Categories
ಲೇಖನಗಳು ವ್ಯಕ್ತಿಚಿತ್ರ ಸಾಹಿತ್ಯ

ವ್ಯಕ್ತಿಚಿತ್ರ – ಅನ್ನದಾನಯ್ಯ ಪುರಾಣಿಕ

ಶ್ರೀ ಅನ್ನದಾನಯ್ಯ ಪುರಾಣಿಕಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ನಿಜಾಮ್ ಸೇನೆಯ ಗುಂಡಿಗೆ ಬೆದರದೆ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪೋಲಿಸರ ಮತ್ತು ಕನ್ನಡ ಮತ್ತು ಏಕೀಕರಣ ವಿರೋಧಿಗಳ ಹಿಂಸೆಗೆ ಜಗ್ಗದೆ, ನಾಡು-ನುಡಿಗಾಗಿ ಕಳೆದ 67 ವರ್ಷಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ, ನಿರಂತರ, ಅಪ್ರತಿಮ ಸೇವೆ ಸಲ್ಲಿಸಿದವರು. ಗಾಂಧಿವಾದಿ, ಕನ್ನಡ ಕಣ್ಮಣಿ 87 ವರ್ಷದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ಪ್ರೀತಿ ನನ್ನ ಮತ, ಸೇವೆ ನನ್ನ ವ್ರತ ಎಂದು ಬಾಳಿದ ಈ ಸಜ್ಜನರ ಜೀವನ-ಸಾಧನೆ-ಕನ್ನಡ ಪ್ರೇಮ ಎಲ್ಲಾ ಕನ್ನಡಿಗರಿಗೂ ಪ್ರೇರಣೆಯಾಗಿದೆ.

ಕನ್ನಡ ನುಡಿ, ಗಡಿ ಮತ್ತು ಗುಡಿಗಳ ರಕ್ಷಣೆಗೆ ಮತ್ತು ನಡಕಟ್ಟಿದ ಕಟ್ಟಾಳು, ಚತುರ ಮತ್ತು ಸಮರ್ಥ ಸಂಘಟಕ, ಆರ್ಥಿಕ ಸಂಕಷ್ಟದಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಜೀವ ನೀಡಿದ ಭೂತಪೂರ್ವ ಗೌರವ ಕಾರ್ಯದರ್ಶಿ, ಪರಿಷತ್ತಿನ ಮುಖವಾಣಿ “ಕನ್ನಡ ನುಡಿ”ಯ ಮಾಜಿ ಸಂಪಾದಕ, ಪ್ರಪ್ರಥಮ ಕನ್ನಡ-ನಿಘಂಟು ಪ್ರಕಟಣೆ ಮತ್ತು ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳ ರೂವಾರಿ, ಕರ್ನಾಟಕ ಭಾಷಾ ಆಯೋಗ ಮತ್ತು ಕರ್ನಾಟಕ ಗೆಜೆಟಿಯರ್ ಸಮಿತಿಯ ಮತ್ತು ಅಖಿಲ ಭಾರತ ವಕೀಲರ ಪರಿಷತ್ತಿನ ಮಾಜಿ ಸದಸ್ಯ, ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕ ಮತ್ತು ಪ್ರಥಮ ಪ್ರಧಾನ ಕಾರ್ಯದರ್ಶಿ, ಸಾವಿರಾರು ಜನ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ನ್ಯಾಯ ಒದಗಿಸಿಕೊಟ್ಟ ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ, ಪ್ರಸಿದ್ಧ ವಾಗ್ಮಿ, ಪ್ರಧ್ಯಾಪಕ, ಕವಿ, ಲೇಖಕ, ಚಿಂತಕ, ವಿಮರ್ಶಕ, 3000ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಖ್ಯಾತ ಅಧುನಿಕ ವಚನಕಾರ, ಕಟ್ಟಾ ಗಾಂಧೀವಾದಿ – ಶ್ರೀ ಅನ್ನದಾನಯ್ಯ ಪುರಾಣಿಕರನ್ನು ವರ್ಣಿಸುವುದು ಹೇಗೆ? ಯಾವ ವರ್ಣನೆಯೂ ಕಡಮೆಯೇ !

ಅಂದಿನ ನಿಜಾಂ ಸಂಸ್ಥಾನದ ರಾಯಚೂರು ಜಿಲ್ಲೆಯ, ಇಂದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ( 8 ಮಾರ್ಚ 1928)ರಂದು ಜನಿಸಿದ ಪುರಾಣಿಕರ ತಂದೆ ಖ್ಯಾತ ಪ್ರವಚನಕಾರ, ವೈದ್ಯರು ಮತ್ತು ಕವಿಗಳಾಗಿದ್ದ ಪಂಡಿತ ಕಲ್ಲಿನಾಥಶಾಸ್ತ್ರೀಗಳು ಮತ್ತು ತಾಯಿ ದಾನದ ಪ್ರತಿರೂಪವೇ ಆಗಿದ್ದ ದಾನಮ್ಮ. ಆ ಭಾಗದ ಓರ್ವ ಮಹಾತಪಸ್ವಿಗಳ ಕೃಪಾಶಿರ್ವಾದದ ಬಲ ಪಡೆದುಕೊಂಡೇ ನನ್ನ ಮಗ ಹುಟ್ಟಿದ, ಅದಕ್ಕಂದೇ ಆ ತಪಸ್ವಿಗಳ ಹೆಸರನ್ನೇ ನನ್ನ ಮಗನಿಗೆ ( ಅನ್ನದಾನಯ್ಯ) ಎಂದಿಟ್ಟಿರುವೆ – ಎಂದು ಅವರ ತಾಯಿ ಆಗಾಗ ಹೇಳುತ್ತಿದ್ದರು. ಆ ಮಹಾತಪಸ್ವಿಗಳು ಮೆಚ್ಚುವಂತೆ ಜೀವನ ನೆಡೆಸಿದ್ದಾರೆ ಪುರಾಣಿಕರು. ಕಡುಬಡತನದಲ್ಲಿ ಬೆಳೆದ ಅನ್ನದಾನಯ್ಯ ಅಂದಿನಿಂದ ತಮ್ಮ ಕೊನೆಯುಸಿರಿನವರೆಗೂ ಸಮಾಜದಲ್ಲಿರುವ ಬಡವರ ಮತ್ತು ದಮನಿತರ ನೋವು ಮತ್ತು ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಸಹಾಯ ಮಾಡುವ ತನು-ಮನ-ಧನದ ದಾಸೋಹ ನೆಡೆಸಿದ್ದಾರೆ.

ಕುಗ್ರಾಮವೊಂದರಲ್ಲಿ ಬೆಳೆದ, ಶಿಕ್ಷಣ ಪಡೆದ, ಯಾವುದೇ ಶಿಫಾರಸು ಪತ್ರಗಳೂ ಇಲ್ಲದ ಈ ಹಳ್ಳಿಯ ಹೈದ, ಕನ್ನಡ ಕಣ್ಮಣಿಯಾಗಿ, ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದು ಯಾರಾದರೂ ಬೆರಳು ಕಚ್ಚುವಂತಿದೆ. ಅವರ ಈ ಸಾಧನೆಗೆ ಪ್ರೇರಣೆ, ನಿರಂತರ ಪ್ರಚೋದನೆ, ಗುರಿಯತ್ತ ಗಮನಕ್ಕೆ ಬೆಂಗಾವಲಾದ ಕುಗ್ಗದ ಸ್ಥೈರ್ಯ ಮತ್ತು ಅಪಾರ ಸಹನೆಗಳ ರಹಸ್ಯವನ್ನು ಅರಸುವ ಪ್ರಯಾಸವು ಹೃದಯಂಗಮವಾಗಿರುವಂತೆ ಅದು ಉಜ್ವಲವೂ ಆಗಿರುತ್ತದೆ.

ಅನ್ನದಾನಯ್ಯ ಪುರಾಣಿಕರ ಬಾಳಬಟ್ಟೆಗೆ ದಾರಿದೀಪಗಳಾಗಿ ಬೆಳಗುತ್ತಿರುವ ವ್ಯಕ್ತಿಗಳು ಇಬ್ಬರು : ಒಬ್ಬರು ಹನ್ನೆರಡನೆಯ ಶತಮಾನದಲ್ಲಿ ಕಿರಿಯ ವಯಸ್ಸಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಶರಣ ಚೆನ್ನಬಸವಣ್ಣನವರು, ಮತ್ತೊಬ್ಬರು ಹರನ ಮುಡಿಯಿಂದ ಇಳಿದು ಬಾ ತಾಯಿ ಎಂದು ಗಂಗಾವತರಣ ಮಾಡಿಸಿದ ಭಗೀರಥರು. ಬಾಲ್ಯದಲ್ಲಿಯೇ ಪುರಾಣಿಕರ ಭಾವವನ್ನು ಒಳಹೊಕ್ಕ ಮತ್ತು ಮನದಲ್ಲಿ ನೆಲೆನಿಂತ ಈ ಇಬ್ಬರ ಅಮೋಘ ವ್ಯಕ್ತಿತ್ವ ಮತ್ತು ಗೌರಿಶಂಕರ ಸಾಧನೆಗಳು ಪುರಾಣಿಕರ ವ್ಯಕ್ತಿತ್ವ ವಿಕಸನದಲ್ಲಿ “ಸತ್ವದ” ಪಾರಮ್ಯತೆ ಮತ್ತು ಅಂತರಿಕ ಸತ್ವದ ಅದಮ್ಯತೆಗಳನ್ನು ದೃಢಗೊಳಿಸಿದವು.

ತಾನು ಜೀವಿಸಿದ ಕೇವಲ 25 ವರ್ಷಗಳ ಅವಧಿಯಲ್ಲಿ ಚೆನ್ನಬಸವಣ್ಣ ಮಾಡಿದ್ದು, ಸಾಧಿಸಿದ್ದು ಮತ್ತು ಸಿದ್ಧಿಸಿದ್ದು ‘ದಂತಕತೆ’ಯಂತಾಗಿದೆ. ಶರಣರ ಆಂದೋಲನದ ನಾಯಕ ಬಸವಣ್ಣನ ಬಲಗೈಯಾಗಿ, ಬಸವನ ನಡೆ-ನುಡಿಗಳ, ಗುರಿ-ಗಮ್ಯಗಳ ಸೂಕ್ಷ್ಮ ಪರೀಕ್ಷಕನಾಗಿ, ಅನುಭವ ಮಂಟಪದ ಸಾರಥಿಯಾಗಿ, ಧರ್ಮಸೂಕ್ಷ್ಮಗಳ ಸಂಹಿತೆಯ ರೂಪಕನಾಗಿ ಚೆನ್ನಬಸವಣ್ಣ ತಲುಪಿದ ಎತ್ತರ ಹಾಗೂ ಚಲಿಸಿದ ಬಿತ್ತರಗಳು ಪುರಾಣಿಕರಲ್ಲಿ ಅಪಾರವಾಗಿ ಪ್ರಭಾವ ಬೀರಿದವು ಮತ್ತು ಸದಾ ಜಾಗೃತವಾಗಿದ್ದು ದಾರಿ ತೋರಿಸುತ್ತಲಿವೆ. ಚೆನ್ನಬಸವಣ್ಣನಿಂದ ತಾವು ಪಡೆದ ಜೀವನ-ಸಂಜೀವನಿಯ ಪ್ರೇರಣೆಗೆ ಕಾಣಿಕೆ ಎನ್ನುವಂತೆ ಪ್ರಪ್ರಥಮವಾಗಿ ಆತನ ಕೃತಿಗಳನ್ನು ಪರಿಶ್ರಮದಿಂದ ಕಲೆಹಾಕಿ ಶಾಸ್ತ್ರೀಯವಾಗಿ ಶೋಧಿಸಿ ಸಂಪಾದಿಸಿ “ಚೆನ್ನಬಸವ ಸಾಹಿತ್ಯ” ಎಂಬ ಹೆಸರಿನಲ್ಲಿ 1956ನಲ್ಲಿ ಪ್ರಕಟಿಸಿದರು. ಆಗಿನ್ನೂ ಅವರು ಲಾ ಕಾಲೇಜಿನ ವಿದ್ಯಾರ್ಥಿ. ಆ ಕೃತಿಗೆ ಪಂಡಿತ ಪ್ರಕಾಂಢ ಡಾ.ಎಸ್.ಸಿ.ನಂದೀಮಠರು ಅಮೂಲ್ಯವಾದ ಮುನ್ನಡಿ ಬರೆದಿದ್ದು ಪುರಾಣಿಕರ ಸಾಧನೆಯನ್ನು ಮತ್ತು ಕೃತಿಯ ಸತ್ವವನ್ನು ಸೂಚಿಸುತ್ತದೆ. ಆ ಗ್ರಂಥವು ಶರಣ ಸಾಹಿತ್ಯ ಅಧ್ಯಯನಕ್ಕೆ ಹೊಸ ಬಾಗಿಲನ್ನೇ ತೆರೆದದ್ದು ಇತಿಹಾಸ.

ಭಗೀರಥ ಹರನ ಜಟಾಜೂಟದಿಂದ ಗಂಗೆಯನ್ನು ಪ್ರಯಾಸಪಟ್ಟು ಧರೆಗೆ ಇಳಿಸಿದ ಧೀರ, ಅಸದೃಶ ಸಾಧಕ. ದೃಢ ಸಂಕಲ್ಪ, ಸಂಕಲ್ಪಕ್ಕೆ ಅನುಗುಣವಾದ ಕ್ರಿಯಾಕಲ್ಪ, ಸವೆಯದ ಸಹನೆ, ಯೋಜನೆಯ ಹೆಜ್ಜೆ, ಹೆಜ್ಜೆಗೆ ಅನಿವಾರ್ಯವಾಗಿರುವ ಸಂಪನ್ಮೂಲಗಳ ಶೇಖರಣೆ ಮತ್ತು ಸದೂಪಯೋಗ – ಇವುಗಳ ಸಂಕೇತನಾಗಿದ್ದಾನೆ ಭಗೀರಥ. ಅವನ ಬಗ್ಗೆ ಪುರಾಣಿಕರಿಗೆ ಎಷ್ಟು ಪರಿಯ ಅಭಿಮಾನವೆಂದರೆ, ಅವನ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಒಂದು ಚರಿತ್ರೆಯನ್ನೇ 1960 ರಲ್ಲಿ ಬರೆದರು. ಅದು ಕನ್ನಡ ಯುವಜನಾಂಗಕ್ಕೆ ಪ್ರೇರಣೆಯಾಗಿರಲಿ ಎಂಬ ಆಶಯದಿಂದ ಅರ್ಪಿಸಿದರು. ಅದು ಶಿಕ್ಷಣ ಕ್ರಮ ನಿರ್ಮಿಸುವ ಮಂದಿಗಾಗಲಿ, ಮಕ್ಕಳನ್ನು ಹೆತ್ತ ತಂದೆತಾಯಂದಿರಿಗಾಗಲಿ ಎಂದಿಗೂ ಒಂದು ಪ್ರೇರಣೆಯ ಪಾಠವಾಗಿದೆ. ರಾಜ್ಯ ಸಾಹಿತ್ಯ ಅಕೆಡೆಮಿಯ ಪ್ರಶಸ್ತಿಯನ್ನು ಈ ಪುಸ್ತಕ್ಕೆ ನೀಡಲಾಗಿದೆ.

ಚೆನ್ನಬಸವಣ್ಣ ಮತ್ತು ಭಗೀರಥರಿಂದ ಕಲಿತ ಪಾಠವೆಂದರೆ ಯಾವುದೇ ಸಮಸ್ಯೆಯಿರಲಿ, ಅದನ್ನು ಹಿಮ್ಮೆಟ್ಟದೆ ಎದುರಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಲುವ ಕೌಶಲ, ಆ ಪ್ರವೃತ್ತಿ ಪುರಾಣಿಕರನ್ನು ಬಹಳ ಎತ್ತರದವರೆಗೆ ತಲುಪಿಸಿದೆ.

ಪುರಾಣಿಕರದು ಎಂದೂ ಒಂಟಿ ಸಲಗದ ಬದುಕಲ್ಲ. ಯಾವಾಗಲೂ ಗೆಳೆಯರ, ಆಪ್ತರ ಗುಂಪು ಕಟ್ಟುತ್ತಿದ್ದರು. ಎಲ್ಲರೂ ಸ್ಕೂಲು-ಕಾಲೇಜಿಗೆ ಹೋಗುವುದು ಕಲಿಯಲಿಕ್ಕೆ, ಆಟ ಓಟದಲ್ಲಿ ಒಂದಿಷ್ಟು ನಲಿಯಲಿಕ್ಕೆ. ಪುರಾಣಿಕರ ಹುಟ್ಟುಗುಣವೆಂದರೆ, ಕಲಿಯುವುದಂತೂ ಸರಿಯೆ, ಆಟ-ಓಟಗಳಲ್ಲಿ ಮೆರೆಯುವುದೂ ಸರಿಯೆ, ಆದರೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗುರುತಿಸುವುದು, ಅವುಗಳ ಪರಿಹಾರಕ್ಕೆ ಸಂಬಂಧಿಸಿದವರ ಗಮನ ಸೆಳೆಯುವುದು ಅದು ಅದ್ಯವಾಗಿತ್ತು. ಅದಕ್ಕೆಂದು ಒಂದು ವಿದ್ಯಾರ್ಥಿ ಸಂಘ ಹುಟ್ಟುತ್ತಿತ್ತು, ಅದರ ಕರ್ಣಧಾರತ್ವ ಅವರಿಗೆ ಸಲ್ಲುತ್ತಿತ್ತು. ಅವರು ಕೊಪ್ಪಳದಲ್ಲಿ ಓದಲಿ, ಗುಲಬರ್ಗಾದಲ್ಲಿ ಕಲಿಯಲಿ, ಹೈದರಾಬಾದಿನಲ್ಲಿ ಅಭ್ಯಾಸ ಮಾಡಲಿ, ಅಲ್ಲಲ್ಲಿ ವಿದ್ಯಾರ್ಥಿ ಸಂಘಗಳು ಹುಟ್ಟುತ್ತ ಹೋದವು. ಅಂದಿನ ಪರಿಸರಕ್ಕೆ ಪರಿಸ್ಥಿತಿಗೆ ತಕ್ಕಂತೆ ವಿದ್ಯಾರ್ಥಿಗಳ ಮತ್ತು ವಿಶೇಷವಾಗಿ ಬಡವರ, ದಲಿತರ, ಅಲ್ಪಸಂಖ್ಯಾತರ ಕ್ಷೇಮಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾದವು.

1942ರಲ್ಲಿ ರಾಜ್ಯದಲ್ಲಿ ನೆಡೆದ ಚಲೇಜಾವ್ ಮತ್ತು ಸ್ವಾತಂತ್ರ್ಯ ಚಳುವಳಿಯ ನಾಯಕರಲ್ಲಿ ಒಬ್ಬರಾಗಿ ಬ್ರಿಟೀಷರ ದೌರ್ಜನ್ಯವನ್ನು ಎದುರಿಸಿದ ಅನ್ನದಾನಯ್ಯ, ನಂತರ 1947-48ರಲ್ಲಿ ಹೈದರಾಬಾದು ಸಂಸ್ಥಾನದ ಪೋಲಿಸರು ಮತ್ತು ಉಗ್ರಗಾಮಿಗಳಾದ ರಜಾಕಾರರ ದೌರ್ಜನ್ಯದ ವಿರುದ್ಧ ಸಿಡಿದ್ದೆದರು. ಭಾರತದೊಡನೆ ಹೈದರಾಬಾದು ಸಂಸ್ಥಾನ ವಿಲೀನವಾಗುವುದನ್ನು ವಿರೋಧಿಸುವ ರಜಾಕಾರರು ಜನಸಾಮಾನ್ಯರ ಮೇಲೆ ನೆಡೆಸಿದ ಹಿಂಸೆ ಮತ್ತು ದೌರ್ಜನ್ಯ ಇಡೀ ಮನುಕುಲದ ಇತಿಹಾಸದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವಂತಿದೆ. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಅನ್ನದಾನಯ್ಯನವರು, ತಮ್ಮ ವಿದ್ಯಾಭ್ಯಾಸ ತೊರೆದು ಸಾವಿರಾರು ಜನ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರನ್ನು ರಜಾಕಾರರಿಂದ ರಕ್ಷಿಸಲು ಮುಂದಾದರು. ಅನ್ನದಾನಯ್ಯನವರ ಹೋರಾಟದ ಬದುಕಿಗೆ ಹೊಸ ಆಯಾಮ ದೊರೆಯಿತು. ಅವರ ಕತೃತ್ವಶಕ್ತಿಗೆಯ ಅವಿಷ್ಕಾರಕ್ಕೆ ಹೊಸ ಕ್ಷೇತ್ರ ಲಭಿಸಿತು. ರಾಯಚೂರು ಜಿಲ್ಲೆಯ ಗಡಿಗಂಟಿದ ಮುಂಬೈ ರಾಜ್ಯದ ಮುಂಡರಗಿ ಮೊದಲಾದ ಗ್ರಾಮಗಳ ಪ್ರದೇಶ ಪುರಾಣಿಕರೂ ಹಾಗೂ ಅವರ ಸ್ನೇಹಿತರ ಪಾತ್ರಕ್ಕೆ ಆಹ್ವಾನ ನೀಡಿತು. ಹೀಗೆ ರಾಜ್ಯದಲ್ಲಿ ನೆಡೆದ ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ಮುನ್ನುಡಿಯನ್ನು ಬರೆದ ಅನ್ನದಾನಯ್ಯನವರು ಮುಂಡರಗಿ ಶಿಬಿರದಲ್ಲಿ ಸಮಾನಮನಸ್ಕರ ಮತ್ತು ಉತ್ಸುಕ ಸ್ನೇಹಿತರ ಒಂದು ಪಡೆಯನ್ನು 1947ರಲ್ಲಿ ಸಂಘಟಿಸಿದರು. ನಿರಾಯುಧವಾಗಿದ್ದ ಈ ಪಡೆ ಯಾರಿಗೂ ತಿಳಿಯದಂತೆ ನಿಜಾಮ ಸಂಸ್ಥಾನದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಧುನಿಕ ಬಂದೂಕುಗಳನ್ನು ಹೊಂದಿದ್ದ ರಜಾಕಾರರ ವಿರುದ್ಧ ಕಾರ್ಯಾಚರಣೆ ನೆಡೆಸುತ್ತಿತ್ತು ಹಾಗೂ ಯಾವ ಹಾನಿಯನ್ನೂ ಅನುಭವಿಸದೆ ಬೆಳಗಾಗುವುದರಲ್ಲಿ ತನ್ನ ನೆಲೆಗೆ ಹಿಂತಿರುಗುತ್ತಿತ್ತು. ಇದು ರಜಾಕಾರರಿಗೆ ಬರೆ ಎಳೆಯುವ ಕೆಲಸವಾಗಿತ್ತು. ಅವರ ಸ್ಥೈರ್ಯ ಕುಗ್ಗಿಸುವ ಹುನ್ನಾರವಾಗಿತ್ತು. ಈ ಪಡೆಗೆಳ ಸಂಘಟನೆ, ಅವುಗಳು ಅನುಸರಿಸಬೇಕಾದ ರಣತಂತ್ರ, ರಹಸ್ಯವರದಿ ವರ್ತಮಾನಗಳ ವಿಲೇವಾರಿ ಮತ್ತು ಪ್ರಚಾರ ಇವು ಅನ್ನದಾನಯ್ಯನವರ ನೇತೃತ್ವದಲ್ಲಿ ರೂಪಗೊಳ್ಳುತ್ತಿದ್ದವು. ಅನ್ನದಾನಯ್ಯನವರ ನೇತ್ರತ್ವದಲ್ಲಿ ಮುಂಡರಗಿ ಶಿಬಿರಾರ್ಥಿಗಳು ನೆಡೆಸಿದ ಹೋರಾಟಕ್ಕೆ ಸೋತು ಕಂಗೆಟ್ಟ ರಜಾಕಾರರು ಮತ್ತು ನಿಜಾಮ್ ಪೋಲಿಸರು ಪಲಾಯನ ಮಾಡಿದರು. ಅನ್ನದಾನಯ್ಯನವರು ಹೈದರಾಬಾದು ಸಂಸ್ಥಾನದ 87 ಹಳ್ಳಿಗಳನ್ನು ಸ್ವತಂತ್ರಗೊಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಈ ಹಳ್ಳಿಗಳು ಸ್ವತಂತ್ರ ಭಾರತದ ಭಾಗವೆಂದು ಘೋಷಿಸಿದರು. ಸಾವಿರಾರು ಕುಟುಂಬಗಳನ್ನು ರಜಾಕಾರರಿಂದ ರಕ್ಷಿಸಿದರು. ಈ ಸೋಲಿನಿಂದ ರಜಾಕಾರರಾಗಲಿ ಅಥವಾ ಹೈದರಾಬಾದಿನ ನಿಜಾಮನಾಗಲಿ ಮತ್ತು ದಕ್ಷಿಣ ಭಾರತದಲ್ಲಿ ಮತ್ತೊಂದು ಪಾಕಿಸ್ತಾನವನ್ನು ಸ್ಥಾಪಿಸುವ ಹುನ್ನಾರದಲ್ಲಿದ್ದ ಭಾರತದ ವಿರೋಧಿಗಳಾಗಲಿ ಚೇತರಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಸರದಾರ ಪಟೇಲ್‍ರು ಅನ್ನದಾನಯ್ಯನವರ ಹೋರಟವನ್ನು ಮೆಚ್ಚಿ, ಕೇಂದ್ರ ಮಂತ್ರಿ ಗಾಡ್ಗೀಲ್‍ರನ್ನು ಮುಂಡರಗಿಯ ಶಿಬಿರಕ್ಕೆ ಕಳುಹಿಸಿದ್ದರು. ನಿಜಲಿಂಗಪ್ಪನವರು ಮೊದಲಾದ ರಾಜ್ಯ ನಾಯಕರು ಅನ್ನದಾನಯ್ಯನವರಿಗೆ ನೈತಿಕ ಬೆಂಬಲ ಸೂಚಿಸಿದರು. ಪುರಾಣಿಕರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಅದೇಶ ಹೊರಡಿಸಿದ ಹೈದರಬಾದು ನಿಜಾಮ, ಮುಂದೆ 1948ರಲ್ಲಿ ಭಾರತಕ್ಕೆ ಸೋತು ಶರಣಾಗಿ ತನ್ನ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿದ. ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ 2 ವರ್ಷಗಳ ಕಾಲ ವಿದ್ಯಾಭ್ಯಾಸ ಕಳೆದು ಕೊಂಡಿದ್ದಲ್ಲದೆ, ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು ಅನ್ನದಾನಯ್ಯನವರು. ಆದರೆ ಅವರಲ್ಲಿ ಹುದುಗಿದ್ದ ಅನೇಕ ಶಕ್ತಿಗಳನ್ನು ಹೊರಹೊಮ್ಮಿ ಅವರ ಸತ್ವವನ್ನು ಸದೃಢಗೊಳಿಸಿದವು. ಮುಂದೆ ರಾಷ್ಟ್ರೀಯ ಮತ್ತು ರಾಜ್ಯದ ಮುತ್ಸದ್ಧಿಗಳ ಹಿತವಾದ ಕೇಳಿ, ಓದು ಮುಂದುವರೆಸಲು ಸಿದ್ಧರಾದ ಪುರಾಣಿಕರಿಗೆ , ಹೈದರಾಬಾದಿಗೆ ಹಿಂತಿರುಗಿ ಉಳಿದ ಸ್ನೇಹಿತರು ತಾವು ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ ಭಾಗವಹಿಸಿದೆವೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆದ ಸನ್ಮಾನ ಮತ್ತು ಸವಲತ್ತುಗಳ ಲಾಭ ಪಡೆಯುವ ಮನಸ್ಸಾಗಲಿಲ್ಲ. ತಮ್ಮ ಶಿಕ್ಷಣಕ್ಕೆ ಒಂದು ಹೊಸ ತಿರುವು ಕೊಟ್ಟು ವಿಜ್ಞಾನದ ಬದಲಾಗಿ ವಾಣಿಜ್ಯ ಕಲಿಯಲಿಕ್ಕೆಂದು ಹುಬ್ಬಳ್ಳಿಗೆ ಬಂದಿಳಿದರು.

ಹುಬ್ಬಳ್ಳಿಯ ಜೆ.ಜೆ.ಕಾಮರ್ಸ ಕಾಲೇಜಿನ ಮೊದಲನೆಯ ವರ್ಷದ ವಿದ್ಯಾರ್ಥಿಯಾದ ಪುರಾಣಿಕರಿಗೆ ಎಲ್ಲವೂ ಅಪರಿಚಿತವೆ. ಸಾಲದ್ದಕ್ಕೆ “ಮುಗಲಾಯಿ”ಯಿಂದ ಬಂದ ಕಡುಬಡವ ಮತ್ತು ಹಿಂದುಳಿದವನೆಂದು ಅವಮಾನಿಸುವ ಜನರ ಕಿರುಕುಳ ಬೇರೆ. ಈ ನಿಷೇಧಸ್ವರೂಪದ ವಿಷಮ ಪರಿಸ್ಥಿತಿಯಲ್ಲಿ ಅನೇಕ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೊಂದು-ಬೆಂದಿರುವುದನ್ನು ಕಂಡು ಕೆರಳಿದ ಅನ್ನದಾನಯ್ಯನವರು, ವಿದ್ಯಾರ್ಥಿಗಳ ಸಂಘಟನೆಗೆ ಮುಂದಾದರು. ಸೂಕ್ತ ಪಾಠಕ್ಕೆ ಆಗ್ರಹ, ಬಡ ವಿದ್ಯಾರ್ಥಿಗಳಿಗೆ ಆಸನ, ವಸನ ಮತ್ತು ವಾಸಗಳ ಏರ್ಪಾಡು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಹುಬ್ಬಳ್ಳಿ ನಗರಸಭಾಗೃಹದಲ್ಲಿ ವಿದ್ವಾಂಸರ, ಸಾಧಕರ, ಸಿದ್ಧಪ್ಮರುಷರ ವ್ಯಾಖ್ಯಾನಗಳು ಮೊದಲಾದ ಕೆಲಸಗಳನ್ನು ಪುರಾಣಿಕರ ನೇತೃತ್ವದಲ್ಲಿ ಈ ಸಂಘಟನೆಯು ನೆಡೆಸಿತು. ಕರ್ನಾಟಕ ಏಕೀಕರಣ ಆಗ್ರಹಕ್ಕೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಪುರಾಣಿಕರು ನೆಡೆಸಿದ ಬೃಹತ್ ವಿದ್ಯಾರ್ಥಿ ಸಮಾವೇಶ ಮತ್ತು ಮೆರವಣಿಗೆಯಂತಹ ಮತ್ತೊಂದು ಜನಪರ ಕಾರ್ಯಕ್ರಮವನ್ನು ಇದುವರೆಗೂ ಹುಬ್ಬಳ್ಳಿ ಇನ್ನೂ ಕಂಡಿಲ್ಲ. ಪುರಾಣಿಕರಿಗೆ ಹುಬ್ಬಳ್ಳಿ-ಧಾರವಾಡಗಳ ‘ನಾ’, ‘ನೀ’ ಎನ್ಮ್ನವ ಎಲ್ಲಾ P್ವ್ಷೀತ್ರದ ನಾಯಕರೊಂದಿಗೆ ಸಂಪರ್ಕ ದೊರೆಯಿತು. ಎಲ್ಲ ಮತಭಾಂದವರು, ಭಾಷಿಕರೂ ಪುರಾಣಿಕರೊಡನೆ ಕೈಗೋಡಿಸಿದರು. ಒಬ್ಬ ಯುವ ನಾಯಕ ಉದಯಿಸಿದ ಎಂದು ದಿನಪತ್ರಿಕೆಗಳು ಗುರುತಿಸಿ ಬೆನ್ಮ್ನ ತಟ್ಟಿದವು. ಆದರೆ ಹೊರಗಿನಿಂದ ಬಂದ ಮೊಗಲಾಯಿ ಪ್ರದೇಶದ ಒಬ್ಬ ಹ್ಶೆದ ನಮ್ಮೂರಲ್ಲಿ ಧ್ವಜ ಹಾರಿಸಿದನಲ್ಲ ಎಂಬ ಕೆಲವರ ಹೊಟ್ಟೆಯುರಿಗೂ ಅನ್ನದಾನಯ್ಯನವರು ಗುರಿಯಾದರು. ‘ ಕರ್ನಾಟಕ ಏಕೀಕರಣ’ ಆಗಲೇ ಬೇಕೆಂಬ ಆಗ್ರಹದ ಉಪವಾಸ ಹ್ರಡಿದ್ದ ಗಾಂಧಿವಾದಿ ಅದರಗುಂಚಿ ಶಂಕರಗೌಡರ ಉಪವಾಸದ ಅಂತ್ಯದಲ್ಲಿ ಸಂಭವಿಸಿದ ಅನೀರಿಕ್ಷಿತ ಗಲಭೆಯಲ್ಲಿ ಪೋಲಿಸರು ಗುಂಡು ಹಾರಿಸಿದರು. ಗಲಭೆಗೆ ವಿದ್ಯಾರ್ಥಿ ನಾಯಕ ಪುರಾಣಿಕ ಕಾರ್ಯಕರ್ತನೆಂದು ಸುಳ್ಮ್ಳ ಆರೋಪ ಹೊರಸಿ ಕೆಲ ರಾಜಕೀಯ ವ್ಯಕ್ತಿಗಳು ಅವರನ್ಮ್ನ ಬಂಧನಕ್ಕೆ ಒಳಪಡಿಸಿದರು. ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ನಾಯಕನೊಬ್ಬನನ್ನು ಸುಳ್ಳು ಆರೋಪದಡಿ ಬಂಧಿಸಿ, 1954ರಲ್ಲಿ ಸೆರೆಮನೆಗಟ್ಟಿದ ಕೀರ್ತಿ ಸ್ವತಂತ್ರ್ಯ ಭಾರತದ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ್ದಾಯಿತು.

ಸೆರೆಮನೆ ಸೇರಿದ ಗಾಂಧಿವಾದಿ ಪುರಾಣಿಕರ ಉಪವಾಸ ವ್ರತ ಕೈಗೊಂಡರು. ಯಾರ ಬೆದರಿಕೆಗೂ ಜಗ್ಗದೆ ಅನ್ನ ಸತ್ಯಾಗ್ರಹ ನೆಡೆಸಿ, ಜೈಲಿನಲ್ಲಿ ಪೋಲಿಸರ ಹಿಂಸೆ-ದೌರ್ಜನ್ಯಕ್ಕೀಡಾದ ಅಮಾಯಕರ ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸಿದರು. ಪುರಾಣಿಕರ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಸಾಬೀತಾಗಿ ಅವರನ್ನು ಗೌರವಾನ್ವಿತವಾಗಿ ಬಿಡುಗಡೆ ಮಾಡಿದ ಘನ ನ್ಯಾಯಾಲಯವು, ಪೋಲಿಸರಿಗೆ ಮತ್ತು ಸರ್ಕಾರಕ್ಕೆ ಛೀಮಾರಿ ಹಾಕಿತು.

ಹುಬ್ಬಳ್ಲಿಯಿಂದ ಬಿ.ಕಾಮ್ ಪದವಿ ಪಡೆದ ಪುರಾಣಿಕರು ಲಾ ಓದಲೆಂದು ಹ್ಶೆದರಾಬಾದಿಗೆ ಹಿಂದಿರುಗಿದರು. “ಆಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು” ಆಯೋಗಿಸ ಬೇಕು. ಅದರ ಮೂಲಕ ಇಡೀ ಕರ್ನಾಟಕದ ವಿದ್ಯಾರ್ಥಿ ವೃಂದಕ್ಕೆ ಒಂದು ಸೂಕ್ತ ವೇದಿಕೆ ಲಭಿಸುವುದು ಎಂದು ಯೋಚಿಸಿದ ಪುರಾಣಿಕರು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಪರಿಷತ್ತಿನ ಪಾತ್ರ ಬಹಳ ದೊಡ್ಡದೆಂದು ಮನದಟ್ಟು ಮಾಡಿ ಕೊಡಲು ಕರ್ನಾಟಕದಾದಂತ್ಯ ಪ್ರಯಾಣ ಮಾಡಿದರು. ವಿದ್ಯಾರ್ಥಿಗಳಂತೂ ಸರಿಯೇ ಅವರಿಗೆ ಪ್ರಚೋದನೆ ಪ್ರೇರಣೆ, ಫ್ರೋಫೆಸರ್ ಗಳು, ಪ್ರಿನ್ಸಿಪಾಲರು, ಸಾಹಿತಿಗಳು, ಸಮಾಜ ಚಿಂತಕರನ್ಮ್ನ ಸಂಪರ್ಕಿಸಿ ಅವರ ಬೆಂಬಲ, ಮಾರ್ಗದರ್ಶನ ಪಡೆಯುವ್ಯದರಲ್ಲಿ ಪುರಾಣಿಕರು ಯಶಸ್ವಿಯಾದರು. ಪುರಾಣಿಕರು ಭೇಟಿಯಾಗಿ ಮಾತನಾಡಿದ ನಂತರ ರಾಷ್ಟ್ರಕವಿ ಕುವೆಂಪು ಈ ಸಂಘಟನೆಗೆ ಮುಕ್ತ ಬೆಂಬಲ ನೀಡಿದರು. ಪ್ರಪ್ರಥಮ ಅಖಿಲ ಕರ್ನಾಟಕ ವಿದ್ಯಾರ್ಥಿ ಸಮ್ಮೇಳನವು ಯಶಸ್ವಿಯಾಗಿ 1954ನಲ್ಲಿ ಹ್ಶೆದರಾಬಾದಿನಲ್ಲಿ ನೆಡೆಯಿತು. ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು ಪುರಾಣಿಕರು. ಕರ್ನಾಟಕದ ಎಲ್ಲಾ ಭಾಗದ ವಿದ್ಯಾರ್ಥಿಗಳು, ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಹೀಗೆ ಇಡೀ ರಾಜ್ಯದ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸಂಘಟಿತರಾಗಿದ್ದು ಇದೇ ಮೊದಲು ಮತ್ತು ಇದಕ್ಕೆ ರೂವಾರಿಯಾದರು ಪುರಾಣಿಕರು. ಇಡೀ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಒಂದು ವಿದ್ಯುತ್ ಸಂಚಾರದ ಅನುಭವವಾಯಿತು. ಅವರಿಗೆ ಸಂಘಟನೆಯ ಇನ್ನಷ್ಟು ಸೂಕ್ಷ್ಮ ಸುಳುಹುಗಳು ಮನೋಗತವಾದವು.

ಗಡಿನಾಡಿನಲ್ಲಿ ಕನ್ನಡ ಮತ್ತು ಕನ್ನಡ ಸಾಹಿತ್ಯದ ಪ್ರಚಾರಕ್ಕಾಗಿ ಸ್ವಂತ ಹಣ ವಿನಯೋಗಿಸಿ ಹೈದರಾಬಾದಿನಲ್ಲಿ ಭಾರತೀ ಪ್ರಿಂಟರಿ ಎಂಬ ಅಚ್ಚುಕೂಟವನ್ನು ತನ್ಮೂಲಕ “ಸಹಜೀವನ ಪ್ರಕಾಶನ” ಎಂಬ ಸಂಸ್ಥೆಯನ್ನು ಪುರಾಣಿಕರು ಪ್ರಾರಂಭಿಸಿದರು. ಪ್ರಮುಖ ಸಾಹಿತಿಗಳ ಹಲವಾರು ಪುಸ್ತಕಗಳು ಇಲ್ಲಿ ಪ್ರಕಟವಾಗಿರುವುದು ಇಲ್ಲಿ ಗಮನಾರ್ಹವಾಗಿದೆ.

ನವೆಂಬರ್ 1, 1956ರಂದು ಕರ್ನಾಟಕ ಏಕೀಕರಣಗೊಂಡು ಮೈಸೂರು ರಾಜ್ಯವಾಗಿ ಹೊರಹೊಮ್ಮುವ ಹಿಗ್ಗಿನ ಸುದ್ಧಿ ಪುರಾಣಿಕರನ್ನು ರೋಮಾಂಚನಗೊಳಸಿತ್ತು. ಆಗ ಅವರು ಹೈದರಾಬಾದಿನಿಂದ ಬೆಂಗಳೂರಿಗೆ ಹೋಗಿ ಅಲ್ಲಿ ನ್ಯಾಯವಾದಿಯಾಗಿ ವೃತ್ತಿ ಆರಂಭಿಸುವ ತೀರ್ಮಾಣ ಕೈಗೊಂಡರು. ‘ಹೊಸ ಮಾಲೆಗಿತ್ತಿ’ಯಾಗಿ ಅದೇ ಬಂದಿದ್ದ ಪತ್ನಿ ನೀಲಾಂಬಿಕೆಯೊಡನೆ, ಅಷ್ಟಿಷ್ಟು ಮನೆ ಸಾಮಾನುಗಳು ಮತ್ತು ಕಿಸೆಯಲ್ಲಿ ಪುಡಿಗಾಸು ಇಟ್ಟುಕೊಂಡು. ಅರಿಯದ ನಗರಕ್ಕೆ, ತಲೆಯಲ್ಲಿ ಯೋಜನೆ, ಎದೆಯಲ್ಲಿ ಧೈರ್ಯ, ಹಿಡಿಯಲ್ಲಿ ಸ್ಥೈರ್ಯ ತುಂಬಿಕೊಂಡು ಬೆಂಗಳೂರಿಗೆ ಬಂದಿಳಿದರು. ದೂರಾತಿದೂರದ ಸಂಬಂಧವಾದರೂ ಅತ್ಯಂತ ಆಪ್ತರಾಗಿ ಸ್ವಾಗತಿಸಿದ ಶ್ರೀನೀಲಕಂಠಾರಾಧ್ಯರ ಅತಿಥಿಯಾಗಿ “ಸನ್ಯಾಸಿಯ ಮದುವೆಗೆ ಜುಟ್ಟು ಜನಿವಾರಗಳಿಂದ ಆರಂಭ” ಎನ್ನುವಂತೆ ಪುರಾಣಿಕರು ತಮ್ಮ ನ್ಯಾಯವಾದಿ ವೃತ್ತಿ ಆರಂಭಿಸಲು ಒಬ್ಬ ಹಿರಿಯ ನ್ಯಾಯವಾದಿಯ ಬಳಿ ತರಬೇತಿಗಾಗಿ ಹುಡುಕಾಟ ಆರಂಭಿಸಿದರು. ಹೈದರಾಬಾದಿನಲ್ಲಿ ಪಡೆದಿದ್ದ ಅಂತಹ ಅನುಭವ, ಅವರು ನ್ಯಾಯವಾದಿಯಂದು ಸನದು ಪಡೆಯಲು ಕಡಿಮೆಯಾಗಿತ್ತು. ಶ್ರೀ ವಿ.ಕೃಷ್ಣಮೂರ್ತಿ ಎಂಬ ಸಹೃದಯದ ಹಿರಿಯ ನ್ಯಾಯವಾದಿಯ ಕಚೇರಿಯಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕೆಲ ಸಮಯದಲ್ಲೇ ತಂದೆ, ತಾಯಿ, ತಮ್ಮ, ತಂಗಿ ಮತ್ತು ಅಳಿಯ ಬೆಂಗಳೂರಿನಲ್ಲಿದ್ದ ಅನ್ನದಾನಯ್ಯನವರ ಜೊತೆಗೆ ವಾಸಿಸಲು ಬಂದರು. ಪ್ರತಿದಿನ ಬರುವ ಪರಿಚಿತರು, ಸಂಬಂಧಿಗಳು ಬೇರೆ. ಆಗ ನ್ಯಾಯವಾದಿಯಾಗಿ ಸಂಜೆಯವರೆಗೆ ಕೆಲಸ ಮಾಡಿದರೆ ರಾತ್ರಿಯೀಡಿ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಮಾಡಿ, ಕುಟುಂಬ ವೆಚ್ಚ ನಿರ್ವಹಿಸುವ ಸಾಹಸ ಮಾಡಿದರು ಪುರಾಣಿಕರು. 1957ರಿಂದ ನ್ಯಾಯವಾದಿಯಾದರೂ, ಗಾಂಧೀಜಿಯವರಂತೆ ಕೇಸಿನಲ್ಲಿ ಅನ್ಯಾಯವಾದದ್ದು ಖಾತ್ರಿ ಎನಿಸಿ ಅದನ್ನು ನೆಡೆಸಿದರೆ ನ್ಯಾಯ ದೊರೆಯಲು ಶಕ್ಯ ಎಂದು ಅನ್ನುವಂಥಹ ಕೇಸುಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅಂತಿಂಥ ಕೇಸುಗಳನ್ನು “ಬಂದಷ್ಟು ಬಂತು ಬಂಡಿವಾಡದ ಸುಂಕ” ಎಂದು ಫೀಸಿಗಾಗಿ ಹಾತೊರೆದು ಎಂದೂ ನೆಡೆಸಲಿಲ್ಲ. ಅವುಗಳನ್ನು ವಾಪಸ್ಸು ಕಳುಹಿಸಿ ಕೊಡುತ್ತಿದ್ದರು. ಅವರಲ್ಲಿ ಕೆಲವರು ಬೇರೆ ವಕೀಲರತ್ತ ಧಾವಿಸುತ್ತಿದ್ದರು. ಬಡವರಿಗೆ ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲೇ ಊಟ, ವಸತಿ ನೀಡಿ ಮತ್ತು ಊರಿಗೆ ಹಿಂದಿರುಗಲು ಪುರಾಣಿಕರೇ ಹಣಕೊಟ್ಟು ಕಳುಹಿಸುತ್ತಿದ್ದರು. ಕೇಸ್ ನೆಡೆಸಿ ಗೆದ್ದು ಕೊಟ್ಟರೂ ಏನನ್ನೂ ಕೊಡದ ಕಕ್ಷಿದಾರಗಳಿಗಾಗಿ ಅವರು ಎಂದೂ ತಲೆಕೆಡೆಸಿ ಕೊಳ್ಳಲಿಲ್ಲ. ಸುಮಾರು 12 ವರ್ಷ ಸರ್ಕಾರಿ ನ್ಯಾಯವಾದಿಯಾಗಿ(1969-81), ಕೋಟ್ಯಾಂತ ಮೌಲ್ಯದ ಸರ್ಕಾರಿ ಆಸ್ತಿಯನ್ನು ಉಳಿಸುಕೊಡುವಲ್ಲಿ ಅಮೂಲ್ಯ ಸೇವೆ ಸಲ್ಲಿಸಿದರು. ಸಾವಿರಾರು ಜನ ಬಡವರಿಗೆ, ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಉಚಿತವಾಗಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ನ್ಯಾಯ ನಿಷ್ಟುರಿ, ನಿರ್ಭಿತ ನ್ಯಾಯವಾದಿಯಾಗಿ 50 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಹೈಕೋರ್ಟ ನ್ಯಾಯಧೀಶರಾಗುವ ಅವಕಾಶಗಳು ಬಂದರೂ ಅದನ್ನು ಸ್ವೀಕರಿಸದೆ ಅವರು ನ್ಯಾಯವಾದಿಯಾಗಿ ಮುಂದುವರೆದಿದ್ದು ಇಲ್ಲಿ ಗಮನಾರ್ಹವಾಗಿದೆ. ನ್ಯಾಯವಾದಿಯ ವೃತ್ತಿಯು ಪುರಾಣಿಕರಿಗೆ ಉಪಾಸನೆಯಾಗಿತ್ತು ಮತ್ತು ಸಮಾಜ ಸೇವೆಯ ಸಾಧನವಾಗಿತ್ತು.

ಪುರಾಣಿಕರು ಮುಂಜಾನೆ 9ರಿಂದ ಸಂಜೆಯ 5ರವರೆಗೆ ಹೈಕೋರ್ಟ ಕೆಲಸ ಮತ್ತು ಸಂಜೆ ಒಂದೆರಡು ತಾಸು ಕೇಸ್ ತಯಾರಿಗೆ, ಇತ್ಯಾದಿಗಳಿಗೆ ಬಳಸಿದರೆ, ಉಳಿದ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟರು. ಅವರ ಹೋರಾಟ ಮನೋಭಾವ, ರಚನಾತ್ಮಕ ಯೋಜನೆ, ಸಮಾಜ ನಿಷ್ಠೆ, ಕತೃತ್ವ ಶಕ್ತಿಗಳು ಹೊರಹೊಮ್ಮಿದವು. ಬೆಂಗಳೂರಿನ ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವೇಶಿಸಿದರು ಮತ್ತು ಜನತೆಯ ಬೆಂಬಲ ಗೆದ್ದರು. ಈ ಕೆಲಸಗಳಲ್ಲಿ ತಮ್ಮ ಛಾಪು ಸ್ಥಾಪಿಸಿದರು. ಎತ್ತರದಿಂದ ಎತ್ತರಕ್ಕೆ ಬೆಳೆಯುತ್ತಾ ಹೋದರು. ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕರಾಗಿ (1969ರಿಂದ), 27 ವರ್ಷಗಳ ಕಾಲ ಅದರ ಪ್ರಧಾನ ಕಾರ್ಯದರ್ಶಿಯಾಗಿ (1964-91) ಅವರು ತನು-ಮನ-ಧನದ ಸೇವೆ ಸಲ್ಲಿಸಿರುವುದರಿಂದ ಈ ಸಂಸ್ಥೆ ಇಂದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯಲು ಸಾಧ್ಯವಾಗಿದೆ. ಪುರಾಣಿಕರ ಪ್ರಯತ್ನದಿಂದಾಗಿ ಬಸವಣ್ಣನವರ 8ನೆ ಶತಮಾನೋತ್ಸವ ಮತ್ತು ಪಾದಯಾತ್ರೆ (1967-68) ಮತ್ತು ಕನ್ನಡ ಮತ್ತು ಬೇರೆ ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲೀಷ್, ರಷ್ಯಾ ಮೊದಲಾದ ಭಾಷೆಗಳಲ್ಲಿ ವಚನ ಸಾಹಿತ್ಯದ ಪ್ರಕಟಣೆ ಮೊದಲಾದ ಕೆಲಸಗಳನ್ನು ಬಸವ ಸಮಿತಿ ಮಾಡಲು ಸಾಧ್ಯವಾಯಿತು. ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದರ ಗೌರವ ಕಾರ್ಯದರ್ಶಿಯಾಗಿ ( 1960-68) ಸೇವೆ ಸಲ್ಲಿಸಿ, ಅದರ ಸಮಸ್ಯೆಗಳನ್ನು ಪರಿಹರಿಸಿ ಮತ್ತೆ ಈ ಸಂಸ್ಥೆಗೆ ಪುರ್ನಜನ್ಮ ನೀಡಿದವರು ಪುರಾಣಿಕರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಗ್ರಂಥಾಲಯ, ಸ್ವಂತ ಮುದ್ರಣಾಲಯದ ಆರಂಭ, ಪ್ರಪಥಮವಾಗಿ ಕನ್ನಡ ನಿಘಂಟು ಮುದ್ರಣ, ರಾಜ್ಯ ಸರ್ಕಾರದಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಅನುದಾನ, ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳು ಹೀಗೆ ಹಲವಾರು ರೀತಿಯಲ್ಲಿ ಶ್ರೀಪುರಾಣಿಕರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇವೆ ಸಲ್ಲಿಸಿದ್ದಾರೆ.

ಕನ್ನಡ, ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ಅನ್ನದಾನಯ್ಯ ಪುರಾಣಿಕರು 35ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವರ ನೂರಾರು ಲೇಖನಗಳು ದೇಶ-ವಿದೇಶಗಳಲ್ಲಿ ಪ್ರಕಟವಾಗಿವೆ. ಜನಜಾಗೃತಿಗಾಗಿ ಅವರು ¨ರೆಯುವ ಸಾವಿರಾರು ಅಧುನಿಕ ವಚನಗಳು ಅಪಾರ ಮನ್ನಣೆ ಗಳಿಸಿವೆ. ಅವರಿಗೆ ಅಖಿಲ ಕರ್ನಾಟಕ ವಚನ ಪರಿಷತ್ತಿನ ಪ್ರಥಮ ಅಧಿವೇಶನದ ಅಧ್ಯಕ್ಷತೆಯ ಗೌರವ ದೊರೆತಿದೆ. ಕರ್ನಾಟಕದ ಶ್ರೀಷ್ಟ ವಚನಕಾರನೆಂಬ ಪ್ರಶಸ್ತಿ ಗೌರವ ದೊರೆತಿದೆ. ಕರ್ನಾಟಕ ರಾಜ್ಯ ಸರ್ಕಾರವು ಅವರಿಗೆ 2006ರಲ್ಲಿ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಲವಾರು ಸಾಂಸ್ಕøತಿಕ ಸಂಸ್ಥೆಗಳು ಮತ್ತು ಸಂಘಟನೆಗಳು ಅವರ ಸೇವೆಯ ಘನತೆ ಮನ್ನಿಸಿ ಸತ್ಕರಿಸಿವೆ.

ನಿರ್ಬಲರಿಗೆ ಬಲವನ್ನು, ಬಲವಂತರಿಗೆ ವಿದ್ಯೆಯನ್ನು
ಸೋತವರಿಗೆ ತಲೆಯೆತ್ತಿ ನಿಲ್ಲುವ ಕೆಚ್ಚನ್ನು,
ಸೋಲುವವರಿಗೆ ಗೆಲುವೆನೆಂಬ ನಂಬಿಕೆಯನ್ನು
ಏಗಿದವರಿಗೆ ಎತ್ತರವನ್ನು, ಬೀಗಿದವರಿಗೆ ಬಾಗುವುದನ್ನು
ಕೊಡುತ್ತಲೆ ತಮ್ಮ ಸಂಸಾರವನ್ನು ಸವೆಯಬಳಸುತ್ತಿರುವ ತ್ರಿವಿಧ ದಾಸೋಹ ಗುಣದ ಅನ್ನದಾನಯ್ಯನವರಿಗೆ ಜನಮನ್ನಣೆಯ ದಾಹವಿಲ್ಲ, ಮಾನ ಸಮ್ಮಾನದ ಲೋಭವಿಲ್ಲ, ಕೀರ್ತಿ ಪ್ರಶಸ್ತಿಗಳ ಭ್ರಮೆಯಿಲ್ಲ, ಅತ್ತ ಹೊರಳಿ ನೋಡುವ ಜಾಯಮಾನ ಅವರದಲ್ಲ.

ಇಳೆಯ ಕೊಳೆ ಕಳೆದು ಶಿವಕಳೆ ಬೆಳಗಲಿ ಎಂಬ ಚಿಂತನೆಯನು ಹಾಸಲು, ಹೊದೆಯಲು ಬಳಸಿಕೊಂಡು ಹದುಳಿಗರಾಗಿದ್ದ ಶ್ರೀ ಅನ್ನದಾನಯ್ಯ ಪುರಾಣಿಕರು ೨೦-೧೦-೨೦೧೫ರಂದು ಶಿವಾಧೀನರಾದರು.

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ನಡುಗಾಲದ ಕನ್ನಡನಾಡು

ಕೃತಿ:ನಡುಗಾಲದ ಕನ್ನಡನಾಡು
ಲೇಖಕರು;
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಜಾನಪದ ಪ್ರಕ್ರಿಯೆ: ಹಾಂಕೊ ದೃಷ್ಟಿ

ಕೃತಿ:ಜಾನಪದ ಪ್ರಕ್ರಿಯೆ
ಲೇಖಕರು: ವಿಶ್ಲೇಷಣೆ ಮತ್ತು ಸಂಶೋಧನೆ, ಸಾಹಿತ್ಯ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ದೇಶಭಾಷಾ ನಿರ್ಮಾಣ

ಕೃತಿ:ದೇಶಭಾಷಾ ನಿರ್ಮಾಣ
ಲೇಖಕರು:
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಮೌಖಿಕಕಾವ್ಯ ಸಂಯೋಜನ ಪ್ರಕ್ರಿಯೆ

ಬರೆಹದ ಅರಿವಿಲ್ಲದ ಕಥಾ ಗಾಯಕನ ಮೂಲಕ ಹಲವು ತಲೆಮೊರೆಗಳಿಂದ ಕಥನಗೀತ ರೂಪದಲ್ಲಿ ಹರಿದು ಬಂದವುಗಳೇ ಮೌಖಿಕ ಕಾವ್ಯಗಳು. ಅಂದ ಮಾತ್ರಕ್ಕೆ ಅದು ಪ್ರಾಚೀನ ಕಾಲದಲ್ಲಿ ರೂಪು ತಳೆದು ಪಳೆಯುಳಿಕೆಯ ರೂಪದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಬಾಯಿಪಾಠದ ಮೂಲಕ ಉಳಿದು ಬಂದಿರುವ ಕಾವ್ಯ ಪರಂಪರೆ ಅಲ್ಲ.[1]  ಅಂದರೆ ಜನಪದ ಪರಂಪರೆಯೊಂದು ಸಾಗುತ್ತಾ ತನ್ನ ಚಲನೆಯನ್ನು ತಡೆದು ನಿಲ್ಲಿಸುವುದಿಲ್ಲ.

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಪ್ರೊ ಎಸ್ ಎಸ್ ಭೂಸನೂರಮಠ

ಕೃತಿ:ಪ್ರೊ ಎಸ್ ಎಸ್ ಭೂಸನೂರಮಠ

ಲೇಖಕರು: ಡಾ. ನೀಲಗಿರಿ ತಳವಾರ

ಕೃತಿಯನ್ನು ಓದಿ     |     Download

Categories
ಇತಿಹಾಸ ಕರ್ನಾಟಕ ಇತಿಹಾಸ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ಸಾಹಿತ್ಯ

ಮೂಡುಬಿದಿರೆಯ ವೈಶಿಷ್ಟ್ಯ

ಕೃತಿ: ಮೂಡುಬಿದಿರೆಯ ವೈಶಿಷ್ಟ್ಯ

ಲೇಖಕರು: ಪ್ರೊ. ಎಸ್.ಪಿ. ಅಜಿತ ಪ್ರಸಾದ್

ಕೃತಿಯನ್ನು ಓದಿ     |     Download

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತ

ಕೃತಿ – ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತ

ಲೇಖಕರು – ಪ್ರೊ.ನಾ. ಗೀತಾಚಾರ್ಯ

ಕೃತಿಯನ್ನು ಓದಿ     |     Download

Categories
ಕಾದಂಬರಿ - ಕಥಾಸಾಹಿತ್ಯ ಕಾವ್ಯ - ವಚನ ಸಾಹಿತ್ಯ

ತರೀಕೆರೆ ಪಾಳೆಯಗಾರ ಸರ್ಜಪ್ಪನಾಯಕನ ಕಥನ ಕಾವ್ಯ

ಕೃತಿ:ತರೀಕೆರೆ ಪಾಳೆಯಗಾರ ಸರ್ಜಪ್ಪನಾಯಕನ ಕಥನ ಕಾವ್ಯ
ಲೇಖಕರು: ಕನ್ನಡ ವಿಶ್ವವಿದ್ಯಾಲಯ ಡಾ. ವಿರೂಪಾಕ್ಷಿ ಪೂಜಾರಹಳ್ಳಿ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಅಶ್ವಘೋಷನ ವಜ್ರಸೂಚಿ ಒಂದು ಧಾರ್ಮಿಕ V/S ವೈಚಾರಿಕ ಸಮೀಕ್ಷೆ

ಕೃತಿ:ಅಶ್ವಘೋಷನ ವಜ್ರಸೂಚಿ ಒಂದು ಧಾರ್ಮಿಕ V/S ವೈಚಾರಿಕ ಸಮೀಕ್ಷೆ:

ಲೇಖಕರು: ಬಿ. ವಿ. ವೀರಭದ್ರಪ್ಪ

ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ಸಾಹಿತ್ಯ

ಕುಮ್ಮಟದುರ್ಗದ ಅರಸರು

ಕೃತಿ-ಕುಮ್ಮಟದುರ್ಗದ ಅರಸರು
ಲೇಖಕರು-ಸಿ. ಮಹದೇವ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಶಂಬಾ ಜೋಶಿ ಭಾಷಿಕ ವಿವೇಚನೆ

ಕೃತಿ-ಶಂಬಾ ಜೋಶಿ ಭಾಷಿಕ ವಿವೇಚನೆ
ಕುಲಪತಿ-ಡಾ. ಎ. ಮುರಿಗೆಪ್ಪ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಮುದಾಯ ಸಾಹಿತ್ಯ ಸಾಹಿತ್ಯ

ಜೈನ ಟೀಕಾಸಾಹಿತ್ಯ

ಜೈನ ಸಾಹಿತ್ಯ – ಸಂಸ್ಕೃತಿಯು ಅಧ್ಯಯನ ದೃಷ್ಟಿಯಿಂದ ಮಹತ್ವವಾದದ್ದು ಮತ್ತು ವಿವಿಧ ಪ್ರಕಾರಗಳಲ್ಲಿ ದೊರೆಯುವಂತದ್ದು. ಆರಂಭಿಕ ಕನ್ನಡ ಜೈನ ಕವಿಗಳ ಕಾವ್ಯಗಳು, ಪ್ರಾಚೀನ ಧಾರ್ಮಿಕ ಜೈನ ಕ್ಷೇತ್ರಗಳು, ಬಸದಿಗಳು ಮುಂತಾದ ಬಹು ನೆಲೆಯಲ್ಲಿ ಜೈನ ಸಂಸ್ಕೃತಿಯನ್ನು ಗ್ರಹಿಸಬಹುದಾಗಿದೆ. ಅಂಥ ಗ್ರಹಿಕೆಯ ಮೊದಲ ಪ್ರಯತ್ನವೆಂಬಂತೆ ಅವರ ಶಾಸ್ತ್ರ ಸಾಹಿತ್ಯ ಪ್ರಕಾರವಾದ ಟೀಕೆಗಳನ್ನು ಈ ಕೃತಿ ಪರಿಚಯಿಸುತ್ತದೆ.

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಮುದಾಯ ಸಾಹಿತ್ಯ ಸಾಹಿತ್ಯ ಸಾಹಿತ್ಯ ವಿಮರ್ಶೆ

ಉಲಿವ ಮರ

ಕೃತಿ:ಉಲಿವ ಮರ
ಲೇಖಕರು:
ಕೃತಿಯನ್ನು ಓದಿ

Categories
ಜನಪದ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ತುಳುವ ಜಾನಪದ ಲೋಕ ಕೆಲವು ನೋಟಗಳು: ಹೊನ್ನಿನ ವರುಷಕ್ಕೆ ಹೊನ್ನಾರುವಿನ ಹರುಷ

ಕೃತಿ-ತುಳುವ ಜಾನಪದ ಲೋಕ ಕೆಲವು ನೋಟಗಳು
ಕುಲಪತಿ-ಬಿ.ಎ. ವಿವೇಕ ರೈ
ಸರಣಿ- ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಭಾಷಾ ಸಾಹಿತ್ಯ ಮತ್ತು ವ್ಯಾಕರಣ ಸಾಹಿತ್ಯ

ಕನ್ನಡ ಕ್ರಿಯಾರಚನೆ-ಬಗೆಗಳು

ಕೃತಿ:ಕನ್ನಡ ಕ್ರಿಯಾರಚನೆ
ಲೇಖಕರು:ಡಾ. ಸಾಂಬಮೂರ್ತಿ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಮುದಾಯ ಸಾಹಿತ್ಯ ಸಾಹಿತ್ಯ

ಉದ್ಧರಣೆ ಸಾಹಿತ್ಯ

ಕೃತಿ:ಉದ್ಧರಣೆ ಸಾಹಿತ್ಯ
ಲೀಖಕರು:ಡಾ. ಕೆ.ರವೀಂದ್ರನಾಥ
ಕೃತಿಯನ್ನು ಓದಿ

Categories
ಭಾಷಾ ಸಾಹಿತ್ಯ ಮತ್ತು ವ್ಯಾಕರಣ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಶೈಲಿವಿಜ್ಞಾನ ಮತ್ತು ಜ್ಞಾನಶಾಸ್ತ್ರ

ಕೃತಿ:ಶೈಲಿವಿಜ್ಞಾನ ಮತ್ತು ಜ್ಞಾನಶಾಸ್ತ್ರ

ಲೇಖಕರು : ಡಾ. ಬಿ. ಬಿ. ರಾಜಪುರೋಹಿತ

ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಜನಪದ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಹಿತ್ಯ

ಗೊಲ್ಲರ ಇತಿಹಾಸ ಕಥನ

ಕೃತಿ:ಗೊಲ್ಲರ ಇತಿಹಾಸ ಕಥನ
ಲೇಖಕರು ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಜನಪದ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಹಿತ್ಯ

ಮಲೆಯಮಾದಯ್ಯನ ಸಾಂಸ್ಕೃತಿಕ ಚರಿತ್ರೆ

ಕೃತಿ-ಮಲೆಯಮಾದಯ್ಯನ ಸಾಂಸ್ಕೃತಿಕ ಚರಿತ್ರೆ
ಕುಲಪತಿ-ಡಾ.ಎ.ಮುರಿಗೆಪ್ಪ
ಸರಣಿ- ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಜನಪದ ಮತ್ತು ಪ್ರದರ್ಶನ ಕಲೆ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಉತ್ತರ ಕರ್ನಾಟಕ ರಂಗಭೂಮಿ

ಕೃತಿ:ಉತ್ತರ ಕರ್ನಾಟಕ ರಂಗಭೂಮಿ
ಲೇಖಕರು: ಎನ್ಕೆ
ಕೃತಿಯನ್ನು ಓದಿ

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಸಿ.ಜಿ.ಕೆ.

ಕೃತಿ: ಸಿ.ಜಿ.ಕೆ.

ಲೇಖಕರು: ಡಾ. ಎಲ್. ಹನುಮಂತಯ್ಯ

ಕೃತಿಯನ್ನು ಓದಿ     |     Download

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ತಂತ್ರಶಾಸ್ತ್ರ

ಕೃತಿ:ತಂತ್ರಶಾಸ್ತ್ರ
ಲೇಖಕರು: – ಡಾ. ಜಿ.ಬಿ. ಹರೀಶ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಜನಪದ ಜನಪದ ಮತ್ತು ಪ್ರದರ್ಶನ ಕಲೆ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಹಿತ್ಯ

ಸಣ್ಣಾಟಗಳು

ಕೃತಿ:ಸಣ್ಣಾಟಗಳು
ಲೇಖಕರು: ಡಾ. ಗಂಗಾಧರ ದೈವಜ್ಞ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಕೃತಿಶೀಲ: ಕುವೆಂಪು ಕಥನ

ಕೃತಿ:ಕೃತಿಶೀಲ: ಕುವೆಂಪು ಕಥನ
ಲೇಖಕರು:
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಕೃತಿಶೀಲ: ಕೃತಿ ಕಥನ

ಕೃತಿ:ಕೃತಿಶೀಲ: ಕೃತಿ ಕಥನ
ಲೇಖಕರು
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಕೃತಿಶೀಲ: ಸಾಹಿತ್ಯ ಕಥನ

ಕೃತಿ:ಕೃತಿಶೀಲ: ಸಾಹಿತ್ಯ ಕಥನ
ಲೇಖಕರು:
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಬಾಚಿಕಾಯಕದ ಬಸವಯ್ಯ

ಕೃತಿ:ಬಾಚಿಕಾಯಕದ ಬಸವಯ್ಯ
ಲೇಖಕರು: ಡಾ.ವೀರೇಶಬಡಿಗೇರ
ಕೃತಿಯನ್ನು ಓದಿ

Categories
ಇತಿಹಾಸ ಭಾರತದ ಇತಿಹಾಸ ಭಾಷಾ ಸಾಹಿತ್ಯ ಮತ್ತು ವ್ಯಾಕರಣ ವ್ಯಕ್ತಿಸಾಹಿತ್ಯ ಸಾಹಿತ್ಯ

ದ್ರಾವಿಡ ಅಧ್ಯಯನಕಾರರು: Bibliography

ಕೃತಿ:ದ್ರಾವಿಡ ಅಧ್ಯಯನಕಾರರು
ಲೇಖಕರು: ಡಾ. ಸುಚೇತಾ ನವರತ್ನ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ವ್ಯಕ್ತಿಸಾಹಿತ್ಯ ಸಾಹಿತ್ಯ ಸಾಹಿತ್ಯ ವಿಮರ್ಶೆ

ತುದಿ ಇರದ ದಾರಿ

ಕೃತಿ:ತುದಿ ಇರದ ದಾರಿ
ಲೇಖಕರು:ಚಂದ್ರಶೇಖರ್ ಕಂಬಾರ
ಕೃತಿಯನ್ನು ಓದಿ

Categories
ಕಾವ್ಯ - ವಚನ ಜನಪದ ಸಾಹಿತ್ಯ ಸಾಹಿತ್ಯ

ಮಾರ್ವಾಡಿ ಶೇಠ್‌

ಕೃತಿ-ಮಾರ್ವಾಡಿ ಶೇಠ್
ಸರಣಿ-ಕಾವ್ಯ – ವಚನ, ಜನಪದ ಸಾಹಿತ್ಯ, ಸಾಹಿತ್ಯ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಪರಿಕಲ್ಪನೆ: ಹೊನ್ನಿನ ವರುಷಕ್ಕೆ ಹೊನ್ನಾರುವಿನ ಹರುಷ

ಕೃತಿ:ಪರಿಕಲ್ಪನೆ
ಲೇಖಕರು ಡಾ. ಎಂ. ಎಂ. ಕಲಬುರ್ಗಿ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಶಿಲ್ಪಕಲೆ ಸಮುದಾಯ ಸಾಹಿತ್ಯ ಸಾಹಿತ್ಯ

ಹಾಡುವಳ್ಳಿ

ಕೃತಿ:ಹಾಡುವಳ್ಳಿ

ಲೇಖಕರು: ಡಾ. ಕೆ.ಜಿ. ಭಟ್ಸೂರಿ

ಕೃತಿಯನ್ನು ಓದಿ     |     Download

Categories
ಇತಿಹಾಸ ಕರ್ನಾಟಕ ಇತಿಹಾಸ ಜನಪದ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಹಿತ್ಯ

ಕಪ್ಪರ ಪಡಿಯಮ್ಮ

ಕೃತಿ:ಕಪ್ಪರ ಪಡಿಯಮ್ಮ
ಲೇಖಕರು: ಕನ್ನಡ ವಿಶ್ವವಿದ್ಯಾಲಯ ಶ್ರೀಮತಿ ರಾಜೇಶ್ವರಿ ವೀ. ಶೀಲವಂತ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ವ್ಯಕ್ತಿಸಾಹಿತ್ಯ ಸಾಹಿತ್ಯ

ಕನ್ನಡ ಪತ್ರಿಕೋದ್ಯಮಕ್ಕೆ ರೆ. ಹೆರ್ಮನ್‌ ಮೋಗ್ಲಿಂಗ್‌ ಕೊಡುಗೆ

ಕೃತಿ:ಕನ್ನಡ ಪತ್ರಿಕೋದ್ಯಮಕ್ಕೆ ರೆ. ಹೆರ್ಮನ್‌ ಮೋಗ್ಲಿಂಗ್‌ ಕೊಡುಗೆ
ಲೇಖಕರು: ಕನ್ನಡ ವಿಶ್ವವಿದ್ಯಾಲಯ, ಶ್ರೀ ಜೈನುಲ್ಲಾ ಬಳ್ಳಾರಿ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಸಮುದಾಯ ಸಾಹಿತ್ಯ ಸಾಹಿತ್ಯ

ಕಾಮಗೇತಿ ವಂಶಜರ ಚರಿತ್ರೆ

ಕೃತಿ: ಕಾಮಗೇತಿ ವಂಶಜರ ಚರಿತ್ರೆ

ಸಂಪಾದಕರು: ಡಾ.ವಿರೂಪಾಕ್ಷಿ ಪೂಜಾರಹಳ್ಳಿ

ಕೃತಿಯನ್ನು ಓದಿ

Categories
ಭಾಷಾ ಸಾಹಿತ್ಯ ಮತ್ತು ವ್ಯಾಕರಣ ಸಾಹಿತ್ಯ

ಕನ್ನಡ ನಿಘಂಟು ರಚನೆ

ಕೃತಿ:ಕನ್ನಡ ನಿಘಂಟು ರಚನೆ
ಲೇಖಕರು:
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ರಕ್ತಿ-ರೂಪಣೆ

ಕೃತಿ:ರಕ್ತಿ-ರೂಪಣೆ
ಲೇಖಕರು:
ಕೃತಿಯನ್ನು ಓದಿ

Categories
ಕಾವ್ಯ - ವಚನ ಸಾಹಿತ್ಯ

ಬಾಲರಾಮನ ಸಾಂಗತ್ಯ

ಕೃತಿ-ಬಾಲರಾಮನ ಸಾಂಗತ್ಯ
ಕುಲಪತಿ-ಬಿ.ಎ. ವಿವೇಕ ರೈ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಭಾಷಾ ಸಾಹಿತ್ಯ ಮತ್ತು ವ್ಯಾಕರಣ ಸಾಹಿತ್ಯ

ಕನ್ನಡ ಮನಸು

ಕೃತಿ – ಕನ್ನಡ ಮನಸು

ಲೇಖಕರು – ಡಾ. ರಹಮತ್‌ ತರೀಕೆರೆ

ಕೃತಿಯನ್ನು ಓದಿ     |     Download

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಯಶೋಧರ ಚರಿತೆ ಮತ್ತು ಅಭಿಜಾತ ಪರಂಪರೆ

ಕೃತಿ:ಯಶೋಧರ ಚರಿತೆ ಮತ್ತು ಅಭಿಜಾತ ಪರಂಪರೆ
ಲೇಖಕರು ಡಾ. ಕರೀಗೌಡ ಚೀಚನಹಳ್ಳಿ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಕಲೆ ಮತ್ತು ಮನರಂಜನೆ ಜನಪದ ಮತ್ತು ಪ್ರದರ್ಶನ ಕಲೆ ಜನಪದ ಸಾಹಿತ್ಯ ಸಾಹಿತ್ಯ

ಜನಪದ ಸಾಹಿತ್ಯಕ್ಕೆ ವಿಜಾಪುರ ಜಿಲ್ಲೆಯ ಕೊಡುಗೆ

ಕೃತಿ: ಜನಪದ ಸಾಹಿತ್ಯಕ್ಕೆ ವಿಜಾಪುರ ಜಿಲ್ಲೆಯ ಕೊಡುಗೆ

ಲೇಖಕರು: ಡಾ. ಹರಿಲಾಲ ಪವಾರ

ಕೃತಿಯನ್ನು ಓದಿ     |     Download

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ದಲಿತ ಸಾಹಿತಿ ಕುಮಾರ ಕಕ್ಕಯ್ಯ ಪೋಳ

ಕೃತಿ:ದಲಿತ ಸಾಹಿತಿ ಕುಮಾರ ಕಕ್ಕಯ್ಯ ಪೋಳ
ಲೇಖಕರು: ಡಾ.ಎಚ್.ಟಿ. ಪೋತೆ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಮುದಾಯ ಸಾಹಿತ್ಯ ಸಾಹಿತ್ಯ

ಪುರಂದರ ಸಾಹಿತ್ಯ ಅಧ್ಯಯನ

ಕೃತಿ-ಪುರಂದರ ಸಾಹಿತ್ಯ ಅಧ್ಯಯನ
ಸಂಪಾದಕರು-ಡಾ. ಅಮರೇಶ ನುಗಡೋಣಿ
ಸರಣಿ- ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಕಾದಂಬರಿ - ಕಥಾಸಾಹಿತ್ಯ ಕಾವ್ಯ - ವಚನ ಸಾಹಿತ್ಯ

ಕನ್ನೀರಾಂಬೆಯ ಕಥೆ

ಕೃತಿ – ಕನ್ನೀರಾಂಬೆಯ ಕಥೆ

ಸಂಪಾದನೆ – ಪ್ರೊ. ಎಂ. ಧ್ರುವನಾರಾಯಣ

ಕೃತಿಯನ್ನು ಓದಿ     |     Download

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಮುದಾಯ ಸಾಹಿತ್ಯ ಸಾಹಿತ್ಯ

ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು

ಕೃತಿ:ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು
ಸಂಪಾದಕರು:ಡಾ. ಎನ್. ಚಿನ್ನಸ್ವಾಮಿ ಸೋಸಲೆ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ

ಬಸವನ ಬಾಗೇವಾಡಿ

ಕೃತಿ:ಬಸವನ ಬಾಗೇವಾಡಿ: ಅನುಬಂಧಗಳು
ಲೇಖಕರು:
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಜಾನಪದ ಶೋಧ

ಕೃತಿ:ಜಾನಪದ ಶೋಧ
ಲೇಖಕರು: ಹ. ಕ. ರಾಜೇಗೌಡ

ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಹಣತೆಗೆ ಹನಿ ಎಣ್ಣೆ

ಕೃತಿ:ಹಣತೆಗೆ ಹನಿ ಎಣ್ಣೆ

ಲೇಖಕರು: ಡಾ. ತಾಳ್ತಜೆ ವಸಂತಕುಮಾರ

ಕೃತಿಯನ್ನು ಓದಿ     |     ಕೃತಿಯನ್ನು ಓದಿ

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ವೈ ನಾಗೇಶ ಶಾಸ್ತ್ರಿಗಳು

ಕೃತಿ:ವೈ ನಾಗೇಶ ಶಾಸ್ತ್ರಿಗಳು
ಲೇಖಕರು: ಕನ್ನಡ ವಿಶ್ವವಿದ್ಯಾಲಯ, ಡಾ.ಮೃತ್ಯುಜಯ ರುಮಾಲೆ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಚಿತ್ರಕಲೆ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ಸಾಹಿತ್ಯ

ಬಳ್ಳಾರಿ ಜಿಲ್ಲೆಯ ಚಿತ್ರಕಲೆ

ಕೃತಿ:ಬಳ್ಳಾರಿ ಜಿಲ್ಲೆಯ ಚಿತ್ರಕಲೆ
ಲೇಖಕರು: ಡಾ. ಎಚ್. ಈ. ಬಸವರಾಜಪ್ಪ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ವ್ಯಕ್ತಿಸಾಹಿತ್ಯ ಸಾಹಿತ್ಯ

ನಾಗಾರ್ಜುನನ ಮಧ್ಯಮಮಾರ್ಗ

ಕೃತಿ:ನಾಗಾರ್ಜುನನ ಮಧ್ಯಮಮಾರ್ಗ
ಲೇಖಕರು: ಶ್ರೀ ಎಸ್. ನಟರಾಜ ಬೂದಾಳು
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಶೂನ್ಯ ಸಂಪಾದನೆ ಪ್ರಸ್ತುತ ಸವಾಲುಗಳು

ಕೃತಿ:ಶೂನ್ಯ ಸಂಪಾದನೆ ಪ್ರಸ್ತುತ ಸವಾಲುಗಳು
ಲೇಖಕರು: ಡಾ. ಬಸವರಾಜ ಸಬರದ
ಕೃತಿಯನ್ನು ಓದಿ

Categories
ಮಕ್ಕಳ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಇತ್ತೀಚಿನ ಒಲವುಗಳು

ಕೃತಿ:ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಇತ್ತೀಚಿನ ಒಲವುಗಳು
ಲೇಖಕರು: ಕನ್ನಡ ವಿಶ್ವವಿದ್ಯಾಲಯ ಶ್ರೀ ಆನಂದ ಪಾಟೀಲ
ಕೃತಿಯನ್ನು ಓದಿ

Categories
ನಾಟಕ-ರಂಗಭೂಮಿ ಸಾಹಿತ್ಯ

ಕೊಣ್ಣೂರ ನಾಟಕ ಕಂಪನಿ: ಕಲಾವಿದ-ಸಾಹಿತಿಗಳು ಕಂಡಂತೆ

ಕೃತಿ:ಕೊಣ್ಣೂರ ನಾಟಕ ಕಂಪನಿ
ಲೇಖಕರು: ಡಾ. ರಾಮಕೃಷ್ಣ ಮರಾಠೆ
ಕೃತಿಯನ್ನು ಓದಿ

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಶ್ರಾವಣದ ಕವಿ ಬೇಂದ್ರೆ

ಕೃತಿ:ಶ್ರಾವಣದ ಕವಿ ಬೇಂದ್ರೆ
ಲೇಖಕರು: ಕನ್ನಡ ವಿಶ್ವವಿದ್ಯಾಲಯ ಡಾ.ಕೃಷ್ಣಕಟ್ಟಿ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಜನಪದ ಜನಪದ ಮತ್ತು ಪ್ರದರ್ಶನ ಕಲೆ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಹಿತ್ಯ

ಜನ ಜಾನಪದ

ಕೃತಿ:ಜನ ಜಾನಪದ
ಲೇಖಕರು: ಕಲೆ ಮತ್ತು ಮನರಂಜನೆ, ಜನಪದ, ಜನಪದ ಮತ್ತು ಪ್ರದರ್ಶನ ಕಲೆ, ವಿಶ್ಲೇಷಣೆ ಮತ್ತು ಸಂಶೋಧನೆ, ಸಂಸ್ಕೃತಿ-ಪರಂಪರೆ, ಸಾಹಿತ್ಯ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಜನಪದ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಹಿತ್ಯ

ಪೆಣ್ಬುಯ್ಯಲ್

ಕೃತಿ:ಪೆಣ್ಬುಯ್ಯಲ್
ಲೇಖಕರು : ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಜನಪದ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಹಿತ್ಯ

ಹೊಸೂರಮ್ಮ

ಕೃತಿ:ಹೊಸೂರಮ್ಮ

ಲೇಖಕರು: ಡಾ. ತಾರಿಹಳ್ಳಿ ಹನುಮಂತಪ್ಪ

ಕೃತಿಯನ್ನು ಓದಿ     |     Download

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಬೇವೂರು ಬಾದಶಹ

ಕೃತಿ-ಬೇವೂರು ಬಾದಶಹ
ಸರಣಿ-ವ್ಯಕ್ತಿಸಾಹಿತ್ಯ, ಸಾಹಿತ್ಯ
ಕೃತಿಯನ್ನು ಓದಿ

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ಕನ್ನಡ ಪೌರಾಣಿಕ ಕಾದಂಬರಿಕಾರರು

ಕೃತಿ:ಕನ್ನಡ ಪೌರಾಣಿಕ ಕಾದಂಬರಿಕಾರರು

ಲೇಖಕರು: ಡಾ. ಜೆ.ಕೆ. ರಮೇಶ

ಕೃತಿಯನ್ನು ಓದಿ     |     Download

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಸಿರಿಗೌರಿ ಚೆಂಗಳಕವ್ವ

ಕೃತಿ – ಸಿರಿಗೌರಿ ಚೆಂಗಳಕವ್ವ

ಕೃತಿಯನ್ನು ಓದಿ     |     Download

Categories
ಕಾವ್ಯ - ವಚನ ಸಮುದಾಯ ಸಾಹಿತ್ಯ ಸಾಹಿತ್ಯ

ವಿಠ್ಠಲ ಸಂಪ್ರದಾಯ

ಕೃತಿ-ವಿಠ್ಠಲ ಸಂಪ್ರದಾಯ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಚಿತ್ರಕಲೆ ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಚಿತ್ರಕಲಾವಿದ ಡಾ. ಎಸ್.ಎಮ್. ಪಂಡಿತ್

ಕೃತಿ:ಚಿತ್ರಕಲಾವಿದ ಡಾ. ಎಸ್.ಎಮ್. ಪಂಡಿತ್
ಲೇಖಕರು: ಕನ್ನಡ ವಿಶ್ವವಿದ್ಯಾಲಯ ಡಾ. ಮೋಹನ್ ರಾವ್ ಬಿ. ಪಾಂಚಾಳ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ವ್ಯಕ್ತಿಸಾಹಿತ್ಯ ಸಂಸ್ಕೃತಿ-ಪರಂಪರೆ ಸಾಹಿತ್ಯ

ವ್ಯಕ್ತಿಸಾಹಿತ್ಯ – ನಮ್ಮ ನಡುವಿನ ತೇಜಸ್ವಿ

ಕೃತಿ:ನಮ್ಮ ನಡುವಿನ ತೇಜಸ್ವಿ
ಲೇಖಕರು: ಪ್ರಸಾದ್ ರಕ್ಷಿದಿ
ಕೃತಿಯನ್ನು ಓದಿ

Categories
ಮಕ್ಕಳ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಕನ್ನಡದಲ್ಲಿ ಮಕ್ಕಳ ಸಾಹಿತ್ಯ

ಕೃತಿ:ಕನ್ನಡದಲ್ಲಿ ಮಕ್ಕಳ ಸಾಹಿತ್ಯ
ಲೇಖಕರು: ಡಾ. ಬೆಳವಾಡಿ ಮಂಜುನಾಥ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ರಾಮಾಯಣ : ಮರುದರ್ಶನ

ಕೃತಿ:ರಾಮಾಯಣ
ಲೇಖಕರು: ಪ್ರೊ. ಮಂಜುನಾಥ ಬೇವಿನಕಟ್ಟಿ
ಕೃತಿಯನ್ನು ಓದಿ

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಬಿ. ಶಿವಮೂರ್ತಿಶಾಸ್ತ್ರಿಗಳು

ಕೃತಿ: ಬಿ. ಶಿವಮೂರ್ತಿಶಾಸ್ತ್ರಿಗಳು

ಲೇಖಕರು: ಪ್ರೊ. ಎನ್. ಬಸವಾರಾಧ್ಯ

ಕೃತಿಯನ್ನು ಓದಿ     |     Download

Categories
ಸಮುದಾಯ ಸಾಹಿತ್ಯ ಸಾಹಿತ್ಯ

ಲಜ್ಜಾಗೌರಿ

ಕೃತಿ: ಲಜ್ಜಾಗೌರಿ

ಲೇಖಕರು: ಡಾ. ವಿಠಲರಾವ್ ಗಾಯಕ್ವಾಡ್

ಕೃತಿಯನ್ನು ಓದಿ     |     Download

Categories
ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಶ್ರೀಪಾದರಾಜರು

ಕೃತಿ – ಶ್ರೀಪಾದರಾಜರು ಜೀವನ ಮತ್ತು ಕೃತಿಗಳು

ಲೇಖಕರು – ಡಾ.ಟಿ.ಎನ್‌. ನಾಗರತ್ನ

ಕೃತಿಯನ್ನು ಓದಿ     |     Download

Categories
ಭಾಷಾ ಸಾಹಿತ್ಯ ಮತ್ತು ವ್ಯಾಕರಣ ಸಾಹಿತ್ಯ

ನುಡಿದೀಪ

ಕೃತಿ:ನುಡಿದೀಪ
ಲೇಖಕರು: ಡಾ. ಟಿ.ಆರ್. ಚಂದ್ರಶೇಖರ
ಪಠ್ಯಪುಸ್ತಕ ರಚನಾಕೇಂದ್ರ
ಕೃತಿಯನ್ನು ಓದಿ

Categories
ಕಾವ್ಯ - ವಚನ ಸಾಹಿತ್ಯ

ಅಯ್ಯಪ್ಪ ಕವಿಯ ಚಿದಾನಂದಾವಧೂತ ಚಾರಿತ್ರ

ಕೃತಿ-ಅಯ್ಯಪ್ಪ ಕವಿಯ ಚಿದಾನಂದಾವಧೂತ ಚಾರಿತ್ರ
ಕುಲಪತಿಗಳು-ಬಿ.ಎ. ವಿವೇಕ ರೈ
ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಕನ್ನಡ ಭಾಷಾ ಸಾಹಿತ್ಯ ಮತ್ತು ವ್ಯಾಕರಣ ಸಾಹಿತ್ಯ

ದಿನದಿನ ೨

ಕೃತಿ – ದಿನದಿನ ೨

ಸಂಪಾದನೆ – ಡಾ. ಸಾಂಬಮೂರ್ತಿ

ಕೃತಿಯನ್ನು ಓದಿ     |     Download

Categories
ಇತಿಹಾಸ ಮಾನವಶಾಸ್ತ್ರ ವಿಶ್ಲೇಷಣೆ ಮತ್ತು ಸಂಶೋಧನೆ ವಿಶ್ವ ಇತಿಹಾಸ ಸಮಾಜ ಶಾಸ್ತ್ರ

ನಿರ್ವಸಾಹತೀಕರಣ ಎಂ‌ದರೇನು?

ಕೃತಿ:ನಿರ್ವಸಾಹತೀಕರಣ ಎಂ‌ದರೇನು?
ಲೇಖಕರು: ಕನ್ನಡ ವಿಶ್ವವಿದ್ಯಾಲಯ ಆರ್. ತಾರಿಣಿ ಶುಭದಾಯಿನಿ
ಕೃತಿಯನ್ನು ಓದಿ

Categories
ಸಮಗ್ರ ಸಾಹಿತ್ಯ ಸಾಹಿತ್ಯ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ

ಕೃತಿ-ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ
ಲೇಖಕರು-ಸಿದ್ಧ ಗಂಗಮ್ಮ
ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಕೃಷಿ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು ಜನಪದ ಸಾಹಿತ್ಯ ನಿಸರ್ಗ ಪರಿಸರ ಸಾಹಿತ್ಯ

ಕಾವೇರಿ ಜಾನಪದ: ಮರೆಯಲಾಗದ ಮನಸ್ಸುಗಳೊಂದಿಗೆ

ಕೃತಿ-ಕಾವೇರಿ ಜಾನಪದ
ಲೇಖಕರು-ಡಾ. ಹೆಬ್ಬಾಲೆ ಕೆ. ನಾಗೇಶ್
ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಜನಪದ ಸಾಹಿತ್ಯ ವಿಶ್ಲೇಷಣೆ ಮತ್ತು ಸಂಶೋಧನೆ ಸಮುದಾಯ ಸಾಹಿತ್ಯ ಸಾಹಿತ್ಯ

ಸುಳಿ

ಕೃತಿ – ಸುಳಿ

ಜನಪದ ಸಾಹಿತ್ಯ

ಕೃತಿಯನ್ನು ಓದಿ     |     Download

Categories
ಕಾವ್ಯ - ವಚನ ಸಾಹಿತ್ಯ

ಹರಿದಾಸರ ಪಾಂಡುರಂಗ ವಿಠಲ

ಕೃತಿ – ಹರಿದಾಸರ ಪಾಂಡುರಂಗ ವಿಠಲ

ಸಂಪಾದನೆ – ಪ್ರೊ. ಎ.ವಿ. ನಾವಡ

ಕೃತಿಯನ್ನು ಓದಿ     |     Download

Categories
ಇತಿಹಾಸ ಕರ್ನಾಟಕ ಇತಿಹಾಸ ವ್ಯಕ್ತಿಸಾಹಿತ್ಯ ಸಮಾಜ ಮತ್ತು ಅಭಿವೃದ್ಧಿ ಸಾಮಾಜಿಕ ಚಳುವಳಿಗಳು ಸಾಹಿತ್ಯ

ವ್ಯಕ್ತಿಸಾಹಿತ್ಯ – ಸಿಂಧೂರ ಲಕ್ಷ್ಮಣ

ಕೃತಿ: ಸಿಂಧೂರ ಲಕ್ಷ್ಮಣ

ಲೇಖಕರು: ಶ್ರೀ ಜಿ.ಎಸ್.ಉಜನಪ್ಪ

ಕೃತಿಯನ್ನು ಓದಿ     |     Download

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಗುಂಡಬ್ರಹ್ಮಯ್ಯಗಳ ಸಾಹಿತ್ಯ

ಕೃತಿ-ಗುಂಡಬ್ರಹ್ಮಯ್ಯಗಳ ಸಾಹಿತ್ಯ
ಕುಲಪತಿ-ವಿವೇಕ ರೈ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಸಮಗ್ರ ಸಾಹಿತ್ಯ ಸಾಹಿತ್ಯ

ಡಿ. ಗೋವಿಂದದಾಸ್ ಅವರ ಸಮಗ್ರ ಸಾಹಿತ್ಯ

ಕೃತಿ-ಡಿ. ಗೋವಿಂದದಾಸ್ ಅವರ ಸಮಗ್ರ ಸಾಹಿತ್ಯ
ಲೇಖಕರು-
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಜನಪದ ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಜಮಖಂಡಿ ಅಪ್ಪಾಲಾಲ ನದ್ಧಾಫ

ಕೃತಿ:ಜಮಖಂಡಿ ಅಪ್ಪಾಲಾಲ ನದ್ಧಾಫ
ಲೇಖಕರುಅರ್ಜುನ ತಾ. ಕೋರಟಕರ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಜನಪದ ಗಾಯಕ ಬಾಳಪ್ಪ ಹುಕ್ಕೇರಿ

ಕೃತಿ-ಜನಪದ ಗಾಯಕ ಬಾಳಪ್ಪ ಹುಕ್ಕೇರಿ
ಕುಲಪತಿಗಳು-ಡಾ. ಎ. ಮರಿಗೆಪ್ಪ
ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ವ್ಯಕ್ತಿಸಾಹಿತ್ಯ ಸಾಹಿತ್ಯ ಸಾಹಿತ್ಯ ವಿಮರ್ಶೆ

ಕುವೆಂಪು : ಮಹಿಳಾ ಮಂಥನ

ಕೃತಿ:ಕುವೆಂಪು : ಮಹಿಳಾ ಮಂಥನ
ಲೇಖಕರು: ಡಾ. ಹಿ. ಚಿ. ಬೋರಲಿಂಗಯ್ಯ
ಕೃತಿಯನ್ನು ಓದಿ

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ ಸಾಹಿತ್ಯ ವಿಮರ್ಶೆ

ಬೊಂಬಾಳ

ಕೃತಿ:ಬೊಂಬಾಳ
ಲೇಖಕರು: ಕಮಲಾಹಂಪನಾ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಕಲೆ ಮತ್ತು ಮನರಂಜನೆ ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ ಶಿಲ್ಪಕಲೆ ಸಾಹಿತ್ಯ

ನಾಗಮಂಗಲ

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಚಕ್ರತೀರ್ಥರ ತೂಬು
ಚಕ್ರತೀರ್ಥರ ತೂಬು

ನಕ್ಷೆಯಲ್ಲಿರುವ ದೇವಾಲಯಗಳು

೧. ಪಡುವಳ ಆಂಜನೇಯ

೨. ಲಕ್ಷ್ಮೀ

೩. ಮಾರಮ್ಮ

೪. ಬಡಗುಡಮ್ಮ

೫. ಲಕ್ಷ್ಮೀ

೬. ಯೋಗನರಸಿಂಹ ಸ್ವಾಮಿ

೭. ಸೌಮ್ಯ ಕೇಶವ

೮. ಮಾರಮ್ಮ

೯. ಕೋದಂಡರಾಮ

೧೦. ವೀರಭದ್ರ

೧೧. ನಗರೇಶ್ವರ

೧೨. ಹಳಿಯೂರಮ್ಮ

೧೩. ಸುಗ್ರೀವ

೧೪. ಮಸೀದಿ

೧೫. ಛತ್ರದ ಆಂಜನೇಯ

೧೬. ಭುವನೇಶ್ವರ

೧೭. ಕಾಳಮ್ಮ

೧೮. ಹುಲ್ಲೇಸನ ಆಂಜನೇಯ

೧೯. ವಾಸವಿ

೨೦. ಕೋಟೆ ಗಣಪತಿ

೨೧. ಬಸವೇಶ್ವರ

೨೨. ಪೇಟೆ ಬೀದಿ ಆಂಜನೇಯ

೨೩. ಆಂಜನೇಯ (ಮಾರುಕಟ್ಟೆ)

೨೪. ವೆಂಕಟರಮಣ[/fusion_builder_column][/fusion_builder_row][/fusion_builder_container]

Categories
ಜನಪದ ಸಾಹಿತ್ಯ ಬುಡಕಟ್ಟುಗಳು ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಮುದಾಯ ಸಾಹಿತ್ಯ ಸಾಹಿತ್ಯ

ಪಾಲಮ್ಮ ಮತ್ತು ಸಂಗಡಿಗರು ಹಾಡಿದ ಮ್ಯಾಸಬೇಡರ ಕಥನಗಳು

ಕೃತಿ:ಪಾಲಮ್ಮ ಮತ್ತು ಸಂಗಡಿಗರು ಹಾಡಿದ ಮ್ಯಾಸಬೇಡರ ಕಥನಗಳು
ಲೇಖಕರು: – ಪ್ರಭಾಕರ ಎ.ಎಸ್.
ಕೃತಿಯನ್ನು ಓದಿ

Categories
ಕಾದಂಬರಿ - ಕಥಾಸಾಹಿತ್ಯ ಕಾವ್ಯ - ವಚನ ಸಾಹಿತ್ಯ

ಬಾಹುಬಲಿ – ಮಧುರ ಸಂಪುಟ – ಧರ್ಮನಾಥ ಪುರಾಣಂ

ಕೃತಿ:ಬಾಹುಬಲಿ – ಮಧುರ ಸಂಪುಟ – ಧರ್ಮನಾಥ ಪುರಾಣಂ
ಲೇಖಕರು: ಪ್ರೊ. ಎನ್. ಬಸವಾರಾಧ್ಯ
ಕೃತಿಯನ್ನು ಓದಿ | Download

Categories
ಜನಪದ ಸಾಹಿತ್ಯ ಬುಡಕಟ್ಟುಗಳು ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಮುದಾಯ ಸಾಹಿತ್ಯ ಸಾಹಿತ್ಯ

ಸೋಲಿಗರು ಹಾಡಿದ ಬಿಳಿಗಿರಿ ರಂಗನ ಕಾವ್ಯ

ಕೃತಿ-ಸೋಲಿಗರು ಹಾಡಿದ ಬಿಳಿಗಿರಿ ರಂಗನ ಕಾವ್ಯ

ಲೇಖಕರು-ಡಾ. ಕೆ. ಕೇಶವನ್ ಪ್ರಸಾದ್

ಕೃತಿಯನ್ನು ಓದಿ     |     Download

Categories
ಕಾವ್ಯ - ವಚನ ಜನಪದ ಸಾಹಿತ್ಯ ಸಮುದಾಯ ಸಾಹಿತ್ಯ ಸಾಹಿತ್ಯ

ಚಾರಿತ್ರಿಕ ಲಾವಣಿಗಳು

ಕೃತಿ-ಚಾರಿತ್ರಿಕ ಲಾವಣಿಗಳು
ಕುಲಪತಿ-ಡಾ. ಎ. ಮುರಿಗೆಪ್ಪ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಜನಪದ ಸಾಹಿತ್ಯ ಬುಡಕಟ್ಟುಗಳು ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಮುದಾಯ ಸಾಹಿತ್ಯ ಸಾಹಿತ್ಯ

ಮಲೆ ಮಾದೇಶ್ವರ

ಮಾದೇಶ್ವರ ಕಾವ್ಯದ ನಾಯಕನಾದ ಮಾದಪ್ಪ ಅಥವಾ ಮಾದೇಶ್ವರ ಬಾಲ್ಯದಲ್ಲೇ ಉತ್ತರದೇಸದಿಂದ ಹೊರಟು ಗುರುಮಠಗಳಾದ ಸುತ್ತೂರು ಮತ್ತು ಕುಂತೂರಗಳಲ್ಲಿ ಪವಾಡವನ್ನು ಮೆರೆದು ತಿರಸ್ಕೃತನಾಗಿ ಕೊನೆಯಲ್ಲಿ ತನ್ನ ನೆಲೆಯನ್ನು ಕಂಡುಕೊಂಡುದು ಕರ್ನಾಟಕದ ದಕ್ಷಿಣದ ತುದಿಯ ಒಂದು ಗೊಂಡಾರಣ್ಯ ಪ್ರದೇಶದಲ್ಲಿ. ಕಾಲಾನಂತರ ಈ ಪ್ರದೇಶಲ್ಕೆ ಮಾದಪ್ಪನ ಬೆಟ್ಟ(ಮಾದೇಶ್ವರ ಬೆಟ್ಟ) ಎಂಬ ಹೆಸರೇ ಒಪ್ಪಿತವಾಯಿತು.

Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ದಾಸಸಾಹಿತ್ಯ ಭಾಷೆ

ಕೃತಿ: ದಾಸಸಾಹಿತ್ಯ ಭಾಷೆ

ಲೇಖಕರು‍: ಎಸ್.ಎಸ್.ಅಂಗಡಿ

ಕೃತಿಯನ್ನು ಓದಿ

Categories
ಜನಪದ ಸಾಹಿತ್ಯ ಬುಡಕಟ್ಟುಗಳು ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಮುದಾಯ ಸಾಹಿತ್ಯ ಸಾಹಿತ್ಯ

ಕೃಷ್ಣಗೊಲ್ಲರ ಕಥನಕಾವ್ಯಗಳು

ಕೃತಿ:ಕೃಷ್ಣಗೊಲ್ಲರ ಕಥನಕಾವ್ಯಗಳು
ಲೇಖಕರು:
ಕೃತಿಯನ್ನುಓದಿ

Categories
ಕಾದಂಬರಿ - ಕಥಾಸಾಹಿತ್ಯ ಕಾವ್ಯ - ವಚನ ಸಾಹಿತ್ಯ

ಬಂಧುವರ್ಮ ಸಂಪುಟ

ಕೃತಿ-ಬಂಧುವರ್ಮ ಸಂಪುಟ
ಸಂಪಾದಕರು-ಬಿ.ಎಸ್. ಸಣ್ಣಯ್ಯ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಕಾವ್ಯ - ವಚನ ಜನಪದ ಸಾಹಿತ್ಯ ಸಾಹಿತ್ಯ

ಅವ್ವಣೆವ್ವ ಕಾವ್ಯ

ಕೃತಿ – ಅವ್ವಣೆವ್ವ ಕಾವ್ಯ

ಕುಲಪತಿ-ಡಾ. ಎಚ್. ಜೆ. ಲಕ್ಕಪ್ಪಗೌಡ

ಕೃತಿಯನ್ನು ಓದಿ     |     Download

Categories
ಕಾದಂಬರಿ - ಕಥಾಸಾಹಿತ್ಯ ಕಾವ್ಯ - ವಚನ ಸಾಹಿತ್ಯ

ಬ್ರಹ್ಮಶಿವ – ವೃತ್ತವಿಲಾಸ ಸಂಪುಟ

ಕೃತಿ:ಬ್ರಹ್ಮಶಿವ
ಸಂಪಾದಕರು: ಟಿ.ವಿ. ವೆಂಕಟಾಚಲ ಶಾಸ್ತ್ರೀ
ಕೃತಿಯನ್ನು ಓದಿ

Categories
ಕಾದಂಬರಿ - ಕಥಾಸಾಹಿತ್ಯ ಕಾವ್ಯ - ವಚನ ಸಾಹಿತ್ಯ

ನೇಮಿಚಂದ್ರ ಸಂಪುಟ – ಲೀಲಾವತೀ ಪ್ರಬಂಧಂ, ಅರ್ಧನೇಮಿ ಪುರಾಣಂ

ಕೃತಿ:ನೇಮಿಚಂದ್ರ ಸಂಪುಟ
ಲೇಖಕರು ಕಾದಂಬರಿ – ಕಥಾಸಾಹಿತ್ಯ, ಕಾವ್ಯ – ವಚನ, ಸಾಹಿತ್ಯ
ಕೃತಿಯನ್ನು ಓದಿ

Categories
ಕಾವ್ಯ - ವಚನ ಜನಪದ ಸಾಹಿತ್ಯ ಬುಡಕಟ್ಟುಗಳು ಸಂಸ್ಕೃತಿ-ಪರಂಪರೆ ಸಮುದಾಯ ಸಾಹಿತ್ಯ ಸಾಹಿತ್ಯ

ಮಂಟೇಸ್ವಾಮಿ

ಕೃತಿ:ಮಂಟೇಸ್ವಾಮಿ
ಲೇಖಕರು: – ಪ್ರೊ.ಹಿ.ಚಿ.ಬೋರಲಿಂಗಯ್ಯ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಚಿತ್ರಕಲೆ ಜನಪದ ಕಲೆ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಜನಪದ ಕಸೂತಿ

ಕೃತಿ-ಜನಪದ ಕಸೂತಿ
ಕೃತಿಯನ್ನು ಓದಿ

Categories
ಇತಿಹಾಸ ಪುರಾತತ್ವ ಶಾಸ್ತ್ರ ಭಾರತದ ಇತಿಹಾಸ ಭಾಷಾ ಸಾಹಿತ್ಯ ಮತ್ತು ವ್ಯಾಕರಣ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ದ್ರಾವಿಡಶಾಸ್ತ್ರ

ಕೃತಿ-ದ್ರಾವಿಡಶಾಸ್ತ್ರ
ಸಂಪಾದಕರು-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ