Categories
ಅಂಕಣಗಳು ಕ್ಷಮಾ ವಿ. ಭಾನುಪ್ರಕಾಶ್ ಜೀವಶಾಸ್ತ್ರ (ಬಯಾಲಜಿ) ವಿಜ್ಞಾನ ವಿಶ್ಲೇಷಣೆ ಮತ್ತು ಸಂಶೋಧನೆ

ಅಂಕಣಗಳು – ಕ್ಷಮಾ ವಿ ಭಾನುಪ್ರಕಾಶ್

ಅಂಕಣ: ಜೀವಕೋಶ

ಲೇಖಕರು : ಕ್ಷಮಾ ವಿ ಭಾನುಪ್ರಕಾಶ್

ಕೃತಿಯನ್ನು ಓದಿ

Categories
ಅಂಕಣಗಳು ಉದಯ ಶಂಕರ ಪುರಾಣಿಕ ಅಂಕಣ ತಂತ್ರಜ್ಞಾನ ವಿಜ್ಞಾನ

ಅಂಕಣಗಳು – ಉದಯ ಶಂಕರ ಪುರಾಣಿಕ

ಅಂಕಣ : ಜ್ಞಾನ ತಂತ್ರಜ್ಞಾನ

 

ಎಲ್ಲ ಭಾಗಗಳನ್ನು ಓದಿ

Categories
ಅಂಕಣಗಳು ತಂತ್ರಜ್ಞಾನ ವಿಕ್ರಮ್

ವಿಕ್ರಮ್

ಅಂಕಣ : ತಂತ್ರಜ್ಞಾನ

ಲೇಖಕರು : ವಿಕ್ರಮ್

ಕೃತಿಯನ್ನು ಓದಿ

 

Categories
ಅಂಕಣಗಳು ಟಿ. ಎಸ್. ಗೋಪಾಲ್

ಶಿಕ್ಷಣ ಮಾಧ್ಯಮವಾಗಿ ಕನ್ನಡ

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” type=”flex”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_title hide_on_mobile=”small-visibility,medium-visibility,large-visibility” size=”1″ content_align=”center” style_type=”default”]

ಶಿಕ್ಷಣ ಮಾಧ್ಯಮವಾಗಿ ಕನ್ನಡ

[/fusion_title][fusion_tagline_box content_alignment=”left” link=”” button=”” linktarget=”_self” modal=”” button_size=”” button_type=”” button_border_radius=”” buttoncolor=”default” title=”” description=”” hide_on_mobile=”small-visibility,medium-visibility,large-visibility” class=”” id=”” backgroundcolor=”” shadow=”no” shadowopacity=”0.7″ border=”1″ bordercolor=”” highlightposition=”left” margin_top=”” margin_bottom=”” animation_type=”” animation_direction=”left” animation_speed=”0.3″ animation_offset=””]

ಗ್ರಾಮಾಂತರ ಪ್ರದೇಶದಲ್ಲಿರುವ ನಮ್ಮ ಕಾಲೇಜಿಗೆ ಪ್ರವೇಶ ಕೋರಿ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಬಹುತೇಕ ವಾಣಿಜ್ಯ ವಿಭಾಗಕ್ಕೆ ಸೇರಲು ಬಯಸಿ ಬರುವವರಾಗಿದ್ದರು. ಪ್ರೌಢಶಾಲೆಯಲ್ಲಿ ಕನ್ನಡಮಾಧ್ಯಮದಲ್ಲಿ ಅಭ್ಯಾಸಮಾಡಿ ಕಡಿಮೆ ಅಂಕ ಗಳಿಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳಿಗೂ ಕಲಾ ವಿಭಾಗದ ಬದಲಿಗೆ ವಾಣಿಜ್ಯವಿಭಾಗವನ್ನೇ ಸೇರುವ ತವಕ. ಅಂಥವರನ್ನು ಹಿಮ್ಮೆಟ್ಟಿಸಲು ಒಂದು ಅಸ್ತ್ರವಂತೂ ಸಿದ್ಧವಾಗಿರುತ್ತಿತ್ತು. ಕಾಮರ್ಸ್ ತೆಗೆದುಕೊಂಡರೆ ಅಕೌಂಟೆನ್ಸಿ ವಿಷಯವನ್ನಿಡೀ ಇಂಗ್ಲೀಷ್ ನಲ್ಲೇ ಉತ್ತರಿಸಬೇಕಾಗುತ್ತದೆ ಎಂದು ಹೆದರಿಸಿದರೆ ಆಯಿತು.

ಆದರೆ, ಈ ವಿಷಯ ನನ್ನನ್ನೂ ಕಾಡದಿರಲಿಲ್ಲ. ಈ ಸಮಸ್ಯೆಯ ವಾಸ್ತವ ಅಂಶವೇನೆಂದು ವಾಣಿಜ್ಯವಿಭಾಗದ ಉಪನ್ಯಾಸಕರನ್ನೇ ಕೇಳಿದೆ. ಹೌದು ಸರ್, ಅಕೌಂಟೆನ್ಸಿ ವಿಷಯವನ್ನು ಕನ್ನಡದಲ್ಲಿ ಬರೆಯಲಾಗುವುದಿಲ್ಲ ಎಂದರು. ಸರಿಯಾದ ಪಠ್ಯಗಳೂ ಕನ್ನಡದಲ್ಲಿ ಲಭ್ಯವಿಲ್ಲ. ಪರೀಕ್ಷೆಯಲ್ಲೇನೋ ಕನ್ನಡದಲ್ಲೂ ಪ್ರಶ್ನಪತ್ರಿಕೆ ಸಿದ್ಧಪಡಿಸಿ ಕೊಡುತ್ತಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅಧ್ಯಾಪಕರೂ , ಉತ್ತರಿಸುವ ವಿದ್ಯಾರ್ಥಿಗಳೂ ತೀರಾ ಕಡಿಮೆ ಎಂಬ ವಿವರಣೆಯನ್ನು ಕೇಳಿ ಆಶ್ಚರ್ಯವಾಯಿತು. ನಮ್ಮ ಕಾಲೇಜಿನ ಮಕ್ಕಳಿಗಾದರೂ ಕನ್ನಡಮಾಧ್ಯಮದಲ್ಲಿ ಕಲಿಸಬಹುದಲ್ಲ ಎಂದುದಕ್ಕೆ ಸರಿಯಾದ ಕನ್ನಡಪಠ್ಯಗಳಿಲ್ಲದೆ ಹೇಗೆ ಬೋಧಿಸುವುದೆಂದು ಆತ ನಿಸ್ಸಹಾಯಕತೆಯನ್ನು ವ್ಯಕ್ತಪಡಿಸಿದರು. ಇರಲಿ, ನೋಡೋಣವೆಂದು ಮೈಸೂರಿನ ಪ್ರಸಿದ್ಧ ಅಂಗಡಿಯೊಂದಕ್ಕೆ ಹೋಗಿ ಪಿಯುಸಿಯ ಅಕೌಂಟೆನ್ಸಿ ಕನ್ನಡಮಾಧ್ಯಮದ ಪಠ್ಯಪುಸ್ತಕ ಕೊಡಿ ಎಂದೆ. ಆತ ಅಚ್ಚರಿಯಿಂದ ನನ್ನ ಮುಖವನ್ನೇ ಒಮ್ಮೆ ನೋಡಿದರು. ಯಾಕೆ, ಪುಸ್ತಕ ಇಲ್ಲವೇ ಎಂದುದಕ್ಕೆ ಮೌನವಾಗಿ ಕಪಾಟಿನಿಂದ ಪುಸ್ತಕವೊಂದನ್ನು ಹುಡುಕಿ ತೆಗೆದು ಧೂಳು ಕೊಡವಿದರು. ಪುಸ್ತಕದ ಬೆಲೆ ಹೇಳುವುದರ ಜೊತೆಗೆ ಇನ್ನೊಂದು ಮಾತು ಸೇರಿಸಿದರು: ” ಬೇಡವೆಂದು ವಾಪಸ್ ತಂದರೆ ತೆಗೆದುಕೊಳ್ಳುವುದಿಲ್ಲ”!

ಇದಾಗಿ ಏಳೆಂಟು ವರ್ಷಗಳು ಕಳೆದಿವೆ. ಪಠ್ಯಕ್ರಮವೂ ಬದಲಾಗಿದೆ. ಇವತ್ತಿಗೂ ಹನ್ನೊಂದನೇ ತರಗತಿಯ ಅಕೌಂಟೆನ್ಸಿ ಅಥವಾ ಲೆಕ್ಕಶಾಸ್ತ್ರದ ಪಠ್ಯಪುಸ್ತಕಗಳು ಕನ್ನಡದಲ್ಲಿ ಸಿಗುತ್ತಿಲ್ಲ. ಇತ್ತ ನಾವು ಇಂಜನಿಯರಿಂಗ್ ಹಾಗೂ ವೈದ್ಯಕೀಯ ಮತ್ತಿತರ ಉನ್ನತ ಶಿಕ್ಷಣ ತರಗತಿಗಳನ್ನು ಕನ್ನಡದಲ್ಲಿ ಬೋಧಿಸುವ ದೊಡ್ಡದೊಡ್ಡ ಮಾತುಗಳನ್ನು ಆಡುತ್ತಿದ್ದೇವೆ.

ಕನ್ನಡ ಭಾಷೆಯ ಅಭಿವೃದ್ದಿಯ ಬಗ್ಗೆ ಮಾತನಾಡುವಾಗಲೆಲ್ಲ, ಆಡಳಿತ ಮತ್ತಿತರ ವ್ಯವಹಾರಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಕೊಡುವಷ್ಟು ಮಹತ್ವವನ್ನು ಶಿಕ್ಷಣಕ್ಷೇತ್ರದ ವಿಷಯದಲ್ಲಿ ನೀಡದಿರುವುದು ಅಚ್ಚರಿಯ ವಿಷಯವಾಗಿದೆ. ಇನ್ನು ಗೋಕಾಕ್‌ವರದಿಯ ಅನುಷ್ಠಾನ, ತತ್ಸಂಬಂಧವಾದ ಚಳುವಳಿ, ವಾದ ಪ್ರತಿವಾದ ಮೊದಲಾದವು ಶೈಕ್ಷಣಿಕವಾಗಿ ಕನ್ನಡ ಜಾಗೃತಿಯ ಸೂಚನೆ ನೀಡಿದರೂ ಅವೆಲ್ಲದರ ಒಟ್ಟಭಿಪ್ರಾಯ ಪ್ರೌಢಶಾಲೆಯಲ್ಲಿ ಮಾತೃಭಾಷಾ ಬೋಧನೆಗೆ ಸಂಬಂಧಪಟ್ಟಂತೆ ಎಷ್ಟು ಅಂಕಗಳ ಪ್ರಶ್ನ ಪತ್ರಿಕೆಯಿರಬೇಕು, ಕನ್ನಡ ಪತ್ರಿಕೆಗೆ ಸಂಸ್ಕೃತಕ್ಕಿಂತ ಇಪ್ಪತ್ತೈದು ಅಂಕವಾದರೂ ಹೆಚ್ಚಿಗೆ ನಿಗದಿ ಪಡಿಸದಿದ್ದರೆ ಕನ್ನಡದ ಘನತೆ ಏನಾದೀತು ಎಂಬಷ್ಟಕ್ಕೆ ಸೀಮಿತವಾಗಿದೆಯೇ ಹೊರತು ಸಮಗ್ರ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಜಾರಿಗೆ ತರಬೇಕಾದುದರ ಅವಶ್ಯಕತೆ, ಅನಿವಾರ್‍ಯತೆಗಳ ಬಗೆಗೆ ಏನನ್ನೂ ಹೇಳುವುದಿಲ್ಲ.

ಯಾವುದೇ ಭಾಷೆಯ ರೂಢಿ, ಬೆಳವಣಿಗೆಗಳು, ಒಂದು ಮಗು ಮೊದಲಿಗೆ ಮನೆಯಲ್ಲೂ ಅನಂತರ ಶಾಲೆಯಲ್ಲೂ ಏನನ್ನೂ ಹೇಗೆ ಕಲಿಯುತ್ತದೆ ಎಂಬುದನ್ನೇ ಮುಖ್ಯವಾಗಿ ಅವಲಂಬಿಸಿವೆ. `ಮಾತೃಭಾಷೆ’ ಎಂಬ ಪದ, ಮಗು ಶಾಲೆಗೆ ಕಾಲಿರಿಸುವ ಮೊದಲೇ ತನ್ನ ಮನೆಯ ಪರಿಸರದಲ್ಲಿ ಕೇಳಿ ತಿಳಿದು ಕಲಿತ ನುಡಿಗೆ ಅನ್ವಯವಾಗುತ್ತದೆ. ಮಾತೃಭಾಷೆಯೆಂಬುದು `ಮಾತೃ’ ಎಂದರೆ ತಾಯಿಗೇ ಸಂಬಂಧಪಟ್ಟಿರುವುದೆಂದು ಅರ್ಥೈಸಬೇಕಾಗಿಲ್ಲ. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಮಗುವಿಗೆ ಪರಿಚಿತವಾಗುವ ಭಾಷೆ ಪ್ರಾದೇಶಿಕ ಭಾಷೆಯೂ ಆಗಿರಬಹುದು.

ಮಗು ಶಿಕ್ಷಣವನ್ನು ಪಡೆಯಲಿಕ್ಕಾಗಿ ಶಾಲೆಯನ್ನು ಪ್ರವೇಶಿಸುವಾಗ ತಾನು ಮನೆಯಲ್ಲಿ ಕೇಳಿ, ಕಲಿತ ಭಾಷೆಗಿಂತ ಭಿನ್ನವಾದ ಭಾಷೆಯೊಂದು ಮಾಧ್ಯಮವಾಗಿ ಎದುರಾಗುವಾಗ ಮಗುವಿಗೆ ಸಹಜವಾಗಿಯೆ ಕಕ್ಕಾಬಿಕ್ಕಿಯಾಗುತ್ತದೆ. ಭಿನ್ನವಾದ ಭಾಷಾ ಮಾಧ್ಯಮದ ಪರಿಸರಕ್ಕೆ ಒಗ್ಗಿಕೊಳ್ಳಲು ಅದಕ್ಕೆ ಸುಲಭ ಸಾಧ್ಯವೇನಲ್ಲ.

ವಿದ್ಯಾರ್ಥಿಗೆ ತನ್ನ ಮಾತೃಭಾಷಾ ಮಾಧ್ಯಮದ ಮೂಲಕ ಕೊಡಲಾಗುವ ಶಿಕ್ಷಣವನ್ನು ಗ್ರಹಿಸಲು ಸಾಧ್ಯವಾಗುವಂತೆ ಅನ್ಯಭಾಷೆಗಳಿಂದ ಸಾಧ್ಯವಾಗದೆಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದಾರೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತುಕೊಂಡಷ್ಟೂ ವ್ಯಕ್ತಿಯ ತಿಳುವಳಿಕೆ ಮಟ್ಟ, ವ್ಯಾವಹಾರಿಕ ಕೌಶಲ, ಭಾಷಾ ಸಂಪತ್ತು, ಸಾಹಿತ್ಯ ಜ್ಞಾನ ಹೆಚ್ಚುವುದರಲ್ಲಿ ಸಂಶಯವಿಲ್ಲ. ಇದೇನೇ ಇದ್ದರೂ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಮಾತೃಭಾಷೆಯಲ್ಲಿ ವ್ಯವಹರಿಸಬಲ್ಲಷ್ಟು ಸುಲಭವಾಗಿ, ಕಷ್ಟಪಟ್ಟು ಕಲಿಯಬೇಕಾದ ಇತರ ಭಾಷೆಗಳಲ್ಲಿ ವ್ಯವಹರಿಸಲಾರನು.

ಮಗುವಿಗೆ ಅದರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಅತ್ಯುತ್ತಮ ಶಿಕ್ಷಣ ಮಾಧ್ಯಮವೆಂದು ಪ್ರಪಂಚದ ಎಲ್ಲ ಶಿಕ್ಷಣತಜ್ಞರೂ ಅಭಿಪ್ರಾಯ ಪಡುತ್ತಾರೆ. ಒಂದು ವಿದೇಶೀ ಮಾಧ್ಯಮದಲ್ಲಿ ಕಲಿಯುವುದೆಂದರೆ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಬಾಯಿಪಾಠ ಮಾಡುವುದಕ್ಕೇ ಹೆಚ್ಚು ಅವಕಾಶ ನೀಡಿದಂತಾಗುವುದೆಂದು ತಜ್ಞರ ಅಭಿಮತ. “ತಮ್ಮದಲ್ಲದ ಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಂತೆಯೇ” ಎಂದು ಗಾಂಧೀಜಿ ವರ್ಣಿಸಿದ್ದರೆ, “ವಿದ್ಯಾರ್ಥಿಯ ಭಾಷೆಯಿಂದ ಶಿಕ್ಷಣದ ಭಾಷೆಯ ವಿಚ್ಛೇದನಗೊಂಡಿರುವುದು ಭಾರತ ಹೊರತು ಪ್ರಪಂಚದ ಇನ್ನಾವ ದೇಶದಲ್ಲೂ ಕಾಣಸಿಗದು” ಎಂದು ರವೀಂದ್ರನಾಥ ಠಾಕೂರರು ಆಶ್ಚರ್ಯ ಪಟ್ಟಿದ್ದಾರೆ.

ತನ್ನ ಮಾತೃಭಾಷೆಯ ಮೂಲಕ ಮಗು ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಮಗುವಿಗೆ ಅದರ ಪರಿಸರದೊಂದಿಗೆ ಸಂಪರ್ಕ ಕಲ್ಪಿಸಿ ಅದನ್ನು ಸಮಾಜದ ಸಂಸ್ಕೃತಿ ಮತ್ತು ಅನುಭವದಲ್ಲಿ ಪಾಲುದಾರನನ್ನಾಗಿ ಮಾಡುತ್ತದೆ. ಇದನ್ನೇ ಬಿ.ಎಂ. ಶ್ರೀಯವರು ತಮ್ಮ “ಕನ್ನಡ ನಾಡಿಗೆ ಕನ್ನಡವೇ ಗತಿ” ಎಂಬ ಪ್ರಸಿದ್ಧ ಭಾಷಣದಲ್ಲಿ ಹೀಗೆ ಪುಷ್ಟೀಕರಿಸುತ್ತಾರೆ. “ಭಾಷೆಯೆನ್ನುವುದು ನಿತ್ಯಗಟ್ಟಳೆಯ ವ್ಯಾಪಾರಕ್ಕಾಗಿ ಇರುವುದು ಮಾತ್ರವಲ್ಲ, ಅದರ ಮುಖ್ಯಕಾರ್‍ಯ ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುವುದುಈ॒ ಕೆಲಸ ಕಷ್ಟಪಟ್ಟು ನಮ್ಮ ಬುದ್ಧಿ ಶಕ್ತಿಯನ್ನೆಲ್ಲಾ ವೆಚ್ಚ ಮಾಡಿ ಕಲಿಯುವ ಪರ ಭಾಷೆಯಿಂದ ನೆರವೇರುವುದಿಲ್ಲ. ಯಾವುದು ಸರಾಗವಾಗಿ ನಮ್ಮನ್ನು ಒಲಿದು ಬಂದಿರುತ್ತದೆಯೋ, ಯಾವುದು ನಮ್ಮನ್ನು ಬೆನ್ನಟ್ಟಿ ಬಂದು ರಕ್ತಗತವಾಗಿರುತ್ತದೋ ಅಂಥ ಭಾಷೆಯಿಂದ ಮಾತ್ರವೇ ಇದು ಸಾಧ್ಯ.” (ಶ್ರೀ ಸಾಹಿತ್ಯ: ಪುಟ೨೯೧)

ಮುಖ್ಯವಾಗಿ, ಪ್ರಾಥಮಿಕ ಶಾಲಾಹಂತದಲ್ಲಿ ವಿದ್ಯಾರ್ಥಿಯು ತನ್ನ ಮಾತೃಭಾಷೆಯಲ್ಲಿಯೇ ಸಂಪೂರ್ಣ ಶಿಕ್ಷಣವನ್ನು ಪಡೆದದ್ದಾದರೆ, ಆ ಕಾಲದಲ್ಲಿ ತಾನು ರೂಢಿಸಿಕೊಂಡ ಕನ್ನಡ ಭಾಷಾಕೌಶಲವನ್ನು ಅವನು ಮುಂದೆಂದೂ ಮರೆಯಲಾರ. ಅಂದರೆ, ತನ್ನ ಮಾತೃಭಾಷೆಯಲ್ಲಿ ಓದುವುದಕ್ಕೂ ಬರೆಯುವುದಕ್ಕೂ ಮಾತನಾಡುವುದಕ್ಕೂ ಅವನಿಗೆಂದೂ ಅಡಚಣೆಯಾಗದು. ಅಲ್ಲದೆ ತನ್ನ ಮಾತೃಭಾಷಾ ಶಿಕ್ಷಣದೊಂದಿಗೆ ಇಂಗ್ಲಿಷ್ ನಂತಹ ಅನ್ಯಭಾಷೆಯೊಂದರ ಪ್ರಾಥಮಿಕ ಜ್ಞಾನವೂ ಅವನಿಗೆ ಜೊತೆ ಜೊತೆಯಲ್ಲೇ ಲಭಿಸಿದ್ದಾದರೆ, ಉನ್ನತ ವ್ಯಾಸಂಗಕ್ಕಾಗಿ ಅವನು ಅಂತಹ ಅನ್ಯ ಭಾಷೆಯನ್ನು ಆಶ್ರಯಿಸಿದರೂ ತೊಂದರೆಯಾಗದು.

ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳೆಲ್ಲ ಇಂಗ್ಲೀಷ್ ಮಾಧ್ಯಮವನ್ನೇ ಆರಿಸಿಕೊಳ್ಳುವ ಪರಿಸ್ಥಿತಿಯಿರುವುದರಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಓದುವವರೇ ಜಾಣರೆಂಬ, ಅಂತೆಯೇ ಕನ್ನಡ ಮಾಧ್ಯಮವನ್ನು ಆಯ್ಕೆಮಾಡಿಕೊಳ್ಳುವವರು ಅಷ್ಟೇನೂ ಬುದ್ಧಿವಂತರಲ್ಲವೆಂಬ ವಿಪರೀತ ಕಲ್ಪನೆ ಜನಮನದಲ್ಲಿ ಬೇರೂರತೊಡಗಿದೆ. ಈ ಭಾವನೆ ಪೋಷಕರಲ್ಲೂ ಶಿಕ್ಷಕವೃಂದದಲ್ಲೂ ಹರಡುತ್ತ ಕನ್ನಡಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಉಂಟಾಗಲು ಎಡೆಗೊಟ್ಟಿರುವುದು ವರ್ತಮಾನದ ಸಾಮಾಜಿಕ ಅಪಾಯಗಳಲ್ಲಿ ಮುಖ್ಯವಾದುದು.

ಶಿಕ್ಷಣದಲ್ಲಿ ಕನ್ನಡದ ಸ್ಥಾನವು ತೀರಾ ಉಪೇಕ್ಷೆಗೆ ಗುರಿಯಾಗಲು ಸರ್ಕಾರ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಪೋಷಕರೆಲ್ಲರೂ ಸಮಾನ ಹೊಣೆಗಾರರಾಗಿದ್ದಾರೆ. ದೇಶದ ಯಾವುದೇ ಪ್ರಾಂತದಲ್ಲೂ ಆಯಾ ಪ್ರಾದೇಶಿಕ ಭಾಷೆಯ ಸ್ಥಾನಮಾನಗಳು ಕರ್ನಾಟಕದಲ್ಲಿನ ಕನ್ನಡದ್ದಕ್ಕಿಂತ ಶೋಚನೀಯವಾಗಿರಲಾರದು. ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡವು ಶಿಕ್ಷಣ ಮಾಧ್ಯಮವಾಗಿದ್ದರೂ ಸರ್ಕಾರಿ ಶಾಲೆಗಳ ದುರವಸ್ಥೆಯು ಕನ್ನಡದ ಕಲಿಕೆ, ಅಭಿವೃದ್ಧಿಗಳಿಗೆ ಮಾರಕವಾಗಿದೆ. ಇನ್ನು ಊರು, ಪಟ್ಟಣ ಪ್ರದೇಶಗಳಲ್ಲಿ ಭಾಷಾವಾರು, ಜಾತಿವಾರು ಅಲ್ಪಸಂಖ್ಯಾತರೆಂಬ ರಿಯಾಯತಿ ಪಡೆದ ಶಾಲೆಗಳು ಸ್ಥಳೀಯವಾಗಿ ಯಾರ ಮಾತೃಭಾಷೆಯೂ ಆಗಿರದ ಇಂಗ್ಲೀಷ್ ಭಾಷೆಯ ಬಲೆಯೊಳಗೆ ಕನ್ನಡಿಗ ಮಕ್ಕಳನ್ನು ಸೆಳೆದುಕೊಳ್ಳುತ್ತಿವೆ. ಕನ್ನಡವು ದ್ವಿತೀಯ ತೃತೀಯ ಭಾಷಾಸ್ಥಾನದಲ್ಲಿ ಮುಲುಗುತ್ತ ಕ್ಷೀಣಿಸುತ್ತಿದೆ.

ಮಗುವಿಗೆ ಶಾಲಾಶಿಕ್ಷಣ ಹೊರೆಯೆನಿಸದಂತೆ, ಹಿತಕರವೂ ಸರಳವೂ ಆದ ವ್ಯವಸ್ಥೆಯೆಂದು ತೋರಬೇಕಾದರೆ ಮಗುವಿನ ಮಾತೃಭಾಷೆಯೋ ಪ್ರಾದೇಶಿಕ ಭಾಷೆಯೋ ಶಿಕ್ಷಣ ಮಾಧ್ಯಮವಾಗಿರಬೇಕೇ ಹೊರತು ಇಂಗ್ಲೀಷ್ ಅಲ್ಲ. ಮಾತೃಭಾಷೆಯು ಶಿಕ್ಷಣ ಮಾಧ್ಯಮವಾಗಿರುವಂಥ ಕ್ರಮವೂ ಪ್ರಾಥಮಿಕ ಶಾಲಾ ಹಂತದಲ್ಲಿ ಏಳನೆಯ ತರಗತಿಯವರೆಗಾದರೂ ಕಡ್ಡಾಯವಾಗಿ ಜಾರಿಯಲ್ಲಿರಬೇಕು. LKG UKGಗಳ ಹಂತದಲ್ಲೂ ಮಗುವಿಗೆ ಕನ್ನಡದಲ್ಲಿ ಮಾತನಾಡುವ, ಅಕ್ಷರಗಳನ್ನು ಕಲಿಯುವ ವ್ಯವಸ್ಥೆಯಿರಬೇಕು. ಹೀಗಾದಲ್ಲಿ ಎಂಟನೇ ತರಗತಿಯಿಂದ ಮುಂದಕ್ಕೆ ವಿದ್ಯಾರ್ಥಿಯು ಯಾವುದೇ ಭಾಷಾ ಮಾಧ್ಯಮವನ್ನು ಆರಿಸಿಕೊಂಡರೂ ಕನ್ನಡ ಭಾಷೆಯನ್ನು ಕಲಿಯುವ ಅವಕಾಶವೂ ಮುಂದುವರೆಯುವುದರಿಂದ ಮಾತೃಭಾಷೆಯ ನಂಟು ಎಡೆಬಿಡದೆ ಮುಂದುವರಿಯುತ್ತದೆ.

ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೂ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳು ಸುಲಭವಾಗಿ ಲಭಿಸುವಂತಿರಬೇಕು. ಇದಕ್ಕಾಗಿ ಸರ್ಕಾರವೂ ವಿಶ್ವವಿದ್ಯಾನಿಲಯಗಳೂ ವಿಸ್ತಾರವಾದ ಯೋಜನೆಯೊಂದನ್ನು ಕೈಗೊಂಡು ಎಲ್ಲ ಐಚ್ಛಿಕ ವಿಷಯಗಳಿಗೆ ಸಂಬಂಧಪಟ್ಟ ಸರಳ ಪಾರಿಭಾಷಿಕ ಪದಕೋಶಗಳನ್ನೂ ಪಠ್ಯಪುಸ್ತಕಗಳನ್ನೂ ಸಿದ್ಧಪಡಿಸಬೇಕಾಗಿದೆ. ಸಾಧ್ಯವಿದ್ದಷ್ಟೂ ಸರಳವಾದ ಭಾಷಾ ಪ್ರಯೋಗ, ಅನುವಾದ ವಿವರಣೆಗಳುಳ್ಳ ಪಠ್ಯಗ್ರಂಥಗಳೇ ಶಿಕ್ಷಣ ಮಾಧ್ಯಮದ ಜೀವಾಳವೆಂಬುದು ಪಠ್ಯ ಪುಸ್ತಕ ಸಮಿತಿಗಳಿಗೆ ಇನ್ನಾದರೂ ಮನವರಿಕೆಯಾಗಬೇಕಾಗಿದೆ.

ಆಡಳಿತ, ನ್ಯಾಯಾಂಗ, ಬ್ಯಾಂಕಿಂಗ್ ಮೊದಲಾದ ವ್ಯಾವಹಾರಿಕ ಕ್ಷೇತ್ರಗಳಲ್ಲಿ ಮಾತೃಭಾಷೆಯ ಬಳಕೆಯು ವ್ಯವಹಾರವನ್ನು ಸುಲಲಿತವಾಗಿ ನಡೆಸಲು ಎಡೆಮಾಡಿಕೊಡುತ್ತದೆ. ಆದರೆ ಶಿಕ್ಷಣಕ್ಷೇತ್ರದಲ್ಲಿ ಮಾತೃಭಾಷೆಯೇ ಮಾಧ್ಯಮವಾಗುವುದರಿಂದ ವಿದ್ಯಾರ್ಥಿಯ ಗ್ರಹಿಕೆ, ಓದು, ಉಚ್ಚಾರಣೆ, ಮಾತು, ಬರೆಹ ಎಲ್ಲವೂ ಸುಧಾರಿಸುತ್ತ, ಭಾಷಾಭಿವೃದ್ಧಿಯು ಪರಿಣಾಮಕಾರಿಯಾಗಿಯೂ ಸಾರ್ವತ್ರಿಕವಾಗಿಯೂ ಸಾಧಿಸುವುದರಲ್ಲಿ ಸಂಶಯವಿಲ್ಲ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]

[/fusion_tagline_box][/fusion_builder_column][/fusion_builder_row][/fusion_builder_container]

Categories
ಅಂಕಣಗಳು ಕೆ.ಎಸ್. ನವೀನ್ ಪಕ್ಷಿ ಪ್ರಪಂಚ ಪಕ್ಷಿ ಪ್ರಪಂಚ

ಅಂಕಣಗಳು –ಕೆ.ಎಸ್. ನವೀನ್

ಅಂಕಣ : ಪಕ್ಷಿ-ಪ್ರಪಂಚ

 

ಎಲ್ಲ ಭಾಗಗಳನ್ನು ಓದಿ

Categories
ಅಂಕಣಗಳು ಇತಿಹಾಸ ಕರ್ನಾಟಕ ಇತಿಹಾಸ ಕರ್ನಾಟಕದ ಇತಿಹಾಸ ಶಾಸನಗಳು ಸದ್ಯೋಜಾತ ಭಟ್

ಅಂಕಣಗಳು – ಸದ್ಯೋಜಾತ ಭಟ್

ಅಂಕಣ : ಲಿಪಿಲೋಕ

ಲೇಖಕರು : ಸದ್ಯೋಜಾತ ಭಟ್

ಎಲ್ಲ ಭಾಗಗಳನ್ನು ಓದಿ

Categories
ಅಂಕಣಗಳು ರಾ. ಶ್ರೀನಾಗೇಶ್ ವಿಜ್ಞಾನ ವ್ಯಕ್ತಿತ್ವ ವಿಕಸನ

ಖುಷಿಯಾಗಿರಲು ಏನು ಮಾಡಬೇಕು?

03

ಪ್ರತಿ ದಿನ ಮುಂಜಾನೆ ನೀವು ಅನೇಕ ಆಯ್ಕೆಗಳನ್ನು ಮಾಡುವಿರಿ. ಅದರಲ್ಲಿ ಮೊಟ್ಟ ಮೊದಲನೆಯದು ಹಾಸಿಗೆಯಿಂದ ಏಳುವುದು! ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ, ವಿಧಿಯಿಲ್ಲದೆ ಏಳಲೇಬೇಕು ಎಂದು ಎದ್ದಾಗ, ಬೇಸರ ಅಲ್ಲಿಂದ ಪ್ರಾರಂಭ!
ಯಾವುದೇ ಕೆಲಸವನ್ನು ಮಾಡಬೇಕಲ್ಲಪ್ಪ ಎಂದುಕೊಂಡೋ, ಮಾಡದಿದ್ದರೆ ವಿಧಿಯಿಲ್ಲ ಎನ್ನುವ ಕಾರಣಕ್ಕೋ ಮಾಡುವಾಗ ಬೇಸರಿಸಿಕೊಂಡರೆ, ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಅದು ಅಷ್ಟಕ್ಕೇ ಸೀಮಿತವಾಗದೆ ಅನ್ಯ ಕೆಲಸಗಳಿಗೂ, ಸಮಯಕ್ಕೂ ಹರಡಿ ನಿಮ್ಮ ನೆಮ್ಮದಿಯನ್ನು ಸ್ವಲ್ಪ ಸ್ವಲ್ಪವೇ ಹಾಳುಮಾಡುತ್ತಿರುತ್ತದೆ.

ಮಾಡಲೇಬೇಕು ಎಂದಾಗ ಮಾಡಬೇಕು. ಅದರಲ್ಲಿ ನಿಮಗೆ ಆಯ್ಕೆ ಇಲ್ಲ. ಆದರೆ ಮಾಡುವಾಗ ನಿಮ್ಮ ಮನಸ್ಸು ಹೇಗಿರಬೇಕು ಎನ್ನುವುದರಲ್ಲಿ ಆಯ್ಕೆ ಇದೆ. ಬೇಸರದಿಂದಲೇ ಕೆಲಸ ಮಾಡಿದರೆ, ಕೆಲಸದ ಗುಣಮಟ್ಟವೂ ಉತ್ತಮವಾಗಿರುವುದಿಲ್ಲ. ಸಮಯವೂ ಹೆಚ್ಚು ತಗಲುತ್ತದೆ.

ಅಂತಹವರಿಗಾಗಿಯೇ ಒಂದು ಕಥೆ ಇಲ್ಲಿದೆ!

ಹೊಸದಾಗಿ ಮನೆಗೆ ಬಂದ ಸೊಸೆಗೆ ಅತ್ತೆ ಹೇಳಿದಳು, ನಮ್ಮ ಮನೆಯಲ್ಲಿ ದಿನವೂ ಭತ್ತ ಕುಟ್ಟಿ ಅಕ್ಕಿ ಮಾಡಿ ಅಡುಗೆ ಮಾಡಬೇಕು ಎಂದು. ಒನಕೆಯನ್ನೇ ನೋಡದ ಸೊಸೆಗೆ ಎಂತಹ ಕೆಲಸ ಇದು ಎಂದು ಬೇಸರ. ಮಾಡಲು ಇಷ್ಟವಿಲ್ಲ. ಮಾಡದೆ ವಿಧಿಯಿಲ್ಲ. ಕೆಲಸ ಮುಗಿಯುತ್ತಲೇ ಇರಲಿಲ್ಲ.

ಕೊನೆಗೆ ನೆರೆಮನೆಯವಳು ಒಂದು ದಿನ ಸೊಸೆಗೆ ಖುಷಿಯಾಗಿ ಅದೇ ಕೆಲಸವನ್ನೇ ಮಾಡುವ ಉಪಾಯವೊಂದನ್ನು ಹೇಳಿಕೊಟ್ಟಳು. ಮರುದಿನದಿಂದ ಭತ್ತ ಕುಟ್ಟುವಾಗ ಸೊಸೆಯ ಮುಖದಲ್ಲಿ ಆನಂದವೋ ಆನಂದ. ಅದರಿಂದ ಕೆಲಸವೂ ಬೇಗ ಮುಗಿಯುತ್ತಿತ್ತು.

ಅಂತಹ ಪರಿವರ್ತನೆ ತರುವಂತಹ ಉಪಾಯ ಏನಿರಬಹುದು?

ಮಾಡಬೇಕಲ್ಲ ಅಂತ ಬೇಸರದಿಂದಲೇ ಮಾಡುತ್ತಿದ್ದರೆ ನೆಮ್ಮದಿಯೂ ಹಾಳು, ಕೆಲಸವೂ ಮುಗಿಯದು. ಬದಲಿಗೆ ಖುಷಿ ಪಡಲು ಒಂದು ಕಾರಣ ಹುಡುಕಿಕೋ. ಭತ್ತ ಕುಟ್ಟುವಾಗ, ಒರಳಿನಲ್ಲಿ ನಿನ್ನ ಅತ್ತೆಯನ್ನು ಕೂರಿಸಿ ಕುಟ್ಟುತ್ತಿದ್ದೇನೆ ಎಂದುಕೊಂಡು ಕುಟ್ಟಿ ನೋಡು ಎಂದು ನೆರೆಯವರು ಹೇಳಿಕೊಟ್ಟಿದ್ದು! ತನಗೆ ಒಲ್ಲದ ಕೆಲಸವನ್ನು ನೀಡಿದ ಅತ್ತೆಯನ್ನು ಕುಟ್ಟುವುದು ಎಷ್ಟು ಖುಷಿಯ ಕೆಲಸ ಅಲ್ಲವೇ!

ಇಂದು ಭತ್ತ ಕುಟ್ಟಿಸುವ ಅತ್ತೆಯರೂ ಇಲ್ಲ, ಒನಕೆ ಹಿಡಿಯುವ ಸೊಸೆಯರೂ ಇಲ್ಲ. ಆದರೆ, ಮಾಡುವ ಕೆಲಸವನ್ನು ಖುಷಿಯಾಗಿ ಮಾಡಲು ಏನಾದರೂ ಒಂದು ಉಪಾಯ ಕಂಡುಕೊಂಡರೆ, ನಮ್ಮ ನೆಮ್ಮದಿ ಹಾಳಾಗುವುದಿಲ್ಲ ಎನ್ನುವ ಪಾಠ ಮಾತ್ರ ಹಾಗೆಯೇ ಉಳಿದುಕೊಂಡಿದೆ!

* ಅನಿವಾರ್ಯವಾಗಿ ಮಾಡಲೇಬೇಕು ಎಂದಾದಲ್ಲಿ ನಿಮಗೆ ಆಯ್ಕೆ ಇಲ್ಲ. ಅದನ್ನು ಒಪ್ಪಿಕೊಂಡು ಬಿಡುವುದು ಉತ್ತಮ.
* ಇಷ್ಟವಿಲ್ಲದ ಕೆಲಸವನ್ನು ಮುಂದೂಡುವ ಪ್ರವೃತ್ತಿ ಸರ್ವೇ ಸಾಮಾನ್ಯ. ನಿಮ್ಮ ನೆಮ್ಮದಿಯೂ ಅಲ್ಲಿಯ ವರೆಗೆ ಮುಂದೂಡಲ್ಪಡುತ್ತದೆ. ಮೊದಲು ಅದನ್ನು ಮಾಡಿ ಮುಗಿಸಿ ಬಿಟ್ಟರೆ, ಹಾಳು ಕೆಲಸವನ್ನು ಮಾಡಿ ಮುಗಿಸಿಬಿಟ್ಟೆ ಎಂದು ಖುಷಿ ಪಡಬಹುದು.

ನಾನು ಖುಷಿಯಾಗಿ ಇರುವುದಿಲ್ಲ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳುವರು ಅನೇಕರಿದ್ದಾರೆ ಎಂದರೆ, ಅಚ್ಚರಿಯಾಗುವುದೇ? ಐದು ನಿಮಿಷ ತುಂಬ ಖುಷಿಯಾಗಿದ್ದರೆ, ತುಂಬ ಖುಷಿಯಾಗಿ ಇದ್ದುಬಿಟ್ಟೆ, ಏನೋ ಗ್ರಹಚಾರ ಕಾದಿದೆ ನನಗೆ ಎಂದು ಖಿನ್ನತೆಗೆ ಜಾರುವವರನ್ನು ಕಂಡಿದ್ದೇನೆ. ಕೆಲವರ ಆಯ್ಕೆ ಹೇಗಿರುತ್ತದೆ ಎಂದರೆ, ಖಿನ್ನತೆ ಎನ್ನುವುದು ಬೆಂಗಳೂರಿಗೆ ಬಂದು ಬಸ್ ನಿಲ್ದಾಣದಲ್ಲಿ ನಿಂತು ಯಾರ ಮನೆಗೆ ಹೋಗಲಿ ಎಂದು ಯೋಚಿಸುತ್ತಿದ್ದರೆ, ನಮ್ಮ ಮನೆಗೇ ಬಾ ಎಂದು ದುಂಬಾಲು ಬಿದ್ದು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬರುವರೂ ಇದ್ದಾರೆ!

ನಾನು ಖುಷಿಯಾಗಿ ಇರುತ್ತೇನೆ ಎಂಬ ಆಯ್ಕೆಯನ್ನು ನೀವು ಮಾಡಿಕೊಂಡಿದ್ದೇ ಆದರೆ, ಖುಷಿಯಾಗಿ ಇರುವುದು ಸಾಧ್ಯವಿದೆ. ಸುಲಭವಲ್ಲ. ಖುಷಿಗಳ್ಳರಿರುತ್ತಾರೆ. ಅವರ ವಿರುದ್ಧ ರಕ್ಷಣಾ ಕವಚ ಕಟ್ಟಿಕೊಂಡರೆ ಖಂಡಿತ ಸಾಧ್ಯವಿದೆ.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”][ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]

[/fusion_builder_column][/fusion_builder_row][/fusion_builder_container]

Categories
ಅಂಕಣಗಳು ರಂಗಸ್ವಾಮಿ ಮೂಕನಹಳ್ಳಿ ವಾಣಿಜ್ಯ-ಕನ್ನಡ

ಅಂಕಣಗಳು – ರಂಗಸ್ವಾಮಿ ಮೂಕನಹಳ್ಳಿ

ಕೃತಿ – ಅಂಕಣಗಳು

ಲೇಖಕರು – ರಂಗಸ್ವಾಮಿ ಮೂಕನಹಳ್ಳಿ

ಕೃತಿಯನ್ನು ಓದಿ     |     Download

Categories
ಅಂಕಣಗಳು

ಡಾಟಾ ಸೈನ್ಸ್ – ಒಂದು ಕಿರು ಪರಿಚಯ

ನಮ್ಮ ಬಳಗಕ್ಕೆ ಹೊಸ ಬರಹಗಾರರನ್ನು ಸ್ವಾಗತಿಸುವ ಉದ್ದೇಶದೊಡನೆ ಮೊತ್ತಮೊದಲ ‘ಕಣಜ ಬರಹಗಾರರ ಕಮ್ಮಟ’ವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ೨೦೧೬ರ ಆಗಸ್ಟ್ ೬ ಹಾಗೂ ೭ರಂದು ಆಯೋಜಿಸಲಾಗಿತ್ತು. ಇಪ್ಪತ್ತೊಂದು ಶಿಬಿರಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಹಿರಿಯ ಲೇಖಕರು ಬರವಣಿಗೆಯ ಕುರಿತು ಅನೇಕ ಅಂಶಗಳನ್ನು ಹಂಚಿಕೊಂಡರು.

ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಾವು ಕಲಿತದ್ದನ್ನು ಕಾರ್ಯಗತಗೊಳಿಸುವ ಅವಕಾಶವನ್ನೂ ಶಿಬಿರಾರ್ಥಿಗಳಿಗೆ ನೀಡಲಾಗಿತ್ತು. ಇಂತಹ ಚಟುವಟಿಕೆಯೊಂದರಲ್ಲಿ ಶಿಬಿರಾರ್ಥಿ ಶ್ರೀ ರವೀಶ್‌ ಕುಮಾರ್‌ ಬಿ. ಅವರು ಬರೆದ ಲೇಖನ ಇಲ್ಲಿದೆ.

ಅಕ್ಕಿ ಹತ್ತು ಕೇಜಿ, ಸಕ್ಕರೆ ಎರಡು ಕೇಜಿ, ತೊಗರಿ ಬೇಳೆ ಅರ್ಧ ಕೇಜಿ… ಹೀಗೆ ಬೆಳೆಯುವ ದಿನಸಿ ಪಟ್ಟಿ ಬಹುತೇಕ ಮನೆಗಳಲ್ಲಿ ಚಿರಪರಿಚಿತ. ಇದೇ ಮುಂದೆ ಸೂಪರ್‌ ಮಾರ್ಕೆಟ್‌ ಒಂದರ ಆಯವ್ಯಯ ಪತ್ರದ ಮೇಲೆ ಪರೋಕ್ಷ ಪರಿಣಾಮ ಬೀಳುತ್ತದೆ ಎಂದರೆ ನಂಬುತ್ತೀರಾ?

ಇದು ಹೇಗೆ ಸಾಧ್ಯ ಎಂಬುದನ್ನು ತಿಳಿಸುವ ವಿಜ್ಞಾನವೇ ‘ಡಾಟಾ ಸಯನ್ಸ್‌’. ನಿಮ್ಮ ದಿನಸಿ ಚೀಟಿ ‘ಡಾಟಾ’ದ ಒಂದು ಕಿರು ಪರಿಕಲ್ಪನೆ ಮಾತ್ರ. ಆದರೆ ಡಾಟಾ ಸಯನ್ಸ್‌ ಇಷ್ಟಕ್ಕೇ ಸೀಮಿತವಾಗಿಲ್ಲ. ಅಂಕಿಗಳು, ಪಠ್ಯ, ಚಿತ್ರ, ಆಡಿಯೋ, ವಿಡಿಯೋ – ಹೀಗೆ ಎಲ್ಲವೂ ಡಾಟಾದ ಪರಿಧಿಗೆ ಒಳಪಡುತ್ತದೆ. ಹಾಗೆಯೇ ಡಾಟಾವನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲಾ ಕ್ಷೇತ್ರಗಳನ್ನು ಡಾಟಾ ಸಯನ್ಸ್‌ ಒಳಗೊಳ್ಳುತ್ತದೆ.

ಹಾಗಾದರೆ ಈ ಹೊಸ ವಿಜ್ಞಾನದ ಬೆಳವಣಿಗೆಗೆ ಕಾರಣಗಳೇನು? ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಶೇಖರಣೆಯಾಗುವ ಅಗಾಧ ಡಾಟಾವನ್ನು ವಿಶ್ಲೇಷಿಸುವ ಸಾಮರ್ಥ್ಯ ಈಗಾಗಲೇ ಮನುಷ್ಯನ ಮಿತಿಯನ್ನು ಮೀರಿದೆ. ಜೊತೆಗೆ ಡಾಟಾದ ಶೇಕಡಾ 80 ಭಾಗ ನಿರುಪಯುಕ್ತವಾಗಿರುತ್ತದೆ. ಹೀಗೆ ಹುಲ್ಲಿನ ರಾಶಿಯಿಂದ ಸೂಜಿ ಹುಡುಕುವ ಪ್ರಕ್ರಿಯೆಗೆ ಡಾಟಾ ಸಯನ್ಸೇ ಮೂಲ.

ದಿನಸಿ ಪಟ್ಟಿ ಹಿಡಿದು ನೀವು ನಿಮಗೆ ಬೇಕಾದ ವಸ್ತುಗಳನ್ನು ಕೊಳ್ಳುತ್ತೀರಿ. ನಂತರ ಸರದಿಯ ಸಾಲಿನಲ್ಲಿ ನಿಂತು ಬಿಲ್‌ ಮಾಡಿಸಿ ಹಣ ಪಾವತಿಯನ್ನು ಮಾಡುತ್ತೀರಿ. ಆಗ ನಿಮ್ಮ ಬಳಿ ಉಚಿತ ಕೂಪನ್ನುಗಳು ಇರುತ್ತದೆ. ಅದನ್ನು ಬಳಸಿ ಬಿಲ್‌ ಮಾಡುವ ಹುಡುಗ/ಹುಡುಗಿ ಬಿಲ್‌ನಲ್ಲಿ ರಿಯಾಯಿತಿ ಮಾಡಿ ನಿಮಗೆ ಸರಿಯಾದ ಚಿಲ್ಲರೆಯನ್ನು ನೀಡುತ್ತಾನೆ/ಳೆ. ಈ ಪ್ರಕ್ರಿಯೆ ಸುಲಭವೆನಿಸಿದರೂ ಇದರ ಹಿಂದೆ ಡಾಟಾ ಸಯನ್ಸ್‌ನ ಹಲವು ಅಂಶಗಳು ಕೆಲಸ ಮಾಡುತ್ತಿರುತ್ತವೆ. ಅದು ಹೇಗೆ? ನೀವು ಕೊಳ್ಳುವ ವಸ್ತುವಿನ ಮೇಲೆ ಬಾರ್‌ಕೋಡ್‌ ನಮೂದಾಗಿರುತ್ತದೆ. ಅದನ್ನು ಬಳಸಿ ಕೌಂಟರಿನಲ್ಲಿ ವಸ್ತುಗಳ ಬೆಲೆಯನ್ನು ಖಾತರಿ ಪಡಿಸಿ ನಿಮಗೆ ನೀಡಲಾಗುತ್ತದೆ. ಇನ್ನು ಕೂಪನ್‌ ಮೇಲಿರುವ ಸಂಖ್ಯೆಯನ್ನು ಬಿಲ್ಲಿಂಗ್‌ ಕಂಪ್ಯೂಟರ್‌ನಲ್ಲಿ ನಮೂದಿಸಿ ರಿಯಾಯಿತಿಯನ್ನು ನೀಡಲಾಗುತ್ತದೆ.

ಇನ್ನು ಸೂಪರ್‌ ಮಾರ್ಕೆಟ್‌ ಈ ವ್ಯವಹಾರದ ಎಲ್ಲಾ ವಿವರಗಳನ್ನು ತನ್ನ ಡಾಟಾಬೇಸ್‌ನಲ್ಲಿ ದಾಖಲಿಸಿಕೊಳ್ಳುತ್ತದೆ. ನೀವು ಕೊಂಡ ವಸ್ತು ಸೂಪರ್‌ ಮಾರ್ಕೆಟ್‌ನಲ್ಲಿ ಕೊನೆಯದಾಗಿದ್ದರೆ, ಡಾಟಾಬೇಸ್‌ ಪ್ರಬಂಧಕರಿಗೆ ಸೂಚನೆಯನ್ನು ನೀಡುತ್ತದೆ. ಹಾಗೆಯೇ ಸೂಪರ್‌ ಮಾರ್ಕೆಟ್‌ಗೆ ಕೊಂಡಿಯಾಗಿರುವ ಗ್ರಾಹಕ ಮಳಿಗೆಗೆ ಸೂಚನೆಯನ್ನು ನೀಡುತ್ತದೆ. ಇನ್ನೊಂದು ಬದಿಯಲ್ಲಿ ಗ್ರಾಹಕ ನೀಡಿದ ಕೂಪನ್ನುಗಳ ಮೌಲ್ಯದ ಹಣವನ್ನು ಪಡೆಯಲು ಕೂಪನ್‌ ನೀಡಿದ ಸಂಸ್ಥೆಯನ್ನು ಸಂಪರ್ಕಿಸಬೇಕು. ಇದು ಮತ್ತೊಂದು ಚಟುವಟಿಕೆ ಚಕ್ರವನ್ನು ಶುರು ಮಾಡುತ್ತದೆ. ಹೀಗೆ ಸಾವಿರಾರು ಗ್ರಾಹಕರು ಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದಾಗ ಡಾಟಾದ ಅಗಾಧ ರಾಶಿಯೇ ಸೃಷ್ಟಿಯಾಗುತ್ತದೆ. ಈಗ ಸೂಪರ್‌ ಮಾರ್ಕೆಟ್‌ ತಿಂಗಳ ಕೊನೆಯಲ್ಲಿ ಯಾವ ವಸ್ತುವಿನ ಯಾವ ಬ್ರಾಂಡ್‌ನ ವಸ್ತುಗಳನ್ನು ಖರೀದಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂಬುವುದನ್ನು ಗಣಿತ ಪಂಡಿತರಿಗೆ ನೀಡಿದರೆ ಅದು ಕಷ್ಟ ಸಾಧ್ಯ. ಹಾಗೇ ಅವರಿಗೆ ಬೇಕಾದ ಸಮಯವೂ ಅಧಿಕ. ಇಲ್ಲಿ ನಮಗೆ ಡಾಟಾ ಸಯನ್ಸ್‌ ನೆರವಿಗೆ ಬರುತ್ತದೆ.

ಡಾಟಾ ಸಂಗ್ರಹಣೆ, ವಿಶ್ಲೇಷಣೆ, ನಿರ್ಧಾರ – ಹೀಗೆ ಅನುಕ್ರಮದಲ್ಲಿ ಪ್ರಕ್ರಿಯೆ ಸಾಗುತ್ತದೆ. ಡಾಟಾದ ವಿಶ್ಲೇಷಣೆಯನ್ನು ಡಾಟಾ ಸಯನ್ಸ್‌ ತಂತ್ರಾಂಶವು ಮಾಡಿ ಮನುಷ್ಯರು ಸುಲಭವಾಗಿ ಗ್ರಹಿಸಬಹುದಾದ ಮಾದರಿ(ಉದಾ: ಚಾರ್ಟುಗಳು)ಯಲ್ಲಿ ಪ್ರಸ್ತುತ ಪಡಿಸುತ್ತದೆ. ಇದನ್ನು ನೋಡಿ ಸಂಬಂಧಿತ ವ್ಯಕ್ತಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಇನ್ನು ಮುಂದೆ ಹೋಗಿ ಇವು ಗ್ರಾಹಕರ ಭವಿಷ್ಯದ ಕೊಳ್ಳುವ ಕ್ರಿಯೆಯನ್ನು ಎಳೆಎಳೆಯಾಗಿ ಬಿಡಿಸುತ್ತದೆ.

ಇಂದು ಡಾಟಾ ಸಯನ್ಸ್‌ ಹಲವಾರು ಕ್ಷೇತ್ರಗಳಲ್ಲಿ ಕಾಲಿಟ್ಟಿದೆ. ವೈದ್ಯಕೀಯ, ಕ್ರೀಡೆ, ಸರಕಾರದ ನಿರ್ಧಾರಗಳು ಇಲ್ಲಿ ನೀಡಬಹುದಾದ ನಿದರ್ಶನಗಳು. ಡಾಟಾ ಸಯನ್ಸ್‌ ಇಂದಿನ ದಿನಗಳಿಗೆ ಕನ್ನಡಿಯಾಗಿ ಭವಿಷ್ಯಕ್ಕೆ ಮಾಯಾಕನ್ನಡಿಯಾಗಿ ಮನುಕುಲದ ಏಳಿಗೆಗ ದೀವಿಗೆಯಾಗುತ್ತಿದೆ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]

Categories
ಅಂಕಣಗಳು ಟಿ. ಎಸ್. ಗೋಪಾಲ್ ಭಾಷೆ ವಿಜ್ಞಾನ

ಶಿಷ್ಟತೆಯ ಹಿಡಿತದಲ್ಲಿ ಕನ್ನಡ!

ಕೃತಿ: ಅಂಕಣಗಳು, ಟಿ. ಎಸ್. ಗೋಪಾಲ್
ಲೇಖಕರು: ಅಂಕಣಗಳು, ಟಿ. ಎಸ್. ಗೋಪಾಲ್
ಕೃತಿಯನ್ನು ಓದಿ

Categories
ಅಂಕಣಗಳು ಪರಿಸರ ವಿಜ್ಞಾನ

ಮರುಭೂಮಿಯನ್ನು ತಡೆಯೋಣ ಬನ್ನಿ!

[fusion_builder_container hundred_percent=”yes” overflow=”visible” type=”flex”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none” align_self=”flex-start” border_sizes_undefined=”” type=”1_1″ first=”true” last=”true” hover_type=”none” link=”” border_position=”all”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

(ಒಂದುಕಾಲಕ್ಕೆ ಅರಲ್ ಸಮುದ್ರವಾಗಿದ್ದ ಪ್ರದೇಶ ಈಗ ಮರುಭೂಮಿ)

ಮರುಭೂಮಿಗಳು ಚಲಿಸುತ್ತವೆ ನಿಮಗೆ ಗೊತ್ತೆ? ಅಮೀಬಾ ಚಲನೆಯ ಹಾಗೆ ಯಾವ ದಿಕ್ಕಿಗೆ ಬೇಕಿದ್ದರೂ ಅವು ಮೈಚಾಚಿ ತಮ್ಮನ್ನು ತಾವೇ ವಿಸ್ತರಿಸಿಕೊಳ್ಳುತ್ತವೆ. ರಾಜಸ್ತಾನದ ಮರುಭೂಮಿ ದಿಲ್ಲಿಯತ್ತ ವರ್ಷಕ್ಕೆ ಹನ್ನೆರಡು ಕಿಲೊಮೀಟರ್ ವೇಗದಲ್ಲಿ ಚಲಿಸುತ್ತಿದೆ. ನಾನ್‍ವೆಜ್ ಹೊಟೆಲ್‍ಗಳ ಸಂಖ್ಯೆ ಹೆಚ್ಚುತ್ತ ಹೋದಂತೆ ಈಗ ಅದರ ವೇಗ ಇಮ್ಮಡಿಯಾಗಿರಬಹುದು. ಕರ್ನಾಟಕದಲ್ಲಿ ದೇಶದ ಎರಡನೆಯ ಅತಿ ದೊಡ್ಡ ಮರುಭೂಮಿ ಸೃಷ್ಟಿಯಾಗುತ್ತಿದೆ ಅವುಗಳನ್ನು ಹತ್ತಿಕ್ಕುವುದು ಹೇಗೆ? ನಮ್ಮ ನೆರೆಯಲ್ಲೇ ಹೊಸದೊಂದು ಮರುಭೂಮಿ ಸೃಷ್ಟಿಯಾಗದಂತೆ ಪ್ರತಿಬಂಧಿಸುವುದು ಹೇಗೆ? ಮರುಭೂಮಿ ನಮ್ಮೂರಿನ ಆಸುಪಾಸಿನಲ್ಲೇ ಇರಬಹುದು. ಅದನ್ನು ಗುರುತಿಸುವುದು ಹೇಗೆ?

ಮರುಭೂಮಿ ಎಂದರೆ ಶಾಶ್ವತ ಬರಗಾಲ. ಮುಖ್ಯವಾಗಿ ಬದುಕಲು ಬೇಕಾದ ನೀರೇ ಇಲ್ಲದ ತಾಣ. ಅರ್ಥಾತ್   ಅದು ಜೀವವಿರೋಧಿ ತಾಣ. ಮರುಭೂಮಿ ಎಂದರೆ ಹಗಲು ಭಾರೀ ಸೆಕೆ, ರಾತ್ರಿ ತೀರಾ ಚಳಿ. ಹಾಗಾಗಿ ಅಲ್ಲಿ ಗಿಡಮರಗಳು ಇರುವುದಿಲ್ಲ, ಹುಲ್ಲು-ಕಳೆ ಇರುವುದಿಲ್ಲ. ಪಶುಪಕ್ಷಿಗಳು, ಕೀಟಪಾಚಿಗಳು, ಶಿಲೀಂಧ್ರಗಳು ಯಾವುದೂ ಇರುವುದಿಲ್ಲ. ಅದು ನಿರ್ಜೀವ ಪರಿಸರವೇ ಆಗಿರುತ್ತದೆ. ಅದು ಭೂಮಿಯ ಮೇಲಿನ ಅತಿ ದೊಡ್ಡ ಪರಿಸರ ಸಮಸ್ಯೆಯ ತಾಣ.

ಭೂಮಿಯ ಬಲುದೀರ್ಘ ಚರಿತ್ರೆಯಲ್ಲಿ ಕೆಲವು ಪ್ರದೇಶಗಳಲ್ಲಿ ಭೂಮಿ ತಂತಾನೇ ಮರುಭೂಮಿ ಆಗಿದ್ದಿದೆ. ಮತ್ತೆ ತಂತಾನೆ ಕ್ರಮೇಣ ಸಹಜ ಭೂಮಿ ಆಗಿದ್ದೂ ಇದೆ. ಆದರೆ ಮನುಷ್ಯ ಅವತರಿಸಿದ ನಂತರ ಮರುಭೂಮಿಗಳ ವಿಸ್ತಾರ ಹೆಚ್ಚುತ್ತಿದೆ. ಚಿಕ್ಕದೊಡ್ಡ ಹೊಸ ಹೊಸ ಮರುಭೂಮಿಗಳೂ ಸೃಷ್ಟಿಯಾಗುತ್ತಿವೆ. ಮರುಭೂಮಿ ಎಂದರೆ ಬಡತನದ ಸಂಕೇತ, ಸಂಕಷ್ಟಗಳ ಸಂಕೇತ. ಅದರ ಪರಿಣಾಮ ದೂರದ ನಗರಗಳ ಮೇಲೂ ಆಗುತ್ತದೆ. ಆದ್ದರಿಂದ ಮರುಭೂಮಿ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು.

ಮರುಭೂಮಿ ಹೇಗೆ ಸೃಷ್ಟಿಯಾಗುತ್ತದೆ?

ಮರುಭೂಮಿ ಸೃಷ್ಟಿ ಎಂದರೆ ಅದು ನಿಧಾನವಾಗಿ ನಡೆಯುವ ಕ್ರಿಯೆ. ಗೊತ್ತೇ ಆಗುವುದಿಲ್ಲ. ಮುಖ್ಯವಾಗಿ ಕಡಿಮೆ ಮಳೆಬೀಳುವ ಒಣಭೂಮಿಯಲ್ಲಿ ಅದು ಆರಂಭವಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಏನೆಂದರೆ ದನ-ಕುರಿಗಳನ್ನು ಮೇಯಿಸುವುದು, ಕಟ್ಟಿಗೆ ಕಡಿಯುವುದು, ನೀರಿಲ್ಲವೆಂದು ಕೊಳವೆ ಬಾವಿ ಕೊರೆಸುವುದು. ಅಗತ್ಯಕ್ಕಿಂತ ಹೆಚ್ಚು ನೀರನ್ನು ಮೇಲೆತ್ತುವುದು. ಇವನ್ನು ನಿರಂತರವಾಗಿ ಮಾಡುತ್ತಿದ್ದರೆ, ಹೊಸ ಚಿಗುರು ಬರುವುದು ಕಡಿಮೆಯಾಗುತ್ತದೆ. ಗಾಳಿಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ನೆಲ ಒಣಗಿ ದೂಳು ಹೆಚ್ಚುತ್ತದೆ. ಕ್ರಮೇಣ ಪರಿಸರ ಹೆಚ್ಚು ಹೆಚ್ಚು ಶುಷ್ಕವಾಗುತ್ತ ಹೋಗುತ್ತದೆ. ಮಳೆ ಬಿದ್ದರೂ ಮಣ್ಣೆಲ್ಲ ತೊಳೆದು ಹೋಗಿ, ಸಾರವಿಲ್ಲದ ಭೂಮಿ ತ್ವರಿತವಾಗಿ ಒಣಗುತ್ತದೆ. ಮರಳುಗಾಡು ಸೃಷ್ಟಿಯಾಗುತ್ತದೆ.

ಒಮ್ಮೆ ಈ ಕ್ರಿಯೆ ಆರಂಭವಾದರೆ ಅದು ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತ ಹೋಗುತ್ತದೆ. ನೀರಿನ ಮೂಲ ಕಡಿಮೆಯಾಗುತ್ತ ಹೋದರೆ ಉದ್ಯೋಗಾವಕಾಶ ಕಡಿಮೆಯಾಗುತ್ತ ಹೋಗುತ್ತದೆ. ಕಟ್ಟಿಗೆ ಕಡಿಯುವುದು ಮತ್ತು ಮೇಕೆ ಮೇಯಿಸುವುದೇ ಬದುಕಿನ ಪ್ರಮುಖ ಆಸರೆಯಾಗುತ್ತದೆ. ಮರುಭೂಮೀಕರಣ ತೀವ್ರವಾಗುತ್ತದೆ. ಕೆರೆಕುಂಟೆಗಳು, ಹಳ್ಳತೊರೆಗಳೇ ಮುಂತಾದ ಜಲಮೂಲಗಳು ಬತ್ತುತ್ತವೆ. ಕೊನೆಗೆ ಬಡವರೂ ಊರು ತೊರೆದು ನಗರಗಳ ಕೊಳೆಗೇರಿಗಳಿಗೆ ಬರುತ್ತಾರೆ. ಸಮಸ್ಯೆ ಇಲ್ಲಿಯೂ ಹೆಚ್ಚುತ್ತದೆ.

ಇಂಥ ಮರುಭೂಮೀಕರಣ ಎಲ್ಲೆಲ್ಲಿ ನಡೆಯುತ್ತಿದೆ?

ಮುಖ್ಯವಾಗಿ ಬಡ, ಹಿಂದುಳಿದ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮರುಭೂಮಿ ವಿಸ್ತೀರ್ಣ ಹೆಚ್ಚು ಹೆಚ್ಚಾಗುತ್ತಿದೆ. ಆಫ್ರಿಕದ ಸಹೇಲ್ ಪ್ರಾಂತದಲ್ಲಿ ಸಹಾರಾ ಮರುಭೂಮಿ ವಿಸ್ತರಿಸುತ್ತಿದೆ. ಅಫ್ಘಾನಿಸ್ತಾನ್, ಕಝಾಖ್‍ಸ್ತಾನ್, ಮೊಂಗೋಲಿಯಾ, ಭಾರತದಂಥ ರಾಷ್ಟ್ರಗಳ ಹಿಂದುಳಿದ ಜಿಲ್ಲೆಗಳಲ್ಲೂ ಶುಷ್ಕ ಪ್ರಾಂತಗಳ ವಿಸ್ತೀರ್ಣ ಹೆಚ್ಚುತ್ತದೆ. ರಾಜಸ್ತಾನದಲ್ಲಿ ಮರುಭೂಮಿ ವಿಸ್ತರಿಸುತ್ತ ಗುಜರಾತ, ಮಧ್ಯಪ್ರದೇಶಗಳತ್ತ ಮೈಚಾಚುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಕರ್ನಾಟಕದಲ್ಲೂ ಮರುಭೂಮೀಕರಣ ಪ್ರಕ್ರಿಯೆ ತೀವ್ರವಾಗುತ್ತಿದೆ. ನಿಮಗೆ ಗೊತ್ತೆ, ರಾಜಸ್ತಾನದ ಥಾರ್ ಮರುಭೂಮಿಯನ್ನು ಬಿಟ್ಟರೆ ಭಾರತದ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುತ್ತ ಶುಷ್ಕತೆ ಹೆಚ್ಚುತ್ತ ಹೋದಹಾಗೆಲ್ಲ ಅದು ‘ಮರುಭೂಮಿ ಸದೃಶ’ ನಾಡು ಎನ್ನಿಸಿಕೊಳ್ಳುತ್ತದೆ. ಗುಲಬರ್ಗಾ, ರಾಯಚೂರು, ವಿಜಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಈ ಬಗೆಯ ಶುಷ್ಕ ಪ್ರಾಂತದ ವಿಸ್ತೀರ್ಣ ಹೆಚ್ಚುತ್ತಿದೆ; ಅಂತರ್ಜಲ ಮಟ್ಟ ಕೆಳಕ್ಕಿಳಿಯುತ್ತಿದೆ. ಮರುಭೂಮಿಯ ವಿಸ್ತೀರ್ಣ ಹೆಚ್ಚುತ್ತ ಹೋದಂತೆ ಗ್ರಾಮಗಳು ಖಾಲಿಯಾಗುತ್ತಿವೆ.

ಸರಿಪಡಿಸುವುದು ಹೇಗೆ?

ಅದು ತೀರ ನಿಧಾನ ಕ್ರಿಯೆ. ಆದರೆ ಭಾರೀ ಹಣ ಸುರಿಯಬೇಕು. ಮೊದಲು ಮರುಭೂಮಿ ವಿಸ್ತರಣೆಯನ್ನು ತಡೆಗಟ್ಟಬೇಕು. ಬಿಸಿಗಾಳಿಯ ಮೂಲಕವೇ ಮರಳುಗಾಡು ಶೀಘ್ರವಾಗಿ ವಿಸ್ತರಿಸುತ್ತದೆ. ಒಣಗಿದ ಮರಳುಕಣಗಳು ಗಾಳಿಗೆ ಕುಪ್ಪಳಿಸುತ್ತ ಸಾಗುತ್ತವೆ. ಅಂಥ ಸಾಗಾಟವನ್ನು ಮೊದಲು ತಡೆಯಬೇಕು. ಅದಕ್ಕಾಗಿ ‘ಮರಳುಬೇಲಿ’ ಅರ್ಥಾತ್ ಮರಳಿನದೇ ಸಾಲುದಿಬ್ಬಗಳನ್ನು ರಚಿಸಬೇಕು. ಅದರ ಪಕ್ಕದಲ್ಲಿ ಕಂದಕವನ್ನು ನಿರ್ಮಿಸಬೇಕು. ಅದೇವೇಳೆಗೆ ಬಿಸಿಲನ್ನು ತಡೆಯಬಲ್ಲ ಸಸ್ಯಗಳನ್ನು (ಉದಾ: ಬಳ್ಳಾರಿ ಜಾಲಿ) ಸಾಲುಸಾಲಾಗಿ ಬೆಳೆಸಬೇಕು. ಅದಕ್ಕೆ ‘ಗಾಳಿಗೋಡೆ’ ಎನ್ನುತ್ತಾರೆ. ಅದೇವೇಳೆಗೆ ಮಣ್ಣು ತೊಳೆದು ಹೋಗದ ಹಾಗೆ ಕಂಟೂರ್ ಕಟ್ಟೆಗಳನ್ನು ನಿರ್ಮಿಸಬೇಕು. ಕಟ್ಟೆಗುಂಟ ಕಿರುಸಸ್ಯಗಳನ್ನು (ಉದಾ: ಕತ್ತಾಳೆ) ಬೆಳೆಸಬೇಕು. ಅದಕ್ಕೆ ಆಸರೆಪಟ್ಟಿ (ಶೆಲ್ಟರ್ ಬೆಲ್ಟ್) ಎನ್ನುತ್ತಾರೆ. ಆಮೇಲೆ ಸಾರವಿಲ್ಲದ ಮಣ್ಣಿನಲ್ಲೂ ಬೆಳೆಯಬಲ್ಲ ಗಿಡಮರಗಳನ್ನು ಬೆಳೆಸಬೇಕು. ಈ ನಡುವೆ ಅಲ್ಲಿ ಮೇಕೆ ಮೇಯದ ಹಾಗೆ, ಬೆಂಕಿ ಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಅಪರೂಪಕ್ಕೆ ಬಿದ್ದ ಮಳೆನೀರು ಅಲ್ಲಲ್ಲೇ ಇಂಗುವ ಹಾಗೆ ಹಳ್ಳಗುಂಡಿಗಳನ್ನು ನಿರ್ಮಿಸಬೇಕು. ಮತ್ತೆ ಮತ್ತೆ ಅದೇ ಸ್ಥಳಕ್ಕೆ ಮರುಭೇಟಿ ಕೊಟ್ಟು ಹಳ್ಳಗಳು ಮರಳಿನಿಂದ ಮುಚ್ಚಿ ಹೋಗಿದ್ದರೆ ತೆರವು ಮಾಡಬೇಕು. ಗಿಡಗಳು ಸತ್ತಿದ್ದರೆ ಮತ್ತೆ ಮಳೆ ಬರುವ ಋತುವಿನಲ್ಲಿ ಹೊಸ ಗಿಡಗಳನ್ನು ಹಚ್ಚಬೇಕು.

ಇದು ಮರಳುಗಾಡಿನ ಚಲನೆಯನ್ನು ತಡೆಗಟ್ಟುವ ಕೆಲಸ. ಅಲ್ಲಿ ಹಸಿರಿನ ನಿರ್ಮಾಣ ಮಾಡಬೇಕೆಂದರೆ ನೆಲದಲ್ಲಿ ಸಾರಸೃಷ್ಟಿ ಮಾಡಬೇಕು. ಅಂದರೆ ಮಣ್ಣಿನ ಸಾರವನ್ನು ಹೆಚ್ಚಿಸಬೇಕು. ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸಬಲ್ಲ ದ್ವಿದಳ ಧಾನ್ಯಗಳ ಬಿತ್ತನೆ ಮಾಡಬೇಕು. ಹುಲ್ಲು ಬೆಳೆಯುವಂತೆ ತೃಣಧಾನ್ಯದ ಬೀಜಗಳನ್ನು ಬಿತ್ತನೆ ಮಾಡಬೇಕು. ಮುಂಜಾನೆ ಇಬ್ಬನಿ ಸಂಗ್ರಹವಾಗುವಂತೆ, ಕಿರುಸಸ್ಯಗಳ, ಕ್ರಿಮಿ ಕೀಟಗಳ ಸಂಖ್ಯೆ ಹೆಚ್ಚುವಂತೆ ಮಾಡಬೇಕು. ಒಟ್ಟಾರೆಯಾಗಿ ಅಲ್ಲಿ ಕ್ರಮೇಣ ಜೀವಿವೈವಿಧ್ಯ ಹೆಚ್ಚುವಂಥ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು.

ಇದಕ್ಕೆಲ್ಲ ಹಣ ಬೇಕು, ಪ್ರಜಾಪ್ರಭುತ್ವದ ಕಠೋರ ವಾಸ್ತವ ಏನೆಂದರೆ, ಮರುಭೂಮಿ ಸದೃಶ ತಾಣಗಳಲ್ಲಿ, ಜನಸಾಂದ್ರತೆ ಕಡಿಮೆ ಇರುವಲ್ಲಿ ಸರಕಾರ ಹೆಚ್ಚು ಹಣ ಹೂಡುವುದಿಲ್ಲ. ಹಣ ಹೂಡಿದರೂ ಪ್ರಗತಿಯನ್ನು ವೀಕ್ಷಿಸಬೇಕಾದ ಅಧಿಕಾರಿಗಳಿಗೆ ಬದ್ಧತೆ, ಪ್ರಾಮಾಣಿಕತೆ ಜಾಸ್ತಿ ಇರಬೇಕಾಗುತ್ತದೆ.

ಅಂದಹಾಗೆ, ಮರುಭೂಮಿ ಎಂದರೆ ರಾಜಸ್ತಾನದ ಮರಳುಗಾಡನ್ನೇ ಕಲ್ಪಿಸಿಕೊಳ್ಳಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೂ ಬರಗಾಲ ನಾನಾ ರೂಪಗಳಲ್ಲಿ ನಿಧಾನವಾಗಿ ಹೆಜ್ಜೆ ಇಡುತ್ತ ಅದು ತನ್ನ ನೆಂಟನನ್ನು ಕರೆತರಬಹದು. ಚಿಕ್ಕ ಪ್ರಮಾಣದಲ್ಲಿ ಕೋಲಾರದಲ್ಲಿ, ಚಿಕ್ಕಮಗಳೂರಿನಲ್ಲಿ, ಗಣಿಗಾರಿಕೆ ನಡೆದಲ್ಲಿ, ಬೆಂಗಳೂರಿನ ಸರಹದ್ದುಗಳಲ್ಲಿ, ಕರಾವಳಿಯ ಅಂಚಿನಲ್ಲಿ ಕೂಡ ಮರುಭೂಮಿ ವಿಸ್ತರಣೆ ಆರಂಭವಾಗಿರಬಹುದು. ಈಚಿನ ವರ್ಷಗಳಲ್ಲಿ ವಿಶ್ವಬ್ಯಾಂಕ್‍ನಿಂದ ಇಂಥ ಉದ್ದೇಶಗಳಿಗೆ ಸಾಕಷ್ಟು ಹಣ ಹರಿದು ಬರುತ್ತಿದೆ. ನಮ್ಮಲ್ಲೂ ಹಿಂದುಳಿದ ಜಿಲ್ಲೆಗಳ ಪಂಚಾಯ್ತಿಗಳಿಗೆ ಈ ಬಾಬಿಗೆಂದೇ ಹಣ ಬಟವಡೆ ಆಗುತ್ತಿರುತ್ತದೆ. ನರೇಗಾದಂಥ ಯೋಜನೆಗಳ ಮೂಲಕವೂ ಶುಷ್ಕತೆಯನ್ನು ತಡೆಯುವ ಕೆಲಸಗಳನ್ನು ಕೈಗೊಳ್ಳಬಹುದು. ಹೀಗೆ ಮಾಡುವ ಮೂಲಕ ‘ಅಗೋಚರ ಮರುಭೂಮಿ’ಗಳನ್ನು ಆರಂಭದಲ್ಲೇ ಚಿವುಟಬಹುದು.

ಏನಿದು ‘ಅಗೋಚರ ಮರುಭೂಮಿ’ ಅಂದರೆ?

ಮೇಲ್ನೋಟಕ್ಕೆ ಅವು ಕಾಣಿಸುವುದಿಲ್ಲ. ಉದಾಹರಣೆಗೆ, ನಿಮ್ಮ ಊರಿನ ನದಿ ಅಥವಾ ಕೆರೆಯಲ್ಲಿ ನೀರು ತುಂಬಿದ್ದರೂ ಕೂಡ ಅದರಲ್ಲಿ ಅನಾದಿಕಾಲದಿಂದ ವಾಸಿಸುತ್ತಿದ್ದ ಮೀನು, ಕಪ್ಪೆ, ಆಮೆ ಮುಂತಾದ ಜಲಚರಗಳು ಕಾಣೆಯಾಗಿರಬಹುದು. ಆಫ್ರಿಕನ್ ಕ್ಯಾಟ್‍ಫಿಶ್‍ನಂಥ ಏಕಜಾತಿಯ ಮೀನು ಸಂಗೋಪನೆ ನಡೆದಿದ್ದರೆ ಅದೂ ಒಂದುರೀತಿಯ ‘ಜಲಮರುಭೂಮಿ’ ಎಂತಲೇ ಹೇಳಬಹುದು.

ಅತಿಯಾದ ನೀರಾವರಿ ಇದ್ದಲ್ಲಿ ‘ಒದ್ದೆ ಮರುಭೂಮಿ’ ಸೃಷ್ಟಿಯಾಗುತ್ತದೆ. ಅಲ್ಲಿ ಜವುಳು ಜಾಸ್ತಿಯಾಗಿ ಯಾವ ಬೆಳೆಯನ್ನು ಕೂಡ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕದ ಸುಮಾರು ಎಲ್ಲ ದೊಡ್ಡ ನೀರಾವರಿ ಯೋಜನೆಗಳಲ್ಲೂ ಅತಿ ಜವುಳಿನಿಂದ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ನಿರುಪಯುಕ್ತವಾಗುತ್ತಿದೆ.

ಹಿಂದೆ ನಾನಾ ಬಗೆಯ ಗಿಡಮರಗಳಿದ್ದ ತಾಣದಲ್ಲಿ ಈಗ ಏಕಜಾತಿಯ ನೀಲಗಿರಿ, ಸರ್ವೆ ಅಥವಾ ಅಕೇಶಿಯಾದಂಥ ತೋಪುಗಳಿದ್ದರೆ ಅದನ್ನು ‘ಹಸುರು ಮರುಭೂಮಿ’ ಎನ್ನಬಹುದು. ಅಲ್ಲಿ ಬೇರೆ ಯಾವ ಜೀವಿ ವೈವಿಧ್ಯ ಇರಲಾರದು. ಓತಿಕ್ಯಾತ, ಹಾವುರಾಣಿ, ಅಳಿಲು, ಮುಂಗುಸಿ, ಹಕ್ಕಿಪಕ್ಷಿಗಳು ವಾಸ ಮಾಡಲಾರವು.

ಗಣಿಗಾರಿಕೆ ನಡೆದಲ್ಲೆಲ್ಲ ಸುತ್ತಲಿನ ಗಿಡಮರಗಳೆಲ್ಲ ನಾಶವಾಗಿ, ಮಣ್ಣೆಲ್ಲ ಮುಚ್ಚಿಹೋಗಿ ಎಲ್ಲಿ ನೋಡಿದಲ್ಲಿ ಕಲ್ಲುಪುಡಿ, ಮರಳುರಾಶಿಯೇ ಕಾಣಬಹುದು. ಅದರ ವಿಸ್ತೀರ್ಣ ಸುತ್ತೆಲ್ಲ ಹೆಚ್ಚುತ್ತ ಸ್ಥಳೀಯ ಮಟ್ಟದಲ್ಲಿ ಮರುಭೂಮಿ ಸದೃಶ ಪರಿಸರ ನಿರ್ಮಾಣವಾಗಬಹುದು.

ಮೇಕೆ, ಜಾನುವಾರುಗಳ ಮುಕ್ತ ಓಡಾಟದಿಂದಾಗಿ ಆ ಪ್ರದೇಶದ ಮೂಲ ಜೀವಿವೈವಿಧ್ಯವೆಲ್ಲ ನಾಶವಾಗಿ ಅಲ್ಲಿ ಬರೀ ಲಂಟಾನಾ, ಯುಪಟೋರಿಯಂ ಮತ್ತು ಕಾಂಗ್ರೆಸ್ ಕಳೆ ಬೆಳೆದಿರಬಹುದು. ನೋಡಲು ಹಸುರಾಗಿ ಕಂಡರೂ ಅದು ಇನ್ನೊಂದು ರೀತಿಯ ಹಸುರು ಮರುಭೂಮಿಯೇ ಆಗಿರುತ್ತದೆ.

ಕಡಲತೀರದಲ್ಲಿ ಕಾಂಡ್ಲಗಿಡಗಳೆಲ್ಲ ನಾಪತ್ತೆಯಾಗಿ ಕ್ರಮೇಣ ಮರಳು ದಿಬ್ಬಗಳು ವಿಸ್ತರಿಸುತ್ತ ಒಳನಾಡಿನತ್ತ ಬರುತ್ತದೆ. ಅದರ ಚಲನೆಯನ್ನು ತಡೆಗಟ್ಟದಿದ್ದರೆ ಮರಳುದಿಬ್ಬದ ವಿಸ್ತರಣೆ ಹೆಚ್ಚುತ್ತ ಹೋಗುತ್ತದೆ. ಮರುಭೂಮಿಯ ವಿಸ್ತರಣೆಯನ್ನು ತಡೆಯಲು ಕೈಗೊಳ್ಳಬೇಕಾದ ಉಪಕ್ರಮಗಳನ್ನು ಇಲ್ಲೂ ಆರಂಭಿಸಬೇಕಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಬರಗಾಲ ತಡೆಗೆ, ಮರುಭೂಮಿ ತಡೆಗೆ ಏನೇನು ಕಾರ್ಯಯೋಜನೆಗಳಿವೆ?

ವಿಶ್ವಸಂಸ್ಥೆಯ ಸದಸ್ಯ ದೇಶಗಳೆಲ್ಲ ಸೇರಿ ‘ಮರುಭೂಮಿತಡೆ ಹೋರಾಟ ಒಪ್ಪಂದ’ (ಯುಎನ್‍ಸಿಸಿಡಿ) ಮಾಡಿಕೊಂಡಿವೆ. ಶ್ರೀಮಂತ ದೇಶಗಳಿಂದ ವಂತಿಗೆ ಪಡೆದು ಬಡದೇಶಗಳಲ್ಲಿ ಮರುಭೂಮಿ ವಿಸ್ತರಣೆಯನ್ನು ತಡೆಯುವ ಅನೇಕ ಯೋಜನೆಗಳನ್ನು ಈ ಒಪ್ಪಂದದಡಿ ಹಮ್ಮಿಕೊಳ್ಳಲಾಗಿದೆ. ಆಫ್ರಿಕದ ನೈಗರ್, ಚಾಡ್, ಇಥಿಯೋಪಿಯಾ ಮುಂತಾದ ದೇಶಗಳಲ್ಲಿ ಕೆಲವು ಮಾದರಿ ‘ಮರುಭೂಮಿ ತಡೆ’ ಕೆಲಸಗಳು ನಡೆದಿವೆ.

ಮರುಭೂಮಿಯನ್ನು ಹತ್ತಿಕ್ಕಿದ ಯಶಸ್ವಿ ಉದಾಹರಣೆಗಳಿವೆಯೆ?

ಎಲ್ಲೋ ತೀರ ಅಪರೂಪಕ್ಕೆ ತೀರ ಚಿಕ್ಕ ಭಾಗದಲ್ಲಿ ಹಣವನ್ನು ನೀರಿನಂತೆ ಹರಿಸಿ ಮರುಭೂಮಿಯನ್ನು ಹತ್ತಿಕ್ಕಿ ಅಲ್ಲಿ ಹಸುರು ಚಿಗುರಿಸಲಾಗಿದೆ. ಅರಬ್ ರಾಷ್ಟ್ರಗಳಲ್ಲಿ ಕೆಲವೆಡೆ ದಟ್ಟ ಮರುಭೂಮಿಯ ನಡುವೆಯೂ ಆಳ ಕೊಳವೆ ಬಾವಿ ಕೊರೆದು ನೀರುಕ್ಕಿಸಿ ದಟ್ಟ ಹಸುರನ್ನು ಬೆಳೆಸಲಾಗಿದೆ. ಇಸ್ರೇಲಿಗೆ ಯಹೂದ್ಯರು ಹೊಸದಾಗಿ ಹೋದಾಗ ಅಲ್ಲಿನ ನೆಲ ಸಾವಿರಾರು ವರ್ಷಗಳಿಂದ ಬಂಜರಾಗಿ, ಮರುಭೂಮಿಯಾಗಿ ಮಲಗಿತ್ತು. ಅದÀನ್ನು ಅತ್ಯಂತ ವ್ಯವಸ್ಥಿತವಾಗಿ ಉಪಚರಿಸಿ ಹತ್ತೇ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನು ರಫ್ತು ಮಾಡುವಷ್ಟು ಪ್ರಮಾಣದಲ್ಲಿ ಬೆಳೆದದ್ದು ಈ ಕಾಲದ ಸಾಹಸವೆಂದೇ ಬಣ್ಣಿಸಲಾಗುತ್ತದೆ. ಆದರೆ ಅಂಥ ಸಾಧನೆಗೆ ನೆರವಾದ ಜೋರ್ಡಾನ್ ನದಿಯೇ ಈಗ ಸಮುದ್ರಕ್ಕೆ ತಲುಪಲಾರದೆ ಬತ್ತಿ ಬತ್ತಿ ಅಪರೂಪಕ್ಕೆ ಹರಿಯುತ್ತಿದೆ.

ಮರುಭೂಮಿ ತಡೆಗೆ ನಾವೇನು ಮಾಡಬಹುದು?

ಮರುಭೂಮಿ ವಿಸ್ತರಣೆ ಎಂಬುದು ಜಾಗತಿಕ ಮಟ್ಟದ ಸಮಸ್ಯೆಯೇ ಆಗಿದ್ದರೂ ಅದಕ್ಕೆ ಉತ್ತರ ನಮ್ಮ ನಮ್ಮ ಊರುಗಳಲ್ಲೇ ಇರುತ್ತದೆ. ನಮಗೆ ಅರಿವೇ ಇಲ್ಲದಂತೆ ನಮ್ಮಲ್ಲಿ ಮರುಭೂಮಿಯ ಅನೇಕ ಆರಂಭಿಕ ಲಕ್ಷಣಗಳು ಕಾಣುತ್ತಿರುತ್ತವೆ. ಗಿಡಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ; ಮಟನ್ ಬೆಲೆ ಹೆಚ್ಚಾಗಿರುವುದರಿಂದ ಮೇಕೆ ಮೇಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಎಲ್ಲಿ ನೋಡಿದರೂ ಮೇಕೆಗಳು. ಅವು ತಿನ್ನದ ಮುಳ್ಳುಕಂಟಿ, ಲಂಟಾನಾ ಮುಂತಾದ ಸಸ್ಯಗಳು ಮಾತ್ರ ಉಳಿದುಕೊಂಡಿರುವುದನ್ನು ಕಾಣುತ್ತೇವೆ. ಜೀವಿವೈವಿಧ್ಯ ಕಡಿಮೆಯಾಗುತ್ತಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರಿಗೆ ನೆಲೆಯೇ ಇಲ್ಲದಂತಾಗುತ್ತಿದೆ. ಕೊಳವೆ ಬಾವಿಗಳು ಆಳಕ್ಕೆ ಇನ್ನೂ ಆಳಕ್ಕೆ ಹೋಗುತ್ತಿವೆ. ಸೆಕೆ ಹೆಚ್ಚುತ್ತಿದೆ. .. … ಇವೆಲ್ಲ ಸಮಸ್ಯೆಗಳ ನಿವಾರಣೆಗೆ ಹೊರಗಿನ ತಜ್ಞರೇನೂ ಬೇಕಾಗಿಲ್ಲ. ಉಪಾಯಗಳು ನಮಗೆ ಗೊತ್ತಿವೆ. ಅವು ಜಾರಿಗೆ ಬರುವಂತೆ ಮಾಡಬೇಕಿದೆ.

ಮೇಕೆ ಮೇಯಿಸುವುದನ್ನು ಮೊದಲು ತಡೆಗಟ್ಟಿ. ಅವು ಮೇಯುತ್ತಿದ್ದರೆ ಗುಡ್ಡಬೆಟ್ಟಗಳಲ್ಲಿ ಯಾವ ಸಸ್ಯವೂ ತಾನಾಗಿ ಬೆಳೆಯಲಾರವು. ಅದರ ಬದಲು ಕುರಿ ಸಾಕಣೆ ಮೇಲು; ಏಕೆಂದರೆ ಅವು ಸಸ್ಯಗಳ ಚಿಗುರುಗಳನ್ನು ತಿನ್ನುವುದಿಲ್ಲ. ಮೇಕೆ ಸಾಕುವುದೇ ಆದರೆ ಅವುಗಳನ್ನು ಕಟ್ಟಿ ಮೇಯಿಸುವಂತೆ ಸಲಹೆ ಮಾಡಿ.

 • ಕೆರೆ ಕಟ್ಟೆಗಳಲ್ಲಿ ಮಳೆನೀರಿನ ಸಂಗ್ರಹಣೆ ಹೆಚ್ಚುವಂತೆ ಕ್ರಮ ಕೈಗೊಳ್ಳಲು ಪಂಚಾಯ್ತಿಯನ್ನು ಆಗ್ರಹಿಸಿ.
 • ನಿಮ್ಮ ಊರಿನಲ್ಲಿ ಹಿಂದೆ ಯಾವ ಯಾವ ಸಸ್ಯಗಳು, ಔಷಧ ಮೂಲಿಕೆಗಳು, ದೊಡ್ಡ ಮರಗಳು ಇದ್ದವು ಎಂಬುದನ್ನು ಹಿರಿಯರನ್ನು ಕೇಳಿ ಪಟ್ಟಿ ಮಾಡಿ. ಅರಣ್ಯ ಇಲಾಖೆಯ ನೆರವಿನಿಂದ ಆ ಸಸ್ಯಗಳನ್ನೆಲ್ಲ ಮತ್ತೆ ಬೆಳೆಸಬಲ್ಲ ನರ್ಸರಿಯನ್ನು ಆರಂಭಿಸಿ. ಮಳೆಗಾಲದ ಆರಂಭದಲ್ಲಿ ಅವುಗಳನ್ನು ಕಂದಾಯ ಭೂಮಿಯಲ್ಲಿ ಗೋಮಾಳದಲ್ಲಿ ಬೆಳೆಸೋಣವೆಂದು ಊರಿನ ಜನರನ್ನು ಪ್ರೇರೇಪಿಸಿ.
 • ಪಂಚಾಯ್ತಿಯಲ್ಲಿ ‘ಉದ್ಯೋಗ ಖಾತ್ರಿ ಯೋಜನೆ’ಗೆ ಎಷ್ಟು ಹಣ ಬರುತ್ತಿದೆ, ಹೇಗೆ ವಿನಿಯೋಗವಾಗುತ್ತಿದೆ ಎಂಬುದನ್ನು ನೀವು ಆಯ್ಕೆ ಮಾಡಿ ಕಳಿಸಿದ ಪ್ರತಿನಿಧಿಗೆ ಕೇಳುತ್ತಿರಿ. ಬರನಿರೋಧಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುಯಾವುದಕ್ಕೆ ಹಣ ಬಳಕೆಯಾಗಿದೆ ಎಂಬುದನ್ನು ಕೇಳುವ ಹಕ್ಕು ನಿಮಗೂ ಇದೆ. ಕಂಟೂರ್ ಕಟ್ಟೆ ನಿರ್ಮಾಣಕ್ಕೆ, ಹೂಳು ತೆಗೆಯಲಿಕ್ಕೆ, ಗಿಡಮರಗಳನ್ನು ಬೆಳೆಸಲಿಕ್ಕೆ, ಮೂಲಿಕಾ ವನಗಳ ನಿರ್ಮಾಣಕ್ಕೆ ಅದರಲ್ಲಿ ಅವಕಾಶಗಳಿವೆ.

 ಬರನಿರೋಧಕ ಕೆಲಸಗಳಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಏನು?

ಈ ಮೊದಲು ಹೇಳಿದ ಅನೇಕ ಕೆಲಸಗಳಿಗೆ ಮಕ್ಕಳೇ ದಾರಿದೀಪವಾಗಬಹುದು. ಊರಿನ ಸುತ್ತ ಕಣ್ಮರೆಯಾಗಿರುವ, ಅಪರೂಪವಾಗುತ್ತಿರುವ ಸಸ್ಯಗಳ ಪಟ್ಟಿಯನ್ನು , ವನ್ಯಜೀವಿಗಳ ಪಟ್ಟಿಯನ್ನು ಅವರೇ ತಯಾರಿಸಲಿ.

ಕಳೆದ ಹತ್ತು ವರ್ಷಗಳಲ್ಲಿ ಊರಿನ ಸುತ್ತ ಕೊಳವೆ ಬಾವಿಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ, ಅಂತರ್ಜಲ ಮಟ್ಟ ಎಷ್ಟು ಆಳಕ್ಕಿಳಿದಿದೆ ಎಂಬ ಮಾಹಿತಿ ಸಂಗ್ರಹಿಸಿ ಆಲೇಖ ಸಿದ್ಧಪಡಿಸಿ.

ಊರಿನ ಸುತ್ತ ಒಂದು ಜೀವಿವೈವಿಧ್ಯ ಪ್ರವಾಸ ಕೈಗೊಳ್ಳಿ. ಊರ ಹಿರಿಯರೂ ನಿಮ್ಮ ಜೊತೆ ಇರಲಿ. ಯಾವ ಅನಪೇಕ್ಷಿತ ಸಸ್ಯಗಳ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ದಾಖಲಿಸಿ. ನೆಲದ ತೇವಾಂಶವನ್ನು ಹೀರಿ ತೆಗೆಯುವ ನೀಲಗಿರಿ, ಸರ್ವೆಗಿಡಗಳು ಕೃಷಿಭೂಮಿಯನ್ನು ಹೇಗೆ ಆಕ್ರಮಿಸುತ್ತಿವೆ ಎಂಬುದನ್ನು ದಾಖಲಿಸಿ.

ಕಳೆದ ಹತ್ತು ವರ್ಷಗಳ ಮಳೆ ಪ್ರಮಾಣದ ಏರಿಳಿತವನ್ನು ದಾಖಲಿಸಿ. ಮಳೆ ಪ್ರಮಾಣ ಅಳೆಯಲು ನಾವೇ ತೀರ ಸರಳವಾದ ಸಾಧನವನ್ನು ನಿರ್ಮಿಸಬಹುದು. ಅದಕ್ಕೆ ಬೇಕಿರುವುದು ತೆರೆದ ಬಾಯಿಯ (ಯಾವುದೇ ಗಾತ್ರದ) ಒಂದು ಪಾತ್ರೆ ಮತ್ತು ಅಳತೆಪಟ್ಟಿ ಅಷ್ಟೆ.

ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಜೀವಿವೈವಿಧ್ಯ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಲು ಹೇಳಿ. ಹೇಳಬೇಕಾದುದು ಅವರ ಕರ್ತವ್ಯ. ಅದನ್ನವರು ನಿರಾಕರಿಸುವಂತಿಲ್ಲ.

ಗ್ರಾಮ ಪಂಚಾಯ್ತಿಯ ಮುಖ್ಯಸ್ಥರನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಒಟ್ಟಾರೆ ಜೀವಸಂಪತ್ತನ್ನು ಉಳಿಸಿಕೊಳ್ಳಲು ಅವರು ಹಮ್ಮಿಕೊಂಡಿರುವ ಯೋಜನೆಗಳ ಕುರಿತು ಉಪನ್ಯಾಸ ನೀಡಲು ಹೇಳಿ. ಅದು ಅವರ ಕರ್ತವ್ಯ.

ನಿಮ್ಮ ಊರಿನ ಕೆರೆಗಳಲ್ಲಿ ಹೂಳು ತುಂಬಿದ್ದರೆ, ಮರ ಕಡಿಯುವ, ಮರಳು ಸಾಗಣೆಯ, ಗಣಿಗಾರಿಕೆಯ ಹಾವಳಿ ಹೆಚ್ಚಾಗಿದ್ದರೆ ಅದರ ಬಗ್ಗೆ ಪಂಚಾಯ್ತಿ ಕಚೇರಿಯ ಎದುರು ಒಂದು ಪ್ರತಿಭಟನಾ ಮೆರವಣಿಗೆ ಮಾಡಿ.

ನೆನಪಿಡಿ, ಮರುಭೂಮಿಯನ್ನು ಹತ್ತಿಕ್ಕುವುದೆಂದರೆ ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯಲೋಪವನ್ನು ಹತ್ತಿಕ್ಕುವುದು, ಭ್ರಷ್ಟಾಚಾರವನ್ನು ಹತ್ತಿಕ್ಕುವುದು, ದುರಾಸೆಯನ್ನು ಹತ್ತಿಕ್ಕುವುದು ಕೂಡ ಹೌದು.

[/fusion_text][/fusion_builder_column][/fusion_builder_row][/fusion_builder_container]

Categories
ಅಂಕಣಗಳು ಪರಿಸರ ವಿಜ್ಞಾನ

ದೊಡ್ಡವರಿಂದ ಕಲಿಯಬೇಕಾದುದೇನು?

Garani venkatesh

ಅನುಕರಣೆಯ ಮೂಲಕ ಕಲಿಕೆ- ಎನ್ನುವುದು ಈ ಜಗತ್ತಿನ ಬದುಕಿನ ಮೂಲಸೂತ್ರ. ಈ ಪ್ರಪಂಚದ ಪ್ರತಿಯೊಂದು ಪ್ರಾಣಿಪಕ್ಷಿಯೂ ಹುಟ್ಟಿನಿಂದ ಮೊದಲುಗೊಂಡು ಸಾಯುವವರೆಗೂ ತನ್ನ ಪೋಷಕರ ಮತ್ತು ಸುತ್ತಲಿನ ಸಮಾಜದ ನಡೆವಳಿಕೆಯನ್ನು ನೋಡುತ್ತ ಅನುಕರಿಸುತ್ತ ತನ್ನ ಬದುಕನ್ನು ರೂಪಿಸಿಕೊಳ್ಳುತ್ತ ಬೆಳೆಯುತ್ತದೆ. ಆನುವಂಶಿಕ ಗುಣಗಳೊಂದಿಗೆ ಬದುಕಿನ ರೀತಿನೀತಿಗಳನ್ನು ಅನುಕರಿಸಿ ಬೆಳೆಯುವ ಗುಣವೂ ಜೀವಿಗೆ ರಕ್ತಗತವಾಗಿರುತ್ತದೆ. ಇರುವೆಯಿಂದ ಆನೆಯವರೆಗೆ, ಇಲಿಯಿಂದ ಹುಲಿಯವರೆಗೆ, ಮಂಗನಿಂದ ಮಾನವನವರೆಗೆ ಈ ಜೀವನಸೂತ್ರವು ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು.

ಆದರೆ, ಜೀವಜಗತ್ತಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೊಸ ಪೀಳಿಗೆಯೊಂದಕ್ಕೆ ತನ್ನ ಹಿರಿಯ ತಲೆಮಾರನ್ನು ಅನುಕರಿಸಬಾರದೆಂದು ಎಚ್ಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಮುಂದಿನ ಪೀಳಿಗೆಗಳಿಗೆ ಈ ಜಗತ್ತನ್ನು ಸುರಕ್ಷಿತವಾಗಿ ಉಳಿಸಿಹೋಗುವುದಕ್ಕೆ ಇಂತಹುದೊಂದು ವಿಚಿತ್ರ ಎಚ್ಚರಿಕೆಯು ಅವಶ್ಯಕವೂ ಆಗಿದೆ. ಜೀವಲೋಕದ ಅತಿಬುದ್ಧಿವಂತಜೀವಿ ಎನ್ನಿಸಿಕೊಂಡಿರುವ ಮನುಷ್ಯನೇ ತನ್ನ ಸಂತಾನಕ್ಕೆ ಈ ಎಚ್ಚರಿಕೆಯನ್ನು ಕೊಡಬೇಕಾಗಿ ಬಂದಿರುವುದು ವರ್ತಮಾನದ ಅತಿಕ್ರೂರ ವ್ಯಂಗ್ಯವೂ ಆಗಿರುವುದು ದುರ್ದೈವ.

ವಿಕಾಸಪಥದಲ್ಲಿ ಮನುಷ್ಯನೆಂಬ ಪ್ರಾಣಿ ಜೀವಿಲೋಕದ ಅತ್ಯಂತ ಕಿರಿಯ ಸದಸ್ಯ. ಅಂದರೆ, ಮನುಷ್ಯನೆಂಬುವನು ಈ ಭೂಮಿಗೆ ಅವತರಿಸಿರುವುದು ಉಳಿದೆಲ್ಲ ಜೀವಿಗಳಿಗಿಂತ ತೀರಾ ಇತ್ತೀಚೆಗೆ. ಶಿಕ್ಷೆಯೇ ಇಲ್ಲದೆ ಅತಿಮುದ್ದುಮಾಡಿ ಬೆಳೆಸಿದರೆ ಮಕ್ಕಳು ಕೆಡುವರಂತೆ.  ಈ ಪ್ರಪಂಚದ ಜೀವಿಗಳಲ್ಲಿ ಅತಿಚಿಕ್ಕವನೆಂದು ಯಾರೂ ಮುದ್ದುಮಾಡದೆ ಹೋದರೂ, ತನ್ನನ್ನು ಹತೋಟಿಯಲ್ಲಿಡುವವರು ಯಾರೂ ಇಲ್ಲದವನಂತೆಯೇ ಮನುಷ್ಯ ಬೆಳೆದುಬಿಟ್ಟ. ಮರದ ಕೊಂಬೆಯನ್ನು ಕತ್ತರಿಸಿ ಮಾಡಿದ ಕಾವು ಕೊಡಲಿಗೆ ಸೇರಿ ತನ್ನ ಕುಲಕ್ಕೆ ಮಾತ್ರವೇ ಮೃತ್ಯುವಾದರೆ, ಈ ಮನುಷ್ಯ ಇಡೀ ಜೀವಲೋಕಕ್ಕೇ ಮಾರಕವಾಗಿ ಬೆಳೆದು ತನ್ನನ್ನೂ ಲೋಕವನ್ನೂ ಅಪಾಯದ ಅಂಚಿಗೆ ತಂದೊಡ್ಡಿದ್ದಾನೆ.

ಕೋಟ್ಯಂತರ ವರುಷಗಳಿಂದ ಕ್ರಮಶಃ ರೂಪುಗೊಳ್ಳುತ್ತ ಬಂದಿರುವ ವಿಕಾಸಶೀಲ ಜೀವಜಗತ್ತು ಅವಸಾನದತ್ತ ಸಾಗಿದೆಯೇ? ಹೌದಾದರೆ, ಇದಕ್ಕೆ ಮನುಷ್ಯನೊಬ್ಬನ್ನನ್ನೇ ಹೊಣೆಮಾಡುವುದು ಹೇಗೆ, ಎನ್ನುತ್ತೀರಾ?

ಈ ಲೋಕದ ಎಲ್ಲ ಜೀವಿಗಳೂ ನಿಸರ್ಗದ ನಿಯಮಗಳಿಗೆ ಬದ್ಧವಾಗಿರುವುದನ್ನು ತಪ್ಪದೆ ಅನುಸರಿಸುತ್ತವೆ. ತಮ್ಮ ದಿನನಿತ್ಯದ ಬದುಕಿಗೆ ಯಾವುದೇ ಅಡ್ಡಿಆತಂಕಗಳಿದ್ದರೂ ಜೀವಿಗಳು ನಿಸರ್ಗವನ್ನು ಮೀರಿ ಹೋಗುವುದಿಲ್ಲ. ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿಶಾಲಿಯೆನಿಸಿಕೊಂಡಿರುವ ಮಾನವ ಮಾತ್ರವೇ ಪ್ರತಿಕ್ಷಣದಲ್ಲೂ ನಿಸರ್ಗವನ್ನು ಅತಿಕ್ರಮಿಸುವ ವಿಪರೀತ ಧಾರ್ಷ್ಟ್ಯವನ್ನು ಪ್ರದರ್ಶಿಸುತ್ತಿದ್ದಾನೆ.

ಅನೇಕ ಜಾತಿಯ ಪ್ರಾಣಿಪಕ್ಷಿಗಳೂ ಕ್ರಿಮಿಕೀಟಗಳೂ ಜೀವಲೋಕದಲ್ಲಿವೆ. ಇವೆಲ್ಲವೂ ಒಂದರ ಬದುಕಿಗೊಂದು ಅಡ್ಡಬಾರದಂತೆ ಆತಂಕವೊಡ್ಡದಂತೆ ಎಚ್ಚರವಹಿಸುತ್ತವೆ, ಆಹಾರಕ್ಕಾಗಿ ಬೇಟೆಯಾಡುವ ಪ್ರವೃತ್ತಿಯ ಜೀವಿಗಳೂ ಅವಶ್ಯಕತೆಯಿದ್ದಹೊರತು ಆಕ್ರಮಣಶೀಲತೆಯನ್ನು ತೋರುವುದಿಲ್ಲ. ಹಗಲಿನಲ್ಲಿ ಬೇಟೆಯಾಡುವ ಕೆನ್ನಾಯಿಗಳು ಹುಲಿಯಂತೆ ಇರುಳುಬೇಟೆಗೆ ಹೋಗುವುದಿಲ್ಲ. ಹುಲಿ ಅಡ್ಡಾಡುವ ಜಾಗದಿಂದ ಚಿರತೆ ದೂರವೇ ಉಳಿಯುತ್ತದೆ. ನೆಲದಲ್ಲಿ ಗೂಡು ಕಟ್ಟುವ ಜೇಡಕ್ಕೆ ಎತ್ತರದಲ್ಲಿ ಹಾರಾಡುವ ಕೀಟದ ಆಸೆಯಿಲ್ಲ. ಹದ್ದು, ಗರುಡಗಳಿಗೆ ಗುಬ್ಬಚ್ಚಿಯ ಆಹಾರವನ್ನು ಕಸಿಯುವ ಚಿಂತೆಯಿಲ್ಲ. ಆದರೆ, ಸದಾ ಕಂಡವರ ಪಾಲನ್ನು ಕಬಳಿಸುವತ್ತಲೇ  ಕೈಚಾಚುವ ಮಾನವನ ಪ್ರವೃತ್ತಿಯನ್ನೊಮ್ಮೆ ಗಮನಿಸಿ. ಪ್ರಾಚೀನಕಾಲದಿಂದಲೂ ಮಾನವರ ಇತಿವೃತ್ತವನ್ನು ರಕ್ತದಿಂದ ಕೆಂಪಾಗಿಸಿರುವ ಯುದ್ಧಗಳಿಗೆ ನೆಪವೊಂದೇ –ದುರಾಸೆ!

ನಿಸರ್ಗದಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ. ತಾನು ಬಲಿತೆಗೆದುಕೊಂಡ ಜಿಂಕೆಯ  ಮಾಂಸವಷ್ಟನ್ನು ಹುಲಿ ಭಕ್ಷಿಸಿ ಹೋದ ಮೇಲೆ ಉಳಿಕೆಯನ್ನು ತಿನ್ನಲು ಹಂದಿನರಿಗಳು ಕಾದಿರುತ್ತವೆ, ಅವು ಬಿಟ್ಟುಹೋದ ಅವಶೇಷಗಳು ಹದ್ದುಕಾಗೆಗಳ ಪಾಲು. ಇನ್ನೂ ಉಳಿದದ್ದು ಹುಳಹುಪ್ಪಟೆಗಳಿಗೆ ಆಹಾರವಾಗಿ ಮಣ್ಣುಸೇರುತ್ತದೆ. ಒಂದೇ ಒಂದು ಮದುವೆಯ ಸಮಾರಂಭದಲ್ಲಿ ನಾವು ಪೋಲುಮಾಡುವ ಆಹಾರ ಎಷ್ಟಿರಬಹುದೆಂಬುದನ್ನು ಅಂದಾಜುಮಾಡಿಕೊಳ್ಳೋಣ. ಇನ್ನೊಂದೆಡೆ ಹಸಿವೆಯಿಂದಲೇ ನರಳಿಸಾಯುವ ಮನುಷ್ಯಜೀವಿಗಳ ಸಂಖ್ಯೆಯೂ ನಮ್ಮನ್ನು ಮೂದಲಿಸುವಷ್ಟಿದೆ.

ಕಾಡಿನಲ್ಲಿ ಎಷ್ಟೇ ಪ್ರಾಣಿಗಳು ಸತ್ತರೂ ಸಾವಿರಾರು ಮರಗಳ ಎಲೆಕೊಂಬೆಗಳು ಬಿದ್ದು ಕೊಳೆತರೂ ಅಲ್ಲಿ ದುರ್ವಾಸನೆಯಿಲ್ಲ. ತ್ಯಾಜ್ಯವೆಂಬುದಿಲ್ಲ. ಎಲ್ಲವೂ ಮಣ್ಣುಸೇರಿ ಫಲವತ್ತತೆಯನ್ನು ಮಿಗಿಲುಗೊಳಿಸುತ್ತವೆ. ನೂರಾರು ಕಿ.ಮೀ. ವಿಸ್ತೀರ್ಣದ ಅರಣ್ಯದಲ್ಲಿ ಮೇಲುಪದರದಲ್ಲಿ ಬಿದ್ದ ಕಳೇಬರ, ತರಗುರೆಂಬೆಗಳನ್ನು ಮಣ್ಣಿಗೆ ಸೇರಿಸುವುದಕ್ಕಾಗಿಯೇ ಸನ್ನದ್ಧವಾದ ಕ್ರಿಮಿಕೀಟಗಳ ಕ್ರಿಯಾಶೀಲ ಪಡೆಯ ನಿರಂತರ ಸೇವಾ ವ್ಯವಸ್ಥೆಯಿದೆ. ಕೋಟಿಗಟ್ಟಲೆ ಹಣ ಖರ್ಚುಮಾಡಿಯೂ ಬೆಂಗಳೂರಿನಂತಹ ನಗರವೊಂದರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗದೆ ನಮ್ಮ ವ್ಯವಸ್ಥೆ ಕೈಚೆಲ್ಲಿಕುಳಿತಿರುವುದನ್ನು ನಿತ್ಯವೂ ನೋಡುತ್ತಿದ್ದೇವಲ್ಲ!

ಪ್ರಕೃತಿಯಲ್ಲಿ ವ್ಯರ್ಥವೆಂಬುದಿಲ್ಲ. ಪರಿಸರವಿಜ್ಞಾನಿಗಳ ಈ ಮಾತನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸುವುದಾದರೆ ಪ್ರಕೃತಿ ಜೀರ್ಣಿಸಿಕೊಳ್ಳಲಾಗದ, ಅದಕ್ಕೆ ಅಪಾಯವೊಡ್ಡುವ ಯಾವ ವಸ್ತುವನ್ನೂ ಪ್ರಕೃತಿಗೆ ಸೇರಿಸಬಾರದು. ನಾಗರಿಕ ಮಾನವ ತನ್ನ ಅನುಕೂಲಕ್ಕಾಗಿ ತಯಾರಿಸಿಕೊಂಡ ಅದೆಷ್ಟು ರಾಸಾಯನಿಕಗಳು ನಿಸರ್ಗದಲ್ಲಿ ನಿರಪಾಯಕಾರಿಯಾಗಿ ಬೆರೆಯಬಲ್ಲುವು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವೇ ಇಲ್ಲ. ನಮ್ಮ ರಸ್ತೆಗಳುದ್ದಕ್ಕೂ ಹಾರಾಡುವ ಪ್ಲಾಸ್ಟಿಕ್ ಚೀಲಗಳೂ, ಚಾಕೊಲೇಟ್ ಸುತ್ತುಕಾಗದಗಳೂ, ಬಳಸಿ ಬಿಸಾಡಿದ ಪೆನ್ನಿನ ರೀಫಿಲ್ಲುಗಳೂ, ಇಂಜೆಕ್ಷನ್ ಸಿರಿಂಜುಗಳೂ, ವಿದ್ಯುದ್ದೀಪದ ಬುರುಡೆಗಳೂ ಶತಶತಮಾನಗಳು ಕಳೆದರೂ ಮಣ್ಣಿನಲ್ಲಿ ಕರಗದೆ ಉಳಿದು ನಮ್ಮ ಮೂರ್ಖತನವನ್ನು ಮೆರೆಸುತ್ತಿರುತ್ತವೆ.

ಹುಟ್ಟುಸಾವುಗಳ ನಡುವಣ ಬದುಕು ಒಂದು ಸವಾಲು. ದಿನನಿತ್ಯ ಈ ಬದುಕನ್ನು ನಡೆಸಲು ಸೂಕ್ತಸಿದ್ಧತೆ ಅತ್ಯವಶ್ಯ- ಎನ್ನುವ ಸತ್ಯ ಜೀವಲೋಕಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಅದಕ್ಕೆ ತಕ್ಕಂತೆ ಸೂಕ್ತ ಹೊಂದಾಣಿಕೆಗಳು ಸದ್ದಿಲ್ಲದೆ ನಡೆದಿರುತ್ತವೆ. ತನ್ನ ಗೂಡು ಶತ್ರುಗಳಿಗೆ ಪತ್ತೆಯಾಗದಿರಲೆಂದು ಪಕ್ಷಿ ಕಲ್ಲುಹೂ, ನಾರು, ಬಲೆಗಳನ್ನು ಅಂಟಿಸುವ ಕಸರತ್ತುಮಾಡುತ್ತದೆ. ಕಾಗೆ ಗೂಡುಕಟ್ಟಿ ಮೊಟ್ಟೆಯಿಡುವುದನ್ನೇ ಕೋಗಿಲೆ ನಿರೀಕ್ಷಿಸುತ್ತಿರುತ್ತದೆ. ತನ್ನೆರಡು ಮೊಟ್ಟೆಗಳನ್ನು ಬಾಡಿಗೆತಾಯಿಗೆ ವಹಿಸಬೇಕಲ್ಲ!  ಹತ್ತಿಪ್ಪತ್ತು ಸದಸ್ಯರಿರುವ ಕೆನ್ನಾಯಿಗಳ ತಂಡದ ಹೆಣ್ಣುಗಳೆಲ್ಲ ಮರಿಮಾಡುವುದಿಲ್ಲ. ಸದಸ್ಯರ ಸಂಖ್ಯೆ ಹೆಚ್ಚಿದರೆ ಎಲ್ಲರ ಹೊಟ್ಟೆ ತುಂಬಿಸುವುದೆಂತು? ಗುಂಪಿನ ನಾಯಕ-ನಾಯಕಿಯರಿಗಷ್ಟೇ ಸಂತಾನಬೆಳೆಸುವ ಅಧಿಕಾರ. ಉಳಿದ ಸದಸ್ಯರು ಶಿಶುಪಾಲನೆಯಲ್ಲಿ ಪಾಲುದಾರರು. ಜಿಂಕೆ ಮರಿಮಾಡುವ ಸಮಯವೇ ಹುಲಿಗೂ ಮರಿಸಾಕಲು ಆದರ್ಶವಾದ ಅವಧಿ. ಮರಿಬಿಟ್ಟು ಬೇಟೆಗಾಗಿ ದೂರಹೋಗಲು ಆಗದ ತಾಯಿಹುಲಿಗೆ ಜಿಂಕೆಯನ್ನು ಕೊಲ್ಲಲಾಗದಿದ್ದರೂ ಅದರ ಮರಿಯಾದರೂ ಸಿಕ್ಕೀತು. ಇಷ್ಟೆಲ್ಲ ಸಂಕೀರ್ಣವಾದ ಜೀವವ್ಯವಸ್ಥೆಯ ಸಮತೋಲನಕ್ಕೆ  ಜೀವಿಗಳ ಸಂಖ್ಯಾಮಿತಿಯೂ ಬಹುಮುಖ್ಯ. ಗೊತ್ತುಗುರಿಯಿಲ್ಲದೆ ಬೆಳೆದಿರುವ ಮಾನವಕುಲದ ಜನಸಂಖ್ಯೆಯು ನಮ್ಮ ಸಾಮಾಜಿಕ-ಆರ್ಥಿಕ-ಭೌಗೋಳಿಕ ಸ್ಥಿತಿಗತಿಗಳ ಮೇಲೆ ಬೀರಿರುವ ದುಷ್ಪರಿಣಾಮಗಳು ಗೋಚರಿಸುತ್ತಲೇ ಇವೆ.

ಪ್ರಕೃತಿಯು ಅಂದಂದಿಗೆ ತಮಗೆ ಅಗತ್ಯವಾದುದನ್ನು ಕೊಟ್ಟೇಕೊಡುವುದೆಂಬ ಭರವಸೆಯೇ ಸಮಸ್ತ ಜೀವರಾಶಿಯಲ್ಲಿ ಜೀವನಶ್ರದ್ಧೆಯನ್ನು ಉಳಿಸಿದೆ. ಇರುವುದೆಲ್ಲವನ್ನೂ ಬಗೆದು ದೋಚುವ ಪ್ರವೃತ್ತಿ ಈ ಜೀವಜಗತ್ತಿನಲ್ಲಿ ಕಾಣುವುದಿಲ್ಲ. ನೂರಾರು ವರ್ಷಗಳಿಂದ ಬೆಳೆದುನಿಂತಿರುವ ಮರಗಳನ್ನೂ, ಸಾವಿರಾರು ವರ್ಷಗಳಿಂದ ಸಂಚಯನಗೊಂಡಿರುವ ಖನಿಜ ಹಾಗೂ ಇಂಧನಸಂಪತ್ತನ್ನೂ ತನ್ನ ತಾತ್ಕಾಲಿಕ ಅಗತ್ಯಗಳಿಗಾಗಿ ಕಳೆದ ಐವತ್ತು ವರುಷಗಳಲ್ಲಿ ಲೂಟಿಮಾಡಿರುವ ಮನುಷ್ಯನ ದುರಾಸೆ ಹೀಗೆಯೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಉಳಿಯಬಹುದಾದ ಭೂಮಿಯ ಸ್ಥಿತಿ ಹೇಗಿದ್ದೀತು ಎನ್ನುವುದು ನಮ್ಮ ನಿಮ್ಮ ಊಹೆಗೆ ಬಿಟ್ಟ ವಿಷಯ.

Garani venkatesh

(ಚಿತ್ರ ಕೃಪೆ:  ಗರಣಿ ವೆಂಕಟೇಶ್)
Categories
ಅಂಕಣಗಳು ಇತಿಹಾಸ ಕನ್ನಡ

ತಾಜಮಹಲ್

Tajmahal

ಉತ್ತರಪ್ರದೇಶ ರಾಜ್ಯದ ಆಗ್ರಾ ಜಿಲ್ಲೆಯಲ್ಲಿ ಹರಿಯುವ ಯಮುನೆಯ ತಡದಲ್ಲಿ ಸುಮಾರು 17 ಹೆಕ್ಟೇರ್ ಪ್ರದೇಶದಲ್ಲಿ  ಮೊಘಲ್ ಗಾರ್ಡನ್ ಪ್ರದೇಶದಲ್ಲಿ ನಿರ್ಮಿಸಲಾದ ತಾಜಮಹಲ್ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಮೊಘಲ್ ದೊರೆ ಷಹಜಹಾನ್ ತಮ್ಮ ಪತ್ನಿ ಮುಮ್ತಾಜ್ ಮಹಲ್ ನೆನಪಿಗೆ ಕಟ್ಟಿಸಿದ ಈ ಪ್ರೇಮಸೌಧದ ನಿರ್ಮಾಣವನ್ನು 1632ರಲ್ಲಿ ಆರಂಭಿಸಿ 1648ರಲ್ಲಿ ಪೂರ್ಣಗೊಳಿಸಲಾಯಿತು.

ತಾಜ್ ಮಹಲ್ ಕಟ್ಟಡದ ದಕ್ಷಿಣಾಪಥ, ಹೊರಾಂಗಣ, ಮತ್ತು ಪ್ರಾರ್ಥನಾ ಗೃಹಗಳನ್ನು 1653ರಲ್ಲಿ ಸೇರ್ಪಡೆಗೊಳಿಸಲಾಯಿತು. ಪವಿತ್ರ ಕುರಾನ್ ಗ್ರಂಥದ ಹಲವಾರು ಉಲ್ಲೇಖಗಳನ್ನು ಶಿಲಾಲೇಖದಲ್ಲಿ ಮೂಡಿಸಲಾಗಿದ್ದು, ಈ ಸ್ಮಾರಕಭವನಕ್ಕೆ ಧಾರ್ಮಿಕ ಆಯಾಮವನ್ನು ನೀಡಿದೆ.  ಈ ಭವನ ನಿರ್ಮಾಣಕ್ಕೆ ಇಡಿಯ ಮೊಘಲ್ ಪ್ರಾಂತ್ಯದ ಖ್ಯಾತ ಶಿಲ್ಪಿಗಳು ಮತ್ತು ಕೆಲಸಗಾರರನ್ನು ಕರೆಸಲಾಗಿತ್ತು. ಅಷ್ಟೇ ಅಲ್ಲದೆ, ಮಧ್ಯ ಏಷಿಯಾ ಮತ್ತು ಇರಾನ್ ದೇಶಗಳಿಂದಲೂ ತಜ್ಞ ನಿರ್ಮಾಣ ತಜ್ಞರು ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಉಸ್ತಾದ್ ಅಹ್ಮದ್ ಲಾಹೋರಿ ಎಂಬ ವಿನ್ಯಾಸಕಾರ ನೇತೃತ್ವದಲ್ಲಿ ತಾಜ್ ಮಹಲ್ ಕಟ್ಟಡವನ್ನು ನಿರ್ಮಿಸಲಾಯಿತು.

ತಾಜ್ಮಹಲ್ ಕಟ್ಟಡದ ವಿನ್ಯಾಸ ನೈಸರ್ಗಿಕ ಸೊಬಗಿಗೆ ಇನ್ನಷ್ಟು ಇಂಬು ನೀಡುವಂತೆ ರೂಪಿಸಲಾಗಿದ್ದು, ಹಸಿರು ಹುಲ್ಲಿನ ಹಾಸು, ಕೆಂಪು ಪಾದಚಾರಿ ಮಾರ್ಗಗಳು, ಸುತ್ತ ನಿಂತ ಮಿನಾರು ಮತ್ತು ಕಮಾನುಗಳು,  ಕಟ್ಟಡದ ಸುತ್ತಲೂ ಆವರಿಸಿ ನಿಂತ ನೀಲಾಗಸ, ವಿವಿಧ ಕಾಲಮಾನಗಳಲ್ಲಿ ಬದಲಾಗುವ ವಾತಾವರಣಕ್ಕೆ ತಕ್ಕಂತೆ ತನ್ನ ವಿಶಿಷ್ಟತೆಯನ್ನು ಮೆರೆಯುತ್ತದೆ. ಅಮೃತ ಶಿಲೆಗಳ ಮೇಲೆ ಮೂಡಿಸಿರುವ ಚಿತ್ತಾರಗಳು ಕಟ್ಟಢದ ಹೊರಾಂಗಣವನ್ನು ಇನ್ನಷ್ಟು ಸುಂದರವಾಗಿಸಿದೆ. ಇಂಡೋ ಇಸ್ಲಾಮಿಕ್ ಶೈಲಿಯ ಅನೇಕ ಸಾಧ್ಯತೆಗಳನ್ನು ಒಳಗೊಂಡಿರುವ ಈ ಸ್ಮಾರಕವು ತನ್ನ ವಿನ್ಯಾಸದಲ್ಲಿ ಮೂಡಿಸಿರುವ ಗೋಡೆಗಳು ಮತ್ತು ವಿನ್ಯಾಸಗಳು ನೆರಳು ಬೆಳಕಿನ ಒಟ್ಟಂದದ ಅಮೂರ್ತ ನಿರ್ಮಾಣವಾಗಿದೆ.

ತಾಜಮಹಲ್ ಕಟ್ಟಡದ ಗುಮ್ಮಟವನ್ನು ಕಟ್ಟಡದ  ಕೇಂಧ್ರವಾಗಿರಿಸದೆ ಹಿನ್ನೆಲೆಯಲ್ಲಿ ರೂಪಿಸಿರುವುದು ಕಟ್ಟಡವನ್ನು ಹೊರಾಂಗಣದಿಂದ ವೀಕ್ಷಿಸುವವರಿಗೆ ಹೆಚ್ಚಿನ ದೃಶ್ಯ ವಿಸ್ತಾರವನ್ನು ಒದಗಿಸಿಕೊಡುತ್ತದೆ. ಕಟ್ಟಡದ ಸುತ್ತಲೂ ಅಷ್ಟ ಭುಜಾಕೃತಿಯ ಮಿನಾರುಗಳು ಈ ಕಟ್ಟಡದ ಒಟ್ಟಾರೆ ಸೊಬಗನ್ನು ಚೌಕಟ್ಟಿನಲ್ಲಿ ಕಟ್ಟಿಕೊಡುತ್ತವೆ.  ಈ ಕಟ್ಟಡವು ಮೊಘಲ್ ದೊರೆ ಷಹಾಜಹಾನ್ ಮತ್ತು ಆತನ ಪತ್ನಿ ಮುಮ್ತಾಜ್ ಮಹಲ್ ಅವರ ಸಮಾಧಿಗಳನ್ನು ಒಳಗೊಂಡಿದ್ದು, ಕುಶಲ ಕರ್ಮಿಗಳಿಂದ ಚಂದವಾದ ವಿನ್ಯಾಸಗಳಿಂದ ಹೂವಿನ ಅಲಂಕಾರಗಳ ಕುಸುರಿ ಕೆಲಸಗಳಿಂದಾಗಿ ಮನ ಸೆಳೆಯುತ್ತವೆ. ಸಮಾಧಿಯ ಮೇಲೆ ಅಲಂಕರಿಸಲಾದ ಹೂವಿನ ಮತ್ತು ಎಲೆಗಳ ವಿನ್ಯಾಸವು ಸಹಜವಾದುದೇನೋ ಎಂಬಷ್ಟು ಸುಂದರವಾಗಿ ಮೂಡಿದ್ದು, ನೋಡುಗರ ಮನಸೆಳೆಯುತ್ತವೆ. ಮುಮ್ತಾಜ್ ಮಹಲ್ ಅವರ ಸಮಾಧಿಯ ಪಶ್ಚಿಮಕ್ಕೆ ಷಹಜಹಾನ್ ಅವರ ಸಮಾಧಿಯನ್ನು 30 ವರ್ಷಗಳ ನಂತರ  ನಿರ್ಮಿಸಲಾಗಿದ್ದು, ಈ ಕಟ್ಟಡಗಳ ಸುತ್ತ ನಿರ್ಮಿಸಲಾಗಿರುವ ನಾಲ್ಕು ಮಿನಾರುಗಳು ಕಟ್ಟಡಕ್ಕೆ ವಿಸ್ತಾರವಷ್ಟೇ ಅಲ್ಲದೆ ದೃಶ್ಯ ಸೊಬಗಿಗೆ ಚೌಕಟ್ಟನ್ನು ರೂಪಿಸಿದೆ.

ತಾಜಮಹಲ್ ಕಟ್ಟಡವು ವಾಸ್ತುಶಿಲ್ಪ ಅಧ್ಯಯನಕಾರರಿಗೆ ಒಂದು ಅಧ್ಯಯನಶೀಲ ನಿರ್ಮಾಣವಾಗಿದ್ದು, ಕಟ್ಟಡದ ಕೇಂದ್ರಕ್ಕೆ ಪೂರಕವಾಗಿ ವಿನ್ಯಾಸಗಳನ್ನು ರೂಪಿಸಲಾಗಿರುತ್ತದೆ. ಕಟ್ಟಡವನ್ನು ಸುಣ್ಣ- ಕೆಂಪು ಮರಳುಗಲ್ಲು, ಇಟ್ಟಿಗೆ ಅಚ್ಚುಗಾರೆಯಿಂದ ನಿರ್ಮಾಣ ಮಾಡಲಾಗಿದ್ದು, ಕಟ್ಟಡದ ಹೊರಮೈಯ್ಯನ್ನು ಅಮೃತಶಿಲೆಯಿಂದ ಆವರಿಸಲಾಗಿದ್ದು, ಅಮೂಲ್ಯ ಹರಳುಗಳಿಂದ ಅಲಂಕರಿಸಲಾಗಿದೆ.

ತಾಜಮಹಲ್ ಇಂದಿಗೂ ಪ್ರೇಮಿಗಳ ಕನಸಿನ ಸೌಧವಾಗಿದೆ, ಮತ್ತು ಪ್ರೇಮದ ಆದರ್ಶಕ್ಕೆ ರೂಪಕವಾಗಿದೆ. ತಾಜಮಹಲ್ ಬಗ್ಗೆ ಕವಿ ರವೀಂದ್ರನಾಥ ಟ್ಯಾಗೋರರು  ‘ಕಾಲಘಟ್ಟದ ಕೆನ್ನೆಯ ಮೇಲೆ ಸರಿದ ಸಮಯದ ಅಶ್ರುಬಿಂದು(The Tear Drop on the Cheek of Time)  ಎಂದು ವರ್ಣಿಸಿದ್ದಾರೆ.

ಈ ಕಟ್ಟಡವನ್ನು  ವಿಶ್ವ ಸಂಸ್ಥೆಯ ಅಂಗವಾದ ಯುನೆಸ್ಕೋ 1983ರಲ್ಲಿ ವಿಶ್ವ ಪರಂಪರೆಯಲ್ಲಿ ಸೇರಿಸಿ ಜಗತ್ತಿನ ಮಾನ್ಯತೆಯನ್ನು ಒದಗಿಸಿ ಕೊಟ್ಟಿದೆ. ಈ ಪ್ರೇಮಸೌಧವು ಕಳೆದ ಐದು ಶತಮಾನಗಳಿಂದಲೂ ದೇಶಕಾಲದ ಜನರ ಕುಶಲತೆ, ಆಡಳಿತಗಾರರ ಕಲಾಪ್ರೇಮ, ಮತ್ತು ನಿರ್ಮಾಣ ಕೌಶಲ್ಯಗಳಿಗೆ ಸಾಕ್ಷಿಯಾಗಿ ನಿಂತಿದೆ.

Categories
ಅಂಕಣಗಳು ಶಿಕ್ಷಣ

ಬೌದ್ಧಿಕ ಆಸ್ತಿಯ ಹಕ್ಕು ಸ್ವಾಮ್ಯ ದಿನ – ಏಪ್ರಿಲ್ 26

‌ನಾನು ನನ್ನದಿದೆಂಬ ವ್ಯಾವೋಹ ಮನುಷ್ಯನಲ್ಲಿ ಯಾವಾಗ ಹುಟ್ಟುತ್ತೆ, ಏಕೆ ಹುಟ್ಟುತ್ತೆ ಅನ್ನುವುದಕ್ಕಿಂತ, ಹುಟ್ಟಿನಿಂದಲೇ ಈ ವ್ಯಾಮೋಹಗಳು ಅವನಿಗೆ ಅಂಟಿಕೊಂಡಿರುತ್ತವೆಂಬುದು ಹೆಚ್ಚು ಸಮಂಜಸ. ಎಲ್ಲ ಕಾಲಗಳಲ್ಲಿ, ನಾಗರೀಕತೆಗಳಲ್ಲಿ ಉಂಟಾಗಿರುವ ಹಿಂಸೆ, ಯುದ್ಧಗಳು ನಡೆದಿರುವುದರ ಹಿಂದಿನ ಪ್ರೇರಣೆಗಳೆಲ್ಲ ಭೂಮಿಯನ್ನು ಹರಡಿಕೊಳ್ಳುವುದರಲ್ಲಿ, ಅತಿಕ್ರಮಿಸುವುದರಲ್ಲಿ ಆಗಿರುವ ಅನಾಹುತಗಳೇ, ಪ್ರಕೃತಿಯನ್ನು, ಹೆಣ್ಣು, ಹೊನ್ನು ಸೇರಿದಂತೆ, ಪಡೆಯುವ, ಆಕ್ರಮಿಸುವ ಪ್ರವೃತ್ತಿಯಿಂದಲೇ ಆಸ್ತಿಯ ಪರಿಕಲ್ಪನೆ ಸೃಷ್ಟಿಯಾದದ್ದು.  ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಈ ವ್ಯಾಮೋಹಗಳನ್ನು ಹದ್ದುಬಸ್ತಿನಲ್ಲಿಡುವ ಪ್ರಕ್ರಿಯೆಯಲ್ಲಿಯೇ ಸಾವಿರಾರು ವರ್ಷಗಳಿಂದ ಆಸ್ತಿ ಹಕ್ಕುಗಳ ಕಟ್ಟಳೆ, ಕಾನೂನುಗಳು, ಧಾರ್ಮಿಕ ಮತ್ತು ನೈತಿಕ ನೆಲೆಗಳಲ್ಲಿ ರೂಪುಗೊಂಡಿದ್ದು, ನಿರ್ಧಿಷ್ಟ ಮೌಲ್ಯಮಾಪನಗಳ ವ್ಯವಸ್ಥೆಗಳು ಮಾರುಕಟ್ಟೆಯ ವೇದಿಕೆಗಳು ಹುಟ್ಟಿಕೊಂಡದ್ದು ಕೂಡ.

ಇವೆಲ್ಲ ಮನುಷ್ಯನ ಭೌತಿಕ ಜಗತ್ತಿನ ಬಹಿರಂಗದ ಆಸ್ತಿಗಳ ವ್ಯಾಪಾರ ವ್ಯವಹಾರವಾದರೆ, ಅವನ ಅಂತರಂಗದ ಆಸ್ತಿಯ ಕಲ್ಪನೆ ಪ್ರಣೀತವಾದದ್ದು. ಯಾವಾಗ, ಹೇಗೆ ಅನ್ನುವುದು ಕುತೂಹಲಕಾರಿಯಾದ ಸಂಗತಿ. ಮೂಲಭೂತವಾಗಿ, ಅಂತರಂಗದ ಆಸ್ತಿಯಾದರೆ ಬುದ್ಧಿಗೆ ಸಂಬಂಧಿಸಿದ್ದು. ಪ್ರತಿಯೊಬ್ಬ ಮನುಷ್ಯನಿಗೂ ವಿಶಿಷ್ಟವಾದ ಬುದ್ಧಿಗೆ ನಿಲುಕುವ ಎಲ್ಲ ಜ್ಞಾನ ಶಾಖೆಗಳಿಗೂ ಅನ್ವಯವಾಗುವಂತಹದ್ದು.  ಅದನ್ನು ಗುರುತಿಸುವ ಕ್ರಮ ವ್ಯಕ್ತಿಯ ಸೃಜನಶೀಲತೆಯಲ್ಲಿ, ಕೌಶಲ್ಯದಲ್ಲಿ ಮತ್ತು ಅವು ವ್ಯಕ್ತವಾಗುವ ಅಭಿವ್ಯಕ್ತಿ ಮಾಧ್ಯಮಗಳ ಮೂಲಕ, ಹೊಸದಾಗಿ ಸೃಷ್ಟಿಸುವ ವಸ್ತು ವಿನ್ಯಾಸಗಳ ಮೂಲಕ. ಆದರೆ ಕಣ್ಣಿಗೆ ಕಾಣುವ, ಕೈಗೆ ನಿಲುಕುವ ನಿಸರ್ಗ ಮತ್ತು ಪ್ರಾಕೃತಿಕ ವಸ್ತುಗಳ ಸ್ವಾಮ್ಯತೆಯ ಬಗ್ಗೆ ಮನುಷ್ಯ ತಳೆದ ಧೋರಣೆ ತೀರ ಹಳೆಯದಾದರೆ, ಕಣ್ಣಿಗೆ ಕಾಣದ, ತರ್ಕಕ್ಕೆ ಸುಲಭವಾಗಿ ಸಿಕ್ಕದ ಸೃಜನಶೀಲತೆಯ ಸ್ವಾಮ್ಯವನ್ನು ಗುರುತಿಸಿಕೊಂಡದ್ದು ತೀರ ಇತ್ತೀಚಿನ ವರುಷಗಳಲ್ಲಿ. ಅದಕ್ಕೆ ಮುಖ್ಯ ಕಾರಣ ಸೃಜನಶೀಲತೆಯನ್ನು ದೈವಿಕ ಶಕ್ತಿಯನ್ನು ಗ್ರಹಿಸಿದ್ದೇ ಇರಬಹುದು, ಆದ್ದರಿಂದಲೇ ಎಲ್ಲ ಸೃಜನಶೀಲ ಸಾಂಸ್ಕೃತಿಕ ಚಟುವಟಿಕೆಗಳನ್ನು ದೇವರಿಗೆ ಸೇರಿದ್ದು ಸಲ್ಲುವಂತಹದ್ದು ಎಂಬ ಜಿಜ್ಞಾಸೆಯನ್ನು ಭಾರತದಂತಹ ಎಲ್ಲ ಪುರಾತನ ನಾಗರೀಕತೆಗಳು ಕೂಡಿಸಿಕೊಂಡಿದ್ದವು. ವಾಸ್ತುಶಿಲ್ಪ, ಶಿಲ್ಪಕಲೆ, ಸಂಗೀತ, ನೃತ್ಯ, ಸಾಹಿತ್ಯ ಎಲ್ಲವೂ ದೇವಾಲಯಗಳಿಗೆ ಪೂರಕವಾಗಿ ಸೃಷ್ಟಿಯಾಗುತ್ತಿದ್ದದ್ದೇ ಇದಕ್ಕೆ ಪುರಾವೆ. ಅದು ತನ್ನದಲ್ಲದ, ಬೆಲೆ ಕಟ್ಟಲಾಗದ, ಸಮಾಜಕ್ಕೆ ಸೇರಿದ ದೈವಿಕ ಆಸ್ತಿ ಎಂದು ಪರಿಗಣಿಸಲಾಗಿತ್ತು.  ಅದಕ್ಕೆ ಮೌಲ್ಯ ಕಟ್ಟುವ ಪ್ರಕ್ರಿಯೆ ಪ್ರಾರಂಭವಾದದ್ದು ಆಧುನಿಕ ವಿಜ್ಞಾನ ಹೆಚ್ಚು ವಿಸ್ತಾರಗೊಳ್ಳಲು ಪ್ರಾರಂಭವಾದ ಕಳೆದ ನಾಲ್ಕು ಶತಮಾನಗಳಲ್ಲಿ.  ಭೌತಿಕ ಜಗತ್ತನ್ನು ವಿವರಿಸುತ್ತಾ ಹೊರಟ ವಿಜ್ಞಾನ ಅಂತರಂಗ ಮತ್ತು ಬಹಿರಂಗದ ಸಮೀಕರಣವನ್ನು ಪ್ರಾರಂಭಿಸಿತು. ಸೃಜನಶೀಲತೆ ಮತ್ತು ಕೌಶಲ್ಯವನ್ನು ಅದು ಎರಡು ವಿಭಾಗಗಳಲ್ಲಿ ಗುರುತಿಸಿತು. ಬುದ್ಧಿಯ ಬಳಕೆಯಿಂದ ವೈಜ್ಞಾನಿಕ ತರ್ಕದ ಮೂಲದಿಂದ ಉಂಟಾದ ಆವಿಷ್ಕಾರಗಳು ಒಂದು ಕಡೆಯಾದರೆ, ಸಾಹಿತ್ಯಕ ಮತ್ತು ಇತರ ಕಲಾ ಮಾಧ್ಯಮಗಳ ಮೂಲಕ ಸೃಷ್ಠಿಯಾಗುವ ಕೃತಿಗಳು, ಪ್ರತೀಕಗಳು ಮತ್ತೊಂದೆಡೆ, ಮೊದಲನೆಯದಕ್ಕೆ ಪೂರಕವಾಗಿ ತಂತ್ರಜ್ಞಾನವೂ ವಿಸ್ತಾರವಾದಂತೆಲ್ಲ ಮನುಷ್ಯನ ದೈಹಿಕ ಶ್ರಮವನ್ನು ಕಡಿಮೆಮಾಡಬಲ್ಲ ವಸ್ತುಗಳು, ಯಂತ್ರಗಳು ಉತ್ಪಾದನೆಗೊಳ್ಳುತ್ತಾ ಹೋದವು. ಉತ್ಪಾದನೆಯ ಆರ್ಥಿಕ ಆಯಾಮದ ಜತೆಗೆ ಗ್ರಾಹಕ ಸಮೂಹವೂ ನಿರ್ಮಾಣವಾಗುತ್ತಾ ಹೋಗಿ, ಗ್ರಾಹಕನಿಗೂ ಒಂದು ಆರ್ಥಿಕ ಆಯಾಮ ಅಗತ್ಯವಾಗುತ್ತಲೇ ಮಾರುಕಟ್ಟೆಗಳೂ ವಿಸ್ತೃತವಾಗಿ ಬೆಳೆಯುತ್ತಾ ಹೋದವು.  ಎಲ್ಲ ಚಟುವಟಿಕೆಗಳಿಗೂ ವಸ್ತುಗಳಿಗೂ ಬೆಲೆ ನಿರ್ಧಾರವಾಗುತ್ತಾ ಹೋದಂತೆ ಅದರಿಂದ ಉತ್ಪತ್ತಿಯಾಗುವ ಮೌಲ್ಯ ಹಂಚಿಕೆಯ ಬಗ್ಗೆಯೂ ವಿಚಾರಗಳು ಹೆಚ್ಚುತ್ತಾ ಹೋದವು. ಆಸ್ತಿಯ ಸ್ವರೂಪವನ್ನು ಪಡೆದವು. ಇನ್ನೊಂದೆಡೆ, ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು ಧಾರ್ಮಿಕ ಕೇಂದ್ರಗಳಿಂದ ಬಿಡುಗಡೆಯಾಗಿ ಸಾಮಾಜಿಕ ಬಯಲಿಗೆ ಹಬ್ಬತೊಡಗಿದಾಗ, ಅದನ್ನು ಹೊಸ ತಾಂತ್ರಿಕ ಆವಿಷ್ಕಾರಗಳ ಮೂಲಕ ನಕಲು ಮಾಡುವ, ಹಂಚುವ ಪ್ರಕ್ರಿಯೆ ಪ್ರಾರಂಭವಾದಂತೆಯೇ, ಅದಕ್ಕೂ ಬೆಲೆ ನಿಗದಿಯಾಗಲು ಆಂಶಿಕ ಲಕ್ಷಣಗಳು ಗುರುತಿಸಲಾದವು. ಮುದ್ರಣ ತಂತ್ರಜ್ಞಾನ, ಸಂಗೀತವನ್ನು ಅಡಕಗೊಳಿಸುವ ಮುದ್ರಿಕೆಗಳು, ಹೊಸ ದೃಶ್ಯ ಮಾಧ್ಯಮಗಳ ಮೂಲಕ ಮಿಕ್ಕೆಲ್ಲ ಅಭಿವ್ಯಕ್ತ ಮಾಧ್ಯಮಗಳನ್ನು ದಾಖಲುಮಾಡುವ ಪ್ರಕ್ರಿಯೆ ಪ್ರಾರಂಭವಾದಂತೆಲ್ಲ, ಮೂಲ ಸೃಜನಶೀಲ ವ್ಯಕ್ತಿಗೆ ಸಲ್ಲಬೇಕಾದ ಆರ್ಥಿಕ ಪಾಲುದಾರಿಕೆಯ ಬೌದ್ಧಿಕ ಆಸ್ತಿಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಿತು.

ಚರಾಚರ ಆಸ್ತಿಗಳ ಹಕ್ಕುಗಳು ರಾಷ್ಟ್ರೀಯ ಗಡಿಗಳನ್ನು, ಕಾನೂನುಗಳನ್ನು ಆಧರಿಸಿದರೆ, ಬೌದ್ಧಿಕ ಆಸ್ತಿಯ ಹಕ್ಕುಗಳ ಸ್ವಾಮ್ಯದ ಹರಹು ಜಾಗತಿಕವಾದುದು.  ಆದ್ದರಿಂದಲೇ ಅದಕ್ಕೆ ಬೇಕಾದ ಕಟ್ಟಳೆ, ಕಾನೂನುಗಳು ಜಾಗತಿಕ ನೆಲೆಯಲ್ಲಿಯೇ ಮಂಡಿತವಾಗಬೇಕಾಯಿತು ಮತ್ತು ಅನುಷ್ಠಾನಕ್ಕೆ ಅಗತ್ಯವಾದಂತಹ ಬಹು ರಾಷ್ಟ್ರೀಯ ನೆಲೆಯ ಸಂಸ್ಥೆಗಳು ಹುಟ್ಟಿಕೊಂಡವು.

ಬೌದ್ಧಿಕ ಆಸ್ತಿಯ ಪ್ರಾಮುಖ್ಯತೆಯನ್ನು ಮತ್ತು ಅಗತ್ಯವಾದ ಕಾನೂನುಗಳನ್ನು ಮೊದಲ ಬಾರಿಗೆ ಗುರುತಿಸಿದ್ದು 1883ರಲ್ಲಿ ಪ್ಯಾರಿಸ್‌ ನಗರದಲ್ಲಿ ನಡೆದ ಸಮಾವೇಶವೊಂದರಲ್ಲಿ.  ಅದರಲ್ಲಿ ಔದ್ಯಮಿಕ ಬೌದ್ಧಿಕ ಆಸ್ತಿಗಳ ಬಗ್ಗೆ ವಿಚಾರ ಮಾಡಲಾಯಿತು. ಹೊಸ ಹೊಸ ವಸ್ತುಗಳ, ಯಂತ್ರಗಳ, ತಂತ್ರಗಳ, ಪ್ರಕ್ರಿಯೆಗಳ ಆವಿಷ್ಕರಣಕ್ಕೆ ಸಂಬಂಧಿಸಿದಂತೆ ಉತ್ಪತ್ತಿಯಾಗುವ ಆಸ್ತಿ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಬಹುರಾಷ್ಟ್ರೀಯ ಒಪ್ಪಂದಗಳ ಮೂಲಕ ನಿಭಾಯಿಸುವ ಆಶಯದೊಂದಿಗೆ ಯೋಜಿಸಲಾಗಿದ್ದ ಆ ಸಮಾವೇಶ ಈ ಹೊತ್ತಿಗೂ ಪ್ರಮುಖವಾದ ಘಟನೆ.  ಅದೇ ರೀತಿ, ಸೃಜನಶೀಲ ಚಟುವಟಿಕೆಗಳ, ಅಂದರೆ ಸಾಹಿತ್ಯ ಮತ್ತು ಇತರ ಕಲೆಗಳ, ಸಾಂಸ್ಕೃತಿಕ ಪರಿಕರಗಳಿಗೆ ಸಂಬಂಧಿಸಿದ ಬೌದ್ಧಿಕ ಆಸ್ತಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದು, ಅದರ ಬಗ್ಗೆ ಸಾಂಸ್ಥಿಕ ನಿಲುವನ್ನು ತೆಗೆದುಕೊಳ್ಳಲು ಸಹಕಾರಿಯಾದ ಮೊದಲ ಅಂತಾರಾಷ್ಟ್ರೀಯ ಸಮಾವೇಶ ನಡೆದದ್ದು 1886ರಲ್ಲಿ, ಸ್ವಿಟ್ಜರ್‌ಲೆಂಡ್‌ ದೇಶದ ಬರ್ನ್ ನಗರದಲ್ಲಿ.  ಎರಡನೇ ಮಹಾಯುದ್ದದ ನಂತರದಲ್ಲಿ ಅಸ್ತಿತ್ವಕ್ಕೆ ಬಂದ ಸಂಯುಕ್ತ ರಾಷ್ಟ್ರ ಸಂಸ್ಥೆಯ 1948ರ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯಲ್ಲಿ ಕಲಂ 27ರಲ್ಲಿ ಬೌದ್ಧಿಕ ಆಸ್ತಿಯ ಹಕ್ಕುಗಳ ವಿಸ್ತೃತವಾದ ರೂಪುರೇಶೆಗಳನ್ನು ಪಟ್ಟಿಮಾಡಲಾಗಿದೆ.  ಈ ಘೋಷಣೆಯಲ್ಲಿ ವೈಜ್ಞಾನಿಕ, ಸಾಹಿತ್ಯಕ ಮತ್ತು ಎಲ್ಲ ಸೃಜನಶೀಲ ನಿರ್ಮಾಣಗಳಿಗೆ ಸಲ್ಲಬೇಕಾದ ಹಕ್ಕಿನ ಬಗ್ಗೆ ಮತ್ತು ಆ ಹಕ್ಕುಗಳನ್ನು ರಾಷ್ಟ್ರಗಳು ಕಾಪಾಡಬೇಕಾದ ನೈತಿಕ ಜವಾಬ್ದಾರಿಯ ಬಗ್ಗೆ ಉಲ್ಲೇಖಿಸಲಾಗಿದೆ.

WIPO (World Intellectual Property Organization)

ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಒಂದು ಮುಖ್ಯವಾದ ಅಂಗ ಸಂಸ್ಥೆ.  ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ 1967ರಲ್ಲಿ ತಾತ್ವಿಕವಾಗಿ ರೂಪುಗೊಂಡು ಸ್ಥಾಪಿತವಾದ ಈ ಸಂಸ್ಥೆ ಏಪ್ರಿಲ್‌ 26, 1970ರಲ್ಲಿ ಸಮಾವೇ‍‍ಶ ಸ್ವರೂಪದಲ್ಲಿ ಸ್ಥಾಪಿತವಾದ ಈ ಸಂಸ್ಥೆ ಸ್ವಿಟ್ವರ್‌ಲ್ಯಾಂಡ್‌ ದೇಶದ ಜಿನಿವಾ ನಗರದಿಂದ ಕಾರ್ಯ ನಿರ್ವಹಿಸುತ್ತಿದೆ.  ಸುಮಾರು 180ಕ್ಕೂ ಹೆಚ್ಚು ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯರಾಗಿದ್ದಾರೆ. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಒಪ್ಪಂದಗಳನ್ನು ನಿರ್ವಹಿಸುತ್ತಿರುವ ಈ ಸಂಸ್ಥೆ ಸುಮಾರು 25ಕ್ಕೂ ಹೆಚ್ಚು ಸಮಾವೇಶಗಳ ನಿರ್ಧಾರಗಳನ್ನು ಕಾರ್ಯರೂಪಕ್ಕೆ ಇಳಿಸಲು ಸನ್ನದ್ಧವಾಗಿದೆ. 1883ರ ಪ್ಯಾರಿಸ್‌ ಔದ್ಯೊಗಿಕ ಹಕ್ಕುಗಳ ಸಮಾವೇಶ ಮತ್ತು 1886 ಬರ್ನ್ ಸೃಜನಶೀಲ ಕಲೆಗಳ ಹಕ್ಕುಗಳ ಸಮಾವೇಶಗಳ ನಿರ್ಣಯಗಳನ್ನು ಈ ಸಂಸ್ಥೆ ತನ್ನ ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡಿದೆ. ಇದು ಒಂದು ಸ್ವಾಯತ್ತ ಆಡಳಿತಾತ್ಮಕ ಸಂಸ್ಥೆಯೂ ಆಗಿರುವುದರಿಂದ ಅಂದರೆ ಬೌದ್ಧಿಕ ಆಸ್ತಿ ಹಕ್ಕುಗಳ ನೊಂದಣಿ ಕಾರ್ಯವನ್ನು ನಿರ್ವಹಿಸುವುದರಿಂದ ಸದಸ್ಯ ರಾಷ್ಟ್ರಗಳ ವಂತಿಕೆಯ ಹೊರತಾಗಿಯೂ ತನ್ನದೇ ಆದ ಆರ್ಥಿಕ ಬಲವೂ ಈ ಸಂಸ್ಥೆಗಿದೆ.

2000ನೇ ಇಸವಿಯಲ್ಲಿ, ಸದಸ್ಯ ರಾಷ್ಟ್ರಗಳು ಸಂಸ್ಥೆಯ ಹುಟ್ಟುಹಬ್ಬದ ನೆನಪಲ್ಲಿ ಏಪ್ರಿಲ್‌ 26ನೇ ತಾರೀಖನ್ನು ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ಸ್ವಾಮ್ಯ ದಿನವೆಂದು ಘೋಷಿಸಿದವು. ಅದರ ಉದ್ದೇಶ, ಬೌದ್ಧಿಕ ಆಸ್ತಿ ಹಕ್ಕಿನ ಬಗ್ಗೆ ಜಾಗತಿಕ ನೆಲೆಯಲ್ಲಿ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿ, ಪ್ರತಿವರ್ಷವೂ ಸೃಜನಶೀಲತೆಯ ಬೇರೆ ಬೇರೆ ಆಯಾಮಗಳನ್ನು ವಿಶೇಷವಾಗಿ ಗುರುತಿಸಲಾಗುತ್ತದೆ. 2016ರ ಏಪ್ರಿಲ್‌ 26ಕ್ಕೆ ಜರುಗುವ ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ದಿನಕ್ಕೆ ಆಯ್ಕೆ ಮಾಡಿಕೊಂಡಿರುವ ಆಯಾಮವೆಂದರೆ ಮುಂದಿನ ದಿನಗಳಲ್ಲಿನ ಸಾಂಸ್ಕೃತಿಕ ಸೃಜನಶೀಲತೆಗೆ ಸಲ್ಲಬೇಕಾದ ಗಮನ ಮತ್ತು ಆರ್ಥಿಕ ಪಾಲುದಾರಿಕೆ.  ಸಾಂಸ್ಕೃತಿಕ ಮರು ಹುಟ್ಟು ಅಥವ ಕಲ್ಪನೆ (Re-imagining Culture) ಅದರ ಧ್ಯೇಯ ವಾಕ್ಯ. ಡಿಜಿಟಲ್‌ ಯುಗದಲ್ಲಿ ಸೃಜನಶೀಲ ಕೃತಿಗಳನ್ನು ಹೆಚ್ಚು ಹೆಚ್ಚು ವಿಸ್ತೃತವಾಗಿ ಹಂಚಲಾಗುತ್ತಿರುವ ಸಾಂಸ್ಕೃತಿಕ ಸಂದರ್ಭದಲ್ಲಿ ಸೃಜನಶೀಲ ವ್ಯಕ್ತಿಗಳಿಗೆ ಸಲ್ಲಬೇಕಾದದ್ದರ ಬಗ್ಗೆ ರೂಢಿಸಬೇಕಾದ ಕಾನೂನು ಮತ್ತು ಅನುಷ್ಠಾನ ವ್ಯವಸ್ಥೆಗಳ ಬಗ್ಗೆ ಈ ವರ್ಷದ ಬೌದ್ಧಿಕ ಆಸ್ತಿ ಹಕ್ಕು ದಿನದ ಕಾರ್ಯಸೂಚಿಯನ್ನು ಉಪಯೋಗಿಸಿಕೊಳ್ಳಲಾಗುವುದು.

Categories
ಅಂಕಣಗಳು ಕನ್ನಡ ಶಿಕ್ಷಣ

ವಿಶ್ವ ಪುಸ್ತಕ ದಿನ ಅಥವಾ ಗ್ರಂಥ ಸ್ವಾಮ್ಯ ದಿನಾಚರಣೆ

ಪುಸ್ತಕಗಳು ಯಾವತ್ತೂ ನಮ್ಮ ಜೀವಸಖರಂತೆ ಎಂಬ ಮಾತು ಸತ್ಯ. ಬಂಧುಗಳು, ಗುರುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಬರಬಹುದು, ಹೋಗಬಹುದು ಆದರೆ ಪುಸ್ತಕಗಳಿವೆಯಲ್ಲಾ ಯಾವತ್ತಿಗೂ ಜೊತೆಗಿರುವ ಸ್ನೇಹಿತರು. ಹಲವು ವರ್ಷಗಳಿಂದ ಮಾನವನ ವಿಕಾಸ ಪ್ರಕ್ರಿಯೆಯಲ್ಲಿ ಮತ್ತು ಜ್ಞಾನಪರಂಪರೆಯನ್ನು ಮುಂದುವರೆಸಿಕೊಂಡು ಬರುವಲ್ಲಿ ಪುಸ್ತಕಗಳ ಪಾತ್ರ ಹಿರಿದು. ಈ ಅಂಶವನ್ನು ಮನಗಂಡ ಯುನಿಸ್ಕೋ 1995ರಲ್ಲಿ ಏಪ್ರಿಲ್ 23ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ಓದುವ ಅಭಿರುಚಿಯನ್ನು ಬೆಳೆಸುವುದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಕಾಪಿರೈಟ್ ಕಾಯ್ದೆ (ಗ್ರಂಥಸಾಮ್ಯ)ಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಯುನಿಸ್ಕೋ ವಿಶ್ವ ಪುಸ್ತಕ ದಿನವನ್ನಾಗಿ ಗುರುತಿಸುವುದಕ್ಕೆ ಮುಂಚೆ 1923ರಲ್ಲಿ ಸೈನ್(ಸ್ಪಾನಿಶ್) ನಲ್ಲಿ ಪುಸ್ತಕ ವ್ಯಾಪಾರಿಗಳು ಪುಸ್ತಕ ದಿನವನ್ನಾಗಿ ಆಚರಿಸುತ್ತಿದ್ದ ಬಗೆಗೆ ನಮಗೆ ದಾಖಲೆಗಳು ದೊರೆಯುತ್ತವೆ. ಇದಕ್ಕಿಂತ ಮುಂಚೆ 1436ರ ಸುಮಾರಿನಲ್ಲಿ ಗುಲಾಬಿ ದಿನವನ್ನಾಗಿ ಆಚರಿಸುತ್ತಿದ್ದುದು ಕಂಡುಬರುತ್ತದೆ. ವಿಶ್ವಪ್ರಸಿದ್ಧ ಬರಹಗಾರ ಸರ್ವಾಂಟೀಸ್ನ ನೆನಪಿನಲ್ಲಿ ಪುಸ್ತಕಗಳನ್ನು ಗುಲಾಬಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇತ್ತು. ಮತ್ತೊಬ್ಬ ಶೇಷ್ಠ ನಾಟಕಕಾರ, ದಾರ್ಶನಿಕ ವಿಲಿಯಂ ಶೇಕ್ಸ್ಪಿಯರ್ನ ಹುಟ್ಟಿದ ಮತ್ತು ಮರಣದ ದಿನವೂ ಏಪ್ರಿಲ್ 23 ಆದುದರಿಂದ ವಿಶ್ವ ಪುಸ್ತಕ ದಿನಾಚರಣೆಗೆ ಹೆಚ್ಚಿನ ಮಹತ್ವ.

ಓದುವ ಅಭಿರುಚಿ: ಸಂಸ್ಕೃತಿಯ ಪ್ರಸರಣೆಯಲ್ಲಿ ಮುಖ ಪಾತ್ರ ಪುಸ್ತಕಗಳದ್ದು. ಅದು ಶಾಸನಗಳಿಂದ, ತಾಳೆ ಓಲೆಗಳಿಂದ, ಈಗ ನಾವು ಓದುತ್ತಿರುವ ಪುಸ್ತಕಗಳು ಮತ್ತು ಇ-ಪುಸ್ತಕಗಳಿರಹುದು. ಕಾಲದಿಂದ ಕಾಲಕ್ಕೆ ಸಮಾಜ, ತಂತ್ರಜ್ಞಾನ ಬೆಳೆದಂತೆಲ್ಲ ಅದರ ಬಾಹ್ಯ ಸ್ವರೂಪ ಬದಲಾಗಿದ್ದರೂ ಆಂತರಂಗಿಕವಾದ ಉದ್ದೇಶ ಒಂದೇ ಆಗಿದೆ. ಶಿಕ್ಷಣ ನಮ್ಮನ್ನು ಅಕ್ಷರಸ್ತರನ್ನಾಗಿ ಮಾಡಬಹುದು ಆದರೆ ಪುಸ್ತಕಗಳು ಮಾತ್ರ ಸಂಸ್ಖೃತಿಯ ವಕ್ತಾರರನ್ನಾಗಿ, ವಾರಸುದಾರರನ್ನಾಗಿ ಮಾಡುತ್ತವೆ. ದಿನಪತ್ರಿಕೆಯಿಂದ ಆರಂಭವಾಗುವ ಓದು ಮುಂದೆ ಪ್ರಪಂಚದ ಅತ್ಯುತ್ತಮ ಕೃತಿಗಳನ್ನು ಓದುವ, ಗ್ರಹಿಸುವ, ವಿಶ್ಲೇಶಿಸುವ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು. ಪ್ರಜ್ಞಾವಂತರಾದ ಎಲ್ಲರ ಕರ್ತವ್ಯ. ಮನುಷ್ಯ ಜೀವಿತದ ಬಹುಪಾಲು ಅವಧಿಯ ಅಂದರೆ 6 ವರ್ಷಕ್ಕೆ ಆರಂಭವಾಗುವ ಓದಿನ/ಕಲಿಕೆಯ ಪ್ರಕ್ರಿಯೆ ಸರಾಸರಿ 60 ವರ್ಷದವರೆವಿಗೂ ಸಾಗುತ್ತದೆ (ಕೆಲವರು 100 ದಾಟಿದರೂ ಈ ಆಭ್ಯಾಸವನ್ನು ಮುಂದುವೆರೆಸುತ್ತಾರೆ). ಹೀಗಾಗಿ ಓದುವಿಕೆ ಎನ್ನುವುದು ಮನುಷ್ಯನ ಬಹಳ ಮುಖ್ಯವಾದ ಒಂದು ಅಂಶ.

ಪುಸ್ತಕೋದ್ಯಮ: ಲೇಖಕ, ಪ್ರಕಾಶಕ ಮತ್ತು ಓದುಗ ಇವು ಮೂರೂ ತ್ರಿವೇಣಿ ಸಂಗಮವಿದ್ದಂತೆ ಎಂಬ ಮಾತನ್ನು ನಿವೃತ್ತ ಗ್ರಂಥಾಲಯ ಅಧಿಕಾರಿಯೊಬ್ಬರು ಆಗಾಗ ಹೇಳುತ್ತಿದ್ದರು. ಈ ಮೂವರೂ ಪರಸ್ಪರ ಪ್ರೇರಕರು ಮಾತ್ರವಲ್ಲ ಪೂರಕರು. ಅಂದರೆ ಲೇಖಕರಿಲ್ಲದೆ ಓದುಗರನ್ನು, ಓದುಗರಿಲ್ಲದೆ ಲೇಖಕರನ್ನು, ಇವರಿಬ್ಬರೂ ಇಲ್ಲದ ಪ್ರಕಾಶಕರನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಓದುಗ ಮತ್ತು ಲೇಖಕರ ನಡುವಿನ ಕೊಂಡಿ ಪ್ರಕಾಶಕ. ಇವರೆಲ್ಲರ ನಡುವೆ ಸೌಹಾರ್ಧಯುತವಾದ ಸಂಬಂಧವಿರಬೇಕು. ಹಾಗಿಲ್ಲದಿದ್ದರೆ ಕೊಂಡಿಗಳನ್ನು ಕಳಚಿದ ಸರಪಣಿಯಂತೆ.

ಕೃತಿಸಾಮ್ಯ ಕಾಯ್ದೆ: ಮೊದಲು ಕೃತಿಸಾಮ್ಯ ಅಥವಾ ಕಾಪಿರೈಟ್ ರಕ್ಷಣೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆದದ್ದು 1886ರಲ್ಲಿ. ಆದರೆ 1800ರ ಸುಮಾರಿನಲ್ಲಿಯೇ ಒಬ್ಬ ಲೇಖಕನ ಕೃತಿ ಮತ್ತೊಂದು ದೇಶದಲ್ಲಿ ಅನುಮತಿ ಇಲ್ಲದೆಯೇ ಪ್ರಕಟವಾಗಿ ಲೇಖಕ ಮತ್ತು ಪ್ರಕಾಶಕನಿಗೆ ನಷ್ಟವಾಗುತ್ತಿದ್ದುದನ್ನು ತಡೆಯಲು ಪ್ರೆಂಚ್ ಲೇಖಕ ವಿಕ್ಟರ್ ಹ್ಯೂಗೋ ಪ್ರಮುಖ ಲೇಖಕರನ್ನೊಳಗೊಂಡ ಇಂಟರ್ ನ್ಯಾಷನಲ್ ಲಿಟರ್ರಿ ಅಂಡ್ ಆರ್ಟಿಸ್ಟಿಕ್ ಅಸೋಸಿಯೇಶನ್ ಮೂಲಕ ಸ್ವಿಡ್ಜರ್ ಲ್ಯಾಂಡಿನಲ್ಲಿ ಸಮ್ಮೇಳನವನ್ನು ನಡೆಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಕಾರಣನಾದ. ಮುಂದೆ ಈ ನಿರ್ಣಯಗಳೇ ಬರ್ನ್ ಕನ್ವೆನ್ಷನ್ ಎಂದು ಪ್ರಖ್ಯಾತವಾಯಿತು. 1971ರಲ್ಲಿ ಪರಿಷ್ಕರಣೆಗೊಂಡ ಬರ್ನ್ ಕನ್ವೆನ್ಷನ್ ನಿಯಮಗಳನ್ನೇ ಭಾರತ ಸೇರಿದಂತೆ ಬಹುಪಾಲು ಎಲ್ಲ ದೇಶಗಳು ಒಪ್ಪಿವೆ.

ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ಇಂಗ್ಲಿಂಡಿನಲ್ಲಿದ್ದ ಕಾಪಿರೈಟ್ ಕಾಯ್ದೆಯನ್ನೇ 1847ರಲ್ಲಿ ಜಾರಿಗೊಳಿಸಿತು. ಆಗ ಒಂದು ಕೃತಿಯ ಗ್ರಂಥಸಾಮ್ಯವು ಒಟ್ಟಾರೆ 47 ವರ್ಶಕ್ಕೆ ಸೀಮಿತವಾಗಿತ್ತು. ಸಮಾಜದಲ್ಲಿನ ರೀತಿ ನಿಯಮಾವಳಿಗಳಿ ಬದಲಾದಂತೆ ಹಲವು ತಿದ್ದುಪಡಿಗಳನ್ನು ತರಲಾಯಿತು. ಕೃತಿಸಾಮ್ಯ ಕಾನೂನನ್ನು 1957ರಲ್ಲಿ (ಜೂನ್ 7)ಆಂಗೀಕೃತಗೊಂಡು 1958ರ ಜನವರಿ 21ರಿಂದ ಜಾರಿಗೆ ತರಲಾಗಿದ್ದರೂ 1983,1984, 1994, 1999, 2010ರಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ.

ಕಾಪಿರೈಟ್ ಕಾಯ್ದೆಯ ಪ್ರಕಾರ ಯಾವುದೇ ಲೇಖಕನ ಕೃತಿಯು ಅವನ ಮರಣ ದಿನಾಂಕದಿಂದ 60 ವರ್ಷಗಳವರೆಗೆ ಅಸ್ತಿತ್ವದಲ್ಲಿರುತ್ತದೆ. ಲೇಖಕ ಮತ್ತು ಪ್ರಕಾಶಕನ ನಡುವಿನ ಒಪ್ಪಂದ ಈ ಪ್ರಕ್ರಿಯೆಯಲ್ಲಿ ಬಹಳ ಮುಖ್ಯ. ಒಂದು ವೇಳೆ ಕಾಪಿರೈಟ್ ಉಲ್ಲಂಘನೆಯಾದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳನ್ನು ಹೂಡಲು ಅವಕಾಶವಿದೆ. ಮೊದಲು ಕೇವಲ ಸಾಹಿತ್ಯ ಕೃತಿಗಳಿಗಿದ್ದ ಈ ಕಾಯ್ದೆಯನ್ನು ಸಂಗೀತ, ಕೃತಿ, ಬಾನುಲಿ ಪ್ರಸಾರ, ನಾಟಕ, ಚಲನಚಿತ್ರದಂಥ ಕಲೆಗಳಿಗೂ ಅನ್ವಯಿಸಿ ಬೌದ್ಧಿಕ ಆಸ್ತಿ ಹಕ್ಕು ಎಂದು ಕರೆಯಲಾಗಿದೆ.

ಆಯಾ ರಾಜ್ಯಗಳು, ಕಾಪಿರೈಟ್ ಕೇಂದ್ರಗಳು ಮತ್ತು ಸಮಿತಿಗಳನ್ನು ಹೊಂದಿದ್ದು ಕರ್ನಾಟಕದಲ್ಲಿ ಕಬ್ಬನ್ ಪಾರ್ಕಿನಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿ ರಾಜ್ಯ, ಕೇಂದ್ರ ಗ್ರಂಥಾಲಯವು ಗ್ರಂಥ ಸಾಮ್ಯ ಕೇಂದ್ರವಾಗಿದ್ದು ಈ ಕಾಯ್ದೆಯ ಪ್ರಕಾರ ನೋಂದಣಿಯನ್ನು ಮಾಡುತ್ತಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿ ಈ ಕಾಯ್ದೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ಕೆಲಸ ನಿರ್ವಹಿಸುತ್ತಿದೆ. ನಮ್ಮಲ್ಲಿ ಈ ಕಾಪಿರೈಟ್ ಕಾಯ್ದೆಯ ಉಲ್ಲಂಘನೆಯ ಹಲವು ಪ್ರಕರಣಗಳಿದ್ದರೂ ನೇರವಾಗಿ ದಾವೆ ಹೂಡಿದ ಪ್ರಸಂಗಗಳು ಕಡಿಮೆ. ಇದಕ್ಕೆ ಲೇಖಕನಿಗೆ ಮತ್ತು ಪ್ರಕಾಶಕನಿಗೆ ಹೆಚ್ಚಿನ ಅರಿವು ಇಲ್ಲದಿರುವುದೇ ಕಾರಣಾವಾಗಿದೆ. ಹೀಗಾಗಿ ಈ ಕಾಯ್ದೆಯ ರೂಪುರೇಷಗಳ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಉದ್ದೇಶವೂ ವಿಶ್ವ ಪುಸ್ತಕ ದಿನದ ಆಶಯಗಳಲ್ಲೊಂದಾಗಿದೆ.

ವಿಶ್ವ ಪುಸ್ತಕ ದಿನವನ್ನು ಹಲವು ಬಗೆಗಳಲ್ಲಿ ಆಚರಿಸಲಾಗುತ್ತಿದ್ದು ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಪ್ರಕಾಶಕರ ಸಂಘ ಮುಂತಾದ ಸಂಸ್ಥೆಗಳು ನಿರಂತರವಾಗಿ ವಿಚಾರ ಸಂಕಿರಣ, ಹಿರಿಯ ಪ್ರಕಾಶಕರಿಗೆ ಗೌರವಾರ್ಪಣೆ ಪುಸ್ತಕೋದ್ಯಮಕ್ಕೆ ಸಂಬಂಧಿಸಿದಂತೆ ಕಾರ್ಯಶಿಬಿರಗಳು (ಕರಡು ತಿದ್ದುವಿಕೆ, ಕೃತಿ ಸಾಮ್ಯ ಇತ್ಯಾದಿ) ಉಚಿತ ಪುಸ್ತಕ ಹಂಚುವಿಕೆ, ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸುವುದು ಇತ್ಯಾದಿ ಕಾರ್ಯಕ್ರಮಗಳ ಮೂಲಕ ಪುಸ್ತಕಗಳ ಕಡೆಗೆ ಜನಸಮುದಾಯದ ಗಮನ ಸೆಳೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇವತ್ತಿನ ದಿನಗಳಲ್ಲಿ ಆಧುನಿಕ ಬದುಕಿನ ಒತ್ತಡ, ವೇಗದ ಮತ್ತು ನಿದಿಷ್ಟ ಗುರಿಯ ಜೀವನ ಕ್ರಮಗಳಿಂದಾಗಿ ಹಾಗೂ ನಮ್ಮ ಶಿಕ್ಷಣ ಕ್ರಮದಲ್ಲಿನ ಬದಲಾವಣೆಗಳು ಹಾಗೂ ಇತರ ಆಕರ್ಷಣೆಗಳಿಂದಾಗಿ ಪುಸ್ತಕೋದ್ಯಮ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಪ್ರಜ್ಞಾವಂತರಾದ ಎಲ್ಲರೂ ಮಕ್ಕಳಿರುವಾಗಲೇ ಓದುವ ಅಭಿರುಚಿಯನ್ನು ಬೆಳೆಸುವ ಕೆಲಸವನ್ನು ಅತ್ಯಂತ ಜರೂರಾಗಿ ಮಾಡಬೇಕಿದೆ. ವಿಶೇಷವಾಗಿ ಪುಸ್ತಕ ಮುದ್ರಣ ನಿರ್ವಹಣೆ, ಪ್ರಸಾರಣೆಯ ಹಲವು ಹಂತಗಳಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ನಿರ್ವಹಣೆ ಸಾಧ್ಯವಾಗಿಲ್ಲ. ಆಧುನಿಕ ಉಪಕರಣಗಲಾದ ಸಾಮಾಜಿಕ ಜಾಲ ತಾಣಗಳು, ಮಾಧ್ಯಮಗಳು, ಮೊಬೈಲ್ಗಳ ಮೂಲಕವೂ ಪುಸ್ತಕ ಪ್ರೀತಿಯನ್ನು ವಿಸ್ತರಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಬೇಕಿದೆ. ಆ ಕೆಲಸಕ್ಕೆ ಸಿದ್ಧರಾಗಲು ಇಂದೇ ಶುಭದಿನ.

Categories
ಅಂಕಣಗಳು ಪರಿಸರ ವಿಜ್ಞಾನ

ವನ್ಯಜೀವಿ ಪ್ರೇಮ – ನಮ್ಮ ನಿಮ್ಮಲ್ಲಿ!?

“ಬದುಕನ್ನು ಕುರಿತು ನಿಜವಾದ ಪ್ರೀತಿಯಿದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ, ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ ಅದರೊಳಗಿನ ಚಟುವಟಿಕೆಯಾಗಲೀ ಜೀವಂತಿಕೆಯಾಗಲೀ ಕಂಡೀತು ಹೇಗೆ?” – ಡಾ|| ಜಿ. ಎಸ್. ಶಿವರುದ್ರಪ್ಪ

ಕಾಡನ್ನು ಉಳಿಸಬೇಕು, ವನ್ಯಪ್ರಾಣಿಗಳನ್ನು ಕಾಪಾಡಬೇಕು ಎಂದು ಮಂತ್ರಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ಅದು ಹೇಗೆಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಅದು ಅರಣ್ಯ ಇಲಾಖೆಯವರ ಕೆಲಸ, ನೋಡಿಕೊಳ್ಳಲಿ – ಎಂಬುದೇ ಬಹುಜನರ ಆಲೋಚನೆ.

ಅಣೆಕಟ್ಟೆಗಳಿಂದ ಹಿಡಿದು ಬೃಹದಾಕಾರದ ವಿದ್ಯುತ್ ಕಂಬಗಳವರೆಗೆ ಸಕಲವೂ ಅರಣ್ಯಪ್ರದೇಶಗಳಲ್ಲೇ ಸ್ಥಾಪಿತವಾಗುವಂತೆ ಯೋಜನೆಗಳನ್ನು ರೂಪಿಸುವ ತಜ್ಞರು, ವೋಟುಗಳು ಮಾತ್ರವೇ ಶಾಶ್ವತ ಸತ್ಯವೆಂದು ಭ್ರಮಿಸಿರುವ ರಾಜಕಾರಣಿಗಳು, ಜನಪರ ಕಾರ್ಯಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡನ್ನೇ ನೋಡದೆ ವನ್ಯಜೀವಿ ಹಾಗೂ ಮಾನವನ ಸಹಜೀವನದ ಬಗೆಗೆ ಭಾಷಣಬಿಗಿಯುವ ಪರಿಸರವಾದಿ ಮಹಾಶಯರು ಮೊದಲಾಗಿ ಸಕಲರೂ ಅರಣ್ಯನಾಶದ ಪಾಲುದಾರರಾಗಿದ್ದಾರೆ.

ಸಾಮಾನ್ಯ ಜನರೂ ಅಷ್ಟೆ: ನಗರ ಪ್ರದೇಶಗಳಲ್ಲಿರುವ ಜನರಿಗೆ ಕಾಡು, ಕಾಡುಪ್ರಾಣಿಗಳೆಂದರೆ ಬೆರಗು ಹುಟ್ಟಿಸುವ ಸಂಗತಿಗಳು; ದಿನನಿತ್ಯದ ಯಾಂತ್ರಿಕ ಬದುಕಿನಿಂದ ಬೇಸತ್ತಾಗ ಎಂದೋ ಒಂದು ದಿನ ಮನತಣಿಸುವ ರಂಜನೆಯ ತಾಣಗಳು.

ಇನ್ನು ಕಾಡಿನ ಸುತ್ತಮುತ್ತ ಇರುವ ಹಳ್ಳಿಗಳ ಜನರಿಗೆ ಕಾಡು – ಅವಶ್ಯಕ ವಸ್ತುಗಳನ್ನು ಉಚಿತವಾಗಿ ಒದಗಿಸುವ ಉಗ್ರಾಣ ಮಾತ್ರ. ಕಾಡುಪ್ರಾಣಿಗಳಿರುವುದೂ ತಮಗಾಗಿ ಅಥವಾ ತಾವು ಬಿಟ್ಟುಕೊಟ್ಟಿರುವುದರಿಂದಲೇ ಎಂಬ ಔದಾರ್ಯ ಬೇರೆ. ತಾವು ಕಾಡಿಗೆ ನುಗ್ಗುವ ಬಗ್ಗೆ ಯಾರೂ ಏನೂ ಕೇಳುವಹಾಗಿಲ್ಲ, ತಮ್ಮಿಂದಾಗಿಯೇ ಕಾಡುಪ್ರಾಣಿಗಳ ವಸತಿಪ್ರದೇಶ ದಿನದಿನಕ್ಕೆ ಕುಗ್ಗತೊಡಗಿರುವುದರ ಬಗೆಗೆ ಚಿಂತೆಯಿಲ್ಲ. ಆದರೆ ಕಾಡುಪ್ರಾಣಿಗಳು ಮಾತ್ರ ಅಪ್ಪಿತಪ್ಪಿಯೂ ನಾಡಿಗೆ ಬರಕೂಡದು.
ಕಾಡು ಮಾನವನ ಅತಿಕ್ರಮಣಕ್ಕಾಗಿಯೇ ಇರುವುದು; ನಾಡಿಗೆ ವನ್ಯಪ್ರಾಣಿ ಬರುವುದು ಮರಣದಂಡನೆಗೆ ಅರ್ಹವಾದ ಅಪರಾಧ – ಎಂದು ಪ್ರಾಣಿಗಳಲ್ಲೇ ಸರ್ವಶ್ರೇಷ್ಠನಾದ ಮಾನವ ನಿರ್ಣಯಿಸಿಕೊಂಡುಬಿಟ್ಟಿದ್ದಾನೆ. ಹೀಗಾಗಿ ಕಾಡಿನ ಪ್ರಾಣಿಗಳು ಮನುಷ್ಯನ ದೃಷ್ಟಿಯಲ್ಲಿ ಉಪದ್ರವಕಾರಿಗಳಾಗಿಬಿಟ್ಟಿವೆ.

ಕೇವಲ ಖುಷಿಗಾಗಿಯೋ, ಮಾಂಸಕ್ಕಾಗಿಯೋ, ಚರ್ಮ-ದಂತ-ಹಾಳುಮೂಳುಗಳಿಗಾಗಿಯೋ ತಮ್ಮವರು ಬೇಟೆಗೆ ತೊಡಗುವುದರ ಬಗೆಗೆ ಅತಿನಿರ್ಲಿಪ್ತವಾಗಿರುವ ಜನತೆಯ ಈ ಇಬ್ಬಂದಿತನ, ಮನುಕುಲದ ಬುಡಕ್ಕೇ ಬೀಳಲಿರುವ ಕೊಡಲಿಪೆಟ್ಟೆಂಬುದನ್ನು ಎಷ್ಟು ಜನ ಅರಿತಿದ್ದಾರೋ ತಿಳಿಯದು.

ಕಾಡಿನ ಒಂದೊಂದು ವೃಕ್ಷಕ್ಕೆ ಬೀಳುತ್ತಿರುವ ಕೊಡಲಿಪೆಟ್ಟಿನೊಡನೆ ವನ್ಯಜೀವಿಗಳ ಉಸಿರೂ ಕುಗ್ಗತೊಡಗಿದೆ. ಬರಗಾಲ, ಭೂಕುಸಿತ, ಪ್ರವಾಹ, ಮಣ್ಣಿನ ಸವಕಳಿ, ಅಣೆಕಟ್ಟೆಗಳಲ್ಲಿ ತುಂಬಿದ ಹೂಳು – ಹೀಗೆ ಹಲವು ಹತ್ತು ರೂಪಗಳಲ್ಲಿ ಪ್ರಕೃತಿ ತಾನು ಸೃಷ್ಟಿಸಿರುವ ಅತಿಬುದ್ಧಿವಂತ ಪ್ರಾಣಿಯ ಅವಿವೇಕಕ್ಕೆ ಸಾಕ್ಷಿಗಳನ್ನು ಮುಂದಿಡುತ್ತಿದೆ.

ಸಹನೆ, ಮಾನವೀಯತೆ, ದಯೆಗಳು ಒತ್ತಟ್ಟಿಗಿರಲಿ. ತಮ್ಮ ಜೀವನಕ್ಕೆ ಮೂಲಾಧಾರವಾದ ಪ್ರಾಣವಾಯು, ಜಲ, ಆಹಾರ, ಔಷಧಗಳ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವ ವನಸಂಪತ್ತು ಶಾಶ್ವತ ಸಂಪನ್ಮೂಲವಲ್ಲ; ಈ ಸಂಪತ್ತು ಉಳಿಯಬೇಕಾದರೆ ಕಾಡುಪ್ರಾಣಿಗಳನ್ನು ಉಳಿಸಿಕೊಳ್ಳಲೇಬೇಕು ಎಂಬ ಸತ್ಯದ ಅರಿವಿನಿಂದಾದರೂ ವನ-ವನ್ಯಜೀವಿಗಳ ಬಗೆಗೆ ಒಂದಿಷ್ಟು ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ.

ನಮ್ಮ ಪೂರ್ವಿಕರು ಹಾವು, ಗರುಡ, ನವಿಲು, ಹುಲಿ, ಆನೆ ಮೊದಲಾಗಿ ಸಕಲ ವನ್ಯಜೀವಿಗಳಿಗೂ ದೈವಿಕ ನೆಲೆಯಲ್ಲಿ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದರು; ನಾಗರಬನ, ದೇವರಕಾಡುಗಳಂಥ ನೆಲೆಗಳನ್ನು ರೂಪಿಸಿದ್ದರು. ಮಾನವೀಯತೆ ಮರೆತರೆ ಹೋಗಲಿ, ದೈವಭೀತಿಯಿಂದಾದರೂ ಕಾಡುಪ್ರಾಣಿಗಳನ್ನು ಉಳಿಸಲೆಂಬ ಆಶಯ ಅವರದ್ದಾಗಿತ್ತು. ಆದರೆ ಈಗ, ಮಾನವನ ನೈತಿಕ ನೆಲೆಯೇ ಕುಸಿಯುತ್ತಿರುವಾಗ ಧಾರ್ಮಿಕ ಕಟ್ಟುಪಾಡನ್ನು ಲೆಕ್ಕಿಸುವುದೆಲ್ಲಿ ಬಂತು?

ಕೃಷ್ಣಮೃಗಗಳ (ಬ್ಲಾಕ್‌ಬಕ್) ಬಗೆಗೆ ಆತ್ಮೀಯತೆ ತೋರುವ ರಾಜಸ್ಥಾನದ ಬಿಷ್ಣೋಯಿ ಜನಾಂಗದವರಾಗಲಿ, ಹೆಜ್ಜಾರ್ಲೆಗಳ (ಪೆಲಿಕಾನ್) ಬಗೆಗೆ ಅಪಾರ ಮಮತೆಯುಳ್ಳ ಕೊಕ್ಕರೆಬೆಳ್ಳೂರಿನ ಜನತೆಯಾಗಲಿ ಇಂದು ಎಲ್ಲರ ಆದರ್ಶವಾಗಬೇಕಿದೆ. ವನ್ಯಜೀವಿಗಳ ಬಗೆಗೆ ನಮ್ಮನಿಮ್ಮಲ್ಲಿ ಪ್ರೀತಿಮೂಡದ ಹೊರತು ವನಸಂಪತ್ತಿನ ರಕ್ಷಣೆ ಅಸಾಧ್ಯ.

ನಮ್ಮ ಸ್ವಾರ್ಥಲಾಲಸೆಗಳನ್ನು ಬದಿಗಿರಿಸಿ ಅರಣ್ಯದ ಪರವಾಗಿ, ಕಾಡುಪ್ರಾಣಿಗಳ ಪರವಾಗಿ ಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದರಿಂದ ನಾವು ಅವುಗಳಿಗೇನೋ ಉಪಕಾರ ಮಾಡುತ್ತಿರುವೆವೆಂದು ಭ್ರಮಿಸಬೇಕಾಗಿಲ್ಲ. ಆದರೆ ಇದು, ನಮ್ಮ ಪೀಳಿಗೆಯ ಬಗೆಗೆ ಪೂರ್ವಿಕರು ತೋರುತ್ತಿದ್ದ ಕಾಳಜಿಯನ್ನೇ ಮುಂದುವರೆಸುತ್ತಿರುವುದರ ಶುಭಸೂಚನೆ ಎಂದು ಧಾರಾಳವಾಗಿ ಹೇಳಬಹುದು.

ಪ್ರಸಿದ್ಧ ಪರಿಸರಶಾಸ್ತ್ರಜ್ಞ ಡಾ| ಎಚ್. ಆರ್. ಕೃಷ್ಣಮೂರ್ತಿಯವರು ಹೇಳುವಂತೆ “ಈ ಲೋಕದಿಂದ ಮನುಷ್ಯವರ್ಗ ಅಳಿದುಹೋದರೆ ವನ್ಯಜೀವಿಗಳು ತಮ್ಮ ಪಾಡಿಗೆ ತಾವು ಆರಾಮವಾಗಿ ಬದುಕಿಯಾವು; ವನ್ಯಜೀವಿಗಳೇನಾದರೂ ಈ ಪ್ರಪಂಚದಿಂದ ಕಾಣೆಯಾದರೆ ಮಾತ್ರ ಅವುಗಳ ಹಿಂದೆಯೇ ಮನುಷ್ಯನಿಗೂ ವಿನಾಶ ಖಂಡಿತ.” ಈ ಸತ್ಯವನ್ನು ಮನಗಂಡು ವನ್ಯಪ್ರಾಣಿಗಳನ್ನೂ ಅವುಗಳ ನೆಲೆಯಾದ ಅರಣ್ಯಗಳನ್ನೂ ಸಂರಕ್ಷಿಸಬೇಕಾದುದು ನಮ್ಮ ತಕ್ಷಣದ ಕರ್ತವ್ಯ. ಅರಣ್ಯದ ಬಗೆಗಿನ ನಮ್ಮ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಳ್ಳುವುದೇ ಈ ನಿಟ್ಟಿನಲ್ಲಿ ನಾವು ಮಾಡಬೇಕಾದ ಮೊದಲ ಕೆಲಸ.

Categories
ಅಂಕಣಗಳು ಕನ್ನಡ ಕಲೆ ರಂಗಭೂಮಿ ಸಂಗೀತ

ರಂಗಭೂಮಿಯ ನಡಿಗೆ

ವೃತ್ತಿರಂಗಭೂಮಿಯು ಪ್ರಚಲಿತವಾಗಿ ಎಲ್ಲ ಕಡೆ ಚಾಚಿಕೊಂಡು ಕೆಲಸ ನಿರ್ವಹಿಸುತ್ತಾ ಇದ್ದ ಕಾಲದಲ್ಲೇ ಇದನ್ನು ನೋಡುತ್ತಾ ಬಂದ ಒಂದು ಸಮೂಹ ಇದರ ಬಗ್ಗೆ ಯೋಚನೆ ಮಾಡುವ, ಈ ರಂಗಭೂಮಿಯ ಪ್ರಯೋಗಗಳ ವಸ್ತುವಿನ ಕುರಿತಾಗಿ ಅವುಗಳ ಅಭಿವ್ಯಕ್ತಿಯ ಕುರಿತಾಗಿ ಚರ್ಚಿಸುವ ಸಲುವಾಗಿ ಒಂದು ಕಡೆ ಕಲೆತವು. ಈ ಬಗೆಯ ರಂಗಭೂಮಿಯ ಕುರಿತಾಗಿ ಆ ಮನಸ್ಸುಗಳಲ್ಲಿ ಒಂದು ಸಣ್ಣ ಅತೃಪ್ತಿ ಕೆಲಸ ಮಾಡಲು ಪ್ರಾರಂಭಿಸಿತ್ತು. ಅವುಗಳ ಫಲವಾಗಿ ಮತ್ತೊಂದು ಬಗೆಯ ರಂಗಭೂಮಿ ಜೀವ ತಳೆಯಲು ಸಿದ್ಧವಾಯಿತು. ಅಂದಿನ ವೃತ್ತಿ ರಂಗಭೂಮಿ ಪ್ರದರ್ಶಿಸುತ್ತಿದ್ದ ನಾಟಕಗಳ ವಸ್ತು ಆಗಿರಬಹುದು, ಅದರ ರೀತಿಯಾಗಿರಬಹುದು, ಅವು ಸಮಕಾಲೀನ ಸ್ಪರ್ಶವನ್ನು ಪಡೆದುಕೊಳ್ಳದೇ ಹೋಗಿದ್ದ ಕಾರಣಕ್ಕಾಗಿ, ಅಂದಿನ ಜನಜೀವನದ ಆಶೋತ್ತರಗಳನ್ನು ಬಿಂಬಿಸೋಕೆ ಸಾಧ್ಯವಾಗುವಂತಹ ರಂಗಭೂಮಿಯ ಹುಡುಕಾಟದಲ್ಲಿ ಫಲಿಸಿದ್ದೇ ಆಧುನಿಕ ರಂಗಭೂಮಿ.

ಇಲ್ಲಿ ಇವರು ಜೀವನೋಪಾಯಕ್ಕಾಗಿ ರಂಗಭೂಮಿಯನ್ನು ಆಶ್ರಯಿಸಿಕೊಳ್ಳಲಿಲ್ಲ. ಕೇವಲ ಸಂತೋಷಕ್ಕೆ, ಅವರು ತಮ್ಮ ಭೌದ್ಧಿಕ ಚಿಂತನೆಗೆ, ಹೊಸ ಹುಡುಕಾಟಕ್ಕೆ ಪ್ರಚಲಿತವಾಗಿದ್ದಂತಹ ಪೌರಾಣಿಕ ನಾಟಕಗಳ ಮರು ಓದಿಗೆ, ಆಧುನಿಕೆ ಓದಿಗೆ, ಅದರ ಕ್ರಿಯಾಶೀಲ ಚಿಂತನೆಗೆ ಮತ್ತು ಆಧುನಿಕ ಅಭಿವ್ಯಕ್ತಿಗೆ ಹಾತೊರೆದಿದ್ದರು. ಅಂತಹ ಸಂದರ್ಭದಲ್ಲಿ ಹುಟ್ಟಿದ್ದು ಹವ್ಯಾಸಿ ರಂಗಭೂಮಿ. ಆದರೆ ಹವ್ಯಾಸಿ ರಂಗಭೂಮಿಯ ಪ್ರೇಕ್ಷಕರು ಕೇವಲ ಪಟ್ಟಣಿಗರು, ವಿದ್ಯಾವಂತರು, ನಗರವಾಸಿಗಳು, ಮಧ್ಯಮ ವರ್ಗದವರು ಮಾತ್ರವೇ ಆಗಿದ್ದರು. ಈ ರಂಗಭೂಮಿಯ ಕೇಂದ್ರ ಕಾಲೇಜುಗಳಾಗಿದ್ದವು. ಹಾಗಾಗಿ ಕಾಲೇಜು ಅಧ್ಯಾಪಕರು, ಸಂಸ್ಥಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳು, ಸರಕಾರಿ ಕಛೇರಿಗಳ ನೌಕರರು, ಬ್ಯಾಂಕ್ ಉದ್ಯೋಗಿಗಳು. ಇವರೆಲ್ಲರೂ ಸೇರಿಕೊಂಡು ರಂಗಚಟುವಟಿಕೆಗಳನ್ನು ನಗರಗಳಲ್ಲಿ ಸಂಜೆಯ ಹೊತ್ತು ಹಮ್ಮಿಕೊಳ್ಳೋಕೆ ಪ್ರಾರಂಭಿಸಿದರು. ಸಾಮಾಜಿಕವಾದ ಸಮಕಾಲೀನ ವಸ್ತುಗಳಿಗೆ ಆದ್ಯತೆ ಇರುತ್ತಿತ್ತು. ಪೌರಾಣಿಕ, ಐತಿಹಾಸಿಕ, ಚಾರಿತ್ರಿಕ ವಸ್ತುಗಳೂ ಕೂಡ ಸಮಕಾಲೀನವಾಗಿ ಪ್ರಸಕ್ತ ಆಗುವ ಹಾಗೆ ರಚಿತಗೊಂಡವು. ಈ ಸಂದರ್ಭದಲ್ಲಿ ನಾಟಕಕಾರ ಕೇಂದ್ರವ್ಯಕ್ತಿಯಾದ. ಆತ ಬರೆದ ಹಾಗೆ ನಾಟಕಗಳನ್ನು ಆಡಿಸಬೇಕಾಗುತ್ತಿತ್ತು. ವೃತ್ತಿರಂಗಭೂಮಿಯ ಆಡಂಬರದ ರಂಗಸಜ್ಜಿಕೆಗೆ, ವಸ್ತ್ರಗಳ ಬದಲಾಗಿ ವಾಸ್ತವ ಮಾರ್ಗದ ರಂಗಸಜ್ಜಿಕೆ, ಪ್ರಯೋಗಗಳು ಬಳಕೆಗೆ ಬಂದವು. ಈ ಸಂದರ್ಭದಲ್ಲಿ ಇಂಥಹ ರಂಗಮಾರ್ಗಕ್ಕೆ ಕಾರಣರಾದವರು ಟಿ.ಪಿ.ಕೈಲಾಸಂ, ಶ್ರೀರಂಗರು ಮತ್ತು ಪರ್ವತವಾಣಿ.

ಬೆಂಗಳೂರಿನಲ್ಲಿ ಇಂಥಹ ಒಂದು ರಂಗಭೂಮಿಯ ಅಂಕುರಾರ್ಪಣವಾದದ್ದು 1909 ರಲ್ಲಿ. The ameatur democratic association ಸ್ಥಾಪನೆಯಾಯಿತು. ನಂತರದ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ, ಹಳೇ ಮೈಸೂರಿನ ಕಡೆಗಳಲ್ಲಿ ಇದರ ಗಾಳಿ ಬೀಸತೊಡಗಿತು. ಪಾಶ್ಚಾತ್ಯ ವಿದ್ಯಾಭ್ಯಾಸದ ಪದ್ಧತಿಯಿಂದ ಪ್ರಭಾವಿತರಾಗಿ, ಇಂಗ್ಲೆಂಡಿನಲ್ಲಿ ಉಚ್ಚ ಶಿಕ್ಷಣ ಪಡೆದು ಬಂದಂತಹ ಶ್ರೀರಂಗರು, ಟಿ.ಪಿ.ಕೈಲಾಸಂ ಅವರುಗಳು ತಾಯ್ನಾಡಿಗೆ ಮರಳಿದ ಮೇಲೆ ಆಗ ಪ್ರಚಲಿತವಾಗಿದ್ದ ರಂಗಭೂಮಿಯನ್ನು ಕಂಡು ರೋಸಿ ಹೋಗಿ, ಹೊಸ ಮಾದರಿಯ ರಂಗಭೂಮಿ ನಿರ್ಮಿಸಲು ಪ್ರಯತ್ನಿಸಿದರು. ಸಾಮಾಜಿಕ ನಾಟಕಗಳ ಕಡೆ ಎಲ್ಲರ ಗಮನ ಸೆಳೆದರು. ನಂತರ ಪರ್ವತವಾಣಿಯವರು ಸಹ ಆ ಸಾಲಿಗೇ ಸೇರ್ಪಟ್ಟರು. ವಸ್ತು, ತಂತ್ರಗಾರಿಕೆ, ಅಭಿನಯ ಶೈಲಿ ಎಲ್ಲವೂ ಬದಲಾದವು. ಪಾಶ್ಚಾತ್ಯ ನಾಟಕಗಳ ಅನುವಾದಗಳು, ರಂಗರೂಪಗಳು, ಸ್ವತಂತ್ರ ಕೃತಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿದವು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ, ಸಿ.ಕೆ.ವೆಂಕಟರಾಮಯ್ಯ, ಲಕ್ಷ್ಮಣರಾವ್ ಬೇಂದ್ರೆ, ನಾರಾಯಣ ರಾವ್ ಹುಯಿಲಗೋಳ್ ಎಲ್ಲರೂ ಈ ಕೈಂಕರ್ಯಕ್ಕೆ ಕೈ ಜೋಡಿಸಿದರು. ಆದರೆ ಎಲ್ಲವೂ ಮಾತಿಗೆ ಪ್ರಾಶಸ್ತ್ಯ ಇರುವಂತಹ ನಾಟಕಗಳಾಗಿ ಹೊರಹೊಮ್ಮಿದವು. ಮಾತಿನ ಚಮತ್ಕಾರದ ವ್ಯಾಮೋಹದಿಂದ ವಿದ್ಯಾವಂತ ಜನಗಳನ್ನು ಸೆಳೆಯುವಲ್ಲಿ ಸಮರ್ಥವಾಯಿತು. ಹಾಡು, ಕುಣಿತ, ವೈಭವಗಳೆಲ್ಲ ಮರೆಯಾದವು. ನಿರ್ದೇಶಕನ ಕೈ ಚಳಕವೆಂಬುದು ಕಾಣೆಯಾಗಿತ್ತು.

ಇದು ಹೀಗೆ ಬಹಳಷ್ಟು ವರ್ಷಗಳ ಕಾಲ ನಡೆಯಿತು. ನಂತರದ ಅವಧಿಯಲ್ಲಿ ದೇಶದಲ್ಲಿ ಒಂದು ಕ್ರಾಂತಿಕಾರಕ ಬೆಳವಣಿಗೆಯಾಯಿತು. ಕಮಲಾದೇವಿ ಚಟ್ಟೋಪಾದ್ಯಾಯ ಅವರ ಬಹುದಿನದ ಕನಸು “National school of Drama” ಸ್ಥಾಪಿತಗೊಂಡಿತು. ರಂಗಭೂಮಿಯನ್ನು ಶೈಕ್ಷಣಿಕವಾಗಿ ಕಲಿಯುವಂತಹ ಒಂದು ವ್ಯವಸ್ಥೆ ಜಾರಿಯಾಯಿತು. ಈ ಸಂಸ್ಥೆಯಲ್ಲಿ ಕರ್ನಾಟಕದಿಂದಲೂ ಬಹಳಷ್ಟು ಜನ ಅಲ್ಲಿಗೆ ತೆರಳಿ ಕಲಿತುಬಂದರು. ಅಲ್ಲಿಂದ ಕಲಿತುಬಂದವರಲ್ಲಿ ಬಿ.ವಿ.ಕಾರಂತರು ಪ್ರಾಯೋಗಿಕ ರಂಗಭೂಮಿಯ ಅಭ್ಯುದಯಕ್ಕೆ ಕಾರಣರಾದರು. ಜೊತೆಗೇ ಬಿ.ಚಂದ್ರಶೇಖರ್, ಆರ್.ನಾಗೇಶ್, ಪ್ರಸನ್ನ, ಸಿ.ಜಿ.ಕೃಷ್ಣಸ್ವಾಮಿ, ನರಸಿಂಹನ್, ಮೈಸೂರಿನ ಸಿಂಧುವಳ್ಳಿ ಅನಂತಮೂರ್ತಿ, ನ.ರತ್ನ, ವಿಶ್ವನಾಥ ಮಿರ್ಲೆ, ಹೀಗೇ ಹಲವರು ಇಂತಹ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲೇ ಬಂದರು. ಹೀಗೆ ಬೆಂಗಳೂರಿನಲ್ಲಿ ಕೆಲಸ ಮಾಡಿದವರದ್ದೊಂದು ದೊಡ್ಡ ಪಟ್ಟಿಯೇ ನೀಡಬಹುದು.

ರಂಗಭೂಮಿಯ ಸುವರ್ಣಯುಗ ಎಂದೇ ಕರೆಯಲ್ಪಡುವ 1970-80 ರ ದಶಕದ ನಾಟಕಗಳಂತು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಹಾಡು, ಕುಣಿತದ ಜೊತೆ ಜೊತೆಯಲ್ಲೇ ಆಧುನಿಕ ಚಿಂತನೆಯೂ ಬೆರೆತುಕೊಂಡಿತು. ಹಲವಾರು ಜಾನಪದ ಪ್ರಕಾರಗಳನ್ನು ನಾಟಕದೊಳಗೆ ಮಿಳಿತಗೊಳ್ಳುವ ಹಾಗೆ ನಿರ್ದೇಶಕರು ಹೊಸತನವನ್ನು ತಂದರು. ರಂಗಭೂಮಿ ಎಂಬುದು ಸಂಭ್ರಮದ ಚಟುವಟಿಕೆಯಾಗಿ ಪರಿಣಮಿಸಿತು. ಇದರ ಪ್ರಭಾವ ಇಡೀ ಕರ್ನಾಟಕದಾದ್ಯಂತ ಹರಡಿತು. ಗಿರೀಶ್ ಕಾರ್ನಾಡ್, ಲಂಕೇಶ್ ಮತ್ತು ಚಂದ್ರಶೇಖರ ಕಂಬಾರರ ಭರಾಟೆ ಶುರುವಾಗಿದ್ದು ಇದೇ ಕಾಲಘಟ್ಟದಲ್ಲಿ. ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಬಗ್ಗೆ ಆಯಸ್ಕಾಂತದಂತಹ ಸೆಳೆತ ಪ್ರಾರಂಭವಾಯಿತು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡ್ಯಾನ್ಸ್,ಡ್ರಾಮಾ, ಮ್ಯೂಸಿಕ್ ವಿಭಾಗ ತೆರೆಯಲ್ಪಟ್ಟಿತು. ಕಾಲೇಜು ಕಾಲೇಜುಗಳ ನಡುವೆ ನಾಟಕ ಸ್ಪರ್ಧೆಗಳು ಏರ್ಪಟ್ಟವು. ರಂಗ ಶಿಬಿರಗಳು ಹಮ್ಮಿ ಕೊಂಡವು. ರಂಗಭೂಮಿಗೆ ಒಂದಲ್ಲ ಒಂದು ರೀತಿಯಲ್ಲಿ ವೃತ್ತಿಪರತೆಯ ಸಮೀಕರಣವೊಂದು ಅಗತ್ಯ – ಎಂಬ ಸ್ಪಷ್ಟವಾದ ಅರಿವೊಂದು ಕಾಣಿಸಕೊಳ್ಳತೊಡಗಿತು.

ಇಂಥ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಬಿ.ವಿ.ಕಾರಂತರ ರಂಗಪ್ರಯೋಗಗಳು ಕನ್ನಡ ಹವ್ಯಾಸಿ ರಂಗಭೂಮಿಗೆ ಹೊಸ ದಿಕ್ಕೊಂದನ್ನು ತೆರೆಸಿದವು. ೧೯೬೭ ರಲ್ಲಿ ಶ್ರೀರಂಗರ ನೀಕೊಡೆ ನಾ ಬಿಡೆ ಪ್ರಯೋಗದಿಂದ ಆರಂಭಿಸಿದ ಕಾರಂತರು ಮುಂದಿನ ಐದಾರು ವರ್ಷಗಳಲ್ಲಿ ನಿರ್ದೇಶನ ಮತ್ತು ಅನೌಪಚಾರಿಕ ರಂಗಶಿಕ್ಷಣಗಳಿಗೆ ಸಂಬಂದಿಸಿದ ಮುಖ್ಯ ಕೆಲಸಗಳನ್ನು ಮಾಡಿದರು. ೧೯೭೨ ರಲ್ಲಿ ಅವರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರಯೋಗಿಸಿದ ಸಂಕ್ರಾಂತಿ, ಜೋಕುಮಾರಸ್ವಾಮಿ ಮತ್ತು ಈಡಿಪಸ್ ಪ್ರಯೋಗಗಳು ಒಂದು ಪ್ರಮುಖ ಮೈಲಿಗಲ್ಲೆಂದು ಪರಿಗಣಿತವಾಗಿವೆ. ಒಂದೇ ಮಾತಿನಲ್ಲಿ ಬಿ.ವಿ.ಕಾರಂತರ ರಂಗ ಆವಿಷ್ಕಾರವನ್ನು ಸಂಗ್ರಹಿಸಿ ಹೇಳುವುದಾದರೆ ಅದು ವೃತ್ತಿ ಮತ್ತು ಹವ್ಯಾಸಿ ರಂಗಮಾರ್ಗಗಳೆರಡರ ಪರಿಣಾಮಕಾರಿ ಸಮೀಕರಣ, ಅರ್ಥಾತ್, ಆದ್ಯರಂಗಾಚಾರ್ಯರು ತಾತ್ವಿಕವಾಗಿ ಏನನ್ನು ಹೇಳಿದ್ದರೋ ಅದನ್ನು ಕಾರಂತ ಪ್ರಯೋಗಗಳು ಕಲಾತ್ಮಕವಾಗಿ ಸಾಕ್ಷಾತ್ಕರಿಸಿ ತೋರಿಸಿದವು. ಮೊದಲನೆಯದಾಗಿ ಈ ಪ್ರಯೋಗಗಳಲ್ಲಿ ದೃಶ್ಯವೈಭವ ಮರಳಿ ಬಂತು.ಸಂಗೀತ ನೃತ್ಯಗಳೂ ಮತ್ತೊಮ್ಮೆ ರಂಗಕ್ಕೆ ಬಂದವು. ಕಾರಂತರದ್ದೇ ವಿಶಿಷ್ಟ ಛಾಪಿನ ಸಂಗೀತದಲ್ಲಿ ಮಾತು- ಗೀತಗಳೆರಡನ್ನೂ ಸಮರ್ಥವಾಗಿ ಮೇಳೈಸಿಕೊಂಡ ಕಂಪೆನಿ ಸಂಗೀತದ ಸೃಜನಶೀಲ ಪುನರಾವಿಷ್ಕಾರ ಸಾಧಿತವಾಯಿತು.

ಪ್ರಸನ್ನ ಅವರು ರಂಗಭೂಮಿಯನ್ನು ಚಳುವಳಿಯಾಗಿ ಮಾರ್ಪಡಿಸಿ ಸಮುದಾಯ ಸಂಸ್ಥೆ ಕಟ್ಟಿದರು. ಆ ಮೂಲಕ ಪ್ರಗತಿಪರ ಆಧುನಿಕ ಚಿಂತನೆಯೊಂದು ರಾಜ್ಯಾದ್ಯಂತ ಹರಡಿತು. ರಾಜಕೀಯ ನಾಟಕಗಳೂ ರೂಪುಗೊಂಡವು. ಬೀದಿ ನಾಟಕಗಳ ಮೂಲಕ ಆಳುವ ವರ್ಗಕ್ಕೆ ಸಡ್ಡು ಹೊಡೆದರು. ಈ ನಡುವೆ ಎ.ಎಸ್.ಮೂರ್ತಿಯವರೂ ಕೂಡ ತಮ್ಮ ಚಿತ್ರಾ ತಂಡದೊಂದಿಗೆ ಜನರಲ್ಲಿ ಜಾಗೃತಿ ಮೂಡುವಂತಹ ವಿಷಯಗಳ ಕುರಿತಾಗಿ ಬೀದಿ ನಾಟಕಗಳನ್ನು ಆಡುವುದರ ಮೂಲಕ ನಾಟಕಗಳಿಗೊಂದು ಹೊಸ ಆಯಾಮ ಕೊಡುತ್ತಿದ್ದರು.

ಭೂಪಾಲ್, ಎನ್.ಎಸ್.ಡಿ ರೆಪರ್ಟರಿ ನಾಟಕಗಳು ಪ್ರದರ್ಶನಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದವು. ಅದರಿಂದಾಗಿ ನಗರಗಳಲ್ಲಿನ ಕಲಾವಿದರು ಭಾರತೀಯ ರಂಗಭೂಮಿಯ ಅನುಭವಗಳಿಗೆ ತೆರೆದುಕೊಂಡರು.ಅದೇ ವೇಳೆ ಹೆಗ್ಗೋಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೆ.ವಿ.ಸುಬ್ಬಣ್ಣ ಅವರಿಂದ ನೀನಾಸಂ ತಿರುಗಾಟ ದ ಕಲ್ಪನೆಯ ರೆಪರ್ಟರಿಯು ಕರ್ನಾಟಕದಾದ್ಯಂತ ತಿರುಗಾಟ ಮಾಡುತ್ತಿತ್ತು. ವರುಷಕ್ಕೊಮ್ಮೆ ಬೆಂಗಳೂರಿಗೆ ಭೇಟಿ ನೀಡಲು ಆರಂಭಿಸಿದವು.

ಆಗ ರಂಗಭೂಮಿ ಮತ್ತಷ್ಟು ಶಿಸ್ತಿಗೆ ಒಳಪಡಲು ಪ್ರಾರಂಭವಾಯಿತು. ಹೆಚ್ಚು ಹೆಚ್ಚು ಜನ ರಂಗಭೂಮಿಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು ಹಾತೊರೆದರು. ಬಿ.ವಿ.ಕಾರಂತರು ಮೈಸೂರಿನಲ್ಲಿ ರಂಗಾಯಣವನ್ನು ಪ್ರಾರಂಭಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ರಂಗಭೂಮಿಗೆ ನಗರಗಳಲ್ಲಿ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಟಿ.ವಿ. ಚಾನೆಲ್ ಗಳು ಒಂದಾದ ಮೇಲೊಂದರಂತೆ ಬರಲು ಪ್ರಾರಂಭವಾದವು. ಕಾರ್ಯಕ್ರಮಗಳು ರೂಪುಗೊಳ್ಳತೊಡಗಿದವು. ಆಗ ಕಲಾವಿದರಿಗೆ ಬೇಡಿಕೆ ಹೆಚ್ಚಾಯಿತು. ಇಂಥಹ ಬೇಡಿಕೆಗಳನ್ನು ಈಡೇರಿಸಲು ನಗರದ ಕಲಾವಿದರೆಲ್ಲ ಸಾಲುಗಟ್ಟಿ ನಿಂತರು. ಬೆಂಗಳೂರಿನವರದ್ದೇ ದೊಡ್ಡಪಾಲು. ಆ ಸಂದರ್ಭದಲ್ಲಿ ರಂಗಭೂಮಿಯ ಕಡೆಗೆ ಒಲವಿದ್ದರೂ ಕೆಲಸದ, ಕಾಸಿನ ಆಕರ್ಷಣೆಯಿಂದಾಗಿ ಟಿ.ವಿ ಕಾರ್ಯಕ್ರಮಗಳಿಗೆ ಮನಸೋತರು. ಜನರು ಅವರನ್ನು ಗುರುತಿಸಲು ಆರಂಭಿಸಿದರು. ಆಗ ನಟ ತನ್ನೊಳಗೆ ಮೆಲ್ಲಗೆ ತಾನು ಶ್ರೇಷ್ಟನೆಂಬ ನಂಬಿಕೆಯನ್ನು ನಂಬುತ್ತಾ ಸಾಗಿದ. ರಂಗಭೂಮಿಯೆಡೆಗೆ ಬರಲು ಪುರುಸೊತ್ತು ಇಲ್ಲದ ಹಾಗಾಯಿತು. ಬಂದರೂ ತಡವಾಗಿ ಬರುವುದು, ಒಂದು ದಿನ ಬಂದರೆ ಮತ್ತೊಂದು ದಿನ ಬಾರದೇ ಇರುವುದು ಪ್ರಾರಂಭವಾಯಿತು. ಹಾಗಾಗಿ ಬೆಂಗಳೂರಿನಲ್ಲಿ ರಂಗಭೂಮಿ ನರಳಲು ಪ್ರಾರಂಭಿಸಿತು. ಬರುವವರೂ ಕೂಡ ಟಿ.ವಿ.ಗಳಲ್ಲಿ ಅವಕಾಶ ಸಿಗಬಹುದೆಂಬ ಆಸೆಯಿಂದ ಬರತೊಡಗಿದರು. ಹಾಗಾಗಿ ಕಲಾವಿದರ ಆಸಕ್ತಿ ರಂಗಭೂಮಿಯ ಆಚೆಗೆ ವಿಸ್ತರಿಸಿಕೊಂಡಿತು.

ಆದರೆ ಇದೇ ಸಂದರ್ಭದಲ್ಲಿ ನೀನಾಸಂ ಸಂಸ್ಥೆಯಿಂದ ಡಿಪ್ಲಮೋ ಪಡೆದಂತಹ ಬಹಳಷ್ಟು ಜನ ವಿದ್ಯಾರ್ಥಿಗಳು ಮತ್ತು ರಂಗಭೂಮಿಯಲ್ಲಿ ಸಾತ್ವಿಕ ಆಸಕ್ತಿ ಉಳ್ಳಂತಹ ಕೆಲವು ಹವ್ಯಾಸೀ ನಿರ್ದೇಶಕರು ಕಾಲೇಜು ರಂಗಭೂಮಿಯಲ್ಲಿ ಸಕ್ರಿಯರಾದರು. ಬೆಂಗಳೂರಿನ ಕಾಲೇಜು ನಾಟಕೋತ್ಸವವಂತೂ ಡಿಪ್ಲಮೋ ಪಡೆದು ಬಂದಿರುವ ವಿದ್ಯಾರ್ಥಿಗಳಿಗೆ ಲ್ಯಾಬೋರೇಟರಿಗಳಂತಾಗಿಬಿಟ್ಟವು. ಕಾಲೇಜುಗಳೂ ಕೂಡ ಲಕ್ಷಗಟ್ಟಲೆ ಖರ್ಚು ಮಾಡಿ ಕಾಲೇಜಿನಲ್ಲಿ ನಾಟಕಗಳನ್ನು ಆಯೋಜಿಸುತ್ತಿದ್ದರು. ಇದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಹುಟ್ಟಿಸುವಂತಹ ಒಂದು ಬದಲಾವಣೆಯನ್ನು ತಂದಿತು. ಅಲ್ಲಿ ಅತ್ಯಂತ ಆಸಕ್ತಿದಾಯಕವಾದ ನಾಟಕಗಳು ರೂಪುಗೊಂಡವು. ಈ ಸಂಚಲನದಿಂದಾಗಿ ಮತ್ತೆ ಕನ್ನಡ ರಂಗಭೂಮಿ ಚಿಗುರಿಕೊಂಡಿತು. ಬೇರೆ ಬೇರೆ ನಗರಗಳಲ್ಲೂ ಕಾಲೇಜು ರಂಗೋತ್ಸವಗಳು ಪ್ರಾರಂಭವಾದವು.

೨೦೦೦ ದಿಂದೀಚೆಗೆ ಹೆಚ್ಚು ಕಡಿಮೆ ಎಲ್ಲ ನಗರಗಳಲ್ಲೂ ರಂಗತಂಡಗಳ ಸಂಖ್ಯೆ ಜಾಸ್ತಿಯಾಯಿತು. ನಿರ್ದೇಶಕರೆಲ್ಲ ಒಂದೊಂದು ತಂಡ ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಹಳೇ ತಂಡಗಳೆಲ್ಲ ೩೦ ವರುಷ ೪೦ ವರುಷದ ಆಚರಣೆಯಲ್ಲಿ ತೊಡಗಿದ್ದರೆ ಇನ್ನು ಹಲವು ತಂಡಗಳು ದಶಮಾನೋತ್ಸವದ ಸಂಭ್ರಮದಲ್ಲಿದ್ದಾರೆ. ಸಣ್ಣ ಪುಟ್ಟ ತಂಡಗಳು ಅಣಬೆಗಳ ಹಾಗೆ ಎಲ್ಲ ಕಡೆ ತಲೆ ಎತ್ತಿ ನಿಂತಿವೆ. ರೆಪರ್ಟರಿಗಳ ಸಮಕ್ಕೂ ನಾಟಕಗಳ ಸಂಖ್ಯೆ ಏರುತ್ತಿದೆ. ಮೈಸೂರು, ಬೆಂಗಳೂರಿನಲ್ಲಂತೂ ೨೫-೩೦ ರಂಗತಂಡಗಳಿವೆ. ಎಲ್ಲರೂ ನಾಟಕ ಮಾಡುತ್ತಿದ್ದಾರೆ. ಆದರೆ ನಾಟಕ ಕೃತಿಗಳು ಹುಟ್ಟುತ್ತಿಲ್ಲ ಎಂಬ ಕೂಗಿದೆ. ಕೆಲವರು ಕತೆ, ಕಾದಂಬರಿ, ಇವುಗಳನ್ನೇ ನಾಟಕವಾಗಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ರಂಗಮಂದಿರಗಳಿಗೆ ಕ್ಯೂ ನಿಲ್ಲಬೇಕಾಗಿದೆ. ರಂಗ ಮಂದಿರಗಳ ಕೊರತೆ ಕಾಣುತ್ತಿದೆ. ಕಲಾಕ್ಷೇತ್ರ ತುಂಬುವಷ್ಟು ಜನರನ್ನು ಸೇರಿಸುವುದು ಕಷ್ಟದ ಕೆಲಸವಾಗ್ತಿದೆ. ಹಾಗಾಗಿ ಬಡಾವಣಾ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನಸಂದಣಿ, ಟ್ರಾಫಿಕ್ ಜಾಮ್ ಗಳ ಮದ್ಯೆ, ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದೇ ಕಷ್ಟಕರವಾಗಿದೆ. ಸಿನಿಮಾ ಮಂದಿರಗಳು ಖಾಲಿ ಹೊಡೆಯಬಹುದು, ಆದರೆ ಬೆಂಗಳೂರಿನಲ್ಲೀಗ ಶನಿವಾರ, ಭಾನುವಾರಗಳಂತೂ ನಾಟಕಗಳಿಗೆ ಜನಕ್ಕೆ ಬರವಿಲ್ಲ. ಹವ್ಯಾಸಿ ರಂಗಭೂಮಿ ಎಲ್ಲ ಸಂಕಷ್ಟಗಳ ಮಧ್ಯೆಯೂ ಇಂದು ಜೀವಂತವಾಗಿರುವುದಕ್ಕೆ ಇದಲ್ಲದೇ ಬೇರೇನು ಸಾಕ್ಷಿ?

(ಲೇಖಕರು ನಾಟಕ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ರಂಗಕರ್ಮಿಗಳು)

Categories
ಅಂಕಣಗಳು ತಂತ್ರಜ್ಞಾನ ವಿಜ್ಞಾನ

ವಿಜ್ಞಾನ ದಿನ ಮತ್ತು ವೈಜ್ಞಾನಿಕ ಮನೋವೃತ್ತಿ

ಪ್ರತಿ ವರ್ಷ ಫೆಬ್ರುವರಿ 28ರಂದು ನಾವು ಭಾರತೀಯರು ‘ವಿಜ್ಞಾನ ದಿನ’ವನ್ನು ಆಚರಿಸುತ್ತೇವೆ. ಏಕೆಂದರೆ ಫೆಬ್ರುವರಿ 28 ಅನ್ನೋದು ‘ರಾಮನ್ ಎಫೆಕ್ಟ್’ ಪ್ರಕಟವಾದ ದಿನ. ಬೆಳಕಿನ ಪ್ರತಿಫಲನದ ಕುರಿತು ಬೆಂಗಳೂರಿನ ಪ್ರೊ. ಸಿ.ವಿ. ರಾಮನ್ ನಡೆಸಿದ ಆ ಸಂಶೋಧನೆಗೆ ‘ರಾಮನ್ ಎಫೆಕ್ಟ್’ ಎಂತಲೇ ಜಾಗತಿಕ ಖ್ಯಾತಿ ಬಂದಿದೆ ಅಷ್ಟೇ ಅಲ್ಲ, ಅವರಿಗೆ ಹಾಗೂ ನಮ್ಮ ದೇಶಕ್ಕೆ ವಿಜ್ಞಾನದ ಮೊದಲ ನೊಬೆಲ್ ಪ್ರಶಸ್ತಿಯನ್ನೂ ಅದು ತಂದು ಕೊಟ್ಟಿದೆ. ಅದರ ನೆನಪಿಗಾಗಿ ಫೆಬ್ರುವರಿ 28ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
ವೈಜ್ಞಾನಿಕ ಮನೋಭಾವ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರಬೇಕು ಎಂಬ ಅಂಶವನ್ನು ನಾವು ಭಾರತೀಯರು ನಮ್ಮ ಸಂವಿಧಾನದಲ್ಲೇ ಅಳವಡಿಸಿಕೊಂಡಿದ್ದೇವೆ. ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ದಿನ ಫೆಬ್ರುವರಿ 28. ನೆನಪಿಡಬೇಕಾದ ಸಂಗತಿ ಏನೆಂದರೆ, ಫೆಬ್ರುವರಿ 28 (1928) ಸರ್ ಸಿ.ವಿ. ರಾಮನ್ನರ ಹುಟ್ಟುಹಬ್ಬ ಅಲ್ಲ, ಆದರೆ ಅವರ ಆ ಮಹತ್ವದ ಸಂಶೋಧನೆ ಪ್ರಕಟವಾದ ದಿನ. ಅದು ಪ್ರಕಟವಾಗಿ ಎರಡು ವರ್ಷಗಳ ನಂತರ, 1930ರಲ್ಲಿ ಸರ್ ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಹಾಗಾಗಿ ಫೆಬ್ರುವರಿ 28 ರಾಮನ್ನರನ್ನು ಮತ್ತು ವಿಜ್ಞಾನವನ್ನು ಗೌರವಿಸಬೇಕಾದ ದಿನ.
ವಿಜ್ಞಾನವನ್ನು ನಾವು ಯಾಕೆ ಗೌರವಿಸಬೇಕು ಅಂದರೆ, ಅದು ನಮ್ಮನ್ನು ನಾಗರಿಕರನ್ನಾಗಿ ಮಾಡಿದೆ. ನಮ್ಮಲ್ಲಿ ‘ವೈಜ್ಞಾನಿಕ ಶೋಧ ಬುದ್ಧಿ’ ಇಲ್ಲದೇ ಇದ್ದಿದ್ದರೆ ನಾವೂ ಇತರ ಪ್ರಾಣಿಗಳ ಹಾಗೆ ಗುಹೆಯಲ್ಲೊ ಮರದ ಪೊಟರೆಯಲ್ಲೊ, ಬಂಡೆಗಳ ಸಂದುಗಳಲ್ಲೊ ಚಳಿಗೆ ಮಳೆಗೆ, ರೋಗರುಜಿನೆಗಳಿಗೆ ತುತ್ತಾಗುತ್ತ ಹೇಗೋ ಬದುಕುತ್ತಿದ್ದೆವು.
ಆಧುನಿಕ ವಿಜ್ಞಾನ ನಮಗೆ ಹೇಗೆಲ್ಲ ಸಹಾಯ ಮಾಡಿದೆ ಅನ್ನೋದನ್ನು ನೋಡಬೇಕಾದರೆ ನಾವು ಹಿಂದಿನ ಕಾಲದ ರಾಜ ಮಹಾರಾಜರ ಬದುಕನ್ನು ಹೋಲಿಸಿ ನೋಡಬೇಕು. ಎಷ್ಟೇ ಬಲಾಢ್ಯ ರಾಜನಾಗಿದ್ದರೂ ಅವನಿಗೆ ಹಲ್ಲು ನೋವು ಬಂದರೆ ವಾರಗಟ್ಟಲೆ, ತಿಂಗಳುಗಟ್ಟಲೆ ತೀರ ದುರ್ಬಲನಾಗುತ್ತಿದ್ದ. ಕುದುರೆ ಅಥವಾ ರಥದ ಮೇಲೆ ಹೆಚ್ಚೆಂದರೆ ದಿನಕ್ಕೆ 15-20 ಮೈಲು ಸವಾರಿ ಮಾಡಬಹುದಿತ್ತು. ಬೆನ್ನು ನೋವು ಬಂದರೆ ಅಲ್ಲೇ ವಾರಗಟ್ಟಲೆ ತಿಂಗಳುಗಟ್ಟಲೆ ನೋವಿನಿಂದ ನರಳಬೇಕಿತ್ತು. 50-60 ವರ್ಷಕ್ಕೆ ವೃದ್ಧಾಪ್ಯ ಬಂತೆಂದರೆ ಹಲ್ಲುಗಳು ಉದುರಿ, ಕಣ್ಣೆಲ್ಲ ಮಂಜಾಗಿ, ಮೊಣಕಾಲು ನೋವು, ಕಿವುಡುತನ ಏನೆಲ್ಲ ಬರುತ್ತಿತ್ತು. ಸಿಡುಬು, ಪ್ಲೇಗಿನಂಥ ಮಹಾಮಾರಿ ಬಂದರಂತೂ ಎಂಥ ಮಹಾಸೈನ್ಯವನ್ನೂ ಹೊಸೆದು ಹಾಕುತ್ತಿತ್ತು.
ಇಂದಿನ ಕಾಲದ ತೀರ ಸಾಮಾನ್ಯ ಜನರೂ ಹಿಂದಿನ ಕಾಲದ ಮಹಾರಾಜರಿಗಿಂತ ಸುಖಿಗಳಾಗಿದ್ದೇವೆ. ಏನೆಲ್ಲ ರೋಗ ರುಜಿನಗಳನ್ನು ನಾವು ಜೈಸಿದ್ದೇವೆ. ಎಷ್ಟೆಲ್ಲ ಬಗೆಯ ಹಾವು, ಹುಲಿ, ಚೇಳು, ಹುಚ್ಚುನಾಯಿ, ಬೆಂಕಿ, ಬರಗಾಲ, ಚಳಿ, ಎಲ್ಲವನ್ನೂ ಜೈಸಿದ್ದೇವೆ. ಹಸಿವೆಯನ್ನು ದೂರ ಅಟ್ಟಿದ್ದೇವೆ. ಅದೆಲ್ಲ ವಿಜ್ಞಾನ- ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಇಡೀ ಜಗತ್ತನ್ನು ನಾವು ಕೂತಲ್ಲೇ ಸಂಪರ್ಕಿಸುತ್ತೇವೆ; ಬೇಕೆಂದರೆ ಒಂದು ದಿನದಲ್ಲೇ ಸುತ್ತಿ ಬರುತ್ತೇವೆ.
ಹಾಗೆ ನೋಡಿದರೆ ನಾವು ತೀರ ದುರ್ಬಲ ಜೀವಿಗಳು. ತೀರ ಪರಾವಲಂಬಿಗಳು. ಒಂದು ಹುಲ್ಲು ಗರಿಕೆಯನ್ನೇ ನೋಡಿ: ಅದಕ್ಕೆ ತುಸು ಬಿಸಿಲು, ತುಸು ನೀರು, ತುಸು ಮಣ್ಣು ಇದ್ದರೆ ಸಾಕು ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಬೀದಿನಾಯಿಗೆ ಹೊಟ್ಟೆಶೂಲೆ ಬಂದರೆ ಅದು ಎಂಥದ್ದೊ ಸಸ್ಯವನ್ನು ತಿಂದು ವಾಂತಿ ಮಾಡಿಕೊಂಡು ಸರಿಯಾಗುತ್ತದೆ. ಗಾಯವಾದರೆ ಅದು ತನ್ನದೇ ಜೊಲ್ಲಿನಿಂದಲೋ ಅಥವಾ ಬೂದಿಗುಡ್ಡೆಯ ದೂಳಿನಿಂದಲೋ ತನ್ನ ಗಾಯವನ್ನು ತಾನೇ ವಾಸಿ ಮಾಡಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಇರುವೆ ಗೆದ್ದಲುಗಳಿಗೆ ಮಳೆ ಬರುವ ಸೂಚನೆ ಮೊದಲೇ ಗೊತ್ತಾಗುತ್ತದೆ. ವನ್ಯಪ್ರಾಣಿಗಳಿಗೆ ಭೂಕಂಪನದ ಮುನ್ಸೂಚನೆ ಮೊದಲೇ ಗೊತ್ತಾಗುತ್ತದೆ. ತಿಮಿಂಗಲುಗಳಿಗೆ ಸುನಾಮಿಯ ಸೂಚನೆ ಗೊತ್ತಾಗುತ್ತದೆ. ಪಾತರಗಿತ್ತಿಗಳಿಗೆ ಸುಂಟರಗಾಳಿಯ ಮುನ್ಸೂಚನೆ ಸಿಗುತ್ತದೆ. ಮರದ ಮೇಲೆ ಗೂಡು ಕಟ್ಟಿಕೊಂಡ ಪಕ್ಷಿಗೆ ಹಾವು ಬರುತ್ತಿದೆ ಎಂಬುದು ನಡುರಾತ್ರಿಯಲ್ಲೂ ವಾಸನೆಯ ಮೂಲಕವೇ ಗೊತ್ತಾಗುತ್ತದೆ.
ನಮಗೆ ಅಂಥ ಯಾವ ಸೂಚನೆಗಳೂ ಸಿಗುವುದಿಲ್ಲ; ನಮ್ಮ ಸಂವೇದನೆಗಳೆಲ್ಲ ಮೊಂಡಾಗಿವೆ. ಸವೆದುಹೋಗಿವೆ. ಆದರೆ ನಮ್ಮ ಬುದ್ಧಿಶಕ್ತಿ ಚುರುಕಾಗಿದೆ. ಹಿಂದಿನ ಕಾಲದಲ್ಲಿ ರಾವಣಾಸುರ ಅಷ್ಟ ದಿಕ್ಪಾಲಕರನ್ನು ತನ್ನ ಊಳಿಗದಲ್ಲಿ ಇಟ್ಟುಕೊಂಡಿದ್ದ ಎಂಬ ಕತೆಯನ್ನು ಕೇಳಿದ್ದೇವೆ. ನಾವು ಇಂದು ಅಷ್ಟ ದಿಕ್‍ಪಾಲಕರನ್ನು, ಪಂಚ ಮಹಾಭೂತಗಳನ್ನು ನಮಗೆ ಬೇಕೆಂದಂತೆ ದುಡಿಸಿಕೊಳ್ಳುತ್ತೇವೆ. ಬೆಂಕಿಯನ್ನು ನಮಗಿಷ್ಟ ಬಂದ ಹಾಗೆ ಪಳಗಿಸುತ್ತೇವೆ. ಬೆಂಕಿಯ ಉಗ್ರಜ್ವಾಲೆಯಲ್ಲಿ ಮರಳನ್ನೂ ಕರಗಿಸಿ ಅದರಿಂದ ಗಾಜನ್ನು ಸೃಷ್ಟಿ ಮಾಡಿ ಅದರಿಂದ ಸೂಕ್ಷ್ಮದರ್ಶಕ, ದೂರದರ್ಶಕಗಳನ್ನು ತಯಾರಿಸಿ ಅವುಗಳ ಮೂಲಕ ಜಗತ್ತನ್ನು ನೋಡುತ್ತೇವೆ, ನಿಯಂತ್ರಿಸುತ್ತೇವೆ. ಗಾಳಿಯನ್ನು ನಮಗೆ ಬೇಕೆಂದಾಗ ಸೃಷ್ಟಿಸಿ ಬೇಕಾದ ದಿಕ್ಕಿಗೆ ತಿರುಗಿಸಿ ವಿಮಾನಗಳನ್ನು ಓಡಿಸುತ್ತೇವೆ. ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತೇವೆ, ಯಂತ್ರಗಳನ್ನು ನಡೆಸುತ್ತೇವೆ. ನಮ್ಮ ಬದುಕಿಗೆ ಅಪಾಯ ತರಬಹುದಾದ ಎಲ್ಲ ಅನಿಷ್ಟಗಳನ್ನೂ ದೂರ ಮಾಡುತ್ತೇವೆ. ನಮ್ಮ ಎಲ್ಲ ದೈಹಿಕ ದೌರ್ಬಲ್ಯಗಳನ್ನೂ ಮೆಟ್ಟಿ ನಾವು ಅತ್ಯಂತ ಪ್ರಬಲ ಜೀವಿಯಾಗಿದ್ದೇವೆ.
ಅವೆಲ್ಲ ವಿಜ್ಞಾನದ ಮೂಲಕ ನಮಗೆ ಲಭಿಸಿದ ವರದಾನವಾಗಿದೆ.
ಆದರೂ ನಮಗೆ ವಿಜ್ಞಾನವೆಂದರೆ ತೀರ ಅರ್ಥವಾಗದ ವಿದ್ಯೆ, ತೀರ ಕ್ಲಿಷ್ಟ ವಿಷಯ ಎಂಬ ಭಾವನೆ ಇದೆ. ಅದು ನಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ಅದರಿಂದ ಆದಷ್ಟೂ ದೂರ ಇರಲು ಯತ್ನಿಸುತ್ತೇವೆ. ಮಕ್ಕಳ ಪಾಠಗಳಲ್ಲಿ ವಿಜ್ಞಾನದ ವಿಷಯ ಬಂದಾಗ ಹೇಗೋ ಚಡಪಡಿಸುತ್ತ, ಅವರು ಕೇಳುವ ಪ್ರಶ್ನೆಗಳಿಗೆ ಏನೋ ತೋಚಿದ ಉತ್ತರ ಹೇಳಿ ಜಾರಿಕೊಳ್ಳುತ್ತೇವೆ.
ವಿಜ್ಞಾನ ಬೆಳೆದಿದ್ದೇ ಪ್ರಶ್ನೆಗಳನ್ನು ಕೇಳುವುದರಿಂದ. ಹಾಗೂ ಪ್ರಶ್ನೆಗಳಿಗೆ ಸರಿಯಾದ ಉತ್ತರ ಹುಡುಕುವುದರಿಂದ.
ದೋಸೆಯಲ್ಲಿ ಏಕೆ ತೂತುಗಳಾಗುತ್ತವೆ? ಹುಳಿ ಬಂದ ಮೊಸರಿನಿಂದ ಏಕೆ ಗುಳ್ಳೆಗಳು ಹೊರಕ್ಕೆ ಬರುತ್ತವೆ? ನಂದಿನಿ ಮೊಸರಿನ ಪ್ಯಾಕೆಟ್ಟು ಯಾಕೆ ಕೆಲವೊಮ್ಮೆ ಉಬ್ಬಿಕೊಳ್ಳುತ್ತದೆ? ಈ ಪ್ರಶ್ನೆಗಳು ತಲೆಯಲ್ಲಿ ಹೊಕ್ಕರೆ, ಅದಕ್ಕೆ ಉತ್ತರ ಸಿಗುವವರೆಗೆ ಆ ಪ್ರಶ್ನೆ ನಮ್ಮನ್ನು ಕಾಡುತ್ತಿದ್ದರೆ, ಅದರಿಂದ ವಿಜ್ಞಾನ ಹೊಮ್ಮುತ್ತದೆ.
ಇಂಥ ಸರಳ ಪ್ರಶ್ನೆಗಳ ಹಿಂದೆ ಬಹುದೊಡ್ಡ ವೈಜ್ಞಾನಿಕ ಸತ್ಯಗಳು ಅಡಗಿರುತ್ತವೆ. ಹಿಂದೆ ಆಗಿಹೋದ ಮಹಾನ್ ವಿಜ್ಞಾನಿಗಳೆಲ್ಲ ಛಲ ಬಿಡದೆ ಇಂಥ ಸರಳ ಪ್ರಶ್ನೆಗಳ ಬೆನ್ನಟ್ಟಿ ಪ್ರಕೃತಿಯ ಮಹಾನ್ ಸತ್ಯಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸರ್ ಸಿವಿ ರಾಮನ್ ಅವರು ತಮಗೆ ತಾವೇ ಕೇಳಿಕೊಂಡ ಸರಳ ಪ್ರಶ್ನೆ ಏನಿತ್ತು ಗೊತ್ತೆ? ‘ಆಕಾಶ ಏಕೆ ನೀಲಿ?’ ನೀಲಿ ಇದೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದರೆ ಅದು ಯಾಕೆ ನೀಲಿ ಇದೆ ಎಂದು ಯಾರೂ ಪ್ರಶ್ನಿಸುವ ಗೋಜಿಗೆ ಹೋಗಿರಲಿಲ್ಲ. ಕೆಲವರ ತಲೆಯಲ್ಲಿ ಆ ಪ್ರಶ್ನೆ ಹುಟ್ಟಿತ್ತೇನೊ. ಆದರೆ ಛಲಕ್ಕೆ ಬಿದ್ದಂತೆ ಅದಕ್ಕೆ ಉತ್ತರ ಹುಡುಕಲು ಯತ್ನಿಸಲಿಲ್ಲ. ನಿಸರ್ಗದ ಬಹಳಷ್ಟು ಕ್ರಿಯೆಗಳೆಲ್ಲ ನಮ್ಮಲ್ಲಿ ಪ್ರಶ್ನೆಗಳನ್ನೇ ಸೃಷ್ಟಿಸುವುದಿಲ್ಲ. ತೆಂಗಿನ ಮರದಿಂದ ಕಾಯಿ ಕೆಳಕ್ಕೆ ಬಿದ್ದರೆ ‘ಯಾಕೆ ಬಿತ್ತು?’ ಅಂತ ನಾವು ಎಂದೂ ತಲೆ ಕೆಡಿಸಿಕೊಳ್ಳುವುದಿಲ್ಲ. ಐಸಾಕ್ ನ್ಯೂಟನ್ ಅಂಥ ಒಂದು ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಂಡು ಅದಕ್ಕೆ ಉತ್ತರ ಹುಡುಕುತ್ತ ಹೋಗಿದ್ದರಿಂದಲೇ ಶ್ರೇಷ್ಠ ವಿಜ್ಞಾನಿ ಅನ್ನಿಸಿಕೊಂಡ.
ಪುಟ್ಟ ಮಕ್ಕಳು ಅಂಥ ನೂರಾರು ಪ್ರಶ್ನೆಗಳನ್ನು ಕೇಳುತ್ತಿರುತ್ತವೆ. ಉತ್ತರ ನಮಗೂ ಸ್ಪಷ್ಟವಾಗಿ ಗೊತ್ತಿರುವುದಿಲ್ಲ ಅಥವಾ ಉತ್ತರಿಸುವ ತಾಳ್ಮೆಯೇ ನಮಗೆ ಇರುವುದಿಲ್ಲ. ಈಗಿನ ದಿನಗಳಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳು ಸುಲಭವಾಗಿ ಸಿಗುತ್ತವೆ. ಈಗಂತೂ ನಿಮ್ಮ ಸ್ಮಾರ್ಟ್ ಫೋನ್‍ನಲ್ಲೇ ಒಂದೆರಡು ನಿಮಿಷಗಳಲ್ಲಿ ಉತ್ತರಗಳನ್ನು ಪತ್ತೆ ಹಚ್ಚಬಹುದು. ತುಸು ತಾಳ್ಮೆ ವಹಿಸಿ ಉತ್ತರ ಹುಡುಕಿ ಮಕ್ಕಳ ಕುತೂಹಲ ತಣಿಸಲು ಯತ್ನಿಸಿದರೆ ಮಗುವಿನ ಶೋಧಬುದ್ಧಿಗೆ ಸಾಣೆ ಹಿಡಿದಂತಾಗುತ್ತದೆ; ಮಿದುಳು ಚುರುಕಾಗುತ್ತದೆ. ತರ್ಕಶಕ್ತಿ ಹೆಚ್ಚುತ್ತದೆ.
ಅಂಗಿ ತೊಟ್ಟ ನಂತರ ನಾವು ಬಟನ್ ಹಾಕುತ್ತೇವೆ. ಅಂದರೆ ವೃತ್ತಾಕಾರದ ಬಟನ್ನನ್ನು ಒಂದು ಸೀಳುರಂಧ್ರದ ಮೂಲಕ ಅಡ್ಡಡ್ಡ ತೂರಿ ನಂತರ ಅದನ್ನು ಬಟನ್ನಿನ ಮುಖ ತಿರುಗಿಸುತ್ತೇವೆ. ಅಂಗಿ, ಚಡ್ಡಿ, ಬ್ಲೌಸ್, ಬ್ಯಾಗ್ ಮುಂತಾದವುಗಳ ಎರಡು ಭಾಗವನ್ನು ಜೋಡಿಸುವ ಅತ್ಯಂತ ಸರಳ ವಿಧಾನ ಅದು. ಆದರೆ ಅದರ ಹಿಂದಿನ ಚಮತ್ಕಾರವನ್ನು ನಾವು ಗಮನಿಸಿದ್ದೇವೆಯೆ? ಮನುಷ್ಯ ಬಟ್ಟೆ ತೊಡಲು ಆರಂಭಿಸಿ ಐದು ಸಾವಿರ ವರ್ಷಗಳಾದರೂ ಅಂಥ ಉಪಾಯ ಯಾರಿಗೂ ಹೊಳೆದಿರಲಿಲ್ಲ. ನಮ್ಮ ದೇಶದಲ್ಲಂತೂ 1930ರವರೆಗೂ ಅಂಗಿಗೆ ಅಂಥ ಬಟನ್ ಇರಲೇ ಇಲ್ಲ. ಬಹುಶಃ ಅದೇ ಕಾರಣಕ್ಕೆ ಇರಬೇಕು, ಮಹಿಳೆಯರಿಗೆ ರವಿಕೆಯೇ ಇರಲಿಲ್ಲ. ಯುರೋಪಿನ ಜನರು ನಮ್ಮಲ್ಲಿಗೆ ಬಂದ ನಂತರವೇ ನಮಗೆ ಬಟನ್ ಪರಿಚಯ ಆದದ್ದು. ಸಣ್ಣ ಸಣ್ಣ ಸಂಶೋಧನೆಗಳು ಇಡೀ ಮಾನವಕುಲದ ಬದುಕನ್ನೇ ಬದಲಾಯಿಸುತ್ತವೆ ನೋಡಿ.
ಹೊಲಿಗೆ ಯಂತ್ರ ಅಸ್ತಿತ್ವಕ್ಕೆ ಬರಲು ಬಹುಮುಖ್ಯ ಕಾರಣ ಏನು ಗೊತ್ತೆ? ಸೂಜಿಯ ಚೂಪು ತುದಿಯಲ್ಲೇ ರಂಧ್ರ ಮಾಡಬೇಕು ಎಂಬ ಆಲೋಚನೆ ಈಲಿಯಾಸ್ ಹೋವ್ ಎಂಬಾತನಿಗೆ ಹೊಳೆಯಿತು. ಅದುವರೆಗೆ ಎಷ್ಟೆಲ್ಲ ಬಗೆಯ ಯಂತ್ರಗಳನ್ನು ತಯಾರಿಸಿ ಎಲ್ಲರೂ ವಿಫಲ ಆಗಿದ್ದರು. ಸೂಜಿಯ ಒಂದು ಕಣ್ಣಿನ ಮೂಲಕ ಜಗತ್ತೇ ಬದಲಾಯಿತು.
ವೆಲ್‍ಕ್ರೋ ಝಿಪ್ ಅಂದರೆ ನಮಗೆಲ್ಲ ಗೊತ್ತೇ ಇದೆ. ಚೀಲದ ಬಾಯಿಯನ್ನು, ಬೂಟಿನ ಬೆಲ್ಟನ್ನು, ಪಾಕೀಟನ್ನು ಪರ್ ಎಂದು ಎಳೆದು ಬಿಚ್ಚುವ ಅಥವಾ ಬಂದ್ ಮಾಡುವ ಸರಳ ಸಾಧನ. ಅದು 1970ರವರೆಗೆ ಯಾರಿಗೂ ಗೊತ್ತೇ ಇರಲಿಲ್ಲ.
ಜಾರ್ಜ್ ಡಿ ಮೆಸ್ಟ್ರಲ್ ಎಂಬ ಇಲೆಕ್ಟ್ರಾನಿಕ್ ಎಂಜಿನಿಯರ್ ಅಲ್ಲೆಲ್ಲೋ ಸ್ವಿಸ್ ಪರ್ವತ ಏರುತ್ತಿದ್ದಾಗ ಅವನ ಬಟ್ಟೆಗೆ ಹಾಗೂ ಅವನೊಂದಿಗಿದ್ದ ನಾಯಿಯ ಮೈಗೆಲ್ಲ ಮುಳ್ಳುಮುಳ್ಳಿನ ಬೀಜಗಳು ಅಂಟಿಕೊಂಡಿದ್ದವು. ಅದು ಹೇಗೆ ಅಂಟಿದೆ ಎಂದು ಸೂಕ್ಷ್ಮವಾಗಿ ನೋಡುತ್ತಿದ್ದಾಗ ಉತ್ತರ ಹೊಳೆಯಿತು: ಬೀಜದ ಮೇಲಿರುವ ಕೊಕ್ಕೆಯಂಥ ಮುಳ್ಳುಗಳು ಈತನ ಬಟ್ಟೆಯ ನವಿರು ದಾರಕ್ಕೆ ಸಿಲುಕಿಕೊಳ್ಳುತ್ತಿದ್ದವು. ಈತ ಮನೆಗೆ ಬಂದವನೇ ತಾನೂ ಮಿದು ಪ್ಲಾಸ್ಟಿಕ್‍ನಿಂದ ಅಂಥದ್ದೇ ಕೊಕ್ಕೆಗಳನ್ನು ತಯಾರಿಸಿದ. ಬಟ್ಟೆಯ ನೇಯ್ಗೆಗೆ ಅದು ಸಿಲುಕಿಕೊಳ್ಳುವುದನ್ನು ನೋಡಿದ. ಅಂಥದ್ದೇ ನೇಯ್ಗೆ ಇರುವ ಪ್ಲಾಸ್ಟಿಕ್ ಮತ್ತು ಕೊಕ್ಕೆಗಳನ್ನು ತಯಾರಿಸಿದ. ಇಪ್ಪತ್ತು ವರ್ಷಗಳ ಸತತ ಪರಿಶ್ರಮದಿಂದ ರೂಪಿಸಿದ ಝಿಪ್ ಸಾಧನ ಇಂದು ಎಲ್ಲೆಡೆ ಬಳಕೆಯಾಗುತ್ತಿದೆ.
ಪ್ರಶ್ನೆ ಕೇಳುವುದರಿಂದಲೂ ವಿಜ್ಞಾನ ಬೆಳೆಯುತ್ತದೆ. ನಿಸರ್ಗದಲ್ಲಿ ವೈಚಿತ್ರ್ಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅದನ್ನೇ ಅನುಕರಿಸುವುದರಿಂದಲೂ ವಿಜ್ಞಾನ ತಂತ್ರಜ್ಞಾನ ವಿಕಾಸವಾಗುತ್ತದೆ. ಹಸುಗಳಿಗೆ ಸಿಡುಬು ಬಂದರೂ ಅದು ಯಾಕೆ ಹಸುಗಳ ಪ್ರಾಣ ತೆಗೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಎಡ್ವರ್ಡ್ ಜೆನ್ನರ್ ಎಂಬಾತ ಸಿಡುಬಿನ ಲಸಿಕೆಯನ್ನು ಕಂಡು ಹಿಡಿದ. ಅಕ್ಷರಶಃ ಕೋಟಿಗಟ್ಟಲೆ ಜನರ ಪ್ರಾಣ ಉಳಿಸಿದ. ಅದೇ ರೀತಿ ಅಲೆಕ್ಸಾಂಡರ್ ಫ್ಲೆಮಿಂಗ್ ಎಂಬಾತ ‘ಪೆನಿಸಿಲಿನ್’ ಎಂಬ ಆಂಟಿ ಬಯಾಟಿಕ್ (ಜೀವಿರೋಧಕ ಅಥವಾ ಪ್ರತಿಜೈವಿಕ) ಔಷಧವನ್ನು ಆಕಸ್ಮಿಕವಾಗಿ ಪತ್ತೆ ಮಾಡಿದ್ದಕ್ಕೂ ಇಂಥದ್ದೇ ರೋಚಕ ಕತೆಯಿದೆ. ಕಣ್ಣಿಗೆ ಕಂಡದ್ದನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡುವ ಕಾಳಜಿ, ಕುತೂಹಲ ಇದ್ದರೆ ಅದೇ ವೈಜ್ಞಾನಿಕ ಅನ್ವೇಷಣೆ ಎನ್ನಿಸಿಕೊಳ್ಳುತ್ತದೆ.
ಅಂಥ ವೈಜ್ಞಾನಿಕ ಮನೋವೃತ್ತಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು ಎಂಬುದನ್ನು ಪ್ರಚುರಗೊಳಿಸಲೆಂದೇ ಫೆಬ್ರುವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಶಾಲೆಗಳಲ್ಲಿ, ವೈಜ್ಞಾನಿಕ ಸಂಘ ಸಂಸ್ಥೆಗಳಲ್ಲಿ ಹಾಗೂ ಲ್ಯಾಬೊರೇಟರಿಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ತಜ್ಞರು ಭಾಷಣ ಮಾಡುತ್ತಾರೆ; ಮಕ್ಕಳಿಗೆ ಪ್ರಯೋಗಶಾಲೆಗಳನ್ನು ತೋರಿಸುತ್ತಾರೆ. ದೂರದರ್ಶಕದ ಮೂಲಕ ಗ್ರಹ ತಾರೆಗಳ ವೀಕ್ಷಣೆ ಮಾಡಿಸುತ್ತಾರೆ.
ಅವೆಲ್ಲ ಸರಿ. ಆದರೆ ಜನಸಾಮಾನ್ಯರು ಮಾತ್ರ ಈ ವಿಜ್ಞಾನ ಹಬ್ಬದಿಂದ ದೂರವೇ ಉಳಿಯುತ್ತಾರೆ.
ಹಾಗೆ ನೋಡಿದರೆ, ಶಾಲೆ ಕಾಲೇಜು, ಪ್ರಯೋಗಶಾಲೆಗಳಿಗಿಂತ ಇಂದು ವೈಜ್ಞಾನಿಕ ಮನೋಭಾವವನ್ನು ಸಾಮಾನ್ಯ ಜನರಲ್ಲಿ ಬಿತ್ತಬೇಕಾದ ಅಗತ್ಯವಿದೆ. ಏಕೆಂದರೆ ನಾನಾ ಬಗೆಯ ಅವೈಜ್ಞಾನಿಕ ಮೂಢನಂಬಿಕೆಗಳಿಗೆ ಕಟ್ಟುಬಿದ್ದು ಜನರು ಜೀವನದಲ್ಲಿ ಏನೆಲ್ಲ ಕಷ್ಟನಷ್ಟ ಅನುಭವಿಸುತ್ತಿರುತ್ತಾರೆ. ಈಗಲೂ ನಿಧಿ ಶೋಧಕ್ಕೆಂದು ನರಬಲಿ ಕೊಡುವ ಮೂಢರ ಬಗ್ಗೆ ನಮ್ಮ ದೇಶದಲ್ಲಿ ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ರಸ್ತೆಬದಿಯಲ್ಲಿ ಗಿಣಿಶಾಸ್ತ್ರ ಹೇಳುವ, ನೋವಿನ ತೈಲ ಮಾರುವ ಢೋಂಗಿಗಳು ಕಂಡುಬರುತ್ತಾರೆ. ರೋಗರುಜಿನೆ ಬಂದಾಗ ಇಲ್ಲವೆ ಹಾವು-ಚೇಳು ಕಚ್ಚಿದಾಗ ಡಾಕ್ಟರಿಗೆ ತೋರಿಸುವ ಬದಲು ಬಾಬಾಗಳನ್ನೊ, ಮಂತ್ರವಾದಿಗಳನ್ನೊ, ತೀರ್ಥ ಪ್ರಸಾದ, ಹರಕೆಗಳನ್ನೊ ನಂಬಿ ಮೋಸ ಹೋಗುತ್ತಿರುತ್ತಾರೆ. ವಿಜ್ಞಾನದ ದೃಷ್ಟಿಯಿಂದ ಸತ್ಯದೂರವಾದ ಬೂದಿ, ತಾಯತ, ಹರಳು, ಉಂಗುರ, ತೈಲ, ರುದ್ರಾಕ್ಷಿ, ವಾಸ್ತು, ರಾಹು, ಕೇತು ಮುಂತಾದ ನಾನಾ ಬಗೆಯ ಮಂಕುಬೂದಿಗಳಿಗೆ ಮುಗ್ಧರು ಬಲಿಪಶುವಾಗುತ್ತಾರೆ.
ಅಂಥವರಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನ’ದ ಆದ್ಯತೆ ಬದಲಾಗಬೇಕು. ನಾವೆಲ್ಲರೂ ಏನು ವಿಜ್ಞಾನಿಗಳೇ ಆಗಬೇಕೆಂದಿಲ್ಲ. ಯಾವುದು ವೈಜ್ಞಾನಿಕ ಯಾವುದು ಅವೈಜ್ಞಾನಿಕ ಆಚರಣೆ ಎಂಬುದನ್ನು ಪ್ರತ್ಯೇಕಿಸಿ ನೋಡುವ ಸಾಮಥ್ರ್ಯ ಬಂದರೆ ಅದೇ ಸಾಕು. ಈ 21ನೇ ಶತಮಾನದಲ್ಲೂ 18ನೇ ಶತಮಾನದ ಮೂಢನಂಬಿಕೆಗಳಿಗೆ, ರೂಢ ನಂಬಿಕೆಗಳಿಗೆ ಜೋತು ಬಿದ್ದ ಕೋಟ್ಯಂತರ ಜನರು ನಮ್ಮಲ್ಲಿದ್ದಾರೆ. ಅಂಥವರನ್ನು ವಿಚಾರವಂತರನ್ನಾಗಿಸುವ ಕೆಲಸಕ್ಕೆ ಈ ‘ಹಬ್ಬ’ದ ದಿನವೇ ಚಾಲನೆ ಸಿಗುವಂತಾಗಬೇಕು.
ಇಲ್ಲಾಂದರೆ ವಾಸ್ತವ ಏನೆಂದು ಗೊತ್ತಲ್ಲ, ಎರಡನೆಯ ನೊಬೆಲ್‍ಗೇ ನಮ್ಮಲ್ಲಿ ತತ್ವಾರ ಇದೆ. ಸರ್ ಸಿವಿ ರಾಮನ್ನರಿಗೆ ನಮ್ಮ ದೇಶದ ಮೊದಲ ವಿಜ್ಞಾನ ನೊಬೆಲ್ ಸಿಕ್ಕಿತು ನಿಜ. ಆದರೆ ಅವರ ನಂತರ ಭಾರತದಲ್ಲಿ ಸಂಶೋಧನೆ ಮಾಡಿದ ಯಾವ ಭಾರತೀಯ ವಿಜ್ಞಾನಿಗೂ ಇನ್ನೊಂದು ನೊಬೆಲ್ ಇದುವರೆಗೆ ಸಿಗಲಿಲ್ಲ

Categories
ಅಂಕಣಗಳು ತಂತ್ರಜ್ಞಾನ ವಿಜ್ಞಾನ

ಜ್ಞಾನಜಗತ್ತಿನ ಕಿಟಕಿಗಳು

ಚಿಕ್ಕಂದಿನಲ್ಲಿ ನಾನು ಇದ್ದದ್ದು ಮಲೆನಾಡಿನಲ್ಲಿ, ಬೆಟ್ಟದ ತಪ್ಪಲಲ್ಲೇ ಇದ್ದ ಪುಟ್ಟದೊಂದು ಹಳ್ಳಿಯಲ್ಲಿ. ಎಡೆಬಿಡದೆ ಸುರಿಯುವ ಮಳೆಗೆ ಬೆದರಿ ವಿದ್ಯುತ್ ಕೈಕೊಟ್ಟಾಗ ಹೊರಪ್ರಪಂಚದ ಕೊಂಡಿಯಾಗಿ ನಮ್ಮೊಡನೆ ಇರುತ್ತಿದ್ದದ್ದು ಆಕಾಶವಾಣಿ ಮಾತ್ರವೇ. ಜಗತ್ತಿನಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ತಿಳಿಯಬೇಕೆಂದರೆ ಸಂಜೆಯ ಪ್ರದೇಶ ಸಮಾಚಾರವನ್ನೋ ರಾತ್ರಿಯ ವಾರ್ತೆಗಳನ್ನೋ ಕೇಳಬೇಕು.

ಕೆಲವೇ ನಿಮಿಷಗಳಲ್ಲಿ ಮುಗಿದುಹೋಗುತ್ತಿದ್ದ ಈ ಕಾರ್ಯಕ್ರಮಗಳ ಮೂಲಕ ಹೊಸ ವಿಷಯಗಳನ್ನು ತಿಳಿಯುವುದೆಂದರೆ ಒನ್‌ಡೇ ಮ್ಯಾಚಿನ ಹೈಲೈಟ್ಸ್ ನೋಡಿದಂತೆಯೇ. ಕುತೂಹಲ ಪೂರ್ತಿ ತಣಿಯದಿದ್ದರೂ ನಡೆದದ್ದೇನು ಎನ್ನುವುದು ಗೊತ್ತಾದ ಸಮಾಧಾನ ನಮಗೆ ಸಿಗುತ್ತಿತ್ತು.

ಪ್ರದೇಶ ಸಮಾಚಾರದಲ್ಲಿ ಕೇಳಿದ ಸುದ್ದಿಯ ವಿವರ ಮರುದಿನದ ಪತ್ರಿಕೆಯಲ್ಲಿ ಸಿಗುತ್ತಿತ್ತು ಸರಿ. ಆದರೆ ಮರುದಿನದ ಪತ್ರಿಕೆ ನಮಗೆ ಸಿಗಬೇಕಲ್ಲ! ಬೆಳಿಗ್ಗೆ ಹತ್ತರ ಮುನ್ನ ನಮ್ಮೂರಿಗೆ ಯಾವತ್ತೂ ಪೇಪರ್ ಬಂದದ್ದೇ ಇಲ್ಲ. ಊರಿಗೆ ಬಂದದ್ದನ್ನು ಮನೆಗೆ ಕರೆತರಲು ನಾವೇ ಎರಡು ಕಿಲೋಮೀಟರ್ ನಡೆದು ಹೋಗಬೇಕು, ಇಲ್ಲ ಏಜೆಂಟ್ ಮಹಾಶಯನ ಮರ್ಜಿ ಕಾಯಬೇಕು. ಅವನ ಮೂಡ್ ಸರಿಯಿಲ್ಲದ ಸಮಯದಲ್ಲಿ ಮೂರುಮೂರು ದಿನದ ಪತ್ರಿಕೆಗಳು ಒಟ್ಟಿಗೆ ಮನೆಗೆ ಬಂದದ್ದೂ ಇದೆ.

ಇನ್ನು ವಾರಪತ್ರಿಕೆ ಮಾಸಪತ್ರಿಕೆಗಳು ಬೇಕಾದರೆ ಕನಿಷ್ಟ ಇಪ್ಪತ್ತೈದು ಕಿಲೋಮೀಟರ್ ಪ್ರಯಾಣ ಬೇಕಾಗುತ್ತಿತ್ತು. ಹೊಸ ಪುಸ್ತಕಗಳನ್ನು ತರಬೇಕೆಂದರಂತೂ ನೂರೈವತ್ತು ಕಿಲೋಮೀಟರ್ ಪ್ರಯಾಣ ಗಟ್ಟಿ!

ಅಂದಿನ ಪರಿಸ್ಥಿತಿ ಇದ್ದದ್ದೇ ಹೀಗೆ. ಬಹುಶಃ ‘ಮಾಹಿತಿ ಸಾಕ್ಷರತೆ’ಯ ವಿಚಿತ್ರ ಸಮಸ್ಯೆಯೊಂದನ್ನು ಆಗ ನಾವು ಅನುಭವಿಸುತ್ತಿದ್ದೆವು ಎನ್ನಬಹುದು.

ಓದಲು ಬರೆಯಲು ತಿಳಿದಿರುವುದು ಸಾಕ್ಷರತೆ ಸರಿ, ಆದರೆ ಇದೇನು ಈ ಮಾಹಿತಿ ಸಾಕ್ಷರತೆ?

ಯಾವಾಗ ಮಾಹಿತಿಯ ಅಗತ್ಯ ಬೀಳುತ್ತದೆ ಎನ್ನುವುದನ್ನು ಅರಿತುಕೊಳ್ಳುವುದು, ಮಾಹಿತಿಯನ್ನು ಎಲ್ಲಿಂದ ಹೇಗೆ ಪಡೆಯಬಹುದೆಂದು ತಿಳಿದಿರುವುದು ಮತ್ತು ಹಾಗೆ ಪಡೆದ ಮಾಹಿತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ತಜ್ಞರು ಇನ್‌ಫರ್ಮೇಶನ್ ಲಿಟರೆಸಿ, ಅಂದರೆ ‘ಮಾಹಿತಿ ಸಾಕ್ಷರತೆ’ ಎಂದು ಕರೆಯುತ್ತಾರೆ.

ಇಂದಿನ ಐಟಿ ಪ್ರಪಂಚದಲ್ಲಿ ಬಹುತೇಕ ಎಲ್ಲರೂ ಮಾಹಿತಿ ಸಾಕ್ಷರರೇ. ಈ ಸಾಕ್ಷರತೆಯನ್ನು ಚೆನ್ನಾಗಿ ಬಳಸಿಕೊಳ್ಳುವ ಅವಕಾಶವನ್ನು ಅಂತರಜಾಲದ ಮಾಯಾಜಾಲ ನಮಗೆ ನೀಡಿದೆ. ಬೇಕಾದಾಗ ಬೇಕೆಂದ ಕಡೆ ಬೇಕಾದ ವಿಷಯವನ್ನು ಕುರಿತ ಮಾಹಿತಿ ಪಡೆದುಕೊಳ್ಳುವುದು ಈಗ ಸಾಧ್ಯವಿದೆ: ಹೊಸ ವಿಷಯಗಳನ್ನು ತಕ್ಷಣವೇ ಪಡೆದುಕೊಳ್ಳಲು ಮೊಬೈಲ್ ಆಪ್‌ಗಳು, ಆ ಬಗ್ಗೆ ವಿಶ್ಲೇಷಣೆಗಳನ್ನು ಓದಲು ಆನ್‌ಲೈನ್ ಪತ್ರಿಕೆಗಳು, ಹೆಚ್ಚಿನ ಮಾಹಿತಿ ಪಡೆಯಲು ವಿಶ್ವಕೋಶಗಳು ಎಲ್ಲವೂ ಇವೆ.

ವರ್ಷಗಳ ಹಿಂದೆ ಮಲೆನಾಡಿನ ಮಳೆಯಲ್ಲಿ ಕುಳಿತಿದ್ದ ನಮಗೂ ಈ ಸೌಲಭ್ಯಗಳ ಅಂದಿನ ಅವತಾರಗಳ ಪರಿಚಯ ಇತ್ತು. ಆದರೆ ಅವೆಲ್ಲ ಸುಲಭಕ್ಕೆ ಕೈಗೆ ಸಿಗುತ್ತಿರಲಿಲ್ಲವಾದ್ದರಿಂದ ವಿಚಿತ್ರವಾದ ಸಮಸ್ಯೆಯೊಂದು ನಮ್ಮನ್ನು ಕಾಡುತ್ತಿತ್ತು ಅಷ್ಟೆ.

ಅಂತರಜಾಲ ಲೋಕದಲ್ಲಿ ಇಂದಿನ ಕನ್ನಡ ಓದುಗರೂ ಇಂತಹುದೇ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಮಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಬೇಕೆನ್ನುವ ಅರಿವು ಅವರಿಗಿದೆ, ಜಾಲಲೋಕದಲ್ಲಿ ಆ ವಿಷಯಗಳನ್ನು ಹುಡುಕಿಕೊಳ್ಳುವುದು ಹೇಗೆನ್ನುವುದೂ ಅವರಿಗೆ ಗೊತ್ತು. ಆದರೆ ಆ ಮಾಹಿತಿ ಕನ್ನಡ ಭಾಷೆಯಲ್ಲಿ ಎಲ್ಲಿ-ಹೇಗೆ ಸಿಗುತ್ತದೆ ಎನ್ನುವ ಪ್ರಶ್ನೆ ಮಾತ್ರ ಅವರನ್ನು ಗೊಂದಲದಲ್ಲಿ ಕೆಡವುತ್ತದೆ.

ಈ ಪ್ರಶ್ನೆಗೆ ಉತ್ತರ ದೊರಕಿಸುವ ಅನೇಕ ಪ್ರಯತ್ನಗಳು ಇಂದು ನಡೆಯುತ್ತಿವೆ. ಜಾಲಲೋಕದಲ್ಲಿ ಕನ್ನಡದ ಮಾಹಿತಿಯ ಕೊರತೆಯನ್ನು ತುಂಬಿಕೊಡಲು ಹಲವು ಹವ್ಯಾಸಿ ಬರಹಗಾರರು, ಪತ್ರಕರ್ತರು, ಪ್ರಕಾಶಕರು, ಉದ್ಯಮಿಗಳು ಪ್ರಯತ್ನಿಸುತ್ತಿದ್ದಾರೆ. ಸಮುದಾಯ ಚಾಲಿತ ಯೋಜನೆಗಳೂ ನಡೆಯುತ್ತಿವೆ. ಕರ್ನಾಟಕ ಸರಕಾರದ ಆಶ್ರಯದಲ್ಲಿ ರೂಪುಗೊಂಡಿರುವ, ಮಾಹಿತಿಯಿಂದ ತುಂಬಿಕೊಳ್ಳುತ್ತಿರುವ ‘ಕಣಜ’ ಕೂಡ ಇಂತಹುದೇ ಇನ್ನೊಂದು ಪ್ರಯತ್ನ. ಇಂತಹ ಪ್ರಯತ್ನಗಳು ಎಷ್ಟು ನಡೆದರೂ ಕನ್ನಡ ಭಾಷೆಗೆ ಅದರಿಂದ ಅನುಕೂಲವೇ!

ನೆನಪಿಡಿ, ಕನ್ನಡದ ಓದುಗರಿಗೆ ಬೇಕಾದ ಮಾಹಿತಿ ಪೂರೈಸಲು ನಡೆಯುತ್ತಿರುವ ಈ ಪ್ರಯತ್ನಗಳು ನಮ್ಮ ಸುತ್ತಲೂ ಇರುವ ಜ್ಞಾನದ ಜಗತ್ತಿಗೆ ಸಣ್ಣ-ದೊಡ್ಡ ಕಿಟಕಿಗಳಿದ್ದಂತೆ. ಈ ಕಿಟಕಿಗಳನ್ನು ಎಷ್ಟು ದೊಡ್ಡದಾಗಿ ತೆರೆಯುತ್ತೇವೆ, ಎಷ್ಟು ಬೆಳಕನ್ನು ಒಳಗೆ ಬಿಟ್ಟುಕೊಳ್ಳುತ್ತೇವೆ ಎನ್ನುವುದು ಮಾತ್ರ ನಮಗೇ ಬಿಟ್ಟದ್ದು!

Categories
ಅಂಕಣಗಳು ಮಲ್ಲಿಕಾರ್ಜುನ ಹೊಸಪಾಳ್ಯ ಅಂಕಣ

ಅನನ್ಯ ಪಾರಂಪರಿಕ ಜಲಮೂಲ – ತಲಪರಿಗೆ

ಕೃತಿ : : ಅಂಕಣಗಳು, ಮಲ್ಲಿಕಾರ್ಜುನ ಹೊಸಪಾಳ್ಯ
ಲೇಖಕರು : ಅಂಕಣಗಳು, ಮಲ್ಲಿಕಾರ್ಜುನ ಹೊಸಪಾಳ್ಯ
ಕೃತಿಯನ್ನು ಓದಿ

Categories
ಅಂಕಣಗಳು ಅರುಣ್ ಜೋಳದಕೂಡ್ಲಿಗಿ ಅಂಕಣ

ಅಂಕಣಗಳು – ಅರುಣ್ ಜೋಳದಕೂಡ್ಲಿಗಿ

ಅಂಕಣಗಳು – ಅರುಣ್ ಜೋಳದಕೂಡ್ಲಿಗಿ

ಎಲ್ಲ ಭಾಗಗಳನ್ನು ಓದಿ    |    PDF

Categories
ಅಂಕಣಗಳು ಬಿ ಎಸ್ ಶೈಲಜಾ, ಬಿ ಎ ಶಾರದ ಅಂಕಣ

ಕ್ಷುದ್ರಗ್ರಹಗಳು (Asteroids)

ಕೃತಿ: ಅಂಕಣಗಳು, ಬಿ ಎಸ್ ಶೈಲಜಾ, ಬಿ ಎ ಶಾರದ
ಲೇಖಕರು: ಅಂಕಣಗಳು, ಬಿ ಎಸ್ ಶೈಲಜಾ, ಬಿ ಎ ಶಾರದ
ಕೃತಿಯನ್ನು ಓದಿ

Categories
ಅಂಕಣಗಳು ಪಾಲಹಳ್ಳಿ ವಿಶ್ವನಾಥ್ ಅಂಕಣ

ಅಂಕಣಗಳು – ಪಾಲಹಳ್ಳಿ ವಿಶ್ವನಾಥ್

ಕೃತಿ:ಅಂಕಣಗಳು ಪಾಲಹಳ್ಳಿ ವಿಶ್ವನಾಥ್
ಲೇಖಕರು :ಪಾಲಹಳ್ಳಿ ವಿಶ್ವನಾಥ್
ಕೃತಿಯನ್ನು ಓದಿ

Categories
ಅಂಕಣಗಳು ಕೆ ಟಿ ಗಟ್ಟಿ ಅಂಕಣ

ಭಾರತದಲ್ಲಿ ವಿಜ್ಞಾನ

ಕೃತಿ: ಅಂಕಣಗಳು, ಕೆ ಟಿ ಗಟ್ಟಿ ಅಂಕಣ
ಲೇಖಕರು: ಅಂಕಣಗಳು, ಕೆ ಟಿ ಗಟ್ಟಿ ಅಂಕಣ
ಕೃತಿಯನ್ನು ಓದಿ

Categories
ಅಂಕಣಗಳು ರಾಘವೇಂದ್ರ ಮಹಾಬಲೇಶ್ವರ

ಇಮೇಲ್ ಎಟಿಕೇಟ್ ಎಂಬ ಮಿಂಚಂಚೆ ಸೌಜನ್ಯ

ಕೃತಿ:ಅಂಕಣಗಳು ರಾಘವೇಂದ್ರ ಮಹಾಬಲೇಶ್ವರ
ಲೇಖಕರು: ರಾಘವೇಂದ್ರ ಮಹಾಬಲೇಶ್ವರ
ಕೃತಿಯನ್ನು ಓದಿ

Categories
ಅಂಕಣಗಳು ಪ್ರೊ. ಸಿ. ಡಿ. ಪಾಟೀಲ್ ಅಂಕಣ

ಭೂಮಿಯ ಮೇಲಿನ ಬೃಹದಾಕಾರದ ವೃಕ್ಷ: ಬೆವೋಬಾಬ್

ಸಸ್ಯ ಒಂದು ಅದ್ಭುತವಾದ ಜೀವಿ, ಅದು ಭೂಮಿಯ ಮೇಲೆ ನೆಲೆ ನಿಂತಿರುವ ಎಲ್ಲ ಜೀವಿಗಳಿಗೂ ಆಶ್ರಯ, ಆಹಾರ, ಸುಹೋಷ್ಣ ಹಾಗೂ ರಕ್ಷಣೆಯನ್ನು ನೀಡುತ್ತದೆ. ಅಷ್ಟೇ ಏಕೆ ತನ್ನನ್ನು ಕಡಿಯಲು ಕೋವಿ ತಂದವನಿಗೂ ನೆರಳು ನೀಡುತ್ತದೆ.ಭಗವಾನ್ ಬುದ್ಧ

“ದೇವನೊಬ್ಬ ನಾಮ ಹಲವು” ಎಂಬ ಮಾತು ಜನಜನಿತ. ಒಬ್ಬ ದೇವನಿಗೆ ವಿವಿಧ ಭಾಷೆಯ ವಿವಿಧ ಜನ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಹಾಗೆಯೇ ಇಲ್ಲೊಂದು ಸಸ್ಯಕ್ಕೆ ಬೆವೊಬಾಬ್, ಸತ್ತ ಇಲಿ ಸಸ್ಯ, ಜೀವ ಸಸ್ಯ, ರಸಾಯನ ವಿಜ್ಞಾನಿ ಸಸ್ಯ, ಕೋತಿ ರೊಟ್ಟಿ ಸಸ್ಯ, ಗೊಡ್ಡು ಹುಣಸೆ ಮರ, ಗೋರಖ ಚಿಂಚ, ತಲೆ ಕೆಳಗಾಗಿ ಬೆಳೆವ ಮರ ಎಂಬೆಲ್ಲ ಹೆಸರುಗಳಿಂದ ಕರೆಯುತ್ತಾರೆ.

Categories
ಅಂಕಣಗಳು ಡಾ. ಮೀರಾಸಾಬಿಹಳ್ಳಿ ಶಿವಣ್ಣ

ಕನ್ನಡ ಪ್ರಕಾಶನ ಲೋಕದಲ್ಲೊಂದು ಹೊಸ ಪ್ರಯೋಗ

ಕೃತಿ:ಅಂಕಣಗಳು ಡಾ||ಮೀರಾಸಾಬಿ ಶಿವಣ್ಣ
ಲೇಖಕರು:ಡಾ. ಮೀರಾಸಾಬಿಹಳ್ಳಿ ಶಿವಣ್ಣ
ಕೃತಿಯನ್ನು ಓದಿ

Categories
ಅಂಕಣಗಳು ಈರಯ್ಯ ಕಿಲ್ಲೇದಾರ ಅಂಕಣ ಕೃಷಿ

ಅಂಕಣಗಳು – ಈರಯ್ಯ ಕಿಲ್ಲೇದಾರ

ಅಂಕಣಗಳು – ಈರಯ್ಯ ಕಿಲ್ಲೇದಾರ

ಎಲ್ಲ ಭಾಗಗಳನ್ನು ಓದಿ

Categories
ಅಂಕಣಗಳು ಮಂಜುನಾಥ ಎಚ್ ಅಂಕಣ

ಮಣ್ಣು ನಮ್ಮಲ್ಲೆರ ಕಣ್ಣು

ಕೃತಿ:ಅಂಕಣಗಳು ಮಂಜುನಾಥ ಎಚ್
ಲೇಖಕರು: ಮಂಜುನಾಥ ಎಚ್
ಕೃತಿಯನ್ನು ಓದಿ

Categories
ಅಂಕಣಗಳು ಕೃಷಿ ಜಯಪ್ರಸಾದ್ ಬಳ್ಳೇಕೆರೆ ಅಂಕಣ

ಅನ್ನದ ಅನ್ನ ತಿಪ್ಪೆಗೊಂದು ಹಬ್ಬ

ಕೃತಿ: ಅಂಕಣಗಳು, ಕೃಷಿ, ಜಯಪ್ರಸಾದ್ ಬಳ್ಳೇಕೆರೆ
ಲೇಖಕರು: ಅಂಕಣಗಳು, ಕೃಷಿ, ಜಯಪ್ರಸಾದ್ ಬಳ್ಳೇಕೆರೆ
ಕೃತಿಯನ್ನು ಓದಿ

Categories
ಅಂಕಣಗಳು ನಾ ಕಾರಂತ ಪೆರಾಜೆ ಅಂಕಣ

ನೀರ ನೆಮ್ಮದಿಗೆ ಗುಡ್ಡಕ್ಕೆ ಕನ್ನ

ಕೃತಿ: ಅಂಕಣಗಳು, ನಾ ಕಾರಂತ ಪೆರಾಜೆ
ಲೇಖಕರು: ಅಂಕಣಗಳು, ನಾ ಕಾರಂತ ಪೆರಾಜೆ
ಕೃತಿಯನ್ನು ಓದಿ

Categories
ಅಂಕಣಗಳು ವಿ ಜಿ ಪೂಜಾರ್ ಅಂಕಣ

ಲೇಖನಗಳು – ವಿ ಜಿ ಪೂಜಾರ್

ಕೃತಿ: ಅಂಕಣ – ವಿ ಜಿ ಪೂಜಾರ್ ಲೇಖನಗಳು

ಲೇಖಕರು: ವಿ ಜಿ ಪೂಜಾರ್

ಕೃತಿಯನ್ನು ಓದಿ     |     Download

Categories
ಅಂಕಣಗಳು ಆರೋಗ್ಯ ಪೂರ್ಣಪ್ರಜ್ಞ ಬೇಳೂರು ಅಂಕಣ

ಅಂಕಣಗಳು – ಪೂರ್ಣಪ್ರಜ್ಞ ಬೇಳೂರು

ಕೃತಿ: ಅಂಕಣಗಳು – ಪೂರ್ಣಪ್ರಜ್ಞ ಬೇಳೂರು

ಲೇಖಕರು: ಪೂರ್ಣಪ್ರಜ್ಞ ಬೇಳೂರು

ಕೃತಿಯನ್ನು ಓದಿ     |     Download

Categories
ಅಂಕಣಗಳು ಕೆ.ಎಸ್. ಪ್ರಭು ಅಂಕಣ

ಇ.ಆರ್.ಪಿ.

ಕೃತಿ :ಅಂಕಣಗಳು, ಕೆ.ಎಸ್. ಪ್ರಭು
ಲೇಖಕರು :ಅಂಕಣಗಳು, ಕೆ.ಎಸ್. ಪ್ರಭು
ಕೃತಿಯನ್ನು ಓದಿ

Categories
ಅಂಕಣಗಳು ಜಾನಪದ ಡಾ. ಶಾಲಿನಿ ರಘುನಾಥ್ ಅಂಕಣ

ವೈವಿಧ್ಯಮಯ ಜನಪದ ಶಿಲ್ಪಕಲೆ

ಕೃತಿ: ಅಂಕಣಗಳು, ಜಾನಪದ, ಡಾ. ಶಾಲಿನಿ ರಘುನಾಥ್
ಲೇಖಕರು: ಅಂಕಣಗಳು, ಜಾನಪದ, ಡಾ. ಶಾಲಿನಿ ರಘುನಾಥ್
ಕೃತಿಯನ್ನು ಓದಿ

Categories
ಅಂಕಣಗಳು ಜಲಕೊಯ್ಲು ನಾ ಕಾರಂತ ಪೆರಾಜೆ ಅಂಕಣ

ಬೆವರಿನ ಅಭಿಷೇಕಕೆ ಒಲಿದ ಭಾಗೀರಥಿ

ಕೃತಿ : ಜಲಕೊಯ್ಲು, ಪರಿಸರ ಅವರ ಲೇಖನಗಳು
ಲೇಖಕರು : ಜಲಕೊಯ್ಲು, ಪರಿಸರ
ಕೃತಿಯನ್ನು ಓದಿ

Categories
ಅಂಕಣಗಳು ಕೃಷಿ ಸ ರಘುನಾಥ ಅಂಕಣ

ಭಯ ನೀಗಿದರೆ ಕೃಷಿ ಬದುಕಿಗೆ ಬಲ

ಕೃತಿ:ಭಯ ನೀಗಿದರೆ ಕೃಷಿ ಬದುಕಿಗೆ ಬಲ
ಲೇಖಕರು: ಅಂಕಣಗಳು, ಕೃಷಿ, ಸ ರಘುನಾಥ
ಕೃತಿಯನ್ನು ಓದಿ

Categories
ಅಂಕಣಗಳು ಕುರುವ ಬಸವರಾಜ್ ಅಂಕಣ ಜಾನಪದ ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಗರಿಕೆ ಎಂಬ ಜನಪದರ ಬೆನವ

ನಮ್ಮ ನೆಲದಲ್ಲಿ ಎಲ್ಲೆಂದರಲ್ಲಿ ಸಹಜವಾಗಿ ಕಾಣಬರುವ ಹಚ್ಚಹಸುರಿನ ಸಸ್ಯ ಗರಿಕೆ. ಗಾಯಕ್ಕೆ ಔಷಧವಾಗುವ ಈ ಸಸ್ಯ ಸಗಣಿ ಬೆನವ ತಲೆ ಏರಿ ಕೂತು ಪೂಜೆಗೂ ಒಳಗಾಗುತ್ತದೆ. ತೀರ ತೆಳುವಾದ ಗಾತ್ರದಲ್ಲಿ, ನೆಲದಲ್ಲೆ ಹಬ್ಬುವ ಗುಣದ ಇದರ ಕುರಿತು ಜನರಲ್ಲಿ ನಾನಾ ತರಹದ ಪ್ರಕ್ರಿಯೆ ಇದೆ. ಎಷ್ಟು ಕಿತ್ತರೂ ನೆಲೆದಲ್ಲೇ ಉಳಿದ ಕೊಂಚ ತುಂಡು ಚಿಗಿತು ಹಬ್ಬಬಲ್ಲ ಸ್ವರೂಪದ್ದು. ಮಳೆಯಿಲ್ಲದೆ ಎಷ್ಟೋ ವರ್ಷಗಳ ಕಾಲ ಒಣಗಿ, ತುಂಡು ಕಡ್ಡಿಯಾಗಿ ಹಾಗೆಯೇ ಬಿದ್ದಿದ್ದರೂ ಆನಂತರ ಅದ್ಯಾವಾಗಲೋ ಹನಿ ಬಿದ್ದರೂ ಮತ್ತೆ ಚಿಗುರಿ ಬೆಳೆಯಬಲ್ಲ ಸಸ್ಯಜಾತಿ ಇದು. ಹಾಗಾಗಿಯೇ ಜನಪದ ಹಾಡುಗಾರ್ತಿ/ ಕವಿ ಗರಿಕೆಯನ್ನು ತವರಿಗೆ ಹೋಲಿಸುತ್ತಾರೆ. ನನ್ನ ತವರು ಗರಿಕೆಯ ಕುಡಿಯಹಾಗೆ ಹಬ್ಬಲಿ ಎಂದು.

ಎಷ್ಟು ಕಿತ್ತರೂ ಅಷ್ಟು ಸುಲಭದಲ್ಲಿ ಅಳಿಸಲಾಗದಷ್ಟು ಪ್ರಮಾಣಕ್ಕೆ ಉಳಿಯುವ, ರೈತರಿಗೆ ಅದರಲ್ಲೂ ಎರೆ/ ಕಪ್ಪನೆ ಮಣ್ಣಿನ ಹೊಲದವರಿಗೆ ಕಳೆಯ ಸಮಸ್ಯೆಯ ಸಸ್ಯವಾಗಿದ್ದರೆ, ನಗರದವರಿಗೆ ತಂಪಿನ ಹುಲ್ಲುಹಾಸು.

ಕರುಂಕೆ, ಕರಿಕೆ, ಕರಕಿ, ಕರಿಕಿ, ಕರ್ಕಿ, ಗರಕೆ, ಗರಿಕೆ (ಕನ್ನಡ, ಕನ್ನಡ ನಿಘಂಟು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪುಟ 1661), ಹೀಗೆ ಗರಿಕೆಗಿರುವ ಹಳೆಗನ್ನಡ, ಹೊಸಗನ್ನಡ ಪದಗಳ ಪಟ್ಟಿಯೇ ದೊರೆಯುತ್ತದೆ. ಇದನ್ನೇ ತಮಿಳಿನಲ್ಲಿ ‘ಕರಿಕ’, ತುಳುವಿನಲ್ಲಿ ‘ಕರಿಕೆ’, ತೆಲುಗಿನಲ್ಲಿ ‘ಕರಿಕ’ ಎಂಬ ಸಾಮ್ಯ ಪದಗಳಿರುವುದನ್ನು ಗಮನಿಸಬಹುದು. ಅಂದರೆ ಇಡೀ ದಕ್ಷಿಣ ಭಾರತದ ಮುಖ್ಯ ಭಾಷೆಗಳೆಲ್ಲೆಲ್ಲಾ ಸಮೀಪದ ಪದಗಳಲ್ಲಿ ಬಳಕೆಯಾಗುವುದರಿಂದ ಇದು ಮೂಲ ದ್ರಾವಿಡ ಭಾಷಾ ಪದದ ಮುಂದುವರಿಕೆ ಎನಿಸದಿರದು.ಅಷ್ಟೆ ಅಲ್ಲ ‘ಸಗಣಿ ಬೆನವ’ನ ಮೂರ್ತಿ ಪೂಜೆಯ ಆಚರಣೆಯೂ ಅಂತಹದೆ ವಿಸ್ತಾರತೆಯ ಅಂಶದ್ದೆಂದು ಗುರುತಿಸಬಹುದಾಗಿದೆ.

ಯಾರನ್ನೇ ಕುರಿತಾದರೂ ತಂಬಾ ಬೇಸರಕ್ಕೆ ಒಳಗಾದಾಗ ನೋವಿನಿಂದ ಬೇಸತ್ತು ನುಡಿವ ಹಳ್ಳಿಗಾಡಿನ ಸಾಮಾನ್ಯ ಬೈಗುಳ ‘ನಿನ್ನ ಮನೆ ಎಕ್ಕುಟ್ಟೋಗ’ ಎಂಬುದು. ಅಂದರೆ ನಿನ್ನ ಮನೆ, ಮನೆತನ ನಾಶವಾಗಿ ಇಲ್ಲವಾಗಲಿ ಎಂದರ್ಥ. ವಾಚ್ಯಾರ್ಥದಲ್ಲಿ ನೋಡಿದರೂ ಮನೆಯಲ್ಲಿ ಎಕ್ಕ ಹುಟ್ಟುವುದು ಎಂದರೆ, ಮನೆಯವರು ಯಾರೂ ಇಲ್ಲವಾಗಿ ವಾಸಕ್ಕೂ ಇರಲಾಗದೆ, ಕಸಗುಡಿಸುವವರು ಇಲ್ಲದೆ, ಸಾರಿಸುವವರು ಇಲ್ಲದೆ ಬಹುಕಾಲ ಹಾಳುಬೀಳುವುದು. ಹಾಳುಬಿದ್ದ ಆ ಜಾಗದಲ್ಲಿ ಸ್ವಲ್ಪ ಕಾಲದ ನಂತರ ಹಲವು ಮನೆಗಳಲ್ಲಿ ಎಕ್ಕದ ಗಿಡ ಹುಟ್ಟುವುದು ಸಾಮಾನ್ಯ ಸಹಜ. ಹೀಗೆ ಮನೆಯಲ್ಲಿ ಎಕ್ಕದ ಗಿಡ ಹುಟ್ಟುವುದೆಂದರೆ ಮನೆಯವರೆಲ್ಲ ಹಾಳಾಗಿ ವಾಸವಿಲ್ಲದೆ ಹೋದಾಗ. ಅಂದರೆ ‘ನಿಮ್ಮ ಮನೆ ಹಾಳಾಗಲಿ’ ಎಂಬುದು ಹಳ್ಳಿಗರು ಭಾವಿಸುವ ಅರ್ಥ.

ಇದಕ್ಕೆ ವಿರುದ್ಧವಾಗಿ ‘ಒಳ್ಳೇದಾಗಲಿ’ ಎಂಬುದಕ್ಕೆ ‘ನಿಮಗೆ ಒಳ್ಳೇದಾಗಲಿ’ ಎಂಬ ನೇರ ಪದಗಳ ಬಳಕೆಯೇ ಹೆಚ್ಚು. ಆದರೆ, ಇಲ್ಲಿ ನೋಡಿ ರಾಮನಗರ, ಮಾಗಡಿ, ಕನಕಪುರ ಭಾಗದ ಇರುಳಿಗರು(ಇಲ್ಲಿಗರು) ಬುಡಕಟ್ಟಿನ ಜನರಾದಿಯಾಗಿ ಹೆಚ್ಚಿನ ಜನರಲ್ಲಿ ಸಾವಿನ ನಂತರ ಹೂಳಲು(ಮಣ್ಣಿಗೆ) ಹೋದವರೆಲ್ಲ ಹಿಂದಿರುಗಿ ಬರುವಾಗ ಸತ್ತವರ ಮನೆಯ ಒಳಭಾಕ್ಕೆ ಗರಿಕೆ ಕುಡಿ ಎಸೆದು ದೀಪ ನೋಡಿ ಹೋಗುವ ಪದ್ಧತಿ ಇದೆ. ಅದು ಇವರ ವಂಶ- ಮನೆತನ ಗರಿಕೆ ಕುಡಿಯ ಹಾಗೆ ಹಬ್ಬಲಿ, ಹೆಚ್ಚಲಿ, ಬೆಳೆಯಲಿ ಎಂಬುದರ ಸೂಚಕ- ಸಾಂಕೇತಿಕ ಕ್ರಿಯೆ/ ಆಚರಣೆ.

“ಹಾಲುಂಡ ತವರೀಗೆ ಎನೆಂದು ಹರಸಲೆ
ಹೊಳೆದಂಡೇಲಿರುವ ಕರಕೀಯ| ಕುಡಿಯಂಗ
ಹಬ್ಬಾಲೆ ಅವರ ರಸಬಳ್ಳಿ”
– ಎಂದು ತವರನ್ನು ಹರಸುವ ಸಾಕಷ್ಟು ಜನಪದ ಹಾಡುಗಳಿವೆ.

ಗಣೇಶನ ಪ್ರತೀಕವಾಗಿ ಸಗಣಿಯ ಸಣ್ಣ ಮಿದ್ದೆಯನ್ನು ಮೊಳೆ ಮೇಲಾಗಿರುವ ಬುಗುರಿಯಂತೆ, ಗೋಪುರದ ಆಕಾರದಂತೆ ಮಿದ್ದು, ಅದರ ತುದಿಗೆ ಗರಿಕೆ ಕುಡಿಯನ್ನು ಸಿಕ್ಕಿಸಿದ ರೂಪವನ್ನು ‘ಬೆನವ’, ‘ಸಗಣಿ ಬೆನವ’ ಎಂದು ಕರೆಯುತ್ತೇವೆ. ಯಾವುದೇ ಪೂಜೆಗಳು, ಮಂಗಳಕಾರ್ಯಗಳ ಆರಂಭದಲ್ಲಿ ಈ ಬೆನವನ ಆಕಾರ ಇಟ್ಟು ಪೂಜಿಸುವುದು ಇಂದಿಗೂ ಹಳ್ಳಿಗಾಡಿನಲ್ಲಿ ಆಚರಣೆಯಲ್ಲಿದೆ. ಮಧ್ಯ ಕರ್ನಾಟಕದ ಭಾಗದಲ್ಲಿ ಇದನ್ನು ಕೆರಕ/ ಕೆರಕಪ್ಪ ಎಂದೂ ಕರೆಯಲಾಗುತ್ತದೆ. ಗರಿಕೆ ಪದ ದಕ್ಷಿಣ ಭಾರತದ ಎಲ್ಲಾ ದ್ರಾವಿಡ ಭಾಷೆಗಳಲ್ಲೂ ತುಸು ವ್ಯತ್ಯಾಸದಲ್ಲಿ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಗರಿಕೆಯನ್ನು ಕರಿಕೆ ಎಂದೂ ಕರೆಯುತ್ತೇವೆ. ಈ ಕರಿಕೆಯನ್ನು ಸಿಕ್ಕಿಸಿದ ರೂಪವೆ ಕೆರಕಪ್ಪ. ಕೆರಕ+ ಅಪ್ಪ= ಕೆರಕಪ್ಪ, ಇಲ್ಲಿನ ಅಪ್ಪ ವಿಶೇಷವಾದುದು. ಕನ್ನಡವು ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಮಕ್ಕಳು ತಮ್ಮ ತಂದೆಯನ್ನು ಸಂಭೋಧಿಸುವುದು ‘ಅಪ್ಪ’ ಎಂದೆ. ಸೋಲಿಗರು, ಇರುಳಿಗರು, ಜೇನುಕುರುಬರು ಒಳಗೊಂಡ ನಮ್ಮ ನಾಡಿನ ಇತರ ಅನೇಕ ಸಮುದಾಯಗಳಲ್ಲೂ ಅವರು ಮುಖ್ಯವಾಗಿ ಪೂಜಿಸುವುದು ಕುಲದ ಹಿರಿಯರನ್ನು. ಈ ಹಿನ್ನೆಲೆಯಲ್ಲಿ ಇಟ್ಟು ನೋಡಿದಾಗ ಹಿರಿಯ ಎಂಬ ಅರ್ಥದಲ್ಲಿ ಅಪ್ಪ ಎಂಬ ವಿಶೇಷಣ ಸೇರಿಸಿ ಕೆರಕಪ್ಪ, ಬೆನಪ್ಪ ಹೀಗೆ ಕರೆದಿರುವುದು, ಕರೆಯುತ್ತಿರುವುದನ್ನು ಗಮನಿಸಬಹುದು. ‘ಪಿಳ್ಳಪ್ಪ’ ಎಂಬುದು ಬೆನಪ್ಪನಿಗೆ ಕರೆಯುವ ಇನ್ನೊಂದು ಹೆಸರು. ಪಿಳ್ಳಪ್ಪದಲ್ಲಿ ಪಿಳ್ಳ ಅಥವಾ ಪಿಳ್ಳೆ ಎಂದರೆ ಚಿಕ್ಕದು, ಎಳೆಯದು, ಮಗು ಎಂಬ ಅರ್ಥಗಳಿವೆ.

ಅಷ್ಟಲ್ಲದೆ ಈ ಬೆನವನ ಆಕಾರ, ಬಳಸಲಾದ ಪರಿಕರ, ಬಳಸುತ್ತಿರುವ ರೂಪ, ಬಳಕೆಯ ಉದ್ದೇಶ, ಪ್ರಾಧಾನ್ಯತೆ ಎಲ್ಲವನ್ನು ಅವಲೋಕಿಸಿದಾಗ ಇದು ಅತ್ಯಂತ ಪ್ರಾಚೀನ ಆಚರಣೆಯ ಇಂದಿನ ಮುಂದುವರಿಕೆಯ ಕುರುಹು ಆಗಿ ಇಲ್ಲಿ ಆಚರಣೆಗೊಳ್ಳುತ್ತಿರುವುದನ್ನು, ಆ ಮೂಲಕ ಭಿತ್ತರಗೊಳ್ಳುತ್ತಿರುವುದನ್ನು ನೋಡಬಹುದು. ನಮ್ಮ ಪುರಾತನ ಮಾನವರು ಆಹಾರ ಧಾನ್ಯಗಳ ಬಳಕೆಯನ್ನು ಕಂಡುಕೊಂಡುದು ಏಳು ಸಾವಿರ ವರ್ಷಗಳ ಹಿಂದೆ ಎಂಬುದು ತಿಳಿಯುತ್ತದೆ. ಅದಾದ ಕೆಲವು ಸಾವಿರ ವರ್ಷಗಳ ನಂತರ; ಅಂದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಬೇಸಾಯ ಪಶುಪಾಲನೆಗೆ ತೊಡಗಿದ ವಿವರಗಳು ನಮ್ಮ ನೆಲೆದಲ್ಲಿ ದೊರೆಯುತ್ತವೆ.

ಈ ಎಲ್ಲವನ್ನು ನೋಡಿದಾಗ ಬೇಸಾಯ ಕಂಡುಕೊಂಡು, ಉಳುಮೆಗೆ ತೊಡಗಿ, ಬೆಳೆ ಬೆಳೆದು, ಸಗಣಿ ಎಂಬುದು ಬರೀ ಸಗಣಿ ಅಲ್ಲ, ಅದು ಫಲವತ್ತಿನ ಗೊಬ್ಬರ/ ಫರ್ಟಿಲಿಟಿ. ಬೆಳೆ ಬೆಳೆಯುವ ನೆಲಕ್ಕೆ ಬಹುಮುಖ್ಯವಾದ ಫಲವತ್ತತೆಯನ್ನು ಅದು ತಂದುಕೊಡುತ್ತದೆ ಎಂದು ಕಂಡುಕೊಂಡುದರ ರೂಪ ಇದು. ತನಗೆ, ತನ್ನ ಬದುಕಿಗೆ ಅತ್ಯಂತ ಮಹತ್ವದ್ದೆಂದು ಭಾವಿಸುದುದೆಲ್ಲವನ್ನು ಅವನು ದೈವವಾಗಿ ಕಂಡಿದ್ದಾನೆ. ಇಂತಹ ರೈತರ ಆಧಾರಿಯಾದ, ಫಲವತ್ತತೆಯ ಪ್ರತೀಕವಾದ ಸಗಣಿಗೆ ಇಡೀ ಸಸ್ಯ ಸಂಕುಲದ ಪ್ರತೀಕವಾದ ಕರಿಕೆ/ ಗರಿಕೆಯ ತುಂಡೊಂದನ್ನು ಸಿಕ್ಕಿಸುವ ಮೂಲಕ ಮಾಡಿಕೊಂಡ ಆಕಾರ/ ಆಕೃತಿಯನ್ನು ತನ್ನೆಲ್ಲಾ ಮುಖ್ಯ ಪೂಜೆಗಳ ಆರಂಭದಲ್ಲಿ ಸಂಕೇತ ರೂಪವಾಗಿ ಬಳಕೆಗೆ ತಂದುಕೊಂಡಿರುವ ಸಾಧ್ಯತೆಯ ಅಂಶವನ್ನು ಗುರುತಿಸಬಹುದು. ಇದು ಮೂರ್ತಿ ಪೂಜೆಯ ಅತ್ಯಂತ ಪ್ರಾಥಮಿಕ ಮತ್ತು ಆದಿಮ ಆರಂಭದ ಮಟ್ಟದ ಒಂದು ಸಂಕೇತ ಆಕಾರ/ ಆಕೃತಿ ಎಂದು ಒಂದು ನೆಲೆಯಿಂದ ಗುರುತಿಸಬಲ್ಲ ಅಂಶ ಇಲ್ಲಿನದು.

ಬೇಸಾಯ ಸಂಬಂಧಿಯಾದ ಎಲ್ಲಾ ಆಚರಣೆಗಲ್ಲೂ ಇರಲೇಬೇಕಾದ, ಈಗಲೂ ಇಡುತ್ತಿರುವ ಆಕೃತಿ ಇದು. ರೈತರ ಬಹುಮುಖ್ಯ ಹಬ್ಬಗಳಲ್ಲೊಂದಾದ ‘ಹೊನ್ನಾರು’ ಅಥವಾ ‘ಹೊನ್ನೇರು’, ಇಲ್ಲವೆ ಯುಗಾದಿಯ ಹಬ್ಬದ ಭಾಗವಾಗಿ ಹೊಲಕ್ಕೆ ಹೋಗಿ ಸಗಣಿ ಬೆನವನ ಇಟ್ಟು, ಉಳುವ ನೇಗಿಲು ಮತ್ತು ಭೂಮಿಯನ್ನು ಪೂಜಿಸಿಯೇ ಬೇಸಾಯ ಆರಂಭಿಸುವ ‘ಮೊದಲ ಬೇಸಾಯ’ದ ಆಚರಣೆಯಲ್ಲಿ ಇಟ್ಟೇ ಇಡುವ ಆಕಾರ ಈ ಗರಿಕೆ ಬೆನವನದು. ಅಲ್ಲದೆ ಬಿತ್ತುವ ಮೊದಲ ದಿನ ಬಿತ್ತುವ ಕೂರಿಗೆ, ಬಿತ್ತುವ ಧಾನ್ಯವ ಇಟ್ಟು ಪೂಜಿಸುವಾಗಲು, ಕಣದ ಪೂಜೆಯ ಸಂದರ್ಭಗಳಲ್ಲೂ ಗರಿಕೆ ಬೆನವ ಇರಲೇಬೇಕಾದ ಮೂರ್ತಿ.

ಮೊದಲ ಪೂಜೆಯ ಈ ಬೆನವ ನಂತರ ಬಳಕೆಗೆ ಬಂದ ಅದೇ ಉದ್ದೇಶದ/ ಪರಿಕಲ್ಪನೆಯ ಗಣೇಶನಿಗೂ ಆರೋಪಿತಗೊಂಡು ಎರಡೂ ಏಕವಾಗಿದೆ. ಈಗಲೂ ಹಳ್ಳಿಗಾಡಿನಲ್ಲಿ ಸಗಣಿ ಬೆನವನ ಪೂಜೆಯೂ ಇದೆ. ಹಾಗೆಯೆ ಮೂರ್ತಿರೂಪದಲ್ಲಿ ಕೂರಿಸುವ ಗಣೇಶನ ಆರಾಧನೆಯೂ ಇದೆ. ಗಣೇಶನೇ ಬೇರೆ ಬೆನವನೆ ಬೇರೆ. ಮೊದಲ ಪೂಜೆಯ ಅರ್ಥದ ಸಾಮ್ಯದಿಂದ ಎರಡೂ ಒಂದರಲ್ಲಿ ಒಂದು ಸೇರಿದಂತಿದೆ.

ಆ ಪೂಜಾರ್ಹ ಎನಿಸಿರುವ ಬೆನಕನಿಗೆ ಎಲ್ಲಾ ಪೂಜೆಗಳ ಮೊದಲು ಇದನ್ನೆ ಪೂಜಿಸುವುದಿದೆ. ಹಲವು ಬುಡಕಟ್ಟುಗಳಲ್ಲಿ ವಿಶೇಷವಾಗಿ ಇರುಳರಲ್ಲಿ ಮೂರ್ತಿರೂಪದ ಸಹಜವಾದ ದೇವರೇ ಇದು. ಇರುಳಿಗರು ತಮ್ಮ ಕಷ್ಟ- ಸುಖ, ಅನಾರೋಗ್ಯದ ಪರಿಹಾರ, ಕಣಿ/ ಭವಿಷ್ಯ ತಿಳಿಯಲು ಮಾಡುವ ‘ಕಣಿಶಾಸ್ತ್ರಕ’ಕ್ಕೆ ಎದುರಿಗೆ ಈ ಗರಿಕೆ ಬೆನವ ಇರಲೇಬೇಕು. ಇದನ್ನು ಅವರು ಪಿಳ್ಳೆ, ಪಿಳ್ಯಪ್ಪ, ಪಿಳ್ಳಾರಿ ಎಂದು ಕರೆಯುತ್ತಾರೆ.

ಫಲವತ್ತತೆಯ ಸಂಕೇತವಾದ ಸಗಣಿ ಹಾಗೂ ಸಸ್ಯ ಸಂಕುಲದ ಸಂಕೇತ ಗರಿಕೆ; ಈ ಎರಡರ ಸಮತೂಕದ ಸಂಯೋಜನೆಯ ಆಕಾರ; ಅಂದರೆ ಇನ್ನೊಂದರ್ಥದಲ್ಲಿ ಸಗಣಿ ಗರ್ಭವಾದರೆ, ಗರಿಕೆ ಮೊಳಕೆ. ಸಗಣಿ ಮೊಟ್ಟೆಯೊಳಗಿನ ಲೋಳೆಯಂತಾದರೆ, ಗರಿಕೆ ಮೊಟ್ಟೆಯೊಳಗಿನ ಭಂಡಾರದಂತೆ; ಜೀವ- ಶಕ್ತಿಗಳ ಪ್ರತೀಕದಂತೆ; ಸೃಷ್ಟಿ ಪ್ರಕೃತಿಯ ಪ್ರತಿಮೆಯಂತೆ. ಇದು ಪ್ರಾಚೀನ ಪಶುಪಾಲಕ ಹಾಗೂ ಕೃಷಿಕರ ಆಶಯವಾಗಿರುವಂತೆ ಕಾಣುತ್ತದೆ.

ಗರಿಕೆ 12-30 ಸೆಂ.ಮೀ. ಎತ್ತರ ಬೆಳೆವ, ಹೆಚ್ಚು ಪೌಷ್ಟಿಕವಾದ ಸಾರ್ವಕಾಲಿಕ ಸಸ್ಯ. ವಿಶಾಲವಾಗಿ ಹರಡುವ, ಮೈದಾನ, ಗುಡ್ಡಪ್ರದೇಶಗಳೆರಡರಲ್ಲಿ ಬೆಳೆವ ಗುಣವಳ್ಳದ್ದು. ಸಂಸ್ಕೃತದಲ್ಲಿ ‘ದೂರ್ವ’ ಎಂದರೆ ಇಂಗ್ಲೀಷಿನಲ್ಲಿ Cynodon Dactyolon ಎಂದೆನಿಸಿಕೊಳ್ಳುವ ಈ ಗರಿಕೆ ಪಾಂಡವರು ವಾರಣಾವತ ಹೊಕ್ಕಾಗ ಎದುರುಗೊಂಡ ಪುರಜನರು ತಂದಿದ್ದ ಮಂಗಳ ವಸ್ತುಗಳಲ್ಲಿ ಇದು ಒಂದಾಗಿದ್ದುದು ಗಮನಾರ್ಹ’ (ಬಿ.ಜಿ.ಎಲ್. ಸ್ವಾಮಿ: ಸಸ್ಯ ಪುರಾಣ).

ನಗರದವರ ಕಣ್ಸೊಬಗಿನ ಗರಿಕೆ, ಹಳ್ಳಿಗರಿಗೆ ಒಂದು ಕಳೆ ಹುಲ್ಲು. ಗರಿಕೆ ಹತ್ತಿದ ಎರೆ ನೆಲದ ಕಳೆ ತೆಗೆವುದು ಕಷ್ಟ. ಆದರೆ, ಇಂತಹ ಕಳೆ ಗರಿಕೆ ಔಷಧಿ ಸಸ್ಯವಾಗಿರುವುದು ಒಂದು ವಿಶೇಷ. ಗೀರಿದ, ತರಚಿದ, ರಕ್ತ ವಸರುವ ಗಾಯಗಳಿಗೆ ಇದರ ರಸ ಒಳ್ಳೆಯ ಔಷಧ. ಸಕ್ಕರೆ ಕಾಯಿಲೆ/ ಸಿಹಿಮೂತ್ರ ರೋಗಕ್ಕೆ ಇದು ಒಳ್ಳೆಯ ಮದ್ದು. ಗರಿಕೆಯ ಹುಲ್ಲು, ಬೇರು, ಎಲೆಗಳಿಂದ ತಯಾರಿಸಿದ ಕಷಾಯವು ರಕ್ತಮೂತ್ರಕ್ಕೆ, ಬಿಳಿ ಸೆರಗು, ಆಮಶಂಕೆಗಳಿಗೆ ಉತ್ತಮ ಔಷಧ.

‘ಬೆಳಗಾಗ ಎದ್ದು ಒಂದು ಹಿಡಿ ಹಸುರು ಕರಿಕೆ ಹುಲ್ಲನ್ನು ಕಲ್ಲಿನಿಂದ ಜಜ್ಜಿ ತೆಗೆದ ರಸವನ್ನು ಕುಡಿದರೆ (40 ದಿನ) ರಕ್ತವೃದ್ಧಿಯಾಗುತ್ತದೆಯೆಂದು ಹೇಳುತ್ತಾರೆ. ಈ ವಿಧಾನವನ್ನು ಅಳಲೆಕಾಯಿ ಪಂಡಿತನ ಕಸುಬು ಎಂದು ತಾತ್ಸಾರ ಮಾಡಬಾರದು. ಅಮೇರಿಕಾದಲ್ಲಿ ಈಚೀಚೆಗೆ ಗ್ರಾಸ್ ಎಕ್ಸಾಟ್ರಾಕ್ಟ್ ಎಂಬುದೊಂದು ಇಂಜಿಕ್ಷನ್ ತಯಾರಿಯಾಗಿದೆ. ಗರಿಕೆಯ ಹುಲ್ಲಿನಿಂದ ಅನೀಮಿಯ ರೋಗಿಗಳಿಗೆ ಐದಾರು ಇಂಜೆಕ್ಷನ್ ನೀಡಿದರೆ ಆರೋಗ್ಯ ಮರುಕಳಿಸುತ್ತದೆ.’*2

ಹೀಗೆ ಗರಿಕೆ ನಮ್ಮಲ್ಲಿ ಹಲವು ಬಗೆಗಳಿಂದ ಉಪಯುಕ್ತವಾಗಿ ಪಾಲ್ಗೊಳ್ಳುತ್ತದೆ. ನಾವು ಕಳೆಯೆನ್ನುವ ಅನೇಕ ಸಸ್ಯಗಳು ಔಷಧಿಗಳಾಗಿರುವುದು ವಿಶೇಷ. ಕಂಡವರಿಗೆ, ಅರಿತವರಿಗೆ ಉಂಟೆಂದರೆ ಉಂಟು.

Categories
ಅಂಕಣಗಳು ಕಿಶನ್ ರಾವ್ ಕುಲಕರ್ಣಿ ಅಂಕಣ ಕೃಷಿ

ಅಂಕಣಗಳು – ಕಿಶನ್ ರಾವ್ ಕುಲಕರ್ಣಿ

ಅಂಕಣಗಳು – ಕಿಶನ್ ರಾವ್ ಕುಲಕರ್ಣಿ

ಎಲ್ಲ ಭಾಗಗಳನ್ನು ಓದಿ

Categories
ಅಂಕಣಗಳು ನಾ ಡಿಸೋಜಾ ಅಂಕಣ

ಅಂಕಣಗಳು – ನಾ ಡಿಸೋಜಾ

ಅಂಕಣಗಳು – ನಾ ಡಿಸೋಜಾ

ಎಲ್ಲ ಭಾಗಗಳನ್ನು ಓದಿ | Download

Categories
ಅಂಕಣಗಳು ಸ ರಘುನಾಥ ಅಂಕಣ

ಅಜ್ಜಿ ಕೊಟ್ಟ ಗೆಜ್ಜೆಪದ

ಕೃತಿ : : ಅಂಕಣಗಳು, ಸ ರಘುನಾಥ
ಲೇಖಕರು : ಅಂಕಣಗಳು, ಸ ರಘುನಾಥ
ಕೃತಿಯನ್ನು ಓದಿ

Categories
ಅಂಕಣಗಳು ಡಾ. ಸಿ ಆರ್ ಚಂದ್ರಶೇಖರ್

ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್(ಮೇನಿಯಾ- ಖಿನ್ನತೆ ಕಾಯಿಲೆ)

ಒಂದು ಅವಧಿಯಲ್ಲಿ ಖಿನ್ನತೆ(ಡಿಪ್ರೆಶನ್), ಮತ್ತೊಂದು ಅವಧಿಯಲ್ಲಿ ಮೇನಿಯಾ(ಅತಿ ಸಂತೋಷ ಅಥವಾ ಕೋಪ, ಅತಿ ಚಟುವಟಿಕೆ); ಇದು ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್ ವೈಶಿಷ್ಟ್ಯ. ಪ್ರತಿ ಸಾವಿರ ಜನರಲ್ಲಿ ಐದಾರು ಮಂದಿಗೆ ಇರುವ ಅಪರೂಪದ ಮಾನಸಿಕ ಕಾಯಿಲೆ. ಸಾಮಾನ್ಯವಾಗಿ 25-30 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು. ಎಲ್ಲಾ ವರ್ಗಗಳ ಜನರಲ್ಲೂ ಕಾಣಿಸುತ್ತದೆ.

ಖಿನ್ನತೆ ಅವಧಿಯಲ್ಲಿ ಯಾವ ಕಾರಣವಿಲ್ಲದೆ ಅಥವಾ ಚಿಕ್ಕ ಕಾರಣದಿಂದ ವ್ಯಕ್ತಿ ವಿಪರೀತ ದುಃಖ, ಬೇಸರ, ಚಿಂತೆ, ವ್ಯಥೆ ನಿರಾಶೆ ಅನುಭವಿಸುತ್ತಾನೆ. ಬಹುತೇಕ ಚಟುವಟಿಕೆಗಳಲ್ಲಿ ನಿರಾಸಕ್ತಿ ಅಥವಾ ನಿರುತ್ಸಾಹ ಕಂಡುಬರುತ್ತದೆ. ಊಟ- ತಿಂಡಿ ಸೇವನೆ, ತನ್ನ ಅಲಂಕಾರ, ಆಸಕ್ತಿಯ ಹವ್ಯಾಸಗಳಲ್ಲಿ, ಮನರಂಜನಾ ಚಟುವಟಿಕೆಗಳಲ್ಲಿ ಕೂಡ ರೋಗಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಮಾಡಬೇಕಾದ ಕೆಲಸ- ಕರ್ತವ್ಯಗಳನ್ನು ಮಾಡದೇ ನಿಷ್ಕ್ರಿಯನಾಗುತ್ತಾನೆ.

Categories
ಅಂಕಣಗಳು ಜಿ ವಿ ಗಣೇಶಯ್ಯ ಅಂಕಣ

ಗೋಧಿ ಎಂಬ ಅದ್ಭುತ ಹುಲ್ಲು

ಒಂದೇ ಔಷಧದಿಂದ ಹಲವಾರು ಕಾಯಿಲೆಗಳು ಗುಣವಾಗುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತದಲ್ಲವೇ? ಅಂತಹ ಔಷಧವೊಂದಿದೆ. ಆದರೆ ಅದು ಯಾವುದೇ ಔಷಧದ ಅಂಗಡಿಯಲ್ಲಿ ದೊರೆಯುವುದಿಲ್ಲ. ನೀವೇ ಅದನ್ನು ತಯಾರಿಸಿಕೊಳ್ಳಬೇಕು. ಈ ಔಷಧದ ತಯಾರಿಕೆಗೆ ಏನೆಲ್ಲಾ ಪದಾರ್ಥಗಳು ಬೇಕೋ, ಏನೆಲ್ಲಾ ಪರಿಕರಗಳು ಬೇಕೋ ಎಂಬ ಕುತೂಹಲ ನಿಮಗಿರಬಹುದು.ಯಾವುದಾ ಔಷಧ?ಹೇಳಿದರೆ ಖಂಡಿತಾ ಅಚ್ಚರಿಯಾದೀತು. ಆ ದಿವ್ಯ ಔಷಧ ಇನ್ನಾವುದೂ ಅಲ್ಲ; ಗೋಧಿ ಗಿಡದ ರಸ !

ಅಮೇರಿಕದ ಮಹಿಳಾ ವೈದ್ಯೆ ಡಾ.ಎನ್. ಬಿರಾಮೋರ್ ಎಂಬುವರು ಅಸಾಧ್ಯ ರೋಗಗಳಿಂದ ನರಳುತ್ತಿದ್ದವರ ಮೇಲೆಲ್ಲಾ ಗೋಧಿ ಗಿಡದ ರಸದ ಪ್ರಯೋಗ ನಡೆಸಿ ನೂರಕ್ಕೆ ನೂರು ಸಾಫಲ್ಯ ಪಡೆದುದಾಗಿ ಹೇಳುತ್ತಾರೆ. ಈ ವೈದ್ಯೆಯ ಪ್ರಕಾರ ಜಗತ್ತಿನಲ್ಲಿರುವ ಯಾವುದೇ ರೋಗ ಗೋಧಿ ಗಿಡದ ರಸದ ಕ್ರಮಬದ್ಧ ಸೇವನೆಯಿಂದ ಗುಣವಾಗದಿರುವುದಿಲ್ಲ. ದೊಡ್ಡ- ದೊಡ್ಡ ವೈದ್ಯರು ಗುಣಪಡಿಸಲು ಅಸಾಧ್ಯವೆಂದು ಕೈಚೆಲ್ಲಿದ, ಮರಣಶಯ್ಯೆಯಲ್ಲಿದ್ದ ಕ್ಯಾನ್ಸರ್ ರೋಗಿಗಳನ್ನು ಸಹ ಗೋಧಿ ಗಿಡದ ರಸದಿಂದಲೇ ಗುಣಪಡಿಸಿದ್ದಾರಂತೆ.

ಭಗಂಧರ, ಮೂಲವ್ಯಾಧಿ, ಮಧುಮೇಹ, ಗಂಟಲುಬೇನೆ, ಸಂಧಿವಾತ, ಕಾಮಾಲೆ, ಜ್ವರ, ಅಸ್ತಮಾ, ಕೆಮ್ಮು ಇತ್ಯಾದಿ ರೋಗಗಳಿಂದ ಅನೇಕ ವರ್ಷಗಳಿಂದ ಬಳಲುತ್ತಿದ್ದವರನ್ನು ಸಹ ಈ ಸಾಧಾರಣ ಗಿಡದ ರಸದಿಂದಲೇ ಗುಣಪಡಿಸಲಾಗಿದೆಯಂತೆ. ಹೆಚ್ಚೇಕೆ ಆಧುನಿಕ ವೈದ್ಯ ವಿಜ್ಞಾನವು ಗುಣಪಡಿಸಲು ಅಸಾಧ್ಯವೆಂದು ಘೋಷಿಸಿರುವ ಸುಮಾರು 350 ಕಾಯಿಲೆಗಳನ್ನು ಈ ಗಿಡದ ರಸದಿಂದ ಗುಣಪಡಿಸಲಾಗಿದೆ. ಗೋಧಿ ಗಿಡದಲ್ಲಿರುವ ಅದ್ಭುತ ಶಕ್ತಿಯು ಪ್ರಯೋಗಗಳಿಂದ ದೃಢಪಟ್ಟಿದೆ. ಅಮೇರಿಕದ ಅನೇಕ ಪ್ರಸಿದ್ಧ ವೈದ್ಯರು ಈ ಗಿಡದ ರಸದಲ್ಲಿರುವ ಔಷಧೀಯ ಗುಣಗಳನ್ನು ಸಮರ್ಥಿಸಿದ್ದಾರೆ. ಭಾರತದ ಗುಜರಾತ್, ಮುಂಬಯಿ ಪ್ರಾಂತ್ಯಗಳ ಅನೇಕ ವೈದ್ಯರು ಸಹಾ ಈ ಬಗ್ಗೆ ಪ್ರಯೋಗನಿರತರಾಗಿದ್ದಾರೆ.

ಹಸಿರು ರಕ್ತ: ಈ ಎಲ್ಲಾ ಕಾರಣಗಳಿಂದಾಗಿ ಗೋಧಿ ಗಿಡದ ರಸವನ್ನು “ಹಸಿರು ರಕ್ತ” ಎಂದು ಕರೆಯಲಾಗಿದೆ. ಇದು ಶೇ. 40ರಷ್ಟು ಮಾನವ ರಕ್ತವನ್ನು ಹೋಲುತ್ತದೆ. “ದೈವದತ್ತವಾದ ಈ ಅಮೃತದೆದುರು ವೈದ್ಯರು ನೀಡುವ ಇತರ ಅಂಶಗಳು ಏನೇನೂ ಅಲ್ಲ. ಜಗತ್ತಿನ ಪ್ರತಿಯೊಬ್ಬನೂ ಈ ರಸವನ್ನು ಸೇವಿಸಿ ಲಾಭ ಪಡೆಯಬಹುದು” – ಹೀಗೆಂದು ಡಾ. ಬಿರಾಮೋರ್ ಹೇಳುತ್ತಾರೆ.ನೀವು ಮನೆಯಲ್ಲೇ ಈ ಔಷಧವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಹೇಗೆ? ಮುಂದೆ ಓದಿ.

ಮನೆಯಲ್ಲೇ ಮಾಡಿಕೊಳ್ಳಿ ನಿಮ್ಮ ಅನುಕೂಲಕ್ಕೆ ತಕ್ಕಂತೆ 10-12 ಇಲ್ಲವೇ 20 ಮರದ ಇಲ್ಲವೇ ಮಣ್ಣಿನ ಕುಂಡಗಳನ್ನು ತಂದುಕೊಳ್ಳಿ. ಸೂರ್ಯ ಕಿರಣಗಳು ಬೀಳದ ಜಾಗದಲ್ಲಿ ಅವುಗಳನ್ನು ಇಟ್ಟು ಮಣ್ಣು ತುಂಬಿಸಬೇಕು. ರಾಸಾಯನಿಕ ಗೊಬ್ಬರ ಹಾಕಬಾರದು. ನಂತರ ಒಂದೊಂದು ಕುಂಡದಲ್ಲಿ ಸುಮಾರು 60-70 ಉತ್ತಮವಾದ ಗೋಧಿಯ ಕಾಳುಗಳನ್ನು ಬಿತ್ತಬೇಕು. ದಿನವೂ ನೀರು ಹಾಕಲು ಮರೆಯಬೇಡಿ. 3-4 ದಿನಗಳಲ್ಲಿ ಬಿತ್ತಿದ್ದ ಗೋಧಿಯು ಮೊಳಕೆ ಬರುವುದು. ನಂತರ 8-10 ದಿನಗಳಲ್ಲಿ ಅದು 5-6 ಅಂಗುಲ ಎತ್ತರದ ಗಿಡವಾಗುತ್ತದೆ.

ಆಗ ಅದರಲ್ಲಿ 30-40 ಗಿಡಗಳನ್ನು ಬೇರು ಸಹಿತ ಕಿತ್ತು ಬೇರನ್ನು ಚೆನ್ನಾಗಿ ತೊಳೆಯಬೇಕು. ನಂತರ ಚೆನ್ನಾಗಿ ಅರೆಯಬೇಕು. ಗ್ರೈಂಡರ್/ಮಿಕ್ಸರ್ ಗಳನ್ನು ಈ ಕೆಲಸಕ್ಕೆ ಉಪಯೋಗಿಸಬಹುದು. 6 ಅಂಗುಲಕ್ಕಿಂತ ಎತ್ತರದ ಗಿಡ ರಸ ತೆಗೆಯಲು ಅನರ್ಹ. ಹೀಗೆ ಅರೆದ ನಂತರ ಶುದ್ಧವಾದ ಬಟ್ಟೆಯ ಸಹಾಯದಿಂದ ಹಿಂಡಿ ರಸ ತೆಗೆದುಕೊಳ್ಳಬೇಕು. ಈ ರಸವನ್ನು ಕೂಡಲೇ ರೋಗಿಗಳಿಗೆ ಕುಡಿಸಬೇಕು. ಏಕೆಂದರೆ ರಸ ತೆಗೆದ ಅರ್ಧ ಗಂಟೆಯ ನಂತರ ರಸ ಸತ್ವಹೀನವಾಗಿಬಿಡುತ್ತದೆ. ರೋಗಿಯು ಈ ರಸವನ್ನು ಸಾವಕಾಶವಾಗಿ ಸೇವಿಸಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಒಂದು ಸಾರಿಗೆ 30 ಎಂ.ಎಲ್ ನಂತೆ ರೋಗಿಗಳಿಗೆ ಈ ರಸ ಕೊಡಬೇಕು. ಈ ರಸದ ಸೇವನೆಯ ನಂತರ ಒಂದು ಲೋಟ ನೀರು ಕುಡಿಯಬೇಕು.

ಹಳೆಯ ರೋಗದಿಂದ ನರಳುತ್ತಿರುವವರಿಗೆ ದಿನಕ್ಕೆ ನಾಲ್ಕು ಬಾರಿ ಈ ರಸ ಕೊಡಬೇಕು. ಇಂತಹವರು ಪ್ರಾರಂಭದಲ್ಲಿ 8-10 ದಿನ ದೈನಂದಿನ ಆಹಾರ ಸೇವನೆಯನ್ನು ನಿಲ್ಲಿಸಿ ಆಗಾಗ ಎಳನೀರು(ಸೀಯಾಳ, ಬೊಂಡ) ಸೇವಿಸುತ್ತಿರಬೇಕು. ಮೊದಲ ಕೆಲವು ದಿನ ನೀವು 30 ಎಂ.ಎಲ್ ರಸ ಸೇವಿಸಿರಿ. ನಿಮ್ಮ ಶರೀರಕ್ಕೆ ಅದು ಒಗ್ಗುತ್ತದೆ, ಏನೂ ತೊಂದರೆಯಿಲ್ಲ ಎನಿಸಿದ ನಂತರ ಬೆಳಿಗ್ಗೆ ಮತ್ತು ಸಾಯಂಕಾಲ ಹೊತ್ತಿಗೆ 30 ಎಂ.ಎಲ್ ನಂತೆ ಒಟ್ಟು 60 ಎಂ.ಎಲ್ ಸೇವಿಸಬೇಕು. ಒಂದಿಷ್ಟು ಕಾಲ ಭೇದಿಯಾಗುವ ಪರಿಸ್ಥಿತಿ ಬಂದರೆ, ಹೊಟ್ಟೆ ತೊಳೆಸಿದಂತಾದರೆ ಒಂದೆರಡು ವಾರ ಈ ರಸದ ಸೇವನೆಯನ್ನು ನಿಲ್ಲಿಸಿ. ನಂತರ ಅಲ್ಪ ಪ್ರಮಾಣದಿಂದ ಪ್ರಾರಂಭಿಸಿ.

ಈ ರೀತಿ ಗೋಧಿ ಗಿಡದ ರಸವನ್ನು ಸೇವಿಸಿದರೆ 8-10 ದಿನಗಳಲ್ಲೇ ರೋಗಗಳೆಲ್ಲಾ ನಿವಾರಣೆಯಾಗತೊಡಗುತ್ತವೆ. 15-20 ದಿನಗಳಲ್ಲಿ ರೋಗಗಳು ಪೂರ್ಣ ಗುಣವಾಗುವುವು. ಉಲ್ಬಣಾವಸ್ಥೆಯಲ್ಲಿರುವ ಕಾಯಿಲೆಗಳಿಗೆ ಇನ್ನೂ ಕೆಲವು ದಿನ ರಸದ ಪ್ರಯೋಗ ಅಗತ್ಯ. ಮರಣಾವಸ್ಥೆಯಲ್ಲಿರುವ ರೋಗಿಯು ಕೂಡ 2-3 ತಿಂಗಳಲ್ಲೇ ಗುಣಮುಖನಾಗುವನು. ರಸ ತೆಗೆಯುವ ತಾಪತ್ರಯವೇ ಬೇಡವೆನಿಸಿದರೆ ಗಿಡಗಳನ್ನು ಸಣ್ಣ- ಸಣ್ಣ ಚೂರುಗಳಾಗಿ ಕತ್ತರಿಸಿ ಸಲಾಡ್(salad) ನಂತೆ ಸೇವಿಸಬಹುದು. ಬೇಕಿದ್ದರೆ ತರಕಾರಿಗಳನ್ನು ಸೇರಿಸಬಹುದು. ಬೇಕಿದ್ದರೆ ಗಿಡಗಳನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿದೂ ರಸವನ್ನು ಸೇವಿಸಬಹುದು. ಇದರಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತವಲ್ಲದೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.

ದಿನದ ಯಾವ ಸಮಯದಲ್ಲಿ ಬೇಕಾದರೂ ಈ ರಸ ಸೇವಿಸಲು ಅಡ್ಡಿಯಿಲ್ಲ. ಆದರೆ, ಇದನ್ನು ಸೇವಿಸಿದ ನಂತರ ಒಂದು ಅಥವಾ ಕನಿಷ್ಟ ಅರ್ಧ ಗಂಟೆಯವರೆಗೆ ಯಾವುದೇ ಘನ ಅಥವಾ ದ್ರವ ಅಹಾರಗಳನ್ನು ಸೇವಿಸಬಾರದು. ಪ್ರಾರಂಭದಲ್ಲಿ ಈ ರಸದ ಸೇವನೆಯಿಂದ ಹಲವರಿಗೆ ವಮನವಾದೀತು. ಆಮಶಂಕೆ, ಶೀತಾದಿಗಳಿಂದ ನರಳಬೇಕಾಗಬಹುದು. ಆದರೆ ಭಯ ಬೇಡ. ವಾಂತಿಯಾಗುವುದನ್ನು ನಿವಾರಿಸಲು ಗಿಡಗಳನ್ನು ಅರೆಯುವಾಗ ಬೆಳ್ಳುಳ್ಳಿ ಅಥವಾ ವೀಳೆಯದೆಲೆಯನ್ನು ಸೇರಿಸಿಕೊಳ್ಳಬಹುದು. ಆದರೆ ಲಿಂಬೆಯ ರಸ ಅಥವಾ ಉಪ್ಪನ್ನು ಉಪಯೋಗಿಸಲೇಬಾರದು.

ಈ ಗೋಧಿ ಗಿಡದ ರಸವು ಹಾಲು, ಮೊಸರು, ಮಾಂಸಾದಿಗಳಿಗಿಂತ ಅತ್ಯಧಿಕ ಸತ್ವಯುತವಾದುದು. ಆದ್ದರಿಂದ ರೋಗಿಯಿರಲಿ, ನಿರೋಗಿಯಿರಲಿ, ಮಗುವಿರಲಿ, ಮುದುಕನಿರಲಿ ಇದರ ಸೇವನೆಯಿಂದ ಬಹಳ ಲಾಭವುಂಟು. ಹೊಸದಾಗಿ ಹುಟ್ಟಿದ ಮಗುವಿಗೂ ಸಹ ಈ ರಸದ 5-6 ಹನಿಗಳನ್ನು ಕುಡಿಸಬಹುದು.

ವರ್ಷವಿಡೀ ಗಿಡದ ಪೂರೈಕೆಗೋಧಿ ಗಿಡದ ರಸವನ್ನು ನಾವು ವರ್ಷವಿಡೀ ಪಡೆಯುವುದು ಹೇಗೆ? ಈಗಾಗಲೇ ತಿಳಿಸಿರುವಂತೆ 10ರಿಂದ 20 ಕುಂಡಗಳು ನಿಮ್ಮ ಹತ್ತಿರ ಇವೆಯಲ್ಲವೇ? ಒಂದೊಂದು ದಿನ ಒಂದೊಂದು ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತುತ್ತಿದ್ದೀರಿ. ನೀವು 8 ಅಥವಾ 10ನೇ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುವ ದಿನ 1ನೇ ಕುಂಡದಲ್ಲಿನ ಗಿಡವು ಕೊಯ್ಲಿಗೆ ಬಂದಿರುತ್ತದೆ. ಆ ಕುಂಡದ ಗಿಡಗಳನ್ನು ಕಿತ್ತುಕೊಳ್ಳಿ. ಅದೇಕ್ಷಣದಲ್ಲಿ ಆ ಕುಂಡಕ್ಕೆ ಪುನಃ ಗೋಧಿಯ ಕಾಳುಗಳನ್ನು ಬಿತ್ತಿ. 2ನೇ ದಿನ 2ನೇ ಕುಂಡದ ಗಿಡಗಳನ್ನು ಕಿತ್ತ ನಂತರ ಆ ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತಿರಿ. ಹೀಗೆ ಯಾವ ಕುಂಡದಲ್ಲಿ ಗೋಧಿ ಗಿಡಗಳನ್ನು ಕೀಳುತ್ತೀರೋ ಆಯಾ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುತ್ತಾ ಬಂದರೆ 5-6 ಅಂಗುಲ ಎತ್ತರದ ಗೋಧಿ ಗಿಡಗಳು ವರ್ಷಪೂರ್ತಿ ನಿಮಗೆ ದೊರೆಯುತ್ತವೆ.

ಬಹು ಹಿಂದೆಯೇ ಗೊತ್ತಿತ್ತು: 1931ರಷ್ಟು ಹಿಂದೆಯೇ ಚಾರ್ಲ್ಸ್ ಸ್ಚನಾಬೆಲ್ ಎಂಬ ಆಹಾರ ವಿಜ್ಞಾನಿ ಗೋಧಿ ಹುಲ್ಲಿನ ಸಾಮರ್ಥ್ಯವನ್ನು ಕಂಡುಕೊಂಡಿದ್ದನು. ಗೋಧಿಯ ಹಾಗೂ ಇತರ ಧಾನ್ಯಗಳ ಹುಲ್ಲುಗಳನ್ನು (ಉದಾ: ಬಾರ್ಲಿ ಹುಲ್ಲು ಇತ್ಯಾದಿ) ಪೂರಕ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತಿತ್ತು. ಯಾವಾಗ ಔಷಧೋತ್ಪನ್ನ ಕೈಗಾರಿಕೆಗಳು ಹುಟ್ಟಿಕೊಂಡು ರಾಸಾಯನಿಕ ಅನ್ನಾಂಗಗಳ ತಯಾರಿಕೆ ಪ್ರಾರಂಭವಾಯಿತೋ ಆಗ ಜನರ ಗಮನ ಆ ಕಡೆ ಹರಿದು ಗೋಧಿ ಹುಲ್ಲಿನ ಬಳಕೆ ಹಿಂದೆ ಬಿತ್ತು. ಆದರೆ, ಈ ರಾಸಾಯನಿಕ ಅನ್ನಾಂಗಗಳು ಗೋಧಿ ಹುಲ್ಲಿನಿಂದ ದೊರೆಯುವ ತಾಜಾ ಅನ್ನಾಂಗಗಳಿಗೆ ಸಮವಲ್ಲ.

1960ರಲ್ಲಿ ಅನ್ ವಿಗ್ಮೋರ್ ಎಂಬ ವೈದ್ಯೆ ಚಿಕಿತ್ಸೆಗೆ ಬಗ್ಗದ ತನ್ನ ದೊಡ್ಡ ಕರುಳಿನ ಊತವನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಗುಣಪಡಿಸುವಲ್ಲಿ ಯಶಸ್ವಿಯಾದರು. ನಂತರ ಈಕೆಯು ಕಾಯಿಲೆಗಳಿಂದ ನರಳುತ್ತಿದ್ದ ನೆರೆಹೊರೆಯ ಅನೇಕರಿಗೆ ಈ ಹುಲ್ಲಿನ ಚಿಕಿತ್ಸೆ ನೀಡಿದಾಗ ಅವರೆಲ್ಲರೂ ಗುಣಮುಖರಾಗಿ ನವಚೈತನ್ಯ ಪಡೆದರು. ಇದರಿಂದ ಉತ್ತೇಜಿತರಾದ ವಿಗ್ಮೋರ್ “ಹಿಪ್ಪೋಕ್ರೇಟ್ಸ್ ಹೆಲ್ತ್ ಇನ್ಸ್ಟಿಟ್ಯೂಟ್” – ಎಂಬ ತನ್ನದೇ ಚಿಕಿತ್ಸಾಲಯದಲ್ಲಿ ಗಂಭೀರವಾದ ಕಾಯಿಲೆಗಳಿಂದ ನರಳುತ್ತಿದ್ದ ಅನೇಕ ರೋಗಿಗಳನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಯಶಸ್ವಿಯಾಗಿ ಗುಣಪಡಿಸಿದರು.

ಈ ಹುಲ್ಲಿನಲ್ಲಿ ಏನೇನಿವೆ? ಒಂದು ಟೀ ಚಮಚದಷ್ಟು ಗೋಧಿ ಹುಲ್ಲಿನ ರಸದಲ್ಲಿ 10ರಿಂದ 15 ಕ್ಯಾಲೊರಿಗಳು ಮಾತ್ರ ಇವೆ. ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ. ಹತ್ತಿರ ಹತ್ತಿರ 1 ಗ್ರಾಂ.ನಷ್ಟು ಪ್ರೊಟೀನ್ ಇದೆ. ಉಪಯುಕ್ತ ಅಮೀನೋ ಆಮ್ಲಗಳಲ್ಲಿ ಎಲ್ಲ ಎಂಟು ಬಗೆ ಈ ರಸಗಳಲ್ಲಿವೆ. ಗೋಧಿ ಹುಲ್ಲಿನ ರಸದಲ್ಲಿ ಅನ್ನಾಂಗಗಳಾದ  ಎ, ಬಿ1, ಬಿ2, ಬಿ3, ಬಿ4, ಬಿ6, ಬಿ8 ಮತ್ತು ಬಿ12, ಸಿ ಇ ಮತ್ತು ಕೆ ಗಳಿವೆ. ಹಾಗೆಯೇ 1 ಟೀ ಚಮಚ ಗೋಧಿ ಹುಲ್ಲಿನ ರಸದಲ್ಲಿ 15 ಎಂ.ಜಿ ಕ್ಯಾಲ್ಸಿಯಂ, 8 ಎಂಸಿಜಿ ಅಯೋಡಿನ್, 3.5 ಎಂಸಿಜಿ ಸೆಲೆನಿಯಂ, 870 ಎಂಸಿಜಿ ಕಬ್ಬಿಣ, 62 ಎಂಸಿಜಿ ಸತುವುಗಳಲ್ಲದೆ ಅನೇಕ ಇತರ ಖನಿಜಾಂಶಗಳಿವೆ.ಗೋಧಿ ಹುಲ್ಲಿನ ರಸವನ್ನು ಉಪಯುಕ್ತವಾಗುವಂತೆ ಮಾಡುವ  ಇನ್ನೂ ಇತರ ನಾಲ್ಕು ಘಟಕಗಳಿವೆ.

ಯಾವುವು ಆ ಘಟಕಗಳು? ಆ ಘಟಕಗಳಾವುವೆಂದರೆ,

ಅ) ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್(super oxide dismutase)

ಆ) ಪಿ4 ಡಿ1

ಇ) ಮ್ಯೂಕೋ ಪಾಲಿಸ್ಯಾಕ್ಚೆರೈಡ್ಸ್(Muco-palisaccharides) ಹಾಗೂ

ಈ) ಕ್ಲೋರೋಫಿಲ್( chlorophyll-ಪತ್ರಹರಿತ್ತು)

ಮೊದಲನೆಯದಾದ ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್ ಎಂಬ ಘಟಕವು ಕ್ಯಾನ್ಸರ್ ನಿರೋಧಕವೆಂದು ಕಂಡುಬಂದಿದೆ. ಇದು ಹೇಗೆಂದರೆ, ಕ್ಯಾನ್ಸರ ಪೀಡಿತ ಜೀವಕೋಶದಲ್ಲಿ ಈ ಘಟಕದ ಕೊರತೆ ಇರುತ್ತದಂತೆ. ಆ ಕೊರತೆಯನ್ನು ಗೋಧಿ ಹುಲ್ಲಿನ ಸೇವನೆಯಿಂದ ತುಂಬಿಬಿಟ್ಟರೆ ಆ ಜೀವಕೋಶದಲ್ಲಿ ಕ್ಯಾನ್ಸರ್ ಇರುವುದಿಲ್ಲ. ಇನ್ನು ಎರಡನೆಯ ಘಟಕ ಪಿ4ಡಿ1 ಎಂಬುದರ ವಿಚಾರ: ಇದು ಗೋಧಿ ಹುಲ್ಲಿನಲ್ಲಿರುವ “ಗ್ಲೂಕೋ-ಪ್ರೊಟೀನ್”. ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ. ಮೊದಲನೆಯದಾಗಿ ಇದು ಆಂಟಿಆಕ್ಸಿಡಂಟ್ ಆಗಿ ಕೆಲಸ ಮಾಡುತ್ತದೆ. ಅಲ್ಲದೆ ಇದು ಆರ್ ಎನ್ ಎ ಮತ್ತು ಡಿ ಎನ್ ಎ ಗಳನ್ನು ಪುನರುಜ್ಜೀವನಗೊಳಿಸುವುದು. ಆರ್ ಎನ್ ಎ ಮತ್ತು ಡಿ ಎನ್ ಎ ಗಳು ಶರೀರ ನಿರ್ಮಾಣ ವಸ್ತುಗಳು. ಪಿ4 ಡಿ1 ಘಟಕವು ಜೀವಕೋಶಗಳು ಕ್ಷೀಣೀಸುವಿಕೆ ಅಥವಾ ಬದಲಾವಣೆಯನ್ನು ನಿಧಾನಗೊಳಿಸುತ್ತದೆ ಅಥವಾ ಇಲ್ಲವಾಗಿಸುತ್ತದೆ.

ಎರಡನೆಯದಾಗಿ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕೀಲು ನೋವಿನಂತಹ ಉರಿಯೂತ ಪರಿಸ್ಥಿತಿಯಲ್ಲಿ ಗೋಧಿ ಹುಲ್ಲಿನ ಪ್ರಯೋಗದಿಂದ ಆಶ್ಚರ್ಯಕರ ಪರಿಣಾಮವುಂಟಾಗುತ್ತದೆಂಬುದು ಕಂಡುಬಂದಿದೆ. ಪಿ4ಡಿ1 ನ 3ನೆಯ ಅಂಶವೆಂದರೆ, ಕ್ಯಾನ್ಸರ್ ಕೋಶಗಳನ್ನು ಆಕ್ರಮಿಸಿ ಅವುಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆಂದು ನಂಬಲಾಗಿದೆ. ಮೂರನೆಯ ಘಟಕ ಮೂಕೊಪಾಲಿಸ್ಯಾಕ್ಚರೈಡ್ಸ್. ಇದು ಶರೀರದ ದುರಸ್ತಿ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಅಲ್ಲದೇ ಇದು ಹಾನಿಗೊಂಡ ಹೃದಯ ಹಾಗೂ ಆರ್ಟರಿ ಟಿಶ್ಯೂವನ್ನು ದುರಸ್ತಿಗೊಳಿಸಲು ಸಹಾಯಕ ಕೂಡ.

4ನೆಯ ಘಟಕ ಪತ್ರಹರಿತ್ತು. ರಾಸಾಯನಿಕವಾಗಿ ಇದು ಹಿಮೊಗ್ಲೋಬಿನ್ ಗೆ ಸರಿಸಮಾನ. ಪತ್ರಹರಿತ್ತಿನಲ್ಲಿ 3 ರೀತಿಯ ಲಾಭಗಳಿವೆ. ಇದು ಗಾಯಗಳ ಮೇಲೆ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗಗಳಲ್ಲಿ ಯೀಸ್ಟ್ (yeast) ನಿರೋಧಕದಂತೆ ಕೆಲಸ ಮಾಡಿದರೆ, ಶರೀರದಲ್ಲಿರುವ ಅನೇಕ ವಿಷಕಾರಕ ವಸ್ತುಗಳನ್ನು ನಿವಾರಿಸುತ್ತದೆ. ಜೊತೆಗೆ ಇದು ಉರಿಯೂತ ನಿವಾರಕ ಗುಣವನ್ನು ಪಡೆದಿದೆ. ಹಾಗಾಗಿ ಇದನ್ನು ಕೀಲು ನೋವು, ಹೊಟ್ಟೆಯ ಅಲ್ಸರ್, ಗಂಟಲು ನೋವು, ದೊಡ್ಡ ಕರುಳಿನ ಊತ ಹಾಗೂ ಇತರ ಉರಿಯೂತಗಳಲ್ಲಿ ಈ ಹಿಂದೆಯೇ ಹೇಳಿದ ಹಾಗೆ ಗೋಧಿ ಗಿಡದ ಪತ್ರಹರಿತ್ತು ಉಪಯುಕ್ತ.

ಸಂಪೂರ್ಣ ಆಹಾರ: ಗೋಧಿಯ ಹುಲ್ಲನ್ನು ಒಂದು ಸಂಪೂರ್ಣ ಆಹಾರ ಎಂದು ತೀರ್ಮಾನಿಸಲಾಗಿದೆ. ಏಕೆಂದರೆ ಅದರಲ್ಲಿ ಮಾನವನ ಶರೀರ ಪೋಷಣೆಗೆ ಬೇಕಾಗುವ ಎಲ್ಲ ಅಮೀನೋ ಆಮ್ಲ, ಆನ್ನಾಂಗ ಹಾಗೂ ಖನಿಜಗಳು ಇವೆ.

1 ಔನ್ಸ್ ಗೋಧಿ ಹುಲ್ಲಿನ ರಸವು 2.5 ಪೌಂಡ್ ತರಕಾರಿಗಳಲ್ಲಿರುವಷ್ಟು ಪೌಷ್ಟಿಕಾಂಶಕ್ಕೆ ಸಮ. 1 ಔನ್ಸ್ ಗೋಧಿ ಹುಲ್ಲಿನ ರಸದಲ್ಲಿ 1 ಔನ್ಸ್ ಕಿತ್ತಲೆ ಹಣ್ಣಿನ ರಸದಲ್ಲಿರುವುದಕ್ಕಿಂತಲೂ ಹೆಚ್ಚು ಪ್ರಮಾಣದ ‘ಸಿ’ ಅನ್ನಾಂಗವಿರುತ್ತದೆ. 1 ಔನ್ಸ್ ಕ್ಯಾರೆಟ್ ರಸದಲ್ಲಿರುವುದರ ಎರಡು ಪಟ್ಟು ‘ಎ’ ಅನ್ನಾಂಗವು ಅಷ್ಟೇ ಪ್ರಮಾಣದ ಗೋಧಿ ಹುಲ್ಲಿನ ರಸದಲ್ಲಿರುತ್ತದೆ. 25 ಎಂಎಲ್ ಗೋಧಿ ಹುಲ್ಲಿನ ರಸದಲ್ಲಿ 1 ಕೆಜಿ ತರಕಾರಿಯಲ್ಲಿರುವಷ್ಟೇ ಅನ್ನಾಂಗಗಳು, ಖನಿಜಾಂಶಗಳು ಹಾಗೂ ಅಮೀನೋ ಆಮ್ಲಗಳು ಇರುತ್ತವೆಂದು ತಿಳಿದು ಬಂದಿದೆ.

ಒಂದು ಎಚ್ಚರಿಕೆ: ಗೋಧಿ ಹುಲ್ಲಿನ ರಸದಲ್ಲಿ ‘ಕೆ’ ಅನ್ನಾಂಗವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರಕ್ತವನ್ನು ಹೆಪ್ಪುಗಟ್ಟಿಸುವ ಗುಣವನ್ನು ಹೊಂದಿದೆ. ಆದ ಕಾರಣ, ರಕ್ತವನ್ನು ತೆಳುವಾಗಿಸುವ ಚಿಕಿತ್ಸೆ ಪಡೆಯುತ್ತಿರುವವರು, ಗೋಧಿಯ ಅಲರ್ಜಿ ಇರುವವರು ವೈದ್ಯರ ಮೇಲುಸ್ತುವಾರಿ ಇಲ್ಲದೇ ಗೋಧಿ ಹುಲ್ಲಿನ ಸೇವನೆ ಮಾಡಕೂಡದು.

ತೃಣವೆಂದು ತುಚ್ಛೀಕರಿಸದಿರಿ: 100 ಗ್ರಾಂ. ಗೋಧಿ ಹುಲ್ಲಿನ ರಸದಲ್ಲಿ ಕೆಳಗೆ ಕೊಟ್ಟಿರುವ ಪೌಷ್ಟಿಕಾಂಶಗಳಿರುತ್ತವೆಂದು ಒಂದು ಅಧ್ಯಯನವು ತಿಳಿಸುತ್ತದೆ.

 • ಕ್ಯಾಲೊರಿಗಳು –         21.0
 • ಕಾರ್ಬೋಹೈಡ್ರೇಟ್ –   2.0 ಗ್ರಾಂ.                 ಅನ್ನಾಂಗ ಎ –    427 ಐಯು
 • ಕೊಬ್ಬು –                  0.06  ಗ್ರಾಂ.              ಅನ್ನಾಂಗ ಬಿ1 –  0.08 ಎಂಜಿ
 • ನೀರು –                    95 ಗ್ರಾಂ.                  ಅನ್ನಾಂಗ ಬಿ2 – 0.13 ಎಂಜಿ
 • ಸೋಡಿಯಂ-             10.3 ಮಿ.ಗ್ರಾಂ.          ಅನ್ನಾಂಗ ಬಿ3 –  0.11 ಎಂಜಿ
 • ಕಬ್ಬಿಣ –                    0.61 ಎಂಜಿ               ಅನ್ನಾಂಗ ಬಿ5 –  6.0 ಎಂಜಿ
 • ಫಾಲಿಕ್ ಆಮ್ಲ –           0.29 ಎಂಸಿಜಿ           ಅನ್ನಾಂಗ ಬಿ6 –  0.2 ಎಂಜಿ
 • ಡಯಟರಿ ನಾರು –       < 0.1 ಗ್ರಾಂ.              ಅನ್ನಾಂಗ ಬಿ12 < 1 ಎಂಸಿಜಿ
 • ಗ್ಲುಕೋಸ್ –              0.80 ಗ್ರಾಂ.               ಅನ್ನಾಂಗ ಸಿ-     3.65 ಎಂಜಿ
 • ಕ್ಯಾಲ್ಸಿಯಂ –           24.2 ಎಂಜಿ                   ಅನ್ನಾಂಗ ಇ –   15.2 ಐಯು
 • ಮ್ಯಾಗ್ನೇಷಿಯಂ-       0.24 ಎಂಜಿ                  ಕ್ಲೋರೋಫಿಲ್-   42.2 ಎಂಜಿ
 • ಸೆಲೆನಿಯಂ –           1ಪಿಪಿಎಂ                       ಖೋಲೈನ್-   92.4
 • ಪೊಟಾಸಿಯಂ –       147 ಎಂಜಿ                     ಸತುವು-  0.33 ಎಂಜಿ
 • ರಂಜಕ          –        75.2 ಎಂಜಿ

ಅಂತರ್ಜಾಲದಲ್ಲಿ ಜಾಲಾಡಿರಿ ಗೋಧಿ ಹುಲ್ಲಿನ ಬಗೆಗೆ ಇನ್ನೂ ಹೆಚ್ಚು ತಿಳಿಯಲು ಕೆಳಗೆ ಕಾಣಿಸಿರುವ ಅಂತರ್ಜಾಲ ವಿಳಾಸಗಳಲ್ಲಿ ಜಾಲಾಡಿರಿ:

1) www.sproutman.com/wheatgrass.html

2) www.wigmore.org/

Categories
ಅಂಕಣಗಳು ಕುರುವ ಬಸವರಾಜ್ ಅಂಕಣ

ಬಹುನಾದ ವಿನ್ಯಾಸದ ತಮಟೆ ಎಂಬ ವಾದ್ಯದ ಸುತ್ತ

ಅಚ್ಚರಿ ಎನಿದಿರದು! ಒಂದು ವಾದ್ಯ ಸಮಾಜವೊಂದರಲ್ಲಿ, ಸಂಸ್ಕೃತಿಯೊಂದರಲ್ಲಿ ಪಾಲ್ಗೊಳ್ಳುತ್ತಿರುವ, ಒಳಗೊಳ್ಳುತ್ತಿರುವ ರೀತಿ ಕಂಡರೆ; ಒಂದು ಅಥವಾ ಹಲವು ವರ್ಷಗಳ ವೃತ್ತದಲ್ಲಿ ಅದು ಭಾಗವಹಿಸುವ ಕಾರ್ಯಗಳನ್ನು ಕಂಡರೂ ತಣ್ಣಗಿನ ಬೆರಗು ಸುಳಿದಾಡುತ್ತದೆ. ತನ್ನ ಅಸಂಖ್ಯ ಗತ್ತುಗಳ ಮೂಲಕ ನಾಡಿನ ಉದ್ದಗಲಕ್ಕೂ ವ್ಯಾಪಿಸಿರುವ, ಆವರಿಸಿರುವ ವಾದ್ಯ ವಿಶೇಷ ‘ತಮಟೆ’.

ಅದೊಂದು ಗಿಜಿಗುಡುವ ಜನಜಂಗುಳಿಯ ಜಾತ್ರೆ. ದೇವರ ಉತ್ಸವ, ರಥೋತ್ಸವ, ಮೆರವಣಿಗೆಗಳು ಏನೆಲ್ಲಾ ನಡೆದಿವೆ. ಏತನ್ಮಧ್ಯೆ ದೇವರ ಗುಡಿಯ ಒಂದೆಡೆ ಜನ ತುಂಬಿ ನೆರೆದಿದ್ದಾರೆ. ಅಲ್ಲಿ ‘ಜಡ್ಡಿನಕ’ ಜಡ್ಡಿನಕನ’ ತಮಟೆಯ ನಾದ ಕೇಳುತ್ತಿದೆ. ಮುತ್ತಿದ ಜನಸರಿಸಿ ಒಳಗೆ ಕಣ್ಣು ತೂರಿದರೆ, ಅಲ್ಲೊಬ್ಬ ನುರಿತ ತಮಟೆಗಾರ ತಮಟೆ ನುಡಿಸುತ್ತಿದ್ದಾನೆ. ಚಡ್ಡಿಯ ಹುಡುಗನೊಬ್ಬ ಏನೋ ತಡಕಿ ಹುಡುಕುತ್ತಾ ನಡೆದಿದ್ದಾನೆ. ತಮಟೆಯ ನಾದ ಒಮ್ಮೊಮ್ಮೆ ಬಿರುಸಾಗುತ್ತದೆ, ಒಮ್ಮೊಮ್ಮೆ ನಿಧಾನವಾಗುತ್ತದೆ. ಜನ ಹುಡುಗನೊಟ್ಟಿಗೆ ನಡೆದಾಡುತ್ತಿದ್ದಾರೆ.

ಇದು ತಮಟೆಗಾರ ಮತ್ತು ಆತನ ಮಗನಿಗೆ ಜಾತ್ರೆಯ ಜನ ಒಡ್ಡಿದ ಸವಾಲು. ಇದು ನಡೆಯುವುದು ಹೀಗೆ; ತಮಟೆಗಾರನಿಗೆ ಮಾತ್ರ ಗೊತ್ತಾಗುವಂತೆ ದೇವರ ಪೌಳಿಯ ಆಸುಪಾಸಲ್ಲಿ ನೋಟೊಂದನ್ನು ಅವಿಸಿ ಅಂದರೆ, ಒಂದೆಡೆ ನೋಟಿಟ್ಟು ಮೇಲೊಂದು ಗುರುತಿಗೆ ಕಲ್ಲು ಇಡಲಾಗುತ್ತದೆ. ತಟ್ಟನೆ ಯಾರೂ ಅಲ್ಲಿರುವ ನೋಟನ್ನು ಕಂಡುಹಿಡಿಯಲಾರರು. ಎಲ್ಲಿ ಇಡಲಾಗಿದೆ ಎಂಬುದು ಆ ಹುಡುಗನಿಗೆ ಒಂಚೂರೂ ಗೊತ್ತಾಗದಂತೆ, ತಮಟೆಗಾರನಿಗೆ ಮಾತ್ರ ಗೊತ್ತಾಗುವಂತೆ ಇಡಲಾಗುತ್ತದೆ. ನಂತರ ತಮಟೆಗಾರ ‘ಜಡ್‌ನಕ’ ‘ಜಡ್‌ನಕ’ ನುಡಿಸುತ್ತಾನೆ ಮಗ ಹುಡುಕ ತೊಡಗುತ್ತಾನೆ. ಹಣ ಇರುವ ದಿಕ್ಕಿನಲ್ಲಿ ಸಾಗಿದಾಗ ತಮಟೆಯ ಗತ್ತು ತುಸು ಬಿರುಸಾಗಿ ‘ಜಡ್‌ನಕ’ ‘ಜಡ್‌ನಕ’ವೇ ಆದರೂ ‘ಅಲ್ಲೇ ಅಲ್ಲೇ ಹತ್ತಿರದಲ್ಲೆ ಇದೆ’ ಎಂದು ಹೇಳಿದಂತೆ ಭಾಸವಾಗುವಹಾಗೆ ನುಡಿಸುತ್ತಾನೆ. ಹಣ ಅವಿಸಿಟ್ಟ ಜಾಗದಿಂದ ದೂರ ಸರಿದರೆ ‘ಜಡ್…ನಕ’ ‘ಜಡ್…ನಕ’ ಎಂದು ತೇಲಿಸಿ/ಜಾರಿಸಿ ‘ಅಲ್ಲಿಲ್ಲ, ಅಲ್ಲ ಅಲ್ಲ ಅಲ್ಲಲ್ಲ’ ಎಂಬಂತೆ ಒಂದೇ ಗತ್ತಿನ ನಾದದಲ್ಲಿಯೇ ಉಂಟುಮಾಡುತ್ತಾನೆ. ಅವಿತಿಟ್ಟ ಹಣದ ಬಳಿ ಸಾಗಿದಂತೆ ಗತ್ತಿನ ಬಿರುಸು ಏರುತ್ತದೆ, ತ್ವರಿತವಾಗುತ್ತದೆ. ‘ಅಲ್ಲಿದೆ’ ‘ಅಲ್ಲೇ ಇದೆ’ ಎಂಬಂತೆ. ಹುಡುಗ ಗುರುತಿಸಿ ತೆಗೆದಾಗ ಖುಷಿಯೋ ಖುಷಿ, ೨೦-೨೦ ಕ್ರಿಕೇಟ್ ಗೆದ್ದುದಕ್ಕಿಂತ ಹೆಚ್ಚೆಂಬಂತೆ.

ಇದು ತಮಟೆಯಂತಹ ವಾದ್ಯವೊಂದು ಚಮತ್ಕಾರವಾಗಿ ಬಳಕೆಕೊಂಡ ಸಂದರ್ಭವೊಂದರ ಚಿತ್ರಣವಷ್ಟೆ. ಅದರ ನಾದ ವೈಶಿಷ್ಟ, ಅದು ಬದುಕಿನ ಭಾಗವಾಗಿ ಒಡನಾಡುವ ರೀತಿ ನೀತಿಗಳ ಕುರಿತು ಒಂದಿಷ್ಟು ನೋಡೋಣ;

ಕರಾವಳಿಯ ಹೊರೆತಾದ ಕರ್ನಾಟಕದ ಜನಪದರ ಬದುಕಿನಲ್ಲಿ ಅಷ್ಟು ವಿಶೇಷದ್ದಾಗಿ ಪಾಲ್ಗೊಳ್ಳತ್ತಿರುವ ವಾದ್ಯ ‘ತಮಟೆ’. ಉತ್ತರ ಕರ್ನಾಟಕದಲ್ಲಿ ಈ ವಾದ್ಯವನ್ನು ‘ಹಲಗೆ’ ಎಂದೇ ಕರೆಯುತ್ತಾರೆ. ಇದರ ಒಂದುಬದಿ ಪೂರ್ತಿಯಾಗಿ ಹಲಗೆಯಂತೆ ಕಾಣುವುದರಿಂದ ಹೀಗೆ ಕರೆದಿರುವ ಸಾದ್ಯತೆ ಹೆಚ್ಚು. ಅದರೆ ತಮಟೆ ಎಂಬುದು ಅದರ ನಾದದಿಂದ ಬಂದ ಹೆಸರು. ತಮಟೆಯ ನಾದದ ಮುಖ್ಯ ಹೊಮ್ಮುವಿಕೆಯೆ ‘ತಮ’ ‘ತಮ’ ‘ತಮ’ ಇಲ್ಲವೆ ‘ಟಮ’ ‘ಟಮ’ ‘ಟಮ’ ಎಂಬುದು. ಹಾಗಾಗಿಯೆ ಇದರ ಹೆಸರು ‘ತಮಟೆ’ ಎಂದಾಗಿದೆ. ‘ಟಮಟೆ’ ಎನ್ನುವುದೂ ಇದೆ. ಅಲ್ಲದೆ ತಬಟೆ, ತವಟೆ, ತಪ್ಪಾ, ತಪಟೆ, ತಪ್ಪಟೆ, ತಮ್ಮಟೆ, ತಮ್ಮಟ್ಟೆ, ತಂಬಟ, ತಂಬಟೆ ಎಂದೆಲ್ಲಾ ಹೆಸರುಗಳುಂಟು. ತಮಿಳುನಾಡಿನಲ್ಲಿಯು ಹೆಚ್ಚು ಜನಪ್ರಿಯವಾದ ವಾದ್ಯವಿದು. ತಮಿಳಿನಲ್ಲಿ ಇದನ್ನು ತಪ್ಪಟ್ಟ, ತಪ್ಪಟ್ಟೈ, ತಮ್ಪಟ್ಟ, ತಪ್ಪಾಟ ಎನ್ನುತ್ತಾರೆ. ಅಲ್ಲಿ ತಮಟೆ ನುಡಿಸಿ ಕುಣಿಯವ ಕಲೆಯನ್ನು ‘ತಪ್ಪಾಟಂ’ ಎನ್ನಲಾಗುತ್ತದೆ. ಆಂದ್ರ ಪ್ರದೇಶ, ಕೇರಳಗಳಲ್ಲೂ, ಮಹಾರಾಷ್ಡ್ರದ ಹಲಭಾಗಗಳಲ್ಲೂ ಈ ವಾದ್ಯದ ಬಳಕೆಯಿದೆ. ತೆಲುಗಿನಲ್ಲಿ ತಮಟೆಯನ್ನು ತಪ್ಪೆಟ, ತಮ್ಮಟ ಎಂದು, ಮಲೆಯಾಳದಲ್ಲಿ ತಪ್ಪಿಟ್ಟ, ತಮ್ಮಿಟ್ಟ ಎಂದು, ತುಳುವಿನಲ್ಲಿ ತಬಿಟೆ, ತಮ್ಮಟೆ, ತಂಬಟ, ತಂಬಟೆ, ತಮಟೆ*೧ ಎಂಬ ಹೆಸರುಗಳಲ್ಲಿ ಕರೆಯುವುದರ ಬಳಕೆ ರೂಪಗಳು ದೊರೆಯುತ್ತವೆ.

ಕನ್ನಡದಲ್ಲಿ ತಮಟೆ, ತಂಬಟೆ, ತೆಲುಗಿನಲ್ಲಿ ತಮಟೆ, ತಪ್ಪಟೆ, ತಮಿಳುವಿನಲ್ಲಿ ತಮ್ಮಟ್ಟೈ, ತಪ್ಪಾಟ, ತುಳುವಿನಲ್ಲಿ ತಮ್ಮಟೆ, ತಂಬಟೆ, ಮಲೆಯಾಳದಲ್ಲಿ ತಮ್ಮಿಟ್ಟ ಮೊದಲಾದ ಎಲ್ಲಾ ಪದಗಳನ್ನು ಅವಲೋಕಿಸಿದರೆ ಕಾಣಬರುವ ಬಹು ಮುಖ್ಯವಾದ ಅಂಶ ‘ತಮಟೆ’ ಎಂಬ ಪದ / ಶಬ್ದ ಮೂಲ ದ್ರಾವಿಡ ಭಾಷೆಯ ಇಂದಿನ ಮುಂದುವರಿಕೆಯ ರೂಪ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ.

ತಯಾರಿಕೆ

ತಮಟೆ ಒಂದುಬದಿಯ ಚರ್ಮಹೊದಿಕೆಯ, ಒಂದೇಬದಿ ನುಡಿಸುವಿಕೆಯ ವಾದ್ಯ, ಇದು ಜರಡಿ ಆಕಾರದ್ದು. ಎರಡರಿಂದ ಎರಡೂವರೆ ಇಂಚು ಅಗಲದ ಕಬ್ಬಿಣದ ತಗಡನ್ನ ಗುಂಡಾಕಾರಕ್ಕೆ ತಂದು ಸೇರಿಸಿದ ಬಳೆಯ ಒಂದು ಬದಿಗೆ ಹದಮಾಡಿದ ಕೋಣ, ದನ ಇಲ್ಲವೇ ಮೇಕೆಯ ಚರ್ಮ ಹೊದಿಸಿ, ಅದರ ಇನ್ನೊಂದು ಬದಿಗೆ ಚರ್ಮದ ಬಾರು/ಹುರಿಗಳಿಂದಲೇ ದುಂಡನೆಯ ರಿಂಗ್‌ನಂತಹ ಕಬ್ಬಿಣದಪಟ್ಟಿಗೆ ಒಂದೆರಡು ಇಂಚು ಅಂತರದಲ್ಲಿ ಹೊದಿಸಿದ ಚರ್ಮವನ್ನು ಎಳೆದು ಬಿಗಿಗೊಳಿಸಿದಾಗ ತಮಟೆ ಏರ್ಪಡುತ್ತದೆ. ಇದನ್ನು ತಮಟೆಗೆ ಹಾಕಿದ ಹುರಿ/ಬಾರಿನ ಕುಣಿಕೆಯನ್ನು ಎಡಹೆಗಲಿಗೆ ಬರವಂತೆ ಹೊಂದಿಸಿಕೊಂಡು, ಎದೆ ಹೊಟ್ಟೆಯ ಭಾಗಕ್ಕೆ ಆತುಕೊಂಡು ಹಿಡಿದು, ಎಡಗೈಯನ್ನು ತಮಟೆಯ ಮೇಲಂಚಿಗೆ ಬಿದಿರ ಕಿರುಕಡ್ಡಿಯೊಂದಿಗೆ ಹಿಡಿದು, ಹೆಬ್ಬೆರಳ ಗಾತ್ರದ ಗೇಣುದ್ದಕ್ಕೂ ತುಸು ಉದ್ದದ ಗುಣುಕೊಂದರಿಂದ ನುಡಿಸುವ ಮೂಲಕ ನಾದ ಹೊಮ್ಮಿಸಲಾಗುತ್ತದೆ. ಬಲಗೈಯ ನುಡಿಸುವ ಕೋಲನ್ನು ಗುಣಿ, ಗುಣಿಗೋಲು, ಕೋಲು ಎಂದರೆ, ಎಡಗೈಯ ಕಡ್ಡಿಯನ್ನು ಚಿಟಿಕೆ ಕಡ್ಡಿ ಎನ್ನಲಾಗುತ್ತದೆ. ಬಲಗೈಯ ಗುಣಿಯದೇ ಹೆಚ್ಚಿನ ಕೆಲಸ. ವೈವಿದ್ಯತೆ ಉಂಟುಮಾಡುವುದು ಈ ಗುಣಿಯಿಂದಲೇ. ಚಿಟಿಕೆ ಗಡ್ಡಿ ಬಲಗೈಯ ನುಡಿಸುವಿಕೆಗೆ ಪೂರಕ ಗತ್ತುಗಳನ್ನು ಒದಗಿಸಿ ತಾಳದ ಹದವನ್ನು, ನಾದದ ಚಲುವನ್ನು ಮೂಡಿಸಲು ದುಡಿಮೆಗೊಳ್ಳುತ್ತದೆ. ತಮಟೆಯ ನುಡಿಸುವಿಕೆಗೆ ಈ ಎರಡೂ ಅನಿವಾರ್ಯ. ಗುಣಿ ಚಿಟಿಕೆಕಡ್ಡಿಗಳಲ್ಲಿ ಯಾವ ಒಂದರಿಂದಲೇ ನುಡಿಸಲು ಸಾದ್ಯವಿಲ್ಲ. ತಾಳದ ಆವರ್ತದ ಹದಕ್ಕೆ, ಭಿನ್ನ ಭಿನ್ನ ಗತ್ತುಗಳ ಕಟ್ಟುವಿಕೆಗೆ, ಹೊಮ್ಮಿಸುವಿಕೆಗೆ ಒಂದನ್ನೊಂದು ಅವಲಂಬಿಸಿವೆ.

ಪೂರ್ವ ಸಿದ್ಧತೆ

ನುಡಿಸಲು ಆರಂಭಿಸುವ ಮುನ್ನ ತಮಟೆಗಳನ್ನು ತೆಂಗಿನ ಗರಿಯಂತಂಹ ಗರಿಗಳ ಬೆಂಕಿಯ ಉರಿಗೆ ಒಡ್ಡಿ ಕಾಯಿಸಲಾಗುತ್ತದೆ. ಖಣ ಖಣ ಖಣ ಖಣ ಖಣಣ ಸದ್ದು ಉಂಟಾಗುವವರೆಗಿನ ತುಸುಹೊತ್ತು ಕಾಯಿಸಿ ನುಡಿಸಲು ಆರಂಭಿಸಲಾಗುತ್ತದೆ.

ಸ್ವತಂತ್ರ ವಾದ್ಯ

ತಮಟೆ ಒಂದು ಸ್ವತಂತ್ರ ವಾದ್ಯ. ಸಹವರ್ತಿ ವಾದ್ಯಗಳ ಪೂರಕ ಒತ್ತಾಸರೆಯ ಅವಲಂಬನೆಯಿಲ್ಲದೆ ನುಡಿಸಬಲ್ಲ ರಾಜವಾದ್ಯ. ನಾಡಿನ ಚರ್ಮವಾದ್ಯಗಳಲ್ಲಿಯೆ ಹರೆ, ಸಮ್ಮಾಳದಂತಹ ಒಂದೆರಡು ವಾದ್ಯಗಳ ಹೊರೆತು ಮತ್ತು ಅದಕ್ಕಿಂತಲೂ ಅಸಾಮಾನ್ಯ ಸಾಮರ್ಥ್ಯ ಹೊಮ್ಮಿಸುವ ಸ್ವಸಾಮರ್ಥ್ಯದ ವಾದ್ಯ ವಿಶೇಷ. ಈ ವಾದ್ಯಕ್ಕೆ ಸಾಮರ್ಥ್ಯ ಎಂಬುದು ಬಂದುದಲ್ಲ. ತಂದುದು. ಅಥವಾ ತಂದುಕೊಂಡುದು. ವಾದ್ಯ ನುಡಿಸುವವನ ಕೈಚಳಕದ್ದು. ಈ ವಾದ್ಯದ ವಿಶೇಷವನ್ನು ಕಂಡುಕೊಂಡ ಯಾರೋ ನುಡಿಸುತ್ತಾಬಂದ, ಸಾವಿರ ಸಾವಿರ ವರ್ಷಗಳ ಹಿಂದಿನಿಂದ ಇಂದಿನವರೆಗೂ ಸದಾ ಸೃಜನಶೀಲವಾಗಿ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಕಂಡುಕೊಂಡ / ಸಂಯೋಜನೆಗೊಂಡ ಪರಿಷ್ಕಾರಗೊಂಡ ನಾದದ ರೂಪಗಳು.

ಮೇಳ ವಾದ್ಯ

ಎಂತಹ ವಿಶಿಷ್ಟ ವಾದ್ಯವಿದೆಂದರೆ ಒಂದೇ ಒಂದು ವಾದ್ಯವಾಗಿ ಎಷ್ಟು ಸಾಮರ್ಥ್ಯ ಉಳ್ಳದ್ದೋ ಅಷ್ಟೆಯಾಗಿ ಮೇಳವಾದ್ಯದಲ್ಲು ವೈವಿದ್ಯತೆಯಿಂದ ಹಿಡಿದಿಟ್ಟುಕೊಳ್ಳುವ ಶಕ್ತತೆಯದು. ಮೇಳವಾದ್ಯವಾಗಿಯು ಇದರ ಪಾಲ್ಗೊಳ್ಳುವಬಗೆ ನಾಯಕನ ರೀತಿಯದು. ತಮಟೆಯೊಂದಿಗೆ ತಾರ್‍ಸೆ, ದೋಣು, ರಮ್‌ದೋಣು, ನಗಾರೆ, ಹರೆ/ಈರ್‌ನಾರ್/ಉರುಮೆ ಈ ಯಾವದೇಗಳೊಂದಿಗೆ ಮೇಳಕ್ಕೆ ಸೊಬಗು ಕಟ್ಟುತ್ತದೆ. ಅಂದರೆ ಸಹವಾದ್ಯಗಳ ನಾದ ಕಡಿಮೆಯದು ಎಂದರ್ಥವಲ್ಲ. ಅವು, ಅವುಗಳ ಸಾದ್ಯತೆಯ ಕೌಶಲ್ಯದ ಪಾಲ್ಗೊಳ್ಳುವಿಕೆ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲು ಒಟ್ಟು ಮೇಳವ ನೋಡಿದರೆ / ಆಲಿಸಿದರೆ ತಮಟೆ ಮೇಳದ ಕ್ಯಾಪ್ಟನ್‌ಆಗಿಯೇ ಮುನ್ನಡೆಸುವುದು ಆವರಿಸುವುದನ್ನು ಅರಿಯಬಹುದು.

ಸಹವಾದ್ಯಗಳೊಂದಿಗಿನ ನಾದದ ವಿನ್ಯಾಸ

ತಮಟೆ ತಾರ್‍ಸೆ ಒಂದಿಗೆ ಬೆರವ ರೀತಿ, ತಮಟೆಯ ಗತ್ತುಗಳ ನಡೆಗನುಸರಿಸಿ

ತಮಟೆ: ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ

ಗತ್ತು ನುಡಿಯುವಾಗ

ತಾರ್‍ಸೆ: ಗರ ಗರ ಗರ ಗರ ಗರ ಗರ ಗರ ಗರ

ನುಡಿಸುತ್ತಾರೆ. ಹೀಗೆಯೇ ಇತರ ಗತ್ತುಗಳೊಂದಿಗೆ.

ಗಣ್ಣ ಗರಣ ಗಣ್ಣ ಗರಣ ಗಣ್ಣ ಗರಣ ಗಣ್ಣ ಗರಣ

ಗತ್ತುಗಳ ಕಟ್ಟುತ್ತದೆ ಅಥವಾ ಕಟ್ಟುತ್ತಾರೆ. ತಾರ್‍ಸೆ ತಮಟೆಯ ಗತ್ತುಗಳು ಹುಸಿಯ ಬಿಡುವಲ್ಲಿ ಕೆಲವೊಮ್ಮೆ ಒಂದಿಗೆ ನುಡಿಸುತ್ತಾರೆ.

ತಮಟೆ ಉರುಮೆ ವಾದ್ಯದೊಂದಿಗೆ

ತಮಟೆ : ಜಡ್ಯುನ್ ಜಡ್ಡಿನಕ ಜಡ್ಯುನ್ ಜಡ್ಡಿನಕ ಜಡ್ಯುನ್ ಜಡ್ಡಿನಕ

ಗತ್ತು ನುಡಿದಾಗ

ಉರುಮೆ: ಬುರ್‌ರ್ ಜುರ್ರಮು ಬುರ್‌ರ್ ಜುರ್ರಮು ಬುರ್‌ರ್ ಜುರ್ರಮು

ಎಂದು ಬೆರೆತ ನಾದ ಹೊಮ್ಮಿಸುತ್ತಾರೆ. ಹಾಗೆ ನೋಡಿದರೆ ಉರುಮೆ ಸ್ವತಂತ್ರ ವಾದ್ಯದ ಗುಣದ್ದು.

ನಾದದ ವಿನ್ಯಾಸ

ತಮಟೆ ಗತ್ತುಗಳನ್ನು ತೆಕ್ಕೆಹಾಕಿ ಹಿಡಿಯುವುದು ಕಷ್ಟದ ಕೆಲಸ. ಅಸಂಖ್ಯ ವಿಧಗಳು. ನುಡಿಸುವ ಒಬ್ಬೊಬ್ಬರದು ಒಂದೊಂದು ಸ್ವರೂಪದ ನಾದವಿನ್ಯಾದ ಫಲಕುಗಳನ್ನು ಕಾಣಬಹುದು. ಹಾಗೆ ಹೊಂದಿಯೇ ಸಾಗುವುದು, ಹಾಗೆ ಕಂಡುಕೊಳ್ಳುವುದು ಈ ವಾದ್ಯ ನುಡಿಸುವ ಕಲಾವಿದರ ಗುಣ. ಆದರೆ ಒಂದು ಮನೆತನದವರ ಗತ್ತುಗಳು, ಒಂದು ತೆಂಡೆಯವರ ಗತ್ತುಗಳು, ಒಂದು ಊರವರ ಗತ್ತುಗಳು, ಒಂದೊಂದು ಸೀಮೆಯವರ ಗತ್ತುಗಳಲ್ಲಿ ಸಾಮ್ಯತೆ ಇರಲು ಸಾದ್ಯ.

ತಮಟೆಯನ್ನು ಇಂತದೇ ಗತ್ತಿನೊಂದಿಗೆ ಆರಂಭಿಸಬೇಕೆಂಬ ನಿರ್ಧಿಷ್ಟತೆಯೇನಿಲ್ಲ. ಸಾಮಾನ್ಯವಾಗಿ;

 1. ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ
 2. ಜಡ್ ಜಡ್ ಜಡ್ಡಿನ್ನಕ ಜಡ್ ಜಡ್ ಜಡ್ಡಿನ್ನಕ
 3. ಜಣ ಖಣ ಜಡ್ಡಿನ್ನಕ ಜಣ ಖಣ ಜಡ್ಡಿನ್ನಕ
 4. ಜಡ್ಡಿನ್ನಕ ಪಂಪನ್ನಕ ಜಡ್ಡಿನ್ನಕ ಪಂಪನ್ನಕ

ಎಂದೆಲ್ಲಾ ಗತ್ತುಗಳ ಮೂಲಕ ಆರಂಭಿಸುತ್ತಾರೆ.

ಹೀಗೆಯೆ;

 1. ಜಣಗುಡು ಜಣಗುಡು ಜಣಗುಡು ಜಣಗುಡು ಜಡ್ಡಿನ್ನಕ
 2. ಜಡ್ ಜಡ್ಡಿ ಜಡ್ಡಿನ್ನಕ ಜಡ್ ಜಡ್ಡಿ ಜಡ್ಡಿನ್ನಕ
 3. ಜಡ ಜಡ ಜಗ್ಗುನ್ನಕ ಜಡ ಜಡ ಜಗ್ಗುನ್ನಕ

ಸಾಮಾಜಿಕ ಸಂದರ್ಭದಲ್ಲಿ ಪರಂಪರೆಯ ಸಮಾಜ ಈ ವಾದ್ಯ ಮತ್ತು ಇದನ್ನು ನುಡಿಸುವವರನ್ನು ಹೇಳಿಕೊಳ್ಳುವಂತಹ ಗೌರವದಿಂದ ವಂಚಿತವಾಗಿಯೇ ಇರುವಂತೆ ನಡೆಸಿಕೊಂಡಿದೆ. ಯಾವುದೇ ಬಗೆಯ ವಾದ್ಯವನ್ನೇ ಆಗಲಿ, ಯಾರೇ ಆಗಲಿ ಹದವರಿತು, ಹಿತವಾಗಿ ನುಡಿಸಬಲ್ಲವ ವಾದ್ಯಗಾರನೆ ಆಗಿರುತ್ತಾನೆ. ಅವನ ಹುಟ್ಟಿನ ಹಿನ್ನೆಲೆ ಅಂದರೆ ಯಾವ ಜಾತಿಯವನು ಎಂಬುದು ಇಲ್ಲಿ ಮುಖ್ಯವೇ ಅಲ್ಲ. ನುಡಿಸುವವ ಹೇಗೆ ನುಡುಸುತ್ತಾನೆ, ಎಂಥ ಕೌಶಲ್ಯ ತುಂಬಿ ನುಡಿಸುತ್ತಾನೆ ಎಂಬುದಷ್ಟೆ ಮುಖ್ಯ. ಅಲ್ಲಿ ಅವನ ಜಾತಿ ನುಡಿಸುತ್ತಿಲ್ಲ ಅವನು ನುಡಿಸುತ್ತಿದ್ದಾನೆ. ಅವನೊಂದಿಗೆ ಹಲವು ಕೌಶಲ್ಯಗಳನ್ನು ಅದೂ ನೀಡಿರಲೂಬಹುದು. ಆದರೆ ನಾದ ಜಾತಿಯದಲ್ಲ. ನಾದ ವ್ಯಕ್ತಿಯದು. ನಾದ ಅವನ ಸಾಧನೆಯದು. ಅವನ ಪರಿಶ್ರಮದ್ದು. ಜಾತಿ ವೃತ್ತಿ ಒಂದೇ ಆಗಿರುವಾಗ ಅದರ ಪಾಲನ್ನೂ ಅಲ್ಲಗಳೆಯಲಾಗದು. ಆದರೆ ಪರಂಪರೆ ಈ ವಿಚಾರದಲ್ಲಿ ಈ ಜನರಿಗೆ ಮೋಸಮಾಡಿದೆ. ಎಂದೂ ಇವರನ್ನೂ ಸಂಗೀತಗಾರರು ಎಂದು ಪರಿಗಣಿಸಿಯೇ ಇಲ್ಲ. ಇದು ಯಾವ ನ್ಯಾಯ?

ಫೈಬರ್ ಚರ್ಮದ ತಮಟೆ

ಪದೇ ಪದೇ ಕಾಯಿಸುವ ಶ್ರಮ ತಪ್ಪಿಸಿಕೊಳ್ಳಲು ಇತ್ತೀಚಿನ ವಾದ್ಯಗಾರ ಸುಲಭವಾಗಿ ದೊರಕುವ ಫೈಬರ್ ಅನ್ನು ಚರ್ಮವಾಗಿ ಬಳಸತೊಡಗಿದ್ದಾನೆ. ಪ್ರಖ್ಯಾತ ತಮಟೆ ವಾದ್ಯಗಾರ ನಾಡೋಜ ಮುನಿವೆಂಕಟಪ್ಪ ಬಳಸುವುದೇ ಈಬಗೆಯ ಫೈಬರ್ ಚರ್ಮದ್ದು. ತನ್ನ ಅಸಾಮಾನ್ಯ ಪ್ರತಿಭೆಯಿಂದ ಈ ಕಲಾವಿದ ಇಲ್ಲಿ ಯಶಸ್ಸು ಪಡೆಯುತ್ತಿದ್ದಾನೆ. ಆದರೆ ಲೆಕ್ಕಕೆ ನಿಲುಕದಷ್ಟು ಜನರು ಸಾವಿರಾರು ವರ್ಷಗಳಿಂದ ಹದಗೊಳಿಸಿ, ಪರಿಸ್ಕರಿಸಿ ತಂದ ವಾದ್ಯವನ್ನು ಅದರ ನಿಜ ಸೊಗಸಿನ ಉನ್ನತತೆಯನ್ನು ಅರಿಯದೇ, ಇಲ್ಲವೇ ಅಸಡ್ಡೆಯಿಂದ, ಕ್ವಚಿತ್ ಶ್ರಮ ತಪ್ಪಿಸಿಕೊಳ್ಳಲು ಚರ್ಮ ಬಿಟ್ಟಿದ್ದಾರೆ. ಚರ್ಮದ ನಾದದ ಸೊಬಗು ಸೂಕ್ಷ್ಮತೆಗಳೇ ಬೇರೆ. ಅದು ಕೊಡುವ ನಾದದ ಶೇಕಡಾ ಮೂವತ್ತು ಭಾಗದಷ್ಟು ಸೊಗಸನ್ನು ಫೈಬರ್ ನೀಡಲಾರದು. ಇನ್ನೂ ಕಾಲ ಮಿಂಚಿಲ್ಲ. ನಾಡಿನ ಎಲ್ಲಾ ಕಲಾವಿದರೂ ಚರ್ಮದ ತಮಟೆಗೆ ಹೊರಳುವ ಅಥವಾ ಹೊರಳಿಸುವ ಅಲೆಯನ್ನು ನಾವು ಉಂಟುಮಾಡಬೇಕಿದೆ. ಈ ವಾದ್ಯವಷ್ಟೇ ಅಲ್ಲ ಡೊಳ್ಳು, ತಾರ್‍ಸೆ, ಸಮ್ಮಾಳ, ಹರೆ ಈ ಎಲ್ಲಾ ವಾದ್ಯಗಳೂ ಚರ್ಮಮಾತ್ರದಿಂದಲೇ ರೂಪುಗೊಳ್ಳಲು ಉತ್ತೇಜಿಸಬೇಕಿದೆ. ಸಂಸ್ಕೃತಿ ಇಲಾಖೆ ಕಡ್ಡಾಯವಾಗಿ ಈ ವಾದ್ಯ ಬಳಸುವವರಿಗೆ ಆದ್ಯತೆ ನೀಡಿ ಸಂಸ್ಕೃತಿಯ ಸೊಗಸನ್ನು ಕಾಯ್ದುಕೊಳ್ಳಬಹುದಾಗಿದೆ.

(ಮುಂದುವರಿಯುವುದು)

*೧ ಕನ್ನಡ ನಿಘಂಟು; ೧೯೭೭; ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಬೆಂಗಳೂರು; ಪುಟ ೩೨೧೩.

Categories
ಅಡ್ಡೂರು ಕೃಷ್ಣರಾವ್ ಜಲಕೊಯ್ಲು ಪರಿಸರ

ಅಂಕಣಗಳು – ಅಡ್ಡೂರು ಕೃಷ್ಣರಾವ್

ಕೃತಿ: ಅಂಕಣಗಳು – ಅಡ್ಡೂರು ಕೃಷ್ಣರಾವ್

ಲೇಖಕರು:ಅಡ್ಡೂರು ಕೃಷ್ಣರಾವ್

ಕೃತಿಯನ್ನು ಓದಿ     |     Download