾತ್ರಿ ಕನ್ನಡ ಶಾಲೆ ತೆರೆದು ಕನ್ನಡ ಕಲಿಸಿದವರು. ಸಮಾಜವಾದಿ ಆದರ್ಶಕ್ಕೆ ಒಳಗಾಗಿ ಸಾಮಾಜಿಕ ಬದ್ಧತೆಯಿಂದ ದುಡಿದವರು. ಜನಪ್ರಗತಿ ಪತ್ರಿಕೆಗೆ ಬರೆಯುತ್ತಿದ್ದ ಅವರು ಪತ್ರಿಕೋದ್ಯಮದಲ್ಲಿ ಐವತ್ತು ವರ್ಷಗಳ ಕಾಲ ಸೇವೆಸಲ್ಲಿಸಿದ ಆದರ್ಶವಾದಿ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ಸ್ವಾಮಿ

ರಾಯಚೂರಿನಲ್ಲಿ ಸುದ್ದಿಮೂಲ ಎಂಬ ಜಿಲ್ಲಾ ಪತ್ರಿಕೆಯೊಂದನ್ನು ಸಮರ್ಥವಾಗಿ ಕಟ್ಟಿ ನಡೆಸುತ್ತಿರುವ ಬಸವರಾಜ ಸ್ವಾಮಿ ಅವರು ಜಿಲ್ಲಾ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟವರು.
ರಾಜ್ಯಮಟ್ಟದ ಪತ್ರಿಕೆಗಳಿಗೆ ಸರಿಸಮನಾಗಿ ಜಿಲ್ಲಾ ಪತ್ರಿಕೆಯನ್ನು ಸಜ್ಜುಗೊಳಿಸಿ ಅನೇಕ ಆವೃತ್ತಿಗಳನ್ನು ತರುವ ಮೂಲಕ ಹೊಸದೊಂದು ಶಕೆ ಆರಂಭಿಸಿದ ಬಸವರಾಜ ಸ್ವಾಮಿ ಅನೇಕ ಸಾಮಾಜಿಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಜನಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.
ಬಸವರಾಜಸ್ವಾಮಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಸಣ್ಣ ಪತ್ರಿಕೆಗಳ ಸಂಪಾದಕರ ಸಂಘ, ಮೊದಲಾದ ವೃತ್ತಿಪರ ಸಂಸ್ಥೆಗಳ ಗೌರವ ಪುರಸ್ಕಾರಗಳು ಲಭಿಸಿವೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ. ಎನ್. ರಂಗನಾಥರಾವ್

ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥರಾವ್ಅ ವರು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು, ಸುಧಾ ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಜಿಎನ್ನಾ ಪ್ರಸ್ತುತ ಕಸ್ತೂರಿ ಮಾಸಿಕದ ಸಂಪಾದಕರು. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ತಂದಿರುವ ಜಿಎನ್ನಾರ ಅವರು ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.
ಇವರು ರಚಿಸಿರುವ ಪತ್ರಿಕೋದ್ಯಮ ಪಠ್ಯ ಬೆಂಗಳೂರು ವಿವಿಯ ಪಠ್ಯ ಪುಸ್ತಕವಾಗಿದೆ. ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಇಮ್ರಾನ್ ಖುರೇಷಿ

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಸಂವೇದನಾಶೀಲ ಪತ್ರಕರ್ತ ಇಮ್ರಾನ್ ಖುರೇಷಿ ಅವರು.
ಶ್ರೀಯುತರದು ಸುದ್ದಿ ಮಾಧ್ಯಮದಲ್ಲಿ ಸಾರ್ಥಕ ೩೦ ವರ್ಷಗಳ ಸೇವಾ ಕೈಂಕರ್ಯ. ಮುದ್ರಣ, ವಿದ್ಯುನ್ಮಾನ ಹೀಗೆ ಮಾಧ್ಯಮ ಯಾವುದೇ ಇರಲಿ ಸುದ್ದಿ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಸಾರ್ಥಕ ಕೆಲಸ.
ಪ್ರತಿಷ್ಠಿತ ಸುದ್ದಿ ಸಂಸ್ಥೆಯೊಂದಕ್ಕೆ ಟ್ರೈನಿ ಜರ್ನಲಿಸ್ಟ್ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಅವರು ಆನಂತರ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ಸೇರಿದರು. ಬಳಿಕ ‘ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ವೃತ್ತಿ ಜೀವನದ ಜಿಗಿತ. ೧೯೮೪ರಲ್ಲಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರಿ ಅನೇಕ ಯುವ ಪತ್ರಕರ್ತರನ್ನು ರೂಪಿಸಿದ ಹಿರಿಮೆ
ಅವರದು.
ರಂಜಕತೆಗೆ ಒತ್ತು ನೀಡುವ ಮಾಧ್ಯಮದಲ್ಲಿದ್ದರೂ ಇಮ್ರಾನ್ ಅವರು ವೃತ್ತಿಯಲ್ಲಿ ಮಾನವೀಯತೆಯನ್ನು ಮೆರೆಯುವ ಪತ್ರಕರ್ತರೆಂಬುದಕ್ಕೆ ಅವರು ಮಾಡಿರುವ ವರದಿಗಳೇ ಸಾಕ್ಷಿ. ೧೯೮೧ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಸರ್ಕಸ್
ಕಂಪೆನಿಯ ಬೆಂಕಿ ದುರಂತ ಕುರಿತು ಅವರು ಮಾಡಿದ ವರದಿ ಮರೆಯಲಸದಳ.
೧೯೯೪ರಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶ. ಶ್ರೀಯುತರು ಸದ್ಯ ಆಜ್ ತಕ್/ಹೆಡ್‌ಲೈನ್ಸ್ ಟುಡೇ ರಾಷ್ಟ್ರೀಯ ಸುದ್ದಿ
ವಾಹಿನಿಯ ಸಂಪಾದಕರು.
‘ಮೊದಲು ಮಾನವೀಯತೆ ಆನಂತರ ವರದಿ’ ಎಂಬ ಜೀವನತತ್ವ ಅಳವಡಿಸಿಕೊಂಡ ವೃತ್ತಿಯಲ್ಲಿ ಬದ್ಧತೆ, ಪ್ರಾಮಾಣಿಕ ಹಾಗೂ ನೈತಿಕತೆಗಳನ್ನು ಉಳಿಸಿಕೊಂಡ ಅಪರೂಪದ ಪತ್ರಕರ್ತರು ಶ್ರೀ ಇಮ್ರಾನ್ ಖುರೇಷಿ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಂದ್ರಕಾಂತ್

ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ಮೂಡಿಸಿದ ಕೀರ್ತಿ ನಾವಿಕ ದಿನ ಪತ್ರಿಕೆಯ ಸಂಪಾದಕ ಎಸ್.ಚಂದ್ರಕಾಂತ್ ಅವರದು. ೧೯೫೧ರಲ್ಲಿ ಶಿವಮೊಗ್ಗದಲ್ಲಿ ಜನನ. ೧೯೭೭ರಲ್ಲಿ ಪತ್ರಿಕೋದ್ಯಮ ಪ್ರವೇಶ. ಇಲ್ಲಿವರೆಗೂ ವರ್ಷಗಳ ೩೧ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ.
ಶಿವಮೊಗ್ಗ ಜಿಲ್ಲೆಯ ಶರಾವತಿ, ಎಚ್ಚರಿಕೆ, ಮಲೆನಾಡ ವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ. ಜಿಲ್ಲೆಯ ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಕ ಕ್ಷೇತ್ರಗಳಿಗೆ ಪತ್ರಿಕೆಯ ಮೂಲಕ ಅನನ್ಯ ಸೇವೆ.
ಶಿವಮೊಗ್ಗ ಜಿಲ್ಲೆಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಿಲ್ಲೆಯ ಪ್ರೆಸ್‌ಕ್ಲಬ್ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ ಹಾಲಿ ಸೇವೆ.
ಪರೋಪಕಾರಿ ಸಂಘ, ಪ್ರತಿಭಾ ರಂಗ, ಮಲೆನಾಡು ಕನ್ನಡ ಸಂಘ ಮೊದಲಾದ ಸಂಘಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗಿ, ಜನಾಭಿಪ್ರಾಯವನ್ನು ಮೂಡಿಸುತ್ತಿರುವ ನಾವಿಕ ದಿನಪತ್ರಿಕೆಯ ಸಂಪಾದಕರಾಗಿ ಅನನ್ಯ ಕೊಡುಗೆ ನೀಡಿದವರು ಎಸ್.ಚಂದ್ರಕಾಂತ್.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬೆ.ಸು.ನಾ. ಮಲ್ಯ

ಬಾಲ್ಯದಿಂದಲೂ ರಾಷ್ಟ್ರೀಯವಾದಿ ಧೋರಣೆ ಹೊಂದಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿ, ನಿಷ್ಠಾವಂತ ಪತ್ರಕರ್ತ ಮನ್ನಣೆಗೆ ಪಾತ್ರರಾದವರು ಬೆಳ್ಳಾಯಿ ಸುಬ್ರಾಯ ನಾರಾಯಣ ಮಲ್ಯ ಅವರು.
ಕಾರ್ಕಳದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ನೆಲೆ ನಿಂತು ‘ವಿಕ್ರಮ’ ವಾರಪತ್ರಿಕೆಯ ಸಂಪಾದಕರಾಗಿ ೪೧ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದವರು ಶ್ರೀಯುತರು.
೧೯೪೨ರ ರಾಷ್ಟ್ರೀಯ ಚಳವಳಿಯ ನೇತಾರರಿಗೆ, ಭೂಗತ ಕಾರ್ಯಕರ್ತರಿಗೆ ನೆರವು. ಬುರ್ಲಿ ಬಿಂದು ಮಾಧವರಾಯರಿಂದ ಸ್ಫೂರ್ತಿ ಪಡೆದು, ಕಾಲೇಜು ವ್ಯಾಸಂಗಕ್ಕೆ ಕೊನೆ ಹಾಡಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದವರು. ೧೯೭೫ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿರುವರು ಬೆಸುನಾ ಮಲ್ಯ
ಅಖಿಲ ಭಾರತ ವೃತ್ತ ಪತ್ರಿಕಾ ಸಂಘದ ಕಾರ್ಯಸಮಿತಿ ಸದಸ್ಯತ್ವ, ಪತ್ರಿಕಾ ಅಕಾಡೆಮಿಯ ಸದಸ್ಯತ್ವ ಹಾಗೂ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
ಕನ್ನಡ, ಸಂಸ್ಕೃತ, ಆಂಗ್ಲ, ಹಿಂದಿ, ಮರಾಠಿ ಮತ್ತು ಕೊಂಕಣಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿರುವ ಶ್ರೀಯುತರು ಕನ್ನಡಕ್ಕೆ ಅನುವಾದಿಸಿರುವ ದೇಶದ ಹಿರಿಯ ನಾಯಕರ ಓಜಸ್ವಿ ಭಾಷಣಗಳು ಕಿರಿಯರೆಲ್ಲ ಓದಲೇಬೇಕಾದ ಬರಹಗಳು. ‘ವಿಕ್ರಮ ಎಂದರೆ ಬೆಸುನಾ ಮಲ್ಯ ಬೆಸುನಾ ಎಂದರೆ ‘ವಿಕ್ರಮ’ ಎನ್ನುವಷ್ಟರ ಮಟ್ಟಿಗೆ ಆ ಪತ್ರಿಕೆಗೆ ಸರ್ವಸ್ವವನ್ನೂ ಧಾರೆ ಎರೆದವರು ಶ್ರೀಯುತರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ.ಬಿ. ಗಣಪತಿ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರ ಕೃಷಿಗೈಯುತ್ತ ಸಾಹಿತ್ಯ ಪರಿಚಾರಿಕೆಯನ್ನು ನಡೆಸುತ್ತ ಬಂದಿರುವ ಉಭಯ ವಲಯ ಪ್ರತಿಭಾವಂತರು ಶ್ರೀ ಕೆ.ಬಿ. ಗಣಪತಿ ಅವರು.
“ಮೈಸೂರು ಮಿತ್ರ” ಬೆಳಗಿನ ಕನ್ನಡ ದಿನಪತ್ರಿಕೆ ಹಾಗೂ ‘ಸ್ಟಾರ್ ಆಫ್ ಮೈಸೂರು ಸಂಜೆ ಇಂಗ್ಲಿಷ್ ದಿನಪತ್ರಿಕೆಗಳ ಸ್ಥಾಪಕ, ಸಂಪಾದಕರಾಗಿ ಮೂರು ದಶಕಗಳಿಂದ ಯಶಸ್ವಿಯಾಗಿ ಪ್ರಕಟಿಸುತ್ತಿರುವ ಹಿರಿಯ ಪತ್ರಕರ್ತರು.
ಕರ್ನಾಟಕ ಹೈಕೋರ್ಟಿನ ವಕೀಲ ವೃತ್ತಿ, ಮುಂಬಯಿ ಪ್ರೆಸ್ ಜರ್ನಲ್ ಹಾಗೂ “ಇಂಡಿಯನ್ ಎಕ್ಸ್‌ಪ್ರೆಸ್” ಉಪಸಂಪಾದಕ ಜವಾಬ್ದಾರಿ ಮೊದಲಾದ ಮೌಲಿಕ ಕಾವ್ಯಾನುಭವದ ಹಿನ್ನೆಲೆ ಉಳ್ಳವರು.
ಆದರ್ಶವಾದಿ, ದಿ ಕ್ರಾಸ್ ಅಂಡ್ ದಿ ಕೂರ್ಗ್, ಕೊಡಗಿನ ಮೇಲೆ ಶಿಲುಬೆಯ ನೆರಳು ಮುಂತಾದ ಕಾದಂಬರಿಗಳನ್ನು “ಅಮೆರಿಕಾ ಎನ್ ಏರಿಯಾ ಆಫ್ ಲೈಟ್” ಎಂಬ ಪ್ರವಾಸಕಥನವನ್ನು ಬರೆದು ಪ್ರಕಟಿಸಿದ್ದಾರೆ.
ಅನೇಕ ಸಂಸ್ಥೆಗಳಲ್ಲಿ ಗೌರವ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಯೂರೋಪ್, ಜಪಾನ್ ಮೊದಲಾದ ದೇಶಗಳ ಪ್ರವಾಸ ಮಾಡಿದ್ದಾರೆ.
ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಹೆಚ್.ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ ಶ್ರೀ ಕೆ.ಬಿ. ಗಣಪತಿ ಅವರಿಗೆ

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರವಿ ಬೆಳಗೆರೆ

ಬರವಣಿಗೆಯನ್ನೇ ಉಸಿರಾಗಿಸಿಕೊಂಡ ಸೃಜನಶೀಲ ಬರಹಗಾರ, ಉತ್ಸಾಹಿ ಪತ್ರಕರ್ತ ರವಿ ಬೆಳಗೆರೆ ಅವರು.
ಬಳ್ಳಾರಿಯಲ್ಲಿ ೧೯೫೮ರಲ್ಲಿ ಜನನ. ಎರಡು ವರ್ಷ ತುಮಕೂರಿನ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಕಲಿಕೆ. ಬಿ.ಎ. ವರೆಗೆ ಬಳ್ಳಾರಿಯಲ್ಲಿ ವಿದ್ಯಾಭ್ಯಾಸ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ
ಪದವಿ.
ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳ್ಳಿ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕ ವೃತ್ತಿ. ಹೈಸ್ಕೂಲು ಮೇಷ್ಟ್ರು, ಹೋಟೆಲ್ ಮಾಣಿ, ರೂಮ್ ಬಾಯ್, ರಿಸೆಪ್ಪನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗನಾಗಿ, ಈಗ ಪತ್ರಕರ್ತರಾಗಿ ರವಿ ಬೆಳಗೆರೆಯವರು ಪಡೆದ ಜೀವನಾನುಭವ ಅನನ್ಯ.
ಅತಿಚಿಕ್ಕ ವಯಸ್ಸಿಗೇ ಅನೇಕ ಪತ್ರಿಕೆಗಳಲ್ಲಿ ಸಂಪಾದಕ ಹುದ್ದೆ ನಿರ್ವಹಣೆ. ಈತನಕ ಅವರ ೫೦ಕ್ಕೂ ಹೆಚ್ಚಿನ ಪುಸ್ತಕಗಳು ಪ್ರಕಟ. ಖುದ್ವಂತ್ ಸಿಂಗ್, ಪ್ರತಿಮಾ ಬೇಡಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಮೊದಲಾದವರ ಬರಹಗಳು ಅವರಿಂದ ಕನ್ನಡಕ್ಕೆ ಅನುವಾದ. ಸಣ್ಣಕತೆ ಅವರ ಇಷ್ಟದ ಸಾಹಿತ್ಯ ಪ್ರಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿಗಳ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು.
ಸದ್ಯ ಅವರು ‘ಹಾಯ್ ಬೆಂಗಳೂರು’ ವಾರ ಪತ್ರಿಕೆ ಮತ್ತು ‘ಓ ಮನಸೇ..’ ಪಾಕ್ಷಿಕದ ಸಂಪಾದಕರು. ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ.
ಉಸಿರೇ ಆಗಿರುವ ಬರವಣಿಗೆಯ ಜತೆಗೆ ಸಿನೆಮಾ ನಿರ್ಮಾಣ, ನಿರ್ದೇಶನ ಮತ್ತು ನಟನೆ ಅವರ ಆಸಕ್ತಿ ಕ್ಷೇತ್ರಗಳು. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಸ್ಪೋಪಜ್ಞೆ ಮೆರೆದು ಹೆಸರಾದವರು ಶ್ರೀ ರವಿ ಬೆಳಗೆರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೃಷ್ಣಮೂರ್ತಿ ಹೆಗಡೆ

ಕನ್ನಡ ಪತ್ರಿಕೋದ್ಯಮದ ಮೈಲಿಗಲ್ಲು ಎನಿಸಿದ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಹುಬ್ಬಳ್ಳಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವವರು ಕೃಷ್ಣಮೂರ್ತಿ ಹೆಗಡೆ ಅವರು.
೧೯೫೧ರಲ್ಲಿ ಜನನ. ೧೯೭೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಕಳೆದ ೩೧ ವರ್ಷಗಳಿಂದ ಅವರು ಈ ಕ್ಷೇತ್ರದಲ್ಲಿ ಸೇವಾ ನಿರತರು. ದೈನಂದಿನ ಆಗು-ಹೋಗುಗಳು ಸೇರಿದಂತೆ ಜನಸಾಮಾನ್ಯರ ಮೇಲೆ ಬೆಳಕು ಚೆಲ್ಲುವಂತಹ ವರದಿಗಾರಿಕೆ ಸೇರಿದಂತೆ ಶ್ರೀಯುತರು ಸಾಹಿತ್ಯ, ರಾಜಕೀಯ ವರದಿಗಾರಿಕೆಯಲ್ಲಿ ವಿಶಿಷ್ಟತೆ ಮೆರೆದವರು.
೧೯೭೪ರಲ್ಲಿ ನಾಡಿನ ಪ್ರಮುಖ ಪತ್ರಿಕೆ ‘ವಿಕ್ರಮ’ದ ಪತ್ರಿಕೆಗೆ ಸೇರುವ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭ, ಬಳಿಕ ಪ್ರತಿಷ್ಠಿತ ರಾಷ್ಟೋತ್ಥಾನ ಪರಿಷತ್ತಿನ ಪ್ರಕಟಣೆಯಾದ ‘ಉತ್ಥಾನ’ ಮಾಸಿಕ ಪತ್ರಿಕೆಯಲ್ಲಿ ಉಪಸಂಪಾದಕ ಹುದ್ದೆ. ೧೯೭೭ರಲ್ಲಿ ಬೆಂಗಳೂರಿನ ‘ಪ್ರಜಾ ಪ್ರಭುತ್ವ ವಾರಪತ್ರಿಕೆಯಲ್ಲಿ ಕೆಲ ಕಾಲ ವರದಿಗಾರರಾಗಿ ಕಾರ್ಯನಿರ್ವಹಣೆ. ಕೆಲ ದಿನಗಳ ಬಳಿಕ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ವರದಿಗಾರ ಹುದ್ದೆಯ ಅಲಂಕಾರ.
ಸದ್ಯಕ್ಕೆ ‘ಸಂಯುಕ್ತ ಕರ್ನಾಟಕ’ದ ಸ್ಥಾನಿಕ ಸಂಪಾದಕರಾಗಿ ಕೃಷ್ಣಮೂರ್ತಿ ಹೆಗಡೆ ಅವರು ಸೇವೆ ಸಲ್ಲಿಸುತ್ತಿರುವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪದ್ಮರಾಜ್ ದಂಡಾವತಿ

ತೀಕ್ಷ್ಣ ರಾಜಕೀಯ ವಿಶ್ಲೇಷಕರಾಗಿ ಮಾತ್ರವಲ್ಲದೇ ಸದಭಿರುಚಿಯ ಸಾಹಿತ್ಯಕ ವರದಿಗಳಿಗೆ ಹೆಸರಾದ ಪತ್ರಕರ್ತರು ಪದ್ಮರಾಜ ದಂಡಾವತಿ ಅವರು.
ವಿಜಾಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಜನನ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಿಕೋದ್ಯಮ ಪ್ರವೇಶಿಸಿದ್ದು ಆಕಸ್ಮಿಕ. ‘ಶೂದ್ರ’ ಸಾಹಿತ್ಯಕ ಪತ್ರಿಕೆಯಲ್ಲಿ ನಾಲ್ಕು ವರ್ಷ ಉಪ ಸಂಪಾದಕರಾಗಿ ಕೆಲಸ. ೧೯೮೨ರಲ್ಲಿ ಪ್ರತಿಷ್ಠಿತ ದೈನಿಕ ‘ಪ್ರಜಾವಾಣಿ’ಗೆ ಸೇರ್ಪಡೆ. ೨೭ ವರ್ಷಗಳ ಕಾಲ ಈ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಈಗ ಪತ್ರಿಕೆಯ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ಸಹ-ಸಂಪಾದಕ ಹುದ್ದೆಗೆ ಬಡ್ತಿ. ಅವರು ಉತ್ತಮ ವಾಗಿಗಳೂ ಹೌದು.
ಹೇಳಬೇಕಾಗಿರುವ ವಿಷಯವನ್ನು ಸರಳವಾಗಿ, ಸಾಮಾನ್ಯ ಓದುಗನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ನಿರೂಪಿಸಬಲ್ಲ ಬರವಣಿಗೆಯ ಶೈಲಿ ಅವರದು.
ಅತ್ಯುತ್ತಮ ಸುದ್ದಿ ವಿಶ್ಲೇಷಣೆಗಾಗಿ ಎರಡು ಬಾರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರು.
ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟದ ಪದಾಧಿಕಾರಿಯಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿಯೂ ಶ್ರೀಯುತರು ಕಾರ್ಯನಿರ್ವಹಿಸಿರುವರು.
ಮಾಧ್ಯಮ ಅಕಾಡೆಮಿಗಾಗಿ ಅವರು ಬರೆದ ಕೃತಿಗಳು ‘ಪತ್ರಿಕಾ ಭಾಷೆ’ ಮತ್ತು ‘ರಿರ್ಪೋಟಿಂಗ್’, ಅವರು ಬರೆದ ‘ಅವಲೋಕನ’ ಕೃತಿ ಬೆಂಗಳೂರು ಪ್ರೆಸ್‌ಕ್ಲಬ್‌ನಿಂದ ಪ್ರಕಟ. ೨೦೦೬ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಬರೆದ ‘ಗೊಮ್ಮಟ’ ಕೃತಿಯನ್ನು ವಾರ್ತಾ ಇಲಾಖೆಯು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದೆ.
ವೃತ್ತಿಯಲ್ಲಿ ನಿಷ್ಠೆ, ಶ್ರದ್ಧೆ ಮತ್ತು ನಿತ್ಯ ಜೀವನದಲ್ಲಿ ಪ್ರಾಮಾಣಿಕತೆಯ ಮೌಲ್ಯಗಳನ್ನು ರೂಢಿಸಿಕೊಂಡು ಕಿರಿಯರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ ಶ್ರೀ ಪದ್ಮರಾಜ ದಂಡಾವತಿ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕಲ್ಲೇ ಶಿವೋತ್ತಮ ರಾವ್

ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿರುವ ಕಲ್ಲೇ ಶಿವೋತ್ತಮರಾವ್ ಅವರು ಪ್ರಜಾವಾಣಿ ಸಂಯುಕ್ತ ಕರ್ನಾಟಕ ವಿಶಾಲ ಕರ್ನಾಟಕ ಪತ್ರಿಕೆಗಳ ಸಂಪಾದಕ ವರ್ಗದ ನೇತೃತ್ವ ವಹಿಸಿ ಕಾರ್ಯ ನಿರ್ವಹಿಸಿದ್ದಾರೆ.
ಹಿಂದೂ ದೈನಿಕದ ಹಂಗಾಮಿ ವರದಿಗಾರರಾಗಿ ಹಾಗೂ ಎನ್ಲೈಟ್ ಇಂಗ್ಲಿಷ್ ವಾರಪತ್ರಿಕೆಯ ಕರ್ನಾಟಕ ಬ್ಯೂರೋ ಚೀಫ್ ಆಗಿ ಕೆಲಸ ಮಾಡಿದ ಅನುಭವ ಇರುವ ಕಲ್ಲೇ ಶಿವೋತ್ತಮರಾವ್ ಅವರು ಪತ್ರಿಕಾ ಲೋಕದ ದಿಗ್ಗಜರಲ್ಲೊಬ್ಬರಾದ ಬಿ.ಎನ್.ಗುಪ್ತಾ ಅವರ ಸಂಪಾದಕತ್ವದ ಜನಪ್ರಗತಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಂತರ ಸಂಪಾದಕ ಹಾಗೂ ಮುದ್ರಕರಾಗಿ ಒಟ್ಟು ಹದಿನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕೈ ಆಡಿಸಿರುವ ಕಲ್ಲೇ ಶಿವೋತ್ತಮರಾವ್ ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ವಿಶ್ವದ ವಿದ್ಯಮಾನಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಹೊತ್ತುಕೊಂಡಿದ್ದರು. ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರೌಢ ಪ್ರಭುತ್ವ ಹೊಂದಿರುವ ಕಲ್ಲೇ ಶಿವೋತ್ತಮ ರಾವ್ ತಮ್ಮ ಹದಿನಾಲ್ಕನೆಯ ವಯಸ್ಸಿನಿಂದ ಪತ್ರಿಕೋದ್ಯಮದ ಒಡನಾಟದಲ್ಲಿರುವವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ.ಎಂ. ಶಿರಹಟ್ಟಿ

ಬಾನುಲಿ ಮತ್ತು ಬಾನುಲಿ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಪ್ರಮುಖರು ಜಿ.ಎಂ.ಶಿರಹಟ್ಟಿ. ಬರವಣಿಗೆಯ ಸಾಹಿತ್ಯವನ್ನು ಪರಿವರ್ತಿಸಿ ಶ್ರವಣ ಸಾಹಿತ್ಯವನ್ನು ರಚಿಸಿದ ಸಾಹಿತಿ, ಬಹುಮಾಧ್ಯಮಗಳ ಬಹುಶ್ರುತ ಸಾಧಕರು. ಜಿ.ಎಂ.ಶಿರಹಟ್ಟಿ ಎಂದೇ ಜನಪ್ರಿಯರಾದ ಗೌಸ್ ಮೊಹದ್ದೀನ ಶಿರಹಟ್ಟಿ ಅವರು ೧೯೪೧ರಲ್ಲಿ ಜನಿಸಿದವರು. ಪತ್ರಿಕೋದ್ಯಮ, ರೇಡಿಯೋ ಹಾಗೂ ದೂರದರ್ಶನ ಅವರ ತ್ರಿವಳಿ ಕಾರ್ಯಕ್ಷೇತ್ರಗಳು, ನಲವತ್ತು ವರ್ಷಗಳ ಕಾಲ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿದ ಶಿರಹಟ್ಟಿ ಬೆಂಗಳೂರು ವಿವಿ, ಭಾರತೀಯ ವಿದ್ಯಾಭವನ, ರೇವಾಗಾರ್ಡನ್ ಮತ್ತಿತರ ಸಂಸ್ಥೆಗಳಲ್ಲಿ ಮಾಧ್ಯಮ ಪ್ರಾಧ್ಯಾಪಕರಾಗಿ ದುಡಿದವರು. ಕನ್ನಡಸಾಹಿತ್ಯದಲ್ಲಿ ಪ್ರಸಾರ ಸಾಹಿತ್ಯವನ್ನು ನಾಟಕ, ರೂಪಕ, ಸಂದರ್ಶನ, ಸಾಕ್ಷ್ಯಚಿತ್ರಗಳಲ್ಲಿ ಅಳವಡಿಸಿ ಬಾನುಲಿ ಸಾಹಿತ್ಯವನ್ನು ಬೆಳಕಿಗೆ ತಂದ ಹೆಗ್ಗಳಿಕೆ, ಸಾರ್ಕ ದೇಶದ ಕ್ವಿಜ್ ಕಾರ್ಯಕ್ರಮಗಳ ಭಾರತೀಯ ತಂಢಗಳ ನಾಯಕರಾಗಿ ಡಾಕಾದಲ್ಲೂ ಸೇವೆ ಸಲ್ಲಿಸಿದ ಶಿರಹಟ್ಟಿ ಅವರು ಚೇತನಚಿಲುಮೆ, ಪ್ರಬಂಧಗಳ ಸಂಕಲನ, ಮಕ್ಕಳ ನಾಟಕಗಳ ಕತೃ, ಆಕಾಶವಾಣಿ ಕಾರ್ಯಕ್ರಮಗಳಿಗೆ ಐದು ರಾಷ್ಟ್ರೀಯ, ೨ ಅಂತಾರಾಷ್ಟ್ರೀಯ, ಒಂದು ರಾಜ್ಯ ಪ್ರಶಸ್ತಿಗೆ ಭಾಜನರಾದವರು. ಕರ್ನಾಟಕ ನಾಟಕ ಅಕಾಡೆಮಿ, ಮಾಧ್ಯಮ ಅಕಾಡೆಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಂದ ಭೂಷಿತರಾದ ಶಿರಹಟ್ಟಿ ಬಾನುಲಿ ಮಾಧ್ಯಮದಲ್ಲಿ ಹೊಸ ಅಧ್ಯಾಯವನ್ನೇ ಬರೆದ ಸಾಧಕಮಣಿ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ನಾಗೇಶ್ ಹೆಗಡೆ

ಕನ್ನಡದ ಪ್ರಮುಖ ವಿಜ್ಞಾನ ಹಾಗೂ ಪಲಸರ ಬರಹಗಾರರಲ್ಲಿ ನಾಗೇಶ್ ಹೆಗಡೆ ಅವರದು ಅಗ್ರಮಾನ್ಯ ಹೆಸರು.
ಉತ್ತರ ಕನ್ನಡದವರಾದ ನಾಗೇಶ್ ಹೆಗಡೆ ಅವರು ಖರಗಪುರದ ಐಐಟಿಯಲ್ಲಿ ಭೂಗರ್ಭ ಸ್ನಾತಕೋತ್ತರ ಪದವಿ ಪಡೆದ ನಂತರ ಆಯ್ಕೆ ಮಾಡಿಕೊಂಡಿದ್ದು ಪರಿಸರ ಶಾಸ್ತ್ರ ಅಧ್ಯಯನ. ನೈನಿತಾಲ್ನ ಕುಮಾಂವೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ ನಾಗೇಶ್ ಹೆಗಡೆ ಅವರು ೭೦ರ ದಶಕದಲ್ಲಿ ಪ್ರಜಾವಾಣಿ ಸಮೂಹದ ವೈಜ್ಞಾನಿಕ ಬರಹಗಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿದರು.
ಪತ್ರಕರ್ತರಾಗಿದ್ದುಕೊಂಡು ನಾಗೇಶ್ ಹೆಗಡೆ ಅವರು ಕರ್ನಾಟಕದ ಹಲವಾರು ಪಲಸರ ಸಮಸ್ಯೆಗಳನ್ನು ಕುಲತು ದನಿಯೆತ್ತಿದವರು. ಕೈಗಾದಲ್ಲಿ ಅಣುಕೇಂದ್ರ ನಿರ್ಮಾಣ, ಪಶ್ಚಿಮ ಘಟ್ಟಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ ಹೀಗೆ ಹಲವಾರು ಪಲಸರ ಸಮಸ್ಯೆಗಳನ್ನು ಬೆಳಕಿಗೆ ತಂದ ನಾಗೇಶ್ ಹೆಗಡೆ ಅವರು ಕರ್ನಾಟಕದಲ್ಲಿ ಪಲಸರ ಜಾಗೃತಿಗಾಗಿ ಶ್ರಮಿಸಿದವರು. ತಮ್ಮ ಅಧ್ಯಯನ ಪೂರ್ಣ ಬರಹಗಳಿಂದ ನಾಡಿನ ಹಲವಾರು ಪಲಸರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದ ನಾಗೇಶ್ ಹೆಗಡೆ ಅವರು ಇರುವುದೊಂದೇ ಭೂಮಿ, ನಮ್ಮೊಳಗಿನ ಬ್ರಹ್ಮಾಂಡ, ಗಗನ ಸಟಿಯರ ಸೆರಗ ಹಿಡಿದು, ಮಂಗಳನಲ್ಲಿ ಜೀವಲೋಕ ಅಂತಲಕ್ಷದಲ್ಲಿ ಮಹಾಸಾಗರ ಹಲವಾರು, ಬರೆದಿರುವ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.
ಪಲಸರ ಸಮಸ್ಯೆಗಳನ್ನು ಜನರ ಮನಮುಟ್ಟುವಂತೆ ಬರೆಯುವಲ್ಲಿ ನಾಗೇಶ್ ಹೆಗಡೆ ಅವರು ಪಲಣತರು. ಕಳೆದ ೩ ದಶಕಗಳಿಂದ ಸತತವಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ವಿಜ್ಞಾನ ಅಂಕಣ ಬರೆಯುತ್ತಿರುವ ನಾಗೇಶ್ ಹೆಗಡೆ ಅವರು ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಕೆಲವು ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಪಲಸರ ಶಿಕ್ಷಣ, ಮಾಅನ್ಯದ ಬಗ್ಗೆ ಜಾಗೃತಿ, ನೀಲನ ಸಂರಕ್ಷಣೆ ಮೊದಲಾದವುಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳುವಆಕೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಬೆಂಗಳೂರು ಮಹಾನಗರದ ಪಲಸರ ಪರಿಸ್ಥಿತಿ ಕುಲತು ಮಕ್ಕಳಿಗಾಗಿ ಸರಳವಾದ ಪುಸ್ತಕವನ್ನು ರಚಿಸಿರುವ ನಾಗೇಶ್ ಹೆಗಡೆ ಅವರು ಅನೇಕ ಪ್ರತಿಷ್ಠಿತ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಸರ್ಕಾರದ ಪಲಸರ ಪ್ರಶಸ್ತಿಯಲ್ಲದೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಪತ್ರಕರ್ತ, ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕ್ರಿಯಾಶೀಲ ಬರಹಗಾರರು ಶ್ರೀ ನಾಗೇಶ್ ಹೆಗಡೆ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅಬ್ದುಲ್ ಖಾಅಕ್

ಕರ್ನಾಟಕದ ಉರ್ದು ಪತ್ರಿಕೋದ್ಯಮದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೆಸರಾಂತ ಪತ್ರಕರ್ತರು ಶ್ರೀ ಅಬ್ದುಲ್ ಖಾಅತ್ ಅವರು. ಉರ್ದು ಪತ್ರಿಕೆಗಳಾದ ಸಾಲಾರ್, ಅಜಾದ್, ಆಲಮ್ಬರ್ದಾರ್ಗಳಲ್ಲಿ ಕೆಲಸ ಮಾಡಿರುವ ಅಬ್ದುಲ್ ಖಾಅಕ್ ಪ್ರಸ್ತುತ ಡೈಅಪಾಸ್ಬಾನ್ ಪತ್ರಿಕೆಯ ಮುಖ್ಯ ವರದಿಗಾರರು.
ಉರ್ದು ಪತ್ರಿಕೋದ್ಯಮದಲ್ಲಿ ಶೋಧನಾ ವರದಿಗೆ ಹೊಸ ಆಯಾಮ ನೀಡಿದ ಅಬ್ದುಲ್ ಖಾಅಕ್ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯುವ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಬಗ್ಗೆ ಜನತೆಯಲ್ಲಿ ಅಲವು ಮೂಡಿಸುವ ಹಲವಾರು ವರದಿಗಳನ್ನು ಮಾಡಿ ಪ್ರಸಿದ್ಧಿ ಪಡೆದ ಹೆಗ್ಗಆಕೆ ಶ್ರೀಯುತರದು.
ದುರ್ಬಲ ವರ್ಗದವರ ಏಳಿಗೆಗಾಗಿ ಸರ್ಕಾರ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಲೇಖನಗಳನ್ನು ಬರೆದಿರುವ ಅಬ್ದುಲ್ ಖಾಅಕ್ ಅವರು ಅಲ್ಪಸಂಖ್ಯಾತ ಸಮಾಜದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳ ಒಳನೋಟಗಳನ್ನು ತಮ್ಮ ಬರವಣಿಗೆಯಲ್ಲಿ
ಮೂಡಿಸಿದವರು.
ಕರ್ನಾಟಕ ಉರ್ದು ಅಕಾಡೆಮಿಯಿಂದ ಅತ್ಯುತ್ತಮ ಉರ್ದು ಪತ್ರಿಕೋದ್ಯಮಿ ಸೇಲದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಅಬ್ದುಲ್ ಖಾಅಕ್ ಅವರು ಅಖಿಲ ಭಾರತ ಸ್ವಾಮಿ ತನ್ಜೀಮ್ ಸಂಸ್ಥೆಯ ಗೌರವವನ್ನು ಪಡೆದಿದ್ದಾರೆ.
ಉರ್ದು ಪತ್ರಿಕೋದ್ಯಮ ಹಾಗೂ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಅಬ್ದುಲ್ ಖಾಅಕ್ ಅವರು ಹಲವಾರು ಮಾನವೀಯ ವರದಿಗಳನ್ನು ಮಾಡುವುದರ ಮೂಲಕ ಜನತೆಯ ಮನಗೆದ್ದಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್.ಎಸ್. ಪೊನ್ನಪ್ಪ

ವಾಸ್ತುಶಿಲ್ಪದಲ್ಲಿ ಸ್ನಾತಕೋತ್ತರ ಪದವಿ ಪಡೆದು ವ್ಯಂಗ್ಯಚಿತ್ರಕಾರರಾಗಿರ ಖ್ಯಾತರಾದವರು ಶ್ರೀ ಎನ್.ಎಸ್. ಪೊನ್ನಪ್ಪ ಅವರು, ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಪೊನ್ನಪ್ಪ ಕೊಡಗಿನವರು. ಕಾಲೇಜು ದಿನಗಳಿಂದಲೇ ವ್ಯಂಗ್ಯಚಿತ್ರ ಬಿಡಿಸುವ ಹವ್ಯಾಸ ಹಚ್ಚಿಕೊಂಡಿದ್ದ ಪೊನ್ನಪ್ಪ ಷಿಕಾಗೋದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ವ್ಯಂಗ್ಯಚಿತ್ರಗಳಿಗೆ ಹೆಚ್ಚಿನ ಒತ್ತುಕೊಟ್ಟರು. ಇಂಡಿಯಾ ಟುಡೇನಲ್ಲ ವ್ಯಂಗ್ಯಚಿತ್ರಗಳನ್ನು ಪ್ರಕಟಸಲಾರಂಭಿಸಿದ ಪೊನ್ನಪ್ಪ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಅಂಕಣವನ್ನು ಬರೆಯಲಾರಂಭಿಸಿ ಅದನ್ನ ತಮ್ಮ ವೃತ್ತಿಯನ್ನಾಗಿಸಿಕೊಂಡರು.
ಪೊನ್ನಪ್ಪ ಅವರ ವ್ಯಂಗ್ಯಚಿತ್ರಗಳು ಟೈಮ್ಸ್ ಆಫ್ ಇಂಡಿಯಾ, ಕರೆಂಟ್, ಇಂಡಿಯಾ ಟುಡೇ, ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ವಿದೇಶಿ ನಿಯತಕಾಲಿಕೆಗಳಲ್ಲೂ ಪ್ರಕಟಗೊಳ್ಳುತ್ತಿವೆ.
ದೇಶ-ವಿದೇಶಗಳ ಪತ್ರಿಕೆಗಳು ಸೊನ್ನಪ್ಪನವರ ವ್ಯಂಗ್ಯಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದು, ಪ್ರತಿಷ್ಠಿತ ಪೆಂಗ್ವಿನ್ ಪ್ರಕಟಿಸಿರುವ ಇಂಡಿಯನ್ ಕಾರ್ಟುನಿಸ್ಟ್, ಜರ್ಮನಿಯ ಥರ್ಲ್ಡ್ವರ್ಲ್ಡ್ ಕಾರ್ಟೂನ್ ಬುಕ್ ಮುಂತಾದ ಕಾರ್ಟೂನ್ ಕೃತಿಗಳಲ್ಲಿ ಸ್ಥಾನ ಪಡೆದಿರುವ ಸೊನ್ನಪ್ಪನವರು ಅಂತರ್ ರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.
ಶ್ರೀ ಎನ್.ಎಸ್. ಪೊನ್ನಪ್ಪ ಅವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಫ್ರಾಂಕ್ ಫರ್ಟ್ ವರ್ಲ್ಡ್ ಕಾರ್ಟೂನಿಸ್ಟ್ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಬಹುಮಾನ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು. ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ವ್ಯಂಗ್ಯಚಿತ್ರಕಾರರು ಶ್ರೀ ಎನ್.ಎಸ್. ಪೊನ್ನಪ್ಪ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಡಾ. ಸರಜೂ ಕಾಟ್ಕರ್

ಪತ್ರಕರ್ತರಾಗಿ, ಸಾಹಿತಿಯಾಗಿ ಯಶಸ್ಸು ಪಡೆದಿರುವ ಬೆಳಗಾವಿಯಲ್ಲಿ ನೆಲೆಸಿರುವ ಪ್ರಸಿದ್ಧ ಪತ್ರಕರ್ತರು ಡಾ. ಸರಜೂ ಕಾಟ್ಕರ್ ಅವರು.
ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಬದುಕು ಆರಂಭಿಸಿದ ಡಾ. ಸರಜೂ ಕಾಟ್ಕರ್ ಈಗ ಬೆಳಗಾವಿಯ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮುಖ್ಯ ವರದಿಗಾರರು.
ಹದಿನೆಂಟಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರು ಶಿವಾಜಿ ಕುಲತಂತೆ ನಡೆಸಿರುವ ಸಂಶೋಧನೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲದೆ, ಪತ್ರಕರ್ತರಾಗಿ ಹಲವಾರು ಮಾನವೀಯ ಹಾಗೂ ಶೋಧನಾ ವರದಿಗಳನ್ನು ನೀಡಿರುವ ಅವರು ಬರೆದ ಹಲವಾರು ವರದಿಗಳು ಸರ್ಕಾರದ ಗಮನ ಸೆಳೆಯಲು ಸಹಕಾಲಯಾಣವೆ.
ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಡಾ. ಸರಜೂ ಹಲವಾರು ಮರಾಠಿ, ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಇವರ ಕೃತಿಗಳಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ವಿದೇಶದಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನಗಳೂ ಸೇಲದಂತೆ ಅನೇಕ ಸಮ್ಮೇಳನಗಳಲ್ಲಿ ಪಾಲ್ಗೊಂಡ ಡಾ. ಸರಜೂ ಕಾಟ್ಕರ್ ಅಲ್ಲ ಮಂಡಿಸಿರುವ ಪ್ರಬಂಧಗಳು ಎಲ್ಲರ ಗಮನ ಸೆಳೆಐವೆ. ಇವರು ಕರ್ನಾಟಕ ಮಾಧ್ಯಮ ಹಾಗೂ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರು.
ಗಡಿನಾಡಿನಲ್ಲಿದ್ದು ಪತ್ರಿಕೆ ಮತ್ತು ಸಾಹಿತ್ಯದ ಮೂಲಕ ಕನ್ನಡದ ಕಂಪನ್ನು ಹರಡುತ್ತಿರುವ ಸಾಹಿತಿ ಪತ್ರಿಕೋದ್ಯಮಿ ಡಾ.ಸರಜೂ ಕಾಟ್ಕರ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಐ.ಜೆ.ಎಸ್. ಜಾರ್ಜ್

ಭಾರತೀಯ ಇಂಗ್ಲಿಷ್ ಪತ್ರಕರ್ತರಲ್ಲಿ ಶ್ರೀ ಟಿ.ಜೆ.ಎಸ್. ಜಾರ್ಜ್ ಅವರು ಅಗ್ರಮಾನ್ಯ
ಹೆಸರು ಪಡೆದವರು. ಪತ್ರಿಕೋದ್ಯಮ ಆರಂಭಿಸಿದ್ದು ಮುಂಬೈನ ಫ್ರಿ ಪ್ರೆಸ್ ಜರ್ನಲ್ ಮೂಲಕ. ನಂತರ ಜಾರ್ಜ್ ಅವರು ಹಾಂಗ್ಕಾಂಗ್ನಲ್ಲಿ ‘ಏಷ್ಯಾವೀಕ್’ ನಿಯತಕಾಲಿಕೆ ಆರಂಭಿಸುವ ಮೂಲಕ ಆಂಗ್ಲ ಪತ್ರಿಕೋದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟರು. ಸರಳ ಹಾಗೂ ನೇರ ಬರವಣಿಗೆಯಿಂದ ಓದುಗರ ಗಮನ ಸೆಳೆದಿರುವ ಜಾರ್ಜ್ ಅವರು ೧೯೮೦ರ ದಶಕದಲ್ಲಿ ಬೆಂಗಳೂರಿನ ಟೈಂಸ್ ಆಫ್ ಡೆಕ್ಕನ್ ಸಲಹೆಗಾರರಾಗಿದ್ದರು. ಇಂಡಿಯನ್ ಎಕ್ಸ್ಪ್ರೆಸ್ನ ಸಲಹೆಗಾರರಾಗಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿರುವ ಜಾರ್ಜ್ ಅವರು ತಮ್ಮ ನೇರ ನುಡಿ ಹಾಗೂ ಅಭಿಪ್ರಾಯಗಳಿಂದ ಅಧಿಕಾರಸ್ತರನ್ನು ಚುಚ್ಚಿದವರು. ಮುಂಜಾನೆ, ಟೈಂಸ್ ಆಫ್ ಡೆಕ್ಕನ್ ಪತ್ರಿಕೆಗಳ ಪ್ರೇರಕ ಶಕ್ತಿ ಆಗಿದ್ದರು.
ದೇಶವಿದೇಶಗಳ ಪತ್ರಿಕಾ ಸಂಘಟನೆಗಳಲ್ಲಿ ಸಲಹೆಗಾರರಾಗಿರುವ ಜಾರ್ಜ್ ಅವರು ಈಗ ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿರುವ ಅಂಕಣ ಬಹು ಜನಪ್ರಿಯ. ಇಂಗ್ಲಿಷ್ ಪದಕೋಶದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಜಾರ್ಜ್ ಅವರು ಭಾರತೀಯ ಆಡುಪದಗಳ ಬಗ್ಗೆ ಶಬ್ದಕೋಶ ರಚಿಸಿದ್ದಾರೆ. ರಾಜಕಾರಣಿ ಕೃಷ್ಣ ಮೆನನ್, ಸಂಗೀತಲೋಕದ ತಾರೆ ಎಂ.ಎಸ್. ಸುಬ್ಬಲಕ್ಷ್ಮೀ, ಚಿತ್ರತಾರೆ ವರ್ಣಸ್ದತ್ ಅವರ ಆತ್ಮಕಥನಗಳನ್ನು ಮನೋಜ್ಞವಾಗಿ ಚಿತ್ರಿಸಿರುವ ಜಾರ್ಜ್ ಮುದ್ರಣ ತಂತ್ರಜ್ಞಾನದ ಬಗ್ಗೆ ಪಲಣಿತರು. ದೇಶವಿದೇಶಗಳ ವೃತ್ತಿ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿರುವ ಶ್ರೀ ಟಿ.ಜೆ.ಎಸ್. ಜಾರ್ಜ್ ಕರ್ನಾಟಕದ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತರು.
ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರುವ ಇಂಗ್ಲಿಷ್ ಪತ್ರಕರ್ತರಲ್ಲಿ ಅಪ್ರತಿಮ ಸಾಧನೆ ಮಾಡಿರುವವರು ಶ್ರೀ ಟಿ.ಜೆ.ಎಸ್. ಜಾರ್ಜ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ಶ್ಯಾಮಸುಂದರ್

ಹಳ್ಳಿಗಾಡಿನ ಆಗುಹೋಗುಗಳನ್ನು ಸಮರ್ಥವಾಗಿ ವರದಿ ಮಾಡುವ ಪತ್ರಕರ್ತರಲ್ಲಿ ಬಳ್ಳಾರಿಯ ಶ್ರೀ ಎಸ್. ಶ್ಯಾಮಸುಂದರ್ ಅವರೂ ಒಬ್ಬರು.
ಇಂಗ್ಲೀಷ್‌ನಲ್ಲಿ ಸ್ನಾತಕಪದವಿ ಪಡೆದು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಎಸ್‌. ಶ್ಯಾಮಸುಂದರ್‌ ೧೯೮೧ರಿಂದ ಬಳ್ಳಾರಿಯಲ್ಲಿ ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳ ವರದಿಗಾರರಾಗಿದ್ದರು. “ಭಟ್ಟಿ ಸಾರಾಯಿಗೂ ಬ್ಯಾಂಕ್‌ ಸಾಲ”, “ಬಳ್ಳಾರಿ ಬಂದೂಕಿನ ಪೂರ್ವೋತ್ತರ” “ಕುಷ್ಠ ಆಯುರ್ವೇದ ನಿವಾರಿಸಬಲ್ಲ ಅನಿಷ್ಠ” ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ಆಸಕ್ತಿ ಪೂರ್ಣ ವರದಿಗಳನ್ನು ನೀಡಿರುವ ಶ್ಯಾಮಸುಂದರ್ ಈಗ ಬಳ್ಳಾರಿಯಲ್ಲಿ ವಿಜಯ ಟೈಂಸ್‌ನ ಹಿರಿಯ ವರದಿಗಾರ, ಕರ್ನಾಟಕ ಮಾದ್ಯಮ ಅಕಾಡಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಎಸ್. ಶ್ಯಾಮಸುಂದರ್ ಮಾನವೀಯ ವರದಿಗೆ ಒತ್ತುಕೊಟ್ಟವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ. ಎಸ್. ಸದಾಶಿವ

ರಾಜ್ಯಶಾಸ್ತ್ರ ಓದಿದರೂ ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರವೃತ್ತಿಯಿಂದ ಸಾಹಿತಿಯಾದವರು ಸಾಗರದ ಶ್ರೀ ಜಿ. ಎಸ್. ಸದಾಶಿವ ಅವರು.
ನಾಡಿನ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಮಯೂರಗಳಲ್ಲಿ ಕಾರ್ಯ ನಿರ್ವಹಿಸಿದ ಶ್ರೀ ಜಿ. ಎಸ್. ಸದಾಶಿವ ಈಗ ಕನ್ನಡ ಪ್ರಭದ ಕಾರ್ಯ ನಿರ್ವಾಹಕ ಸಂಪಾದಕರು.
ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸದಾಶಿವ ಹೊರತಂದಿರುವ ಸಣ್ಣ ಕಥೆಗಳ ಸಂಕಲನಗಳು ಮೂರು. ಬೇರೆ ಭಾಷೆಯ ಕಥೆಗಳನ್ನು ಅನುವಾದಿಸಿರುವ ಸದಾಶಿವ ಮಕ್ಕಳ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತಂದು ಕೊಟ್ಟವರು.
ಚಲನಚಿತ್ರಗಳಿಗೆ ಸಂಭಾಷಣೆ (ಆಕ್ಸಿಡೆಂಟ್, ಮೂರು ದಾರಿಗಳು) ಚಿತ್ರಕಥೆ ಹಾಗೂ ಸಂಭಾಷಣೆ (ಆಕ್ರಮಣ) ಬರೆದಿರುವ ಸದಾಶಿವ ‘ಎಲ್ಲಿಂದಲೋ ಬಂದವರು’ ಚಿತ್ರದ ಚಿತ್ರಕಥೆಯನ್ನು ಪಿ. ಲಂಕೇಶರ ಜೊತೆ ರಚಿಸಿದರು.
ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಗಟ್ಟಿಸ್ಥಾನ ತಂದುಕೊಟ್ಟವರಲ್ಲಿ ಒಬ್ಬರಾದ ಜಿ. ಎಸ್. ಸದಾಶಿವ ಅವರಿಗೆ ಮಾಧ್ಯಮ ಅಕಾಡಮಿ, ಪದ್ದಣ್ಣ ನೇಪಥ್ಯ ಕಲಾ ಪ್ರಶಸ್ತಿ, ರಾಮಚಂದ್ರಾಪುರ ಮಠ ಪ್ರಶಸ್ತಿಗಳು ಸಂದಿವೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಎನ್. ಶಾಂತಕುಮಾರ್

ಆಟೋಟಗಳ ರೋಮಾಂಚಕ ಕ್ಷಣಗಳನ್ನು ತಮ್ಮ ಕ್ಯಾಮರಾ ಒಳಗಣ್ಣುಗಳಿಂದ ಹಿಡಿದಿಡುತ್ತಿದ್ದ ಶ್ರೀ ಕೆ.ಎನ್. ಶಾಂತಕುಮಾರ್ ಈಗ ಪ್ರಿಂಟರ್ ಪತ್ರಿಕಾ ಸಮೂಹದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳ ಸಂಪಾದಕರು.
ಪದವಿ ಪಡೆದ ಬಳಿಕ ಕುಟುಂಬ ಸಂಸ್ಥೆ “ದಿ ಪ್ರಿಂಟರ್ (ಮೈಸೂರು) ಪ್ರೈವೇಟ್’ನ ಆಡಳಿತಕ್ಕೆ ಸೇರ್ಪಡೆಯಾದ ಶಾಂತಕುಮಾರ್ ತಂದೆ ನೆಟ್ಟಕಲ್ಲಪ್ಪನವರ ಪ್ರೀತಿಯ ಕ್ಷೇತ್ರವಾಗಿದ್ದ ಕ್ರೀಡೆಗಳತ್ತ ಒಲಿದರು.
ನಿಜ ಭಾಷಿಗಳ ಬದು ಕ್ರೀಡೆಗಳನ್ನು ಕ್ಯಾಮರಾದಿಂದ ಸೆರೆಹಿಡಿಯುವ ಹವ್ಯಾಸ ಬೆಳೆಸಿಕೊಂಡ ಕೆ. ಎನ್. ಶಾಂತಕುಮಾ‌ ಅನೇಕ ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ಗಳಲ್ಲಿ ಪಾಲ್ಗೊಂಡು ನೋಡುಗರಿಗೆ ಕ್ರೀಡಾಸವಿ ಉಣಬಡಿಸಿದರು.
ಗಾಲ್ಫ್ ಆಟಗಾರರಾಗಿ ಈಗ ಬೆಂಗಳೂರು ಗಾಲ್ಫ್ ಕ್ಲಬ್ ಕಪ್ತಾನರೂ ಆಗಿರುವ ಶಾಂತಕುಮಾರ್ ಅನೇಕ ಪತ್ರಿಕೆ ಹಾಗೂ ಕ್ರೀಡಾ ಸಂಘಟನೆಗಳ ಒಡನಾಟ ಹೊಂದಿದವರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಾಂತಕುಮಾರ್ ಅವರಿಗೆ ಏಷ್ಯನ್ ಗೇಮ್ಸ್ನ (ಕೊರಿಯಾ) ಭಾರತೀಯ ಗಾಲ್ಫ್ ತಂಡದ ಮ್ಯಾನೇಜರ್ ಆಗಿದ್ದ ಅನುಭವವೂ ಇದೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ. ನಾಗರಾಜ್ರಾವ್

ಕಳೆದ ಆರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಶ್ರೀ ಮತ್ತಿಹಳ್ಳಿ ನಾಗರಾಜರಾವ್ ಅವರು.
ಪತ್ರಿಕೋದ್ಯಮದ ಕುಟುಂಬದಲ್ಲಿ ಜನಿಸಿದ ಶ್ರೀ ಎಂ. ನಾಗರಾಜರಾವ್ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದು ಅದು ಇಂದಿನ ಪತ್ರಿಕೋದ್ಯಮಕ್ಕೂ ಅನ್ವಯವಾಗುತ್ತದೆ. ರಾಜ್ಯದ ಭಾಷಾವಾರು ಪುನರ್ವಿಂಗಡಣೆ ಸಮಯದಿಂದ ಕರ್ನಾಟಕದ ಘಟನೆಗಳನ್ನು ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿ ಮಾಡಿದವರು.
ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಆಡಳಿತಗಾರರು ಮತ್ತು ಸಂಶೋಧಕರಿಗೆ ಉಪಯುಕ್ತವಾಗುವಂಥ `ನ್ಯೂ ಡೆಲಿಡಾ ಆಫ್ ಕರ್ನಾಟಕ’ (೧೯೮೪-೧೯೮೭) ಕರ್ನಾಟಕಕ್ಕೆ ಸಂಬಂಧಪಟ್ಟ ಘಟನೆಗಳನ್ನು ದಾಖಲಿಸುವ ದಾಖಲೆಯ ಪತ್ರಿಕೆಯ ಹೊಸ ಸಾಹಸವನ್ನು ಪ್ರಾರಂಭಿಸಿದ್ದಾರೆ.
೩೦ ವರ್ಷಗಳ ಹಿಂದೆ ಜಗತ್ತಿನಾದ್ಯಂತ ಸಂಚರಿಸಿದ್ದು ಆ ಪ್ರವಾಸ ಸಾಹಿತ್ಯವನ್ನು ಬರೆಯುವುದರಲ್ಲಿ ತೊಡಗಿದ್ದಾರೆ. ಇಸ್ರೇಲ್ ಬಗ್ಗೆ ಒಂದು ಕನ್ನಡ ಪುಸ್ತಕವನ್ನು ಬರೆದಿದ್ದಾರೆ. ಸಂಯುಕ್ತ ಕರ್ನಾಟಕದೊಂದಿಗೆ ಕುಟುಂಬವು ಐದು ದಶಕಗಳಿಂದಲೂ ಹಾಗೂ ದಿ ಹಿಂದೂ ಪತ್ರಿಕೆಯಲ್ಲಿ ಏಳು ದಶಕಗಳಿಂದಲೂ ಸಂಪರ್ಕ ಹೊಂದಿದೆ. ಮದರಾಸು ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ಸಂಯುಕ್ತ ಕರ್ನಾಟಕ, ಹುಬ್ಬಳ್ಳಿಯಲ್ಲಿ ವೃತ್ತಿಯನ್ನು ಆರಂಭಿಸಿದರು. ಸಹಾಯಕ ಸಂಪಾದಕರು,ರೆಸಿಡೆಂಟ್ ಸಂಪಾದಕರು ೧೯೮೧ರಲ್ಲಿ ನಿವೃತ್ತರಾಗಿದ್ದಾರೆ.
ಕೃಷಿಗಾಗಿ ವಿಶೇಷ ಪುಟ, ತೆರಿಗೆ ನಿರ್ಧರಣೆ, ಕೈಗಾರಿಕೆ, ಹಣಕಾಸು ಮತ್ತು ವಾಣಿಜ್ಯ, ಕಿಲಾಡಿ ಕಿಟ್ಟಿ’, ವ್ಯಂಗ್ಯಚಿತ್ರವನ್ನು ವಿಷಯಗಳ ಬಗೆಗಿನ ಚರ್ಚೆ, ೧೫ ಪುಟಗಳ ವಿಶೇಷ ಪುರವಣಿಯಲ್ಲಿ ತಂದ ಕೀರ್ತಿ ಶ್ರೀಯುತರದು. ಅಮೇರಿಕ ಸಂಯುಕ್ತ ಸಂಸ್ಥಾನ, ಇಸ್ರೇಲ್, ಸ್ವಿಟ್ಸರ್ಲೆಂಡ್, ತೈವಾನ್, ಇಟಲಿ ಮುಂತಾದ ರಾಷ್ಟ್ರಗಳಿಗೆ ಪ್ರವಾಸ ಮಾಡಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ಸಂದೇಶ ಫೌಂಡೇಷನ್ ಜರ್ನಲಿಸಂ ಪ್ರಶಸ್ತಿಗಳು ದೊರೆತಿದೆ. ಪತ್ರಿಕೋದ್ಯಮದಲ್ಲಿ ನಾವಿನ್ಯತೆಯನ್ನು ಹಾಗೂ ವಿಶೇಷ ಅಂಕಣಗಳನ್ನು ಪ್ರಾರಂಭಿಸಿದ ಹೆಗ್ಗಳಿಕೆಗೆ ಪಾತ್ರರು ಶ್ರೀ ಎಂ. ನಾಗರಾಜರಾವ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಮಹಾದೇವಪ್ಪ

ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ೧೯೩೮ರಲ್ಲಿ ಜನಿಸಿದ ಶ್ರೀ ಬಿ.ಮಹಾದೇವಪ್ಪನವರು ಒಬ್ಬ ಅಧ್ಯಯನ ಶೀಲ, ಅಗಾಧ ಪಾಂಡಿತ್ಯ, ಪ್ರಖರ ವಿಚಾರಧಾರೆಯ ಬರಹಗಳಿಗೆ ಹೆಸರಾದವರು.
ಹೈದಾರಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ೧೯೫೯ರಲ್ಲಿ ಪದವಿಗಳಿಸಿ ಅನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದೇ ಅಲ್ಲದೆ ಪತ್ರಿಕೋದ್ಯಮದಲ್ಲೂ ಪದವಿಗಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಜಾಣ” ಪರೀಕ್ಷೆಯಲ್ಲೂ ತೇರ್ಗಡೆಯಾಗಿ ಕನ್ನಡ -ಅಂಗ್ಲ ಭಾಷೆಗಳೆರಡರಲ್ಲೂ ಪ್ರಭುತ್ವಗಳಿಸಿದ ಮೇಧಾವಿ.
ಆರಂಭದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ಮುಂದೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪ್ರತಿಕೆಗಳ ಬಾತ್ಮೀದಾರರಾಗಿ ಯಾದಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ಜೊತೆಜೊತೆಗೆ “ವಿಶ್ವಕಲ್ಯಾಣ” ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆಸಲ್ಲಿಸಿದ್ದಾರೆ. ಪತ್ರಿಕೋದ್ಯಮದ ಜೊತೆಗೇ ಶೈಕ್ಷಣಿಕ ಕ್ಷೇತ್ರದಲ್ಲೂ ದುಡಿದು ಕನ್ನಡದ ಅರೆಕಾಲಿಕ
2008 ನಾಯಕ ಉಪನ್ಯಾಸಕರಾಗಿ ಸಹ ದುಡಿದಿದ್ದಾರೆ.
ಬರಹಗಾರರಾಗಿ ವಿಚಾರಾತ್ಮಕ ವಿಷಯ ಲೇಖಕರಾಗಿ ಅನೇಕ ಸಮ್ಮೇಳಗಳಲ್ಲಿ ಪ್ರಭಂದ ಲೇಖನಗಳನ್ನು ಮಂಡಿಸಿ ಪ್ರಕಟಿಸಿದ್ದಾರೆ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಪತ್ರಿಕಾ ಅಕಾಡೆಮಿ ಸದಸ್ಯರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯಪರಿಷತ್ತಿನ ಜಿಲ್ಲಾ ಪ್ರತಿನಿಧಿಯಾಗಿ ಬಹುಮುಖ ಸೇವೆ ಸಲ್ಲಿಸಿರುವ ಶ್ರೀ ಬಿ. ಮಹಾದೇವಪ್ಪನವರಿಗೆ ಸಂದಿರುವ ಪ್ರಶಸ್ತಿಗಳು ಅಪಾರ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿಯಾಮೀರ್

ತುಮಕೂರು ಜಿಲ್ಲೆಯ ಕುಣಿಗಲ್ನ ಸೂಫಿಗಳ ಹಾಗೂ ಉಲೇಮಾಗಳ ಕುಟುಂಬದಿಂದ ಬಂದ ಜಿಯಾ ಮೀರ್ ಉರ್ದು ಭಾಷೆ, ಸಾಹಿತ್ಯ ಸಂಸ್ಕೃತಿಗಳ ಸಂವರ್ಧನೆಗೆ ಸೂಕ್ತ ವೇದಿಕೆಯಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡವರು.
ಕೋಮು ಸುಹಾರ್ದತೆಗೆ ವಿಶೇಷವಾದ ಒತ್ತು ಕೊಟ್ಟು, ಸಾಂಸ್ಕೃತಿಕ ಒಳನೋಟವೊಂದನ್ನು ಬಿಂಬಿಸುವ ಮೀರ್ರ ಲೇಖನಗಳು ಓದುಗರ ಸಂವೇದನೆಗಳನ್ನು ಸೂಕ್ಷ್ಮವಾಗಿ ತಟ್ಟುವ ವಿಶಿಷ್ಟ ಗುಣವನ್ನು ಹೊಂದಿರುವಂಥವು. ಆರಂಭದಲ್ಲಿ ಉರ್ದು ಸಾಹಿತ್ಯ ಪತ್ರಿಕೆಗಳಿಗೆ, ವೃತ್ತ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಬರೆಯುತ್ತಿದ್ದ ಮೀರ್ ಮಹತ್ವದ ಉರ್ದು ತ್ರೈ ಮಾಸಿಕ ಸೌಗತ್ನ ಸಂಪಾದಕರಲ್ಲೊಬ್ಬರಾಗಿ ಕಾರ ನಿರ್ವಹಿಸಿದರು.
ಕಳೆದ ೫೦ ವರ್ಷಗಳಿಂದ ಪತ್ರಿಕೋದ್ಯಮದ ನಿರಂತರ ಸಂಪರ್ಕದಲ್ಲಿರುವ ಮೀರ್ ಹವ್ಯಾಸಿ ಪತ್ರಕರ್ತರಾಗಿ ಡೈಲಿ ಸಾಲಾರ್ನಲ್ಲಿ ವೃತ್ತಿನಿರತ ಪತ್ರಕರ್ತರಾಗಿ, ಹೊಸ ತಲೆಮಾರಿನ ಉರ್ದು ಕವಿಗಳನ್ನು ಬರಹಗಾರರನ್ನು ರೂಪಿಸುವ ಸಂಪನ್ನತೆಯನ್ನು ಡೈಲಿ ಸಾಲಾರ್ಗೆ ಒದಗಿಸಿಕೊಡುವವರಾಗಿ, ಅದರ ಪ್ರಧಾನ ಸಹಾಯಕ ಸಂಪಾದಕರಾಗಿ, ಡೈಲಿ ಪಾಸ್ಬಾನ್ ಪತ್ರಿಕೆಯ ಪ್ರಧಾನ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುವುದರ ಮೂಲಕ ಉರ್ದು ಪತ್ರಿಕೋದ್ಯಮದ ದಿಗಂತಗಳಲ್ಲಿ ವಿಹರಿಸಿದವರು.
ವಿಮರ್ಶಕ, ಕವಿ, ಸಣ್ಣ ಕಥೆಗಾರ ಹಾಗೂ ಸಾಲಾರ್ನ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ವಿವಿಧ ಹೊಣಿಗಾರಿಕೆಗಳನ್ನು ಅವರು ನಿರ್ವಹಿಸಿದ ರೀತಿ ಉರ್ದು ಸಾಹಿತ್ಯದ ಬಗೆಗೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಅನೇಕ ಹೊಸ ಬರಹಗಾರರು ಸಾಹಿತ್ಯ ಕ್ಷೇತ್ರಕ್ಕೆ ಪ್ರೀತಿಯಿಂದ ಪ್ರವೇಶಿಸಲು ಪ್ರೇರಕ ಶಕ್ತಿಯಾಯಿತು.
ಮೀರ್ ಅವರು ಸಂಪಾದಿಸಿರುವ ‘ಮಜಮೀರ್’ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನ ನಿರತರಾಗಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬಲ್ಲ ಅತ್ಯುತ್ತಮ ಪುಸ್ತಕಗಳಲ್ಲಿ ಒಂದಾಗಿದೆ. ಕನ್ನಡದ ಖ್ಯಾತ ಕವಿಗಳ ಹಲವಾರು ಕವಿತೆಗಳನ್ನು ಉರ್ದುವಿಗೆ ಅನುವಾದಿಸಿರುವ ಮೀ ಕನ್ನಡ, ಉರ್ದು ಭಾಷಾ ಬಾಂಧವ್ಯವನ್ನು ಬೆಸೆಯಲು ಶ್ರಮಿಸುತ್ತಿದ್ದಾರೆ.
ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೂ ಪಾತ್ರರಾಗಿರುವ ಜಿಯಾ ಮೀರ್ ತಮ್ಮ ಸಮತೂಕದ ಸಮಯೋಚಿತ ಸಾಹಿತ್ಯ ಕೃಷಿ ಮತ್ತು ಬರವಣಿಗೆಗಳಿಂದ ಉರ್ದು ಪತ್ರಿಕಾ ಪ್ರಪಂಚದ ಸುಪ್ರಸಿದ್ಧ ಹಿರಿಯ ಪತ್ರಕರ್ತರಾಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್.ಎನ್. ಷಡಕ್ಷರಪ್ಪ

ಮಧ್ಯಕರ್ನಾಟಕದ ಜಿಲ್ಲೆಗಳ ಆಪ್ತ ಒಡನಾಡಿಯೂ ಆ ಜಿಲ್ಲೆಗಳ ಜನರ ಸಮಸ್ಯೆಗೆ ಸದಾ ಸ್ಪಂದಿಸುತ್ತಿರುವ ಪ್ರಭಾವಶಾಲಿ ಮಾಧ್ಯಮವೂ ಆಗುವಂತೆ ‘ಜನತಾವಾಣಿ’ ದಿನಪತ್ರಿಕೆಯನ್ನು ರೂಪಿಸಿ ಎಲ್ಲ ವರ್ಗದ ಓದುಗರ ಮೆಚ್ಚುಗೆಗೂ ಪಾತ್ರರಾಗಿರುವ ಶ್ರೀ ಎಚ್.ಎನ್. ಷಡಕ್ಷರಪ್ಪ ಒಬ್ಬ ಧೀಮಂತ ಪತ್ರಿಕೋದ್ಯಮಿ.
ಗಾಂಧಿ, ಲೋಹಿಯಾ, ಜೆ.ಪಿ, ಅಂಬೇಡ್ಕರ್, ಬುದ್ಧ, ಬಸವರ ರಾಜಕೀಯ ದಾರ್ಶನಿಕ ವಿಚಾರಧಾರೆಗಳನ್ನುಂಡ ಎಚ್.ಎನ್.ಎಸ್. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಕೈಬರಹದ ಪತ್ರಿಕೆ ಹೊರತಂದು, ಮುಂದೆ ಮಾಸಪತ್ರಿಕೆ ಪ್ರಕಟಿಸುವ ಸಾಹಸಕ್ಕೂ ಕೈ ಹಚ್ಚಿದವರು. ಹುಬ್ಬಳ್ಳಿಯ ‘ಪ್ರಪಂಚ’ ಹಾಗೂ ‘ವಿಶ್ವವಾಣಿ’ ಸಂಪಾದಕ ಮಂಡಳಿಯಲ್ಲಿದ್ದು ಪತ್ರಿಕೋದ್ಯಮಕ್ಕೆ ಅಗತ್ಯವಾಗಿದ್ದ ಸತ್ವ ಹೀರಿಕೊಂಡವರು. ಕರ್ನಾಟಕ ರಾಜ್ಯದ ಸಣ್ಣ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ, ದಾವಣಗೆರೆ ಪ್ರೆಸ್ ಕ್ಲಬ್ ನ ಮುಖ್ಯ ಪೋಷಕರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ದಾವಣಗೆರೆ ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿಯ ಗೌರವಾಧ್ಯಕ್ಷರಾಗಿ, ‘ತುಂಗಭದ್ರಾ ಉಳಿಸಿ’ ಹೋರಾಟ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಷಡಕ್ಷರಪ್ಪನವರು ಪಡೆದುಕೊಂಡಿರುವ ವಿಸ್ತ್ರತ ಅನುಭವ ಪತ್ರಿಕೋದ್ಯಮಿಯಾಗಿ ಅವರನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾರಣವಾಗಿವೆ. ಜನತಾವಾಣಿ’ ಒಂದು ಸಾಮಾಜಿಕ ಆಯಾಮ ಪಡೆದುಕೊಳ್ಳುವಲ್ಲಿ, ಸಾಂಸ್ಕೃತಿಕ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳುವಲ್ಲಿ, ಪ್ರಗತಿ ಧೋರಣೆಗೆ ಬದ್ಧವಾಗುವಲ್ಲಿ ಮಧ್ಯತೆಯ ವಿರುದ್ಧ ಸಮರ ಸಾರುವಲ್ಲಿ ಎಚ್.ಎನ್.ಎಸ್.ಅವರ ಪ್ರಗತಿಪರ ಮನೋಧರ್ಮ ವಿಶೇಷವಾಗಿ ಕೆಲಸ ಮಾಡಿದೆ. ‘ಜನತಾವಾಣಿ’ಯನ್ನು ರಾಜ್ಯದ ಅತ್ಯುತ್ತಮ ಸಣ್ಣಪತ್ರಿಕೆಗಳಲ್ಲಿ ಒಂದನ್ನಾಗಿ ರೂಪಿಸುವಲ್ಲಿ ಶ್ರೀ ಎಚ್.ಎನ್. ಷಡಕ್ಷರಪ್ಪನವರ ಶ್ರಮ, ಪ್ರತಿಭೆ, ಛಲಗಳು ಮುಪ್ಪುರಿಗೊಂಡಿರುವುದು ಎದ್ದು ಕಾಣುತ್ತದೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರಕೆರೆ ಜಯರಾಂ

ಕೈಗಾರಿಕೋದ್ಯಮಿಯೊಬ್ಬರ ಮಗ ಒಬ್ಬ ಯಶಸ್ವಿ ಪತ್ರಿಕೋದ್ಯಮಿಯಾಗಿ ರೂಪುಗೊಂಡ ರೋಚಕ ಕಥನಕ್ಕೆ ಸಾಕ್ಷಿ ಅರಕೆರೆ ಜಯರಾಮ್.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅರಕೆರೆಯ ಜಯರಾಮ್ ಅವರ ಹೆಸರಿನೊಂದಿಗೆ ಲಗತ್ತಾಗಿದೆಯಾದರೂ ಜಯರಾಮ್ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನೂ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾವನ್ನೂ ಪಡೆದುಕೊಂಡ ಜಯರಾಮ್ ಅವರನ್ನು ಆಕರ್ಷಿಸಿದ್ದು ಪತ್ರಿಕೋದ್ಯಮ ಕ್ಷೇತ್ರವೇ. ೧೯೭೨ರಲ್ಲಿ ಹಿಂದೂ ಪತ್ರಿಕೆಗೆ ಪತ್ರಕರ್ತರಾಗಿ ಪ್ರವೇಶಿಸಿದ್ದು ಅವರಿಗೆ ಪತ್ರಿಕೋದ್ಯಮದ ಬಹುಮಖ ಅನುಭವಕ್ಕೆ ನಾಂದಿಯಾಯಿತು.
ವಿಶೇಷ ಬಾತ್ಮೀದಾರರಾಗಿ ರಾಜಕಾರಣದ ವಿವಿಧ ಮುಖಗಳನ್ನು ವಿವಕ್ಷಣತೆಯಿಂದ ವಿಮರ್ಶೆಗೊಳಪಡಿಸುವ ಕಲೆಯನ್ನು ಕರಗತವಾಗಿಸಿಕೊಂಡ ಜಯರಾಮ್ ಅವರು ಸಿದ್ದಪಡಿಸಿದ ವಿಶೇಷ ವರದಿಗಳಲ್ಲಿ ಮುಖ್ಯವಾದವು ನ್ಯಾಯಮೂರ್ತಿ ಜೆ. ಸಿ. ಷಾ ತನಿಖಾ ಆಯೋಗ, ನ್ಯಾಯಮೂರ್ತಿ ಎ.ಎನ್. ಗ್ರೂವರ್ ಆಯೋಗ ಮತ್ತು ನ್ಯಾಯಮೂರ್ತಿ ಕುಲದೀಪ್ಸಿಂಗ್ ಆಯೋಗ, ರಾಜಕಾರಣ, ಇತಿಹಾಸ, ಕಾನೂನು, ಶಿಕ್ಷಣ, ಸಾರ್ವಜನಿಕ ವಿಚಾರಗಳ ಬಗೆಗೆ ತೀವ್ರ ಆಸಕ್ತಿಯಿರುವ ಜಯರಾಮ್ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಬರೆಯುತ್ತಿರುವ ‘ಹೆರಿಟೇಜ್ ವಾಚ್’ ಮತ್ತು ‘ಲಿವಿಂಗ್ ಲೆಜೆಂಡ್ಸ್’ ಕಾಲಂಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಮೈಸೂರು ಅರಸರ ಕಾಲದ ಇತಿಹಾಸ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಜಯರಾಮ್ ಆ ಬಗ್ಗೆ ಇಂಗ್ಲಿಷ್ನಲ್ಲಿ ಪ್ರಸ್ತಕವೊಂದನ್ನು ಹೊರತಂದಿದ್ದಾರೆ. ಅತ್ಯುತ್ತಮ ಸಾರ್ವಜನಿಕ ಭಾಷಣಕಾರರಾಗಿದ್ದು ಹಲವಾರು ವಿಚಾರಗೋಷ್ಠಿ ವಿಚಾರಸಂಕಿರಣಗಳಲ್ಲಿ ಭಾಗವಹಿಸಿರುವುದಲ್ಲದೆ ಆಕಾಶವಾಣಿ ದೂರದರ್ಶನದ ಕಾರಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸರ್ಕಾರದ ನಾಮಕರಣ ಸದಸ್ಯರಾಗಿ ವಾರ್ತಾ ಇಲಾಖೆಯ ಪತ್ರಿಕೋದ್ಯಮ ಮಾನ್ಯತಾ ಸಮಿತಿಯಲ್ಲೂ ಕಾರ ನಿರ್ವಹಿಸಿರುವ ಅರಕೆರೆ ಜಯರಾಮ್ ಪ್ರತಿಷ್ಠೆ ಕುಶಲತೆಗಳು ಸಂಗಮಿಸಿದ ಅಪರೂಪದ ಪತ್ರಕರ್ತರಾಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುಲಾಂ ಮಂಬಕ್

ಅತ್ಯುತ್ತಮ ಪತ್ರಿಕಾ ಛಾಯಾಗ್ರಾಹಕರು ಶ್ರೀ ಗುಲಾಂ ಮಂಟಕ್ ಅವರು.
೧೯೩೯ರಲ್ಲಿ ಬೀದರಿನಲ್ಲಿ ಜನನ. ಛಾಯಾಗ್ರಹಣವನ್ನು ಬಾಲ್ಯದಿಂದಲೇ ತಂದೆ ಗುಲಾಮ್ ಮುಸ್ತಫ ಅವರಲ್ಲಿ ಕಲಿತರು. ಶ್ರೀ ಗುಲಾಂ ಮಂಟಕ್ ಅವರು ವೃತ್ತಿಯನ್ನಾರಂಭಿಸಿದಾಗ ಛಾಯಾಚಿತ್ರವನ್ನು ಡೆವಲಪ್ ಮಾಡಲು ಬೀದರ್ ನಲ್ಲಿ ವಿದ್ಯುಚ್ಛಕ್ತಿಯೂ ಇರಲಿಲ್ಲ. ಡೆವಲಪ್ ಮಾಡುವ ಕೆಲಸವನ್ನು ಲ್ಯಾಟೀನು ಬೆಳಕಿನಲ್ಲಿಯೂ ಮತ್ತು ಫೋಟೋ ಎನ್ಲಾರ್ಜ್ ಮಾಡುವುದನ್ನು ಸೂರ್ಯನ ಬೆಳಕಿನಲ್ಲಿಯೂ ಮಾಡುವ ಪರಿಸ್ಥಿತಿ. 0 ಡಿಗ್ರಿಯಿಂದ ೧೮೦ ಡಿಗ್ರಿಯವರೆಗೆ ಛಾಯಾಚಿತ್ರ ತೆಗೆಯುವ ವಿವಿಧ ರೀತಿಯ ಹೊಸ ಮತ್ತು ಹಳೆಯ ಕ್ಯಾಮರಾಗಳನ್ನು ಸಂಗ್ರಹಿಸಿ ಸರ್ಕ್ಯೂಟ್ ಕ್ಯಾಮರಾಗಳಂತೆ ಕೆಲಸ ಮಾಡುವ ಹಾಗೆ ರೂಪಿಸುತ್ತಿದ್ದರು. ಹಾಗೂ ೦ ಡಿಗ್ರಿಯಿಂದ ೩೬೦ ಡಿಗ್ರಿವರೆಗೆ ಛಾಯಾಚಿತ್ರ ತೆಗೆಯಲು ಈ ಸರ್ಕ್ಯೂಟ್ ಕ್ಯಾಮರಾಗಳನ್ನು ಮಾರ್ಪಡಿಸಲು ಪ್ರಯತ್ನಿಸುತ್ತಿದ್ದರು. ಈ ತಂತ್ರ ಕೌಶಲದಿಂದ ಶ್ರೀ ಗುಲಾಂ ಮಂಟಕ್ ಅವರು ಕೆಲವು ವಿಶಿಷ್ಟ ಛಾಯಾಚಿತ್ರಗಳನ್ನು ತೆಗೆದ ಹಿರಿಮೆಗೆ ಪಾತ್ರರು.
ಛಾಯಾಚಿತ್ರ ಇತಿಹಾಸದಲ್ಲಿ ಮುಂಬಯಿಯ ರಸ್ತೆ, ಸಮುದ್ರದ ಭಾಗ, ಗೇಟ್ ವೇ ಆಫ್ ಇಂಡಿಯಾ, ತಾಜಮಹಲ್ ಹೋಟೆಲು ಒಳಗೊಂಡಂತೆ ಸ್ವಾಮಿ ವಿವೇಕಾನಂದರ ಪ್ರತಿಮೆಯಿಂದ ಹಿಡಿದು ಶಿವಾಜಿ ಪ್ರತಿಮೆಯವರೆಗೆ ಒಂದೇ ಸಲಕ್ಕೆ ತೆಗೆದ ಛಾಯಾಚಿತ್ರ ಅತ್ಯಂತ ದೀರ್ಘ ಛಾಯಾಚಿತ್ರವಾಗಿದೆ.
ಕ್ಯಾಮರಾಗಳ ದುರಸ್ತಿ ಕಾರ್ಯವನ್ನು ಆರಂಭಿಸಲು ವಾರ್ತಾ ಇಲಾಖೆಯ ಪತ್ರಿಕಾ ಛಾಯಾಗ್ರಾಹಕರಾಗಿ ನಾಮ ನಿರ್ದೇಶನಗೊಂಡಾಗ ಕ್ಯಾಮರಾ ತಂತ್ರಜ್ಞಾನದ ಬಗ್ಗೆ ಹೆಚ್ಚೆಚ್ಚು ಅರಿಯಲು ಸಾಧ್ಯವಾಯಿತು.
ಛಾಯಾಗ್ರಹಣ ತಂತ್ರಜ್ಞಾನದಲ್ಲಿ ಅಪಾರ ಕೌಶಲವುಳ್ಳ ಅನನ್ಯ ಛಾಯಾಗ್ರಾಹಕ ಗುಲಾಂ ಮಂಟಕ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವೆಂಕಟನಾರಾಯಣ

ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಕನ್ನಡದ ಓದುಗರಿಗೆ ಚಿರಪರಿಚಿತರಾಗಿರುವ ವೆಂಕಟನಾರಾಯಣ ಅವರು ಜನಪರ ಕಾಳಜಿಯ, ಸಾಮಾಜಿಕ ಜವಾಬ್ದಾರಿಯ ಪತ್ರಕರ್ತರು. ಕರಡು ತಿದ್ದುವವರಾಗಿ ವೃತ್ತಿ ಬದುಕಿಗೆ ಪ್ರವೇಶಿಸಿದ ವೆಂಕಟನಾರಾಯಣ ಸ್ವಸಾಮರ್ಥ್ಯದಿಂದ ಉಪಸಂಪಾದಕ, ಹಿರಿಯ ಸಂಪಾದಕ, ಮುಖ್ಯ ಸುದ್ದಿ ಸಂಪಾದಕ, ಸ್ಥಾನಿಕ ಸಂಪಾದಕ ಮುಂತಾದ ಹಲವು ಎತ್ತರಗಳಿಗೆ ಏರಿದವರು. ದೂರದರ್ಶನದಲ್ಲಿ ಸುದ್ದಿ ಸಂಯೋಜಕರಾಗಿಯೂ ಹೆಸರು ಮಾಡಿದವರು. ತಮ್ಮ ಸರಳ ಜೀವನಶೈಲಿಯಿಂದ ಬಡವರ, ದೀನದಲಿತರ ದಿನನಿತ್ಯದ ಬವಣೆಯ ಬದುಕಿಗೆ ಧ್ವನಿಯಾದವರು ಪತ್ರಿಕೋದ್ಯಮದ ಜೊತೆಗೆ ಹಲವು ಸಂಘ ಸಂಸ್ಥೆಗಳ ಒಡನಾಟವಿರಿಸಿಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ೫೦೦ಕ್ಕೂ ಹೆಚ್ಚು ಉಚಿತ ಸಾಮೂಹಿಕ ವಿವಾಹಗಳನ್ನೇರ್ಪಡಿಸಿ ಅಸಹಾಯಕ ಬದುಕುಗಳಿಗೆ ಊರುಗೋಲಾದವರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರಕಿಸಿಕೊಟ್ಟು ಅವರ ಭವಿಷ್ಯದ ಆಶಾಕಿರಣವಾದವರು. ಜನಜಾಗೃತಿ ಮೂಡಿಸುವ ಆಂದೋಲನಗಳಲ್ಲಿ ಅತ್ಯಂತ ಪ್ರೀತಿಯಿಂದ ತೊಡಗಿಸಿಕೊಂಡವರು.
`ಪತ್ರಿಕೋದ್ಯಮವೆಂದರೆ ಪ್ರಜಾಪ್ರಭುತ್ವದ ಕಾವಲುನಾಯಿ’ ಎಂಬ ಮಾತನ್ನು ಅನ್ವರ್ಥವಾಗಿಸುವಂತೆ ಕಳೆದ ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತರು ಶ್ರೀ ವೆಂಕಟನಾರಾಯಣ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ ಎಸ್ ಸಚ್ಚಿದಾನಂದ ಮೂರ್ತಿ

ಆಂಗ್ಲಭಾಷೆಯ ‘ದಿ ವೀಕ್’ ಪತ್ರಿಕೆ ಮತ್ತು ‘ಮಲೆಯಾಳಂ ಮನೋರಮ’ ಪತ್ರಿಕೆಗಳಿಗೆ ನವದೆಹಲಿಯಲ್ಲಿ ಸ್ಥಾನಿಕ ಸಂಪಾದಕರಾಗಿ ಕೆಲಸ ಮಾಡುತ್ತಿರುವ ಕನ್ನಡಿಗ ಶ್ರೀ ಸಚ್ಚಿದಾನಂದಮೂರ್ತಿಯವರು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆ ಅಪಾರ.

ಶ್ರೀ ಸಚ್ಚಿದಾನಂದಮೂರ್ತಿಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೨ರಲ್ಲಿ ‘ದಿ ವೀಕ್’ ಪತ್ರಿಕೆಯ ಬೆಂಗಳೂರು ಬಾತ್ಮೀದಾರರಾದರು. ಆನಂತರ ೧೯೯೦ರಲ್ಲಿ ಮಲೆಯಾಳಂ ಮನೋರಮ ಸಂಸ್ಥೆಯ ನವ ದೆಹಲಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿ ಹಾಗೂ ಘಟನಾವಳಿಗಳ ವಿಶ್ಲೇಷಣೆಯಲ್ಲಿ ಪರಿಣತರಾದ ಶ್ರೀ ಸಚ್ಚಿದಾನಂದಮೂರ್ತಿಯವರು ರಾಷ್ಟ್ರದ ರಾಜಧಾನಿಯಲ್ಲಿದ್ದರೂ ಕರ್ನಾಟಕವನ್ನು ಮರೆತಿಲ್ಲ. ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳನ್ನು ರಾಷ್ಟ್ರಮಟ್ಟದಲ್ಲಿ ಗಮನಕ್ಕೆ ತರುವಲ್ಲಿ ನ್ಯಾಯೋಚಿತ ಕೆಲಸ ಮಾಡುತ್ತ ಬಂದಿದ್ದಾರೆ.

ಅನೇಕ ದೇಶಗಳನ್ನು ಸುತ್ತಿ ಬಂದಿರುವ ಇವರು ಅನುಭವ ಮತ್ತು ಅಧ್ಯಯನಶೀಲತೆಗಳಿಂದ ಪತ್ರಿಕೋದ್ಯಮದ ಪ್ರಮುಖ ವ್ಯಕ್ತಿಯಾಗಿ ಬೆಳೆದಿದ್ದಾರೆ. ಸಂವಿಧಾನ, ಸರ್ಕಾರ, ರಾಯಭಾರ, ರಾಷ್ಟ್ರೀಯ ಸುರಕ್ಷತೆ – ಹೀಗೆ ವಿವಿಧ ಕ್ಷೇತ್ರಗಳ ಬಗ್ಗೆ ಮೌಲಿಕ ಬರಹಗಳನ್ನು ನೀಡಿ ಪ್ರಸಿದ್ಧರಾಗಿದ್ದಾರೆ. ಈಗ ತಮ್ಮ ಅಪೂರ್ವ ಸೇವೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ ವಿ ವೈಕುಂಠರಾಜು

ಶ್ರೀ ಬಿ ವಿ ವೈಕುಂಠರಾಜು ಪತ್ರಿಕೋದ್ಯಮ ಹಾಗೂ ಸಮಕಾಲೀನ ಕನ್ನಡ ರಂಗಭೂಮಿಗೆ ಪರಿಣಾಮಕಾರಿ ಸ್ಪಂದನ ನೀಡಿದ ಪ್ರಮುಖರಲ್ಲಿ ಒಬ್ಬರು.

೧೯೩೭ರಲ್ಲಿ ಚಿತ್ರದುರ್ಗ ಸಮೀಪದ ಗುಡ್ಡದರಂಗವ್ವನಹಳ್ಳಿಯಲ್ಲಿ ಜನಿಸಿದ ಶ್ರೀಯುತರು ಚಿಕ್ಕಂದಿನಿಂದಲೂ ಚಕಮಕಿಯ ಮಾತು, ವಾದ ಪ್ರತಿವಾದ, ಚರ್ಚೆಗಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿಕೊಂಡವರು.

ಹತ್ತಾರು ವರ್ಷಗಳಿಂದ ನಾಡಿನ ಸಾಂಸ್ಕೃತಿಕ ವಲಯ, ರಾಜಕೀಯ ವಲಯಗಳಲ್ಲಿನ ಆಗುಹೋಗುಗಳನ್ನು, ಏರುಪೇರುಗಳನ್ನು ಅತ್ಯಂತ ಸರಳವಾಗಿ, ಶ್ರೀಸಾಮಾನ್ಯನಿಗೂ ಮನಮುಟ್ಟುವಂತೆ ವಾರಪತ್ರಿಕೆಯ ಸಂಪಾದಕರ ಡೈರಿಯಲ್ಲಿ ಹೇಳುತ್ತಾ ಬಂದಿರುವ ವೈಕುಂಠರಾಜು ನಾಲ್ಕು ಕಾದಂಬರಿ, ಮೂರು ನಾಟಕಗಳು, ಪ್ರಬಂಧ, ವಿಮರ್ಶೆ ಹಾಗೂ ವ್ಯಕ್ತಿಚಿತ್ರಗಳನ್ನು ಬರೆದು ಹೆಸರುವಾಸಿಯಾದವರು. ಇವರ ‘ಸಂದರ್ಭ’ ನಾಟಕ ಕನಡದ ಕೆಲವೇ ಉತಮ ಉತ್ತಮ ನಾಟಕಗಳಲ್ಲೊಂದು. ಇವರ ‘ಉದ್ಭವ’

ಕೃತಿ ನಾಟಕವಾಗಿ ಇವರಿಗೆ ಅಪಾರ ಮನ್ನಣೆ ತಂದುಕೊಟ್ಟಿತು.

ಪ್ರಜಾವಾಣಿಯ ಪುರವಣಿಯನ್ನು ಸಾಂಸ್ಕೃತಿಕ ದಾಖಲೆಯಾಗುವಂತೆ ರೂಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ರಂಗಭೂಮಿ, ಸಿನಿಮಾ, ಕಥೆ, ಕಾವ್ಯ – ಹೀಗೆ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತಮನಸ್ಸುಗಳಿಗೆ ಇಂಬು ನೀಡಿ ಭಾನುವಾರದ ಪುರವಣಿಯನ್ನು ಕಾದು ಓದುವಂತೆ ಮಾಡಿದ ಶ್ರೇಯಸ್ಸು ಇವರದು.

೧೯೬೪ರಿಂದ ೧೯೮೩ರ ವರೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ತೊಡಗಿ ಕನ್ನಡಿಗರ ಮನೆಮಾತಾಗಿದ್ದ ವೈಕುಂಠರಾಜು ೧೯೮೪ರಲ್ಲಿ ತಮ್ಮದೇ ವಾರಪತ್ರಿಕೆ ಪ್ರಾರಂಭಿಸಿದರು. ಇವರ ನೇರ ನಿಷ್ಠುರ ಸಂಪಾದಕೀಯ ಸಮಾಜದ ಅಂಕುಡೊಂಕುಗಳಿಗೆ ನೀಡಿದ ಚಿಕಿತ್ಸೆ ಎಂದೇ ಹೇಳಬೇಕು. ರಾಜ್ಯದ ವೃತ್ತಿನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ೧೯೮೭ರಿಂದ ೧೯೮೯ರ ವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಇವರು ನೀಡಿರುವ ಕೊಡುಗೆ ಗಣನೀಯವಾದುದು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ ಎಸ್ ಮಣಿ

ಕರ್ನಾಟಕದಲ್ಲಿ ಸಂಜೆ ದಿನಪತ್ರಿಕೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿ, ವಿಶೇಷ ಶೈಲಿಯ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ ಕೀರ್ತಿವಂತರು ಶ್ರೀ ಬಿ ಎಸ್ ಮಣಿ ಅವರು.

ಸಂಜೆವಾಣಿ ದಿನಪತ್ರಿಕೆ ಶ್ರೀ ಬಿ ಎಸ್ ಮಣಿ ಅವರ ಕಲ್ಪನೆಯ ಕೂಸು ಇಂದು ಪ್ರಬುದ್ಧವಾಗಿ ಬೆಳೆದು ನಿಂತಿದೆ. ಕರ್ನಾಟಕದ ನಾಲ್ಕು ನಗರಗಳಲ್ಲಿ ಏಕಕಾಲಕ್ಕೆ ಪ್ರಕಟವಾದ ಪ್ರಥಮ ಸಂಜೆ ದಿನಪತ್ರಿಕೆ ಎಂಬ ಪ್ರಸಿದ್ಧಿಯನ್ನು ಪಡೆಯುವಲ್ಲಿ ಶ್ರೀ ಮಣಿಯವರ ಶ್ರಮ ಅಪಾರವಾಗಿದೆ.

ಸಾಮಾನ್ಯ ಜನರೂ ಓದುವ ಹವ್ಯಾಸವನ್ನು ಮಣಿಯವರ ಪ್ರತಿಪಾದನೆ. ಅಂತೆಯೇ ತಮ್ಮ ತಂದುಕೊಟ್ಟರು.

ಮೈಗೂಡಿಸಿಕೊಳ್ಳಲು ಸುದ್ದಿಗಳು ಸರಳಭಾಷೆಯಲ್ಲಿರಬೇಕು ಎಂಬುದು ಪತ್ರಿಕೆಯಲ್ಲಿ ಸರಳ ಭಾಷೆ ಬಳಸಿದರು. ಪತ್ರಿಕೆಗೆ ಜನಪ್ರಿಯತೆಯನ್ನು

‘ಚಂದನ’ ವಾರಪತ್ರಿಕೆಯನ್ನು ಪ್ರಾರಂಭಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ವಿತರಿಸಿದ ಕೀರ್ತಿ ಇವರದು. ‘ಚೇತನ’ ಮಾಸಿಕದಲ್ಲಿ ಪ್ರಸಿದ್ಧ ಕಾದಂಬರಿಗಳನ್ನು ಪ್ರಕಟಿಸಿ ಜನಸಾಮಾನ್ಯರೂ ಕೊಂಡು ಓದುವ ಹವ್ಯಾಸವನ್ನು ಬೆಳೆಸಿದರು. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಪಿಟ್ಟರ್‌ ಲ್ಯಾಂಡ್, ಸ್ವೀಡನ್, ಆಸ್ಟ್ರಿಯ, ಇಟಲಿ, ಅಮೆರಿಕ, ಕೆನಡಾ, ಸಿಂಗಪೂರ್, ಮಲೇಷಿಯಾ, ಥೈಲಾಂಡ್, ತೈವಾನ್ ಮುಂತಾದ ದೇಶಗಳಿಗೆ ಭೇಟಿ ಇತ್ತಿರುವ ಶ್ರೀಯುತರು ಅಪಾರ ಜೀವನಾನುಭವ ಗಳಿಸಿಕೊಂಡಿದ್ದಾರೆ.

ಪತ್ರಿಕಾ ರಂಗದಲ್ಲಿ ಹೊಸ ಹಾದಿ ತುಳಿದು, ಯಶಸ್ವಿಯಾದ ಗಣ್ಯ ಪತ್ರಿಕೋದ್ಯಮಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಶ್ರೀ ಬಿ ಎಸ್ ಮಣಿ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ.ಎ. ಪೊನ್ನಪ್ಪ

ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವಿಭಾಗದ ವರದಿಗಳಿಗೆ ಹೆಚ್ಚಿನ ಮಾನ್ಯತೆಯನ್ನು ತಂದು ಕೊಟ್ಟಿರುವವರು ಜನಪ್ರಿಯ ಕ್ರೀಡಾ ಪತ್ರಕರ್ತರಾದ ಶ್ರೀ ಎಂ. ಎ. ಪೊನ್ನಪ್ಪ ಅವರು.
ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿರುವ ಶ್ರೀ ಪೊನ್ನಪ್ಪ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡಿದ್ದರು. ಪದವೀಧರರಾದ ಮೇಲೆ ಪತ್ರಿಕೋದ್ಯಮದ ಕಡೆಗೆ ಆಕರ್ಷಿತರಾಗಿ ಕೊಡಗಿನ ದಿನಪತ್ರಿಕೆ ‘ಶಕ್ತಿ’ಯಲ್ಲಿ ವೃತ್ತಿ ಪ್ರಾರಂಭಿಸಿದರು. ಲೋಕವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ‘ಪ್ರಜಾವಾಣಿ’ ಬಳಗಕ್ಕೆ ಸೇರ್ಪಡೆ ಯಾದರು. ನಂತರ ನೈಜ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ದೊರೆಯಿತು. ಕರ್ನಾಟಕದ ವಿವಿಧೆಡೆಗಳಲ್ಲಿ ಹಾಗೂ ಭಾರತದ ಬೇರೆ ಬೇರೆ ನಗರಗಳಲ್ಲಿ ನಡೆದ ಅನೇಕ ಪ್ರತಿಷ್ಠಿತ ಕ್ರೀಡಾ ಸ್ಪರ್ಧೆಗಳ ವರದಿಯನ್ನು ವೈಶಿಷ್ಟ್ಯಪೂರ್ಣವಾಗಿ ಮಾಡಿ ಓದುಗರ ವಿಶ್ವಾಸಕ್ಕೆ ಪಾತ್ರರಾದರು. ಹಲವು ಬಾರಿ ವಿದೇಶಕ್ಕೆ ಹೋಗಿ ಅಂತರರಾಷ್ಟ್ರೀಯ ಕ್ರೀಡೆಗಳನ್ನು ವರದಿ ಮಾಡಿ ಅಲ್ಲಿ ಕನ್ನಡಿಗ ಕ್ರೀಡಾಪಟುಗಳ ಸಾಧನೆಯನ್ನು ಆಕರ್ಷಕವಾಗಿ ನಿರೂಪಿಸಿದ್ದಾರೆ.
ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಅಧ್ಯಕ್ಷರಾಗಿ ಬೆಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿ, ಒಂಬತ್ತು ಬಾರಿ ಪ್ರೆಸ್ ಕ್ಲಬ್‌ನ ಪ್ರಧಾನ ಕಾವ್ಯದರ್ಶಿಯಾಗಿ ದುಡಿದಿದ್ದಾರೆ. ಕ್ರೀಡಾ ವರದಿಗಾರರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ವರ್ಷದ ಅತ್ಯುತ್ತಮ ಕ್ರೀಡಾ ವರದಿಗಾರ ಪ್ರಶಸ್ತಿ, ದಸರಾ ಕ್ರೀಡಾ ರಾಜ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಶ್ರೀಯುತರಿಗೆ ಸಂದಿವೆ.
ಚುರುಕಿನ ಕೆಲಸಗಾರರಾಗಿರುವ, ಪತ್ರಿಕಾ ವೃತ್ತಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಸ್ನೇಹಮಯಿ ಕ್ರೀಡಾ ಸಂಪಾದಕ ಶ್ರೀ ಎಂ. ಎ. ಪೊನ್ನಪ್ಪ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುರೇಂದ್ರ ಭೀಮರಾವ್ ದಾನಿ

ವಸ್ತುನಿಷ್ಠ ವರದಿಗಾರರು, ಖಚಿತ ಬರವಣಿಗೆಗೆ ಮಾದರಿ ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು.
೧೯೪೭ ರಲ್ಲಿ ಸಂಯುಕ್ತ ಕರ್ನಾಟಕದ ವರದಿಗಾರರಾಗಿ ವೃತ್ತಿಯನ್ನು ಆರಂಭಿಸಿದ ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು ಸುದ್ದಿ ಸಂಪಾದಕರಾಗಿ, ಸಹಾಯಕ ಸಂಪಾದಕರಾಗಿ ಹೆಸರು ಗಳಿಸಿ, ೧೯೮೩ ರಲ್ಲಿ ಸಂಪಾದಕರಾಗಿ ನಿವೃತ್ತಿ ಹೊಂದಿದರು. ಕನ್ನಡದ ಪ್ರಮುಖ ಪತ್ರಿಕೋದ್ಯಮಿಗಳಲ್ಲಿ ಒಬ್ಬರಾದ ಶ್ರೀಯುತರು ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ್ದ ಅಖಿಲ ಭಾರತೀಯ ಸೇವಾದಳದ ಸಂಘಟಕರಲ್ಲೊಬ್ಬರು.
೧೯೬೫ರಲ್ಲಿ ಕಾರವಾರದಲ್ಲಿ, ೧೯೮೨ ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿರುವ ಶ್ರೀಯುತರು ಅನೇಕ ಪತ್ರಕರ್ತರ ಶಿಬಿರಗಳು ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದ ಪ್ರತಿಷ್ಠಿತ ಕನ್ನಡ ಪ್ರಕಾಶನ ಸಂಸ್ಥೆ ಮಿಂಚಿನಬಳ್ಳಿ ಗ್ರಂಥಮಾಲೆಯ ಪುನರುಜ್ಜಿವನ ಕಾರ್ಯದಲ್ಲಿ ಸ್ತುತ್ಯಾರ್ಹ ಸೇವೆ ಸಲ್ಲಿಸಿರುವ ಶ್ರೀಯುತರು ಆರು ಸ್ವತಂತ್ರ ಕೃತಿಗಳನ್ನು, ಮೂರು ಭಾಷಾಂತರ ಕೃತಿಗಳನ್ನು, ಐದು ಸಂಪಾದಿತ ಗ್ರಂಥಗಳನ್ನು ರಚಿಸಿದ್ದಾರೆ. ಗಾಂಧಿ ವಿಚಾರಧಾರೆ, ಸರ್ವೋದಯ ತತ್ತ್ವಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶ್ರೀ ದಾನಿ ಅವರು ಕುಮಾರವ್ಯಾಸ ಭಾರತದ ವಿಶೇಷ ಅಧ್ಯಯನ ಮಾಡಿದ್ದಾರೆ. ವಿವಿಧ ಪತ್ರಿಕೆಗಳು, ವಿಶೇಷಾಂಕಗಳು ಹಾಗೂ ಸ್ಮರಣ ಸಂಚಿಕೆಗಳಿಗೆ ಶ್ರೀಯುತರು ಬರೆದಿರುವ ನೂರಾರು ಲೇಖನಗಳು ಮೌಲಿಕವಾದವು.
ಪತ್ರಿಕಾರಂಗದಲ್ಲಿ ನಿಷ್ಠೆ, ಪ್ರಾಮಾಣಿಕತೆ, ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿರುವ ಪತ್ರಕರ್ತರು ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು.