Categories
ಬಾಲವಿಜ್ಞಾನ ಮಾಸ ಪತ್ರಿಕೆ - ನವೆಂಬರ್ ೨೦೧೦ ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ ಮ್ಯಾಗಜಿನ್‌ಗಳು ವಿಜ್ಞಾನ

ನಕ್ಷತ್ರದ ಕಾಂತಿಮಾನದ ಮೇಲೊಂದು ಕ್ಷಕಿರಣ

‘ಈ ಸಾಬೂನು ಬಳಸಿ ನಿಮ್ಮ ಮೈ ಕಾಂತಿಯನ್ನು ಹೆಚ್ಚಿಸಿಕೊಳ್ಳಿ’ಇದು ದೂರದರ್ಶನದಲ್ಲಿ ಬಂದ ಒಂದು ಜಾಹೀರಾತು. ಆಗ, ಮನಸ್ಸಿಗೆ ಮೈಕಾಂತಿಯ ವಿಚಾರಬಂತು. ಅದೇ ವಿಚಾರ ಲಹರಿ ಮುಂದುವರಿದು ನಕ್ಷತ್ರದ ಕಾಂತಿಯಲ್ಲಿ ಹೊಳೆಯಿತು. ನಕ್ಷತ್ರಗಳು ಆಕಾಶದಲ್ಲಿ ಹೊಳೆಯುತ್ತವೆ. ಅವುಗಳ ಕಾಂತಿ ಬೇರೆ ಬೇರೆ ನಕ್ಷತ್ರಗಳಿಗೆ ಬೇರೆ ಬೇರೆ. ಅದನ್ನು ಅಳೆಯಲು ‘ಕಾಂತಿ ಮಾನ’ (ಮ್ಯಾಗ್ನಿಟ್ಯೂಡ್)ವನ್ನು ಬಳಸುತ್ತಾರೆ.

ವಿಜ್ಞಾನಿ ಹಿಪಾರ್ಕಸ್ ಈ ಕಾಂತಿಮಾನದ ಬಗ್ಗೆ ವಿವರಣೆಯನ್ನು ಮೊದಲು ಕೊಟ್ಟವನು. ಗ್ರೀಕ್ ಖಗೋಲತಜ್ಞ ಹಿಪಾರ್ಕಸ್ (ಕ್ರಿ.ಪೂ. 190 – ಕ್ರಿ.ಪೂ. 120). ಇಂಗ್ಲೆಂಡಿನ ವಿಲಿಯಂ ಹರ್ಷಲ್ (1738-1822), 18ನೇ ಶತಮಾನದಲ್ಲಿ ಬೆಳಕು (ಕಾಂತಿ)ಹಾಗೂ ಕಾಂತಿಮಾನಕ್ಕೆ ಇರುವ ಕೆಳಗಿನ ಸಂಬಂಧವನ್ನು ವಿವರಿಸಿದನು.