Categories
e-ದಿನ

ಡಿಸೆಂಬರ್-31

ಪ್ರಮುಖ ಘಟನಾವಳಿಗಳು:

1600: ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1861: ಚಿರಾಪುಂಜಿಯಲ್ಲಿ 22,990 ಮಿ.ಮೀ ಮಳೆಯಾಗಿ ವಿಶ್ವ ದಾಖಲೆಯಾಯಿತು.

1879: ಸಾರ್ವಜನಿಕವಾಗಿ ವಿದ್ಯುತ್ ಪ್ರಕಾಶಮಾನ ದೀಪದ ಮೊದಲ ಪ್ರದರ್ಶನವನ್ನು ಥಾಮಸ್ ಆಲ್ವಾ ಎಡಿಸನ್ ಅವರು ನೀಡಿದರು.

1929: ಜವಹರಲಾಲ್ ನೆಹರು ಅವರ ನೇತೃತ್ವದ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ “ಪೂರ್ಣಸ್ವರಾಜ್” ನಿರ್ಣಯವನ್ನು ಅಳವಡಿಸಿಕೊಂಡಿತು.

1938: ಅಮೇರಿಕಾದಲ್ಲಿ ಚಾಲಕರಿಗೆ ಮೊದಲ ಬಾರಿಗೆ ಉಸಿರಾಟದ ಪರೀಕ್ಷೆಯ ಮೂಲಕ ಮದ್ಯಪಾನವನ್ನು ಮಾಡಿರುವುದರ ಬಗ್ಗೆ ಪತ್ತೆ ಮಾಡುವುದನ್ನು ಪರಿಚಯಿಸಲಾಯಿತು.

1944: ಹಂಗೇರಿ ಜರ್ಮನಿಯ ಮೇಲೆ ಯುದ್ದ ಘೋಷಿಸಿತು.

1984: ರಾಜೀವ್ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

1996: ಭಾರತದಲ್ಲಿ ಚಿನ್ನದ ಅಮದು ನೀತಿಯನ್ನು ಉದಾರಿಕರಣ ಮಾಡಲಾಯಿತು.

1999: ಹೈಜಾಕ್ ಮಾಡಲಾದ ಇಂಡಿಯನ್ ಏರ್ಲೈನ್ಸ್ ವಿಮಾನ 814ನ್ನು ಬಿಡಿಸಲು ಮಾತುಕಥೆಗಳು ತೀರ್ಮಾನಕ್ಕೆ ಬಂದವು.

1999: ಥೇಮ್ಸ್ ನದಿಯ ದಂಡೆಗಳ ಮೇಲೆ ವಿಶ್ವದ ಅತಿ ದೊಡ್ಡ ಫೆರ್ರಿಸ್ ಚಕ್ರ ‘ಲಂಡನ್ ಐ’ಯನ್ನು ತೆರೆಯಲಾಯಿತು.

ಪ್ರಮುಖ ಜನನ/ಮರಣ:

1706: ಪಾಂಡಿಚೆರ್ರಿಯ ಸಂಸ್ಥಾಪಕ ಫ್ರಾಂಕಾಯಿಸ್ ಮಾರ್ಟಿನ್ ನಿಧನರಾದರು.

1738: ಭಾರತದ ಗವರ್ನರ್ ಜೆನರಲ್ ಆಗಿದ್ದ ಲಾರ್ಡ್ ಚಾರ್ಲ್ಸ್ ಕಾರ್ನವಾಲಿಸ್ ಜನಿಸಿದರು.

1898: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕಂದಾಯ ಸಚಿವರಾಗಿದ್ದ ಕೆ.ಬಿ.ಸಹಾಯ್ ಜನಿಸಿದರು.

1908: ಮೊದಲ ಮಹಿಳಾ ಐಎಎಸ್ ಅಧಿಕಾರಿಯಾದ ಇಶಾ ಬಸಂತ್ ಜೋಷಿ ಜನಿಸಿದರು.

1925: ಶ್ರೇಷ್ಠ ಹಿಂದಿ ಸಾಹಿತಿ ಮತ್ತು ಮಾಜಿ ಐಎಎಸ್ ಅಧಿಕಾರಿ ಶ್ರೀಲಾಲ್ ಶುಕ್ಲಾ ಜನಿಸಿದರು.

1936: ಪ್ರಖ್ಯಾತ ಸಾಗರ ಜೀವಶಾಸ್ತ್ರಜ್ಞ ಡಾ.ಸೈಯದ್ ಝಹೂರ್ ಖಾಸಿಂ ಜನಿಸಿದರು.

1965: ಭಾರತದ ಕ್ರಿಕೆಟ್ ಆಟಗಾರ ಲಕ್ಷ್ಮಣ ಶಿವರಾಮಕೃಷ್ಣನ್ ಜನಿಸಿದರು.

1971: ಭಾರತೀಯ ಭೌತಶಾಸ್ತ್ರಜ್ಞ ವಿಕ್ರಂ ಸಾರಾಭಾಯ್ ಅವರು ನಿಧನರಾದರು.

1986: ಭಾರತದ ಕೇಂದ್ರ ಸರ್ಕಾರದ ಆರೋಗ್ಯ ಸಚಿವರಾಗಿದ್ದ ರಾಜ್ ನಾರಾಯಣ್ ನಿಧನರಾದರು.

2001: ತಮಿಳು ಭಾಷೆಯ ಲೇಖಕ, ಪತ್ರಕರ್ತ ಮತ್ತು ವಿಮರ್ಶಕ ಟಿ.ಎಂ.ಚಿದಂಬರ ರಘುನಾಥನ್ ನಿಧನರಾದರು.

Categories
e-ದಿನ

ಡಿಸೆಂಬರ್-30

ಪ್ರಮುಖ ಘಟನಾವಳಿಗಳು:

1861: ಅಮೇರಿಕಾದ ಬ್ಯಾಂಕುಗಳು ಚಿನ್ನದ ಪಾವತಿಗಳನ್ನು ನಿಲ್ಲಿಸಿತು.

1873: ಅಮೇರಿಕನ್ ಮೆಟ್ರೊಲಾಜಿಕಲ್ ಸೊಸೈಟಿ ಸ್ಥಾಪಿಸಲಾಯಿತು.

1922: ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ (ಯು.ಎಸ್.ಎಸ್.ಆರ್)ವನ್ನು ಸ್ಥಾಪಿಸಲಾಯಿತು.

1924: ಎಡ್ವಿನ್ ಹಬ್ಬಲ್ ಇತರ ಗ್ಯಾಲಾಕ್ಸಿಯ ವ್ಯವಸ್ಥೆಗಳ ಅಸ್ತಿತ್ವವನ್ನು ಘೋಷಿಸಿದರು.

1932: ಅಖಿಲ ಭಾರತ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆ (AIIHPH) ಅನ್ನು ಸ್ಥಾಪಿಸಲಾಯಿತು.

1943: ಪೋರ್ಟ್ ಬ್ಲೇರಿನ ಬಳಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಘೋಷಣೆ ಮಾಡಿ ಧ್ವಜವನ್ನು ಹಾರಿಸಿದರು.

1949: ಭಾರತವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಗುರುತಿಸಿತು.

1953: ಮೊದಲ ಬಣ್ಣದ ಟಿವಿ ಸೆಟ್ ಗಳನ್ನು ಮಾರಾಟಕ್ಕೆ ಬಂದವು.

1984: ಮೆಕ್ಸಿಕೋದಲ್ಲಿ ಸ್ಪೆಲೆಲೋಲೊಜಿಸ್ಟ್ ವಿಶ್ವದ ಅತ್ಯಂತ ಆಳವಾದ ಗುಹೆಯೊಂದನ್ನು ಕಂಡುಹಿಡಿದರು.

2006: ಇರಾಕಿನಲ್ಲಿಸರ್ವಾಧಿಕಾರಿ ಸದ್ದಾಮ್ ಹುಸ್ಸೇನ್ ಅವರನ್ನು ಗಲ್ಲಿಗೇರಿಸಲಾಯಿತು.

ಪ್ರಮುಖ ಜನನ/ಮರಣ:
1879: ವಿಶ್ವದಾದ್ಯಂತ ಅನುಯಾಯಿಗಳನ್ನು ಆಕರ್ಷಿಸಿದ ಭಾರತದ ಆಧ್ಯಾತ್ಮಿಕ ಗುರು ರಮಣ ಮಹರ್ಷಿ ಜನಿಸಿದರು.

1887: ಖ್ಯಾತ ಲೇಖಕ, ವಕೀಲರು ಮತ್ತು ರಾಜಕಾರಣಿ ಕೆ.ಎಂ.ಮುನ್ಷಿ ಜನಿಸಿದರು.

1923: ಭಾರತದ ಶಿಕ್ಷಣ ತಜ್ಞ ಮತ್ತು ರಾಜಕಾರಣಿ ಪ್ರಕಾಶವೀರಶಾಸ್ತ್ರಿ ಜನಿಸಿದರು.

1948: ಭಾರತದ ಕ್ರಿಕೆಟ್ ಆಟಗಾರ ಸುರಿಂದರ್ ಅಮರನಾಥ್ ಜನಿಸಿದರು.

1979: ಮಲಯಾಳಂ ಮತ್ತು ತಮಿಳು ಚಿತ್ರರಂಗದ ನಾಯಕಿ ಕೌಸಲ್ಯ ಜನಿಸಿದರು.

1987: ಹಿಂದಿ ಚಲನಚಿತ್ರಗಳ ಸಂಗೀತ ಸಂಯೋಜಕ ದತ್ತಾನಾಯಕ್ ನಿಧನರಾದರು.

1990: ಭಾರತೀಯ ಲೇಖಕ, ಕವಿ ಮತ್ತು ವಿಮರ್ಶಕ ರಘುವೀರ್ ಸಹಾಯ್ ನಿಧನರಾದರು.

2009: ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್ ನಿಧನರಾದರು.

2010: ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿ.ಬಾಲಕೃಷ್ಣ ಇರಾಡಿ ನಿಧನರಾದರು.

2015: ಭಾರತೀಯ ಕವಿ, ನಾಟಕಕಾರ ಮತ್ತು ಅನುವಾದಕ ಮಂಗೇಶ್ ಪದ್ಗಾಂವಕರ್ ಅವರು ನಿಧನರಾದರು.

 

Categories
e-ದಿನ

ಡಿಸೆಂಬರ್-29

ಪ್ರಮುಖ ಘಟನಾವಳಿಗಳು:

1848: ಅಮೇರಿಕಾದ ಅಧ್ಯಕ್ಷ ಜೇಮ್ಸ್ ಪೋಲ್ಕ್ ವೈಟ್ ಹೌಸಿನಲ್ಲಿ ಮೊದಲ ಅನಿಲ ಬೆಳಕನ್ನು ಬೆಳಗಿಸಿದರು.

1862: ಬೌಲಿಂಗ್ ಬಾಲ್ ಅನ್ನು ಕಂಡು ಹಿಡಿಯಲಾಯಿತು.

1891: ಥಾಮಸ್ ಎಡಿಸನ್ ವಿದ್ಯುನ್ಮಾನ ಸಂಕೇತಗಳ ಪ್ರಸರಣ (ರೇಡಿಯೋ)ಗೆ ಪೇಟೆಂಟ್ ಪಡೆದರು.

1908: 4 ಚಕ್ರ ವಾಹನಗಳಿಗೆ ಬ್ರೇಕ್ ಅನ್ನು ಕಂಡುಹಿಡಿದಿರುವುದಕ್ಕೆ ವಿಸ್ಕಸಿನ್ ಅವರಿಗೆ ಪೇಟೆಂಟ್ ನೀಡಲಾಯಿತು.

1916: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಲಖ್ನೋ ಅಧಿವೇಶನ ಪ್ರಾರಂಭವಾಯಿತು.

1937: ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಿಸಿದ ಹೊಸ ಸಂವಿಧಾನದಿಂದ ಐರಿಶ್ ಫ್ರೀ ರಾಜ್ಯ ಎಂಬ ಹೆಸರಿನಿಂದ “ಐರ್ಲೆಂಡ್” ಎಂದು ಮರುನಾಮಕರಣ ಮಾಡಲಾಯಿತು.

1975: ಇಂಗ್ಲೆಂಡಿನಲ್ಲಿ ಲಿಂಗ ತಾರತಮ್ಯ ಮತ್ತು ಸಮಾನ ವೇತನ ಕಾಯಿದೆಗಳು ಜಾರಿಗೆ ತರಲಾಯಿತು.

1984: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮಗ ರಾಜೀವಗಾಂಧಿ ಅವರು ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು.

1988: ಆಸ್ಟ್ರೇಲಿಯಾದಲ್ಲಿ ಇದ್ದ ವಿಕ್ಟೋರಿಯನ್ ಅಂಚೆ ಕಛೇರಿಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು.

2007: ಅಮೇರಿಕಾದ ಮೃಗಾಲಯದಲ್ಲಿ 55 ವರ್ಷದ ವಿಶ್ವದ ಅತ್ಯಂತ ಹಿರಿಯ ಒರಾಂಗುಟಾನ್ ಕೋತಿ ಸಾವನ್ನಪ್ಪಿತು.

ಪ್ರಮುಖ ಜನನ/ಮರಣ:

1844: ಭಾರತೀಯ ನ್ಯಾಯವಾದಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ವೋಮೇಶ್ ಚಂದರ್ ಬ್ಯಾನರ್ಜಿ ಜನಿಸಿದರು.

1904: ಕನ್ನಡದ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಜನಿಸಿದರು.

1909: ರಾಜಸ್ಥಾನಿ ಭಾಷೆಯಲ್ಲಿ ಮೊದಲ ನಿಘಂಟು ತಯಾರಿಸಿದ ಭಾಷಾಶಾಸ್ತ್ರಜ್ಞ ಡಾ.ಸೀತಾರಾಮ ಲಾಲಸ್ ಅವರು ಜನಿಸಿದರು.

1917: ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಮತ್ತು ನಿರ್ಮಾಪಕ ರಮಾನಂದ್ ಸಾಗರ್ ಜನಿಸಿದರು.

1922: ಶ್ರೇಷ್ಠ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್ ಷಾ ಮೊಹಮ್ಮದ್ ಹುಸ್ಸೈನ್ ಜನಿಸಿದರು.

1925: ಭಾರತದ ಹಾಕಿ ಆಟಗಾರ ಕೇಶವ್ ಚಂದ್ರ ದತ್ ಜನಿಸಿದರು.

1942: ಬಾಲಿವುಡಿನ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಜನಿಸಿದರು.

2013: ಭಾರತದ ಲೇಖಕ ಮತ್ತು ಅನುವಾದಕ ಜಗದೀಶ್ ಮೊಹಂತಿ ಅವರು ನಿಧನರಾದರು.

2014: ಭಾರತ-ಹಾಂಕಾಂಗ್ ಉದ್ಯಮಿ ಹರಿಹರಿಲೀಲಾ ನಿಧನರಾದರು.

2015: ಪಂಜಾಬಿನ 25ನೇ ಗವರ್ನರ್ ಓಂ ಪ್ರಕಾಶ್ ಮಲ್ಹೋತ್ರಾ ನಿಧನರಾದರು.

 

Categories
e-ದಿನ

ಡಿಸೆಂಬರ್-28

ಪ್ರಮುಖ ಘಟನಾವಳಿಗಳು:

1612: ಗೆಲಿಲಿಯೋ ಮೊದಲ ಬಾರಿಗೆ “ನೆಪ್ಟ್ಯೂನ್ ಗ್ರಹ”ವನ್ನು ನೋಡಿದರು.

1849: ಎಂ.ಜಾಲಿ ಬೆಲ್ಲಿನ್ ಒಣ-ಶುಚಿಗೊಳಿಸುವಿಕೆಯನ್ನು ಕಂಡುಹಿಡಿದರು.

1877: ಜಾನ್ ಸ್ಟೀವಿನ್ಸ್ ಹಿಟ್ಟು ಗಿರಣಿಗಾಗಿ ಪೇಟೆಂಟ್ ಪಡೆದರು.

1885: ವಿಶ್ವದ ಅತೀ ದೊಡ್ಡ ಮತ್ತು ಹಳೆಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಲಾಯಿತು.

1895: ವಿಶ್ವದ ಪ್ರಥಮ ಚಲನಚಿತ್ರ ಮಂದಿರ ಪ್ಯಾರಿಸ್ಸಿನಲ್ಲಿ ತೆರೆಯಲಾಯಿತು.

1981: ಅಮೇರಿಕಾದ ಮೊದಲ “ಟೆಸ್ಟ್ ಟ್ಯೂಬ್” ಮಗು ಆಸ್ಪತ್ರೆಯಲ್ಲಿ ಜನಿಸಿತು.

1984: ರಾಜೀವ್ ಗಾಂಧಿ ಅವರ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಚುನಾವಣೆಯಲ್ಲಿ ಗೆದ್ದಿತು.

1995: ಭಾರತದ ಎರಡನೇ ಪೀಳಿಗೆಯ ದೂರದ ಸಂವೇದನಾ ಉಪಗ್ರಹ IRS-1C ಯನ್ನು ಪ್ರಾರಂಭಿಸಲಾಯಿತು.

2007: ನೇಪಾಳವು ರಾಜಪ್ರಭುತ್ವವನ್ನು ನಿರ್ಮೂಲನೆ ಮಾಡಿತು.

2010: 4,00,000 ವರ್ಷಗಳ ಹಿಂದೆ ಜೀವಿಸಿದ್ದ ಮಾನವರ ಪಳಯುಳಿಕೆಗಳು ಇಸ್ರೇಲಿನಲ್ಲಿ ಪತ್ತೆಯಾದವು.

ಪ್ರಮುಖ ಜನನ/ಮರಣ:

1932: ರಿಲಾಯನ್ಸ್ ಸಂಸ್ಥೆಯ ಸಂಸ್ಥಾಪಕ ಧೀರುಬಾಯ್ ಅಂಬಾನಿ ಜನಿಸಿದರು.

1937: ಟಾಟಾ ಸಂಸ್ಥೆಯ ಅಧ್ಯಕ್ಷರಾದ ರತನ್ ಟಾಟಾ ಜನಿಸಿದರು.

1940: ಭಾರತದ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟೊನಿ ಜನಿಸಿದರು.

1941: ಭಾರತ-ಪಾಕಿಸ್ತಾನದ ಕ್ರಿಕೆಟ್ ಆಟಗಾರ ಮತ್ತು ತರಬೇತುಗಾರ ಇಂತಿಕಾಬ್ ಆಲಂ ಜನಿಸಿದರು.

1951: ಬಾಲಿವುಡ್ ಚಿತ್ರರಂಗದ ನಟ, ನಿರ್ದೇಶಕ ಸಾಜಿದ್ ಖಾನ್ ಜನಿಸಿದರು.

1952: ಭಾರತದ 9ನೇ ಕಾನೂನು ಸಚಿವರಾದ ಅರುಣ್ ಜೇಟ್ಲಿ ಅವರು ಜನಿಸಿದರು.

1977: ಶ್ರೇಷ್ಠ ಕವಿ, ಪ್ರಬಂಧಕಾರ ಮತ್ತು ನಾಟಕಕಾರ ಸುಮಿತ್ರಾನಂದನ್ ಪಂತ್ ನಿಧನರಾದರು.

1966: ಖಂಜರ ವಾದಕ ವಿ.ಸೆಲ್ವಗಣೇಶನ್ ಜನಿಸಿದರು.

1984: ಕನ್ನಡ ಚಿತ್ರರಂಗದ ನಟ ದಿಗಂತ್ ಅವರು ಜನಿಸಿದರು.

 

Categories
e-ದಿನ

ಡಿಸೆಂಬರ್-27

ಪ್ರಮುಖ ಘಟನಾವಳಿಗಳು:

1703: ಪೋರ್ಚುಗಲ್ ಮತ್ತು ಇಂಗ್ಲೆಂಡಿನ ನಡುವೆ ಮೆತುವೆನ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಪೋರ್ಚುಗೀಸ್ ವೈನುಗಳನ್ನು ಇಂಗ್ಲೆಂಡಿಗೆ ಆಮದು ಮಾಡಲು ಮಾಡಲಾಯಿತು.

1845: ಡಾ.ಕ್ರಾಫರ್ಡ್ ವಿಲಿಯಮ್ಸನ್ ಮೊದಲ ಬಾರಿಗೆ ಹೆರಿಗೆಗೆ ಅರವಳಿಕೆಯನ್ನು ಬಳಸಿದರು.

1850: ಹವಾಯಿಯ ಅಗ್ನಿಶಾಮಕ ಇಲಾಖೆಯನ್ನು ಸ್ಥಾಪಿಸಲಾಯಿತು.

1911: ಭಾರತದ ರಾಷ್ಟ್ರಗೀತೆ “ಜನಗಣಮನ” ವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲಕತ್ತಾದ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಯಿತು.

1945: 28 ರಾಷ್ಟ್ರಗಳು ಒಪ್ಪಂದ ಮಾಡಿ ಸಹಿ ಹಾಕಿದ ಕಾರಣ ವಿಶ್ವಬ್ಯಾಂಕ್ ಅನ್ನು ರಚಿಸಲಾಯಿತು.

1945: ಅಂತರರಾಷ್ಟ್ರೀಯ ಹಣಕಾಸು ನಿಧಿಯನ್ನು 29 ಸದಸ್ಯ ರಾಷ್ಟ್ರಗಳೊಂದಿಗೆ ಸ್ಥಾಪಿಸಲಾಯಿತು.

1978: ಸ್ಪೇನ್ ನೂತನ ಸಂವಿಧಾನವನ್ನು ಅಳವಡಿಸಿಕೊಂಡು 40 ವರ್ಷಗಳ ಸರ್ವಾಧಿಕಾರದ ನಂತರ ಪ್ರಜಾ ಪ್ರಭುತ್ವವಾಯಿತು.

2001: ಅಮೇರಿಕಾದ ಜೊತೆಗೆ ಚೀನಾ ಶಾಶ್ವತವಾದ ಸಾಮಾನ್ಯ ವ್ಯಾಪಾರ ಸಂಬಂಧಗಳನ್ನು ಪಡೆಯಿತು.

2002: ಕ್ಲೋನೈಡ್ ಮೊದಲ ಅಬೀಜ ಮಾನವ ಮಗುವಿನ ಜನನವನ್ನು ಘೋಷಿಸಿತು.

2007: ಪಾಕಿಸ್ತಾನದ ಅಧ್ಯಕ್ಷೆ ಬೆನಜಿರ್ ಭುಟ್ಟೋ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಪ್ರಮುಖ ಜನನ/ಮರಣ:

1629: ಭಾರತದ ಖ್ಯಾತ ಶಸ್ತ್ರವೈದ್ಯ ಟಿ.ನಾರಾಯಣ ರಾವ್ ಜನಿಸಿದರು.

1797: ಭಾರತದ ಕವಿ ಮಿರ್ಜಾಘಾಲಿಬ್ ಜನಿಸಿದರು.

1927: ಉತ್ತರಾಖಂಡದ ಮೊದಲ ಮುಖ್ಯಮಂತ್ರಿಯಾಗಿದ್ದ ನಿತ್ಯಾನಂದ ಸ್ವಾಮಿ ಜನಿಸಿದರು.

1944: ಹಿಂದಿ ಭಾಷೆಯ ಕಿರುತೆರೆ ಮತ್ತು ಹಿರಿತೆರೆಯ ನಟ ವಿಜಯ್ ಅರೋರಾ ಜನಿಸಿದರು.

1955: ಭೂಲೋಕದ ಪಾತಕಿ ದಾವೂದ್ ಇಬ್ರಾಹಿಂ ಜನಿಸಿದರು.

1965: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಜನಿಸಿದರು.

1984: ಭಾರತದ ಕ್ರಿಕೆಟ್ ಆಟಗಾರ ಮಣಿಂದರ್ ಬಿಸ್ಲಾ ಜನಿಸಿದರು.

1985: ಹಿಂದಿ ಕಿರುತೆರೆ ನಟಿ ಮತ್ತು ಮಾಡೆಲ್ ಪಂಚಿ ಬೋರಾ ಜನಿಸಿದರು.

1985: ಹಿಂದಿ ಕಿರುತೆರೆ ನಟಿ ಮತ್ತು ಮಾಡೆಲ್ ಪಂಚಿ ಬೋರಾ ಜನಿಸಿದರು.

2013: ಕಿರುತೆರೆಯ ಖ್ಯಾತ ನಿರೂಪಕ ಫಾರೂಕ್ ಶೇಖ್ ನಿಧನರಾದರು.

 

Categories
e-ದಿನ

ಡಿಸೆಂಬರ್-26

 

1854: ಮರದ ತಿರುಳಿನಿಂದ ತಯಾರಾದ ಪೇಪರನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

1862: ಅಮೇರಿಕಾದ ಆಂತರ್ಯುದ್ದ ವಾಲ್ನಟ್ ಬೆಟ್ಟಗಳ ಕದನ ಎಂದೇ ಕರೆಯಲ್ಪಟ್ಟ ಚಿಕಸಾವ್ ಬೇ ಯುದ್ದವು ಪ್ರಾರಂಭವಾಯಿತು.

1865: ಕಾಫಿ ಶೋಧಿಸುವ ಉಪಕರಣಕ್ಕೆ ಜೇಮ್ಸ್ ಹೆಚ್ ಮೇಸನ್ ಪೇಟೆಂಟ್ ಪಡೆದರು.

1898: ಮೇರಿ ಮತ್ತು ಪೈರೀ ಕ್ಯೂರಿ ರೇಡಿಯಂ ಅನ್ನು ಪತ್ತೆ ಮಾಡಲಾಯಿತು.

1953: ಕೊರಿಯಾದ ಎರಡು ವಿಭಾಗಗಳನ್ನು ಹಿಂತೆಗೆದುಕೊಳ್ಳುವಂತೆ ಅಮೇರಿಕಾ ಘೋಷಿಸಿತು.

1976: ನೇಪಾಳದಲ್ಲಿ ಕಮ್ಮ್ಯುನಿಸ್ಟ್ ಪಕ್ಷ ಸ್ಥಾಪನೆಯಾಯಿತು.

1986: ಭಾರತದಲ್ಲಿ ಗ್ರಾಹಕರ ಹಕ್ಕು ಕಾಯಿದೆಯನ್ನು ಅಂಗೀಕರಿಸಲಾಯಿತು.

1991: ಸೋವಿಯತ್ ದೇಶಗಳಸುಪ್ರೀಂ ಆಡಳಿತ ವ್ಯವಸ್ಥೆ ಸೋವಿಯತ್ ಒಕ್ಕೂಟವನ್ನು ಔಪಚಾರಿಕವಾಗಿ ಅಂತ್ಯಗೊಳಿಸಲಾಯಿತು.

2002: ಮೊದಲ ಅಬೀಜ ಮಾನವ ಮಗು ಜನಿಸಿತು.

2004: ಹಿಂದೂ ಮಹಾಸಾಗರದಲ್ಲಿ ಬೃಹತ್ ಭೂದೃಶ್ಯ ಭೂಕಂಪನದಿಂದ ಉಂಟಾದ ಬೃಹತ್ ಸುನಾಮಿ ಭಾರತ, ಶ್ರೀಲಂಕಾ ಮತ್ತು ಅಗ್ನೇಯ ಏಷಿಯಾದಲ್ಲಿ ಸುಮಾರು 3,00,000 ಜನರನ್ನು ಕೊಂದಿತು.

ಪ್ರಮುಖ ಜನನ/ಮರಣ:

1914: ಭಾರತೀಯ ಸಾಮಾಜಿಕ ಕಾರ್ಯಕರ್ತ ಕುಷ್ಟರೋಗಿಗಳಿಗ ಪುನರ್ವಸತಿ ಮತ್ತು ಅಧಿಕಾರಕ್ಕೆ ಹೋರಾಡಿದ ಬಾಬಾ ಅಮ್ಟೆ ಜನಿಸಿದರು.

1921: ಬಂಗಾಳದ ಮತ್ತು ಒರಿಸ್ಸಾದ ಗವರ್ನರ್ ಆಗಿದ್ದ ಸೈಯದ್ ನುರುಲ್ ಹಾಸನ್ ಜನಿಸಿದರು.

1973: ಭಾರತದ ಕ್ರಿಕೆಟ್ ಆಟಗಾರ ನಿಖಿಲ್ ಚೋಪ್ರಾ ಜನಿಸಿದರು.

1976: ಭಾರತದ ಸೇನೆಯ ಅಧಿಕಾರಿ ಮತ್ತು ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ವಿಜಯಂತ್ ಥಾಪರ್ ಜನಿಸಿದರು.

1981: ತೆಲುಗು ಚಿತ್ರರಂಗದ ಖ್ಯಾತ ನಟಿ ಸಾವಿತ್ರಿ ಕೊಮ್ಮಾರೆಡ್ಡಿ ನಿಧನರಾದರು.

1985: ಕನ್ನಡ ಚಲನಚಿತ್ರಗಳ ಖ್ಯಾತ ನಟ ಉದಯ್ ಕುಮಾರ್ ನಿಧನರಾದರು.

1989: ಭಾರತದ ವ್ಯಂಗ್ಯ ಚಿತ್ರಕಾರ ಕೆ.ಎಸ್.ಪಿಳ್ಳೈ ನಿಧನರಾದರು.

1999: ಭಾರತದ 9ನೇ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮ ನಿಧನರಾದರು.

2006: ಭಾರತೀಯ ಪಾಕಿಸ್ತಾನಿ ಕವಿ ಮುನಿರ್ ನಿಯಾಜಿ ನಿಧನರಾದರು.

2011: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ನಿಧನರಾದರು.

 

Categories
e-ದಿನ

ಡಿಸೆಂಬರ್-25

 

ಪ್ರಮುಖ ಘಟನಾವಳಿಗಳು:

2001: ಕ್ರೈಸ್ತ ಮತದ ಸಂಸ್ಥಾಪಕರಾದ ಏಸುಕ್ರಿಸ್ತರ ಜನುಮದಿನದಿವನ್ನು ಕ್ರಿಸ್ಮಸ್ ಆಗಿ ಆಚರಿಸಲಾಯಿತು.

1599: ಬ್ರೆಜಿಲ್ಲಿನ ನಟಾಲ್ ನಗರವನ್ನು ಕಂಡುಹಿಡಿಯಲಾಯಿತು.

1741: ಖಗೋಳಶಾಸ್ತ್ರಜ್ಞ ಆಂಡರ್ಸ್ ಸೆಲ್ಸಿಯಸ್ ಸೆಂಟಿಗ್ರೇಡ್ ತಾಪಮಾನದ ಪ್ರಮಾಣವನ್ನು ಪರಿಚಯಿಸಿದರು.

1809: ವೈದ್ಯ ಎಫ್ರೇಮ್ ಮೆಕ್ಡೋವೆಲ್ ಅಮೇರಿಕಾದಲ್ಲಿ ಮೊದಲ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದರು.

1818: ಮೊದಲ ಕ್ರಿಸ್ಮಸ್ ಕ್ಯಾರೆಲ್ (ಹಾಡು) ಹಾಡಲಾಯಿತು.

1848: ನ್ಯೂ ಹ್ಯಾವೆನ್ ರೈಲುರಸ್ತೆಯನ್ನು ತೆರೆಯಲಾಯಿತು.

1946: ತೈವಾನಿನಲ್ಲಿ ಸಂವಿಧಾನವನ್ನು ಅಳವಡಿಸಲಾಯಿತು.

1947: ತೈವಾನ್ ಮಾನವ ಹಕ್ಕುಗಳ ಕಾನೂನನ್ನು ಅಂಗೀಕರಿಸಿತು.

1947: ಚೀನಾದ ಗಣರಾಜ್ಯದ ಸಂವಿಧಾನವು ಜಾರಿಗೆ ಬಂದಿತು.

1959: ಸೋನಿ ಸಂಸ್ಥೆ ಟ್ರಾನ್ಸಿಸ್ಟರ್ ಟೀವಿ 8-301 ಅನ್ನು ಮಾರುಕಟ್ಟೆಗೆ ತಂದಿತು.

1983: ಕ್ರಿಸ್ಟಮಸ್ ಪರೇಡಿನ ಮೊದಲ ನೇರ ಪ್ರಸಾರವನ್ನು ಪ್ರದರ್ಶಿಸಲಾಯಿತು.

ಪ್ರಮುಖ ಜನನ/ಮರಣ:

1861: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪಂಡಿತ್ ಮದನಮೋಹನ ಮಾಳವಿಯಾ ಅವರು ಜನಿಸಿದರು.

1876: ಪಾಕಿಸ್ತಾನದ ಮೊದಲ ಗವರ್ನರ್ ಜೆನರಲ್ ಆಗಿದ್ದ ಮುಹಮ್ಮದ್ ಅಲಿ ಜಿನ್ನಾ ಅವರು ಜನಿಸಿದರು.

1919: ಭಾರತೀಯ ಸಂಗೀತ ಸಂಜೋಜಕ ಮತ್ತು ಸಂಗೀತ ನಿರ್ದೇಶಕ ನೌಶಾದ್ ಅಲಿ ಜನಿಸಿದರು.

1924: ಭಾರತದ 10ನೇ ಪ್ರಧಾನ ಮಂತ್ರಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಜನಿಸಿದರು.

1925: ಭಾರತೀಯ ವರ್ಣಚಿತ್ರಕಾರ, ಶಿಲ್ಪಿ ಮತ್ತು ವಾಸ್ತುಶಿಲ್ಪಿ ಸತೀಶ್ ಗುಜರಾಲ್ ಜನಿಸಿದರು.

1936: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಧರಂಸಿಂಗ್ ಜನಿಸಿದರು.

1936: ಭಾರತದ ಚಿತ್ರರಂಗದ ನಿರ್ದೇಶಕ ಮತ್ತು ನಿರ್ಮಾಪಕ ಇಸ್ಮಾಯಿಲ್ ಮರ್ಚೆಂಟ್ ಜನಿಸಿದರು.

1959: ಭಾರತದ ಕವಿ ಮತ್ತು ರಾಜಕಾರಣಿ ರಾಮದಾಸ್ ಅಟಾವಲೆ ಜನಿಸಿದರು.

1963: ಭಾರತದ ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ ಜನಿಸಿದರು.

1994: ಭಾರತದ 7ನೇ ರಾಷ್ಟ್ರಪತಿಯಾಗಿದ್ದ ಜೈಲ್ ಸಿಂಗ್ ನಿಧನರಾದರು.

 

Categories
e-ದಿನ

ಡಿಸೆಂಬರ್-24

 

ಪ್ರಮುಖ ಘಟನಾವಳಿಗಳು:

1851: ವಾಷಿಂಗ್ಟನ್ನಿನಲ್ಲಿರುವ ಕಾಂಗ್ರೆಸ್ಸಿನ ಗ್ರಂಥಾಲಯದಲ್ಲಿದ್ದ 35000 ಸಂಪುಟಗಳು ಬೆಂಕಿ ಅನಾಹುತದಿಂದ ನಾಶವಾಯಿತು.

1894: ಮೊದಲ ವೈದ್ಯಕೀಯ ಸಮ್ಮೇಳನವನ್ನು ಕಲ್ಕತ್ತಾದಲ್ಲಿ ನಡೆಸಲಾಯಿತು.

1921: ರಬಿಂದ್ರನಾಥ್ ಟಾಗೋರ್ ಪಶ್ಚಿಮ ಬಂಗಾಲದಲ್ಲಿ ಶಾಂತಿನಿಕೇತನದಲ್ಲಿ “ವಿಶ್ವ ಭಾರತಿ”ಯನ್ನು ಸ್ಥಾಪಿಸಿದರು.

1948: ವಿಶ್ವದ ಮೊದಲ ಸೌರಶಕ್ತಿಯ ಮನೆಯನ್ನು ದೋವರಿನಲ್ಲಿ ನಿರ್ಮಿಸಲಾಯಿತು.

1968: ಅಪೋಲೋ 8ರ ಸಿಬ್ಬಂದಿ ಚಂದ್ರನ ಸುತ್ತ ಕಕ್ಷೆಗೆ ಪ್ರವೇಶಿಸಿದ ಮೊದಲ ಮಾನವರಾದರು.

1969: ತೈಲ ಕಂಪನಿಯಾದ ಫಿಲಿಪ್ಸ್ ಪೆಟ್ರೋಲಿಯಂ ಉತ್ತರ ಸಮುದ್ರದ ನಾರ್ವೇ ಸೆಕ್ಟರಿನಲ್ಲಿ ಮೊಟ್ಟ ಮೊದಲ ತೈಲ ಸಂಶೋಧನೆ ಮಾಡಿತು.

1973: ಕೊಲಂಬಿಯಾ ಜಿಲ್ಲೆಯ ಹೋಮ್ ರೂಲ್ ಕಾಯಿದೆಯನ್ನು ಅಂಗೀಕರಿಸಲಾಯಿತು. ಈ ಕಾಯಿದೆಯ ಪ್ರಕಾರ ವಾಷಿಂಗ್ಟನ್ ನಿವಾಸಿಗಳು ತಮ್ಮ ಸ್ಥಳೀಯ ಸರ್ಕಾರವನ್ನು ಆಯ್ಕೆ ಮಾಡಲು ಅವಕಾಶ ನೀಡಲಾಯಿತು.

1986: ಭಾರತದ ರಾಷ್ಟ್ರಪತಿಯವರ ಒಪ್ಪಿಗೆ ಪಡೆದು ಗ್ರಾಹಕರ ರಕ್ಷಣೆ ಕಾಯಿದೆಯನ್ನು ಜಾರಿಗೆ ತರಲಾಯಿತು.

1999: ಇಂಡಿಯನ್ ಏರ್ಲೈನ್ಸ್ ವಿಮಾನ ಸಂಖ್ಯೆ 814ನ್ನು ಕಟ್ಮಂಡು, ನೇಪಾಳ ಮತ್ತು ದೆಹೆಲಿಯ ನಡುವಿನ ವಾಯುಪ್ರದೇಶದಲ್ಲಿ ಅಪಹರಣ ಮಾಡಲಾಯಿತು.

2000: ವಿಶ್ವನಾಥನ್ ಆನಂದ್ ವಿಶ್ವ ಚೆಸ್ ಚಾಂಪಿಯನ್ ಶಿಪ್ಪಿನಲ್ಲಿ ಪ್ರಶಸ್ತಿಯನ್ನು ಪಡೆದ ಮೊದಲ ಏಷಿಯಾದ ವ್ಯಕ್ತಿ.

ಪ್ರಮುಖ ಜನನ/ಮರಣ:

1524: ಭಾರತದ ಪೋರ್ಚುಗೀಸ್ ಗವರ್ನರ್ ಆಗಿದ್ದ ವಾಸ್ಕೊಡ ಗಾಮಾ ನಿಧನರಾದರು.

1924: ಭಾರತದ ಅತ್ಯತ್ತಮ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದ ಮೊಹಮ್ಮದ್ ರಫಿ ಜನಿಸಿದರು.

1932: ಭಾರತೀಯ-ಇಂಗ್ಲಿಷ್ ಕ್ರಿಕೆಟ್ ಆಟಗಾರ ಕೋಲಿನ್ ಕೌಡ್ರೇ ಜನಿಸಿದರು.

1942: ಭಾರತೀಯ ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ಇಂದ್ರ ಬಾನಿಯಾ ಜನಿಸಿದರು.

1959: ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ ಜನಿಸಿದರು.

1986: ಭಾರತೀಯ ಫುಟ್ಬಾಲ್ ಆಟಗಾರ ಸುಬ್ರದಾ ಪಾಲ್ ಜನಿಸಿದರು.

1987: ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ನಟ, ನಿರ್ಮಾಪಕ ಎಂ.ಜಿ.ರಾಮಚಂದ್ರನ್ ನಿಧನರಾದರು.

1988: ಭಾರತೀಯ ಲೇಖಕ ಜಯೇಂದ್ರ ಕುಮಾರ್ ನಿಧನರಾದರು.

2005: ತೆಲುಗು ಮತ್ತು ತಮಿಳು ಚಿತ್ರರಂಗದ ನಟಿ, ನಿರ್ದೇಶಕಿ, ಸಂಗೀತ ನಿರ್ದೇಶಕಿ, ನಿರ್ಮಾಪಕಿ ಭಾನುಮತಿ ನಿಧನರಾದರು.

 

Categories
e-ದಿನ

ಡಿಸೆಂಬರ್-23

 

ಪ್ರಮುಖ ಘಟನಾವಳಿಗಳು:

1672: ಜಿಯೋವನ್ನು ಕ್ಯಾಸೆನಿ ಶನಿ ಗ್ರಹದ ಉಪ ಗ್ರಹವಾದ ರಿಯಾ ಅನ್ನು ಪತ್ತೆ ಮಾಡಿದರು.

1880: ಯೂರೋಪಿನ ಎಡಿಸನ್ ಎಲೆಕ್ಟ್ರಿಕ್ ಲೈಟ್ ಸಂಸ್ಥೆಯನ್ನು ಥಾಮಸ್ ಎಡಿಸನ್ ಸ್ಥಾಪಿಸಿದರು.

1902: ಭಾರತದ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಕಿಸಾನ್ ದಿವಸ್ ಆಚರಿಸಲಾಗುತ್ತದೆ.

1913: ಅಮೇರಿಕಾದ ಕಾಂಗ್ರಸ್ ಫೆಡರಲ್ ರಿಸರ್ವ್ ಆಕ್ಟ್ ಮತ್ತು ಫೆಡರಲ್ ರಿಸರ್ವ್ ವ್ಯವಸ್ಥೆಯನ್ನು ರಾಷ್ಟ್ರದ ಕೇಂದ್ರೀಯ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲು ಅನುಮೋದಿಸಿತು.

1919: ಬ್ರಿಟನ್ ಭಾರತಕ್ಕೆ ನೂತನ ಸಂವಿಧಾನವನ್ನು ಸ್ಥಾಪಿಸಿತು.

1919: ರೋಗಿಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಆಗಿ ಬಳಸಲಾಗುವ ಹಡಗಿನ ವಿನ್ಯಾಸವನ್ನು ಮೊದಲ ಬಾರಿಗೆ ಆರಂಭಿಸಲಾಯಿತು.

1947: ಜಾನ್ ಬಾರ್ದೀನ್ ಟ್ರಾನ್ಸಿಸ್ಟರ್ ಅನ್ನು ಕಂಡುಹಿಡಿದರು.

1964: ಭಾರತಕ್ಕೆ ಚಂಡಮಾರುತ ಅಪ್ಪಳಿಸಿದ ಕಾರಣ 4850 ಜನ ಮೃತ ಪಟ್ಟರು.

2000: ಕೋಲ್ಕತ್ತಾ ಎಂದು ಮರುನಾಮಕರಣ ಮಾಡಲು ಪಶ್ಚಿಮ ಬಂಗಾಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ನೀಡಿತು.

ಪ್ರಮುಖ ಜನನ/ಮರಣ:

1889: ಭಾರತದ ಸರ್ವೋಚ್ಛ ನ್ಯಾಯಾಲಯದ ಮೂರನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮೆಹರ್ ಚಂದ್ ಮಹಾಜನ್ ಜನಿಸಿದರು.

1902: ಭಾರತದ 5ನೇ ಪ್ರಧಾನ ಮಂತ್ರಿ ಚರಣ್ ಸಿಂಗ್ ಜನಿಸಿದರು.

1926: ಭಾರತದ ಸನ್ಯಾಸಿ, ಸ್ವಾಮಿ ಶ್ರದ್ಧಾನಂದ ನಿಧನರಾದರು.

1936: ಭಾರತದ ಕ್ರಿಕೆಟ್ ಆಟಗಾರ ಸೂರ್ಯವೀರ್ ಸಿಂಗ್ ಜನಿಸಿದರು.

1943: ಫುಟ್ ಬಾಲ್ ಆಟಗಾರ ಇಂದರ್ ಸಿಂಗ್ ಜನಿಸಿದರು.

1968: ಬಾಳಿವುಡ್ ನಟ ಅರ್ಬಾಸ್ ಖಾನ್ ಜನಿಸಿದರು.

2004: ಭಾರತದ 9ನೇ ಪ್ರಧಾನ ಮಂತ್ರಿ ಪಿ.ವಿ.ನರಸಿಂಹ ರಾವ್ ನಿಧನರಾದರು.

2010: ಕೇರಳಾದ 7ನೇ ಮುಖ್ಯಮಂತ್ರಿಯಾಗಿದ್ದ ಕೆ.ಕರುಣಾಕರನ್ ನಿಧನರಾದರು.

2013: ಕನ್ನಡದ ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪ ನಿಧನರಾದರು.

 

Categories
e-ದಿನ

ಡಿಸೆಂಬರ್-22

 

ಪ್ರಮುಖ ಘಟನಾವಳಿಗಳು:

1851: ಭಾರತದ ಮೊದಲ ಸರಕು ರೈಲನ್ನು ರೂರ್ಕಿಯಿಂದ ಕಾರ್ಯಾಚರಣೆ ಪ್ರಾರಂಭಿಸಲಾಯಿತು.

1882: ಥಾಮಸ್ ಆಲ್ವಾ ಎಡಿಸನ್ ಕ್ರಿಸ್ಮಸ್ ಮರಕ್ಕೆ ಅಳವಡಿಸಲು ಸಾಲು ದೀಪವನ್ನು ಸೃಷ್ಟಿಸಿದರು.

1885: ಇಟೋ ಹಿರೋಭೂಮಿ ಜಪಾನಿನ ಮೊದಲ ಪ್ರಧಾನಿಯಾಗಿ ಆಯ್ಕೆಯಾದರು.

1886: ಅಮೇರಿಕಾದ ಮೊದಲ ರಾಷ್ಟ್ರೀಯ ಅಕೌಂಟೆಂಟುಗಳ ಸಮಾಜವು ರೂಪುಗೊಂಡಿತು.

1910: ಅಮೇರಿಕಾದ ಅಂಚೆ ಉಳಿತಾಯ ಅಂಚೆ ಚೀಟಿಗಳು ವಿತರಿಸಲಾಯಿತು.

1921: ಶಾಂತಿನಿಕೇತನ ಕಾಲೇಜ್ ಎಂದು ಕರೆಯಲ್ಪಡುವ ಇಂದಿನ ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಾಯಿತು.

1937: ನ್ಯೂಯಾರ್ಕಿನ ಲಿಂಕನ್ ಸುರಂಗ ಸಂಚಾರಕ್ಕೆ ತೆರೆಯಲಾಯಿತು.

1943: ಬೇಸ್ ಬಾಲ್ ತಯಾರಕರು ಬೇಸ್ ಬಾಲಿನ ಕೋರಿಗಾಗಿ ಸಿಂಥೆಟಿಕ್ ರಬ್ಬರನ್ನು ಬಳಸಲು ಅನುಮತಿ ಪಡೆದರು.

1998: ಪೇಟೆಂಟ್ ಬಿಲ್ಲುಗಳು ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಿತು.

ಪ್ರಮುಖ ಜನನ/ಮರಣ:

1666: ಹತ್ತನೇ ಸಿಖ್ ಗುರು ಮತ್ತು ಖಾಲ್ಸಾ ಸಂಸ್ಥಾಪಕ ಗುರು ಗೋವಿಂದ ಸಿಂಗ್ ಜನಿಸಿದರು.

1853: ಭಾರತೀಯ ಅತೀಂದ್ರಿಯ ಮತ್ತು ತತ್ವಜ್ಞಾನಿ ಶಾರದಾ ದೇವಿ ಜನಿಸಿದರು.

1887: ಭಾರತದ ಖ್ಯಾತ ಗಣಿತತಜ್ಞ ಶ್ರೀನಿವಾಸ ರಾಮಾನುಜಂ ಜನಿಸಿದರು.

1919: ಖ್ಯಾತ ಸಂಗೀತ ನಿರ್ದೇಶಕ ಮತ್ತು ಕಾರ್ನಾಟಿಕ್ ಸಂಗೀತಗಾರ ವಿ.ದಕ್ಷಿಣಾಮೂರ್ತಿ ಜನಿಸಿದರು.

1928: ಮಾಜಿ ಟೆನ್ನಿಸ್ ಆಟಗಾರ ನರೇಶ್ ಕುಮಾರ್ ಜನಿಸಿದರು.

1929: ಭಾರತ-ಪಾಕಿಸ್ತಾನದ ಕ್ರಿಕೆಟ್ ಆಟಗಾರ ವಾಜೀರ್ ಮೊಹಮ್ಮದ್ ಜನಿಸಿದರು.

1947: ಭಾರತದ ಕ್ರಿಕೆಟ್ ಆಟಗಾರ ದಿಲಿಪ್ ದೊಶಿ ಜನಿಸಿದರು.

1958: ಬಂಗಾಳಿ ಭಾರತೀಯ ಕ್ರಾಂತಿಕಾರಿ ಮತ್ತು ಅಂತರರಾಷ್ಟ್ರೀಯತಾವಾದಿ ವಿದ್ವಾಂಸ ತಾರಕ್ ನಾಥ್ ದಾಸ್ ನಿಧನರಾದರು.

2011: ಮಾಜಿ ಕ್ರಿಕೆಟ್ ಆಟಗಾರ ವಸಂತ್ ರಜನೆ ನಿಧನರಾದರು.

 

Categories
e-ದಿನ

ಡಿಸೆಂಬರ್-21

 

ಪ್ರಮುಖ ಘಟನಾವಳಿಗಳು:

1846: ರಾಬರ್ಟ್ ಲಿಸ್ಟನ್ ಅವರು ಲಂಡನ್ನಿನ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಅರಿವಳಿಕೆಯನ್ನು ಬಳಸಲಾಯಿತು.

1849: ಅಮೇರಿಕಾದ ಮೊದಲ ಸ್ಕೇಟಿಂಗ್ ಕ್ಲಬ್ ರೂಪುಗೊಂಡಿತು.

1898: ವಿಜ್ಞಾನಿಗಳಾದ ಪೈರಿ ಮತ್ತು ಮೇರಿ ಕ್ಯೂರಿ ರೇಡಿಯಂ ಅನ್ನು ಕಂಡುಹಿಡಿದರು.

1909: ಮೊದಲ ಕಿರಿಯ ಪ್ರೌಢ ಶಾಲೆಯನ್ನು ಸ್ಥಾಪಿಸಲಾಯಿತು.

1911: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವನ್ನು ಸ್ಥಾಪಿಸಲಾಯಿತು.

1929: ಮೊದಲ ಗುಂಪು ಆಸ್ಪತ್ರೆ ವಿಮೆ ಯೋಜನೆ ನೀಡಲಾಯಿತು.

1952: ಸೈಫುದ್ದಿನ್ ಕಿಚ್ಲು ರಷ್ಯಾದ ಲೆನಿನ್ ಶಾಂತಿ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ.

1972: ಎರಡು ದಶಕಗಳ ಶೀತಲ ಸಮರದ ನಂತರ ಪೂರ್ವ ಮತ್ತು ಪಶ್ಚಿಮ ಜರ್ಮನಿಯು ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿತು.

1995: ಬೆತ್ಲೆಹೆಮ್ ನಗರವು ಇಸ್ರೇಲಿನ ಪ್ಯಾಲೆಸ್ಟೈನ್ ನಿಯಂತ್ರಣಕ್ಕೆ ಬಂದಿತು.

1998: ಲೈಮ್ ರೋಗದ ಮೊದಲ ಲಸಿಕೆಯನ್ನು ಅಂಗೀಕರಿಸಲಾಯಿತು.

ಪ್ರಮುಖ ಜನನ/ಮರಣ:

1928: ಖ್ಯಾತ ಲೇಖಕ ಸದ್ಗುರು ಶಿವಾನಂದ ಮೂರ್ತಿ ಜನಿಸಿದರು.

1932: ಖ್ಯಾತ ಲೇಖಕ, ಕವಿ ಮತ್ತು ವಿಮರ್ಶಕ ಯು.ಆರ್.ಅನಂತಮೂರ್ತಿ ಜನಿಸಿದರು.

1959: ಭಾರತದ ಕ್ರಿಕೆಟ್ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಜನಿಸಿದರು.

1963: ಬಾಲಿವುಡಿನ ಖ್ಯಾತ ನಟ ಗೋವಿಂದ ಜನಿಸಿದರು.

1972: ಭಾರತದ ಪತ್ರಕರ್ತ ಮತ್ತು ರಾಜಕಾರಣಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಜನಿಸಿದರು.

2003: ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಜಿ.ವಿ.ಐಯ್ಯರ್ ನಿಧನರಾದರು.

2004: ಭಾರತೀಯ ಶರೀರಶಾಸ್ತ್ರಜ್ಞ ಮತ್ತು ಖ್ಯಾತ ನರವಿಜ್ಞಾನಿ ಅವ್ತುರ್ ಸಿಂಗ್ ಪೈಂತಲ್ ನಿಧನರಾದರು.

2007: ಸಾಮಾಜಿಕ ಕಾರ್ಯಕರ್ತೆ ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ತಾಯಿ ತೇಜಿ ಬಚ್ಚನ್ ನಿಧನರಾದರು.

2011: ಶ್ರೇಷ್ಠ ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಪಿ.ಕೆ.ಐಯ್ಯಂಗಾರ್ ನಿಧನರಾದರು.

 

Categories
e-ದಿನ

ಡಿಸೆಂಬರ್-20

 

ಪ್ರಮುಖ ಘಟನಾವಳಿಗಳು:

1661: ಇಂಗ್ಲೆಂಡಿನಲ್ಲಿ ಕಾರ್ಪೊರೇಷನ್ ಕಾಯಿದೆ ಜಾರಿಗೆ ತರಲಾಯಿತು.

1780: ಹಾಲ್ಯಾಂಡಿನ ಮೇಲೆ ಬ್ರಿಟನ್ ಯುದ್ಧ ಘೋಷಿಸಿತು.

1790: ಅಮೇರಿಕಾದ ಮೊದಲ ಯಶಸ್ವಿ ಹತ್ತಿ ಗಿರಣಿಯಲ್ಲಿ ನೂಲನ್ನು ಮಾಡಲಾಯಿತು.

1850: ಹವಾಯಿಯಲ್ಲಿ ಅಂಚೆ ಕಛೇರಿಯನ್ನು ಸ್ಥಾಪಿಸಲಾಯಿತು.

1919: ಕೆನೆಡಾದ ರಾಷ್ಟ್ರೀಯ ರೈಲ್ವೆಯನ್ನು ಸ್ಥಾಪಿಸಲಾಯಿತು.

1938: ವ್ಲಾಡಿಮರ್ ಜ್ವೋರಿಕಿನ್ ಬಿಂಬದರ್ಶಕ ಟಿವಿ ವ್ಯವಸ್ಥೆಗೆ ಪೇಟೆಂಟ್ ಪಡೆದರು.

1942: ಎರಡನೇ ವಿಶ್ವಯುದ್ಧದಲ್ಲಿ ಜಪಾನಿ ವಾಯು ಪಡೆಗಳು ಭಾರತದ ಕಲ್ಕತ್ತಾ ಮೇಲೆ ಬಾಂಬು ದಾಳಿ ನಡೆಸಿದರು.

2010: ಚೀನಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಟೆಲಿಸ್ಕೋಪಿಕ್ ಶಸ್ತ್ರಾಸ್ತ್ರಗಳನ್ನು ಹೊಂದಿದ ಮೊದಲ ಗೋಲಾಕಾರದ ರೋಬೋಟ್ ಅನ್ನು ಅಭಿವೃದ್ಧಿ ಪಡಿಸಿರುವುದಾಗಿ ಘೋಷಿಸಿತು.

2012: ಗುಜರಾತಿನಲ್ಲಿ ಸತತ ಮೂರನೇ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಜಯಶಾಲಿಯಾದರು.

ಪ್ರಮುಖ ಜನನ/ಮರಣ:

1909: ಪತ್ರಕರ್ತ ಮತ್ತು ರಾಜಕಾರಣಿ ವಕ್ಕೋಂ ಮಜೀದ್ ಜನಿಸಿದರು.

1915: ಭಾರತದ ವರ್ಣಚಿತ್ರ ಕಲಾವಿದರು ಮತ್ತು ಸಂಯೋಜಕರು ಉಪೇಂದ್ರ ಕಿಶೋರ್ ರೇ ನಿಧನರಾದರು.

1940: ಖ್ಯಾತ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟು ಯಾಮಿನಿ ಕೃಷ್ಣಮೂರ್ತಿ ಜನಿಸಿದರು.

1945: ಭಾರತದ ವಕೀಲರು ಮತ್ತು ಲೇಖಕ ಶಿವಕಾಂತ್ ತಿವಾರಿ ಜನಿಸಿದರು.

1970: ಬಾಲಿವುಡ್ ಚಿತ್ರರಂಗದ ನಟ, ನಿರ್ಮಾಪಕ ಸೋಹೇಲ್ ಖಾನ್ ಜನಿಸಿದರು.

1976: ತಮಿಳು ಮತ್ತು ಮಲಯಾಳಂ ಚಿತ್ರರಂಗದ ನಟ ಮತ್ತು ಗಾಯಕ ಯುಗೇಂದ್ರನ್ ಜನಿಸಿದರು.

1977: ಹಿಂದಿ ಮತ್ತು ಮರಾಠಿ ಚಿತ್ರರಂಗದ ನಟಿ ಗೌರಿ ಕಾರ್ನಿಕ್ ಜನಿಸಿದರು.

1987: 2008ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದ ಭಾರತದ ಮಾಡೆಲ್ ಮತ್ತು ನಟಿ ಪಾರ್ವತಿ ಒಮನಾಕುಟ್ಟನ್ ಜನಿಸಿದರು.

2009: ಮರಾಠಿ ಲೇಖಕ ಮತ್ತು ದಲಿತ ಕಾರ್ಯಕರ್ತ ಅರುಣ ಕೃಷ್ಣಾಜಿ ಕಾಂಬ್ಳಿ ನಿಧನರಾದರು.

2010: ಕಿರುತೆರೆ ಚಿತ್ರಗಳ ನಿರ್ದೇಶಕ ಬಾಬುಬಾಯಿ ಮಿಸ್ತ್ರಿ ನಿಧನರಾದರು.

 

Categories
e-ದಿನ

ಡಿಸೆಂಬರ್-19

 

ಪ್ರಮುಖ ಘಟನಾವಳಿಗಳು:

1854: ಬಾಗುವ ಸ್ಥರಗಳನ್ನು ಹೊಲಿಯಲು ಹೊಲಿಗೆ ಯಂತ್ರಕ್ಕೆ ಅಲೆನ್ ವಿಲ್ಸನ್ ಪೇಟೆಂಟ್ ಪಡೆದರು.

1903: ಮುಖ್ಯ ಕೇಬಲ್ ಗಳಿಗೆ ಪೂರಕವಾಗಿರುವ ಉಕ್ಕಿನ ಗೋಪುರಗಳನ್ನು ಹೊಂದಿ ಮೊದಲ ತೂಗು ಸೇತುವೆಯಾದ ದಿ ವಿಲಿಯಂಸ್ಬರ್ಗ್ ಸೇತುವೆಯನ್ನು ತೆರೆಯಲಾಯಿತು.

1927: ಮೂರು ಭಾರತೀಯ ಕ್ರಾಂತಿಕಾರಿಗಳಾದ ರಾಮಪ್ರಸಾದ್ ಬಿಸ್ಮಿಲ್ಲಾ, ರೋಷನ್ ಸಿಂಗ್, ಅಶ್ಫಾಖುಲ್ಲ ಖಾನ್ ಅವರನ್ನು ಬ್ರಿಟೀಷರು ಮರಣದಂಡನೆಗೆ ಗುರಿ ಮಾಡಿದರು.

1929: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಲಾಹೋರಿನ ಅಧಿವೇಶನದಲ್ಲಿ ಅಧ್ಯಕ್ಷರಾದ ಜವಹರಲಾಲ್ ನೆಹರು ಪೂರ್ಣ ಸ್ವರಾಜ್ ಘೋಷಿಸಿದರು.

1933: 22ನೇ ವೈಸರಾಯ್ ಮತ್ತು ಭಾರತದ ಗವರ್ನರ್ ಜೆನೆರಲ್ ಆಗಿದ್ದ ಲಾರ್ಡ್ ವಿಲ್ಲಿಂಗ್ಟನ್ ವಿಶಾಖಪಟ್ಟಣದ ಬಂದರನ್ನು ಉದ್ಘಾಟಿಸಿದರು.

1957: ಲಂಡನ್ ಮತ್ತು ಮಾಸ್ಕೋ ನಡುವಿನ ವಿಮಾನ ಸೇವೆಯನ್ನು ಉದ್ಘಾಟಿಸಲಾಯಿತು.

1961: ಭಾರತವು ಡಾಮನ್ ಮತ್ತು ಡಿಯುವನ್ನು ಭಾರತದ ಭಾಗವಾಗಿ ವಶಪಡಿಸಿಕೊಳ್ಳಲಾಯಿತು.

1961: ಪೋರ್ಚುಗೀಸ್ ನಿಯಂತ್ರಣದಲ್ಲಿದ್ದ ಗೋವಾ ಅನ್ನು ಭಾರತದ ಭಾಗ ಮಾಡಲಾಯಿತು. ಇದನ್ನು ಗೋವಾ ಸ್ವಾತಂತ್ರ ದಿನ ಎಂದು ಕರೆಯಲಾಯಿತು.

1978: ಇಂದಿರಾಗಾಂಧಿಯನ್ನು ಲೋಕಸಭೆಯ ಸದಸ್ಯತ್ವ ಅನೂರ್ಜಿತಗೊಳಿಸಲಾಯಿತು ಮತ್ತು ಸೆರೆಗೆ ಕಳುಹಿಸಲಾಯಿತು.

ಪ್ರಮುಖ ಜನನ/ಮರಣ:

1873: ಭಾರತೀಯ ವಿಜ್ಞಾನಿ ಮತ್ತು ಪ್ರಮುಖ ವೈದ್ಯರಾಗಿದ್ದ ಉಪೇಂದ್ರನಾಥ್ ಬ್ರಹ್ಮಾಚಾರಿ ಜನಿಸಿದರು.

1894: ಭಾರತೀಯ ಖ್ಯಾತ ಉದ್ಯಮಿ ಕಸ್ತೂರಿಬಾಯಿ ಲಾಲ್ ಬಾಯಿ ಜನಿಸಿದರು.

1919: ಬಾಲಿವುಡಿನ ಹಿರಿಯ ನಟ ಓಂ ಪ್ರಕಾಶ್ ಜನಿಸಿದರು.

1934: ಭಾರತದ 12ನೇ ರಾಷ್ಟ್ರಪತಿ ಮತ್ತು ಮೊದಲ ಮಹಿಳಾ ರಾಷ್ಟ್ರಪತಿ ಆಗಿದ್ದ ಪ್ರತಿಭಾ ಪಾಟಿಲ್ ಜನಿಸಿದರು.

1966: ಭಾರತದ ಕ್ರಿಕೆಟ್ ಆಟಗಾರ ರಾಜೇಶ್ ಚೌಹಾನ್ ಜನಿಸಿದರು.

1969: ಭಾರತದ ಕ್ರಿಕೆಟ್ ಆಟಗಾರ ನಯನ್ ಮೊಂಗಿಯಾ ಜನಿಸಿದರು.

1984: ಹಿಂದಿ ಕಿರುತೆರೆಯ ನಾಯಕಿ ಅಂಕಿತಾ ಲೊಖಂಡೆ ಜನಿಸಿದರು.

1999: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಬಾಲ್ ದಾಣಿ ನಿಧನರಾದರು.

2009: ಭಾರತೀಯ ಉದ್ಯಮಿ ಮತ್ತು ವಾಣಿಜ್ಯೋದ್ಯಮಿ ಗಿರಿದರಿಲಾಲ್ ಕೇಡಿಯಾ ನಿಧನರಾದರು.

2014: ಭಾರತದ ಪತ್ರಕರ್ತ ಮತ್ತು ನಿರ್ದೇಶಕ ಎಸ್.ಬಾಲಸುಬ್ರಮಣಿಯಂ ನಿಧನರಾದರು.

 

Categories
e-ದಿನ

ಡಿಸೆಂಬರ್-18

 

ಪ್ರಮುಖ ಘಟನಾವಳಿಗಳು:

1849: ದೂರದರ್ಶಕದ ಮೂಲಕ ಚಂದ್ರನ ಮೊದಲ ಛಾಯಾಚಿತ್ರವನ್ನು ವಿಲಿಯಂ ಬಾಂಡ್ ಪಡೆದುಕೊಂಡರು.

1862: ಮೊದಲ ಮೂಳೆ ಚಿಕಿತ್ಸಾ ಆಸ್ಪತ್ರೆಯನ್ನು ನ್ಯೂಯಾರ್ಕಿನಲ್ಲಿ ಸ್ಥಾಪಿಸಲಾಯಿತು.

1865: ಅಮೇರಿಕಾದಲ್ಲಿ ಮೊದಲ ಜಾನುವಾರು ಆಮದು ಕಾನೂನು ಜಾರಿಗೆ ತರಲಾಯಿತು.

1935: ಅಮೇರಿಕಾದಲ್ಲಿ ಮೊದಲ ಬಾರಿಗೆ 1 ಡಾಲರ್ ಬೆಳ್ಳಿ ಪ್ರಮಾಣಪತ್ರವನ್ನು ನೀಡಲಾಯಿತು.

1957: ಪೆನ್ಸಿಲ್ವೇನಿಯಾದಲ್ಲಿ ಶಿಪ್ಪಿಂಗ್ ಪೋರ್ಟಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ ಉದ್ಘಾಟಿಸಲಾಯಿತು. ಇದು ಪರಮಾಣು ಸೌಲಭ್ಯದ ಮೂಲಕ ವಿದ್ಯುತ್ ಉತ್ಪಾದಿಸಿದ ಮೊದಲ ಘಟಕ.

1961: ಗೋವಾ, ದಾಮನ್ ಮತ್ತು ಡಿಯುವನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಭಾರತ ಸೇನೆ ಆಪರೇಷನ್ “ವಿಜಯ್” ಕ್ರಮ ಕೈಗೊಂಡಿತು.

1969: ಬ್ರಿಟನ್ನಿನ ಸಂಸತ್ತು ಕೊಲೆಗೆ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿತು.

1970: ಇಟಲಿಯಲ್ಲಿ ವಿಚ್ಛೇಧನವನ್ನು ಕಾನೂನು ಬದ್ದಗೊಳಿಸಲಾಯಿತು.

1996: ಟೆಲಿವಿಷನ್ ಉದ್ಯಮದ ಕಾರ್ಯನಿರ್ವಾಹಕರು ರೇಟಿಂಗ್ ವ್ಯವಸ್ಥೆಯನ್ನು ಅಳವಡಸಿಕೊಳ್ಳಲು ಒಪ್ಪಿದರು.

ಪ್ರಮುಖ ಜನನ/ಮರಣ:

1645: ಮುಘಲ್ ಸಾಮ್ರಾಜ್ಯದ ರಾಜ ಶಹಜಹಾನ್ ಅವರ ಪತ್ನಿ ನೂರ್ ಜಹಾನ್ ನಿಧನರಾದರು.

1887: ಭಾರತದ, ನಟ, ಗಾಯಕ, ಚಿತ್ರಕಥೆಗಾರ ಬಿಕಾರಿ ಠಾಕುರ್ ಜನಿಸಿದರು.

1928: ಭಾರತದ ಕಲೀಫ ಮತ್ತು ಲೇಖಕ ಮಿರ್ಜಾ ತಹೀರ್ ಅಹಮದ್ ಜನಿಸಿದರು.

1955: ಭಾರತದ ಉದ್ಯಮಿ ವಿಜಯ ಮಲ್ಯ ಜನಿಸಿದರು.

1955: ಭಾರತೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಪಬ್ಲೋ ಬರ್ಥೋಲೋಮೊ ಜನಿಸಿದರು.

1973: ಭಾರತೀಯ ಮೂಲದ ಪಾಕಿಸ್ತಾನಿ ಧಾರ್ಮಿಕ ನಾಯಕ ಮತ್ತು ತತ್ವಜ್ಞಾನಿ ಅಲ್ಲಮ್ಮ ರಶೀದ್ ತುರಬಿ ನಿಧನರಾದರು.

1977: ಬಾಲಿವುಡಿನ ಮತ್ತು ಕಿರುತೆರೆಯ ನಾಯಕಿ ಶ್ರುತಿ ಸೇಥ್ ಜನಿಸಿದರು.

1982: ಭಾರತದ ಮಾಡೆಲ್ ನಮನ್ ಶಾ ಜನಿಸಿದರು.

2004: ಭಾರತೀಯ ಟೆಸ್ಟ್ ಕ್ರಿಕೆಟ್ ಆಟಗಾರ ವಿಜಯ್ ಹಜಾರೆ ನಿಧನರಾದರು.

 

Categories
e-ದಿನ

ಡಿಸೆಂಬರ್-17

 

ಪ್ರಮುಖ ಘಟನಾವಳಿಗಳು:

1791: ನ್ಯೂಯಾರ್ಕ್ ಸಂಚಾರ ನಿಯಂತ್ರಣ ಮೊದಲ ಬಾರಿಗೆ ಏಕಮುಖ ರಸ್ತೆಯನ್ನು ಸೃಷ್ಟಿಸಿತು.

1792: ಕ್ಯೂಬೆಕ್ ನಗರದ ಕೆಳಗಿನ ಕೆನೆಡಾದ ಮೊದಲ ಶಾಸನ ಸಭೆಯನ್ನು ತೆರೆಯಲಾಯಿತು.

1895: ಕಾಗದದ ಹುರಿ (ಮಾಸ್) ಮಾಡುವ ಯಂತ್ರವನ್ನು ಜಾರ್ಜ್ ಬ್ರೌನೆಲ್ ಪೇಟೆಂಟ್ ಪಡೆದರು.

1923: ಭಾರತದ ಎರಡನೇ ದೊಡ್ಡ ಪೇಂಟ್ ತಯಾರಕರಾದ ಬರ್ಜರ್ ಪೇಂಟ್ಸ್ ಇಂಡಿಯಾ ಲಿಮಿಟೆಡ್ ಕಲ್ಕತ್ತಾದಲ್ಲಿ ಸ್ಥಾಪಿಸಲಾಯಿತು.

1927: ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ರಾಜಗುರು ಬ್ರಿಟಿಷ್ ಸಹಾಯಕ ಪೋಲೀಸ್ ಅಧೀಕ್ಷಕರಾಗಿದ್ದ ಜಾನ್ ಸೌಂಡರ್ಸ್ ಅವರನ್ನು ಗುಂಡಿಕ್ಕಿ ಕೊಂದರು.

1927: ಭಾರತದ ಕ್ರಾಂತಿಕಾರಿ ರಾಜೇಂದ್ರ ಲಾಹಿರಿಯವರನ್ನು ಉತ್ತರ ಪ್ರದೇಶದ ಗೋಂಡಾ ಜೈಲಿನಲ್ಲಿ ನಿಯೋಜಿತ ದಿನಾಂಕ್ಕಿಂತ ಎರಡು ದಿನ ಮುಂಚಿತವಾಗಿಯೇ ಗಲ್ಲಿಗೇರಿಸಲಾಯಿತು.

1931: ಪ್ರೊ.ಪಿ.ಸಿ.ಮಹಲಾನೋಬಿಸ್ ಕಲ್ಕತ್ತಾದಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಸ್ಥಾಪಿಸಿದರು.

1947: ಬ್ರಿಟಿಷ್ ಕೈಗಾರಿಕಾ ಸಂಸ್ಥೆಯು ಡೆನ್ನಿಸ್ ಗ್ಯಾಬರ್ ತಮ್ಮ ಪ್ರಯೋಗಾಲಯದಲ್ಲಿ ಕಂಡು ಹಿಡಿದ ಪೂರ್ಣಲೇಖನ (ಹೋಲೋಗ್ರಾಫಿ)ಗೆ ಪೇಟೆಂಟ್ ಪಡೆದರು.

1965: ಅತ್ಯಂತ ದೊಡ್ಡ ಪತ್ರಿಕೆ ಭಾನುವಾರದ ನ್ಯೂಯಾರ್ಕ್ ಟೈಮ್ಸ್ ಒಟ್ಟು 946 ಪುಟಗಳು ಪ್ರಕಟಣೆ ಆಯಿತು.

1986: ಶ್ರೀಮತಿ ಡೇವಿನಾ ಥಾಂಪ್ಸನ್ ಮೊದಲ ಹೃದಯ, ಶ್ವಾಸಕೋಶ ಮತ್ತು ಯಕೃತ್ತಿನ ಶಸ್ತ್ರಚಿಕಿತ್ಸೆ ಮಾಡಿಕೊಂಡ ಮೊದಲ ಮಹಿಳೆ ಎಂದು ವೈದ್ಯಕೀಯ ಇತಿಹಾಸದ ನಿರ್ಮಿಸಿದರು.

ಪ್ರಮುಖ ಜನನ/ಮರಣ:

1556: ಭಾರತೀಯ-ಪಾಕಿಸ್ತಾನದ ಕವಿ ಅಬ್ದುಲ್ ರಹಿಂ ಖಾನ್ ಜನಿಸಿದರು.

1905: ಭಾರತದ ನಿವೃತ್ತ ಮುಖ್ಯನ್ಯಾಯಮೂರ್ತಿ ಹಾಗೂ 6ನೇ ಉಪರಾಷ್ಟ್ರಪತಿಯಾಗಿದ್ದ ಮೊಹಮ್ಮದ್ ಹಿದಾಯತ್ ಉಲ್ಲಾ ಜನಿಸಿದರು.

1910: ಭಾರತೀಯ-ಅಮೇರಿಕನ್ ಶಿಕ್ಷಕ ಮತ್ತು ಲೇಖಕ ಏಕ್ನಾಥ್ ಈಶ್ವರನ್ ಜನಿಸಿದರು.

1914: ಭಾರತದ ಕ್ರಿಕೆಟ್ ಆಟಗಾರ ಮುಶ್ತಾಖ್ ಅಲಿ ಜನಿಸಿದರು.

1927: ಭಾರತದ ಕ್ರಾಂತಿಕಾರಿ ರಾಜೇಂದ್ರ ಲಹಿರಿ ನಿಧನರಾದರು.

1957: ಕರ್ನಾಟಕದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜನಿಸಿದರು.

1972: ಹಿಂದಿ ಚಿತ್ರರಂಗದ ನಟ ಜಾನ್ ಅಬ್ರಹಾಮ್ ಜನಿಸಿದರು.

1978: ಬಾಲಿವುಡ್ ಖ್ಯಾತ ನಟ ರಿತೇಶ್ ದೇಶಮುಖ್ ಜನಿಸಿದರು.

1987: ಕನ್ನಡ ಚಿತ್ರರಂಗದ ನಟಿ ತೇಜಸ್ವಿನಿ ಪ್ರಕಾಶ್ ಜನಿಸಿದರು.

2008: ಕೇಂದ್ರ ಸಾರಿಗೆ ಸಚಿವರಾಗಿದ್ದ ವೇದಪ್ರಕಾಶ್ ಗೋಯಲ್ ಅವರು ನಿಧನರಾದರು.

 

Categories
e-ದಿನ

ಡಿಸೆಂಬರ್-16

 

ಪ್ರಮುಖ ಘಟನಾವಳಿಗಳು:

1862: ನೇಪಾಳದ ರಾಜಸತ್ತೆಯು ಸಂವಿಧಾನವನ್ನು ಅಂಗೀಕರಿಸಿತು.

1897: ಆಂತರಿಕ ದಹನಕಾರಿ ಇಂಜಿನ್ ಹೊಂದಿರುವ ಮೊದಲ ಜಲಾಂತರ್ಗಾಮಿಯನ್ನು ಪ್ರದರ್ಶಿಸಲಾಯಿತು.

1903: ತಾಜ್ ಮಹಾಲ್ ಪ್ಯಾಲೆಸ್ ಮತ್ತು ಟವರ್ ಹೋಟೆಲ್ ಅತಿಥಿಗಳಿಗೆ ಮೊದಲ ಬಾರಿಗೆ ತೆರೆಯಲಾಯಿತು.

1920: ಚೀನಾದಲ್ಲಿ ಭೂಕಂಪದಿಂದ ಸುಮಾರು 1 ಲಕ್ಷಕ್ಕು ಹೆಚ್ಚು ಜನ ಮೃತ ಪಟ್ಟರು.

1945: ಯುದ್ಧ ಅಪರಾಧಗಳ ವಿಚಾರಣೆ ಎದುರಿಸುವ ಬದಲು ಜಪಾನಿನ ಎರಡು ಬಾರಿ ಪ್ರಧಾನ ಮಂತ್ರಿಯಾದ ಫುಮಿಮಾರೊ ಕ್ಯಾನೋಯ್ ಆತ್ಮಹತ್ಯೆ ಮಾಡಿಕೊಂಡರು.

1960: ಅಮೇರಿಕಾದ ನ್ಯೂಯಾರ್ಕಿನಲ್ಲಿ ಎರಡು ವಿಮಾನಗಳ ಘರ್ಷಣೆಯಿಂದಾಗಿ 136 ಜನರು ಸತ್ತರು.

1971: ಭಾರತ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿತು.

1971: ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಹುಟ್ಟಿತು.

1972: ಬಾಂಗ್ಲಾದೇಶದ ಸಂವಿಧಾನವು ಜಾರಿಗೆ ಬಂದಿತು.

1985: ದೇಶದ ಮೊದಲ ವೇಗದ ಬ್ರೀಡರ್ ಪರಮಾಣು ರಿಯಾಕ್ಟರ್ ಕಲ್ಪಕಂನಲ್ಲಿ ಕಾರ್ಯ ಆರಂಭಿಸಲಾಯಿತು.

ಪ್ರಮುಖ ಜನನ/ಮರಣ:

1933: ಪ್ರಸಿದ್ಧ ಭರತನಾಟ್ಯ ನೃತ್ಯಗಾರ, ನೃತ್ಯ ನಿರ್ದೇಶಕ ಮತ್ತು ಗುರು ಅಡಿಯಾರ್ ಕೆ.ಲಕ್ಷ್ಮಣ್ ಜನಿಸಿದರು.

1949: ಭಾರತೀಯ ಸಿನಿಮಾದ ಕಲಾ ನಿರ್ದೇಶಕ ಮತ್ತು ನಿರ್ಮಾಪಕ ತೊಟ್ಟ ತರಣಿ ಜನಿಸಿದರು.

1952: ಪ್ರತ್ಯೇಕ ರಾಜ್ಯ (ಆಂಧ್ರಪ್ರದೇಶ) ಬೇಕು ಎಂದು ಉಪವಾಸ ಸತ್ಯಾಗ್ರಹ ಮಾಡಿದ ಪೊಟ್ಟಿ ಶ್ರೀರಾಮುಲು ನಿಧನರಾದರು.

1957: ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನಿಸಿದರು.

1971: ಪರಮವೀರಚಕ್ರ ಪುರಸ್ಕೃತ ಮಾಜಿ ಸೈನ್ಯದ ಅಧಿಕಾರಿ ಅರುಣ್ ಖೆತ್ರಪಾಲ್ ನಿಧನರಾದರು.

1977: ಭಾರತದ ಖ್ಯಾತ ಹಾಕಿ ಆಟಗಾರ ರೂಪ್ ಸಿಂಗ್ ನಿಧನರಾದರು.

1986:ಭಾರತೀಯ ಹಿನ್ನೆಲೆ ಗಾಯಕಿ ಸೂಫಿ ಗೀತೆಗಳಿಗೆ ಪ್ರಖ್ಯಾತಿ ಪಡೆದ ಹರ್ಷದೀಪ್ ಕೌರ್ ಜನಿಸಿದರು.

1993: ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನಿಸ್ ದಾಖಲೆಯ ಪ್ರಕಾರ ವಿಶ್ವದ ಅತ್ಯಂತ ಚಿಕ್ಕ ಮಹಿಳೆ ಜ್ಯೋತಿ ಆಮ್ಗೆ ಜನಿಸಿದರು.

 

Categories
e-ದಿನ

ಡಿಸೆಂಬರ್-15

ಪ್ರಮುಖ ಘಟನಾವಳಿಗಳು:

1593: ಕ್ರಾಂಕ್ಶಾಫ್ಟಿನ ಮೂಲಕ ನಡೆಯುವ ಗಾಳಿಯಂತ್ರಕ್ಕೆ ಹಾಲೆಂಡ್ ಪೇಟೆಂಟ್ ನೀಡಿತು.

1654: ಟುಸ್ಕಾನಿಯಲ್ಲಿ ದಿನನಿತ್ಯದ ಉಷ್ಣತೆಯನ್ನು ದಾಖಲಿಸಲು ಹವಮಾನ ಕಛೇರಿಯನ್ನು ಸ್ಥಾಪಿಸಲಾಯಿತು.

1791: ಅಮೇರಿಕಾದ ಮೊದಲ ಕಾನೂನು ಶಾಲೆಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು.

1792: ಫಿಲಾಡೆಲ್ಫಿಯಾದಲ್ಲಿ ಮೊದಲ ಜೀವವಿಮಾ ಪಾಲಿಸಿಯನ್ನು ನೀಡಲಾಯಿತು.

1854: ರಸ್ತೆ ಸ್ವಚ್ಛಗೊಳಿಸುವ ಯಂತ್ರವನ್ನು ಮೊದಲ ಬಾರಿಗೆ ಫಿಲಾಡೆಲ್ಫಿಯಾದಲ್ಲಿ ಬಳಸಲಾಯಿತು.

1877: ಥಾಮಸ್ ಆಲ್ವಾ ಎಡಿಸನ್ ಧ್ವನಿ ಲೇಖನ ಯಂತ್ರಕ್ಕೆ ಪೇಟೆಂಟ್ ಪಡೆದರು.

1939: ನೈಲಾನ್ ನೂಲುಗಳ ಮೊದಲ ವಾಣಿಜ್ಯ ತಯಾರಿಕೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1908: ಭಾರತದ ವಿದ್ವಾಂಸ ಆಧ್ಯಾತ್ಮಿಕ ಗುರು ಸ್ವಾಮಿ ರಂಗನಾಥನಂದ ಜನಿಸಿದರು.

1917: ಭಾರತೀಯ-ಪಾಕಿಸ್ತಾನಿ ಭಾಷಾಶಾಸ್ತ್ರಜ್ಞ ಮತ್ತು ಉಪನ್ಯಾಸಕ ಶಾನ್-ಉಲ್-ಹಖ್ ಹಖ್ಖಿ ಜನಿಸಿದರು.

1924: ಚಂಡೀಘಡದ ರಾಕ್ ಗಾರ್ಡನ್ ನಿರ್ಮಿಸಿದ ನೇಕ್ ಚಂದ್ ಜನಿಸಿದರು.

1933: ಭಾರತದ ನಿರ್ದೇಶಕ ಮತ್ತು ಚಿತ್ರಕಥೆಗಾರ ಬಾಪು ಜನಿಸಿದರು.

1950: ಸ್ವತಂತ್ರ ಭಾರತದ ಮೊದಲ ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಾಯ್ ಪಟೇಲ್ ನಿಧನರಾದರು.

1971: ಮೊದಲ ಭಾರತೀಯ ವೃತ್ತಿಪರ ಗಾಲ್ಫ್ ಆಟಗಾರ ಜೀವ್ ಮಿಲ್ಕಾ ಸಿಂಗ್ ಜನಿಸಿದರು.

1974: ಭಾರತೀಯ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ರಸೂಲನ್ ಬಾಯಿ ನಿಧನರಾದರು.

1976: ಭಾರತೀಯ ಫುಟ್ಬಾಲ್ ಆಟಗಾರ ಮತ್ತು ನಿರ್ವಾಹಕ ಬೈಚುಂಗ್ ಭುಟಿಯಾ ಜನಿಸಿದರು.

2013: ಖ್ಯಾತ ಗಾಯಕ ಸಂದೀಪ್ ಆಚಾರ್ಯ ನಿಧನರಾದರು.

 

Categories
e-ದಿನ

ಡಿಸೆಂಬರ್-14

 

ಪ್ರಮುಖ ಘಟನಾವಳಿಗಳು:

1656: ಪ್ಯಾರಿಸ್ಸಿನ ಎಂ.ಜ್ಯಾಕ್ವಿನ್ ತಯಾರಿಸಿದ ಕೃತಕ ಮುತ್ತುಗಳನ್ನು ಜಿಪ್ಸಮ್ ಉಂಡೆಗಳಿಂದ ಮತ್ತು ಮೀನುಗಳ ಚರ್ಮದಿಂದ ತಯಾರಿಸಲಾಯಿತು.

1751: ವಿಶ್ವದ ಮೊದಲ ಮಿಲಿಟರಿ ಅಕಾಡೆಮಿಯಾದ ಥೆರೆಸಿಯನ್ ಮಿಲಿಟರಿ ಅಕಾಡೆಮಿ ಅನ್ನು ಆಸ್ಟ್ರಿಯಾದಲ್ಲಿ ಸ್ಥಾಪಿಸಲಾಯಿತು.

1793: ಮೊದಲ ರಾಜ್ಯ ರಸ್ತೆಯಾದ ಫ್ರಾಂಕ್ ಫೋರ್ಟ್ ಅನ್ನು ಅಧಿಕೃತವಾಗಿ ತೆರೆಯಲಾಯಿತು.

1798: ಡೇವಿಡ್ ವಿಲ್ಕಿನ್ಸನ್ ನಟ್ ಮತ್ತು ಬೋಲ್ಟ್ ಯಂತ್ರವನ್ನು ಪೇಟೆಂಟ್ ಮಾಡಿದರು.

1901: ಮೊದಲ ಟೇಬಲ್ ಟೆನ್ನಿಸ್ ಪಂದ್ಯವನ್ನು ನಡೆಸಲಾಯಿತು.

1955: ನ್ಯೂಯಾರ್ಕಿನ ತಾಪ್ಪನ್ ಜೀ ಸೇತುವೆಯನ್ನು ಸಂಚಾರಕ್ಕಾಗಿ ತೆರೆಯಲಾಯಿತು.

1960: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ರೂಪುಗೊಂಡಿತು.

1967: ಟೆಸ್ಟ್ ಟ್ಯೂಬಿನಲ್ಲಿ ಡಿ.ಎನ್.ಎ ಅನ್ನು ಸೃಷ್ಟಿಸಲಾಯಿತು.

2004: ಮಿಲ್ಲೌ ಬಳಿ ವಿಶ್ವದ ಅತಿ ಎತ್ತರದ ಸೇತುವೆಯಾದ ಮಿಲ್ಲೌ ವಯಾಡಕ್ಟನ್ನು ಅಧಿಕೃತವಾಗಿ ತೆರೆಯಲಾಯಿತು.

ಪ್ರಮುಖ ಜನನ/ಮರಣ:

1918: ಖ್ಯಾತ ಯೋಗ ಶಿಕ್ಷಕ ಮತ್ತು ಯೋಗಪಟು ಬಿ.ಕೆ.ಎಸ್.ಐಯಂಗಾರ್ ಜನಿಸಿದರು.

1922: ಖ್ಯಾತ ಗಾಯಕ ಘಂಟಸಾಲಾ ಜನಿಸಿದರು.

1924: ಭಾರತೀಯ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ ರಾಜಕಪೂರ್ ಜನಿಸಿದರು.

1934: ಭಾರತೀಯ ಚಲನಚಿತ್ರಗಳ ನಿರ್ದೇಶಕ ಮತ್ತು ಚಿತ್ರಕಥೆಗಾರ ಶ್ಯಾಮ್ ಬೆನಗಲ್ ಜನಿಸಿದರು.

1946: ಭಾರತದ ಪ್ರಧಾನ ಮಂತ್ರಿ ಆಗಿದ್ದ ಸಂಜಯಗಾಂಧಿ ಜನಿಸಿದರು.

1953: ಭಾರತೀಯ ಟೆನ್ನಿಸ್ ಆಟಗಾರ ವಿಜಯ್ ಅಮೃತರಾಜ್ ಜನಿಸಿದರು.

1977: ಮರಾಠಿ ಕವಿ, ಗೀತರಚನೆಕಾರ, ಲೇಖಕ, ನಟ ಜಿ.ಡಿ.ಮದುಲ್ಕರ್ ನಿಧನರಾದರು.

2013: ಭಾರತದ ವರ್ಣಚಿತ್ರ ಕಲಾವಿದ ಸಿ.ಎನ್.ಕರುಣಾಕರನ್ ನಿಧನರಾದರು.

 

Categories
e-ದಿನ

ಡಿಸೆಂಬರ್-13

ಪ್ರಮುಖ ಘಟನಾವಳಿಗಳು:

1642: ಡಚ್ ನಾವಿಕ ಏಬಲ್ ತಾಸ್ಮಾನ್ ನ್ಯೂಜಿಲ್ಯಾಂಡ್ ದೇಶವನ್ನು ಕಂಡುಹಿಡಿದರು.

1809: ಅರಿವಳಿಕೆ ಇಲ್ಲದ ಮೊದಲ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

1816: ಜಾನ್ ಆಡಮ್ಸನ್ ಶುಷ್ಕ ಹೆಗು ನಿಲ್ಲುವ ಸ್ಥಳಕ್ಕೆ ಪೇಟೆಂಟ್ ಪಡೆದರು.

1883: ಒಂಟಾರಿಯೋ ಮತ್ತು ಮನಿಟೋಬದ ನಡುವಿನ ಗಡಿಯನ್ನು ಸ್ಥಾಪಿಸಲಾಯಿತು.

1884: ನಾಣ್ಯವನ್ನು ಬಳಸಿ ತೂಕ ನೋಡುವ ಯಂತ್ರಕ್ಕೆ ಪರ್ಸಿ ಏವರಿ ಪೇಟೆಂಟ್ ಪಡೆದರು.

1913: ಅಮೇರಿಕಾದಲ್ಲಿ ಫೆಡರಲ್ ರಿಸರ್ವ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.

1920: ಲೀಗ್ ಆಫ್ ನೇಷನ್ಸ್ ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಸ್ಥಾಪಿಸಿತು.

1928: ಟೈ ಮೇಲೆ ಕ್ಲಿಪ್ ಅನ್ನು ವಿನ್ಯಾಸಗೊಳಿಸಲಾಯಿತು.

1983: ಬ್ರಿಟಿಷ್ ವಿಮಾನ ಸಂಸ್ಥೆಯಾದ ಬ್ರಿಟಿಷ್ ಏರ್ವೇಸ್ ಅನ್ನು ಸ್ಥಾಪಿಸಲಾಯಿತು.

2001: ಭಾರತೀಯ ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ಕಾರಣ 12 ಜನ ಮೃತಪಟ್ಟರು.

ಪ್ರಮುಖ ಜನನ/ಮರಣ:

1940: ಭಾರತದ ಅರ್ಥಶಾಸ್ತ್ರಜ್ಞ ಸಂಜಯ್ ಲಾಲ್ ಜನಿಸಿದರು.

1952: ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟಿ ಲಕ್ಷ್ಮಿ ಜನಿಸಿದರು.

1954: ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಹರ್ಷ್ ವರ್ಧನ್ ಜನಿಸಿದರು.

1955: ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕರ್ ಜನಿಸಿದರು.

1960: ತೆಲುಗು ಚಿತ್ರರಂಗದ ಖ್ಯಾತ ನಟ ವೆಂಕಟೇಶ್ ಜನಿಸಿದರು.

1963: ಕೇಂದ್ರ ಸರ್ಕಾರದ ರೈಲ್ವೆ ಮತ್ತು ಜವಳಿ ಸಚಿವರಾಗಿದ್ದ ಬಸನಗೌಡ ಪಾಟಿಲ್ ಜನಿಸಿದರು.

1969: ಆರ್.ಬಿ.ಐಯ 4ನೇ ಗವರ್ನರ್ ಆಗಿದ್ದ ಬೆನಗಲ್ ರಾಮರಾವ್ ನಿಧನರಾದರು.

1981: ಭಾರತದ ಕ್ರಿಕೆಟ್ ಆಟಗಾರ ಅಜಯ್ ರಾತ್ರ ಜನಿಸಿದರು.

1986: ಭಾರತೀಯ ಸಮಾನಾಂತರ ಚಿತ್ರಗಳಲ್ಲಿ ಪ್ರಭಲ ಮಹಿಳಾ ಪಾತ್ರಗಳಲ್ಲಿ ನಟಿಸುತ್ತಿದ್ದ ನಟಿ ಸ್ಮಿತಾ ಪಾಟಿಲ್ ನಿಧನರಾದರು.

 

Categories
e-ದಿನ

ಡಿಸೆಂಬರ್-12

 

ಪ್ರಮುಖ ಘಟನಾವಳಿಗಳು:

1800: ವಾಷಿಂಗ್ಟನ್ ಡಿ.ಸಿ. ಅಮೇರಿಕಾದ ಸಂಯುಕ್ತ ಸಂಸ್ಥಾನದ ರಾಜಧಾನಿಯಾಗಿ ಸ್ಥಾಪಿಸಲಾಯಿತು.

1858: ಮೊದಲ ಕೆನೆಡಾದ ನಾಣ್ಯಗಳನ್ನು ವಿತರಿಸಲಾಯಿತು.

1871: ಜೂಲ್ಸ್ ಜಾನ್ಸೆನ್ ಸೌರ ಕರೋನಾ ಸ್ಪೆಕ್ಟ್ರಮ್ಮಿನಲ್ಲಿ ಕಪ್ಪು ರೇಖೆಗಳನ್ನು ಕಂಡು ಹಿಡಿದರು.

1911: ದೆಹೆಲಿಯು ಕಲ್ಕತ್ತಾವನ್ನು ಭಾರತದ ರಾಜಧಾನಿಯಾಗಿ ಬದಲಿಸಲಾಯಿತು.

1911: ಬ್ರಿಟನ್ನಿನ ರಾಜ ಜಾರ್ಜ್-V ಮತ್ತು ಟೆಕ್ಕಿನ ಮೇರಿಯವರನ್ನು ಭಾರತದ ಚಕ್ರವರ್ತಿ ಮತ್ತು ಸಾಮ್ರಾಜ್ಞಿಯಾಗಿ ಘೋಷಣೆ ಮಾಡಲಾಯಿತು.

1941: ಎರಡನೇ ವಿಶ್ವಯುದ್ಧದಲ್ಲಿ ಭಾರತವು ಜಪಾನಿನ ಮೇಲೆ ಯುದ್ಧ ಘೋಷಿಸಿತು.

1946: “ಟೈಡ್” ಮಾರ್ಜಕವನ್ನು ಪರಿಚಯಿಸಲಾಯಿತು.

1964: ಕೆನ್ಯಾ ಗಣರಾಜ್ಯವಾಯಿತು.

1980: ಅಮೇರಿಕಾದ ಕೃತಿಸ್ವಾಮ್ಯ ಕಾನೂನು ಕಂಪ್ಯೂಟರ್ ಪ್ರೋಗ್ರಾಂಗಳನ್ನು ಸೇರಿಸಲು ತಿದ್ದುಪಡಿ ಮಾಡಲಾಯಿತು.

1991: ರಷ್ಯಾದ ಒಕ್ಕೂಟವು ಯು.ಎಸ್.ಎಸ್.ಆರ್ ನಿಂದ ಸ್ವತಂತ್ರವಾಯಿತು.

ಪ್ರಮುಖ ಜನನ/ಮರಣ:

 

1925: ಭಾರತದ ಕ್ರಿಕೆಟ್ ಆಟಗಾರ ದತ್ತು ಪಡ್ಕರ್ ಜನಿಸಿದರು

1940: ಭಾರತದ ಕೃಷಿ ಮಂತ್ರಿಯಾಗಿದ್ದ ಶರದ್ ಪವಾರ್ ಜನಿಸಿದರು.

1949: ಮಹಾರಾಷ್ಟ್ರದ 3ನೇ ಉಪ ಮುಖ್ಯಮಂತ್ರಿ ಆಗಿದ್ದ ಗೋಪಿನಾಥ್ ಮುಂಡೆ ಜನಿಸಿದರು.

1950: ಭಾರತೀಯ ನಟ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಜನಿಸಿದರು.

1954: ಭಾರತದ ಖ್ಯಾತ ಪೋಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಜನಿಸಿದರು.

1964: ಕವಿ ಮತ್ತು ಚಿತ್ರಕಥೆಗಾರ ಮೈಥಿಲಿ ಶರಣ್ ಗುಪ್ತ ನಿಧನರಾದರು.

1981: ಖ್ಯಾತ ಭಾರತದ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಜನಿಸಿದರು.

2005: ಭಾರತದ ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರ ರಮಾನಂದ್ ಸಾಗರ್ ನಿಧನರಾದರು.

2012: ಉತ್ತರಾಖಂಡದ ಮೊದಲ ಮುಖ್ಯಮಂತ್ರಿ ನಿತ್ಯಾನಂದ ಸ್ವಾಮಿ ನಿಧನರಾದರು.

2015: ಭಾರತದ ರೈತ ಮತ್ತು ರಾಜಕಾರಣಿ ಶರದ್ ಅನಂತರಾವ್ ಜೋಷಿ ನಿಧನರಾದರು.

 

Categories
e-ದಿನ

ಡಿಸೆಂಬರ್-11

 

ಪ್ರಮುಖ ಘಟನಾವಳಿಗಳು:

1844: ನೈಟ್ರಸ್ ಆಕ್ಸೈಡನ್ನು ಮೊದಲ ಬಾರಿಗೆ ಹಲ್ಲುಗಳ ಬಳಕೆಗೆ ಬಳಸಲಾಯಿತು.

1907: ನ್ಯೂಜಿಲ್ಯಾಂಡ್ ಸಂಸತ್ತಿನ ಕಟ್ಟಡವು ಬೆಂಕಿಯ ಅನಾಹುತದಿಂದ ಸಂಪೂರ್ಣವಾಗಿ ನಾಶವಾಯಿತು.

1909: ಮ್ಯಾಡಿಸನ್ ಚೌಕದಲ್ಲಿ ಚಲಿಸುವ ಬಣ್ಣದ ಚಿತ್ರಗಳ ಪ್ರದರ್ಶನ ಮಾಡಲಾಯಿತು.

1913: ಲವ್ರೆ ವಸ್ತು ಸಂಗ್ರಹಾಲಯದಿಂದ ಕಳುವಾದ “ಮೋನಾಲಿಸಾ” ಎರಡು ವರ್ಷಗಳ ನಂತರ ಪತ್ತೆ ಮಾಡಲಾಯಿತು.

1946: ಯುನೈಟೆಡ್ ನೇಷನ್ ಜೆನೆರಲ್ ಅಸ್ಸೆಂಬ್ಲಿಯು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತುನಿಧಿ (ಯುನಿಸೆಫ್)ಸ್ಥಾಪಿಸಿತು

1969: ಲಿಬಿಯಾ ಸಂವಿಧಾನವನ್ನು ಅಳವಡಿಸಿತು.

1971: ಸಂಯುಕ್ತ ಸಂಸ್ಥಾನದ ಲಿಬರಿಟೇರಿಯನ್ ಪಕ್ಷ ರಚಿಸಲಾಯಿತು.

2001: ಚೀನಾ ವಿಶ್ವ ವಾಣಿಜ್ಯ ಸಂಘಟನೆಗೆ ಸೇರಿತು.

2008: ಭಾರತದ ಅಸ್ಸಾಂ ರಾಜ್ಯದಲ್ಲಿ ಹಕ್ಕಿ ಜ್ವರ ಸಂಭವಿಸಿದೆ ಎಂದು ಭಾರತೀಯ ಅಧಿಕಾರಿಗಳು ವರದಿ ಮಾಡಿದರು.

2011: ಭಾರತದಲ್ಲಿ ಭ್ರಷ್ಟಾಚಾರದ ಸಂಸ್ಕೃತಿಯನ್ನು ಅಂತ್ಯಗೊಳಿಸಲು ಅಣ್ಣಾ ಹಜಾರೆಯವರು ಏಳು ಗಂಟೆಗಳ ಉಪವಾಸ ಸತ್ಯಾಗ್ರಹವನ್ನು ನಡೆಸಿದರು.

ಪ್ರಮುಖ ಜನನ/ಮರಣ:

1882: ಭಾರತದ ಪತ್ರಕರ್ತ ಮತ್ತು ಕವಿ ಸುಬ್ರಮಣ್ಯ ಭಾರತಿ ಜನಿಸಿದರು.

1922: ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ದಿಲೀಪ್ ಕುಮಾರ್ ಜನಿಸಿದರು.

1929: ಭಾರತದ ಕ್ರಿಕೆಟ್ ಆಟಗಾರ ಸುಭಾಷ್ ಗುಪ್ತ ಜನಿಸಿದರು.

1931: ಭಾರತೀಯ ಗುರು ಮತ್ತು ಶಿಕ್ಷಕ ರಜ್ನೀಷ್ ಜನಿಸಿದರು.

1935: ಭಾರತದ 13ನೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜನಿಸಿದರು.

1969: ಭಾರತದ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಜನಿಸಿದರು.

1987: ಭಾರತದ ಲೇಖಕ ಮತ್ತು ಶಿಕ್ಷಣ ತಜ್ಞ ಜಿ.ಎ.ಕುಲಕರ್ಣಿ ನಿಧನರಾದರು.

2004: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ನಿಧನರಾದರು.

2013: ಭಾರತದ ತತ್ವಜ್ಞಾನಿ ಮತ್ತು ವಿದ್ವಾಂಸ ಶೇಖ್ ಮುಸ್ಸಾ ಶರೀಫಿ ನಿಧನರಾದರು.

2015: ಭಾರತೀಯ ವರ್ಣಚಿತ್ರಗಾರ್ತಿ, ಶಿಲ್ಪಿ ಹೇಮ ಉಪಾಧ್ಯಾಯ ನಿಧನರಾದರು.

 

Categories
e-ದಿನ

ಡಿಸೆಂಬರ್-10

 

ಪ್ರಮುಖ ಘಟನಾವಳಿಗಳು:

1799: ಫ್ರಾನ್ಸ್ ದೇಶದಲ್ಲಿ ಮೆಟ್ರಿಕ್ (ಅಳತೆ)ಯ ವ್ಯವಸ್ಥೆಯನ್ನು ಅಳವಡಿಸಲಾಯಿತು.

1817: ಅಮೇರಿಕಾದ 20ನೇ ರಾಜ್ಯವಾಗಿ ಮಿಸ್ಸಿಸಿಪ್ಪಿಯನ್ನು ಸೇರಿಸಿಕೊಳ್ಳಲಾಯಿತು.

1917: ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗೆ ನೋಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1947: ರಷ್ಯಾ ಮತ್ತು ಜೆಕಸ್ಲೋವಾಕಿಯಾ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕಿದರು.

1948: ಯುನೈಟೆಡ್ ನೇಷನ್ ಜೆನರಲ್ ಅಸ್ಸೆಂಬ್ಲಿಯು ಜಗತ್ತಿನ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯನ್ನು ಅಳವಡಿಸಿಕೊಂಡಿತು.

1984: ಸೌರ ಮಂಡಲದ ಆಚೆ ಇರುವ ಗ್ರಹವನ್ನು ಮೊದಲ ಬಾರಿಗೆ ಪತ್ತೆ ಮಾಡಲಾಯಿತು.

1990: ಹೈದರಾಬಾದಿನಲ್ಲಿ ಹಿಂದೂ-ಮುಸ್ಲಿಮ್ಮರ ನಡುವೆ ಗಲಭೆ ನಡೆದ ಕಾರಣ 140 ಜನ ಮೃತ ಪಟ್ಟರು.

2013: ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಜೆನೆರಲ್ ಮೋಟಾರ್ಸ್ ಸಂಸ್ಥೆಯ ಮೊದಲ ಮಹಿಳಾ ಸಿ.ಇ.ಓ ಆಗಿ ಮೇರಿ ಬ್ಯಾರ್ರಾ ಅವರು ಆಯ್ಕೆ ಆದರು.

2013: ಉರುಗ್ವೆ ಗಾಂಜಾದ ಬೆಳವಣಿಗೆ, ಮಾರಾಟ ಮತ್ತು ಬಳಕೆಗೆ ಕಾನೂನು ಬದ್ಧಗೊಳಿಸಿದ ಮೊದಲ ದೇಶವಾಯಿತು.

2015: ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸರೋಗೇಟ್ ನಾಯಿ ಇಂದ ಯಶಸ್ವಿಯಾಗಿ ಜನಿಸಿದ ವಿಶ್ವದ ಮೊದಲ ಐ.ವಿ.ಎಫ್ ನಾಯಿ ಎಂದು ಘೊಷಿಸಲಾಯಿತು.

ಪ್ರಮುಖ ಜನನ/ಮರಣ:

1878: ಭಾರತದ ಕೊನೆಯ ಗವರ್ನರ್ ಜೆನೆರಲ್ ಮತ್ತು ಭಾರತದ ಮೊದಲ ರಾಜಕೀಯ ಪಕ್ಷವಾದ ಸ್ವಾತಂತ್ರ ಪಕ್ಷದ ಸಂಸ್ಥಾಪಕ ಸಿ.ರಾಜಗೋಪಾಲಚಾರಿ ಜನಿಸಿದರು.

1928: ಒರಿಸ್ಸಾದ ಗವರ್ನರ್ ಆಗಿದ್ದ ಮುರಳಿಧರ್ ಚಂದ್ರಕಾಂತ್ ಭಂಡಾರೆ ಜನಿಸಿದರು.

1935: ಮಲಯಾಳಂ ರಂಗಭೂಮಿ ಮತ್ತು ಚಿತ್ರರಂಗದ ನಟ ತಿಲಕನ್ ಜನಿಸಿದರು.

1948: ಭಾರತದ ಶಿಲ್ಪಿ ಜಸುಬೆನ್ ಶಿಲ್ಪಿ ಜನಿಸಿದರು.

1953: ಆಭರತದ ವಿದ್ವಾಂಸ ಮತ್ತು ಅನುವಾದಕ ಅಬ್ದುಲ್ಲಾ ಯೂಸೆಫ್ ಅಲಿ ನಿಧನರಾದರು.

1957: ಭಾರತೀಯ ಮೂಲದ ಅಮೇರಿಕಾದ ಗುರು ಮತ್ತು ಶಿಕ್ಷಣ ತಜ್ಞ ಪ್ರೇಮ್ ರಾವತ್ ಜನಿಸಿದರು.

1963: ಭಾರತದ ಇತಿಹಾಸಕಾರ ಮತ್ತು ರಾಯಭಾರಿ ಕೆ.ಎಂ.ಪಣ್ಣಿಕರ್ ನಿಧನರಾದರು.

2001: ಭಾರತದ ಬಾಲಿವುಡ್ ಚಿತ್ರರಂಗದ ನಟ, ಗಾಯಕ, ನಿರ್ಮಾಪಕ ಅಶೋಕ್ ಕುಮಾರ್ ನಿಧನರಾದರು

2009: ಸ್ವತಂತ್ರ ಪೂರ್ವದ ಅಗ್ರಗಣ್ಯ ಭಾರತೀಯ ಬರಹಗಾರರು ಮತ್ತು ವಿಮರ್ಶಕರು ಆದ ದಿಲಿಪ್ ಚಿತ್ರೆ ನಿಧನರಾದರು.

2013: ಮೈಸೂರು ಸಂಸ್ಥಾನದ ರಾಜ ಮನೆತನದ ಒಡೆಯರ್ ಆದ ಶ್ರೀಕಂಠದತ್ತ ಒಡೆಯರ್ ನಿಧನರಾದರು.

 

Categories
e-ದಿನ

ಡಿಸೆಂಬರ್-9

 

ಪ್ರಮುಖ ಘಟನಾವಳಿಗಳು:

1783: ಲಂಡನ್ನಿನ ನ್ಯೂಗೇಟ್ ಜೈಲಿನಲ್ಲಿ ಮೊದಲ ಮರಣ ದಂಡನೆಯನ್ನು ಮಾಡಲಾಯಿತು.

1868: ಲಂಡನ್ನಿನಲ್ಲಿ ಮೊದಲ ಸಂಚಾರಿ ದೀಪಗಳನ್ನು ರಸ್ತೆಯ ಮೇಲೆ ಅಳವಡಿಸಲಾಯಿತು.

1879: ಥಾಮಸ್ ಎಡಿಸನ್ ಅವರು ಎಡಿಸನ್ ಓರ್ ಮಿಲ್ಲಿಂಗ್ ಸಂಸ್ಥೆಯನ್ನು ಆಯೋಜಿಸಿದರು.

1884: ಲಿವಂಟ್ ರಿಚರ್ಡ್ಸನ್ ಬಾಲ್-ಬೇರಿಂಗ್ ಸ್ಕೇಟ್ಸ್ ಗೆ ಪೇಟೆಂಟ್ ಪಡೆದರು.

1905: ಫ್ರೆಂಚ್ ರಾಷ್ಟ್ರೀಯ ಅಸ್ಸಂಬ್ಲಿ ಚರ್ಚು ಮತ್ತು ರಾಜ್ಯವನ್ನು ಪ್ರತ್ಯೇಕ ಮಾಡಲು ಮತ ಚಲಾಯಿಸಲಾಯಿತು.

1907: ವಿಲ್ಮಿಂಗ್ಟನ್ ಅಂಚೆ ಕಛೇರಿಯಲ್ಲಿ ಮೊದಲ ಕ್ರಿಸ್ಟ್ ಮಸ್ ಮುದ್ರೆಯನ್ನು ಮಾರಾಟ ಮಾಡಲಾಯಿತು.

1946: ಭಾರತದ ಸಂವಿಧಾನಿಕ ಅಸ್ಸೆಂಬ್ಲಿಯು ಭಾರತದ ಸಂವಿಧಾನವನ್ನು ಬರೆಯಲು ಮೊದಲ ಬಾರಿಗೆ ಭೇಟಿ ಮಾಡಿತು.

1953: ಜೆನರಲ್ ಎಲೆಕ್ಟ್ರಿಕಲ್ ಸಂಸ್ಥೆಯು ಎಲ್ಲಾ ಕಮ್ಮ್ಯುನಿಸ್ಟ್ ನೌಕರರನ್ನು ತೆಗೆದು ಹಾಕುವುದಾಗಿ ಘೋಷಿಸಿತು.

1992: ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನ ತಮ್ಮ ವಿಚ್ಛೇದನವನ್ನು ಘೋಷಿಸಿದರು.

2004: ಸಲಿಂಗಕಾಮಿ ಮದುವೆ ಸಂವಿಧಾನಿಕ ಎಂದು ಕೆನಡಾದ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿತು.

ಪ್ರಮುಖ ಜನನ/ಮರಣ:

1870: ಭಾರತೀಯ ವೈದ್ಯ ಇದಾ ಎಸ್ ಸ್ಕುಡ್ಡರ್ ಜನಿಸಿದರು.

1881: ಭೌದ್ಧ ಧರ್ಮದ ಮಹಾನ್ ವಿದ್ವಾಂಸ ಮತ್ತು ಬ್ರಹ್ಮ ಸಮಾಜದ ಬೋಧಕ ಅಘೋರನಾಥ್ ಗುಪ್ತ ನಿಧನರಾದರು.

1918: ಮೂರು ಬಾರಿ ಕೇರಳಾದ ಮುಖ್ಯಮಂತ್ರಿ ಆಗಿದ್ದ ಇ.ಕೆ.ನಾಯರ್ ಜನಿಸಿದರು.

1919: ಭಾರತದ ಗಾಯಕ ಮತ್ತು ಗೀತ ರಚನೆಕಾರ ವಿ.ದಕ್ಷಿಣಾಮೂರ್ತಿ ಜನಿಸಿದರು.

1932: ಸಮೃದ್ಧ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ರೊಕೆಯಾ ಶೆಖಾವತ್ ಹುಸ್ಸೇನ್ ನಿಧನರಾದರು.

1945: ಬಾಲಿವುಡ್ ನಟ, ರಾಜಕಾರಣಿ ಶತ್ರುಜ್ಞ ಸಿನ್ಹಾ ಜನಿಸಿದರು.

1946: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮತ್ತು ರಾಜೀವ್ ಗಾಂಧಿಯವರ ಪತ್ನಿ ಸೋನಿಯಾಗಾಂಧಿ ಅವರು ಜನಿಸಿದರು.

1975: ಭಾರತದ ಖ್ಯಾತ ಮಾಡೆಲ್ ಮತ್ತು ನಟ ಡಿನೋ ಮೋರಿಯಾ ಜನಿಸಿದರು.

1981: ಬಾಲಿವುಡ್ ನಟಿ ದಿಯಾ ಮಿರ್ಜಾ ಜನಿಸಿದರು.

1997: ಬರಹಗಾರ, ಸಾಮಾಜಿಕ ಕಾರ್ಯಕರ್ತ, ಪರಿಸರವಾದಿ, ಯಕ್ಷಗಾನ ಕಲಾವಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೆ.ಶಿವರಾಮ ಕಾರಂತ ನಿಧನರಾದರು.

 

Categories
e-ದಿನ

ಡಿಸೆಂಬರ್-8

 

ಪ್ರಮುಖ ಘಟನಾವಳಿಗಳು:

1609: ಯೂರೋಪಿನ ಎರಡನೇ ಸಾರ್ವಜನಿಕ ಗ್ರಂಥಾಲಯವಾದ ಬಿಬ್ಲಿಯೋಟೆಕಾ ಅಂಬ್ರೋಸಿಯಾನಾ ತನ್ನ ಚಟುವಟಿಕೆಯನ್ನು ಕಾರ್ಯಾರಂಭ ಮಾಡಿತು.

1792: ಅಮೇರಿಕಾದಲ್ಲಿ ಹೆನ್ರಿ ಲಾರೆನ್ಸ್ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಇದು ಅಮೇರಿಕಾದ ಮೊದಲ ಶವದಹನ ಕ್ರಿಯೆಯಾಯಿತು.

1886: 26 ಕ್ರಾಫ್ಟ್ ಒಕ್ಕೂಟಗಳು ರಚಿಸಿದ ಅಮೇರಿಕನ್ ಫೆಡರೇಷನ್ ಆಫ್ ಲೇಬರ್ (ಎ.ಎಫ್.ಎಲ್) ಸ್ಥಾಪಿಸಲಾಯಿತು.

1909: ಬರ್ಡ್ ಬ್ಯಾಂಡಿಂಗ್ ಸೊಸೈಟಿಯನ್ನು ಸ್ಥಾಪಿಸಲಾಯಿತು.

1931: ಕೊಯಾಕ್ಸಿಲ್ ಕೇಬಲ್ಲನ್ನು ಪೇಟೆಂಟ್ ಮಾಡಲಾಯಿತು.

1971: ಪಶ್ಚಿಮ ಪಾಕಿಸ್ತಾನದ ಬಂದರು ನಗರ ಕರಾಚಿಯ ಮೇಲೆ ಭಾರತದ ನೌಕಾ ಪಡೆಗಳು ದಾಳಿ ನಡೆಸಿದವು.

1992: ಗುರುಗ್ರಹಕ್ಕೆ ಗೆಲಿಲಿಯೋ ಹತ್ತಿರದ ಮಾರ್ಗ (303 ಕಿ.ಮೀ).

2010: ಹಿಮದಿಂದಾಗಿ ಪ್ಯಾರಿಸಿನ ಐಫಿಲ್ ಗೋಪುರವನ್ನು ಮುಚ್ಚಲಾಯಿತು.

2013: ಚೀನಾ ತನ್ನ ವಾಯು ವಲಯವನ್ನು ವಿಸ್ತರಿಸಿದ ನಂತರ, ದಕ್ಷಿಣ ಕೊರಿಯಾ ತನ್ನ ವಾಯು ರಕ್ಷಣಾ ವಲಯವನ್ನು ವಿಸ್ತರಿಸಿದ ಕಾರಣ ಈ ಪ್ರದೇಶಗಳಲ್ಲಿ ಉದ್ವಿಜ್ಞತೆ ಹೆಚ್ಚಾಯಿತು.

ಪ್ರಮುಖ ಜನನ/ಮರಣ:

1721: ಮರಾಠಾ ಸಂಸ್ಥಾನದ ರಾಜ ನಾನಾಸಾಹೆಬ್ ಪೇಶ್ವಾ ಜನಿಸಿದರು.

1900: ವಿಶ್ವಪ್ರಸಿದ್ಧ ನೃತ್ಯಗಾರ ಮತ್ತು ನೃತ್ಯ ನಿರ್ದೇಶಕ ಉದಯ್ ಶಂಕರ್ ಜನಿಸಿದರು.

1927: ಪಂಜಾಬಿನ ಮುಖ್ಯ ಮಂತ್ರಿ ಆಗಿದ್ದ ಪ್ರಕಾಶ್ ಸಿಂಗ್ ಬಾದಲ್ ಜನಿಸಿದರು.

1929: ಭಾರತ ಮೂಲದ ಬ್ರಿಟಿಷ್ ಹಾಸ್ಯ ಜಾದೂಗಾರ ಅಲಿ ಬಾಂಗೋ ಜನಿಸಿದರು.

1935: ಭಾರತದ ಅತ್ಯಂತ ಜನಪ್ರಿಯ ಮತ್ತು ಬಹುಮುಖ ನಟರಲ್ಲಿ ಒಬ್ಬರಾದ ಧರ್ಮೇಂದ್ರ ಜನಿಸಿದರು.

1946: ಹಿಂದಿ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಟ್ಯಾಗೋರ್ ಜನಿಸಿದರು.

1947: ಭಾರತದ ರಾಜಕಾರಣಿ ಮತ್ತು ರಾಷ್ಟ್ರೀಯತಾವಾದಿ ಭಾಯ್ ಪರಮಾನಂದ್ ನಿಧನರಾದರು.

1957: ಅಮೇರಿಕ-ಭಾರತ ಗಿಟಾರ್ ವಾದಕ ಮತ್ತು ಸಂಗೀತ ಸಂಯೋಜಕ ಸಂಜಯ್ ಮಿಶ್ರಾ ಜನಿಸಿದರು.

1980: ಭಾರತದ ಪ್ಯಾರಾ ಈಜುಗಾರ ಪ್ರಸಾಂತ ಕರ್ಮಾಕರ್ ಜನಿಸಿದರು.

2004: ದಕ್ಷಿಣ ಭಾರತದ ಚಿತ್ರರಂಗದ ನಟ, ಬರಹಗಾರ ಮತ್ತು ನಿರ್ದೇಶಕ ಸಿ.ಎಸ್.ರಾವ್ ನಿಧನರಾದರು.

 

Categories
e-ದಿನ

ಡಿಸೆಂಬರ್-7

 

ಪ್ರಮುಖ ಘಟನಾವಳಿಗಳು:

1909: ಸಂಶೋಧಕ ಲಿಯೋ ಬೇಕ್ಲಾಂಡ್ ಅವರು ಪ್ಲಾಸ್ಟಿಕ್ ಉದ್ಯಮವನ್ನು ಚುರುಕುಗೊಳಿಸುವ ಮೊದಲ ಥರ್ಮೋ-ಸೆಟ್ಟಿಂಗ್ ಪ್ಲಾಸ್ಟಿಕ್ ಆದ ಬಾಕ್ಲೈಟ್ ಅನ್ನು ಪೇಟೆಂಟ್ ಮಾಡಿದರು.

1926: ಅನಿಲದಿಂದ ಕಾರ್ಯನಿರ್ವಸುವ ರೆಫ್ರಿಜಿರೇಟರ್ ಅನ್ನು ದಿ ಎಲೆಕ್ಟ್ರೊಲಕ್ಸ್ ಸರ್ವೆಲ್ ಕಾರ್ಪೊರೇಷನ್ ಸಂಸ್ಥೆ ಪೇಟೆಂಟ್ ಪಡೆಯಿತು.

1934: ವಿಲಿ ಪೋಸ್ಟ್ ಜೆಟ್ ಸ್ಟ್ರೀಮ್ ಅನ್ನು ಕಂಡು ಹಿಡಿದರು.

1937: ಮುಂಬೈಯ ಐತಿಹಾಸಿಕ ಬ್ರಬೌರ್ನ್ ಕ್ರೀಡಾಂಗಣವನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು.

1941: ಜಪಾನಿನ ವಿಮಾನಗಳು ಅಮೇರಿಕಾದ ನೌಕಾ ನೆಲೆಯಾದ ಪರ್ಲ್ ಹಾರ್ಬರ್ ಭೂಪ್ರದೇಶದಲ್ಲಿ ದಾಳಿ ಮಾಡಿದ ಕಾರಣ 2,300 ಅಮೇರಿಕರು ಮೃತಪಟ್ಟರು.

1945: ಮೈಕ್ರೊವೇವ್ ಓವನ್ ಅನ್ನು ಪೇಟೆಂಟ್ ಮಾಡಲಾಯಿತು.

1949: ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಯೋಗಕ್ಷೇಮಕ್ಕಾಗಿ ದೇಶಾದ್ಯಂತ ಜನರಿಂದ ಹಣ ಸಂಗ್ರಹಿಸಲು ಡಿಸೆಂಬರ್ 7 ರಂದು ಪ್ರತಿ ವರ್ಷ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ.

1982: ಮಾರಕ ಚುಚ್ಚುಮದ್ದಿನಿಂದ ಮೊದಲ ಮರಣದಂಡನೆಯನ್ನು ಟೆಕ್ಸಾಸಿನ ಹಣ್ಸ್ವಿಲ್ಲಿನ ರಾಜ್ಯ ಸೆರೆಮನೆಯಲ್ಲಿ ಮಾಡಲಾಯಿತು.

1997: ಒಂದು ಶತಮಾನದ ಹಿಂದೆ 1,00,000 ದಿಂದ ವಿಶ್ವದ ಹುಲಿಗಳ ಸಂಖ್ಯೆ 6000 ಕ್ಕೆ ಇಳಿದಿದೆ ಎಂದು ವರದಿ ಮಾಡಲಾಯಿತು.

2011: ಭಾರತದ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಭಾರತಕ್ಕೆ ವಿದೇಶಿ ಸೂಪರ್ ಮಾರ್ಕೆಟ್ ಗಳನ್ನು ಅನುಮತಿಸಲು ಚಿಲ್ಲರೆ ಸುಧಾರಣೆ ಅನಿರ್ಧಿಷ್ಟವಾಗಿ ಅಮಾನತುಗೊಳಿಸಲಾಗುವುದೆಂದು ಧೃಡಪಡಿಸಿದರು.

ಪ್ರಮುಖ ಜನನ/ಮರಣ:

1902: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಜನಾರ್ಧನ್ ನಾವ್ಲೆ ಜನಿಸಿದರು.

1921: ಸ್ವಾಮಿನಾರಾಯಣನ ಐದನೇ ಉತ್ತರಾಧಿಕಾರಿ ಪ್ರಮುಖ್ ಸ್ವಾಮಿ ಮಹಾರಾಜ್ ಜನಿಸಿದರು.

1923: ಭಾರತದ ಪಾಕಿಸ್ತಾನದ ಲೇಖಕ ಮತ್ತು ವಿದ್ವಾಂಸ ಇಂತೆಜಾರ್ ಹುಸ್ಸೇನ್ ಜನಿಸಿದರು.

1928: ಖ್ಯಾತ ಭಟರನಾಟ್ಯ ನೃತ್ಯಗಾರ್ತಿ ಮತ್ತು ಗುರು ಕಲಾನಿಧಿ ನಾರಾಯಣ್ ಜನಿಸಿದರು.

1939: ತಮಿಳು ಚಿತ್ರರಂಗದ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಲ್.ಆರ್.ಈಶ್ವರಿ ಜನಿಸಿದರು.

1975: ತೆಲುಗು ಚಿತ್ರರಂಗದ ಚಿತ್ರ ನಿರ್ದೇಶಕ ಸುಂದರ್ ರೆಡ್ಡಿ ಜನಿಸಿದರು.

1985: ಭಾರತದ ಟೆನ್ನಿಸ್ ಆಟಗಾರ ಪೂರವ್ ರಾಜಾ ಜನಿಸಿದರು.

1985: ಮಲಯಾಳಂ ಚಿತ್ರರಂಗದಲ್ಲಿ ಭಾರತೀಯ ಚಿತ್ರಕಥೆಗಾರರಾದ ಬಾಬಿ-ಸಂಜಯ್ ಜನಿಸಿದರು.

2001: ಭಾರತೀಯ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕ ಸುಬ್ರತಾ ಮಿತ್ರಾ ನಿಧನರಾದರು.

2013: ತೆಲುಗು ಚಿತ್ರರಂಗದ ನಟ ಮತ್ತು ನಿರ್ದೇಶಕ ಧರ್ಮವರಪು ಸುಬ್ರಮಣ್ಯಂ ನಿಧನರಾದರು.

 

Categories
e-ದಿನ

ಡಿಸೆಂಬರ್-6

 

ಪ್ರಮುಖ ಘಟನಾವಳಿಗಳು:

1774: ಆಸ್ಟ್ರಿಯ ರಾಜ್ಯ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ರಾಷ್ಟ್ರವಾಯಿತು.

1822: ಉಟ್ರೆಕ್ಟಿನಲ್ಲಿ ಪಶುವೈದ್ಯ ಶಾಲೆಯು ತೆರೆಯಲಾಯಿತು.

1876: ಅಮೇರಿಕಾದ ಮೊದಲ ಸ್ಮಶಾನದ ಕಾರ್ಯಾಚರಣೆ ಆರಂಭವಾಯಿತು.

1876: ಅನಾಹೆಮ್ ನಗರವನ್ನು ಎರಡನೇ ಬಾರಿಗೆ ಸಂಘಟಿಸಲಾಯಿತು.

1877: ಥಾಮಸ್ ಎಡಿಸನ್ ಮೊದಲ ಗ್ರಾಮಫೋನ್ ಅನ್ನು ಪ್ರದರ್ಶಿಸಿದರು.

1897: ಲೈಸೆನ್ಸ್ ಪಡೆದ ಟ್ಯಾಕ್ಸಿಕ್ಯಾಬುಗಳನ್ನು ನೀಡಲು ಲಂಡನ್ ವಿಶ್ವದ ಪ್ರಥಮ ನಗರವಾಗಿದೆ.

1966: ಬೆಲ್ಜಿಯಮ್ಮಿನಲ್ಲಿ ಪೋಲಿಯೋ ಲಸಿಕೆಯನ್ನು ಕಡ್ಡಾಯ ಮಾಡಲಾಯಿತು.

1992: 16ನೇ ಶತಮಾನದ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯಿತು.

2006: ನಾಸಾ ಸಂಸ್ಥೆಯು ಮಂಗಳ ಗ್ರಹದ ಎರಡು ಗಲ್ಲಿಗಳಲ್ಲಿ ನೀರು ಕಂಡು ಬಂದಿರುವುದಾಗಿ ಹೇಳಿಕೆ ನೀಡಿದರು.

ಪ್ರಮುಖ ಜನನ/ಮರಣ:

1853: ಭಾರತದ ಇತಿಹಾಸಕಾರ ಮತ್ತು ಪಂಡಿತ ಹರಪ್ರಸಾದ್ ಶಾಸ್ತ್ರಿ ಜನಿಸಿದರು.

1922: ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಗಾಯಕ ಪಂಡಿತ್ ವಿಶ್ವನಾಥರಾವ್ ರಿಂಗೆ ಜನಿಸಿದರು.

1932: ಲೇಖಕ, ಚಿತ್ರಕಥೆಗಾರ ಮತ್ತು ವಿಮರ್ಶಕ ಕಮಲೇಶ್ವರ್ ಜನಿಸಿದರು.

1935: ತಮಿಳು ಮತ್ತು ತೆಲುಗು ಚಿತ್ರರಂಗದ ನಾಯಕಿ ಸಾವಿತ್ರಿ ಕೊಮ್ಮಾರೆಡ್ಡಿ ಜನಿಸಿದರು.

1945: ಭಾರತೀಯ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಶೇಖರ್ ಕಪೂರ್ ಜನಿಸಿದರು.

1956: ಭಾರತದ ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್ ಅಂಬೇಡ್ಕರ್ ಅವರು ನಿಧನರಾದರು.

1985: ಭಾರತದ ಕ್ರಿಕೆಟ್ ಆಟಗಾರ ರುದ್ರ ಪ್ರತಾಪ್ ಸಿಂಗ್ ಜನಿಸಿದರು.

1988: ಭಾರತದ ಖ್ಯಾತ ಕ್ರಿಕೆಟ್ ಪಟು ರವೀಂದ್ರಸಿಂಗ್ ಜಡೇಜಾ ಜನಿಸಿದರು.

2002: ಉಪನದಿಗಳ ಶಕ್ತಿಯನ್ನು ಆಧರಿಸಿ ಅದನ್ನು ವರ್ಗೀಕರಿಸಲು 1952ರಲ್ಲಿ ಸ್ಟ್ರಾಹ್ಲರ್ ಸ್ಟ್ರೀಮ್ ಆರ್ಡರ್ ವ್ಯವಸ್ಥೆಯನ್ನು ಪ್ರಸ್ಥಾಪಿಸಿದ ಭೂವಿಜ್ಞಾನಿ ಅಲಾನ್ ನೀಡಲ್ ಸ್ಟ್ರಾಹ್ಲರ್ ನಿಧನರಾದರು.

2009: ಬಂಗಾಳಿ ಮತ್ತು ಹಿಂದಿ ಚಿತ್ರಗಳ ನಟಿ ಬೀನಾ ರೈ ನಿಧನರಾದರು.

 

Categories
e-ದಿನ

ಡಿಸೆಂಬರ್- 5

 

ಪ್ರಮುಖ ಘಟನಾವಳಿಗಳು:

1846: ಸಿ.ಎಫ್.ಸ್ಕೋನ್ಬೀನ್ ಸೆಲ್ಲುಲೋಸ್ ನೈಟ್ರೇಟ್ ಸ್ಪೋಟಕಕ್ಕಾಗಿ ಪೇಟೆಂಟ್ ಪಡೆದರು.

1876: ಸ್ಟಿಲ್ಸನ್ ತಿರುಚಳಿಗೆ ಡಿ.ಸಿ.ಸ್ಟಿಲ್ಸನ್ ಪೇಟೆಂಟ್ ಪಡೆದರು.

1879: ಮೊದಲ ಸ್ವಯಂಚಾಲಿತ ದೂರವಾಣಿ ಬದಲಾಯಿಸುವ ವ್ಯವಸ್ಥೆಗೆ ಪೇಟೆಂಟ್ ನೀಡಲಾಯಿತು.

1943: ಜಪಾನ್ ಏರ್ಫೋರ್ಸ್ (ಐಜೆಎಎಎಫ್) ಮತ್ತು ನೌಕಾಪಡೆ (ಐಜಿಎನ್ಎಎಫ್) ಗಳ ಸಂಯೋಜಿತ ಪಡೆಗಳು ಕಲ್ಕತ್ತಾದಲ್ಲಿ ತೀವ್ರ ಬಾಂಬ್ ದಾಳಿ ನಡೆಸಿದರು.

1951: ಮೊದಲ ಪುಶ್ ಬಟನ್ ನಿಯಂತ್ರಿತ ಗ್ಯಾರೇಜ್ ವಾಷಿಂಗ್ಟನ್ ಡಿಸಿ ಯಲ್ಲಿ ಪ್ರಾರಂಭವಾಯಿತು.

1997: ಭಾರತದ ತಮಿಳುನಾಡು ಮತ್ತು ಕೇರಳದಲ್ಲಿ ಪ್ರತ್ಯೇಕ ಪ್ರಯಾಣಿಕ ರೈಲುಗಳ ಸ್ಫೋಟದಿಂದ ಕನಿಷ್ಟ 10ಮಂದಿ ಮೃತ ಪಟ್ಟು 64 ಮಂದಿ ಗಾಯಗೊಂಡರು.

1999: ಭಾರತದ ಯುಕ್ತಾ ಮುಖಿ ವಿಶ್ವ ಸುಂದರಿ 99 ಸ್ಪರ್ಧೆಯಲ್ಲಿ ಗದ್ದು, ಲಂಡನ್ನಿನಲ್ಲಿ ಕಿರೀಟ ಧಾರಣೆ ಮಾಡಿದರು.

ಪ್ರಮುಖ ಜನನ/ಮರಣ:

1898: ಭಾರತ-ಪಾಕಿಸ್ತಾನದ ಕವಿ ಮತ್ತು ಅನುವಾದಕ ಜೋಷ್ ಮಲಿಹಬಾದಿ ಜನಿಸಿದರು.

1939: ಭಾರತೀಯ ಶಾಸ್ತ್ರೀಯ ಸಂಗೀತಕಾರ, ಸರೋದ್ ವಾದಕ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆಶೀಶ್ ಖಾನ್ ಜನಿಸಿದರು.

1950: ಭಾರತೀಯ ರಾಷ್ಟ್ರೀಯತಾವಾದಿ, ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಶ್ರೀ ಅರಬಿಂದೋ ಘೋಷ್ ನಿಧನರಾದರು.

1951: ಭಾರತದ ಕಲಾವಿದ, ಲೇಖಕ ಮತ್ತು ಶಿಕ್ಷಣ ತಜ್ಞ ಅಭನಿಂದ್ರನಾಥ್ ಟ್ಯಾಗೋರ್ ನಿಧನರಾದರು.

1954: ತಮಿಳು ಬರಹಗಾರ, ಚಲನಚಿತ್ರ ಮತ್ತು ಸಂಗೀತ ವಿಮರ್ಶಕ, ಭಾರತ ಸ್ವಾತಂತ್ರ ಹೋರಾಟಗಾರ ಮತ್ತು ಪತ್ರಕರ್ತ ಕಲ್ಕಿ ಕೃಷ್ಣಮೂರ್ತಿ ನಿಧನರಾದರು.

1963: ಪಾಕಿಸ್ತಾನದ 5ನೇ ಪ್ರಧಾನಿ ಹುಸ್ಸೇನ್ ಶಹೀದ್ ಸುಹ್ರಾವಾರ್ದಿ ನಿಧನರಾದರು.

1965: ಭಾರತದ ವಸ್ತ್ರ ವಿನ್ಯಾಸಕ ಮನಿಷ್ ಮಲ್ಹೋತ್ರಾ ಜನಿಸಿದರು.

1974: ಭಾರತೀಯ ಪತ್ರಕರ್ತ ಮತ್ತು ಲೇಖಕ ರವೀಶ್ ಕುಮಾರ್ ಜನಿಸಿದರು.

1985: ಭಾರತದ ಕ್ರಿಕೆಟ್ ಆಟಗಾರ ಶಿಖರ್ ಧವಾನ್ ಜನಿಸಿದರು.

2016: ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ನಿಧನರಾದರು.

 

Categories
e-ದಿನ

ಡಿಸೆಂಬರ್- 4

 

ಪ್ರಮುಖ ಘಟನಾವಳಿಗಳು:

1783: ಅಮೇರಿಕಾದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ತಮ್ಮ ಕಛೇರಿಯ ಸಿಬ್ಬಂದಿಯವರಿಗೆ ತಮ್ಮ ಬೀಳ್ಕೊಡುಗೆಯನ್ನುದ್ದೇಶಿಸಿ ಮಾತನಾಡಿದರು.

1791: ಬ್ರಿಟನ್ನಿನ “ಅಬ್ಸರ್ವರ್” ವಿಶ್ವದ ಅತ್ಯಂತ ಹಳೆಯ ಭಾನುವಾರದ ವೃತ್ತಪತ್ರಿಕೆ ಮೊದಲ ಬಾರಿಗೆ ಪ್ರಕಟಿಸಲಾಯಿತು.

1812: ಕುದುರೆ ಎಳೆದ ಗಾಡಿಗೆ ಪೀಟರ್ ಗೈಲಾರ್ಡ್ ಪೇಟೆಂಟ್ ಪಡೆದರು.

1843: ಹಡಗು, ಕ್ಯಾನ್ವಾಸ ಮತ್ತು ಹಗ್ಗಗಳಿಂದ ತಯಾರಿಸಲ್ಪಟ್ಟ ಮನಿಲಾ ಪೇಪರಿಗೆ ಪೇಟೆಂಟ್ ನೀಡಲಾಯಿತು.

1829: ಬ್ರಿಟೀಷರು, ಭಾರತದಲ್ಲಿ “ಸತಿ” ಪದ್ದತಿಯನ್ನು ನಿಷೇಧಿಸಿದರು.

1924: ಲಾರ್ಡ್ ರೈಡಿಂಗ್ ಅವರು “ಗೇಟ್ ವೇ ಆಫ್ ಇಂಡಿಯಾ” ಅನ್ನು ಉದ್ಘಾಟಿಸಿದರು.

1930: ಜನನ ನಿಯಂತ್ರಣಕ್ಕೆ ರಿದಮ್ ವಿಧಾನವನ್ನು ವ್ಯಾಟಿಕನ್ ಅನುಮೋದಿಸಿತು.

1971: ಭಾರತದ ನೌಕಾಪಡೆಯು ಪಾಕಿಸ್ತಾನದ ನೌಕಾ ಪಡೆಯನ್ನು ಕರಾಚಿಯಲ್ಲಿ ದಾಳಿ ಮಾಡಿತು.

1982: ನವ ದೆಹೆಲಿಯಲ್ಲಿ ಏಷಿಯನ್ ಗೇಮ್ಸ್ ಸ್ಪರ್ಧೆ ಮುಕ್ತಾಯಗೊಂಡಿತು.

1982: ಚೀನಾ ದೇಶ ತನ್ನ ಸಂವಿಧಾನವನ್ನು ಅಳವಡಿಸಿತು.

ಪ್ರಮುಖ ಜನನ/ಮರಣ:

1898: ರಾಮನ್ ಸ್ಕಾಟರಿಂಗ್ (ರಾಮನ್ ಎಫೆಕ್ಟ್) ಸಹ-ಸಂಶೋಧಕ ಕೆ.ಎಸ್.ಕೃಷ್ಣನ್ ಜನಿಸಿದರು.

1910: ಭಾರತದ 6ನೇ ರಾಷ್ಟ್ರಪತಿ ಆಗಿದ್ದ ಆರ್.ವೆಂಕಟರಾಮನ್ ಜನಿಸಿದರು.

1910: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಅಮರ್ ಸಿಂಗ್ ಜನಿಸಿದರು.

1919: ಭಾರತದ 12ನೇ ಪ್ರಧಾನ ಮಂತ್ರಿ ಆಗಿದ್ದ ಐ.ಕೆ.ಗುಜರಾಲ್ ಜನಿಸಿದರು.

1962: ಅವಧಾನ ಕಲೆಯ ಅಭ್ಯರ್ಥಿ, ಸಂಸ್ಕೃತ ಮತ್ತು ಕನ್ನಡದ ಲೇಖಕರು, ಬಹುಭಾಷಾ ಕವಿ ಶತಾವಧಾನಿ ಗಣೇಶ್ ಜನಿಸಿದರು.

1963: ಹಿಂದಿ ಚಿತ್ರರಂಗದ ನಟ, ಕಿರುತೆರೆಯ ನಿರೂಪಕ, ಹಾಸ್ಯ ನಟ ಜಾವೇದ್ ಜಫ್ರೆ ಜನಿಸಿದರು.

1974: ಹಿಂದಿ ಚಿತ್ರರಂಗದ ನಟಿ, ಮಾಡೆಲ್ ಅನುಪಮ ಕುಮಾರ್ ಜನಿಸಿದರು.

1977: ಭಾರತದ ಕ್ರಿಕೆಟ್ ಆಟಗಾರ ಅಜಿತ್ ಅಗಾರ್ಕರ್ ಜನಿಸಿದರು.

1982: ಕನ್ನಡ ಚಿತ್ರರಂಗದ ನಟಿ ಡೈಸಿ ಬೋಪಣ್ಣ ಜನಿಸಿದರು.

2014: ಭಾರತದ ವಕೀಲರು ಮತ್ತು ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ನಿಧನರಾದರು.

 

Categories
e-ದಿನ

ಡಿಸೆಂಬರ್-3

 

ಪ್ರಮುಖ ಘಟನಾವಳಿಗಳು:

1586: ಸರ್ ಥಾಮಸ್ ಹೀರಿಯಾಟ್ ಅವರು ಕೊಲಂಬಿಯಾದಿಂದ ಇಂಗ್ಲಾಂಡಿಗೆ ಆಲೂಗಡ್ಡೆಯನ್ನು ಪರಿಚಯಿಸಿದರು.

1621: ಗೆಲಿಲಿಯೋ ದೂರದರ್ಶಕವನ್ನು ಕಂಡು ಹಿಡಿದರು.

1835: ರೋಡ್ ದ್ವೀಪದಲ್ಲಿ ಮ್ಯಾನುಫ್ಯಾಕ್ಚರ್ ಮ್ಯೂಚುಯಲ್ ಫೈಯರ್ ಇನ್ಶುರೆನ್ಸ್ ಸಂಸ್ಥೆಯು ಮೊದಲ ಅಗ್ನಿ ವಿಮಾ ಪಾಲಿಸಿಯನ್ನು ನೀಡಿತು.

1910: ಪ್ಯಾರಿಸ್ ಮೋಟಾರು ಪ್ರದರ್ಶನದಲ್ಲಿ ನಿಯಾನ್ ದೀಪವನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

1922: ಮೊದಲ ಯಶಸ್ವಿ ಟೆಕ್ನಿಕಲರ್ ಚಲನಚಿತ್ರವನ್ನು ನ್ಯೂಯಾರ್ಕಿನಲ್ಲಿ ಪ್ರದರ್ಶಿಸಲಾಯಿತು.

1948: ಅಮೇರಿಕಾದ ಸೇನೆಯಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯನ್ನು ನೇಮಿಸಲಾಯಿತು.

1952: ಹವಾಯಿಯಲ್ಲಿ ಮೊದಲ ದೂರದರ್ಶನದ ಪ್ರಸಾರವನ್ನು ಮಾಡಲಾಯಿತು.

1967: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಮಾನವ ಹೃದಯದ ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು.

1971: ಭಾರತ-ಪಾಕಿಸ್ತಾನ ಯುದ್ಧವು ಬಾಂಗ್ಲಾದೇಶದ ಹೊಸ ದೇಶವನ್ನು ರೂಪಿಸಲು ಕೊನೆಗೊಂಡಿತು.

1984: ಭಾರತದ ಭೂಪಾಲಿನಲ್ಲಿ ಯೂನಿಯನ್ ಕಾರ್ಬೈಡ್ ಕೀಟನಾಶಕ ಘಟಕದಿಂದ ಮಿಥೈಲ್ ಐಸೋಸೈನೇಟ್ ಸೋರಿಕೆಯಿಂದ 3800 ಜನರು ಮೃತಪಟ್ಟು 1,50,000 ರಿಂದ 6,00,000 ಜನರು ಅಸ್ವಸ್ಥಗೊಂಡರು.

ಪ್ರಮುಖ ಜನನ/ಮರಣ:

1884: ಭಾರತದ ಮೊದಲ ರಾಷ್ಟ್ರಪತಿ ಆಗಿದ್ದ ರಾಜೇಂದ್ರ ಪ್ರಸಾದ್ ಜನಿಸಿದರು.

1894: ಭಾರತದ ವಕೀಲರು ಮತ್ತು ರಾಜಕಾರಣಿ ದೈವ ಜಿವರತ್ತಿನಮ್ ಜನಿಸಿದರು.

1928: ಬಾಂಗ್ಲಾದೇಶದ ಪ್ರಧಾನ ಮಂತ್ರಿ ಮುಹಮ್ಮದ್ ಹಬಿಬುರ್ ರೆಹೆಮಾನ್ ಜನಿಸಿದರು.

1937: ಭಾರತದ ವೈದ್ಯ ಮತ್ತು ಲೇಖಕ ಬಿನೋದ್ ಬಿಹಾರಿ ವರ್ಮಾ ಜನಿಸಿದರು.

1956: ಖ್ಯಾತ ಲೇಖಕ, ಕವಿ ಮತ್ತು ಚಿತ್ರಕಥೆಗಾರ ಮಾನಿಕ್ ಬಂಡೋಪಾಧ್ಯಾಯ ನಿಧನರಾದರು.

1971: ಹಿಂದಿ ಚಿತ್ರರಂಗದ ನಟ ಜಿಮ್ಮಿ ಶೇರ್ಗಿಲ್ ಜನಿಸಿದರು.

1979: ಭಾರತದ ಖ್ಯಾತ ಹಾಕಿ ಆಟಗಾರ ಮತ್ತು ತರಬೇತುದಾರ ಧ್ಯಾನ್ ಚಂದ್ ನಿಧನರಾದರು.

1979: ಹಿಂದಿ ಚಿತ್ರರಂಗದ ನಟಿ ಕೊನ್ಕೊನ್ ಸೆನ್ ಶರ್ಮ ಜನಿಸಿದರು.

1982: ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಜನಿಸಿದರು.

2011: ಬಾಲಿವುಡಿನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದೇವಾನಂದ್ ನಿಧನರಾದರು.

 

Categories
e-ದಿನ

ಡಿಸೆಂಬರ್-2

 

ಪ್ರಮುಖ ಘಟನಾವಳಿಗಳು:

1816: ಅಮೇರಿಕಾದಲ್ಲಿ ಮೊದಲ ಉಳಿತಾಯ ಬ್ಯಾಂಕ್ ತೆರೆಯಲಾಯಿತು.

1942: ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಸ್ವಯಂ ನಿರಂತರ ಪರಮಾಣು ಸರಪಳಿ ಕ್ರಿಯೆಯನ್ನು ಪ್ರದರ್ಶಿಸಲಾಯಿತು.

1970: ಪರಿಸರ ಸಂರಕ್ಷಣೆ ಏಜೆನ್ಸಿಯನ್ನು ಸ್ಥಾಪಿಸಲಾಯಿತು.

1971: ಅಬುಧಾಬಿ, ಅಜ್ಮಾನ್, ದುಬೈ, ಫ್ಯುಜೈರಾ, ರಸ್ ಅಲ್ ಖೈಮಾ, ಶಾರ್ಜಾ, ಮತ್ತು ಉಮ್ ಅಲ್ ಕ್ವಾವಾನ್ನ ಏಳು ಎಮಿರೈಟುಗಳಿಂದ ಸಂಯುಕ್ತ ರಾಷ್ಟ್ರವಾಗಿ ಯುನೈಟೆಡ್ ಅರಬ್ ಎಮಿರೈಟ್ಸ್ (ಯು.ಎ.ಇ) ಸಂಯುಕ್ತವಾಗಿ ರೂಪುಗೊಂಡಿತು.

1982: ಉತಾಹ್ ಮೆಡಿಕಲ್ ಸಂಟರ್ ವಿಶ್ವವಿದ್ಯಾಲಯದ ವೈದ್ಯರು ಶಾಶ್ವತ ಕೃತಕ ಹೃದಯವನ್ನು ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದರು.

1984: ಭೊಪಾಲದ ಗ್ಯಾಸ್ ಅಪಘಾತ ಸಂಭವಿಸಿತು.

1989: ವಿ.ಪಿ.ಸಿಂಗ್ ಭಾರತದ 7ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1993: ಹಬಲ್ ಬಾಹ್ಯಾಕಾಶ ದೂರದರ್ಶಕವನ್ನು ಸರಿಪಡಿಸಲು ನಾಸಾ ಸ್ಪೇಸ್ ಶಟಲ್ ಅನ್ನು ಪ್ರಾರಂಭಿಸಿತು.

1999: ಭಾರತದ ಕ್ರಿಕೆಟ್ ಆಟಗಾರ ನವ್ಜೋತ್ ಸಿಂಗ್ ಸಿದ್ದು ಕ್ರಿಕೆಟ್ ಆಟದಿಂದ ನಿವೃತ್ತರಾದರು.

2000: ಪಂಜಾಬಿನಲ್ಲಿ ರೈಲು ಅಪಘಾತದಿಂದ 36 ಜನ ಮೃತ ಪಟ್ಟರು.

ಪ್ರಮುಖ ಜನನ/ಮರಣ:

1898: ಭಾರತದ ಲೆಫ್ಟನೆಂಟ್ ಮತ್ತು ಪೈಲೆಟ್ ಆಗಿದ್ದ ಇಂದ್ರ ಲಾಲ್ ರಾಯ್ ಜನಿಸಿದರು.

1935: ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮತ್ತು ದೆಹೆಲಿ ಹೈಕೋರ್ಟಿನ ಮತ್ತು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಎಂ.ಜಗನ್ನಾಥ ರಾವ್ ಜನಿಸಿದರು.

1937: ಮಹಾರಾಷ್ಟ್ರದ 15ನೇ ಮುಖ್ಯಮಂತ್ರಿ ಆಗಿದ್ದ ಮನೋಹರ್ ಜೋಷಿ ಜನಿಸಿದರು.

1947: ಐಸಿಐಸಿಐ ಬ್ಯಾಂಕಿನ ಸಿ.ಇ.ಓ ಆಗಿದ್ದ ಕೆ.ವಿ.ಕಾಮತ್ ಜನಿಸಿದರು.

1959: ಹಿಂದಿ ಖ್ಯಾತ ನಟ ಬೊಮ್ಮನ್ ಇರಾನಿ ಜನಿಸಿದರು.

1963: ಸಿಕ್ಕಿಂನ ನಂಗ್ಯಾಲ್ ರಾಜವಂಶದ ರಾಜ ತಾಶಿ ನಂಗ್ಯಾಲ್ ನಿಧನರಾದರು.

1980: ಪಾಕಿಸ್ತಾನದ 4ನೇ ಪ್ರಧಾನಿ ಆಗಿದ್ದ ಚೌಧರಿ ಮೊಹಮ್ಮದ್ ಅಲಿ ನಿಧನರಾದರು.

1990: ಯೋಗ, ವೇದಾಂತ, ಯಂತ್ರ, ತಂತ್ರ ಮತ್ತು ಮಂತ್ರ ಕ್ಷೇತ್ರದಲ್ಲಿ ಅಸಮಾನ್ಯ ಆಚಾರ್ಯರಾಗಿದ್ದ ಕನ್ನಿಯ ಯೋಗಿ ನಿಧನರಾದರು.

2014: ಮಹಾರಾಷ್ಟ್ರದ 8ನೇ ಮುಖ್ಯಮಂತ್ರಿ ಆಗಿದ್ದ ಎ.ಆರ್.ಅಂತುಲೇ ನಿಧನರಾದರು.

2014: ಖ್ಯಾತ ನಟ ದೇವೆನ್ ವರ್ಮ ನಿಧನರಾದರು.

 

Categories
e-ದಿನ

ಡಿಸೆಂಬರ್-1

ಪ್ರಮುಖ ಘಟನಾವಳಿಗಳು:

1843: ಮೊದಲ ಸನದು ಪಡೆದ ಮ್ಯೂಚುವೆಲ್ ಜೀವಾ ವಿಮೆ ಸಂಸ್ಥೆಯು ಆರಂಭವಾಯಿತು.

1878: ಅಮೇರಿಕಾದ ಅಧ್ಯಕ್ಷರ ಮನೆಯಾದ “ವೈಟ್ ಹೌಸ್” ನಲ್ಲಿ ಮೊದಲ ದೂರವಾಣಿಯನ್ನು ಸ್ಥಾಪಿಸಲಾಯಿತು.

1891: ಬಾಸ್ಕೆಟ್ ಬಾಲ್ ಆಟವನ್ನು ಜೇಮ್ಸ್ ನೈಸ್ಮಿತ್ ಸೃಷ್ಟಿಸಿದರು.

1913: ಫೋರ್ಡ್ ಮೋಟಾರ್ ಸಂಸ್ಥೆಯು ಟಿ ಮಾಡೆಲ್ ಫೋರ್ಡ್ಗಳಿಗಾಗಿ ವಿಶ್ವದ ಮೊದಲ ಚಲಿಸುವ ಅಸೆಂಬ್ಲಿ ಲೈನ್ನನ್ನು ಸ್ಥಾಪಿಸಿದರು.

1921: ಅಮೇರಿಕಾದ ಅಂಚೆ ಕಛೇರಿ ಅಂಚೆಚೀಟಿಗಳ ಸಂಗ್ರಹಕ್ಕೆ ಸಂಬಂಧಿಸಿದ ಸಂಸ್ಥೆ ಸ್ಥಾಪಿಸಿತು.

1959: ಭೂಮಿಯ ಮೊದಲ ಬಣ್ಣದ ಛಾಯಾಚಿತ್ರವನ್ನು ಬಾಹ್ಯಾಕಾಶದಿಂದ ಸೆರೆಹಿಡಿಯಲಾಯಿತು.

1963: ಭಾರತದ ಸುಂದರವಾದ ಈಶಾನ್ಯ ಪರ್ವತ ರಾಜ್ಯವಾದ ನಾಗಾಲ್ಯಾಂಡ್ ರಾಜ್ಯವು ಅಸ್ತಿತ್ವಕ್ಕೆ ಬಂದಿತು.

2003: ಜನವರಿ 1 2004 ರ ಹೊತ್ತಿಗೆ ಭಾರತ ಮತ್ತು ಪಾಕಿಸ್ತಾನ ಏರ್ಲೈನ್ ಓವರ್ ಫ್ಲೈಟ್ ಮತ್ತು ಲ್ಯಾಂಡಿಗ್ ಹಕ್ಕುಗಳನ್ನು ಪುನಃಸ್ಥಾಪಿಸಲು ಒಪ್ಪಂದ ಮಾಡಲಾಯಿತು.

2010: ವಿಪ್ರೋ ಸಂಸ್ಥೆಯ ಅಧ್ಯಕ್ಷರಾದ ಅಜಿಮ್ ಪ್ರೇಮ್ಜಿ ಬಡವರಿಗೆ ಶಿಕ್ಷಣ ಕಾರ್ಯಕ್ರಮಗಳನ್ನು ಒದಗಿಸಲು ಸುಮಾರು 2 ಶತಕೋಟಿ ಡಾಲರ್ ಗಳನ್ನು ದೇಣಿಗೆ ನೀಡಿದರು.

2011: ಭಾರತದಾದ್ಯಂತ ಅಂಗಡಿಗಳು ದೊಡ್ಡ ಪೆಟ್ಟಿಗೆ ಚಿಲ್ಲರೆ ವ್ಯಾಪಾರಿಗಳನ್ನು ದೇಶಕ್ಕೆ ಅನುಮತಿ ನೀಡಲು ನೂತನ ನೀತಿಯನ್ನು ಪ್ರತಿಭಟಿಸಲು ಮುಷ್ಕರ ಮಾಡಲು ಅಂಗಡಿಗಳನ್ನು ಮುಚ್ಚಲಾಯಿತು.

ಪ್ರಮುಖ ಜನನ/ಮರಣ:

1924: ಭಾರತದ ಯೋಧ ಮತ್ತು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಶೈತಾನ್ ಸಿಂಗ್ ಜನಿಸಿದರು.

1933: ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಲ್ ಜನಿಸಿದರು.

1950: ಭಾರತದ ಜೀವಶಾಸ್ತ್ರಜ್ಞ ಮಂಜು ಬನ್ಸಾಲ್ ಜನಿಸಿದರು.

1954: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಜನಿಸಿದರು.

1960: ಭಾರತದ ರಾಜಕೀಯ ವಿಜ್ಞಾನಿ ಶಿರಿನ್ ಎಂ ರೈ ಜನಿಸಿದರು.

1964: ತಳಿ ವಿಜ್ಞಾನಿ ಮತ್ತು ಜೀವಶಾಸ್ತ್ರಜ್ಞ ಜೆ,ಬಿ.ಎಸ್. ಹಲ್ದನೆ ನಿಧನರಾದರು.

1980: ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಖೈಫ್ ಜನಿಸಿದರು.

1980: ಬೆಂಗಳೂರಿನ ವಿಧಾನ ಸೌಧವನ್ನು ನಿರ್ಮಿಸಿದ ಮತ್ತು ಹಳೆಯ ಮೈಸೂರು ರಾಜ್ಯದಲ್ಲಿ ಮುಖ್ಯ ಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ ನಿಧನರಾದರು.

1990: ಜವರ್ಲಾಲ್ ನೆಹೆರು ಅವರ ತಂಗಿ ವಿಜಯ್ ಲಕ್ಷ್ಮಿ ಪಂಡಿತ್ ನಿಧನರಾದರು.

2008: ಖ್ಯಾತ ಸಂಗೀತ ಸಂಜೋಜಕರಾದ ಎ.ಆರ್.ರೆಹೆಮಾನ್ ಅವರೊಂದಿಗೆ ಕೆಲಸ ಮಾಡಿದ ಖ್ಯಾತ ಸೌಂಡ್ ಇಂಜಿನಿಯರ್ ಹೆಚ್. ಶ್ರೀಧರ್ ನಿಧನರಾದರು.

 

Categories
e-ದಿನ

ನವೆಂಬರ್-30

 

ಪ್ರಮುಖ ಘಟನಾವಳಿಗಳು:

1858: ಜಾನ್ ಲ್ಯಾಂಡಿಸ್ ಮೇಸನ್ ಮೊದಲ ಮೆಣಸು ಅರಿಯುವ ಯಂತ್ರಕ್ಕೆ ಪೇಟೆಂಟ್ ಪಡೆದರು.

1872: ಮೊದಲ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನು ಸ್ಕಾಟ್ಲಾಂಡಿನಲ್ಲಿ ನಡೆಯಿತು.

1875: ಓಟ್ಸ್ ಪುಡಿ ಮಾಡುವ ಯಂತ್ರಕ್ಕೆ ಎ.ಜೆ.ಎರಿಕ್ಸನ್ ಪೇಟೆಂಟ್ ಪಡೆದರು.

1900: ವಾಹನಗಳಿಗಾಗಿ ಜರ್ಮನ್ ಇಂಜಿನಿಯರ್ ಮುಂಬಾಗದ ಚಕ್ರ ಚಲನೆಯ ಪ್ರಕ್ರಿಯೆಗೆ ಪೇಟೆಂಟ್ ಪಡೆದರು.

1956: ಟೀವಿಯಲ್ಲಿ ವೀಡಿಯೋ ಟೇಪನ್ನು ಮೊದಲ ಬಾರಿಗೆ ಬಳಸಲಾಯಿತು.

1987: ಅಫ್ಘಾನಿಸ್ತಾನವು ಸಂವಿಧಾನವನ್ನು ಅಳವಡಿಸಿಕೊಂಡಿತು.

2005: ಮೊದಲ ಮುಖದ ಕಸಿ ಶಸ್ತ್ರಚಿಕಿತ್ಸೆಯನ್ನು ಫ್ರಾನ್ಸಿನಲ್ಲಿ ಮಾಡಲಾಯಿತು.

2011: ವಾಷಿಂಗ್ಟನ್ನಿನ ಸ್ಟೇಟ್ ಯ್ಯುನಿವರ್ಸಿಟಿ ಸಂಶೋಧಕರು “ಸ್ಕಾಫೋಲ್ಡ್” ಕೃತಕ ಮೂಳೆಯನ್ನು ಅಭಿವೃದ್ಧಿಪಡಿಸಿದರು.

ಪ್ರಮುಖ ಜನನ/ಮರಣ:

1858: ಭಾರತೀಯ ಭೌತ ವಿಜ್ಞಾನಿ, ಜೀವಶಾಸ್ತ್ರಜ್ಞ, ಸಸ್ಯಶಾಸ್ತ್ರಜ್ಞ, ಮತ್ತು ಪುರಾತತ್ವಶಾಸ್ತ್ರಜ್ಞ ಜೆ.ಸಿ.ಬೋಸ್ ಜನಿಸಿದರು.

1937: ಭಾರತೀಯ ಭೌತ ವಿಜ್ಞಾನಿ ಪ್ರವೀಣ್ ಚೌಧರಿ ಜನಿಸಿದರು.

1950: ಕನ್ನಡದ ಖ್ಯಾತ ಗಾಯಕಿ ವಾಣಿ ಜಯರಾಮ್ ಜನಿಸಿದರು.

1953: ಖ್ಯಾತ ಹಿನ್ನೆಲೆ ಹಾಯಕ ಹನ್ಸ್ ರಾಜ್ ಜನಿಸಿದರು.

1962: ಬಾಲಿವುಡ್ ನಟ ಇರ್ಫಾನ್ ಖಾನ್ ಜನಿಸಿದರು.

1967: ಭಾರತೀಯ ಲೇಖಕ, ಸ್ವದೇಶಿ ಚಿಂತನೆಯ ಸಾಮಾಜಿಕ ಕಾರ್ಯಕರ್ತ ರಾಜೀವ್ ದಿಕ್ಷಿತ್ ಜನಿಸಿದರು.

1987: ಭಾರತದ ವಾಲಿಬಾಲ್ ಆಟಗಾರ ಜಿಮ್ಮಿ ಜಾರ್ಜ್ ನಿಧನರಾದರು.

2010: ಭಾರತೀಯ ಲೇಖಕ, ಸ್ವದೇಶಿಚಿಂತನೆಯ ಸಾಮಾಜಿಕ ಕಾರ್ಯಕರ್ತ ರಾಜೀವ್ ದಿಕ್ಷಿತ್ ನಿಧನರಾದರು.

2012: ಭಾರತದ 12ನೇ ಪ್ರಧಾನ ಮಂತ್ರಿ ಐ.ಕೆ.ಗುಜರಾಲ್ ನಿಧನರಾದರು.

2014: ಅರುಣಾಚಲ ಪ್ರದೇಶದ 7ನೇ ಮುಖ್ಯಮಂತ್ರಿ ಜರ್ಬಾಮ್ ಗಮ್ಲಿನ್ ನಿಧನರಾದರು.

 

Categories
e-ದಿನ

ನವೆಂಬರ್-29

 

ಪ್ರಮುಖ ಘಟನಾವಳಿಗಳು:

1612: ಸ್ವಾಲಿ ಕದನವು ನಡೆಯಿತು. ಇದು ಪೋರ್ಚುಗೀಸ್ ಸಾಮ್ರಾಜ್ಯದ ಭಾರತದ ಹಿಡಿತವನ್ನುಕಳೆದುಕೊಂಡಿತು.

1775: ಸರ್ ಜೇಮ್ಸ್ ಜೇ ಕಾಣದ ಶಾಹಿಯನ್ನು ಕಂಡುಹಿಡಿದರು.

1870: ಇಂಗ್ಲೆಂಡಿನಲ್ಲಿ ಕಡ್ಡಾಯ ಶಿಕ್ಷಣ ಘೋಷಿಸಲಾಯಿತು.

1877: ಕೈಯಿಂದ ಮುರಿದ ಧ್ವನಿ ಲೇಖನ ಯಂತ್ರವನ್ನು ಥಾಮಸ್ ಎಡಿಸನ್ ಪ್ರದರ್ಶಿಸಿದರು.

1892: “ರೋರಿ ಡಯಲ್”ಗೆ ಆಲ್ಮನ್ ಬ್ರೌನ್ ಸ್ಟ್ರೋವ್ಗರ್ ಅವರಿಗೆ ಪೇಟೆಂಟ್ ನೀಡಲಾಯಿತು.

1944: ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಮೊದಲ ತೆರೆದ ಹೃದಯಸ ಶಸ್ತ್ರಚಿಕಿತ್ಸೆ ನಡೆಸಲಾಯಿತು.

1945: ಯುಗೋಸ್ಲಾವಿಯಾದಲ್ಲಿ ರಾಜಪ್ರಭುತ್ವವನ್ನು ರದ್ದು ಪಡಿಸಿ ಗಣರಾಜ್ಯವೆಂದು ಘೋಷಿಸಲಾಯಿತು.

1994: ಅಮೇರಿಕಾದ ಸಂಸತ್ತು ಸುಂಕ ಮತ್ತು ವ್ಯಾಪಾರ ಪರಿಷ್ಕೃತ ಜೆನೆರಲ್ ಒಪ್ಪಂದವನ್ನು ಜಾರಿಗೊಳಿಸಿತು.

1997: ಬಾಂಗ್ಲಾದೇಶ ಮತ್ತು ಭಾರತದ ಪೂರ್ವ ಪ್ರದೇಶಗಳಲ್ಲಿ ಭೂಕಂಪನದಿಂದ 21 ಜನ ಮೃತರಾದರು.

2008: ಚೀನಾದಲ್ಲಿ ಶಾಂಘೈ ಗೋಪುರದ ನಿರ್ಮಾಣ ಕಾಮಗಾರಿ ಆರಂಭವಾಯಿತು.

ಪ್ರಮುಖ ಜನನ/ಮರಣ:

1885: ಅಸಹಕಾರ ಚಳುವಳಿಯನ್ನು ಪ್ರತಿಪಾದಿಸಿ ಮೊದಲು ಬಳಸಿದ ಸಮಾಜ ಸುಧಾರಕ ರಾಮ್ ಸಿಂಗ್ ನಿಧನರಾದರು.

1935: ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಗುರ್ಬಚನ್ ಸಿಂಗ್ ಸಲಾರಿಯಾ ಜನಿಸಿದರು.

1951: ಪ್ರಖ್ಯಾತ ನಟ, ನಿರ್ದೇಶಕ, ಮತ್ತು ಭಾರತೀಯ ಚಲನಚಿತ್ರಗಳ ಚಿತ್ರಕಥೆಗಾರ ಪ್ರಮತೇಷ್ ಬರುವಾ ನಿಧನರಾದರು.

1963: ಭಾರತದ ಉದ್ಯಮಿ ಲಲಿತ್ ಮೋದಿ ಜನಿಸಿದರು.

1968: ಭಾರತ ಮೂಲದ ಖ್ಯಾತ ಛಾಯಾಗ್ರಾಹಕ ರಾಜಿವ್ ಜೈನ್ ಜನಿಸಿದರು.

1973: ಸಾರಿಗೆ ಸಚಿವರಾಗಿದ್ದ ಕುನ್ವರ್ ಜಿತಿನ್ ಪ್ರಸಾದ್ ಜನಿಸಿದರು.

1982: ಕನ್ನಡ ಚಿತ್ರರಂಗದ ನಟಿ ರಮ್ಯಾ ಜನಿಸಿದರು.

1987: ಹಿನ್ನೆಲೆ ಗಾಯಕಿ ಪ್ರಜಕ್ತಾ ಶುಕ್ರೆ ಜನಿಸಿದರು.

1993: ಖ್ಯಾತ ಕೈಗಾರಿಕೋದ್ಯಮಿ, ವಿಮಾನ ಚಾಲಕ ಮತ್ತು ಟಾಟಾ ಮೋಟಾರ್ ಸಂಸ್ಥೆಯ ಸಂಸ್ಥಾಪಕರಾದ ಜೆ.ಆರ್.ಡಿ ಟಾಟಾ ನಿಧನರಾದರು.

2011: ಸಂಪಾದಕಿ, ಕವಿ, ಪ್ರಾಧ್ಯಾಪಕಿ, ವಿದ್ವಾಂಸ ಮತ್ತು ವಿದ್ವಾಂಸಕಿ ಮಮೋನಿ ರೈಸೋಮ್ ಗೋಸ್ವಾಮಿ ನಿಧನರಾದರು.

 

Categories
e-ದಿನ

ನವೆಂಬರ್-28

 

ಪ್ರಮುಖ ಘಟನಾವಳಿಗಳು:

1660: ಲಂಡನ್ನಿನ ರಾಯಲ್ ಸೊಸೈಟಿ ರೂಪಿತವಾಯಿತು.

1775: ಎರಡನೇ ಕಾಂಟಿನೆಂಟಲ್ ಕಾಂಗ್ರೆಸ್ ಅಧಿಕೃತವಾಗಿ ಅಮೇರಿಕಾದ ನೌಕಾಪಡೆಯನ್ನು ಸ್ಥಾಪಿಸಲಾಯಿತು.

1814: ಟೈಮ್ಸ್ ಆಫ್ ಲಂಡನ್ ಅನ್ನು ಸ್ವಯಂಚಾಲಿತವಾಗಿ ಜರ್ಮನ್ ಆವಿಷ್ಕಾರದ ಫ್ರೆಡ್ರಿಕ್ ಕೋನಿಗ್ ನಿರ್ಮಿಸಿದ ಸ್ವಯಂಚಾಲಿತ ಉಗಿ ಪ್ರೆಸ್ಗಳಿಂದ ಮುದ್ರಿಸಲಾಯಿತು.

1893: ನ್ಯೂಜಿಲ್ಯಾಂಡಿನ ಚುನಾವಣೆಯಲ್ಲಿ ಮೊದಲ ಬಾರಿಗೆ ಮಹಿಳೆಯರು ಸ್ಪರ್ಧಿಸಿದರು.

1948: ಮೊದಲ ಪೋಲಾರಾಯಿಡ್ ಕ್ಯಾಮೆರಾ ಮಾರಾಟವಾಯಿತು.

1967: ಮೊದಲ ಪದರದ ರೇಡಿಯೋ ಮೂಲ (ಪಲ್ಸರ್) ಪತ್ತೆಯಾಗಿದೆ.

1987: ದಕ್ಷಿಣ ಆಫ್ರಿಕಾದ ವಿಮಾನ ಬೋಯಿಂಗ್ 747 ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ಕಾರಣ 159 ಪ್ರಯಾಣಿಕರು ನೀರುಪಾಲಾದರು.

2001: ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ನೆರವಿನ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನಾ ಊಟದ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವ ಒಂದು ಪ್ರಮುಖ ತೀರ್ಪು ನೀಡಿತು.

2010: ಟರ್ಕಿಯ ಐತಿಹಾಸಿಕ ಹೇದಾರ್ಪಾ ಟರ್ಮಿನಲ್ ಇಸ್ತಾನ್ ಬುಲ್ಲಿನಲ್ಲಿ ಬೆಂಕಿಯಲ್ಲಿ ಹಾನಿಗೀಡಾಯಿತು.

2010: ವಿಕಿಲೀಕ್ಸ್ ಅಲ್ಲಿ 250000 ವರ್ಗೀಕೃತ ದಾಖಲೆಗಳನ್ನು ಮತ್ತು ದೂತವಾಸಗಳು ಕಳುಹಿಸಿದ ಸೂಕ್ಷ್ಮ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ಬಿಡುಗಡೆ ಮಾಡಿತು. ಇದನ್ನು ಅಮೇರಿಕಾ ಖಂಡಿಸಿತು.

ಪ್ರಮುಖ ಜನನ/ಮರಣ:

1890: ಸಾಮಾಜಿಕ ಕಾರ್ಯಕರ್ತ, ಬರಹಗಾರ, ಶಿಕ್ಷಣ ಮತ್ತು ಮೂಲಭೂತ ಬೌದ್ದಿಕ ಜ್ಯೋತಿರಾವ್ ಫುಲೆ ನಿಧನರಾದರು.

1927: ಅಗ್ಗವಾದ ಮತ್ತು ಹೊಂದುಕೊಳ್ಳುವ “ಜೈಪುರ್ ಪಾದ” ಕೃತಕ ಅಂಗವನ್ನು ಕಂಡುಹಿಡಿದವರಲ್ಲೊಬ್ಬರಾದ ಡಾ.ಪಿ.ಕೆ.ಸೇತಿ ಜನಿಸಿದರು.

1928: ಮೊದಲ ತಲೆಮಾರಿನ ತಂತ್ರಜ್ಞ ಕೆ.ವಿ.ಕೆ ರಾಜು ಜನಿಸಿದರು.

1957: ಮಲಯಾಲಂ ಚಿತ್ರರಂಗದ ಖ್ಯಾತ ನಿರ್ದೇಶಕ ಕಲಾಮುದ್ದಿನ್ ಮೊಹಮ್ಮದ್ ಜನಿಸಿದರು.

1962: ಭಾರತದ ಗಾಯಕ ಗೀತರಚನೆಕಾರ ಮತ್ತು ನಟ ಕೆ.ಸಿ.ಡೇ ನಿಧನರಾದರು.

1978: ವೂಶೂನಲ್ಲಿ ಔಪಚಾರಿಕ ತರಬೇತಿ ಪಡೆದ ಮೊದಲ ಭಾರತೀಯ ಗಜಾನಂದ ರಾಜಪುತ್ ಜನಿಸಿದರು.

1982: ಹಾಲಿವುಡ್ ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ ನಾಗೇಂದ್ರ ಕರ್ರಿ ಜನಿಸಿದರು.

1992: ಭಾರತದ ಖ್ಯಾತ ಫುಟ್ಬಾಲ್ ಆಟಗಾರ ರಾಲ್ತೆ ಲಾಲ್ತುಮ್ಮಾವಿಯಾ ಜನಿಸಿದರು.

2008: ಭಾರತದ ಮಿಲಿಟರಿ ಅಧಿಕಾರಿ ಹವಾಲ್ದಾರ್ ಗಜೇಂದ್ರ ಸಿಂಗ್ ನಿಧನರಾದರು.

2008: ಭಾರತದ ಯೋಧ ಸಂದೀಪ್ ಉಣ್ಣಿಕೃಷ್ಣನ್ ನಿಧನರಾದರು.

 

Categories
e-ದಿನ

ನವೆಂಬರ್-27

ಪ್ರಮುಖ ಘಟನಾವಳಿಗಳು:

1703: ಮಹಾನ್ ಚಂಡಮಾರುತದಲ್ಲಿ ಮೊದಲ ಎಡ್ಡಿ ಕಲ್ಲು ಲೈಟ್ ಹೌಸ್ ನಾಶವಾಯಿತು.

1826: ಇಂಗ್ಲೆಂಡಿನಲ್ಲಿ ಘರ್ಷಣೆ ಪಂದ್ಯವನ್ನು ಜಾನ್ ವಾಲ್ಕರ್ ಕಂಡು ಹಿಡಿದರು.

1839: ಬಾಸ್ಟನ್ನಿನಲ್ಲಿ ಅಮೇರಿಕನ್ ಸಂಖ್ಯಾಶಾಸ್ತ್ರದ ಅಸೋಸಿಯೇಷನ್ ರೂಪಿಸಲಾಯಿತು.

1890: ಅಮೇರಿಕಾದ ಪೋಲಿಸ್ ಇಲಾಖೆಯ ಸನ್ನೆ ಬಾಕ್ಸನ್ನು ಕಾರ್ಯಾಚರಣೆಗೆ ತರಲಾಯಿತು.

1948: ಹೊಂಡಾ ಮೋಟಾರು ಸಂಸ್ಥೆ ಮೊದಲ ಬಾರಿಗೆ ಅಮೇರಿಕಾದಲ್ಲಿ ಆರಂಭವಾಯಿತು.

1989: ಜೀವಂತ ದಾನಿಯಿಂದ ಯಕೃತ್ತಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು.

2001: ಸೌರಮಂಡಲದ ಹೊರಗೆ ಮೊದಲ ಬಾರಿಗೆ ಗ್ರಹಗಳ ವಾತಾವರಣವನ್ನು ಹಬ್ಬಲ್ ಪತ್ತೆ ಮಾಡಿತು.

2005: ವಿಶ್ವದ ಮೊದಲ ಯಶಸ್ವಿ ಭಾಗಶಃ ಮುಖದ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು.

2006: ಒಳಬರುವ ರಾಕೆಟ್ಟನ್ನು ನಾಶಮಾಡಲು ಎರಡನೇ ಕ್ಷಿಪಣಿ ಬಳಸಿ ಭಾರತವು ತನ್ನ ಮೊದಲ ಯಶಸ್ವಿ ಪರೀಕ್ಷಾ ಪ್ರತಿಬಂಧವನ್ನು ಬ್ಯಾಲಿಸ್ಟಿಕ್ ಕ್ಷಿಪಣಿಯಲ್ಲಿ ನಡೆಸಿತು.

ಪ್ರಮುಖ ಜನನ/ಮರಣ:

1878: ಕವಿ ಮತ್ತು ವಿಮರ್ಶಕ ಜತಿಂದ್ರಮೋಹನ್ ಬಾಗ್ಚಿ ಜನಿಸಿದರು.

1888: ಲೋಕಸಭೆಯ ಮೊದಲ ಸ್ಪೀಕರ್ ಆಗಿದ್ದ ಗಣೇಶ್ ವಾಸುದೇವ್ ಮಾವಲಂಕರ್ ಜನಿಸಿದರು.

1907: ಲೇಖಕ, ಕವಿ ಹರಿವಂಶ್ ರೈ ಬಚ್ಚನ್ ಜನಿಸಿದರು.

1952: ಬಾಲುವುಡಿನ ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಪ್ಪಿ ಲಾಹಿರಿ ಜನಿಸಿದರು.

1962: ಕರ್ನಾಟಕ ರಾಜ್ಯ ಬಿಜೆಪಿ ಯೂನಿಟ್ಟಿನ ಮಾಜಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಜನಿಸಿದರು.

1986: ಖ್ಯಾತ ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಜನಿಸಿದರು.

2002: ಕವಿ, ಶಿಕ್ಷಣ ತಜ್ಞ ಶಿವಮಂಗಲ್ ಸಿಂಗ್ ಸುಮನ್ ನಿಧನರಾದರು.

2003: ಲೇಖಕ, ಕವಿ ಹರಿವಂಶ್ ರೈ ಬಚ್ಚನ್ ನಿಧನರಾದರು.

2008: ಭಾರತದ 7ನೇ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ನಿಧನರಾದರು.

2011: ಭಾರತೀಯ ಸಾರಂಗಿ ವಾದಕ ಮತ್ತು ಶಾಸ್ತ್ರೀಯ ಗಾಯಕ ಉಸ್ತಾದ್ ಸುಲ್ತಾನ್ ಖಾನ್ ನಿಧನರಾದರು.

 

Categories
e-ದಿನ

ನವೆಂಬರ್-26

 

ಪ್ರಮುಖ ಘಟನಾವಳಿಗಳು:

1716: ಅಮೇರಿಕಾದಲ್ಲಿ ಪ್ರದರ್ಶಿಸಬೇಕಾದ ಮೊದಲ ಸಿಂಹವನ್ನು ಬಾಸ್ಟನ್ನಿನಲ್ಲಿ ಪ್ರದರ್ಶಿಸಲಾಯಿತು.

1867: ಶೈತ್ಯೀಕರಣ ರೈಲ್ ರೋಡ್ ಕಾರಿಗೆ ಜೆ.ಬಿ.ಸುಥೆರ್ಲ್ಯಾಂಡ್ ಪೇಟೆಂಟ್ ಪಡೆದರು.

1895: ಹವಾಯಿಯಲ್ಲಿ ಕಬ್ಬು ಬೆಳೆಗಾರರ ಸಂಘವನ್ನು ಸ್ಥಾಪಿಸಲಾಯಿತು.

1949: ಭಾರತದ ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯವನ್ನು ರೂಪಿಸಿದ ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು.

1998: ಭಾರತದ ಲುಧಿಯಾನದಲ್ಲಿ ಖನ್ನಾ ರೈಲು ದುರಂತದಿಂದ 212 ಜನ ಮೃತ ಪಟ್ಟರು.

2008: ಭಾರತದ ಮುಂಬೈಯಲ್ಲಿ ಭಯೋತ್ಪಾದನೆ ಧಾಳಿ ನಡೆಯಿತು.

ಪ್ರಮುಖ ಜನನ/ಮರಣ:

1904: ಭಾರತೀಯ ಕವಿ, ವಿದ್ವಾಂಸ, ಬರಹಗಾರ, ತತ್ವಜ್ಞಾನಿ ಮತ್ತು ಸಾಂಸ್ಕೃತಿಕ ವಿಮರ್ಶಕ ಕೆ.ಡಿ.ಸೇತ್ನಾ ಜನಿಸಿದರು.

1919: ಇತಿಹಾಸಕಾರ ಮತ್ತು ಶಿಕ್ಷಣತಜ್ಞ ರಾಮ್ ಶರಣ್ ಶರ್ಮಾ ಜನಿಸಿದರು.

1921: ಅಮೂಲ್ ಸಂಸ್ಥೆಯ ಸಂಸ್ಥಾಪಕ, ಉದ್ಯಮಿ ವರ್ಗೀಸ್ ಕುರಿಯನ್ ಜನಿಸಿದರು.

1923: ಭಾರತ ಚಲನಚಿತ್ರಗಳ ಛಾಯಾಗ್ರಾಹಕ ವಿ.ಕೆ.ಮೂರ್ತಿ ಜನಿಸಿದರು.

1924: ಭಾರತದ ಕ್ರಿಕೆಟ್ ಆಟಗಾರ ಜಸು ಪಟೇಲ್ ಜನಿಸಿದರು.

1926: ಭಾರತದ ಕಾರ್ಯಕರ್ತ, ರಾಜಕಾರಣಿ ಮತ್ತು ಲೋಕಸಭೆಯ 10ನೇ ಸ್ಪೀಕರ್ ರಬಿ ರೇ ಜನಿಸಿದರು.

1961: “ಕೋಬ್ರಾ ಬೀರ್” ಸಂಸ್ಥೆಯ ಸಂಸ್ಥಾಪಕ ಕರಣ್ ಮತ್ತು ಬರಣ್ ಬಿಲ್ಲಿಮೋರಿಯಾ ಜನಿಸಿದರು.

1972: ಬಾಲಿವುಡ್ ಚಿತ್ರರಂಗದ ನಟ, ಮತ್ತು ನಿರ್ಮಾಪಕ ಅರ್ಜುನ್ ರಾಮ್ಪಾಲ್ ಜನಿಸಿದರು.

2005: ನಾಥುರಾಮ್ ಗೋಡ್ಸೆ ಅವರ ಅಣ್ಣ ಮತ್ತು ಗಾಂಧಿ ಹತ್ಯೆಯ ಆರೋಪಿ ಗೋಪಾಲ್ ಗೋಡ್ಸೆ ನಿಧನರಾದರು.

2012: ಲೇಖಕ ಮತ್ತು ಭಾಷಾಂತರಕಾರ ಎಂ.ಸಿ.ನಂಬೂದರಿಪಾದ್ ನಿಧನರಾದರು.

 

Categories
e-ದಿನ

ನವೆಂಬರ್-25

 

ಪ್ರಮುಖ ಘಟನಾವಳಿಗಳು:

1715: ಭಾರತೀಯ ಜೋಳವನ್ನು ಸ್ವಚ್ಚಗೊಳಿಸುವ ಮತ್ತು ಸಂಸ್ಕರಿಸುವ ಪ್ರಕ್ರಿಯೆಗೆ ಸಿಬಿಲ್ಲಾ ಥಾಮಸ್ ಪೇಟೆಂಟ್ ಪಡೆದರು.

1837: ವಿಲಿಯಂ ಕ್ರಾಮ್ಟನ್ ವಿದ್ಯುತ್ ಶಕ್ತಿಯ ರೇಷ್ಮೆ ಮಗ್ಗಗಳಿಗೆ ಪೇಟೆಂಟ್ ಪಡೆದರು.

1839: ದಕ್ಷಿಣದ ಪೂರ್ವ ಭಾರತವನ್ನು ಚಂಡಮಾರುತ ನಾಶಪಡಿಸಿ ಸುಮಾರು 20,000 ಹಡಗುಗಳು ಮತ್ತು 3,00,000 ಜನರು ಮೃತ ಪಟ್ಟರು.

1867: ಡೈನಮೈಟಿಗೆ ಆಲ್ಫ್ರೆಡ್ ನೋಬೆಲ್ ಪೇಟೆಂಟ್ ಪಡೆದರು.

1884: ಆವಿಯಾದ ಹಾಲಿಗೆ ಜೆ.ಬಿ.ಮೆಯನ್ ಬರ್ಗ್ ಪೇಟೆಂಟ್ ಪಡೆದರು.

1983: ವಿಶ್ವದ ಅತಿ ದೊಡ್ಡ ದರೋಡೆ 25,000,000 ಪೌಂಡ್ ಚಿನ್ನವನ್ನು ಇಂಗ್ಲೆಂಡಿನಲ್ಲಿ ದೋಚಲಾಯಿತು.

ಪ್ರಮುಖ ಜನನ/ಮರಣ:

1898: ಭಾರತೀಯ ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ದೆಬಾಕಿ ಬೊಸ್ ಜನಿಸಿದರು.

1926: ಭಾರತದ 21ನೇ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಜನಿಸಿದರು.

1940: ಪಶ್ಚಿಮ ಬಂಗಾಲದ 21ನೇ ರಾಜ್ಯಪಾಲರಾಗಿದ್ದ ಶ್ಯಾಮಲ್ ಕುಮಾರ್ ಸೆನ್ ಜನಿಸಿದರು.

1948: ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಜನಿಸಿದರು.

1964: ಖ್ಯಾತ ವೈಯಲಿನ್ ವಾದಕ ದ್ವಾರಂ ವೆಂಕಟಸ್ವಾಮಿ ನಾಯ್ಡು ನಿಧನರಾದರು.

1981: ಚಲನಚಿತ್ರಗಳ ಸಂಗೀತ ಸಂಯೋಜಕ ರೈಚಂದ್ ಬೋರಲ್ ನಿಧನರಾದರು.

1983: ಕ್ರಿಕೆಟ್ ಆಟಗಾರ ಝುಲಾನ್ ಗೋಸ್ವಾಮಿ ಜನಿಸಿದರು.

1984: ಭಾರತದ 5ನೇ ಉಪ ಪ್ರಧಾನ ಮಂತ್ರಿ ಯಶವಂತ ರಾವ್ ಚವ್ಹಾಣ್ ಅವರು ನಿಧನರಾದರು.

2014: ಭಾರತದ ನಟಿ, ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ ಸಿತಾರ ದೇವಿ ನಿಧನರಾದರು.

 

Categories
e-ದಿನ

ನವೆಂಬರ್-24

 

ಪ್ರಮುಖ ಘಟನಾವಳಿಗಳು:

1639: ಜೆರೆಮಿಯಾ ಮತ್ತು ವಿಲಿಯಂ ಅವರು ಶುಕ್ರನ ಚಲನೆಯನ್ನು ಮೊದಲ ಬಾರಿಗೆ ವೀಕ್ಷಿಸಿದ ಕಾರಣ ಸೌರಮಂಡಲದ ಗಾತ್ರವನ್ನು ಸ್ಥಾಪಿಸಲು ನೆರವಾಯಿತು.

1715: ಲಂಡನ್ನಿನ ಥೇಮ್ಸ್ ನದಿಯು ಹೆಪ್ಪುಗಟ್ಟಿತು.

1871: ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಯೋಜಿಸಲಾಯಿತು.

1874: ಅಮೇರಿಕಾದ ಸಂಶೋಧಕ ಜೋಸೆಫ್ ಗ್ಲಿಡ್ಡೆನ್ ಮುಳ್ಳು ಬೇಲಿಗೆ ಪೇಟೆಂಟ್ ಪಡೆದರು.

1932: ವಾಷಿಂಗ್ಟನ್ನಿನಲ್ಲಿ ಎಫ್.ಬಿ.ಐ. ಕ್ರೈಂ ಲ್ಯಾಬ್ ಅಧಿಕೃತವಾಗಿ ತೆರೆಯಲಾಯಿತು.

1949: ಬ್ರಿಟಿಷ್ ಉಕ್ಕು ಮತ್ತು ಕಬ್ಬಿಣ ಉದ್ಯಮವನ್ನು ರಾಷ್ಟ್ರೀಯತೆ ಮಾಡಲಾಯಿತು.

2011: ವಾಲ್-ಮಾರ್ಟ್ ಮತ್ತು ಟೆಸ್ಕೋ ಅಂತಹ ವಿದೇಶಿ ಸ್ವಾಮ್ಯದ ಚಿಲ್ಲರೆ ಮಾರಾಟಗಾರರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಭಾರತದ ಸರ್ಕಾರವು ಸಡಿಲಗೊಳಿಸಿತು.

2012: 808 ದಶಲಕ್ಷ ವೀಕ್ಷಣೆಯನ್ನು ಮೀರಿದ ಅತೀ ಹೆಚ್ಚು ವೀಕ್ಷಿಸಿದ ಯುಟ್ಯೂಬ್ ವಿಡಿಯೋ “ಗಂಗ್ನಂಸ್ಟೈಲ್” ಎಂದು ವರದಿಯಾಯಿತು.

2016: ಅಂತರರಾಷ್ಟ್ರೀಯ ಸಂಶೋಧನಾ ತಂಡವು ಅಕಶೇರುಕಗಳಲ್ಲಿ ಕಂಡುಬರುವ 1500 ನೂತನ ವೈರಸ್ ಗಳನ್ನು ಪತ್ತೆ ಮಾಡಿದರು.

ಪ್ರಮುಖ ಜನನ/ಮರಣ:

1675: ಭಾರತದ ಸಿಖ್ ಪಂಥದ ಗುರು ತೇಗ್ ಬಹಾದ್ದೂರ್ ನಿಧನರಾದರು.

1877: ಭಾರತೀಯ ಪೋಲೀಸ್ ಅಧಿಕಾರಿ ಕವಾಸ್ಜಿ ಜಮ್ಶೇದ್ಜಿ ಪೆಟಿಗಾರ್ ಜನಿಸಿದರು.

1941: ಭಾರತ ಮೂಲದ ಡ್ರಮ್ಮರ್ ಮತ್ತು ಗೀತರಚನೆಕಾರ ಪೀಟೆ ಬೆಸ್ಟ್ ಜನಿಸಿದರು.

1943: ಖ್ಯಾತ ಅರ್ಥಶಾಸ್ತ್ರಜ್ಞ ಮಾಂಟೇಕ್ ಸಿಂಗ್ ಅಹುವಾಲಿಯಾ ಜನಿಸಿದರು.

1944: ಬಾಲಿವುಡ್ ಖ್ಯಾತ ನಿರ್ದೇಶಕ ಅಮೋಲ್ ಪಾಲೆಕರ್ ಜನಿಸಿದರು.

1952: ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಜನಿಸಿದರು.

1961: ಬುಕ್ಕರ್ ಪ್ರಶಸ್ತಿ ವಿಜೇತ ಲೇಖಕಿ ಮತ್ತು ರಾಜಕೀಯ ಕಾರ್ಯಕರ್ತೆ ಅರುಂಧತಿ ರಾಯ್ ಜನಿಸಿದರು.

1983: ಬಾಲಿವುಡ್ ನಟಿ ಯಾಮಿ ಗುಪ್ತಾ ಜನಿಸಿದರು.

2005: ಹಿಂದಿ ಚಿತ್ರರಂಗದ ಖ್ಯಾತ ನಟಿ ಜಮುನಾ ಬರುವಾ ನಿಧನರಾದರು.

2014: ಭಾರತೀಯ ವ್ಯವಹಾರಗಳ ಸಚಿವರಾಗಿದ್ದ ಮುರಳಿ ದೇವರಾ ನಿಧನರಾದರು.

 

Categories
e-ದಿನ

ನವೆಂಬರ್-23

 

ಪ್ರಮುಖ ಘಟನಾವಳಿಗಳು:

1835: ಕುದುರೆಲಾಳ ತಯಾರಿಸುವ ಯಂತ್ರಕ್ಕೆ ಹೆನ್ರಿ ಬರ್ಡನ್ ಪೇಟೆಂಟ್ ಪಡೆದರು.

1848: ಬಾಸ್ಟನ್ನಿನಲ್ಲಿ ಮಹಿಳಾ ವೈದ್ಯಕೀಯ ಶಿಕ್ಷಣ ಸೊಸೈಟಿಯು ರೂಪಿತಗೊಂಡಿತು.

1863: ಬಣ್ಣದ ಛಾಯಾಚಿತ್ರಗಳನ್ನು ತಯಾರಿಸುವ ಪ್ರಕ್ರಿಯೆಗೆ ಪೇಟೆಂಟ್ ನೀಡಲಾಯಿತು.

1897: ಪೆನ್ಸಿಲ್ ಅನ್ನು ಚೂಪುಗೊಳಿಸುವ ಯಂತ್ರಕ್ಕೆ ಜೆ.ಎಲ್.ಲವ್ ಪೇಟೆಂಟ್ ಪಡೆದರು.

1909: ವಿಮಾನ ತಯಾರಿಸಲು ಮಿಲಿಯನ್ ಡಾಲರ್ ಕಾರ್ಪೊರೇಷನ್ ಸಂಸ್ಥೆಯನ್ನು ರೈಟ್ ಬ್ರದರ್ಸ್ ರೂಪಿಸಿದರು.

1948: “ಝೂಮಾರ್ ಲೆನ್ಸ್”ಗೆ ಡಾ.ಫ್ರಾಂಕ್ ಜಿ ಬಾಕ್ ಪೇಟೆಂಟ್ ಪಡೆದರು.

1992: 10,000,000 ಮೊಬೈಲ್ ದೂರವಾಣಿಯನ್ನು ಮಾರಾಟ ಮಾಡಲಾಯಿತು.

1996: ರಿಪಬ್ಲಿಕ್ ಆಫ್ ಅಂಗೋಲಾ ಅಧಿಕೃತವಾಗಿ ವಿಶ್ವ ವಾಣಿಜ್ಯ ಸಂಘಟನೆಗೆ ಸೇರಿತು.

ಪ್ರಮುಖ ಜನನ/ಮರಣ:

1926: ಭಾರತೀಯ ಆಧ್ಯಾತ್ಮಿಕ ಗುರು ಮತ್ತು ತತ್ವಜ್ಞಾನಿ ಸತ್ಯ ಸಾಯಿಬಾಬಾ ಜನಿಸಿದರು.

1930: ಭಾರತದ ಗಾಯಕಿ ಮತ್ತು ನಟಿ ಗೀತಾದತ್ ಜನಿಸಿದರು.

1937: ವೈಯರ್ ಲೆಸ್ ಅಲೆಗಳ ತಂತ್ರಜ್ಞಾನದ ಭೌತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ನಿಧನರಾದರು

1950: ಭಾರತೀಯ ಇಂಡೋಲಾಜಿಸ್ಟ್, ಲೇಖಕ ಮತ್ತು ಶಿಕ್ಷಣ ತಜ್ಞ ನ್ರಿಸಿಂಗಾ ಪ್ರಸಾದ್ ಭಾದುರಿ ಜನಿಸಿದರು

1971: ಭಾರತೀಯ ಚಿತ್ರರಂಗದ ನಟ, ನಿರ್ದೇಶಕ, ಲೇಖಕ, ಮತ್ತು ಚಿತ್ರಕಥೆಕಾರ ಸಾಜಿದ್ ಖಾನ್ ಜನಿಸಿದರು.

1979: ಭಾರತೀಯ ಮೂಲದ ಅಮೇರಿಕಾದ ನಟಿ ಮತ್ತು ಗಾಯಕಿ ಮೆರ್ಲೀ ಓಬೆರಾನ್ ನಿಧನರಾದರು.

1984: ನಟಿ ಮತ್ತು ನೃತ್ಯಗಾತಿ ಅಮೃತಾ ಖಾನ್ವೀಲ್ಕರ್ ಜನಿಸಿದರು

1986: ಖ್ಯಾತ ತೆಲಗು ನಟ ನಾಗ ಚೈತನ್ಯ ಜನಿಸಿದರು.

2003: ತಮಿಳುನಾಡಿನ ಡಿ.ಎಂ.ಕೆ ಪಕ್ಷದ ಪ್ರಮುಖ ನಾಯಕ ಮುರಸೋಲಿ ಮಾರನ್ ನಿಧನರಾದರು.

 

Categories
e-ದಿನ

ನವೆಂಬರ್-22

 

ಪ್ರಮುಖ ಘಟನಾವಳಿಗಳು:

1899: ಮಾರ್ಕೋನಿ ವೈಯರ್ ಲೆಸ್ ಸಂಸ್ಥೆ ಅಮೇರಿಕಾದ ನ್ಯೂಜರ್ಸಿಯಲ್ಲಿ ಸ್ಥಾಪಿಸಲಾಯಿತು.

1906: ಬರ್ಲಿನಿನ ಅಂತರರಾಷ್ಟ್ರೀಯ ರೇಡಿಯೋ ಟೆಲಿಗ್ರಾಫಿಕ್ ಕನ್ವೆನ್ಷನ್ SOS ಸಂಕೇತವನ್ನು ಅಳವಡಿಸಿಕೊಳ್ಳಲಾಯಿತು.

1910: ಗಾಲ್ಫ್ ಕ್ಲಬ್ ಗಳಲ್ಲಿ ಮರದ ದಿಬ್ಬಗಳ ಬದಲು ಸ್ಟೀಲ್ ದಿಬ್ಬವನ್ನು ಅಳವಡಿಸಲು ಆರ್ಥರ್ ಎಫ್ ನೈಟ್ ಪೇಟೆಂಟ್ ಪಡೆದರು.

1932: ಬೆಲೆಯನ್ನು ಮತ್ತು ಪ್ರಮಾಣವನ್ನು ವಿತರಿಸುವ ಪಂಪಿಗೆ ಪೇಟೆಂಟ್ ಪಡೆಯಲಾಯಿತು.

1935: ಅಮೇರಿಕಾದ ಮೊದಲ ಪೆಸಿಫಿಕ್ ಏರ್‍ ಮೇಲ್ ಅಂಚೆವಿತರಣೆ ಮಾಡಲಾಯಿತು.

1951: ಭಾರತದ ರಾಷ್ಟ್ರಪತಿ ಸಂವಿಧಾನದ ಆರ್ಟಿಕಲ್ 280ರ ಅಡಿಯಲ್ಲಿ ಭಾರತದ ಹಣಕಾಸು ಆಯೋಗವನ್ನು ಸ್ಥಾಪಿಸಲಾಯಿತು.

1954: ಅಮೇರಿಕಾದಲ್ಲಿ ಹ್ಯುಮೇನ್ ಸೊಸೈಟಿಯನ್ನು ಸ್ಥಾಪಿಸಲಾಯಿತು.

1969: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿಗಳು ಒಂದು ಜೀನಿನ ಪ್ರತ್ಯೇಕತೆಯನ್ನು ಘೋಷಿಸಿದರು.

1972: ಜೆನೆರಲ್ ಇನ್ಸುರೆನ್ಸ್ ಕಾರ್ಪರೇಷನ್ ಆಫ್ ಇಂಡಿಯಾ, ಭಾರತದ ಅತ್ಯಂತ ಹಳೆಯ ವಿಮೆ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1989: ವೀನಸ್, ಮಾರ್ಸ್, ಯುರೇನಸ್, ನೆಪ್ಟ್ಯೂನ್, ಸಾಟರ್ನ್ ಮತ್ತು ಚಂದ್ರನ ಸಂಯೋಗ ಜರುಗಿತು.

ಪ್ರಮುಖ ಜನನ/ಮರಣ:

1899: ಸ್ವಾತಂತ್ರ ಹೋರಾಟಗಾರ ಮತ್ತು ಬುಡಕಟ್ಟು ಜನಾಂಗದ ನಾಯಕ ಶಹೀದ್ ಲಕ್ಷ್ಮಣ್ ನಾಯಕ್ ಜನಿಸಿದರು.

1915: ನಟ, ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಕಿಶೋರ್ ಸಾಹು ಜನಿಸಿದರು.

1943: ರಾಜಕಾರಣಿ ಮತ್ತು ಭಾರತದ 24ನೇ ರಕ್ಷಣಾ ಸಚಿವರಾಗಿದ್ದ ಮುಲಾಯಂ ಸಿಂಗ್ ಯಾದವ್ ಜನಿಸಿದರು.

1955: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಜನಿಸಿದರು.

1963: ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯವರನ್ನು ಹತ್ಯೆ ಮಾಡಲಾಯಿತು.

1979: ತಮಿಳು ಮತ್ತು ತೆಲುಗು ಚಿತ್ರರಂಗದ ನಟ ಶಶಾಂಕ್ ಜನಿಸಿದರು.

1989: ಭಾರತದ ಕ್ರಿಕೆಟ್ ಆಟಗಾರ ವಿಜಯ್ ರಾಜೀಂದ್ರನಾಥ್ ನಿಧನರಾದರು.

1997: ಸ್ವಾತಂತ್ರ ಹೋರಾಟಗಾರ, ಗಾಯಕ, ಪತ್ರಕರ್ತ ಮತ್ತು ಚಿತ್ರ ನಿರ್ಮಾಪಕ ತ್ಯಾಗರಾಜನ್ ಸದಾಶಿವಂ ನಿಧನರಾದರು.

2012: ಭಾರತದ ಪತ್ರಕರ್ತ ಮತ್ತು ರಾಜಕಾರಣಿ ಪಿ.ಗೋವಿಂದ ಪಿಳ್ಳೈ ನಿಧನರಾದರು.

2016: ಭಾರತದ ಖ್ಯಾತ ಗಾಯಕ ಎಂ.ಬಾಲಮುರಳಿಕೃಷ್ಣ ನಿಧನರಾದರು.

 

Categories
e-ದಿನ

ನವೆಂಬರ್-21

 

ಪ್ರಮುಖ ಘಟನಾವಳಿಗಳು:

1871: ಸಿಗಾರ್ ಹಚ್ಚುವ ಯಂತ್ರಕ್ಕೆ ಎಂ.ಎಫ್.ಗೆಲೆಥ್ ಅವರು ಪೇಟೆಂಟ್ ಪಡೆದರು.

1877: ಥಾಮಸ್ ಎಡಿಸನ್ ತಮ್ಮ ಧ್ವನಿಲೇಖನ ಯಂತ್ರದ ಆವಿಷ್ಕಾರವನ್ನು ಘೋಷಿಸಿದರು.

1947: ಸ್ವತಂತ್ರ ಭಾರತದ ಮೊದಲ ಅಂಚೆ ಚೀಟಿಯಲ್ಲಿ ಭಾರತದ ಧ್ವಜವನ್ನು ಮುದ್ರಿಸಲಾಯಿತು. ಇದನ್ನು ಕೇವಲ ವಿದೇಶಿ ವ್ಯವಹಾರಗಳಿಗೆ ಬಳಸಲಾಯಿತು.

1962: ಚೀನಾ-ಭಾರತದ ಯುದ್ಧದಲ್ಲಿ ಚೀನಾ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿತು.

1963: ಇಸ್ರೋದ ಪ್ರಮುಖ ಸಂಶೋಧನಾ ವಿಭಾಗವಾದ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಸ್ಥಾಪಿಸಲಾಯಿತು.

1964: ವಿಶ್ವದ ಅತೀ ಉದ್ದ ತೂಗು ಸೇತುವೆಯಾದ “ವೆರ್ರಾಜಾನೋ ನ್ಯಾರೋಸ್” ನ್ಯೂಯಾರ್ಕ್ ನಗರದಲ್ಲಿ ತೆರೆಯಲಾಯಿತು.

1971: ಭಾಗಶಃ ಮುಕ್ತಿ ವಾಹಿನಿ (ಬಂಗಾಳದ ಗೆರಿಲ್ಲಾಗಳು) ಸಹಾಯದಿಂದ ಭಾರತೀಯ ಪಡೆಗಳು ಗರೀಬ್ ಪುರ್ ಕದನದಲ್ಲಿ ಪಾಕಿಸ್ತಾನ ಸೇನೆಯನ್ನು ಸೋಲಿಸಿತು.

ಪ್ರಮುಖ ಜನನ/ಮರಣ:

1899: ಒಡಿಸ್ಸಾದ ಮೊದಲ ಮುಖ್ಯಮಂತ್ರಿ ಆಗಿದ್ದ ಹರೆಕೃಷ್ಣ ಮಹಾತಾಬ್ ಜನಿಸಿದರು.

1920: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಣಿತತಜ್ಞ ಕೆ.ಎಸ್.ಚಂದ್ರಶೇಖರನ್ ಜನಿಸಿದರು.

1921: ತಮಿಳುನಾಡಿನ ಸಮಾಜಿಕ ಕಾರ್ಯಕರ್ತೆ ಸರೋಜಿನಿ ವರದಪ್ಪನ್ ಜನಿಸಿದರು.

1939: ಖ್ಯಾತ ನಟಿ, ನೃತ್ಯಗಾರ್ತಿ ಹೆಲೆನ್ ಜನಿಸಿದರು.

1970: ನೋಬಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ,ರಾಮನ್ ನಿಧನರಾದರು.

1985: ಭಾರತದ ಕ್ರಿಕೆಟ್ ಆಟಗಾರ ರಾಮನಾಥ್ ಕೆನ್ನಿ ನಿಧನರಾದರು.

1987: ಭಾರತದ ಚೆಸ್ ಆಟಗಾರ ಈಶಾ ಕರವಾಡೆ ಜನಿಸಿದರು.

1991: ಮದ್ರಾಸಿನ ಪ್ರಾಂಥ್ಯದಲ್ಲಿ ಶಿಕ್ಷಣ ಸಚಿವ ಟಿ.ಎಸ್.ಅವಿನಾಶ್ ಲಿಂಗಂ ಚೆಟ್ಟಿಯಾರ್ ನಿಧನರಾದರು.

2009: ಖ್ಯಾತ ಮೃದಂಗಂ ವಾದಕ ರಾಮನಾದ್ ರಾಘವನ್ ನಿಧನರಾದರು.

2015: ಭಾರತೀಯ-ಪಾಕಿಸ್ತಾನ ಕವಿ ಮತ್ತು ರಾಜಕಾರಣಿ ಅಮೀನ್ ಫಹೀಮ್ ನಿಧನರಾದರು.

 

Categories
e-ದಿನ

ನವೆಂಬರ್-20

 

ಪ್ರಮುಖ ಘಟನಾವಳಿಗಳು:

1888: ವಿಲ್ಲಿಯಂ ಬಂಡಿ ಟೈಮ್ ಕಾರ್ಡ್ ಗಡಿಯಾರಕ್ಕೆ ಪೇಟೆಂಟ್ ಪಡೆದರು.

1923: ಗ್ಯಾರೆಟ್ ಮಾರ್ಗನ್ ಅವರು ಸಂಚಾರ ಸಂಕೇತ (ಟ್ರಾಫಿಕ್ ಸಿಗ್ನಲ್) ಅನ್ನು ಕಂಡು ಹಿಡಿದು ಅದಕ್ಕೆ ಪೇಟೆಂಟ್ ಪಡೆದರು.

1979: ಮೆನ್ನೊಸ್ಟಾ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಅಮೇರಿಕಾದ ಮೊದಲ ಕೃತಕ ರಕ್ತ ವರ್ಗಾವಣೆ ಮಾಡಲಾಯಿತು.

1985: ಬಿಲ್ ಗೇಟ್ಸ್ ವಿಂಡೋಸ್-1 ಆಪರೇಟಿಂಗ್ ಸಿಸ್ಟಮ್ ಅನ್ನು ಮಾರುಕಟ್ಟೆಗೆ ಲೋಕಾರ್ಪಣೆ ಮಾಡಿದರು.

1988: ಭಾರತವು ಒಂದು ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಸೋವಿಯೆತ್ ಒಕ್ಕೂಟದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

1995: ಬ್ರಿಟಿಷ್ ಯುವರಾಣಿ ಡಯಾನ ಮೊದಲ ಬಾರಿಗೆ ತನ್ನ ವಿವಾಹೇತರ ಸಂಬಂಧವನ್ನು ಒಪ್ಪಿಕೊಂಡರು.

1998: ಬಾಹ್ಯಾಕಾಶದ ನಿಲ್ದಾಣದ ಮೊದಲ ಮಾಡ್ಯೂಲ್ ಜರಯಾವನ್ನು ಪ್ರಾರಂಭಿಸಲಾಯಿತು.

2009: ಬ್ಯಾಟಿಂಗ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ಆಟದಲ್ಲಿ 30,000 ರನ್ನುಗಳನ್ನು ಪೂರೈಸಿದ ಮೊದಲ ವ್ಯಕ್ತಿ.

2012: ತೊಷಿಬಾ ಪರಮಾಣು ವಿಪತ್ತುಗಳಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ರೋಬಾಟ್ ಅನ್ನು ಅನಾವರಣ ಮಾಡಿತು.

ಪ್ರಮುಖ ಜನನ/ಮರಣ:

1750: ಮೈಸೂರಿನ ರಾಜ ಟಿಪ್ಪು ಸುಲ್ತಾನ್ ಜನಿಸಿದರು.

1905: ಭಾರತದ ವಕೀಲ ಮತ್ತು ರಾಜಕಾರಣಿ ಮಿನೂ ಮಸಾನಿ ಜನಿಸಿದರು.

1935: ಖ್ಯಾತ ಓಟಗಾರ ಮಿಲ್ಕಾ ಸಿಂಗ್ ಜನಿಸಿದರು.

1950: ಭಾರತದ ಚಲನಚಿತ್ರಗಳ ಸಂಗೀತ ಸಂಯೋಜಕ ಮತ್ತು ಗಾಯಕ ದೇವಾ ಜನಿಸಿದರು.

1950: ಮರಾಠಿ ಚಿತ್ರರಂಗದ ಮತ್ತು ಕಿರುತೆರೆಯ ನಟಿ ಸುಹಾಸಿನಿ ಮುಳೈ ಜನಿಸಿದರು.

1962: ಖ್ಯಾತ ಚಲನಚಿತ್ರ ನಿರ್ದೇಶಕ ರಾಜಕುಮಾರ್ ಹಿರಾನಿ ಜನಿಸಿದರು.

1975: 39 ವರ್ಷಗಳು ಸ್ಪೇನನ್ನು ಆಳಿದ ಜೆನೆರಲ್ ಫ್ರಾನ್ಸಿಸ್ಕೋ ಫ್ರಾಂಕೋ ಅವರನ್ನು ಹತ್ಯೆ ಮಾಡಲಾಯಿತು.

1989: ಭಾರತೀಯ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ “ಗಾನ್ಹಿರಾ” ಹಿರಾಬಾಯ್ ಬರೋಡ್ಕರ್ ನಿಧನರಾದರು.

1992: ಭಾರತಕ್ಕೆ ಹಲವಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪದಕಗಳನ್ನು ಶೂಟಿಂಗ್ ನಲ್ಲಿ ಪಡೆದ ಆಟಗಾರ್ತಿ ಆಶರ್ ನೋರಿಯಾ ಜನಿಸಿದರು.

2010: ಮಲಯಾಳಂ ರಂಗಭೂಮಿ ಮತ್ತು ಚಿತ್ರ ನಟಿ ಶಾಂತಾ ದೇವಿ ನಿಧನರಾದರು.

 

Categories
e-ದಿನ

ನವೆಂಬರ್-19

 

ಪ್ರಮುಖ ಘಟನಾವಳಿಗಳು:

1863: ಅಮೇರಿಕಾದ ನಾಗರೀಕ ಯುದ್ಧದಲ್ಲಿ ಹೋರಾಡಿದ ಗೆಟ್ಸಬರ್ಗ್ ಯುದ್ಧದ ಸ್ಥಳದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಅಬ್ರಹಾಮ್ ಲಿಂಕನ್ ಮಾತನಾಡಿದರು.

1872: ಬಾಸ್ಟನ್ನಿನ ಇ.ಡಿ.ಬಾರ್ಬರ್ ಮೊದಲ “ಕ್ಯಾಲ್ಕುಲೇಟರ್” ಲೆಕ್ಕ ಮಾಡುವ ಯಂತ್ರಕ್ಕೆ ಪೇಟೆಂಟ್ ಪಡೆದರು.

1893: ನ್ಯೂಯಾರ್ಕ್ ವರ್ಲ್ಡ್ ಬಹುವರ್ಣಗಳಲ್ಲಿಮೊದಲಪತ್ರಿಕೆಯು ಮುದ್ರಿತವಾಯಿತು.

1895: ಫ್ರೆಡ್ರಿಕ್ ಇ ಬ್ಲಾಯಿಸ್ಡೆಲ್ ಪೆನ್ಸಿಲಿಗೆ ಪೇಟೆಂಟ್ ಪಡೆದರು.

1905: ಉಗಿ ದೋಣಿ ಹಿಲ್ಡಾ ಇಂಗ್ಲಿಷ್ ಕಾಲುವೆಯಲ್ಲಿ ಮುಳುಗಿದ ಕಾರಣ 100 ಮಂದಿ ಮೃತ ಪಟ್ಟರು.

1965: ಕೆಲ್ಲಾಗ್ಸಿನ ಪಾಪ್ ಟಾರ್ಟ್ಸ್ ಪೇಸ್ಟ್ರಿಯನ್ನು ತಯಾರಿಸಲಾಯಿತು.

1970: ಕ್ಯಾಲಿಫೋರ್ನಿಯಾದ ಗೋಲ್ಡನ್ ಗೇಟ್ ಪಾರ್ಕ್ ಅನ್ನು ಐತಿಹಾಸಿಕ ತಾಣವಾಗಿ ನೊಂದಾಯಿಸಲಾಯಿತು.

1977: ಒಂದು ದೈತ್ಯಾಕಾರದ ಚಂಡಮಾರುತವು ಆಂಧ್ರಪ್ರದೇಶ ಮತ್ತು ಅಕ್ಕಪಕ್ಕ ಪ್ರದೇಶದಲ್ಲಿ ಬಂದು ತೀವ್ರ ಹಾನಿ ಮಾಡಿತು.

1982: 9ನೇ ಏಷಿಯನ್ ಗೇಮ್ಸ್ ನವದೆಹಲಿಯಲ್ಲಿ ಆರಂಭವಾಯಿತು.

1994: ನಟಿ ಐಶ್ವರ್ಯ ರೈ ಅವರನ್ನು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತೆಯಾಗಿ ಘೋಷಿಸಲಾಯಿತು.

ಪ್ರಮುಖ ಜನನ/ಮರಣ:

1828: 1857 ರ ಧಂಗೆಯಲ್ಲಿ ಬ್ರಿಟೀಷರ ವಿರುದ್ದ ಯುದ್ಧ ಮಾಡಿ ವೀರಮರಣ ಹೊಂದಿದ ಭಾರತದ ರಾಷ್ಟ್ರೀಯತೆಯ ಚಿನ್ಹೆಯಾದ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಜನಿಸಿದರು.

1917: ಭಾರತದ 3ನೇ ಪ್ರಧಾನಿಯಾದ ಇಂದಿರಾ ಗಾಂಧಿ ಜನಿಸಿದರು.

1922: ಸಂಯೋಜಕ, ಚಿತ್ರಕಥೆಗಾರ ಮತ್ತು ನಿರ್ದೇಶಕ ಸಲೀಲ್ ಚೌಧರಿ ಜನಿಸಿದರು.

1923: ಸಂಗೀತ ಸಂಯೋಜಕ ಸಲೀಲ್ ಚೌಧರಿ ಪಶ್ಚಿಮ ಬಂಗಾಳದಲ್ಲಿ ಜನಿಸಿದರು.

1928: ಭಾರತದ ಖ್ಯಾತ ಕುಸ್ತಿಪಟು, ನಟ, ರಾಜಕಾರಣಿ ಧಾರಾ ಸಿಂಗ್ ಜನಿಸಿದರು.

1951: ಬಾಲಿವುಡಿನ ಖ್ಯಾತ ಝೀನತ್ ಅಮಾನ್ ಜನಿಸಿದರು.

1968: ಖ್ಯಾತ ಬಾಲಿವುಡ್ ಚಿತ್ರರಂಗದ ನಿರ್ದೇಶಕ ಮಣಿ ಶಂಕರ್ ಜನಿಸಿದರು.

1974: ಭಾರತದ ನಟ, ಮತ್ತು ಗಾಯಕ ಅರುಣ್ ವಿಜಯ್ ಜನಿಸಿದರು.

1975: 1994ರ ವಿಶ್ವ ಸುಂದರಿ, ನಟಿ ಮತ್ತು ಮಾಡೆಲ್ ಸುಶ್ಮಿತಾ ಸೆನ್ ಜನಿಸಿದರು.

1979: ಕಿರುತೆರೆಯ ನಟ ಭಕ್ತಿಯಾರ್ ಇರಾನಿ ಜನಿಸಿದರು.

 

Categories
e-ದಿನ

ನವೆಂಬರ್-18

 

ಪ್ರಮುಖ ಘಟನಾವಳಿಗಳು:

1477: ವಿಲಿಯಂ ಕ್ಲಾಕ್ಸ್ಟನ್ ಇಂಗ್ಲೆಂಡಿನಲ್ಲಿ ಮುದ್ರಿಸಿದ ಮೊದಲ ದಿನಾಂಕದ ಪುಸ್ತಕವನ್ನು ಪ್ರಕಟಿಸಿದರು.

1727: ಅಂಬರಿನ ಮಹಾರಾಜ ಜೈ ಸಿಂಗ್-II ಜೈಪುರ ನಗರಕ್ಕೆ ಅಡಿಪಾಯ ಹಾಕಿದರು.

1805: ಅಮೇರಿಕಾದಲ್ಲಿ ಮೊದಲ ಮಹಿಳಾ ಕ್ಲಬ್ ಆದ ಮಹಿಳಾ ಚಾರಿಟಬಲ್ ಸೊಸೈಟಿ ಯನ್ನು ತೆರೆಯಲಾಯಿತು.

1902: ಬ್ರೂಕ್ಲಿನ್ನಿನ ಗೊಂಬೆ ಮಾಡುವವರಾದ ಮಾರಿಸ್ ಮಿಟ್ಚನ್ ಟೆಡ್ಡಿಬೇರ್ ಅನ್ನು ಅಮೇರಿಕಾದ ಅಧ್ಯಕ್ಷ ಟೆಡ್ಡಿ ರೂಸ್ವೆಲ್ಟ್ ಅವರ ಹೆಸರಿನ ಮೇಲೆ ಟೆಡ್ಡಿ ಬೇರ್ ಎಂದು ನಾಮಕರಿಸಿದರು.

1911: ಭಾರತದಲ್ಲಿ ಉಚಿತ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪರಿಚಯಿಸಲಾಯಿತು.

1929: ಡಾ.ವ್ಲಾಡಿಮರ್ ಕೆ ಜ್ವಾರ್ಕಿನ್ “ಕೀನ್ಸ್ಕೋಪ್” ಅನ್ನು ಪ್ರದರ್ಶಿಸಿದರು.

1959: ಭಾರತೀಯ ನೌಕಾಪಡೆಯ ಪ್ರಮುಖ ಐ.ಎನ್.ಎಸ್.ವಿರಾಟನ್ನು ಭಾರತಕ್ಕೆ 1987 ರಲ್ಲಿ ವರ್ಗಾಯಿಸುವ ಮೊದಲು ರಾಯಲ್ ನೌಕಾಪಡೆಯಲ್ಲಿ ನೇಮಿಸಲಾಯಿತು.

1973: ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯನ್ನು ಘೋಷಿಸಲಾಯಿತು.

1983: ಪರಮಾಣು ಶಸ್ತ್ರಾಸ್ತ್ರಗಳಿಗೆ ಅಗತ್ಯವಾದ ಶ್ರೀಮಂತ ಯುರೇನಿಯಂ ಅನ್ನು ಉತ್ಪಾದಿಸಲು ಸಮರ್ಥಕವಾಗಿದೆ ಎಂದು ಅರ್ಜೆಂಟೀನಾ ಘೋಷಿಸಿತು.

1997: ಅಪರೂಪದ ಕಪ್ಪು ಮುತ್ತಿನ ಹಾರವನ್ನು $902,000 ಗೆ ಹರಾಜು ಮಾಡಲಾಯಿತು.

2011: ವಿಡಿಯೋ ಗೇಮ್ “ಮೈನ್ಕ್ರಾಫ್ಟ್” ಅನ್ನು ಅಧಿಕೃತವಾಗಿ ಮಾಜಂಗ್ ಅವರು ಬಿಡುಗಡೆ ಮಾಡಿದರು.

ಪ್ರಮುಖ ಜನನ/ಮರಣ:

1901: ಭಾರತದ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟ ವಿ.ಶಾಂತಾರಾಮ್ ಜನಿಸಿದರು.

1910: ಖ್ಯಾತ ಸ್ವಾತಂತ್ರ ಹೋರಾಟಗಾರ ಮತ್ತು ಕ್ರಾಂತಿಕಾರಿ ಬಾತುಕೇಶ್ವರ್ ದತ್ ಜನಿಸಿದರು.

1936: ಭಾರತದ ವಕೀಲರು ಮತ್ತು ರಾಜಕಾರಣಿ ವಿ.ಓ.ಚಿದಂಬರಂ ಪಿಳ್ಳೈ ನಿಧನರಾದರು.

1946: ನಗರಾಭಿವೃದ್ಧಿ ಪ್ರಾಧಿಕಾರದ ಸಚಿವರಾಗಿದ್ದ ಕಮಲನಾಥ್ ಜನಿಸಿದರು.

1978: ಚಲನಚಿತ್ರಗಳ ಮಾಡುವವರು, ಬರಹಗಾರ, ನಿರ್ದೇಶಕ ಧಿರೇಂದ್ರ ಗಂಗೂಲಿ ನಿಧನರಾದರು.

1998: ಭಾರತ-ಕೆನೆಡಾದ ಪ್ರಕಾಶಕರು ಮತ್ತು ಮುದ್ರಕರಾದ ತಾರಾ ಸಿಂಗ್ ಹಾಯರ್ ನಿಧನರಾದರು.

2009: ಖ್ಯಾತ ಚಿತ್ರ ನಿರ್ದೇಶಕ ಲೇಖಕ ಮತ್ತು ನಟ ಅಬ್ರಾರ್ ಅಲ್ವಿ ನಿಧನರಾದರು.

2013: ನಾದಸ್ವರಂ ವಾದಕ ಮತ್ತು ಸಂಯೋಜಕ ಎಸ್.ಆರ್.ಡಿ.ವೈಧ್ಯನಾಥನ್ ನಿಧನರಾದರು.

2014: ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಸಿ.ರುದ್ರಯ್ಯ ನಿಧನರಾದರು.

 

Categories
e-ದಿನ

ನವೆಂಬರ್-17

 

ಪ್ರಮುಖ ಘಟನಾವಳಿಗಳು:

1800: ಭಾಗಶಃ ಪೂರ್ಣಗೊಂಡ ವಾಷಿಂಗ್ಟನ್ ಡಿ.ಸಿ.  ಕ್ಯಾಪಿಟಲ್ ಕಟ್ಟಡದಲ್ಲಿ ಅಮೇರಿಕಾದ ಕಾಂಗ್ರೆಸ್ ತನ್ನ ಮೊದಲ ಅಧಿವೇಶನವನ್ನು ನಡೆಸಿತು.

1869: ಈಜಿಪ್ಟಿನಲ್ಲಿ ಸೂಯೇಜ್ ಕಾಲುವೆಯನ್ನು ತೆರೆಯಲಾಯಿತು. ಇದು ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರಗಳನ್ನು ಸಂಪರ್ಕಿಸುತ್ತದೆ.

1904: ಮೊದಲ ಜಲಾಂತರ್ಗಾಮಿಯ ನೀರೊಳಗಿನ ಪ್ರಯಾಣವನ್ನು ಇಂಗ್ಲೆಂಡಿನಿಂದ ಐಲ್ ಆಫ್ ವೈಟ್ ಗೆ ಮಾಡಲಾಯಿತು.

1951: ವಿಶ್ವದ ಮೊದಲ ಪರಮಾಣು ಶಕ್ತಿಯ ತಾಪನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಕುರಿತು ಬ್ರಿಟನ್ ವರದಿ ಮಾಡಿತು.

1962: ವಾಷಿಂಗ್ಟನ್ನಿನ ಡಲ್ಲಾಸ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಮೇರಿಕಾದ ಅಧ್ಯಕ್ಷ ಕೆನಡಿ ಅವರಿಗೆ ಸಮರ್ಪಿಸಲಾಯಿತು.

1970: ದೌಗ್ಲಾಸ್ ಏಗೆಲ್ಬರ್ಟ್ ಅವರಿಗೆ ಮೊದಲ ಕಂಪ್ಯೂಟರ್ ಮೌಸಿಗೆ ಪೇಟೆಂಟ್ ಪಡೆದರು.

1982: ಎಂಪೈರ್ ಸ್ಟೇಟ್ ಕಟ್ಟಡವನ್ನು ಐತಿಹಾಸಿಕ ಸ್ಥಳಗಳಲ್ಲಿ ಒಂದು ಎಂದು ನೋಂದಾಯಿಸಲಾಯಿತು.

1988: ಬೆನೆಜಿರ್ ಭುಟ್ಟೋ ಅವರು ಇಸ್ಲಾಮ್ ದೇಶದಲ್ಲಿ ನಾಯಕಿಯಾದ ಮೊದಲ ಮಹಿಳೆಯಾದರು.

2006: ಅಂಶ 111 ಅಥವಾ ರೊಟೆಗ್ನಿಯಂ (ಆರ್.ಜಿ)ನ ಅಧಿಕೃತ ಹೆಸರನ್ನು ನೀಡಲಾಯಿತು.

2010: ಸಂಶೋಧಕರು 38 ವಿರೋಧಿ ಹೈಡ್ರೋಜೆನ್ ಅಣುಗಳನ್ನು ಹಿಡಿದು ಇಟ್ಟರು. ವಿರೋಧಿ ಅಣುಗಳು ಮಾನವನ ಕೈಗೆ ಸಿಕ್ಕಿದ್ದು ಇದೇ ಮೊದಲ ಬಾರಿ.

ಪ್ರಮುಖ ಜನನ/ಮರಣ:

1920: ಖ್ಯಾತ ತಮಿಳು ಚಿತ್ರರಂಗದ ನಟ ಜೆಮಿನಿ ಗಣೇಶನ್ ಜನಿಸಿದರು.

1928: ಪ್ರಖ್ಯಾತ ಭಾರತೀಯ ರಾಷ್ಟ್ರೀಯತಾವಾದಿ ಮತ್ತು ಬರಹಗಾರ ಲಾಲಾ ಲಜಪತ್ ರಾಯ್ ಅವರು ನಿಧನರಾದರು.

1935: ಖ್ಯಾತ ಸಿತಾರ್ ಮತ್ತು ಸುರ್ಬಹಾರ್ ವಾದಕ ಇಮ್ರತ್ ಖಾನ್ ಜನಿಸಿದರು.

1941: ಭಾರತದ ಖ್ಯಾತ ಲೇಖಕ ಮತ್ತು ಶಿಕ್ಷಣತಜ್ಞ ಟಿ.ಎಸ್.ವೆಂಕಣ್ಣಯ್ಯ ಜನಿಸಿದರು.

1971: ಬಂಗಾಲಿ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಲೇಖಕ ದೆಬಾಕಿ ಬೋಸ್ ನಿಧನರಾದರು.

1973: ಭಾರತದ ಆಧ್ಯಾತ್ಮಿಕ ನಾಯಕಿ ಮಿರ್ರಾ ಅಲ್ಫಾಸ್ಸಾ ನಿಧನರಾದರು.

1982: ಖ್ಯಾತ ಭಾರತದ ಕ್ರಿಕೆಟ್ ಆಟಗಾರ ಯುಸುಫ್ ಫಥಾನ್ ಜನಿಸಿದರು.

2003: ಸಂಗೀತಕಾರ ಮತ್ತು ಗಾಯಕ ಸುರ್ಜಿತ್ ಬಿಂದ್ರಾಕಿಯಾ ನಿಧನರಾದರು.

2012: ಭಾರತದ ಖ್ಯಾತ ಉದ್ಯಮಿ ಪಾಂಟಿ ಚಡ್ಡಾ ನಿಧನರಾದರು.

2012: ಭಾರತದ ವ್ಯಂಗ್ಯಚಿತ್ರಕಾರ ಮತ್ತು ರಾಜಕಾರಣಿ ಬಾಳಾ ಠಾಕರೆ ನಿಧನರಾದರು.

 

Categories
e-ದಿನ

ನವೆಂಬರ್-16

 

ಪ್ರಮುಖ ಘಟನಾವಳಿಗಳು:

1841: ಕಾರ್ಕ್ ನಲ್ಲಿ ತುಂಬಿದ ಜೀವ ರಕ್ಷಕಕ್ಕಾಗಿ ನ್ಯೂಯಾರ್ಕಿನ ಎನ್.ಇ.ಗುವೆರಿನ್ ಪೇಟೆಂಟ್ ಪಡೆದರು.

1914: ಫೆಡರಲ್ ರಿಸರ್ವ್ ಸಿಸ್ಟಮ್ ಅನ್ನು ಔಪಚಾರಿಕವಾಗಿ ತೆರೆಯಲಾಯಿತು.

1915: ಕೊಕೊ-ಕೋಲಾ ಅದರ ಮೂಲ ರೂಪವನ್ನು ಪೇಟೆಂಟ್ ಮಾಡಿದ ಬಾಟಲಿಗೆ ಪಡೆಯಿತು.

1945: ಯುನೆಸ್ಕೋ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1945: ಎರಡು ಹೊಸ ಅಂಶವಾದ ಅಮರೇಷಿಯಂ (ಪರಮಾಣು ಸಂಖ್ಯೆ 95) ಮತ್ತು ಕ್ಯೂರಿಯಂ (ಪರಮಾಣು ಸಂಖ್ಯೆ 96) ಪತ್ತೆ ಮಾಡಲಾಯಿತು.

1955: ಒಂದು ಗಂಟೆಗೆ 322 ಮೈಲಿ ವೇಗ ತಲುಪಿದ ಮೊದಲ ಸ್ಪೀಡ್ ಬೋಟ್ ದಾಖಲೆ ನಿರ್ಮಿಸಿತು.

1962: ಕುವೇಟ್ ಸಂವಿಧಾನವನ್ನು ಅಳವಡಿಸಿಕೊಂಡಿತು.

1963: ಟಚ್-ಟೋನ್ ದೂರವಾಣಿಯನ್ನು ಪರಿಚಯಿಸಲಾಯಿತು.

1981: ಹೆಪಾಟಿಟಿಸ್ ಬಿ ಕಾಯಿಲೆಗೆ ಔಷಧಿಯನ್ನು ಪತ್ತೆ ಮಾಡಿ ಅದನ್ನು ಅಂಗೀಕರಿಸಲಾಯಿತು.

1988: ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಲು ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಬೆನೆಜಿರ್ ಭುಟ್ಟೊ ಆಯ್ಕೆಯಾದರು.

2015: 1111 ಕ್ಯಾರೆಟಿನ ಶತಮಾನದ ಅತಿ ದೊಡ್ಡ ವಜ್ರವನ್ನು ಬೊಟ್ಸವಾನದ ಕರೋವೆ ಗಣಿಯಲ್ಲಿ ಪತ್ತೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1897: ಭಾರತೀಯ ಶಿಕ್ಷಣ ತಜ್ಞ ಚೌಧರಿ ರೆಹಮತ್ ಅಲಿ ಅವರು ಜನಿಸಿದರು.

1909: ಭಾರತೀಯ-ಪಾಕಿಸ್ತಾನದ ಧಾರ್ಮಿಕ ನಾಯಕ ಮಿರ್ಜಾ ನಾಸಿರ್ ಅಹಮದ್ ಅವರು ಜನಿಸಿದರು.

1962: ಬಹುಭಾಷಾ ನಟಿ ಅಂಬಿಕಾ ಅವರು ಜನಿಸಿದರು.

1963: ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತೆ, ನಟಿ, ನೃತ್ಯಗಾರ್ತಿ ಮೀನಾಕ್ಷಿ ಶೇಷಾದ್ರಿ ಅವರು ಜನಿಸಿದರು.

1973: ಬ್ಯಾಡ್ಮಿಂಟನ್ ಆಟಗಾರ ಮತ್ತು ತರಬೇತುಗಾರ ಪುಲ್ಲೆಲ್ಲ ಗೋಪಿಚಂದ್ ಜನಿಸಿದರು.

1974: ಮೆಚ್ಚುಗೆ ಪಡೆದ ಭಾರತೀಯ ಛಾಯಾಗ್ರಾಹಕ ನಿರಾವ್ ಶಾಹ್ ಜನಿಸಿದರು.

1985: ಖ್ಯಾತ ಹಿಂದಿ ಚಿತ್ರನಟ ಆಧಿತ್ಯ ರಾಯ್ ಕಪೂರ್ ಜನಿಸಿದರು.

2009: ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಗಳ ಸಂಸ್ಥಾಪಕ ಮತ್ತು ಖ್ಯಾತ ನೇತ್ರ ತಜ್ಞ ಜೈವೀರ್ ಅಗರ್ವಾಲ್ ನಿಧನರಾದರು.

2013: ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತನ್ವೀರ್ ಅಹಮದ್ ಖಾನ್ ಅವರು ನಿಧನರಾದರು.

 

Categories
e-ದಿನ

ನವೆಂಬರ್-15

 

ಪ್ರಮುಖ ಘಟನಾವಳಿಗಳು:

1806: ಅಮೇರಿಕಾದ ಕಾಲೇಜಿನ ಮೊದಲ ನಿಯತಕಾಲಿಕೆ ಯೇಲ್ ಲಿಟರರಿ ಗವರ್ನ್ಮೆಂಟ್ ತನ್ನ ಮೊದಲ ಸಂಚಿಕೆಯನ್ನು ಪ್ರಕಟಿಸಿತು.

1837: ಐಸಾಕ್ ಪಿಟ್ಮ್ಯಾನ್ ತನ್ನ ಶೀಘ್ರಲಿಪಿ ಬರವಣಿಯನ್ನು ಪರಿಚಯಿಸಿದರು.

1869: ಉಚಿತ ಅಂಚೆ ವಿತರಣೆಯನ್ನು ಔಪಚಾರಿಕವಾಗಿ ಉದ್ಘಾಟಿಸಲಾಯಿತು.

1920: ಲೀಗ್ ಆಫ್ ನೇಷನ್ಸ್ ಮೊದಲ ಬಾರಿಗೆ ಭೇಟಿ ಮಾಡಿತು.

1932: ವಾಲ್ಟ್ ಡಿಸ್ನಿ ಕಲೆಯ ಶಾಲೆಯನ್ನು ತೆರೆಯಲಾಯಿತು.

1949: ಮಹಾತ್ಮಾ ಗಾಂಧಿಯವರನ್ನು ಕೊಲೆ ಮಾಡಿದ ನಾಥೂರಾಮ ಗೋಡ್ಸೆ ಅವರನ್ನು ನೇಣಿಗೇರಿಸಲಾಯಿತು.

1971: ಇಂಟೆಲ್ ಸಂಸ್ಥೆಯು ತನ್ನ 4004 ಪ್ರೊಸೆಸ್ಸರ್ ಅನ್ನು ಮೊದಲ ಬಾರಿಗೆ ಜಾಹಿರಾತು ಮಾಡಿತು.

2000: ಝಾರ್ಖಂಡ್ ರಾಜ್ಯವು ಅಸ್ತಿತ್ವಕ್ಕೆ ಬಂದಿತು.

2013: ಸೋನಿ ಸಂಸ್ಥೆಯು ಪ್ಲೇ ಸ್ಟೇಷನ್ 4 ಅನ್ನು ಬಿಡುಗಡೆಗೊಳಿಸಿತು, ಹಾಗೂ ಒಂದೇ ದಿನದಲ್ಲಿ 1 ದಶಲಕ್ಷ ಘಟಕಗಳನ್ನು ಮಾರಾಟ ಮಾಡಿತು.

ಪ್ರಮುಖ ಜನನ/ಮರಣ:

1876: ಸಂಭಾವ್ಯ ಸಿದ್ದಾಂತದಲ್ಲಿ ಪರಿಣಿತಿಯನ್ನು ಹೊಂದಿದ ಭಾರತೀಯ ಗಣಿತತಜ್ಞ ಗಣೇಶ್ ಪ್ರಸಾದ್ ಜನಿಸಿದರು.

1914: ಭಾರತೀಯ ವಕೀಲ ಮತ್ತು ನ್ಯಾಯಾಧೀಶರಾಗಿದ್ದ ವಿ.ಆರ್.ಕೃಷ್ಣ ಅಯ್ಯರ್ ಜನಿಸಿದರು.

1949: ಭಾರತೀಯ ಕಾರ್ಯಕರ್ತ ಮತ್ತು ಗಾಂಧಿಯವರ ಕೊಲೆಯಲ್ಲಿ ಭಾಗಿ ಆಗಿದ್ದ ನಾರಾಯಣ್ ಆಪ್ಟೆ ನಿಧನರಾದರು.

1949: ಭಾರತೀಯ ಕಾರ್ಯಕರ್ತ ಮತ್ತು ಗಾಂಧಿಯವರ ಕೊಲೆ ಮಾಡಿದ ನಾಥುರಾಮ್ ಗೋಡ್ಸೆ ಅವರನ್ನು ಗಲ್ಲಿಗೆ ಏರಿಸಲಾಯಿತು.

1936: ಭಾರತ-ಕೆನೆಡಿಯನ್ ಪತ್ರಕರ್ತೆ ಮತ್ತು ಪ್ರಕಾಶಕಿ ತಾರಾ ಸಿಂಗ್ ಹಾಯರ್ ಜನಿಸಿದರು.

1982: ಭಾರತೀಯ ತತ್ವಗುರು, ಗಾಂಧಿ ವಾದಕ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿನೋಭಾ ಬಾವೆ ನಿಧನರಾದರು.

1985: ತೆಲುಗು ಮತ್ತು ತಮಿಳು ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ದೇಶಕ ಎಸ್.ತಮನ್ ಜನಿಸಿದರು.

1986: ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜನಿಸಿದರು.

1986: ಭಾರತೀಯ ನಾಟಕಕಾರ, ಸಾಹಿತಿ ಮತ್ತು ಪತ್ರಕರ್ತ ಬಿದಾಯಕ್ ಭಟ್ಟಾಚಾರ್ಯ ನಿಧನರಾದರು.

2012: ಭಾರತದ 18ನೇ ರಕ್ಷಣಾ ಸಚಿವರಾಗಿದ್ದ ಕೆ.ಸಿ.ಪಂತ್ ನಿಧನರಾದರು.

 

Categories
e-ದಿನ

ನವೆಂಬರ್-14

 

ಪ್ರಮುಖ ಘಟನಾವಳಿಗಳು:

1666: ಸ್ಯಾಮುಯೆಲ್ ಪೆಪೀಸ್ ನಾಯಿಗಳ ನಡುವೆ ಮೊದಲ ರಕ್ತದ ವರ್ಗಾವಣೆಯನ್ನು ವರದಿ ಮಾಡಿದರು.

1732: ಮೊದಲ ವೃತ್ತಿಪರ ಗ್ರಂಥಪಾಲಕರನ್ನು ಉತ್ತರ ಅಮೇರಿಕಾದಲ್ಲಿ ನೇಮಿಸಲಾಯಿತು.

1832: ಕುದುರೆಯಿಂದ ಓಡಬಲ್ಲ ಮೊದಲ ಸ್ಟ್ರೀಟ್ ಕಾರ್ ನ್ಯೂಯಾರ್ಕ್ ನಗರದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು.

1896: ನಯಾಗಾರ ಜಲಪಾತದ ವಿದ್ಯುತ್ ಸ್ಥಾವರದ ಕಾರ್ಯಾಚರಣೆ ಆರಂಭವಾಯಿತು.

1904: ರಾಜ ಸಿ.ಜಿಲ್ಲೆಟ್ ಮೊದಲ ಜಿಲೆಟ್ ಕ್ಷೌರ ಕತ್ತಿಯಲ್ಲಿ ಬಳಸುವ ಬ್ಲೇಡಿಗೆ ಪೇಟೆಂಟ್ ಪಡೆದರು.

1908: ಆಲ್ಬರ್ಟ್ ಐನ್ಸ್ಟೈನ್ ಬೆಳಕಿನ ಕ್ವಾಂಟಮ್ ಸಿದ್ಧಾಂತವನ್ನು ಪ್ರಸ್ತುತ ಪಡಿಸಿದರು.

1922: ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ದೇಶೀಯ ರೇಡಿಯೋ ಸೇವೆ ಪ್ರಾರಂಭಿಸಿತು.

1927: ವಿಶ್ವದ ಅತ್ಯಂತ ದೊಡ್ಡ ಅನಿಲ ಟ್ಯಾಂಕರ್ ಸ್ಪೋಟಿಸಿದ ಕಾರಣ ಪಿಟ್ಸ್ ಬರ್ಗಿನಲ್ಲಿ 28 ಮಂದಿ ಮೃತ ಪಟ್ಟರು.

1968: ಯೂರೋಪಿನ ಮೊದಲ ಶ್ವಾಸಕೋಶದ ಕಸಿಯನ್ನು ಮಾಡಲಾಯಿತು.

1991: ಇಂಟರ್ನ್ಯಾಷನಲ್ ಡಯಾಬಿಟೀಸ್ ಫೆಡರೇಶನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು.

ಪ್ರಮುಖ ಜನನ/ಮರಣ:

1889: ಭಾರತದ ಮೊದಲ ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರು ಜನಿಸಿದರು.

1891: ಪಳೆಯುಳಿಕೆಯನ್ನು ಅಧ್ಯಯನ ಮಾಡಿದ ಭಾರತೀಯ ಪೇಲಿಯೋಬಾಟನಿಸ್ಟ್ ಬೀರ್ಬಲ್ ಸಹ್ನಿ ಜನಿಸಿದರು.

1914: ಭಾರತದ ಪತ್ರಕರ್ತ ಮತ್ತು ವಕೀಲ ವೆಂಗಾಯಿಲ್ ಕುನ್ಹಿರಾಮನ್ ನಾಯನರ್ ನಿಧನರಾದರು.

1947: ಭಾರತದ ಚಿತ್ರ ರಂಗದ ನಿರ್ದೇಶಕ ಮತ್ತು ಚಿತ್ರಕಥೆಗಾರ ಭಾರತನ್ ಜನಿಸಿದರು.

1971: ಭಾರತದ ಖ್ಯಾತ ಬಾಣಸಿಗ ಮತ್ತು ಲೇಖಕ ವಿಕಾಸ್ ಖನ್ನಾ ಜನಿಸಿದರು.

1977: ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಸಸ್ನೆಸ್ ಸಂಸ್ಥಾಪಕ, ಗುರು ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ನಿಧನರಾದರು.

1979: ಭಾರತದ ಖ್ಯಾತ ಗಾಯಕ ಪುಶ್ಕರ್ ಲೇಲೆ ಜನಿಸಿದರು.

2013: ಭಾರತದ ಚಿತ್ರ ನಿರ್ಮಾಪಕ ಮತ್ತು ವ್ಯವಸ್ಥಾಪಕ ಸುಧೀರ್ ಭಟ್ ನಿಧನರಾದರು.

2013: ಭಾರತದ ಪತ್ರಕರ್ತ ಮತ್ತು ಲೇಖಕ ಹರಿ ಕೃಷ್ಣ ದೇವ್ಸಾರೆ ನಿಧನರಾದರು.

2015: ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಕೆ.ಎಸ್.ಗೋಪಾಲಕೃಷ್ಣನ್ ನಿಧನರಾದರು.

 

Categories
e-ದಿನ

ನವೆಂಬರ್-13

 

ಪ್ರಮುಖ ಘಟನಾವಳಿಗಳು:

1841: ಜೇಮ್ಸ್ ಬ್ರೇಡ್ ಪ್ರಾಣಿಗಳ ಕಾಂತೀಯತೆಯ ಪ್ರದರ್ಶನವನ್ನು ಕಂಡು ಇದರಿಂದ ಸಂಮೋಹನದ ಅಧ್ಯಯನ ಮಾಡಿದರು.

1864: ಗ್ರೀಸ್ ದೇಶದ ನೂತನ ಸಂವಿಧಾನವನ್ನು ಅಳವಡಿಸಲಾಯಿತು.

1865: ಅಮೇರಿಕಾದ ಮೊದಲ ಚಿನ್ನದ ಪ್ರಮಾಣ ಪತ್ರಗಳನ್ನು ಹೊರಡಿಸಲಾಯಿತು.

1875: ನ್ಯೂಯಾರ್ಕಿನಲ್ಲಿ ನ್ಯಾಷನಲ್ ಬೌಲಿಂಗ್ ಅಸೋಸಿಯೇಷನ್ ಅನ್ನು ಸ್ಥಾಪಿಸಲಾಯಿತು.

1895: ಹವಾಯಿಯಿಂದ ಪೂರ್ವಸಿದ್ಧ ಅನಾನಸ್ ಹಣ್ಣುಗಳನ್ನು ಮೊದಲ ಬಾರಿಗೆ ಸಾಗಾಣಿಕೆ ಮಾಡಲಾಯಿತು.

1913: ಮೇರಿ ಫೆಲ್ಪ್ಸ್ ಜೇಕಬ್ ಅವರು ಆಧುನಿಕ ಎಲಾಸ್ಟಿಕ್ ಬ್ರಾಸ್ಸಿಯರಿಗೆ ಪೇಟೆಂಟ್ ಪಡೆದರು.

1927: ಹಾಲ್ಯಾಂಡ್ ಸುರಂಗವನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಯಿತು.

1946: ಮೌಂಟ್`ಗ್ರೇಲಾಕಿನಲ್ಲಿ ನೈಸರ್ಗಿಕ ಮೋಡದಿಂದ ಮೊದಲ ಕೃತಕ ಹಿಮವನ್ನು ತಯಾರಿಸಲಾಯಿತು.

1952: ಮೊದಲ ಬಾರಿಗೆ ಸುಳ್ಳು ಉಗುರುಗಳನ್ನು ಮಾರಾಟ ಮಾಡಲಾಯಿತು.

1987: ಬ್ರಿಟಿಷ್ ದೂರದರ್ಶನದಲ್ಲಿ ಮೊದಲ ಬಾರಿಗೆ ಕಾಂಡಮ್ ಜಾಹಿರಾತನ್ನು ಪ್ರದರ್ಶಿಸಲಾಯಿತು.

2009: ನಾಸಾ ಸಂಸ್ಥೆಯು ಚಂದ್ರನ ಮೇಲೆ ನೀರಿನ ಅಂಶವನ್ನು ಪತ್ತೆ ಮಾಡಿರುವುದಾಗಿ ಘೋಷಿಸಿದರು.

ಪ್ರಮುಖ ಜನನ/ಮರಣ:

1780: ಸಿಖ್ಖರ ಸಾಮ್ರಾಜ್ಯದ ಸಂಸ್ಥಾಪಕ ಮಹಾರಾಜ ರಣಜಿತ್ ಸಿಂಗ್ ಜನಿಸಿದರು.

1917: ರಾಜಸ್ಥಾನದ 9ನೇ ಗವರ್ನರ್ ಆಗಿದ್ದ ವಸಂತ್ ದಾದಾ ಪಾಟಿಲ್ ಜನಿಸಿದರು.

1920: ಅಂಕಿ ಸಿದ್ಧಾಂತದಲ್ಲಿ ಕೆಲಸ ಮಾಡಿದ ಭಾರತದ ಗಣಿತತಜ್ಞ ಕೊಲ್ಲಗುಂಟ ಗೋಪಾಲ ಐಯ್ಯರ್ ರಾಮನಾಥನ್ ಜನಿಸಿದರು.

1935: ಖ್ಯಾತ ಬಹುಬಾಷಾ ಹಿನ್ನೆಲೆ ಗಾಯಕಿ ಪಿ.ಸುಶೀಲಾ ಜನಿಸಿದರು.

1942: ಮಾಹಿತಿ ಮತ್ತು ಪ್ರಸಾರ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅಂಬಿಕಾ ಸೋನಿ ಜನಿಸಿದರು.

1963: ಭಾರತೀಯ-ಇಂಗ್ಲಿಷ್ ಮಾನವಶಾಸ್ತ್ರಜ್ಞ ಮತ್ತು ಲೇಖಕ ಮಾರ್ಗಾರೆಟ್ ಮುರ್ರೆ ನಿಧನರಾದರು.

1967: ಭಾರತದ ಖ್ಯಾತ ನಟಿ, ಗಾಯಕಿ, ನಿರ್ಮಾಪಕಿ ಮತ್ತು 1984ರ ಮಿಸ್ ಇಂಡಿಯಾ ಆಗಿದ್ದ ಜೂಹಿ ಚಾವಲಾ ಜನಿಸಿದರು.

1969: ಪಾಕಿಸ್ತಾನದ ಮೊದಲ ರಾಷ್ಟ್ರಪತಿ ಆಗಿದ್ದ ಇಸ್ಕಂದರ್ ಮಿರ್ಜಾ ನಿಧನರಾದರು.

2002: ಖ್ಯಾತ ಲೇಖಕ, ಶಿಕ್ಷಕ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗೌರೀಶ್ ಕಾಯ್ಕಿಣಿ ನಿಧನರಾದರು.

 

Categories
e-ದಿನ

ನವೆಂಬರ್-12

 

ಪ್ರಮುಖ ಘಟನಾವಳಿಗಳು:

1555: ಇಂಗ್ಲಿಷ್ ಸಂಸತ್ತು “ಕ್ಯಾಥೋಲಿಕ್” ವ್ಯವಸ್ಥೆಯನ್ನು ಪುನರ್-ಸ್ಥಾಪಿಸಿತು.

1823: ಆಮ್ಸ್ಟರ್ ಡ್ಯಾಂ ಕಾಲುವೆಯನ್ನು ತೆರೆಯಲಾಯಿತು.

1833: ಮಹಾನ್ ಲಿಯೊನಿಡ್ ಉಲ್ಕೆಯ ಮಳೆಯನ್ನು ದಾಖಲಿಸಲಾಯಿತು.

1847: ಸರ್ ಜೇಮ್ಸ್ ಯಂಗ್ ಸಿಂಸನ್ ಕ್ಲೋರೋಫೋಮನ್ನು ಅರಿವಳಿಕೆಯನ್ನಾಗಿ ಮೊದಲ ಬಾರಿ ಬಳಸಿದ ವೈದ್ಯರಾದರು.

1910: ಬೆಂಕಿಯುಳ್ಳ ಬಲೂನಿನಿಂದ ಹಡ್ಸನ್ ನದಿಗೆ ಜಿಗಿದ ಮನುಷ್ಯ-ಮೊದಲ ಸಂಭವನೀಯ ಚಲನಚಿತ್ರ ಸಾಹಸವಾಯಿತು.

1922: ಸಿಗ್ಮಾ ಗಾಮಾ ರೋ ಸೊರೊರಿಟಿಯನ್ನು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು.

1933: ಲೊಚ್ ನೆಸ್ ದೈತ್ಯ ಎಂದು ಕರೆಯಲ್ಪಡುವ ರಾಕ್ಷಸನ ಛಾಯಾಚಿತ್ರವನ್ನು ಸೆರೆಹಿಡಿಯಲಾಯಿತು.

1935: ಎಗಾಸ್ ಮೊನಿಸ್ ಅವರು ಮಾನಸಿಕ ಅಸ್ವಸ್ಥಯನ್ನು ಸರಿ ಮಾಡಲು ಮಿದುಳಿನ ಶಸ್ತ್ರ ಚಿಕಿತ್ಸೆಯನ್ನು ಪೋರ್ಚುಗಲ್ಲಿನಲ್ಲಿ ಮಾಡಲಾಯಿತು.

1946: ಚಿಕಾಗೋದ ದಿ ಎಕ್ಸ್ಚೇಂಜ್ ನ್ಯಾಷನಲ್ ಬ್ಯಾಂಕ್ ಅಮೇರಿಕಾದ ಮೊದಲ ಬ್ಯಾಂಕಿಂಗ್ ಸೇವೆಯನ್ನು ಸ್ಥಾಪಿಸಿತು.

1956: 60 ಮೈಲಿ ದೂರದಿಂದ ವೀಕ್ಷಿಸಬಹುದಾದ ಮೊದಲ ಮಂಜು ಗಡ್ಡೆಯನ್ನು ಪತ್ತೆ ಮಾಡಲಾಯಿತು.

1970: ವಿಜ್ಞಾನಿಗಳು ಮೊದಲ ಜೀವಂತ ಜೀವಕೋಶದ ಕೃತಕ ಸಂಶ್ಲೇಷಣೆಯನ್ನು ಮಾಡಿದರು.

1990: ರಾಬರ್ಟ್ ಕೈಲಿಯಾವ್ ಅವರ ಸಹಾಯದಿಂದ ಸರ್ ಟಿಮ್ ಬರ್ನರ್ಸ್ ಲೀ “ವರ್ಲ್ಡ್ ವೈಡ್ ವೆಬ್’ (ಅಂತರ್ಜಾಲದಲ್ಲಿ ವ್ಯಾಪಕ ಮಾಹಿತಿ ವ್ಯವಸ್ಥೆ)ಗೆ ಔಪಚಾರಿಕ ಪ್ರಸ್ತಾಪವನ್ನು ಪ್ರಕಟಿಸಿದರು.

ಪ್ರಮುಖ ಜನನ/ಮರಣ:

1882: ಮಹಾರಾಷ್ಟ್ರದ ಖ್ಯಾತ ಬರಹಗಾರ, ಲೇಖಕ ಶ್ರೀ ಪುರೋಹಿತ್ ಸ್ವಾಮಿ ಜನಿಸಿದರು.

1896: ಭಾರತದ ಪಕ್ಷಿ ಮಾನವ ಎಂದೇ ಖ್ಯಾತಿ ಪಡೆದ ಪಕ್ಷಿ ವಿಜ್ಞಾನಿ ಮತ್ತು ನಿಸರ್ಗವಾದಿ ಸಲೀಮ್ ಮೌಜುದ್ಧಿನ್ ಅಬ್ದುಲ್ ಅಲಿ ಜನಿಸಿದರು.

1940: ಬಾಲಿವುಡಿನ ಖ್ಯಾತ ಖಳನಟ ಅಮ್ಜದ್ ಖಾನ್ ಜನಿಸಿದರು.

1942: ಆಂಧ್ರಪ್ರದೇಶದ ಮಾಜಿ ಸಚಿವರಾಗಿದ್ದ ಸಾಣಿಗರಂ ಸಂತೋಷ್ ರೆಡ್ಡಿ ಜನಿಸಿದರು.

1946: ಭಾತರದ ಶಿಕ್ಷಣ ತಜ್ಞ ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮದನ್ ಮೋಹನ್ ಮಾಳವಿಯಾ ನಿಧನರಾದರು.

1947: ಒರಿಯಾ ಚಿತ್ರರಂಗದ ಚಿತ್ರ ನಿರ್ದೇಶಕ ನಿರಾದ್ ಎನ್. ಮೋಹಪಾತ್ರಾ ಜನಿಸಿದರು.

1965: ಭಾರತೀಯ ಆಧ್ಯಾತ್ಮಿಕ ನಾಯಕ ತಹೇರ್ ಸೈಫುದ್ಧಿನ್ ನಿಧನರಾದರು.

1969: ಪಾಕಿಸ್ತಾನದ ಮೊದಲ ರಾಷ್ಟ್ರಪತಿ ಇಸ್ಕಂದರ್ ಮಿರ್ಜಾ ನಿಧನರಾದರು.

2007: ಭಾರತದ ಕ್ರಿಕೆಟ್ ಆಟಗಾರ ಕೆ.ಸಿ.ಇಬ್ರಾಹಿಂ ನಿಧನರಾದರು.

2014: ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರವಿ ಚೋಪ್ರಾ ನಿಧನರಾದರು.

 

Categories
e-ದಿನ

ನವೆಂಬರ್-11

 

ಪ್ರಮುಖ ಘಟನಾವಳಿಗಳು:

1647: ಮಾಸಚೂಸೆಟ್ಸ್ ಅಮೇರಿಕಾದ ಮೊದಲ ಕಡ್ಡಾಯ ಶಾಲಾ ಹಾಜರಾತಿ ಕಾನೂನನ್ನು ಅಂಗೀಕರಿಸಿತು.

1851: ಟೆಲಿಸ್ಕೋಪ್ ಅನ್ನು ಅಲ್ವನ್ ಕ್ಲಾರ್ಕ್ ಅವರು ಪೇಟೆಂಟ್ ಪಡೆದರು.

1865: ಸಿಂಚುಲಾ ಒಡಂಬಡಿಕೆಯು ಭುತಾನ್ ‍ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ತೀಸ್ತಾ ನದಿಯ ಪೂರ್ವದ ಪ್ರದೇಶಗಳನ್ನು ಬಿಟ್ಟುಕೊಡಲು ಮಾಡಲಾಯಿತು.

1888: ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಆಜಾದ್ ಅವರ ಜನುಮ ದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತದೆ.

1889: ವಾಷಿಂಗ್ಟನನ್ನು ಅಮೇರಿಕಾದ 42ನೇ ರಾಜ್ಯವಾಗಿ ಸೇರಿಸಲಾಯಿತು.

1890: ಡಿ.ಮೆಕ್ರೀ ಕೊಂಡೊಯ್ಯಬಲ್ಲ ಅಗ್ನಿ ಅನಾಹುತದಿಂದ ಪಾರಾಗಬಹುದಾದ ಅಗ್ನಿ ಶಾಮಕಕ್ಕೆ ಪೇಟೆಂಟ್ ಪಡೆದರು.

1922: ಅಮೇರಿಕಾದ ಅತ್ಯಂತ ದೊಡ್ಡ ಧ್ವಜವನ್ನು ಪ್ರದರ್ಶಿಸಲಾಯಿತು.

1940: ಮೋಟಾರು ವಾಹನಗಳಲ್ಲಿ “ಜೀಪ್” ಅನ್ನು ಪರಿಚಯಿಸಲಾಯಿತು.

1952: ಮೊದಲ ವೀಡಿಯೋ ರೆಕಾರ್ಡರ್ ಅನ‍್ನು ಜಾನ್ ಮುಲ್ಲಿನ್ ಮತ್ತು ವೈನೇ ಜಾನ್ಸನ್ ಪ್ರದರ್ಶಿಸಿದರು.

1990: ವಿಶ್ವದ ಮೊದಲ ಹೃದಯ ಮತ್ತು ಯಕೃತ್ತು ಕಸಿ ಸ್ವೀಕರಿಸಿದ ಸ್ಟಾರ್ಮಿ ಜೋನ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಮುಖ ಜನನ/ಮರಣ:

1888: ಭಾರತದ ಸ್ವಾತಂತ್ರದ ಚಳವಳಿಯ ಪ್ರಮುಖ ನಾಯಕ, ಹಿಂದೂ-ಮುಸ್ಲಿಂ ಏಕತೆಯ ವಿದ್ವಾಂಸ ಮತ್ತು ಸಂಕೇತವಾಗಿದ್ದ ಮೌಲಾನಾ ಆಜಾದ್ ಅವರು ಜನಿಸಿದರು.

1888: ಭಾರತದ ವಕೀಲ ಮತ್ತು ರಾಜಕಾರಣಿ ಜೆ.ಬಿ.ಕೃಪಲಾನಿ ಜನಿಸಿದರು.

1918: ಖ್ಯಾತ ಉದ್ಯಮಿ ಕೃಷ್ಣ ಕುಮಾರ್ ಬಿರ್ಲಾ ಜನಿಸಿದರು.

1924: ಭಾರತದ ರಿಸರ್ವ್ ಬ್ಯಾಂಕಿನ 14ನೇ ಗವರ್ನರ್ ಆಗಿದ್ದ ಐ.ಜಿ.ಪಟೇಲ್ ಜನಿಸಿದರು.

1936: ಖ್ಯಾತ ಹಿಂದಿ ಚಲನಚಿತ್ರ ನಟಿ ಮಾಲಾ ಸಿನ್ಹಾ ಜನಿಸಿದರು.

1953: ಬಾಲಿವುಡ್ ಖ್ಯಾತ ಹಿಂದಿ ಚಿತ್ರೊಧ್ಯಮದ ನಿರ್ಮಾಪಕ ಬೋನಿ ಕಪೂರ್ ಜನಿಸಿದರು.

1980: ಖ್ಯಾತ ಕತಕಲಿ ಕಲಾವಿದರಾಗಿದ್ದ ಚೆಂಗನೂರ್ ರಾಮನ್ ಪಿಳ್ಳೈ ನಿಧನರಾದರು.

1985: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ ಜನಿಸಿದರು.

1994: ಭಾರತದ ರಾಷ್ಟ್ರ ಕವಿ ಕುವೆಂಪು ಅವರು ನಿಧನರಾದರು.

2004: ಖ್ಯಾತ ಫ್ಯಾಷನ್ ಡಿಸೈನರ್ ರಿತು ಕುಮಾರ್ ಜನಿಸಿದರು.

2005: ಭಾರತದಲ್ಲಿ ಅತ್ಯಂತ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದರೆಂದೇ ಖ್ಯಾತಿ ಪಡೆದ, ಗಿನ್ನಿಸ್ ಬುಕ್ ದಾಖಲೆ ನಿರ್ಮಿಸಿದ ವೈದ್ಯ ಮುರುಗಪ್ಪ ಚನ್ನವೀರಪ್ಪ ಮೋದಿ ನಿಧನರಾದರು.

 

Categories
e-ದಿನ

ನವೆಂಬರ್-10

 

ಪ್ರಮುಖ ಘಟನಾವಳಿಗಳು:

1866: ಸಿಡ್ನಿ ಮುದ್ರಣಾಲಯದಿಂದ ಚಿನ್ನದ ನಾಣ್ಯಗಳನ್ನು ಕೆನೆಡಾದಲ್ಲಿ ಕಾನೂನು ಬಾಹಿರವಾಗಿ ಮಾರ್ಪಟ್ಟಿತು.

1891: ವಿದ್ಯುತ್ ರೈಲಿಗೆ ಗ್ರಾನ್ವಿಲ್ಲೆ ಟಿ ವುಡ್ಸ್ ಪೇಟೆಂಟ್ ಪಡೆದರು.

1951: ಟೆಲಿಫೋನ್ ಆಪರೇಟರ್ ಸಹಾಯವಿಲ್ಲದೆ ದೂರದ ನೇರ ದೂರವಾಣಿ ಕರೆಯನ್ನು ಮೊದಲ ಬಾರಿಗೆ ಮಾಡಲಾಯಿತು.

1970: ಚೀನಾದ “ಗ್ರೇಟ್ ವಾಲ್ ಆಫ್ ಚೈನಾ”ವನ್ನು ಪ್ರವಾಸೋಧ್ಯಮಕ್ಕೆ ಎಂದು ತೆರೆಯಲಾಯಿತು.

1971: ಮೊದಲ ಬಾರಿಗೆ ಅಮೇರಿಕಾದ ಟೇಬಲ್ ಟೆನ್ನಿಸ್ ಆಟದ ತಂಡವು ಚೀನಾಗೆ ಬಂದಿತು.

1983: ಅಮೇರಿಕಾದ ಫೆಡರಲ್ ಸರ್ಕಾರವನ್ನು ಮುಚ್ಚಲಾಯಿತು.

1990: ಚಂದ್ರಶೇಖರ ಅವರು ಭಾರತದ 8ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಪ್ರಮುಖ ಜನನ/ಮರಣ:

1659: ಭಾರತದ ಕಮಾಂಡರ್ ಅಫ್ಜಲ್ ಖಾನ್ ನಿಧನರಾದರು.

1848: ಭಾರತೀಯ ಶಿಕ್ಷಣ ತಜ್ಞ ಮತ್ತು ರಾಜಕಾರಣಿ ಸುರೇಂದ್ರನಾಥ್ ಬ್ಯಾನರ್ಜಿ ಜನಿಸಿದರು.

1910: ಐತಿಹಾಸಿಕ ಕಾಲ್ಪನಿಕ ಕಥೆಗಳ ತಮಿಳು ಬರಹಗಾರ ಸಾಂಡ್ಲಿಯನ್ ಜನಿಸಿದರು.

1955: ಭಾರತೀಯ ಚಲನಚಿತ್ರ ಮತ್ತು ದೂರದರ್ಶನದ ನಿರ್ದೇಶಕ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ರಾಜಾ ಸೆನ್ ಜನಿಸಿದರು.

1968: ಸಮಾಜವಾದಿ ಪಕ್ಷದ ನಾಯಕ ನೀರಜ್ ಶೇಖರ್ ಜನಿಸಿದರು.

1978: ತೆಲುಗು ಚಿತ್ರರಂಗದ ನಿರ್ದೇಶಕ ರಾಧಾಕೃಷ್ಣ ಜಗರ್ಲಮುಂಡಿ ಜನಿಸಿದರು.

1979: ವೃತ್ತಿಪರ ಟೆನ್ನಿಸ್ ಆಟಗಾರ ಹರ್ಷ್ ಮಂಕಡ್ ಜನಿಸಿದರು.

1987: ಪಂಜಾಬಿನ ಕ್ರಿಕೆಟ್ ಆಟಗಾರ ಸನ್ನಿ ಸೊಹಾಲ್ ಜನಿಸಿದರು.

2009: ಬಾಲಿವುಡ್ ನಟಿ, ವಸ್ತ್ರ ವಿನ್ಯಾಸಕಿ ಸಿಂಪಲ್ ಕಪಾಡಿಯಾ ನಿಧನರಾದರು.

2013: ಲೇಖಕ ವಿಜಯ್ ದಾನ್ ದೇತಾ ನಿಧನರಾದರು.

 

Categories
e-ದಿನ

ನವೆಂಬರ್-9

 

ಪ್ರಮುಖ ಘಟನಾವಳಿಗಳು:

1821: ಅಮೇರಿಕಾದ ಮೊದಲ ಔಷಧವಿಜ್ಞಾನದ ಕಾಲೇಜು ತನ್ನ ಮೊದಲ ತರಗತಿಯನ್ನು ಆರಂಭಿಸಿತು.

1872: ಬಾಸ್ಟನ್ನಿನಲ್ಲಿ ಅಗ್ನಿ ಅನಾಹುತದಿಂದ 1000 ಕಟ್ಟಡಗಳು ನಾಶವಾದವು.

1877: ನ್ಯೂಯಾರ್ಕಿನಲ್ಲಿ ಅಮೇರಿಕನ್ ಕೆಮಿಕಲ್ ಸೊಸೈಟಿ ಸ್ಥಾಪಿಸಲಾಯಿತು.

1925: ಭೌತವಿಜ್ಞಾನಿ ರಾಬರ್ಟ್ ಎ ಮಿಲಿಕನ್ ಬಾಹ್ಯಾಕಾಶದಿಂದ ಕಿರಣಗಳ ಅಸ್ತಿತ್ವವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದರು.

1927: ಚೀನಾದಲ್ಲಿ ಧೈತ್ಯಾಕಾರದ ಪಾಂಡಾ ಪತ್ತೆಯಾಯಿತು.

1935: ಕಾಂಗ್ರೆಸ್ ಆಫ್ ಇಂಡಸ್ಟ್ರಿಯಲ್ ಆರ್ಗನೈಸೇಷನ್ (ಸಿಐಒ) ಕಾರ್ಮಿಕ ಒಕ್ಕೂಟ ಸ್ಥಾಪಿಸಲಾಯಿತು.

1985: ಗ್ಯಾರಿ ಕ್ಯಾಸ್ಪರೋವ್ 22 ವರ್ಷದ ವಯಸ್ಸಿನ ಅತ್ಯಂತ ಕಿರಿಯ ವಿಶ್ವ ಚೆಸ್ ಚ್ಯಾಂಪಿಯನ್ ಆದರು.

1986: ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಏಡ್ಸ್ ಸಾವಿನ ವರದಿ ಮಾಡಲಾಯಿತು.

1994: ಶ್ರೀಲಂಕಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಚಂದ್ರಿಕಾ ಕುಮಾರತುಂಗಾ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1939: ಭಾರತೀಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರ ಪಠ್ಯ ಪುಸ್ತಕಗಳ ಲೇಖಕ ಅಜಯ್ ಘಟಕ್ ಜನಿಸಿದರು.

1944: ಭಾರತದ ಖ್ಯಾತ ನೃತ್ಯಗಾರ ಮತ್ತು ನೃತ್ಯ ಸಂಯೋಜಕ ಚಿತ್ರೇಶ್ ದಾಸ್ ಜನಿಸಿದರು.

1948: ತಿರುಪತಿ ತಿರುಮಲ ದೇವಸ್ಥಾನದ ಆಸ್ಥಾನ ಗಾಯಕರಾಗಿದ್ದ ಗರಿಮಲ್ಲ ಬಾಲಕೃಷ್ಣ ಪ್ರಸಾದ್ ಜನಿಸಿದರು.

1949: ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಜನಿಸಿದರು.

1954: ಖ್ಯಾತ ರಂಗಭೂಮಿ ಕಲಾವಿದ, ನಟ, ನಿರ್ದೇಶಕ ಶಂಕರ್ ನಾಗ್ ಜನಿಸಿದರು.

1959: ಭಾರತೀಯ ಚಿತ್ರೋದ್ಯಮದಲ್ಲಿ ನಾಟಕಕಾರ, ಚಿತ್ರಕಥೆಗಾರ ಮತ್ತು ನಿರ್ದೇಶಕರಾಗಿದ್ದ ನಿರಂಜನ್ ಪಾಲ್ ನಿಧನರಾದರು.

1962: ಸಾಮಾಜಿಕ ಸುಧಾರಕ ಮತ್ತು ಭಾರತದಲ್ಲಿ ಮಹಿಳಾ ಶಿಕ್ಷಣಕ್ಕೆ ಕೊಡುಗೆ ನೀಡಿದ ದೋಂಢೋ ಕೇಶವ ಕರ್ವೆ ನಿಧನರಾದರು.

1980: ಖ್ಯಾತ ನಟಿ ಅನು ಪ್ರಭಾಕರ್ ಜನಿಸಿದರು.

1988: ಖ್ಯಾತ ತಮಿಳು ಚಿತ್ರರಂಗದ ನಟ ತೆಂಗೈ ಶ್ರೀನಿವಾಸನ್ ನಿಧನರಾದರು.

2003: ಭಾರತೀಯ ವೈದ್ಯ ಮತ್ತು ಲೇಖಕ ಬಿನೊದ್ ಬಿಹಾರಿ ವರ್ಮ ನಿಧನರಾದರು.

2005: ಭಾರತದ 10ನೇ ರಾಷ್ಟ್ರಪತಿ ಆಗಿದ್ದ ಕೆ.ಆರ್.ನಾರಾಯಣನ್ ನಿಧನರಾದರು.

 

Categories
e-ದಿನ

ನವೆಂಬರ್-8

 

ಪ್ರಮುಖ ಘಟನಾವಳಿಗಳು:

1731: ಅಮೇರಿಕಾದ ಫಿಲಾಡೆಲ್ಫಿಯಾದಲ್ಲಿ ಬೆಂಜಾಮಿನ್ ಫ್ರಾಂಕ್ಲಿನ್ ಮೊದಲ ಗ್ರಂಥಾಲಯವನ್ನು ತೆರೆದರು.

1793: ಪ್ಯಾರಿಸ್ಸಿನ ಲವ್ರೆ ವಸ್ತುಸಂಗ್ರಹಾಲಯವು ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲಾಯಿತು.

1895: ವಿಲ್ಹೆಮ್ ರೋನ್ಟೆಜೆನ್ ವಿದ್ಯುತ್ ಪ್ರಯೋಗದಲ್ಲಿ ತೊಡಗಿದ್ದ ವೈಜ್ಞಾನಿಕ ತತ್ವವನ್ನು ಕಂಡುಹಿಡಿದು ಮೊದಲ ಎಕ್ಸ್ ರೇ ಚಿತ್ರವನ್ನು ತೆಗೆದರು.

1904: ಹಾರ್ವೇ ಹಬ್ಬಲ್ ಪ್ರತ್ಯೇಕವಾಗಿ ವಿದ್ಯುತ್ ಲಗತ್ತನ್ನು ಪ್ಲಗ್ ಮಾಡುವ ವಸ್ತುವಿಗೆ ಪೇಟೆಂಟ್ ಪಡೆದರು.

1910: ಕೀಟ ನಾಶಕಕ್ಕೆ ವಿಲ್ಲಿಯಂ ಫ್ರಾಸ್ಟ್ ಪೇಟೆಂಟ್ ಪಡೆದರು.

2009: ಭಾರತದಲ್ಲಿ ಬುದ್ಧ ಅನುಯಾಯಿಗಳು ದಲೈಲಾಮ ಅವರು ಮರಳಿದಕ್ಕೆ ಅವರನ್ನು ಸ್ವಾಗತಿಸಿದರು.

2016: ಭ್ರಷ್ಟಾಚಾರದ ವಿರುದ್ದ ಭಾರತ ಸರ್ಕಾರವು 500 ಮತ್ತು 1000 ರುಪಾಯಿಯ ನೋಟುಗಳ ಚಲಾವಣೆ ರದ್ದುಗೊಳಿಸಿತು.

ಪ್ರಮುಖ ಜನನ/ಮರಣ:

1627: ಮುಘಲ್ ರಾಜ್ಯದ ಸಾಮ್ರಾಟ ಜಹಂಗೀರ್ ನಿಧನರಾದರು.

1900: ಪಟಿಯಾಲ ರಾಜ್ಯದ ಮಹಾರಾಜ ಆಗಿದ್ದ ಮಹಾರಾಜ ರಾಜಿಂದರ್ ಸಿಂಗ್ ನಿಧನರಾದರು.

1919: ಭಾರತದ ನಟ, ಚಿತ್ರಕಥೆಗಾರ ಮತ್ತು ಲೇಖಕ ಪುರುಷೋತ್ತಮ್ ಲಕ್ಷ್ಮಣ್ ದೇಶಪಾಂಡೆ ಅವರು ಜನಿಸಿದರು.

1920: ನಟಿ, ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ ಸಿತಾರ ದೇವಿ ಜನಿಸಿದರು.

1927: ಭಾರತೀಯ ರಾಜಕಾರಣಿ ಮತ್ತು ಭಾರತದ 7ನೇ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಜನಿಸಿದರು.

1953: ಭಾರತದ ರಾಜಕಾರಣಿ ನಂದ ಕುಮಾರ್ ಪಟೇಲ್ ಜನಿಸಿದರು.

1960: ಭಾರತೀಯ ವಾಯುಪಡೆಯ ಮುಖ್ಯಸ್ಥ ಸುಬ್ರತೋ ಮುಖರ್ಜಿ ನಿಧನರಾದರು.

2013: ಪತ್ರಕರ್ತ ಮತ್ತು ನಟ ಅಮ್ನಾಚಿ ವೆಂಕಟ ಸುಬ್ರಮಣ್ಯಂ ನಿಧನರಾದರು.

2015: ಭಾರತೀಯ ಏರ್ ಮಾರ್ಷಲ್ ಓಂ ಪ್ರಕಾಶ್ ಮೆಹ್ರಾ ನಿಧನರಾದರು.

 

Categories
e-ದಿನ

ನವೆಂಬರ್-7

 

ಪ್ರಮುಖ ಘಟನಾವಳಿಗಳು:

1665: “ದಿ ಲಂಡನ್ ಗೆಜೆಟ್” ನ ಮೊದಲ ಆವೃತ್ತಿ “ಆಕ್ಸವರ್ಡ್ ಗೆಜೆಟ್” ಎಂದು ಮುದ್ರಿಸಲಾಯಿತು.

1786: ಅಮೇರಿಕಾದ ಅತ್ಯಂತ ಹಳೆಯ ಸಂಗೀತ ಸಂಸ್ಥೆ ಸ್ಟೌಗ್ಟನ್ ಮ್ಯೂಸಿಕಲ್ ಸೊಸೈಟಿ ಆಗಿ ಸ್ಥಾಪಿಸಲಾಯಿತು.

1907: ಡೆಲ್ಟಾ ಸಿಗ್ಮಾ ಪೈಯನ್ನು ನ್ಯೂಯಾರ್ಕಿನ ವಿಶ್ವವಿದ್ಯಾಲಯದಲ್ಲಿ ಕಂಡುಹಿಡಿಯಲಾಯಿತು.

1914: ದಿ ನ್ಯೂ ರಿಪಬ್ಲಿಕ್ ಪತ್ರಿಕೆಯ ಮೊದಲ ಸಂಚಿಕೆಯನ್ನು ಪ್ರಕಟಿಸಲಾಯಿತು.

1929: ನವ್ಯಕಲೆಯ ವಸ್ತುಸಂಗ್ರಹಾಲಯವು ನ್ಯೂಯಾರ್ಕಿನಲ್ಲಿ ಆರಂಭವಾಯಿತು.

1990: ಐರ್ಲಾಂಡಿನ ಮೊದಲ ಮಹಿಳಾ ಅಧ್ಯಕ್ಷರಾಗಿ ಮೇರಿ ರಾಬಿನ್ಸನ್ ಆಯ್ಕೆಯಾದರು.

ಪ್ರಮುಖ ಜನನ/ಮರಣ:

1858: ಭಾರತೀಯ ಸ್ವಾತಂತ್ರ ಹೋರಾಟಗಾರ ಬಿಪಿನ್ ಚಂದ್ರಪಾಲ್ ಜನಿಸಿದರು.

1888:ರಾಮನ್ ಎಫೆಕ್ಟ್ ಎಂದೇ ಖ್ಯಾತವಾದ ಬೆಳಕು ಪಾರದರ್ಶಕ ವಸ್ತುವನ್ನು ಹಾದು ಹೋದಾಗ ಉಂಟಾಗುವ ತರಾಂಗತರಂಗಳನ್ನು ಪತ್ತೆ ಮಾಡಿದ ಭೌತವಿಜ್ಞಾನಿ ಸಿ.ವಿ.ರಾಮನ್ ಜನಿಸಿದರು.

1954: ಖ್ಯಾತ ನಟ, ಚಿತ್ರಕಥೆಗಾರ, ಕಮಲ್ ಹಾಸನ್ ಜನಿಸಿದರು.

1960: ಭಾರತೀಯ ಚಿತ್ರೋದ್ಯಮಿ ಶ್ಯಾಮ್ ಪ್ರಸಾದ್ ಜನಿಸಿದರು.

1970: ಖ್ಯಾತ ಬಹುಭಾಷಾ ನಟಿ, ನೃತ್ಯಗಾತಿ ಲಕ್ಷ್ಮಿ ಗೋಪಾಲಸ್ವಾಮಿ ಜನಿಸಿದರು.

1971: ಭಾರತೀಯ ನಿರ್ದೇಶಕ ಮತ್ತು ಚಿತ್ರಕಥೆಗಾರ ತ್ರಿವಿಕ್ರಮ್ ಶ್ರೀನಿವಾಸ್ ಜನಿಸಿದರು.

1973: ಹಿಂದಿ ಚಿತ್ರರಂಗದ ನಿರ್ದೇಶಕಿ, ನಿರ್ಮಾಪಕಿ ಕಿರಣ್ ರಾವ್ ಜನಿಸಿದರು.

1975: ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ವೆಂಕಟ್ ಪ್ರಭು ಜನಿಸಿದರು.

1978: ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಜೀವರಾಜ್ ನಾರಾಯಣ ಮೆಹ್ತಾ ನಿಧನರಾದರು.

1980: ಗಾಯಕ, ಗೀತ ರಚನೆಕಾರ ಕಾರ್ತಿಕ್ ಜನಿಸಿದರು.

1981: ಖ್ಯಾತ ನಟಿ ಅನುಷ್ಕಾ ಶೆಟ್ಟಿ ಜನಿಸಿದರು.

2000: ಭಾರತದ ರಕ್ಷಣಾ ಸಚಿವರಾಗಿದ್ದ ಚಿದಂಬರಂ ಸುಬ್ರಮಣ್ಯಂ ನಿಧನರಾದರು.

 

Categories
e-ದಿನ

ನವೆಂಬರ್-6

 

ಪ್ರಮುಖ ಘಟನಾವಳಿಗಳು:

1850: ಹವಾಯಿಯ ಮೊದಲ ಅಗ್ನಿಶಾಮಕ ಯಂತ್ರ ತರಲಾಯಿತು.

1860: ಅಬ್ರಹಾಮ್ ಲಿಂಕನನ್ನು ಅಮೇರಿಕಾದ 16ನೇ ಅಧ್ಯಕ್ಷ ಮತ್ತು ಮೊದಲ ರಿಪಬ್ಲಿಕನ್ ಆಗಿ ಆಯ್ಕೆ ಮಾಡಲಾಯಿತು.

1894: ಇಲಿ ಹಿಡಿಯುವ ಬಲೆಗೆ ವಿಲ್ಲಿಯಂ ಸಿ ಹುಕ್ಕರ್ ಪೇಟೆಂಟ್ ಪಡೆದರು.

1904: ಗಣಿಗಾರರ ಮೆರವಣಿಗೆಯನ್ನು ಮುನ್ನಡೆಸಿದ ಕಾರಣದಿಂದ ಮಹಾತ್ಮ ಗಾಂಧಿಯವರನ್ನು ಆಫ್ರಿಕಾದಲ್ಲಿ ಬಂಧಿಸಲಾಯಿತು.

1917: ನ್ಯೂಯಾರ್ಕಿನಲ್ಲಿ ಮಹಿಳೆಯರಿಗೆ ಮತ ಹಾಕಲು ಅನುಮತಿ ನೀಡಲಾಯಿತು.

1923: ವಿದ್ಯುತ್ ಕ್ಷೌರಿಕ ಯಂತ್ರಕ್ಕೆ ಜೇಕಬ್ ಕ್ಷಿಕ್ ಪೇಟೆಂಟ್ ಪಡೆದರು.

1952: ಪೆಸಿಫಿಕ್ ಮಹಾಸಾಗರದ ಎನ್ವಿಟಾಕ್ ಅಟಾಲಿನಲ್ಲಿ ಮೊದಲ ಹೈಡ್ರೋಜನ್ ಬಾಂಬ್ ಸ್ಫೋಟವಾಯಿತು.

1962: ಸೌಧಿ ಅರೇಬಿಯಾದಲ್ಲಿ ಗುಲಾಮಗಿರಿಯನ್ನು ಕಾನೂನಿನ ಮೂಲಕ ನಿರ್ಮೂಲನೆ ಮಾಡಲಾಯಿತು.

1996: ಭಾರತದಲ್ಲಿ ಚಂಡಮಾರುತದಿಂದ ಆಂಧ್ರ ಪ್ರದೇಶದಲ್ಲಿ ಸುಮಾರು 2000 ಜನ ಮೃತ ಪಟ್ಟರು.

2016: ದೆಹೆಲಿಯಲ್ಲಿ ವಾಯು ಮಾಲಿನ್ಯದ ಮಟ್ಟವನ್ನು ತುರ್ತು ಪರಿಸ್ಥಿತಿ ಎಂದು ಘೋಷಿಸಿ ಶಾಲಾ ಕಾಲೇಜು ಮತ್ತು ನಿರ್ಮಾಣದ ಕಟ್ಟಡವನ್ನು ಸ್ಥಗಿತಗೊಳಿಸಲು ಘೋಷಿಸಲಾಯಿತು.

ಪ್ರಮುಖ ಜನನ/ಮರಣ:

1840: ಸಿಖ್ಖರ ಸಾಮ್ರಾಜ್ಯದ ಪಂಜಾಬಿನ ನಾಯಕ ಮಹಾರಾಜ ನಾವ್ ನಿಹಾಲ್ ಸಿಂಗ್ ನಿಧನರಾದರು.

1861: ಬಾಸ್ಕೆಟ್ ಬಾಲ್ ಆಟದ ಸಂಶೋಧಕ ಜೇಮ್ಸ್ ನೈಸ್ಮಿತ್ ಜನಿಸಿದರು.

1915: ಮರಾಠಿ ಚಿತ್ರರಂಗದ ನಿರ್ದೇಶಕ, ಚಿತ್ರಕಥೆಗಾರ ಮತ್ತು ಸಂಭಾಷಣೆಕಾರ ದಿನಕರ್ ಡಿ ಪಾಟಿಲ್ ಜನಿಸಿದರು.

1934: ಖ್ಯಾತ ಕೊಂಕಣಿ ಕಾರ್ಯಕರ್ತ, ಲೇಖಕ ಮತ್ತು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾದ ಬಸ್ತಿ ವಾಮನ ಶೆಣೈ ಅವರು ಜನಿಸಿದರು.

1940: ಗಾಯಕಿ, ಗೀತ ರಚನೆಕಾರ್ತಿ ಸೂಲಮಂಗಲಂ ರಾಜಲಕ್ಷ್ಮಿ ಜನಿಸಿದರು.

1982: ಮದ್ರಾಸ್ ಮತ್ತು ಮೈಸೂರು ತಂಡದ ಕ್ರಿಕೆಟ್ ಆಟಗಾರ ಬಿ.ಸಿ.ಆಳ್ವಾ ನಿಧನರಾದರು.

1985: ಖ್ಯಾತ ಹಿಂದಿ ಚಲನಚಿತ್ರ ನಟ ಸಂಜೀವ್ ಕುಮಾರ್ ನಿಧನರಾದರು.

1987: ಮರಾಠಿ ಲೇಖಕ, ನಟ ಬಾಲಚಂದ್ರ ವಾಮನ ಕೇಲ್ಕರ್ ನಿಧನರಾದರು.

2010: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸಿದ್ದಾರ್ಥ ಶಂಕರ್ ರೇ ನಿಧನರಾದರು.

2013: ಖ್ಯಾತ ಪಾಕಪ್ರವೀಣೆ ಮತ್ತು ಲೇಖಕಿ ತರ್ಲಾ ದಲಾಲ್ ನಿಧನರಾದರು.

 

Categories
e-ದಿನ

ನವೆಂಬರ್-5

 

ಪ್ರಮುಖ ಘಟನಾವಳಿಗಳು:

1556: ಪಂಜಾಬಿನ ಪಣಿಪತ್ ಯುದ್ಧದಲ್ಲಿ ಅಫ್ಘಾನರನ್ನು ಸೋಲಿಸಿ ಅಕ್ಬರ್ ಮುಘಲ ಸಾಮ್ರಾಜ್ಯದ ಸಾಮ್ರಾಟನಾದರು.

1639: ಮಸಾಚುಸೆಟ್ಸಿನ ವಸಾಹತಿನಲ್ಲಿ ಮೊದಲ ಅಂಚೆ ಕಛೇರಿಯನ್ನು ಸ್ಥಾಪಿಸಲಾಯಿತು.

1844: ಕ್ಯಾಲಿಫೋರ್ನಿಯಾದಲ್ಲಿ ಕರಡಿಯೊಂದು ಜುಲಾಜಿಕಲ್ ಗಾರ್ಡನ್ನಿನಲ್ಲಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಯಿತು.

ಅಮೇರಿಕಾದಲ್ಲಿ ಜಾರ್ಜ್ ಬಿ ಸೆಲ್ಡನ್ ವಾಹನಗಳಿಗೆ ಮೊದಲ ಪೇಟೆಂಟ್ ಪಡೆದರು.

1961: ಭಾರತ ಅಂದಿನ ಪ್ರಧಾನ ಮಂತ್ರಿ ಆಗಿದ್ದ ಜವಹರ್ಲಾಲ್ ನೆಹರು ಮೊದಲ ಬಾರಿಗೆ ನ್ಯೂಯಾರ್ಕಿಗೆ ಭೇಟಿ ನೀಡಿದರು.

1978: ಕೇರಳ ಮತ್ತು ತಮಿಳುನಾಡಿನಲ್ಲಿ ಉಂಟಾದ ಪ್ರವಾಹದ ಕಾರಣ ಸುಮಾರು 125 ಮಂದಿ ಮೃತರಾದರು.

2013: ಭಾರತವು ಮಂಗಳ ಆರ್ಬಿಟರ್ ಮಿಶನ್ನನ್ನು ಆರಂಭಿಸಿತು.

ಪ್ರಮುಖ ಜನನ/ಮರಣ:

1870: ರಾಜಕಾರಣಿ ಮತ್ತು ವಕೀಲರಾಗಿದ್ದ ಚಿತ್ತರಂಜನ್ ದಾಸ್ ಜನಿಸಿದರು.

1892: ತಳಿವಿಜ್ಞಾನಿ ಮತ್ತು ಜೀವಶಾಸ್ತ್ರಜ್ಞ ಜೆ.ಬಿ.ಎಸ್.ಹಲ್ದಾನೆ ಜನಿಸಿದರು.

1905: ಕವಿ ಮತ್ತು ಲೇಖಕ ಸಜ್ಜದ್ ಜಹೀರ್ ಜನಿಸಿದರು.

1917: ಹರಿಯಾಣದ 4ನೇ ಮುಖ್ಯ ಮಂತ್ರಿ ಆಗಿದ್ದ ಬನಾರಸಿ ದಾಸ್ ಗುಪ್ತ ಜನಿಸಿದರು.

1952: ಲೇಖಕ ವಂದನಾ ಶಿವಾ ಜನಿಸಿದರು.

1955: ಭಾರತೀಯ ಪತ್ರಕರ್ತ ಮತ್ತು ಲೇಖಕ ಕರಣ್ ತಪ್ಪರ್ ಜನಿಸಿದರು.

1988: ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೋಹ್ಲಿ ಜನಿಸಿದರು.

2008: ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಬಲ್ದೇವ್ ರಾಜ್ ಚೋಪ್ರಾ ನಿಧನರಾದರು.

2009: ಪತ್ರಕರ್ತ, ಸಂಪಾದಕ ಮತ್ತು ಲೇಖಕ ಪ್ರಭಾಷ್ ಜೋಷಿ ನಿಧನರಾದರು.

2011: ಗಾಯಕ, ಕವಿ, ಸಂಗೀತಗಾರ ಭೂಪೇನ್ ಹಜಾರಿಕಾ ನಿಧನರಾದರು.

 

Categories
e-ದಿನ

ನವೆಂಬರ್-4

 

ಪ್ರಮುಖ ಘಟನಾವಳಿಗಳು:

1841: ಮೊದಲ ವ್ಯಾಗನ್ ರೈಲು ಕ್ಯಾಲಿಫೋರ್ನಿಯಾಗೆ ಆಗಮಿಸಿತು.

1846: ಬೆಂಜಾಮಿನ್ ಪಾಲ್ಮರ್ ಕೃತಕ ಕಾಲಿಗೆ ಪೇಟೆಂಟ್ ಪಡೆದರು.

1861: ವಾಷಿಂಗ್ಟನ್ನಿನ ವಿಶ್ವವಿದ್ಯಾಲಯವನ್ನು ಸಿಯಾಟೆಲ್ಲಿನಲ್ಲಿ ಸ್ಥಾಪಿಸಲಾಯಿತು.

1862: ರಿಚರ್ಡ್ ಗಾಟ್ಲಿಂಗ್ ಗಾಟ್ಲಿಂಗ್ ಗನ್ನಿಗೆ ಪೇಟೆಂಟ್ ಪಡೆದರು.

1873: ದಂತ ವೈದ್ಯ ಜಾನ್ ಬೀರ್ಸ್ ಅವರು ಹಲ್ಲಿಗೆ ಚಿನ್ನದ ಮುಚ್ಚಳವನ್ನು ಪೇಟೆಂಟ್ ಮಾಡಿದರು.

1879: ಶೈತ್ಯೀಕರಣದ ಉಪಕರಣಕ್ಕಾಗಿ ಎಲ್ಕಿನ್ಸ್ ಪೇಟೆಂಟ್ ಪಡೆದರು.

1880: ಜೇಮ್ಸ್ ಮತ್ತು ಜಾನ್ ರಿಟ್ಟಿ ಮೊದಲ ನಗದು ನೊಂದಣೆ ಮಾಡುವುದಕ್ಕೆ ಪೇಟೆಂಟ್ ಪಡೆದರು.

1904: ಫುಟ್ ಬಾಲ್ ಆಟಕ್ಕೆಂದೇ ಹಾರ್ವಾಡ್ ಸ್ಟೇಡಿಯಂ ಅನ್ನು ನಿರ್ಮಿಸಲಾಯಿತು.

1939: ಚಿಕಾಗೋದಲ್ಲಿ ಮೊದಲ ವಾಯುನಿಯಂತ್ರಿತ ವಾಹನವನ್ನು ಪ್ರದರ್ಶಿಸಲಾಯಿತು.

2003: ಉಪಗ್ರಹದ ಮೂಲಕ ಅತ್ಯಂತ ಶಕ್ತಿಶಾಲಿ ಸೂರ್ಯನ ಜ್ವಾಲೆಯನ್ನು ವೀಕ್ಷಿಸಲಾಯಿತು.

ಪ್ರಮುಖ ಜನನ/ಮರಣ:

1887: ಭಾರತೀಯ ಸಸ್ಯಶಾಸ್ತ್ರಜ್ಞ ಮತ್ತು ತಳಿವಿಜ್ಞಾನಿ ಜಾನಕಿ ಅಮ್ಮಾಲ್ ಜನಿಸಿದರು.

1925: ಭಾರತೀಯ ಚಿತ್ರಕಥೆಗಾರ ಮತ್ತು ನಿರ್ದೇಶಕ ರಿತ್ವಿಕ್ ಘಟಕ್ ಜನಿಸಿದರು.

1929: ಭಾರತೀಯ ಗಣಿತತಜ್ಞ ಮತ್ತು ಜ್ಯೋತಿಷಿ ಶಕುಂತಲಾ ದೇವಿ ಜನಿಸಿದರು.

1930: ಭಾರತೀಯ ಔಷಧಿಕಾರ ಮತ್ತು ಶಿಕ್ಷಣತಜ್ಞ ರಂಜಿತ್ ರಾಯ್ ಚೌಧರಿ ಜನಿಸಿದರು.

1955: ಕವಿ, ಲೇಖಕ, ವಿಧೂಷಕ ಅಲ್ಹಜ್ ಮೌಲಾನಾ ಘೌಸವಿ ಶಾಹ್ ಜನಿಸಿದರು.

1965: ಖ್ಯಾತ ನಟ, ಮಾಡೆಲ್ ಮಿಲಿಂದ್ ಸೋಮನ್ ಜನಿಸಿದರು.

1982: ಬರ್ನ್ ಪುರದಲ್ಲಿ IISCO ಉಕ್ಕು ಸ್ಥಾವರವನ್ನು ಸ್ಥಾಪಿಸಿದ ಕೈಗಾರಿಕೋಧ್ಯಮಿ ಬಿರೇನ್ ಮುಖರ್ಜಿ ನಿಧನರಾದರು.

1986: ಭಾರತೀಯ ಖ್ಯಾತ ಯುವ ಉದ್ಯಮಿ ಸುಹಾಸ್ ಗೋಪಿನಾಥ್ ಜನಿಸಿದರು.

1998: ಜನ ಕವಿ ಎಂದೇ ಖ್ಯಾತರಾದ ಕವಿ ನಾಗಾರ್ಜುನ್ ನಿಧನರಾದರು.

 

Categories
e-ದಿನ

ನವೆಂಬರ್-3

 

ಪ್ರಮುಖ ಘಟನಾವಳಿಗಳು:

1838: “ಟೈಮ್ಸ್ ಆಫ್ ಇಂಡಿಯಾ” ದಿನ ಪತ್ರಿಕೆಯನ್ನು ಸ್ಥಾಪಿಸಲಾಯಿತು.

1896: ಸಾಗಿಸಬಹುದಾದ ತೂಕದ ಮಾಪಕಕ್ಕೆ ಜೆ.ಹೆಚ್.ಹಂಟರ್ ಅವರು ಪೇಟೆಂಟ್ ಪಡೆದರು.

1913: ಅಮೇರಿಕಾದಲ್ಲಿ ಮೊದಲ ಬಾರಿಗೆ ಅಮೇರಿಕಾದ ನಾಗರೀಕರು ಆದಾಯ ತೆರಿಗೆಯ ಬಗ್ಗೆ ಮಾಹಿತಿ ಪಡೆದರು.

1930: ಬ್ಯಾಂಕ್ ಆಫ್ ಇಟಲಿ, ಬ್ಯಾಂಕ್ ಆಫ್ ಅಮೇರಿಕಾ ಎಂದು ಮಾರ್ಪಾಡು ಮಾಡಲಾಯಿತು.

1931: ಮೊದಲ ವಾಣಿಜ್ಯಕವಾಗಿ ತಯಾರಿಸಲಾದ ಸಂಶ್ಲೇಷಿತ ರಬ್ಬರನ್ನು ತಯಾರಿಸಲಾಯಿತು.

1954: ಜಪಾನಿನ ವೈಜ್ಞಾನಿಕ ಕಾದಂಬರಿಯ ದೈತ್ಯಾಕಾರದ ರಾಕ್ಷಸನ ಚಲನಚಿತ್ರವಾದ “ಗಾಡ್ಜಿಲ್ಲಾ” ಬಿಡುಗಡೆಯಾಯಿತು.

1955: ಮೊದಲ ಬಾರಿಗೆ “ವೈರಸ್ಸನ್ನು” ಸ್ಪಟೀಕರಣ ಮಾಡಲಾಗಿದೆ ಎಂದು ಘೋಷಿಸಲಾಯಿತು.

1957: ರಷ್ಯಾದ ಬಾಹ್ಯಾಕಾಶನೌಕೆಯಾದ ಸ್ಪುಟ್ನಿಕ್ 2ರಲ್ಲಿ ಮೊದಲ ಪ್ರಾಣಿಯಾದ ನಾಯಿಯನ್ನು ಭೂಮಿಯ ಕಕ್ಷೆಗೆ ರವಾನಿಸಲಾಯಿತು. ಭೂಮಿಯ ಕಕ್ಷೆಯನ್ನು ತಲುಪಿದ ಮೊದಲ ಜೀವಂತ ಪ್ರಾಣಿಯಾಯಿತು.

1975: ಬ್ರಿಟನ್ನಿನ ಮಹಾರಾಣಿ ಬ್ರಿಟನ್ ದೇಶದ ಮೊದಲ ತೈಲ ಸುರಂಗವನ್ನು ಉದ್ಘಾಟಿಸಿದರು.

1984: ಭಾರತದಲ್ಲಿ 3 ದಿನ ಸಿಖ್ಖರ ಮೇಲೆ ನಡೆದ ಗಲಭೆಯಲ್ಲಿ 2733 ಜನರು ನಿಧನರಾದರು.

1984: ಹತ್ಯೆಯಾದ ಭಾರತೀಯ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಅಂತ್ಯಕ್ರಿಯೆ ನಡೆಸಲಾಯಿತು.

ಪ್ರಮುಖ ಜನನ/ಮರಣ:

1618: ಮುಘಲ್ ಸಾಮ್ರಾಟ ಔರಂಗಜೇಬ್ ಜನಿಸಿದರು.

1901: ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ಉದ್ಯಮದ ಪ್ರವರ್ತಕರಾಗಿದ್ದ ಪೃಥ್ವಿರಾಜಕಪೂರ್ ಜನಿಸಿದರು.

1917: ಭಾರತದ ಕಾರ್ಯಕರ್ತೆ ಅನ್ನಪೂರ್ಣ ಮಹಾರಾಣ ಜನಿಸಿದರು.

1933: ನೋಬಲ್ ಪ್ರಶಸ್ತಿ ಪುರಸ್ಕೃತ ಅಮಾರ್ತ್ಯ ಸೆನ್ ಜನಿಸಿದರು.

1937: ಹಿಂದಿ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಜೋಡಿಯಾಗಿದ್ದ ಲಕ್ಷ್ಮಿಕಾಂತ್  ಮತ್ತು ಪ್ಯಾರೆಲಾಲ್ ಜನಿಸಿದರು.

1954: ಹಿಂದಿ ಚಲನಚಿತ್ರ ರಂಗದ ಖ್ಯಾತ ಹಾಸ್ಯ ನಟ ಲಕ್ಷ್ಮಿಕಾಂತ್ ಬೆರ್ದೆ ಜನಿಸಿದರು.

1974: ಖ್ಯಾತ ಹಿಂದಿ ಮತ್ತು ಮರಾಠಿ ನಟಿ ಸೊನಾಲಿ ಕುಲ್ಕರ್ಣಿ ಜನಿಸಿದರು.

1992: ರಾಜಸ್ಥಾನದ ಜಾನಪದ ಗಾಯಕ ಅಲ್ಲಾ ಜಿಲಾಯ್ ಬಾಯಿ ನಿಧನರಾದರು.

2010: ಕವಿ, ಪ್ರಬಂಧಕಾರ, ಅನುವಾದಕ, ಪ್ರಾಧ್ಯಾಪಕ ಮತ್ತು ಪ್ರಕಾಶಕ ಹಾಗೂ ರೈಟರ್ಸ್ ವರ್ಕ್ ಶಾಪಿನ ಸಂಸ್ಥಾಪಕ ಪುರುಷೋತ್ತಮ ಲಾಲ್ ನಿಧನರಾದರು.

2012: ಗುಜರಾತಿನ 18ನೇ ರಾಜ್ಯಪಾಲರಾಗಿದ್ದ ಕೈಲಾಶಪತಿ ಮಿಶ್ರ ನಿಧನರಾದರು.

 

Categories
e-ದಿನ

ನವೆಂಬರ್-2

 

ಪ್ರಮುಖ ಘಟನಾವಳಿಗಳು:

1924: ಭಾನುವಾರದ ಎಕ್ಸ್ಪ್ರೆಸ್ ನಿಯತಕಾಲಿಕವು ಮೊದಲ ಬ್ರಿಟಿಷ್ ಕ್ರಾಸ್ವರ್ಡ್ ಒಗಟನ್ನು ಪ್ರಕಟಿಸಿತು.

1936: ಬಿ.ಬಿ.ಸಿ ಟೆಲಿವಿಷನ್ ಸೇವೆಯು ಪ್ರಪಂಚದ ಮೊದಲ ಸಾಮಾನ್ಯ ಸಾರ್ವಜನಿಕ ದೂರದರ್ಶನ ಸೇವೆಯಾಗಿ ಚಾಲಿತವಾಯಿತು.

1936: ಕೆನೆಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಅನ್ನು ಸ್ಥಾಪಿಸಲಾಯಿತು.

1941: ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರ “ಸುಭ್ ಸುಖ್ ಚೈನ್” ಅನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು. ಇದು ಗುರುದೇವ ರವೀಂದ್ರನಾಥ್ ಠಾಗೋರ್ ಸಂಸ್ಕೃತೀಕೃತ ಬಂಗಾಳಿ ಕವಿತೆಯಾದ “ಜನ ಗಣ ಮನ”ದ ಅನುವಾದವಾಗಿದೆ.

1953: ಪಾಕಿಸ್ತಾನವು ಇಸ್ಲಾಮಿಕ್ ರಿಪಬ್ಲಿಕ್ ಆಗಿ ಘೋಷಿತವಾಯಿತು.

1955: ಕ್ಲಾರ್ಟನ್ ಮತ್ತು ಶ್ಯಾಫರ್ ಪೋಲಿಯೋ ವೈರಸ್ ಅನ್ನು ಕಂಡುಹಿಡಿದರು.

1988: ಮೊದಲ ಶ್ರೀಮತಿ ಅಮೇರಿಕಾ ಸೌಂಧರ್ಯ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

2000: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಶಾಶ್ವತವಾಗಿ ಸಿಬ್ಬಂದಿ ಪಡೆಯಿತು.

2000: ಭಾರತದಲ್ಲಿ “ಐರನ್ ಲೇಡಿ” ಎಂದೇ ಖ್ಯಾತಿ ಪಡೆದ ಕವಿಯತ್ರಿ ಇರೋಮ್ ಶರ್ಮಿಳಾ ಅವರು ಮಣಿಪುರದ 10 ನಾಗರಿಕರನ್ನು  ಸೈನ್ಯದವರು ಹತ್ಯೆ ಮಾಡಿದನ್ನು ಪ್ರತಿಭಟಿಸಲು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಪ್ರಮುಖ ಜನನ/ಮರಣ:

1833: ಭಾರತದ ವೈದ್ಯ ಮಹೇಂದ್ರಲಾಲ್ ಸರ್ಕಾರ್ ಜನಿಸಿದರು.

1877: ಭಾರತದ 48ನೇ ಶಿಯಾ ಇಮಾಮ್ ಆಗಿದ್ದ ಅಗಾ ಖಾನ್ III ಜನಿಸಿದರು.

1935: ಲೇಖಕ ಶಿರ್ಶೇಂದು ಮುಖ್ಯೋಪಾಧ್ಯಾಯ್ ಜನಿಸಿದರು.

1941: ಬರಹಗಾರ, ಪತ್ರಕರ್ತ, ರಾಜಕಾರಣಿ ಮತ್ತು ಕೇಂದ್ರ ಸಚಿವ ಅರುಣ್ ಶೌರಿ ಜನಿಸಿದರು.

1958: ಹರಿಯಾಣ ರಾಜ್ಯದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಅಜಯ್ ಸಿಂಗ್ ಯಾದವ್ ಜನಿಸಿದರು.

1960: ಬಾಲಿವುಡ್ ಚಿತ್ರಗಳ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಅನು ಮಲ್ಲಿಕ್ ಜನಿಸಿದರು.

1965: ಖ್ಯಾತ ಬಾಲಿವುಡ್ ನಟ, ನಿರ್ಮಾಪಕ, ನಿರೂಪಕ ಶಾರುಖ್ ಖಾನ್ ಜನಿಸಿದರು.

2012: ಭಾರತ-ಅಮೇರಿಕಾದ ಗಣಿತಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞ ಶ್ರೀರಾಮ್ ಶಂಕರ್ ಅಭಯಂಕರ್ ನಿಧನರಾದರು.

 

Categories
e-ದಿನ

ನವೆಂಬರ್-1

 

ಪ್ರಮುಖ ಘಟನಾವಳಿಗಳು:

1848: ಅಮೇರಿಕಾದ ಮೊದಲ ಮಹಿಳಾ ವೈದ್ಯಕೀಯ ಶಾಲೆಯನ್ನು ತೆರೆಯಲಾಯಿತು.

1866: ಮೊದಲ ನಾಗರೀಕರ ಹಕ್ಕುಗಳ ಮಸೂದೆಯನ್ನು ಅಂಗೀಕರಿಸಲಾಯಿತು

1894: ದಿಫ್ತೀರಿಯಾ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿದಿರುವುದಾಗಿ ಡಾ.ರೌಕ್ಸ್ ಘೋಷಿಸಿದರು.

1939: ಕೃತಕ ಗರ್ಭಧಾರಣೆಯ ಮೂಲಕ ಜನಿಸಿದ ಮೊದಲ ಪ್ರಾಣಿ ಮೊಲವನ್ನು ಪ್ರದರ್ಶಿಸಲಾಯಿತು.

1954: ಫ್ರೆಂಚ್ ವಸಾಹತುಗಳಾದ ಪಾಂಡಿಚೆರಿ, ಕಾರೈಕಾಲ್, ಯಾನಮ್ ಮತ್ತು ಮಾಹೆಯನ್ನು ಭಾರತಕ್ಕೆ ವರ್ಗಾಯಿಸಲಾಯಿತು.

1956: ಭಾರತದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಮತ್ತು ಮೈಸೂರನ್ನು ರಾಜ್ಯ ಪುನರ್ ಸಂಘಟನೆಯ ಕಾಯಿದೆ ಅಡಿ ಔಪಚಾರಿಕವಾಗಿ ರಚಿಸಲಾಯಿತು ಹಾಗೂ ಕನ್ಯಾಕುಮಾರಿ ಜಿಲ್ಲೆಯನ್ನು ಕೇರಳದಿಂದ ತಮಿಳುನಾಡಿಗೆ ಸೇರಿಸಲಾಯಿತು.

1973: ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು.

2006: ಬ್ಯಾಂಗಲೂರನ್ನು ಬೆಂಗಳೂರು ಎಂದು ಮರುನಾಮಕರಣ ಮಾಡಲಾಯಿತು.

2007: ಭಾರತೀಯ ಸರ್ಕಾರವು ನಿವೃತ್ತ ಸೈನಿಕರನ್ನು ಹುಲಿಗಳ ಅಭಯಾರಣ್ಯಕ್ಕೆ ಗಸ್ತು ಮಾಡಲು ನೇಮಕ ಮಾಡಲು ಪ್ರಸ್ತಾಪಿಸಲಾಯಿತು.

ಪ್ರಮುಖ ಜನನ/ಮರಣ:

1915: ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಐಯ್ಯರ್ ಜನಿಸಿದರು.

1940: ಭಾರತದ 35ನೇ ಮುಖ್ಯ ನ್ಯಾಯಮೂರ್ತಿಯಾದ ರಮೇಶ್ ಚಂದ್ರ ಲಹೋಟಿ ಜನಿಸಿದರು.

1945: ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ್ ಸಮಿತಿ ಸಂಸ್ಥೆಯ ಸಂಸ್ಥಾಪಕ, ಮತ್ತು ಲೇಖಕ ನರೇಂದ್ರ ದಾಬೋಲ್ಕರ್ ಜನಿಸಿದರು.

1959: ತಮಿಳು ಚಿತ್ರರಂಗದ ನಟ, ನಿರ್ಮಾಪಕ, ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಎಂ.ಕೆ.ತ್ಯಾಗರಾಜ ಭಾಗವತಾರ್ ನಿಧನರಾದರು.

1963: ಖ್ಯಾತ ಉದ್ಯಮಿ ನೀತಾ ಅಂಬಾನಿ ಜನಿಸಿದರು.

1965: ಖ್ಯಾತ ಹಿನ್ನೆಲೆ ಗಾಯಕಿ ಪದ್ಮಿನಿ ಕೊಲ್ಹಾಪುರಿ ಜನಿಸಿದರು.

1973: ಖ್ಯಾತ ನಟಿ, ವಿಶ್ವ ಸುಂದರಿ ಐಶ್ವರ್ಯ ರಾಯ್ ಜನಿಸಿದರು.

1974: ಖ್ಯಾತ ಕ್ರಿಕೆಟ್ ಆಟಗಾರ ವಿ.ವಿ.ಎಸ್.ಲಕ್ಷ್ಮಣ್ ಜನಿಸಿದರು.

1991: ಚಲನಚಿತ್ರ ಸಂಗೀತ ಸಂಯೋಜಕ ಅರುಣ್ ಪೌದ್ವಾಲ್ ನಿಧನರಾದರು.

2007: ಭಾರತದ ಚಿತ್ರ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಎಸ್.ಅಲಿ ರಜಾ ನಿಧನರಾದರು.

 

Categories
e-ದಿನ

ಅಕ್ಟೋಬರ್-31

 

ಪ್ರಮುಖ ಘಟನಾವಳಿಗಳು:

1815: ಸರ್ ಹಮ್ಫ್ರೀ ಡೇವಿ ಅವರು ಗಣಿಕಾರರ ಸುರಕ್ಷತಾ ದೇಪಕ್ಕೆ ಪೇಟೆಂಟ್ ಪಡೆದರು.

1868: ಅಂಚೆಗಳನ್ನು ಹೊತ್ತೊಯ್ಯುವ ಅಂಚೆಯವರಿಗೆ ಸಮವಸ್ತ್ರವನ್ನು ನೀಡಲು ಅನುಮೋದಿಸಲಾಯಿತು.

1876: ಭಾರತದಲ್ಲಿ ಭೀಕರ ಚಂಡಮಾರುತ ಆವರಿಸಿದ ಕಾರಣ 2,00,000 ಮಂದಿ ಮೃತಪಟ್ಟರು.

1888: ನ್ಯುಮಾಟಿಕ್ ಬೈಸೈಕಲ್ ಟೈಯರಿಗೆ ಜಾನ್ ಬಾಯ್ಡ್ ಡನ್ಲಾಪ್ ಪೇಟೆಂಟ್ ಪಡೆದರು.

1941: ಮೌಂಟ್ ರಶ್ಮೋರ್ ಶಿಲೆಯನ್ನು ಪೂರ್ಣಗೊಳಿಸಲಾಯಿತು. ಗುಟ್ಜನ್ ಬೋರ್ಗಲ್ಲಂ ಮತ್ತು 400 ಇತರ ಶಿಲ್ಪಿಗಳು ಸೇರಿ 60 ಅಡಿ ಎತ್ತರದ ಕೆತ್ತನೆಯನ್ನು ಕೆತ್ತಲಾಯಿತು.

1969: ವಾಲ್-ಮಾರ್ಟ್ ಡಿಸ್ಕೌಂಟ್ ನಗರದ ಕಿರಾನ ಅಂಗಡಿಯನ್ನು ವಾಲ್-ಮಾರ್ಟ್ ಸ್ಟೋರ್ಸ್ ಎಂದು ಸ್ಥಾಪಿಸಲಾಯಿತು.

1984: ಪ್ರಧಾನ ಮಂತ್ರಿ ಆಗಿದ್ದ ಇಂದಿರಾ ಗಾಂಧಿ ಅವರನ್ನ ಹತ್ಯೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1875: ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಆಗಿದ್ದ ಸರ್ದಾರ್ ವಲ್ಲಭಾಯ್ ಪಟೇಲ್ ಜನಿಸಿದರು.

1929: ಖ್ಯಾತ ತಮಿಳು ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ಲೇಖಕ ಮತ್ತು ರಾಜಕಾರಣಿ ಮುಕ್ತ ಶ್ರೀನಿವಾಸನ್ ಜನಿಸಿದರು.

1943: ಕೇರಳದ ಮುಖ್ಯಮಂತ್ರಿ ಆಗಿದ್ದ ಒಮ್ಮೆನ್ ಚಾಂಡಿ ಜನಿಸಿದರು.

1943: ಇಸ್ರೋ ಮಾಜಿ ಅಧ್ಯಕ್ಷರು ಮತ್ತು ಭಾರತದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಜಿ.ಮಾಧವನ್ ನಾಯರ್ ಜನಿಸಿದರು.

1984: ಭಾರತದ ಮೂರನೇ ಪ್ರಧಾನಿ ಆಗಿದ್ದ ಇಂದಿರಾಗಾಂಧಿ ನಿಧನರಾದರು.

1987: ಗಣಿತಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞರಾದ ವಿನ್ಯಾಸ ಸಿದ್ಧಾಂತದಲ್ಲಿ ಮತ್ತು ದೋಷ ಸರಿಪಡಿಸುವ ಸಂಕೇತಗಳ ಸಿದ್ಧಾಂತಕ್ಕೆ ಹೆಸರುವಾಸಿಯಾದ ರಾಜಚಂದ್ರ ಬೋಸ್ ನಿಧನರಾದರು.

1998: ಭಾರತೀಯ ಪೌರತ್ವದ ಮೊದಲ ಕಾರ್ಡಿಯೋ-ಥೋರಾಸಿಕ್ ಶಸ್ತ್ರಚಿಕಿತ್ಸಿಕ ಥಾಮಸ್ ನಿಧನರಾದರು.

2005: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಪಿ.ಲೀಲಾ ನಿಧನರಾದರು.

2006: ಭಾರತ-ಪಾಕಿಸ್ತಾನದ ಲೇಖಕಿ ಮತ್ತು ಕವಿ ಅಮೃತಾ ಪ್ರೀತಂ ನಿಧನರಾದರು.

2013: ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷರಾಗಿದ್ದ ರಾಧಾ ಬರ್ನಿಯರ್ ನಿಧನರಾದರು.

 

Categories
e-ದಿನ

ಅಕ್ಟೋಬರ್-30

 

ಪ್ರಮುಖ ಘಟನಾವಳಿಗಳು:

1493: ಕ್ರಿಸ್ಟೊಫರ್ ಕೊಲಂಬಸ್ ಡೊಮಿನಿಕಾ ದ್ವೀಪವನ್ನು ಕಂಡುಹಿಡಿದರು.

1862: ಡಾ.ರಿಚರ್ಡ್ ಗೇಟ್ಲಿಂಗ್ ಮಶಿನ್ ಗನ್ನಿಗಾಗಿ ಪೇಟೆಂಟ್ ಪಡೆದರು.

1888: ಬಾಲ್ ಪಾಯಿಂಟ್ ಪೆನ್ನಿಗಾಗಿ ಜಾನ್ ಜೆ ಲೌಡ್ ಪೇಟೆಂಟ್ ಪಡೆದರು.

1894: ಡೇನಿಯಲ್ ಕೂಪರ್ ಸಮಯ ಗಡಿಯಾರಕ್ಕಾಗಿ ಪೇಟೆಂಟ್ ಪಡೆದರು.

1894: ಡೊಮೊನಿಕೋ ಮೆಲೆಗಟ್ಟಿ ಪಾಂಡೋರೋ (ಸಾಂಪ್ರದಾಯಿಕ ಇಟಲಿಯ ಸಿಹಿ ಯೀಸ್ಟ್ ಬ್ರೆಡ್) ಕೈಗಾರಿಕಾ ಉತ್ಪಾದನೆಯಲ್ಲಿ ಅನ್ವಯಿಸುವ ಪ್ರಕ್ರಿಯೆಗಾಗಿ ಪೇಟೆಂಟ್ ಪಡೆದರು.

1918: ಸ್ಲೊವಾಕಿಯಾ ಜೆಕಸ್ಲೋವಾಕಿಯಾ ರಾಜ್ಯದ ರಚನೆಗಾಗಿ ಕೇಳಿತು.

1947: ಜೆನಿವಾದಲ್ಲಿ 23 ರಾಷ್ಟ್ರಗಳು GATT ಒಪ್ಪಂದಕ್ಕೆ ಸಹಿ ಹಾಕಿದವು.

1952: ಮೊದಲ ಬಾರಿಗೆ ಹೆಪ್ಪುಗಟ್ಟಿದ ಬಟಾಣಿಯನ್ನು ಕ್ಲಾರೆನ್ಸ್ ಬರ್ಡ್ಸ್ ಐ ಮಾರಾಟ ಮಾಡಿದರು.

1960: ಮೈಖೆಲ್ ವುಡ್ರಫ್ ಮೊದಲ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕತ್ಸೆಯನ್ನು ನಿರ್ವಹಿಸಿದರು.

1961: ಸೋವಿಯತ್ ಒಕ್ಕೂಟವು ವಿಶ್ವದ ಅತಿ ದೊಡ್ಡ ಬಾಂಬ್ (ಸುಮಾರು 4000 ಪಟ್ಟು ಹೆಚ್ಚು ಶಕ್ತಿಯುಳ್ಳ) ಅನ್ನು ಸ್ಪೋಟಿಸಿತು.

1994: ಅಮೇರಿಕಾದ ಭಾರತೀಯರ ರಾಷ್ಟ್ರೀಯ ವಸ್ತುಸಂಗ್ರಹಾಲಯ ನ್ಯೂಯಾರ್ಕಿನಲ್ಲಿ ತೆರೆಯಲಾಯಿತು.

ಪ್ರಮುಖ ಜನನ/ಮರಣ:

1883: ಖ್ಯಾತ ವಿದ್ವಾಂತ ಮತ್ತು ತತ್ವಜ್ಞಾನಿ ದಯಾನಂದ ಸರಸ್ವತಿ ನಿಧನರಾದರು.

1887: ಭಾರತೀಯ ಲೇಖಕ, ಕವಿ, ಚಿತ್ರಕಥೆಗಾರ ಸುಕುಮಾರ್ ರೇ ಜನಿಸಿದರು.

1909: ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಭಾಬಾ ಜನಿಸಿದರು.

1932: ಇತಿಹಾಸಕಾರ ಮತ್ತು ಲೇಖಕ ವರುಣ್ ಡೇ ಜನಿಸಿದರು.

1949: ಖ್ಯಾತ ರಾಜಕಾರಣಿ ಪ್ರಮೋದ್ ಮಹಾಜನ್ ಜನಿಸಿದರು.

1951: ಭಾರತೀಯ ಡ್ರಮ್ ವಾದಕ ಮತ್ತು ಗೀತರಚನೆಕಾರ ತ್ರಿಲೋಕ್ ಗುರ್ತು ಜನಿಸಿದರು.

1958: ಖ್ಯಾತ ಹಿಂದಿ ಚಲನಚಿತ್ರ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಜನಿಸಿದರು.

1990: ನಟ, ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ ನಿಧನರಾದರು.

2005: ಭಾರತದ ರಾಜಕಾರಣಿ ಶಮ್ಶೇರ್ ಸಿಂಗ್ ನಿಧನರಾದರು.

 

Categories
e-ದಿನ

ಅಕ್ಟೋಬರ್-29

 

ಪ್ರಮುಖ ಘಟನಾವಳಿಗಳು:

1390: ಮೊದಲ ಬಾರಿಗೆ ಮಾಟ ಮಂತ್ರ ಮಾಡುವವರ ವಿರುದ್ದ ಪ್ಯಾರಿಸ್ಸಿನಲ್ಲಿ ತನಿಖೆ ಮಾಡಲಾಯಿತು.

1675: ಗಾಟ್ಫ್ರೀಡ್ ವಿಲ್ಹೆಂ ಲೆಬ್ನಿಜ್ ಅವರು ಅವಿಭಾಜ್ಯ ಮತ್ತು ವಿಭಿನ್ನ ಕಲನಶಾಸ್ತ್ರವನ್ನು ಅನ್ವೇಷಿಸಲು ಸಹಾಯ ಮಾಡಿದರು.

1814: ಮೊದಲ ಉಗಿ ಚಾಲಿತ ಯುದ್ಧನೌಕೆಯನ್ನು ಪ್ರಾರಂಭಿಸಲಾಯಿತು.

1833: ಅಮೇರಿಕಾದಲ್ಲಿ ಮೊದಲ ಬಾರಿಗೆ ಕಾಲೇಜಿನಲ್ಲಿ ಸಹೋದರತ್ವವನ್ನು ಸ್ಥಾಪಿಸಲಾಯಿತು.

1863: ರೆಡ್ ಕ್ರಾಸ್ ಅಂತರ ರಾಷ್ಟ್ರೀಯ ಸಮಿತಿ ರೂಪಿತವಾಯಿತು.

1872: ಜೆ.ಎಸ್.ರಿಸ್ಡನ್ ಲೋಹದ ಗಾಳಿಯಂತ್ರಕ್ಕೆ ಪೇಟೆಂಟ್ ಪಡೆದರು.

1904: ಮೊದಲ ಬಾರಿಗೆ ನಗರದಿಂದ ನಗರಕ್ಕೆ ಸಾಮಾನು ಸಾಗಾಣಿಕೆ ಸೇವೆಯನ್ನು ಪ್ರಾರಂಭಿಸಲಾಯಿತು.

1942: ಅಲಾಸ್ಕಾ ಹೆದ್ದಾರಿಯು ಪೂರ್ಣಗೊಂಡಿತು.

1945: ಮೊದಲ ಬಾಲ್ ಪಾಯಿಂಟ್ ಪೆನ್ನನ್ನು ಮಾರಲಾಯಿತು.

1958: ಡಾ.ಎಫ್.ಮೇಸನ್ ಸೋನ್ಸ್ ಮೊದಲ ಬಾರಿಗೆ ಕೊರೋನರಿ ಆಂಜಿಯೋಗ್ರಾಮ್ ನಿರ್ವಹಿಸಿದರು.

1966: ರಾಷ್ಟ್ರೀಯ ಮಹಿಳಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

2014: ಮೈಕ್ರೋಸಾಫ್ಟ್ ಬ್ಯಾಂಡ್ ಮೊದಲ ಸ್ಮಾರ್ಟ್ ವಾಚ್ ಬಿಡುಗಡೆಯಾಯಿತು.

2015: 35 ವರ್ಷಗಳ ನಂತರ ಚೀನಾ ತಮ್ಮ ಒಂದೇ ಮಗು ಕಾಯಿದೆಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿತು.

ಪ್ರಮುಖ ಜನನ/ಮರಣ:

1974: ಕಿರುತೆರೆಯ ನಟ ಆಕಾಶ್ ದೀಪ್ ಸೈಘಲ್ ಜನಿಸಿದರು.

1976: ಭಾರತೀಯ ನಟ, ನಿರ್ದೇಶಕ, ನೃತ್ಯ ಸಂಯೋಜಕ ರಾಘವ ಲಾರೆನ್ಸ್ ಜನಿಸಿದರು.

1982: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪವನ್ ಕುಮಾರ್ ಜನಿಸಿದರು.

1985: ಭಾರತದ ಒಲಂಪಿಕ್ ಬಾಕ್ಸಿಂಗ್ ಆಟಗಾರ ವಿಜೇಂದರ್ ಸಿಂಗ್ ಜನಿಸಿದರು.

1981: ಖ್ಯಾತ ಹಿಂದಿ ನಟಿ ರೀಮಾ ಸೆನ್ ಜನಿಸಿದರು.

1988: ಭಾರತೀಯ ಲೇಖಕ ಮತ್ತು ಕಾರ್ಯಕರ್ತೆ ಕಮಲಾದೇವಿ ಚಟ್ಟೋಪಾಧ್ಯಾಯ ನಿಧನರಾದರು.

 

Categories
e-ದಿನ

ಅಕ್ಟೋಬರ್-28

 

ಪ್ರಮುಖ ಘಟನಾವಳಿಗಳು:

1636: ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1793: ಹತ್ತಿಯ ಜಿನ್ನಿಗೆ ಎಲ್ಲಿ ವೈಟ್ನೀ ಪೇಟೆಂಟೆ ಪಡೆಯಲು ಕೋರಿದರು.

1904: ಸೇಂಟ್ ಲ್ಯೂಯಿಸ್ ಪೋಲೀಸರು ಮೊದಲ ಬಾರಿಗೆ ನೂತನ ತನಿಖಾ ವಿಧಾನವಾದ ಬೆರಳಚ್ಚುಗಳನ್ನು ಪ್ರಯತ್ನಿಸಿದರು.

1928: ಇಂಡೋನೇಷಿಯಾದಲ್ಲಿ ಮಕ್ಕಳ ಕಾನೂನು ಜಾರಿಗೊಳಿಸಲಾಯಿತು.

1946: ಜರ್ಮನ್ ರಾಕೆಟ್ ಇಂಜಿನಿಯರ್ಗಳು ರಷ್ಯಾದಲ್ಲಿ ಕೆಲಸ ಆರಂಭಿಸಿದರು.

1948: ಇಸ್ರೇಲ್ ಧ್ವಜವನ್ನು ಅಳವಡಿಸಲಾಯಿತು.

1965: ಸೇಂಟ್ ಲ್ಯೂಯಿಸ್ ಸ್ಮಾರಕವನ್ನು ಸ್ಟೇನ್ಲೆಸ್ ಸ್ಟೀಲಿನಲ್ಲಿ 630 ಅಡಿ ಎತ್ತರದ ಪ್ಯಾರಬೋಲಾ ಗೇಟ್ವೇ ಆರ್ಚ್ ಕಾಮಗಾರಿ ಪೂರ್ಣಗೊಂಡಿತು.

2011: ದೇಶದಲ್ಲಿ ಆತ್ಮಹತ್ಯೆ ದರ ಹೆಚ್ಚುತ್ತಿದೆ ಮತ್ತು ಪ್ರತಿ ಗಂಟೆಗೂ 15ಕ್ಕು ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಭಾರತ ಸರ್ಕಾರವು ವರದಿ ನೀಡಿತು.

2015: ವಿಶ್ವ ಆರೋಗ್ಯ ಸಂಘಟನೆಯು ಹೆಚ್.ಐ.ವಿ ಜೊತೆಗೆ ಕ್ಷಯರೋಗವನ್ನು ವಿಶ್ವದ ಅತ್ಯಂತ ಪ್ರಾಣಾಂತಿಕ ಸಾಂಕ್ರಾಮಿಕ ಕಾಯಿಲೆ ಎಂದು ಪರಿಗಣಿಸಲಾಯಿತು.

ಪ್ರಮುಖ ಜನನ/ಮರಣ:

1627: ಮುಘಲ್ ಸಾಮ್ರಾಜ್ಯದ ರಾಜ ಜಹಂಗೀರ್ ನಿಧನರಾದರು.

1867: ಐರಿಷ್-ಭಾರತೀಯ ನರ್ಸ್, ಲೇಖಕಿ, ಶಿಕ್ಷಕಿ ಸಿಸ್ಟರ್ ನಿವೇದಿತಾ ಜನಿಸಿದರು.

1892: ಮಹಾತ್ಮಾ ಗಾಂಧಿಯ ಪುತ್ರರಾದ ಮಣಿಲಾಲ್ ಗಾಂಧಿ ಜನಿಸಿದರು.

1955: ಪೆಪ್ಸಿಕೋ ಸಂಸ್ಥೆಯ ಮುಖ್ಯಸ್ಥೆ ಮತ್ತು ಸಿ.ಇ.ಓ. ಆದ ಇಂದಿರಾ ಕೃಷ್ಣಮೂರ್ತಿ ನೂಯಿ ಜನಿಸಿದರು.

1958: ಮಹಾರಾಷ್ಟ್ರದ 16ನೇ ಮುಖ್ಯಮಂತ್ರಿ ಆಗಿದ್ದ ಅಶೋಕ್ ಚವ್ಹಾಣ್ ಅವರು ಜನಿಸಿದರು.

1989: ಕನ್ನಡ ಚಿತ್ರರಂಗದ ನಟಿ ಶರ್ಮಿಲಾ ಮಾಂಡ್ರೆ ಅವರು ಜನಿಸಿದರು.

1998: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಗುಲಾಮ್ ಅಹಮದ್ ನಿಧನರಾದರು.

 

Categories
e-ದಿನ

ಅಕ್ಟೋಬರ್-27

 

ಪ್ರಮುಖ ಘಟನಾವಳಿಗಳು:

1682: ಫಿಲಾಡೆಲ್ಫಿಯಾ ನಗರವನ್ನು ಸ್ಥಾಪಿಸಲಾಯಿತು.

1775: ಅಮೇರಿಕಾದ ನೌಕಾಪಡೆಯನ್ನು ರೂಪಿಸಲಾಯಿತು.

1904: ಅಮೇರಿಕಾದ ಮೊದಲ ಕ್ಷಿಪ್ರ-ಸಾಗಣಿ ಸುರಂಗಮಾರ್ಗವಾದ ನ್ಯೂಯಾರ್ಕ ಸಬ್ವೇ ವ್ಯವಸ್ಥೆ ಅಧಿಕೃತವಾಗಿ ತೆರೆಯಲಾಯಿತು.

1922: ನೌಕಾಪಡೆಯ ಮೊದಲ ಸ್ಮರಣಾರ್ಥ ದಿನಾಚರಣೆಯನ್ನು ಆಚರಿಸಲಾಯಿತು.

1925: ನೀರಿನ ಹಿಮಹಾವುಗೆಗಳಿಗೆ ಫ್ರೆಡ್ ವಾಲರ್ ಪೇಟೆಂಟ್ ಪಡೆದರು.

1940: ನ್ಯೂಯಾರ್ಕಿನ ವಿಶ್ವ ಜಾತ್ರೆಯು 5,37,952ರ ಅಂತಿಮ ದಿನದ ಹಾಜರಾತಿಯೊಂದಿಗೆ ದಾಖಲೆಯೊಂದಿಗೆ ಅಂತ್ಯವಾಯಿತು.

1947: ಕಾಶ್ಮೀರದ ಮಹಾರಾಜ ಭಾರತಕ್ಕೆ ಸೇರಲು ಒಪ್ಪಿದರು.

ಪ್ರಮುಖ ಜನನ/ಮರಣ:

1920: ಭಾರತದ 10ನೇ ರಾಷ್ಟ್ರಪತಿ ಕೆ.ಆರ್.ನಾರಾಯಣ್ ಜನಿಸಿದರು.

1954: ಖ್ಯಾತ ಹಿನ್ನೆಲೆ ಗಾಯಕಿ ಅನುರಾಧಾ ಪೌಡ್ವಾಲ್ ಜನಿಸಿದರು.

1964: ಭಾರತೀಯ ಸಹಕಾರ ಚಳುವಳಿಯ ಪ್ರವರ್ತಕ ನಾಯಕ ವೈಕುಂಠಬಾಯಿ ಮೆಹ್ತಾ ನಿಧನರಾದರು.

1968: ಭಾರತದ ನಟ ಮತ್ತು ನಿರ್ಮಾಪಕ ದಿಲೀಪ್ ಜನಿಸಿದರು.

1974: ಭಾರತದ ಗಣಿತಶಾಸ್ತ್ರಜ್ಞ ಸಿ.ಪಿ.ರಾಮನುಜಂ ನಿಧನರಾದರು.

1976: ಭಾರತೀಯ ಮೂಲದ ಬಾಣಸಿಗ ಮತ್ತು ಲೇಖಕ ಮನೀತ್ ಚೌಹಾನ್ ಜನಿಸಿದರು.

1984: ಭಾರತದ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಜನಿಸಿದರು.

2001: ಭಾರತದ ನಟ, ನಿರ್ದೇಶಕ ಮತ್ತು ನಿರ್ಮಾಪಕ ಪ್ರದೀಪ್ ಕುಮಾರ್ ನಿಧನರಾದರು.

2007: ಖ್ಯಾತ ಬಾಲಿವುಡ್ ನಟ ಸತ್ಯೇಂದ್ರ ಕಪೂರ್ ನಿಧನರಾದರು.

 

Categories
e-ದಿನ

ಅಕ್ಟೋಬರ್-26

 

ಪ್ರಮುಖ ಘಟನಾವಳಿಗಳು:

1492: ಮೊದಲ ಬಾರಿಗೆ ಲೆಡ್ ಪೆನ್ಸಿಲ್ ಗಳನ್ನು ಬಳಸಲಾಯಿತು.

1858: ರೋಟರಿ ಯಂತ್ರದ ಮೂಲಕ ಬಟ್ಟೆಯನ್ನು ಒಗೆಯಬಲ್ಲ ಯಂತ್ರಕ್ಕೆ ಹೆಚ್.ಇ.ಸ್ಮಿತ್ ಪೇಟೆಂಟ್ ಪಡೆದರು.

1863: ಲಂಡನ್ನಿನಲ್ಲಿ ಫುಟ್ ಬಾಲ್ ಅಸೋಸಿಯೇಷನ್ ರೂಪಿತವಾಯಿತು.

1941: ಅಮೇರಿಕಾದಲ್ಲಿ ಉಳಿತಾಯ ಬಾಂಡ್ ಗಳ ಮಾರಾಟ ಮಾಡಲಾಯಿತು.

1947: ಮಹಾರಾಜ ಹರಿಸಿಂಗ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳಲು ಸಮ್ಮತಿ ನೀಡಿದರು.

1959: ಮೊದಲ ಬಾರಿಗೆ ಭೂಮಿಯಿಂದ ದೂರದಲ್ಲಿರುವ ಚಂದ್ರನ ಛಾಯಾಚಿತ್ರವನ್ನು ರೇಡಿಯೋ ಸಿಗ್ನಲ್ ಗಳ ಮೂಲಕ ಕಳುಹಿಸಲಾಯಿತು.

1984: ಮೊದಲ ಬಾರಿಗೆ ಒಂದು ಮಂಗನ ಹೃದಯವನ್ನು ಸಣ್ಣ ಮಗುವಿಗೆ ನೀಡಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

2001: ದೇಶಭಕ್ತಿ ಕಾಯಿದೆಯನ್ನು ಅಮೇರಿಕಾದಲ್ಲಿ ಜಾರಿಗೆ ತರಲಾಯಿತು.

2006: ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಉದ್ದೇಶದಿಂದ ಭಾರತ ಸರ್ಕಾರವು ಕಾನೂನನ್ನು ಜಾರಿಗೊಳಿಸಲಾಯಿತು.

ಪ್ರಮುಖ ಜನನ/ಮರಣ:

1890: ಭಾರತೀಯ ಪತ್ರಕರ್ತ ಮತ್ತು ರಾಜಕಾರಣಿ ಗಣೇಶ್ ಶಂಕರ್ ವಿದ್ಯಾರ್ಥಿ ಜನಿಸಿದರು.

1932: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಜನಿಸಿದರು.

1952: ಸಂಸದೀಯ ವ್ಯವಹಾರ ಮತ್ತು ಯೋಜನಾ ಸಚಿವರಾದ ಅಶ್ವನಿ ಕುಮಾರ್ ಜನಿಸಿದರು.

1974: ಹಿಂದಿ ಚಿತ್ರರಂಗದ ನಟಿ ರವಿನಾ ಟಂಡನ್ ಜನಿಸಿದರು.

1985: ದಕ್ಷಿಣ ಭಾರತದ ಖ್ಯಾತ ನಟಿ ಅಸೀನ್ ಜನಿಸಿದರು.

1988: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿರ್ಮಾತೃಎಂದೆ ಹೆಸರಾದ ಆರ್.ಕೆ.ಬಾಳಿಗ ನಿಧನರಾದರು.

1999: ಲೇಖಕ ಮತ್ತು ಶಿಕ್ಷಣ ತಜ್ಞ ಏಕನಾಥ ಈಶ್ವರನ್ ನಿಧನರಾದರು.

 

Categories
e-ದಿನ

ಅಕ್ಟೋಬರ್-25

 

ಪ್ರಮುಖ ಘಟನಾವಳಿಗಳು:

1671: ಜಿಯೋವನಿ ಕ್ಯಾಸಿನಿ ಶನಿ ಗ್ರಹದ ಉಪಗ್ರಹವಾದ ಲೇಪ್ಟಸ್ ಅನ್ನು ಪತ್ತೆ ಮಾಡಿದರು.

1870: ಅಮೇರಿಕಾದಲ್ಲಿ ಮೊದಲ ಟ್ರೇಡ್ ಮಾರ್ಕನ್ನು ಆವೆರಿಲ್ ಕೆಮಿಕಲ್ ಪೇಂಟ್ ಸಂಸ್ಥೆಗೆ ನೀಡಲಾಯಿತು.

1870: ಮೊದಲ ಬಾರಿಗೆ ಅಮೇರಿಕಾದಲ್ಲಿ ಅಂಚೆಪತ್ರಗಳನ್ನು ಬಳಸಲಾಯಿತು.

1954: ಅಮೇರಿಕಾದ ಕ್ಯಾಬಿನೆಟ್ ಸಭೆಯನ್ನು ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು.

1955: ಮೈಕ್ರೋವೇವ್ ಓವನ್ ಅನ್ನು ಮನೆ ಬಳಕೆಗಾಗಿ ಮೊದಲ ಬಾರಿಗೆ ಟಪ್ಪನ್ ಕಂಪನಿ ಪರಿಚಯಿಸಿತು.

1984: ಎ-ಅಲ್ಲದ, ಬಿ-ಅಲ್ಲದ ಹೆಪ್ಯಾಟಿಟಿಸ್ ಎಂದು ಕರೆಯಲ್ಪಡುವ ವೈರಸ್ ಅನ್ನು ಸಂಶೋಧಕರು ಗುರುತಿಸಿದರು.

2001: ಮೈಕ್ರೋಸಾಫ್ಟ್ ನೂತನ ಆಪರೇಟಿಂಗ್ ಸಿಸ್ಟಂ ಆದ ವಿಂಡೋಸ್ ಎಕ್ಸ್ ಪಿ ಅನ್ನು ಬಿಡುಗಡೆ ಮಾಡಿತು.

2010: ಸೋನಿ ವಾಕ್ ಮ್ಯಾನ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಯಿತು.

2011: ಭಾರತದ ಸೆಂಟ್ರಲ್ ಬ್ಯಾಂಕ್ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ನಿಯಂತ್ರಣಕ್ಕೊಳಪಡಿಸುವುದನ್ನು ಘೋಷಿಸಿತು. ಈ ತೀರ್ಮಾನ ಹಣಕಾಸು ಕ್ಷೇತ್ರದ ಸುಧಾರಣೆಯಲ್ಲಿ ಪ್ರಮುಖ ತೀರ್ಮಾನ.

2011: ಭಾರತದ ಸರ್ಕಾರದಲ್ಲಿ ಕ್ಲರ್ಕ್ ಆಗಿದ್ದ ಸುಶೀಲ್ ಕುಮಾರ್ “ಕೌನ್ ಬನೇಗ ಕರೋಡಪತಿ” ಆಟದಲ್ಲಿ ಒಂದು ಕೋಟಿ ಗೆದ್ದ ಮೊದಲ ಭಾರತೀಯ.

ಪ್ರಮುಖ ಜನನ/ಮರಣ:

1929: ಭಾರತದ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಜನಿಸಿದರು.

1945: ಬಂಗಾಲಿ ಚಿತ್ರರಂಗದ ಚಿತ್ರಕಥೆಗಾರ್ತಿ, ನಿರ್ದೇಶಕಿ, ನಟಿ ಅಪರ್ಣ ಸೆನ್ ಜನಿಸಿದರು.

1965: ಹಿಂದಿ ಚಿತ್ರರಂಗದ ನಟಿ ನವನೀತ್ ನಿಶನ್ ಜನಿಸಿದರು.

1980: ಕವಿ ಮತ್ತು ಗೀತ ರಚನೆಕಾರ ಸಾಹಿರ್ ಲುದಿಯಾನ್ವಿ ನಿಧನರಾದರು.

1989: ಭಾರತದ ಕ್ರಿಕೆಟ್ ಆಟಗಾರ ಅಭಿಮನ್ಯು ಮಿಥುನ್ ಜನಿಸಿದರು.

1999: ಗಾಯಕ, ನಟ, ಸಂಗೀತ ಸಂಯೋಜಕ ಎಸ್.ರಾಜೇಶ್ವರ ರಾವ್ ನಿಧನರಾದರು.

2003: ಭಾರತೀಯ ಆಧ್ಯಾತ್ಮಿಕ ನಾಯಕ ಮತ್ತು ತತ್ವಜ್ಞಾನಿ ಪಾಂಡುರಂಗ ಶಾಸ್ತ್ರಿ ಅಠಾವಳೆ ನಿಧನರಾದರು.

2009: ರಂಗಭೂಮಿ ಮತ್ತು ಚಲನಚಿತ್ರ ನಟ ಚಿತ್ತರಂಜನ್ ಕೋಲ್ಹಾಟ್ಕರ್ ನಿಧನರಾದರು.

2011: ಮಲಯಾಳಂ ಚಿತ್ರರಂಗದ ನಿರ್ದೇಶಕ, ಬರಹಗಾರ, ಚಿತ್ರಕಥೆಗಾರ ಮೋಹನ್ ರಾಘವನ್ ನಿಧನರಾದರು.

2012: ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆ ರಚನೆಕಾರ ಜಸ್ಪಾಲ್ ಭಟ್ಟಿ ನಿಧನರಾದರು.

 

Categories
e-ದಿನ

ಅಕ್ಟೋಬರ್-24

 

ಪ್ರಮುಖ ಘಟನಾವಳಿಗಳು:

1795: ಪೋಲ್ಯಾಂಡ್ ದೇಶವನ್ನು ಆಸ್ಟ್ರಿಯಾ, ಪ್ರಷ್ಯಾ ಮತ್ತು ರಷ್ಯಾದ ನಡುವೆ ವಿಭಜಿಸಲಾಯಿತು.

1836: ಅಲೋಂಜೋ ಡಿ ಫಿಲಿಪ್ಸ್ ರಂಜಕ ಘರ್ಷಣೆ ಸುರಕ್ಷತಾ ಬೆಂಕಿ ಕಡ್ಡಿಯನ್ನು ಪೇಟೆಂಟ್ ಪಡೆದರು.

1904: ನ್ಯೂಯಾರ್ಕಿನ ಮೊದಲ ಸಬ್ವೇ ತೆರೆಯಲಾಯಿತು.

1931: ನ್ಯೂಯಾರ್ಕ ಮತ್ತು ನ್ಯೂಜರ್ಸಿ ನಡುವೆ ಸಂಪರ್ಕ ಕಲ್ಪಿಸುವ ಜಾರ್ಜ್ ವಾಷಿಂಗ್ಟನ್ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು.

1934: ಮಹಾತ್ಮಾ ಗಾಂಧಿಯವರು ಕಾಂಗ್ರಸ್ಸಿನಿಂದ ರಾಜಿನಾಮೆ ನೀಡಿದರು.

1938: ಅಮೇರಿಕಾದಲ್ಲಿ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರನ್ನು ನಿಷೇಧಿಸಲಾಯಿತು.

1939: ನೈಲಾನ್ ಸ್ಟಾಕಿಂಗ್ ಗಳನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು.

1949: ವಿಶ್ವಸಂಸ್ಥೆಯ ಮುಖ್ಯ ಕಚೇರಿಗೆ ನ್ಯೂಯಾರ್ಕಿನಲ್ಲಿ ಅಡಿಪಾಯ ಹಾಕಲಾಯಿತು.

1951: ವಿಶ್ವಸಂಸ್ಥೆಯು ತನ್ನ ಮೊದಲ ಅಂಚೆಚೀಟಿಯನ್ನು ಪ್ರಕಟಿಸಿದರು.

ಪ್ರಮುಖ ಜನನ/ಮರಣ:

1883: ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜನಿಸಿದರು.

1894: ಭಾರತೀಯ ಲೇಖಕ, ಕವಿ, ಚಿತ್ರಕಥೆಗಾರ ವಿಭೂತಿಭೂಷನ್ ಮುಖ್ಯೋಪಾಧ್ಯಾಯ ಜನಿಸಿದರು.

1914: ಭಾರತ ಸೇನಾಪಡೆಯ ಅಧಿಕಾರಿ ಲಕ್ಷ್ಮಿ ಸೆಹ್ಗಾಲ್ ಜನಿಸಿದರು.

1921: ಭಾರತದ ಅತ್ಯಂತ ಹೆಸರುವಾಸಿ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಜನಿಸಿದರು.

1935: ಭಾರತೀಯ ಮೂಲಕ ಆಂಗ್ಲ ಪತ್ರಕರ್ತ ಮತ್ತು ಲೇಖಕ ಮಾರ್ಕ್ ಟುಲ್ಲಿ ಜನಿಸಿದರು.

1963: ಭಾರತೀಯ ಉದ್ಯಮಿ ಅರವಿಂದ್ ರಘುನಾಥನ್ ಜನಿಸಿದರು.

2004: ಹೈದರಾಬಾದ್ ಪ್ರದೇಶದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಕೊಲ್ಲೂರು ಮಲ್ಲಪ್ಪ ನಿಧನರಾದರು.

2013: ಖ್ಯಾತ ಹಿಂದಿ ಗೀತ ಸಂಯೋಜಕ ಮನ್ನಾಡೇ ನಿಧನರಾದರು.

2014: ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್.ಎಸ್.ರಾಜೇಂದ್ರನ್ ನಿಧನರಾದರು.

 

Categories
e-ದಿನ

ಅಕ್ಟೋಬರ್-23

 

ಪ್ರಮುಖ ಘಟನಾವಳಿಗಳು:

1760: ಮೊದಲ ಯಹೂದಿ ಪ್ರಾರ್ಥನಾ ಪುಸ್ತಕಗಳನ್ನು ಉತ್ತರ ಅಮೇರಿಕಾದಲ್ಲಿ ಮುದ್ರಿಸಲಾಯಿತು.

1814: ಮೊದಲ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯನ್ನು ಇಂಗ್ಲೆಂಡಿನಲ್ಲಿ ಮಾಡಲಾಯಿತು.

1824: ಮೊದಲ ಉಗಿ ವಾಹನವನ್ನು ಪರಿಚಯಿಸಲಾಯಿತು.

1947: ದಂಪತಿಗಳಾದ ಡಾ.ಕಾರ್ಲ್ ಮತ್ತು ಡಾ.ಗರ್ಟಿ ಒಟ್ಟಾಗಿ ನೋಬಲ್ ಪ್ರಶಸ್ತಿ ಪಡೆದ ಮೊದಲ ದಂಪತಿಗಳು.

1959: ಚೀನಾದ ಪಡೆಗಳು ಭಾರತಕ್ಕೆ ಆಗಮಿಸಿದ ಕಾರಣ 17 ಮಂದಿ ಮೃತ ಪಟ್ಟರು.

1989: ಹಂಗೇರಿ ಗಣರಾಜ್ಯವೆಂದು ಘೋಷಿಸಿಕೊಂಡಿತು ಮತ್ತು ಕಮ್ಮ್ಯುನಿಸ್ಟ್ ಆಡಳಿತ ಕೊನೆಗೊಂಡಿತೆಂದು ಘೋಷಿಸಿತು.

2001: “ಆಪಲ್” ತನ್ನ ನೂತನ ವಸ್ತು “ಐಪಾಡ್” ಅನ್ನು ಬಿಡುಗಡೆಗೊಳಿಸಿತು.

2008: ಪಾಶ್ಚಿಮಾತ್ಯ ಭಾರತದಲ್ಲಿ ಕಾನೂನುಬಾಹಿರ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಪೋಟ ಸಂಭವಿಸಿದ ಕಾರಣ 12 ಮಕ್ಕಳನ್ನು ಸೇರಿದಂತೆ 27 ಜನ ಮೃತಪಟ್ಟರು.

ಪ್ರಮುಖ ಜನನ/ಮರಣ:

1900: ಕ್ರಿಕೆಟ್ ಆಟಗಾರ ದೌಗ್ಲಾಸ್ ಜಾರ್ಡಿನ್ ಜನಸಿದರು.

1923: ಭಾರತೀಯ ಮೂಲದ ಪಾಕಿಸ್ತಾನಿ ಭಾಷಾ ಶಾಸ್ತ್ರಜ್ಞ, ಲೇಖಕ, ವಿದ್ವಾಂಸ ಅಸ್ಲಾಂ ಫರೂಕಿ ಜನಿಸಿದರು.

1923: ಭಾರತದ 11ನೇ ಉಪ-ರಾಷ್ಟ್ರಪತಿ ಆಗಿದ್ದ ಭೈರೋನ್ ಸಿಂಗ್ ಶೆಖಾವತ್ ಜನಿಸಿದರು.

1926: ಹಿಂದೂ ಪತ್ರಿಕೆಯ ಸಂಪಾದಕ ಎಸ್.ರಂಗಸ್ವಾಮಿ ಐಯಂಗಾರ್ ನಿಧನರಾದರು.

1937: ಭಾರತೀಯ ನಟ, ನಿರ್ಮಾಪಕ, ನಿರ್ದೇಶಕ ವೇವೆನ್ ವರ್ಮಾ ಜನಿಸದರು.

1957: ಭಾರತಿ ಎಂಟರ್ ಪ್ರೈಸಸ್ ಸಂಸ್ಥಾಪಕ ಮತ್ತು ಸಿಇಓ ಸುನಿಲ್ ಭಾರತಿ ಮಿತ್ತಲ್ ಜನಿಸಿದರು.

1974: ಲೇಖಕ ಮತ್ತು ಪತ್ರಕರ್ತ ಅರವಿಂದ ಅಡಿಗಾ ಅವರು ಜನಿಸಿದರು.

1979: ತಮಿಳು ಚಿತ್ರರಂಗದ ಖ್ಯಾತ ನಟ ಪ್ರಭಾಸ್ ಜನಿಸಿದರು.

1998: ಕನ್ನಡದ ಖ್ಯಾತ ಕವಿ ಪು.ತಿ.ನರಸಿಂಹಾಚಾರ್ ನಿಧನರಾದರು.

2012: ಭಾರತೀಯ ಲೇಖಕ ಮತ್ತು ಕವಿ ಸುನಿಲ್ ಗಂಗೋಪಾಧ್ಯಾಯ ನಿಧನರಾದರು.

 

Categories
e-ದಿನ

ಅಕ್ಟೋಬರ್-22

 

ಪ್ರಮುಖ ಘಟನಾವಳಿಗಳು:

1746: ಪ್ರಿನ್ಸ್ಟನ್ ವಿಶ್ವವಿದ್ಯಾಲವನ್ನು ಸ್ಥಾಪಿಸಲಾಯಿತು.

1861: ಪೂರ್ವ ಮತ್ತು ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಮೊದಲ ಟೆಲಿಗ್ರಾಫ್ ಲೈನಿನ ಕಾಮಗಾರಿ ಪೂರ್ಣಗೊಂಡಿತು.

1897: ವಿಶ್ವದ ಮೊದಲ ಕಾರಿನ ಡೀಲರ್ ಲಂಡನ್ನಿನಲ್ಲಿ ತೆರೆಯಲಾಯಿತು.

1924: ಟೋಸ್ಟ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1938: ಚೆಸ್ಟರ್ ಕಾರ್ಲ್ಸನ್ ಮೊದಲ ಜೆರಾಕ್ಸ್ ಯಂತ್ರವನ್ನು ಪ್ರದರ್ಶಿಸಿದರು.

1947: ಕಾಶ್ಮೀರ ಸಂಘರ್ಷ ಆರಂಭವಾಯಿತು. ಇದು ಭಾರತದ ವಿಭಜನೆಯ ನಂತರ ಆರಂಭವಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಯುದ್ಧವಾಯಿತು.

2008: ಭಾರತದ ಮೊದಲ ಮಾನವರಹಿತ ಚಂದ್ರನ ಕಾರ್ಯಾಚರಣೆಯಾದ ಚಂದ್ರಯಾನ-1 ಅನ್ನು ಹಾರಿಸಲಾಯಿತು.

2016: ಎಟಿ &ಟಿ ಸಂಸ್ಥೆಯು ಟೈಮ್ ವಾರ್ನರ್ ಸಂಸ್ಥೆಯನ್ನು 85.4 ಬಿಲಿಯನ್ ಡಾಲರಿಗೆ ಖರೀದಿಸಿತು.

ಪ್ರಮುಖ ಜನನ/ಮರಣ:

1873: ಭಾರತದ ತತ್ವಜ್ಞಾನಿ ರಾಮತೀರ್ಥರು ಜನಿಸಿದರು.

1900: ಭಾರತದ ಕಾರ್ಯಕರ್ತ ಅಶ್ಫಕ್ ಉಲ್ಲಾ ಖಾನ್ ಜನಿಸಿದರು.

1917: ಭಾರತೀಯ ವೈದ್ಯಕೀಯ ಸೇವೆಯ ನಿರ್ದೇಶಕ ಚಾರ್ಲ್ಸ್ ಪಾರ್ಡೆ ಲೂಕಿಸ್ ನಿಧನರಾದರು.

1947: ಭಾರತ ಮೂಲದ ಅಮೇರಿಕ ವೈದ್ಯ ಮತ್ತು ಲೇಖಕ ದೀಪಕ್ ಚೋಪ್ರ ಜನಿಸಿದರು.

1952: ಬಹುಭಾಷಾ ಚಿತ್ರ ನಿರ್ದೇಶಕ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಜನಿಸಿದರು.

1954: ಭಾರತೀಯ ಮೂಲದ ಬಂಗ್ಲಾದೇಶಿ ಲೇಖಕ ಮತ್ತು ಕವಿ ಜಿಬಾನನಂದ ದಾಸ್ ನಿಧನರಾದರು.

1997: ಪಾಕಿಸ್ತಾನದ ಸರ್ವೇಯರ್ ಜೆನೆರಲ್ ಆಗಿದ್ದ ಮಿಯಾನ್ ಮೊಹಮ್ಮದ್ ಶರೀಫ್ ನಿಧನರಾದರು.

2008: ಭಾರತೀಯ ನಟ ಪಾರಿತೋಷ್ ಸೆನ್ ನಿಧನರಾದರು.

2014: ಭಾರತೀಯ ಚಿತ್ರರಂಗದ ನಿರ್ದೇಶಕ ಛಾಯಾಗ್ರಾಹಕ ಅಶೋಕ್ ಕುಮಾರ್ ನಿಧನರಾದರು.

 

Categories
e-ದಿನ

ಅಕ್ಟೋಬರ್-21

 

ಪ್ರಮುಖ ಘಟನಾವಳಿಗಳು:

1824: ಪೋರ್ಟ್ ಲ್ಯಾಂಡ್ ಸಿಮೆಂಟಿಗೆ ಜೋಸೆಫ್ ಆಸ್ಫಿನ್ ಪೇಟೆಂಟ್ ಪಡೆದರು.

1869: ಮೊದಲ ಬಾರಿಗೆ ತಾಜಾ ಸಿಂಪಿಗಳ ಸಾಗಾಣಿಕೆ ಬ್ಲಾಟಿಮೋರಿನಿಂದ ಮಾಡಲಾಯಿತು.

1916: ಅಮೇರಿಕಾದ ಸೈನ್ಯವು ರಿಸರ್ವ್ ಅಧಿಕಾರಿಗಳ ತರಬೇತಿ ಕಾರ್ಪ್ಸ್ ಅನ್ನು ರೂಪಿಸಿತು.

1918: ಒಂದು ನಿಮಿಷಕ್ಕೆ 170 ಪದಗಳನ್ನು ಟೈಪ್ ಮಾಡಿ ಮಾರ್ಗರೆಟ್ ಓವೆನ್ ವಿಶ್ವ ದಾಖಲೆ ರಚಿಸಿದರು.

1923: ಮ್ಯೂನಿಚಿನ ಡಾಶ್ ಮ್ಯೂಸಿಯಂನಲ್ಲಿ ಮೊದಲ ಪ್ಲಾನಿಟೇರಿಯಂ ತೆರೆಯಲಾಯಿತು.

1943: ಸುಭಾಷ್ ಚಂದ್ರ ಬೊಸ್ ಅವರು ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರವನ್ನು ಘೋಷಿಸಿದರು.

1945: ಫ್ರಾನ್ಸಿನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಮತ ಹಾಕಲು ಅವಕಾಶ ನೀಡಲಾಯಿತು.

1950: ಬೆಲ್ಜಿಯಂನಲ್ಲಿ ಮರಣದಂಡನೆಯನ್ನು ನಿಷೇಧಿಸಲಾಯಿತು.

1977: ಯುರೋಪಿಯನ್ ಪೇಟೆಂಟ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

2008: ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಯುನೈಟೆಡ್ ಫೋರಂನ 25,000 ಸದಸ್ಯರು ಪಿಂಚಣಿ ವಿವಾದದ ಬಗ್ಗೆ ಮುಷ್ಕರ ನಡೆಸಿದರು.

ಪ್ರಮುಖ ಜನನ/ಮರಣ:

1887: ಬಿಹಾರದ ಮೊದಲ ಮುಖ್ಯಮಂತ್ರಿ ಆಗಿದ್ದ ಕೃಷ್ಣ ಸಿಂಗ್ ಜನಿಸಿದರು.

1925: ಪಂಜಾಬಿನ ಮುಖ್ಯ ಮಂತ್ರಿ ಆಗಿದ್ದ ಸುರ್ಜಿತ್ ಸಿಂಗ್ ಬರ್ನಾಲ ಜನಿಸಿದರು.

1931: ಖ್ಯಾತ ಹಿಂದಿ ಚಲನಚಿತ್ರ ನಟ ಶಮ್ಮಿ ಕಪೂರ್ ಜನಿಸಿದರು.

1937: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದ ಫರೂಕ್ ಅಬ್ದುಲ್ಲಾ ಜನಿಸಿದರು.

1937: ತಮಿಳು ಚಿತ್ರರಂಗದ ಹಾಸ್ಯ ನಟ, ಗಾಯಕ ತೆಂಗೈ ಶ್ರೀನಿವಾಸನ್ ಜನಿಸಿದರು.

1967: ಖ್ಯಾತ ಕ್ರೀಡಾ ಪಟು, ಓಟಗಾರ್ತಿ ಅಶ್ವಿನಿ ನಾಚಪ್ಪ ಜನಿಸಿದರು.

1981: ನವೋದಯ ಸಮಯದ ಖ್ಯಾತ ಕವಿ ದ.ರಾ.ಬೇಂದ್ರೆ ನಿಧನರಾದರು.

1990: ಭಾರತೀಯ ಫುಟ್ಬಾಲ್ ಆಟಗಾರ ನಿರ್ಮಲ್ ಚೆಟ್ರಿ ಜನಿಸಿದರು.

2012: ಖ್ಯಾತ ಹಿಂದಿ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಯಶ್ ಚೋಪ್ರಾ ನಿಧನರಾದರು.

 

Categories
e-ದಿನ

ಅಕ್ಟೋಬರ್-20

 

ಪ್ರಮುಖ ಘಟನಾವಳಿಗಳು:

1822: ಲಂಡನ್ ಸಂಡೆ ಟೈಮ್ಸ್ ಮೊದಲ ಸಂಚಿಕೆ ಮುದ್ರಿಸಲಾಯಿತು.

1864: ಅಮೇರಿಕ ಅಧ್ಯಕ್ಷ ಲಿಂಕನ್ ಅಧಿಕೃತವಾಗಿ ಥ್ಯಾಂಕ್ಸ್ ಗಿವಿಂಗ್ ಡೇ ಅನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿದರು.

1906: ಡಾ.ಲೀ ಡೆಫಾರೆಸ್ಟ್ ತನ್ನ ವಿದ್ಯುತ್ ನಿರ್ವಾತ ಕೊಳವೆಯನ್ನು ಪ್ರದರ್ಶಿಸಿದರು.

1960: ಮೊದಲ ಸಂಪೂರ್ಣ ಯಾಂತ್ರಿಕೃತ ಅಂಚೆ ಕಛೇರಿ ಪ್ರಾರಂಭವಾಯಿತು.

1962: ಭಾರತ ಮತ್ತು ಚೀನಾದ ನಡುವೆ ಯುದ್ಧ ಆರಂಭವಾಯಿತು.

1991: ಭಾರತದ ಉತ್ತರ ಕಾಶಿಯಲ್ಲಿ ಭೂಕಂಪದ ಕಾರಣ ಸುಮಾರು 1000 ಮಂದಿ ಮೃತ ಪಟ್ಟರು.

2008: ಭಾರತದ ಕೇಂದ್ರ ಬ್ಯಾಂಕ್ ತನ್ನ ಮರುಖರೀದಿ ದರವನ್ನು ಕಡಿತಗೊಳಿಸಿತು.

ಪ್ರಮುಖ ಜನನ/ಮರಣ:

1920: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿದ್ದ ಸಿದ್ದಾರ್ಥ ಶಂಕರ್ ರೇ ಜನಿಸಿದರು.

1923: ಕೇರಳಾದ ಮಾಜಿ ಮುಖ್ಯ ಮಂತ್ರಿ ವಿ.ಎಸ್.ಅಚ್ಚುತಾನಂದನ್ ಜನಿಸಿದರು.

1927: ಭಾರತೀಯ ಕವಿ, ವಿಮರ್ಶಕ ಗುಂಟೂರು ಷೇಶೇಂಧ್ರ ಶರ್ಮ ಜನಿಸಿದರು.

1949: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವಿ.ಎನ್.ರಾಜಶೇಖರನ್ ಪಿಳ್ಳೈ ಜನಿಸಿದರು.

1961: ಭಾರತೀಯ ಭೌತಿಕ ಮಾನವಶಾಸ್ತ್ರಜ್ಞ ಬಿರಾಜಾ ಶಂಕರ್ ಗುಹಾ ನಿಧನರಾದರು.

1963: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಜನಿಸಿದರು.

1966: ಭಾರತೀಯ ಹಿಂದುಸ್ಥಾನಿ ಸಂಗೀತ ಗಾಯಕ, ರಾಗ ಸಂಯೋಜಕ ಮತ್ತು ತಬಲಾ ವಾದಕ ಬಿಕ್ರಂ ಘೋಷ್ ಜನಿಸಿದರು.

1978: ಭಾರತ ಕ್ರಿಕೆಟ್ ಆಟಗಾರ ವಿರೇಂದ್ರ ಸೇಹ್ವಾಗ್ ಜನಿಸಿದರು.

2008: ಚಿತ್ರಕಥೆಗಾರ ಮತ್ತು ನಿರ್ದೇಶಕ ಸಿ.ವಿ.ಶ್ರೀಧರ್ ನಿಧನರಾದರು.

 

Categories
e-ದಿನ

ಅಕ್ಟೋಬರ್-19

 

ಪ್ರಮುಖ ಘಟನಾವಳಿಗಳು:

1630: ಬಾಸ್ಟನ್ನಿನಲ್ಲಿ ಮೊದಲ ಸಾಮಾನ್ಯ ನ್ಯಾಯಾಲಯದ ಕಾರ್ಯ ನಡೆಸಲಾಯಿತು.

1722: ಬೆಂಕಿಯನ್ನು ಆರಿಸಲು ಉಪಯೋಗಿಸುವ ಯಂತ್ರಕ್ಕೆ ಫ್ರೆಂಚ್ ಸಿ.ಹಾಪ್ಫರ್ ಪೇಟೆಂಟ್ ಪಡೆದರು.

1853: ಮೊದಲ ಹಿಟ್ಟಿನ ಗಿರಣಿಯ ಕಾರ್ಯ ಆರಂಭಿಸಲಾಯಿತು.

1872: ವಿಶ್ವದ ಅತಿ ದೊಡ್ಡ ಚಿನ್ನದ ಗಟ್ಟಿ (215 ಕೆ.ಜಿ) ದಕ್ಷಿಣ ವೇಲ್ಸಿನಲ್ಲಿ ಪತ್ತೆಯಾಯಿತು.

1914: ಅಮೇರಿಕಾದ ಅಂಚೆ ಕಛೇರಿಯ ಮೊದಲ ಪತ್ರವನ್ನು ಸಂಗ್ರಹಿಸಲು ಅಥವಾ ತಲುಪಿಸಲು ವಾಹನವನ್ನು ಬಳಸಲಾಯಿತು.

1926: ಮೊದಲ ಅರ್ಧ ಸ್ವಯಂಚಾಲಿತ ರೈಫೆಲ್ಲಿಗೆ ಜಾನ್.ಸಿ.ಗರಾಂಡ್ ಪೇಟೆಂಟ್ ಪಡೆದರು.

2005: ಸಿಸ್ಕೋ ಸಿಸ್ಟಮ್ಸ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಅಮೇರಿಕ ಹೊರಭಾಗದಲ್ಲಿ ಅತಿದೊಡ್ಡ ಹೂಡಿಕೆಯನ್ನು (1.1 ಶತಕೋಟಿ ಡಾಲರ್) ಭಾರತದಲ್ಲಿ ಹೂಡುವುದಾಗಿ ಘೋಷಿಸಿತು.

2014: ಅಮೇರಿಕಾದಲ್ಲಿ ಕಾಂಡಕೋಶಗಳಿಂದ ಪ್ರಯೋಗಾಲಯದಲ್ಲಿ ಕಾರ್ಯಯೋಗ್ಯ ಮಾನವ ಕರುಳನ್ನು ಉತ್ಪತ್ತಿ ಮಾಡಲಾಯಿತು.

ಪ್ರಮುಖ ಜನನ/ಮರಣ:

1910: ಭಾರತೀಯ-ಅಮೇರಿಕನ್ ನೋಬಲ್ ಪ್ರಶಸ್ತಿ ವಿಜೇತ ಎಸ್.ಚಂದ್ರಶೇಖರ್ ಜನಿಸಿದರು.

1920: ಭಾರತೀಯ ತತ್ವಜ್ಞಾನಿ ಮತ್ತು ಶಿಕ್ಷಣತಜ್ಞ ಪಾಂಡುರಂಗ ಶಾಸ್ತ್ರಿ ಅತಿವಾಳೆ ಜನಿಸಿದರು.

1954: ನಟಿ, ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ತೆಂಡುಲ್ಕರ್ ಜನಿಸಿದರು.

1955: ತೆಲುಗು ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಗಂಗರಾಜು ಗುನ್ನಂ ಜನಿಸಿದರು.

1961: ಖ್ಯಾತ ನಟ, ನಿರ್ಮಾಪಕ ಸನ್ನಿ ಡಿಯೋಲ್ ಜನಿಸಿದರು.

2000: ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣ್ಯತೆ ಹೊಂದಿದ್ದ ಡಾ.ಶರದ್ ವೈದ್ಯ ನಿಧನರಾದರು.

2002: ಖ್ಯಾತ ವೈಯಲಿನ್ ವಾದಕ ಮೆಹಲಿಮೆಹ್ತಾ ನಿಧನರಾದರು.

2013: ಸಂಗೀತಕಾರ, ಸಂಗೀತ ಸಂಯೋಜಕ ಕೆ.ರಾಘವನ್ ನಿಧನರಾದರು.

 

Categories
e-ದಿನ

ಅಕ್ಟೋಬರ್-18

 

ಪ್ರಮುಖ ಘಟನಾವಳಿಗಳು:

1648: ಅಮೇರಿಕಾದ ಮೊದಲ ಕಾರ್ಮಿಕ ಸಂಘಟನೆ ರೂಪಗೊಂಡಿತು.

1878: ಎಡಿಸನ್ ಅವರು ಗೃಹ ಬಳಕೆಗೆ ವಿದ್ಯುತ್ ಶಕ್ತಿ ಲಭ್ಯವಾಗುವಂತೆ ಮಾಡಿದರು.

1922: ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ರೂಪಿಸಲಾಯಿತು.

1954: ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮೂಲಕ ಮೊದಲ ಟ್ರಾನ್ಸಿಸ್ಟರ್ ರೇಡಿಯೋದ ಬಗ್ಗೆ ಘೋಷಿಸಿದರು.

1955: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ರೋಟಾನ್ ವಿರೋಧಿಯನ್ನು ಕಂಡುಹಿಡಿದರು.

1967: ವಾಲ್ಟ್ ಡಿಸ್ನಿ ಅವರ “ಜಂಗಲ್ ಬುಕ್” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

1969: ಅಮೇರಿಕಾದ ಸರ್ಕಾರವು ಕೃತಕ ಸಿಹಿಕಾರಕಗಳನ್ನು ನಿಷೇಧಿಸಿತು.

2004: ಭಾರತದ ದರೋಡೆಕೋರ ಮತ್ತು ಕಳ್ಳಸಾಗಾಣೆಕಾರ ವೀರಪ್ಪನ್ ಹತ್ಯೆ ಮಾಡಲಾಯಿತು.

2006: ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ 7.0 ತಂತ್ರಾಂಶವನ್ನು ಬಿಡುಗಡೆ ಮಾಡಿತು.

ಪ್ರಮುಖ ಜನನ/ಮರಣ:

1944: ವಸತಿ ಅಭಿವೃದ್ಧಿ ಹಣಕಾಸು ನಿಗಮದ ಅಧ್ಯಕ್ಷರಾದ ದೀಪಕ್ ಪಾರೆಖ್ ಜನಿಸಿದರು.

1950: ಖ್ಯಾತ ಖಳ ನಟ ಓಂ ಪುರಿ ಜನಿಸಿದರು.

1965: ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಜಾಕಿರ್ ನಾಯಕ್ ಜನಿಸಿದರು.

1974: ಲೇಖಕ ಅಮಿಶ್ ತ್ರಿಪಾಟಿ ಜನಿಸಿದರು.

1976: ಭಾರತದ ಕವಿ, ಲೇಖಕ ವಿಶ್ವನಾಥ ಸತ್ಯನಾರಾಯಣ ನಿಧನರಾದರು.

1977: ಭಾರತದ ಹಿಂದಿ ಚಿತ್ರರಂಗದ ನಟ ಕುನಾಲ್ ಕಪೂರ್ ಜನಿಸಿದರು.

1978: ತಮಿಳು ಚಿತ್ರರಂಗದ ಖ್ಯಾತ ನಟಿ ಜ್ಯೋತಿಕಾ ಜನಿಸಿದರು.

1983: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿಜಯ್ ಮಂಜ್ರೇಕರ್ ನಿಧನರಾದರು.

 

Categories
e-ದಿನ

ಅಕ್ಟೋಬರ್-17

 

ಪ್ರಮುಖ ಘಟನಾವಳಿಗಳು:

1855: ಬೆಸ್ಸಿಮರ್ ಸ್ಟೀಲ್ ತಯಾರಿಸುವ ಪ್ರಕ್ರಿಯನ್ನು ಪೇಟೆಂಟ್ ಮಾಡಲಾಯಿತು.

1888: ನ್ಯಾಷನಲ್ ಜಿಯೋಗ್ರಫಿಕ್ ನಿಯತಕಾಲಿಕೆಯನ್ನು ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

1907: ಅಟ್ಲಾಂಟಿಕ್ ಮಹಾಸಾಗರದ ಮೇಲೆ ಮೊದಲ ವಾಣಿಜ್ಯ ವಯರ್ ಲೆಸ್ ಟೆಲಿಗ್ರಾಫ್ ಅನ್ನು ಕಳುಹಿಸಲಾಯಿತು.

1919: ರೇಡಿಯೋ ಕಾರ್ಪೋರೇಷನ್  ಆಫ್ ಅಮೇರಿಕಾವನ್ನು ಸ್ಥಾಪಿಸಲಾಯಿತು.

1921: ಬೆಲ್ಜಿಯಂನ ಸಾರ್ವಜನಿಕ ಗ್ರಂಥಾಲಯ ಕಾನೂನು ಜಾರಿಗೆ ಬಂದಿತು.

1952: ಪ್ರಪಂಚದಲ್ಲೆ ಮೊದಲ ಬಾರಿಗೆ ಮಾನವನ ಮೇಲೆ ಯಾಂತ್ರಿಕ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

1956: ಇಂಗ್ಲೆಂಡಿನ ಮೊದಲ ದೊಡ್ಡ ಪ್ರಮಾಣದ ಪರಮಾಣು ವಿದ್ಯುತ್ ಕೇಂದ್ರವನ್ನು ತೆರೆಯಲಾಯಿತು.

1979: ಮದರ್ ಥೆರೆಸಾ ಅವರಿಗೆ ನೋಬಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2000: ಮೇಡಮ್ ಟುಸ್ಸಾಡ್ಸ್ ವ್ಯಾಕ್ಸ್ ವಸ್ತುಸಂಗ್ರಹಾಲಯವನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲಾಯಿತು.

2003: ವಿಶ್ವದ ಅತ್ಯಂತ ಎತ್ತರವಾದ ಕಟ್ಟಡ ತೈಪೈಯ ನಿರ್ಮಾಣವನ್ನು ಪೂರ್ಣಗೊಳಿಸಲಾಯಿತು.

ಪ್ರಮುಖ ಜನನ/ಮರಣ:

1817: ಭಾರತೀಯ ತತ್ವಜ್ಞಾನಿ ಮತ್ತು ವಿದ್ವಾಂಸ ಸಯದ್ ಅಹಮದ್ ಖಾನ್ ಜನಿಸಿದರು.

1892: ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ.ಶಣ್ಮುಖಂ ಚೆಟ್ಟಿ ಜನಿಸಿದರು.

1947: ಖ್ಯಾತ ನಿರೂಪಕಿ ಸಿಮಿ ಗಾರೆವಾಲ್ ಜನಿಸಿದರು.

1955: ಖ್ಯಾತ ಹಿಂದಿ ಚಿತ್ರನಟಿ ಸ್ಮಿತಾ ಪಾಟಿಲ್ ಅವರು ಜನಿಸಿದರು.

1965: ಚಿತ್ರ ನಟ ಸಂಜಯ್ ಕಪೂರ್ ಜನಿಸಿದರು.

1970: ಭಾರತೀಯ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಜನಿಸಿದರು.

1980: ಭಾರತದ ಖ್ಯಾತ ಕ್ರಿಕೆಟ್ ಆಟಗಾರ್ತಿ ರೀಮಾ ಮಲ್ಹೋತ್ರ ಜನಿಸಿದರು.

1981: ಭಾರತೀಯ ಕವಿ, ಲೇಖಕ, ಗೀತರಚನೆಕಾರ ಕಣ್ಣದಾಸನ್ ನಿಧನರಾದರು.

1984: ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ಅವರು ಜನಿಸಿದರು.

 

Categories
e-ದಿನ

ಅಕ್ಟೋಬರ್-16

 

ಪ್ರಮುಖ ಘಟನಾವಳಿಗಳು:

1829: ಅಮೇರಿಕಾದ ಮೊದಲ ಆಧುನಿಕ ಹೋಟೆಲ್ ಆದ ಟ್ರೆಮಾಂಟ್ ಹೋಟೆಲ್ ಬಾಸ್ಟನ್ನಿನಲ್ಲಿ ತೆರೆಯಲಾಯಿತು.

1841: ಕೆನೆಡಾದ ಕ್ವೀನ್ಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1848: ಮೊದಲ ಹೋಮಿಯೋಪತಿ ವೈದ್ಯ ಕಾಲೇಜು ಪೆನ್ಸಿಲ್ವೇನಿಯಾದಲ್ಲಿ ತೆರೆಯಲಾಯಿತು.

1861: ಒಕ್ಕೂಟದ ಅಂಚೆ ಕಛೇರಿ, ಅಂಚೆ ಚೀಟಿಗಳನ್ನು ಮಾರಾಟ ಮಾಡಲು ಆರಂಭಿಸಿತು.

1868: ನಿಕೋಬಾರ್ ದ್ವೀಪಗಳನ್ನು ಬ್ರಿಟೀಷರಿಗೆ ಮಾರುವ ಮೂಲಕ, ಡೆನ್ಮಾರ್ಕ್ ಭಾರತದಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಮುಕ್ತಾಯಗೊಳಿಸಿತು.

1905: ಪ್ರಾಂತೀಯ ರಾಜ್ಯವಾದ ಬಂಗಾಳವನ್ನು ವಿಭಜಿಸಲಾಯಿತು.

1923: ಡಿಸ್ನಿ ಬ್ರದರ್ಸ್ ಕಾರ್ಟೂನ್ ಸ್ಟೂಡಿಯೋ ಸ್ಥಾಪಿಸಲಾಯಿತು.

1923: ಸ್ವಯಂ-ಚಲನೆ ಗಡಿಯಾರಕ್ಕೆ ಜಾನ್ ಹಾರ್ವುಡ್ ಪೇಟೆಂಟ್ ಪಡೆದರು.

1942: ಭಾರತದಲ್ಲಿ ಚಂಡಮಾರುತದ ಪರಿಣಾಮ ಬಂಗಾಳದಲ್ಲಿ ಸುಮಾರು 40,000 ಜನ ಮೃತ ಪಟ್ಟರು.

1984: ಒಂದು ಆಫ್ರಿಕಾ ದೇಶದ ಮಂಗದ ಹೃದಯವನ್ನು 15 ದಿನದ ಹೆಣ್ಣು ಮಗುವಿಗೆ ಕಸಿ ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

2014: ಏಷಿಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯನ್ನು ಅಂತರರಾಷ್ಟ್ರೀಯ ಉತ್ಪಾದನಾ ಕೇಂದ್ರವಾಗಿ ಮಾರ್ಪಾಡು ಮಾಡುವ ಗುರಿಯಿಂದ ಕಾರ್ಮಿಕ ಸುಧಾರಣೆಯ ಸರಣಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು.

ಪ್ರಮುಖ ಜನನ/ಮರಣ:

1799: ಭಾರತೀಯ ಕಾರ್ಯಕರ್ತ ವೀರಪಾಂಡಿಯ ಕಟ್ಟಬೊಮ್ಮನ್ ನಿಧನರಾದರು.

1946: ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜನಿಸಿದರು.

1948: ಭಾರತದ ಖ್ಯಾತ ನಟಿ, ನೃತ್ಯಗಾರ್ತಿ, ರಾಜಕಾರಣಿಯಾದಹೇಮಾಮಾಲಿನಿ ಅವರು ಜನಿಸಿದರು.

1951: ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಲಿಯಾಖತ್ ಅಲಿ ಖಾನ್ ನಿಧನರಾದರು.

1974: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಚೆಂಬೈ ವೈದ್ಯನಾಥ ಭಾಗವತರ್ ನಿಧನರಾದರು.

1975: ಭಾರತೀಯ ಕ್ರಿಕೆಟ್ ಆಟಗಾರ ಶಡಗೋಪನ್ ರಮೇಶ್ ಅವರು ಜನಿಸಿದರು.

1982: ಭಾರತದ ನಟ, ಗಾಯಕ, ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಜನಿಸಿದರು.

1989: ಗ್ರಾಂಡ್ ಮಾಸ್ಟರ್ ಶೀರ್ಷಿಕೆ ಹೊಂದಿರುವ ಭಾರತೀಯ ಚೆಸ್ ಆಟಗಾರ ಅಭಿಜಿತ್ ಗುಪ್ತ ಜನಿಸಿದರು.

2013: ಭಾರತೀಯ ನಾಟಕಕಾರ ಮತ್ತು ಶಿಕ್ಷಣ ತಜ್ಞ ಗೋವಿಂದ್ ಪುರುಷೋತ್ತಮ್ ದೇಶ್ಪಾಂಡೆ ನಿಧನರಾದರು.

 

Categories
e-ದಿನ

ಅಕ್ಟೋಬರ್-15

 

ಪ್ರಮುಖ ಘಟನಾವಳಿಗಳು:

1582: ಜಾರ್ಜಿಯನ್ ಕ್ಯಾಲೆಂಡರ್ ಅನ್ನು ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಪೋರ್ಚುಗಲ್ಲಿನಲ್ಲಿ ಅಳವಡಿಸಲಾಯಿತು.

1783: ಫ್ರಾಂಕಾಯಿಸ್ ಪಿಲಾಟ್ರೆ ಡಿ ರೋಜಿಯರ್ ಮೊಟ್ಟ ಮೊದಲ ಮಾನವಸಹಿತ ಬಿಸಿಗಾಳಿಯ ಬಲೂನಿನಲ್ಲಿ ಪ್ರಯಾಣ ಮಾಡಿದರು.

1846: ಡಾ.ವಿಲಿಯಂ ಥಾಮಸ್ ಗ್ರೀನ್ ಮಾರ್ಟನ್ ಈಥರಿನ ಮೊದಲ ಬಾರಿಗೆ ಸಾರ್ವಜನಿಕ ಬಳಕೆ ಮಾಡಲಾಯಿತು.

1878: ಥಾಮಸ್ ಎಡಿಸನ್ “ಎಡಿಸನ್ ಎಲೆಕ್ಟ್ರಿಕ್ ಲೈಟ್ ಕೋ” ಸಂಸ್ಥೆಯನ್ನು ಸ್ಥಾಪಿಸಿದರು.

1924: ಅಮೇರಿಕಾದ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ “ಸ್ಟಾಚ್ಯು ಆಫ್ ಲಿಬರ್ಟಿ” ಅನ್ನು ರಾಷ್ಟ್ರೀಯ ಪ್ರತಿಮೆ ಎಂದು ಘೋಷಿಸಿದರು.

1932: ಟಾಟಾ ಏರ್ಲೈನ್ಸ್ (ನಂತರ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾದ) ವಿಮಾನ ಸಂಸ್ಥೆಯ ಮೊದಲ ವಿಮಾನ ಹಾರಾಟ ಮಾಡಿತು.

1949: ಮಣಿಪುರದ ಆಡಳಿತವನ್ನು ಭಾರತ ಸರ್ಕಾರವು ವಹಿಸಿಕೊಂಡಿತು.

1951: ಮೆಕ್ಸಿಕನ್ ರಸಾಯನಶಾಸ್ತ್ರಜ್ಞ ಲೂಯಿಸ್.ಇ.ಮಿರಾಮಾಂಟೆಸ್ ಮೊದಲ ಮೌಖಿಕ ಗರ್ಭನಿರೋಧಕವನ್ನು ಸಂಶ್ಲೇಷಿಸಿದರು.

1984: ಕೇಂದ್ರ ಗುಪ್ತೆಚ್ಚರ ಏಜೆನ್ಸಿ ಮಾಹಿತಿ ಕಾಯಿದೆ ಅಂಗೀಕರಿಸಲಾಯಿತು.

2003: ಚೀನಾ ತನ್ನ ಮೊದಲ ಮಾನವಹಿತ ಬಾಹ್ಯಾಕಾಶ ಯಾತ್ರೆಯಾದ ಶೆನ್ಝೌ-I ಅನ್ನು ಪ್ರಾರಂಭಿಸಿದರು.

ಪ್ರಮುಖ ಜನನ/ಮರಣ:

1918: ಭಾರತೀಯ ಸಂತರಾದ ಶಿರಡಿ ಸಾಯಿಬಾಬ ದೇಹತ್ಯಾಗ ಮಾಡಿದರು.

1927: ಭಾರತೀಯ ವ್ಯಾಪಾರಿ ಬಿ.ಎಸ್.ಅಬ್ದುರ್ ರೆಹೆಮಾನ್ ಜನಿಸಿದರು.

1931: ಭಾರತದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಜನಿಸಿದರು.

1934: ಖ್ಯಾತ ಫ್ಲೂಟ್ ವಾದಕರಾದ ಎನ್.ರಮಣಿ ಅವರು ಜನಿಸಿದರು.

1936: ದೆಹೆಲಿಯ ಮಾಜಿ ಮುಖ್ಯಮಂತ್ರಿ ಆಗಿದ್ದ ಮದನಲಾಲ್ ಖುರಾನಾ ಜನಿಸಿದರು.

1946: ಭಾರತೀಯ ನಟ, ನಿರ್ದೇಶಕ ವಿಕ್ಟರ್ ಬ್ಯಾನರ್ಜಿ ಜನಿಸಿದರು.

1949: ಎನ್.ಡಿ.ಟಿ.ವಿ ಚ್ಯಾನೆಲ್ ಸಂಸ್ಥಾಪಕ, ಪತ್ರಕರ್ತ ಪ್ರಣಯರಾಯ್ ಜನಿಸಿದರು.

1955: ಭಾರತದ ಹಾಕಿ ಆಟಗಾರ ಕುಲ್ಬೀರ್ ಬೌರಾ ಜನಿಸಿದರು.

1957: ಭಾರತೀಯ ಖ್ಯಾತ ನಿರ್ದೇಶಕ, ನಿರ್ಮಾಪಕ ಮೀರಾ ನಾಯರ್ ಜನಿಸಿದರು.

1961: ಭಾರತೀಯ ಕವಿ ಮತ್ತು ಲೇಖಕ ಸೂರ್ಯಕಾಂತ್ ತ್ರಿಪಾಟಿ ನಿರಾಲ ಅವರು ನಿಧನರಾದರು.

 

Categories
e-ದಿನ

ಅಕ್ಟೋಬರ್-14

 

ಪ್ರಮುಖ ಘಟನಾವಳಿಗಳು:

1773: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಚಹಾ ಹಡಗುಗಳ ಸರಕನ್ನು ಸುಡಲಾಯಿತು.

1773: ಪೋಲ್ಯಾಂಡಿನಲ್ಲಿ ಮೊದಲ ದಾಖಲಿತ ಶಿಕ್ಷಣ ಸಚಿವಾಲಯ ಸ್ಥಾಪನೆಯಾಯಿತು.

1834: ಕಾಳು ಬಿತ್ತನೆ ಯಂತ್ರಕ್ಕೆ ಹೆನ್ರಿ ಬ್ಲೇರ್ ಪೇಟೆಂಟ್ ಪಡೆದರು.

1879: ಥಾಮಸ್ ಆಲ್ವಾ ಎಡಿಸನ್ ಇನ್ಕಾಂಡೀಸೆಂಟ್ ಲೈಟ್ ಬಲ್ಬುಗಳಿಗೆ ಪೇಟೆಂಟ್ ಪಡೆದರು.

1882: ಪಂಜಾಬ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1884: ಜಾರ್ಜ್ ಈಸ್ಟ್ಮ್ಯಾನ್ ಪೇಪರ್-ಸಟ್ರಿಪ್ ಛಾಯಾಗ್ರಹಣದ ಚಲನಚಿತ್ರಕ್ಕೆ ಪೇಟೆಂಟ್ ಪಡೆದರು.

1922: ಮೊದಲ ಸ್ವಯಂಚಾಲಿತ ಟೆಲಿಫೋನ್ ಎಕ್ಸ್ಚೇಂಜ್ ನ್ಯೂಯಾರ್ಕಿನಲ್ಲಿ ಸ್ಥಾಪಿಸಲಾಯಿತು.

1956: ಬಿ.ಆರ್.ಅಂಬೇಡ್ಕರ್ 3,65,000 ಬೆಂಬಲಿಗರೊಂದಿಗೆ ಬೌಧ್ಧ ಧರ್ಮಕ್ಕೆ ಮತಾಂತರ ಮಾಡಿಕೊಂಡರು.

1991: ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ವಾಯುಮಂಡಲದ ಪ್ರಾಧಿಕಾರದಿಂದ ವಿಜ್ಞಾನಿಗಳು ಭೂಮಿಯ ರಕ್ಷಿತ ಓಜೋನ್ ಪದರವು ಶೇ 4% ಹಾಳಾಗಿದೆ ಎಂದು ಘೋಷಿಸಿದರು.

1997: ಅರುಂಧತಿ ರಾಯ್ ಅವರ ಪುಸ್ತಕ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಗೆ ಬುಕ್ಕರ್ ಪ್ರಶಸ್ತಿ ನೀಡಲಾಯಿತು.

1999: ಪರಮಾಣು ಪರೀಕ್ಷೆ ನಿಷೇಧ ಒಪ್ಪಂದವನ್ನು ಅಮೇರಿಕಾದ ಸೆನೇಟಿನಲ್ಲಿ ನಿರಾಕರಿಸಲಾಯಿತು.

ಪ್ರಮುಖ ಜನನ/ಮರಣ:

1542: ಭಾರತದ 3ನೇ ಮುಘಲ್ ಸಾಮ್ರಾಜ್ಯದ ರಾಜ ಅಬ್ದುಲ್-ಫತ್-ಜಲಾಲ್-ಉದ್ದಿನ್ ಜನಿಸಿದರು.

1643: ಮುಘಲ್ ಸಾಮ್ರಾಜ್ಯದ ರಾಜ ಬಹಾದುರ್ ಶಾಹ್-I ಜನಿಸಿದರು.

1931: ಸಿತಾರ್ ವಾದಕ ನಿಖಿಲ್ ಬ್ಯಾನರ್ಜಿ ಜನಿಸಿದರು.

1961: ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಕಿರುತೆರೆ ನಟ ಪರ್ಮೀತ್ ಸೇಠಿ ಜನಿಸಿದರು.

1969: ಲೇಖಕ, ನಿರ್ದೇಶಕ, ನಿರ್ಮಾಪಕ, ನಟ, ಚಲನಚಿತ್ರ ವಿತರಕ, ಛಾಯಾಗ್ರಾಹಕ ಅರ್ದೇಶಿರ್ ಇರಾನಿ ನಿಧನರಾದರು.

1978: ಭಾರತದ ಕಾರ್ನಾಟಿಕ್ ಶಾಸ್ತ್ರೀಯ ಕೊಳಲು ವಾದಕ ಶಶಾಂಕ್ ಸುಬ್ರಮಣ್ಯಂ ಜನಿಸಿದರು.

1981: ಭಾರತೀಯ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಜನಿಸಿದರು.

1998: ಹಿಂದಿ ಭಾಷೆಯಲ್ಲಿ ಪತ್ತೆದಾರಿ ಕಾದಂಬರಿ ಬರಹಗಾರ ಓಂ ಪ್ರಕಾಶ್ ಶರ್ಮ ನಿಧನರಾದರು.

2011: ತೆಲುಗು ಚಿತ್ರರಂಗದ ಗೀತ ರಚನೆಕಾರ ಜಲಧಿ ರಾಜಾರಾವ್ ನಿಧನರಾದರು.

 

Categories
e-ದಿನ

ಅಕ್ಟೋಬರ್-13

 

ಪ್ರಮುಖ ಘಟನಾವಳಿಗಳು:

1713: ಚಾರ್ಲ್ಸ್ ಮೇಸನಿ “ವರ್ಲ್ ಪೂಲ್ ಗ್ಯಾಲಾಕ್ಸಿ” ಕಂಡುಹಿಡಿದರು.

1792: ವಾಷಿಂಗ್ಟನ್ನಿನ ಎಕ್ಸಿಕ್ಯುಟಿವ್ ಮ್ಯಾನ್ಷನ್ (ವೈಟ್ ಹೌಸ್) ಅಡಿಪಾಯ ಹಾಕಲಾಯಿತು.

1860: ಮೊದಲ ವೈಮಾನಿಕ ಫೋಟೋ ಅಮೇರಿಕಾದಲ್ಲಿ ಬಲೂನಿನ ಮೇಲಿಂದ ಸೆರೆಹಿಡಿಯಲಾಯಿತು.

1884: ಗ್ರೀನ್ ವಿಚ್ ಮೀನ್ ಟೈಮ್ ವಿಶ್ವದ ಗುಣಮಟ್ಟದ ಸಮಯ ಎಂದು ನಿರ್ಧರಿಸಲಾಯಿತು.

1896: ಮೊದಲ ಬಾರಿಗೆ ಸಾರ್ವಜನಿಕರಿಗೆ ಚಲನಚಿತ್ರ ಪ್ರದರ್ಶನ ನ್ಯೂಜಿಲ್ಯಾಂಡಿನಲ್ಲಿ ಮಾಡಲಾಯಿತು.

1914: ಗ್ಯಾರೆಟ್ ಮಾರ್ಗನ್ ಅನಿಲ ಮುಖವಾಡವನ್ನು ಕಂಡುಹಿಡಿದರು ಮತ್ತು ಅದಕ್ಕೆ ಪೇಟೆಂಟ್ ಪಡೆದರು.

1953: ಬರ್ಗ್ಲರ್ ಅಲಾರಾಂ-ರೇಡಿಯೋ ಅಲೆಗಳಿಗೆ ಸ್ಯಾಮ್ಯುಯೆಲ್ ಬಾಗ್ನೋ ಪೇಟೆಂಟ್ ಪಡೆದರು.

1978: ಬೊಲಿವಿಯಾದ ಬೋಯಿಂಗ್ 707 ವಿಮಾನ ಅಪಘಾತದಿಂದ 100 ಜನ ಮೃತಪಟ್ಟರು.

1983: ಅಮೇರಿಟೆಕ್ ಮೊಬೈಲ್ ಕಮ್ಯುನಿಕೇಷನ್ಸ್ ಅಮೇರಿಕಾದಲ್ಲೆ ಮೊದಲ ಬಾರಿ ಸಾರ್ವಜನಿಕರ ಬಳಕೆಗಾಗಿ ಮೊಬೈಲ್ ಫೋನ್ ಸೇವೆ ಆರಂಭವಾಯಿತು.

2013: ನವರಾತ್ರಿ ಉತ್ಸವದಲ್ಲಿ ಮಧ್ಯಪ್ರದೇಶದ ರತಂಗರ್ ಮಾತಾ ದೇವಸ್ಥಾನದಲ್ಲಿ ಜರುಗಿದ ಕಾಲ್ತುಳಿತದಿಂದ 115 ಮಂದಿ ಸಾವನ್ನಪ್ಪಿ 110ಕ್ಕು ಹೆಚ್ಚು ಮಂದಿ ಗಾಯಗೊಂಡರು.

ಪ್ರಮುಖ ಜನನ/ಮರಣ:

1900: ಉರ್ದು ಕವಿ, ಗೀತ ರಚನೆಕಾರ ಅಮೀರ್ ಮೀನೈ ನಿಧನರಾದರು.

1911: ಸ್ವಾಮಿ ವಿವೇಕಾನಂದ ಅವರ ಅನುಯಾಯಿ, ಬರಹಗಾರ್ತಿ, ಸಮಾಜ ಕಾರ್ಯಕರ್ತೆ ಸಿಸ್ಟರ್ ನಿವೇದಿತಾ ನಿಧನರಾದರು.

1911: ಖ್ಯಾತ ಬಂಗಾಲಿ ನಟ ಅಶೋಕ್ ಕುಮಾರ್ ಜನಿಸಿದರು.

1924: ಭಾರತೀಯ ಕಾರ್ಯಕರ್ತ ಮತ್ತು ರಾಜಕಾರಣಿ ಮೋತುರು ಉದಯಂ ಜನಿಸಿದರು.

1936: ವೀಣೆ ವಾದಕ ಮತ್ತು ಸಂಗೀತ ಸಂಯೋಜಕ ಚಿಟ್ಟಿ ಬಾಬು ಜನಿಸಿದರು.

1964: ಕಾದಂಬರಿಕಾರ, ಪತ್ರಕರ್ತ ಮತ್ತು ಚಿತ್ರ ನಿರ್ದೇಶಕ ಪ್ರೇಮಾಂಕುರ್ ಅಥೋರ್ತಿ ನಿಧನರಾದರು.

1979: ಭಾರತೀಯ ಫುಟ್ಬಾಲ್ ಆಟಗಾರ ದೀಪಕ್ ಕುಮಾರ್ ಮಂದಾಲ್ ಜನಿಸಿದರು.

1987: ಖ್ಯಾತ ಹಿನ್ನಲೆ ಗಾಯಕ, ಗೀತ ರಚನೆಕಾರ, ನಿರ್ಮಾಪಕ, ನಟ, ನಿರ್ದೇಶಕ ಕಿಶೋರ್ ಕುಮಾರ್ ನಿಧನರಾದರು.

2004: ಖ್ಯಾತ ಹಿರಿಯ ನಟಿ ನಿರೂಪ ರಾಯ್ ನಿಧನರಾದರು.

2007: ಬ್ರಿಟನ್ನಿನಲ್ಲಿ ಭಾರತಕ್ಕೆ ಅತಿ ಧೀರ್ಘಕಾಲದಿಂದ ಸೇವೆ ಸಲ್ಲಿಸಿದ ಹೈಕಮಿಷನರ್ ಮತ್ತು ಪದ್ಮಭೂಷಣ ಪುರಸ್ಕೃತ ಎಲ್.ಎಂ.ಸಿಂಗ್ವಿ ನಿಧನರಾದರು.

 

Categories
e-ದಿನ

ಅಕ್ಟೋಬರ್-12

 

ಪ್ರಮುಖ ಘಟನಾವಳಿಗಳು:

1609: ಮಕ್ಕಳ ಹಾಡು (ರೈಮ್ಸ್) “ದಿ ಥ್ರೀ ಬ್ಲೈಂಡ್ ಮೈಸ್” ಲಂಡನ್ನಿನಲ್ಲಿ ಪ್ರಕಟವಾಯಿತು.

1773: ಅಮೇರಿಕಾದ ಮೊದಲ ಮಾನಸಿಕ ರೋಗಿಗಳಿಗೆ ಆಶ್ರಯವಾದ “ಪರ್ಸನ್ಸ್ ಆಫ್ ಇನ್ಸೇನ್ ಆಂಡ್ ಡಿಸ್ ಆರ್ಡರ್ಡ್ ಮೈಂಡ್ಸ್” ವರ್ಜಿನಿಯಾದಲ್ಲಿ ತೆರೆಯಲಾಯಿತು.

1792: ಮೊದಲ ಬಾರಿಗೆ “ಕೊಲಂಬಸ್” ದಿನಾಚರಣೆಯನ್ನು ಅಮೇರಿಕಾದ ನ್ಯೂಯಾರ್ಕಿನಲ್ಲಿ ಆಚರಿಸಲಾಯಿತು.

1823: ಸ್ಕಾಟ್ಲ್ಯಾಂಡಿನ ಚಾರ್ಲ್ಸ್ ಮ್ಯಾಕಿಂತೋಷ್ ಮೊದಲ ಮಳೆಯಂಗಿ(ರೈನ್ ಕೋಟ್)ಗಳ ಮಾರಾಟ ಮಾಡಿದರು.

1850: ಮೊದಲ ಮಹಿಳೆಯರಿಗೆ ವೈದ್ಯ ಶಾಲೆ ತೆರೆಯಲಾಯಿತು.

1871: ಕ್ರಿಮಿನಲ್ ಟ್ರೈಬ್ಸ್ ಕಾಯಿದೆ ಜಾರಿಗೆ ಬಂದಿತು.

1895: ಮೊದಲ ಹವ್ಯಾಸಿ ಗಾಲ್ಫ್ ಪಂದ್ಯಾವಳಿ ನಡೆಸಲಾಯಿತು.

1920: ಹಾಲ್ಯಾಂಡಿನ ಸುರಂಗದ ನಿರ್ಮಾಣ ಆರಂಭವಾಯಿತು.

1928: ಬಾಸ್ಟನ್ ಮಕ್ಕಳ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕಬ್ಬಿಣದ ಶ್ವಾಸಕೋಶದ ಬಳಕೆ ಮಾಡಲಾಯಿತು.

1948: ಬಿಲಾಸ್ಪುರ್ ಎಂದು ಕರೆಯಲ್ಪಡುವ ಕಹ್ಲೂರ್ ರಾಜ್ಯವನ್ನು ಭಾರತಕ್ಕೆ ಸೇರ್ಪಡೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1891: ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್ ಜನಿಸಿದರು.

1911: ಭಾರತೀಯ ಕ್ರಿಕೆಟ್ ಆಟಗಾರ ವಿಜಯ್ ಮಾಧವ್ ಜೀ ಜನಿಸಿದರು.

1918: ತೆಲುಗು ಭಾಷೆಯ ಚಿತ್ರ ನಿರ್ದೇಶಕ ಪಿ.ಎಸ್.ರಾಮಕೃಷ್ಣ ರಾವ್ ಜನಿಸಿದರು.

1935: ಭಾರತದ ರಕ್ಷಣಾ ಸಚಿವ ಶಿವ್ರಾಜ್ ಪಾಟಿಲ್ ಜನಿಸಿದರು.

1938: ಉರ್ದು ಕವಿ ನಿದಾ ಫಾಜಿಲ್ ಜನಿಸಿದರು.

1946: ರಣಜಿ ಕ್ರಿಕೆಟ್ ಆಟಗಾರ ಅಶೋಕ್ ವಿನೂ ಮಂಕಡ್ ಅವರು ಜನಿಸಿದರು.

1963: ಸಂಗೀತಕಾರ, ಗಿಟಾರ್ ವಾದಕ, ಸಂಗೀತ ಸಂಯೋಜಕ, ಎಹ್ಸಾನ್ ನೂರಾನಿ ಜನಿಸಿದರು.

1967: ಭಾರತದ ಸ್ವಾತಂತ್ರ ಹೋರಾಟಗಾರ ರಾಮ್ ಮನೋಹರ್ ಲೋಹಿಯಾ ನಿಧನರಾದರು.

2012: ಕೇರಳಾದ ರಾಜ್ಯಪಾಲ ಸುಖ್ದೇವ್ ಸಿಂಗ್ ಕಾಂಗ್ ನಿಧನರಾದರು.

 

Categories
e-ದಿನ

ಅಕ್ಟೋಬರ್-11

 

ಪ್ರಮುಖ ಘಟನಾವಳಿಗಳು:

1737: ಭಾರತದ ಕಲ್ಕತ್ತಾದಲ್ಲಿ ಭೂಕಂಪದಿಂದ ಸುಮಾರು 3 ಲಕ್ಷಜನ ಮೃತಪಟ್ಟು ಕಲ್ಕತ್ತಾ ನಗರದ ಬಹುಭಾಗ ನಾಶವಾಯಿತು.

1811: ಜೂಲಿಯಾನ, ಮೊದಲ ಹಬೆ ಚಾಲಿತ ಫೆರ್ರಿ ದೋಣಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು.

1852: ಅತ್ಯಂತ ಹಳೆಯ ವಿಶ್ವವಿದ್ಯಾಲಯವಾದ ಸಿಡ್ನಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1864: ಮೇರಿ ಲ್ಯಾಂಡಿನಲ್ಲಿ ಗುಲಾಮಗಿರಿಯನ್ನು ನಿಷೇಧಿಸಲಾಯಿತು.

1864: ಕಂಪಿನಾ ಗ್ರಾಂಡನ್ನು ಬ್ರಜಿಲ್ಲಿನ ಒಂದು ನಗರವೆಂದು ಸ್ಥಾಪಿಸಲಾಯಿತು.

1869: ಮತಗಳ ಎಣಿಕೆ ಮಾಡಲು ವಿದ್ಯುತ್ ಯಂತ್ರಕ್ಕೆ ಥಾಮಸ್ ಎಡಿಸನ್ ಪೇಟೆಂಟ್ ಪಡೆದರು.

1881: ಕ್ಯಾಮೆರಾಗಳಿಗೆ ಫಿಲ್ಮ್ ರೋಲುಗಳಿಗೆ ಡೇವಿಡ್ ಹೆಂಡರ್ಸನ್ ಹೌಟ್ಸನ್ ಪೇಟೆಂಟ್ ಪಡೆದರು.

1918: ಪ್ರಮುಖ ಟ್ಸುನಾಮಿ ಕ್ಯಾರಿಬಿಯನನ್ನು ಅಲುಗಾಡಿಸಿತು.

1922: ಎಫ್.ಬಿ.ಐ.ಯ ಮೊದಲ ಮಹಿಳಾ ತನಿಖಾಧಿಕಾರಿಯನ್ನು ನೇಮಿಸಲಾಯಿತು.

1987: ಶ್ರೀಲಂಕಾದಲ್ಲಿ ಭಾರತೀಯ ಪೀಸ್ ಕೀಪಿಂಗ್ ಫೋರ್ಸ್ ಆಪರೇಷನ್ “ಪವನ್” ಕಾರ್ಯಾಚರಣೆಆರಂಭಿಸಿದರು.

1990: ನ್ಯೂಯಾರ್ಕಿನಲ್ಲಿ ನಗರ ಪುರಾತತ್ವಶಾಸ್ತ್ರ ಕೇಂದ್ರ ತೆರೆಯಲಾಯಿತು.

ಪ್ರಮುಖ ಜನನ/ಮರಣ:

1902: ಭಾರತೀಯ ಕಾರ್ಯಕರ್ತ ರಾಜಕಾರಣಿ ಜಯಪ್ರಕಾಶ್ ನಾರಾಯಣ್ ಜನಿಸಿದರು.

1916: ಭಾರತೀಯ ಶಿಕ್ಷಣ ತಜ್ಞ ಮತ್ತು ಕಾರ್ಯಕರ್ತ ನಂಜಿ ದೇಶ್ ಮುಖ್ ಜನಿಸಿದರು.

1942: ಭಾರತವು ಹಿಂದೆಂದೂ ಕಾಣದ ಶ್ರೇಷ್ಠ ಹಿಂದಿ ಚಿತ್ರ ನಟ ಅಮಿತಾಬ್ ಬಚ್ಚನ್ ಜನಿಸಿದರು.

1945: ಬಹುಭಾಷಾ ನಟಿ ಕನ್ನಡದ ಚಲನಚಿತ್ರ ತಾರೆ ಜಯಂತಿ ಜನಿಸಿದರು.

1946: “ಪರಂ” ಸರಣಿಯ ಸೂಪರ್ ಕಂಪ್ಯೂಟರ್ ಗಳ ವಿಜ್ಞಾನಿ ಡಾ.ವಿಜಯ್ ಪಿ. ಭಕ್ತಾರ್ ಜನಿಸಿದರು.

1968: ಹಿಂದಿ ನಟ ಚಂದ್ರಚೂಡ ಸಿಂಗ್ ಜನಿಸಿದರು.

1984: ಟೆಸ್ಟ್ ಕ್ರಿಕೆಟ್ ಆಟಗಾರ ಖಂಡು ರಂಗ್ನೇಕರ್ ನಿಧನರಾದರು.

2002: ಖ್ಯಾತ ಹಿರಿಯ ಹಿಂದಿ ಮತ್ತು ಗುಜರಾತಿ ನಟಿ ದೀನಾ ಪಾಟಕ್ ನಿಧನರಾದರು.

 

Categories
e-ದಿನ

ಅಕ್ಟೋಬರ್-10

 

ಪ್ರಮುಖ ಘಟನಾವಳಿಗಳು:

1845: ಅಮೇರಿಕಾದ ನೇವಲ್ ಅಕಾಡೆಮಿಯನ್ನು ಅನ್ನಾಪೋಲಿಸಿನಲ್ಲಿ ಸ್ಥಾಪಿಸಲಾಯಿತು.

1857: ಅಮೇರಿಕನ್ ಚೆಸ್ ಅಸೋಸಿಯೇಷನ್ ಸ್ಥಾಪನೆಯಾಯಿತು.

1865: ಬಿಲಿಯರ್ಡ್ ಆಟದ ಚಂಡಿಗೆ ಜಾನ್ ಹ್ಯಾಟ್ಸ್ ಪೇಟೆಂಟ್ ಪಡೆದರು.

1899: ಐಸಾಕ್ ಆರ್ ಜಾನ್ಸನ್ ಬೈಸೈಕಲ್ ಫ್ರೇಂ ಗೆ ಪೇಟೆಂಟ್ ಪಡೆದರು.

1903: ಬ್ರಿಟನ್ನಿನಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಡಲು ಎಮ್ಮಿಲೀನ್ ಪಂಕರ್ಸ್ಟ್ ಮಹಿಳಾ ಸಮಾಜ ಮತ್ತು ರಾಜಕೀಯ ಒಕ್ಕೂಟವನ್ನು ರೂಪಿಸಿದರು.

1911: ಪನಾಮಾ ಕಾಲುವೆಯನ್ನು ತೆರೆಯಲಾಯಿತು.

1964: ಜಪಾನಿನಲ್ಲಿ ಬೇಸಿಗೆ ಒಲಂಪಿಕ್ಸ್ ಆರಂಭವಾಯಿತು.

1967: ಅಂತರರಾಷ್ಟ್ರೀಯ ಬಾಹ್ಯಾಕಾಶ ಕಾನೂನಿನ ಮೂಲಭೂತ ಕಾನೂನಿನ ಚೌಕಟ್ಟಾದ ‘ಔಟರ್ ಸ್ಪೇಸ್ ಟ್ರೀಟಿ’ಯನ್ನು ಜಾರಿಗೊಳಿಸಲಾಯಿತು.

1992: ಹೂಗ್ಲಿ ನದಿಯ ಅಡ್ಡಲಾಗಿ ನಿರ್ಮಿಸಿದ ಎರಡನೇ ಸೇತುವೆಯಾದ ವಿದ್ಯಾಸಾಗರ ಸೇತುವೆಯನ್ನು ಉದ್ಘಾಟಿಸಲಾಯಿತು.

1999: ಮಿಲೇನಿಯಂ ಫೆರ್ರಿಸ್ ವೀಲ್ ಲಂಡನ್ನಿನ ಐ ಎಂದೇ ಖ್ಯಾತಿ ಪಡೆದುದನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದರು.

ಪ್ರಮುಖ ಜನನ/ಮರಣ:

1902: ಸಾಹಿತಿ, ಪತ್ರಕರ್ತ, ಚಿಂತಕರಾ ಜ್ಞಾನಪೀಠ ಪುರಸ್ಕೃತ ಕೆ.ಶಿವರಾಮ ಕಾರಂತ ಜನಿಸಿದರು.

1906: ಖ್ಯಾತ ಲೇಖಕ ಆರ್.ಕೆ.ನಾರಾಯಣ್ ಜನಿಸಿದರು.

1912: ಭಾರತೀಯ ಕವಿ, ವಿಮರ್ಶಕ ರಾಮ್ ವಿಲಾಸ್ ಶರ್ಮ ಜನಿಸಿದರು.

1923: ಸ್ಪಟಿಕಶಾಸ್ತ್ರ ಕ್ಷೇತ್ರದ ವಿಜ್ಞಾನಿ ಎಸ್.ರಾಮಸೇಸನ್ ಜನಿಸಿದರು.

1954: ಖ್ಯಾತ ಹಿಂದಿ ಚಿತ್ರರಂಗದ ನಟಿ ರೇಖ ಜನಿಸಿದರು.

1960: ತಮಿಳು ಭಾಷೆಯ ಹಾಸ್ಯ ನಟ ವಡಿವೇಲು ಜನಿಸಿದರು.

1964: ಖ್ಯಾತ ನಟ ಗುರುದತ್ ನಿಧನರಾದರು.

1973: ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಜನಿಸಿದರು.

1997: ಭಾರತೀಯ ಮೂಲದ ಅಮೇರಿಕನ್ ರಸಾಯನ ಶಾಸ್ತ್ರಜ್ಞ ಮತ್ತು ಡೆವರ್-ಚಾಟ್-ಡುನ್ಕಾನ್ಸನ್ ಮಾದರಿಯನ್ನು ಪ್ರತಿಪಾದಿಸಿದ ಮೈಕಲ್ ಎಸ್. ಡೆವಾರ್ ನಿಧನರಾದರು.

2011: ಖ್ಯಾತ ಹಿನ್ನೆಲೆ ಗಾಯಕ ಜಗಜೀತ್ ಸಿಂಗ್ ನಿಧನರಾದರು.

Categories
e-ದಿನ

ಅಕ್ಟೋಬರ್-9

 

ಪ್ರಮುಖ ಘಟನಾವಳಿಗಳು:

1446: ಹನುಗಲ್ ವರ್ಣಮಾಲೆಯನ್ನು ಕೊರಿಯಾ ಭಾಷೆಯಲ್ಲಿ ಪ್ರಕಟಿಸಲಾಯಿತು.

1855: ಐಸಾಕ್ ಸಿಂಗರ್, ಹೊಲಿಗೆ ಯಂತ್ರದ ಮೋಟಾರಿಗೆ ಪೇಟೆಂಟ್ ಪಡೆದರು.

1865: ಪೆನ್ಸಿಲ್ವೇನಿಯಾದಲ್ಲಿ ತೈಲ ಹೊತ್ತೊಯಲು ಮೊದಲ ಬಾರಿಗೆ ಭೂಮಿಯ ಒಳಗೆ ಪೈಪ್ ಲೈನನ್ನು ಅಳವಡಿಸಲಾಯಿತು.

1874: ಸ್ವಿಜರ್ಲ್ಯಾಂಡಿನ ಬರ್ನ್ ನಲ್ಲಿ ವಿಶ್ವ ಅಂಚೆ ಒಕ್ಕೂಟ ರೂಪಿಸಲಾಯಿತು.

1926: ಎನ್.ಬಿ.ಸಿ (ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್) ರೂಪುಗೊಂಡಿತು.

1958: ಇಸ್ರೇಲಿಯ ನೌಕಾಪಡೆಯು ಮೊದಲ ಜಲಾಂತರ್ಗಾಮಿಯನ್ನು ಉದ್ಘಾಟಿಸಿತು.

1980: ಕಂಪ್ಯೂಟರಿನಿಂದ ಮನೆ ಬ್ಯಾಂಕಿಂಗಿನ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಗ್ರಾಹಕ ಬಳಸಿದರು.

1981: ಫ್ರಾನ್ಸಿನಲ್ಲಿ ಮರಣ ದಂಡನೆಯನ್ನು ನಿಷೇಧಿಸಲಾಯಿತು.

1991: ಜಪಾನಿನ ಹೊರಗಡೆ ನಡೆಯುವ ಮೊದಲ ಸುಮೋ ಕುಸ್ತಿ ಪಂದ್ಯಾವಳಿ ಲಂಡನ್ನಿನಲ್ಲಿ ಆರಂಭವಾಯಿತು.

2006: ಗೂಗಲ್ ಯೂಟ್ಯೂಬಿನ ಸ್ಟಾಕನ್ನು 1.65 ಶತಕೋಟಿಗೆ ಖರೀಧಿಸುವುದಾಗಿ ಘೋಷಿಸಿತು.

2009: ಜನರ ನಡುವಿನ ಅಂತರರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಸಹಕಾರವನ್ನು ಬಲಪಡಿಸುವ ಅಸಾಧಾರಣ ಪ್ರಯತ್ನಗಳಿಗೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ 2009 ನೋಬಲ್ ಶಾಂತಿ ಪ್ರಶಸ್ತಿ ಲಭಿಸಿತು.

ಪ್ರಮುಖ ಜನನ/ಮರಣ:

1897: ಸ್ವಾತಂತ್ರ ಹೋರಾಟಗಾರ, ಮದ್ರಾಸಿನ ಮುಖ್ಯಮಂತ್ರಿಯಾಗಿದ್ದ ಎಂ.ಭಕ್ತವತ್ಸಲಂ ಜನಿಸಿದರು.

1919: ಪಟಿಯಾಲಾದ ಮಹಾರಾಜಕುಮಾರ ಮತ್ತು ಕ್ರಿಕೆಟ್ ಆಟಗಾರ ಬಲಿಂದ್ರ ಸಿಂಗ್ ಜನಿಸಿದರು.

1945: ಖ್ಯಾತ ಸಿತಾರ್ ವಾದಕ ಅಮ್ಜದ್ ಅಲಿ ಖಾನ್ ಜನಿಸಿದರು.

1968: ಭಾರತ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಅನ್ಬುಮಣಿ ರಾಮದಾಸ್ ಜನಿಸಿದರು.

1969: ಕರ್ನಾಟಕ ಮಾಜಿ ಸಚಿವ ದಿನೇಶ್ ಗುಂಡು ರಾವ್ ಅವರು ಜನಿಸಿದರು.

1983: ಭಾರತೀಯ ನಟಿ, ಮಾಡೆಲ್ ಪೂನಂ ಕೌರ್ ಜನಿಸಿದರು.

1983: ತಮಿಳು ಭಾಷೆಯ ಚಿತ್ರರಂಗದ ನಿರ್ದೇಶಕ ಮತ್ತು ಚಿತ್ರಕಥೆಗಾರ ಎ.ಎಲ್.ವಿಜಯ್ ಜನಿಸಿದರು.

1993: ಟೆಸ್ಟ್ ಕ್ರಿಕೆಟಿನಲ್ಲಿ ಭಾರತವನ್ನು ಪ್ರತಿನಿಧಿಸಿದ ವೇಗದ ಬೌಲರ್ ಸಿ.ಆರ್.ರಂಗಾಚಾರಿ ನಿಧನರಾದರು.

2006: ಬಹುಜನ ಸಮಾಜವಾದಿ ಪಕ್ಷದ ಸಂಸ್ಥಾಪಕ ಕಾಂಶಿರಾಮ್ ಅವರು ನಿಧನರಾದರು.

2010: ತಮಿಳು ನಾಡಿನ ರಾಜ್ಯ ಸಭೆಯ ಸದಸ್ಯ ಎಸ್,ಎಸ್.ಚಂದ್ರನ್ ನಿಧನರಾದರು.

 

Categories
e-ದಿನ

ಅಕ್ಟೋಬರ್-8

 

ಪ್ರಮುಖ ಘಟನಾವಳಿಗಳು:

1604: ಸೂಪರ್ ನೋವಾ ಆದ “ಕೆಪ್ಲರ್ಸ್ ನೋವಾ” ಮೊದಲ ಬಾರಿಗೆ ಕಾಣಿಸಿತು.

1871: ಅಮೇರಿಕಾದ ಚಿಕಾಗೊ ನಗರದಲ್ಲಿ ತೀವ್ರ ಬೆಂಕಿ ಅನಾಹುತ ಸಂಭವಿಸಿತ್ತು.

1873: ಮಹಿಳೆಯರಿಂದ ನಿರ್ವಹಿಸಲ್ಪಡುವ ಮೊದಲ ಮಹಿಳಾ ಜೈಲು ತೆರೆಯಲಾಯಿತು.

1895: ದಿ ಬರ್ಲಿನರ್ ಗ್ರಾಮಫೋನ್ ಸಂಸ್ಥೆ ಫಿಲಾಡೆಲ್ಫಿಯಾದಲ್ಲಿ ಸ್ಥಾಪಿಸಲಾಯಿತು.

1932: ಭಾರತದ ವಾಯುಸೇನೆಯನ್ನು ಸ್ಥಾಪಿಸಲಾಯಿತು.

1945: ಮೈಕ್ರೋವೇವ್ ಓವನನ್ನು ಪೇಟೆಂಟ್ ಮಾಡಲಾಯಿತು.

1958: ಡಾ.ಆಕೆ ಸೆನ್ನಿಂಗ್ ಮೊದಲ ಪೇಸ್ ಮೇಕರ್ ಅನ್ನು ಅಳವಡಿಸಿದರು.

1965: ಬ್ರಿಟನ್ನಿನ ಅತ್ಯಂತ ಎತ್ತರದ ಕಟ್ಟಡಗಳಲೊಂದಾದ ಲಂಡನ್ನಿನ ಅಂಚೆ ಕಛೇರಿ ಟವರನ್ನು ಉದ್ಘಾಟಿಸಲಾಯಿತು.

1974: ಅಮೇರಿಕಾದ 20ನೇ ಅತೀ ದೊಡ್ಡ ಬ್ಯಾಂಕ್ ಆಗಿದ್ದ ಫ್ರಾಂಕ್ಲಿನ್ ನ್ಯಾಷನಲ್ ಬ್ಯಾಂಕ್ ಮೋಸ ಮತ್ತು ದೌರ್ಜನ್ಯದ ಕಾರಣ ದಿವಾಳಿಯಾಯಿತೆಂದು ಘೋಷಿಸಲಾಯಿತು.

1982: ಪೋಲೆಂಡಿನಲ್ಲಿ ಸೋಲಿಡಾರಿಟಿ ಸೇರಿದಂತೆ ಎಲ್ಲಾ ಕಾರ್ಮಿಕ ಸಂಘಟನೆಗಳನ್ನು ನಿಷೇಧಿಸಲಾಯಿತು.

2005: ಭಾರತದ ಕಶ್ಮೀರ ಮತ್ತು ಉತ್ತರ ಪಾಕಿಸ್ತಾನದ ಪ್ರದೇಶಗಳಲ್ಲಿ ಅತ್ಯಂತ ಶಕ್ತಿಯುತವಾದ ಭೂಕಂಪ ಸಂಭವಿಸಿತು.

ಪ್ರಮುಖ ಜನನ/ಮರಣ:

1924: ಭಾರತೀಯ ಕವಿ, ವಿದ್ವಾಂಸಿ ತಿರುನಲ್ಲೂರ್ ಕರುಣಾಕರನ್ ಜನಿಸಿದರು.

1926: ಭಾರತೀಯ-ಪಾಕಿಸ್ತಾನದ ನಟ, ಮತ್ತು ಪೋಲಿಸ್ ಅಧಿಕಾರಿ ರಾಜಕುಮಾರ್ ಜನಿಸಿದರು.

1935: ಭಾರತೀಯ ಖ್ಯಾತ ಓಟಗಾರ, ಕ್ರೀಡಾಪಟು ಮಿಲ್ಕಾ ಸಿಂಗ್ ಜನಿಸಿದರು.

1936: ಕವಿ, ಲೇಖಕ, ಚಿತ್ರಕಥೆಗಾರ ಪ್ರೇಮ್ ಚಂದ್ ನಿಧನರಾದರು.

1970: ಖ್ಯಾತ ಬಾಲಿವುಡ್ ನಿರ್ಮಾಪಕಿ ಗೌರಿ ಖಾನ್ ಜನಿಸಿದರು.

1979: ಭಾರತೀಯ ರಾಜಕಾರಣಿ ಜಯಪ್ರಕಾಶ್ ನಾರಾಯಣ್ ನಿಧನರಾದರು.

1983: ಭಾರತೀಯ ಕ್ರಿಕೆಟ್ ಆಟಗಾರ ಅಭಿಷೇಕ್ ನಾಯರ್ ಜನಿಸಿದರು.

1993: ಖ್ಯಾತ ಪೋಲೀಸ್ ಅಧಿಕಾರಿ ಸಿ.ವಿ.ಎಸ್.ರಾವ್ ನಿಧನರಾದರು.

2012: ಭಾರತೀಯ ಗಾಯಕಿ, ಪತ್ರಕರ್ತೆ ವರ್ಷ ಭೋಸಲೆ ನಿಧನರಾದರು.

2012: ಗುಜರಾತಿನ 20ನೇ ರಾಜ್ಯಪಾಲರಾಗಿದ್ದ ನವಾಲ್ ಕಿಶೋರ್ ಶರ್ಮ ನಿಧನರಾದರು.

 

Categories
e-ದಿನ

ಅಕ್ಟೋಬರ್-7

 

ಪ್ರಮುಖ ಘಟನಾವಳಿಗಳು:

1806: ರಾಲ್ಫ್ ವೆಡ್ಜ್ ವುಡ್ ಕಾರ್ಬನ್ ಪೇಪರಿಗೆ ಪೇಟೆಂಟ್ ಪಡೆದರು.

1816: ಎರಡು ಮಹಡಿ ಇರುವ ಸ್ಟೀಮ್ ಬೋಟ್ ವಾಷಿಂಗ್ಟನ್ನಿಗೆ ಆಗಮಿಸಿತು.

1856: ಪುಸ್ತಕ ಮತ್ತು ವೃತ್ತಪತ್ರಿಕೆಗಳನ್ನು ಮಡಿಸುವ ಯಂತ್ರಕ್ಕೆ ಸೈರಸ್ ಚೇಂಬರ್ಸ್ ಪೇಟೆಂಟ್ ಪಡೆದರು.

1912: ಹೆಲ್ಸಿಂಕಿ ಸ್ಟಾಕ್ ಎಕ್ಸ್ಚೇಂಜ್ ತನ್ನ ಮೊದಲ ವಹಿವಾಟನ್ನು ಕಂಡಿತು.

1919: ರಾಯಲ್ ಡಚ್ ವಿಮಾನ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1950: ಮದರ್ ತೆರೆಸಾ ಮಿಷಿನರಿಸ್ ಆಫ್ ಚ್ಯಾರಿಟಿ ಸ್ಥಾಪಿಸಿದರು.

1968: ಮೋಷನ್ ಪಿಚ್ಚರ್ಸ್ ಅಸೋಸಿಯೇಷನ್ ಆಫ್ ಅಮೇರಿಕಾ ಚಲನಚಿತ್ರಗಳಿಗೆ ರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಿದರು.

2000: ಜಪಾನಿನಲ್ಲಿ ಮಾನವ ಅಬೀಜ ಸಂತಾನೋತ್ಪತ್ತಿ ಅಪರಾಧ ಎಂದು ಘೋಷಿಸಲಾಯಿತು.

2001: ಭಯೋತ್ಪಾದನೆ ವಿರುದ್ಧ ಅಮೇರಿಕಾದ ಆಪರೇಷನ್ “ಅಡೋರಬಲ್ ಫ್ರೀಡಂ” ಪ್ರಾರಂಭಿಸಲಾಯಿತು.

2008: ಪ್ಯಾಲಸ್ಟೇನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಭಾರತಕ್ಕೆ ನಾಲ್ಕು ದಿನದ ಭೇಟಿಗೆಂದು ಆಗಮಿಸಿದರು.

ಪ್ರಮುಖ ಜನನ/ಮರಣ:

1708: ಭಾರತದ 10ನೇ ಸಿಖ್ ಗುರು ಆದ ಗುರು ಗೋವಿಂದ ಸಿಂಗ್ ಅವರು ನಿಧನರಾದರು.

1914: ಗಾಯಕಿ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತೆ ಬೇಗಂ ಅಕ್ತಾರ್ ಜನಿಸಿದರು.

1970: ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ಕಟ್ಟಿ ಜನಿಸಿದರು.

1975: ಭಾರತೀಯ ಚಲನಚಿತ್ರ ಛಾಯಾಗ್ರಾಹಕ, ನಿರ್ದೇಶಕ ಮತ್ತು ಚಿತ್ರಕಥೆಗಾರ ಅಮಲ್ ನೀರದ್ ಜನಿಸಿದರು.

1978: ಭಾರತದ ಕ್ರಿಕೆಟ್ ಆಟಗಾರ ಜಹೀರ್ ಖಾನ್ ಜನಿಸಿದರು.

1979: 1999ರ ವಿಶ್ವಸುಂದರಿ ಸ್ಪರ್ದೆಯ ವಿಜೇತೆ ಯುಕ್ತಾ ಮುಕೀ ಜನಿಸಿದರು.

1981: ಗಾಯಕ ಅಭಿಜೀತ್ ಸಾವಂತ್ ಜನಿಸಿದರು.

1984: ಮಲಯಾಳಂ ನಟ ನರಾಯೆನ್ ಜನಿಸಿದರು.

1992: ರಾಜಕಾರಣಿ ಮತ್ತು ಉದ್ಯಮಿ ಬಾಬು ಕರಂ ಸಿಂಗ್ ಬಾಲ್ ನಿಧನರಾದರು.

 

Categories
e-ದಿನ

ಅಕ್ಟೋಬರ್-6

 

ಪ್ರಮುಖ ಘಟನಾವಳಿಗಳು:

1783: ಸ್ವಾಮ್ಯಸೂಚಕ ಗಡಿಯಾರಕ್ಕಾಗಿ ಬೆಂಜಾಮಿನ್ ಹ್ಯಾಂಕ್ಸ್ ಪೇಟೆಂಟ್ ಪಡೆದರು.

1857: ಅಮೇರಿಕನ್ ಚೆಸ್ ಅಸೋಸಿಯೇಷನ್ ರೂಪಿತವಾಯಿತು.

1863: ಡಾ.ಚಾರ್ಲ್ಸ್ ಹೆಚ್ ಶೆಪರ್ಡ್ ಅವರು ಬ್ರೂಕ್ಲಿನ್ನಿನಲ್ಲಿ ಮೊದಲ ಸಾರ್ವಜನಿಕ ಸ್ನಾನಗ್ರಹವನ್ನು ತೆರೆದರು.

1876: ಅಮೇರಿಕನ್ ಲೈಬ್ರರಿ ಅಸೋಸಿಯೇಷನ್ ಫಿಲಾಡೆಲ್ಫಿಯಾದಲ್ಲಿ ಆಯೋಜಿಸಲಾಯಿತು.

1889: ಥಾಮಸ್ ಎಡಿಸನ್ ತನ್ನ ಮೊದಲ ಚಲನಚಿತ್ರವನ್ನು ಪ್ರದರ್ಶಿಸಿದರು.

1893: ನ್ಯಾಬಿಸ್ಕೋ ಫುಡ್ಸ್ ಗೋಧಿಯ ಸಾರ (ಕೆನೆ)ಯನ್ನು ಕಂಡುಹಿಡಿದರು.

1903: ಮೊದಲ ಬಾರಿಗೆ ಆಸ್ಟ್ರೇಲಿಯಾದ ಉಚ್ಚನ್ಯಾಯಾಲವು ಆರಂಭವಾಯಿತು.

1921: ಅಂತರರಾಷ್ಟ್ರೀಯ ಪೆನ್ನನ್ನು ಲಂಡನ್ನಿನಲ್ಲಿ ಸ್ಥಾಪಿಸಲಾಯಿತು.

1956: ಡಾ.ಆಲ್ಬರ್ಟ್ ಸಾಬಿನ್ ಬಾಯಿಯ ಮೂಲಕ ಹಾಕುವ ಪೋಲಿಯೋ ಲಸಿಕೆಯನ್ನು ಕಂಡುಹಿಡಿದರು.

ಪ್ರಮುಖ ಜನನ/ಮರಣ:

1661: 7ನೇ ಸಿಖ್ ಗುರು ಆಗಿದ್ದ ಗುರು ಹರ್ ರಾಯಿ ಅವರು ನಿಧನರಾದರು.

1893: ಭಾರತದ ಖಗೋಳ ವಿಜ್ಞಾನಿ ಮೇಘನಾದ ಸಾಹಾ ಅವರು ಜನಿಸಿದರು.

1930: ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಭಜನಲಾಲ್ ಅವರು ಜನಿಸಿದರು.

1946: ಹಿಂದಿ ಚಲನಚಿತ್ರ ಖ್ಯಾತ ನಟ, ನಿರ್ಮಾಪಕ, ರಾಜಕಾರಣಿ ವಿನೋದ್ ಖನ್ನಾ ಜನಿಸಿದರು.

1962: ಸ್ವಾತಂತ್ರ ಹೋರಾಟಗಾರ, ಜವಹರಲಾಲ್ ನೆಹರು ಸರ್ಕಾರದ ಸಾರಿಗೆ ಸಚಿವ ಮತ್ತು ಮದ್ರಾಸಿನ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಪಿ.ಸುಬ್ಬರಾಯನ್ ನಿಧನರಾದರು.

2007: ಮಹಾರಾಷ್ಟ್ರದ 8ನೇ ಮುಖ್ಯಮಂತ್ರಿ ಆಗಿದ್ದ ಬಾಬಾಸಾಹೆಬ್ ಭೋಸಲೇ ನಿಧನರಾದರು.

2007: ವಿದ್ವಾಂಸೆ, ನ್ಯಾಯವಾದಿ ಮತ್ತು ರಾಜಕಾರಣಿ ಲಕ್ಷ್ಮಿ ಮಾಲ್ ಸಿಂಗ್ವಿ ನಿಧನರಾದರು.

2012: ಪಶ್ಚಿಮ ಬಂಗಾಳದ 19ನೇ ಗವರ್ನರ್ ಆಗಿದ್ದ ಬಿ.ಸತ್ಯನಾರಾಯಣ ರೆಡ್ಡಿ ನಿಧನರಾದರು.

 

Categories
e-ದಿನ

ಅಕ್ಟೋಬರ್-5

 

ಪ್ರಮುಖ ಘಟನಾವಳಿಗಳು:

1550: ಚಿಲಿಯ ಕಂಸೆಪ್ಷನ್ ನಗರವನ್ನು ಸ್ಥಾಪಿಸಲಾಯಿತು.

1582: ಇಟಲಿ ಮತ್ತು ಇತರೆ ಕ್ಯಾಥೋಲಿಕ್ ರಾಷ್ಟ್ರಗಳಲ್ಲಿ ಗ್ರೆಗೋರಿಯನ್ ಕ್ಯಾಲೆಂಡರನ್ನು ಪರಿಚಯಿಸಲಾಯಿತು.

1665: ಕೈಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1864: ಕಲ್ಕತ್ತಾದಲ್ಲಿ ಚಂಡಮಾರುತದ ಪ್ರಭಾವದಿಂದ ಸುಮಾರು 70,000 ಜನ ಮೃತಪಟ್ಟರು.

1875: ಸ್ಯಾನ್ ಫ್ರಾನ್ಸಿಸ್ಕೊದ ಮಾರ್ಕೆಟ್ ಸ್ಟ್ರೀಟಿನಲ್ಲಿ ಪ್ಯಾಲೆಸ್ ಹೋಟೆಲ್ ತೆರೆಯಲಾಯಿತು.

1969: ಮಾಂಟಿ ಪೈಥಾನ್ಸ್ ಫ್ಲೈಯಿಂಗ್ ಸರ್ಕಸ್ ಬಿಬಿಸಿ ಟೆಲಿವಿಷನ್ನಿನಲ್ಲಿ ತನ್ನ ಮೊದಲ ಪ್ರವೇಶ ಮಾಡಿತು.

1989: ದಲೈಲಾಮ ಅವರಿಗೆ ವಿಶ್ವಶಾಂತಿಯ ನೋಬಲ್ ಪ್ರಶಸ್ತಿ ನೀಡಲಾಯಿತು.

1991: ಲೈನೆಕ್ಸ್ ಕರ್ನಲ್ ಮೊದಲ ಅಧಿಕೃತ ಆವೃತ್ತಿ 0.02 ಬಿಡುಗಡೆ ಮಾಡಲಾಯಿತು.

2001: ರಾಬರ್ಟ್ ಸ್ಟೀವನ್ಸ್ ಅವರು 2001ರ ಆಂತ್ರಾಕ್ಸ್ ದಾಳಿಗೆ ಮೊದಲ ಬಲಿಯಾದರು.

2011: ಭಾರತವು ಕಡಿಮೆ ದರದ ಟ್ಯಾಬ್ಲೆಟ್ ಫೋನಾದ “ಆಕಾಶ್” ಅನ್ನು ಉದ್ಘಾಟಿಸಿತು.

2015: ಕ್ಯಾಲಿಫೋರ್ನಿಯಾದ ಗವರ್ನರ್ ಜೆರ್ರಿ ಬ್ರೌನ್ ವಾಸಿ ಆಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ “ಸಾಯುವ ಹಕ್ಕನ್ನು” ನೀಡಿದರು.

ಪ್ರಮುಖ ಜನನ/ಮರಣ:

1922: ಹಿಂದಿ ಚಿತ್ರಗಳ ಸಂಗೀತ ಸಂಯೋಜಕ ಶಂಕರ್ ಜೈಕಿಶನ್ ಜನಿಸಿದರು.

1923: ಗುಜರಾತಿನ 18ನೇ ರಾಜ್ಯಪಾಲ ಕೈಲಾಶ್ ಪತಿ ಮಿಶ್ರಾ ಜನಿಸಿದರು.

1934: ಹಾಸ್ಯನಟ, ನಾಟಕಕಾರ, ವಿಮರ್ಶಕ, ವಕೀಲ ಮತ್ತು ಅಂಕಣಕಾರ ಚೋ.ರಾಮಸ್ವಾಮಿ ಜನಿಸಿದರು.

1950: ಇಂಡಿಯಾ ಇಂಟರ್ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರ್ಸ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅಶೋಕ್ ಖೇಣಿ ಜನಿಸಿದರು.

1976: ಲ್ಯಾಟಿಸ್ ಬೋಲ್ಟ್ಸ್ಮ್ಯಾನ್ ವಿಧಾನದಲ್ಲಿ ಬಳಸಲಾಗುವ ಭಟ್ನಾಗರ್-ಗ್ರಾಸ್-ಕ್ರೂಕ್ (ಬಿ.ಜಿ.ಕೆ) ಮಾದರಿಯನ್ನು ಕೊಡುಗೆ ನೀಡಿದ ಭಾರತೀಯ ಗಣಿತತಜ್ಞ ಪ್ರಭು ಲಾಲ್ ಭಟ್ನಾಗರ್ ನಿಧನರಾದರು.

1980: ಕಲ್ಕತ್ತಾದ ಬಂಗಾಳಿ ನಟಿ ಪಯೋಲಿ ದಾಮ್ ಜನಿಸಿದರು.

1982: ದೂರದರ್ಶನದ ನಟ ಅನುಜ್ ಸಚ್ಚಿದೇವ ಜನಿಸಿದರು.

1985: ಬಂಗಾರದ ಮನುಷ್ಯ ಕಾದಂಬರಿ ಲೇಖಕ ಟಿ.ಕೆ.ರಾಮರಾವ್ ನಿಧನರಾದರು.

1991: ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯನ್ನು ಆರಂಭಿಸಿದ ಪತ್ರಿಕೆ ಪ್ರಕಾಶಕ ರಾಮನಾಥ್ ಗೊಯೆಂಕಾ ನಿಧನರಾದರು.

1997: ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ನಾಯಕ ಚಿತ್ತ ಬಸು ನಿಧನರಾದರು.

2011: ಅಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನಿಧನರಾದರು.

 

Categories
e-ದಿನ

ಅಕ್ಟೋಬರ್-4

ಪ್ರಮುಖ ಘಟನಾವಳಿಗಳು:

1535: ಸ್ವಿಜರ್ಲ್ಯಾಂಡಿನಲ್ಲಿ ಮೊದಲ ಪೂರ್ಣ ಇಂಗ್ಲೀಷ್ ಭಾಷಾಂತರದ ಬೈಬಲ್ಲನ್ನು ಮುದ್ರಿಸಲಾಯಿತು.

1636: ಮ್ಯಾಸಚೂಸೆಟ್ಸಿನ ಪ್ಲೈಮೌತ್ ಕಾಲೋನಿಯ ಮೊದಲ ಕಾನೂನಿನ ಕರಡು ಪ್ರತಿಯನ್ನು ಮಾಡಲಾಯಿತು.

1675: ಜೇಬಿನಲ್ಲಿ ಇಡಬಹುದಾದ ಗಡಿಯಾರಕ್ಕೆ ಕ್ರಿಸ್ಚಿಯನ್ ಹೈಗೆನ್ಸ್ ಪೇಟೆಂಟ್ ಪಡೆದರು.

1880: ಲಾಸ್ ಏಂಜೆಲೆಸಿನಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಯಲವನ್ನು ಸ್ಥಾಪಿಸಲಾಯಿತು.

1881: ಎಡ್ವರ್ಡ್ ಲೀವೌಕ್ಸ್ ಸ್ವಯಂಚಾಲಿತ ಪಿಯಾನೋ ಪ್ಲೇಯರಿಗಾಗಿ ಪೇಟೆಂಟ್ ಪಡೆದರು.

1910: ಬರ್ಮುಡಾ ದೇಶದ ಧ್ವಜವನ್ನು ಅಳವಡಿಸಲಾಯಿತು.

1911: ಲಂಡನ್ನಿನ ಅರ್ಲ್ಸ್ ಕೋರ್ಟ್ ಮೆಟ್ರೋ ಸ್ಟೇಷನ್ನಿನಲ್ಲಿ ಮೊದಲ ಸಾರ್ವಜನಿಕ ಎಲಿವೇಟರ್ ಅನ್ನು ಬಳಸಲಾಯಿತು.

1915: ಕೊಲೊರೆಡೋ ಮತ್ತು ಉಟಾಹ್ ದಲ್ಲಿ ಡೈನಾಸುರ್ ರಾಷ್ಟ್ರೀಯ ಸ್ಮಾರಕವನ್ನು ಸ್ಥಾಪಿಸಲಾಯಿತು.

1949: ವಿಶ್ವಸಂಸ್ಥೆಯ ಶಾಶ್ವತ ನ್ಯೂಯಾರ್ಕ್ ಕೇಂದ್ರ ಕಾರ್ಯಾಲಯವನ್ನು ಸಮರ್ಪಿಸಲಾಯಿತು.

1957: ಮೊದಲ ಕೃತಕ ಭೂಮಿಯ ಉಪಗ್ರಹವಾದ “ಸ್ಪುಟ್ನಿಕ್” ಅನ್ನು ರಷ್ಯಾ ದೇಶ ಹಾರಿಸಿತು.

ಪ್ರಮುಖ ಜನನ/ಮರಣ:

1884: ಭಾರತೀಯ ಇತಿಹಾಸ ತಜ್ಞ ಮತ್ತು ಲೇಖಕ ರಾಮಚಂದ್ರ ಶುಕ್ಲ ಜನಿಸಿದರು.

1913: ಹಿಂದುಸ್ತಾನಿ ಗಾಯಕ ಸರಸ್ವತಿ ರಾಣೆ ಜನಿಸಿದರು.

1952: ಭಾರತೀಯ ಹಿನ್ನೆಲೆ ಗಾಯಕ ಶೈಲೇಂದ್ರ ಸಿಂಗ್ ಜನಿಸಿದರು.

1978: ಚಿತ್ರ ನಟಿ ಸೋಹಾ ಅಲಿ ಖಾನ್ ಜನಿಸಿದರು.

1980: ದೂರದರ್ಶನದ ನಟಿ ಶ್ವೇತ ತಿವಾರಿ ಜನಿಸಿದರು.

1980: ಬಾಲಿವುಡ್ ಚಲನಚಿತ್ರಗಳ ನಿರ್ದೇಶಕ ಎಸ್.ಕೆ.ಓಝಾ ನಿಧನರಾದರು.

2000: ಕವಿ ಮೊಹಮ್ಮದ್ ಮುರ್ತುಜ ಸಿದ್ದಿಖಿ ನಿಧನರಾದರು.

2015: ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಎದಿದ ನಾಗೇಶ್ವರ ರಾವ್ ನಿಧನರಾದರು.

 

Categories
e-ದಿನ

ಅಕ್ಟೋಬರ್-3

 

ಪ್ರಮುಖ ಘಟನಾವಳಿಗಳು:

1863: ಅಬ್ರಹಾಂ ಲಿಂಕನ್ ನವೆಂಬರ್ ತಿಂಗಳ ಕೊನೆಯ ಗುರುವಾರವನ್ನು ಥ್ಯಾಂಕ್ಸ್ ಗಿವಿಂಗ್ ಡೇ ಎಂದು ಹೆಸರಿಸಿದರು.

1872: ನ್ಯೂಯಾರ್ಕಿನಲ್ಲಿ ಬ್ಲೂಮಿಂಗ್ಡೇಲ್ ಡಿಪಾರ್ಟ್ ಮೆಂಟಲ್ ಸ್ಟೋರ್ ತೆರೆಯಲಾಯಿತು.

1899: ಮೋಟಾರು ಚಾಲಿತ ವ್ಯಾಕ್ಯೂಮ್ ಕ್ಲೀನರಿಗೆ ಜೆ.ಎಸ್.ಥರ್ಮನ್ ಪೇಟೆಂಟ್ ಪಡೆದರು.

1913: ಅಮೇರಿಕಾದ ಫೆಡರಲ್ ಆದಾಯ ತೆರಿಗೆ ಕಾನೂನಾಗಿ ಸಹಿ ಮಾಡಲಾಯಿತು.

1922: ರೆಬೆಕ್ಕಾ ಫೆಲ್ಟನ್ ಜಾರ್ಜಿಯಾದ ಮೊದಲ ಮಹಿಳಾ ರಾಷ್ಟ್ರೀಯ ಪರಿಷತ್ತಿನ ಸದಸ್ಯೆಯಾದರು.

1942: ಆರ್ಥಿಕ ಸ್ಥಿರೀಕರಣದ ಕಛೇರಿ ಸ್ಥಾಪಿಸಲಾಯಿತು.

1945: ವಿಶ್ವ ದ ರಾಷ್ಟ್ರಗಳ ಒಕ್ಕೂಟ ರೂಪಿಸಲಾಯಿತು.

1947: ಮೊದಲ 200’’ (508 ಸೆ.ಮೀ) ವ್ಯಾಸದ ಟೆಲಿಸ್ಕೋಪ್ ಲೆನ್ಸ್ ಪೂರ್ಣಗೊಳಿಸಲಾಯಿತು.

1952: ಮ್ಯಾಗ್ನೆಟಿಕ್ ಟೇಪಿನಲ್ಲಿ ಮೊದಲ ವೀಡಿಯೋ ರೆಕಾರ್ಡಿಂಗ್ ಮಾಡಲಾಯಿತು.

1977: ಇಂದಿರಾ ಗಾಂಧಿಯವರನ್ನು ಅಪಾದನೆಗಳ ಹಿನ್ನೆಲೆಯಲ್ಲಿ ಬಂಧಿಸಲಾಯಿತು.

1992: ಪದ್ಮಶ್ರೀ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಾದ ಗೀತ್ ಶ್ರೀರಾಮ್ ಸೇಥಿ ಅವರು ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಪ್ರಶಸ್ತಿ ಗಳಿಸಿದರು.

ಪ್ರಮುಖ ಜನನ/ಮರಣ:

1838: ಬಂಗಾಲದ ನವಾಬರಾಗಿದ್ದ ಮುಬಾರಕ್ ಅಲಿ ಖಾನ್ II ನಿಧನರಾದರು.

1923: ದಕ್ಷಿಣ ಏಷಿಯಾದ ಯುರೋಪಿಯನ್ ಔಷಧದಲ್ಲಿ ತರಬೇತಿ ಪಡೆದ ಮೊದಲ ಮಹಿಳಾ ವೈದ್ಯ ಕದಂಬಿನಿ ಗಂಗೂಲಿ ನಿಧನರಾದರು.

1935: ಖ್ಯಾತ ಜಾನಪದ ಗಾಯಕಿ ಪ್ರಥಿಮಾ ಬರುವಾ ಪಾಂಡೆ ಜನಿಸಿದರು.

1944: ಹಿಮಾಚಲ ಪ್ರದೇಶದ ವಿದೇಶಾಂಗ ವ್ಯವಹಾರಗಳ ಸಚಿವೆ ಪ್ರಿಣೀತ್ ಕೌರ್ ಜನಿಸಿದರು.

1949: ಭಾರತೀಯ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಕಾರ ಜೆ.ಪಿ.ದತ್ತಾ ಜನಿಸಿದರು.

1961: ಬಹುಜನ ವಿಕಾಸ್ ಆಘಾಡಿ ಅಧ್ಯಕ್ಷರು ಮಹಾರಾಷ್ಟ್ರದ ವಾಸಿ-ವಿರಾರ್ ಪ್ರದೇಶದಲ್ಲಿ ರಾಜಕೀಯ ಪಕ್ಷದ ಅಧ್ಯಕ್ಷ ಹಿತೇಂದ್ರ ಠಾಕುರ್ ಜನಿಸಿದರು.

1994: ಭಾರತೀಯ ಕ್ರಿಕೆಟ್ ಆಟಗಾರ ಜೊಗಿಂದರ್ ಸಿಂಗ್ ರಾವ್ ನಿಧನರಾದರು.

 

Categories
e-ದಿನ

ಅಕ್ಟೋಬರ್-2

 

ಪ್ರಮುಖ ಘಟನಾವಳಿಗಳು:

1608: ಮೊದಲ ಪೂರ್ವ ದೂರದರ್ಶಕಕ್ಕೆ ಹ್ಯಾನ್ಸ್ ಲಿಪ್ಪರ್ ಶೇ ಪೇಟೆಂಟ್ ಪಡೆದರು.

1866: ಕೀಲಿಯಿಂದ ತೆರೆಯಬಹುದಾದ ಟಿನ್ ಕ್ಯಾನಿಗೆ ಜೆ.ಆಸ್ಟರ್ ಹೌಡ್ತ್ ಅವರು ಪೇಟೆಂಟ್ ಪಡೆದರು.

1872: ಮಾರ್ಗನ್ ಸ್ಟೇಟ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1895: ಮೊದಲ ಬಾರಿಗೆ ದಿನಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರವನ್ನು ಪ್ರಕಟಿಸಲಾಯಿತು.

1901: ಮೊದಲ ರಾಯಲ್ ನೇವಲ್ ಜಲಾಂತರ್ಗಾಮಿ ಬಾರ್ರೋದಲ್ಲಿ ಪ್ರಾರಂಭವಾಯಿತು.

1916: ಸ್ಯಾನ್ ಡೀಯಾಗೋ ಮೃಗಾಲಯ ಸ್ಥಾಪಿಸಲಾಯಿತು.

1936: ಮೊದಲ ಮದ್ಯಸಾರ ವಿದ್ಯುತ್ ಸ್ಥಾವರ ಆಟ್ಚಿಸನ್ನಿನಲ್ಲಿ ಸ್ಥಾಪಿಸಲಾಯಿತು.

1956: ಮೊದಲ ಪರಮಾಣು ವಿದ್ಯುತ್ ಗಡಿಯಾರವನ್ನು ನ್ಯೂಯಾರ್ಕಿನಲ್ಲಿ ಪ್ರದರ್ಶಿಸಲಾಯಿತು.

1986: ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲು ಉಗ್ರರು ಪ್ರಯತ್ನಿಸಿದರು.

2008: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಯಿತು.

ಪ್ರಮುಖ ಜನನ/ಮರಣ:

1869: ಭಾರತದ ರಾಷ್ಟ್ರಪಿತ ಎಂದೇ ಖ್ಯಾತರಾದ ಮೋಹನದಾಸಕರಮಚಂದ ಗಾಂಧಿ ಜನಿಸಿದರು.

1848: ಖ್ಯಾತ ವರ್ಣಚಿತ್ರಕಾರ ರಾಜಾ ರವಿವರ್ಮ ನಿಧನರಾದರು.

1899: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿ, ಲೇಖಕ ವೆಂಕಟರಾಮಯ್ಯ ಸೀತಾರಾಮಯ್ಯ ಜನಿಸಿದರು.

1904: ಭಾರತದ 2ನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಜನಿಸಿದರು.

1939: ಭಾರತದ ಕ್ರಿಕೆಟ್ ಆಟಗಾರ ಬುದಿ ಕುಂದೆರನ್ ಜನಿಸಿದರು.

1942: ಹಿಂದಿ ಚಲನಚಿತ್ರ ನಟಿ ಆಶಾ ಪಾರೇಖ್ ಜನಿಸಿದರು.

1948: ಫೆಮಿನಾ ಮಿಸ್ ಇಂಡಿಯಾ 1965 ವಿಜೇತೆ ಪೆರ್ಸಿಸ್ ಕಂಬಟ್ಟ ಜನಿಸಿದರು.

1964: ಭಾರತ ಸರ್ಕಾರದ ಆರೋಗ್ಯ ಮಂತ್ರಿ ಆಗಿದ್ದ ಸ್ವಾತಂತ್ರ ಹೋರಾಟಗಾರ್ತಿ ಮತ್ತು ಕಾರ್ಯಕರ್ತೆ ರಾಜಕುಮಾರಿ ಅಮೃತ್ ಕೌರ್ ನಿಧನರಾದರು.

1965: ಅಮೇರಿಕಾದ ರಸಾಯನಶಾಸ್ತ್ರಜ್ಞ, ಥೈಯಾಮೈನ್ (ವಿಟಮಿನ್ ಬಿ 1) ಸಂಸ್ಲೇಶಿಸಿದ ರಾಬರ್ಟ್ ರನ್ನಲ್ ವಿಲ್ಲಿಯಂಸ್ ನಿಧನರಾದರು.

1975: ಭಾರತದ ಸ್ವಾತಂತ್ರ್ಯಗ ಹೋರಾಟಗಾರ ಮತ್ತು ಹಿರಿಯ ರಾಜಕಾರಣಿ ಕೆ.ಕಾಮರಾಜ್ ನಿಧನರಾದರು.

 

Categories
e-ದಿನ

ಅಕ್ಟೋಬರ್-1

 

ಪ್ರಮುಖ ಘಟನಾವಳಿಗಳು:

1791: ನೂತನ ಫ್ರೆಂಚ್ ಶಾಸನ ಸಭೆಯ ಮೊದಲ ಅಧಿವೇಶನ ನಡೆಯಿತು.

1851: ಹವಾಯಿಯಲ್ಲಿ ಮೊದಲ ಬಾರಿಗೆ ಅಂಚೆ ಚೀಟಿಗಳನ್ನು ವಿತರಿಸಲಾಯಿತು.

1854: ಭಾರತದಲ್ಲಿ ಅಂಚೆ ಚೀಟಿಗಳ ಬಳಕೆ ಪ್ರಾರಂಭವಾಯಿತು.

1864: ಕೋಲ್ಕತ್ತಾದಲ್ಲಿ ಸುಂಟರಾಗಳಿಯ ಪರಿಣಾಮ 70,000 ಮಂದಿ ಮೃತರಾದರು.

1888: ನ್ಯಾಷನಲ್ ಜಿಯೋಗ್ರಫಿಕ್ ನಿಯತಕಾಲಿಕೆಯನ್ನು ಮೊದಲ ಬಾರಿಗೆ ಮುದ್ರಿಸಲಾಯಿತು.

1949: ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಆಳ್ವಿಕೆ ಆರಂಭವಾಯಿತು.

1953: ಭಾರತದ ಆಂಧ್ರ ಪ್ರದೇಶವು ಮದ್ರಾಸಿನಿಂದ ವಿಭಜನೆಯಾಯಿತು.

1967: ಭಾರತೀಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು.

1977: ಇಂಧನ ಇಲಾಖೆ ಸ್ಥಾಪಿಸಲಾಯಿತು.

2000: 27ನೇ ಒಲಂಪಿಕ್ಸ್ ಪಂದ್ಯಾವಳಿ ಸಿಡ್ನಿಯಲ್ಲಿ ಮುಕ್ತಾಯಗೊಂಡಿತು.

2002: ಏಷಿಯಾ ಪ್ಂಧ್ಯಾವಳಿಯಲ್ಲಿ ಸ್ನೂಕರ್ ಆಟದಲ್ಲಿ ಭಾರತವು ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿತು.

2006: ಲೆಬನಾನ್ನಿಂದ ತನ್ನ ಸೈನ್ಯದ ಕೊನೆಯ ತಂಡವನ್ನು ಇಸ್ರೇಲ್ ಮರಳಿ ಕರೆಯಿತು.

ಪ್ರಮುಖ ಜನನ/ಮರಣ:

1542: ಮಹಾರಾಜ ಅಕ್ಬರನ ಪತ್ನಿ ಜೋಧಾಬಾಯಿ ಜನಿಸಿದರು.

1842: ಭಾರತೀಯ ವಕೀಲ ಎಸ್.ಸುಬ್ರಮಣಿ ಐಯ್ಯರ್ ಜನಿಸಿದರು.

1847: ಸಾಮಾಜಿಕ ಕಾರ್ಯಕರ್ತೆ, ಲೇಖಕಿ ಆನಿ ಬೆಸೆಂಟ್ ಜನಿಸಿದರು.

1896: ಪಾಕಿಸ್ತಾನದ ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್ ಜನಿಸಿದರು.

1906: ಸಾಂಪ್ರದಾಯಿಕ ಸಂಗೀತ ಸಂಯೋಜಕ ಸಚಿನ್ ದೇವ್ ಬರ್ಮನ್ ಜನಿಸಿದರು.

1919: ಕವಿ ಮತ್ತು ಗೀತ ರಚನೆಕಾರ ಮಜ್ರೂಹ್ ಸುಲ್ತಾನ್ ಪುರಿ ಜನಿಸಿದರು.

1928: ತಮಿಳು ಚಿತ್ರರಂಗದ ಖ್ಯಾತ ನಟ ಶಿವಾಜಿ ಗಣೇಶನ್ ಜನಿಸಿದರು.

1947: ಭಾರತೀಯ ವಕೀಲ ಮತ್ತು ನ್ಯಾಯಾಧೀಶರು ದಲ್ವೀರ್ ಭಂಡಾರಿ ಜನಿಸಿದರು.

 

Categories
e-ದಿನ

ಸೆಪ್ಟೆಂಬರ್-30

 

ಪ್ರಮುಖ ಘಟನಾವಳಿಗಳು:

1452: ಮೊದಲ ಪುಸ್ತಕ ಜೊಹಾನ್ ಗುಟ್ಟೆನ್ ಬರ್ಗಿನ ಬೈಬಲ್ ಪ್ರಕಟಿಸಲಾಯಿತು.

1791: ಪ್ಯಾರಿಸಿನಲ್ಲಿನ ರಾಷ್ಟ್ರೀಯ ಸಂವಿಧಾನ ಸಭೆಯನ್ನು ರದ್ದು ಮಾಡಲಾಯಿತು.

1841: ಸ್ಟೇಪ್ಲರಿಗಾಗಿ ಸ್ಯಾಮುಯೆಲ್ ಸ್ಲೊಕಂ ಪೇಟೆಂಟ್ ಪಡೆದರು.

1846: ರೋಗಿಗೆ ಈಥರ್ ಅನ್ನು ನೀಡಿದ ನಂತರ ಡಾ.ವಿಲಿಯಂ ಮಾರ್ಟನ್ ನೋವು ರಹಿತ ಹಲ್ಲಿನ ಶಸ್ತ್ರಚಿಕಿತ್ಸೆ ಮಾಡಿದರು.

1882: ಆಪೆಲ್ಟನ್ನಿನಲ್ಲಿ ವಿಶ್ವದ ಮೊದಲ ಜಲವಿದ್ಯುತ್ ಸ್ಥಾವರದ ಕಾರ್ಯಾಚರಣೆ ಆರಂಭವಾಯಿತು.

1898: ನ್ಯೂಯಾರ್ಕ ನಗರವನ್ನು ಸ್ಥಾಪಿಸಲಾಯಿತು.

1944: ಡಚ್ ಜೆನೆರಲ್ ಮೈನ್ ಕೆಲಸಗಾರರ ಒಕ್ಕೂಟ ರೂಪಗೊಂಡಿತು.

1967: ಫೈನ್ ಆರ್ಟ್ ಪ್ಯಾಲೆಸ್ ಮತ್ತೆ ತೆರೆಯಲಾಯಿತು.

1970: ನ್ಯೂ ಅಮೇರಿಕನ್ ಬೈಬಲ್ ಪ್ರಕಟನೆಯಾಯಿತು.

1980: ಇಸ್ರೇಲ್ ತನ್ನ ನೂತರ ಕರೆನ್ಸಿಯಾದ ಶೇಕೆಲ್ ಅನ್ನು ಪೌಂಡ್ ಬದಲಾಗಿ ವಿತರಿಸಿತು.

1993: ಮಹಾರಾಷ್ಟ್ರದ ಲಾತೂರಿನಲ್ಲಿ ಭೂಕಂಪದಲ್ಲಿ 20,000 ಜನರು ಸಾವನ್ನಪ್ಪಿದರು.

ಪ್ರಮುಖ ಜನನ/ಮರಣ:

1828: ಕ್ರಿಯಾ ಯೋಗದ ಯೋಗ ವಿಜ್ಞಾನ ಪ್ರತಿಪಾದಿಸಿದ ಯೋಗಿರಾಜ್ ಎಂದೇ ಖ್ಯಾತಿ ಪಡೆದ ಶ್ಯಾಮ ಚರಣ್ ಲಾಹಿರಿ ಜನಿಸಿದರು.

1881: ಅಣ್ಣಮಲೈ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ರಾಜಾ ಅಣ್ಣ ಮಲೈ ಚೆಟ್ಟಿಯಾರ್ ಜನಿಸಿದರರು.

1900: ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಂ.ಸಿ.ಚಾಗ್ಲಾ ಜನಿಸಿದರು.

1922: ಭಾರತೀಯ ಚಿತ್ರಗಳ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಹೃಷಿಕೇಶ್ ಮುಖರ್ಜಿ ಜನಿಸಿದರು.

1940: ಹಿಂದಿ ಚಿತ್ರಗಳ ಸಂಗೀತ ಸಂಯೋಜಕ ಪ್ಯಾರೆಲಾಲ್ ರಾಮ್ ಪ್ರಸಾದ್ ಶರ್ಮ ಜನಿಸಿದರು.

1941: ಭಾರತೀಯ ಶಿಕ್ಷಣತಜ್ಞ ಮತ್ತು 5ನೇ ಕಾಮನ್ ವೆಲ್ತ್ ಸೆಕ್ರೆಟರಿ ಜೆನರಲ್ ಕಮಲೇಶ್ ಶರ್ಮ ಜನಿಸಿದರು.

1947: ಜೆ.ಎಂ.ಫೈನಾನ್ಷಿಯಲ್ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ನಿಮೇಶ್ ಕಂಪನಿ ಜನಿಸಿದರು.

1961: ಭಾರತೀಯ ಕ್ರಿಕೆಟ್ ಆಟಗಾರ ಚಂದ್ರಕಾಂತ್ ಪಂಡಿತ್ ಜನಿಸಿದರು.

1972: ಹಿಂದಿ ಖ್ಯಾತ ಹಿನ್ನಲೆ ಗಾಯಕ ಶಾನ್ ಜನಿಸಿದರು.

2014: ರಾಜಕಾರಣಿ ಮೌಲ್ವಿ ಇಫ್ತಿಕಾರ್ ಹುಸ್ಸೇನ್ ಅನ್ಸಾರಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-29

 

ಪ್ರಮುಖ ಘಟನಾವಳಿಗಳು:

1708: ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆ ಮತ್ತು ನ್ಯೂ ಈಸ್ಟ್ ಇಂಡಿಯಾ ಸಂಸ್ಥೆ ವಿಲೀನವಾಯಿತು.

1789: ಅಮೇರಿಕಾದ ಯುದ್ಧ ಇಲಾಖೆಯು ಸೈನ್ಯವನ್ನು ಸ್ಥಾಪಿಸಿತು.

1911: ಟರ್ಕಿ ದೇಶದ ಮೇಲೆ ಇಟಲಿಯು ಯುದ್ದವನ್ನು ಘೋಷಿಸಿತು.

1916: ಅಮೇರಿಕಾದ ತೈಲ ಉದ್ಯಮಿ ಜಾನ್ ಡಿ ರಾಕ್ಫೆಲ್ಲರ್ ಪ್ರಪಂಚದ ಮೊದಲ ಬಿಲಿಯನೇಯರ್ ಆದರು.

1923: ಗೋಲ್ಡನ್ ಗೇಟ್ ಪಾರ್ಕಿನಲ್ಲಿರುವ ಸ್ಟೀನ್ ಹಾರ್ಟ್ ಅಕ್ವೇರಿಯಂ ಸಾರ್ವಜನಿಕರಿಗೆ ತೆರೆಯಲಾಯಿತು.

1930: ನ್ಯೂಯಾರ್ಕ್ ಸಿಟಿ ಕಾಲೇಜು ರೇಡಿಯೋ ಜಾಹಿರಾತಿನ ಮೊದಲ ಕೋರ್ಸ್ ಅನ್ನು ಆರಂಭಿಸಿತು.

1938: ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ದಾಖಲೆ ಸಂಗ್ರಹದ ಕೋರ್ಸ್ ಆರಂಭಿಸಲಾಯಿತು.

1950: ಟೆಲಿಫೋನ್ ಕಾಲ್ ಉತ್ತರಿಸುವ ಯಂತ್ರವನ್ನು ಬೆಲ್ ಲ್ಯಾಬೋರೇಟರಿಸ್ ಅವರಿಂದ ರಚಿಸಲಾಯಿತು.

1959: ಆರತಿ ಸಾಹಾ ಇಂಗ್ಲಿಷ್ ಚ್ಯಾನಲ್ ಈಜಿದ ಏಷಿಯಾದ ಮೊದಲ ಮಹಿಳೆಯಾದರು.

1967: ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ವಿಶ್ವ ಹಣಕಾಸು ವ್ಯವಸ್ಥೆಯ ಸುಧಾರಣೆ ಮಾಡಿತು.

1990:ವಾಷಿಂಗ್ಟನ್ ನ್ಯಾಷನಲ್ ಕ್ಯಾಥೆಡ್ರಲ್ ನಿರ್ಮಾಣ 83 ವರ್ಷಗಳಿಗೆ ಪೂರ್ಣಗೊಂಡಿತು.

2010: ಆಧಾರ್ ಕಾರ್ಡ್ ಯೋಜನೆಯನ್ನು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಹಾರಾಷ್ಟ್ರದ ನಂದೂರ್ಬರ್ ಜಿಲ್ಲೆಯಲ್ಲಿ ಉದ್ಘಾಟಿಸಿದರು.

ಪ್ರಮುಖ ಜನನ/ಮರಣ:

1928: ಭಾರತದ ಮೊದಲ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರ ಜನಿಸಿದರು.

1929: ಜಮ್ಮು ಕಶ್ಮೀರದ ಪ್ರಮುಖ ರಾಜಕಾರಣಿ ಸೈಯದ್ ಅಲಿ ಶಾಹ್ ಗೀಲಾನಿ ಜನಿಸಿದರು.

1932: ಹಿಂದಿ ಚಲನಚಿತ್ರಗಳ ಹಾಸ್ಯ ನಟ ಮೆಹೆಮೂದ್ ಜನಿಸಿದರು.

1947: ಭಾರತದ 38ನೇ ಮುಖ್ಯ ನ್ಯಾಯಮೂರ್ತಿ ಎಸ್.ಹೆಚ್.ಕಪಾಡಿಯಾ ಜನಿಸಿದರು.

1957: ಪೆಟ್ರೊಲಜಿ, ಮೈನೆರೊಲಜಿ ಮತ್ತು ಭೂವಜ್ಞಾನಿ ಆನಂದ್ ಮೋಹನ್ ಜನಿಸಿದರು.

1986: ಭಾರತದ ಮೊದಲ ಸೌರ ಶಕ್ತಿ ಚಾಲಿತ ಕಾರಿನ ಸೃಷ್ಟಿಕರ್ತ ಅಂಕುರ್ ಶರ್ಮ ಜನಿಸಿದರು.

2000: ಭಾರತೀಯ ಪತ್ರಕರ್ತ ಶಾಪುರ್ ಖಾರೆಗಾತ್ ನಿಧನರಾದರು.

2004: ಮಲಯಾಳದ ಕವಯಿತ್ರಿ ಬಾಲಮಣಿ ಅಮ್ಮ ನಿಧನರಾದರು.

2008: ಹೈದರಾಬಾದಿನ ರಾಜಕಾರಣಿ ಸುಲ್ತಾನ್ ಸಲಾಹುದ್ದಿನ್ ಓವೈಸಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-28

 

ಪ್ರಮುಖ ಘಟನಾವಳಿಗಳು:

1701: ಮೇರಿಲ್ಯಾಂಡಿನಲ್ಲಿ ವಿಚ್ಛೇದನವನ್ನು ಕಾನೂನು ಬದ್ಧಗೊಳಿಸಲಾಯಿತು.

1787: ಕಾಂಗ್ರೆಸ್ ತಮ್ಮ ಅನುಮೋದನೆಗೆ ರಾಜ್ಯ ಶಾಸಕಾಂಗಗಳಿಗೆ ಸಂವಿಧಾನವನ್ನು ಕಳುಹಿಸಲಾಯಿತು.

1825: ಜಾರ್ಜ್ ಸ್ಟೀಫನ್ ಸನ್ ಮೊದಲ ಪ್ರಯಾಣಿಕರ ರೈಲು ನಿರ್ವಹಿಸಿದ.

1858: ದೊನಾಟಿ ಕಾಮೆಟ್ ಛಾಯಾಚಿತ್ರ ಪಡೆದ ಮೊದಲ ಕಾಮೆಟ್ ಆಗಿದೆ.

1867: ಟೊರೊಂಟೊ ಒಂಟಾರಿಯಾದ ರಾಜಧಾನಿ ಮಾಡಲಾಯಿತು.

1889: ತೂಕ ಮತ್ತು ಅಳತೆಗಳ ಕುರಿತಾದ ಮೊದಲ ಜೆನೆರಲ್ ಕಾನ್ಫರನ್ಸ್ (CGPM) ಒಂದು ಮೀಟರ್ ಉದ್ದವನ್ನು ಪ್ಲಾಟಿನಂ ಮಿಶ್ರಲೋಹದ ಸ್ಟಾಂಡರ್ಡ್ ಬಾರಿನಲ್ಲಿ ಎರಡು ಸಾಲುಗಳ ನಡುವಿನ ಅಂತರವನ್ನು ವ್ಯಾಖ್ಯಾನಿಸಲಾಯಿತು.

1908: ಸರ್ ಎಂ.ವಿಶ್ವೇಶ್ವರಯ್ಯ ಅವರು ಹೈದರಾಬಾದಿನ ಮುಸ್ಲಿ ನದಿಯ ಪ್ರವಾಹದಿಂದ ರಕ್ಷಿಸಲು ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು.

1923: ರೇಡಿಯೋ ಟೈಮ್ಸ್ ಮೊದಲ ಬಾರಿಗೆ ಪ್ರಕಟಣೆ ಮಾಡಲಾಯಿತು.

1928: ಸೇಂಟ್ ಮೇರೀಸ್ ಆಸ್ಪತ್ರೆಯ ತನ್ನ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ಅಲೆಕ್ಸಾಂಡರ್ ಫ್ಲೆಮಿಂಗ್ ಅಚಾನಕ್ಕಾಗಿ ಪೆನ್ಸಿಲಿನ್ ಕಂಡುಹಿಡಿದರು.

2008: ಚೀನಿ ಗಗನಯಾತ್ರಿ ಝೈ ಝಿಗಾಂಗ್ ಬಾಹ್ಯಾಕಾಶದಲ್ಲಿ ನಡೆದ ಚೀನಾದ ಮೊದಲ ವ್ಯಕ್ತಿ.

2015: ನಾಸಾ ವಿಜ್ಞಾನಿಗಳು ಮಂಗಳ ಗ್ರಹದ ಮೇಲೆ ಹರಿಯುವ ನೀರನ್ನು ಪತ್ತೆ ಮಾಡಿರುವುದಾಗಿ ಘೊಷಿಸಿದರು.

ಪ್ರಮುಖ ಜನನ/ಮರಣ:

1907: ಕ್ರಾಂತಿಕಾರಿ ನಾಯಕ ಮತ್ತು ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಜನಿಸಿದರು.

1929: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಷ್ಕರ್ ಜನಿಸಿದರು.

1946: ಭಾರತ-ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಮಜಿದ್ ಖಾನ್ ಜನಿಸಿದರು.

1966: ಭಾರತೀಯ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಕಾರ ಪುರಿ ಜಗನ್ನಾಥ್ ಜನಿಸಿದರು.

1982: ಭಾರತೀಯ ಬಂದೂಕುಕಾರ, ಒಲಂಪಿಕ್ ಪದಕ ವಿಜೇತ ಅಭಿನವ್ ಬಿಂದ್ರ ಜನಿಸಿದರು.

1982: ಖ್ಯಾತ ಹಿಂದಿ ನಟ ರನ್ಬೀರ್ ಕಪೂರ್ ಜನಿಸಿದರು.

1985: ನಟಿ, ನೃತ್ಯಗಾರ್ತಿ ಮೌನಿ ರಾಯ್ ಜನಿಸಿದರು.

1994: ಬಹುಭಾಷ ಹಾಸ್ಯ ನಟ ಕೆ.ಎ.ತಂಗವೇಲು ನಿಧನರಾದರು.

2012: ಭಾರತದ ಮೊದಲ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-27

 

ಪ್ರಮುಖ ಘಟನಾವಳಿಗಳು:

1787: ಅಮೇರಿಕಾದ ಸಂವಿಧಾನವನ್ನು ಧೃಡೀಕರಣಕ್ಕಾಗಿ ಸಲ್ಲಿಸಲಾಯಿತು.

1892: ಡೈಮಂಡ್ ಮ್ಯಾಚ್ ಸಂಸ್ಥೆಯಿಂದ ಪುಸ್ತಕ ಮ್ಯಾಚುಗಳಿಗೆ ಪೇಟೆಂಟ್ ಪಡೆಯಲಾಯಿತು.

1905: ಆಲ್ಬರ್ಟ್ ಐನ್ಸ್ಟೈನ್ ಅವರ ಸಮೀಕರಣ ತತ್ವ E= mc2ಅನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.

1908: ಫೋರ್ಡ್ ಸಂಸ್ಥೆಯ ಮಾಡೆಲ್ ಟಿ ವಾಹನವು ಮೊದಲ ಬಾರಿಗೆ ಮಿಚಿಗಾನ್ ಗೆ ರವಾನಿಸಲು ಹೊರಟಿತು.

1910: ಎರಡು ಇಂಜಿನ್ ಉಳ್ಳ ವಿಮಾನದ ಪರಿಕ್ಷಾ ಹಾರಾಟ ಮಾಡಲಾಯಿತು.

1916: ಅಮೇರಿಕಾದ ಮೊದಲ “ನೇಟಿವ್ ಅಮೇರಿಕನ್ ಡೇ” ಆಚರಿಸಲಾಯಿತು.

1919: ಡೆಮೊಕ್ರಾಟಿಕ್ ನ್ಯಾಷನಲ್ ಕಮಿಟಿ ಮಹಿಳಾ ಸದಸ್ಯರಿಗೆ ಮತ ಚಲಾಯಿಸುವ ಹಕ್ಕಿನ ಅವಕಾಶ ನೀಡಿತು.

1928: ರಾಷ್ಟ್ರೀಯತಾವಾದಿ ಚೀನಿಯ ಸರ್ಕಾರವನ್ನು ಅಮೇರಿಕ ಗುರುತಿಸುವುದಾಗಿ ಘೋಷಿಸಿತು.

1937: ನ್ಯೂಯಾರ್ಕಿನಲ್ಲಿ ಮೊದಲ ಸಾಂಟಾ ಕ್ಲಾಸ್ ತರಬೇತಿ ಶಾಲೆ ತೆರೆಯಲಾಯಿತು.

1937: ಬಾಲಿನೀಸ್ ಹುಲಿ ನಿರ್ನಾಮವಾಗಿರುವುದಾಗಿ ಘೋಷಿಸಲಾಯಿತು.

1960: ಯೂರೋಪಿನ ಮೊದಲ ಚಲಿಸುವ ಪಾದಚಾರಿ ಲಂಡನ್ನಿನಲ್ಲಿ ತೆರೆಯಲಾಯಿತು.

1979: ಅಮೇರಿಕಾದ ಕಾಂಗ್ರೆಸ್ಸಿನಿಂದ ಅನುಮೋದನೆ ಪಡೆದ ನಂತರ ಇತಿಹಾಸದಲ್ಲಿ ಶಿಕ್ಷಣ ಇಲಾಖೆ 13ನೇ ಸಂಪುಟವಾಯಿತು.

ಪ್ರಮುಖ ಜನನ/ಮರಣ:

1833: ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ರಾಜಾರಾಂ ಮೋಹನ್ ರಾಯ್ ನಿಧನರಾದರು.

1932: ಹಿಂದಿ ಚಲನಚಿತ್ರಗಳ ನಿರ್ಮಾಪಕ, ನಿರ್ದೇಶಕ ಯಶ್ ಚೋಪ್ರ ಅವರು ಜನಿಸಿದರು.

1933: ಪ್ರಮುಖ ಬಂಗಾಲಿ ಕವಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಭಾರತದ ಸ್ತ್ರೀವಾದಿ ಕಾಮಿನಿ ರಾಯ್ ನಿಧನರಾದರು.

1953: ಭಾರತೀಯ ಗುರು ಸನ್ಯಾಸಿನಿ ಮಾತಾ ಅಮೃತಾನಂದಮಯಿ ಜನಿಸಿದರು.

1972: ಭಾರತೀಯ ಗಣಿತಜ್ಞ, ಗ್ರಂಥಪಾಲಕ ಮತ್ತು ಶಿಕ್ಷಣ ತಜ್ಞ ಎಸ್.ಆರ್.ರಂಗನಾಥನ್ ನಿಧನರಾದರು.

1981: ಭಾರತೀಯ ಕ್ರಿಕೆಟ್ ಆಟಗಾರ ಲಕ್ಷ್ಮಿಪತಿ ಬಾಲಾಜಿ ಜನಿಸಿದರು.

1997: ಆಂಧ್ರಪ್ರದೇಶದ ಸರ್ಕಾರದ ಸವಿರಾಗಿದ್ದ ಮಂಡಲಿ ವೆಂಕಟ ಕೃಷ್ಣ ರಾವ್ ನಿಧನರಾದರು.

2012: ಭಾರತೀಯ ನಿರ್ದೇಶಕ ಮತ್ತು ಚಿತ್ರಕಥೆಕಾರ ಸಂಜಯ್ ಸುರ್ಕರ್ ನಿಧನರಾದರು.

2015: ಮಣಿಪುರದ 16ನೇ ರಾಜ್ಯಪಾಲರಾಗಿದ್ದ ಸೈಯದ್ ಅಹಮದ್ ನಿಧನರಾದರು.

2015: ಕಾರ್ಯಕರ್ತ ಮತ್ತು ಲೇಖಕ ಕಲ್ಲೇನ್ ಪೊಕ್ಕುದನ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-26

 

ಪ್ರಮುಖ ಘಟನಾವಳಿಗಳು:

1772: ವೈದ್ಯವನ್ನು ಅಭ್ಯಾಸ ಮಾಡಲು ಲೈಸೆನ್ಸ್ ಅನ್ನು ಪಡೆಯಬೇಕೆಂದು ನ್ಯೂಜರ್ಸಿ ಮಸೂದೆ ಜಾರಿ ಮಾಡಿತು.

1777: ಫಿಲಾಡೆಲ್ಫಿಯಾವನ್ನು ಸೆರೆಹಿಡಿದ ಬ್ರಿಟಿಷ್ ಸೈನ್ಯವು ಪ್ರಮುಖ ಆಕ್ರಮಣವನ್ನು ಆರಂಭಿಸಿತು.

1786: ಫ್ರಾನ್ಸ್ ಮತ್ತು ಬ್ರಿಟನ್ ಒಂದು ವ್ಯಾಪಾರದ ಒಪ್ಪಂದವನ್ನು ಮಾಡಿದರು.

1829: ಬ್ರಿಟಿಷರ ಅಧಿಕೃತ ಕ್ರಿಮಿನಲ್ ತನಿಖಾ ಸಂಸ್ಥೆಯಾದ ಸ್ಕಾಟ್ಲಾಂಡ್ ಯಾರ್ಡ್ ರಚಿಸಲಾಯಿತು.

1887: ಎಮಿಲಿ ಬರ್ಲೈನರ್ ಗ್ರಾಮಫೋನಿಗಾಗಿ ಪೇಟೆಂಟ್ ಪಡೆದರು.

1910: ಭಾರತೀಯ ಪತ್ರಕರ್ತ ರಾಮಕೃಷ್ಣ ಪಳ್ಳೈ ಅವರು ತಿರುವಾಂಕೂರ್ ಸರ್ಕಾರದ ಟೀಕೆಗಳನ್ನು ಪ್ರಕಟಿಸಿದ ಕಾರಣ ಬಂಧನಕೊಳಗಾಗಿ ಅವರನ್ನು ಗಡಿಪಾರು ಮಾಡಲಾಯಿತು.

1913: ಪನಾಮಾ ಕಾಲುವೆಗಳ ಬೀಗಗಳಲ್ಲಿ ಮೊದಲ ದೋಣಿ ಬೆಳೆಯಿತು.

1914: ವ್ಯವಹಾರಗಳಲ್ಲಿ ಏಕಸ್ವಾಮ್ಯತೆಯನ್ನು ತಡೆಗಟ್ಟಲು ಮತ್ತು ಸ್ಪರ್ಧೆಯನ್ನು ಉತ್ತೇಜಿಸಲು ಫೆಡರಲ್ ಟ್ರೇಡ್ ಕಮಿಷನ್ ಸ್ಥಾಪಿತವಾಯಿತು.

1932: ಶಾಸನ ಸಭೆಯ ಚುನಾವಣೆಯಲ್ಲಿ ಭಾರತೀಯ ಅಸ್ಪೃಷ್ಯರ ಸವಲತ್ತುಗಳಿಗೆ ರಾಜಿ ಯೋಜನೆಯನ್ನು ಬಹುತೇಕ ಬ್ರಿಟಿಷ್ ಸರ್ಕಾರ ಅಂಗೀಕರಿಸಿದ ನಂತರ ಮಹಾತ್ಮ ಗಾಂಧಿಯವರು 6 ದಿನಗಳ ನಂತರ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳ್ಳಿಸಿದರು.

1941: ಅಮೇರಿಕಾದ ಸೈನ್ಯವು ಮಿಲಿಟರಿ ಪೋಲಿಸ್ ಕಾರ್ಪ್ಸ್ ಅನ್ನು ಸ್ಥಾಪಿಸಿತು.

1955: ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ 44 ದಶಲಕ್ಷ ಡಾಲರ್ ನಷ್ಟವನ್ನು ಅನುಭವಿಸಿತು.

1973: ಕಾಂಕಾರ್ಡ್ ಪ್ಯಾಸೆಂಜರ್ ವಿಮಾನ ಅಟ್ಲಾಂಟಿಕ್ ಪ್ರಯಾಣವನ್ನು ಕೇವಲ 3 ಗಂಟೆ 32 ನಿಮಿಷಗಳಲ್ಲಿ ಪೂರ್ಣಗೊಳಿಸಿತು.

2004: ನಾಗರೀಕ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಭಾರತಕ್ಕೆ ತಂತ್ರಜ್ಞಾನವನ್ನು ನೀಡಲು ಅಮೇರಿಕಾ ನಿರ್ಧರಿಸಿತು.

2007: ಬರ್ಮಾದಲ್ಲಿ ಪ್ರತಿಭಟನೆಗೆ ಸಾತ್ ಕೊಡಲು ಸನ್ಯಾಸಿಗಳು ಸೇರಿದರಿಂದ ಕೇಸರಿ ಕ್ರಾಂತಿ ಆರಂಭವಾಯಿತು.

2008: 1500ರ ದಶಕದ ಪೋರ್ಚುಗೀಸ್ ನೌಕಾಘಾತವು ನಮೀಬಿಯಾ ವಜ್ರದ ಗಣಿ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1820: ಮಹಿಳಾ ಶಿಕ್ಷಣ ಮತ್ತು ವಿಧವೆ ಮರುಮದುವೆಗಾಗಿ ಶ್ರಮಿಸಿದ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರು ಜನಿಸಿದರು.

1876: ಭಾರತೀಯ ಕವಿ, ವಕೀಲ ಮತ್ತು ರಾಜಕಾರಣಿ ಗುಲಾಂ ಭಿಕ್ ನೈರಂಗ್ ಜನಿಸಿದರು.

1895: ಕ್ರಿಯಾ ಯೋಗದ ಯೋಗ ವಿಜ್ಞಾನ ಪ್ರತಿಪಾದಿಸಿದ ಯೋಗಿರಾಜ್ ಎಂದೇ ಖ್ಯಾತಿ ಪಡೆದ ಶ್ಯಾಮಚರಣ ಲಾಹಿರಿ ನಿಧನರಾದರು.

1923: ಹಿಂದಿ ಚಲನಚತ್ರ ಖ್ಯಾತಿಯ ನಟ, ನಿರ್ಮಾಪಕ, ನಿರ್ದೇಶಕ ದೇವ್ ಆನಂದ್ ಜನಿಸಿದರು.

1931: ಭಾರತೀಯ ಕ್ರಿಕೆಟ್ ಆಟಗಾರ ವಿಜಯ್ ಮಂಜೇರ್ಕರ್ ಜನಿಸಿದರು.

1932: ಭಾರತದ 13 ನೇ ಪ್ರಧಾನ ಮಂತ್ರಿ ಆಗಿದ್ದ ಮನಮೋಹನ್ ಸಿಂಗ್ ಜನಿಸಿದರು.

1962: ಹಿಂದಿ ಭಾಷೆಯ ನಟ ಚಂಕಿ ಪಾಂಡೆ ಜನಿಸಿದರು.

1977: ಭಾರತೀಯ ನೃತ್ಯ ಪಟು, ನೃತ್ಯ ಸಂಯೋಜಕ ಉದಯ್ ಶಂಕರ್ ನಿಧನರಾದರು.

1989: ಗಾಯಕ, ಗೀತ ರಚನೆಕಾರ ಮತ್ತು ನಿರ್ಮಾಪಕ ಹೇಮಂತ ಕುಮಾರ್ ಮುಖ್ಯೋಪಾಧ್ಯಾಯ ನಿಧನರಾದರು.

2010: ರಾಜಕಾರಣಿ, ಶಿಕ್ಞಣ ತಜ್ಞ, ಆರ್ಥಿಕ ನೀತಿ ನಿರ್ವಾಹಕರಾಗಿದ್ದ ಅರ್ಜುನ್ ಕುಮಾರ್ ಸೇನ್ ಗುಪ್ತಾ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-25

 

ಪ್ರಮುಖ ಘಟನಾವಳಿಗಳು:

1513: ಸ್ಪೇನ್ ದೇಶದ ಪರಿಶೋಧಕ ವಾಸ್ಕೋ ನುನೆಸ್ ಡಿ ಬಲ್ಬೋವಾ ಪೆಸಿಫಿಕ್ ಮಹಾಸಾಗರವನ್ನು ಕಂಡುಹಿಡಿದರು.

1639: ಅಮೇರಿಕಾದಲ್ಲಿ ಮೊದಲ ಮುದ್ರಣಾಲಯ ಆರಂಭವಾಯಿತು.

1654: ಇಂಗ್ಲೆಂಡ್ ಮತ್ತು ಡೆನ್ಮಾರ್ಕಿನ ನಡುವೆ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕಲಾಯಿತು.

1789: ಅಮೇರಿಕಾದ ಕಾಂಗ್ರೆಸ್ ಹಕ್ಕುಗಳ ಮಸೂದೆಯನ್ನು ಪ್ರಸ್ತಾಪಿಸಿತು.

1820: ಫ್ರೆಂಚ್ ಭೌತವಿಜ್ಞಾನಿ ಫ್ರಾಂಕೋಯಿಸ್ ಅರಾಗೋ ಅವರು ವಿದ್ಯುತ್ ಕಾಂತೀಯತೆಯನ್ನು ಪತ್ತೆ ಹಚ್ಚಿ ಪ್ರಕಟಿಸಿದರು.

1878: ಬ್ರಿಟಿಷ್ ವೈದ್ಯ ಡಾ.ಚಾರ್ಲ್ಸ್ ಡ್ರೈಡೇಲ್ ತಂಬಾಕಿನ ಬಳಕೆಯ ಬಗ್ಗೆ ಮತ್ತು ಧೂಮಪಾನ ಅಪಾಯಗಳ ಬಗ್ಗೆ ಆರಂಭಿಕ ಸಾರ್ವಜನಿಕ ಆರೋಗ್ಯ ಪ್ರಕಟಣೆಗಳಲ್ಲಿ ತಿಳಿಸಿದರು.

1890: ಸೆಂಟ್ರಲ್ ಕ್ಯಾಲಿಫೋರ್ನಿಯಾದ ಸಿಕೊಯಾ ಉದ್ಯಾನವನವನ್ನು ಅಮೇರಿಕಾದ ರಾಷ್ಟ್ರೀಯ ಉದ್ಯಾನವನವೆಂದು ಸ್ಥಾಪಿಸಲಾಯಿತು.

1897: ಮೊದಲ ಬ್ರಿಟಿಷ್ ಸೇವೆಯು ಆರಂಭಿಸಲಾಯಿತು.

1926: ಹೆನ್ರಿ ಫೋರ್ಡ್ ಒಂದು ದಿನಕ್ಕೆ 8 ಗಂಟೆಗಳ, ವಾರಕ್ಕೆ 5 ದಿನಗಳ ಕೆಲಸದ ವೇಳೆಯನ್ನು ಘೋಷಿಸಿದರು.

1955: ರಾಯಲ್ ಜೋರ್ಡಾನಿಯನ್ ಏರ್ ಫೋರ್ಸ್ ಸ್ಥಾಪಿಸಲಾಯಿತು.

1985: ಅಕಾಲಿ ದಳವು ಭಾರತದ ಪಂಜಾಬ್ ರಾಜ್ಯದ ಚುನಾವಣೆ ಗೆದ್ದಿತು.

2016: ಗ್ವಿಝೌ ಪ್ರಾಂತ್ಯದಲ್ಲಿ 500 ಮೀಟರ್ ಗಳಷ್ಟು ವಿಶಾಲವಾದ ವಿಶ್ವದ ಅತಿ ದೊಡ್ಡ ರೇಡಿಯೋ ಟೆಲಿಸ್ಕೋಪ್ ಕಾರ್ಯನಿರ್ವಹಿಸಲು ಆರಂಭಿಸಿತು.

ಪ್ರಮುಖ ಜನನ/ಮರಣ:

1899: ಭಾರತೀಯ ಕವಿ ಮತ್ತು ಗೀತ ರಚನೆಕಾರ ಉದುಮಲೈ ನಾರಾಯಣ ಕವಿ ಜನಿಸಿದರು.

1916: ಭಾರತೀಯ ತತ್ವಜ್ಞಾನಿ ಮತ್ತು ಸಾಮಾಜಿಕ ಕಾರ್ಯಕರ್ತರಾದ ದೀನದಯಾಳ್ ಉಪಾಧ್ಯಾಯ ಜನಿಸಿದರು.

1920: ಭಾರತೀಯ ಇಂಜಿನಿಯರ್ ಸತೀಶ್ ಧವನ್ ಜನಿಸಿದರು.

1939: ನಟ, ನಿರ್ದೇಶಕ, ನಿರ್ಮಾಪಕ ಫಿರೋಜ್ ಖಾನ್ ಜನಿಸಿದರು.

1946: ಕ್ರಿಕೆಟ್ ಕೋಚ್ ಮತ್ತು ಆಟಗಾರ ಬಿಶನ್ ಸಿಂಗ್ ಬೇಡಿ ಅವರು ಜನಿಸಿದರು.

1981: ಭಾರತೀಯ ಹಾಕಿ ಆಟಗಾರ ರಂಣಧೀರ್ ಸಿಂಗ್ ಜೆಂಟಲ್ ನಿಧನರಾದರು.

1986: ಭಾರತೀಯ ಕಾರ್ಮಿಕರ ಒಕ್ಕೂಟದ ನಾಯಕ ಮತ್ತು ಕಾರ್ಯಕರ್ತ ದರ್ಶನ್ ಸಿಂಗ್ ಕ್ಯನೆಡಿಯನ್ ನಿಧನರಾದರು.

1990: ಪಶ್ಚಿಮ ಬಂಗಾಳದ 3ನೇ ಮುಖ್ಯಮಂತ್ರಿ ಆಗಿದ್ದ ಪ್ರಫುಲ್ಲ ಚಂದ್ರ ಸೆನ್ ನಿಧನರಾದರು.

1990: ಭಾರತೀಯ ಫುಟ್ ಬಾಲ್ ಆಟಗಾರ ರಾಜು ಗಾಯಕವಾಡ್ ಜನಿಸಿದರು.

2005: ಉರ್ದು ಸಾಹಿತ್ಯದ ಲೇಖಕ, ವಿಮರ್ಶಕ ಗುಲಾಂ ಮುಸ್ತಫಾ ಖಾನ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-24

 

ಪ್ರಮುಖ ಘಟನಾವಳಿಗಳು:

1789: ಅಮೇರಿಕಾದ ಅಟಾರ್ನಿ ಜೆನರಲ್ ಕಚೇರಿಯನ್ನು ಸ್ಥಾಪಿಸಲಾಯಿತು.

1789: ಅಮೇರಿಕಾದ ಕಾಂಗ್ರೆಸ್ ಅಂಚೆ ಕಚೇರಿಯನ್ನು ಸ್ಥಾಪಿಸಿತು.

1853: ಲಂಡನ್ನಿನ ಮೊದಲ ಪ್ರಾಂತೀಯ ದಿನಪತ್ರಿಕೆ ಆರಂಭವಾಯಿತು.

1889: ಅಲೆಕ್ಸಾಂಡರ್ ಡೇ ಡಯಲ್ ಟೈಮ್ ರೆಕಾರ್ಡರ್ ಅನ್ನು ಪೇಟೆಂಟ್ ಪಡೆದರು.

1924: ಬಾಸ್ಟನ್ನಿನ ಮ್ಯಾಸಾಚುಸೆಟ್ಸ್ ವಿಮಾನ ನಿಲ್ದಾಣ ತೆರೆಯಲಾಯಿತು.

1932: ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ಪೂನಾ ಒಪ್ಪಂದಕ್ಕೆ ಒಪ್ಪಿಗೆ ನೀಡಿದರು, ಇದರ ಅನುಸಾರಅಸ್ಪೃಷ್ಯರಿಗೆ ಭಾರತೀಯ ಪ್ರಾಂತೀಯ ಶಾಸಕಾಂಗಗಳಲ್ಲಿ ಸ್ಥಾನಗಳನ್ನು ಮೀಸಲಿಡಲಾಯಿತು.

1948: ಹೊಂಡಾ ಮೋಟಾರ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1979: ಮೊದಲ ಕಂಪ್ಯೂಟರ್ ಮಾಹಿತಿ ಸೇವೆಯಾಗಿ ಕಂಪ್ಯೂಸರ್ವ್ ಕಾರ್ಯಾಚರಣೆಯನ್ನು ಆರಂಭಿಸಿತು.

2002: ಗುಜರಾತಿನ ಗಾಂಧಿನಗರದಲ್ಲಿನ ಅಕ್ಷರಧಾಮ ದೇವಸ್ಥಾನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದರು.

2014: ಮಾರ್ಸ್ ಕಕ್ಷಗಾಮಿ ಮಿಷನ್ (MOM) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೂಲಕ ಭೂ ಕಕ್ಷೆಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿಸಲ್ಪಟ್ಟಿತು.

ಪ್ರಮುಖ ಜನನ/ಮರಣ:

1861: ಭಾರತೀಯ ಕಾರ್ಯಕರ್ತೆ, ಸ್ವಾಂತಂತ್ರ ಹೋರಾಟಗಾರ್ತಿ ಭಿಕಾಜಿ ಕಾಮ ಜನಿಸಿದರು.

1918: ಭಾರತ ಮೂಲದ ಅಮೇರಿಕನ್ ಸೈದ್ಧಾಂತಿಕ ರಸಾಯನಶಾಸ್ತ್ರಜ್ಞ ದಿವಾರ್-ಚಾಟ್-ಡುನ್ಕಾನ್ಸನ್ ಮಾದರಿಯನ್ನು ಅಭಿವೃದ್ಧಿ ಪಡಿಸಿದ ಮೈಕಲ್ ಜೆ.ಎಸ್.ದಿವಾರ್ ಜನಿಸಿದರು.

1925: ಭಾರತೀಯ ಮನಃಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಔತಾರ್ ಸಿಂಗ್ ಪೈಂತಲ್ ಜನಿಸಿದರು.

1936: ಭಾರತೀಯ ವ್ಯಾಪಾರಿ ಸಿವಂತಿ ಆದಿತನ್ ಜನಿಸಿದರು.

1950: ಕ್ರಿಕೆಟ್ ಆಟಗಾರ ಮೊಹಿಂದರ್ ಅಮರ್ನಾಥ್ ಜನಿಸಿದರು.

1972: ತೆಲಗು ಚಿತ್ರಕಥೆಗಾರ, ನಿರ್ದೇಶಕ ಶ್ರೀನು ವೈತ್ಲಾ ಜನಿಸಿದರು.

1984: ಫುಟ್ ಬಾಲ್ಆಟಗಾರ ಅನ್ವರ್ ಅಲಿ ಜನಿಸಿದರು.

2002: ಭಾರತೀಯ ಭೌತವಿಜ್ಞಾನಿ ಮತ್ತು ಪವನಶಾಸ್ತ್ರಜ್ಞ ಭಾರತದ ದೂರದ ಸಂವೇದನೆಯ ಪಿತಾಮಹ ಎಂದು ಪರಿಗಣಿಸಲಾದ ಪಿಶಾರೋತ್ ರಾಮ ನಿಧನರಾದರು.

2006: ಭರತನಾಟ್ಯ ಪ್ರವೀಣೆ, ನಟಿ ಪದ್ಮಿನಿ ನಿಧನರಾದರು.

2012: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟ ಸುರೇಂದ್ರನಾಥ್ ತಿಲಕನ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-23

 

ಪ್ರಮುಖ ಘಟನಾವಳಿಗಳು:

1642: ಕೇಂಬ್ರಿಡ್ಜಿನಲ್ಲಿನ ಹಾರ್ವರ್ಡ್ ಕಾಲೇಜು ಮೊದಲ ಬಾರಿಗೆ ಪ್ರಾರಂಭವಾಯಿತು.

1803: ಬ್ರಿಟಿಷ್ ಮೇಜರ್ ಜೆನೆರಲ್ ಸರ್ ಆರ್ಥರ್ ವೆಲ್ಲೆಸ್ಲೆ ಭಾರತದ ಅಸ್ಸಾಯೆಯಲ್ಲಿ ಮರಾಠರನ್ನು ಸೋಲಿಸಿದರು.

1846: ಖಗೋಳಶಾಸ್ತ್ರಜ್ಞ ಜೊಹಾನ್ ಗಾಟ್ಫ್ರೈಡ್ ಗ್ಯಾಲಿ ನೆಪ್ಟ್ಯೂನ್ ಗ್ರಹವನ್ನು ಕಂಡುಹಿಡಿದಿರುವುದಾಗಿ ಘೋಷಿಸಿದರು.

1879: ರಿಚರ್ಡ್ ರೋಡ್ಸ್ ಆಡಿಯೋಫೋನ್ ಎಂಬ ಶ್ರವಣ ಯಂತ್ರವನ್ನು ಕಂಡುಹಿಡಿದರು.

1884: ಅಮೇರಿಕನ್ ಹರ್ಮನ್ ಹಾಲೆರಿತ್ ತನ್ನ ಯಾಂತ್ರಿಕ ಟ್ಯಾಬ್ಯುಲೇಟಿಂಗ್ ಯಂತ್ರಕ್ಕಾಗಿ ಪೇಟೆಂಟ್ ಪಡೆದರು. ಇದು ಡಾಟಾ ಸಂರಕ್ಷಣೆಯ ಆರಂಭವಾಯಿತು.

1887: ಅಲಹಬಾದ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1908: ಆಲ್ಬರ್ಟಾ ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.

1986: ಅಮೇರಿಕದ ಕಾಂಗ್ರೆಸ್ ಸರ್ಕಾರವು ರೋಜಾ ಹೂವನ್ನು ತಮ್ಮ ದೇಶದ ರಾಷ್ಟ್ರೀಯ ಹೂವಾಗಿ ಆಯ್ಕೆ ಮಾಡಿತು.

1998: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಭಾರತದ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಕಾಶ್ಮೀರದ ಬಗ್ಗೆ ಚರ್ಚಿಸಿದರು.

2002: ವೆಬ್ ಬ್ರೌಸರ್ ಮೊಜಿಲ್ಲಾ ಫಯರ್ ಫಾಕ್ಸ್ ಮೊದಲ ಸಾರ್ವಜನಿಕ ಆವೃತ್ತಿ “ಫೀನಿಕ್ಸ್ 0.1” ಬಿಡುಗಡೆಮಾಡಲಾಯಿತು.

2007: ಭಾರತೀಯ ತೈಲ ಮಂತ್ರಿ ಮುರಳಿ ದೇವ್ರಾ ಅವರು ಸರ್ಕಾರಿ ಸ್ವಾಮ್ಯದ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಓ.ಎನ್.ಜಿ.ಸಿ) ಮತ್ತು ಮಯನ್ಮಾರ್ ಆಯಿಲ್ ಮತ್ತು ಗ್ಯಾಸ್ ಎಂಟರ್ ಪ್ರೈಸಸ್ ನಡುವಿನ ಮೂರು ಒಪ್ಪಂದಗಳನ್ನು ಸಹಿ ಮಾಡಿದರು.

2012: ವಿಜ್ಞಾನಿಗಳು ಸ್ತನ ಕ್ಯಾನ್ಸರಿನ ನಾಲ್ಕು ತಳೀಯವಾಗಿ ಬರುವ ವಿಭಿನ್ನ ರೀತಿಗಳನ್ನು ಪತ್ತೆ ಮಾಡಿದರು.

ಪ್ರಮುಖ ಜನನ/ಮರಣ:

1902: ತೆಲಗು ರಂಗಭೂಮಿ ಕಲಾವಿದ ಮತ್ತು ಚಿತ್ರನಟ ಎಸ್.ನರಸಿಂಹರಾವ್ ಜನಿಸಿದರು.

1908: ಖ್ಯಾತ ಹಿಂದಿ ಕವಿ ರಾಮ್ಧಾರಿ ಸಿಂಗ್ ದಿನಕರ್ ಜನಿಸಿದರು.

1912: ಲೇಖಕ ಗುಲಾಮ್ ಮುಸ್ತಫ ಖಾನ್ ಜನಿಸಿದರು.

1935: ಭಾರತೀಯ ನಟ ಪ್ರೇಮ್ ಚೋಪ್ರ ಜನಿಸಿದರು.

1952: ಭಾರತೀಯ ಕ್ರಿಕೆಟ್ ಆಟಗಾರ ಅನ್ಶುಮನ್ ಗಾಯಕವಾಡ್ ಜನಿಸಿದರು.

1957: ಖ್ಯಾತ ಹಿಂದಿ ಹಿನ್ನೆಲೆ ಗಾಯಕ ಕುಮಾರ್ ಸಾನು ಜನಿಸಿದರು.

1967: ಭಾರತೀಯ ಕ್ರಿಕೆಟಿಗ ಪ್ರಶಾಂತ್ ವೈದ್ಯ ಜನಿಸಿದರು.

1974: ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ನಿಧನರಾದರು.

1996: ಖ್ಯಾತ ನಟಿ ಸಿಲ್ಕ್ ಸ್ಮಿತಾ ನಿಧನರಾದರು.

2015: ಭಾರತೀಯ ತತ್ವಜ್ಞಾನಿ ದಯಾನಂದ ಸರಸ್ವತಿ ಅವರು ನಿಧನರಾದರು.