ದೇಶದ ಪ್ರಮುಖ ಶಾಸನ ತಜ್ಞರಲ್ಲಿ ಒಬ್ಬರಾದ ಹಾಗೂ ಕನ್ನಡ ನಾಡಿನ ಶಾಸನ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿರುವವರು ಡಾ. ಶ್ರೀನಿವಾಸ ಎಚ್. ಲತ್ತಿ ಅವರು.
ಭಾರತೀಯ ಪ್ರಾಚೀನ ಇತಿಹಾಸ ಹಾಗೂ ಸಂಸ್ಕೃತಿ ಕುಲತಂತೆ ಆಳವಾದ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಭಾರತೀಯ ಪುರಾತತ್ವ ಇಲಾಖೆಯ ಶಾಸನ ತಜ್ಞರಾಣ ಕೆಲಸ ಮಾಡಿದವರು.
ಕರ್ನಾಟಕ ವಿಶ್ವವಿದ್ಯಾನಿಲಯದ ಭಾರತೀಯ ಪ್ರಾಚೀನ ಚರಿತ್ರೆ ಹಾಗೂ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥರು ಆಗಿದ್ದ ಇವರು ಕರ್ನಾಟಕ ರಾಜ್ಯದ ಶಾಸನಗಳ ಬಗ್ಗೆ ಅಪಾರ ಮಾಹಿತಿ ಸಂಗ್ರಹಿಸಿದವರು. ಭಾರತೀಯ ಶಾಸನ ಶಾಸ್ತ್ರದ ಬಗ್ಗೆ ಹಲವಾರು ಸಂಶೋಧನೆಗಳನ್ನು ಕೈಗೊಂಡು ಸಂಶೋಧನಾ ಪತ್ರಿಕೆಗಳನ್ನು ಹಾಗೂ ಕೃತಿಗಳನ್ನು ರಚಿಸಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಅವರು ಭಾರತದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಮರೆಯಲಾಗದ ಮಹಾಸಾಮ್ರಾಜ್ಯ ವಿಜಯನಗರದ ಬಗ್ಗೆ ಅಪಾರವಾದ ಅಧ್ಯಯನ ಮಾಡಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಅವರು ರಚಿಸಿರುವ ವಿಜಯನಗರದ ಅರಸರ ಶಾಸನಗಳು ಎಂಬ ಬೃಹತ್ ಪ್ರಕಟಣೆಯನ್ನು ನವದೆಹಅಯ ಭಾರತೀಯ ಅನುಸಂಧಾನ ಪರಿಷತ್ತು ಕೈಗೆತ್ತುಕೊಂಡಿದೆ. ಕನ್ನಡ ಹಾಗೂ ಸಂಸ್ಕೃತ ಶಾಸನಗಳ ಸಂಪುಟವು ಈಗಾಗಲೇ ಪ್ರಕಟಣೆಗೊಂಡಿದ್ದು ಇದೇ ಯೋಜನೆಯಡಿ ತೆಲುಗು ಹಾಗೂ ತಮಿಳು ಸಂಪುಟಗಳು ಡಾ. ಶ್ರೀನಿವಾಸ ಎಚ್. ಲತ್ತಿ ಅವರ ಸಂಪಾದಕತ್ವದಲ್ಲಿ ಸಿದ್ಧಗೊಳ್ಳುತ್ತಿವೆ. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿದ್ದ ಇವರ ನೇತೃತ್ವದಲ್ಲಿ ೧೯ ವಿದ್ಯಾರ್ಥಿಗಳು ಡಾಕ್ಟರೇಟ್ಗಾಲ ಮಾರ್ಗದರ್ಶನ ಪಡೆದಿದ್ದಾರೆ.
ಭಾರತೀಯ ಶಾಸನಶಾಸ್ತ್ರ ಸೊಸೈಟಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಕೆಲಸ ಮಾಡಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಅವರು ಹತ್ತಾರು ಪುಸ್ತಕಗಳನ್ನು ಸಂಪಾದಿಸಿದ್ದಾರಲ್ಲದೆ ನಾಲ್ಕು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ದೇಶದ ಪ್ರಮುಖ ಶಾಸನಶಾಸ್ತ್ರ ಸಂಸ್ಥೆಗಳ ಗೌರವ ಸನ್ಮಾನಗಳಿಗೆ ಇವರು ಪಾತ್ರರಾಗಿದ್ದಾರೆ.
ನಾಡಿನ ಸಂಶೋಧನೆ ಪ್ರಪಂಚದಲ್ಲಿ ಹೆಸರಾದವರು ಹಾಗೂ ಶಾಸನ ಶಾಸ್ತ್ರದಲ್ಲಿ ಪಲಣತರು ಶ್ರೀ ಶ್ರೀನಿವಾಸ ಎಚ್. ಲತ್ತಿ ಅವರು.
