Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಉತ್ಸವ್ ರಾಕ್ ಗಾರ್ಡನ್

ಹುಬ್ಬಳ್ಳಿ ಮತ್ತು ಹಾವೇರಿ ನಡುವೆ ನಗರ ಜೀವನದಿಂದ ದೂರವಿರುವ ಸುಮಾರು ೫೦ ಎಕರೆ ಪ್ರದೇಶದಲ್ಲಿ ಸೃಷ್ಟಿಗೊಂಡಿರುವ ರಾಕ್ ಗಾರ್ಡನ್ ಪಾರಂಪರಿಕ ಶಿಲ್ಪಕಲೆಗಳ ವಸ್ತುಸಂಗ್ರಹಾಲಯ. ೨೦೦೯ ರಲ್ಲಿ ಡಾ. ಟಿ.ಟಿ. ಸೊಲಬಕ್ಕನವರ್ ಅವರ ಕಲ್ಪನೆಯ ಮೂಸೆಯಿಂದ ಅರಳದ ರಾಕ್ ಗಾರ್ಡನ್ನಲ್ಲಿ ಸಂಗ್ರಹವಾಗಿರುವ ಶಿಲ್ಪಕಲೆಗಳ ಉತ್ಸವದಿಂದ ಖ್ಯಾತಿಗೊಂಡಿದೆ. ಇಂಥ ಅದ್ಭುತ ಕನಸಿಗೆ ಜೀವವನ್ನೆರೆದು ನಿರ್ಮಾಣ ಮಾಡಿದವರು ಸೊಲಬಕ್ಕನವರ್ ಅವರ ಅಳಿಯನಾದ ದಾಸನೂರು ಗ್ರೂಪ್ನ ಶ್ರೀ ಪ್ರಕಾಶ್ ದಾಸನೂರು ಅವರು. ಇದೀಗ ಅತ್ಯದ್ಭುತ ಕಲಾಕೇಂದ್ರ ಎನಿಸಿಕೊಂಡಿದೆ. ನೂರಾರು ಕಲಾವಿದರು ರಾಕ್ ಗಾರ್ಡನ್ ಸೃಷ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ರಾಕ್ ಗಾರ್ಡನ್ ನ ಮತ್ತೊಬ್ಬ ಪ್ರೇರಕ ಶಕ್ತಿ ಎಂದರೆ ಶ್ರೀಮತಿ ವೇದಾರಾಣಿ ದಾಸನೂರು. ಅವರು ಈ ರಾಕ್ ಗಾರ್ಡನ್ ನಿರ್ಮಾಣದ ಹಿಂದೆ ಹೆಚ್ಚಿನ ಶ್ರಮಪಟ್ಟಿದ್ದಾರೆ. ಅದಕ್ಕಾಗಿ ಈ ಹನ್ನೊಂದು ವರ್ಷಗಳಲ್ಲಿ ಮೂರೂವರೆ ಲಕ್ಷ ಕಿ.ಮಿ ಪ್ರಯಾಣ ಮಾಡಿ ಅದ್ಭುತ ಕಲಾಲೋಕದ ಸೃಷ್ಟಿಗೆ ಕಾರಣಕರ್ತರಲ್ಲಿ ತಾವೂ ಒಬ್ಬರಾಗಿ ತನ್ಮೂಲಕ ಗ್ರಾಮೀಣ ಕಲೆಗಳ ಮೌಲ್ಯಗಳನ್ನು ಪರಿಚಯಿಸುವಲ್ಲಿ ಸಫಲರಾಗಿದ್ದಾರೆ. ಈ ಜಾಗತೀಕರಣ, ಹೆಸರುವಾಸಿಯಾಗಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಡಾ. ಜಿ. ಜ್ಞಾನಾನಂದ

ಕನ್ನಡ ನಾಡಿನ ಸಾಂಪ್ರದಾಯಿಕ ಶಿಲ್ಪಗಳ ಮೂಲ ಬೇರನ್ನು ಕಂಡುಕೊಂಡು ಸಾಂಪ್ರದಾಯಿಕ ಶಿಲ್ಪಕ್ಕೆ ಹೊಸ ಆಯಾಮವನ್ನು ಕಲ್ಪಸುವ ಕೆಲಸವನ್ನು ಸ್ಥಪತಿ ಡಾ. ಜಿ. ಜ್ಞಾನಾನಂದ ಅವರು ಮಾಡುತ್ತಿದ್ದಾರೆ. ಕನ್ನಡದಲ್ಲಿ ಪ್ರಸ್ತುತ ಶಿಲ್ಪಶಾಸ್ತ್ರವನ್ನು ಡಾ. ಜಿ. ಜ್ಞಾನಾನಂದ ಅವರು ರಚಿಸಿದ್ದಾರೆ.
ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿ ಡಿ.ಅಟ್ ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಬ್ರಹ್ಮರ್ಷಿ ಶಿಲ್ಪಗುರುಕುಲಂ ಕಾಲೇಜಿನ ಪ್ರಾಂಶುಪಾಲರಾಗಿ ಕರ್ನಾಟಕ ಸಾಂಪ್ರದಾಯಿಕ ಶಿಲ್ಪಗುರುಕುಲಗಳ ಕೇಂದ್ರದ ಪ್ರಧಾನ ಗುರುಗಳಾಗಿ (ಡೀನ್) ಸೇವೆ ಸಲ್ಲಿಸುತ್ತ ಪಾರಂಪರಿಕ ಶಿಲ್ಪವನ್ನು ಬೋಧಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶಿಲ್ಪಿ ಎನ್.ಎಸ್. ಜನಾರ್ಧನ ಮೂರ್ತಿ

ಸುಪ್ರಸಿದ್ಧ ಜಂಬೂಸವಾರಿ ಮೆರವಣಿಗೆಯ ಚಾಮುಂಡೇಶ್ವರಿ ವಿಗ್ರಹವನ್ನು ರೂಪಿಸಿದ ಖ್ಯಾತಿಯ ಅಪರೂಪದ ಶಿಲ್ಪಿ ಎನ್.ಎಸ್. ಜನಾರ್ಧನ ಮೂರ್ತಿ. ಲೋಹದ ಶಿಲ್ಪ ತಯಾರಿಕೆಯ ಮೇರು ಕಲಾವಿದ, ಕಲಾಶಿಕ್ಷಕ.

ಸಾಂಸ್ಕೃತಿಕ ನಗರಿ ಮೈಸೂರಿನ ಎನ್.ಎಸ್. ಜನಾರ್ಧನ ಮೂರ್ತಿ ಅವರಿಗೆ ಕಲೆಯೇ ಬದುಕು-ಜೀವಾಳ- ಕುಲಕಸುಬು, ತಂದೆ ಎನ್.ಪಿ. ಶ್ರೀನಿವಾಸಾಚಾರ್ ಜಿ. ಭಾಷ್ಯಂ ಸ್ಥಪತಿ ಅವರಿಂದ ಎಳವೆಯಲ್ಲೇ ಶಿಲ್ಪಕಲಾಭ್ಯಾಸ. ಓದಿದ್ದು ಎಸ್.ಎಸ್.ಎಲ್.ಸಿ. ಮಾತ್ರ ಅಖಿಲ ಭಾರತ ಕರಕುಶಲ ಮಂಡಳಿ ತರಬೇತಿ ಸಂಸ್ಥೆಯಲ್ಲಿ ಶಿಲ್ಪಕಲೆಯ ಡಿಪ್ಲೋಮಾ ಕಲಿಕೆ, ಕಂಚಿನ ಎರಕದ ಶಿಲ್ಪಕಲೆ ಕರಗತ. ಅನಂತರ ಕಲೆಯೇ ಆಸರೆ. ಮೈಸೂರಿನ ಚಾಮುಂಡೇಶ್ವರಿ ತಾಂತ್ರಿಕ ಸಂಸ್ಥೆಯಲ್ಲಿ ಸಹಬೋಧಕನಾಗಿ ನೇಮಕ, ೩೫ ವರ್ಷಗಳ ಸಾರ್ಥಕ ಸೇವೆ. ನೂರಾರು ವಿದ್ಯಾರ್ಥಿಗಳಿಗೆ ತರಬೇತಿ, ಅಸಾಮಾನ್ಯ ಕಲಾಕೃತಿಗಳ ರಚನೆ, ನಾಲ್ಕು ಬಾರಿ ದಸರಾ ಕಲಾಪ್ರದರ್ಶನದಲ್ಲಿ ಪ್ರಶಸ್ತಿ, ಜೀವಮಾನ ಪ್ರಶಸ್ತಿ, ಹೊಯ್ಸಳ, ಚೋಳ, ಪಲ್ಲವ ಶೈಲಿಯಲ್ಲಿ ರಚಿಸಿದ ಕಲಾಕೃತಿಗಳು ನೂರಾರು, ಹತ್ತಾರು ಪ್ರಮುಖ ದೇವಳದಲ್ಲಿ ಪೂಜಿತ. ಆರು ದಶಕದ ಕಲಾಸೇವೆಯ ಧನ್ಯತೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಮನೋಹರ ಕೆ ಪತ್ತಾರ

ಪರಂಪರಾನುಗತವಾಗಿ ಬಂದ ಶಿಲ್ಪಕಲೆ ಹಾಗೂ ಚಿತ್ರಕಲೆಯಲ್ಲಿ ಮೂರು ದಶಕಗಳಿಂದ ಹೆಸರಾಗಿರುವ ಮನೋಹರ ಪತ್ತಾರ ಅವರು ಕಾಲೇಜು ಚಿತ್ರಕಲಾ ಶಿಕ್ಷಕರಾಗಿಯೂ ಅನುಭವ ಪಡೆದವರು.

ಮಣ್ಣು, ಫೈಬರ್, ಸಿಮೆಂಟ್ ಸೇರಿದಂತೆ ಬಹುಮಾಧ್ಯಮ ಶಿಲ್ಪಕಲಾಕೃತಿ ರಚನೆಯಲ್ಲಿ ನೈಪುಣ್ಯತೆ ಸಾಧಿಸಿರುವ ಮನೋಹರ ಪತ್ತಾರ ಅವರು ರಂಗ ನಿರ್ದೇಶಕರಾಗಿಯೂ ಖ್ಯಾತಿ ಪಡೆದಿದ್ದಾರೆ.

ಬಹುಮುಖ ಪ್ರತಿಭೆಯ ಕಲಾವಿದರಾದ ಮನೋಹರ ಪತ್ತಾರ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ ಸಮೂಹ ವರ್ಣ ಕಾರ್ಯಾಗಾರದ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮನೋಹರ ಪತ್ತಾರ ಅವರು ಹಲವು ಪ್ರದರ್ಶನಗಳನ್ನು ಏರ್ಪಡಿಸಿದ್ದು, ಅನೇಕ ನಾಟಕಗಳಿಗೆ ರಂಗಸಜ್ಜಿಕೆಯಲ್ಲಿ ಸಹ ತೊಡಗಿದ್ದಾರೆ. ಇವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ನೀಡಿ ಸನ್ಮಾನಿಸಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಹೊನ್ನಪ್ಪಾಚಾರ್ಯ

ನಾಡಿನ ಹೆಸರಾಂತ ಲೋಹಶಿಲ್ಪಿಗಳಲ್ಲಿ ಒಬ್ಬರಾದ ಶಿಲ್ಪಿ ಹೊನ್ನಪ್ಪಾಚಾರ್ ಕಳೆದ ಐದು ದಶಕಗಳಿಂದ ವೈವಿಧ್ಯಮಯವಾದ ಲೋಹ ಶಿಲ್ಪಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಗತ್ಯಗಳಿಗೆ ಅನುಗುಣವಾಗಿ ಶಿಲ್ಪಗಳನ್ನು ನಿರ್ಮಿಸಿಕೊಟ್ಟಿರುವ ಹೊನ್ನಪ್ಪಾಚಾರ್ ಗುರುಕುಲ ಮಾದರಿಯ ಶಿಲ್ಪಕಲಾ ತರಬೇತಿ ಶಾಲೆಯನ್ನು ಆರಂಭಿಸುವ ಮೂಲಕ ನೂರಾರು ಮಂದಿ ಆಸಕ್ತರನ್ನು ಶಿಲ್ಪಕಲೆಯಲ್ಲಿ ತರಬೇತುಗೊಳಿಸಿದ್ದಾರೆ.

ವಿಶ್ವಕರ್ಮ ರಥೋತ್ಸವ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಶಿಲ್ಪಿ ಹೊನ್ನಪ್ಪಾಚಾರ್ ಕೇಂದ್ರ ಸರ್ಕಾರದ ಅಧಿಕೃತ ಶಿಲ್ಪಿಯಾಗಿ ಪರಿಗಣಿಸಲ್ಪಟ್ಟಿದ್ದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆಳ್ವಾಸ್ ನುಡಿಸಿರಿ ಗೌರವ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಕೆ.ಜ್ಞಾನೇಶ್ವ‌ರ್‌

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಶಿಲ್ಪಕಲಾವಿದರಲ್ಲಿ ಕೆ.ಜ್ಞಾನೇಶ್ವರ್ ಅವರದ್ದು ಅಚ್ಚಳಿಯದ ಹೆಸರು. ಸಾಂಪ್ರದಾಯಿಕ ಶಿಲ್ಪಕಲೆಯಲ್ಲಿ ತಮ್ಮದೇ ವೈಶಿಷ್ಟ್ಯದಿಂದ ಜನಜನಿತರು.
ಶಿಕಾರಿಪುರದ ಸುಪ್ರಸಿದ್ಧ ಚಿತ್ರಕಲಾವಿದರಾದ ತಿಪ್ಪಾಜಿ ವಂಶದ ಕುಡಿ ಕೆ.ಜ್ಞಾನೇಶ್ವರ್. ಶಿವಮೊಗ್ಗದಲ್ಲಿ ೧೯೪೬ರ ಆಗಸ್ಟ್ ೨೧ರಂದು ಜನಿಸಿದ ಜ್ಞಾನೇಶ್ವರ್ ಅವರಿಗೆ ಚಿತ್ರ, ಶಿಲ್ಪಕಲಾಸಕ್ತಿ ಹುಟ್ಟಿನಿಂದಲೇ ಬಂದ ಬಳುವಳಿ. ತಾತ ಶಿಕಾರಿಪುರದ ಪರಶುರಾಮಪ್ಪನವರೇ ಮೊದಲ ಗುರು. ಬಿಎಸ್‌ ಎಸ್ಸಿ ಪದವಿ ಪಡೆದರೂ ಕಲೆಯೇ ಕಾಯಕಕ್ಷೇತ್ರ ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತಕಲಾ ವಿದ್ಯಾಲಯದಲ್ಲಿ ಕಲಾಶಿಕ್ಷಣ. ೧೯೭೫ರಿಂದ ವೃತ್ತಿಪರ ಕಲಾವಿದರಾಗಿ ಕಲಾಜೀವನ, ಸಾಂಪ್ರದಾಯಿಕ, ಭಾವಶಿಲ್ಪ ಹಾಗೂ ದೇವಾಲಯ ವಾಸ್ತುಶಿಲ್ಪಗಳಲ್ಲಿ ಸಿದ್ಧಹಸ್ತರು. ಶಿವಮೊಗ್ಗ, ಕೊಯಮತ್ತೂರು, ಮಧುರೈ, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಮಾತ್ರವಲ್ಲದೆ, ವಿದೇಶಗಳಲ್ಲೂ ಇವರ ಶಿಲ್ಪಕಲಾಕೃತಿಗಳು ನೆಲೆನಿಂತಿರುವುದು ಸಾಧನೆಯ ಕೈಗನ್ನಡಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯತ್ವ, ವಾರ್ಷಿಕ ಗೌರವ ಪ್ರಶಸ್ತಿಗಳಿಂದ ಭೂಷಿಸಲ್ಪಟ್ಟಿರುವ ಜ್ಞಾನೇಶ್ವರ್ ಅವರು ನಾಲ್ಕೂವರೆ ದಶಕದಿಂದ ಕಲಾಸೇವೆಯಲ್ಲಿ ನಿರತ ಶಿಲ್ಪಕಲಾಕೋವಿದರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ವಿ.ಎ. ದೇಶಪಾಂಡೆ

ಶಿಲ್ಪಕಲೆಯಲ್ಲಿ ವೈವಿಧ್ಯಮಯ ಸಾಧನೆಗೈದ ವಿಶಿಷ್ಠ ಪ್ರತಿಭೆ ವ್ಯಾಸಮೂರ್ತಿ ಅನಂತರಾವ್‌ ದೇಶಪಾಂಡೆ, ನಾಡಿನ ಪ್ರತಿಷ್ಠಿತ ಸ್ಮಾರಕಗಳ ನಿರ್ಮಾಣದಲ್ಲಿ ಕಲಾಕೌಶಲ್ಯ ಮೆರೆದ ಕಲಾವಿದರು.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ದೇಶಪಾಂಡೆ ಅವರು ಹುಟ್ಟಿದ್ದು ೧೯೫೫ರ ಏಪ್ರಿಲ್ ೧೧ರಂದು. ಶಿಲ್ಪಕಲೆಯಲ್ಲಿ ಡಿಪ್ಲೋಮಾ, ಮೆಟಲ್ ಕ್ಯಾಸ್ಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದವರು ಬರೋಡಾದ ಎಂ.ಎಸ್. ವಿವಿಯಿಂದ ಮೆರಿಟ್ ಸ್ಕಾಲರ್‌ಪ್ ಪಡೆದ ದೇಶಪಾಂಡೆ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಬದುಕು ಆರಂಭಿಸಿದವರು. ಕಾವಾದಲ್ಲಿ ಡೀನ್ ಆಗಿರುವ ದೇಶಪಾಂಡೆ ವಿಶಿಷ್ಟ ಕಲಾಕೃತಿಗಳ ರಚನೆಯಲ್ಲಿ ಪಳಗಿದವರು.ಮೂರು ಬಾರಿ ಏಕವ್ಯಕ್ತಿ ಪ್ರದರ್ಶನ, ಐದು ಬಾರಿ ಸಮೂಹ ಪ್ರದರ್ಶನ ಮೈಸೂರಿನ ಬಾಬುಜಗನ್ ಜೀವನ್ ರಾಂರ ೯.೫ ಅಡಿಯ ಕಂಚಿನ ಪ್ರತಿಮೆ, ಸರ್ವಜ್ಞ ರಾಜೇಂದ್ರಸ್ವಾಮಿ ಮುಂತಾದ ಹಲವು ಸ್ಮಾರಕಗಳನ್ನು ರೂಪಿಸಿದವರು. ರಾಜ್ಯ ಮಾತ್ರವಲ್ಲದೆ, ಸ್ವೀಡನ್, ಜರ್ಮನಿಯಲ್ಲೂ ಇವರ ಕಲಾಕೃತಿಗಳು ಸಂಗ್ರಹವಾಗಿರುವುದು ಹೆಮ್ಮೆ ತರುವ ವಿಚಾರ. ೧೭ಕ್ಕೂ ಹೆಚ್ಚು ಕಲಾಶಿಬಿರಗಳಲ್ಲಿ ಕಲಾಕೃತಿಗಳ ರಚನೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಅಖಿಲ ಭಾರತ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ ಸೊಸೈಟಿ, ಮೈಸೂರು ದಸರಾ ಕಲಾಪ್ರದರ್ಶನ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಗುಜರಾತ್ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳಿಂದ ಭೂಷಿತರಾದ ಪ್ರತಿಭೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಪರಶುರಾಮ್‌ ಪವಾರ್

ಪರಂಪರೆಯ ಪ್ರತೀಕವಾದ ರಥಗಳ ನಿರ್ಮಾಣದಲ್ಲಿ ಹೊಸ ಆಯಾಮ ಸೃಷ್ಟಿಸಿದ ವಿಶಿಷ್ಟ ರಥಶಿಲ್ಪಿ ಪರಶುರಾಮ್‌ ಪವಾರ್, ದೇಶದ ಮೊಟ್ಟಮೊದಲ ಕಬ್ಬಿಣದ ರಥ ನಿರ್ಮಾಣಕಾರ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ೧೯೬೧ರಲ್ಲಿ ಜನಿಸಿದ ಪರಶುರಾಮ್ ಪವಾ‌ರ್ ಅವರದ್ದು ಕಮ್ಮಾರಿಕೆ ಕುಟುಂಬ. ಕಿಟಕಿ, ಬಾಗಿಲುಗಳಿಗೆ ಸೀಮಿತವಾಗಿದ್ದ ಕುಲಕಸುಬು. ಪಿಯುಸಿವರೆಗೆ ಓದಿ ಬೆಳಗಾವಿಯ ಸಣ್ಣ ಕೈಗಾರಿಕೆಯ ವಿಸ್ತರಣಾ ಘಟಕದಲ್ಲಿ ತರಬೇತಿ ಪಡೆದ ಪರುಶರಾಮರ ಕಸುಬಿನ ದಿಕ್ಕು ಬದಲಿಸಿದವರು ಶಿಕ್ಷಕ ಮೋಕೇಶಿ. ಗುರುಗಳ ಸಲಹೆಯಂತೆ ಮೊದಲಬಾರಿಗೆ ಕಬ್ಬಿಣದ ರಥ ನಿರ್ಮಾಣಕ್ಕೆ ಮುಂದಡಿ. ಈ ವಿನೂತನ ಆವಿಷ್ಕಾರ ತಂದುಕೊಟ್ಟ ಯಶಸ್ಸು ಅಪಾರ. ದೇಶದಲ್ಲೇ ಏಕೈಕ ಕಬ್ಬಣದ ರಥಶಿಲ್ಪಿ ಎಂಬ ಹೆಗ್ಗಳಿಕೆ, ನರೇಂದ್ರ ಇಂಜಿನಿಯಲಿಂಗ್‌ ವರ್ಕ್ಸ್ ಮೂಲಕ ಅನೇಕ ಕಾರ್ಮಿಕರ ಜೀವನಾಧಾರ. ೨೫೦ಕ್ಕೂ ಹೆಚ್ಚು ಕಬ್ಬಿಣದ ರಥಗಳ ನಿರ್ಮಾಣಕಾರ. ದಕ್ಷಿಣ ಭಾರತದಾದ್ಯಂತ ವಿವಿಧ ದೇಗುಲಗಳಲ್ಲಿ ಸಂಚರಿಸುತ್ತಿರುವ ರಥಗಳಲ್ಲಿ ಪವಾರ್‌ ನಿರ್ಮಿತ ರಥಗಳದ್ದೇ ಸಿಂಹಪಾಲು, ಮುದ್ದೇಬಿಹಾಳ ತಾಲ್ಲೂಕಿನ ಧವಳಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದಲ್ಲಿರುವ ೫೫ ಅಡಿ ಎತ್ತರದ ಮಹಾರಥ ಪವಾರ್ ಕಲಾವಂತಿಕೆಗೆ ಮೇರುಸಾಕ್ಷಿ. ಹತ್ತಾರು ಸಂಘಸಂಸ್ಥೆಗಳಿಂದ ಸನ್ಮಾನ. ವಿವಿಧ ಮಠಾಧೀಶರಿಂದ ಪ್ರಶಂಸೆಗೆ ಪಾತ್ರವಾಗಿರುವ ಪವಾರ್ ನಾಡಿನ ಹೆಮ್ಮೆಯ ರಥಶಿಲ್ಪಿ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಬಸಣ್ಣ ಕಾಳಪ್ಪ ಕಂಚಗಾರ

ಸಗರನಾಡೆಂದೇ ಜನಪ್ರಿಯವಾದ ಸುರಪುರ ತಾಲ್ಲೂಕಿನ ಕೊಡೇಕಲ್ನ ಶಿಲ್ಪಕಲಾವಿದ ಬಸಣ್ಣ ಕಾಳಪ್ಪ ಕಂಚಗಾರ ಅವರು ಬಹುಮುಖ ಪ್ರತಿಭೆ, ಬಹುಶ್ರುತ ಸಾಧನೆ.
ಶಿಲ್ಪಕಲೆ ಬಸಣ್ಣರಿಗೆ ಅಪ್ಪನಿಂದ ಬಂದ ಬಳುವಳಿ, ತಂದೆಯ ಆಕಾಲಿಕ ನಿಧನದಿಂದ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಇವರು ಆನಂತರ ನೆಚ್ಚಿಕೊಂಡಿದ್ದು ಶಿಲ್ಪಕಲೆಯನ್ನೇ ಬಡಗಿತನ, ಕಂಚುಗಾರಿಕೆಯಲ್ಲಿ ಪಳಗಿರುವ ಅವರು ಗ್ರಾಮದೇವತೆಗಳಾದ ಶ್ರೀದೇವಿ ದುರಗಮ್ಮ, ಕೆಂಚಮ್ಮ, ಆಚಜನೇಯ ಮುಂತಾದ ದೇವರುಗಳ ಕಾಷ್ಠಶಿಲ್ಪ, ಕಂಡು ಮತ್ತು ಕಲ್ಲಿನ ಮೂರ್ತಿಯನ್ನು, ಕಂಚಿನ ಲೋಹದಲ್ಲಿ ಕೊಡೇಕಲ್ ಬಸವಣ್ಣ, ಅಶ್ವಾರೂಢ ಮಲ್ಲಯ್ಯ, ಕಾಳಿಕಾದೇವಿ ಅನ್ನಪೂರ್ಣೇಶ್ವರಿ, ಮೌನೇಶ್ವರ ವಿಗ್ರಹಗಳನ್ನೂ ಸಿದ್ಧಪಡಿಸಿರುವುದು ಇವರ ಕಲಾಪ್ರೌಢಿಮೆಗೆ ಸಾಕ್ಷಿ. ಕಲಾಕೃತಿಗಳ ರಚನೆ ಮಾತ್ರವಲ್ಲದೆ, ಜ್ಯೋತಿಷ್ಯಶಾಸ್ತ್ರ, ವಾಸ್ತು, ನಾಟಿ ವೈದ್ಯ, ನಾಟಕ ರಚನಾ ಕಲೆಯನ್ನು ಕರಗತ ಮಾಡಿಕೊಂಡಿರುವುದು ವಿಶೇಷ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಶಸ್ತಿ ಹಾಗೂ ಅನೇಕ ಗೌರವಗಳಿಗೆ ಪಾತ್ರವಾಗಿರುವ ಕಲಾಚೇತನ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಯಮನಪ್ಪ ಪಾಂಡಪ್ಪ ಚಿತ್ರಗಾರ

ಶಿಲ್ಪಕಲಾವಿದ ಯಮನಪ್ಪ ಪಾಂಡಪ್ಪ ಚಿತ್ರಗಾರ ಗದಗ ಜಿಲ್ಲೆಯ ಪ್ರತಿಭೆ. ಗೊಂಬೆಗಳ ತಯಾರಿಕೆಯಲ್ಲಿ ಸಿದ್ಧಹಸ್ತರು.
ಗದಗ ಜಿಲ್ಲೆಯ ಗಜೇಂದ್ರಗಡ ಹುಟ್ಟೂರು. ೧೯೨೬ರಲ್ಲಿ ಜನಿಸಿದ ಯಮನಪ್ಪ ಬಾಲ್ಯದಲ್ಲೇ ಕಲೆಯ ಸೆಳೆತಕ್ಕೊಳಗಾದವರು. ಗೊಂಬೆಗಳ ತಯಾರಿಕೆಯಲ್ಲಿ ಪಳಗಿದವರು. ಸಿಮೆಂಟ್ ಶಿಲ್ಪಗಳ ರಚನೆ, ಗ್ರಾಮದೇವತೆಗಳ ಕಲಾಕೃತಿಗಳಿಗೆ ಬಣ್ಣ ಹಚ್ಚುವಿಕೆ, ಗಣೇಶ ಪ್ರತಿಮೆಗಳ ತಯಾರಿಕೆಯಲ್ಲಿ ತೊಡಗಿದವರು. ಹಲವಾರು ದೇವಾಲಯಗಳ ಗೋಪುರಗಳು ಇವರ ಕೈಚಳಕದಿಂದ ನೋಡುಗರ ಕಣ್ಮನ ಸೆಳೆದಿವೆ. ರಾಜ್ಯದ ವಿವಿಧೆಡೆ ಉದ್ಯಾನವನಗಳಲ್ಲಿ ಮಕ್ಕಳ ಆಕರ್ಷಣೆಯ ಕಲಾಕೃತಿಗಳ ರಚಿಸಿರುವ ಇವರ ಕುರಿತ ಅನೇಕ ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಶಸ್ತಿ-ಗೌರವ-ಸನ್ಮಾನಗಳು ಸಾರ್ಥಕತೆಯ ಭಾವ ತಂದಿವೆ. ೯೦ರ ಇಳಿವಯಸ್ಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವುದು ಇವರ ಕಲಾಬದ್ಧತೆಗೆ ಸಾಕ್ಷಿ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಕಾಶೀನಾಥ ಶಿಲ್ಪ

ಸಿಮೆಂಟ್ ಮಾಧ್ಯಮ ಬಳಸಿ ಶಿಲ್ಪಗಳನ್ನು ರಚಿಸುವ ಕಾಶೀನಾಥ ಶಿಲ್ಪಿ ಅವರು ನೂರಾರು ಅಡಿ ಎತ್ತರದ ಸಿಮೆಂಟ್ ಶಿಲ್ಪಗಳನ್ನು ರಚಿಸಿದ್ದಾರೆ. ಮುರ್ಡೇಶ್ವರದ ೧೨೦ ಅಡಿ ಎತ್ತರ ಧ್ಯಾನಸ್ಥ ಶಿವ ಮೂರ್ತಿ, ಹಿಮಾಚಲದ ಆಂಜನೇಯ, ಅಹಮದಾಬಾದ್ ಪ್ರಸನ್ನಾಂಜನೇಯ, ಶಿರಸಿ ಮಾರಿಕಾಂಬ ದೇವಾಲಯದ ಗೋಪುರ ಸೇರಿದಂತೆ ಹಲವು ಮಹತ್ವದ ನಿರ್ಮಾಣಗಳನ್ನು ಮಾಡಿದ್ದಾರೆ.
ಪರಂಪರೆಯಿಂದ ಬಂದ ಶಿಲ್ಪ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವ ಕಾಶೀನಾಥ ಅವರು ಸಿಮೆಂಟ್ ಶಿಲ್ಪಗಳ ಪ್ರಕಾರದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಜಕಣಾಚಾರಿ ಪ್ರಶಸ್ತಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಧೃವ ರಾಮಚಂದ್ರ ಪತ್ತಾರ

ಪಾರಂಪರಿಕ ಶಿಲ್ಪಕಲಾ ಕುಟುಂಬದಲ್ಲಿ ಜನಿಸಿದ ಧೃವ ಪತ್ತಾರ ಅವರು ಚಿಕ್ಕವಯಸ್ಸಿನಿಂದಲೇ ಮೂರ್ತಿ ಶಿಲ್ಪ ನಿರ್ಮಾಣದಲ್ಲಿ ತೊಡಗಿಕೊಂಡವರು. ದೇವಾನುದೇವತೆಗಳ ಉತ್ಸವಮೂರ್ತಿಗಳನ್ನು ನಿರ್ಮಿಸುವಲ್ಲಿ ನೈಪುಣ್ಯತೆ ಪಡೆದ ಧೃವಪತ್ತಾರ ಅವರು ರಾಜ್ಯದ ಹಲವಾರು ದೇವಾಲಯಗಳ ಉತ್ಸವಮೂರ್ತಿಗಳನ್ನು ತಯಾರು ಮಾಡಿ ಕೊಟ್ಟಿದ್ದಾರೆ.
ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ದೇವಾಲಯ ಹಾಗೂ ಮಠಗಳ ಉತ್ಸವಮೂರ್ತಿಗಳು ಹಾಗೂ ಬೆಳ್ಳಿಯ ಪಲ್ಲಕ್ಕಿಗಳನ್ನು ಸಿದ್ಧ ಮಾಡಿಕೊಟ್ಟಿರುವ ಧೃವಪತ್ತಾರ ಅವರು ಬೆಳ್ಳಿ ಕವಚಗಳನ್ನು ತಯಾರಿಸುವಲ್ಲಿ ನಿಪುಣರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಮ್ರ, ಬೆಳ್ಳಿ, ಹಾಗೂ ಹಿತ್ತಾಳೆ, ತಗಡುಗಳಿಂದ ಮೂರ್ತಿಗಳು ಹಾಗೂ ಬೆಳ್ಳಿ ಕಿರೀಟಗಳನ್ನು ಕಲಾತ್ಮಕವಾಗಿ ನಿರ್ಮಿಸಿರುವ ಧೃವ ಪತ್ತಾರ ನಾಡಿನ ಹೆಸರಾಂತ ಶಿಲ್ಪಕಲಾ ಕಲಾವಿದರಲ್ಲೊಬ್ಬರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಸ್.ಎಂ. ಶಂಕರಾಚಾರ್ಯ

ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ ಪರಿಣತಿ ಪಡೆದಿರುವ ಶಿಲಾ ಹಾಗೂ ಲೋಹ ಶಿಲ್ಪಿ ಶ್ರೀ ಎಸ್.ಎಂ. ಶಂಕರಾಚಾರ್ಯ ಅವರು.
ಕೋಲಾರ ಜಿಲ್ಲೆಯ ಶಿವಾರಪಟ್ಟಣದವರು. ೧೨.೦೭.೧೯೨೧ರಲ್ಲಿ ಜನನ. ತಂದೆ ಶ್ರೀ ಮಾಳಿಗಾಚಾರ್ಯರಿಂದ ಮಾರ್ಗದರ್ಶನ. ಅಮರಕೋಶ, ಸಂಸ್ಕೃತ, ಶಿಲ್ಪ, ಶಿಲ್ಪಾಗಮ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಅನುಭವ. ಹೆಸರಾಂತ ಶಿಲ್ಪಿಗಳಾದ ಶ್ರೀ ಚನ್ನಪ್ಪಾಚಾರ್ಯರಲ್ಲಿ ಶಿಷ್ಯವೃತ್ತಿ.
ಶಿಲ್ಪಾಗಮ ರೀತ್ಯಾ ಇವರು ನಿರಿಸಿಕೊಡುವ ವಿಗ್ರಹಗಳಿಗೆ ವಿಶೇಷ ಬೇಡಿಕೆ ಇದೆ. ಮಧುಗಿರಿಯ ಸರ್ಕಾರಿ ಕಾಲೇಜಿಗೆ ವೀಣಾ ಸರಸ್ವತಿ ವಿಗ್ರಹ, ಚಿಕ್ಕಬಳ್ಳಾಪುರದ ವಿದ್ಯುತ್ ಇಲಾಖೆಗೆ ಶ್ರೀ ಚಾಮುಂಡೇಶ್ವರಿ ವಿಗ್ರಹ, ಲಿಂಗರಾಜಪುರಂನ ಶಂಕರಮಠಕ್ಕೆ ರಾಜಗೋಪುರದ ಹಿತ್ತಾಳೆ ಕಳಸಗಳು, ಬಂಗಾರಪೇಟೆಯ ಬಸವೇಶ್ವರ ದೇವಾಲಯಕ್ಕೆ ಬಸವೇಶ್ವರ ವಜ್ರಾಂಗಿ ಮತ್ತು ಬಾಗಿಲುವಾಡಗಳು, ಅನೇಕ ಊರುಗಳ ಬೇಡಿಕೆಗಳಂತೆ ಶ್ರೀ ವಿಷ್ಣುಸಂಪುಟ, ದೇವಿಸಂಪುಟ ಹಾಗೂ ಶಿವ ಸಂಪುಟ ಶಿಲಾವಿಗ್ರಹಗಳನ್ನು ರಚಿಸಿಕೊಟ್ಟಿರುತ್ತಾರೆ.
ತಮ್ಮ ಕಲಾಸಾಧನೆಗೆ ಅನೇಕ ಬೆಳ್ಳಿಪದಕಗಳನ್ನು, ಗೌರವ ಸನ್ಮಾನಗಳನ್ನು ಪಡೆದಿದ್ದಾರೆ. ಶಿವಾರಪಟ್ಟಣದಲ್ಲಿರುವ ಶಿಲ್ಪಕಲಾ ಸಹಕಾರ ಸಂಘದ ಕಾರ್ಯದರ್ಶಿಯಾಗಿ ೧೨ ವರ್ಷ ಸೇವೆಸಲ್ಲಿಸಿದ್ದಾರೆ.
೨೦೦೩ನೇ ಸಾಲಿನ ಶಿಲ್ಪಕಲಾ ಅಕಾಡೆವಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಶಿಲ್ಪಿ ಶ್ರೀ ಎಸ್. ಎಂ. ಶಂಕರಾಚಾರ್ಯ ಅವರು

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಕೋಟೆಮೂಲೆ ಗುಣವಂತೇಶ್ವರ ಭಟ್

ಶಿಲ್ಪಿಯಾಗಿ, ಶಿಲ್ಪಕಲಾ ಶಿಕ್ಷಕರಾಗಿ ಕೋಟೆಮೂಲೆ ಗುಣವಂತೇಶ್ವರ ಭಟ್ ಅವರು ಮಾಡಿದ ಕೆಲಸ ಅನುಪಮ. ಉಡುಪಿ ಜಿಲ್ಲೆ ಕಾರ್ಕಳ ಸಮೀಪದ ಹಿರಿಯಂಗಡಿಯಲ್ಲಿ ೧೯೬೦ರಲ್ಲಿ ಜನನ. ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ. ತಂದೆ ಶಂಕರ ಭಟ್ಟರಿಂದ ಬಾಲ್ಯದಿಂದಲೇ ಮರದ ಕೆತ್ತನೆ ತರಬೇತಿ. ೧೯೮೫ರಲ್ಲಿ ಪುತ್ತೂರಿನಲ್ಲಿ ವಿವೇಕಾನಂದ ವುಡ್ ಆರ್ಟ್ಸ್ ಸಂಸ್ಥೆ ಆರಂಭಿಸಿ, ಹತ್ತಾರು ಮಂದಿಗೆ ಉದ್ಯೋಗದಾತರಾದವರು ಗುಣವಂತೇಶ್ವರ ಭಟ್. ೧೯೯೧ರಲ್ಲಿ ಬಿಡದಿಯ ಕೆನರಾ ಬ್ಯಾಂಕಿನ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಗುರುಗಳಾದ ಅಶೋಕ ಗುಡಿಗಾರ ಮತ್ತು ಜಿ.ಎಲ್.ಭಟ್ ಅವರ ಮಾರ್ಗದರ್ಶನದಲ್ಲಿ ಎರಡು ವರ್ಷಗಳ ಕಾಲ ಮರ ಮತ್ತು ಕಲ್ಲಿನ ಸಾಂಪ್ರದಾಯಿಕ ಕಲೆ ಅಭ್ಯಾಸ. ೧೯೯೭ರಲ್ಲಿ ಕಾರ್ಕಳದ ಸಿ.ಇ.ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಶಿಲ್ಪಕಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಅನುಭವ ಶ್ರೀಯುತರದು.
ನಲ್ಲೂರು ಕೂಷ್ಮಾಂಡಿನಿ ಬಸದಿ ಸಮೀಪ ಐದೂವರೆ ಅಡಿ ಎತ್ತರದ ಆನೆ ನಿರ್ಮಾಣ, ರಾಮಚಂದ್ರಾಪುರ ಮಠಕ್ಕೆ ಕಲ್ಲಿನ ಹನುಮಂತ, ನಾಗನಕಟ್ಟೆ, ಬೆಳ್ಳಿಯ ಮಂಟಪ, ಮರದ ಸಿಂಹಾಸನ ರಚಿಸಿಕೊಟ್ಟಿರುವುದು ಗುಣವಂತೇಶ್ವರ ಭಟ್ ಅವರ ಹಿರಿಮೆ.
೧೯೯೪ರಲ್ಲಿ ಮೈಸೂರು ದಸರಾ ಪ್ರಶಸ್ತಿ ಪಡೆದಿರುವ ಶ್ರೀಯುತರು ಅನೇಕ ಶಿಬಿರಗಳಲ್ಲಿ, ಕಾರ್ಯಾಗಾರಗಳಲ್ಲಿ ಕಿರಿಯರಿಗೆ ಶಿಲ್ಪಕಲಾ ಕುಶಲತೆಯ ಅನುಭವವನ್ನು ಧಾರೆ ಎರೆದಿರುವರು.
ಮರದ ಕೆತ್ತನೆ ಕಲೆಯಲ್ಲಿ ಹಾಗೂ ಶಿಲ್ಪಕಲಾಕೃತಿಗಳ ನಿರ್ಮಾಣದಲ್ಲಿ ಪ್ರಾವೀಣ್ಯತೆ ಪಡೆದು ಈ ಎರಡೂ ಕ್ಷೇತ್ರದಲ್ಲಿ ಹೆಸರು ಮಾಡಿದವರು ಕೋಟೆಮೂಲೆ ಗುಣವಂತೇಶ್ವರ ಭಟ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಕೆ. ನಾರಾಯಣ ರಾವ್‌

ಮಲೆನಾಡಿನ ಮಣ್ಣಿನಲ್ಲಿ ಹುಟ್ಟಿ ಆ ಮಣ್ಣಿಗೆ ಜೀವ ತುಂಬುವ ಕಲಾವಂತಿಕೆಯನ್ನು ಪಡೆದ ಪ್ರತಿಭಾವಂತ ಕಲಾವಿದರು
ಕೆ.ನಾರಾಯಣ ರಾವ್ ಅವರು.
ಕಲೆ ಎಂದರೆ ತಪಸ್ಸು ಎಂದು ನಂಬಿದವರು ಈ ಕಲಾವಿದ. ಚಿಕ್ಕಂದಿನಿಂದಲೂ ಇದ್ದ ಕಲಾಸಕ್ತಿಯಿಂದ ಮಣ್ಣಿನಲ್ಲಿ ಗೊಂಬೆಗಳನ್ನು ತಯಾರಿಸುವ ಕಲೆ ಸಿದ್ಧಿ. ಮುಂದೆ ಸಿಮೆಂಟ್ ಮಾಧ್ಯಮದಲ್ಲಿ ಬೃಹದಾಕಾರದ ಶಿಲ್ಪಗಳನ್ನು, ಗೋಪುರಗಳನ್ನು ನಿರ್ಮಿಸಿ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಗಡಿಯಾಚೆಗೂ ಕನ್ನಡದ ಕೀರ್ತಿ ಪತಾಕೆ ಹಾರಿಸಿದವರು ಶ್ರೀಯುತರು.
ಶಿವಮೊಗ್ಗದಲ್ಲಿ ೧೯೫೩ರಲ್ಲಿ ಜನನ. ಅವರಿಗೆ ಕಲೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ನಾರಾಯಣರಾವ್‌ ಅವರ ಮುತ್ತಜ್ಜ ತಿಪ್ಪಜ್ಜನವರು ರಚಿಸಿರುವ ‘ಶ್ರೀ ವಿಶ್ವರೂಪ ದರ್ಶನ’ ಕೃತಿ ಕರ್ನಾಟಕ ಸಾಂಪ್ರದಾಯಿಕ ಕಲೆಯ ಉತ್ಕೃಷ್ಟ ಕೃತಿ ಎಂಬ ಮನ್ನಣೆಗೆ ಪಾತ್ರ
ಸಾಂಪ್ರದಾಯಿಕ ಶಿಲ್ಪಗಳಿಗೂ ನೈಜತೆಯ ಸ್ಪರ್ಶ ನೀಡಿ ಯಶ ಕಂಡವರು ನಾರಾಯಣರಾವ್‌, ಹಿತಮಿತ ಆಭರಣ, ಪ್ರಮಾಣ ಬದ್ಧತೆ, ಮುಖದಲ್ಲಿನ ಭಾವ ಅವರ ಕೃತಿಗಳ ವೈಶಿಷ್ಟ್ಯ. ಅವರು ರಚಿಸಿದ ಬೃಹತ್ ಶಿಲ್ಪಗಳಲ್ಲಿ ಪ್ರಮುಖವಾದವು- ಕುಂದಾಪುರ ಹಂಗೂರಿನ ೮೫ ಅಡಿ ಎತ್ತರದ ವೀರಾಂಜನೇಯ ವಿಗ್ರಹ, ತುಮಕೂರಿನಲ್ಲಿ ಶ್ರೀ ರಾಮಲಕ್ಷ್ಮಣರನ್ನು ಹೊತ್ತ ೭೦ ಅಡಿ ಎತ್ತರದ ಪ್ರಸನ್ನಾಂಜನೇಯ ವಿಗ್ರಹಗಳು.
ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಗಾಗಿ ೧೯೯೯ರಲ್ಲಿ ಶಿವಮೊಗ್ಗ ಜಿಲ್ಲೆಗಾಗಿ ಅವರು ರಚಿಸಿಕೊಟ್ಟ ಈಸೂರು ದುರಂತ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಸಂದಿದೆ.
ಸಿಮೆಂಟ್ ಮಾಧ್ಯಮದಲ್ಲಿ ಗೋಪುರ ಶಿಲ್ಪಗಳನ್ನು ರಚಿಸುವುದರಲ್ಲಿ ವಿಶೇಷ ಆಸಕ್ತಿ ತಳೆದು, ಅದನ್ನೇ ವೃತ್ತಿಯಾಗಿಸಿ ಸ್ವೀಕರಿಸಿದ ಶ್ರೀ ಕೆ.ನಾರಾಯಣ ರಾವ್ ಕಲೆಯೆಂಬುದು ನಿಂತ ನೀರಾಗದೆ, ಸದಾ ಹರಿಯುವ ನದಿಯಂತಿರಬೇಕು
ಎಂದು ಬಯಸುವವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಸ್.ಪಿ.ಜಯಣ್ಣಾಚಾರ್

ಶಿಲ್ಪಕಲೆ, ಎರಕದ ವಿಗ್ರಹಗಳ ತಯಾರಿಕೆ, ಸ್ವರ್ಣ ಶಿಲ್ಪ ರಚನೆ ಹಾಗೂ ತಗಡಿನಲ್ಲಿ ರೇಖಿನ ಕೆಲಸ ಮಾಡುವುದರಲ್ಲಿ ನಿಷ್ಣಾತರೆನಿಸಿದ ಕಲಾವಿದರು ಎಸ್.ಪಿ.ಜಯಣ್ಣಾಚಾರ್ ಅವರು.
ಚಿಕ್ಕಮಗಳೂರು ಜಿಲ್ಲೆ ಬೀರೂರು ತಾಲ್ಲೂಕಿನ ಹುಲ್ಲೇನಹಳ್ಳಿಯಲ್ಲಿ ೧೯೪೭ರಲ್ಲಿ ಶ್ರೀಯುತರ ಜನನ. ತಂದೆ ಕೆ.ಎಸ್.ಪುಟ್ಟಶಾಮಾಚಾರ್ ಹೆಸರಾಂತ ಶಿಲ್ಪಿ ಮತ್ತು ನಕಾಶೆ ಕೆಲಸಗಾರರು. ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತ ಹಲವು ಕಲಾಪ್ರಕಾರಗಳಲ್ಲಿ ಪರಿಣತಿ. ಜತೆಗೆ ಮೈಸೂರಿನ ಹೆಸರಾಂತ ಸ್ವರ್ಣಶಿಲ್ಪಿ ಚನ್ನಪ್ಪಾಚಾರ್ ಅವರ ಬಳಿ ನಕಾಶೆ ಕೆಲಸ ಕುರಿತ ಕೌಶಲ್ಯಗಾರಿಕೆ ಸಿದ್ಧಿ.
ಶ್ರೀ ಜಯಣ್ಣಾಚಾರ್‌ರವರು ತಯಾರಿಸಿರುವ ಮೂಡಬಿದರೆ ಜೈನಮಠದಲ್ಲಿರುವ ಜೈನ ತೀರ್ಥಂಕರ ಪ್ರತಿಮೆಗಳು, ಬೆಂಗಳೂರಿನ ವಿವಿಧೆಡೆ ಇರುವ ವಿಶ್ವೇಶ್ವರಯ್ಯ ಮತ್ತು ಮಹಾತ್ಮಾ ಗಾಂಧಿಯವರ ಎದೆಮಟ್ಟದ ಪ್ರತಿಮೆಗಳು, ತಮಿಳುನಾಡಿನ ಗೋಪಿನಾಥಂನಲ್ಲಿರುವ ಮಾರಿಯಮ್ಮನ ವಿಗ್ರಹಗಳು ವಿಶಿಷ್ಟ ಕಲೆಗಾರಿಕೆಯಿಂದ ಗಮನ ಸೆಳೆಯುತ್ತವೆ.
ಹಿತ್ತಾಳೆ, ಬೆಳ್ಳಿಯ ದ್ವಾರ ಕವಚಗಳು, ಪ್ರಭಾವಳಿಗಳು, ಕಿರೀಟ, ಆಭರಣಗಳು, ಕಾರ್ಕಳದ ಮಹಾಮ್ಮಾಯಿ ದೇವಾಲಯಕ್ಕೆ ಬಾಗಿಲುವಾಡ ತಯಾರಿಕೆ ಹಾಗೂ ಭೂತಾರಾಧನೆಗೆ ಬೇಕಾದ ದೈವಗಳಿಗೆ ತಲೆಪಟ್ಟಿ, ತಲೆಮಣಿ, ಕತ್ತಿ, ಗುರಾಣಿಗಳು, ಕವಚಗಳ ತಯಾರಿಕೆಯಲ್ಲಿ ಶ್ರೀಯುತರು ಕೈಚಳಕ ಮೆರೆದಿರುವರು.
ಸ್ವರ್ಣಶಿಲ್ಪ ತಯಾರಿಕೆಯಲ್ಲಿ ಹಾಗೂ ವಿಗ್ರಹಗಳ ಎರಕದ ಕಲೆಗಾರಿಕೆಯಲ್ಲೂ ಪರಿಣತರಿರುವ ಶ್ರೀಯುತರಿಗೆ ೧೯೮೮ರಲ್ಲಿ ಮೈಸೂರು ದಸರಾ ಪ್ರಶಸ್ತಿ, ಕರ್ನಾಟಕ ಕರಕುಶಲ ನಿಗಮದಿಂದ ರಾಜ್ಯಮಟ್ಟದ ಪ್ರಶಂಸಾ ಪತ್ರ, ಬೇಲೂರಿನಲ್ಲಿ ನಡೆದ ಶಿಲೋತ್ಸವದ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಸಂದಿವೆ.
ಹಲವು ಕಲಾಪ್ರಕಾರಗಳಲ್ಲಿ ಕಲಾಕೃತಿಗಳ ನಿರ್ಮಾಣದ ಜತೆಗೆ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಲ್ಪಕಲೆಯ ಪರಿಚಯ, ಪ್ರಾತ್ಯಕ್ಷಿಕೆ ನೀಡುತ್ತ ಕಲೆಯ ಪ್ರಸಾರ ಮಾಡುತ್ತಿರುವವರು ಶ್ರೀ ಜಯಣ್ಣಾಚಾರ್.

Categories
ರಾಜ್ಯೋತ್ಸವ 2014 ಲಲಿತಕಲೆ ಶಿಲ್ಪಕಲೆ

ಖಾಸೀಂ ಕನ್ಧಾವಿ

ಖಾಸೀಮ್ ಕಾವಿ ಅವರು ನಾಡಿನ ಹೆಸರಾಂತ ಚಿತ್ರ ಕಲಾವಿದರು. ಚಿತ್ರಕಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಬಹುಮಾನಗಳಿಗೆ ಪಾತ್ರರಾಗಿದ್ದರು. ಆ ನಂತರ ದೇಶದ ಅನೇಕ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲುಗೊಂಡಿದ್ದ ಖಾಸೀಂ ಕಾವಿ ಅವರು ಏಕ ವ್ಯಕ್ತಿ ಪ್ರದರ್ಶನಗಳನ್ನು ಸಮೂಹ ಚಿತ್ರಕಲಾ ಪ್ರದರ್ಶನಗಳನ್ನು ನಾಡಿನುದ್ದಕ್ಕೂ ನಡೆಸಿದ್ದು ಅನೇಕ ರಾಷ್ಟ್ರಮಟ್ಟದ ಕಲಾವಿದರ ಶಿಬಿರಗಳಲ್ಲಿಯೂ ಪಾಲುಗೊಂಡಿದ್ದಾರೆ. ಇವರ ಚಿತ್ರಕಲಾಕೃತಿಗಳು ದೇಶ ವಿದೇಶಗಳ ಸಂಗ್ರಹಗಳಲ್ಲಿದೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಲಕ್ಷ್ಮೀ ರಾಮಪ್ಪ

ಲಕ್ಷ್ಮೀ ರಾಮಪ್ಪ ಅವರು ಕಳೆದ ೪೦ ವರ್ಷಗಳಿಂದ ಅವರ ವಂಶ ಪರಂಪರೆಯಾದ ಹಸೆ ಚಿತ್ತಾರವನ್ನು ಹಸೆಗೋಡೆ ಚಿತ್ತಾರ, ತೇರಿನ ಚಿತ್ತಾರ, ಭೂಮಿ ಹುಣ್ಣಿಮೆ ಬುಟ್ಟಿ, ಭತ್ತದಿಂದ ಮಾಡುವ ತೋರಣ, ಗೂಡು, ಅರಳಿಎಲೆ, ಜುಮುಕಿ ಹಾಗೂ ಕಳಸದಕಡಿ, ವಿವಿಧ ಕಲಾಕೃತಿಗಳ ನಿರ್ಮಾಣ ಮತ್ತು ಸೋಬಾನೆ ಪದ, ಭತ್ತ ಕಟ್ಟುವ ಹಾಡು, ಬೀಡುವ ಹಾಡು, ನಾಟ ಹಾಡು, ದೀಪಾವಳಿ ಹಾಗೂ ಗೌರಿ-ಗಣೇಶ ಹಬ್ಬದ ಹಾಡುಗಳನ್ನು ಹಾಡುತ್ತಾರೆ.

ಚಿತ್ತಾರ ಕಲೆಯ ಜೊತೆಗೆ ಗ್ರಾಮ್ಯ ಜಗತ್ತಿನಲ್ಲಿ ಜನಪ್ರಿಯವಾದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಲಕ್ಷ್ಮಿ ರಾಮಪ್ಪ ಅವರ ಕಲಾ ಪ್ರತಿಭೆಯನ್ನು ಗುರುತಿಸಿ ಹಲವಾರು ಗೌರವ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ವೈ. ಯಂಕಪ್ಪ

ಕರ್ನಾಟಕದಲ್ಲಿ ದೇವಾಲಯಗಳಿಗೆ ಗೋಪುರಗಳನ್ನು ನಿರ್ಮಿಸುವಲ್ಲಿ ನೈಪುಣ್ಯತೆ ಹೊಂದಿರುವ ವೈ, ಯಂಕಪ್ಪ ಅವರು ವಿದ್ಯಾಭ್ಯಾಸದಲ್ಲಿ ಹೆಚ್ಚು ದಿನ ಮುಂದುವರೆಯದಿದ್ದರೂ ಶಿಲ್ಪಕಲೆಯಲ್ಲಿ ವಿಶೇಷವಾಗಿ ಗೋಪುರ ಹಾಗೂ ಸಭಾಮಂಟಪಗಳನ್ನು ನಿರ್ಮಿಸುವಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡವರು.

ನಮ್ಮ ನಾಡಿನ ಶ್ರೇಷ್ಠ ವಾಸ್ತು ಶಿಲ್ಪ ಶೈಲಿಯನ್ನು ವಿಶ್ವನಾಥ ನಾಯ್ಡು ಅವರಿಂದ ಕಲಿತು ವಾಸ್ತು ಶಿಲ್ಪವನ್ನು ಬದುಕಿಗಾಗಿ ಆರಿಸಿಕೊಂಡು ನಡೆದದ್ದು ಗ್ರಾಮೀಣ ಪ್ರದೇಶಕ್ಕೆ ದಾವಣಗೆರೆಯವರಾದ ಯಂಕಪ್ಪ ಸುತ್ತಮುತ್ತಲ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯಾತ ಗುಡಿ ಗೋಪುರಗಳನ್ನು ಸಭಾ ಮಂಟಪಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಮೂರು ದಶಕಗಳಿಂದ ಅನೇಕ ಗೋಪುರ ಹಾಗೂ ಸಭಾಮಂಟಪಗಳನ್ನು ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಶಿಲ್ಪಿ ಯಂಕಪ್ಪ ಅವರು ಒಂದೊಂದು ದೇವಾಲಯವನ್ನೂ ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡುವಲ್ಲಿ ನಿಪುಣರು. ಶಿಲ್ಪಕಲಾ ಅಕಾಡೆಮಿಯ ಗೌರವವನ್ನೂ ಪಡೆದಿರುವ ಯಂಕಪ್ಪನವರು ಅನೇಕ ಪ್ರಶಸ್ತಿ – ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಚಂದ್ರಶೇಖರ್ ವೈ. ಶಿಲ್ಪ

ಚಂದ್ರಶೇಖರ .ವೈ. ಶಿಲ್ಪಿ ಅವರು ಲೋಹ, ಶಿಲೆ ಹಾಗೂ ಕಾಷ್ಠ ಶಿಲ್ಪಿಗಳಾಗಿ ಹೆಸರು ಮಾಡಿದವರು. ಕಠಿಣ ಅಭ್ಯಾಸದಿಂದ ಶಿಲ್ಪಕಲೆಯಲ್ಲಿ ನೈಪುಣ್ಯತೆ ಪಡೆದ ಚಂದ್ರಶೇಖರ .ವೈ. ಶಿಲ್ಪಿ ಅವರು ದ್ವಾರಬಾಗಿಲುಗಳು, ದೇವರಮನೆ ಬಾಗಿಲು ಕೆತ್ತುವಲ್ಲಿ ಪರಿಣತರು. ಚಾಳುಕ್ಯ ಹಾಗೂ ರಾಷ್ಟ್ರಕೂಟ ಶೈಲಿಯಲ್ಲಿ ಶಾಸ್ತ್ರಬದ್ಧವಾದ ವಿಗ್ರಹಗಳ ರಚನೆಯಲ್ಲಿ ನೈಮಣ್ಯತೆ ಪಡೆದಿರುವ ಇವರು ದೇವಾನುದೇವತೆಗಳ ವಿಗ್ರಹಗಳ ಕೆತ್ತನೆಯಲ್ಲಿ ಖ್ಯಾತಿ ಪಡೆದಿದ್ದಾರೆ.

ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು ಇವರ ಅನೇಕ ಕೃತಿಗಳು ದೇಶ-ವಿದೇಶಗಳ ಅನೇಕ ಸಂಗ್ರಹಗಳಲ್ಲಿದ್ದು ಶಿಲ್ಪಕಲೆಯಲ್ಲಿ ಅನೇಕ ಯುವಜನರನ್ನು ಚಂದ್ರಶೇಖರ .ವೈ. ಶಿಲ್ಪಿಗಳು ಗುರುಕುಲ ಪದ್ಧತಿಯಲ್ಲಿ ತಯಾರು ಮಾಡುತ್ತಿದ್ದಾರೆ. ಇವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಎಸ್. ಮರಿಸ್ವಾಮಿ

ಶಿಲ್ಪಕಲಾ ಶಿಕ್ಷಣವನ್ನು ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಪಡೆದುಕೊಂಡ ಎಸ್. ಮರಿಸ್ವಾಮಿ ಯವರು ವಿವಿಧ ಬಗೆಯ ವೈವಿಧ್ಯಮಯ ಶಿಲ್ಪಗಳನ್ನು ರೂಪಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.
ಈ ವರೆಗೂ ೧೨೦ ಕ್ಕೂ ಹೆಚ್ಚು ದೇವಾನುದೇವತೆಗಳ ಹಾಗೂ ಸಾಮಾಜಿಕ ಪರಿವರ್ತಕರ ಶಿಲ್ಪಗಳನ್ನು ಕೆತ್ತಿದ್ದು ಇದಕ್ಕಾಗಿ ಅನೇಕ ಬಹುಮಾನ ಹಾಗೂ ಗೌರವ ಪುರಸ್ಕಾರಗಳನ್ನು ಎಸ್. ಮರಿಸ್ವಾಮಿ ಪಡೆದಿದ್ದಾರೆ.
ವೈವಿಧ್ಯಮಯವಾದ ಶಿಲ್ಪಗಳನ್ನು ಸೃಷ್ಟಿಸುವಲ್ಲಿ ಕೌಶಲ್ಯ ಪಡೆದಿರುವ ಸಾತನೂರಿನ ಶಿಲ್ಪಿ ಎಸ್.ಮರಿಸ್ವಾಮಿಯವರಿಗೆ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಡಾ|| ಬಿ. ಆರ್. ಅಂಬೇಡ್ಕರ್ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಮಲ್ಲಪ್ಪ ಮಳೆಯಪ್ಪ ಬಡಿಗೇರ

ಪರಂಪರಾನುಗತವಾಗಿ ಬಂದ ಕಾಷ್ಟಶಿಲ್ಪವನ್ನು ಮುಂದುವರೆಸಿರುವ ಮಲ್ಲಪ್ಪ ಮಳೆಯಪ್ಪ ಬಡಿಗೇರ ಅವರು ರಾಜ್ಯದ ಹೆಸರಾಂತ ರಥಶಿಲ್ಪಿಗಳಲ್ಲೊಬ್ಬರು. ದಕ್ಷಿಣ ಭಾರತದಾದ್ಯಂತ ವಿಭಿನ್ನ ಬಗೆಯ ಮತ್ತು ವಿವಿಧ ಅಳತೆಗಳ ರಥಗಳನ್ನು ಸೂಕ್ಷ್ಮ ಕುಸುರಿ ಕೆಲಸದೊಂದಿಗೆ ನಿರ್ಮಿಸಿಕೊಟ್ಟಿರುವ ಮಲ್ಲಪ್ಪ ರಥ ನಿರ್ಮಾಣದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತ
ಬಂದವರು.
ಅನೇಕ ವಿಶಿಷ್ಟ ಬಗೆಯ ವಿಭಿನ್ನ ವಿನ್ಯಾಸಗಳ ರಥಗಳನ್ನು ತಯಾರಿಸಿರುವ ಮಲ್ಲಪ್ಪ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಸೇರಿದವರು. ಕಟ್ಟಿಗೆ ಕೆತ್ತನೆಯ ಕೆಲಸದಲ್ಲಿ ಹೆಚ್ಚು ಮಂದಿ ಆಸಕ್ತಿ ವಹಿಸಬೇಕೆಂಬ ಉದ್ದೇಶದಿಂದ ೨೫ಕ್ಕೂ ಹೆಚ್ಚು ಕೆತ್ತನೆಯ ಉಚಿತ ಶಿಬಿರಗಳನ್ನು ನಡೆಸಿಕೊಟ್ಟಿರುವ ಮಲ್ಲಪ್ಪನವರು ಶಿಷ್ಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.
ರಥಶಿಲ್ಪದಲ್ಲಿ ನೈಪುಣ್ಯತೆ ಪಡೆದಿರುವ ಮಲ್ಲಪ್ಪ ಬಡಿಗೇರ ವಿಗ್ರಹ ಹಾಗೂ ಕಲಾಮೂರ್ತಿಗಳನ್ನು ತಯಾರಿಸುವಲ್ಲಿಯೂ ಪ್ರತಿಭಾವಂತರು. ಅನೇಕ ಉತ್ಸವಮೂರ್ತಿಗಳನ್ನು ನಿರ್ಮಿಸಿಕೊಟ್ಟ ಹೆಗ್ಗಳಿಕೆ ಅವರದು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಹನುಮಂತ ಬಾಳಪ್ಪ ಹುಕ್ಕೇರಿ

ಶಿಲ್ಪಕಲೆಯಿಂದಲೇ ಬದುಕಿನಲ್ಲಿ ನೆಲೆ ಕಂಡುಕೊಂಡ ಕಲಾವಿದರು ಹನುಮಂತ ಬಾಳಪ್ಪ ಹುಕ್ಕೇರಿ, ದೇವರಮೂರ್ತಿಗಳ ಕೆತ್ತನೆಯಲ್ಲಿ ಪಳಗಿದ ಹಿರಿಯ ಕಲಾವಿದರು. ಶಿಲ್ಪಕಲೆಯಲ್ಲಿ ದೇವರ ಮೂರ್ತಿಗಳ ಕೆತ್ತನೆಗೆ ವಿಶೇಷ ಮಾನ್ಯತೆ, ಪ್ರತಿಯೊಂದು ದೇವರಮೂರ್ತಿಗಿರುವ ವಿಭಿನ್ನ ಅಳತೆ-ಸ್ವರೂಪ ಮತ್ತು ಕೆತ್ತನೆಯ ಕುಶಲಗಾರಿಕೆಯನ್ನು ಕರಗತ ಮಾಡಿಕೊಳ್ಳುವುದು ಸುಲಭಸಾಧ್ಯವಲ್ಲ. ಕಲಾಬದ್ಧತೆ, ನಿಷ್ಠೆ, ಪರಿಶ್ರಮ ಮತ್ತು ತನ್ಮಯತೆಗಷ್ಟೆ ಒಲಿಯುವ ಆ ಅಪರೂಪದ ಕಲೆಯಲ್ಲಿ ವಿಶಿಷ್ಟತೆ ಮೆರೆದವರು ಹನುಮಂತ ಬಾಳಪ್ಪ ಹುಕ್ಕೇರಿ, ಗಡಿನಾಡಿನ ಕಲಾಕುಸುಮ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಶಿಲ್ಪಕಲಾವಿದರಿಗೆ ಹೆಸರುವಾಸಿ. ಆ ಊರಿನ ಪ್ರತಿಮನೆಯೂ ಕಲಾಕುಟುಂಬ, ಅಂತಹುದೇ ಪರಿಸರದಲ್ಲಿ ಅಪ್ಪನಿಂದ ಶಿಲ್ಪಕಲೆ ಕಲಿತ ಹನುಮಂತ ಹುಕ್ಕೇರಿ ಇಡೀ ಬದುಕನ್ನೇ ದೇವರಮೂರ್ತಿಗಳ ತಯಾರಿಕೆಗೆ ಅರ್ಪಿಸಿಕೊಂಡಿದ್ದು ವಿಶೇಷ. ಲಕ್ಷ್ಮಿ, ಸರಸ್ವತಿ, ಆಂಜನೇಯ, ವೀರಭದ್ರೇಶ್ವರ ಮುಂತಾದ ದೇವತೆಗಳ ಮೂರ್ತಿ ಕೆತ್ತನೆಯಲ್ಲಿ ನಿಸ್ಸೀಮರು. ವಿವಿಧ ಬಗೆಯ ಕಲ್ಲುಗಳನ್ನು ಸಂಗ್ರಹಿಸಿ ಮೂರ್ತಿಯ ಆಕಾರ ನೀಡುವ ಹನುಮಂತ ಹುಕ್ಕೇರಿ ಅವರ ಕಲಾನೈಪುಣ್ಯತೆಗೆ ತಲೆದೂಗದವರೇ ಇಲ್ಲ. ಹಲವು ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿರುವ ಹನುಮಂತ ಹುಕ್ಕೇರಿ ಕಲಾನಿಷ್ಠ ಪ್ರತಿಭೆ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎನ್. ಶಂಕರನಾರಾಯಣಚಾರ

ಶಿಲ್ಪಕಲೆಯ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ, ಶಿಲ್ಪಕಲಾ ಕ್ಷೇತ್ರದಲ್ಲ
ಅದ್ಭುತ ಸಾಧನೆ ಮಾಡಿರುವ ಅಪೂರ್ವ ಕಲಾವಿದರು ಶ್ರೀ ಎಸ್. ಶಂಕರನಾರಾಯಣ
೧೯೩೦ರಲ್ಲಿ ಶಿಲ್ಪಗ್ರಾಮವೆನಿಸಿದ ಶಿವಾರಪಟ್ಟಣದಲ್ಲಿ ಜನನ, ಪ್ರಸಿದ್ಧ ಕಲಾವಿದರಾದ ಸುಜ್ಞಾನಮೂರ್ತಾಚಾರರ ಮಗನಾ? ತಂದೆಯಿಂದಲೇ ಕಲೆಯಲ್ಲಿ ಮಾರ್ಗದರ್ಶನ, ನಂತರ ಬೆಂಗಳೂಲಿನ ಲೀಜನಲ್ ಸೆಂಟರ್ನಲ್ಲಿ ಹೆಚ್ಚಿನ ತರಬೇತಿ. ಪ್ರಸಕ್ತ ಶಿವಾರಪಟ್ಟಣದಲ್ಲಿ ಸಕ್ರಿಯವಾಗಿ ಶಿಲ್ಪರಚನೆ ಮಾಡುತ್ತಿರುವ ಕಲಾವಿದರು.
ಶ್ರೀ ಎಸ್. ಶಂಕರನಾರಾಯಣಚಾರ್ ಅವರ ಕೃತಿಗಳು ಲಂಡನ್, ಅಮೆಲಕ, ಜರ್ಮನ್ ಸೇಲದಂತೆ ಭಾರತಾದ್ಯಂತ ಹಲವಾರು ಸ್ಥಳಗಳಲ್ಲಿ ಸಂಗ್ರಹಿತವಾಗಿವೆ. ದೇವಾನುದೇವತೆಗಳ ಶಿಲ್ಪಗಳಲ್ಲದೆ ಶಿಲಾಬಾಲಿಕೆ, ಭಾವಶಿಲ್ಪ ಮುಂತಾದ ಶಿಲ್ಪಗಳ ರಚನೆಯಲ್ಲೂ ಪರಿಣತರು.
ರಾಷ್ಟ್ರೀಯ ಪ್ರಶಸ್ತಿ, ಅಖಿಲ ಭಾರತ ಕಲೆ ಮತ್ತು ಕರಕುಶಲ ಕಲಾ ಸೊಸೈಟಿಯ ಪ್ರಶಸ್ತಿ, ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಇಂದಿರಾಗಾಂಧಿ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರು. ಕರ್ನಾಟಕ ಲಲತಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಕೆ.
ದೆಹಲಿ, ಹಲಯಾಣ, ಮುಂಬಯಿ, ಕೊಲ್ಕತ್ತಾ, ನಾಗಪುರ, ಗ್ವಾಲಿಯರ್, ಇಂದೋರ್, ಜಯಪುರ, ವಾರಂಗಲ್, ವಿಜಯವಾಡ, ಮಹಾಬಲಪುರ, ಅಗ್ರಾ, ಪಂಜಾಬ್ ಮುಂತಾದ ಸ್ಥಳಗಳಲ್ಲಿ ನಡೆದ ಕಲಾಮೇಳ ಹಾಗೂ ಕಲಾಶಿರದಲ್ಲಿ ಸಕ್ರಿಯ ಭಾಗವಹಿಸುವಿಕೆ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಂ. ಆರ್. ಬಾಳೆಕಾ

ವಾಸ್ತವ ನೆಲೆಯಲ್ಲಿ ಚಿತ್ರ ರಚಿಸುತ್ತ ಅದರಲ್ಲಿಯೇ ಪ್ರಯೋಗಶೀಲತೆ ತೋರುತ್ತ ಯಶಸ್ಸನ್ನು ಗಳಿಸಿದವರು ಶ್ರೀ ಎಂ. ಆರ್. ಬಾಳೆಕಾಯಿ ಅವರು.
ಬೆಳಗಾವಿಯ ಹೆಬ್ಬಾಳದಲ್ಲಿ ೧೯೪೧ರಲ್ಲಿ ಜನನ. ಎರಡನೇ ಬ್ಯಾಂಕ್ ಗಳಸಿ ಚಿತ್ರಕಲೆ ಮತ್ತು ವರ್ಣಚಿತ್ರದಲ್ಲಿ ಡಿಪ್ಲೊಮಾ; ಮೊದಲ ಬ್ಯಾಂಕ್ ಪಡೆದು ಚಿತ್ರಕಲಾ ಶಿಕ್ಷಕರಾಗಿ ತರಬೇತಿ ಹಾಗೂ ಆರ್ ಮಾಸ್ಟರ್ ಪದವಿ, ಗದಗಿನ ವಿಜಯ ಕಲಾ ಮಂದಿರ, ಧಾರವಾಡದ ಕಲಾಶಾಲೆ ಮತ್ತು ಭಾರತಿ ಕಲಾಕೇಂದ್ರದಲ್ಲಿ ವಿದ್ಯಾಭ್ಯಾಸ. ಬಾಣಾವರ, ಅಜ್ಜಂಪುರ, ಹಾಸನ, ತಲಕೆರೆ, ಹೆಬ್ಬಾಳ, ಬೆಂಗಳೂರು, ಧಾರವಾಡ, ಚಿಕ್ಕಮಗಳೂಲಿನಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನ. ಅರಸಿಕೆರೆ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ಬಿಜಾಪುರ, ನವದೆಹಲಿಗಳಲ್ಲಿ ಸಮೂಹ ಚಿತ್ರ ಪ್ರದರ್ಶನವಲ್ಲದೆ, ಹಲವಾರು ವಸ್ತುಪ್ರದರ್ಶನ, ಕಾರ್ಯಾಗಾರಗಳಲ್ಲಿ ಭಾಗವಹಿಸುವಿಕೆ.
೧೯೬೭ರಲ್ಲಿ ಹಾಸನದ ಕಲೆ ಮತ್ತು ಕರಕುಶಲ ವಸ್ತುಪ್ರದರ್ಶನದಲ್ಲಿ ಮೊದಲ ಸ್ಥಾನ. ೧೯೬೯ರಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಎರಡನೇ ಸ್ಥಾನ. ಮುಂತಾದ ಹಲವು ಬಹುಮಾನಗಳಲ್ಲದೆ, ಜಿಲ್ಲಾ ಮಟ್ಟದ ಉತ್ತಮ ಕಲಾಶಿಕ್ಷಕ ಪ್ರಶಸ್ತಿ, ಕರ್ನಾಟಕ ಲಂತಕಲಾ ಅಕಾಡೆಮಿ ವಾರ್ಷಿಕ ಕಲಾವಿದ ಪ್ರಶಸ್ತಿ, ಸೃಷ್ಟಿಶ್ರೀ ಪ್ರಶಸ್ತಿ ಪುರಸ್ಕೃತರು. ಶ್ರೀ ಎಂ. ಆರ್. ಬಾಳೆಕಾಯಿ ಅವರ ಚಿತ್ರಗಳು ಕರ್ನಾಟಕ ಲಲತಕಲಾ ಅಕಾಡೆಮಿ, ಮೈಸೂಲಿನ ಜನಪದ ಸಂಗ್ರಹಾಲಯ, ನವದೆಹಅಯ ರವೀಂದ್ರ ಕಲಾಗ್ಯಾಲಲ, ಧರ್ಮಸ್ಥಳ, ಸ್ಪಿಟ್ಟರ್ಲ್ಯಾಂಡ್, ಅಮೆಲಕ ಹೀಗೆ ಅನೇಕ ಸಂಗ್ರಹಾಲಯಗಳಲ್ಲವೆ.
ಹಲವಾರು ಕಲಾಸಂಸ್ಥೆಗಳಲ್ಲಿ, ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸುವಿಕೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿನ ಶಿಲ್ಪಕಲಾ ಮತ್ತು ಚಿತ್ರಕಲಾ ವಿಭಾಗದಲ್ಲಿ ಅತಿಥಿ ಉಪನ್ಯಾಸಕ, ೨೦೦೨ರ ಕರ್ನಾಟಕ ರಾಜ್ಯ ಕೆ. ವೆಂಕಟಪ್ಪ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಹೀಗೆ ಹಲವಾರು ರೀತಿಯಲ್ಲಿ

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಮಲ್ಲೋಜ ಮಾಯಾಚಾರ್ಯ

ಸಾಂಪ್ರದಾಯಕ ಶಿಲ್ಪಕಲೆ ಅಭ್ಯಾಸ ಮಾಡಿ ಅದರಲ್ಲಿ ನವೀನ ಪದ್ಧತಿಯನ್ನು ಅಳವಡಿಸಿ ಹೊಸತನ ರೂಢಿಸಿದವರು ಶಿಲ್ಪಿ ಶ್ರೀ ಮಲ್ಲೋಜ ಮಾಯಾಚಾರ್ ಅವರು.
ಚಿಮ್ಮಲಿಗಿಯಲ್ಲಿ ಹುಟ್ಟಿ ಬಾಗಲಕೋಟೆಯಲ್ಲಿ ನೆಲೆಸಿರುವ ಶ್ರೀ ಮಲ್ಲೋಜ ಮಾಯಾಚಾರ್ ಅವರು ತಮ್ಮ ತಂದೆ ಭೀಮರಾಯರಿಂದ ಕಾಷ್ಠಶಿಲೆಯಲ್ಲಿ ಪರಿಣತಿ ಪಡೆದರು. ಕಾಷ್ಠ ಶಿಲ್ಪದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀ ಮಾಯಾಚಾರರು ಈವರಗೆ ೨೦ಕ್ಕೂ ಹೆಚ್ಚು ದೇವಾಲಯಗಳ ತೇರುಗಳನ್ನು ನಿರ್ಮಿಸಿದ್ದಾರೆ.
ಶಿಲಾಶಿಲ್ಪದಲ್ಲೂ ತಾಂತ್ರಿಕ ವಿಷಯದಲ್ಲೂ ಅನುಭವ ಪಡೆದ ಶ್ರೀ ಮಲ್ಲೋಜರು ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಂಡು ಹಲವಾರು ಪ್ರತಿಮೆಗಳನ್ನು ತಯಾರಿಸಿದ್ದಾರೆ.
ಬಾಗಲಕೋಟೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಶಿಲ್ಪಕಲಾ ಕೇಂದ್ರ ಸ್ಥಾಪಿಸಿ ಶಿಲ್ಪಕಲೆಗೆ ಹೊಸ ಆಯಾಮ ನೀಡಿರುವ ಸಾಧಕರು ಶ್ರೀ ಮಲ್ಲೋಜ ಮಾಯಾಚಾರರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ವೀರಬ್ರಹ್ಮಾಚಾರ್

ಶಿಲ್ಪಕಲೆಯಲ್ಲಿ ಅಪೂರ್ವ ಪಾಂಡಿತ್ಯವನ್ನು ಸಂಪಾದಿಸಿ, ಶಾಸ್ತ್ರೀಯವಾದ ರೀತಿಯಲ್ಲಿ ಪ್ರತಿಮೆಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿರುವವರು ಲೋಹಶಿಲ್ಪಿ ಶ್ರೀ ವೀರಬ್ರಹ್ಮಾಚಾರ್ ಅವರು.

೧೯೫೩ರಲ್ಲಿ ಜನಿಸಿದ ಶ್ರೀ ವೀರಬ್ರಹ್ಮಾಚಾರ್ಯರು ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆಯುಳ್ಳವರು. ತಂದೆ ಶ್ರೀ ಮೂರ್ತಾಚಾರ್ಯ ಅವರ ಮಾರ್ಗದರ್ಶನದಲ್ಲಿ ಲೋಹಶಿಲ್ಪಕಲೆಯನ್ನು ಕರಗತ ಮಾಡಿಕೊಂಡರು.

ಬಹುವಿಧ ವಿನ್ಯಾಸಗಳ ಲೋಹದ ಪ್ರತಿಮೆಗಳನ್ನು, ಗುಡಿಗೋಪುರಗಳ ಕಳಶಗಳನ್ನು, ಪ್ರಭಾವಳಿ, ವಿಗ್ರಹ ಕವಚಗಳನ್ನು, ಮುಖಮಂಡಲಗಳನ್ನು, ಮೂರ್ತಿಗಳ ಕಿರೀಟಗಳನ್ನು, ಅತ್ಯಾಕರ್ಷಕವಾದ, ಸೂಕ್ಷ್ಮವಾದ ಕುಸುರಿ ಕೆಲಸಗಳಿಂದ ಒಡಗೂಡಿ ರಚಿಸುವುದರಲ್ಲಿ ಶ್ರೀ ವೀರಬ್ರಹ್ಮಾಚಾರ್ ಅವರು ಸಿದ್ಧಹಸ್ತರು.

ಪರಂಪರೆ, ಸಂಪ್ರದಾಯಗಳನ್ನು ಅನುಲಕ್ಷಿಸಿ ಅತ್ಯಂತ ಶಾಸ್ತ್ರಬದ್ಧವಾಗಿ ಲೋಹಕೃತಿಗಳನ್ನು ಕಂಡರಿಸುವುದರ ಜೊತೆಗೆ ಅವುಗಳಿಗೆ ಅತ್ಯಾಕರ್ಷಕ ಸುರೂಪವನ್ನು ತಂದುಕೊಡುವುದು ಶ್ರೀವೀರಬ್ರಹ್ಮಾಚಾರ್ ಅವರ ವೈಶಿಷ್ಟ್ಯ.

ತಾವು ಕಷ್ಟಪಟ್ಟು, ಸತತ ಸಾಧನೆಯಿಂದ ಸಂಪಾದಿಸಿಕೊಂಡಿರುವ ಶಿಲ್ಪಪ್ರತಿಭೆಯನ್ನು ಯುವ ಪೀಳಿಗೆಗೆ ಧಾರೆ ಎರೆಯುವ ಕಾಯಕವನ್ನು ನಿರ್ವಂಚನೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಲೋಹಶಿಲ್ಪಕಲೆಯಲ್ಲಿ ಉನ್ನತ ಮಟ್ಟದ ಪ್ರಾವೀಣ್ಯತೆಯನ್ನು ಪಡೆದು ಜನಪ್ರಿಯರಾಗಿ ಅನೇಕ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟವರು. ‘ಶಿಲ್ಪಬ್ರಹ್ಮ ಶ್ರೀ ವೀರಬ್ರಹ್ಮಾಚಾರ್ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಬಿ ಕೆ ಶ್ರೀನಿವಾಸ ವರ್ಮಾ

ಪಾದರಸದಂತೆ ಕೈಬೆರಳುಗಳನ್ನು ಕ್ಯಾನ್‌ವಾಸ್ ಮೇಲೆ ಚಲಿಸುತ್ತಾ ಕುಂಚದಿಂದಲೂ, ದಾರದಿಂದಲೂ, ಉಗುರಿನಿಂದಲೂ ಕ್ಷಣ ಮಾತ್ರದಲ್ಲಿ ಸುಂದರ ಕಲಾಕೃತಿಯನ್ನು ಮೂಡಿಸುವ ಅದ್ಭುತ ಚಿತ್ರ ಕಲಾವಿದ ಶ್ರೀ ಬಿ ಕೆ ಶ್ರೀನಿವಾಸ ವರ್ಮಾ ಅವರು.

ಹುಟ್ಟು ಕಲಾವಿದರಾದ ಶ್ರೀ ಬಿ ಕೆ ಎಸ್ ವರ್ಮಾ ಅವರ ಕಲಾಸಕ್ತಿಗೆ ನೀರೆರೆದು ಪೋಷಿಸಿದವರು ಕಲಾವಿದೆ ತಾಯಿ ಜಯಲಕ್ಷಮ್ಮ ಅವರು. ಶಿಲ್ಪಿ ಎ.ಸಿ.ಹೆಚ್. ಆಚಾರ್ಯ ಅವರಿಂದ ಚಿತ್ರಕಲೆಗೆ ಸ್ಫೂರ್ತಿ, ಗುರುಕುಲ ಪದ್ಧತಿಯಲ್ಲಿ ಪಾರಂಪರಿಕ ವರ್ಣ ಚಿತ್ರಣ, ಕ್ಷೇ ಮಾಡಲಿಂಗ್ ಮತ್ತು ಶಿಲಾ ಕೆತ್ತನೆಗಳ ಬಗ್ಗೆ ತರಬೇತಿ ಪಡೆದರು.

ಆದ್ದಿ ಹಿಂದಿ ಚಲನಚಿತ್ರದ ಸಹಾಯಕ ಕಲಾ ನಿರ್ದೇಶಕರಾಗಿ ಕನ್ನಡ ಚಲನಚಿತ್ರಗಳಲ್ಲಿಯೂ ಕಲಾ ನಿರ್ದೆಶಕರಾಗಿ ಕಲಾ ಪ್ರೇಮಿಗಳ ಕಣ್ಮನಗಳನ್ನು ಸೆರೆಹಿಡಿದಿದ್ದಾರೆ. ತಮ್ಮ ಕಲಾಕೃತಿಗಳನ್ನು ಕುರಿತು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳನ್ನು ಮತ್ತು ರಾಷ್ಟ್ರದ ಹಲವೆಡೆ ತಮ್ಮ ಚಿತ್ರಕಲಾ ಪ್ರದರ್ಶನವನ್ನು ನಡೆಸಿದ್ದಾರೆ. ಪರಿಸರ ಸಂರಕ್ಷಣೆಯ ಬಗೆಗೆ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ವ್ಯಕ್ತಿಗಳ, ದೇವತೆಗಳ ಚಿತ್ರಗಳಲ್ಲಿ ಜೀವಂತಿಕೆ ಉಕ್ಕಿ ಬರುತ್ತಿರುವ ಕಣ್ಣುಗಳು ಶ್ರೀ ವರ್ಮಾ ಅವರ ಕಲೆಯ ವೈಶಿಷ್ಟ್ಯ.

ಶ್ರೀ ವರ್ಮಾ ಅವರ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಲಲಿತಕಲಾ ಅಕಾಡೆಮಿ ೧೯೮೬ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೮೮ರ ಮೈಸೂರು ದಸರಾ ಪ್ರದರ್ಶನದ ಅತ್ಯುತ್ತಮ ಕಲಾವಿದ ಪ್ರಶಸ್ತಿ, ಅರಣ್ಯ ಇಲಾಖೆಯ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ ಹಾಗೂ ಆರ್ಯಭಟ ಪ್ರಶಸ್ತಿ ಮೊದಲಾದವು ಇವರಿಗೆ ಸಂದಿವೆ. ಕಾವ್ಯಚಿತ್ರ ಜುಗಲಬಂದಿ, ಕಾವ್ಯಚಿತ್ರ ಗೀತನೃತ್ಯ, ೨೪ ಗಂಟೆಗಳ ನಿರಂತರ ಕಾವ್ಯಚಿತ್ರ, ಚಿತ್ರ ಅವಧಾನ, ಕಾವ್ಯಚಿತ್ರ, ಯಕ್ಷನೃತ್ಯ ಇವುಗಳು ಅವರು ನೀಡಿದ ಪ್ರಮುಖ ಪ್ರದರ್ಶನಗಳು.

ಚಿತ್ರಕಲೆಯನ್ನೇ ಬದುಕನ್ನಾಗಿಸಿಕೊಂಡು, ಅನೇಕ ನವೀನ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡ ಪ್ರತಿಭಾಸಂಪನ್ನ ಕಲಾವಿದ ಶ್ರೀ ಬಿ ಕೆ ಶ್ರೀನಿವಾಸ ವರ್ಮಾ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಚನ್ನಮಲ್ಲಪ್ಪಾ ಪರಗೌಡ ನಾಗೌಡ

ಕಲಾ ಬದುಕನ್ನು ಉಸಿರಾಗಿಸಿಕೊಂಡ ತುಂಬು ಬಾಳಿನ ಚನ್ನಮಲ್ಲಪ್ಪಾ ಪರಗೌಡ ನಾಗೌಡ ಹಿರಿಯ ಚಿತ್ರಕಲಾವಿದರು. ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಶ್ರೀ ಚನ್ನಮಲ್ಲಪ್ಪಾ ಪರಗೌಡ ನಾಗೌಡಾ ಅವರು ೧೯೧೪ರಲ್ಲಿ ಜನಿಸಿದರು. ಕೊಲ್ಲಾಪುರದಲ್ಲಿ ಶ್ರೀ ಗಣಪತರಾವ್ ವಡಣಗೇಕರ್‌ ಅವರಿಂದ ಹಾಗೂ ಮುಂಬಯಿಯಲ್ಲಿ ಶ್ರೀ ದಂಡಾವತಿಮಠ ಅವರಿಂದ ಚಿತ್ರಕಲೆಯ ಶಿಕ್ಷಣ ಪಡೆದರು. ಅನಂತರ ಕಲಾಮಹರ್ಷಿ ಅಬಾಲಾಲ ರೆಹಮಾನ್, ಬಾಬಾಗಜಬರ್, ಬಾಬುರಾವ್‌ ಪೇಂಟರ್, ಮಾಧವರಾವ್ ಬಾಗಲ್, ಎಸ್.ಎಂ. ಪಂಡಿತ್, ಕೆ.ಕೆ. ಹೆಬ್ಬಾರರಂಥ ಮಹಾನ್ ಕಲಾವಿದರ ಸಾನ್ನಿಧ್ಯ ಮತ್ತು ಸಂಪರ್ಕದಿಂದ ಚಿತ್ರಕಲೆಯಲ್ಲಿ ಪರಿಣತಿ ಪಡೆದರು.

ಮುಖ್ಯವಾಗಿ ಪೆನ್ಸಿಲ್‌ವರ್ಕ್, ಜಲವರ್ಣ ಮತ್ತು ತೈಲವರ್ಣದಲ್ಲಿ ಪ್ರಭುತ್ವ ಪಡೆದ ಶ್ರೀಯುತರ ಕಲಾಕೃತಿಗಳು ಕಲಾಪ್ರೇಮಿಗಳ ಮೆಚ್ಚುಗೆ ಗಳಿಸಿವೆ. ವಿವಿಧ ಮಾಧ್ಯಮಗಳಿಂದ ಪ್ರಶಂಸೆ ಪಡೆದಿವೆ.

ಪ್ರಾರಂಭದಲ್ಲಿ ಸಿನಿಮಾಕ್ಕೂ ಕಲಾನಿರ್ದೆಶಕರಾಗಿ ಕಾರ್ಯನಿರ್ವಹಿಸಿದ ಶ್ರೀಯುತರ ಕಲಾಪ್ರೌಢಿಮೆ ಹಾಗೂ ಶ್ರದ್ಧೆಯ ಫಲವಾಗಿ ಇವರನ್ನು ಅರಸಿ ಬಂದಿರುವ ಬಿರುದು, ಪ್ರಶಸ್ತಿಗಳು ಹಲವು. ಅವುಗಳಲ್ಲಿ ಸಿರಿಗನ್ನಡಗೌರವ, ಸಂಕೇಶ್ವರ ಕಲಾಸಿರಿ, ಕುಂಚದರಸ ಬಿರುದುಗಳು ಮುಖ್ಯವಾದವು.

ಮನೆಯಲ್ಲಿ ಸ್ವಂತ ಆರ್ಟ್ ಗ್ಯಾಲರಿಯನ್ನು ಹೊಂದಿರುವ ಇವರು ಸಂಕೇಶ್ವರದಲ್ಲಿ ಅಂಬೇಡ್ಕರ್ ಸಂಸ್ಥೆಯ ಚಿತ್ರಕಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಬಂಡೆಪ್ಪ ಗಣೇಶಪುರ

ಶ್ರೀಗಂಧದ ಮರದಿಂದ ಕಲಾಕೃತಿಗಳನ್ನು ನಿರ್ಮಿಸುವ, ಗ್ರಾಮೀಣ ಕುಶಲ ಕರ್ಮಿಗಳಿಗೆ ತರಬೇತಿ ನೀಡುವ, ರಫ್ತು ಉದ್ಯಮದಿಂದ ಭಾರತದ ಆರ್ಥಿಕ ವೃದ್ಧಿಗೆ ನೆರವಾಗುವ ಸಾರ್ಥಕ ಕಾಯಕವನ್ನು ಕೈಗೆತ್ತಿಕೊಂಡವರು ಶ್ರೀ ಬಂಡೆಪ್ಪ ಗಣೇಶಪುರ ಅವರು.

ಬೀದರ ಜಿಲ್ಲೆಯ ಗ್ರಾಮವೊಂದರಲ್ಲಿ ೧೯೬೨ರಲ್ಲಿ ಜನಿಸಿ, ಕಲೆಯಲ್ಲಿ ಬಿ.ಎ. ಪದವಿಯನ್ನು ಪಡೆದ ಶ್ರೀ ಬಂಡೆಪ್ಪ ಅವರು ರಚಿಸಿದ ಕಲಾಕೃತಿಗಳು ನಮ್ಮ ದೇಶದ ಕಲಾಪ್ರೇಮಿಗಳನ್ನಲ್ಲದೆ ಹೊರದೇಶದವರನ್ನೂ ಆಕರ್ಷಿಸಿವೆ. ಹೀಗಾಗಿ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲಾರಂಭಿಸಿದರು.

ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ತರಬೇತಿ ನೀಡಿ ನೂರಾರು ಕುಶಲಕರ್ಮಿಗಳನ್ನು ತಯಾರು ಮಾಡಿದರು. ಗ್ರಾಮೀಣ ಪರಿಸರದಲ್ಲಿ ಸುಗಂಧದಿಂದ ಕಲಾಕೃತಿಗಳು ಆಕಾರ ಪಡೆದವು.

ಶ್ರೀ ಗಣೇಶಪುರ ಅವರ ಸಾಧನೆಗೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ರಾಜ್ಯ ಕೈಗಾರಿಕಾ ಮಾರುಕಟ್ಟೆ ಅಭಿವೃದ್ಧಿ ನಿಗಮದ ಪ್ರಶಸ್ತಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ‘ಜನ’ ಪ್ರಶಸ್ತಿ, ಜಿಲ್ಲಾ ಆಡಳಿತದಿಂದ ಉತ್ತಮ ಗ್ರಾಮೀಣ ಕರಕುಶಲ ಕರ್ಮಿ ಪ್ರಶಸ್ತಿ ಮುಂತಾದವು ಶ್ರೀಯುತರಿಗೆ ಸಂದ ಪ್ರಶಸ್ತಿ – ಪುರಸ್ಕಾರಗಳು.

ಶ್ರೀಗಂಧದ ಕೆತ್ತನೆಕಲೆಯಲ್ಲಿ ನಿಷ್ಣಾತರಾಗಿ, ಅನೇಕ ಕುಶಲಕರ್ಮಿಗಳಿಗೆ ಬಾಳದಾರಿಯನ್ನು ನಿರ್ಮಿಸಿ, ರಫ್ತು ಕಾರ್ಯದಿಂದ ಭಾರತ ದೇಶಕ್ಕೆ ಸೇವೆ ಸಲ್ಲಿಸಿ ಸುಗಂಧಮಯ ವ್ಯಕ್ತಿತ್ವದಿಂದ ಕಂಗೊಳಿಸುತ್ತಿರುವರು ಶ್ರೀ ಬಂಡೆಪ್ಪ ಗಣೇಶಪುರೆ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಹೆಚ್.ಎನ್. ಕೃಷ್ಣಮೂರ್ತಿ

ಶಿಲ್ಪಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವ ಅಪೂರ್ವ ಕಲಾವಿದ ಶ್ರೀ ಹೆಚ್. ಎನ್. ಕೃಷ್ಣಮೂರ್ತಿ ಅವರು.
ಕರ್ನಾಟಕದ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆ ಹಕ್ಕಲಿನಲ್ಲಿ ೧೯೪೭ರಲ್ಲಿ ಜನಿಸಿದ ಶ್ರೀ ಹೆಚ್.ಎನ್. ಕೃಷ್ಣಮೂರ್ತಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದು, ನಂತರ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಕಲೆಯ ಅಧ್ಯಯನ ನಡೆಸಿದರು.
ಕುವೆಂಪು ಅವರ ಅಪ್ಪಣೆಯ ಮೇರೆಗೆ ಶಾಂತಿನಿಕೇತನದಲ್ಲಿ ಶಿಲ್ಪಕಲೆಯನ್ನು ಅಭ್ಯಸಿಸಿ, ಮಾಡೆಲಿಂಗ್ ಹಾಗೂ ವರ್ಣಚಿತ್ರಗಳಲ್ಲಿ ಐದು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ಶ್ರೀಯುತರು ಕರ್ನಾಟಕಕ್ಕೆ ಹಿಂತಿರುಗಿ ದಾವಣಗೆರೆಯ ಸರ್ಕಾರಿ ಕಲಾ ಮತ್ತು ಕರಕುಶಲ ಶಾಲೆಯಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಮುಖ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀ ಹೆಚ್.ಎನ್. ಕೃಷ್ಣಮೂರ್ತಿ ಅವರು ೧೯೬೭ರಲ್ಲಿ ಕೊಲ್ಕತ್ತದಲ್ಲಿ ಆನಂದ ಮೇಳವನ್ನು, ಪುರುಷತ್ರಯರ ಕಲಾಪ್ರದರ್ಶನವನ್ನು ನಡೆಸಿ, ದಾವಣಗೆರೆಯಲ್ಲಿ ತಮ್ಮ ಚಿತ್ರಗಳ ಪ್ರದರ್ಶನವನ್ನು ನಡೆಸಿದ್ದಾರೆ.
ಅಡಿಕೆ ಕೃಷಿ, ಬೇಟೆ, ಮೀನುಗಾರಿಕೆ, ಕಾಫಿ ಕೃಷಿ ಹೀಗೆ ತಮ್ಮ ಮಲೆನಾಡಿನ ಪರಿಸರದ ವಸ್ತುಗಳನ್ನು ಆಯ್ತು ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಶ್ರೀಯುತರು ವಿವಿಧ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಿದರು. ಶಿಲ್ಪದಲ್ಲಿನ ಅವರ ಅಭಿವ್ಯಕ್ತಿ ಗಾಢವಾದುದು. ಸಿಮೆಂಟ್ ಶಿಲ್ಪಗಳು, ಸಣ್ಣತಲೆಯ ದಡೂತಿ ದೇಹದ ಮಾನವಾಕೃತಿಗಳು ವಿಶಿಷ್ಟವಾಗಿದ್ದು ಅದರ ಮೇಲ್ಮಗೆ ಹಲಸಿನ ಹಣ್ಣಿನ ಮುಳ್ಳಿನಂತೆ ರಚನೆ ಮಾಡಲಾಗಿರುವುದು ಶ್ರೀಯುತರ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ.
ಕರ್ನಾಟಕ ಶಿಲ್ಪ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತರ ಅನೇಕ ಕಲಾಕೃತಿಗಳು ಖಾಸಗಿ ಹಾಗೂ ಸಾರ್ವಜನಿಕ ಸಂಗ್ರಹಗಳಲ್ಲಿವೆ. ಪ್ರಸಕ್ತ ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಲ್ಪಕಲೆಯ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಪೂರ್ವ ಕಲಾವಿದ ಶ್ರೀ ಹೆಚ್. ಎನ್. ಕೃಷ್ಣಮೂರ್ತಿ ಅವರು.