Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಹೊರನಾಡ ಕನ್ನಡ ಸಂಘ

ಕರ್ನಾಟಕ ಸಂಘ ಮುಂಬೈ

ಮುಂಬೈ ಮಹಾನಗರದಲ್ಲಿ ಏಳು ದಶಕಗಳಿಂದ ಕನ್ನಡಿಗರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಶ್ರೇಯಸ್ಸಿಗಾಗಿ ಕಟಿ ಬದ್ಧವಾಗಿರುವ ಸಂಸ್ಥೆಯೇ ಕರ್ನಾಟಕ ಸಂಘ.
ಸಾಹಿತ್ಯ ಚಟುವಟಿಕೆ, ಸಾಂಸ್ಕೃತಿಕ ಉತ್ಸವ ಆಚರಿಸಲು ೧೯೩೩ರಲ್ಲಿ ಪ್ರಾರಂಭವಾದ ಮುಂಬೈ ಕರ್ನಾಟಕ ಸಂಘದ ಕಾರ್ಯತತ್ಪರತೆಯಿಂದ ಮುಂಬೈನ ಕೆಲವು ಮುನಿಸಿಪಲ್ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಲಿಸಲು ಸಾಧ್ಯವಾಗಿದೆ.
ಕನ್ನಡ ಶಿಕ್ಷಣಕ್ಕಾಗಿ ಹಲವು ಹಂತಗಳಲ್ಲಿ ರಚನಾತ್ಮಕ ಕಾರ್ಯನಿರ್ವಹಿಸಿರುವ ಕರ್ನಾಟಕ ಸಂಘ ಒತ್ತಾಸೆಯಿಂದ ಪ್ರೌಢಶಾಲೆಯ ಹಂತದಲ್ಲಿ ಕನ್ನಡ ಭಾಷೆ ಕಲಿಯಲು ಅವಕಾಶವಿದ್ದು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ‘ಕನ್ನಡ ಪೀಠ’ ಆರಂಭಿಸಲು ಕಾರಣವಾಯಿತು.
ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವನ್ನು ಕರ್ನಾಟಕ ಸಂಘ ರೂಪಿಸಿದ್ದು ಮುಂಬೈನಲ್ಲಿ ನಿರಂತರವಾಗಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ.
ಮುಂಬೈನಲ್ಲಿ ಎರಡು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ (೧೯೩೫ ಹಾಗೂ ೧೯೫೧) ಹೊಣೆ ಹೊತ್ತುಕೊಂಡಿದ್ದ ಕರ್ನಾಟಕ ಸಂಘ ಹಲವಾರು ಸಾಹಿತ್ಯ ಕೃತಿಗಳನ್ನು ಹೊರತಂದಿದೆ.
ಭಾರತರತ್ನ ಡಾ. ಎಂ. ವಿಶ್ವೇಶ್ವರಯ್ಯ ಸ್ಮಾರಕ ಮಂದಿರವನ್ನು ನಿರ್ಮಿಸಿರುವ ಕರ್ನಾಟಕ ಸಂಘ ಅತ್ಯುತ್ತಮ ಕನ್ನಡ ಕೃತಿಗಳನ್ನು, ಗ್ರಂಥಾಲಯವನ್ನು ಹೊಂದಿದೆ.