Categories
e-ದಿನ

ಸೆಪ್ಟೆಂಬರ್-22

 

ಪ್ರಮುಖ ಘಟನಾವಳಿಗಳು:

1772: ಪೋಲೆಂಡಿನ ಮೊದಲ ವಿಭಜನೆಯು ಆಸ್ಟ್ರಿಯಾ, ಪ್ರಶಯ್ಯಾ ಮತ್ತು ರಷ್ಯಾದಿಂದ ಅಂಗೀಕರಿಸಲ್ಪಟ್ಟಿತು.

1789: ಪೋಸ್ಟ್ ಮಾಸ್ಟರ್ ಜೆನರಲ್ ಕಛೇರಿಯನ್ನು ಖಜಾನೆ ವಿಭಾಗ ಅಡಿಯಲ್ಲಿ ರಚಿಸಲಾಯಿತು.

1903: ಇಟಲೋ ಮಾಚ್ಯೂರ್ನಿ ಐಸ್ ಕ್ರೀಂ ಕೋನಿಗೆ ಪೇಟೆಂಟ್ ಪಡೆದರು.

1910: ಇಂಗ್ಲೆಂಡಿನ ಮೊದಲ ವಿಮಾನಯಾನ ಆರಂಭ ಮಾಡಲಾಯಿತು.

1965: 1965ರ ಭಾರತ-ಪಾಕಿಸ್ತಾನಿ ಯುದ್ಧ ಕಾಶ್ಮೀರದ ಮೇಲೆ ಮತ್ತು ಪಾಕಿಸ್ತಾನದ ನಡುವೆ ಯುನೈಟೆಡ್ ನೇಷನ್ಸ್ ಕದನ ವಿರಾಮಕ್ಕೆ ಕರೆಯಂತೆ ಮುಕ್ತಾಯಗೊಂಡಿತು.

1968: ಇರಾಕ್ ಸಂವಿಧಾನವನ್ನು ಅಳವಡಿಸಿಕೊಂಡಿತು.

1980: ಇರಾನ್ ಮತ್ತು ಇರಾಕ್ ನಡುವಿನ ಮೂರು ವಾರಗಳ ವಿರಳ ಯುದ್ಧದ ನಂತರ, ಪಶ್ಚಿಮ ಏಷಿಯಾದ ಎರಡು ದೇಶಗಳ ನಡುವೆ ಧೀರ್ಘ ಯುದ್ಧ ಆರಂಭವಾಯಿತು.

1988: ನ್ಯಾಷನಲ್ ಜಿಯೋಗ್ರಫಿಕ್ ನಿಯತಕಾಲಿಕೆಯ ಪ್ರಕಟಣೆ ಆರಂಭವಾಯಿತು.

2002: ಫ್ರಾನ್ಸ್ ತನ್ನ ಸೈನ್ಯವನ್ನು ಐವರಿಕೋಸ್ಟಿಗೆ ಕಳುಹಿಸಿತು.

2011: ಸಿ.ಇ.ಆರ್.ಎನ್ ವಿಜ್ಞಾನಿಗಳು ನ್ಯೂಟ್ರಿನೋಗಳ ಬೆಳಕಿನ ವೇಗವನ್ನು ಮುರಿಯುವುದನ್ನು ಪತ್ತೆ ಮಾಡಿದರು.

ಪ್ರಮುಖ ಜನನ/ಮರಣ:

1539: ಸಿಖ್ ಪಂಥದ ಗುರು ಗುರುನಾನಕ್ ದೇವ್ ನಿಧನರಾದರು.

1791: ಭೌತವಿಜ್ಞಾನಿ ಮೈಕೆಲ್ ಫ್ಯಾರಡೇ ನಿಧನರಾದರು.

1887: ಭಾರತೀಯ ಶಿಕ್ಷಣ ತಜ್ಞ ಭಾವ್ರಾವ್ ಪಾಟಿಲ್ ಜನಿಸಿದರು.

1930: ಖ್ಯಾತ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ ಜನಿಸಿದರು.

1956: ಪಂಜಾಬಿ ನಟಿ ರಂಜಿತಾ ಕೌರ್ ಜನಿಸಿದರು.

1970: ಖ್ಯಾತ ಬಂಗಾಲಿ ಲೇಖಕ ಶರದೇಂದು ಬಂಡೋಪಾಧ್ಯಾಯ ನಿಧನರಾದರು.

1976: ನಟ, ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಜನಿಸಿದರು.

1991: ಮರಾಠ ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಪ್ರಖ್ಯಾತ ಭಾರತೀಯ ನಟಿ ದುರ್ಗಾ ಕೋಟೆ ಅವರು ನಿಧನರಾದರು.

2009: ತೆಲುಗು ಮತ್ತು ತಮಿಳು ಭಾಷೆಯ ನಟಿ, ಗಾಯಕಿ ಎಸ್.ವರಲಕ್ಷ್ಮಿ ನಿಧನರಾದರು.

2011: ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-21

ಪ್ರಮುಖ ಘಟನಾವಳಿಗಳು:

1677: ಜಾನ್ ಮತ್ತು ನಿಕೋಲಾಸ್ ವಾನ್ ಡೆರ್ ಹೈಡನ್ ಅಗ್ನಿ ಶಾಮಕ ಯಂತ್ರಕ್ಕಾಗಿ ಪೇಟೆಂಟ್ ಪಡೆದರು.

1746: ಫ್ರೆಂಚ್ ಸೇನೆಯು ಮದ್ರಾಸನ್ನು ಆಕ್ರಮಿಸಿತು.

1784: ಅಮೇರಿಕಾದಲ್ಲಿ ಮೊದಲ ದಿನಪತ್ರಿಕೆ ಮುದ್ರಿಸಲಾಯಿತು

1857: ಬಹಾದೂರ್ ಷಾ ಜಫರ್-II ಬ್ರಿಟಿಷ್ ಪಡೆಗಳ ವಿರುದ್ಧ ಶರಣಾದರು

1895: ಮೊದಲ ವಾಹನ ತಯಾರಕ ಡ್ಯೂರಿಯಾ ಮೋಟಾರ್ ವ್ಯಾಗನ್ ಸಂಸ್ಥೆ ತೆರೆಯಲಾಯಿತು.

1905: ಅಟ್ಲಾಂಟ ಜೀವ ವಿಮಾ ಸಂಸ್ಥೆ ಸ್ಥಾಪಿಸಲಾಯಿತು.

1930: ಜೊಹಾನ್ ಆಸ್ಟರ್ಮೇಯರ್ ಫ್ಲಾಶ್ ಬಲ್ಬಿಗೆ ಪೇಟೆಂಟ್ ಪಡೆದರು .

1945: ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ ನೀಡುವುದಾಗಿ ಭಾಷೆ ನೀಡಿದರು..

1948: ರಾಯಿಟರ್ಸ್ ಮತ್ತು ಭಾರತ ಮತ್ತು ಈಸ್ಟರ್ನ್ ನ್ಯೂಸ್ಪೇಪರ್ ಸೊಸೈಟಿ ನಡುವೆ ಸಹಿ ಹಾಕಿದ ಒಪ್ಪಂದದ ಅಡಿಯಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ರಚಿಸಲಾಯಿತು.

1949: ಮಣಿಪುರವನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು.

1971: ಬ್ರಿಟಿಷ್ ರಾಯಲ್ ಏರ್ಫೋರ್ಸ್ ಕೇಂಬ್ರಿಡ್ಜೆಶ್ ನಗರದಲ್ಲಿ ಅಪ್ಪಳಿಸಿದ ಕಾರಣ 3 ಜನ ಮೃತರಾದರು.

1981: ಸ್ಯಾಂಡ್ರಾ ಡೆ ಓ’ಕಾನರ್ ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಮೂರ್ತಿಯಾದರು

1984: ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆನಿಮಲ್ ಜೆನೆಟಿಕ್ಸ್ ಅನ್ನು ಸ್ಥಾಪಿಸಲಾಯಿತು.

1990: ಮಂಡಲ್ ಆಯೋಗದ ವರದಿ ಜಾರಿಗೊಳಿಸಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿತು.

1994: ಗುಜರಾತಿನ ಸೂರತ್ತಿನಲ್ಲಿ ನ್ಯುಮೋನಿಕ್ ಪ್ಲೇಗ್ ರೋಗ ಹರಡಿತು.

2004: ದುಬೈನ ಬುರ್ಜ್ ನಿರ್ಮಾಣ ಆರಂಭವಾಯಿತು.

2008: 20ನೇ ಶತಮಾನದ ಅತಿದೊಡ್ಡ ಒರಟಾದ ವಜ್ರವನ್ನು ಲೆಥೊಸೋ ಮೈನಿನಲ್ಲಿ ಪತ್ತೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1862: ತೆಲಗು ಕವಿ, ಕಥೆಗಾರ, ವಿಮರ್ಶಕ ವೆಂಕಟ್ ಅಪ್ಪಾರಾವ್ ಗುರ್ಜಾದ್ ಜನಿಸಿದರು.

1895: ಖ್ಯಾತ ಬರಹಾಗಾರ ಅನ್ನಪೂರ್ಣಾನಂದ ಜನಿಸಿದರು .

1898: ಖ್ಯಾತ ಪತ್ರಕರ್ತ ತುಷಾರ್ ಕಂಠಿ ಘೋಷ್ ಜನಿಸಿದರು .

1912: ಭಾರತದ ಖ್ಯಾತ ರಾಜಕಾರಣಿ ಫಿರೋಜ್ ಗಾಂಧಿ ಜನಿಸಿದರು.

1933: ಆನಿ ಬೆಸೆಂಟ್, ಮಹಾನ್ ಸಮಾಜಿಕ ಕಾರ್ಯಕರ್ತೆ ಮತ್ತು ಹೋಮ್ ರೂಲ್ ಚಳವಳಿಯ ಸಂಸ್ಥಾಪಕ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್ 20

 

ಪ್ರಮುಖ ಘಟನಾವಳಿಗಳು:

1839: ನೆಧರ್ಲ್ಯಾಂಡಿನಲ್ಲಿ ಮೊದಲ ರೈಲು ರಸ್ತೆ ತೆರೆಯಲಾಯಿತು

1848: ಅಮೇರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ ಅನ್ನು ರಚಿಸಲಾಯಿತು.

1857: 1857ರ ಭಾರತೀಯ ದಂಗೆಯು ಈಸ್ಟ್ ಇಂಡಿಯಾ ಕಂಪನಿಗೆ ನಿಷ್ಟಾವಂತ ಸೈನಿಕರು ದೆಹೆಲಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಮುಕ್ತಾಯವಾಯಿತು.

1859: ಜಾರ್ಜ್ ಸಿಂಪ್ಸನ್ ವಿದ್ಯುತ್ ಶೇಣಿಗೆ ಪೇಟೆಂಟ್ ಪಡೆದರು.

1878: ದಿ ಹಿಂದು, ಆಂಗ್ಲ ಭಾಷೆಯ ದೈನಂದಿನ ದಿನಪತ್ರಿಕೆಯಾಗಿ ಮೊದಲ ಬಾರಿಗೆ ಪ್ರಕಟವಾಯಿತು.

1891: ಅಮೇರಿಕಾದ ಸ್ಪ್ರಿಂಗ್ ಫೀಲ್ಡಿನಲ್ಲಿ ಮೊದಲ ಗ್ಯಾಸೊಲೀನ್ ಚಾಲಿತ ಕಾರನ್ನು ಪರಿಚಯಿಸಲಾಯಿತು.

1932: ಅಸ್ಪೃಶ್ಯತೆಯ ವಿರುದ್ಧ ಮಹಾತ್ಮಾ ಗಾಂಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

1954: ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ಆದ ಫೋಟ್ರಾನ್ ಚಲಾಯಿಸಲಾಯಿತು.

1989: ಐಪಿಕೆಎಫ್ ಶ್ರೀಲಂಕಾದಲ್ಲಿ ಎಲ್ ಟಿ ಟಿ ಇ ವಿರುದ್ಧ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತು. ಎಲ್ ಟಿ ಟಿ ಇ ಪ್ರತಿಯಾಗಿ ಭಾರತೀಯ ಶಸ್ತ್ರಾಸ್ತ್ರ ಪಡೆಗಳ ವಿರುದ್ಧ ಎಲ್ಲಾ ಕಾರ್ಯಾಚರಣೆಯನ್ನು ನಿಲ್ಲಿಸಿತು.

1993: ಪ್ರಧಾನಿ ನರಸಿಂಹ ರಾವ್ ಟೆಹರಾನಿನಲ್ಲಿ ಮೂರು ದಿನಗಳ ಭೇಟಿಗಾಗಿ ಆಗಮಿಸಿದರು.

2002: ಭಾರತದ ಪಶ್ಚಿಮ ಗುಜರಾತಿನಲ್ಲಿ ಕೋಮುಘರ್ಷಣೆ ನಡೆದಾಗ ಗುಂಪುಗಳ ಚದುರಿಸಲು ಪೋಲಿಸ್ ಹಾರಿಸಿದ ಗುಂಡಿನಿಂದ ಒಬ್ಬ ಸತ್ತು 5 ಮಂದಿ ಗಾಯಗೊಂಡರು.

2004: ಭಾರತದ ಬಾಹ್ಯಾಕಾಶ ಸಂಸ್ಥೆಯು ರಾಷ್ಟ್ರದ ಮೊದಲ ಶೈಕ್ಷಣಿಕ ಸೇವೆಗಳಿಗೆ ಬಳಸಲು ಉಪಗ್ರಹವನ್ನು ಯಶಸ್ವಿಯಾಗಿ ಆರಂಭಿಸಿತು.

ಪ್ರಮುಖ ಜನನ/ಮರಣ:

1819: ಗೋವಾದ ಕ್ರಾಂತಿಕಾರಿ ವಿಜ್ಞಾನಿ ಜೋಸ್ ಕಸ್ಟೋಡಿಯೋ ಫರಿಯಾ ನಿಧನರಾದರು.

1881: ಖ್ಯಾತ ಮರಾಠಿ ಲೇಖಕ ಪಂಡಿತ್ ಕಾಶಿನಾಥ್ ಬಾಬಾಜಿ ಜನಿಸಿದರು.

1911: ಭಾರತೀಯ ತತ್ವಜ್ಞಾನಿ ಮತ್ತು ಕಾರ್ಯಕರ್ತ ಶ್ರೀರಾಮ್ ಶರ್ಮ ಜನಿಸಿದರು.

1923: ಭಾರತೀಯ ನಟ, ನಿರ್ಮಾಪಕ ಅಕ್ಕಿನೇನಿ ನಾಗೇಶ್ವರ ರಾವ್ ಜನಿಸಿದರು.

1934: ಭಾರತೀಯ ವ್ಯಂಗ್ಯಚಿತ್ರಕಾರ, ಪತ್ರಕರ್ತ, ಮತ್ತು ಕಾರ್ಯಕರ್ತ ರಜಿಂದರ್ ಪುರಿ ಜನಿಸಿದರು.

1940: ಪತ್ರಕರ್ತ ಮತ್ತು ಮುದ್ರಣಾಲಯದ ನಿರ್ದೇಶಕ ಸರೋಜ್ ಲಾಲ್ವಾನಿ ಜನಿಸಿದರು.

1946: ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಮಾರ್ಕಂಡೇಯಕಾಟ್ಜು ಜನಿಸಿದರು.

1949: ಭಾರತೀಯ ನಿರ್ದೇಶಕ, ನಿರ್ಮಾಪಕ, ಮತ್ತು ಚಿತ್ರರಚನೆಕಾರ ಮಹೇಶ್ ಭಟ್ ಜನಿಸಿದರು.

2015: ಭಾರತೀಯ ಉದ್ಯಮಿ ಜಗ್ಮೋಹನ್ ದಾಲ್ಮಿಯ ಅವರು ನಿಧನರಾದರು.

 

Categories
e-ದಿನ

ಸೆಪ್ಟೆಂಬರ್ 19

 

ಪ್ರಮುಖ ಘಟನಾವಳಿಗಳು:

1778: ಕಾಂಟಿನೆಂಟಲ್ ಕಾಂಗ್ರೆಸ್ ಅಮೇರಿಕಾದ ಮೊದಲ ಬಡ್ಜೆಟ್ ಅನ್ನು ಅನುಮೋದಿಸಿತು.

1838: ಎಫ್ರೇಮ್ ಮೋರಿಸ್ ರೈಲ್ ರೋಡ್ ಬ್ರೇಕಿಗೆ ಪೇಟೆಂಟ್ ಪಡೆದರು.

1849: ಕ್ಯಾಲಿಫೋರ್ನಿಯಾದ ಅಟ್ಲಾಂಟಾದಲ್ಲಿ ಮೊದಲ ವಾಣಿಜ್ಯ ಲಾಂಡ್ರಿಯನ್ನು ಸ್ಥಾಪಿಸಲಾಯಿತು.

1865: ಅಟ್ಲಾಂಟ ವಿಶ್ವದ್ಯಾನಿಲಯವು ಸ್ಥಾಪನೆಯಾಯಿತು.

1888: ವಿಶ್ವದ ಮೊದಲ ಸೌಂದರ್ಯ ಸ್ಪರ್ಧೆ ನಡೆಸಲಾಯಿತು.

1893: ನ್ಯೂಜಿಲ್ಯಾಂಡ್ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಿದ ಮೊದಲ ರಾಷ್ಟ್ರ.

1950: ಪ್ಯಾರಿಸಿನಲ್ಲಿ ಯುರೋಪಿಯನ್ ಪೇಮೆಂಟ್ ಯೂನಿಯನ್ ರೂಪಿತವಾಯಿತು.

1950: ಯುನೈಟೆಡ್ ನೇಷನ್ಸ್ ಅಸ್ಸೆಂಬ್ಲಿಯು ನ್ಯೂಯಾರ್ಕಿನಲ್ಲಿ ಕಮ್ಮ್ಯುನಿಸ್ಟ್ ಚೀನಾವನ್ನು ಪ್ರವೇಶಿಸಲು ಭಾರತೀಯ ಸೋವಿಯೆತ್ ಪ್ರಸ್ತಾಪವನ್ನು ತಿರಸ್ಕರಿಸಿತು.

1960: ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿಯ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.

1965: ಚೀನಾದಲ್ಲಿ ನಾಲ್ಕು ದಿನದೊಳಗೆ ಕೋಟೆಗಳನ್ನು ಕೆಡವಲು ಸರ್ಕಾರವು ಭಾರತಕ್ಕೆ ನೀಡಿದ್ದ ಅಲ್ಟಿಮೇಟಂ ಅನ್ನು ವಿಸ್ತರಿಸಿತು.

1990: ಯೋಜನಾ ಆಯೋಗವು 8ನೇ ಪಂಚ ವಾರ್ಷಿಕ ಯೋಜನೆಗೆ 6,10,000 ಕೋಟಿಯ ಪ್ರಸ್ತಾಪವನ್ನು ಘೊಷಿಸಿತು.

1995: ಭಾರತದ ಪ್ರಧಾನಿ ತುರ್ಕ್ಮೆನಿಸ್ತಾನ್ ಮತ್ತು ಕೈರ್ಗಿಸ್ತಾನದ ಮಧ್ಯ ಏಷಿಯಾ ರಿಪಬ್ಲಿಕ್ ಗಳಿಗೆ 5 ದಿನಗಳ ಪ್ರವಾಸಕ್ಕಾಗಿ ಹೊರಟರು.

1996: ಭಾರತೀಯ ಅಭಿವೃದ್ಧಿ ಫೋರಂ ಭಾರತಕ್ಕಾಗಿ 7 ಬಿಲಿಯನ್ ಡಾಲರನ್ನು ಹೊಣೆ ತೆಗೆದುಕೊಂಡಿತು.

ಪ್ರಮುಖ ಜನನ/ಮರಣ:

1581: ಗುರು ರಾಮ್ದಾಸ್ ಜಿ ನಿಧನರಾದರು.

1704: ಗುರುಗೋವಿಂದ್ ಸಿಂಗ್ ನಿಧನರಾದರು.

1726: ಖಂಡೋಬಲ್ಲಾಳ್ ನಿಧನರಾದರು.

1911: ಖ್ಯಾತ ಹಿಂದಿ ಬರಹಗಾರ, ಕವಿ ಭೋಯಿ ಭೀಮಣ್ಣ ಜನಿಸಿದರು.

1912: ರೂಬೆನ್ ಡೇವಿಡ್, ಯಹೂದಿ ಗುಜರಾತಿ ಭಾರತೀಯ ಪಶುವೈದ್ಯ ಮತ್ತು ಮೃಗಾಲಯ ಸಂಸ್ಥಾಪಕ ಜನಿಸಿದರು.

1933: ಮಾಜಿ ಮುಖ್ಯ ಆರ್ಮಿ ಜೆನೆರಲ್ ಸುನಿತ್ ಫ್ರಾನ್ಸಿಸ್ ರೋಡ್ರಿಗ್ಸ್ ಜನಿಸಿದರು.

1936: ಭಾರತೀಯ ಹಾಡುಗಾರ ಮತ್ತು ಸಂಗೀತ ಸಂಜೋಜಕ ವಿಷ್ಣು ನಾರಾಯಣ್ ಭಟ್ಕಂದೆ ನಿಧನರಾದರು.

1937: ವಿಷ್ಣು ನಾರಾಯಣ್ ಮಟ್ಕಂಡೆ ನಿಧನರಾದರು.

1977: ಭಾರತೀಯ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರ ಜನಿಸಿದರು.

2004: ಭಾರತೀಯ ನೃತ್ಯಗಾತಿ ದಮಯಂತಿ ಜೋಷಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್ 18

 

ಪ್ರಮುಖ ಘಟನಾವಳಿಗಳು:

1789: ಮೊದಲ ಸಾಲವನ್ನು ಅಧ್ಯಕ್ಷರಿಗೂ ಮತ್ತು ಕಾಂಗ್ರೆಸ್ಸಿನವರ ವೇತನವನ್ನು ಪಾವತಿಲಸಲು ಪಡೆಯಲಾಯಿತು.

1803: ಬ್ರಿಟೀಷರು ಪುರಿಯನ್ನು ಯಾವುದೇ ಕಷ್ಟವಿಲ್ಲದೆ ಮರಾಠರಿಂದ ವಶಪಡಿಸಿಕೊಂಡರು.

1808: ರಾಯಲ್ ಥಿಯೇಟರ್ ದುರಸ್ಥಿಗೊಂಡ ನಂತರ ಶೇಕ್ಸ್ ಪಿಯರ್ ಅವರ ಮ್ಯಾಕ್ಬೆತ್ ನಾಟಕವು ಮತ್ತೆ ಮರುಪ್ರದರ್ಶನವಾಯಿತು.

1882: ಪೆಸಿಫಿಕ್ ಸ್ಟಾಕ್ ಎಕ್ಸ್ಚೇಂಜ್ ತೆರೆಯಲಾಯಿತು.

1905: ವಿದ್ಯುತ್ ಟ್ರಾಮ್ ಲೈನ್ ರೋಟರ್ ಡ್ಯಾಮಿನಲ್ಲಿ ತೆರೆಯಲಾಯಿತು.

1927: ಮಹರಾಷ್ಟ್ರ ವಾಣಿಜ್ಯ ಮಂಡಳಿ ಸ್ಥಾಪಿಸಲಾಯಿತು.

1947: ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಅಂಗೀಕರಿಸಲಾಯಿತು.

1948: ಹೈದರಾಬಾದಿನ ಸೈನ್ಯದ ನಿಜಾಮನ ಶರಣಾಗತಿನ್ನು ಭಾರತದ ಸೇನೆಯು ಸ್ವೀಕರಿಸಿದ ನಂತರ ಆಪರೇಷನ್ ಪೋಲೋ ಕೊನೆಗೊಂಡಿತು.

1965: ಚೀನಾ ಭಾಗದಲ್ಲಿರುವ ಚೀನಾ-ಸಿಕ್ಕಿಂ ಗಡಿಯಲ್ಲಿ ಭಾರತೀಯ ನೆಲೆಗಳನ್ನು ಪತ್ತೆಹಚ್ಚುವಲ್ಲಿ ಕಮ್ಯುನಿಸ್ಟ್ ಸರ್ಕಾರವು ತೀವ್ರ ಪರಿಣಾಮ ಎದುರಿಸಬೇಕಾಗಬಹುದೆಂದು ಎಚ್ಚರಿಗೆ ನೀಡಿತು.

1967: ನಾಗಾಲ್ಯಾಂಡಿನಲ್ಲಿ ಇಂಗ್ಲಿಷ್ ಭಾಷೆಯನ್ನು ಅಧಿಕೃತ ಭಾಷೆಯೆಂದು ಸ್ವೀಕರಿಸಿತು.

1978: ಅಂದಿನ ಅಧ್ಯಕ್ಷರಾದ ಜಿಮ್ಮಿ ಕಾರ್ಟರ್ ಅವರ ಸಮ್ಮುಖದಲ್ಲಿ ಈಜಿಪ್ಟಿನ ಅಧ್ಯಕ್ಷ ಅನ್ವರ್-ಅಲ್-ಸದತ್ ಮತ್ತು ಇಸ್ರೇಲ್ ಪ್ರಧಾನ ಮಂತ್ರಿ ಮೇನಕೀಂ ಬೇಗಿನ್ ಶಾಂತಿ ಕಾಪಡಲು ಒಪ್ಪಂದ ಮಾಡಿದರು.

1987: ಮುಂಬರುವ ವರ್ಷಗಳಲ್ಲಿ 1000 ಪರಮಾಣು ಕ್ಷಿಪಣಿಗಳನ್ನು ತೆಗೆದುಹಾಕಲಾಗುವುದು ಎಂದು ಅಮೇರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಘೋಷಿಸಿದರು.

1997: ಕೇರಳಾದ ಕೊಟ್ಟಾಯಂನಲ್ಲಿ ಮಾಮ್ಮೆನ್ ಮಾಪಿಳ್ಳೈ ಹಾಲನ್ನು ರಾಷ್ಟ್ರಪತಿ ಕೆ.ಆರ್.ನಾರಾಯಣ್ ಉದ್ಘಾಟಿಸಿದರು.

2011: 2011ರ ಸಿಕ್ಕಿಂ ಭೂಕಂಪನವು ಈಶಾನ್ಯ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ದಕ್ಷಿಣ ಟಿಬೇಟಿನಲ್ಲಿ ಕಂಡುಬಂದಿತು.

2012: ಗೊಥೆನ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ವಿಶ್ವದ ಮೊದಲ ತಾಯಿಂದ ಮಗಳಿಗೆ ಗರ್ಭಾಂಶದ ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1879: ಅಮೇರಿಕನ್ ವಯಸ್ಕ ಶಿಕ್ಷಣತಜ್ಞ ವೆಲ್ತಿ ಹೌಸಿಂಗರ್ ಫಿಶರ್ ಜನಿಸಿದರು.

1909: ಪ್ರಸಿದ್ಧ ವ್ಯಾಪಾರಿ ಖಿಲಾಚಂದ ರಾಮ್ದಾಸ್ ಜನಿಸಿದರು.

1925: ಮಹಾರಾಷ್ಟ್ರದ ನಾಯಕ ಪ್ರಾಣ್ ಲಾಲ್ ಹರಕಿಶನ್ ದಾಸ್ ವೋರ ಜನಿಸಿದರು.

1950: ಹಿಂದಿ ನಟಿ ಶಬಾನಾ ಅಜ್ಮಿ ಜನಿಸಿದರು.

1950: ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್ ಜನಿಸಿದರು.

1992: ಭಾರತದ 6ನೇ ಉಪ ರಾಷ್ಟ್ರಪತಿಯಾಗಿದ್ದ ಮೊಹಮ್ಮದ್ ಹಿದಾಯುತ್ತುಲ್ಲ ನಿಧನರಾದರು.

1995: ಹಾಸ್ಯ ಕವಿ ಕಾಕ ಹತ್ರಾಸಿ ನಿಧನರಾದರು.

2013: ಭಾರತೀಯ ರಾಜಕಾರಣಿ ವಿಲಿಯಂ ಭಾರ್ಗವನ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್ 17

 

ಪ್ರಮುಖ ಘಟನಾವಳಿಗಳು:

1598: ಡಚ್ ನಾವಿಕರು ಮೊರೇಷಸ್ ದ್ವೀಪವನ್ನು ಪತ್ತೆ ಮಾಡಿದರು.

1789: ವಿಲ್ಲಿಯಂ ಹರಸ್ಚೆಲ್ ಶನಿಗ್ರಹದ ಉಪಗ್ರಹವಾದ ಮಿಮಾಸನ್ನು ಪತ್ತೆಮಾಡಿದರು.

1872: ಬೆಂಕಿ ಆರಿಸುವಲ್ಲಿ ಉಪಯೋಗಿಸುವ ಸಿಂಪಡಿಸುವ ಯಂತ್ರವನ್ನು ಫಿಲಿಪ್ ಡಬ್ಲ್ಯು ಪ್ರಾಟ್ ಅವರು ಪೇಟೆಂಟ್ ಪಡೆದರು.

1899: ಮೊದಲ ಬ್ರಿಟಿಷ್ ಪಡೆಗಳು ದಕ್ಷಿಣ ಆಫ್ರಿಕಾಕ್ಕೆ ಬಾಂಬೆಯನ್ನು ಬಿಟ್ಟರು.

1948: ಹೈದರಾಬಾದಿನ ನಿಜಾಮ್ ಹೈದರಾಬಾದ್ ರಾಜ್ಯದಲ್ಲಿ ತನ್ನ ಸಾರ್ವಭೌಮತ್ವವನ್ನು ಶರಣಾಗಿ ಭಾರತೀಯ ಒಕ್ಕೂಟಕ್ಕೆ ಸೇರಿದರು.

1949: ತಮಿಳುನಾಡು ರಾಜ್ಯದ ರಾಜಕೀಯ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅನ್ನು ಸಿ.ಎನ್.ಅಣ್ಣದುರೈ ಸ್ಥಾಪಿಸಿದರು.

1950: ಸರ್ಕಾರ ಇಸ್ರೇಲಿಗೆ ರಾಜತಾಂತ್ರಿಕ ಮಾನ್ಯತೆ ನೀಡಿತು.

1953: ಅಂಟಿಕೊಂಡ ಅವಳಿ ಮಕ್ಕಳ ಬೇರ್ಪಡಿಸಲು ಮಾಡಿದ ಮೊದಲ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಯಿತು.

1956: ತೈಲ ಮತ್ತು ನೈಸರ್ಗಿಕ ಅನಿಲ ಕಮಿಷನ್ (ONGC) ಸ್ಥಾಪಿಸಲಾಯಿತು.

1956: ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟಿವಿಯ ಪ್ರಸಾರ ಮಾಡಲಾಯಿತು.

1965: ಚಾವಿಂದ ಕದನವು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು.

1997: ಫೆಬ್ರವರಿ 1 1998ರಿಂದ ಜಾರಿಗೆ ಬರುವಂತೆ ಅಡ್ವಾನ್ಸ್ ರೈಲ್ವೆ ಮೀಸಲಾತಿ ಅವಧಿಯು 30 ರಿಂದ 60 ದಿನಗಳ ವರೆಗೆ ವಿಸ್ತರಿಸಲಾಯಿತು.

1999: ಭಯೋತ್ಪಾದನೆಯನ್ನು ಎದುರಿಸಲು ದಾರಿಗಳನ್ನು ಕಂಡುಕೊಳ್ಳಲು ಭಾರತ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಉನ್ನತ ಮಟ್ಟದ ಸಮಾಲೋಚನೆಗಳನ್ನು ಪ್ರಾರಂಭಿಸಿತು.

2004: ತಮಿಳನ್ನು ಭಾರತದ ಮೊದಲ ಶಾಸ್ತ್ರೀಯ ಭಾಷೆಯಾಗಿ ಘೋಷಿಸಲಾಯಿತು.

ಪ್ರಮುಖ ಜನನ/ಮರಣ:

1799: ಮಾಧವರಾವ್ ಪೇಶ್ವಾ ಸಾಮ್ರಾಜ್ಯದ ಸಮರ್ಥ ನಾಯಕ ಮತ್ತು ರಾಜತಾಂತ್ರಿಕರಾದ ಪರಶುರಾಮ ಭಾವ್ ಪಟವರ್ಧನ್ ನಿಧನರಾದರು.

1864: ಧಾರ್ಮಿಕ ಸುಧಾರಕ ಅನಾಗ್ರೀಕ್ ಧರ್ಮಪಾಲ್ ಜನಿಸಿದರು.

1879: ಭಾರತದ ಉದ್ಯಮಿ ಮತ್ತು ರಾಜಕಾರಣಿ ಪೆರಿಯಾರ್ ಇ.ವಿ,ರಾಮಸ್ವಾಮಿ ಜನಿಸಿದರು.

1915: ಖ್ಯಾತ ಕಲಾವಿದರಾದ ಎಂ.ಎಫ್.ಹುಸ್ಸೇನ್ ಜನಿಸಿದರು.

1930: ವೈಯಲಿನ್ ವಾದಕ ಲಾಲ್ ಗುಡಿ ಜಯರಾಮನ್ ಜನಿಸಿದರು.

1932: ಪತ್ರಕರ್ತ ಇಂದ್ರಜಿತ್ ಸಿಂಗ್ ಜನಿಸಿದರು.

1937: ಭಾರತೀಯ ಕವಿ ಮತ್ತು ಸಾಹಿತ್ಯ ವಿಮರ್ಶಕ ಸೀತಾಕಾಂತ್ ಮಹಾಪಾತ್ರ ಜನಿಸಿದರು.

1938: ಪ್ರಸಿದ್ಧ ಮರಾಠಿ ಕವಿ, ಕಥೆ ಬರಹಗಾರ, ವಿಮರ್ಶಕ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿಲೀಪ್ ಪುರುಶೋತ್ತಮ್ ಚಿತ್ರೆ ಜನಿಸಿದರು.

1950: ಭಾರತದ 15ನೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನಿಸಿದರು.

1986: ಭಾರತೀಯ ಕ್ರಿಕೆಟ್ ಆಟಗಾರ ರವಿಚಂದ್ರನ್ ಅಶ್ವಿನ್ ಜನಿಸಿದರು.

 

Categories
e-ದಿನ

ಸೆಪ್ಟೆಂಬರ್ 16

 

ಪ್ರಮುಖ ಘಟನಾವಳಿಗಳು:

1630: ಮ್ಯಾಸಚೂಸೆಟ್ಸ್ ಗ್ರಾಮವು ಅದರ ಹೆಸರನ್ನು ಬಾಸ್ಟನ್ ಎಂದು ಮರುನಾಮಕರಣ ಮಾಡಲಾಯಿತು.

1782: ಅಮೇರಿಕಾ ಸಂಯುಕ್ತ ಸಂಸ್ಥಾನದ ಗ್ರೇಟ್ ಸೀಲ್ ಮೊದಲ ಬಾರಿಗೆ ಬಳಸಲಾಯಿತು.

1810:ಮೆಕ್ಸಿಕೋ 300 ವರ್ಷಗಳ ಸ್ಪಾನಿಷ್ ರೂಲಿನ ನಂತರ ಸ್ಪೇನಿನಿಂದ ತನ್ನ ಸ್ವಾತಂತ್ರವನ್ನುಘೋಷಿಸಿತು.

1848: ಎಲ್ಲಾ ಫ್ರೆಂಚ್ ಪ್ರಾಂತ್ಯಗಳಲ್ಲೂ ಗುಲಾಮಗಿರಿಯನ್ನು ರದ್ದುಗೊಳಿಸಲಾಯಿತು.

1858: ಮೊದಲ ಭೂಮಾರ್ಗ ಅಂಚೆಯು ಕ್ಯಾಲಿಫೋರ್ನಿಯಾಗೆ ತಲುಪಿತು.

1861: ಬ್ರಿಟಿಷ್ ಅಂಚೆ ಕಛೇರಿಯ ಉಳಿತಾಯ ಖಾತೆಯ ಬ್ಯಾಂಕ್ ತೆರೆಯಲಾಯಿತು.

1906: ನಾರ್ವೀಜಿಯನ್ ಪರಿಶೋಧಕ ರೊವಾಲ್ಡ್ ಅಮುಂಡ್ಸನ್ ಮ್ಯಾಗ್ನೆಟಿಕ್ ದಕ್ಷಿಣ ಧ್ರುವವನ್ನು ಪತ್ತೆಮಾಡಿದರು.

1954: ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನವನ್ನು ನೀಡುವ ವಿಶೇಷ ವಿವಾಹ ಮಸೂದೆಯಲ್ಲಿ ಲೋಕಸಭೆಯು ಒಂದು ಷರತ್ತನ್ನು ಅಳವಡಿಸಿಕೊಂಡಿತು.

1967: ಟಿಬೆಟ್-ಸಿಕ್ಕಿಂ ಗಡಿಯಲ್ಲಿ ಟಿಬೇಟಿಯನ್, ಭಾರತೀಯ ಮತ್ತು ಚೀನಿ ಪಡೆಗಳು ನಾಟು-ಲಾ ಪಾಸಿನಲ್ಲಿ ಹೋರಾಟ ಮಾಡಲು ಸಜ್ಜಾದರು.

ಪ್ರಮುಖ ಜನನ/ಮರಣ:

1916: ಪ್ರಖ್ಯಾತ ಶಾಸ್ತ್ರೀಯ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ಜನಿಸಿದರು.

1916: ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಡಿ.ಆರ್.ಸಮಂತ್ ಜನಿಸಿದರು.

1929: ಶಿಕ್ಷಣತಜ್ಞ ಎರಾಮಿಲ್ಲಿ ಜನಾರ್ಧನ್ ರಾವ್ ಜನಿಸಿದರು.

1931: ವಿಶ್ವಖ್ಯಾತಿಯ ಭೌತವಿಜ್ಞಾನಿ ಜಾರ್ಜ್ ಸುದರ್ಶನ್ ಜನಿಸಿದರು.

1931: ಟೆಸ್ಟ್ ಕ್ರಿಕೆಟ್ ಅಂಪೈರ್ ಆಗಿದ್ದ ಆರ್.ರಾಮಚಂದ್ರ ರಾವ್ ಜನಿಸಿದರು.

1932: ವೈದ್ಯ ಮತ್ತು ಗಣಿತತಜ್ಞ ಮತ್ತು ನೋಬಲ್ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ರೋಸ್ ನಿಧನರಾದರು.

1954: ಸಿತಾರ್ ವಾದಕ ಸಂಜಯ್ ಬಂಡೋಪಾಧ್ಯಾಯ ಜನಿಸಿದರು.

1955: ಭಾರತದಲ್ಲಿನ ಬ್ರಿಟಿಷ್ ವಸಾಹತುಗಳ ಮಂತ್ರಿ ಲಿಯೋಪೋಲ್ಡ್ ಸಿ.ಎಂ.ಎಸ್.ಆಮ್ರಿ ನಿಧನರಾದರು.

1973: ಖ್ಯಾತ ಸಂಗೀತಗಾರ ಅಭಾಸಾಹೇಬ ಮಜುಂಮ್ದಾರ್ ನಿಧನರಾದರು.

1977: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಕೇಸರ್ ಬಾಯಿ ಕೇರ್ಕರ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್ 15

 

ಪ್ರಮುಖ ಘಟನಾವಳಿಗಳು:

1851: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಪೆನ್ನಿನ್ಸ್ಲವೇನಿಯಾದ ಫಿಲಾಡೆಲ್ಫಿಯಾದಲ್ಲಿ ಸ್ಥಾಪಿಸಲಾಯಿತು.

1857: ಟೈಪ್ ಸೆಟ್ಟಿಂಗ್ ಯಂತ್ರಕ್ಕೆ ತಿಮೋತಿ ಆಲ್ಡೆರ್ ಪೇಟೆಂಟ್ ಪಡೆದರು.

1870: ಡಚ್’ನ ಮೊದಲ ಚೇಂಬರ್ ಮರಣದಂಡನೆಯನ್ನು ರದ್ದುಗೊಳಿಸಿತು.

1904: ವಿಲ್ಬರ್ ರೈಟ್ ತನ್ನ ಮೊದಲ ವಿಮಾನವನ್ನು ಹಾರಿಸಿದರು.

1928: ಅಲೆಕ್ಸಾಂಡರ್ ಫ್ಲೆಮಿಂಗ್ ಪೆನ್ಸಿಲಿನ್ ಕಂಡುಹಿಡಿದರು.

1948: ಹಡಗಿನ ಸಾಗಿಸುವ ಭಾರತದ ಧ್ವಜ ಬಾಂಬೆ ಬಂದರನ್ನು ತಲುಪಿತು.

1959: ದೂರದರ್ಶನ (ಡಿಡಿ) ಭಾರತದ ಪಬ್ಲಿಕ್ ಸರ್ವಿಸ್ ಬ್ರಾಡ್ಕಾಸ್ಟರ್ ಅನ್ನು ದೆಹೆಲಿಯಲ್ಲಿ ಆರಂಭಿಸಲಾಯಿತು.

1988: ಲಂಡನ್ನಿನಲ್ಲಿ ಮ್ಯೂಸಿಯಂ ಆಫ್ ಮೂವಿಂಗ್ ಇಮೇಜ್ ತೆರೆಯಲಾಯಿತು.

1992: ಪೆಟ್ರೋಲ್, ಡೀಸಲ್, ಮತ್ತು ಅಡುಗೆ ಅನಿಲದ ಮೇಲೆ ದರ ಹೆಚ್ಚಿಸಲಾಯಿತು.

1998: ಗೂಗಲ್.ಕಾಂ ಒಂದು ಡೊಮೈನ್ ಹೆಸರಾಗಿ ನೊಂದಾಯಿಸಲಾಯಿತು.

ಪ್ರಮುಖ ಜನನ/ಮರಣ:

1860: ಆಧುನಿಕ ಕರ್ನಾಟಕದ ನಿರ್ಮಾತೃ ಸರ್ ಎಂ.ವಿಶ್ವೇಶ್ವರಯ್ಯ ಅವರು ಜನಿಸಿದರು.

1862: ಖ್ಯಾತ ಇತಿಹಾಸಕಾರ ಗೌರಿಶಂಕರ್ ಹಿರಾಚಂದ್ ಓಜಾ ಜನಿಸಿದರು.

1876: ಪ್ರಖ್ಯಾತ ಬಂಗಾಲಿ ಕಾದಂಬರಿಕಾರ ಮತ್ತು ಲೇಖಕ ಸರತ್ ಚಂದ್ರ ಚಟರ್ಜಿ ಜನಿಸಿದರು.

1903: ಬಲಗೈ ಬ್ಯಾಟ್ಸ್ ಮ್ಯಾನ್ ಮತ್ತು ಬಲಗೈ ವೇಗದ ಬೌಲರ್ ವಝೀರ್ ಸೈಯದ್ ಅಲಿ ಜನಿಸಿದರು.

1909: ತಮಿಳು ನಾಡಿನ 7ನೇ ಮುಖ್ಯಮಂತ್ರಿ ಆಗಿದ್ದ ಸಿ.ಎನ್.ಅಣ್ಣಾದೊರೈ ಅವರು ಜನಿಸಿದರು.

1912: ಪತ್ರಕರ್ತ ಮತ್ತು ಸಂಪಾದಕ ರುಸಿ ಕರಾಂಜಿಯ ಜನಿಸಿದರು.

1939: ಭಾರತೀಯ ಕಾನೂನ ಮಂತ್ರಿ ಆಗಿದ್ದ ಸುಬ್ರಮಣ್ಯ ಸ್ವಾಮಿ ಜನಿಸಿದರು.

1940: ಏರ್ ಫೀಲ್ಡ್ ಮಾರ್ಶಲ್ ಅನಿಲ್ ಯಶ್ವಂತ್ ಟಿಪ್ನಿಸ್ ಜನಿಸಿದರು.

 

Categories
e-ದಿನ

ಸೆಪ್ಟೆಂಬರ್ 14

 

ಪ್ರಮುಖ ಘಟನಾವಳಿಗಳು:

1682: ವೇಲ್ಸಿನ ಅತ್ಯಂತ ಹಳೆಯ ಶಾಲೆಗಳಲೊಂದಾದ ಬಿಷಪ್ ಘರ್ ಶಾಲೆ ಸ್ಥಾಪನೆಯಾಯಿತು.

1820: ಕಲ್ಕತ್ತಾದ ಅಗ್ರಿ-ಹಾರ್ಟಿಕಲ್ಚರ್ ಗಾರ್ಡನ್ ಕಾರ್ಯ ಆರಂಭಿಸಿತು.

1848: ಅಲೆಕ್ಸಾಂಡರ್ ಸ್ಟೀವರ್ಟ್ ಅಮೇರಿಕಾದಲ್ಲಿ ಮೊದಲ ಡಿಪಾರ್ಟ್ ಮೆಂಟಲ್ ಸ್ಟೋರ್ ತೆರೆದರು.

1886: ಜಾರ್ಜ್ ಕೆ ಆಂಡ್ರಿಸನ್ ಟೈಪ್ ರೈಟರ್ ರಿಬ್ಬನ್ನಿಗೆ ಪೇಟೆಂಟ್ ಪಡೆದರು.

1949: ಮೂರು ದಿನಗಳ ಚರ್ಚೆಯ ನಂತರ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂದು ಸಂಸತ್ತು ಘೋಷಿಸಿತು.

1951: ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಬೀಜರಹಿತ ಕಲ್ಲಂಗಡಿಯನ್ನು ಬೆಳೆಸಲಾಯಿತು.

1951: ಯೂರೋಪಿನ ಅತಿ ದೊಡ್ಡ ತೈಲ ಸಂಸ್ಕರಣಾಗಾರವು ಫಾಲಿಯಲ್ಲಿ ತೆರೆಯಲಾಯಿತು.

1953: ಆಂಧ್ರಪ್ರದೇಶವನ್ನು ಸ್ಥಾಪಿಸಲಾಯಿತು. ಕರ್ನೂಲ್ ಬದಲಿಗೆ ಹೈದರಾಬಾದನ್ನು ರಾಜಧಾನಿಯನ್ನಾಗಿ ಮಾಡಲಾಯಿತು.

1960: ಇರಾಕ್, ಇರಾನ್, ಕುವೈಟ್ ಮತ್ತು ಸೌದಿ ಅರೇಬಿಯಾ ಸೇರಿ ಒಪೆಕ್ (ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆ) ಅನ್ನು ರೂಪಿಸಿತು.

1965: ಪಾಕಿಸ್ತಾನ ಏರ್ಫೋರ್ಸ್ ಕಲ್ಕತ್ತಾ ಮತ್ತು ಆಗರ್ತಲಾ ನಾಗರಿಕ ವಿಮಾನ ನಿಲ್ದಾಣದ ಮೇಲೆ ಬಾಂಬನ್ನು ಸ್ಪೋಟಿಸಿತು.

1991: ಅಸ್ಸಾಂ ಅಲ್ಲಿ ಯು.ಎಲ್.ಎಫ್.ಎ ಉಗ್ರರ ವಿರುದ್ಧ ಸೈನ್ಯ “ಆಪರೇಷನ್ ರೈನೋ” ಕಾರ್ಯಾಚರಣೆ ಆರಂಭಿಸಿತು.

1992: ಸತತ 3 ದಿನಗಳ ಭಾರಿ ಮಳೆಯ ಕಾರಣ ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿ ಸುಮಾರು 2500 ಜನ ಮೃತಾದರು.

1997: ಅಹಮದಾಬಾದ್ ಮತ್ತು ಹವರಾ ಎಕ್ಸ್ಪ್ರೆಸ್ ರೈಲಿನ 4 ಭೋಗಿಗಳು ಹಳಿ ತಪ್ಪಿದ ಕಾರಣ 78 ಜನ ಸತ್ತು 250 ಜನ ಗಾಯಗೊಂಡರು.

1997: ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ ವಿಶಾಖಪಟ್ಟಣದ ಸಂಸ್ಕರಣಾಗಾರದಲ್ಲಿ ಸ್ಪೋಟಗೊಂಡು ಶೇಖರಣಾ ಟ್ಯಾಂಕುಗಳನ್ನು ನಾಶಪಡಿಸಿತು. ಸುಮಾರು 51 ಜನ ಮೃತರಾದರು.

1998: 23 ವರ್ಷಗಳಲ್ಲಿ ಮೈಕ್ರೋ ಸಾಫ್ಟ್ ವಿಶ್ವದಲ್ಲೇ ಅತಿ ದೊಡ್ಡ ಸಂಸ್ಥೆಯಾಯಿತು.

ಪ್ರಮುಖ ಜನನ/ಮರಣ:

1774: ಭಾರತದ ಮೊದಲ ಗವರ್ನರ್ ಜೆನರಲ್ ಬೆಂಟಿಕ್ ಜನಿಸಿದರು.

1868: ಸಂಸ್ಕೃತ ವ್ಯಾಕರಣದ ಸಾಹಿತಿ ಮತ್ತು ಗುರು ಸ್ವಾಮಿ ವಿರ್ಜಿನಂದ ನಿಧನರಾದರು.

1910: ಮಹಾರಾಷ್ಟ್ರದ ವ್ಯಾಪಾರಿ ಮತ್ತು ಕೈಗಾರಿಕೋಧ್ಯಮಿ ಡೆನ್ನಿಸ್ ಲಾರೆನ್ಸ್ ಎಮೊ ಜನಿಸಿದರು.

1932: ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ್ತಿ ದುರ್ಗಾ ಭಾಯಿ ಜನಿಸಿದರು.

1963: ಕ್ರಿಕೆಟ್ ಆಟಗಾರ ಮತ್ತು ಕೋಚ್ ರಾಬಿನ್ ಸಿಂಗ್ ಜನಿಸಿದರು.

1971: ಖ್ಯಾತ ಬೆಂಗಾಲಿ ಸಾಹಿತಿ ತಾರಾಶಂಕರ್ ಭಂಡೋಪಾಧ್ಯಾಯ ನಿಧನರಾದರು.

1992: ಭಾರತೀಯ ಕ್ರಿಕೆಟ್ ಆಟಗಾರ ಎಸ್.ಎ.ಬ್ಯಾನರ್ಜಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-13

 

ಪ್ರಮುಖ ಘಟನಾವಳಿಗಳು:

1500: ಪೋರ್ಚುಗೀಸ್ ಪರಿಶೋಧಕ ಮತ್ತು ನಾವಿಕ ಪೆಡ್ರೋ ಆಲ್ವಾರೆಜ್ ಭಾರತದ ಕ್ಯಾಲಿಕಟ್ಟಿಗೆ ಆಗಮಿಸಿ ಭಾರತದಲ್ಲಿ ಮೊದಲ ಯೂರೋಪಿಯನ್ ಕಾರ್ಖಾನೆಯನ್ನು ತೆರೆದರು.

1788: ನ್ಯೂಯಾರ್ಕ್ ನಗರ ಅಮೇರಿಕಾದ ಮೊದಲ ರಾಜಧಾನಿ ಆಯಿತು.

1789: ಅಮೇರಿಕಾದ ಸರ್ಕಾರವು ತನ್ನ ಮೊದಲ ಸಾಲವನ್ನು ಪಡೆಯಿತು.

1881: ಅಮೇರಿಕಾದ ಲೇವಿಸ್ ಹಾರ್ವಡ್ ಲ್ಯಾಟಿಮರ್ ಕಾರ್ಬನ್ ಫಿಲಮೆಂಟ್ ಇರುವ ವಿದ್ಯುತ್ ದೀಪವನ್ನು ಕಂಡುಹಿಡಿದರು ಮತ್ತು ಅದಕ್ಕಾಗಿ ಪೇಟೆಂಟ್ ಪಡೆದರು.

1898: ಚಲನಚಿತ್ರ ಮಾಡಲು ಬಳಸುವ ಸೆಲುಲಾಯಿಡ್ ಛಾಯಾಗ್ರಹಣದ ಪೊರೆಗೆ ಹ್ಯಾನಿಬಲ್ ವಿಲ್ಲಿಸ್ಟನ್ ಗುಡ್ವಿನ್ ಪೇಟೆಂಟ್ ಪಡೆದರು.

1948: ಭಾರತದ ಉಪ ಪ್ರಧಾನ ಮಂತ್ರಿ ವಲ್ಲಭಾಯಿ ಪಟೇಲ್ ಹೈದರಾಬಾದನ್ನು ಭಾರತೀಯ ಒಕ್ಕೂಟದಲ್ಲಿ ಸಂಯೋಜಿಸಲು ಸೈನ್ಯಕ್ಕೆ ಆದೇಶ ನೀಡಿದರು.

1948: ನ್ಯೂಯಾರ್ಕಿನ ನಗರದಲ್ಲಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಪ್ರಾರಂಭಿಸಲಾಯಿತು. ಕಲೆಗಳನ್ನು ಪ್ರದರ್ಶಿಸುವಲ್ಲಿ ಪರಿಣತಿ ಪಡೆದ ಮೊದಲ ಸಾರ್ವಜನಿಕ ಶಾಲೆ ಇದು.

1949: ಅಮೇರಿಕಾದ ಲೇಡೀಸ್ ಪ್ರೊಫೆಷನಲ್ ಗಾಲ್ಫ್ ಅಸೋಸಿಯೇಷನ್ ಅನ್ನು ಸ್ಥಾಪಿಸಲಾಯಿತು.

1955: ಸ್ವಿಜರ್ಲ್ಯಾಂಡಿನ ಸಂಶೋಧಕ ಜಾರ್ಜ್ ಡೆ ಮೆಸ್ಟ್ರಾಲ್ “ವೆಲ್ಕ್ರೋ” ಪೇಟೆಂಟ್ ಪಡೆದರು.

1956: ಐಬಿಎಂ ವಿಶ್ವದ ಮೊದಲ ಹಾರ್ಡ್ ಡಿಸ್ಕ್ ಆದ “ಐಬಿಎಂ 305” ಉತ್ಪಾದಿಸಿ ಪರಿಚಯಿಸಿತು. ಇದು 5 ಎಂಬಿಗಳ ದತ್ತಾಂಶವನ್ನು ಸಂಗ್ರಹಿಸಬಹುದಾಗಿತ್ತು.

1971: ವಿಶ್ವ ಹಾಕಿ ಅಸೋಸಿಯೇಷನ್ ರೂಪಿತವಾಯಿತು.

1977: ಮೊದಲ ಬಾರಿಗೆ ಡೀಸಲ್ ಬಳಸಿ ಉಪಯೋಗಿಸಬಹುದಾದ ಮೋಟಾರು ವಾಹನವನ್ನು ಜೆನೆರಲ್ ಮೋಟಾರ್ಸ್ ಪರಿಚಯಿಸಿತು.

1998: ಹ್ಯಾಕರ್ಸ್ ಆಕ್ರಮಣದನಂತರ ನ್ಯೂಯಾರ್ಕ್ ಟೈಮ್ಸ್ ತನ್ನ ವೆಬ್ ಸೈಟ್ ಅನ್ನು ಮುಚ್ಚಿತು.

2000: ವೈದ್ಯಕೀಯ ಸಮುದಾಯ ಮತ್ತು ಹಲವು ರಾಜ್ಯ ಸರ್ಕಾರಗಳಿಂದ ಪ್ರತಿಭಟನೆ ನಡೆದರೂ ಸಹ ಅಯೋಡಿನ್ ಇಲ್ಲದ ಉಪ್ಪಿನ ಬಳಕೆಯನ್ನು ನಿಷೇಧದ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆಯಿತು.

2008: ಭಾರತದ ದೆಹೆಲಿಯಲ್ಲಿ ಬಾಂಬ್ ಸ್ಪೋಟದಿಂದಾಗಿ 30 ಜನ ಸಾವನ್ನಪ್ಪಿ 130 ಜನ ಗಾಯಗೊಂಡರು.

ಪ್ರಮುಖ ಜನನ/ಮರಣ:

1893: ಪ್ರಾರ್ಥನಾ ಸಮಾಜದ ಸಂಸ್ಥಾಪಕರಲ್ಲೊಬ್ಬರಾದ ಮಾಮ ಪರಮಾನಂದ್ ನಿಧನರಾದರು.

1928: ಪ್ರಮುಖ ಹಿಂದಿ ಲೇಖಕ ಶ್ರೀಧರ್ ಪಾಠಕ್ ನಿಧನರಾದರು.

1929: ಭಾರತೀಯ ಕಾರ್ಯಕರ್ತ ಜತಿಂದ್ರ ನಾಥ್ ದಾಸ್ ನಿಧನರಾದರು.

1973: ಭಾರತೀಯ ಕವಿ ಮತ್ತು ತತ್ವಜ್ಞಾನಿ ಸಜ್ಜದ್ ಜಹೀರ್ ನಿಧನರಾದರು.

1975: ಭಾರತೀಯ ಹಾಡುಗಾರ ಮತ್ತು ಸಂಗೀತಶಾಸ್ತ್ರಜ್ಞ ಮುಡಿಕೊಂಡನ್ ವೆಂಕಟರಮಣ ಐಯ್ಯರ್ ನಿಧನರಾದರು.

1980: ಭಾರತೀಯ ಫೀಲ್ಡ್ ಹಾಕಿ ಆಟಗಾರ ವಿರೆನ್ ರಸ್ಕ್ವಿನ್ ಜನಿಸಿದರು.

1984: ಬ್ರಹ್ಮಾನಂದ್ ಸಂಸ್ಥೆಗಳ ಸಂಸ್ಥಾಪಕ ಸ್ವಾಮಿ ಬ್ರಹ್ಮಾನಂದ ನಿಧನರಾದರು.

1997: ಕಲ್ಕತ್ತಾದಲ್ಲಿ ರಾಜ್ಯ ಗೌರವಗಳೊಂದಿಗೆ ಮದರ್ ಥೆರೆಸಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

2012: ಭಾರತದ 21ನೇ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-12

 

ಪ್ರಮುಖ ಘಟನಾವಳಿಗಳು:

1624: ಮೊದಲ ಜಲಾಂತರ್ಗಾಮಿಯನ್ನು ಲಂಡನ್ನಿನಲ್ಲಿ ಪರೀಕ್ಷಿಸಲಾಯಿತು.

1758: ಫ್ರೆಂಚ್ ಖಗೋಳಶಾಸ್ತ್ರಜ್ಞ ಚಾರ್ಲ್ಸ್ ಮೆಸ್ಸಿಯರ್ ಅಚಾನಕ್ಕಾಗಿ ಕ್ರಾಬ್ ನೆಬ್ಯೂಲಾವನ್ನು ಗಮನಿಸಿದರು.

1848: ಸ್ವಿಜರ್ಲ್ಯಾಂಡ್ ಫೆಡರಲ್ ರಾಜ್ಯವಾಗಿ ರಚನೆಯಾಯಿತು.

1905: ಲಂಡನ್ನಿನ ಭಾರತವನ್ನು ರಕ್ಷಿಸಲು ಆಂಗ್ಲೋ-ಜಪಾನೀಸ್ ಒಪ್ಪಂದಕ್ಕೆ ಸಹಾಯ ಮಾಡಿತು.

1909: ಜರ್ಮನ್ ರಸಾಯನಶಾಸ್ತ್ರಜ್ಞ ಫ್ರಿಟ್ಜ್ ಹಾಫ್ ಮ್ಯಾನ್ ಅವರಿಗೆ ವಿಶ್ವದಾದ್ಯಂತ ಸಿಂಥೆಟಿಕ್ ರಬ್ಬರಿಗೆ ಮೊದಲ ಪೇಟೆಂಟ್ ನೀಡಲಾಯಿತು.

1912: ಡಚ್ ಒಲಂಪಿಯನ್ ಒಕ್ಕೂಟ ಸ್ಥಾಪನೆಯಾಯಿತು.

1940: ನಾಲ್ಕು ಯುವಕರು ಲಾಸ್ಕಾಕ್ಸ್ ಫ್ರಾನ್ಸ್ ಸಮೀಪದಲ್ಲಿರುವ ರಂಧ್ರದಲ್ಲಿ ಕೇವ್ ಪೇಂಟಿಂಗ್ ಎಂದು ಕರೆಯಲ್ಪಡುವ ಸುಮಾರು 17,000 ವರ್ಷಗಳ ಹಳೆಯ ರೇಖಾಚಿತ್ರಗಳನ್ನು ಕಂಡುಹಿಡಿದರು.

1958: ಜಾಕ್ ಕಿಲ್ಬಿ ಅವರು ಮೊದಲ ಸಂಯೋಜಿತ ಸರ್ಕ್ಯೂಟ್ (ಐಸಿ) ಅನ್ನು ತನ್ನ ಮೇಲ್ವಿಚಾರಕನಿಗೆ ಪ್ರದರ್ಶಿಸುತ್ತಾರೆ.

1994: ಯುನೈಟೆಡ್ ನೇಷನ್ನಿನ ಸೆಕ್ರೇಟರಿ ಜೆನೆರಲ್ ಘಲಿ ಭಾರತದ ದೆಹೆಲಿಗೆ ಭೇಟಿ ನೀಡಿದರು.

1995: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿ ಕುಲ್ಲುವಿನ ಬಳಿ 70 ಜನ ಮೃತರಾದರು.

1998: ಭಾರತ ಮತ್ತು ಮಲೇಶಿಯಾ ಕೌಲಲಂಪುರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಕಾರದ ಕುರಿತು ಒಪ್ಪಂದ ಮಾಡಿಕೊಂಡಿತು.

ಪ್ರಮುಖ ಜನನ/ಮರಣ:

1627: ಮುಘಲ್ ಸಾಮ್ರಾಜ್ಯದ ರಾಜ ಇಬ್ರಾಹಿಂ ಆದಿಲ್ ಶಾಹಿ ನಿಧನರಾದರು.

1779: “ಗರೀಬ್ ಪಂಥ್” ಸಂಸ್ಥಾಪಕ ಗರೀಬ್ ದಾಸ್ ನಿಧನರಾದರು.

1894: ಬಂಗಾಳಿ ಸಾಹಿತ್ಯದ ಪ್ರಮುಖ ವ್ಯಕ್ತಿ ವಿಭೂತಿಭೂಷಣ್ ಬಂಧೋಪಾಧ್ಯಾಯ್ ಜನಿಸಿದರು.

1899: ಹಿಂದಿ ಸಾಹಿತಿ ಬಲಿದೇವ್ ಪ್ರಸಾದ್ ಮಿಶ್ರಾ ಜನಿಸಿದರು.

1899: ಕರ್ನಾಟಕ ಶಾಸ್ತ್ರೀಯ ಸಂಗೀತದ ಮುಖ್ಯಸ್ಥ ಟಿ.ಎನ್.ಸ್ವಾಮಿನಾಥನ್ ಪಿಳ್ಳೈ ಜನಿಸಿದರು.

1922: ಚಂದ್ರಾಧರ್ ಶರ್ಮ ಗುಲೇರಿ ನಿಧನರಾದರು.

1931: ಶಿಕ್ಷಣ ತಜ್ಞ ಮತ್ತು ಪತ್ರಕರ್ತ ತ್ರಿಲೋಕಿನಾಥ್ ಮದನ್ ಜನಿಸಿದರು.

1932: ಪ್ರಸಿದ್ಧ ಮರಾಠಿ ಕಥಾ ಬರಹಗಾರ ಮತ್ತು ಕವಿ ವಿಜಯ ಶ್ರೀನಿವಾಸ್ ಜಹಗೀರ್ದಾರ್ ಜನಿಸಿದರು.

1992: ಜೈಪುರದ ಘರಾನಾದ ಪ್ರಸಿದ್ಧ ಹಿಂದುಸ್ಥಾನಿ ಶಾಸ್ತ್ರೀಯ ಗಾಯಕ ಮಲ್ಲಿಕಾರ್ಜುನ್ ಮನ್ಸೂರು ನಿಧನರಾದರು.

1993: ಗುಜರಾತಿನ ಮಾಜಿ ಮುಖ್ಯಮಂತ್ರಿ ಹಿತೇಂದ್ರ ದೇಸಾಯಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-11

 

ಪ್ರಮುಖ ಘಟನಾವಳಿಗಳು:

1803: ಬ್ರಿಟಿಷರ ಮತ್ತು ಮರಾಠರ ನಡುವೆ ದೆಹಲಿಯ ಕದನ ನಡೆಯಿತು.

1853: ಮೊದಲ ವಿದ್ಯುತ್ ಟೆಲಿಗ್ರಾಫನ್ನು ಬಳಸಲಾಯಿತು.

1875: ದಿನಪತ್ರಿಕೆಯಲ್ಲಿ ಮೊದಲ ಬಾರಿಗೆ ವ್ಯಂಗ್ಯಚಿತ್ರವನ್ನು ಮುದ್ರಿಸಲಾಯಿತು.

1893: ಸ್ವಾಮಿ ವಿವೇಕಾನಂದ ತಮ್ಮ ಮೊದಲ ಭಾಷಣವನ್ನು ಶಿಕಾಗೋದ ವಿಶ್ವ ಧರ್ಮ ಸಂಸತ್ ಸಭೆಯಲ್ಲಿ ಮಾಡಿದರು.

1906: ದಕ್ಷಿಣ ಆಫ್ರಿಕಾದಲ್ಲಿ ಅಹಿಂಸಾ ಚಳುವಳಿ ನಿರೂಪಿಸಲು ಮಹಾತ್ಮಾ ಗಾಂಧಿ “ಸತ್ಯಾಗ್ರಹ” ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು.

1948: ಭಾರತದ ಸರ್ಕಾರದ ಪಡೆಗಳು ಹೈದರಾಬಾದ್ ರಾಜ್ಯವನ್ನು ಪ್ರವೇಶಿಸಿತು.

1956: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ನೇತಾಜಿ ತನಿಖಾ ಸಮಿತಿಯ ತೀರ್ಮಾನವನ್ನು ಲೋಕಸಭೆಯಲ್ಲಿ ಪ್ರಧಾನಿ ಘೋಷಿಸಿದರು.

1965: ಲಾಹೋರಿನ ಅಗ್ನೇಯ ಭಾಗವಾದ ಬುರ್ಕಿ ಪಟ್ಟಣವನ್ನು ಭಾರತೀಯ ಸೇನೆ ಸೆರೆಹಿಡಿದ ಕಾರಣ ಇಂಡೋ-ಪಾಕಿಸ್ತಾನ ಯುದ್ಧ ನಡೆಯಿತು.

1970: ಫೊರ್ಡ್ ಸಂಸ್ಥೆಯ “ಪಿಂಟೋ” ಕಾರನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

1995: ಪಂಚಾಯತ್ ಚುನಾವಣೆಯನ್ನು ಚರ್ಚಿಸಲು ರಾಜ್ಯ ಪಂಚಾಯತ್ ಮಂತ್ರಿಯ ಸಭೆಯನ್ನು ಪ್ರಧಾನಿ ಪಿ ವಿ ನರಸಿಂಹ ರಾವ್ ಉದ್ಘಾಟಿಸಿದರು.ಈ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಆಡಳಿತ ಮತ್ತು ಹಣಕಾಸಿನ ಅಧಿಕಾರವನ್ನು ವಿತರಿಸಲಾಯಿತು.

1996: ಯೂನಿಯನ್ ಪೆಸಿಫಿಕ್ ರೈಲುರಸ್ತೆ ದಕ್ಷಿಣ ಪೆಸಿಫಿಕ್ ರೈಲು ರಸ್ತೆ ಅನ್ನು ಖರೀದಿಸಿತು.

2001: ಎರಡು ಪ್ರಯಾಣಿಕ ವಿಮಾನಗಳು ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಗೋಪುರಕ್ಕೆ ಭಯೋತ್ಪಾದಕರು ಅಪಘಾತ ಮಾಡಿದ ಕಾರಣ 2752 ಜನ ಸಾವನ್ನಪ್ಪಿದರು.

2007: ವೆಸ್ಟ್ ಇಂಡಿಯನ್ ಬ್ಯಾಟ್ಸ್ ಮ್ಯಾನ್ ಆಗಿದ್ದ ಕ್ರಿಸ್ ಗೇಲ್ಸ್ ಟಿ-20 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ.

ಪ್ರಮುಖ ಜನನ/ಮರಣ:

1884: ಭಾರತೀಯ ರಾಜಕಾರಣಿ ಮತ್ತು ಕಾರ್ಯಕರ್ತ ಸುಧಾಮೋಯಿ ಪ್ರಮಾಣಿಕ್ ಜನಿಸಿದರು.

1889: ಓ.ಪಿ.ಸಚಿವ ಮತ್ತು ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾ.ಪಿ.ಸುಬ್ಬರಾಯನ್ ಜನಿಸಿದರು.

1895: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿನೋಭಾ ಭಾವೆ ಜನಿಸಿದರು.

1911: ಕ್ರಿಕೆಟ್ ಆಟಗಾರ ಲಾಲಾ ಅಮರನಾಥ್ ಅವರು ಜನಿಸಿದರು.

1921: ಭಾರತೀಯ ಪತ್ರಕರ್ತ ಹಾಗೂ ಕವಿ ಸುಬ್ರಮಣ್ಯ ಭಾರತಿ ನಿಧನರಾದರು.

1948: ಪಾಕಿಸ್ತಾನದ ಪಿತಾಮಹ ಎಂದೇ ಖ್ಯಾತರಾಗಿದ್ದ ಮೊಹಮ್ಮದ್ ಅಲಿ ಜಿನ್ನಾ ಅವರು ನಿಧನರಾದರು.

1964: ಕವಿ ಮತ್ತು ವಿಮರ್ಶಕ ಗಜಾನನ್ ಮಾಧವ್ ಮುಕ್ತಿಭೋದ್ ನಿಧನರಾದರು.

1973: ಭಾರತೀಯ ತತ್ವಗುರು ನೀಮ್ ಕರೋಲಿ ಬಾಬಾ ನಿಧನರಾದರು.

1976: ಭಾರತೀಯ ಕ್ರಿಕೆಟ್ ಪಟು ಮುರಳಿ ಕಾರ್ತಿಕ್ ಜನಿಸಿದರು.

1987: ಕವಿ ಮತ್ತು ಶಿಕ್ಷಣ ತಜ್ಞ ಮಹಾದೇವಿ ವರ್ಮ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-10

 

ಪ್ರಮುಖ ಘಟನಾವಳಿಗಳು:

1846: ಲಾಕ್ ಸ್ಟಿಚ್ ಹೊಲಿಗೆ ಯಂತ್ರಕ್ಕೆ ಎಲಿಯಾಸ್ ಹೌವೆ ಪೇಟೆಂಟ್ ಪಡೆದರು.

1847: ಹವಾಯಿಯಲ್ಲಿ ಮೊದಲ ಚಲನಚಿತ್ರ ಮಂದಿರವನ್ನು ತೆರೆಯಲಾಯಿತು.

1869: ಜಪಾನಿನ ಯೋಕೋಹಾಮಾದಲ್ಲಿ ಬ್ಯಾಪ್ಟಿಸ್ಟ್ ಮಂತ್ರಿಯೊಬ್ಬ ರಿಕ್ಷಾವನ್ನು ಕಂಡುಹಿಡಿದರು.

1894: ಲಂಡನ್ನಿನ ಟ್ಯಾಕ್ಸಿ ಚಾಲಕ ಜಾರ್ಜ್ ಸ್ಮಿತ್ ಕುಡಿದು ವಾಹನ ಚಾಲನೆ ಮಾಡಿದಕ್ಕಾಗಿ ದಂಡ ಪಡೆದ ಮೊದಲಿಗ.

1913: ತೀರದಿಂದ ತೀರಕ್ಕೆ ಸಂಪರ್ಕ ಕಲ್ಪಿಸುವ ಮೊದಲ ಹೆದ್ದಾರಿಯಾದ ಲಿಂಕನ್ ಹೆದ್ದಾರಿ ತೆರೆಯಲಾಯಿತು.

1919: ಚೀನಾ ಲೀಗ್ ಆಫ್ ನೇಷನ್ಸಿನ ಸದಸ್ಯತ್ವ ಪಡೆಯಿತು.

1940: ಬಕ್ಕಿಂಗ್ ಹ್ಯಾಮ್ ಅರಮನೆಯ ಮೇಲೆ ಜರ್ಮನ್ ಪಡೆಗಳು ಬಾಂಬಿನ ದಾಳಿ ನಡೆಸಿದರು.

1966: ಹರ್ಯಾಣ ಮತ್ತು ಪಂಜಾಬ್ ರಚನೆಗೆ ಎರಡು ಸ್ವತಂತ್ರ ರಾಜ್ಯಗಳಾಗಿ ಪಂಜಾಬ್ ಮರು ಸಂಘಟನೆಯ ಮಸೂದೆಯನ್ನು ಸಂಸತ್ತು ಅಂಗೀಕರಿಸಿತು.

1977: ಯೋಜನಾ ಆಯೋಗವು ರೋಲಿಂಗ್ ಯೋಜನೆಯ ಪರಿಕಲ್ಪನೆಯನ್ನು ಪರಿಚಯಿಸಲು ನಿರ್ಧರಿಸಿತು.

1990: ಎಲ್ಲಿಸ್ ದ್ವೀಪವು ಒಂದು ವಸ್ತುಸಂಗ್ರಹಾಲಯವಾಗಿ ಪುನಃ ಪ್ರಾರಂಭವಾಯಿತು.

1993: 1000 ಬೋಯಿಂಗ್ 747 ಜಂಬೋ ವಿಮಾನವು ನಿರ್ಮಾಣಗೊಂಡಿತು.

1997: ಡಿಸ್ಕವರಿ ಚ್ಯಾನಲ್ ಟ್ರಾವಲ್ ಚ್ಯಾನಲ್ಲನ್ನು 20 ಮಿಲಿಯನ್ ಡಾಲರುಗಳಿಗೆ ಕೊಂಡುಕೊಳ್ಳುತ್ತದೆ.

2012: ಭಾರೀ ಮಳೆ ಮತ್ತು ಪ್ರವಾಹದಿಂದ ವಿಯೆಟ್ನಂನಲ್ಲಿ 29 ಮಂದಿ ಮೃತರಾದರು.

ಪ್ರಮುಖ ಜನನ/ಮರಣ:

1858: ಆಧುನಿಕ ಗುಜರಾತಿ ಪದ್ಯಗಳ ಪಿತಾಮಹ ಎಂದೇ ಖ್ಯಾತಿ ಪಡೆದ ಮಣಿಲಾಲ್ ನಾಥುಬಾಯಿ ದ್ವಿವೇದಿ ಜನಿಸಿದರು.

1872: “ರಣಜಿ” ಎಂಬ ಹೆಸರಿನ ಖ್ಯಾತಿಯ ಪ್ರಸಿದ್ಧ ಕ್ರಿಕೆಟಿಗ ಸರ್ ರಣಜಿತ್ ಸಿಂಹಜಿ ವಿಭಾಜಿ ಜನಿಸಿದರು.

1887: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೋವಿಂದ್ ವಲ್ಲಭ ಪಂತ್ ಜನಿಸಿದರು.

1911: ಸಾಮಾಜಿಕ ಸುಧಾರಕ, ರಾಜಕಾರಣಿ ಮತ್ತು ಕಾರ್ಮಿಕ ಸಂಘವಾದಿ ಜತಿನ್ ಚಕ್ರವರ್ತಿ ಜನಿಸಿದರು.

1912: ಭಾರತದ ಉಪರಾಷ್ಟ್ರಪತಿಯಾಗಿದ್ದ ಬಿ.ಡಿ.ಜತ್ತಿ ಅವರು ಜನಿಸಿದರು.

1915: ಕ್ರಾಂತಿಕಾರಿ ಜತಿಂದ್ರನಾಥ್ ಮುಖರ್ಜಿ ಪೋಲೀಸರ ಮತ್ತು ಕ್ರಾಂತಿಕಾರಿಗಳ ನಡುವೆ ನಡೆದ ಚಕಮಕಿಯಲ್ಲಿ ಗಾಯಗೊಂಡು ನಿಧನರಾದರು.

1920: ತಮಿಳು ಭಾಷೆಯ ರಾಷ್ಟ್ರೀಯ ಕವಿ, ಲೇಖಕ ಸುಬ್ರಮಣ್ಯಂ ಭಾರತಿ ನಿಧನರಾದರು.

1920: ಅಂಕಿ ಅಂಶಗಳಲ್ಲಿ “ಅಂದಾಜು ಸಿದ್ಧಾಂತ” ಮಂಡಿಸಿದ ಕಲ್ಯಾಂಪುಡಿ ರಾಧಾಕೃಷ್ಣ ರಾವ್ ಜನಿಸಿದರು.

1923: ಜನಪ್ರಿಯ ಬಂಗಾಳಿ ನಾಟಕಕಾರ, ಕಥೆ ಬರಹಗಾರ ಮತ್ತು ಕವಿ ಸುಕುಮಾರ್ ರಾಯ್ ನಿಧನರಾದರು.

1924: ಖ್ಯಾತ ಹಿಂದಿ ಲೇಖಕ ಕೆ.ಟಿ.ಗೋಪಾಲಕೃಷ್ಣನ್ ಜನಿಸಿದರು.

1989: ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಜನಿಸಿದರು.

 

Categories
e-ದಿನ

ಸೆಪ್ಟೆಂಬರ್-9

 

ಪ್ರಮುಖ ಘಟನಾವಳಿಗಳು:

1543: ಒಂಬತ್ತು ತಿಂಗಳ ಮಗವಾದ ಮೇರಿ ಸ್ಟುವರ್ಟ್ ಅವರನ್ನು ಸ್ಕಾಟ್ಲಾಂಡಿನ ರಾಣಿ ಎಂದು ಘೋಷಿಸಲಾಯಿತು.

1753: ಉತ್ತರ ಅಮೇರಿಕಾದ ವಸಾಹತುಗಳಿಗೆ ಮೊದಲ ಉಗಿಬಂಡಿ ಆಗಮಿಸಿತು.

1776: ಅಮೇರಿಕಾದ ಕಾಂಗ್ರೆಸ್ ಯುನೈಟೆಡ್ ಕಾಲೋನೀಸನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಯಿತು.

1839: ಇಂಗ್ಲಿಷ್ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞ ಜಾನ್ ಹರ್ಸ್ಚೆಲ್ ಮೊದಲ ಗ್ಲಾಸ್ ಪ್ಲೇಟಿನ ಛಾಯಾಚಿತ್ರವನ್ನು ತೆಗೆದುಕೊಂಡರು.

1920: ಆಲಿಗಢದ ಮೊಹಮದ್ದೆನ್ ಆಂಗ್ಲೋ-ಓರಿಯೆಂಟಲ್ ಕಾಲೇಜನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಮಾರ್ಪಾಡು ಮಾಡಲಾಯಿತು.

1926: ರಾಷ್ಟ್ರೀಯ ಪ್ರಸಾರ ಸಂಸ್ಥೆ ರೇಡಿಯೋ ಕಾರ್ಪೋರೇಷನ್ ಆಫ್ ಅಮೇರಿಕಾವನ್ನು ಸೃಷ್ಟಿಸಿದರು.

1945: ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ಸಾಫ್ಟ್ ವೇರಿನಲ್ಲಿ ಮೊದಲ ದೋಷವಾದ (ಬಗ್) ಅನ್ನು ಹಾರ್ವರ್ಡ್ ಫ್ಯಾಕಲ್ಟಿಯಾದ ಮಾರ್ಕ್ II ಕಂಡುಹಿಡಿದರು.

1991: ಗೀವನ್ಸ್ ಅವರುಗಳು ಪೋರ್ಚುಗೀಸ್ ಬ್ಯಾಂಕಿಗೆ ನೀಡಿರುವ ಚಿನ್ನದ ಆಭರಣಗಳನ್ನು ಅದರ ಮಾಲೀಕರಿಗೆ ಮರಳಿಸಲಾಯಿತು.

1993: ಭಾರತದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಮೂರು ದಿನದ ಪ್ರವಾಸಕ್ಕೆಂದು ಸಿಯೋಲಿಗೆ ಆಗಮಿಸಿದರು.

2002: ರಫಿಗಂಜ್ ರೈಲು ಅಪಘಾತ ಭಾರತದ ಬಿಹಾರಿನಲ್ಲಿ ನಡೆಯಿತು.

2012: ಭಾರತೀಯ ಬಾಹ್ಯಾಕಾಶ ಸಂಸ್ಥೆ ಕಕ್ಷೆಯೊಳಗೆ ಅತೀ ಹೆಚ್ಚು ಭಾರದ ವಿದೇಶಿ ಉಪಗ್ರಹವನ್ನು ಇರಿಸಿ ಹಾರಿಸಿತು.

ಪ್ರಮುಖ ಜನನ/ಮರಣ:

1872: ಬಂಗಾಳಿ ಕವಿಯತ್ರಿ ಸರಳಾದೇವಿ ಚೌದಾರಾಣಿ ಜನಿಸಿದರು.

1896: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ಯಾಮ್ ಲಾಲ್ ಗುಪ್ತ ಪರ್ಶದ್ ಜನಿಸಿದರು.

1904: ಭಾರತೀಯ ಹಾಕಿ ಆಟಗಾರ ಮತ್ತು ತರಬೇತುದಾರ ಫಿರೋಜ್ ಖಾನ್ ಜನಿಸಿದರು.

1905: ಭಾರತೀಯ ತತ್ವಗುರು ಮತ್ತು ಕವಿ ಬ್ರಹ್ಮರಿಷಿ ಹುಸ್ಸೇನ್ ಶಾ ಜನಿಸಿದರು.

1947: ದೊಡ್ಡ ತತ್ವಜ್ಞಾನಿ, ಕಲೆ ಇತಿಹಾಸಕಾರ, ಕಲಾವಿದ ಆನಂದ ಕೆಂಟಿಶ್ ಕುಮಾರಸ್ವಾಮಿ ನಿಧನರಾದರು.

1952: ಗಾಂಧಿ ಯುಗದ ತತ್ವಜ್ಞಾನಿ ಕಿಶೋರ್ಲಾಲ್ ಘನಶ್ಯಾಮ್ ಲಾಲ್ ಮಶ್ರುವಾಲಾ ನಿಧನರಾದರು.

1974: ಭಾರತ ನಾಯಕ ವಿಕ್ರಮ್ ಭಾತ್ರಾ ಜನಿಸಿದರು.

1976: ಚೀನೀ ಕ್ರಾಂತಿಯ ನಾಯಕ ಮಾವೋ ಝೆಡಾಂಗ್ ನಿಧನರಾದರು.

1981: ಕ್ರಿಕೆಟ್ ಆಟಗಾರ ಫಿರೋಜ್ ಈದುಲ್ಜಿ ಪಾಲಿಯಾ ನಿಧನರಾದರು.

2012: ಬಿಳಿ ಕ್ರಾಂತಿ (ಹಾಲಿನ ಕ್ರಾಂತಿ) ಮಾಡಿದ ಅಮೂಲ್ ಸಂಸ್ಥೆಯ ಸಂಸ್ಥಾಪಕರಾದ ವರ್ಗೀಸ್ ಕುರಿಯನ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-8

ಪ್ರಮುಖ ಘಟನಾವಳಿಗಳು:

1636: ಅಮೇರಿಕಾದ ಮೊದಲ ಕಾಲೇಜಾದ ಹಾರ್ವರ್ಡ್ ಕಾಲೇಜನ್ನು ಕೇಂಬ್ರಿಡ್ಜ್ ಕಾಲೇಜೆಂದು ಸ್ಥಾಪಿಸಲಾಯಿತು. ನಂತರ ಜಾನ್ ಹಾರ್ವರ್ಡ್ ಅವರಿಗೆ ಗೌರವ ಸೂಚಿಸಲು ಹಾರ್ವರ್ಡ್ ಕಾಲೇಜು ಎಂದು ಮರುನಾಮಕರಣ ಮಾಡಲಾಯಿತು.

1906: ರಾಬರ್ಟ್ ಟರ್ನರ್ ಸ್ವಯಂಚಾಲಿತ ಟೈಪ್ ರೈಟರ್ ರಿಟರ್ನ್ ಕ್ಯಾರೇಜನ್ನು ಕಂಡುಹಿಡಿದರು.

1915: ನೀಗ್ರೋಗಳ ಜೀವನ ಮತ್ತು ಇತಿಹಾಸದ ಸಂಘವನ್ನು ಸ್ಥಾಪಿಸಲಾಯಿತು.

1930: ಸ್ಕಾಟ್ಚ್ ಟೇಪನ್ನು ರಿಚರ್ಡ್ ಡ್ರೂ ಸೃಷ್ಟಿಸಿದರು.

1945: ವಾಷಿಂಗ್ಟನ್ ಡಿ.ಸಿಯಲ್ಲಿ ದ್ವಿ-ಮಾರ್ಗ ರೇಡಿಯೋವನ್ನು ಹೊಂದಿದ ಬಸ್ಸನ್ನು ಮೊದಲ ಬಾರಿಗೆ ಸೇವೆಗೆ ಸೇರಿಸಲಾಯಿತು.

1950: ಅಮೇರಿಕಾದ ಕಾಂಗ್ರೆಸ್ ರಕ್ಷಣಾ ಉತ್ಪಾದನೆ ಕಾಯಿದೆಯನ್ನು ಅಂಗೀಕರಿಸಿದರು.

1951: ಮಿಲಿಟರಿ ಅಕೌಂಟ್ಸ್ ನಿಯಂತ್ರಕರ ಕಛೇರಿ (ಪಿಂಚಣಿ)ಯನ್ನು ಅಲ್ಲಹಬಾದಿನ ಸಿಡಿಎ(ಪಿ) ಎಂದು ಮರುನಾಮಕರಣ ಮಾಡಲಾಯಿತು.

1959: ಏಷಿಯಾದ ತಂತ್ರಜ್ಞಾನ ಸಂಸ್ಥೆಯಾದ “ಏಷಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ”ಯನ್ನು ಸ್ಥಾಪಿಸಲಾಯಿತು.

1962: ಚೀನಿಯರು ಪೂರ್ವ ಪ್ರದೇಶದ ಭಾರತೀಯ ಪ್ರಾಂತ್ಯಕ್ಕೆ ತಮ್ಮ ಮೊದಲ ಆಕ್ರಮಣವನ್ನು ಮಾಡಿದರು.

1965: ಪಾಕಿಸ್ತಾನವು ಭಾರತದ ಪಂಜಾಬಿಗೆ ತನ್ನ ಚಾಲನೆ ಆರಂಭಿಸಿತು.

1986: ಸುಂದರ್ ಲ್ಯಾಂಡ್ ಇಂಗ್ಲಾಂಡಿನಲ್ಲಿ ಯೂರೋಪಿನಲ್ಲಿ ಜಪಾನಿಯರ ಮೊದಲ ವಾಹನ ಕಾರ್ಖಾನೆಯಾದ ನಿಸ್ಸಾನ್ ಕಾರುಗಳ ಕಾರ್ಖಾನೆಯನ್ನು ತೆರೆಯಲಾಯಿತು.

ಪ್ರಮುಖ ಜನನ/ಮರಣ:

1790: ಭಾರತದ ಗವರ್ನರ್ ಜೆನೆರಲ್ ಆಗಿದ್ದ (1842-1844) ಲಾರ್ಡ್ ಎಡ್ವರ್ಡ್ ಆಲೆನ್ ಬಾರೋ ಜನಿಸಿದರು.

1887: ಡಿವೈನ್ ಲೈಫ್ ಸೊಸೈಟಿಯ ಸಂಸ್ಥಾಪಕರಾದ ಸ್ವಾಮಿ ಸಿವಾನಂದ ಜನಿಸಿದರು.

1910: ಸಂತ ಶ್ರೀ ಗಜಾನನ್ ಮಹಾರಾಜ್ ನಿಧನರಾದರು.

1911: ಹಿಂದಿ ಲೇಖಕ ಮತ್ತು ಪತ್ರಕರ್ತ ಆನಂದ ಗೋಪಾಲ್ ಶೆರೋರೆ ಜನಿಸಿದರು.

1926: ಭಾರತೀಯ ಗಾಯಕ, ಗೀತರಚನೆಕಾರ, ಕವಿ ಮತ್ತು ನಿರ್ದೇಶಕ ಭುಪೇನ್ ಹಜಾರಿಕಾ ಜನಿಸಿದರು.

1935: ಪ್ರಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸಲೆ ಜನಿಸಿದರು.

1960: ಲೋಕಸಭೆಯ ಪ್ರಮುಖ ಸದಸ್ಯ ಫಿರೋಜ್ ಗಾಂಧಿ ಅವರು ನಿಧನರಾದರು.

1981: ಭಾರತೀಯ ಗುರು, ತತ್ವಜ್ಞಾನಿ ಮತ್ತು ಶಿಕ್ಷಣತಜ್ಞ ನಿಸರ್ಗದತ್ತ ಮಹಾರಾಜ್ ನಿಧನರಾದರು.

1982: ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದ ಶೇಖ್ ಮೊಹಮ್ಮದ್ ಅಬ್ದುಲ್ಲಾ ನಿಧನರಾದರು.

2008: ಖ್ಯಾತ ವಯಲಿನ್ ವಾದಕ ಕುನ್ನಕುಡಿ ವೈದ್ಯನಾಥನ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-7

 

ಪ್ರಮುಖ ಘಟನಾವಳಿಗಳು:

1630: ಬೋಸ್ಟನ್, ಮ್ಯಾಸಚೂಸೆಟ್ಸ್ ನಗರವನ್ನು ಸ್ಥಾಪಿಸಲಾಯಿತು.

1812: ನೆಪೋಲಿಯನ್ ರಷ್ಯಾ ಪಡೆಯನ್ನು ಸೋಲಿಸಿದರು.

1813: ಮೊದಲ ಬಾರಿಗೆ ಅಮೇರಿಕಾಕ್ಕೆ “ಅಂಕಲ್ ಸ್ಯಾಮ್” ಎಂಬ ಹೆಸರನ್ನು ಬಳಸಲಾಯಿತು.

1822: ಬ್ರಜಿಲ್ ಪೋರ್ಚುಗಲ್ಲಿನಿಂದ ತನ್ನ ಸ್ವಾತಂತ್ರವನ್ನು ಘೋಷಿಸಿತು.

1888: ಎಡಿತ್ ಎಲೀನರ್ ಮೆಕ್ಲೀನರ್ ನ್ಯೂಯಾರ್ಕಿನ ಆಸ್ಪತ್ರೆಯಲ್ಲಿ ಇನ್ಕ್ಯೂಬೇಟರಿನಲ್ಲಿ ಸಂರಕ್ಷಿಸಿದ ಮೊದಲ ಮಗುವಾಗಿತ್ತು.

1905: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ “ವಂದೇ ಮಾತರಂ” ಅನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರಣಾಸಿಯ ಅಧಿವೇಶನದಲ್ಲಿ ರಾಷ್ಟ್ರೀಯ ಗೀತೆಯಾಗಿ ಅಳವಡಿಸಲಾಯಿತು.

1906: ಮೊದಲ ಭಾರತೀಯ ಬ್ಯಾಂಕ್ ಆದ ಬ್ಯಾಂಕ್ ಆಫ್ ಇಂಡಿಯಾವನ್ನು ನೋಂದಾಯಿಸಲಾಯಿತು.

1914: ನ್ಯೂಯಾರ್ಕಿನ ಅಂಚೆ ಕಛೇರಿಯ ಕಟ್ಟಡವನ್ನು ಸಾರ್ವಜನಿಕರಿಗೆ ತೆರೆಯಲಾಯಿತು.

1921: ಮಿಸ್ ಅಮೇರಿಕಾ ಸ್ಪರ್ಧೆಯನ್ನು ಆರಂಭಿಸಲಾಯಿತು.

1927: ಫಿಲೋ ಟೈಲರ್ ಸಂಪೂರ್ಣ ಎಲೆಕ್ಟ್ರಾನಿಕ್ ಟಿವಿ ರಚಿಸುವಲ್ಲಿ ಯಶಸ್ವಿಯಾದರು.

1931: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಸುತ್ತಿನ ಟೇಬಲ್ ಕಾನ್ಫರೆನ್ಸ್ ಅನ್ನು ತಪ್ಪಿದ ನಂತರ ಮಹಾತ್ಮಾ ಗಾಂಧಿ ಮತ್ತು ಸರೋಜಿನಿ ನಾಯ್ಡು ಅವರೊಂದಿಗೆ ಎರಡನೇ ರೌಂಡ್ ಟೇಬಲ್ ಸಮ್ಮೇಳನದಲ್ಲಿ ಭಾಗವಹಿಸಿದರು.

1947: ಗಾಂಧೀಜಿ ದೆಹಲಿಗೆ ಕಲ್ಕತ್ತಾದಿಂದ ಹೊರಟು ಗಲಭೆ-ಪೀಡಿತ ಪ್ರದೇಶಗಳಿಗೆ ದೈನಂದಿನ ಭೇಟಿಗಳನ್ನು ಆರಂಭಿಸಿದರು.

1953: ನಿಕಿತಾ ಖುರ್ಷಿಯೋ ಅವರು ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1965: ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಚೀನಾವು ಭಾರತೀಯ ಗಡಿಯಲ್ಲಿ ಅದರ ಸೈನ್ಯವನ್ನು ಬಲಪಡಿಸುತ್ತದೆ ಎಂದು ಚೀನಾ ಘೋಷಿಸಿತು.

1965: ಪಾಕಿಸ್ಥಾನದ ನೌಕಾಪಡೆಯು 1965ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ “ಆಪರೇಷನ್ ದ್ವಾರಕಾ” ವನ್ನು ಪ್ರಾರಂಭಿಸಿತು.

ಪ್ರಮುಖ ಜನನ/ಮರಣ:

1905: ಪತ್ರಕರ್ತ ಮತ್ತು ಮರಾಠಿ ಸಾಹಿತಿ ರಘುನಾಥ್ ಗೋವಿಂದ ಸರ್ದೇಸಾಯಿ ಜನಿಸಿದರು.

1933: ಸ್ವಯಂ ಉದ್ಯೋಗಿ ಮಹಿಳಾ ಸಂಘದ ಸ್ಥಾಪಕಿ ವಕೀಲೆ ಇಲಾ ಭಟ್ ಜನಿಸಿದರು.

1951: ಪ್ರಖ್ಯಾತ ನಟ ಮತ್ತು ನಿರ್ಮಾಪಕ ಮಮ್ಮೂಟಿ ಜನಿಸಿದರು.

1967: ಭಾರತೀಯ ಇಂಗ್ಲಿಷ್ ಅಕೌಂಟೆಂಟ್ ಮತ್ತು ರಾಜಕಾರಣಿ ಅಲೋಕ್ ಶರ್ಮ ಜನಿಸಿದರು.

1968: ಪ್ರಸಿದ್ಧ ಹಿಂದಿ ಕಾದಂಬರಿಗಾರ ಬೆನಿಪುರಿ ಶರ್ಮ ನಿಧನರಾದರು.

1995: ಬಿಬಿಸಿ ಸ್ಟ್ರಿಂಗರ್ ಮತ್ತು ಏಷಿಯನ್ ಏಜ್ ವಿಶೇಷ ವರದಿಗಾರರಾಗಿದ್ದ ಮೊಹಮ್ಮದ್ ಯೂಸೆಫ್ ಜಮೀಲ್ ನಿಧನರಾದರು.

1998: ಗುಜರಾತ್ ಮತ್ತು ಮಧ್ಯಪ್ರದೇಶದ ಮಾಜಿ ರಾಜ್ಯಪಾಲರಾಗಿದ್ದ ಪ್ರೊ. ಕೆ.ಎಂ.ಚಂಡಿ ನಿಧನರಾದರು.

2013: ಭಾರತದ 13ನೇ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ರೋಮೇಶ್ ಭಂಡಾರಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-6

 

ಪ್ರಮುಖ ಘಟನಾವಳಿಗಳು:

1716: ಉತ್ತರ ಅಮೇರಿಕಾದ ಬಾಸ್ಟನ್ನಿನಲ್ಲಿ ಮೊದಲ ಲೈಟ್ ಹೌಸನ್ನು ನಿರ್ಮಿಸಲಾಯಿತು.

1774: ಪುಣೆಯನ್ನು ಪುನಃ ವಶಪಡಿಸಿಕೊಳ್ಳಲು ಬ್ರಿಟಿಷ್ ಸರ್ಕಾರವು ಪೇಶ್ವಾ ರಘುನಾಥ್ ರಾವ್ ಅವರನ್ನು ಬೆಂಬಲಿಸಿತು.

1873: ಸ್ಯಾನ್ ಫ್ರಾನ್ಸಿಸ್ಕೋದ ಕ್ಲೇ ಸ್ಟ್ರೀಟಿನಲ್ಲಿ ನಿಯಮಿತ ಕೇಬಲ್ ಕಾರ್ ಸೇವೆಯನ್ನು ಪ್ರಾರಂಭಿಸಲಾಯಿತು.

1899: ಕಾರ್ನೇಷನ್ ಮೊದಲ ಆವಿಯಾಗುವ ಹಾಲನ್ನು ಸಂಸ್ಕರಿಸಿ ಕ್ಯಾನಿನಲ್ಲಿ ಹಾಕಿದರು.

1903: ಮಾಸ್ಕೋದಲ್ಲಿ ಬ್ರಿಟಿಷ್ ಆಮದು ನೀತಿಗಳಿಗೆ ಪ್ರತಿಕಾರವಾಗಿ ರಷ್ಯಾ ಭಾರತೀಯ ಮತ್ತು ಸಿಲೋನ್ ಚಹಾದ ಮೇಲೆ ಆಮದು ತೆರಿಗೆಗಳನ್ನು ಹೆಚ್ಚಿಸುತ್ತದೆ.

1905: ಅಟ್ಲಾಂಟಾ ಜೀವಾ ವಿಮಾ ಸಂಸ್ಥೆ ರೂಪಗೊಂಡಿತು.

1909: ಅಮೇರಿಕಾ ಪರಿಶೋಶೋಧಕ ರಾಬರ್ಟ್ ಪೀಯರ್ ಅವರು ಉತ್ತರ ಧ್ರುವವನ್ನು 5 ತಿಂಗಳ ಹಿಂದೆ ಕಂಡುಹಿಡಿದಿದ್ದಾರೆಂದು ಪತ್ತೆಯಾಯಿತು.

1916: ಮೊದಲ ನೈಜ ಸೂಪರ್ ಮಾರ್ಕೆಟ್ ಆದ “ಪಿಗ್ಲಿ ವಿಗ್ಲಿ” ಕ್ಲಾರೆನ್ಸ್ ಸಾಂಡರ್ಸ್ ಅವರಿಂದ ಟೆನ್ನೆಸ್ಸಿನಲ್ಲಿ ಆರಂಭಿಸಲಾಯಿತು.

1947: ಭಾರತೀಯ ಸರ್ಕಾರವು ನಿರಾಶ್ರಿತರ ಪರಿಹಾರ ಮತ್ತು ಪುನರ್ವಸತಿ ಹೊಸ ಸಚಿವಾಲಯವನ್ನು ಸೃಷ್ಟಿಸಿತು.

1963: ಅಂತರರಾಷ್ಟ್ರೀಯ ಕೈಗಾರಿಕಾ ಆಸ್ಥಿ ಶಿಕ್ಷಣ (CEIPI) ಅನ್ನು ಸ್ಥಾಪಿಸಲಾಯಿತು.

1990: ಸಂಸತ್ತು ಪ್ರಸಾರ ಭಾರತಿ ಮಸೂದೆಯನ್ನು ಅಂಗೀಕರಿಸಿತು ಮತ್ತು 12 ಸೆಪ್ಟೆಂಬರ್ 1990 ರಂದು ಪ್ರಸಾರ ಭಾರತಿ ಕಾಯಿದೆ ಭಾರತದ ರಾಷ್ಟ್ರಪತಿಯವರಿಂದ ಅನುಮತಿ ಪಡೆಯಿತು.

1965: ಪಾಕಿಸ್ತಾನದ ಆಪರೇಷನ್ ಗ್ರಾಂಡ್ ಸ್ಲಾಮಿನ ನಂತರ ಭಾರತವು ಪ್ರತೀಕಾರವನ್ನು ಉಂಟು ಮಾಡಿತು. ಇದರಿಂದ ತಾಷ್ಕೆಂಟ್ ಘೋಷಣೆಯ ಸಹಿಯನ್ನು ಅನುಸರಿಸಲಾಯಿತು.

ಪ್ರಮುಖ ಜನನ/ಮರಣ:

1889: ಸ್ವಾತಂತ್ರ ಹೋರಾಟಗಾರ ಶರತ್ ಚಂದ್ರ ಬೋಸ್ ಜನಿಸಿದರು.

1905: ಖ್ಯಾತ ಭೂವಜ್ಞಾನಿ ಸತ್ಯಚರಣ್ ಚಟರ್ಜಿ ಜನಿಸಿದರು.

1929: ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ಧರ್ಮ ಪ್ರೊಡಕ್ಷನ್ ಸಂಸ್ಥಾಪಕ ಯಶ್ ಜೋಹರ್ ಜನಿಸಿದರು.

1971: ಭಾರತೀಯ ಕ್ರಿಕೆಟ್ ಆಟಗಾರ ದೇವಾಂಗ್ ಗಾಂಧಿ ಜನಿಸಿದರು.

1972: ಖ್ಯಾತ ಸರೂದ್ ವಾದಕ ಅಲ್ಲಾವುದ್ದಿನ್ ಖಾನ್ ನಿಧನರಾದರು.

1975: “ಚಾಂದ್” ಮತ್ತು “ಮಾಧುರಿ” ನಿಯತಕಾಲಿಕೆಯ ಲೇಖಕ ದುಲಾರೆಲಾಲ್ ಭಾರ್ಗವ್ ನಿಧನರಾದರು.

1995: ಸಮಾಜ ಕಾರ್ಯಕರ್ತೆ ಮೀನಾ ತಾಯಿ ಠಾಕರೆ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-5

 

ಪ್ರಮುಖ ಘಟನಾವಳಿಗಳು:

1612: ಈಸ್ಟ್ ಇಂಡಿಯಾ ಸಂಸ್ಥೆಯ ನೌಕಾಪಡೆಯನ್ನು ಸ್ಥಾಪಿಸಲಾಯಿತು.

1786: ಮಾಂಟ್ಪ್ಲೈಸಿರ್ ಸೆರಾಮಿಕ್ ಫ್ಯಾಕ್ಟರಿ ಸ್ಕ್ಯಾರ್ಬೀಕ್ ಬೆಲ್ಜಿಯಮ್ಮಿನಲ್ಲಿ ತೆರೆಯಲಾಯಿತು.

1838: ನೆದರ್ನ್ಯಾಂಡಿನ ಉಟ್ರೆಕ್ಟಿನಲ್ಲಿ ಕೇಂದ್ರ ವಸ್ತು ಸಂಗ್ರಹಾಲಯ ತೆರೆಯಲಾಯಿತು.

1839: ಮೊದಲ ಓಪಿಯಂ ಯುದ್ಧ ಚೀನಾದಲ್ಲಿ ಆರಂಭವಾಯಿತು.

1844: ಮಿನ್ನೇಸೋಟಾ ಮೆಸಬೀ ಗುಡ್ಡದಲ್ಲಿ ಕಬ್ಬಿಣದ ಅದಿರನ್ನು ಪತ್ತೆ ಮಾಡಲಾಯಿತು.

1882: ನ್ಯೂಯಾರ್ಕಿನಲ್ಲಿ ಮೊದಲ ಕಾರ್ಮಿಕ ದಿನದ ಪರೇಡಿನಲ್ಲಿ 10,000 ಕಾರ್ಮಿಕರು ಪಾಲುಗೊಂಡರು.

1885: ಮೊದಲ ಗ್ಯಾಸೋಲೀನ್ ಪಂಪನ್ನು ಗ್ಯಾಸೊಲೀನ್ ವ್ಯಾಪಾರಿಗೆ ತಲುಪಿಸಲಾಯಿತು.

1889: ಜರ್ಮನ್ ದೇಶದ ಕ್ರಿಸ್ಟೀನ್ ಹಾರ್ಡ್ತ್ ಮೊದಲ ಆಧುನಿಕ ಸ್ಥನಬಂಧಕ್ಕೆ ಪೇಟೆಂಟ್ ಪಡೆದರು.

1958: ಮೊದಲ ಬಣ್ಣದ ವೀಡಿಯೋ ರೆಕಾರ್ಡಿಂಗನ್ನು ಮ್ಯಾಗ್ನೆಟಿಕ್ ಟೇಪಿನಲ್ಲಿ ಪ್ರಸ್ತುತಪಡಿಸಲಾಯಿತು.

1967: ಭಾರತದ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಹಿಂದಿ ಸಮಿತಿಯನ್ನು ರಚಿಸಲಾಯಿತು.

1979: ಮೌಂಟ್ ಬ್ಯಾಟನ್ ಅವರ ಅಂತ್ಯಕ್ರಿಯೆ ಬರ್ಮಾದಲ್ಲಿ ನೆರವೇರಿಸಲಾಯಿತು.

1988: ಮಾನನಷ್ಟ ಕಾಯಿದೆಯ ವಿರೋಧಿಸಿ ಪತ್ರಿಕೆ ಉದ್ಯಮದವರು ಪ್ರತಿಭಟನೆ ಮಾಡಿದ ಕಾರಣ ರಾಷ್ಟ್ರದೆಲ್ಲೆಡೆ ಪತ್ರಿಕೆ ಇಲ್ಲದಂತಾಯಿತು.

2014: ಮಧ್ಯ ಡೆನ್ಮಾರ್ಕಿನಲ್ಲಿ ಖಾಸಗಿ ಸಣ್ಣ ಹೆಲಿಕಾಪ್ಟರ್ ಸಮುದ್ರಕ್ಕೆ ಅಪ್ಪಳಿಸಿದ ಕಾರಣ ಕನಿಷ್ಟ 3 ಜನ ಮೃತ ಪಟ್ಟು ನಾಲ್ಕನೇ ವ್ಯಕ್ತಿ ಕಾಣೆಯಾದರು.

ಪ್ರಮುಖ ಜನನ/ಮರಣ:

1846: ಈಸ್ಟ್ ಇಂಡಿಯಾ ಕಂಪನಿಯ ರಾಜ್ಯಪಾಲ ಆಗಿದ್ದ ಸರ್ ಚಾರ್ಲ್ಸ್ ಮೆಟ್ಕಾಫ್ ನಿಧನರಾದರು.

1872: ಭಾರತದ ವಕೀಲರು ಮತ್ತು ರಾಜಕಾರಣಿ ವಿ.ಓ.ಚಿದಂಬರಂ ಪಿಳ್ಳೈ ಜನಿಸಿದರು.

1888: ಭಾರತದ ಎರಡನೇ ರಾಷ್ಟ್ರಪತಿ ಆಗಿದ್ದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಜನಿಸಿದರು.

1904: ಸಂತ ಸಾಹಿತ್ಯದ ಸಂಪಾದಕ ಮತ್ತು ಪರಿಣಿತ ಬಾಲಚಂದ್ರ ಪಂಡರಿನಾಥ್ ಬಹಿರಾತ್ ಜನಿಸಿದರು.

1910: ಭಾರತೀಯ ಕ್ರಿಕೆಟಿಗರಾದ ಫೈರೋಜ್ ಪಾಲಿಯಾ ಜನಿಸಿದರು.

1928: ಕಥಕ್ ನೃತ್ಯ ಪ್ರತಿಪಾದಕಿ ದಮಯಂತಿ ಜೋಶಿ ಜನಿಸಿದರು.

1986: ಭಾರತೀಯ ಕ್ರಿಕೆಟ್ ಆಟಗಾರ ಪ್ರಜ್ಞಾನ್ ಓಝಾ ಜನಿಸಿದರು,

1991: ಭಾರತೀಯ ಕವಿ ಮತ್ತು ಲೇಖಕ ಶರದ್ ಜೋಶಿ ನಿಧನರಾದರು.

1997: ನೋಬಲ್ ಪ್ರಶಸ್ತಿ ಪುರಸ್ಕೃತೆ ಮದರ್ ಥೆರೆಸಾ ನಿಧನರಾದರು.

2015: ಭಾರತೀಯ ಗಾಯಕ, ಗೀತ ರಚನೆಕಾರ ಆದೇಶ್ ಶ್ರೀವಾತ್ಸವ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-4

 

ಪ್ರಮುಖ ಘಟನಾವಳಿಗಳು:

1665: ಪುರಂದರದ ರಾಜಾ ಜೈಸಿಂಗ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

1682: ಆಂಗ್ಲ ಖಗೋಳಶಾಸ್ತ್ರಜ್ಞ ಎಡ್ಮಂಡ್ ಹ್ಯಾಲಿ ಒಂದು ಧೂಮಕೇತು ನೋಡಿದರು. ನಂತರ ಆ ಧೂಮಕೇತುವಿಗೆ ಅವರ ಹೆಸರೇ ನೀಡಲಾಯಿತು.

1882: ಥಾಮಸ್ ಆಲ್ವಾ ಎಡಿಸನ್ ತನ್ನ ಬೆಳಕಿನ ಬಲ್ಬಿನ ಪರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ನ್ಯೂಯಾರ್ಕಿನ ಪರ್ಲ್ ಸ್ಟ್ರೀಟ್ ಸ್ಟೇಷನ್ನಿನಲ್ಲಿ ಮಾಡಿದರು.

1888: ಮಹಾತ್ಮಾ ಗಾಂಧಿಜಿಯವರು ಇಂಗ್ಲೆಂಡಿಗೆ ತೆರಳಿದರು.

1888: ಜಾರ್ಜ್ ಈಸ್ಟ್ ಮೆನ್ ಮೊದಲ ರೋಲ್-ಫಿಲ್ಮ್ ಕ್ಯಾಮೆರಾವನ್ನು ನೊಂದಾಯಿಸಿ “ಕೊಡಾಕ್” ಎಂದು ಹೆಸರಿಸಿದರು.

1921: ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಬಂಡುಕೋರರಿಗೆ “ಅಲ್ಟಿಮೇಟಮ್” ಕಳುಹಿಸಿ 48 ಗಂಟೆಗಳೊಳಗೆ ಮಡ್ರಾಸಿನಲ್ಲಿ ಶರಣಾಗುವಂತೆ ಹೇಳಿದರು.

1927: ವಿಶ್ವ ಫ್ಲಯರ್ಸ್ ಭಾರತದ ಕರಾಚಿ ತಲುಪಿದರು.

1937: ಶಿಕಾಗೋ ನಗರದಲ್ಲಿ ಪೋರಿಯೋ ಸಾಂಕ್ರಾಮಿಕದಿಂದ ಬಹಳಷ್ಟು ಮಕ್ಕಳು ಈ ರೋಗಕ್ಕೆ ತುತ್ತಾದರು.

1959: ಅಮೇರಿಕಾದ ಕಾಂಗ್ರೆಸ್ ಕಾರ್ಮಿಕ ಸುಧಾರಣೆ ಕಾಯಿದೆಯನ್ನು ಅನುಮೋದಿಸಿದರು.

1964: ಯೂರೋಪಿನ ಅತ್ಯಂತ ಉದ್ದದ ಸೇತುವೆಯನ್ನು ತೆರೆಯಲಾಯಿತು.

1967: ಮಹಾರಾಷ್ಟ್ರದ ಕೋಯ್ನಾ ಅಣೆಕಟ್ಟೆಯ ಬಳಿ 6.5 ಭೂಕಂಪ ಉಂಟಾದ ಕಾರಣ 200 ಜನ ಮೃತಪಟ್ಟರು.

1985: ಸಮುದ್ರದಲ್ಲಿ ಮುಳುಗಿದ ಟೈಟಾನಿಕ್ ಹಡಗಿನ ಭಾವಚಿತ್ರಗಳನ್ನು ಬಹಿರಂಗಪಡಿಸಲಾಯಿತು.

1998: ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಒಟ್ಟಿಗೆ ಸೇರಿ ಗೂಗಲ್ ಅನ್ನು ಅಭಿವೃದ್ಧಿ ಪಡಿಸಲು ಗೂಗಲ್ ಸಂಸ್ಥೆಯನ್ನು ನೊಂದಾಯಿಸಿ ಇದಕ್ಕಾಗಿ ಒಂದು ಬ್ಯಾಂಕ್ ಖಾತೆಯನ್ನು ತೆರೆದರು.

2012: ಉತ್ತರ ಭಾರತದ ಅಮೃತ್ಸರದಲ್ಲಿ ಮೆಕ್ ಡೊನಾಲ್ಡ್ ತನ್ನ ಮೊದಲ ಸಸ್ಯಹಾರಿ ರೆಸ್ಟೋರೆಂಟ್ ತೆರೆಯಲಿದೆ ಎಂದು ಹೇಳಿಕೆ ನೀಡಿತು.

2013: ಭಾರತದ ರಿಸರ್ವ ಬ್ಯಾಂಕಿನ 23ನೇ ರಾಜ್ಯಪಾಲರಾಗಿ ರಘುರಾಮ್ ರಾಜನ್ ಆಯ್ಕೆಯಾದರು.

ಪ್ರಮುಖ ಜನನ/ಮರಣ:

1825: ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಎಂದೇ ಖ್ಯಾತರಾಗಿದ್ದ ದಾದಾಭಾಯಿ ನವರೋಜಿ ಜನಿಸಿದರು.

1880: ಬೆಂಗಾಲಿ ಲೇಖಕ ಮತ್ತು ರಾಜಕಾರಣಿ ಭೂಪೇಂದ್ರನಾಥ್ ದತ್ ಜನಿಸಿದರು.

1923: ರಾಜಕಾರಣಿ ಮತ್ತು ವಕೀಲರಾಗಿದ್ದ ರಾಮ್ ಕಿಶೋರ್ ಶುಕ್ಲ ಜನಿಸಿದರು.

1929: 1978-84ರ ವರೆಗೆ ಕ್ರಿಕೆಟ್ ಟೆಸ್ಟ್ ನಲ್ಲಿ ಅಂಪೈರ್ ಆಗಿದ್ದ ಎನ್.ಹನುಮಂತರಾವ್ ಜನಿಸಿದರು.

1941: ಆಂಧ್ರಪ್ರದೇಶದ 19ನೇ ರಾಜ್ಯಪಾಲರಾಗಿದ್ದ ಸುಶಿಲ್ ಕುಮಾರ್ ಶಿಂಧೆ ಅವರು ಜನಿಸಿದರು.

1952: ಭಾರತದ ಖ್ಯಾತ ನಟ ರಿಷಿ ಕಪೂರ್ ಜನಿಸಿದರು.

1962: ಭಾರತದ ಕ್ರಿಕೆಟ್ ಆಟಗಾರ ಕಿರಣ್ ಮೋರೆ ಜನಿಸಿದರು.

1964: ಗೀತ ರಚನೆಕಾರ ಮತ್ತು ಹಾಡುಗಾರ ಆಗಿದ್ದ ಆದೇಶ್ ಶ್ರೀವಾತ್ಸವ ಜನಿಸಿದರು.

1997: ಭಾರತೀಯ ಕವಿ, ಲೇಖಕ ಮತ್ತು ಚಿತ್ರಕಥೆಕಾರ ಧರಂವೀರ್ ಭಾರತಿ ನಿಧನರಾದರು.

2006: ಪರಿಸರವಾದಿ ಸ್ಟೀವ್ ಐರ್ವಿನ್ ಸಮುದ್ರದ ಮೀನು ಕಡಿದು ಮೃತಪಟ್ಟರು.

2015: ಗೋವಾದ 7ನೇ ಮುಖ್ಯಮಂತ್ರಿಯಾಗಿದ್ದ ವಿಲ್ಫ್ರೆಡ್ ಡಿಜೋಜ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-3

 

ಪ್ರಮುಖ ಘಟನಾವಳಿಗಳು:

1609: ಮ್ಯಾನ್ ಹ್ಯಾಟನ್ ದ್ವೀಪವನ್ನು ಹೆನ್ರಿ ಹಡ್ಸನ್ ಕಂಡುಹಿಡಿದರು.

1833; ಮೊದಲ ದೈನಂದಿನ ಪತ್ರಿಕೆಯಾದ ನ್ಯೂಯಾರ್ಕ್ ಸನ್ ಪ್ರಕಟಣೆ ಮಾಡಲಾಯಿತು.

1912: ವಿಶ್ವದ ನೌಕಾಪಡೆಗೆ ಆಹಾರವನ್ನು ಸರಬರಾಜು ಮಾಡುವ ಸಲುವಾಗಿ ವಿಶ್ವದ ಮೊದಲ ಕ್ಯಾನರಿ ಪ್ರಾರಂಭವಾಯಿತು.

1921: ಬೆಲ್ಜಿಯಮ್ಮಿನ ಕಮ್ಮ್ಯುನಿಸ್ಟ್ ಪಕ್ಷವಾದ ಕೆ.ಪಿ.ಬಿ ರೂಪಿಸಲಾಯಿತು.

1940: ಮೊದಲ ಹೈಡೆಫಿನೆಷನ್ ಬಣ್ಣ ಟಿವಿಯನ್ನು ಪ್ರದರ್ಶಿಸಲಾಯಿತು.

1953: ಮಾನವ ಹಕ್ಕುಗಳ ಮೇಲಿನ ಯೂರೋಪಿಯನ್ ಒಪ್ಪಂದವು ಜಾರಿಗೆ ತರಲಾಯಿತು.

1967: ಸ್ವೀಡನ್ನಿನಲ್ಲಿ ವಾಹನಗಳನ್ನು ರಸ್ತೆಯ ಬಲ ಭಾಗದಲ್ಲಿ ಚಾಲನೆ ಮಾಡಲು ಪ್ರಾರಂಭಿಸಲಾಯಿತು.

1984: ದಕ್ಷಿಣ ಆಫ್ರಿಕಾ ಸಂವಿಧಾನವನ್ನು ಅಳವಡಿಸಿಕೊಂಡಿತು.

1994: ಐಟಿಸಿ, ಐಓಸಿ ಮತ್ತು ಐಟಿಡಿಸಿ ಸೇರಿದಂತೆ 21 ಪಬ್ಲಿಕ್ ಸೆಕ್ಟರ್ ಯೂನಿಟ್ ಗಳಲ್ಲಿ ಸರ್ಕಾರಿ ಹಿಡುವಳಿಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿತು.

1997: ಮಧ್ಯಪ್ರದೇಶದ ಉಚ್ಚ ನ್ಯಾಯಾಲವು ಕಾಲೇಜಿನಲ್ಲಿ ರಾಗಿಂಗ್ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಹುಡುಗಿಯ ಕುಟುಂಬದವರಿಗೆ 50,000 ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

1999: ಕಾರ್ಗಿಲ್ ಘರ್ಷಣೆಯ ನಂತರ ಭಾರತ ಮಿಲಿಟರಿ ಆಧುನಿಕರಣದ ಒಂದು ಹೊಸ ಹಂತವನ್ನು ಪ್ರಾರಂಭಿಸಿತು.

2013: ಮೈಕ್ರೋಸಾಫ್ಟ್ ಕಂಪೆನಿ ನೋಕಿಯಾ ಸಂಸ್ಥೆಯನ್ನು 7.2 ಬಿಲಿಯನ್ನಿಗೆ ಖರೀದಿಸಿತು.

ಪ್ರಮುಖ ಜನನ/ಮರಣ:

1905: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮುಖಂಡ ಕಮಲಾಪತಿ ತ್ರಿಪಾಠಿ ಜನಿಸಿದರು.

1953: ಖ್ಯಾತ ತಬಲಾ ವಾದಕ ಲಕ್ಷ್ಮಣ್ ರಾವ್ ಪರ್ವತ್ಕರ್ ನಿಧನರಾದರು.

1956: ಭಾರತೀಯ ನಟ ಮತ್ತು ನಿರ್ದೇಶಕ ಜೇಸುದಾಸ್ ಗುಪ್ತ ಜನಿಸಿದರು.

1971: ಮ್ಯಾನ್ ಬುಕ್ಕರ್ ಪ್ರಶಸ್ತಿ ವಿಜೇತ ಲೇಖಕ ಕಿರಣ್ ದೇಸಾಯಿ ಜನಿಸಿದರು.

1974: ಭಾರತೀಯ ಕ್ರಿಕೆಟ್ ಆಟಗಾರ ರಾಹುಲ್ ಸಾಂಘ್ವಿ ಜನಿಸಿದರು.

1997: ಪ್ರಸಿದ್ಧ ಗೀತರಚನೆಕಾರ ಮತ್ತು ಪ್ರಸಿದ್ಧ ಕವಿ ಅಂಜನ್ (ಲಾಲ್ಜಿ ಪಾಂಡೆ) ನಿಧನರಾದರು.

2014: ಭಾರತದ 14ನೇ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎ.ಪಿ.ವೆಂಕಟೇಶ್ವರನ್ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-2

 

ಪ್ರಮುಖ ಘಟನಾವಳಿಗಳು:

1789: ಅಮೇರಿಕಾದಲ್ಲಿ ಕಾಂಗ್ರೆಸ್ ಸರ್ಕಾರ ಅಮೇರಿಕಾದ ಖಜಾನೆ ಇಲಾಖೆಯನ್ನು ಸ್ಥಾಪಿಸಿತು.

1859: ಹವಾಯಿಯಲ್ಲಿ ಅನಿಲ ಬೆಳಕನ್ನು ಪರಿಚಯಿಸಲಾಯಿತು.

1859: ಸೌರ ಸೂಪರ್ ಸ್ಟಾರ್ಮಿನಿಂದ ವಿದ್ಯುತ್ ಟೆಲಿಗ್ರಾಫ್ ಸೇವೆಗೆ ಪರಿಣಾಮ ಬೀರಿತು.

1867: ನೆದರ್ಲ್ಯಾಂಡಿನ ಹಾರ್ಲೆಮ್ಮಿನಲ್ಲಿ ಮೊದಲ ಬಾಲಕಿಯರ ಶಾಲೆ ತೆರೆಯಲಾಯಿತು.

1898: ಮೊದಲ ಬಾರಿಗೆ ಯುದ್ಧದಲ್ಲಿ ಮಶೀನ್ ಗನ್ನನ್ನು ಬಳಸಲಾಯಿತು.

1929: ಮಾರ್ಗರೀನ್ ಯೂನಿಯನ್ ಮತ್ತು ಲಿವರ್ ಬ್ರದರ್ಸ್ ವಿಲೀನದಿಂದ ಯುನಿಲಿವರ್ ಸಂಸ್ಥೆ ರೂಪಿತವಾಯಿತು.

1937: ರಾಷ್ಟ್ರೀಯ ವಸತಿ ಕಾಯಿದೆಯ ಪ್ರಕಾರ ಅಮೇರಿಕಾದ ವಸತಿ ಪ್ರಾಧಿಕಾರವು ರಚಿಸಲಾಯಿತು.

1946: ಭಾರತದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಈ ತಾತ್ಕಾಲಿಕ ಸರ್ಕಾರವನ್ನು ಭಾರತದ ಸಂವಿಧಾನ ಸಭೆಯಿಂದ ರಚಿಸಲಾಯಿತು.

1946: ಜವಹರ ಲಾಲ್ ನೆಹರು ಭಾರತದಲ್ಲಿ ಸರ್ಕಾರವನ್ನು ರಚಿಸಿದರು.

1947: ಗಾಂಧೀಜಿಯನ್ನು ಕಲ್ಕತ್ತಾ ಮನೆಯಲ್ಲಿ ಬಂಧಿಸಲಾಯಿತು. ಶಾಂತಿ ಪ್ರಯತ್ನಗಳು ತೀವ್ರಗೊಂಡವು.

1956: ಭಾರತದಲ್ಲಿ ರೈಲಿನಡಿಯಲ್ಲಿ ಆರ್.ಆರ್ ಸೇತುವೆ ಕುಸಿದು 120 ಮಂದಿ ಮೃತರಾದರು.

1958: ರಾಷ್ಟ್ರೀಯ ರಕ್ಷಣಾ ಶಿಕ್ಷಣ ಕಾಯಿದೆಗೆ ಸಹಿ ಹಾಕಲಾಯಿತು.

1969: ಅಮೇರಿಕಾದ ಮೊದಲ ಸ್ವಯಂ ಚಾಲಿತ ಟೆಲ್ಲರ್ ಮಷಿನನ್ನು ನ್ಯೂಯಾರ್ಕಿನ ರಾಕ್ವಿಲ್ಲೆ ಸೆಂಟರಿನಲ್ಲಿ ಸ್ಥಾಪಿಸಲಾಯಿತು.

1970: ರಾಷ್ಟ್ರಪತಿ ವಿ.ವಿ.ಗಿರಿಯವರು ಕನ್ಯಾಕುಮಾರಿಯಲ್ಲಿ ವಿವೇಕಾನಂದ ರಾಕ್ ಮೆಮೋರಿಯಲ್ ಉದ್ಘಾಟಿಸಿದರು.

1984: ಅಮೃತಸರದಗೋಲ್ಡನ್ ಟೆಂಪಲ್ಲಿನಲ್ಲಿ ಸರ್ಕಾರದ ಉದ್ಯೋಗದ ಬಗ್ಗೆ ಸಾವಿರಾರು ಸಿಖ್ಖರು ಪ್ರತಿಭಟನೆ ನಡೆಸಿದರು.

1987: ಫಿಲಿಪ್ಸ್ ಸಂಸ್ಥೆಯು ಸಿಡಿ-ವೀಡಿಯೋವನ್ನು ಪರಿಚಯಿಸಲಾಯಿತು.

ಪ್ರಮುಖ ಜನನ/ಮರಣ:

1838: ಭಾರತೀಯ ಗುರು ಮತ್ತು ತತ್ವಜ್ಞಾನಿ ಭಕ್ತಿವಿನೋದ ಠಾಕುರ್ ಜನಿಸಿದರು.

1918: ಲಾಲ್ ನಿಶಾನ್ ಪಕ್ಷದ ಅಧ್ಯಕ್ಷರಾಗಿದ್ದ ದತ್ತ ದೇಶ್ಮುಖ್ ಜನಿಸಿದರು.

1941: ಭಾರತೀಯ ನಟಿ ಸಾಧನ ಶಿವದಾಸಾನಿ ಜನಿಸಿದರು.

1960: ಭಾರತೀಯ ಸಸ್ಯಶಾಸ್ತ್ರಜ್ಞ ಡಾ.ಶಂಕರ್ ಪುರುಷೋತ್ತಮ್ ಅಧಾರ್ಕರ್ ನಿಧನರಾದರು.

1965: ಭಾರತೀಯ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಪಾರ್ಥೊ ಸೇನ್ ಗುಪ್ತ ಜನಿಸಿದರು.

1971: ತಮಿಳು, ತೆಲಗು ಚಿತ್ರನಟ ಪವನ್ ಕಲ್ಯಾಣ್ ಜನಿಸಿದರು.

1988: ಭಾರತೀಯ ಕ್ರಿಕೆಟ್ ಆಟಗಾರ ಇಶಾಂತ್ ಶರ್ಮ ಜನಿಸಿದರು.

2009: ಭಾರತದ ಆಂಧ್ರಪ್ರದೇಶದ 14ನೇ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ನಿಧನರಾದರು.

 

Categories
e-ದಿನ

ಸೆಪ್ಟೆಂಬರ್-1

 

ಪ್ರಮುಖ ಘಟನಾವಳಿಗಳು:

1804: ಜರ್ಮನ್ ಖಗೋಳಶಾಸ್ತ್ರಜ್ಞ ಕಾರ್ಲ್ ಲುಡ್ವಿಗ್ ಹಾರ್ಡಿಂಗ್ ಅವರು ದೊಡ್ಡ ಬೆಲ್ಟ್ ಕ್ಷುದ್ರಗ್ರಹದಲ್ಲಿ ಒಂದಾದ ಜುನೋ ಪತ್ತೆಹಚ್ಚಿದರು.

1874: ಸಿಡ್ನಿ ಜೆನರಲ್ ಅಂಚೆ ಕಛೇರಿ ಆಸ್ಟ್ರೇಲಿಯಾದಲ್ಲಿ ತೆರೆಯಲಾಯಿತು.

1887: ಡಚ್ ಹವ್ಯಾಸಿ ಛಾಯಾಗ್ರಾಹಣ ಸಹಕಾರ ಸಂಘ ಸ್ಥಾಪನೆಯಾಯಿತು.

1947: ಭಾರತ ದೇಶಕ್ಕೆ ಅಧಿಕೃತ ಸಮಯ ಎಂದು ಇಂಡಿಯನ್ ಸ್ಟಾಂಡರ್ಡ್ ಟೈಂ (ಐ.ಎಸ್.ಟಿ) ಅನ್ನು ಪರಿಚಯಿಸಲಾಯಿತು.

1956: ಭಾರತದ ತ್ರಿಪುರಾ ರಾಜ್ಯವನ್ನು ಒಕ್ಕೂಟದ ಪ್ರದೇಶವನ್ನಾಗಿ ಸೇರ್ಪಡೆ ಮಾಡಲಾಯಿತು.

1956: ಜೀವ ವಿಮಾ ನಿಗಮ ಸ್ಥಾಪಿಸಲಾಯಿತು ಮತ್ತು ಎಲ್ಲಾ ಜೀವ ವಿಮಾ ವ್ಯಾಪಾರ ಮಾಡುವ ಸಂಸ್ಥೆಗಳನ್ನು ರಾಷ್ಟ್ರೀಕರಿಸಿ ಜೀವ ವಿಮಾ ನಿಗಮದಡಿಯಲ್ಲಿ ವಿಲೀನಗೊಳಿಸಲಾಯಿತು.

1962: ವಿಶ್ವಸಂಸ್ಥಯು ಭುಮಿಯ ಜನಸಂಖ್ಯೆಯು 3 ಶತಕೋಟಿ ಮುಟ್ಟಿದೆ ಎಂದು ಘೋಷಿಸಿತು.

1985: ಮಂಜುಗಡ್ಡೆಗೆ ಗುದ್ದಿ 1912ರಲ್ಲಿ ಮುಳುಗಿ 1513 ಜೀವಗಳನ್ನು ಸಾವನ್ನಪ್ಪಿದ ಟೈಟಾನಿಕ್ ಹಡಗಿನ ಧ್ವಂಸವನ್ನು ಫ್ರೆಂಚ್ ವಿಶೇಷ ತಂಡದವರು ಪತ್ತೆ ಮಾಡಿದರು.

1989: ಅಮೇರಿಕಾದಲ್ಲಿ ನೂತನ ಕಾರಿನ ಸುರಕ್ಷತಾ ಶಾಸನದಲ್ಲಿ ಎಲ್ಲಾ ಹೊಸದಾಗಿ ತಯಾರಿಸುವ ಕಾರುಗಳಿಗೆ ಚಾಲಕನ ಬದಿಯಲ್ಲಿ ಏರ್ ಬ್ಯಾಗ್ ಅಳವಡಿಸುವುದು ಅಗತ್ಯವೆಂದು ನಿರ್ಣಯಿಸಲಾಯಿತು.

1998: ಟಾಟಾ ಸಂಸ್ಥೆಯವರು ದೇಶೀಯ ವಲಯದಲ್ಲಿ ವಿದೇಶೀ ಷೇರುಗಳ ಪಾಲುದಾರಿಕೆಯೊಂದಿಗೆ ವಿಮಾನಯಾನ ನಡೆಸಲು ಹೂಡಿದ್ದ 1475 ಕೋಟಿ ರೂ ಯನ್ನು ಹಿಂಪಡೆದರು.

2015: ಗೂಗಲ್ ತನ್ನ ಲೋಗೋವನ್ನು ಪುನರ್ವಿನ್ಯಾಸಗೊಳಿಸಿತು.

ಪ್ರಮುಖ ಜನನ/ಮರಣ:

1896: ಸಾಮಾಜಿಕ ಕಾರ್ಯಕರ್ತ ಮತ್ತು ಸಾಹಿತಿ ಭಕ್ತಿವೇದಾಂತ ಸ್ವಾಮಿ ಜನಿಸಿದರು.

1909: ಆಂಗ್ಲ ಭಾಷೆಯಿಂದ ಹಿಂದಿ ಅನುವಾದ ಸುಲಭ ನಿಘಂಟು ತಯಾರಿಸಿದ ಕಾಮಿಲ್ ಬುಲ್ಕೆ ಜನಿಸಿದರು.

1915: ಉರ್ದು ಕಥೆಗಾರ ಹಿಂದಿ ಚಲನಚಿತ್ರ ಕಥೆಗಾರ ರಾಜೀಂದ್ರಸಿಂಗ್ ಬೇಡಿ ಜನಿಸಿದರು.

1970: ಭಾರತೀಯ-ಅಮೇರಿಕಾ ನಟಿ ಮತ್ತು ಲೇಖಕಿ ಪದ್ಮ ಲಕ್ಷ್ಮಿ ಜನಿಸಿದರು.

1999: ಇಸ್ರೋದ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾದ ಡಾ.ಎಸ್.ಶ್ರೀನಿವಾಸನ್ ನಿಧನರಾದರು.

 

Categories
e-ದಿನ

ಆಗಸ್ಟ್-15

 

ಪ್ರಮುಖ ಘಟನಾವಳಿಗಳು:

1635: ಮೊದಲ ಉತ್ತರ ಅಮೇರಿಕಾದ ಚಂಡಮಾರುತವು ಪ್ಲೈಮೌತ್ ಕಾಲೋನಿಯನ್ನು ಆಕ್ರಮಿಸಿತು.

1843: ಪ್ರಪಂಚದ ಎರಡನೆಯ ಅತಿ ಹಳೆಯ ಮನೋರಂಜನಾ ಉದ್ಯಾನ ಕೋಪನ್ ಹೇಗನ್ ಉದ್ಯಾನವನ ತೆರೆಯಲಾಯಿತು.

1848: ದಂತ ತಪಾಸಣಾ ಕುರ್ಚಿಯನ್ನು ಎಂ.ವಾಲ್ಡೋ ಹ್ಯಾನ್ಚೆಟ್ ಪೇಟೆಂಟ್ ಪಡೆದರು.

1906: ಮೊದಲ ಸರಕು ವಿತರಣಾ ಸುರಂಗ ವ್ಯವಸ್ಥೆಯು ಚಿಕಾಗೋದಲ್ಲಿ ಆರಂಭಿಸಲಾಯಿತು.

1947: 190 ವರ್ಷಗಳ ಬಳಿಕ ಭಾರತವು ಬ್ರಿಟೀಶ್ ಆಳ್ವಿಕೆಯಿಂದ ಸ್ವಾತಂತ್ರ ಪಡೆಯಿತು.

1947: ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನ ಪಾಕಿಸ್ತಾನದ ಗವರ್ನರ್ ಜನರಲ್ ಆಗಿ ಪ್ರಮಾಣವಚನ ಸ್ವೀಕರಿಸಿದರು.

1949: ಭಾರತದ 114000 ಹಳ್ಳಿಗಳಲ್ಲಿ ಪಂಚಾಯತಿ ರಾಜ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.

1950: ಭಾರತದ ಆಂಧ್ರಪ್ರದೇಶದಲ್ಲಿ ಶ್ರೀಕಾಕುಲಂ ಜಿಲ್ಲೆಯು ರೂಪುಗೊಂಡಿತು.

1955: ಗೋವಾದ ಸ್ವಾತಂತ್ರಕ್ಕೆ ಸತ್ಯಾಗ್ರಹ ಆರಂಭವಾಯಿತು.

1960: ಮಹಾರಾಷ್ಟ್ರ ರಾಜ್ಯ ಸಹಕಾರಿ ಗೃಹಾವಿಟ್ಟಾ ಕಾರ್ಪೊರೇಷನ್ ಸ್ಥಾಪಿಸಲಾಯಿತು.

1969: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥಯನ್ನು (ISRO) ಪರಮಾಣು ಇಂಧನ ಇಲಾಖೆ ಅಡಿಯಲ್ಲಿ ರಚಿಸಲಾಯಿತು.

1972: 6 ಅಂಕೆಗಳ ಅಂಚೆ ಸೂಚ್ಯಂಕ ಸಂಖ್ಯೆ (PIN CODE) ಅನ್ನು ಪರಿಚಯಿಸಲಾಯಿತು.

1982: ದೂರದರ್ಶನದ ರಾಷ್ಟ್ರೀಯ ಕಾರ್ಯಕ್ರಮ ಮತ್ತು ದೆಹೆಲಿ ದೂರದರ್ಶನದಿಂದ ಪ್ರಾರಂಭವಾದ ರಾಷ್ಟ್ರವ್ಯಾಪಿ ಬಣ್ಣದಲ್ಲಿ ಪ್ರಸಾರವಾಯಿತು.

1985: ಅಸ್ಸಾಂ ವಿದೇಶಿ ಪ್ರಜೆಗಳ ವಿಷಯದ ಮೇಲೆ ಒಪ್ಪಂದವು ತಲುಪಿ ಕಿರಿಕಿರಿಯುಂಟು ಮಾಡಿತು.

1995: ಪಿ.ವಿ.ನರಸಿಂಹರಾವ್ ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾನದ ಊಟದ ಯೋಜನೆಯನ್ನು ಪರಿಚಯಿಸಲಾಯಿತು.

1997: 1500 ರೂಗಳಿಂದ ಸ್ವಾತಂತ್ರ ಹೋರಾಟಗಾರರ ಪಿಂಚಣಿಯನ್ನು ದುಪ್ಪಟ್ಟು ಹೆಚ್ಚಿಸಲಾಯಿತು.

1998: ಭಾರತೀಯ ಸ್ವಾತಂತ್ರದ ಸುವರ್ಣ ಮಹೋತ್ಸವ ಆಚರಣೆಗಳು ಪೂರ್ಣಗೊಂಡವು.

ಪ್ರಮುಖ ಜನನ/ಮರಣ:

1798: ಭಾರತೀಯ ಯೋಧ ಸಂಗೊಳ್ಳಿ ರಾಯಣ್ಣ ಜನಿಸಿದರು.

1872: ಭಾರತೀಯ ಗುರು, ಕವಿ ಮತ್ತು ತತ್ವಜ್ಞಾನಿ ಶ್ರೀ ಅರಬಿಂದೋ ಜನಿಸಿದರು.

1873: ಭಾರತೀಯ ಪುರಾತತ್ವ ಶಾಸ್ತ್ರಜ್ಞ ಮತ್ತು ಇತಿಹಾಸಕಾರ ರಾಮಪ್ರಸಾದ್ ಚಂದ ಜನಿಸಿದರು.

1938: ಭಾರತದ ವ್ಯಂಗ್ಯಚಿತ್ರಕಾರ ಪ್ರಾಣ್ ಕುಮಾರ್ ಶರ್ಮ ಜನಿಸಿದರು.

1961: ಖ್ಯಾತ ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಜನಿಸಿದರು.

1992: ಭಾರತದ ಚೆಸ್ ಆಟಗಾರ ಭಾಸ್ಕರನ್ ಆಧಿಬನ್ ಜನಿಸಿದರು.

2004: ಗುಜರಾತಿನ 8ನೇ ಮುಖ್ಯಮಂತ್ರಿ ಅಮರ್ಸಿನ್ ಚೌಧರಿ ನಿಧನರಾದರು.

2005: ಭಾರತದ ಚರ್ಮರೋಗ ವೈದ್ಯ ಬೆಂದಪುಡಿ ವೆಂಕಟ ಸತ್ಯನಾರಾಯಣ ನಿಧನರಾದರು.

 

Categories
e-ದಿನ

ಆಗಸ್ಟ್-14

 

ಪ್ರಮುಖ ಘಟನಾವಳಿಗಳು:

1820: ಮೊದಲ ಅಮೇರಿಕಾದ ಕಣ್ಣಿನ ಆಸ್ಪತ್ರೆಯಾದ “ನ್ಯೂಯಾರ್ಕ್ ಐ ಇನ್ಫರ್ಮರಿ” ನ್ಯೂಯಾರ್ಕ್ ನಗರದಲ್ಲಿ ತೆರೆಯಲಾಯಿತು.

1880: ಉತ್ತರ ಯೂರೋಪಿನ ಅತೀ ದೊಡ್ಡ ಗೋಥೆಕ್ ಕ್ಯಾಥೆಡ್ರಲ್ ಆದ ಕೊಲೊಗ್ನೆ ಕ್ಯಾಥೆಡ್ರಲ್ ನಿರ್ಮಾಣ ಪೂರ್ಣಗೊಂಡಿತು.

1885: ತುಕ್ಕು ರಹಿತ ಪೇಂಟಿಗಾಗಿ ಜಪಾನಿಗೆ ಮೊದಲ ಪೇಟೆಂಟ್ ನೀಡಲಾಯಿತು.

1893: ಫ್ರಾನ್ಸ್ ದೇಶವು ವಾಹನಗಳ ನೊಂದಣಿ ಮತ್ತು ಚಾಲನಾ ಪರೀಕ್ಷೆಯನ್ನು ಮೊದಲ ಬಾರಿಗೆ ಪರಿಚಯಿಸಿತು.

1894: ಸರ್ ಆಲಿವರ್ ಜೋಸೆಫ್ ಲಾಡ್ಜ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಬ್ರಿಟಿಶ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ ಸಭೆಯಲ್ಲಿ ಮೋರ್ಸ್ ಕೋಡ್ ಬಳಸಿ ನಿಸ್ತಂತು ಟೆಲಿಗ್ರಾಫಿ (ರೇಡಿಯೋ) ಪ್ರದರ್ಶಿಸಿದರು.

1900: ಮೊದಲ ವಿದ್ಯುತ್ ಟ್ರಾಂ ನೆದರ್ಲ್ಯಾಂಡಿನಲ್ಲಿ ಆರಂಭವಾಯಿತು.

1908: ಮೊದಲ ಸೌಂದರ್ಯ ಸ್ಪರ್ಧೆಯನ್ನು ಇಂಗ್ಲೆಂಡಿನಲ್ಲಿ ಏರ್ಪಡಿಸಲಾಯಿತು.

1917: ಚೀನಾ ಜರ್ಮನಿ ಮತ್ತು ಆಸ್ಟ್ರಿಯಾದ ಮೇಲೆ ಯುದ್ಧ ಘೋಷಿಸಿತು.

1932: ಫಿಲಿಪ್ಸ್ ಸಂಸ್ಥೆಯು ದಶಲಕ್ಷ ರೇಡಿಯೊ ಉತ್ಪಾದನೆಯನ್ನು ಪೂರೈಸಿದರು.

1935: ಸಾಮಾಜಿಕ ಭದ್ರತಾ ಕಾಯಿದೆಯು ಕಾನೂನಾಗಿ ಅಂಗೀಕಾರವಾಯಿತು.

1937: ಜಪಾನಿನ ಮೇಲೆ ಚೀನಾ ಯುದ್ಧ ಘೋಷಿಸಿತು.

1938: ಬಿಬಿಸಿ ಟೀವಿಯಲ್ಲಿ ಮೊದಲ ಚಲನಚಿತ್ರ (ಪ್ರೇಘ್ ವಿದ್ಯಾರ್ಥಿ) ಪ್ರಸಾರವಾಯಿತು.

1947: ಭಾರತದಿಂದ ಪಾಕಿಸ್ತಾನವನ್ನು ವಿಭಜಿಸಲಾಯಿತು.

1974: ಚಿನ್ನವನ್ನು ಹೊಂದಬಹುದೆಂದು ಅಮೇರಿಕಾ ತನ್ನ ಪ್ರಜೆಗಳಿಗೆ ಅಧಿಕಾರ ನೀಡಿತು.

1984: IBM PC Dos ಆವೃತ್ತಿ 3.0 ಅನ್ನು ಬಿಡಿಗಡೆ ಮಾಡಿತು.

1986: ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಬೆನೆಜಿರ್ ಭುಟ್ಟೋರನ್ನು ಬಂಧಿಸಲಾಯಿತು.

1994: ಬಾಹ್ಯಾಕಾಶದ ದೂರದರ್ಶಕ ಹಬಲ್ ಯುರೇನಸ್ ಗ್ರಹದ ಉಂಗುರಗಳ ಛಾಯಾಚಿತ್ರವನ್ನು ಸೆರೆಹಿಡಿಯಿತು.

1997: ಭಾರತದ ಸ್ವಾತಂತ್ರದ 50 ವರ್ಷಗಳ ಸ್ಮರಣಾರ್ಥವಾಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಮಾಡಲಾಯಿತು.

2015: ನ್ಯೂಯಾರ್ಕಿನ ಯೂನಿವರ್ಸಿಟಿ ಲ್ಯಾಗೋನ್ ಮೆಡಿಕಲ್ ಸೆಂಟರಿನಲ್ಲಿ ಡಾ.ಎಡುರಾಡೋ ರೋಡ್ರಿಗ್ಸ್ ಅವರಿಂದ ಪ್ಯಾಟ್ರಿಕ್ ಹಾರ್ಡಿಸನ್ ಅವರ ಮೇಲೆ ವ್ಯಾಪಕವಾದ ಮುಖದ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಪ್ರಮುಖ ಜನನ/ಮರಣ:

1920: ಏರ್ ಚೀಫ್ ಮಾರ್ಶಲ್ ರುಶಿಕೇಶ್ ಮುಳಗಾಂವಕರ್ ಜನಿಸಿದರು.

1957: ಪ್ರಖ್ಯಾತ ಬಾಲಿವುಡ್ ಹಾಸ್ಯ ನಟ ಜಾನಿ ಲಿವರ್ ಜನಿಸಿದರು.

1968: ಭಾರತೀಯ ಕ್ರಿಕೆಟ್ ತರಬೇತುದಾರ ಮತ್ತು ಆಟಗಾರ ಪ್ರವೀಣ್ ಆಮ್ರೆ ಜನಿಸಿದರು.

1996: ಮುನ್ಶಿ ಪ್ರೇಮಾನಂದ್ ಅವರ ಮಗ ಅಮ್ರಿತ್ ರೈ ನಿಧನರಾದರು.

1998: 1930 ಮತ್ತು 40ರ ದಶಕದಲ್ಲಿ ರೇಡಿಯೋ ಕೇಳುಗರನ್ನು ಮುದಗೊಳಿಸಿದ ಕ್ಲಾಸಿಕಲ್ ಗಾಯಕಿ ಶಮ್ಶಾದ್ ಬೇಗಮ್ ನಿಧನರಾದರು.

2002: ಮಹಾರಾಷ್ಟ್ರದ 14ನೇ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್ ನಿಧನರಾದರು.

 

Categories
e-ದಿನ

ಆಗಸ್ಟ್-13

 

ಪ್ರಮುಖ ಘಟನಾವಳಿಗಳು:

1608: ಜೇಮ್ಸ್ ಟೌನ್ ಮೊದಲ ದಿನಗಳ ಬಗ್ಗೆ ಜಾನ್ ಸ್ಮಿತ್ ಕಥೆಯನ್ನು ಬರೆದು ಪ್ರಕಟಿಸಲು ಸಲ್ಲಿಸಿದರು.

1642: ಡಚ್ ಖಗೋಳಶಾಸ್ತ್ರಜ್ಞ ಕ್ರಿಸ್ಟಿಯಾನ್ ಹ್ಯೂಗೆನ್ಸ್ ಮಂಗಳದ ದಕ್ಷಿಣ ಧ್ರುವದ ಕ್ಯಾಪನ್ನು ಕಂಡುಹಿಡಿದರು.

1784: ಈಸ್ಟ್ ಇಂಡಿಯಾ ಕಂಪನಿಯು ಭಾರತದ ಮೂಲಕ ಕೇಂದ್ರೀಕೃತ ನಿಯಂತ್ರಕ ಪ್ರಾಧಿಕಾರವಾಗಿ “ಪಿಟ್ ಇಂಡಿಯಾ ಆಕ್ಟ್” ಇಂದ ನೇಮಿಸಲ್ಪಟ್ಟು ಇದನ್ನು ಇಂಗ್ಲೆಂಡಿನಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.

1784: ಯುನೈಟೆಡ್ ಸ್ಟೇಟ್ಸ್ ಶಾಸಕಾಂಗವು ಆನ್ನಾಪೋಲೀಸಿನಲ್ಲಿ ಕೊನೆಯ ಬಾರಿಗೆ ಸಮಾವೇಶಗೊಂಡಿತು.

1814: ಡಚ್ ದೇಶದವರು ‘ಕೇಪ್ ಆಫ್ ಗುಡ್ ಹೋಪ್’ನ್ನು ಬ್ರಿಟೀಷರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

1846: ಅಮೇರಿಕಾದ ಧ್ವಜವನ್ನು ಮೊದಲ ಬಾರಿಗೆ ಲಾಸ್ ಏಂಜೆಲಿಸ್ ನಲ್ಲಿ ಹಾರಿಸಲಾಯಿತು.

1889: ನಾಣ್ಯವನ್ನು ಹಾಕಿ ಉಪಯೋಗಿಸುವ “ಕಾಯಿನ್ ಆಪರೇಟೆಡ್ ಟೆಲಿಫೊನ್” ಗೆ ವಿಲಿಯಂ ಗ್ರೇ ಪೇಟೆಂಟ್ ಪಡೆದರು.

1907: ಹ್ಯಾರಿ ಎನ್ ಆಲೆನ್ ಅವರು ಆಮದು ಮಾಡಿದ ಟ್ಯಾಕ್ಸಿ ಕ್ಯಾಬ್ ನ್ಯೂಯಾರ್ಕ್ ನಗರದಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿತು.

1912: ಫಿಲಾಡೆಲ್ಫಿಯಾದ ಸೇಂಟ್ ಜೋಸೆಫ್ ಕಾಲೇಜಿಗೆ ಮೊದಲ ಪ್ರಾಯೋಗಿಕ ರೇಡಿಯೋ ಸನ್ನದು ಪರವಾನೆಯನ್ನು ನೀಡಲಾಯಿತು.

1913: ಇಂಗ್ಲೆಂಡಿನ ಹ್ಯಾರಿ ಬ್ರೀರ್ಲೆ ಅವರಿಂದ “ಸ್ಟೇನ್ ಲೆಸ್ ಸ್ಟೀಲ್” ಕಂಡುಹಿದಿಡರು.

1918: ಬೇಯರಿಶ್ ಮೋಟೋರೆನ್ ವೆರ್ಕೆ ಎ.ಜಿ. (BMW) ಜರ್ಮನಿಯಲ್ಲಿ ಸಾರ್ವಜನಿಕ ಸಂಸ್ಥೆಯಾಗಿ ಸ್ಥಾಪಿಸಲಾಯಿತು.

1923: ಅಮೇರಿಕಾದ ಸ್ಟೀಲ್ ಕಾರ್ಪ್ 8-ಗಂಟೆಗಳ ಕೆಲಸದ ಅವಧಿಯನ್ನು ಆರಂಭಿಸಿತು.

1951: ಗ್ರೇಟ್ ಬ್ರಿಟನ್ ಮತ್ತು ಇರಾಕಿನ ನಡುವೆ ನೂತನ ತೈಲ ಒಪ್ಪಂದಕ್ಕೆ ಸಹಿ ಹಾಕಲಾಯಿತು.

1956: ರಾಷ್ಟ್ರೀಯ ಹೆದ್ದಾರಿ ಕಾಯಿದೆಗೆ ಭಾರತದ ಸಂಸತ್ತು ಅನುಮೋದನೆ ನೀಡಿತು.

1961: ಬರ್ಲಿನ್ ಗೋಡೆಯ ನಿರ್ಮಾಣ ಪೂರ್ವ ಜರ್ಮನಿಯಲ್ಲಿ ಆರಂಭವಾಯಿತು.

1994:ಆಸ್ಪ್ರಿನ್ ಮಾತ್ರೆ ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಕೊಲೋನ್ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ ಎಂದು ವರದಿ ಮಾಡಲಾಯಿತು.

1996: ಮೈಕ್ರೋಸಾಫ್ಟ್ ಇಂಟರ್ ನೆಟ್ ಎಕ್ಸ್ ಪ್ಲೋರರ್ 3.0 ಬಿಡುಗಡೆ ಮಾಡಿತು.

ಪ್ರಮುಖ ಜನನ/ಮರಣ:

1795: ಅಹಲ್ಯಬಾಯಿ ಹೋಲ್ಕರ್ ನಿಧನರಾದರು.

1951: ಆಚಾರ್ಯ ಕಿಶೋರಿದಾಸ್ ವಾಜಪಯೀ ನಿಧನರಾದರು.

1963: ಭೌತವಿಜ್ಞಾನಿ ಸಿಸಿರ್ ಕುಮಾರ್ ಮಿತ್ರ ನಿಧನರಾದರು.

1988: ಖ್ಯಾತ ನಟ ಮತ್ತು ನಿರ್ದೇಶಕ ಗಜಾನನ್ ಜಹಗೀರ್ದಾರ್ ನಿಧನರಾದರು.

2015: ಹೀರೋ ಸೈಕಲ್ ಸಂಸ್ಥೆಯ ಸಂಸ್ಥಾಪಕರಾದ ಓಮ್ ಪ್ರಕಾಶ್ ಮುಂಜಲ್ ನಿಧನರಾದರು.

 

Categories
e-ದಿನ

ಆಗಸ್ಟ್-12

 

ಪ್ರಮುಖ ಘಟನಾವಳಿಗಳು:

1658: ಮೊದಲ ಅಮೇರಿಕನ್ ಪೋಲಿಸ್ ಫೋರ್ಸ್ ರೂಪಗೊಂಡಿತು.

1765: ಅಲಹಾಬಾದ್ ಒಪ್ಪಂದವನ್ನು ಸಹಿ ಮಾಡಲಾಯಿತು. ಈ ಒಪ್ಪಂದವು ರಾಜಕೀಯ ಮತ್ತು ಸಂವಿಧಾನಿಕ ಒಳಗೊಳ್ಳುವಿಕೆ ಮತ್ತು ಭಾರತದಲ್ಲಿ ಕಂಪನಿಯ ಆಡಳಿತದ ಆರಂಭವನ್ನು ಗುರುತಿಸುತ್ತದೆ.

1851: ಐಸಾಕ್ ಸಿಂಗರ್ ಅವರಿಗೆ ಎರಡು ತಲೆಯ ಹೊಲಿಗೆ ಯಂತ್ರದ ಮೇಲೆ ಪೇಟೆಂಟ್ ನೀಡಲಾಯಿತು.

1865: ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಜೋಸೆಫ್ ಲಿಸ್ಟರ್ ಅವರು ಮೊದಲ ಬಾರಿಗೆ ಸೋಂಕು ನಿವಾರಕವನ್ನು ಬಳಸಿದರು.

1877: ಥಾಮಸ್ ಎಡಿಸನ್ ಫೋನೋಗ್ರಾಫ್ ಕಂಡುಹಿಡಿದರು, ಮತ್ತು ಮೊದಲ ಧ್ವನಿ ರೆಕಾರ್ಡಿಂಗ್ ಮಾಡಿದರು.

1879: ಮೊದಲ ರಾಷ್ಟ್ರೀಯ ಬಿಲ್ಲುಗಾರಿಕೆ ಸಂಘ ಪಂದ್ಯಾವಳಿ ಶಿಕಾಗೋದಲ್ಲಿ ನಡೆಯಿತು.

1908: ಹೆನ್ರಿ ಫೊರ್ಡ್ ಸಂಸ್ಥೆ ತನ್ನ ಮೊದಲ ಮಾದರಿ ಟಿ ಕಾರನ್ನು ನಿರ್ಮಿಸಿತು.

1947: ನಾಡಿಯಾ ಜಿಲ್ಲೆಯ ಬಹುತೇಕ ಭಾಗವನ್ನು ಪಾಕಿಸ್ತಾನಕ್ಕೆ ನೀಡಲಾಯಿತು.

1947: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳನ್ನು ವಿಂಗಡಿಸಿದ ರೇಖೆಯ ಯೋಜನೆಯು ಕೂಡ ಈ ದಿನ ಸಿದ್ಧವಾಗಿತ್ತು ಎಂದು ಹೇಳಲಾಗುತ್ತದೆ.

1952: ಸಮಾಜ ಕಲ್ಯಾಣ ಮಂಡಳಿಯನ್ನು ಸಂಸತ್ತಿನಲ್ಲಿ ಉದ್ಘಾಟಿಸಲಾಯಿತು.

1953: ಸೋವಿಯೆತ್ ಒಕ್ಕೂಟ ತನ್ನ ಮೊದಲ ಹೈಡ್ರೋಜನ್ ಬಾಂಬನ್ನು ರಹಸ್ಯವಾಗಿ ಪರೀಕ್ಷಿಸಿತು.

1981: IBM ತನ್ನ ಮೊದಲ PCಯನ್ನು ಅನಾವರಣಗೊಳಿಸಿತು.

1988: ಕ್ಷಯರೋಗಕ್ಕೆ ನೆಲ್ಸನ್ ಮಂಡೇಲಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

1992: 72 ಉಗ್ರರು ಪಂಜಾಬಿನ ಮುಖ್ಯಮಂತ್ರಿ ಬೇಆಂತ್ ಸಿಂಗ್ ಅವರ ಮುಂದೆ ಶರಣಾದರು.

2005: ಶ್ರೀಲಂಕಾದ ವಿದೇಶಾಂಗ ಸಚಿವ ಲಕ್ಷ್ಮಣ್ ಕಧಿರ್ಗಮಾರ್ ಅವರನಿವಾಸದಲ್ಲಿ LTTE ಸದಸ್ಯನಿಂದ ಮಾರಣಾಂತಿಕ ಹಲ್ಲೆ ನಡೆಯಿತು.

2014: ಇಬೋಲಾ ವೈರಸ್ಸಿಗೆ ಚಿಕಿತ್ಸೆ ನೀಡಲು ಪ್ರಾಯೋಗಿಕ ಔಷಧಿಗಳ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಚಾಲನೆ ನೀಡುತ್ತದೆ.

2015: ಲಂಡನ್ನಿನ ಪುರಾತತ್ವಜ್ಞರು 1665ರ ಪ್ಲೇಗಿನಿಂದ ಬಲಿಯಾದ 30 ದೇಹಗಳ ಸಮೂಹ ಸಮಾಧಿಯನ್ನು ಉತ್ಖನನದ ಮೂಲಕ ಕಂಡುಕೊಂಡರು.

ಪ್ರಮುಖ ಜನನ/ಮರಣ:

1868: ಬ್ರಿಟಿಷ್-ಇಂಡಿಯಾದ ವೈಸೆರಾಯ್ ಆಗಿದ್ದ ಫ್ರೆಡ್ರಿಕ್ ಜೆ.ಎನ್.ಟಿ ಲಾರ್ಡ್ ಕ್ಲೆಮ್ಸ್ಫೋರ್ಡ್ ಜನಿಸಿದರು.

1897: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಮತ್ತು ಮುಖ್ಯ ರಕ್ಷಣಾ ಸಚಿವರಾಗಿದ್ದ ಮೇಜರ್ ಗೆಗೆರಲ್ ಹಿಮ್ಮತ್ ಸಿಂಗ್ ಜನಿಸಿದರು.

1919: ಭಾರತೀಯ ಭೌತಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ವಿಕ್ರಮ್ ಸಾರಾಭಾಯಿ ಜನಿಸಿದರು.

1948: ಕರ್ನಾಟಕದ 22ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಿಸಿದರು.

1973: ಗೋವಾ, ದಾಮನ್ ಮತ್ತು ದಿಯು ಮೊದಲ ಮುಖ್ಯಮಂತ್ರಿ ಆಗಿದ್ದ ದಯಾನಂದ್ ಬಾಲಕೃಷ್ಣ ಬಂಡೋಡ್ಕರ್ ನಿಧನರಾದರು.

2012: ಛಾಯಾಗ್ರಾಹಕ ಮತ್ತು ಲೇಖಕ ಪ್ರಭುದ್ದ ದಾಸ್ ಗುಪ್ತ ನಿಧನರಾದರು.

 

Categories
e-ದಿನ

ಆಗಸ್ಟ್-11

 

ಪ್ರಮುಖ ಘಟನಾವಳಿಗಳು:

1347: ಬಹಮನಿ ರಾಜವಂಶದ ಮುಸ್ಲಿಂ ಸಾಮ್ರಾಜ್ಯದ ಸುಲ್ತಾನ ಅಲ್ಲಾಉದ್ದಿನ್ ಖಿಲ್ಜಿ ಗುಲ್ಬರ್ಗಾವನ್ನು ‘ಹಸನಾಬಾದ್’ ಎಂದು ಮರುನಾಮಕರಣ ಮಾಡಿದರು.

1860: ಅಮೇರಿಕಾದ ಮೊದಲ ಯಶಸ್ವಿ ಬೆಳ್ಳಿಯ ಗಿರಣಿಯ ಕಾರ್ಯಾಚರಣೆ ಆರಂಭವಾಯಿತು.

1866: ವಿಶ್ವದ ಮೊದಲ ರೋಲರ್ ರಿಂಕ್ ತೆರೆಯಲಾಯಿತು.

1874: ನೀರನ್ನು ಸಿಂಪಡಿಸುವ ಮೇಲಿನ ಮುಚ್ಚಳಕ್ಕೆ ಹ್ಯಾರಿ ಎಸ್ ಪಾರ್ಮೀಲಿ ಅವರಿಗೆ ಪೇಟೆಂಟ್ ನೀಡಲಾಯಿತು.

1896: ಹಾರ್ವೇ ಹುಬ್ಬೆಲ್ ಅವರು ವಿದ್ಯುತ್ ಲೈಟ್ ಬಲ್ಬಿನ ಸಾಕೆಟ್ ಮತ್ತು ಅದನ್ನು ಎಳೆಯುವ ಸರಪಣಿಗೆ ಪೇಟೆಂಟ್ ಪಡೆದರು.

1904: ಫ್ರಾನ್ಸ್ ಆಸ್ಟ್ರಿಯಾ ಮತ್ತು ಹಂಗೇರಿಯ ಮೇಲೆ ಆಕ್ರಮಣ ನಡೆಸುವುದಾಗಿ ಘೋಷಿಸಿತು.

1909: SOS (ಅಪಾಯದಲ್ಲಿ ರಕ್ಷಣೆ ಕೋರುವ ಸೂಚನೆ)ಯನ್ನು ಮೊದಲ ಬಾರಿಗೆ ಅಮೇರಿಕ ಹಡಗೊಂದು ಬಳಸಿತು.

1914: “ಆನಿಮೇಷನ್”ನನ್ನು ಜಾನ್ ವ್ರೇ ಪೇಟೆಂಟ್ ಪಡೆದರು.

1947: ಪಾಕಿಸ್ತಾನವು ರಾಷ್ಟ್ರೀಯ ಧ್ವಜವನ್ನು ಅಂಗೀಕರಿಸಿತು.

1948: ಲಂಡನ್ನಿನಲ್ಲಿ ಬೇಸಿಗೆ ಒಲಂಪಿಕ್ಸ್ ಆರಂಭಿಸಲಾಯಿತು.

1961: ದಾದ್ರಾ ಮತ್ತು ನಗರಹವೇಲಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಲಾಯಿತು.

1985: ರೊನಾಲ್ಡ್ ರೇಗನ್ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು.

1992: ಅಮೇರಿಕಾದ ಸಂಯುಕ್ತ ಸಂಸ್ಥಾನದ ಅತಿದೊಡ್ಡ ಶಾಪಿಂಗ್ ಮಾಲ್ ಆದ ಎಂ.ಎನ್.ಮಾಲ್ “ಮಾಲ್ ಆಫ್ ಅಮೇರಿಕಾ” ತೆರೆಯಲಾಯಿತು.

1997: ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಕಿಯನ್ನೂರ್ ಜಿಲ್ಲೆಗಳಲ್ಲಿ ಪ್ರವಾಹದಿಂದ 135 ಜನರು ಮೃತರಾದರು.

2012: ಇರಾನಿನ ತಬ್ರೀಜ್ ಮತ್ತು ಆಹರಿನಲ್ಲಿ ಭೂಕಂಪ ಉಂಟಾಗಿ 153 ಜನರು ಮೃತಪಟ್ಟರು ಮತ್ತು ಸುಮಾರು 1300 ಜನ ಗಾಯಗೊಂಡರು.

2016: 392 ವರ್ಷಗಳಲ್ಲಿ ವಿಶ್ವದ ಅತ್ಯಂತ ಹಳೆಯ ಕಶೇರುಕವಾದ ಗ್ರೀನ್ ಲ್ಯಾಂಡ್ ಶಾರ್ಕ್ ಎಂದು ಅಂತರ ರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಘೋಷಿಸಿತು.

ಪ್ರಮುಖ ಜನನ/ಮರಣ:

1778: ಜಗತ್ತಿನ ಜಿಮ್ನಾಸ್ಟಿಕ್ಸ್ ಸಂಸ್ಥಾಪಕರಾದ ಜರ್ಮನ್ ಶಿಕ್ಷಕ ಫ್ರೆಡ್ರಿಚ್ ಲುಡ್ವಿಗ್ ಜನಿಸಿದರು.

1908: ಭಾರತದ ಕಾರ್ಯಕರ್ತ ಖುದಿರಾಮ್ ಬೋಸ್ ಅವರು ನಿಧನರಾದರು.

1954: ಭಾರತದ ಕ್ರಿಕೆಟ್ ಆಟಗಾರ ಮತ್ತು ತರಬೇತುಗಾರರಾಗಿದ್ದ ಎಂ.ವಿ.ನರಸಿಂಹ ರಾವ್ ಜನಿಸಿದರು.

1954: ಭಾರತೀಯ ಕ್ರಿಕೆಟ್ ಅಂಪೈರ್ ಅಗಿದ್ದ ಯಶಪಾಲ ಶರ್ಮ ಜನಿಸಿದರು.

1993: ದೆಹೆಲಿಯ ಮೊದಲ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಮಂತ್ರಿಯಾಗಿದ್ದ ಬ್ರಹ್ಮಪ್ರಕಾಶ್ ಚೌದರಿ ನಿಧನರಾದರು.

1999: ಭಾರತೀಯ ಕ್ರಿಕೆಟ್ ಓಪನಿಂಗ್ ಮಾಜಿಬ್ಯಾಟಮ್ಯಾನ್ ಆಗಿದ್ದ ರಾಮನಾಥ್ ಪಾರ್ಕರ್ ನಿಧನರಾದರು.

2000: ಗಾಂಧಿವಾದಿ ಉಶಾ ಮೆಹ್ತಾ ನಿಧನರಾದರು.

2012: ಭಾರತೀಯ ಭಾಷಾಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಭದ್ರಿರಾಜು ಕೃಷ್ಣಮೂರ್ತಿ ನಿಧನರಾದರು.

2013: ಭಾರತೀಯ ಪಕ್ಷಿವಿಜ್ಞಾನಿ ಮತ್ತು ಲೇಖಕ ಜಾಫರ್ ಫುತೇಹಲಿ ನಿಧನರಾದರು.

 

Categories
e-ದಿನ

ಆಗಸ್ಟ್-10

 

ಪ್ರಮುಖ ಘಟನಾವಳಿಗಳು:

1622: ಜಾನ್ ಮೇಸನ್ ಮತ್ತು ಫರ್ಡಿನಾಂಡೋ ಜಾರ್ಜಸ್ ಮೈನೆ ಪ್ರಾಂಥ್ಯದ ಭೂಸ್ವಾಮ್ಯದ ಹಕ್ಕುಪತ್ರವನ್ನು ಸ್ವೀಕರಿಸಿದರು.

1743: ಹಳೆಯ ದಾಖಲೆಗಳ ಪ್ರಕಾರ ಬಹುಮಾನ ಹೋರಾಟ ನಿಯಮಗಳನ್ನು ರಚಿಸಲಾಯಿತು.

1793: ಲೌವ್ರೆ ಅರಮನೆಯು ಪ್ಯಾರಿಸಿನಲ್ಲಿ “ದಿ ಮ್ಯೂಜಿಯಂ ಸೆಂಟ್ರಲ್ ದೆ ಆರ್ಟ್ಸ್” ಆಗಿ ಅಧಿಕೃತವಾಗಿ ತೆರೆಯಿತು.

1846: ಅಮೇರಿಕಾ ಕಾಯಿದೆ ಮೂಲಕ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ಮತ್ತು ಸಂಶೋಧನ ಸಂಕೀರ್ಣ ಸ್ಮಿತ್ಸೋನಿಯನ್ ಸಂಸ್ಥೆಯನ್ನು ಸ್ಥಾಪಿಸಿತು.

1869: ಚಲಿಸುವ ಚಿತ್ರ ಪ್ರಕ್ಷೇಪಕಕ್ಕೆ ಓ.ಬಿ.ಬ್ರೌನ್ ಪೇಟೆಂಟ್ ಪಡೆದರು.

1885: ಲಿಯೋ ಡಫ್ಟ್ ಬ್ಲಾಟಿಮೋರಿನಲ್ಲಿ ಅಮೇರಿಕಾದ ಮೊದಲ ವಾಣಿಜ್ಯವಾಗಿ ವಿದ್ಯುತ್ ಚಾಲಿತ ಸ್ಟ್ರೀಟ್ ಕಾರನ್ನು ತೆರೆದರು.

1889: ತಿರುಪು ಮುಚ್ಚಳಕ್ಕೆ ಡಾನ್ ರೈಲಾಂಡ್ಸ್ ಪೇಟೆಂಟ್ ಪಡೆದರು.

1904: ಜಪಾನ್ ತಂಡವನ್ನು ಪೋರ್ಟ್ ಆರ್ತುರಿನಲ್ಲಿ ರಷ್ಯಾದ ಸೇನೆ ಸೋಲಿಸಿದರು.

1930: ಗುಂಟೂರಿನ ‘ಗಾಂಧಿ ಟೋಪಿ’ ಕೇಸಿನಲ್ಲಿ ಮ್ಯಾಜಿಸ್ಟ್ರೇಟ್ ಗಾಂಧಿಟೋಪಿ ಧರಿಸುವುದನ್ನುಗುಂಟೂರು ಪಟ್ಟಣದ ಐದು ಮೈಲಿ ವ್ಯಾಪ್ತಿಯಲ್ಲಿ ನಿಷೇಧಿಸಲಾಯಿತು.

1949: ಅಮೇರಿಕಾದ ರಾಷ್ಟ್ರೀಯ ಸೇನಾ ಸ್ಥಾಪನೆಯನ್ನು ರಕ್ಷಣಾ ಇಲಾಖೆ ಎಂದು ಮರುನಾಮಕರಣ ಮಾಡಲಾಯಿತು.

1961: ಯೂರೋಪಿಯನ್ ಸಾಮಾನ್ಯ ಮಾರುಕಟ್ಟೆಯ ಸದಸ್ಯತ್ವಕ್ಕೆ ಯುನೈಟೆಡ್ ಕಿಂಗ್ಡಂ ಅರ್ಜಿಯನ್ನು ಹಾಕಿತು.

1982: ಮಹಾರಾಷ್ಟ್ರದಲ್ಲಿ 201 ಹುತಾತ್ಮರ ಸ್ಮಾರಕವನ್ನು ಉದ್ಘಾಟನಾ ಮಾಡಲಾಯಿತು.

1991: ದೆಹಲಿ ವಿಮಾನ ನಿಲ್ದಾಣ ಪೋಲೀಸರು ಸೌಧಿ ಅರೇಬಿಯಾಗೆ ಅಮೀನಾ ಎನ್ನುವ ಅಪ್ರಾಪ್ತವಯಸ್ಕ ಹೆಣ್ಣುಮಗಳ ಕಳ್ಳಸಾಗಾಣಿಕೆ ಮಾಡುವ ಪ್ರಯತ್ನ ತಡೆಹಿಡಿದರು.

ಪ್ರಮುಖ ಜನನ/ಮರಣ:

1775: ನಾರಾಯಣರಾವ್ ಪೇಶ್ವಾ ಜನಿಸಿದರು.

1855: ಕೊಲ್ಲಾಪುರ ಆಸ್ಥಾನದ ಖ್ಯಾತ ಗಾಯಕ ಅಲ್ಲಾದಿಯಾ ಖಾನ್ ಅವರು ಜನಿಸಿದರು.

1894: ಭಾರತದ 4ನೇ ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ಜನಿಸಿದರು.

1901: ಶ್ರೇಷ್ಠ ಕವಿ ಮತ್ತು ಶಿಕ್ಷಣ ತಜ್ಞ ನಾರಾಯಣ್ ಪಿಳ್ಳೈ ಗೋಪಾಲ ಪಿಳ್ಳೈ ಕೇರಳದಲ್ಲಿ ಜನಿಸಿದರು.

1927: ಭಾರತದ ಖಗೋಳಶಾಸ್ತ್ರಜ್ಞ ಸಾಹಿತಿ ಮತ್ತು ಉರ್ದು ಕವಿ ಮನಾಲಿ ಕಲ್ಲಟ್ ವೈನು ಬಪ್ಪು ಜನಿಸಿದರು.

1963: ಕುಖ್ಯಾತ ಡಕಾಯಿತೆ ಫೂಲನ್ ದೇವಿ ಉತ್ತರಪ್ರದೇಶದಲ್ಲಿ ಜನಿಸಿದರು.

 

Categories
e-ದಿನ

ಆಗಸ್ಟ್-9

 

ಪ್ರಮುಖ ಘಟನಾವಳಿಗಳು:

1173: ಪೀಸಾ ಗೋಪುರದ ನಿರ್ಮಾಣ ಆರಂಭವಾಯಿತು. ಈ ಕಾಮಗಾರಿಯುಪೂರ್ಣಗೊಳ್ಳಲು ಎರಡು ಶತಮಾನಗಳನ್ನು ತೆಗೆದುಕೊಂಡಿತು.

1655: ಲಾರ್ಡ್ ಪ್ರೊಟೆಕ್ಟರ್ ಆಲಿವರ್ ಕ್ರಾಮ್ವೆಲ್ ಇಂಗ್ಲೆಂಡನ್ನು 11 ಜಿಲ್ಲೆಗಳಾಗಿ ವಿಭಜಿಸಿದರು.

1790: ಕೊಲಂಬಿಯಾ ಹಡಗು ಸತತ ಮೂರು ವರ್ಷಗಳ ಪ್ರಯಾಣ ಮುಗಿಸಿ ಬೋಸ್ಟನ್ನಿಗೆ ಮರಳಿತು. ಅಮೇರಿಕಾದ ಧ್ವಜವನ್ನು ಹೊತ್ತು ವಿಶ್ವವನ್ನು ತಿರುಗಿದ ಮೊದಲ ಹಡಗು ಇದಾಗಿತ್ತು.

1803: ರಾಬರ್ಟ್ ಫುಲ್ಟನ್ ತನ್ನ ಉಗಿ ಪ್ಯಾಡಲ್ ದೋಣಿಯನ್ನು ಫ್ರಾನ್ಸಿನ ನದಿಯಾದ ಸೀನ್ ಮೇಲೆ ಪರೀಕ್ಷಿಸಿದರು.

1859: ಓಟಿಸ್ ಟಫ್ಟ್ ಮೊದಲ ಮಾನವ ಉಪಯೋಗಿಸುವ “ಎಲಿವೇಟರ್” ಅನ್ನು ಪೇಟೆಂಟ್ ಮಾಡಿದರು.

1898: ಜರ್ಮನಿಯ ರುಡಾಲ್ಫ್ ಡೀಸಲ್ ಅವರು ಡೀಸಲ್ ಆಂತರಿಕ ದಹನಕಾರಿ ಇಂಜಿನ್ನಿಗೆ ಪೇಟೆಂಟ್ ಪಡೆದರು.

1904: ರೊಚೆಸ್ಟರ್ ನ್ಯೂಯಾರ್ಕಿನ ಲಿಬಾನಸ್ ಮ್ಯಾಕ್ಲೌತ್ ಟೊಡ್ ತನ್ನ ಚೆಕ್ ಬರೆಯುವ ಯಂತ್ರಕ್ಕೆ ಪೇಟೆಂಟ್ ಪಡೆದರು.

1910: ವಿದ್ಯುತ್ ಬಟ್ಟೆ ಒಗೆಯುವ ಯಂತ್ರಕ್ಕೆ ಆಲ್ವಾ ಫಿಶರ್ ಪೇಟೆಂಟ್ ಪಡೆದರು.

1925: ಹಿಂದುಸ್ಥಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸದಸ್ಯರು ಉತ್ತರ ಪ್ರದೇಶದ ಲಕ್ನೋನಿಂದ 22 ಕಿ.ಮೀ ದೂರದಲ್ಲಿರುವ ಕಾಕೋರಿ ಬಳಿ ಅಂಚೆ ರೈಲಿನಿಂದ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿದರು.

1942: ಮಹಾತ್ಮಾ ಗಾಂಧಿಯವರನ್ನು ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ ನಂತರಬ್ರಿಟೀಷರು ಅವರನ್ನು ಬಾಂಬೆಯಲ್ಲಿ ಬಂಧಿಸಿದರು.

1945: ಅಮೇರಿಕಾ ತನ್ನ 2ನೇ ಪರಮಾಣು ಬಾಂಬನ್ನು ಜಪಾನಿನ ನಾಗಸಾಕಿಯ ಮೇಲೆ ಹಾರಿಸಿತು.

1952: ಬೆಳೆಗಳ ವೈಫಲ್ಯದಿಂದ 20 ಮಿಲಿಯನ್ ಭಾರತೀಯ ರೈತರು ತೊಂದರೆಗೊಳಗಾಗಿರುವ ಬಗ್ಗೆ ನವದೆಹಲಿಯಲ್ಲಿ ವರದಿಯಾಯಿತು.

1969: ಕಲ್ಕತ್ತಾದಲ್ಲಿನ ಒಚ್ಚಲೋರ್ನಿ ಸ್ಮಾರಕವನ್ನು “ಶಾಹಿದ್ ಮಿನಾರ್” ಎಂದು ಮರುನಾಮಕರಣ ಮಾಡಲಾಯಿತು.

1980: ಬೆಲ್ಜಿಯಂ ದೇಶದ ಸಂವಿಧಾನವನ್ನು ಪರಿಷ್ಕರಿಸಲಾಯಿತು.

ಪ್ರಮುಖ ಜನನ/ಮರಣ:

1892: ಮದರಾಸು ವಿಶ್ವವಿದ್ಯಾಲಯದ ಮೊದಲ ಗ್ರಾಂಥಪಾಲಕರಾಗಿದ್ದ ಶ್ರೀ ಶಿಯಾಲಿ ರಾಮಾಮೃತ ರಂಗನಾಥನ್ ಜನಿಸಿದರು.

1893: ಪ್ರಸಿದ್ದ ಹಿಂದಿ ಕಥೆಗಾರ ಮತ್ತು ಕಾದಂಬರಿಕಾರರಾಗಿದ್ದ ಶಿವಪುಜನ್ ಸಹಾ ಜನಿಸಿದರು.

1909: ಹಿರಿಯ ವಿದ್ವಾಂಸ, ಲೇಖಕ, ಶಿಕ್ಷಣತಜ್ಞ ಜ್ಞಾನಪೀಠ ಪುರಸ್ಕೃತ ವಿ.ಕೆ.ಗೋಕಾಕ್ ಅವರು ಜನಿಸಿದರು.

1911: ಭಾರತೀಯ ಕ್ರಿಕೆಟಿಗರಾದ ಖುರ್ಷಿ ದ್ ಜಿ ರುಸ್ತಂಜಿ ಮೆಹೆರ್ ಹೋಮ್ಜಿ ಜನಿಸಿದರು.

1971: ಬಿಹಾರದ ಮಾಜಿ ಮುಖ್ಯಮಂತ್ರಿ ವಿನೋದಾನಂದ ಝಾ ನಿಧನರಾದರು.

1975: ತೆಲಗು ಚಲನಚಿತ್ರ ಖ್ಯಾತ ನಟ ಮಹೇಶಬಾಬು ಜನಿಸಿದರು.

2015: ಹಿರಿಯ ಪತ್ರಕರ್ತ, ಲೇಖಕ ಮತ್ತು ಕವಿ ಕಯ್ಯಾರ ಕಿಞ್ಞಣ್ಣ ರೈ ನಿಧನರಾದರು.

 

Categories
e-ದಿನ

ಆಗಸ್ಟ್-8

 

ಪ್ರಮುಖ ಘಟನಾವಳಿಗಳು:

1509: ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಪುನರುತ್ಥಾನವ ಚಕ್ರವರ್ತಿ ಕೃಷ್ಣದೇವರಾಯರ ಪಟ್ಟಾಭಿಷೇಕದಿಂದ ಆರಂಭವಾಯಿತು.

1549: ಫ್ರಾನ್ಸ್ ಇಂಗ್ಲೆಂಡಿನ ಮೇಲೆ ಯುದ್ಧ ಸಮರ ಸಾರಿತು.

1576: ಆ ಕಾಲಮಾನದ ವಿಶ್ವದ ಅತ್ಯಾಧುನಿಕ ಸಂಶೋಧನಾ ಸಂಸ್ಥೆಯಾದ ಡೆನ್ಮಾರ್ಕಿನ ಯುರಾನಿಬಾರ್ಗ್ ನಲ್ಲಿರುವ ಟೈಕೋ ಬ್ರಹೆಯವರ ವೀಕ್ಷಣಾಲಯಕ್ಕೆ ಅಡಿಪಾಯ ಹಾಕಲಾಯಿತು.

1609: ವೆನೆಷಿಯನ್ ಸೆನೇಟ್ ಗೆಲೀಲಿಯೋ ಟೆಲಿಸ್ಕೋಪನ್ನು ಪರೀಕ್ಷಿಸಿದರು.

1700: ಡೆನ್ಮಾರ್ಕ್ ಮತ್ತು ಸ್ವೀಡನ್ನಿನ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.

1786: ಅಮೇರಿಕಾದ ಕಾಂಗ್ರೆಸ್ ಬೆಳ್ಳಿ ಡಾಲರ್ ಮತ್ತು ಹಣದ ದಶಮಾಂಶ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.

1854: ಲೋಹದ ಬುಲೆಟ್ ಸಿಡಿಮದ್ದುಗಳಿಗೆ ಸ್ಮಿತ್ ಮತ್ತು ವೆಸ್ಸನ್ ಪೇಟೆಂಟ್ ಪಡೆದರು.

1876: ಥಾಮಸ್ ಎಡಿಸನ್ ಮಿಮಿಯೋಗ್ರಾಫ್ (ನಕಲುಯಂತ್ರವನ್ನು) ಪೇಟೆಂಟ್ ಪಡೆದರು.

1911: ಭಾರೀ ಮಳೆಯ ಪರಿಣಾಮ ಭಾರತದ ಹಲವು ಪ್ರದೇಶಗಳಲ್ಲಿ ಭಾಗದಲ್ಲಿ ಕಾಲರಾ ಸಾಂಕ್ರಾಮಿಕ ರೋಗವುಂಟಾಯಿತು.

1919: ರಾವಲ್ಪಿಂಡಿ ಚರ್ಚೆಯಂತೆ ಬ್ರಿಟನ್ ಅಪ್ಘಾನಿಸ್ತಾನದ ಸ್ವಾತಂತ್ರ್ಯವನ್ನು ಅನುಮೋದಿಸಿತು.

1936: ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವಾದ ಕಾರ್ಬೆಟ್ ಉದ್ಯಾನವನ್ನು ತೆರೆಯಲಾಯಿತು.

1942: ಮಹಾತ್ಮ ಗಾಂಧಿಯವರು ಮುಂಬೈಯ ಬ್ರಿಟಿಷ್ ಆಳ್ವಿಕೆಯ ಸ್ವಾತಂತ್ರಕ್ಕಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು.

1945: ಸೋವಿಯೆತ್ ಯೂನಿಯನ್ ಎರಡನೇ ವಿಶ್ವಯುದ್ಧದಲ್ಲಿ ಜಪಾನಿನ ವಿರುದ್ಧ ಯುದ್ಧ ಘೋಷಿಸಿತು.

1946: ಭೂತಾನ್ ದೇಶಕ್ಕೆ 32 ಮೈಲಿ ಪ್ರದೇಶವನ್ನು ನೀಡಲು ಭಾರತ ಸಮ್ಮತಿಸಿತು.

1949: ಭಾರತವು ಭೂತಾನಿನ ಜೊತೆಗೆ ಮೈತ್ರಿ ಮಾಡಿಕೊಂಡಿತು.

1966: ಭಾರತವು ಪರಮಾಣು ನಿಷೇಧ ಒಪ್ಪಂದವನ್ನು ಭಾಗಶಃ ಅನುಮೋದಿಸಿತು.

1988: 9 ವರ್ಷದ ಯುದ್ಧದ ನಂತರ ರಷ್ಯಾದ ಸೇನೆ ಅಫ್ಘಾನಿಸ್ತಾನದಿಂದ ಹಿಂದಿರುಗಲು ಆರಂಭಿಸಿತು.

1990: ಮಂಡಲ್ ಆಯೋಗದ ವರದಿಯ ಅನುಷ್ಟಾನದ ವಿರೋಧವಾಗಿ ಬಿಹಾರದಲ್ಲಿ ಹಿಂಸಾತ್ಮಕ ಪ್ರತಿಭಟನೆಯುಂಟಾಯಿತು.

1991: ಭಾರತ ಮತ್ತು ಸೋವಿಯೆತ್ ಒಕ್ಕೂಟವು 20 ವರ್ಷಗಳ ಅವಧಿಗೆ ಪರಸ್ಪರ ಶಾಂತಿ, ಸ್ನೇಹ ಮತ್ತು ಸಹಕಾರಗಳ ಒಪ್ಪಂದವನ್ನು ವಿಸ್ತರಿಸಿತು.

2000: ಪಾಟ್ನಾದ ಬಳಿ ಅಲಯನ್ಸ್ ವಿಮಾನ ದುರಂತವನ್ನು ತನಿಖೆ ಮಾಡಲು ಏರ್ ಮಾರ್ಷಲ್ ಪಿ.ರಾಜಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ನ್ಯಾಯಾಲಯದ ಆದೇಶದಂತೆ ಸರ್ಕಾರವು ನೇಮಕ ಮಾಡಿತು.

ಪ್ರಮುಖ ಜನನ/ಮರಣ:

1921: ಭಾರತೀಯ ರೋಗಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ವುಲಿಮಿರಿ ರಾಮಲಿಂಗಸ್ವಾಮಿ ಜನಿಸಿದರು.

1934: ಭಾರತೀಯ ನಟ, ನಿರ್ದೇಶಕ ಮತ್ತು ಚಿತ್ರಕಥೆಕಾರರಾಗಿದ್ದ ಶರತ್ ಪುಜಾರಿ ಜನಿಸಿದರು.

1940: ಭಾರತೀಯ ಕ್ರಿಕೆಟ್ ಆಟಗಾರ ದಿಲಿಪ್ ಸರ್ದೇಸಾಯ್ ಜನಿಸಿದರು.

1948: ವಿಜ್ಞಾನಿ ಮತ್ತು ನೋಬಲ್ ಪ್ರಶಸ್ತಿ ವಿಜೇತರಾದ ಡಾ.ಎಲ್ಲಪ್ರಗಡ ಸುಬ್ಬರಾವ್ ನಿಧನರಾದರು.

1952: ಭಾರತೀಯ ಕ್ರಿಕೆಟ್ ಪಟು ಸುಧಾಕರರಾವ್ ಜನಿಸಿದರು.

1988: ಭಾರತದ ಬೇಸ್ಬಾಲ್ ಆಟಗಾರ ರಿಂಕು ಸಿಂಗ್ ಜನಿಸಿದರು.

1990: ಪ್ರಸಿದ್ಧ ಉದ್ಯಮಿ ನವಲ್ ಗೋದ್ರೇಜ್ ನಿಧನರಾದರು.

2000: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನಿಧನರಾದರು.

 

Categories
e-ದಿನ

ಆಗಸ್ಟ್-7

 

ಪ್ರಮುಖ ಘಟನಾವಳಿಗಳು:

1606: ಷೇಕ್ ಸ್ಪಿಯರ್ನ ದುರಂತ ನಾಟಕ “ಮ್ಯಾಕ್ ಬೆತ್” ಅನ್ನು ರಾಜ ಜೇಮ್ಸ್-I ಅವರ ಅರಮನೆಯ “ಗ್ರೇಟ್ ಹಾಲಿನಲ್ಲಿ” ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

1789: ಅಮೇರಿಕಾ ಕಾಂಗ್ರೆಸ್ ಯುದ್ಧ ಮತ್ತು ಲೈಟ್ ಹೌಸ್ ಸೇವೆಯ ಇಲಾಖೆಯನ್ನು ರಚಿಸಿತು.

1820: ಮೊದಲ ಬಾರಿಗೆ ಆಲೂಗೆಡ್ಡೆಯ ಗಿಡಗಳನ್ನು ಹವಾಯಿಯಲ್ಲಿ ನೆಡಲಾಯಿತು.

1888: ತಿರುಗುವ ಬಾಗಿಲಿಗೆ ಥಿಯೋಫೀಲಸ್ ವಾನ್ ಕಾನೆಲ್ ಪೇಟೆಂಟ್ ಪಡೆದರು.

1900: ವಜ್ರ ಕೆಲಸಗಾರರು ಆಮ್ಸ್ಟರ್ ಡ್ಯಾಮಿನಲ್ಲಿ ಮುಶ್ಕರ ಮಾಡಿದರು.

1906: ಮೊದಲ ತ್ರಿವರ್ಣ ರಾಷ್ಟ್ರೀಯ ಧ್ವಜವು ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡಿದ್ದು, ಎಂಟು ಕಮಲಗಳು ಮೇಲೆ, ವಂದೇ ಮಾತರಂ ಎಂಬ ಬರಹ ಎರಡನೇ ಭಾಗದಲ್ಲಿ ಮತ್ತು ಸೂರ್ಯ ಮತ್ತು ಅರ್ಧ ಚಂದ್ರ ಮೂರನೇ ಭಾಗದಲ್ಲಿ ಇದ್ದವು. ಈ ಧ್ವಜವನ್ನು ಸುರೇಂದ್ರನಾಥ್ ಬಾನರ್ ಅವರು ಕಲ್ಕತ್ತಾದ ಗ್ರೀನ್ ಪಾರ್ಕಿನಲ್ಲಿ ಹಾರಿಸಿದರು.

1908: ನ್ಯೂಜಿಲ್ಯಾಂಡಿನ ಉತ್ತರ ದ್ವೀಪದ ಮುಖ್ಯ ಟ್ರಂಕ್ ಲೈನ್ ಉದ್ದಕ್ಕೂ ಪ್ರಯಣಿಸುವ ಮೊದಲ ರೈಲು ವೆಲ್ಲಿಂಗ್ಟನಿಂದ ಹೊರಟಿತು.

1909: ಅಮೇರಿಕಾದ ಲಿಂಕನ್ನ ನಾಣ್ಯದ ಮೊದಲ ವಿತರಣೆ ಮಾಡಲಾಯಿತು.

1935: ಹಾರುವ ಇರುವೆಗಳ ಕಾಟದಿಂದ ಇಂಗ್ಲೆಂಡಿನಲ್ಲಿ ನಡೆಯುತ್ತಿದ್ದ ಟೆನ್ನಿಸ್ ಪಂದ್ಯಾವಳಿಯನ್ನು ನಿಲ್ಲಿಸಿತು.

1940: ಅಂಚೆ ಚೀಟಿಗಳಿಗಾಗಿ ಪಾವತಿಸಿದ ಅತೀ ಹೆಚ್ಚು ಮೊತ್ತ $45,000 ಆಗಿತ್ತು.

1944: IBM ಮೊದಲ ಪ್ರೋಗ್ರಾಮ್-ನಿಯಂತ್ರಿತ ಕ್ಯಾಲ್ಕುಲೇಟರ್ ಅನ್ನು ಸ್ವಯಂಚಾಲಿತವಾಗಿ ಅನುಕ್ರಮಗೊಳಿಸಿತು.

1947: ಬಾಂಬೆ ಮುನಿಸಿಪಲ್ ಕಾರ್ಪರೇಷನ್ ಔಪಚಾರಿಕವಾಗಿ ಬಾಂಬೆ ಎಲೆಕ್ಟ್ರಿಕ್ ಸರಬರಾಜು ಮತ್ತು ಸಾರಿಗೆ (BEST) ಅನ್ನು ಸ್ವಾಧೀನ ಪಡಿಸಿಕೊಂಡಿತು.

1955: ಸೋನಿ ಸಂಸ್ಥೆಗೆ ಪೂರ್ವಸೂಚಕವಾಗಿದ್ದ ಟೋಕ್ಯೋ ಟೆಲಿಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ಜಪಾನಿನಲ್ಲಿ ತನ್ನ ಮೊದಲ ಟ್ರಾನ್ಸಿಸ್ಟರ್ ರೇಡಿಯೋಗಳ ಮಾರಾಟ ಮಾಡಲು ಆರಂಭಿಸಿತು.

1970: ಮೊದಲ ಕಂಪ್ಯೂಟರ್ ಚೆಸ್ ಪಂದ್ಯಾವಳಿಯನ್ನು ನಡೆಸಲಾಯಿತು.

1976: ಕ್ಯಾಲಿಫೋರ್ನಿಯ ವಿಜ್ಞಾನಿಗಳು ಮಾರ್ಸ್ ಗ್ರಹದ ಮೇಲೆ ಸಂಭವನೀಯ ಜೀವನಕ್ಕೆ ಪ್ರಬಲವಾದ ಸೂಚನೆಯನ್ನು ಕಂಡು ಹಿಡಿದಿರುವುದಾಗಿ ಘೊಷಿಸಿದರು.

1998: ನ್ಯಾಷನಲ್ ಟಾಸ್ಕ್ ಫೊರ್ಸ್ ಶಿಫಾರಸ್ಸಿನ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್ ವೇರ್ ಉದ್ಯಮದ ಅಭಿವೃದ್ಧಿಗಾಗಿ ಸರ್ಕಾರ ಬ್ಯಾಂಕಿಂಗ್ ಮತ್ತು ವಿದೇಶಿ ವಿನಿಮಯ ನೀತಿಯನ್ನು ಪ್ರಕಟಿಸಿದರು.

2011: ನೇಪಾಳ ಮತ್ತು ಭಾರತದಲ್ಲಿ ಸಾರ್ವಜನಿಕ ಜಾಗಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಯಿತು.

ಪ್ರಮುಖ ಜನನ/ಮರಣ:

1868: ಆಧುನಿಕ ಬೆಂಗಾಲಿ ಕವಿ ಪ್ರಥಮ್ ಚೌದರಿ ಜನಿಸಿದರು.

1887: ರಾಜಕಾರಣಿ ಮತ್ತು ಪತ್ರಕರ್ತ ಕಸ್ತೂರಿ ಶ್ರೀನಿವಾಸ್ ಐಯಂಗಾರ್ ಜನಿಸಿದರು.

1888: ಸಾಹಿತ್ಯ ವಿಮರ್ಶಕ ಮತ್ತು ಬಹುಮುಖ ಗುಜರಾತಿ ಲೇಖಕ ನವಲ್ರಾಮ್ (ನವಲ್ರಮ್ ಲಕ್ಷ್ಮೀರಂ ಪಾಂಡ್ಯ) ನಿಧನರಾದರು.

1913: ನೋಬಲ್ ಪ್ರಶಸ್ತಿ ಪುರಸ್ಕೃತ ಕವಿ ಗುರುದೇವ ರಬೀಂದ್ರನಾಥ್ ಟಾಗೋರ್ ಅವರು ನಿಧನರಾದರು.

1925: ರಾಮನ್ ಮೆಗಾಸೆಸೆ ಪ್ರಶಸ್ತಿ ಪುರಸ್ಕೃತರಾದ (ಮೊನ್ಕಂಬು ಸಾಂಬಶಿವನ್) ಎಂ.ಎಸ್.ಸ್ವಾಮಿನಾಥನ್ ಜನಿಸಿದರು.

 

Categories
e-ದಿನ

ಆಗಸ್ಟ್-6

 

ಪ್ರಮುಖ ಘಟನಾವಳಿಗಳು:

1181: ಚೀನಿ ಮತ್ತು ಜಪಾನಿ ಖಗೋಳಶಾಸ್ತ್ರಜ್ಞರು ಸೂಪರ್ ನೋವಾವನ್ನು ಗಮನಿಸಿದರು.

1819: ನಾರ್ವಿಚ್ ವಿಶ್ವವಿದ್ಯಾನಿಲಯವನ್ನು ವರ್ಮೌಂಟಿನಲ್ಲಿ ಅಮೇರಿಕಾದ ಮೊದಲ ಖಾಸಗಿ ಮಿಲಿಟರಿ ಶಾಲೆಯಾಗಿ ಸ್ಥಾಪಿಸಲಾಯಿತು.

1845: ರಷ್ಯಾದ ಭೂಗೊಳಿಕ ಸಮಾಜವು ಸೇಂಟ್ ಪೀಟರ್ಸ್ ಬರ್ಗಿನಲ್ಲಿ ಸ್ಥಾಪಿಸಲಾಯಿತು.

1856: ದಿ ಗ್ರೇಟ್ ಬೆಲ್ಲನ್ನು ಗ್ರೇಟ್ ಕ್ಲಾಕ್ ಆಫ್ ವೆಸ್ಟ್ ಮಿನ್ಸ್ಟರ್ (ಬಿಗ್ ಬೆನ್)ನಲ್ಲಿ ಇರಿಸಲಾಯಿತು.

1861: ಅಮೇರಿಕಾದ ಕಾಂಗ್ರೆಸ್ ಮೊದಲ ಮುಟ್ಟುಗೋಲು ಕಾನೂನನ್ನು ಅಂಗೀಕರಿಸಿತು.

1890: ನ್ಯೂಯಾರ್ಕಿನಲ್ಲಿ ಕೊಲೆಗಾರ ವಿಲಿಯಂ ಕೆಮ್ಮ್ಲರ್ ಅವನನ್ನು ಮೊದಲ ಬಾರಿಗೆ ವಿದ್ಯುತ್ ಕುರ್ಚಿಯಲ್ಲಿ ಕೂರಿಸಿ ಮರಣ ದಂಡನೆ ವಿಧಿಸಲಾಯಿತು.

1926: ಗೆರ್ಟ್ರೂಡ್ ಎಡೆರ್ಲೆ ಇಂಗ್ಲಿಷ್ ಕಾಲುವೆಯನ್ನು ಈಜಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು

1932: ಮೊದಲ ವೆನಿಸ್ ಚಲನಚಿತ್ರ ಉತ್ಸವ ಪ್ರಾರಂಭಿಸಲಾಯಿತು.

1945: ಜಪಾನಿನ ಹಿರೋಶಿಮಾದ ಮೇಲೆ ಅಣು ಬಾಂಬ್ ಸ್ಫೋಟಿಸಲಾಯಿತು.

1961: ಬಾಹ್ಯಾಕಾಶದಲ್ಲಿ ಚಲನೆಯ ಅನಾರೋಗ್ಯದ ಮೊದಲ ಪ್ರಕರಣ ವರದಿಯಾಯಿತು.

1962: 300 ವರ್ಷಗಳ ನಂತರ ಬ್ರಿಟೀಷರ ಆಳ್ವಿಕೆಯಿಂದ ಜಮೈಕಾ ಸ್ವಾತಂತ್ರ ಪಡೆಯಿತು.

1964: ವಿಶ್ವದ ಅತ್ಯಂತ ಹಳೆಯ ಮರವಾದ “ಪ್ರೊಮೆಥೀಯಸ್”ವನ್ನು ನೆವಾಡದಲ್ಲಿ ಕತ್ತರಿಸಲಾಯಿತು.

1962: ಗಡಿ ವಿವಾದವನ್ನು ಬಗೆಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಪೀಕಿಂಗ್ ಸಮ್ಮತಿಸಿತು.

1965: ಭಾರತೀಯ ಪಡೆಗಳು ಪಾಕಿಸ್ತಾನದ ಯುದ್ಧದಲ್ಲಿ ಪಾಕಿಸ್ಥಾವನ್ನು ಹಿಮೆಟ್ಟಿಸಿ ಪಾಕ್ ಪ್ರದೇಶವನ್ನು ಪ್ರವೇಶಿಸಿದವು

1992: ಭದ್ರತಾ ಹಗರಣವನ್ನು ತನಿಖೆ ಮಾಡಲು 30 ಸದಸ್ಯಬಲದ JPC ರಚಿಸಲಾಯಿತು.

1993: ನರ್ಮದಾ ವಿರೋಧಿ ಚಳುವಳಿಗಳ ಮೂಲಕ ಮೇಧಾ ಪಾಟ್ಕರ್ ಅವರು ಆತ್ಮಾಹುತಿ ಬೆದರಿಕೆಯನ್ನು ಘೋಷಿಸಿದರು.

1994: ಹಜರತ್ ಬಾಲ್ ದೇವಾಲಯದ ಮೇಲ್ವಿಚಾರಣೆಯನ್ನು ಮುಸ್ಲಿಂ ವಕ್ಫ್ ಟ್ರಸ್ಟಿಗೆವಹಿಸಲಾಯಿತು.

1998: ಮಹಾರಾಷ್ಟ್ರ ಸರ್ಕಾರವು 1992-93ರ ಸಾಮುದಾಯಿಕ ಗಲಭೆಗಳಲ್ಲಿ ಮತ್ತು ಮುಂಬೈಯ ಸರಣಿ ಸ್ಫೋಟಗಳಲ್ಲಿ ಪೋಲೀಸ್ ಬಲವನ್ನು ಸದೃಢಗೊಳಿಸಲು ಒಪ್ಪಿಕೊಂಡಿತು.

2010: ಭಾರತದ ಜಮ್ಮು ಕಾಶ್ಮೀರದಲ್ಲಿ ಪ್ರವಾಹ ಉಂಟಾಗಿ 71 ಪಟ್ಟಣಗಳು ಮುಳುಗಿ ಕನಿಷ್ಟ 255 ಜನರನ್ನು ಬಲಿ ಪಡೆಯಿತು.

ಪ್ರಮುಖ ಜನನ/ಮರಣ:

1925: ಆಧುನಿಕ ಭಾರತದ ಸಂಸ್ಥಾಪಕರಲ್ಲೊಬ್ಬರಾಗಿದ್ದ ಸುರೇಂದ್ರನಾಥ ಬ್ಯಾನರ್ಜಿ ನಿಧನರಾದರು.

1933: ಭಾರತದ ಕ್ರಿಕೆಟಿಗರಾದ ಏ.ಜಿ.ಕ್ರಿಪಾಲ್ ಸಿಂಗ್ ಜನಿಸಿದರು.

1951: ಶ್ರೇಷ್ಠ ಸಾಮಾಜಿಕ ಸುಧಾರಕ ಮತ್ತು ನಾಯಕ ರುಕ್ಮಿಣಿ ಲಕ್ಷ್ಮಿಪತಿ ನಿಧನರಾದರು.

1959: ಭಾರತದ ಪರಿಸರವಾದಿ ಜಲತಜ್ಞ ರಾಜೇಂದ್ರ ಸಿಂಗ್ ಅವರು ಜನಿಸಿದರು.

1970: ಭಾರತೀಯ-ಅಮೇರಿಕನ್ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಎಂ.ನೈಟ್ ಶ್ಯಾಮಲನ್ ಜನಿಸಿದರು.

1997: ಸಾಮಾಜಿಕ ಕಾರ್ಯಕರ್ತ ಸಂಜಯ್ ಘೋಶ್ ಅವರನ್ನು ULFA ಅಪಹರಿಸಿ ಕೊಂದರೆಂದು ಸೈನ್ಯವು ಖಚಿತಪಡಿಸಿತು.

2001: 1966-70 ಅವಧಿಯಲ್ಲಿ ಭಾರತೀಯ ನೌಕಾದಳದ ಮುಖ್ಯಸ್ಥರಾಗಿದ್ದ ಅಧಾರ್ ಕುಮಾರ್ ಚಟರ್ಜಿ ನಿಧನರಾದರು.

 

Categories
e-ದಿನ

ಆಗಸ್ಟ್-5

 

ಪ್ರಮುಖ ಘಟನಾವಳಿಗಳು:

1772: ಆಸ್ಟ್ರಿಯಾ, ಪ್ರಶ್ಯಾ ಮತ್ತು ರಷ್ಯಾದ ನಡುವಿನ ಪೋಲೆಂಡಿನ ಮೊದಲ ವಿಭಜನೆಯನ್ನು ಘೋಷಿಸಲಾಯಿತು.

1864: ಧೂಮಕೇತುವಿನ ಸ್ಪೆಕ್ಟ್ರಂ ಅನ್ನು ಮೊದಲ ಬಾರಿಗೆ ಜಿಯೋವನ್ನಿ ಡೊನಾಟಿ ಅವರು ವೀಕ್ಷಿಸಿದರು.

1874: ಜಪಾನ್ ಅಂಚೆ ಉಳಿತಾಯ ವ್ಯವಸ್ಥೆಯನ್ನು ಆರಂಭಿಸಿತು.

1882: ಜಪಾನಿನಲ್ಲಿ ಸಮರ ಕಾನೂನನ್ನು ಜಾರಿಗೆ ತರಲಾಯಿತು.

1882: ನ್ಯೂಜರ್ಸಿಯ ಸ್ಟಾಂಡರ್ಡ್ ತೈಲವನ್ನು ಸ್ಥಾಪಿಸಲಾಯಿತು.

1884: ನ್ಯೂಯಾರ್ಕಿನ “ಸ್ಟಾಚ್ಯೂ ಆಫ್ ಲಿಬರ್ಟಿ”ಗೆ ಅಡಿಪಾಯವನ್ನು ಹಾಕಲಾಯಿತು.

1891: ಮೊದಲ (ಟ್ರಾವೆಲ್ಲರ್ ಚೆಕ್) ಪ್ರಯಾಣಿಕರ ಚೆಕ್ಕನ್ನು ಅಮೇರಿಕನ್ ಎಕ್ಸ್ ಪ್ರೆಸ್ ಸಂಸ್ಥೆಯು ಬಿಡುಗಡೆ ಮಾಡಿತು.

1912: ಜಪಾನಿನ ಮೊದಲ ಟ್ಯಾಕ್ಸಿ ಕ್ಯಾಬ್ ಸೇವೆಯನ್ನು ಟೋಕಿಯೋದಲ್ಲಿ ಆರಂಭಿಸಲಾಯಿತು.

1914: ಕ್ಲೀವ್ಲ್ಯಾಂಡಿನ ಓಹಿಯೋದಲ್ಲಿ ಮೊದಲ ವಿದ್ಯುತ್ ಸಂಚಾರ ಸಿಗ್ನಲ್ ದೀಪಗಳನ್ನು ಸ್ಥಾಪಿಸಲಾಯಿತು.

1914: ಡಚ್ ಕಾರ್ಟ್ ವ್ಯಾನ್ ಡೆ ಲಿಂಡೆನ್ ಸರ್ಕಾರವು ಹಣವನ್ನು ಬೆಳ್ಳಿಯ ಬಾಂಡಿನ ರೂಪದಲ್ಲಿ ವಿತರಿಸಿತು.

1926: ಮೊದಲ ಮಾತುಗಾಳನ್ನು ಹೊಂದಿದ ಚಲನಚಿತ್ರ “ಡಾನ್ ಜುವಾನ್” ನ್ಯೂಯಾರ್ಕಿನ ವಾರ್ನರ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು.

1939: ಮಾದಕವಸ್ತು ನಿಷೇಧ ಕಾನೂನಿನ ಅಡಿಯಲ್ಲಿ ಬಂದ ಮೊದಲ ಪ್ರಕಣದಲ್ಲಿ, ರೈಲ್ ರೋಡ್ ಪ್ರಯಾಣಿಕರನ್ನು ಬ್ರಾಂದಿ ಬಾಟಲಿ ಹೊಂದಿದ್ದರೆಂದು ಆರೋಪಿಸಲಾಯಿತು.

1975: ಸಂಸತ್ತು ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಾಣಿಕೆ ಚಟುವಟಿಕೆಗಳ ಕಾಯ್ದೆ (COFEPOSA)ಯನ್ನು ಮತ್ತು ಆಂತರಿಕ ಭದ್ರತಾ ಕಾಯಿದೆಯನ್ನು (MISA) ಅನುಮೋದಿಸಲಾಯಿತು.

1975: ಆರ್.ಎಸ್.ಎಸ್, ಆನಂದಮಾರ್ಗ, ಜಮಾತ್-ಎ-ಇಸ್ಲಾಮಿ ಮತ್ತು ಇತರೆ 23 ಸಂಘಟನೆಗಳನ್ನು ತುರ್ತುಪರಿಸ್ಥಿತಿ ಘೋಷಣೆಯ ನಂತರನಿಷೇಧಿಸಲಾಯಿತು.

1991: ನ್ಯಾಯಮೂರ್ತಿ ಲೀಲಾ ಸೇಥ್ ಅವರು ರಾಜ್ಯ ಹೈಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದರು. ಅವರು ದೆಹಲಿಯ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರಾಗಿ ಏಮಕವಾಗಿದ್ದರು.

2009: ಗೂಗಲ್ ಸಂಸ್ಥೆ ಮೊತ್ತಮೊದಲ ಬಾರಿಗೆ ಸಾರ್ವಜನಿಕ ಕಂಪನಿಯೊಂದನ್ನು ಖರೀದಿಸಿತು.

2011: ಇಂಗ್ಲಕ್ ಶಿನಾವತ್ರ ಅವರನ್ನು ಥೈಲ್ಯಾಂಡಿನ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಥೈಲ್ಯಾಂಡಿನ ಸಂಸತ್ತು ಚುನಾವಣೆಯಲ್ಲಿ ಆಯ್ಕೆ ಮಾಡಿತು.

2013: ವಿಶ್ವದ ಮೊದಲ ಗೋವಿನ ಖಂಡಕೋಶಗಳನ್ನು ಲ್ಯಾಬಿನಲ್ಲಿ ಬೆಳೆದು ಅದರಿಂದ ಬರ್ಗರ್ ಮಾಡಿ, ಅದನ್ನು ಒಂದು ಸಮಾವೇಶದಲ್ಲಿ ತಿನ್ನಲಾಗಿತ್ತು.

2016: 31ನೇ ಬೇಸಿಗೆ ಒಲಂಪಿಕ್ಸ್ ಬ್ರಜಿಲ್ಲಿನ ರಿಯೋ ಡೆ ಜನೇರಿಯೋದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಪ್ರಮುಖ ಜನನ/ಮರಣ:

1905: ಸಮಾಜ ಸುಧಾರಕ ಡಾ.ರಾಜಾ ಸರ್ ಮುತ್ತಯ್ಯ ಚೆಟ್ಟಿಯಾರ್ ಜನಿಸಿದರು.

1950: ಆಧುನಿಕ ಅಸ್ಸಾಮಿನ ವಾಸ್ತುಶಿಲ್ಪಿ, ಸ್ವಾತಂತ್ರ ಹೋರಾಟಗಾರ ಮತ್ತು ನಾಯಕರಾಗಿದ್ದ ಗೋಪಿನಾಥ್ ಬರ್ದೋಲೋಯ್ ನಿಧನರಾದರು.

1969: ಭಾರತ ತಂಡದ ಕ್ರಿಕೆಟ್ ಪಟು ಮತ್ತು ತರಬೇತುದಾರರಾಗಿದ್ದ ವೆಂಕಟೇಶ್ ಪ್ರಸಾದ್ ಜನಿಸಿದರು.

1974: ಬಾಲಿವುಡ್ ಖ್ಯಾತ ನಟಿ ಕಾಜೋಲ್ ಜನಿಸಿದರು.

1986: ತಮಿಳು ಬಂಡಾಯ ನಾಯಕ ವೇಲುಪಿಳ್ಳೈ ಪ್ರಭಾಕರನ್ ಮೃತರಾದರು.

1987: ಭಾರತದ ಖ್ಯಾತ ನಟಿ ಜೆನಿಲಿಯ ಡಿಸೋಜಾ ಜನಿಸಿದರು.

1992: ಕ್ವಿಟ್ ಇಂಡಿಯಾ ಚಳುವಳಿಯ ನಾಯಕ ಅಚ್ಯುತ್ ರಾವ್ ಪಟ್ವರ್ದನ್ ನಿಧನರಾದರು.

2000: ಭಾರತದ ಮಾಜಿ ಕ್ರಿಕೆಟಿಗರಾದ ಲಾಲಾ ಅಮರನಾಥ್ ನಿಧನರಾದರು.

2014: ಭಾರತೀಯ ಇಂಗ್ಲಿಷ್ ಇತಿಹಾಸಕಾರ, ಪತ್ರಕರ್ತ ಮತ್ತು ಲೇಖಕ ಚಪ್ಮಾನ್ ಪಿಂಚರ್ ನಿಧನರಾದರು.

 

Categories
e-ದಿನ

ಆಗಸ್ಟ್-4

 

ಪ್ರಮುಖ ಘಟನಾವಳಿಗಳು:

1693: ಡಾಂ ಪೆರಿಗ್ನಾನ್ “ಶ್ಯಾಂಪೇನ್” ಕಂಡುಹಿಡಿದರು.

1777: ನಿವೃತ್ತ ಬ್ರಿಟೀಶ್ ಅಶ್ವಸೈನ್ಯದ ಅಧಿಕಾರಿ ಫಿಲಿಪ್ ಆಸ್ಟ್ಲೇ ಮೊದಲ ಸರ್ಕಸ್ ಸ್ಥಾಪಿಸಿದರು.

1789: ಫ್ರೆಂಚ್ ರಾಷ್ಟ್ರಿಯ ಸಭೆಯು ಊಳಿಗಮಾನ್ಯ ಪದ್ದತಿಯನ್ನು ಕೊನೆಗೊಳಿಸಿತು.

1862: ಅಮೇರಿಕಾ ತನ್ನ ಮೊದಲ ಆದಾಯ ತೆರಿಗೆಯನ್ನು ಸಂಗ್ರಹಿಸಿತು.

1870: ಬ್ರಿಟಿಷ್ ರೆಡ್ ಕ್ರಾಸ್ ಸೊಸೈಟಿ ರೂಪಿತವಾಯಿತು.

1914: ಗಾಂಧೀಜಿಯವರು ಲಂಡನನ್ನು ತಲುಪಿ ಭಾರತೀಯ ಸ್ವಯಂಸೇವಕರ ಗುಂಪನ್ನು ಬೆಳೆಸಿದರು.

1919: ರಾಡೆನ್ ವಸ್ತು ಸಂಗ್ರಹಾಲಯ ಪ್ಯಾರೀಸಿನಲ್ಲಿ ತೆರೆಯಿತು.

1921: ಮೊದಲ ಬಾರಿಗೆ ರೇಡಿಯೋದಲ್ಲಿ ಟೆನ್ನಸ್ ಪಂದ್ಯವನ್ನು ಪ್ರಸಾರಿಸಲಾಯಿತು.

1930: ಬೆಲ್ಜಿಯಮ್ಮಿನಲ್ಲಿ ಬಾಲ ಕಾರ್ಮಿಕರ ಕಾನೂನನ್ನು ಸ್ಥಾಪಿಸಲಾಯಿತು.

1935: ಭಾರತ ಸರ್ಕಾರ ರಾಯಲ್ ಅಸೆಂಟ್ ಆಕ್ಟ್ 1935 ಅನ್ನು ಪಡೆಯಿತು.

1936: ಭಾರತೀಯ ಸರ್ಕಾರದ ಕಾಯ್ದೆಯನ್ನು ರಾಜನಿಂದ ಅಂಗೀಕರಿಸಲ್ಪಟ್ಟಿತು.

1947: ಜಪಾನಿನ ಸರ್ವೋಚ್ಛ ನ್ಯಾಯಾಲಯವು ಸ್ಥಾಪನೆಯಾಯಿತು.

1954: ಪಾಕಿಸ್ತಾನ ಸರ್ಕಾರವು ಹಫೀಜ್ ಜುಲ್ಲಾಂಡ್ರಿ ಬರೆದ ಮತ್ತು ಅಹಮದ್ ಜಿ ಚಾಗ್ಲಾ ಸಂಯೋಜಿಸಿದ ರಾಷ್ಟ್ರಗೀತೆಯನ್ನು ಅಂಗೀಕರಿಸಿತು.

1956: ಪೂರ್ವ ಜಗತ್ತಿನ ಮತ್ತು ಭಾರತದ ಅತಿದೊಡ್ಡ ಮೊದಲ ಪರಮಾಣು ಶಕ್ತಿ- ನ್ಯೂಕ್ಲಿಯರ್ ರಿಯಾಕ್ಟರ್ ಘಟಕವನ್ನು ಬಾಂಬೆಯಲ್ಲಿ ತೆರೆಯಲಾಯಿತು.

1967: ವಿಶ್ವದ ಅತಿ ಉದ್ದ ಮತ್ತು ಎತ್ತರದ ಅಣೆಕಟ್ಟಾದ “ನಾಗಾರ್ಜುನ್ ಸಾಗರ”ವನ್ನು ಉದ್ಘಾಟಿಸಲಾಯಿತು.

1977: ಅಮೇರಿಕಾ ಅಧ್ಯಕ್ಷ ಕಾರ್ಟರ್ ಇಂಧನ ಇಲಾಖೆಯನ್ನು ಸ್ಥಾಪಿಸಿದರು.

ಪ್ರಮುಖ ಜನನ/ಮರಣ:

1845: ಹಿಂದಿ ಪತ್ರಿಕೆಯನ್ನು ಪ್ರಕಟಿಸಿದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸಂಸ್ಥಾಪಕರಲ್ಲಿ ಒಬ್ಬರಾದ ಫಿರೋಜ್ ಶಾಹ್ ಮೆಹತಾ ಜನಿಸಿದರು.

1894: ಪ್ರಖ್ಯಾತ ಹಿಂದಿ ಲೇಖಕ ನಾರಾಯಣ್ ಸಿತಾರಾಮ್ ಫಡ್ಕೆ ಜನಿಸಿದರು.

1906: ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಡಾ.ಯಶವಂತ್ ಸಿಂಗ್ ಪಾರ್ಮರ್ ಜನಿಸಿದರು.

1928: ಭಾರತದ ಹಾಕಿ ಆಟಗಾರ ಉಧಮ್ ಸಿಂಗ್ ಜನಿಸಿದರು.

1929: ಹಿನ್ನಲೆ ಗಾಯಕ ಕಿಶೋರ್ ಕುಮಾರ್ ಗಂಗೂಲಿ ಜನಿಸಿದರು.

1931: ಭಾರತದ ಕ್ರಿಕೆಟಿನ ವಿಕೆಟ್ ಕೀಪರ್ ಆಗಿದ್ದ ನರೇಂದ್ರ ಶಂಕರ್ ತಮ್ಹಾನೆ ಜನಿಸಿದರು.

1993: ಭಗವದ್ಗೀತೆಯ ಅಧ್ಯಯನದಲ್ಲಿ ಮುಖ್ಯಸ್ಥರಾದ ಸ್ವಾಮಿ ಚಿನ್ಮಯಾನಂದ ಅವರು ನಿಧನರಾದರು.

2000: ಬ್ರಿಟಿಶ್ ರಾಜ ಕುಟುಂಬದ ರಾಣಿ ಎಲಿಜಿಬತ್ ಅವರು ತಮ್ಮ 100ನೇ ಜನ್ಮ ದಿನವನ್ನು ಆಚರಿಸಿಕೊಂಡರು.

 

Categories
e-ದಿನ

ಆಗಸ್ಟ್-3

 

ಪ್ರಮುಖ ಘಟನಾವಳಿಗಳು:

1678: ಗ್ರಿಫಾನ್ ಅನ್ನುವ ಮೊದಲ ಅಮೇರಿಕಾದ ಹಡಗನ್ನು ರಾಬರ್ಟ್ ಲಾ ಸಲ್ಲೆ ನಿರ್ಮಿಸಿದರು.

1882: ಅಮೇರಿಕಾದ ಕಾಂಗ್ರೆಸ್ ಮೊದಲ ವಲಸೆ ಕಾನೂನನ್ನು ಜಾರಿಗೆ ತಂದಿತು.

1900: ಫೈರ್ ಸ್ಟೋನ್ ಟಯರ್ ಮತ್ತು ರಬ್ಬರ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1914: ವಿಶ್ವ ಯುದ್ಧ -1ರ ಸಮಯದಲ್ಲಿ ಫ್ರಾನ್ಸ್ ದೇಶದ ಮೇಲೆ ಜರ್ಮನಿ ದೇಶ ಯುದ್ಧ ಘೋಷಿಸಿತು.

1914: ಚರ್ಚುಗಳ ಮೂಲಕ ಅಂತರರಾಷ್ಟ್ರೀಯ ಸ್ನೇಹಕ್ಕಾಗಿ ಪ್ರಚಾರ ಮಾಡಲು ವಿಶ್ವ ಒಕ್ಕೂಟವೊಂದುರೂಪಗೊಂಡಿತು.

1926: ಪಿಕ್ಯಾಡೆಲಿ ಸರ್ಕಸ್ಸಿನಲ್ಲಿ ಸಂಚಾರ ದೀಪಗಳನ್ನು ಸ್ಥಾಪಿಸಲಾಯಿತು.

1949: ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಆಫ್ ಅಮೇರಿಕಾ ಮತ್ತು ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್ ಸಹಯೋಗದಲ್ಲಿ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸ್ಥಾಪನೆಯಾಯಿತು.

1957: ಅಬ್ದುಲ್ ರೆಹಮಾನ್ ಅವರು ಮಲೇಷಿಯಾದ ನೂತನ ನಾಯಕರಾಗಿ ಚುನಾಯಿತರಾಗುತ್ತಾರೆ, ಇವರ ನಾಯಕತ್ವದಲ್ಲಿ ಮಲೇಷಿಯಾ ಬ್ರಿಟನ್ನಿನಿಂದ ಸ್ವಾತಂತ್ರ ಸಾಧಿಸಿತು.

1984: ಮದರಾಸು ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟವಾಗಿ 32 ಮಂದಿ ಮೃತರಾದರು.

1991: ಗೋವಾ ಆಳ್ವಿಕೆ ನಡೆಸಿದ ಪೋರ್ಚುಗೀಸ್ ಬ್ಯಾಂಕಿನಲ್ಲಿ ಸುಮಾರು 15 ದಶಲಕ್ಷ ಡಾಲರ್ ಮೌಲ್ಯದ 280 ಕೆ.ಜಿ. ಚಿನ್ನದ ಆಭರಣಗಳನ್ನು ಮರಳಿ ಭಾರತಕ್ಕೆ ತರಲಾಯಿತು.

1993: ಕೇಬಲ್ ಟೀವಿಯನ್ನು ನಿಯಂತ್ರಿಸಲು ರಾಜ್ಯ ಸಭೆಯಲ್ಲಿ ಕರಡು ನೀತಿಪತ್ರವನ್ನು ಪ್ರಸ್ತಾಪಿಸಲಾಯಿತು.

1994: ನವದೆಹೆಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಮೊದಲ ಯಶಸ್ವೀ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

1995: ಎನ್ರಾನ್ ಪವರ್ ಪ್ರಾಜೆಕ್ಟ್ ಅನ್ನು ಮಹಾರಾಷ್ಟ್ರ ಸರ್ಕಾರದಿಂದ ರದ್ದು ಮಾಡಲಾಯಿತು.

1998: ಭಾರತವು ತನ್ನ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಕ್ಷಿಪಣಿಯಾದ ಆಕಾಶನ್ನು ಚಂಡಿಪುರದ ಸಮುದ್ರದಲ್ಲಿ ಪರಿಕ್ಷೆ ಮಾಡಲು ಹಾರಿಸಲಾಯಿತು.

2003: ಅಮೇರಿಕಾದ ಆಂಗ್ಲಿಕನ್ ಚರ್ಚ್ ಸಲಿಂಕಕಾಮಿ ಬಿಷಪ್ ಅನ್ನು ನೇಮಿಸಲು ನಿರ್ಧರಿಸಿತು.

2011: 20 ಮಿಲಿಯನ್ ವರ್ಷಗಳ ಹಿಂದಿನ ತಲೆಬುರುಡೆಯೊಂದು ಉಗಾಂಡದಲ್ಲಿ ಪತ್ತೆಯಾಯಿತು. ಈ ತಲೆಬುರುಡೆ ಮಂಗನದೆಂದು ಗುರುತಿಸಲಾಯಿತು.

ಪ್ರಮುಖ ಜನನ/ಮರಣ:

1886: ಆಧುನಿಕ ಹಿಂದಿ ಕವಿ ಮತ್ತು ಚಿತ್ರಕಥೆಗಾರ ಮೈತಿಲಿ ಶರಣ್ ಗುಪ್ತ್ ಜನಿಸಿದರು.

1916: ಭಾರತೀಯ ಕವಿ ಮತ್ತು ಹಾಡು ರಚನೆಗಾರರಾಗಿದ್ದ ಶಕೀಲ್ ಬದಾಯುನಿ ಜನಿಸಿದರು.

1930: ಪ್ರಸಿದ್ಧ ಜ್ಯೋತಿಶಿ ಮತ್ತು ಸಂಶೋಧಕರಾದ ವೆಂಕಟೇಶ್ ಬಾಪುಜೀ ಕೇತ್ಕರ್ ನಿಧನರಾದರು.

1956: ಭಾರತೀಯ ಕ್ರಿಕೆಟ್ ತರಬೇತುದಾರರಾಗಿದ್ದ ಬಲ್ವಿಂದರ್ ಸಂಧು ನಿಧನರಾದರು.

1957: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುತ್ರ ಮತ್ತು ಪತ್ರಕರ್ತರಾಗಿದ್ದ ದೇವದಾಸ ಗಾಂಧಿ ನಿಧನರಾದರು.

1960: ಭಾರತದ ಕ್ರಿಕೆಟ್ ಪಟು ಗೋಪಾಲ್ ಶರ್ಮ ನಿಧನರಾದರು.

1984: ಭಾರತದ ಫುಟ್ ಬಾಲ್ ಆಟಗಾರರಾಗಿದ್ದ ಸುನಿಲ್ ಛತ್ರಿ ನಿಧನರಾದರು.

1984: ಅಮೇರಿಕಾದ ಈಜುಗಾರ ಮತ್ತು ಒಲಂಪಿಕ್ ಚಾಂಪಿಯನ್ ರಯಾನ್ ಲಾಕ್ಟೆ ಜನಿಸಿದರು.

 

Categories
e-ದಿನ

ಆಗಸ್ಟ್-2

 

ಪ್ರಮುಖ ಘಟನಾವಳಿಗಳು:

1610: ಹೆನ್ರಿ ಹಡ್ಸನ್ ಅವರು ಕೊಲ್ಲಿಯನ್ನು ಪ್ರವೇಶಿಸಿದರಿಂದ ಆ ಕೊಲ್ಲಿಗೆ ಅವರ ಹೆಸರನ್ನೇ ನೀಡಲಾಯಿತು.

1782: ಜಾರ್ಜ್ ವಾಷಿಂಗ್ಟನ್ ಅವರು “ಹಾನರರಿ ಬಾಡ್ಜ್ ಆಫ್ ಡಿಸ್ಟಿಂಕ್ಷನ್” ಅನ್ನು ಸೃಷ್ಟಿಸಿದರು.

1790: ಅಮೇರಿಕಾದ ಮೊದಲ ಜನ ಗಣತಿ ಮಾಡಿದಾಗ 3939214 ಜನರಿದ್ದರೆಂದು ವರದಿ ಮಾಡಲಾಯಿತು.

1791: ಸ್ಯಾಮುಯೆಲ್ ಬ್ರಿಗ್ಸ್ ಮತ್ತು ಅವರ ಮಗ ಸೇರಿ ಉಗುರು ತಯಾರಿಸುವ ಯಂತ್ರಕ್ಕೆ ಪೇಟೆಂಟ್ ಪಡೆದರು.

1819: ಪ್ಯಾರಚೂಟಿನಿಂದ ಮೊದಲ ಬಾರಿಗೆ ಜಿಗಿತವನ್ನು ಆರಂಭಿಸಲಾಯಿತು.

1858: ಮೊದಲ ಅಂಚೆ ಡಬ್ಬಗಳನ್ನು ನ್ಯೂಯಾರ್ಕ್ ಮತ್ತು ಬಾಸ್ಟನ್ನಿನ ಬೀದಿಗಳಲ್ಲಿ ಸ್ಥಾಪಿಸಲಾಯಿತು.

1858: ಈಸ್ಟ್ ಇಂಡಿಯನ್ ಕಂಪನಿಯಿಂದ ಬ್ರಿಟಿಶ್ ರಾಜರಿಂದ ಭಾರತದ ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳಲು ಮಸೂದೆ ಜಾರಿಗೆ ತರಲಾಯಿತು.

1865: ಲೆವಿಸ್ ಕ್ಯಾರೋಲ್ “ಆಲೀಸಸ್ ಅಡ್ವೆಂಚರ್ಸ್ ಇನ್ ವಂಡರ್ ಲ್ಯಾಂಡ್” ಪುಸ್ತಕವನ್ನು ಪ್ರಕಟಿಸಿದರು.

1870: ಲಂಡನ್ನಿನ ಮೊದಲ ಭೂಗತ ಕೊಳವೆ ರೈಲ್ವೆಯಗೋಪುರದ ಸಬ್ ವೇ ತೆರೆಯಲಾಯಿತು.

1875: ವಿಶ್ವದ ಮೊದಲ ರೋಲರ್ ಸ್ಕೇಟಿಂಗ್ ರಿಂಕನ್ನು ಲಂಡನ್ನಿನಲ್ಲಿ ತೆರೆಯಲಾಯಿತು.

1877: ಸ್ಯಾನ್ ಫ್ರಾನ್ಸಿಸ್ಕೋ ಸಾರ್ವಜನಿಕ ಗ್ರಂಥಾಲಯ 5000 ಕೃತಿಗಳೊಂದಿಗೆ ತೆರೆಯಲಾಯಿತು.

1880: ಬ್ರಿಟಿಷ್ ಸಂಸತ್ತು ಅಧಿಕೃತವಾಗಿ ಗ್ರೀನ್ ವಿಚ್ ಟೈಮ್ ಅನ್ನು ಅಳವಡಿಸಿಕೊಂಡಿತು.

1887: ರೊವೆಲ್ ಹಾಡ್ಜ್ ಮುಳ್ಳು ತಂತಿಗೆ ಪೇಟೆಂಟ್ ಪಡೆದರು.

1892: ಚಾರ್ಲ್ಸ್ ಎ ವೀಲರ್ ಎಸ್ಕಲೇಟರಿನ ಮೂಲ ಮಾದರಿಗೆ ಪೇಟೆಂಟ್ ಪಡೆದರು.

1894: ಬ್ರಿಟನ್ನಿನಲ್ಲಿ ಮರಣ ದಂಡನೆಯನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

1909: ಮೊದಲ ಬಾರಿಗೆ ಲಿಂಕನ್ ಅವರ ಮುಖದ ನಾಣ್ಯಗಳನ್ನು ಮುದ್ರಿಸಲಾಯಿತು.

1932: ಪಾಸಿಟ್ರಾನನ್ನು ಭೌತವಿಜ್ಞಾನಿ ಕಾರ್ಲ್ ಡೇವಿಡ್ ಅಂಡಿಸನ್ ಪತ್ತೆ ಮಾಡಿ ಅದರ ಛಾಯಾ ಚಿತ್ರವನ್ನು ಸೆರೆ ಹಿಡಿದರು.

1935: ಬರ್ಮಾವನ್ನು ಭಾರತದಿಂದ ವಿಭಜಿಸಲು ಬ್ರಿಟಿಶ್ ಸರ್ಕಾರವು ಭಾರತ ಸರ್ಕಾರದ ಕಾಯಿದೆಯನ್ನು ಅಂಗೀಕರಿಸಿತು.

1970: ಶ್ರೀಮತಿ ಚೊನಿರಾ ಬೆಳ್ಳಿಯಪ್ಪ ಮುತ್ತಮ್ಮ ಹಂಗೇರಿಯಲ್ಲಿ ನೇಮಿಸಲ್ಪಟ್ಟ ಭಾರತದ ಮೊದಲ ಮಹಿಳಾ ರಾಯಭಾರಿ.

1999: ಅಸ್ಸಾಮಿನಲ್ಲಿ ನಡೆದ ಗೈಸಲ್ ರೈಲು ದುರಂತ 285 ಜನರನ್ನು ಬಲಿ ತೆಗೆದುಕೊಂಡಿತು.

ಪ್ರಮುಖ ಜನನ/ಮರಣ:

1861: ರಾಸಾಯನಿಕ ತಜ್ಞ ಪ್ರಫುಲ್ಲ ಚಂದ್ರ ರೇ ಅವರು ಜನಿಸಿದರು.

1876: ಭಾರತದ ಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಅವರು ಜನಿಸಿದರು.

1877: ಮಧ್ಯಪ್ರದೇಶದ ಮೊದಲ ಮುಖ್ಯಮಂತ್ರಿ ಆಗಿದ್ದ ರವಿಶಂಕರ್ ಶುಕ್ಲ ಜನಿಸಿದರು.

1922: ಮಹಾನ್ ಉದ್ಯಮಿ ಗಂಗಪ್ರಸಾದ್ ಬಿರ್ಲಾ ಜನಿಸಿದರು.

1929: ಭಾರತೀಯ ವಿದೇಶಾಂಗ ಸಚಿವರಾಗಿದ್ದ ವಿದ್ಯಾ ಚರಣ್ ಶುಕ್ಲ ಜನಿಸಿದರು.

1958: ಭಾರತೀಯ ಕ್ರಿಕೆಟಿಗ ಅರ್ಶದ್ ಅಯುಬ್ ಜನಿಸಿದರು.

 

Categories
e-ದಿನ

ಆಗಸ್ಟ್-1

 

ಪ್ರಮುಖ ಘಟನಾವಳಿಗಳು:

1672: ಈಸ್ಟ್ ಇಂಡಿಯಾ ಸಂಸ್ಥೆ ಮತ್ತು ಆಂಗ್ಲ ಕಾನೂನನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಯಿತು.

1732: ಬ್ಯಾಂಕ್ ಆಫ್ ಇಂಗ್ಲೆಂಡಿಗೆ ಅಡಿಪಾಯ ಹಾಕಲಾಯಿತು.

1793: ಮೊದಲ ಬಾರಿಗೆ ಫ್ರಾನ್ಸ್ ದೇಶವು ಮೆಟ್ರಿಕ್ ಪದ್ದತಿಯನ್ನು ಅಳವಡಿಸಿ ಉಪಯೋಗಿಸಿತು.

1831: ನ್ಯೂ ಲಂಡನ್ ಸೇತುವೆಯನ್ನು ಸಾರ್ವಜನಿಕರ ಓಡಾಟಕ್ಕೆಂದು ತೆರೆಯಲಾಯಿತು.

1833: ಗ್ರೇಟ್ ಬ್ರಿಟನ್ನಿನಲ್ಲಿ ಇನ್ ಲ್ಯಾಂಡ್ ಅಂಚೆ ಸೇವೆಯನ್ನು ಪ್ರರಂಭಿಸಲಾಯಿತು.

1905: ಕುದುರೆ ಟಾಂಗಾಗಳ ಸೇವೆಯನ್ನು ಬಾಂಬೆಯಲ್ಲಿ ಸ್ಥಗಿತಗೊಳಿಸಲಾಯಿತು.

1907: ಬ್ಯಾಂಕ್ ಆಫ್ ಇಟಲಿ ತನ್ನ ಮೊದಲ ಶಾಖೆಯನ್ನು ತೆರೆಯಿತು.

1916: ಆನಿ ಬೆಸೆಂಟ್ ಹೋಂ ರೂಲ್ ಲೀಗನ್ನು ಪ್ರಾರಂಭಿಸಿದರು.

1920: ಗಾಂಧಿಜಿಯವರ ನೇತೃತ್ವದಲ್ಲಿ ಲಾರ್ಡ್ ಕ್ಲೆಂಸ್ಫೋರ್ಡ್ ವಿರುದ್ಧ ಅಸಹಕಾರ ಚಳುವಳಿ ಆರಂಭವಾಯಿತು.

1920: ಕಿರ್ಲೋಸ್ಕರ್ ಮಾಸಿಕ ನಿಯತಕಾಲಿಕೆಯನ್ನು ಪ್ರಕಟಿಸಲಾಯಿತು.

1941: ಮೊದಲ “ಜೀಪನ್ನು” ನಿರ್ಮಿಸಲಾಯಿತು.

1947: ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಯಿತು. ಅಧಿಕಾರವನ್ನು ವರ್ಗಾಯಿಸಲಾಯಿತು. ಲಾರ್ಡ್ ಮೌಂಟ್ ಬ್ಯಾಟೆನ್ ಭಾರತದ ಗವರ್ನರ್ ಆದರು ಮತ್ತು ಮುಹಮ್ಮದ್ ಅಲಿ ಜಿನ್ನ ಪಾಕಿಸ್ತಾನದ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.

1952: ನವದೆಹಲಿಯ ಸಫ್ದರ್‍ ಜಂಗ್ ಪ್ರದೇಶದಲ್ಲಿ ವಿಮಾನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವ ಕಾರ್ಯಕ್ಕೆ ನೆಹರು ಚಾಲನೆ ನೀಡಿದರು.

1953: ಆಲ್ ಏರ್ಲೈನ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಎಲ್ಲಾ ಖಾಸಗೀ ವಿಮಾನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.

1953: ವಿಲೀನಗೊಂಡ ಪ್ರದೇಶಗಳಲ್ಲಿ “ಜಹಗೀರ್” ಅನ್ನು ರದ್ದುಗೊಳಿಸಲು ಬಾಂಬೆ ಸರ್ಕಾರವು ನಿರ್ಧರಿಸಿತು.

1955: ಮೊದಲ ಮೈಕ್ರೋ ಗ್ರಾವಿಟಿ ಸಂಶೋಧನೆ ಆರಂಭವಾಯಿತು.

1957: ಎಂ.ಕೆ.ವೆಲ್ಲೋಡಿ ಅವರನ್ನು ಭಾರತದ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

1957: ನ್ಯಾಷನಲ್ ಬುಕ್ ಟ್ರಸ್ಟ್ ನ್ನು ಉದ್ಘಾಟಿಸಲಾಯಿತು.

1958: ಆಚಾರ್ಯ ವಿನೋಬಾ ಭಾವೆಗೆ ಸಮುದಾಯ ನಾಯಕತ್ವಕ್ಕಾಗಿ ರೇಮನ್ ಮ್ಯಾಗಾಸೆಸೆ ಪ್ರಶಸ್ತಿಯನ್ನು ನೀಡಲಾಯಿತು.

1960: ಪಾಕಿಸ್ತಾನದ ರಾಜಧಾನಿ ಕರಾಚಿಯಿಂದ ಇಸ್ಲಮಾಬಾದಿಗೆ ಬದಲಾಯಿಸಲಾಯಿತು.

1962: ಮಹಾರಾಷ್ಟ್ರ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು.

ಪ್ರಮುಖ ಜನನ/ಮರಣ:

1899: ಪಂಡಿತ್ ಜವಹಲಾಲ್ನೆಹರು ಅವರ ಧರ್ಮಪತ್ನಿಯಾದಸ್ವಾತಂತ್ರಹೋರಾಟಗಾರ್ತಿ ಕಮಲಾ ನೆಹರು ಜನಿಸಿದರು.

1932: ಹಿಂದಿ ಚಿತ್ರರಂಗದ ಖ್ಯಾತ ನಟಿ ಮೀನಾ ಕುಮಾರಿ ಜನಿಸಿದರು.

1974: ಶಿಕ್ಷಣ ಮತ್ತು ಹಣಕಾಸು ಸಲಹೆಗಾರ ಆಶುತೋಶ್ ಪಾಲ್ ಜನಿಸಿದರು.

1920: ಭಾರತದ ಸ್ವಾತಂತ್ರ ಹೋರಾಟಗಾರರಾಗಿದ್ದ ಬಾಲ ಗಂಗಾಧರ ತಿಲಕ್ ನಿಧನರಾದರು.

1999: ಬಂಗಾಳಿ ಲೇಖಕ ಉರದ್ ಸಿ.ಚೌದರಿ ಬ್ರಿಟನ್ನಿನಲ್ಲಿ ನಿಧನರಾದರು.

2008: ಭಾರತೀಯ ಕಮ್ಯುನಿಸ್ಟ್ ಚಳುವಳಿಯ ಧುರೀಣ ಹರಕಿಶನ್ ಸಿಂಗ್ ಸುರ್ಜೀತ್ ನಿಧನರಾದರು.

 

Categories
e-ದಿನ

ಜುಲೈ-31

 

ಪ್ರಮುಖ ಘಟನಾವಳಿಗಳು:

1498: ಕ್ರಿಸ್ಟೋಫರ್ ಕೊಲಂಬಸ್ ಟ್ರಿನಿಡಾಡ್ ದ್ವೀಪವನ್ನು ಕಂಡುಹಿಡಿದರು.

1658: ಮುಘಲ ಸಾಮ್ರಾಜ್ಯದ ಅಧಿಪತಿಯೆಂದು ಔರಂಗಜೇಬನನ್ನು ಆಯ್ಕೆಮಾಡಲಾಯಿತು.

1792: ಅಮೇರಿಕಾದ ಮೊದಲ ಸರ್ಕಾರದ ಹಣ ಮುದ್ರಣ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

1849: ಫಿರಂಗಿ ತೂತಿನ ಹಿಂದೆ ಗುಂಡು ಹಾಕುವುದನ್ನು ಬೆನ್ಜಾಮಿನ್ ಚೇಂಬರ್ಸ್ ಪೇಟೆಂಟ್ ಪಡೆದರು.

1861: ಜುಲೈನಲ್ಲಿ ಚಿರಾಪುಂಜಿಯಲ್ಲಿ 9.300 ಮಿ.ಮಿ ಮಳೆ ಅಸ್ಸಾಮ್ ವಿಶ್ವದಾಖಲೆ ಮಾಡಿತು.

1865: ವಿಶ್ವದ ಮೊದಲ ನ್ಯಾರೋ ಗೇಜ್ ಮುಖ್ಯ ರೈಲುಮಾರ್ಗವು ತೆರೆಯಿತು.

1876: ಅಮೇರಿಕಾದ ಕೋಸ್ಟ್ ಗಾರ್ಡ್ ಅಧಿಕಾರಿಗಳ ತರಬೇತಿ ಶಾಲೆಯನ್ನು ಸ್ಥಾಪಿಸಲಾಯಿತು.

1893: ಹೆನ್ರಿ ಪರ್ಕಿ ನುಚ್ಚು ಗೋಧಿಗೆ ಪೇಟೆಂಟ್ ಪಡೆದರು.

1914: ಮರಕಾಯ್ಬೊ ಕೆರೆಯಲ್ಲಿ ತೈಲವನ್ನು ಪತ್ತೆ ಮಾಡಲಾಯಿತು.

1925: ಇಂಗ್ಲೆಂಡಿನಲ್ಲಿ ನಿರುದ್ಯೋಗ ವಿಮೆ ಕಾಯ್ದೆ ಜಾರಿಗೊಳಿಸಲಾಯಿತು.

1928: ಪೋಲ್ಯಾಂಡಿನ ಹಾಲಿನಾ ಕೊನೋಪಾಕ ಟ್ರಾಕ್ ಮತ್ತು ಫೀಲ್ಡ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳೆ.

1938: ಪುರಾತತ್ವಶಾಸ್ತ್ರಜ್ಞರು ಕೆತ್ತಿದ ಚಿನ್ನದ ಮತ್ತು ಬೆಳ್ಳಿಯ ಫಲಕಗಳನ್ನು ರಾಜ ಡೇರಿಯಸ್ಸಿನಿಂದ ಪೆರ್ಸೆಪೋಲಿಸ್ ನಲ್ಲಿ ಕಂಡುಹಿಡಿದರು.

1951: ಜಪಾನ್ ವಿಮಾನ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1962: ಫೆಡರೇಷನ್ ಆಫ್ ಮಲೇಷಿಯಾ ರೂಪಿತವಾಯಿತು.

1965: ಬ್ರಿಟಿಷ್ ಟಿವಿಯಲ್ಲಿ ಸಿಗರೇಟು ಜಾಹಿರಾತುಗಳನ್ನು ನಿಷೇಧಿಸಲಾಯಿತು.

1992: ಥೈಲ್ಯಾಂಡಿನ ವಿಮಾನವು ಕಠ್ಮಂಡು ಶಿಖರಕ್ಕೆ ಗುದ್ದಿದ ಕಾರಣ 113 ಜನ ಮೃತಪಟ್ಟರು.

2010: ಪ್ರವಾಹದಿಂದ ಪಾಕಿಸ್ತಾನದಲ್ಲಿ 900 ಜನ ಮುಳುಗಿ ನಿಧನರಾದರು.

2016: ಟೋಕಿಯೋದ ಮೊದಲ ಮಹಿಳಾ ಗವರ್ನರ್ ಆಗಿ ಯುರಿಕೋ ಕೋಯ್ಕೆ ಆಯ್ಕೆಯಾದರು.

ಪ್ರಮುಖ ಜನನ/ಮರಣ:

1805: ಭಾರತೀಯ ಸೈನಿಕ ಧೀರನ್ ಚಿನ್ನಮಲೈ ಜನಿಸಿದರು.

1880: ಭಾರತದ ಫ್ರಖ್ಯಾತ ಹಿಂದಿ ಲೇಖಕ ಪ್ರೇಮ್ ಚಂದ್ ಜನಿಸಿದರು.

1919: ಭಾರತೀಯ ಕ್ರಿಕೆಟಿಗ ಹೇಮು ಅಧಿಕಾರಿ ಜನಿಸಿದರು.

1940: ಭಾರತದ ಕಾರ್ಯಕರ್ತ ಉಧಮ್ ಸಿಂಗ್ ನಿಧನರಾದರು.

1941: ಗುಜರಾತಿನ 8ನೇ ಮುಖ್ಯಮಂತ್ರಿಯಾಗಿದ್ದ ಅಮರ್ ಸಿನ್ಹ ಚೌದರಿ ಜನಿಸಿದರು.

1947: ಬಾಲಿವುಡ್ ನಟಿ ಮುಮ್ತಾಜ್ ಜನಿಸಿದರು.

1954: ಭಾರತದ ನಟ ನಿರ್ದೇಶಕ ಮಣಿವಣ್ಣನ್ ಅವರು ಜನಿಸಿದರು.

1980: ಭಾರತೀಯ ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದ್ ರಫಿ ನಿಧನರಾದರು.

 

Categories
e-ದಿನ

ಜುಲೈ-30

ಪ್ರಮುಖ ಘಟನಾವಳಿಗಳು:

1729: ಬ್ಲಾಟಿಮೋರ್ ನಗರವನ್ನು ಕಂಡುಹಿಡಿಯಲಾಯಿತು.

1739: ಅಲೋವೇಸ್ ಟೌನ್ ನ್ಯೂಜರ್ಸಿಯಲ್ಲಿ ಕಾಸ್ಪರ್ ವಿಸ್ಟರ್ ಗ್ಲಾಸ್ ತಯಾರಿಕೆಯನ್ನು ಪ್ರಾರಂಭಿಸಿದರು.

1792: 500 ಮಾರ್ಸಿಲ್ಲಿಸಿಯನ್ ಪುರುಷರು ಫ್ರಾನ್ಸ್ ರಾಷ್ಟ್ರಗೀತೆಯನ್ನು ಮೊದಲ ಬಾರಿಗೆ ಹಾಡಿದರು.

1825: ಮಾಲ್ಡೆನ್ ದ್ವೀಪವನ್ನುಕಂಡುಹಿಡಿಯಲಾಯಿತು.

1836: ಮೊದಲ ಬಾರಿಗೆ ಹವಾಯಿಯಲ್ಲಿ ಇಂಗ್ಲಿಷಿನಲ್ಲಿ ಪತ್ರಿಕೆಯನ್ನು ಪ್ರಕಟಿಸಲಾಯಿತು.

1869: ವಿಶ್ವದ ಮೊದಲ ತೈಲ ಟ್ಯಾಂಕರ್ 7000 ಬ್ಯಾರೆಲ್ ತೈಲವನ್ನು ಹೊತ್ತು ಅಮೇರಿಕಾದಿಂದ ಯೂರೋಪಿಗೆ ಹೊರಟಿತು.

1872: ಮಹ್ಲಾನ್ ಲೂಮಿಸ್ “ವೈಯರ್ ಲೆಸ್ ಟೆಲಿಗ್ರಫಿ”ಗೆ ಪೇಟೆಂಟ್ ಪಡೆದರು.

1898: ವಿಲ್ ಕೆಲ್ಲಾಗ್ “ಕಾರ್ನ್ ಫ್ಲೇಕ್ಸ್”ಅನ್ನು ಆವಿಷ್ಕರಿಸಿದರು.

1900: ಬ್ರಿಟಿಷ್ ಸಂಸತ್ತು ಹಲವಾರು ಪ್ರಗತಿಪರ ಸಾಮಾಜಿಕ ಕಾರ್ಯಗಳಾದ ಗಣಿ ಕಾಯಿದೆ, ಕೆಲಸಗಾರರ ಪರಿಹಾರ ಕಾಯಿದೆ, ಮತ್ತು ರೇಲ್ವೆ ಕಾಯಿದೆಯಂತಹ ಅನೇಕ ಕಾಯಿದೆಗಳನ್ನು ಅಂಗೀಕರಿಸಿತು.

1907: ಫಿಲಿಪೀನ್ಸಿನವರು ತಮ್ಮ ಮೊದಲ ಶಾಸಕಾಂಗವನ್ನು ಆಯ್ಕೆ ಮಾಡಿತು.

1909: ರೈಟ್ ಬ್ರದರ್ಸ್ ಮೊದಲ ಮಿಲಿಟರಿ ವಿಮಾನವನ್ನು ಸೇನೆಗೆ ಒಪ್ಪಿಸಿದರು.

1928: ಜಾರ್ಜ್ ಈಸ್ಟ್ ಮ್ಯಾನ್ ಅವರು ಥಾಮಸ್ ಎಡಿಸನ್ ಸೇರಿದಂತೆ ಮೊದಲಾದ ಅತಿಥಿಗಳಿಗೆ ಹವ್ಯಾಸಿ ಬಣ್ಣದ ಚಲನಚಿತ್ರವನ್ನು ತಮ್ಮ ನ್ಯೂಯಾರ್ಕಿನಲ್ಲಿ ಪ್ರದರ್ಶಿಸಿದರು.

1935: ಪೇಪರ್ ಬ್ಯಾಕ್ ಕ್ರಾಂತಿಯನ್ನು ಪ್ರಾರಂಭಿಸಿ ಮೊದಲ ಪೆಂಗ್ವಿನ್ ಪುಸ್ತಕವನ್ನು ಪ್ರಕಟಿಸಲಾಯಿತು.

1957: ರಫ್ತು ವಸ್ತುಗಳ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಇದರ ಮೂಲಕ ರಫ್ತು ಮಾಡುವ ವಸ್ತುಗಳನ್ನು ವಿಮೆ ಮಾಡಲಾಗುತಿತ್ತು.

1995: ಜಾರ್ಖಂಡ್ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಸಂವಿಧಾನಕ್ಕಾಗಿ ಪ್ರಕಟಣೆ ಹೊರಡಿಸಲಾಯಿತು.

2012: ಆಂಧ್ರಪ್ರದೇಶದಲ್ಲಿ ತಮಿಳುನಾಡಿನ ರೈಲಿಗೆ ಬೆಂಕಿ ಅನಾಹುತದಿಂದ 32 ಜನ ಪ್ರಯಾಣಿಕರು ಮೃತಪಟ್ಟು 27 ಜನ ಗಾಯಗೊಂಡರು.

2012: ದೆಹಲಿಯಲ್ಲಿ ವಿದ್ಯುತ್ ಗ್ರಿಡ್ ವೈಫಲ್ಯದಿಂದ ಉತ್ತರ ಭಾರತದಲ್ಲಿ 300 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ವಿದ್ಯುತ್ ಇಲ್ಲದಂತಾಯಿತು.

2014: ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ 20 ಜನ ಮೃತ ಪಟ್ಟು 150ಕ್ಕೆ ಹೆಚ್ಚು ಜನ ಸಿಲುಕಿಕೊಂಡಿದರು.

ಪ್ರಮುಖ ಜನನ/ಮರಣ:

1622: ರಾಮಾಯಣ ಬರೆದ ಕವಿ ತುಳಸಿದಾಸ ನಿಧನರಾದರು.

1883: ಖ್ಯಾತ ಕೈಗಾರಿಕೋದ್ಯಮಿ ಬದ್ರಿದಾಸ್ ಗೋಯೆಂಕಾ ಅವರು ಜನಿಸಿದರು.

1920: ಶಿಕ್ಷಣತಜ್ಞ ಮತ್ತು ಸೇನೆಯ ಮಾಜಿ ಅಧಿಕಾರಿ ಜೆನರಲ್ ಇಂದರ್ ಜಿತ್ ಜನಿಸಿದರು.

1960: ‘ಕರ್ನಾಟಕದ ಸಿಂಹ’ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ ಹೋರಾಟಗಾರರು ಗಂಗಾಧರ ಬಾಲಕೃಷ್ಣ ದೇಶಪಾಂಡೆ ನಿಧನರಾದರು.

1973: ಬಾಲಿವುಡ್ ಹಿನ್ನೆಲೆ ಗಾಯಕ ಸೋನು ನಿಗಮ್ ಜನಿಸಿದರು.

1991: ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹಿರಿಯ ಛಾಯಾಚಿತ್ರಗಾರ ಸಬಿ ಫರ್ನಾಂಡಿಸ್ ನಿಧನರಾದರು.

 

Categories
e-ದಿನ

ಜುಲೈ-29

 

ಪ್ರಮುಖ ಘಟನಾವಳಿಗಳು:

1585: ನೆದರ್ ಲ್ಯಾಂಡಿನಲ್ಲಿ ಫ್ರೈಸ್ಲ್ಯಾಂಡಿನ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.

1655: ವಿಶ್ವದ ಅತ್ಯಂತ ದೊಡ್ಡ ಟೌನ್ ಹಾಲ್ ಆಮ್ಸ್ಟರ್ ಡ್ಯಾಮಿನಲ್ಲಿ ತೆರೆಯಲಾಯಿತು.

1783: ಐಸ್ಲ್ಯಾಂಡಿನ ಸ್ಕಾಪ್ಟರ್ ಜ್ವಾಲಾಮುಖಿ ಉಕ್ಕಿ ಸುಮಾರು 9000 ಜನರನ್ನು ಬಲಿ ತೆಗೆದುಕೊಂಡಿತು.

1802: ಬರೋಡದ ಗಾಯ್ಕೆವಾಡ ಮತ್ತು ಬ್ರಿಟಿಷರ ನಡುವೆ ಸೇನೆಯ ಕುರಿತು ಒಪ್ಪಂದ ಮಾಡಲಾಯಿತು.

1835: ಹವಾಯಿಯಲ್ಲಿ ಮೊದಲ ಕಬ್ಬಿನ ಬೆಳೆ ಬೆಳೆಯಲು ಆರಂಭಿಸಲಾಯಿತು.

1847: ಕಂಬರ್ಲ್ಯಾಂಡ್ ಸ್ಕೂಲ್ ಆಫ್ ಲಾ ಅನ್ನು ಲೆಬನಾನ್ನಿನಲ್ಲಿ ಸ್ಥಾಪಿಸಲಾಯಿತು.

1874: ಸಾಗಿಸಲು ಸಾಧ್ಯವಾಗುವ ಟೆನ್ನಿಸ್ ಕೋರ್ಟ್ ಅನ್ನು ಮೇಜರ್ ವಾಲ್ಟರ್ ಕಾಪ್ಟನ್ ವಿಂಗ್ ಫೀಲ್ಡ್ ಪೇಟೆಂಟ್ ಪಡೆದರು.

1907: ಮೊದಲ ಹೆಲಿಕಾಪ್ಟರ್ ಫ್ರಾನ್ಸಿನಲ್ಲಿ ಹಾರಾಟ ನಡೆಸಿತು.

1914: ಮೊದಲ ವಿದೇಶಿ ದೂರವಾನಿ ಕರೆಯನ್ನು ನ್ಯೂಯಾರ್ಕಿನಿಂದ ಸಾನ್ ಫ್ರಾನ್ಸಿಸ್ಕೋಗೆ ಮಾಡಲಾಯಿತು.

1927: ಮೊದಲ ಉಕ್ಕಿನ ಶ್ವಾಸಕೋಶವನ್ನು ದೇಹದಲ್ಲಿ ಪ್ರತಿಷ್ಠಾಪಿಸಲಾಯಿತು.

1938: “ಡೆನಿಸ್ ದಿ ಮೆನಿಸ್” ವ್ಯಂಗ್ಯ ಚಿತ್ರ ಮೊದಲ ಬಾರಿಗೆ ಕಂಡಿತು.

1949: ಬಿಬಿಸಿ ರೇಡಿಯೋ ಪ್ರಸಾರವನ್ನು ಆರಂಭಿಸಿತು.

1957: ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1958: ಅಮೇರಿಕಾದಲ್ಲಿನಾಸಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1980: ಮಾಸ್ಕೋ ಒಲಂಪಿಕ್ಸಿನಲ್ಲಿ ಸ್ಫೇನ್ ತಂಡವನ್ನು 4-3ರ ಅಂತರದಿಂದ ಸೋಲಿಸಿ ಭಾರತೀಯ ಹಾಕಿ ತಂಡವು ಚಿನ್ನದ ಪದಕ ಪಡೆಯಿತು.

1983: ಕೋಲಾರ ಸಮೀಪದ ಏರೋನಾಟಿಕಲ್ ಡೆವೆಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಇಂದ ಭಾರತವು ಮೊದಲ ಪೈಲೆಟ್ ರಹಿತ ವಿಮಾನಯಾನವನ್ನು ಯಶಸ್ವಿಯಾಗಿ ಪ್ರಯೋಗಿಸಿತು.

1987: ಭಾರತದ ಪ್ರಧಾನ ಮಂತ್ರಿಯಾಗಿದ್ದ ರಾಜಿವ್ ಗಾಂಧಿ ಮತ್ತು ಶ್ರೀಲಂಕಾದ ಅಧ್ಯಕ್ಷರಾಗಿದ್ದ ಜೆ,ಆರ್.ಜಯವರ್ದನೆ ಜನಾಂಗೀಯ ವಿಷಯಗಳ ಕುರಿತು ಇಂಡೋ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದರು.

1999: ಬಾಳಾ ಠಾಕರೆ ಅವರಿಗೆ ಡಿಸೆಂಬರ್ 2001ರ ವರೆಗು ಯಾವುದೇ ಚುನಾವಣೆಯಲ್ಲಿ ಮತ ಹಾಕುವ ಅಥವ ಚುನಾವಣೆಗೆ ನಿಲ್ಲುವ ಹಕ್ಕನ್ನು ನಿರ್ಬಂಧಿಸಿದ ತೀರ್ಪಿನ ವಿರುದ್ದ ಮುಂಬೈನಲ್ಲಿ ಪ್ರತಿಭಟನಾರ್ಥ ಬಂದ್ ಆಚರಿಸಲಾಯಿತು.

2005: ಖಗೋಳಶಾಸ್ತ್ರಜ್ಞರು “ಎರಿಸ್” ಅನ್ನು ಕಂಡುಹಿಡಿದಿರುವುದಾಗಿ ಘೋಷಿಸಿದರು.

2015: ವಿಮಾನಯಾನ MH370 ಕಾಣೆಯಾದ ಭಾಗವು ರಿಯೂನಿಯನ್ ದ್ವೀಪದಲ್ಲಿ ಪತ್ತೆಯಾಯಿತು.

2015: ಮೈಕ್ರೋಸಾಫ್ಟ್ ಸಂಸ್ಥೆಯು “ವಿಂಡೋಸ್ 10” ಲೋಕಾರ್ಪಣೆ ಮಾಡಿತು.

ಪ್ರಮುಖ ಜನನ/ಮರಣ:

1884: ಕನ್ನಡದ ಪ್ರಸಿದ್ದ ನಾಟಕಕಾರ ಟಿ.ಪಿ.ಕೈಲಾಸಂ ಜನಿಸಿದರು.

1891: ಸಾಮಾಜಿಕ ಸುಧಾರಣಾವಾದಿ ಈಶ್ವರ ಚಂದ್ರ ವಿದ್ಯಾಸಾಗರ್ ಅವರು ನಿಧನರಾದರು.

1904: ಟಾಟಾ ಮೋಟರ್ಸ್ ಸಂಸ್ಥೆಯ ಸಂಸ್ಥಾಪಕರಾದ ಜೆ.ಆರ್.ಡಿ ಟಾಟಾ ಜನಿಸಿದರು.

1927: ಗುಜರಾತಿನ ನಾಯಕಿ ಮಾಧವಿ ಸಿಂಗ್ ಸೋಲಂಕಿ ಜನಿಸಿದರು.

1959: ಭಾರತೀಯ ಚಿತ್ರರಂಗದ ನಟ, ಗಾಯಕ, ನಿರ್ಮಾಪಕ ಸಂಜಯ್ ದತ್ ಜನಿಸಿದರು.

1995: ಗಜಲ್ ಹಾಡುಗಾರರಾದ ಅನುಪ್ ಜಲೋಟ ಜನಿಸಿದರು.

2009: ಭಾರತದ ಕಡೆಯ ರಾಣಿಯರಲ್ಲೊಬ್ಬರಾದ ಗಾಯತ್ರಿ ದೇವಿ ನಿಧನರಾದರು.

2013: ಭಾರತೀಯ ಕ್ರಿಕೆಟಿಗರಾಗಿದ್ದ ಮುನಿರ್ ಹುಸೇನ್ ನಿಧನರಾದರು.

 

Categories
e-ದಿನ

ಜುಲೈ-28

 

ಪ್ರಮುಖ ಘಟನಾವಳಿಗಳು:

1586: ಸರ್ ಥಾಮಸ್ ಹ್ಯಾರಿಯಟ್ ಮೊದಲ ಬಾರಿಗೆ ಆಲೂಗಡ್ಡೆಯನ್ನು ಯೂರೋಪಿನಲ್ಲಿ ಪರಿಚಯಿಸಿದರು.

1821: ಪೆರು ಸ್ಪೇನ್ ದೇಶದಿಂದ ಸ್ವಾತಂತ್ರ ಪಡೆಯಿತು.

1851: ಮೊದಲ ಬಾರಿಗೆ ಡಾಗೇರಿಯೋ ವಿಧದ ಛಾಯಾಚಿತ್ರದಲ್ಲಿ ಸಂಪೂರ್ಣ ಸೂರ್ಯಗ್ರಹಣವನ್ನು ಸೆರೆಹಿಡಿಯಲಾಯಿತು.

1858: ಗುರುತಿನ ಸಾಧನವಾಗಿ ಬೆರಳುಗುರುತುಗಳ ಮೊದಲ ಬಳಕೆಯನ್ನು ಸರ್ ವಿಲಿಯಂ ಜೇಮ್ಸ್ ಮಾಡಿದರು.

1858: ನಡಾರ್ ಮೊದಲ ವಾಯುಗಾಮಿ ಛಾಯಾಚಿತ್ರವನ್ನು ಬಲೂನಿನ ಮೂಲಕ ಸೆರೆಹಿಡಿದರು.

1865: ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ತನ್ನ ಮೊದಲ ನೀತಿ ಸಂಕೇತವನ್ನು ಪ್ರಸ್ಥಾಪಿಸಿತು.

1866: ಅಮೇರಿಕ ಸಂಯುಕ್ತ ಸಂಸ್ಥಾನದುದ್ದಕ್ಕು ತೂಕ ಮತ್ತು ಮಾನದಂಡಗಳ ಪ್ರಮಾಣಿಕರಣಕ್ಕಾಗಿ ಮೆಟ್ರಿಕ್ ವ್ಯವಸ್ಥೆಯನ್ನು ಅಮೇರಿಕಾದ ಕಾಂಗ್ರೆಸ್ ಕಾನೂನುಬದ್ಧಗೊಳಿಸಿತು.

1900: ಲೂಯಿಸ್ ಲಾಸಿಂಗ್ “ಹ್ಯಾಂಬರ್ಗರ್” ತಿನಿಸನ್ನು ಸೃಷ್ಟಿಸಿದರು.

1914: ಆಸ್ಟ್ರಿಯ ಮತ್ತು ಹಂಗೇರಿ ಸೇರಿ ಸರ್ಬಿಯಾದ ಮೇಲೆ ದಾಳಿ ಮಾಡಿದಾಗ ಮೊದಲ ವಿಶ್ವ ಯುದ್ಧ ಆರಂಭವಾಯಿತು.

1921: ಅಸಹಕಾರ ಚಳುವಳಿಯ ಭಾಗವಾಗಿ ನವೆಂಬರಿನಲ್ಲಿ ವೇಲ್ಸ್ ಮಹಾರಾಜ ಮುಂಬರುವ ಭೇಟಿಯನ್ನು ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧರಿಸಿತು.

1933: ಮೊದಲ ಹಾಡುವ ಟೆಲಿಗ್ರಾಮ್ ಅನ್ನು ರವಾನಿಸಲಾಯಿತು.

1942: ಎಲ್.ಎ.ಥ್ಯಾಚರ್ ನಾಣ್ಯ-ಚಾಲಿತ ಅಂಚೆಡಬ್ಬಕ್ಕಾಗಿ ಪೇಟೆಂಟ್ ಪಡೆದರು. ಹಣವನ್ನು ಹಾಕಿದರೆ ಲಕೋಟೆಯನ್ನು ಮುದ್ರಿಸಿ ಒದಗಿಸುವ ಸಾಧನತ್ತಿತ್ತು.

1945: ಭಾರೀ ಮಂಜಿನ ಕಾರಣದಿಂದಾಗಿ ವಿಮಾನವೊಂದು ದಿಕ್ಕು ಕಾಣದೆ ಎಂಪಯರ್ ಸ್ಟೇಟ್ ಬಿಲ್ಡಿಂಗಿನ 79ನೇ ಮಹಡಿಗೆ ಅಪ್ಪಳಿಸಿ 14 ಮಂದಿ ಮೃತರಾದರು.

1951: ವಾಲ್ಟ್ ಡಿಸ್ನಿಯ ಚಿತ್ರ “ಆಲಿಸ್ ಇನ್ ವಂಡರ್ ಲ್ಯಾಂಡ್” ಬಿಡುಗಡೆಯಾಯಿತು.

1959: ಬ್ರಿಟನ್ ಅಂಚೆ ಸಂಕೇತಗಳನ್ನು ಉಪಯೋಗಿಸಲು ಆರಂಭಿಸಿತು.

1972: ಗಡಿ ವಿವಾದವನ್ನು ಬಗೆಹರಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ಥಾನ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿತು.

1988: ಹಳೆಯ ಮಾದರಿಯ ಕಂಪ್ಯೂಟರ್ ಗಳ ಮೇಲೆ ಐ.ಬಿ.ಎಂ. ಬೆಲೆ ಏರಿಕೆ ಘೋಷಿಸಿತು.

1997: ನವದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹಿಮಸಾಗರ್ ಎಕ್ಸ್ ಪ್ರೆಸ್ ರೈಲಿಗೆ ಗುದ್ದಿದ ಕಾರಣ 12 ಮಂದಿ ಮೃತರಾಗಿ 69 ಮಂದಿ ಗಾಯಗೊಂಡರು.

2006: ಜುರಾಸಿಕ್ ಯುಗದ ಹರಿದಾಡುವ ಪ್ರಾಣಿ ಜಾತಿಯ ಎರಡು ಹಲ್ಲಿಯ ರೀತಿಯ ಪ್ರಾಣಿಗಳನ್ನು ಆಸ್ಟ್ರೇಲಿಯಾದಲ್ಲಿ ಪತ್ತೆಮಾಡಲಾಗಿದೆ ಎಂದು ಸಂಶೋಧಕರು ಘೋಷಿಸಿದರು.

2016: ಕ್ಯಾನ್ಸರಿನ ಆರಂಭಿಕ ಪುರಾವೆಗಳು 1.7 ಮಿಲಿಯನ್ ವರ್ಷ ವಯಸ್ಸಿನ ಕಾಲುಗಳ ಪಳೆಯುಳಿಕೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು.

ಪ್ರಮುಖ ಜನನ/ಮರಣ:

1872: ಫ್ರೆಂಚ್ ಗವರ್ನರ್ ಜೆನರಲ್ ಆಫ್ ಇಂಡೋ-ಚೈನಾ ಆಗಿದ್ದ ಆಲ್ಬರ್ಟ್ ಪಿ ಸರಾವುಟ್ ಜನಿಸಿದರು.

1909: ರಾಜಕಾರಣಿ ಬ್ರಹ್ಮಾನಂದ ರೆಡ್ಡಿ ಮದರಾಸಿನಲ್ಲಿ ಜನಿಸಿದರು.

1912: ಖ್ಯಾತ ನರ ಶಸ್ತ್ರಚಿಕಿತ್ಸಕ ರಾಮಚಂದ್ರ ಗುಂಡೋ ಗಿಂಡೆ ಜನಿಸಿದರು.

1939: 1928ರಲ್ಲಿ ಅಸ್ಸಾಂ ಛತ್ರಾ ಸಮ್ಮೇಳನದ ಅಧ್ಯಕ್ಷರಾಗಿದ್ದ ತರುಣ್ ರಾಮ್ ಫೂಕನ್ ನಿಧನರಾದರು.

1946: ಸಮಾಜ ಸೇವಕಿ ಮತ್ತು ಶಿಕ್ಷಕಿ ಸಿಸ್ಟರ್ ಆಲ್ಫೋನ್ಸಾ ನಿಧನರಾದರು.

 

Categories
e-ದಿನ

ಜುಲೈ-27

ಪ್ರಮುಖ ಘಟನಾವಳಿಗಳು:

1586: ಸರ್ ವಾಲ್ಟರ್ ರಾಲೀಘ್ ಮೊದಲ ತಂಬಾಕನ್ನು ವರ್ಜೀನಿಯಾದಿಂದ ಇಂಗ್ಲೆಂಡಿಗೆ ತಂದರು.

1665: ಆಂಸ್ಟರ್ ಡ್ಯಾಮಿನ ಯಹೂದಿಗಳು, ಯಹೂದಿ ಸ್ಮಶಾನಕ್ಕಾಗಿ ಜಾಗ ಕೋರಿ ಅರ್ಜಿ ನೀಡಿದರು.

1694: ಬ್ಯಾಂಕ್ ಆಫ್ ಇಂಗ್ಲೆಂಡ್ ಒಂದು ವಾಣಿಜ್ಯ ಸಂಸ್ಥೆಯಾಗಿ ರಾಯಲ್ ಚಾರ್ಟರ್ ಪಡೆದುಕೊಂಡಿದೆ.

1789: ವಿದೇಶಾಂಗ ಇಲಾಖೆಯನ್ನು ಅಮೇರಿಕಾ ಕಾಂಗ್ರೆಸ್ ಸ್ಥಾಪಿಸಿತು.

1866: ಅಟ್ಲಾಂಟಿಕ್ ಟೆಲಿಗ್ರಾಫ್ ಕೇಬಲನ್ನು ಯಶಸ್ವಿಯಾಗಿ ಹಾಕಲಾಯಿತು.

1880: ತೆಂಗಿನ ಎಣ್ಣೆಯನ್ನು ಪರಿಷ್ಕರಿಸುವ ಪ್ರಕ್ರಿಯೆಗೆ ಎ.ಪಿ.ಅಬೋರ್ನೆ ಪೇಟೆಂಟ್ ಪಡೆದರು.

1884: ಈಸ್ಟ್ ಕ್ಲೀವ್ಲ್ಯಾಂಡ್ ಸ್ಟ್ರೀಟ್ ರೈಲ್ವೆ ಕಂಪನಿ ಮೊದಲ ಅಮೇರಿಕದ ವಾಣಿಜ್ಯ ವಿದ್ಯುತ್ ಸ್ಟ್ರೀಟ್ ಕಾರ್ ಮಾರ್ಗವನ್ನು ಪ್ರಾರಂಭಿಸಿತು.

1888: ಫಿಲಿಪ್ ಪ್ರಾಟ್ ಅಮೇರಿಕಾದ ಮೊದಲ ವಿದ್ಯುತ್ ಟ್ರೈಸೈಕಲನ್ನು ಅನಾವರಣಗೊಳಿಸಿದರು.

1920: ವಿಮಾನದ ಸಂಚರಣೆಗಾಗಿ ರೇಡಿಯೋ ದಿಕ್ಸೂಚಿಯನ್ನು ಮೊದಲ ಬಾರಿಗೆ ಬಳಸಲಾಯಿತು.

1921: ಕೆನೆಡಾದ ಜೀವ ರಸಾಯನ ಶಾಸ್ತ್ರಜ್ಞ ಫ್ರೆಡರಿಕ್ ಬಾಂಟಿಂಗ್ ಮತ್ತು ಸಹವರ್ತಿಗಳು ಹಾರ್ಮೋನ್ ಇನ್ಸುಲಿನ್ ಪತ್ತೆಹಚ್ಚಿರುವುದಾಗಿ ಪ್ರಕಟಿಸಿದರು.

1922: ಅಂತರರಾಷ್ಟ್ರೀಯ ಭೌಗೋಳಿಕ ಒಕ್ಕೂಟ ರೂಪಗೊಂಡಿತು.

1940: ಖ್ಯಾತ ಕಾರ್ಟೂನ್ “ಬಗ್ಸ್ ಬನ್ನಿ” ಮೊದಲ ಬಾರಿಗೆ ಪ್ರಸಾರವಾಯಿತು.

1945: ಅಮೇರಿಕಾದ ಕಮ್ಯುನಿಸ್ಟ್ ಪಾರ್ಟಿ ರೂಪುಗೊಂಡಿತು.

1947: ಸ್ವಿಜರ್ಲ್ಯಾಂಡಿನ ಜೆನಿವಾದಲ್ಲಿ ವಿಶ್ವ ವಾಟರ್ ಸ್ಕೀ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1965: ಅಮೇರಿಕಾದಲ್ಲಿ ಫೆಡರಲ್ ಸಿಗರೇಟ್ ಲೇಬಲಿಂಗ್ ಮತ್ತು ಜಾಹಿರಾತು ಕಾಯಿದೆ ಕಾನೂನಿಗೆ ಸಹಿ ಹಾಕಲಾಯಿತು. ಎಲ್ಲಾ ಸಿಗರೇಟ್ ಪ್ಯಾಕ್ ಮೇಲೆ ಆರೋಗ್ಯ ಎಚ್ಚರಿಕೆಗಳು ಬೇಕೆಂದು ಮಾಡಲಾಯಿತು.

1994: ಮಗುವಿನ ಲಿಂಗಪರೀಕ್ಷೆಯನ್ನು ನಿಷೇಧಿಸಿ ಸಂಸತ್ತು ನಿರ್ಣಯ ಮಾಡಿತು.

2012: ರಾಣಿ ಎಲಿಜಿಬತ್ II ಲಂಡನ್ನಿನಲ್ಲಿ 2012 ರ ಬೇಸಿಗೆ ಒಲಂಪಿಕ್ಸ್ ಅನ್ನು ಅಧಿಕೃತವಾಗಿ ಚಾಲನೆ ನೀಡಿದರು.

2014: ಎಬೋಲಾ ಸಾಂಕ್ರಾಮಿಕ ಹರಡುವಿಕೆಯ ಭಯದಿಂದ ಲಿಬೇರಿಯಾ ತನ್ನ ಎಲ್ಲಾ ಗಡಿಗಳನ್ನು ಮುಚ್ಚಿತು.

ಪ್ರಮುಖ ಜನನ/ಮರಣ:

1887: ವಕೀಲರು ಮತ್ತು ಸಮಾಜ ಸೇವಕರಾಗಿದ್ದ ಸರ್ದಾರ್ ದಾವರ್ ತೇಮುರಸ್ ಕವಸ್ಜಿ ಜನಿಸಿದರು.

1928: ಖ್ಯಾತ ಲೇಖಕ ವಕೀಲರು ಮತ್ತು ಪತ್ರಕರ್ತರು ಆಗಿದ್ದ ರಾಮೇಶ್ವರ್ ಸಹಾಯ್ ಸಕ್ಸೇನಾ ಭಾರತದ ಲಲಿತ್ಪುರದಲ್ಲಿ ಜನಿಸಿದರು.

1954: ಭಾರತದ ಸಾರಿಗೆ ಸಚಿವರಾಗಿದ್ದ ಜಿ.ಎಸ್. ಬಾಲಿ ಜನಿಸಿದರು.

1962: ಭಾರತೀಯ ಪತ್ರಕರ್ತ, ನಟ, ನಿರ್ದೇಶಕ ರಾಹುಲ್ ಬೋಸ್ ಜನಿಸಿದರು.

1983: ಭಾರತೀಯ ಫುಟ್ ಬಾಲರ್ ಸಾಕರ್ ವೆಲ್ಹೋ ಜನಿಸಿದರು.

1992: ಬಾಲಿವುಡಿನ ಪ್ರಖ್ಯಾತ ನಟ ಅಮ್ಜದ್ ಖಾನ್ ನಿಧನರಾದರು.

2015: ಭಾರತದ 11 ನೇ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ನಿಧನರಾದರು.

 

Categories
e-ದಿನ

ಜುಲೈ-26

 

ಪ್ರಮುಖ ಘಟನಾವಳಿಗಳು:

1499: ಸ್ಪೇನಿನ ಆಲೋನ್ಸೊ ಡಿ ಒಜೆಡಾ ಕುರಾಕಾವ್ ದ್ವೀಪವನ್ನು ಕಂಡುಹಿಡಿದರು.

1775: ಅಮೇರಿಕಾ ಸಂಯುಕ್ತ ಸಂಸ್ಥಾನದ 2ನೇ ಕಾಂಟಿನೆಂಟಲ್ ಕಾಂಗ್ರೆಸ್ಸಿನಿಂದ ಅಂಚೆ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.

1826: ಲುಧಿಯಾನ ಕೋಮುಗಲಭೆಯಲ್ಲಿ ಅನೇಕ ಯಹೂದಿಗಳು ಮೃತಪಟ್ಟರು.

1835: ಹವಾಯಿಯಲ್ಲಿ ಮೊದಲ ಕಬ್ಬಿನ ತೋಪು ಆರಂಭವಾಯಿತು.

1847: ಮೊಸೆಸ್ ಗಾರಿಶ್ ಫಾರ್ಮರ್ ಮಕ್ಕಳು ಸವಾರಿ ಮಾಡಲು ಮೊದಲ ಚಿಕಣಿ ರೈಲು ನಿರ್ಮಿಸಿದರು.

1887: ಮೊದಲ ಎಸ್ಪರಾಂಟೋ ಪುಸ್ತಕ ಪ್ರಕಟಿಸಲಾಯಿತು.

1893: ವಿಳಾಸ ಚಿತ್ರಣದ ವಾಣಿಜ್ಯ ಉತ್ಪಾದನೆ ಚಿಕಾಗೋದಲ್ಲಿ ಪ್ರಾರಂಭವಾಯಿತು.

1945: ವಿನ್ಟ್ಸನ್ ಚರ್ಚಿಲ್ ಬ್ರಿಟನ್ನಿನ ಅಧ್ಯಕ್ಷ ಸ್ಥಾನದಿಂದ ರಾಜಿನಾಮೆ ನೀಡಿದರು.

1945: ನಾಗಸಾಕಿಯ ಮೇಲೆ ಪರಮಾಣು ಬಾಂಬ್ ದಾಳಿ ನಡೆಯಿತು.

1953: ಆರಿಜೋನಾ ಗವರ್ನರ್ ಜಾನ್ ಹಾವರ್ಡ್ ಪೈಲ್ ಬಹುಪತ್ನಿತ್ವದ ವಿರುದ್ಧ ಕಾನೂನನ್ನು ಆದೇಶಿಸಿದರು.

1956: ಈಜಿಪ್ಟ್ ಸ್ಯೂಯೆಜ್ ಕಾಲುವೆಯನ್ನು ವಶಪಡಿಸಿಕೊಂಡಿತು.

1965: ಬ್ರಿಟಿಶರಿಂದ ಮಾಲ್ಡೀವ್ಸ್ ಸ್ವತಂತ್ರ ಪಡೆಯಿತು.

1974: ಮುರೋರ ದ್ವೀಪದ ಬಳಿ ಫ್ರಾನ್ಸ್ ಪರಮಾಣು ಪರೀಕ್ಷೆ ನಡೆಸಿತು.

1975: ಸರ್ಕಾರದ ವಿರುದ್ದ ಪ್ರದರ್ಶನಗಳನ್ನು ನಿಷೇಧಿಸುವ ತುರ್ತು ಕಾನೂನುಗಳನ್ನು ನಿರಾಕರಿಸಲು ಗುಜರಾತಿನಲ್ಲಿ ಪ್ರತಿಭಟನೆಗಳು ನಡೆಯಿತು.

1983: ಗುರು ಗ್ರಹದ ಚಂದ್ರನ ಮೇಲೆ ಬೆಳಕಿನ ಹೊಳಪು ಗೋಚರಿಸಿತು.

1991: ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ನದಿಯ ಗಲಾಟೆಯ ಕಾರಣ ಎರಡು ರಾಜ್ಯಗಳಲ್ಲಿ ಬಂದ್ ಆಚರಿಸಲಾಯಿತು.

1999: ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ಕಾರ್ಗಿಲ್ ಯುದ್ಧ ಅಂತ್ಯಗೊಂಡಿತು.

2000: ಕೇಂದ್ರ ಸರ್ಕಾರವು 14 ವರ್ಷಕ್ಕೆ ಕೆಳಪಟ್ಟ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳದಂತೆ ನಿಷೇಧ ಮಾಡಲಾಯಿತು.

2005: ಭಾರತದ ಮುಂಬೈಯಲ್ಲಿ 24 ಗಂಟೆಯೊಳಗೆ 99.5 ಸೆ.ಮಿ. ಮಳೆಯಿಂದಾಗಿ ಪ್ರವಾಹ ಉಂಟಾಗಿ 5000 ಜನ ಮೃತರಾದರು.

2008: ಭಾರತದ ಅಹಮದಾಬಾದಿನಲ್ಲಿ 21 ಸರಣಿ ಬಾಂಬುಗಳು ಸ್ಫೋಟವಾಗಿ 56 ಜನ ಮೃತ ಪಟ್ಟು 200ಕ್ಕು ಹೆಚ್ಚು ಜನ ಗಾಯಗೊಂಡರು.

ಪ್ರಮುಖ ಜನನ/ಮರಣ:

1844: ಭಾರತದ ಮುಖ್ಯ ಶಿಕ್ಷಣ ತಜ್ಞ ಗುರುದಾಸ್ ಬ್ಯಾನರ್ಜಿ ಜನಿಸಿದರು.

1865: ಭಾರತೀಯ ಕವಿ ಮತ್ತು ಸಂಶೋಧಕ ರಜನಿಕಾಂತ ಸೆನ್ ಜನಿಸಿದರು.

1874: ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಮತ್ತು ಸಾಮಾಜಿಕ ಸುಧಾರಕ ರಾಜರ್ಷಿಷಾಹು ಛತ್ರಪತಿ ಜನಿಸಿದರು.

1891: ಪ್ರಸಿದ್ಧ ಬಂಗಾಲಿ ಪುರಾತನ ಸಂಶೋಧಕ ರಾಜೇಂದ್ರ ಲಾಲ್ ಮಿತ್ರ ನಿಧನರಾದರು.

1922: ಪ್ರಸಿದ್ಧ ಪತ್ರಕರ್ತ ಮತ್ತು ಸಂಪಾದಕ ಗಿರಿಲಾಲ್ ಜೈನ್ ಜನಿಸಿದರು.

1923: ಪ್ರಖ್ಯಾತ ಹಿನ್ನೆಲೆ ಗಾಯಕ ಮುಕೇಶ್ ಚಂದ್ರ ಮಾಥುರ್ ಜನಿಸಿದರು.

1927: ಭಾರತೀಯ ಕ್ರಿಕೆಟಿಗರಾದ ಗುಲಾಬ್ರೈ ರಾಮಚಂದ್ರ ಜನಿಸಿದರು.

 

Categories
e-ದಿನ

ಜುಲೈ-25

 

ಪ್ರಮುಖ ಘಟನಾವಳಿಗಳು:

1814: ಆಂಗ್ಲ ಇಂಜಿನಿಯರ್ ಜಾರ್ಜ್ ಸ್ಟೀಫನ್ ಸನ್ ಮೊದಲ ಉಗಿ ಲೋಕೋಮೋಟಿವ್ ಪರಿಚಯಿಸಿದರು.

1837: ವಿದ್ಯುತ್ ಟೆಲಿಗ್ರಾಫನ್ನು ಮೊದಲ ವಾಣಿಜ್ಯ ಬಳಕೆಗಾಗಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

1850: ರೋಗ್ ನದಿಯಲ್ಲಿ ಚಿನ್ನವನ್ನು ಪತ್ತೆಮಾಡಲಾಯಿತು.

1854: ಕಾಗದದ ಕಾಲರಿಗೆ ವಾಲ್ಟರ್ ಹಂಟ್ ಪೇಟೆಂಟ್ ಪಡೆದರು.

1871: ಸೇತ್ ವೀಲರ್ ರಂದ್ರ ಸುತ್ತುವ ಕಾಗದಕ್ಕೆ (ಪೆರಫೋರೇಟೆಡ್ ವ್ರಾಪಿಂಗ್ ಪೇಪರ್) ಪೇಟೆಂಟ್ ಪಡೆದರು.

1908: ಚೀನಿಯರು ತಮ್ಮ ಅಡುಗೆಗಳಲ್ಲಿ ಬಳಸುವ “ಅಜಿನೋಮೋಟೋ”ವನ್ನು ಪೇಟೆಂಟ್ ಮಾಡಲಾಯಿತು.

1917: ಸರ್ ಥಾಮಸ್ ವೈಟ್ ಮೊದಲ ಬಾರಿಗೆ ಕೆನೆಡಾದಲ್ಲಿ ವಾಣಿಜ್ಯ ತೆರೆಗೆಯನ್ನು ಪರಿಚಯಿಸಿದರು.

1947: ನಾರ್ವೇ ದೇಶದ ಫಾರ್ಚುನ್ ಗೋರ್ಡಿಯನ್ ಡಿಸ್ಕಸ್ ಎಸೆತದಲ್ಲಿ 178.47 ಅಡಿ ದೂರ ಎಸೆದು ವಿಶ್ವ ದಾಖಲೆ ಮಾಡಿದರು.

1958: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆಯನ್ನು ಉದ್ಘಾಟಿಸಲಾಯಿತು.

1961: 1961ರ ತಾತ್ಕಾಲಿಕ ಜನಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ದೆಹೆಲಿಯನ್ನು ಏ-ವರ್ಗದ ನಗರವೆಂದು ಮುಂಬಡ್ತಿ ನೀಡಲಾಯಿತು.

1978: ಇಂಗ್ಲೆಂಡಿನಲ್ಲಿ “ಇನ್-ವಿಟ್ರೋ ಫರ್ಟಿಲೈಸೇಷನ್” ಮೂಲಕ ಮೊದಲ ಬಾರಿಗೆ ಲೂಯಿಸ್ ಜಾಯ್ ಬ್ರೌನ್ ಮಗು ಟೆಸ್ಟ್ ಟ್ಯೂಬ್ ಮೂಲಕ ಜನಿಸಿತು.

1995: ಭಾರತವು ಆಹಾರಧಾನ್ಯಗಳನ್ನು 189.77 ಮಿಲಿಯನ್ ಟನ್ ಗಳಷ್ಟು ಬೆಳೆದು ದಾಖಲೆ ನಿರ್ಮಿಸಿತು.

1997: ವಿಜ್ಞಾನಿಗಳು ಸ್ಥಗಿತಗೊಳಿಸಿದ ಮಾನವ ಭ್ರೂಣಗಳಿಂದ ತೆಗೆದುಕೊಂಡ ಅಂಗಾಂಶಗಳನ್ನು ಬಳಸಿಕೊಂಡು ಪ್ರಯೋಗಾಲಯದಲ್ಲಿ ಬೆಳೆಸಿದ ಮೊದಲ ಮಾನವ ಕಾಂಡಕೋಶಗಳನ್ನು ಪ್ರಕಟಿಸಿದರು.

1997: ಭಾರತದ 10ನೇ ರಾಷ್ಟ್ರಪತಿಯಾಗಿ ಕೆ.ಆರ್.ನಾರಾಯಣನ್ ಪ್ರಮಾಣ ವಚನ ಸ್ವೀಕರಿಸಿದರು.

1997: ಮೇವು ಹಗರಣ ಪ್ರಕರಣದಲ್ಲಿ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರನ್ನು ಸಿ.ಬಿ.ಐ ನ್ಯಾಯಾಲಯವು ಬಂಧಿಸಿದ ಕಾರಣ, ಲಾಲೂ ಅವರ ಪತ್ನಿ ರಾಬ್ರಿ ದೇವಿಯವರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು. ಇವರು ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾದರು.

2000: ಭಾರತೀಯ ಕ್ರೀಡಾ ಪಟು ಪಿ.ಟಿ.ಉಷಾ ಅವರು ಅಂತರರಾಷ್ಟ್ರೀಯ ಕ್ರೀಡಾಸ್ಪರ್ಧೆಯಿಂದ ನಿವೃತ್ತಿ ಘೋಷಿಸಿದರು.

2000: ರಾಜಸ್ಥಾನದ ಅರುಣಾ ರಾಯ್ ಮತ್ತು ಭಾರತ ರಾಷ್ಟ್ರೀಯ ಸ್ಲಂ ಡ್ವೆಲ್ಲರ್ಸ್ ಅಸೋಸಿಯೇಷನ್ ಸಂಸ್ಥಾಪಕರಾದ ಜಾಕಿನ್ ಅರ್ಪುತಮ್ ಅವರನ್ನು ಸಾರ್ವಜನಿಕ ಸೇವೆಗಾಗಿ ರೇಮನ್ ಮೆಗಾಸೆಸೆ ಪ್ರಶಸ್ತಿಗಾಗಿ ಆಯ್ಕೆಯಾದ ಭಾರತೀಯರು.

2007: ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಶ್ರೀಮತಿ ಪ್ರತಿಭಾ ಪಾಟಿಲ್ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮುಖ ಜನನ/ಮರಣ:

1875: ಭಾರತೀಯ ಬೇಟೆಗಾರ, ಪರಿಸರವಾದಿ ಮತ್ತು ಲೇಖಕ ಜಿಮ್ ಕಾರ್ಬೆಟ್ ಜನಿಸಿದರು,

1929: ಲೋಕಸಭೆಯ 14ನೇ ಸ್ಪೀಕರ್ ಸೋಮನಾಥ್ ಚಟರ್ಜಿ ಜನಿಸಿದರು.

1938: ಖ್ಯಾತ ಹಿಂದಿ ಕವಿ ಗೌತಮ್ ಕಾಳಿಚರಣ್ ಜನಿಸಿದರು.

1991: ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರ ಸಚಿವರಾಗಿದ್ದ ಡಾ.ವಿ.ಕೆ.ಆರ್.ವಿ.ರಾವ್ ನಿಧನರಾದರು.

2012: ಭಾರತೀಯ ಚಿತ್ರ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಬಿ.ಆರ್.ಇಶಾರಾ ನಿಧನರಾದರು.

 

Categories
e-ದಿನ

ಜುಲೈ-24

 

ಪ್ರಮುಖ ಘಟನಾವಳಿಗಳು:

1206: ಲಾಹೋರಿನಲ್ಲಿ ಮಹೊಮದ್ ಆಫ್ ಘುರ್ ಮರಣದ ನಂತರ ಕುತ್ಬುದಿನ್-ಐಬಕ್ ಅವರನ್ನು ಮುಂದಿನ ರಾಜನೆಂದು ಘೋಷಿಸಲಾಯಿತು.

1793: ಫ್ರಾನ್ಸ್ ಮೊದಲ ಹಕ್ಕುಸ್ವಾಮ್ಯ ಕಾನೂನನ್ನು ಅಂಗೀಕರಿಸಿತು.

1823: ಚಿಲಿನಲ್ಲಿ ಗುಲಾಮಗಿರಿಯನ್ನು ರದ್ದುಮಾಡಲಾಯಿತು.

1847: ರೋಟರಿ ತರಹದ ಮುದ್ರಣವನ್ನು ರಿಚರ್ಡ್ ಮಾರ್ಚ್ ಹೋ ನ್ಯೂಯಾರ್ಕಿನಲ್ಲಿ ಪೇಟೆಂಟ್ ಪಡೆದರು.

1851: ಬ್ರಿಟನ್ನಿನಲ್ಲಿ ವಿಂಡೋ ತೆರಿಗೆಯನ್ನು ರದ್ದುಗೊಳಿಸಲಾಯಿತು.

1911: ಹಿರಾಂ ಬಿಂಗ್ಯಾಮ್ ಅವರು ಲಾಸ್ಟ್ ಸಿಟಿ ಆಫ್ ಇನ್ಕಾಸ್ ಅನ್ನು ಕಂಡುಹಿಡಿದರು.

1927: ಮೆನಿನ್ ಗೇಟ್ ಯುದ್ಧದ ಸ್ಮಾರಕವನ್ನು ಅನಾವರಣಗೊಳಿಸಲಾಯಿತು.

1932: ಅನಾರೋಗ್ಯ ಮತ್ತು ಮಾನವೀಯ ಚಟುವಟಿಕೆಗಳ ಸೇವೆಗಾಗಿ ರಾಮಕೃಷ್ಣ ವಿಷನ್ ಸೇವಾ ಪ್ರತಿಷ್ಟಾನವನ್ನು ಸ್ಥಾಪಿಸಲಾಯಿತು.

1935: ಪ್ರಥಮ ಶುಭಾಷಯದ ಟೆಲಿಗ್ರಾಂ ಅನ್ನು ಬ್ರಿಟನ್ನಿನಲ್ಲಿ ಕಳುಹಿಸಲಾಯಿತು.

1935: ವಿಶ್ವದ ಮೊದಲ ಮಕ್ಕಳ ರೈಲು ರಷ್ಯಾದಲ್ಲಿ ಕಾರ್ಯಾರಂಭ ಮಾಡಿತು.

1938: ಇನ್ಸ್ಟಾಂಟ್ ಕಾಫಿಯನ್ನು ಕಂಡುಹಿಡಿಯಲಾಯಿತು.

1970: ಇಂಟರ್ನ್ಯಾಷನಲ್ ಲಾ ಟೆನ್ನಿಸ್ ಅಸೋಸಿಯೇಶನ್ ಸಂಸ್ಥೆಯು 9 ಅಂಕಗಳ ಟೈ ಬ್ರೇಕರ್ ನಿಯಮವನ್ನು ಪರಿಚಯಿಸಲಾಯಿತು.

1985: ಭಾರತೀಯ ಪ್ರಧಾನಿ ರಾಜೀವ್ ಗಾಂಧಿ ಮತ್ತು ಅಖಾಲಿ ದಳದ ಸಿಖ್ ಮುಖಂಡರಾದ ಸಾಂಟ್ ಹರಚಂದ್ ಸಿಂಗ್ ಲೋಂಗೋವಾಲ್ ಅವರು ಪಂಜಾಬಿನಲ್ಲಿ ನಡೆದ ನಾಲ್ಕು ವರ್ಷಗಳ ಆಂದೋಲನವನ್ನು ಅಂತ್ಯಗೊಳಿಸುವ ಮೂಲಕ “ಪಂಜಾಬ್ ಒಪ್ಪಂದ” ಎಂಬ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

1991: ಮನಮೋಹನ್ ಸಿಂಗ್ ಅವರು ಪಿ.ವಿ.ನರಸಿಂಹರಾವ್ ಸರ್ಕಾರದ ಹಣಕಾಸು ಸಚಿವರಾಗಿ ಆರ್ಥಿಕ ಉದಾರೀಕರಣದ ಬಜೆಟ್ ಭಾಷಣವನ್ನು ಮಂಡಿಸಿದರು.

1991: ಸೌರವ್ಯೂಹದ ಹೊರಗೆ ಒಂದು ಗ್ರಹವನ್ನು ಕಂಡುಹಿಡಿದಿರುವಾಗಿ ಮ್ಯಾಂಚೆಸ್ಟರ್ ವಿಶ್ಚವಿದ್ಯಾಲಯದ ವಿಜ್ಞಾನಿ ಘೋಷಿಸಿದರು.

1992: ಯೂನಿವರ್ಸಲ್ ಪೊಯೆಟ್ರಿ ಫೌಂಡೇಶನ್ ಅನ್ನು ಪುಣೆಯಲ್ಲಿ ಸ್ಥಾಪಿಸಲಾಯಿತು.

1996: ಭಾರತ ಸರ್ಕಾರವು ಗರಿಷ್ಟ ಹಣದ ನಿವೃತ್ತಿ/ಮರಣದ ಪರಿಹಾರ ಮೊತ್ತವನ್ನು 1 ಲಕ್ಷ ರೂ ಇಂದ 2.50 ಲಕ್ಷಕ್ಕೆ ಏರಿಸಲಾಯಿತು.

1998: ವಿಮಾನ ಹೊತ್ತೊಯ್ಯುವ ಸಾಗಾಳು ಖರೀದಿಸಲು ಭಾರತವು ರಷ್ಯಾ ದೇಶದ ಜೊತೆಗೆ ಒಪ್ಪಂದ ಮಾಡಿಕೊಂಡಿತು.

ಪ್ರಮುಖ ಜನನ/ಮರಣ:

1911: ಪ್ರಖ್ಯಾತ ಫ್ಲೂಟ್ ವಾದಕರಾದ ಪನ್ನಾಲಾಲ್ ಘೋಷ್ ಜನಿಸಿದರು.

1930: ಗುಜರಾತಿನ 10ನೇ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಜನಿಸಿದರು.

1937: ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ ಮನೋಜ್ ಕುಮಾರ್ ಜನಿಸಿದರು.

1945: ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜಿಮ್ ಪ್ರೇಮ್ ಜಿ ಜನಿಸಿದರು.

1999: ವಿಮಲ ರನಾಡೇವ್ ಹಿರಿಯ CPI(M) ನಾಯಕ ಮುಂಬಯಿಯಲ್ಲಿ ನಿಧನರಾದರು.

 

Categories
e-ದಿನ

ಜುಲೈ-23

 

ಪ್ರಮುಖ ಘಟನಾವಳಿಗಳು:

1827: ಅಮೇರಿಕಾದ ಮೊದಲ ಈಜು ಶಾಲೆ ಬಾಸ್ಟನ್ನಿನಲ್ಲಿ ತೆರೆಯಲಾಯಿತು.

1829: ಅಮೇರಿಕಾದ ವಿಲ್ಲಿಯಂ ಆಸ್ಟಿನ್ ಬರ್ಟ್ ಟೈಪ್ರೈಟರಿಗೆ ಪೇಟೆಂಟ್ ಪಡೆದರು.

1974: ಗ್ರೀಸಿನಲ್ಲಿ ಮಿಲಿಟರಿ ಆಡಳಿತ ಕೊನೆಗೊಂಡು ಮಾಜಿ ಅಧ್ಯಕ್ಷ ಕಾನ್ಸ್ಟಾಟಿನ್ ಕಾರ್ಡಿನಲಿಸ್ ಅವರನ್ನು ಮತ್ತೆ ಅಧ್ಯಕ್ಷರಾಗಲು ಕರೆಯಲಾಯಿತು.

1877: ಮೊದಲ ಟೆಲಿಫೋನ್ ಮತ್ತು ಟೆಲಿಗ್ರಾಫ್ ಲೈನಿನ ಕಾಮಗಾರಿ ಪೂರ್ಣಗೊಂಡಿತು.

1877: ಅಮೇರಿಕಾದ ಮೊದಲ ಪುರಸಭೆಯ ರೈಲುರಸ್ತೆಯ ಕಾರ್ಯಾಚರಣೆ ಆರಂಭವಾಯಿತು.

1880: ಮೊದಲ ವಾಣಿಜ್ಯ ಜಲವಿದ್ಯುತ್ ಶಕ್ತಿ ಗ್ರಹವು ಆರಂಭವಾಯಿತು.

1888: ಜಾನ್ ಬಾಯ್ಡ್ ಡನ್ಲಪ್ ಗಾಳಿಯಿಂದ ತುಂಬಿ ನಡೆಯುವ ಟೈರಿಗೆ ಪೇಟೆಂಟ್ ಪಡೆದರು.

1900: ಕೆನೆಡಾಗೆ ಬರುವ ಅಪರಾಧಿಗಳನ್ನು ನಿಷೇದಿಸಲು ಕೆನೆಡಿಯನ್ ಸರ್ಕಾರವು ವಲಸೆ ನೀತಿಯನ್ನು ವಿಮರ್ಶಿಸಿತು.

1904: ಸೈಂಟ್ ಲೂಯಿಸ್ ವಿಶ್ವಜಾತ್ರೆಯಲ್ಲಿ ಮೊದಲ ಬಾರಿಗೆ ಐಸ್ಕ್ರೀಂ ಕೋನ್ ಸೃಷ್ಟಿಸಲಾಯಿತು.

1920: ಬ್ರಿಟಿಷ್ ಈಸ್ಟ್ ಆಫ್ರಿಕಾವನ್ನು ಕೀನ್ಯಾ ಎಂದು ಮರುನಾಮಕರಣ ಮಾಡಲಾಯಿತು.

1921: ಚೀನಾದ ಕಮ್ಯುನಿಸ್ಟ್ ಪಾರ್ಟಿ ಸ್ಥಾಪನೆಯಾಯಿತು.

1927: ಭಾರತೀಯ ಪ್ರಸಾರ ಸಂಸ್ಥೆಯ ಮೊದಲ ಕಾರ್ಯಕ್ರಮ ಮುಂಬಯಿಯಲ್ಲಿ ಪ್ರಸಾರವಾಗಿತ್ತು.

1929: ಇಟಲಿಯಲ್ಲಿ ಪ್ಯಾಸಿಸ್ಟ್ ಸರ್ಕಾರ ವಿದೇಶಿ ಪದಗಳ ಬಳಕೆಯನ್ನು ನಿಷೇಧಿಸಿತು.

1937: ಯೇಲ್ ವಿಶ್ವವಿದ್ಯಾಲಯದಲ್ಲಿ ಪಿಟ್ಯೂಟರಿ ಹಾರ್ಮೋನಿನ ಪ್ರತ್ಯೇಕತೆಯನ್ನು ಘೋಷಿಸಲಾಯಿತು.

1967: 19 ತಿಂಗಳ ಮಗುವಿಗೆ ಮೊದಲ ಯಶಸ್ವಿ ಯಕೃತ್ತಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

1997: ಭಾರತವು ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಶಿಕ್ಷೆಯ ವಿರುದ್ದ ಯು.ಎನ್.ಕನ್ವೆನ್ಷನಿಗೆ ಸಹಿ ಹಾಕಲು ನಿರ್ಧರಿಸಿತು

2005: ಈಜಿಪ್ಟಿನ ಶರ್ಮ್-ಎಲ್-ಶೇಖ್ ರೆಸಾರ್ಟಿನಲ್ಲಿ ಬಾಂಬ್ ಸ್ಫೋಟವಾಗಿ 88 ಮಂದಿ ಮೃತಪಟ್ಟರು.

ಪ್ರಮುಖ ಜನನ/ಮರಣ:

1856: ಭಾರತ ಸ್ವಾತಂತ್ರ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ಅವರು ಜನಿಸಿದರು.

1906: ಪ್ರಸಿದ್ದ ಭಾರತೀಯ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಭಾರತದ ಮಧ್ಯಪ್ರದೇಶದಲ್ಲಿ ಜನಿಸಿದರು.

1933: ಬಂಗಾಳ ಸ್ವರಾಜ್ಯ ಪಾರ್ಟಿಯ ಅಧ್ಯಕ್ಷರಾಗಿದ್ದ ಜತಿಂದ್ರ ಮೋಹನ್ ಸೇನ್ ಗುಪ್ತ ನಿಧನರಾದರು.

1964: ಭಾರತದ ಪ್ರಖ್ಯಾತ ಸಂಖ್ಯಶಾಸ್ತ್ರಜ್ಞ ಸಮೇಂದ್ರನಾಥ್ ರಾಯ್ ನಿಧನರಾದರು.

1973: ಗಾಯಕ, ಗೀತ ರಚನೆಕಾರ, ನಿರ್ಮಾಪಕ, ನಟ ಮತ್ತು ನಿರ್ದೇಶಕ ಹಿಮೇಶ್ ರೇಷ್ಮಿಯ ಜನಿಸಿದರು.

1988: ಭಾರತದ ಕ್ರಿಕೆಟಿಗಾರದ ಜಹಂಗೀರ್ ಖಾನ್ ನಿಧನರಾದರು.

1991: ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕಿನ ಅಧ್ಯಕ್ಷ ಪ್ರೇಮ್ ದತ್ ಪಲಿವಲ್ ನಿಧನರಾದರು.

2004: ಹಾಸ್ಯ ಚಕ್ರವರ್ತಿ ಎಂದೇ ಪರಿಣಿತರಾಗಿದ್ದ ಮೆಹಮೂದ್ ಅಲಿ ನಿಧನರಾದರು.

 

Categories
e-ದಿನ

ಜುಲೈ-22

 

ಪ್ರಮುಖ ಘಟನಾವಳಿಗಳು:

1376: ಪೈಡ್ ಪೈಪರ್ ಆಫ್ ಹ್ಯಾಮೆಲಿನ್ ದಂತ ಕಥೆ ಇಂದು ಸಂಭವಿಸಿದೆ ಎಂದು ಹೇಳಲಾಗಿದೆ.

1632: ರಾಜ ಫಿಲಿಪ್-IV ಗಾಗಿ ಬ್ಯುಎನ್ ರಿಟೈರೋ ಪ್ಯಾಲೇಸಿಗಾಗಿ ಮ್ಯಾಡಿಡ್ ನಲ್ಲಿ ಸ್ಥಾಪಿಸಲಾಯಿತು.

1678: ಛತ್ರಪತಿ ಶಿವಾಜಿ ಮಹಾರಾಜ್ ಯುದ್ದದಲ್ಲಿ ವೆಲ್ಲೋರ್ ಕೋಟೆಯನ್ನು ಗೆದ್ದರು.

1702: “ಇಂಗ್ಲಿಷ್ ಕಂಪನಿ ಆಫ್ ಮರ್ಚಂಟ್ಸ್” ಮತ್ತು ಹಳೆಯ ಈಸ್ಟ್ ಇಂಡಿಯಾ ಕಂಪೆನಿಗಳನ್ನು “ಯುನೈಟೆಡ್ ಕಂಪನಿ ಆಫ್ ಮರ್ಚಂಟ್ಸ್ ಆಫ್ ಇಂಗ್ಲೆಂಡ್ ಟ್ರೇಡಿಂಗ್ ಟು ದಿ ಈಸ್ಟ್ ಇಂಡೀಸ್” ಎಂದು ಹೆಸರಿಸಲಾಯಿತು. 1833 ರಲ್ಲಿ “ಈಸ್ಟ್ ಇಂಡಿಯಾ ಕಂಪನಿ” ಎಂದು ಮರುನಾಮಕರಣ ಮಾಡಲಾಯಿತು.

1796: ಓಹಿಯೋದಲ್ಲಿ ಕ್ಲೀವ್ ಲ್ಯಾಂಡನ್ನು ಜೆನ್ ಮೊಸೆಸ್ ಕ್ಲೀವ್ಲಾಂಡ್ ಕಂಡು ಹಿಡಿದರು.

1939: ಜೇನ್ ಬೋಲಿನ್ ಅವರು ಮೊದಲ ಮಹಿಳಾ ನ್ಯಾಯಾಧೀಶರಾದ ಆಫ್ರಿಕನ್ ಅಮೇರಿಕನ್.

1952: ಪೋಲೆಂಡ್ ಕಮ್ಯುನಿಸ್ಟ್ ಹೇರಿದ ಸಂವಿಧಾನವನ್ನು ಅಳವಡಿಸಿಕೊಂಡಿತು.

1955: ಮೊತ್ತ ಮೊದಲ ಬಾರಿಗೆ ಅಧ್ಯಕ್ಷರ ಬದಲಾಗಿ ಅಮೇರಿಕಾ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್ ಸಂಸತ್ತು ಸಭೆಯ ಅಧ್ಯಕ್ಷತೆ ವಹಿಸಿದರು.

1956: ಅಂಜರ್ ನಗರದಲ್ಲಿ ಭೂಕಂಪದಿಂದ 117 ಜನ ಮೃತ ಪಟ್ಟು 800 ಜನ ಕಾಣೆಯಾದರು.

1959: ನೆದರ್ಲ್ಯಾಂಡ್ಸಿನಲ್ಲಿ ನೈಸರ್ಗಿಕ ಅನಿಲ ಕಂಡುಬರುತ್ತದೆ.

1981: ಜೂನ್ 19, 1981ರಲ್ಲಿ ಬಾಹ್ಯಾಕಾಶಕ್ಕೆ ಹಾರಿಸಿದ್ದ ಭಾರತದ ಮೊದಲ ಪ್ರಾಯೋಗಿಕ ಜಿಯೋ-ಸ್ಟೇಷನರಿ ಸಂವಹನ ಉಪಗ್ರಹ “ಆಪಲ್” ಕಾರ್ಯಾರಂಭ ಮಾಡಿತು.

1991: ಆರ್ಥಿಕತೆಯ ಉದಾರಿಕರಣಕ್ಕಾಗಿ ನೂತನ ಕೈಗಾರಿಕ ನೀತಿ ಸಂಸತ್ತಿನಲ್ಲಿ ಘೋಷಿಸಲಾಯಿತು.

1997: ಸರ್ಕಾರದ ಪ್ರಸಾರ ಭಾರತಿ ಕಾಯಿದೆ 1990ರ ಸೆಪ್ಟೆಂಬರ್ 15 ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಲಾಯಿತು.

2000: ಅರಿಜೋನ ವಿಶ್ವವಿದ್ಯಾನಿಲಯದಲ್ಲಿ ಖಗೋಳಶಾಸ್ತ್ರಜ್ಞರು ಗುರುಗ್ರಹದ ಸುತ್ತುತ್ತಿರುವ 17ನೇ ಚಂದ್ರನನ್ನು ಕಂಡು ಹಿಡಿದಿದ್ದಾರೆಂದು ಘೋಷಿಸಿದರು.

2009: 21ನೇ ಶತಮಾನದ ಅತ್ಯಂತ ವಿಳಂಬವಾದ ಸೂರ್ಯಗ್ರಹಣವು 6 ನಿಮಿಷ 38.8 ಸೆಕೆಂಡುಗಳ ವರೆಗೆ ನಡೆಯಿತು.

2012: ಪ್ರಣಬ್ ಮುಖರ್ಜಿಯವರು ಭಾರತದ ರಾಷ್ಟ್ರಪತಿಯಾಗಿ ಚುನಾಯಿತರಾದರು.

ಪ್ರಮುಖ ಜನನ/ಮರಣ:

1875: ಒರಿಯಾ ಕವಿ, ಕಾದಂಬರಿಕಾರಾಗಿದ್ದ ನಂದಕಿಶೋರ್ ಬಾಲ್ ಜನಿಸಿದರು.

1918: ಭಾರತದ ಮೊದಲ ಫೈಟರ್ ಪೈಲೆಟ್ ಇಂದ್ರ ಲಾಲ್ ರೈ ಯುದ್ದದಲ್ಲಿ ನಿಧನರಾದರು.

1925: ಪ್ರಸಿದ್ಧ ಪತ್ರಕರ್ತ ಗೋವಿಂದ ತಲವಾಲ್ಕರ್ ಜನಿಸಿದರು.

1944: ಖ್ಯಾತ ಕೈಗಾರಿಕೋದ್ಯಮಿ ಮನಮೋಹನ್ ಮೋದಿ ಸೇತ್ ಉತ್ತರ ಪ್ರದೇಶದ ಮೋದಿನಗರದಲ್ಲಿ ಜನಿಸಿದರು.

1959: ಭಾರತ ಸರ್ಕಾರದ ಮಂತ್ರಿ, ರಾಜಕಾರಣಿ ಅನಂತಕುಮಾರ್ ಬೆಂಗಳೂರಿನಲ್ಲಿ ಜನಿಸಿದರು.

1970: ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾ ದೇವೇಂದ್ರ ಫಡ್ನಾವಿಸ್ ಜನಿಸಿದರು.

1987: ಭಾರತ ಕ್ರಿಕೆಟ್ ಟೆಸ್ಟ್ ಸರಣಿ ಆಡಿದ ಎ.ಜಿ.ಕೃಪಾಲ್ ಸಿಂಗ್ ನಿಧನರಾದರು.

1991: ಖ್ಯಾತ ಗಾಯಕರಾಗಿದ್ದ ಪಂಡಿತ್ ಬಸವರಾಜರಾಜಗುರು ನಿಧನರಾದರು.

 

Categories
e-ದಿನ

ಜುಲೈ-21

 

ಪ್ರಮುಖ ಘಟನಾವಳಿಗಳು:

1595: ಅಲ್ವಾರಾ ಮೆಂಡನಾ “ಮಾರ್ಕ್ವಿಸಸ್ ದ್ವೀಪವನ್ನು” ಕಂಡು ಹಿಡಿದರು.

1730: ಹಾಲೆಂಡ್ ರಾಜ್ಯ, “ಸುಡೋಮಿ”ಯ ಮೇಲೆ ಮರಣದಂಡನೆ ವಿಧಿಸಿತು.

1749: ಪೀಟರ್ ಸ್ಟೀನ್ ಹಾಲೆಂಡಿನ “ಪಿಂಚಣಿ ಸಲಹೆಗಾರ”ರಾದರು.

1866: ಲಂಡನ್ನಿನಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಹರಡಿದ ಪರಿಣಾಮವಾಗಿ ನೂರಾರು ಜನ ಮೃತಪಟ್ಟರು.

1883: ಕಲ್ಕತ್ತಾದಲ್ಲಿ ಸ್ಟಾರ್ ಚಿತ್ರಮಂದಿರ ತೆರೆಯಲಾಯಿತು.

1904: 13 ವರ್ಷಗಳ ನಂತರ 4607 ಮೈಲಿಯ ಟ್ರಾನ್ಸ್-ಸೈಬೀರಿಯನ್ ರೈಲ್ವೆ ಕಾಮಗಾರಿ ಪೂರ್ಣಗೊಂಡಿತು.

1913: ಈಜಿಪ್ಟ್ ಸರ್ಕಾರವು ನೂತನ ಸಂವಿಧಾನಿಕ ವ್ಯವಸ್ಥೆ ಮತ್ತು ಚುನಾವಣಾ ಕಾನೂನನ್ನು ಘೋಷಿಸಿತು.

1919: ಆಂಟೊನಿ ಫೋಕರ್ ಅವರು ಹ್ಯಾಂಬರ್ಗ್ ಮತ್ತು ಆಮ್ಸಟರ್ ಡ್ಯಾಮಿನಲ್ಲಿ ವಿಮಾನ ಕಾರ್ಖಾನೆಯನ್ನು ಸ್ಥಾಪಿಸಿದರು.

1933: ಪ್ಯಾಲಿಸ್ಟೈನಿನಲ್ಲಿ ಹೈಫ್ ಬಂದರು ತೆರೆಯಲಾಯಿತು.

1935: ಮುಂಬೈ ಮರಾಠಿ ಸಾಹಿತ್ಯ ಸಂಘದ ಸ್ಥಾಪನೆ ಮಾಡಲಾಯಿತು.

1947: ಭಾರತದ ರಾಷ್ಟ್ರೀಯ ಧ್ವಜವನ್ನು ಸಂವಿಧಾನ ಸಭೆ ಅಂಗೀಕರಿಸಿತು.

1951: ದಲೈಲಾಮ ಟಿಬೆಟಿಗೆ ಮತ್ತೆ ಮರಳಿದರು.

1960: ಶ್ರೀಲಂಕದ ಸಿರಿಮಾವೋ ಬಂಡಾನಾಯಿಕೆ ವಿಶ್ವದ ಮೊದಲ ಮಹಿಳಾ ಪ್ರಧಾನಿಯಾದರು.

1970: ನೈಲ್ ನದಿಯ ಪ್ರವಾಹವನ್ನು ನಿಯಂತ್ರಿಸಲು ನಿರ್ಮಾಣ ಮಾಡಿದ “ಅಸ್ವಾನ್ ಅಣೆಕಟ್ಟು” ತೆರೆಯಲಾಯಿತು.

1970: ಎಲ್ಲಾ ಯಹೂದಿಯರ ಆಸ್ತಿಗಳನ್ನು ಲಿಬಿಯಾ ವಶಪಡಿಸಿಕೊಂಡಿತು.

1978: ವಿಶ್ವದ ಪ್ರಬಲ ತಳಿಯ ನಾಯಿಯಾದ 80ಕಿಲೋ ತೂಕದ ಸೇಂಟ್ ಬರ್ನರ್ಡ್, 2909 ಕೆ.ಜಿ ಭಾರವನ್ನು 27 ಮೀಟರ್ ಎಳೆದು ದಾಖಲೆ ಮಾಡಿತು.

1980: ಜೀನ್ ಕ್ಲಾಡ್ ಡ್ರಾಯರ್ ಅವರು ಐಫೆಲ್ ಟವರನ್ನು 2 ಗಂಟೆ 18 ನಿಮಿಷಗಳಲ್ಲಿ ಏರಿದರು.

1994: SC/ST ಇತರ ರಾಜ್ಯಗಳಿಗೆ ವಲಸೆ ಹೋಗುವುದರಿಂದ ತಮ್ಮ ವಿಶೇಷ ಸ್ಥಾನಮಾನಗಳ ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆಂದು ಸುಪ್ರೀಮ್ ಕೋರ್ಟ್ ಘೋಷಿಸಿತು.

ಪ್ರಮುಖ ಜನನ/ಮರಣ:

1891: ಪ್ರಸಿದ್ಧ ನಾಯಕ, ಪತ್ರಕರ್ತ, ಸ್ವಾತಂತ್ರ ಹೋರಾಟಗಾರರಾಗಿದ್ದ ಜೈರಾಂದಾಸದ ದೌಲತ್ ರಾಮ್ ಜನಿಸಿದರು.

1906: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷರಾಗಿದ್ದ ಡಬ್ಲ್ಯು.ಸಿ.ಬಾನೆರ್ಜಿ ನಿಧನರಾದರು.

1907: ಜಮ್ಮು ಕಾಶ್ಮೀರದ ಮಾಜಿ ಪ್ರಧಾನಿ ಗುಲಾಂ ಮೊಹಮ್ಮದ್ ಬಕ್ಷಿ ಜನಿಸಿದರು.

1930: ಕವಿ ಮತ್ತು ಗೀತ ರಚನೆಕಾರರಾಗಿದ್ದ ಆನಂದ್ ಬಕ್ಷಿ ಜನಿಸಿದರು.

1934: ಭಾರತದ ಕ್ರಿಕೆಟ್ ಆಟಗಾರರಾದ ವಸಂತರಾವ್ ವಿಷ್ಣು ಲಿಮ್ಯೆ ಪುಣೆಯಲ್ಲಿ ಜನಿಸಿದರು.

1977: ಪ್ರಸಿದ್ದ ಪ್ರಾಣಿ ತಜ್ಞ ಭೂದೇವ್ ಚಂದ್ರ ಬಸು ನಿಧನರಾದರು.

 

Categories
e-ದಿನ

ಜುಲೈ-20

 

ಪ್ರಮುಖ ಘಟನಾವಳಿಗಳು:

1654: ಬ್ರಿಟೀಷರು ಪೋರ್ಚುಗಲ್ಲನ್ನು ಆಕ್ರಮಿಸಿದರು.

1837: ಲಂಡನ್ ನಗರದ ಮೊದಲ ಅಂತರ ನಗರ ರೈಲು ನಿಲ್ದಾಣವಾದ ಯುಸ್ಟನ್ ರೈಲು ನಿಲ್ದಾಣ ತೆರೆಯಲಾಯಿತು.

1847: ಜರ್ಮನ್ ಖಗೋಳಶಾಸ್ತ್ರಜ್ಞ ಥಯೋಡರ್ ಬ್ರಾರ್ಸೆನ್-ಮೆಟ್ಕಾಫ್ ಧೂಮಕೇತುವನ್ನು ಕಂಡುಹಿಡಿದರು.

1858: ಬೇಸ್ಬಾಲ್ ಆಟವನ್ನು ವೀಕ್ಷಿಸಲು ಮೊದಲ ಬಾರಿಗೆ ಶುಲ್ಕವನ್ನು ವಿಧಿಸಲಾಯಿತು.

1868: ಸಿಗರೇಟುಗಳ ಮೇಲಿನ ತೆರಿಗೆ ಅಂಚೆಚೀಟಿಗಳ ಮೊದಲ ಬಳಕೆ ಮಾಡಲಾಯಿತು.

1876: ಮೊದಲ ಅಮೇರಿಕಾದ ಅಂತರ ಕಾಲೇಜು ಟ್ರಾಕ್ ಮೀಟ್ ನ್ಯೂಯಾರ್ಕಿನಲ್ಲಿ ಆಯೋಜಿಸಲಾಯಿತು.

1878: ಹವಾಯಿಯಲ್ಲಿ ಮೊದಲ ಬಾರಿಗೆ ದೂರವಾಣಿಯನ್ನು ಪರಿಚಯಿಸಲಾಯಿತು.

1903: ಫೋರ್ಡ್ ಸಂಸ್ಥೆಯು ತನ್ನ ಮೊದಲ ಕಾರನ್ನು ಮಾರುಕಟ್ಟೆಗೆ ತಂದಿತು.

1905: ಧಾರ್ಮಿಕ ಮಾರ್ಗಗಳಲ್ಲಿ ಬಂಗಾಳದ ವಿಭಜನೆಯನ್ನು ಲಂಡನ್ನಿನಲ್ಲಿ ಭಾರತದ ರಾಜ್ಯ ಕಾರ್ಯದರ್ಶಿ ಅನುಮೋದಿಸಿದರು.

1926: ಮೆಥೋಡಿಸ್ಟ್ ಚರ್ಚ್ ಸಂಪ್ರದಾಯದಲ್ಲಿ ಮಹಿಳೆಯರು ಪುರೋಹಿತರಾಗಲು ಅವಕಾಶ ನೀಡಲಾರಂಭಿಸಿತು.

1944: ಅಡಾಲ್ಫ್ ಹಿಟ್ಲರ್ ಈಸ್ಟರ್ನ್ ಪ್ರಶಿಯಾದ ರೋಸ್ಟನ್ ಬರ್ಗಿನ ಪ್ರಧಾನ ಕಛೇರಿಯಲ್ಲಿ ಬಾಂಬಿನ ದಾಳಿಯಿಂದ ತಪ್ಪಿಸಿಕೊಂಡರು.

1949: ಇಸ್ರೇಲಿನ 19 ತಿಂಗಳುಗಳ ಸತತ ಸ್ವಾತಂತ್ರ ಹೋರಾಟ ಕೊನೆಗೊಂಡಿತು.

1954: ಭಾರತ ಮತ್ತು ಚೀನಾದ ನಡುವಿನ ಯುದ್ದಕ್ಕೆ ಕದನವಿರಾಮ ಘೋಷಿಸಿ ಸಹಿಮಾಡಲಾಯಿತು.

1955: ಸುಯೆಜ್ ಕಾಲುವೆಯನ್ನು ಗಮಲ್ ಅಬ್ಡೆಲ್ ನಸೀರ್ ರಾಷ್ಟ್ರೀಕೃತಗೊಳಿಸಿದರು.

1957: ಭಾರತದ ಅತಿ ದೊಡ್ಡ ಹಾಳೆ-ಗಾಜಿನ ತಯಾರಿಸುವ ಕಾರ್ಖಾನೆಯನ್ನು ಬಿಹಾರದಲ್ಲಿ ಪ್ರಾರಂಭಿಸಲಾಯಿತು.

1960: ಬಾಹ್ಯಾಕಾಶ ಯಾತ್ರೆಗೆ ಕಳುಹಿಸಿ ಎರಡು ಜೀವಂತ ನಾಯಿಗಳನ್ನು ರಷ್ಯಾ ಸುರಕ್ಷಿತವಾಗಿ ಮರಳಿ ಪಡೆದರು.

1969: ಗಗನ ಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲ್ಮೈ ಮೇಲೆ ಮೊದಲ ಹೆಜ್ಜೆ ಇಟ್ಟ ಮೊದಲ ಮಾನವ.

1990: ಭಾರತ ಸರ್ಕಾರವು ಹಿಂದೆ ಪ್ರಕಟಿಸಿದ ಉದಾರ ಅಮದು ನೀತಿಯ ಮೇಲಿನ ನಿರ್ಭಂದಗಳನ್ನು ಪ್ರಕಟಿಸಿತು. ಅಮದು ಬಿಲ್ಲುಗಳ ನಿರ್ಭಂದಗಳು ಸುಮಾರು 1000 ಕೋಟಿ ಎಂದು ಅಂದಾಜಿಸಲಾಯಿತು.

2005: ಸಲಿಂಗ ಮದುವೆಗೆ ಅನುಮತಿ ನೀಡಿದ ನಾಲ್ಕನೇ ದೇಶವಾಗಿ ಕೆನಡಾ ದಾಖಲಾಯಿತು.

2011: ಹೆಂಡ್ರಾ ವೈರಸ್ಸಿನ ಪರಿಣಾಮವಾಗಿ ಮಲೇಷಿಯಾ ಆಸ್ಟ್ರೇಲಿಯಾದಿಂದ ಕುದುರೆಗಳ ಆಮದನ್ನು ನಿಷೇಧಿಸಿತು.

ಪ್ರಮುಖ ಜನನ/ಮರಣ:

356: ಗ್ರೀಸ್ ದೊರೆ ಅಲೆಕ್ಸಾಂಡರ್ ದಿ ಗ್ರೇಟ್ ಜನಿಸಿದರು.

1531: ಸಂತ ಮಹಾಕವಿ ತುಳಸಿದಾಸ ಜನಿಸಿದರು.

1911: ಭಾರತ ಕ್ರಿಕೆಟ್ಟಿನ ವೇಗದ ಬೌಲರ್ ಮೊಹಮ್ಮದ್ ಬಕಾ ಜಿಲಾನಿ ಖಾನ್ ಜನಿಸಿದರು.

1919: ಮೌಂಟ್ ಎವೆರೆಸ್ಟ್ ಶಿಖರವನ್ನು ಏರಿದ ಸರ್ ಎಡ್ಮಂಡ್ ಹಿಲ್ಲರಿ ಜನಿಸಿದರು.

1950: ಬಾಲಿವುಡ್ ಚಿತ್ರ ನಟ ನಾಸಿರುದ್ದಿನ್ ಶಾಹ್ ಜನಿಸಿದರು.

1982: ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಮೀರಬೇನ್ ನಿಧನರಾದರು.

 

Categories
e-ದಿನ

ಜುಲೈ-19

 

ಪ್ರಮುಖ ಘಟನಾವಳಿಗಳು:

1510: ಪ್ರೇಗಿನ ಬರ್ಲಿನಿನಲ್ಲಿ 38 ಯಹೂದಿಗಳನ್ನು ಜೀವಂತ ಸುಡಲಾಗಿತ್ತು.

1595: ಖಗೋಳಶಾಸ್ತ್ರಜ್ಞ ಜೊಹಾನ್ಸ್ ಕ್ಲೆಪ್ಪರ್ ಒಂದು ಸಾಕ್ಷಾತ್ಕಾರವನ್ನು ಹೊಂದಿದ್ದು, ಬ್ರಹ್ಮಾಂಡದ ರೇಖಾಗಣಿತ ಆಧಾರದ ಮೇಲೆ ತನ್ನ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು.

1848: ಮೊದಲ ಮಹಿಳಾ ಹಕ್ಕುಗಳ ಸಮಾವೇಶವು ನ್ಯೂಯಾರ್ಕಿನಲ್ಲಿ ಆಯೋಜಿಸಲಾಯಿತು.

1875: ಎಮ್ಮಾ ಆಬೋಟ್, ಅನಾರೋಗ್ಯ ಪೀಡಿತರಾದ ಮಕ್ಕಳಿಗಾಗಿ ತೇಲುವ ಆಸ್ಪತ್ರೆ, ನ್ಯೂಯಾರ್ಕಿನಲ್ಲಿ ಪರೀಕ್ಷಾ ಪ್ರವಾಸ ಮಾಡಿತು.

1880: ಎಸ್.ಎಫ್ ಸಾರ್ವಜನಿಕ ಗ್ರಂಥಾಲಯವು ಪುಸ್ತಕಗಳನ್ನು ಎರವಲು ನೀಡಲಾರಂಭಿಸಿತು.

1899: ವಿದ್ಯುತ್ ಕೆಲಸಗಾರರ ಒಕ್ಕೂಟವಾದ ನ್ಯಾಷನಲ್ ಬ್ರದರ್ಹುಡ್ ಆಫ್ ಎಲೆಕ್ಟ್ರಿಕಲ್ ವರ್ಕರ್ಸ್ ರೂಪುಗೊಂಡಿತು.

1900: ಜಗತ್ತಿನ ಮೊದಲ ಮೆಟ್ರೋ ಸೇವೆಯನ್ನು ಲಂಡನ್ನಿನಲ್ಲಿ ಆರಂಭಿಸಲಾಯಿತು.

1912: ಆರಿಜೋನಾದ ನವೋವಾ ಕೌಂಟಿಯಲ್ಲಿ ಸುಮಾರು 190ಕೆ.ಜಿ ಅಷ್ಟು ಭಾರವಿದ್ದ ದ್ರವ್ಯರಾಶಿಯ ಉಲ್ಕಾಶಿಲೆ ಸ್ಫೋಟಗೊಂಡು ಅಂದಾಜು 16,000 ಚೂರುಗಳಾಗಿ ಮಳೆಯಂತೆ ಅಲ್ಲಿ ಪಟ್ಟಣದ ಮೇಲೆ ಬಿದ್ದಿತು.

1915: ಡಚ್ ಸಮುದ್ರ ಅಪಘಾತಗಳ ಕಾನೂನು ಜಾರಿಗೆ ಬಂದವು.

1937: ಎಂಟರ್ಟೆಟಿ ಕಲೆಯ ಜಾತ್ರೆ ಮ್ಯೂನಿಚ್ಚಿನಲ್ಲಿ ತೆರೆಯಲಾಯಿತು.

1939: ಡಾ. ರಾಯ್ ಪಿ. ಸ್ಕಾಲ್ಸ್ ಫೈಬರ್ಗ್ಲಾಸ್ ಹೊಲಿಗೆಗಳನ್ನು ಬಳಸಿದ ಮೊದಲ ಶಸ್ತ್ರವೈದ್ಯ.

1955: ಯಾರ್ಕೋನ್ ನೀರಿನ ಯೋಜನೆ ಇಸ್ರೇಲಿನ ನೆಗೆವ್ ಮರುಭೂಮಿಗೆ ನೀರು ಪೂರೈಸಲು ತೆರೆಯಕಾಯಿತು.

1961: ವಿಮಾನದ ಒಳಗೆ ಮೊದಲ ಬಾರಿ ಚಲನಚಿತ್ರವನ್ನು ಪ್ರಸಾರ ಮಾಡಲಾಯಿತು.

1967: ಮೊದಲ ವಾಯು ನಿಯಂತ್ರಿತ ಸಬ್ ವೇ ಕಾರು ನ್ಯೂಯಾರ್ಕಿನಲ್ಲಿ ಆರಂಭವಾಯಿತು.

1969: ಭಾರತ ಸರ್ಕಾರವು 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಿತು.

1976: ನೇಪಾಳದಲ್ಲಿ ಸಾಗರಮಾತಾ ರಾಷ್ಟ್ರೀಯ ಉದ್ಯಾನವನ ಸ್ಥಾಪಿಸಲಾಯಿತು.

1983: CTಯ ಮೂಲಕ ತ್ರೀಡಿ ಮಾನವನ ತಲೆಯ ಪುನರ್ನಿರ್ಮಾಣವನ್ನು ಮಾಡಿದಬಗ್ಗೆ ಮೊದಲ ಬಾರಿಗೆ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.

2001: ಸುಮಾರು 6-7 ಮಿಲಿಯನ್ ವರ್ಷಗಳ ಹಿಂದಿನಷ್ಟು ಹಳೆಯ ಮಾನವ ಜಾತಿಗಳಲ್ಲಿ ಒಂದಾದ ಸಾಲೆಂಥ್ರಾಪೋಸ್ ಟಿಚಡೆನ್ನಿಸ್ ತಲೆಬುರುಡೆಯನ್ನು ಚಾಡಿನ ಜುರಾಬ್ ಮರುಭೂಮಿಯಲ್ಲಿ ಮೈಕಲ್ ಬ್ರುನೆಟ್ ಅವರು ಕಂಡುಹಿಡಿದರು.

ಪ್ರಮುಖ ಜನನ/ಮರಣ:

1814: ರಿವಾಲ್ವರ್ ಅನ್ನು ಕಂಡು ಹಿಡಿದ ಸ್ಯಾಮುಯೆಲ್ ಕೋಲ್ಟ್ ಜನಿಸಿದರು.

1827: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಸೈನಿಕ ಮಂಗಲ್ ಪಾಂಡೆ ಜನಿಸಿದರು.

1899: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಬಂಗಾಳದ ಕಾದಂಬರಿಕಾರ ಮತ್ತು ವೈದ್ಯ ಬಾಲೈಚಂದ್ ಮುಖ್ಯೋಪಾದ್ಯಾಯ್ ಜನಿಸಿದರು.

1902: ಚಲನಚಿತ್ರರಂಗದ ಚಿತ್ರಕಥೆಗಾರ, ಸಂಭಾಷಣೆ ಬರಹಗಾರ, ಹಿನ್ನೆಲೆ ಹಾಡುಗಾರರಾಗಿದ್ದ ಸಮುದ್ರಳ ರಾಘವಾಚಾರ್ಯ ಜನಿಸಿದರು.

1925: ಹಿರಿಯ ಸ್ವಾತಂತ್ರ ಹೋರಾಟಗಾರರಾಗಿದ್ದ ದಿನೇಶ್ ಸಿಂಗ್ ಜನಿಸಿದರು.

1933: ಹಿರಿಯ ಪತ್ರಕರ್ತ ಗಿರಿಲಾಲ್ ಜೈನ್ ನಿಧನರಾದರು.

1938: ಮಹಾನ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಗಣಿತಶಾಸ್ತ್ರಜ್ಞ ಜಯಂತ್ ವಿಷ್ಣು ನರ್ಳಿಕರ್ ಅವರು ಮಹಾರಾಷ್ಟ್ರದಲ್ಲಿ ಜನಿಸಿದರು.

1955: ಪ್ರಸಿದ್ಧ ಭಾರತೀಯ ಕ್ರಿಕೆಟಿಗ ರೋಡ್ಜರ್ ಬಿನ್ನಿ ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು.

1961: ಕ್ರಿಕೆಟ್ ವಿಮರ್ಶಕ ಮತ್ತು ಪತ್ರಕರ್ತ ಹರ್ಷ ಭೋಗಲೆ ಹೈದರಾಬಾದಿನಲ್ಲಿ ಜನಿಸಿದರು.

 

Categories
e-ದಿನ

ಜುಲೈ-18

 

ಪ್ರಮುಖ ಘಟನಾವಳಿಗಳು:

1743: ಮೊದಲ ಬಾರಿಗೆ ಅರ್ಧ ಪುಟದ ಜಾಹಿರಾತನ್ನು ನ್ಯೂಯಾರ್ಕ್ ವಾರಪತ್ರಿಕೆಯಲ್ಲಿ ಪ್ರಕಟಿಸಲಾಯಿತು.

1768: ಬೋಸ್ಟನ್ ಗೆಜೆಟ್ ಅಮೇರಿಕಾದ ಮೊದಲ ದೇಶಭಕ್ತಿ ಗೀತೆಯಾದ ಲಿಬರ್ಟಿ ಸಾಂಗ್ ಅನ್ನು ಪ್ರಕಟಿಸಿತು.

1864: ಅಧ್ಯಕ್ಷ ಲಿಂಕನ್ 5,00,000 ಸ್ವಯಂಸೇವಕರನ್ನು ಮಿಲಿಟರಿ ಸೇನೆಗೆ ಸೇರುವಂತೆ ಕೋರಿದರು.

1872: ಬ್ರಿಟನ್ ಮತಪತ್ರ ಕಾಯಿದೆ ಅನುಸಾರ ಚುನಾವಣೆಯಲ್ಲಿ ತೆರೆದ ಮತಗಳ ಬದಲಾಗಿ ರಹಸ್ಯ ಮತಪತ್ರವನ್ನು ಪರಿಚಯಿಸಿತು.

1923: ಬ್ರಿಟಿಶ್ ಹೌಸ್ ಆಫ್ ಲಾರ್ಡ್ಸ್ ಹೊಸ ವಿಚ್ಚೇದನ ಕಾನೂನನ್ನು ಸ್ವೀಕರಿಸಿತು.

1931: ಮೊದಲ ವಾಯು ನಿಯಂತ್ರಿತ ಹಡಗನ್ನು ಪರಿಚಯಿಸಲಾಯಿತು.

1947: ಭಾರತ ಸ್ವಾತಂತ್ರ ಕಾಯಿದೆಗೆ, ರಾಜ ಜಾರ್ಜ್-VI ಸಹಿ ಮಾಡಿದ್ದನ್ನು 1947ರಲ್ಲಿ ಇಂಡಿಯನ್ ಫ್ರೀಡಂ ಆಕ್ಟ್ ಎಂದು ಘೋಷಿಸಲಾಯಿತು.

1953: ಸಾರ್ವಜನಿಕ ಸಾರಿಗೆಯ ಬೆಲೆ ಏರಿಕೆಯ ವಿರುದ್ದ ಗಲಭೆಗಳು ಉಂಟಾಗಿ ಹೋರಾಟಗಾರರು ಭಾಗಶಃ ಕಲ್ಕತ್ತಾವನ್ನು ಆಕ್ರಮಿಸಿದರು.

1955: ಪರಮಾಣು ಶಕ್ತಿಯಿಂದ ಉತ್ಪಾದಿಸಲಾದ ವಿದ್ಯುತ್ ಶಕ್ತಿಯನ್ನು ವಾಣಿಜ್ಯವಾಗಿ ಮಾರಾಟ ಮಾಡಲಾಯಿತು.

1968: ಇಂಟೆಲ್ ಕಾರ್ಪೊರೇಷನ್ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಲಾಯಿತು.

1974: ವಿಶ್ವದ ಅತ್ಯಂತ ಎತ್ತರದ ರಚನೆ 646 ಮೀಟರ್ ಪೋಲಿಷ್ ರೇಡಿಯೋ ಮಸ್ಟ್ ಪೂರ್ಣಗೊಂಡಿತು.

1980: ಮದರಾಸು ದೂರದರ್ಶನ ಕೇಂದ್ರದಿಂದ ಒಂದು ಗಂಟೆಯವರೆಗೆ ತಮ್ಮ ಕಾರ್ಯಕ್ರಮವನ್ನು ಮೊದಲ ಬಣ್ಣದ ಪ್ರಸರಣ ಮಾಡಿದರು.

1980: ಭಾರತದ ಮೊದಲ ಉಪಗ್ರಹ “ರೋಹಿಣಿ”ಯನ್ನು ಬಾಹ್ಯಾಕಾಶದ ಕಕ್ಷೆಗೆ ಹಾರಿಸಲಾಯಿತು.

1986: ಟೈಟಾನಿಕ್ ಹಡಗಿನ ಗುಳಿಬಿದ್ದ ಅವಶೇಷಗಳನ್ನು ವೀಡಿಯೋ ಟೇಪಿನ ಮೂಲಕ ಬಿಡುಗಡೆ ಮಾಡಲಾಯಿತು.

1994: ಕ್ರಯೋಲ ಸುವಾಸಿತ ಕ್ರೆಯಾನುಗಳನ್ನು ಪರಿಚಯಿಸಿತು.

1996: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಎನ್ರಾನ್ ವಿದ್ಯುತ್ ಯೋಜನೆಗೆ ಖಾತರಿಯನ್ನು ನೀಡಿತು.

1997: ಭಾರತದ ಕೇಂದ್ರ ಸರ್ಕಾರವು 5ನೇ ವೇತನ ಆಯೋಗದ ವರದಿಯನ್ನು ಅನುಮೋದಿಸಿತು.

1998: ಮಹಾರಾಷ್ಟ್ರ ಸರ್ಕಾರವು ವಿವಾದಾತ್ಮಕ ಮರಾಠಿ ನಾಟಕವಾದ “ನಾಥುರಾಂ ಗೋಡ್ಸೆ- ಗಾಂಧಿಯ ಕೊಲೆ ಪಾತಕ” ವನ್ನು ನಿಷೇಧಿಸಿತು.

ಪ್ರಮುಖ ಜನನ/ಮರಣ:

1634: ಡಚ್-ಇಂಡೀಸಿನ ಗವರ್ನರ್ ಜೆನೆರಲ್ ಜೋಯಾನ್ಸ್ ಕ್ಯಾಂಫ್ಯುಸ್ ಜನಿಸಿದರು.

1909: ಬಂಗಾಳಿ ಕವಿ ಜ್ಞಾನಪೀಠ ಪುರಸ್ಕೃತರಾದ ವಿಷ್ಣು ಡೇ ಜನಿಸಿದರು.

1980: ಭಾರತದ ಕ್ರಿಕೆಟಿಗರಾದ ನವೋಮಲ್ ಜಿಯೋಮಲ್ ನಿಧನರಾದರು.

1992: ಬಂಗಾಳಿ ನಟಿ ಕಣ್ಣನ್ ದೇವಿ ನಿಧನರಾದರು.

1993: ಟೈಮ್ಸ್ ಆಫ್ ಇಂಡಿಯಾದ ಸಂಪಾದಕರಾಗಿದ್ದ ಗಿರಿಲಾಲ್ ಜೈನ್ ನಿಧನರಾದರು.

1994: ದೆಹೆಲಿ ವಿಶ್ವವಿದ್ಯಾಲಯದ ಚ್ಯಾನ್ಸಲರ್ ಆಗಿದ್ದ ಮುನಿಸ್ ರಾಜ ನಿಧನರಾದರು.

2012: ಖ್ಯಾತ ಚಲನಚಿತ್ರ ನಟ ರಾಜೇಶ್ ಖನ್ನಾ ನಿಧನರಾದರು.

 

Categories
e-ದಿನ

ಜುಲೈ-17

ಪ್ರಮುಖ ಘಟನಾವಳಿಗಳು:

1850: ಹಾರ್ವರ್ಡ್ ವೀಕ್ಷಣಾಲಯದಲ್ಲಿ ಮೊದಲ ನಕ್ಷತ್ರ ‘ವೆಗಾ’ದ ಛಾಯಾಚಿತ್ರ ತೆಗೆಯಲಾಯಿತು.

1861: ಅಮೇರಿಕಾದ ಕಾಂಗ್ರೆಸ್ ಕಾಗದದ ಹಣದ ಚಲಾವಣೆಯನ್ನು ಅನುಮೋದಿಸಿತು.

1862: ಕರಿಯರನ್ನು ಕಾರ್ಮಿಕರನ್ನಾಗಿ ಒಪ್ಪಿಕೊಳ್ಳಲು ಅಮೇರಿಕಾದ ಸೇನೆ ಅನುಮೋದಿಸಿತು.

1867: ಅಮೇರಿಕಾದ ಮೊದಲ ದಂತ ವೈದ್ಯ ಶಾಲೆಯಾದ ಹಾರ್ವರ್ಡ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್ನು ಸ್ಥಾಪಿಸಲಾಯಿತು.

1897: ಯುಕಾನಿನಿಂದ ಚಿನ್ನವನ್ನು ಹೊತ್ತೊಯ್ದ ಮೊದಲ ಹಡಗು ಸಿಯಾಟೆಲನ್ನು ತಲುಪಿತು.

1954: ಡಿಸ್ನಿ ಲ್ಯಾಂಡಿನ ನಿರ್ಮಾಣ ಆರಂಭವಾಯಿತು.

1955: ಆರ್ಕೋ ಇಡಾಹೋ ಪರಮಾಣು ಶಕ್ತಿಯಿಂದ ವಿದ್ಯುತ್ ಪಡೆದ ಮೊದಲ ಅಮೇರಿಕಾದ ನಗರವಾಯಿತು.

1955: ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್ ತೆರೆಯಲಾಯಿತು.

1959: ಪಾಲೆಯೋ ಮಾನವ ಶಾಸ್ತ್ರಜ್ಞ ಮೇರಿ ಕೀಕೆ ಮಾನವರ ಪೂರ್ವಿಕರ ಹೊಸ ಜಾತಿಯ ಭಾಗಶಃ ತಲೆಬುರುಡೆ ಕಂಡುಹಿಡಿದರು. ಈ ಜಾತಿಯ ಮಾನವ ಸುಮಾರು 2 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ನೆಲೆಸಿದ್ದರೆಂದು ಹೇಳಿದರು.

1964: ನೆಲ್ಸನ್ ಮಂಡೇಲಾ ಅವರಿಗೆ ಶಾಂತಿಗಾಗಿ ಅವರ ಪ್ರಯತ್ನವನ್ನು ಗುರುತಿಸಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.

1972: ಕ್ವಾಂಟಿಕೋದಲ್ಲಿ ಎಫ್ ಬಿ ಐ ಪ್ರತಿನಿಧಿಗಳಾಗಿ ಮೊದಲ ಬಾರಿಗೆತಂಡದಲ್ಲಿ 2 ಮಹಿಳೆಯರಿಗೂ ತರಬೇತಿಯನ್ನು ಪ್ರಾರಂಭಿಸಲಾಯಿತು.

1992: ಸ್ಲೊವಾಕ್ ಸಂಸತ್ತು ಝೆಕೋಸ್ಲೋವಾಕಿಯಾದಿಂದ ಸ್ವಾತಂತ್ರ ಘೋಷಿಸಿತು.

1995: ಫೋರ್ಬ್ಸ್ಮ್ಯಾಗಜಿನ್ ಪ್ರಕಟಣೆಯಂತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಬಿಲ್ ಗೇಟ್ಸ್ ಅವರನ್ನು ಹೆಸರಿಸಲಾಯಿತು.

1996: ತಮಿಳುನಾಡಿನ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಂ.ಕರುಣಾನಿಧಿ ರಾಜ್ಯ ವಿಧಾನಸಭೆಯಲ್ಲಿ ಮದ್ರಾಸಿನ ಹೆಸರನ್ನು ಅಧಿಕೃತವಾಗಿ ಚೆನ್ನೈ ಎಂದು ಬದಲಿಸಿ ಘೋಷಣೆ ಮಾಡಿದರು.

ಪ್ರಮುಖ ಜನನ/ಮರಣ:

1790: ಸ್ಕಾಟಿಶ್ ಅರ್ಥಶಾಸ್ತ್ರಜ್ಞ ಆಡಮ್ ಸ್ಮಿತ್ ನಿಧನರಾದರು.

1917: ಭಾರತೀಯ ನಟ, ಹಾಡುಗಾರ ಮತ್ತು ಚಿತ್ರಕತೆ ಬರಹಗಾರರಾದ ಬಿಜಾನ್ ಭಟ್ಟಾಚಾರ್ಯ ಜನಿಸಿದರು.

1921: ಪುರುಷರ ಬೇಸ್ಬಾಲ್ ಲೀಗಿನಲ್ಲಿ ಆಡಿದ ಮೊದಲ ಮಹಿಳೆ ಟೋನಿ ಸ್ಟೋನ್ ಜನಿಸಿದರು.

1935: 1986-9ರವರೆಗೆ ಕ್ರಿಕೆಟ್ ಟೆಸ್ಟ್ ಅಂಪೈರ್ ಆಗಿದ್ದ ಡಾ.ರಾಮ್ ಬಾಬು ಗುಪ್ತ ಅವರು ದೆಹಲಿಯಲ್ಲಿ ಜನಿಸಿದರು.

 

Categories
e-ದಿನ

ಜುಲೈ-16

ಪ್ರಮುಖ ಘಟನಾವಳಿಗಳು:

1618: ಕ್ಯಾಪ್ಟನ್ ಜಾನ್ ಗಿಲ್ಬರ್ಟ್ ಬ್ರಿಟನ್ನಿನಲ್ಲಿ ಮೊದಲ ಸಿಂಪಡಿಕೆ ಯಂತ್ರಕ್ಕೆ ಪೇಟೆಂಟ್ ಪಡೆದರು.

1661: ಮೊದಲ ಯೂರೋಪಿನ ಬ್ಯಾಂಕ್ ನೋಟುಗಳನ್ನು ಬ್ಯಾಂಕ್ ಆಫ್ ಸ್ಟಾಕ್ಹಾಲ್ಮ್ ವಿತರಿಸಿತು.

1790: ಅಮೇರಿಕಾ ಕಾಂಗ್ರೆಸ್ ವಾಷಿಂಗ್ಟನ್ ನಗರವನ್ನು ಅಮೇರಿಕಾದ ಶಾಶ್ವತ ರಾಜಧಾನಿಯಾಗಿ ಮಾಡಲು ತೀರ್ಮಾನಿಸಲಾಯಿತು.

1798: ಅಮೇರಿಕಾದ ಸಾರ್ವಜನಿಕ ಆರೋಗ್ಯ ಸೇವೆಯನ್ನು ರೂಪುಗೊಂಡಿತು.

1856: ಹಿಂದೂ ವಿಧವೆಯರ ಮರುಮದುವೆಯನ್ನು ಕಾನೂನು ಬದ್ಧಗೊಳಿಸಲಾಯಿತು.

1867: ಸಿದ್ದ ಮಿಶ್ರಿತ ಬಣ್ಣಕ್ಕೆ ಡಿ.ಆರ್.ಅವೇರಿಲ್ ಅವರು ಪೇಟೆಂಟ್ ಪಡೆದರು.

1880: ಡಾ.ಎಮಿಲಿ ಸ್ಟಾವ್ ಕೆನೆಡಾದಲ್ಲಿ ವೈದ್ಯವೃತ್ತಿ ನಡೆಸಲು ಅನುಮತಿ ಪಡೆದ ಮೊದಲ ಮಹಿಳಾ ವೈದ್ಯೆ ಎಂಬ ಹಿರಿಮೆಗೆ ಪಾತ್ರರು.

1905: ಬ್ರಿಟೀಷರ ಸರಕುಗಳನ್ನು ಬಹಿಷ್ಕಾರ ಮಾಡಲು ಬಗರ್ಹತ್ತಿನ ಬಳಿ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

1918: ರಾಜ ನಿಕೋಲಾಸ್ -II ಮತ್ತು ಅವರ ಕುಟುಂಬದವರನ್ನು ಬೋಲ್ಸೆವಿಕ್ಸ್ ಗಳು ಮರಣದಂಡನೆ ಮಾಡಿ ಹತ್ಯೆ ಮಾಡಿದ ಕಾರಣ ಮೂರು ಶತಮಾನಗಳ ಹಳೆಯ ರೋಮಾನೋವ್ ಸಾಮ್ರಾಜ್ಯದ ಅಂತ್ಯವಾಯಿತು.

1926: ನ್ಯಾಷನಲ್ ಜಿಯೋಗ್ರಫಿಕ್ ಮೊದಲ ನೈಸರ್ಗಿಕ-ಬಣ್ಣದ ಸಮುದ್ರ ಒಳಾಂಗಣದ ಛಾಯಾಚಿತ್ರಗಳನ್ನು ತೆಗೆಯಿತು.

1936: ನಾಡಿಗಳಲ್ಲಿನ ರಕ್ತಚಲನೆ ಚಿತ್ರವನ್ನು ನೋಡಲು ಮೊದಲ ಎಕ್ಸ್-ರೇ ಮಾಡಲಾಯಿತು.

1929: ಭಾರತೀಯ ಕೃಷಿ ಮಂಡಳಿಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು.

1954: ಫ್ರೆಂಚ್ ಆಡಳಿತವು “ಮಾಹೆ”ಯಲ್ಲಿ ಅಂತ್ಯವಾಯಿತು. ಸ್ವಾತಂತ್ರ ಘೋಷಿಸಿ ಜನರಿಗೆ ಅಧಿಕಾರ ಹಸ್ತಾಂತರಿಸಿ ಭಾರತೀಯ ಧ್ವಜವನ್ನು ಹಾರಿಸಲಾಯಿತು.

1955: ಸ್ಟರ್ಲಿಂಗ್ ಮಾಸ್ ತನ್ನ ಮೊದಲ ಫಾರ್ಮುಲಾ ಒನ್ ಗ್ರಾಂಡ್ ಪಿಕ್ಸ್ ರೇಸನ್ನು ಗೆದ್ದರು.

1969: ಚಂದ್ರನ ಮೇಲೆ ಇಳಿದ ಮೊದಲ ತಂಡದ 11 ಜನ ಗಗನಯಾತ್ರಿಗಳನ್ನು ರಾಕೆಟ್ಟಿನ ಮೂಲಕ ಕೇಪ್ ಕೆನ್ನಡಿಯಿಂದ ಮುಂಜಾನೆ 9:32 ಕ್ಕೆ ಹಾರಿಸಲಾಯಿತು.

1969: ಏರ್ ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್ ಭಾರತದ ಕಮಾಂಡಿಗ್ ಏರ್ ಆಫಿಸ್ಸರ್ ಆಗಿ ಕಾರ್ಯ ನಿರ್ವಹಿಸಿದರು.

1970: ಡಾಕ್ ಸ್ಟ್ರೈಕುಗಳನ್ನು ಎದುರಿಸಲು ಬ್ರಿಟಿಶ್ ಗೃಹ ಕಾರ್ಯದರ್ಶಿ ರೇಗಿನಾಲ್ಡ್ ಮೌಡ್ಲಿಂಗ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

1991: ರೈಲ್ವೆ ಬಡ್ಜೆಟ್ ಪ್ರಯಾಣಿಕರ ದರವನ್ನು 15-20% ಮತ್ತು 10% ರಷ್ಟು ಸರಕು ದರ ಏರಿಸಿತು.

1993: ಭಾರತದ ಜೊತೆ ಕ್ರಯೋಜೆನಿಕ್ ರಾಕೆಟ್ ಒಪ್ಪಂದ ಮಾಡಿಕೊಂಡಿದ್ದ ರಷ್ಯಾ ಈ ಒಪ್ಪಂದವನ್ನು ರದ್ದು ಮಾಡಿತು.

1996: ನರ್ಮದಾ ಕಣಿವೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರಗಳ ನಾಲ್ಕು ಜಲಾನಯನ ರಾಜ್ಯಗಳು ಗುಜರಾತಿನಲ್ಲಿ ಸರ್ದಾರ್ ಸರೋವರ ಅಣೆಕಟ್ಟಿನ ಎತ್ತರವನ್ನು 436 ಅಡಿಗಳಿಗೆ ಹೆಚ್ಚಿಸಲು ಒಪ್ಪಂದ ಮಾಡಲಾಯಿತು.

2013: ಈಶಾನ್ಯ ಭಾರತದ ಒಂದು ಶಾಲೆಯಲ್ಲಿ ಮಧ್ಯಾನದ ಊಟವನ್ನು ಸೇವಿಸಿ 27 ಮಕ್ಕಳು ಮೃತ ಪಟ್ಟು 25 ಮಕ್ಕಳು ಆಸ್ಪತ್ರೆಗೆ ದಾಖಲಾದರು.

ಪ್ರಮುಖ ಜನನ/ಮರಣ:

1909: ಸ್ವಾತಂತ್ರ ಹೋರಾಟಗಾರ್ತಿ ಅರುಣ ಅಸಫ್ ಅಲಿ ಹರಿಯಾಣದಲ್ಲಿ ಜನಿಸಿದರು.

1917: ಆಧುನಿಕ ಹಿಂದಿ ನಾಟಕಕಾರರಾಗಿದ್ದ ಜಗದೀಶ್ ಚಂದ್ರ ಮಾಥುರ್ ಜನಿಸಿದರು.

1936: ಭಾರತೀಯ ಕ್ರಿಕೆಟ್ ಬೌಲರ್ ವೆಂಕಟರಾಮನ್ ಸುಬ್ರಮಣ್ಯ ಬೆಂಗಳೂರಿನಲ್ಲಿ ಜನಿಸಿದರು.

1956: ಲಿಖಿತ ಪರೀಕ್ಷೆಗಳಿಗೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದ ಕೆ.ಎಲ್.ಪವಾರ್ ಜನಿಸಿದರು.

1959: ಭೂವಿಜ್ಞಾನಿ ಸುಹ್ರಿದ್ ಕುಮಾರ್ ರಾಯ್ ನಿಧನರಾದರು.

 

Categories
e-ದಿನ

ಜುಲೈ-15

 

ಪ್ರಮುಖ ಘಟನಾವಳಿಗಳು:

1795: “ಮಾರ್ಸೆಯಿಲ್ಲಾಯಿಸ್” ಫ್ರಾನ್ಸ್ ರಾಷ್ಟ್ರದ ರಾಷ್ಟ್ರಗೀತೆಯಾಯಿತು.

1869: “ಮಾರ್ಗರೀನ್” (ಅಡಿಗೆಗೆ ಬಳಸುವ ಜಿಡ್ಡು ಪದಾರ್ಥ)ಕ್ಕೆ ಹಿಪ್ಪೋಯ್ಲ್ ಮೇಘ ಮೋರಿಸ್ ಪೇಟೆಂಟ್ ಪಡೆದರು.

1885: ನ್ಯೂಯಾರ್ಕಿನಲ್ಲಿ ನಯಾಗಾರ ಪರಿಮಿತಿ ರಾಜ್ಯ ಉದ್ಯಾನವನ ತೆರೆಯಲಾಯಿತು.

1888: ಪ್ರಿಂಟರ್ಗಳಿಗೆ “ಇಂಕ್” ಅನ್ನು ಮೊದಲ ಬಾರಿಗೆ ಮಾರಾಟ ಮಾಡಲಾಯಿತು.

1888: ಜಪಾನಿನ ಬಂದೈ ಜ್ವಾಲಾಮುಖಿ 1000 ವರ್ಷಗಳಲ್ಲಿ ಮೊದಲ ಬಾರಿಗೆ ಹೊರಹೊಮ್ಮಿತು.

1898: ಕ್ಯಾಮಿಲ್ಲೋ ಗಾಲ್ಗಿ “ಗೂಗ್ಲಿ ಅಪಾರೇಟಸ್” (ಕೋಶಗಳ ನಡುವಿನ ಮಾಹಿತಿಯ ಪ್ರಸರಣ ಮತ್ತು ಸ್ವೀಕರಿಸುವುದಕ್ಕಾಗಿ ಕೋಶಗಳೊಳಗೆ ಒಂದು ಸೂಕ್ಷ್ಮ ಜಾಲಬಂಧ)ವನ್ನು ಕಂಡುಹಿಡಿದರು.

1904: ಮೊದಲ ಬುದ್ದನ ದೇಗುಲವನ್ನು ಅಮೇರಿಕಾದ ಲಾಸ್ ಏಂಜೆಲಿಸ್ ನಲ್ಲಿ ತೆರೆಯಲಾಯಿತು.

1906: ರಿಪಬ್ಲಿಕ್ ವಸ್ತುಸಂಗ್ರಹಾಲಯ ಆಮ್ಸ್ಟರ್ ಡ್ಯಾಮಿನಲ್ಲಿ ತೆರೆಯಲಾಯಿತು.

1912: ಬ್ರಿಟಿಷ್ ರಾಷ್ಟ್ರೀಯ ಆರೋಗ್ಯ ವಿಮೆ ಕಾಯ್ದೆ ಜಾತಿಗೆ ಬಂದಿತು.

1916: ಸಿಯೆಟೆಲ್ಲಿನಲ್ಲಿ ಪೆಸಿಫಿಕ್ ಏರೋ ಪ್ರಾಡಕ್ಟ್ಸ್ ಗಳನ್ನು ವಿಲಿಯಂ ಬೋಯಿಂಗ್ ಸಂಯೋಜಿಸಿದರು. ಈ ಸಂಸ್ಥೆಯು ನಂತರ ಬೋಯಿಂಗ್ ಕಂಪನಿ ಎಂದು ಮರುನಾಮಕರಣವಾಯಿತು.

1922: ಮೊದಲ ಬಾತುಕೋಳಿಯ ಕೊಕ್ಕಿನ ಪ್ಲಾಟಿಪಸ್ ಪಕ್ಷಿಯನ್ನು ಸಾರ್ವಜನಿಕರಿಗೆ ನೋಡಲು ನ್ಯೂಯಾರ್ಕ್ ಮೃಗಾಲಯದಲ್ಲಿ ಪ್ರದರ್ಶನ ಮಾಡಲಾಯಿತು.

1929: ಮೊದಲ ಏರ್ಪೋರ್ಟ್ ಹೋಟೆಲ್ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡಿನಲ್ಲಿ ತೆರೆಯಲಾಯಿತು.

1954: ಅಮೇರಿಕಾದಲ್ಲಿ ಮೊದಲು ಪರೀಕ್ಷಿಸಲ್ಪಟ್ಟ ಮೊದಲ ವಾಣಿಜ್ಯ ಜೆಟ್ ಟ್ರಾನ್ಸ್ಪೋರ್ಟ್ ವಿಮಾನ (ಬೋಯಿಂಗ್ 707)

1955: ಪಂಡಿತ್ ಜವಹರ್ಲಾಲ್ ನೆಹರು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1961: ಸ್ಪೇನ್ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಸ್ವೀಕರಿಸಿತು.

1979: ಭಾರತದ 4ನೇ ಪ್ರಧಾನ ಮಂತ್ರಿಯಾಗಿದ್ದ ಮೊರಾಜಿ ದೇಸಾಯಿ ಅವರು ತಮ್ಮ ಪದವಿಗೆ ರಾಜಿನಾಮೆ ನೀಡಿದರು.

1986: ಭಾರತದ ಅರುಣಾಚಲ ಪ್ರದೇಶದ 6 ರಿಂದ 7 ಕಿ.ಮೀ. ಅಷ್ಟು ಒಳಹರಿವು ಮಾಡಿದ ಚೀನಾ ವಿರುದ್ದ ಪ್ರತಿಭಟಿಸಿತು.

1995: ಉತ್ತರ ವರ್ಜೀನಿಯಾ ನೂತನ ಪಿನ್ ಕೋಡ್ ಆದ 540 ಅನ್ನು ಬಳಸಲು ಆರಂಭಿಸಿತು.

2006: ಸಾಮಾಜಿಕ ನೆಟ್ವರ್ಕಿಂಗ್ ಸೇವೆಯಾದ “ಟ್ವಿಟರ್” ಅನ್ನು ಪ್ರಾರಂಭಿಸಲಾಯಿತು.

2013: ಯು.ಕೆ ಮೇಲ್ಮನೆ ಸಲಿಂಗಿಗಳ ಮದುವೆಯ ಬಿಲ್ಲನ್ನು ಅನುಮೋದಿಸಿತು. 2014ರಿಂದ ಇಂಗ್ಲೆಂಡಿನಲ್ಲಿ ಮತ್ತು ವೇಲ್ಸ್ ನಲ್ಲಿ ಅನುಮತಿಸಲಾಯಿತು.

ಪ್ರಮುಖ ಜನನ/ಮರಣ:

1902: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಕೆ.ಸುಬ್ಬಾರಾವ್ ಜನಿಸಿದರು.

1903: ಭಾರತೀಯ ಪತ್ರಕರ್ತ ಮತ್ತು ರಾಜಕಾರಣಿ ಕೆ.ಕಾಮರಾಜ್ ಜನಿಸಿದರು,

1904: “ಜೈಪುರ ಘರಾನಾ” ನ ಹಿರಿಯ ಗಾಯಕ ಮೊಗುಬಾಯಿ ಕುರ್ದೀಕರ್ ಜನಿಸಿದರು.

1906: ಭಾರತೀಯ ಕವಿ ಮತ್ತು ಶಿಕ್ಷಣ ತಜ್ಞ ಆರ್.ಎಸ್.ಮುಗಲಿ ಜನಿಸಿದರು.

1933: ಭಾರತೀಯ ಲೇಖಕ ಮತ್ತು ಚಿತ್ರಕಥೆಗಾರರಾದ ಎಂ.ಟಿ.ವಾಸುದೇವನ್ ನಾಯರ್ ಜನಿಸಿದರು.

1937: ಭಾರತೀಯ ಪತ್ರಕರ್ತ ಪ್ರಭಾಶ್ ಜೋಷಿ ಜನಿಸಿದರು.

1980: “ಕೇಸರಿ” ಮತ್ತು “ಮರಾಠ” ಪತ್ರಿಗಳ ಸಂಪಾದಕರಾಗಿದ್ದ ಜಗನ್ನಾಥರಾವ್ ಜೋಶಿ ನಿಧನರಾದರು.

 

Categories
e-ದಿನ

ಜುಲೈ-14

ಪ್ರಮುಖ ಘಟನಾವಳಿಗಳು:

1636: ಔರಂಗಜೇಬನನ್ನು ಮುಘಲ್ ಚಕ್ರವರ್ತಿ ಶಹಜಹಾನ್ ಡೆಕನ್ನಿನ ವೈಸರಾಯ್ ಆಗಿ ನೇಮಿಸಿದರು.

1798: ರಾಜ್ಯಗಳು-ವಾಸಸ್ಥಳಗಳು, ಭೂಮಿ ಮತ್ತು ಗುಲಾಮರ ಮೇಲೆ ಮೊದಲ ನೇರ ಅಮೇರಿಕಾ ಸಂಯುಕ್ತ ತೆರಿಗೆ ಹಾಕಲಾಯಿತು.

1832: ಓಪಿಯಂ ಸಂಯುಕ್ತ ಸುಂಕದ ತೆರಿಗೆಯಿಂದ ವಿನಾಯಿತಿ ಪಡೆಯಿತು.

1845: ಮೊದಲ ಪೋಸ್ಟ್ ಮಾಸ್ಟರ್ ತಾತ್ಕಾಲಿಕ ಅಂಚೆಚೀಟಿಗಳನ್ನು ನ್ಯೂಯಾರ್ಕ್ ನಗರದಲ್ಲಿ ವಿತರಿಸಲಾಯಿತು.

1850: ರೆಫ್ರಿಡ್ಜಿರೇಷನ್ನಿನ ಮೂಲಕ ಮಾಡಿದ ಮೊದಲ ಐಸ್(ಮಂಜುಗಡ್ಡೆ)ಯನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಯಿತು.

1853: ನ್ಯೂಯಾರ್ಕಿನ ಕ್ರಿಸ್ಟಲ್ ಪ್ಯಾಲೇಸಿನಲ್ಲಿ ಮೊದಲ ಅಮೇರಿಕಾದ ಜಾತ್ರೆಯನ್ನು ತೆರೆಯಲಾಯಿತು.

1853: ಅಮೇರಿಕಾ ಅಧ್ಯಕ್ಷ ಫ್ರಾಂಕ್ಲಿನ್ ಪೀಯರ್ಸ್ ಮೊದಲ ಕೈಗಾರಿಕಾ ಸಂಗ್ರಹವರದಿಯನ್ನು ನ್ಯೂಯಾರ್ಕಿನಲ್ಲಿ ತೆರೆದರು.

1853: ನ್ಯೂಜಿಲ್ಯಾಂಡ್ ಮೊದಲ ಸಾರ್ವತ್ರಿಕ ಚುನಾವಣೆಯನ್ನು ನಡೆಸಿತು.

1864: ಮೊಂಟಾನದ ಹೆಲೀನದಲ್ಲಿ ಮೊದಲ ಚಿನ್ನವನ್ನು ಪತ್ತೆ ಮಾಡಲಾಯಿತು.

1868: ಆಲ್ವಿನ್ ಜೆ ಫೆಲ್ಲೋಸ್ ಅಳತೆ ಪಟ್ಟಿಗೆ ಪೇಟೆಂಟ್ ಪಡೆದರು.

1891: ಜಾನ್ ಟಿ ಸ್ಮಿತ್ ಕಾರ್ಕ್ ಬೋರ್ಡಗೆ ಪೇಟೆಂಟ್ ಪಡೆದರು.

1914: ದ್ರವ-ಇಂದನದ ರಾಕೆಟ್ ವಿನ್ಯಾಸಕ್ಕೆ ರಾಬರ್ಟ್ ಗೊಡಾರ್ಡ್ ಅವರಿಗೆ ಪೇಟೆಂಟ್ ನೀಡಲಾಯಿತು.

1927: ಮೊದಲ ವಾಣಿಜ್ಯ ವಿಮಾನವನ್ನು ಹವಾಯಿಯಲ್ಲಿ ಆರಂಭಿಸಲಾಯಿತು.

1946: ಭಾರತ ಸಿಯಾಮಿಗೆ 20 ವರ್ಷ, 3 ಮಿಲಿಯನ್ ಅನುದಾನವನ್ನು ಸಿಯಾಮಿ ಅಕ್ಕಿ ರಫ್ತು ಹೆಚ್ಚಿಸಲು ಕ್ರೆಡಿಟ್ ನೀಡಿತ್ತು.

1951: ಜಾರ್ಜ್ ವಾಷಿಂಗ್ಟನ್ ಕಾರ್ವರ್ ಸ್ಮಾರಕವನ್ನು ಉದ್ಗಾಟಿಸಲಾಯಿತು.

1969: ಜೈಪುರದ ಬಳಿ ಪ್ಯಾಸೆಂಜರ್ ರೈಲಿಗೆ ಸರಕು ರೈಲು ಡಿಕ್ಕಿಹೊಡೆದ ಪರಿಣಾಮ 85 ಮಂದಿ ಮೃತಪಟ್ಟರು.

1987: ತೈವಾನ್ 37 ವರ್ಷದ ಸಮರ ಕಾನೂನನ್ನು ಮುಕ್ತಾಯಗೊಳ್ಳಿಸಿತು.

1993: ಏರೋಫ್ಲೋಟ್ ಮಾಸ್ಕೋ ಮತ್ತು ನ್ಯೂಯಾರ್ಕ್ ನಡುವೆ ತಡೆರಹಿತ ವಿಮಾನ ಸೇವೆಯನ್ನು ಆರಂಭಿಸಿತು.

1994: ಮಿಲಾನಿನ ಒಂದು ವೃದ್ದಾಶ್ರಮದಲ್ಲಿ ಅನಿಲ ಸ್ಫೋಟಗೊಂಡು 27 ಮಂದಿ ಮೃತರಾದರು.

1998: ಬೌದ್ಧಿಕ ಹಕ್ಕುಗಳಿಗೆ ಸಂಭಂದಿಸಿದಂತೆ ಮಾಹಿತಿ ತಂತ್ರಜ್ಞಾನದ ಮೇಲೆ ವಿಶ್ವ ಬೌದ್ಧಿಕ ಆಸ್ತಿ ಸಂಘಟನೆಯ ತಜ್ಞರ ತಂಡದ ಅಧ್ಯಕ್ಷರಾಗಿ ಭಾರತ ಆಯ್ಕೆಯಾಗಿತು.

2014: ಮಹಿಳೆಯರು ಪಾದ್ರಿಗಳಾಗುವ ಬಗ್ಗೆ ಅನುಮತಿ ನೀಡಬಹುದೋ ಇಲ್ಲವೋ ಎನ್ನುವುದಕ್ಕೆ ಇಂಗ್ಲೆಂಡಿನ ಚರ್ಚಿನಲ್ಲಿ ಮತಹಾಕಲಾಯಿತು.

2015: ಲಾರ್ಜ್ ಹಾರ್ಡನ್ ಕೊಲೈಡರಿನ ವಿಜ್ಞಾನಿಗಳು ಪೆಂಟಕ್ವಾರ್ಕ್ ಎಂಬ ಹೊಸ ಕಣವನ್ನು ಕಂಡುಹಿಡಿದಿರುವುದಾಗಿ ಘೋಷಿಸಿದರು.

ಪ್ರಮುಖ ಜನನ/ಮರಣ:

1656: 8 ಸಿಖರಾಗಿದ್ದ ಗುರು ಹರ ಕಿಶನ್ ಸಿಂಗ್ಜನಿಸಿದರು.

1854: ರಾಮಕೃಷ್ಣ ಪರಮಹಂಸರ ಅನುನಾಯಿಯಾಗಿದ್ದ ಮಹೇಂದ್ರನಾಥ್ ಗುಪ್ತ ಜನಿಸಿದರು.

1856: ಸಮಾಜ ಸೇವಕರಾದ ಗೋಪಾಲ್ ಗಣೇಶ್ ಅಗಾರ್ಕರ್ ಜನಿಸಿದರು.

1893: ಭಾರತೀಯ ಕವಿ ಮತ್ತು ಬರಹಗಾತಿ ಸತ್ಯನಾರಾಯಣ ಜನಿಸಿದರು.

1920: ಭಾರತೀಯ ಹಣಕಾಸಿನ ಮಂತ್ರಿಯಾಗಿದ್ದ ಶಂಕರರಾವ್ ಚವಾಣ್ ಅವರು ಜನಿಸಿದರು.

1963: ಧಾರ್ಮಿಕ ಮುಖಂಡರಾದ ಶ್ರೀ ಸ್ವಾಮಿ ಶಿವಾನಂದ ಸರಸ್ವತಿ ನಿಧನರಾದರು.

 

Categories
e-ದಿನ

ಜುಲೈ-13

 

ಪ್ರಮುಖ ಘಟನಾವಳಿಗಳು:

1830: ರಾಜಾರಾಂ ಮೋಹನ್ ರಾಯ್ ಮತ್ತು ಅಲೆಕ್ಸಾಂಡರ್ ಡಫ್ ಸೇರಿ “ದಿ ಸ್ಕಾಟಿಶ್ ಚರ್ಚ್ ಕಾಲೇಜ್” ಅನ್ನು ಸ್ಥಾಪಿಸಿದರು.

1832: ಹೆನ್ರಿ ಆರ್ ಸ್ಕೂಲ್ ಕ್ರಾಫ್ಟ್ ಮಿಸ್ಸಿಸಿಪಿ ನದಿಯ ಮೂಲವನ್ನು ಕಂಡುಹಿಡಿದರು.

1898: ಗುಲಿಎಲ್ಮೋ ಮಾರ್ಕೋನಿ ರೇಡಿಯೋಗೆ ಪೇಟೆಂಟ್ ಪಡೆದರು.

1923: ಹಾಲಿವುಡ್ ಚಿನ್ಹೆ ಅಧಿಕೃತವಾಗಿ ಹಾಲಿವುಡ್, ಲಾಸ್ ಏಂಜೆಲಿಸಿನ ಬೆಟ್ಟದ ಮೇಲೆ ಸಮರ್ಪಿಸಲಾಯಿತು.

1923: ಅಮೇರಿಕಾದ ಪರಿಶೋಧಕ ರಾಯ್ ಚಾಪ್ಮಾನ್ ಆಂಡ್ರೂಸ್ ಮಂಗೋಲಿಯಾದ ಗೋಭಿ ಮರುಭೂಮಿಯಲ್ಲಿ ಮೊದಲ ಗುರುತಿಸಲ್ಪಟ್ಟ ಡೈನೋಸರ್ ಮೊಟ್ಟೆಗಳನ್ನು ಕಂಡುಹಿಡಿದರು.

1938: ಕ್ರೊಲ್ಲರ್-ಮುಲ್ಲರ್ ವಸ್ತುಸಂಗ್ರಹಾಲಯ ಹಾಲಾಂಡಿನಲ್ಲಿ ತೆರೆಯಲಾಯಿತು.

1945: ಮೊದಲ ಆಟಂಬಾಂಬ್ ನ್ಯೂ ಮೆಕ್ಸಿಕೋದಲ್ಲಿ ಸ್ಫೋಟಗೊಂಡಿತು.

1947: ಭಾರತ ಸ್ವಾತಂತ್ರ ಮಸೂದೆಯನ್ನು ಜುಲೈ 4, 1947 ರಂದು ಬ್ರಿಟಿಶ್ ಸಂಸತ್ತಿನಲ್ಲಿ ಜಾರಿಗೊಳಿಸಲಾಯಿತು ಅದು 1947 ರ ಜುಲೈ 13 ರಂದು “ಕಾನೂನಾಗಿ” ಮಾರ್ಪಟ್ಟಿತು.

1950: ಕೊರಿಯಾದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಲು ನೆಹೆರು ಸ್ಟಾಲಿನ್ ಮತ್ತು ಆರ್ಚೆಸನನ್ನು ಕೇಳಿದರು.

1970: ಆಮ್ಸ್ಟರ್ ಡ್ಯಾಮ್ ಮೆಟ್ರೋ ಕಟ್ಟಡದ ಕಾಮಗಾರಿ ಆರಂಭವಾಯಿತು.

1977: ನ್ಯೂಯಾರ್ಕ್ ನಗರದಲ್ಲಿ ಸತತ 25 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿ ಇಡೀ ನಗರವೇ ಕತ್ತಲಾಗಿತ್ತು.

1998: ಭಾರತ ಮತ್ತು ಜರ್ಮನಿ ಬಾನಿನಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ಮತ್ತು ರಕ್ಷಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

2005: ಒಂದು ಇಸ್ಲಾಮಿಕ್ ಟ್ರಸ್ಟ್ ತಾಜ್ ಮಹಲ್ಲಿನ ಮಾಲೀಕತ್ವವನ್ನು ಕೇಳಿದರು. ಆದರೆ ಸರ್ಕಾರವು ಅದರ ಪರಿಪಾಠದ ಆರೋಪವನ್ನು ನ್ಯಾಯಾಲಯದಲ್ಲಿ ಸವಾಲು ಹಾಕಲು ಪ್ರತಿಜ್ಞೆ ಮಾಡಿತು.

2006: ಅಮೇರಿಕಾದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅಟ್ರಿಪ್ಲಾ HIV ಚಿಕಿತ್ಸೆಗೆಂದು ಔಷಧ ಕಂಡುಹಿಡಿಯಲಾಯಿತು.

2011: ಭಾನುವಾದ ಸಂಜೆ ಸಮಯದಲ್ಲಿ ಮುಂಬೈಯಲ್ಲಿ 3 ಬಾಂಬ್ ಸ್ಪೋಟದಿಂದಾಗಿ 26 ಮಂದಿ ಸಾವನ್ನಪ್ಪಿ 130 ಮಂದಿ ಗಾಯಗೊಂಡಿದ್ದರು.

ಪ್ರಮುಖ ಜನನ/ಮರಣ:

1905: ಕಾಶ್ಮೀರದ ಸ್ವಾತಂತ್ರ ಹೋರಾಟಗಾರ ಪ್ರೇಮನಾಥ್ ಬಜಾಜ್ ಜನಿಸಿದರು.

1907: ಖ್ಯಾತ ರಾಜಕಾರಣಿ ಹರಿ ವಿಷ್ಣು ಕಾಮತ್ ಜನಿಸಿದರು.

1924: ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಆಲ್ಫ್ರೆಡ್ ಮಾರ್ಶಲ್ ನಿಧನರಾದರು.

1939: ಭಾರತೀಯ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರಾಗಿದ್ದ ಪ್ರಕಾಶ್ ಮೆಹೆರಾ ಜನಿಸಿದರು.

1964: ಕ್ರಿಕೆಟಿಗ ಉತ್ಪಾಲ್ ಚಟರ್ಜಿ ಕಲ್ಕತ್ತಾದಲ್ಲಿ ಜನಿಸಿದರು.

1993: ಭಾರತೀಯ ಕವಿ ಮತ್ತು ವಿದ್ವಾಂಸರಾಗಿದ್ದ ಎ.ಕೆ.ರಾಮಾನುಜನ್ ಚಿಕಾಗೋದಲ್ಲಿ ನಿಧನರಾದರು.

2010: ಭಾರತದ ಸಾಕ್ಸೋಫೋನ್ ವಾದಕರಾಗಿದ್ದ ಮನೋಹರಿ ಸಿಂಗ್ ನಿಧನರಾದರು.

 

Categories
e-ದಿನ

ಜುಲೈ-12

 

ಪ್ರಮುಖ ಘಟನಾವಳಿಗಳು:

1580: “ಒಸ್ಟ್ರಾಗ್ ಬೈಬಲ್” ಸ್ಲವಾಕ್ ಭಾಷೆಯಲ್ಲಿ ಪ್ರಕಟಿಸಿದ ಮೊದಲ ಬೈಬಲ್ ಪ್ರಕಟವಾಯಿತು.

1674: ಚತ್ರಪತಿ ಶಿವಾಜಿಯವರು ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಸ್ನೇಹದ ಒಪ್ಪಂದಕ್ಕೆ ಸಹಿ ಹಾಕಿದರು.

1785; ಮೊದಲ ಮಾನವ ಚಾಲಿತ ಅನಿಲ ಬಲೂನನ್ನು ನೆದರ್ಲ್ಯಾಂಡಿನಲ್ಲಿ ಹಾರಿಸಲಾಯಿತು.

1817: ಮೊದಲ ಹೂವಿನ ಪ್ರದರ್ಶನ ಐರ್ಲ್ಯಾಂಡಿನಲ್ಲಿ ಏರ್ಪಡಿಸಲಾಯಿತು.

1823: ಕೈಡ್ & ಕೋ ನಿರ್ಮಿಸಿದ ಭಾರತದ ಮೊದಲ ಉಗಿ ಹಡಗಾದ “ಡಯಾನಾ-ಎ-ಗನ್ಬೋಟ್” ಕಲ್ಕತ್ತಾ ಬಳಿ ತೇಲಿತ್ತು.

1859: “ಪೇಪರ್ ಬ್ಯಾಗ್” ಉತ್ಪಾಧಿಸುವ ಯಂತ್ರವನ್ನು ವಿಲಿಯಂ ಗುಡೇಲ್ ಪೇಟೆಂಟ್ ಪಡೆದರು.

1874: ಒಂಟಾರಿಯೋದಲ್ಲಿ ಕೃಷಿ ಕಾಲೇಜು ಸ್ಥಾಪಿಸಲಾಯಿತು.

1878: ನ್ಯೂ ಓರಿಯಾನ್ಸ್ ನಲ್ಲಿ ಜ್ಚರ ಸಾಂಕ್ರಾಮಿಕ ಆರಂಭವಾಗಿ 4500 ಜನರನ್ನು ಬಲಿ ತೆಗೆದುಕೊಂಡಿತು.

1882: ಅಮೇರಿಕಾದ ಮೊದಲ ಸಮುದ್ರದ ಹಡಗುಕಟ್ಟೆ (ಪಿಯರ್) ನಿರ್ಮಾಣ ವಾಷಿಂಗ್ಟನ್ ಡಿಸಿಯಲ್ಲಿ ಪೂರ್ಣಗೊಂಡಿತು.

1912: ಅಮೇರಿಕಾದಲ್ಲಿ ಮೊದಲ ವಿದೇಶಿ ಚಲನಚಿತ್ರದ “ಕ್ವೀನ್ ಎಲಿಜಿಬತ್” ಪ್ರದರ್ಶನ ಮಾಡಲಾಯಿತು.

1928: ಮೊದಲ ಬಾರಿಗೆ ದೂರದರ್ಶನದಲ್ಲಿ ಟೆನ್ನಿಸ್ ಆಟವನ್ನು ಪ್ರಸಾರ ಮಾಡಲಾಯಿತು.

1949: ಬಾಂಬೆಯ ಬಳಿ ಡಚ್ KLM ಕಾನ್ಸ್ಟಲೇಷನ್ ಕುಸಿದು 45 ಜನ ಮೃತಪಟ್ಟರು.

1957: ಹೆಲಿಕಾಪ್ಟರಿನಲ್ಲಿ ಪ್ರಯಾಣಿಸಿದ ಮೊದಲ ಅಧ್ಯಕ್ಷ ಡ್ವೈಟ್ ಐಸೆನ್ಹೋವರ್.

1957: ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆಯೆಂದು ಅಮೇರಿಕಾದ ಶಸ್ತ್ರ ವೈದ್ಯ ಜೆನೆರೆಲ್ ಲಿರಾಯ್ ಬರ್ನಿ ಪತ್ತೆ ಹಚ್ಚಿದರು.

1970: ಅಲ್ಕಾನಂದ ನದಿಯಿಂದ ಪ್ರವಾಹ ಉಂಟಾಗಿ ಬಸ್ಸು ಕೊಚ್ಚಿಕೊಂಡು ಹೋದ ಕಾರಣ 600 ಜನ ಮೃತ ಪಟ್ಟರು.

2000: ಮುಂಬೈಯ ಬಳಿ ಘಾಟ್ಕೋಪರ್ ನಲ್ಲಿ ಭೂಕುಸಿತದಿಂದ 67 ಮಂದಿ ನಿಧನರಾದರು.

2013: ಮಲಾಲಾ ಯುಸಾಫ್ಜಾಯಿ ವಿಶ್ವಾದ್ಯಂತ ಶಿಕ್ಷಣ ಪ್ರವೇಶ ಕುರಿತು ಯುನೈಟೆಡ್ ನೇಷನ್ಸ್ ನಲ್ಲಿ ಮಾತನಾಡಿದರು.

ಪ್ರಮುಖ ಜನನ/ಮರಣ:

1489: ಲೋದಿ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದ ಬಹಲೊಲ್ ಖಾನ್ ಲೋದಿ ಭಾರತದ ದೆಹೆಲಿಯಲ್ಲಿ ನಿಧನರಾದರು.

1864: ದೊಡ್ಡ ಇತಿಹಾಸಕಾರರಾದ ವಿಶ್ವನಾಥ್ ಕಾಶೀನಾಥ್ ರಾಜ್ವಾಡೆ ಜನಿಸಿದರು.

1896: ರಾಜಕಾರಣಿ ಮತ್ತು ಹೈದರಾಬಾದ್ ಲಿಬರೇಷನ್ ಪಾರ್ಟಿ ಸ್ಥಾಪಕರಾಗಿದ್ದ ದಂಗಂಬರಾವ್ ಜಿ, ಬಿಂದು ಜನಿಸಿದರು.

1961: ಕನ್ನಡ ಚಲನಚಿತ್ರ ಖ್ಯಾತ ನಟ, ಶಿವರಾಜಕುಮಾರ್ ಜನಿಸಿದರು.

1965: ಭಾರತೀಯ ಕ್ರಿಕೆಟಿಗರಾದ ಸಂಜಯ್ ಮಂಜೇಕರ್ ಜನಿಸಿದರು.

1993: ಪಶ್ವಿಮ ಬಂಗಾಳದ ಗವರ್ನರ್ ಆಗಿದ್ದ ಡಾ.ನುರುಲ್ ಹಾಸನ್ ನಿಧನರಾದರು.

 

Categories
e-ದಿನ

ಜುಲೈ-11

 

ಪ್ರಮುಖ ಘಟನಾವಳಿಗಳು:

1576: ಮಾರ್ಟಿನ್ ಫ್ರೋಬಿಶರ್ ಮೊದಲ ಬಾರಿಗೆ “ಗ್ರೀನ್ ಲ್ಯಾಂಡ”ನ್ನು ನೋಡುತ್

1735: ಗಣಿತದ ಲೆಕ್ಕಗಳ ಪ್ರಕಾರ ಪ್ಲೂಟೋ 1979 ಕ್ಕಿಂತ ಮೊದಲು ಕೊನೆಯ ಬಾರಿಗೆ ಸೂರ್ಯನಿಂದ 8ನೇ ಅತ್ಯಂತ ದೂರದ ಗ್ರಹಕ್ಕೆ ಸ್ಥಳಾಂತರವಾಯಿತು ಎಂದು ಸೂಚಿಸಲಾಯಿತು.

1798: ಯು.ಎಸ್. ಮರೀನ್ ಕಾರ್ಪಸ್ ಕಾಂಗ್ರೆಸ್ಸಿನ ಒಂದು ಕಾನೂನಿನ ಮೂಲಕ ಸ್ಥಾಪಿಸಲಾಯಿತು.

1801: ಫ್ರೆಂಚ್ ಖಗೋಳಶಾಸ್ತ್ರಜ್ಞ ಜೀನ್ ಲೂಇಸ್ ಪಾನ್ಸ್ ಮೊದಲ ಧೂಮಕೇತುವನ್ನು ಕಂಡುಹಿಡಿದರು.

1811: ಇಟಾಲಿಯನ್ ವಿಜ್ಞಾನಿ ಅಮೀಡಿಯೋ ಅವೋಗಾಡ್ರೋ ಅನಿಲಗಳ ಅಣ್ವಿಕ ವಿಷಯದ ಬಗ್ಗೆ ತಮ್ಮ ಆತ್ಮ ಚರಿತ್ರೆಯಲ್ಲಿ ಪ್ರಕಟಿಸಿದರು.

1848: ಲಂಡನ್ನಿನ ವಾಟರ್ ಲೂ ಸ್ಟೇಷನ್ ತೆರೆಯಲಾಯಿತು.

1877: ಕೇಟ್ ಎಡ್ಜರ್ ಅವರು ನ್ಯೂಜಿಲ್ಯಾಂಡಿನ ಮೊದಲ ಮಹಿಳಾ ಪದವೀಧರರೆಂದು ಮತ್ತು ಬ್ರಿಟೀಷ್ ಸಾಮ್ರಾಜ್ಯದಲ್ಲಿ ಕಲೆಯಲ್ಲಿ ಪದವಿ ಪಡೆದ ಮೊದಲ ಮಹಿಳೆ ಎಂದುಖ್ಯಾತರಾದರು.

1892: ಅಮೇರಿಕಾದ ಪೇಟೆಂಟ್ ಕಛೇರಿಯು ಜೆ,ಡಬ್ಲ್ಯೂ.ಸ್ವಾನ್ ಅವರು ಇನ್ಕಾಡೀಸೆಂಟ್ ಲ್ಯಾಂಪಿಗೆ ಎಲೆಕ್ಟ್ರಿಕ್ ಲೈಟ್ ಕಾರ್ಬನ್ ಅನ್ನು ಕಂಡುಹಿಡಿದರು ಥಾಮಸ್ ಎಡಿಸನ್ ಅಲ್ಲ ಎಂದು ಹೇಳಿತು.

1893: ಮೊಟ್ಟ ಮೊದಲ ಸಂಸ್ಕರಿತ ಮುತ್ತನ್ನು ಕೊಕಿಚಿ ಮಿಕಿಮೋಟೋ ಅವರು ಪಡೆದರು.

1895: ಮೊಟ್ಟಮೊದಲ ವಾಹನದ ಓಟ 48ಗಂಟೆ 48 ನಿಮಿಷಗಳಲ್ಲಿ 1178 ಕಿ.ಮೀ ಮುಕ್ತಾಯಗೊಂಡಿತು.

1896: ಕೆನೆಡಾದ 7ನೇ ಪ್ರಧಾನಿಯಾಗಿ ವಿಲ್ಫ್ರಿಡ್ ಲಾರಿಯರ್ ಅವರು ಪ್ರಮಾಣ ಸ್ವೀಕರಿಸಿದರು.

1897: ಸ್ಪಿಟ್ಸ್ ಬರ್ಜೆನ್ನಿನಿಂದ ಉತ್ತರ ಧ್ರುವಕ್ಕೆ ಸಲೋಮನ್ ಆಗಸ್ಟ್ ಬಲೂನಿನ ಮೂಲಕ ಪ್ರಯಾಣ ಮಾಡಿದರು.

1924: ಭಾರತದ ದೆಹೆಲಿಯಲ್ಲಿ ಹಿಂದು-ಮುಸ್ಲಿಮರ ನಡುವೆ ಗಲಭೆಯುಂಟಾಯಿತು.

1934: ಪನಾಮಾ ಕಾಲುವೆಯ ಮೂಲಕ ಪ್ರಯಾಣ ಮಾಡಿದ ಮೊದಲ ಅಮೇರಿಕಾ ಅಧ್ಯಕ್ಷರು ಫ್ರಾಂಕ್ಲಿನ್ ಡಿ ರೂಸ್ವೆಲ್ಟ್.

1948: ಮೊದಲ ಬಾರಿಗೆ ಜೆರೂಸೆಲೆಂನಲ್ಲಿ ವಾಯು ಬಾಂಬ್ ದಾಳಿ ನಡೆಯಿತು.

1955: ಎಲ್ಲಾ ಅಮೇರಿಕಾ ಕರೆನ್ಸಿಯ ಮೇಲೆ “ದೇವರಲ್ಲಿ ನಮ್ಮ ನಂಬಿಕೆ” ಎಂದು ಮುದ್ರಿಸಲು ಕಾಂಗ್ರೆಸ್ ಸರ್ಕಾರ ಅಧಿಕಾರ ನೀಡಿತು.

1953: ಪೋಲಿಯೋ ಕಾಯಿಲೆಯನ್ನು ತಡೆಗಟ್ಟಲು ಪೋಲಿಯೋ ಲಸಿಕೆಯನ್ನು ಹಾಕಲು ಆರಂಭಿಸಲಾಯಿತು.

1977: ಪೋಲಿಯೋ ಲಸಿಕೆ ಕಂಡು ಹಿಡಿದ ವೈದ್ಯರಾದ ಜೊನಾಸ್ ಇ ಸಾಲ್ಕ್ ಅವರಿಗೆ “ಮೆಡಲ್ ಆಫ್ ಫ್ರೀಡಂ” ನೀಡಿ ಗೌರವಿಸಲಾಯಿತು.

1979: ಅಮೇರಿಕಾದ ಮೊದಲ ಬಾಹ್ಯಾಕಾಶ ನಿಲ್ದಾಣವಾದ ಸ್ಕೈಲ್ಯಾಬ್, ಹಿಂದು ಮಹಾಸಾಗರದ ಮೇಲೆ ಭೂಮಿಯ ವಾತಾವರಣವನ್ನು ಪುನಃ ಪ್ರವೇಶಿಸಿದ ಕಾರಣದಿಂದಾಗಿ ನಾಶವಾಯಿತು.

1985: ಕೊಕಾಕೊಲಾ ಸಂಸ್ಥಯ ನೂತನ ರುಚಿಯ ಕೋಲಾವು ಜನರಿಗೆ ಇಷ್ಟವಾಗದ ಕಾರಣ ಸಂಸ್ಥೆಯು ಹಳೆಯ ರೀತಿಯನ್ನೇ ಮತ್ತೆ ಮಾರುಕಟ್ಟೆಗೆ ತಂದು ಅದನ್ನು “ಕ್ಲಾಸಿಕ್ ಕೋಕ್” ಎಂದು ನಾಮಕರಣ ಮಾಡಿದರು.

1998: ಸರ್ಕಾರವು ಓಪನ್ ಜನರಲ್ ಲೈಸೆನ್ಸ್ ಅಡಿಯಲ್ಲಿ ಖಾದ್ಯ ತೈಲಗಳ ಮೇಲೆ ಕಸ್ಟಮ್ ತೆರಿಗೆಯನ್ನು 20ರಿಂದ 10 ಪ್ರತಿಶಕದಷ್ಟು ಕಡಿಮೆಗೊಳಿಸಿತು.

2000: ಪಂಜಾಬಿ ಬರಹಗಾರರಾದ ಅಮೃತಾ ಪ್ರೀತಮ್ ಅವರಿಗೆ ಪಂಜಾಬಿ ಸಾಹಿತ್ಯದ ಅತ್ಯುತ್ತಮ ಪ್ರಶಸ್ತಿಯಾದ ಶತಾಬ್ದಿ ಸನ್ಮಾನ್ ನೀಡಿ ಗೌರವಿಸಲಾಯಿತು.

2006: ಭಾರತದ ಮುಂಬೈಯಲ್ಲಿ ಸರಣಿ ಬಾಂಬ್ ದಾಳಿಯಿಂದ 209 ಮಂದಿ ಸಾವನ್ನಪ್ಪಿದರು.

ಪ್ರಮುಖ ಜನನ/ಮರಣ:

1882: ಸ್ವಾತಂತ್ರ ಹೋರಾಟಗಾರರು ಮತ್ತು ಸಮಾಜ ಸುಧಾರಕರಾದ ಬಾಬ ಕಾನ್ಶಿ ರಾಮ್ ಜನಿಸಿದರು.

1953: ಭಾರತೀಯ ರೈಲ್ವೆ ಮಂತ್ರಿಗಳಾದ ಸುರೇಶ್ ಪ್ರಭು ಅವರು ಜನಿಸಿದರು.

1956: ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಅಮಿತಾವ್ ಘೋಷ್ ಕಲ್ಕತ್ತಾದಲ್ಲಿ ಜನಿಸಿದರು.

1957: ಮುಸ್ಲಿಂ ಲೀಗ್ ಸ್ಥಾಪಕರಲ್ಲೊಬ್ಬರಾದ ಆಗಾ ಸುಲ್ತಾನ್ ಸರ್ ಮುಹಮ್ಮದ್ ಅವರು ನಿಧನರಾದರು.

 

Categories
e-ದಿನ

ಜುಲೈ-10

 

ಪ್ರಮುಖ ಘಟನಾವಳಿಗಳು:

1775: ಹೊರಾಟಿಯೋ ಗೇಟ್ಸ್ ಕಾಂಟಿನೆಂಟಲ್ನ ಸೈನ್ಯದಿಂದ ಕರಿಯರನ್ನು ಹೊರತುಪಡಿಸಲು ಆದೇಶ ನೀಡಿದರು.

1806: ದಕ್ಷಿಣ ಭಾರತದ ಸೈನಿಕರು, ವೆಲ್ಲೋರಿನಲ್ಲಿ (ಇಂದಿನ ತಮಿಳುನಾಡು) ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ದ ದಂಗೆ ಎದ್ದರು.

1862: ಸೆಂಟರಲ್ ಪೆಸಿಫಿಕ್ ರೈಲು ರಸ್ತೆಯ ಕಾಮಗಾರಿ ಅಮೇರಿಕಾದಲ್ಲಿ ಆರಂಭವಾಯಿತು.

1866: ಎಡಿಸನ್ ಪಿ ಕ್ಲಾರ್ಕ್ ಇಂಡೆಲಿಬಲ್ ಪೆನ್ಸಿಲಿಗೆ ಪೇಟೆಂಟ್ ಪಡೆದರು.

1886: ರಾಯಲ್ ನೈಗರ್ ಸಂಸ್ಥೆಗೆ ಜಾರ್ಜ್ ಗೋಲ್ಡಿ ಅವರು ಸನ್ನದು ಪಡೆದರು.

1892: ಓಹಿಯೋದ ಬೆಲ್ಲಿಫೌಂಟೆನ್ನಿನಲ್ಲಿ ಕಾಂಕ್ರೀಟ್ ಇಂದ ನಿರ್ಮಿಸಿದ ರಸ್ತೆ ಕಟ್ಟಲಾಯಿತು.

1908: ಹೆಚ್.ಕಮರ್ಲಿಂಗ್ ಓನ್ಸ್ ಹೀಲಿಯಂ ದ್ರವವನ್ನು ತಯಾರಿಸಿದರು.

1925: ರಷ್ಯಾದ ಅಧಿಕೃತ ಸುದ್ದಿ ಸಂಸ್ಥೆ TASS ಸ್ಥಾಪನೆಯಾಯಿತು.

1929: ಅಮೇರಿಕಾ ಹಿಂದಿಗಿಂತ ಹೊಸದಾದ, ಗಾತ್ರದಲ್ಲಿ ಚಿಕ್ಕದಾದ ಪೇಪರ್ ಹಣವನ್ನು ವಿತರಿಸಿತು.

1933: ನ್ಯೂಯಾರ್ಕ್ ನಲ್ಲಿ ಮೊದಲ ಪೋಲೀಸ್ ರೇಡಿಯೋವನ್ನು ಕಾರ್ಯನಿರ್ವಹಿಸಲಾಯಿತು.

1938: ಹೋವಾರ್ಡ್ ಹ್ಯೂಸ್ 91 ಗಂಟೆಗಳಲ್ಲಿ ಪ್ರಪಂಚಾದ್ಯಂತ ಪ್ರಯಾಣ ಮಾಡಿದರು.

1949: ಮೊದಲನೇ ಪ್ರಾಯೋಗಿಕ ಆಯತಾಕಾರದ ಟಿವಿ ಟ್ಯೂಬನ್ನು ಘೋಷಿಸಲಾಯಿತು.

1958: ಮೊದಲ ಪಾರ್ಕಿಂಗ್ ಮೀಟರನ್ನು ಇಂಗ್ಲಾಂಡಿನಲ್ಲಿ ಸ್ಥಾಪಿಸಲಾಯಿತು.

1962: ಮೊದಲ ಜಿಯೋಸಿಂಕ್ರೋನಸ್ ಕಮ್ಯುನಿಕೇಷನ್ ಉಪಗ್ರಹವಾದ ಟೆಲ್ಸ್ಟಾರನ್ನು ಹಾರಿಸಲಾಯಿತು.

1972: ಭಾರತದ ಚಂಡಕಾ ಕಾಡಿನಲ್ಲಿ ಆನೆಗಳ ಹಿಂಡಿನ ಕಾಲ್ತುಳಿತಕ್ಕೆ ಸಿಲುಕಿ 24 ಜನ ಮೃತಪಟ್ಟರು.

1977: ರೋಲಿಂಗ್ ಯೋಜನೆಯ ಪರಿಕಲ್ಪನೆಯನ್ನು ಪರಿಚಯಿಸಲು ಯೋಜನಾ ಆಯೋಗ ನಿರ್ಧರಿಸಿತು

1978: ಮಹಾತ್ಮಾ ಫುಲೆ ಹಿಂದುಳಿದ ವರ್ಗ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲಾಯಿತು.

1997: 1856 ರಲ್ಲಿ ಕಂಡುಬಂದ ನಿಯಾಂಡರ್ತಾಲ್ ಮನುಷ್ಯನ ಕೈ ಮೂಳೆಯಿಂದ ಡಿಎನ್ಎ ನೋಡಿದಾಗ ಪ್ರತ್ಯೇಕ ಮಾನವ ಜಾತಿಗಳನ್ನು ಪ್ರತಿನಿಧಿಸುತ್ತದೆ ಎಂದು ಕಂಡುಹಿಡಿಯಲಾಯಿತು.

2011: ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಜೂಲಿಯಾ ಗಿಲ್ಲಾರ್ಡ್ ಅವರು ಕಾರ್ಬನ್ ತೆರಿಗೆ ಜಾರಿಗೆ ತರಲು ಯೋಜನೆಯ ವಿವರಗಳನ್ನು ಪರಿಚಯಿಸಿದರು.

2015: ಅಮೇರಿಕಾದ ಸಿವಿಲ್ ವಾರಿನ ಇತಿಹಾಸದ ಒಂದು ಭಾಗವಾದ ಧ್ವಜವು ಜನಾಂಗೀಯತೆಯ ಸಂಕೇತವಾದರಿಂದ ರಾಜ್ಯ ಸರ್ಕಾರವು ಶಾಶ್ವತವಾಗಿ ಅದನ್ನು ತೆಗೆದುಹಾಕಲು ಕಾನೂನನ್ನು ಜಾರಿಗೆ ತಂದಿತು.

ಪ್ರಮುಖ ಜನನ/ಮರಣ:

1923: ಮರಾಠಿ ಬರಹಗಾರ ಮತ್ತು ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಜಿ.ಎ.ಕುಲ್ಕರಣಿ ಜನಿಸಿದರು.

1949: ಭಾರತೀಯ ಕ್ರಿಕೆಟ್ ಆಟಗಾರರಾದ ಸುನಿಲ್ ಗವಾಸ್ಕರ್ ಜನಿಸಿದರು.

2000: ಭಾರತೀಯ ಸ್ವಾತಂತ್ರ ಹೋರಾಟಗಾರರಾಗಿದ್ದ ವಕ್ಕೋಮ್ ಮಜೀದ್ ನಿಧನರಾದರು.

2013: ಒಡಿಯಾ ಭಾಷೆಯಲ್ಲಿ ವಿಜ್ಞಾನ ಲೇಖಕರಾಗಿದ್ದ ಭಾರತದ ವಿಜ್ಞಾನಿ ಗೋಕುಲನಂದ ಮಹಾಪಾತ್ರ ನಿಧನರಾದರು.

2014: ಭಾರತೀಯ ನಟಿ, ನರ್ತಕಿ, ಮತ್ತು ನೃತ್ಯ ನಿರ್ದೇಶಕಿಯಾಗಿದ್ದ ಜೊಹರಾ ಸೆಹ್ಗಾಲ್ ನಿಧನರಾದರು.

 

Categories
e-ದಿನ

ಜುಲೈ-9

 

ಪ್ರಮುಖ ಘಟನಾವಳಿಗಳು:

1792: ನ್ಯೂಯಾರ್ಕಿನ ಕೊಲಂಬಿಯಾ ಕಾಲೇಜಿನಲ್ಲಿ ಮೊದಲ ಕೃಷಿ ಪ್ರಾಧ್ಯಾಪಕರಾಗಿದ್ದವರು ಎಸ್.ಎಲ್.ಮಿಟ್ಚೆಲ್.

1808: ಚರ್ಮವನ್ನು ವಿಭಜಿಸುವ ಯಂತ್ರಕ್ಕೆ ಸ್ಯಾಮುಯೆಲ್ ಪಾರ್ಕರ್ ಪೇಟೆಂಟ್ ಪಡೆದರು.

1815: ಮೊದಲ ನೈಸರ್ಗಿಕ ಅನಿಲದ ಗುಂಡಿಯನ್ನು ಅಮೇರಿಕಾದಲ್ಲಿ ಪತ್ತೆಹಚ್ಚಲಾಯಿತು.

1842: ನೋಟರಿ ಸ್ಟಾಂಪ್ ಕಾನೂನನ್ನು ಅಂಗೀಕರಿಸಲಾಯಿತು.

1872: ಜಾನ್ ಎಫ್.ಬ್ಲಾಂಡೆಲ್ ಡೋನಟ್ ಕಟ್ಟರಿಗೆ ಪೇಟೆಂಟ್ ಪಡೆದರು.

1875: ಬಾಂಬೆ ಸ್ಟಾಕ್ ಎಕ್ಸೇಂಜ್ ಸ್ಥಾಪಿಸಲಾಯಿತು.

1878: ಹೆನ್ರೀ ಟಿಬ್ “ಕಾರ್ನ್ ಕಾಬ್ ಪೈಪಿಗೆ” ಪೇಟೆಂಟ್ ಪಡೆದರು.

1893: ಅನಸ್ಥೇಶಿಯಾ ಇಲ್ಲದೆ ಮೊದಲ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಡಾ.ಡೇನಿಯಲ್ ವಿಲ್ಲಿಯಮ್ಸ್ ಮಾಡಿದರು.

1900: ಒಕ್ಕೂಟ ಸರ್ಕಾರದಲ್ಲಿ ಪ್ರತ್ಯೇಕ ವಸಾಹತುಗಳನ್ನು ಒಗ್ಗೂಡಿಸುವ “ಕಾಮನ್ ವೆಲ್ತ್ ಆಫ್ ಆಸ್ಟ್ರೇಲಿಯಾವನ್ನು ಬ್ರಿಟಿಶ್ ಸಂಸತ್ತಿನ ಒಂದು ಕಾನೂನಿನಿಂದ ಸ್ಥಾಪಿಸಲಾಯಿತು.

1916: ಅಟ್ಲಾಂಟಿಕ್ ಸಮುದ್ರದ ಮೂಲಕ ಅಮೇರಿಕಾದಿಂದ ಜರ್ಮನಿಯನ್ನು ತಲುಪಿದ ಮೊದಲ ಸರಕು ಜಲಾಂತರ್ಗಾಮಿ.

1922: ಜಾನಿ ವೆಸ್ಮುಲ್ಲರ್ 1 ನಿಮಿಷದೊಳಗೆ 100 ಮೀಟರ್ ಈಜಿದರು.

1941: ಬ್ರಿಟಿಷ್ ಗುಪ್ತಲಿಪಿ ಶಾಸ್ತ್ರಜ್ಞರು ಈಸ್ಟರ್ನ್ ಫ್ರಂಟಿನ ನೆಲದಿಂದ ವಾಯು ಕಾರ್ಯಾಚರಣೆಗಳನ್ನು ನಿರ್ದೇಶಿಸಲು ಜರ್ಮನ್ ಸೈನ್ಯ ಬಳಸುತ್ತಿದ್ದ ರಹಸ್ಯ ಸಂಕೇತವನ್ನು (ಎನಿಗ್ಮಾ) ಬಿಡಿಸಿ ತಿಳಿದುಕೊಂಡರು.

1947: ಬ್ರಿಟನ್ನಿನ ಯುವರಾಣಿ ಎಲಿಜಿಬತ್ ಹಾಗೂ ಲೆಫ್ಟಿನೆಂಟ್ ಫಿಲಿಪ್ ಮೌಂಟ್ ಬ್ಯಾಟೆನ್ನಿನ ನಿಶ್ವಿತಾರ್ಥವನ್ನು ಘೋಷಿಸಲಾಯಿತು.

1953: ಏರ್ವೇಸ್ ಹೆಲಿಕಾಪ್ಟರ್ಗಳಿಂದ ಮೊದಲ ಪ್ರಯಾಣಿಕರ ಪ್ರಯಾಣ ಸೇವೆಯನ್ನು ಆರಂಭಿಸಿತು.

1955: ವಾರಕ್ಕೆ 5 ದಿನ ಕೆಲಸದ ದಿನಗಳಿರಲು ಕೋರಿ ಬೆಲ್ಜಿಯಂನಲ್ಲಿ ಮುಷ್ಕರ ಮಾಡಲಾಯಿತು.

1957: 102ನೇ ಅಂಶವಾದ ನೊಬೆಲ್ಲಿಯಂನ ಪತ್ತೆಯನ್ನು ಘೋಷಿಸಲಾಯಿತು.

1969: ಇಂಡಿಯನ್ ವೈಲ್ಡ್ ಲೈಫ್ ಬೋರ್ಡ್ ಶಿಫಾರಸ್ಸು ಮಾಡಿದಂತೆ “ರಾಯಲ್ ಬೆಂಗಾಲ್ ಟೈಗರ್” ಅನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಒಪ್ಪಿಕೊಂಡಿತು.

1975: ಸೆನೆಗಲ್ಲಿನ ರಾಷ್ಟ್ರೀಯ ಅಸ್ಸೆಂಬ್ಲಿಯು ಒಂದು ಬಹು-ಪಕ್ಷ ವ್ಯವಸ್ಥೆಗೆ ದಾರಿಮಾಡಿಕೊಡುವ ಕಾನೂನನ್ನು ಅಂಗೀಕರಿಸಿತು.

2005: ಸ್ಕೇಟ್ ಬೋರ್ಡರ್ ಡ್ಯಾನಿವೇ ಗ್ರೇಟ್ ವಾಲ್ ಆಫ್ ಚೈನಾದ ಮಹಾ ಗೋಡೆಯನ್ನು ಜಿಗಿದು ದಾಟಿ ಯಾವುದೇ ಮೋಟಾರಿನ ಸಹಾಯವಿಲ್ಲದೆ ಮಹಾ ಗೋಡೆಯನ್ನು ದಾಟಿದ ಮೊದಲ ವ್ಯಕ್ತಿ ಆದರು.

ಪ್ರಮುಖ ಜನನ/ಮರಣ:

1925: ಭಾರತೀಯ ಚಿತ್ರನಟ, ನಿರ್ಮಾಪಕ, ನಿರ್ದೇಶಕ ಗುರುದತ್ ಜನಿಸಿದರು.

1930: ಭಾರತೀಯ ಚಿತ್ರನಟ, ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥೆಕಾರ ಕೆ.ಬಾಲಚಂದರ್ ಜನಿಸಿದರು.

1938: ಖ್ಯಾತ ಹಿಂದಿ ಚಿತ್ರ ನಟ ಸಂಜೀವ್ ಕುಮಾರ್ ಜನಿಸಿದರು.

1969: ಭಾರತೀಯ ಕ್ರಿಕೆಟಿಗ ಲಕ್ಷ್ಮಿ ವೆಂಕಟಪತಿ ರಾಜು ಹೈದರಾಬಾದಿನಲ್ಲಿ ಜನಿಸಿದರು.

1994: ಪಂಜಾಬಿನ ಗವರ್ನರ್ ಆಗಿದ್ದ ಸುರೇಂದ್ರನಾಥ್ ನಿಧನರಾದರು.

 

Categories
e-ದಿನ

ಜುಲೈ-8

 

ಪ್ರಮುಖ ಘಟನಾವಳಿಗಳು:

1497: ವಾಸ್ಕೊಡಗಾಮ ಭಾರತಕ್ಕೆ ನೌಕೆಯಲ್ಲಿ ಮೊದಲ ನೇರ ಯೂರೋಪಿಯನ್ ಪ್ರಯಾಣ ಮಾಡಿದರು.

1693: ಅಮೇರಿಕಾದ ನ್ಯೂಯಾರ್ಕ್ ನಗರವು ಮೊದಲ ಪೋಲೀಸ್ ಸಮವಸ್ತ್ರವನ್ನು ಅನುಮೋದಿಸಿತು.

1777: ಮೊದಲ ಅಮೇರಿಕಾದ ವಸಾಹತು ವರ್ಮಾಂಟ್ ಗುಲಾಮಗಿರಿಯನ್ನು ನಿಷೇಧಿಸಿತು.

1796: ಅಮೇರಿಕಾ ನಗರ ಇಲಾಖೆ ಮೊದಲ ಅಮೇರಿಕಾದ ಪಾಸ್ಪೋರ್ಟ್ ವಿತರಿಸಿತು.

1800: ಡಾ. ಬೆಂಜಮಿನ್ ವಾಟರ್ ಹೌಸ್ ಸಿಡುಬು ತಡೆಗಟ್ಟಲು ತನ್ನ ಮಗನಿಗೆ ಮೊದಲ ಕೌ ಪಾಕ್ಸ್ ಲಸಿಕೆ ನೀಡಿದರು.

1835: ಲಿಬರ್ಟಿ ಗಂಟೆ ಬಾರಿಸುವಾಗ ಬಿರುಕು ಬಿಟ್ಟು ಮತ್ತೆಂದು ಸದ್ದು ಮಾಡಲಿಲ್ಲ.

1862: ಒಡೋರ್ ಆರ್ ಟಿಂಬಿ ತಿರುಗುವ ಗೋಪುರದ ಗನ್ನಿಗೆ ಪೇಟೆಂಟ್ ಪಡೆದರು.

1865: ಲೋವೆಲ್ಲಿನ ಸಿ.ಇ.ಬಾರ್ನ್ಸ್ ಮಶೀನ್ ಗನ್ನಿಗೆ ಪೇಟೆಂಟ್ ಪಡೆದರು.

1870: ಅಮೇರಿಕಾದ ಕಾಂಗ್ರೆಸ್ “ಟ್ರೇಡ್ ಮಾರ್ಕ್”ಗಳನ್ನು ನೊಂದಾಯಿಸಲು ಅಧಿಕಾರ ನೀಡಿತು.

1879: ವಿದ್ಯುತ್ ಶಕ್ತಿಯ ಬೆಳಕನ್ನು ಉಪಯೋಗಿಸಿದ ಮೊದಲ ಹಡಗು ಕ್ಯಾಲಿಫೋರ್ನಿಯಾದಿಂದ ಪ್ರಯಾಣ ಆರಂಭಿಸಿತು.

1881: ಎಡ್ವರ್ಡ್ ಬರ್ನರ್ “ಸನ್ಡೇ” ಐಸ್ಕ್ರೀಂ ಸೃಷ್ಟಿಸಿದರು.

1889: ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಣೆ ಆರಂಭವಾಯಿತು.

1911: ನಾನ್ ಅಸ್ಪಿನ್ ವಾಲ್ ಮೊದಲ ಖಂಡಾಂತರ ಕುದುರೆ ಸವಾರಿ ಮಾಡಿದ ಮೊದಲ ಮಹಿಳೆ.

1947: ಯುನೈಟೆಡ್ ನೇಷನ್ಸಿನ ಹೊಸ ಶಾಶ್ವತ ಪ್ರಧಾನ ಕಛೇರಿಗೆ ದಾರಿ ಮಾಡಲು ನ್ಯೂಯಾರ್ಕ್ ನಗರದಲ್ಲಿ ಅಗತ್ಯ ನಿರ್ಮಾಣ ಕಾರ್ಯಗಳು ಆರಂಭವಾಯಿತು.

1947: ನ್ಯೂ ಮೆಕ್ಸಿಕೋದ ರೋಸ್ವೆಲ್ಲಿನಲ್ಲಿ ಒಂದು UFOಕುಸಿದು ಬದ್ದಿರುವ ಸುದ್ದಿ ಪ್ರಸಾರವಾಗಿತ್ತು.

1963: ಕ್ಯೂಬಾದೊಂದಿಗೆ ಎಲ್ಲಾ ವಿತ್ತೀಯ ವಹಿವಾಟುಗಳನ್ನು ಅಮೇರಿಕಾ ನಿಷೇಧಿಸಿತು.

1981: ಪ್ರಧಾನಿ ಮರೋಯಿಸ್ ಫ್ರಾನ್ಸಿನಲ್ಲಿ ಬ್ಯಾಂಕು/ವಿಮಾನ/ ಉಕ್ಕು ಉದ್ಯಮಗಳನ್ನು ರಾಷ್ಟ್ರೀಕರಿಸಿದರು.

1999: ಫ್ಲೋರಿಡಾದ ರಾಜ್ಯದಲ್ಲಿ ವಿದ್ಯುತ್ ಕುರುಚಿ ಬಳಸಿ ಆಲೆನ್ ಲೀ ಡೇವಿಸ್ಸಿಗೆ ಮರಣದಂಡನೆ ನೀಡಲಾಯಿತು. ಇದೇ ವಿದ್ಯುತ್ ಕುರುಚಿಯ ಕೊನೆಯ ಬಳಕೆ ಆಗಿತ್ತು.

2003: ಸುಡಾನ್ ವಿಮಾನ ಸಂಸ್ಥೆಯ ವಿಮಾನವು ಕುಸಿದದು 116 ಜನ ಪ್ರಯಾಣಿಕರು ನಿಧನರಾದರು.

2015: ತಾಂತ್ರಿಕ ದೋಷದಿಂದಾಗಿ ನ್ಯೂಯಾರ್ಕ್ ಸ್ಟಾಕ್ ಎಕ್ಸಚೇಂಜ್ ಸುಮಾರು 4 ಗಂಟೆಗಳ ಕಾಲ ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು.

ಪ್ರಮುಖ ಜನನ/ಮರಣ:

1914: ಭಾರತದ ರಾಜಕರಣಿ ಮತ್ತು ಪಶ್ವಿಮ ಬಂಗಾಳದ 6ನೇ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಜನಿಸಿದರು.

1949: ಭಾರತದ ರಾಜಕರಣಿ ಮತ್ತು ಆಂದ್ರಪ್ರದೇಶದ 14ನೇ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಜನಿಸಿದರು.

1957: ಚಾಕಲೇಟ್ ತಯಾರಕರಾಗಿದ್ದ ವಿಲ್ಲಿಯಂ ಕಾಡ್ಬರಿ ನಿಧನರಾದರು.

1972: ಭಾರತೀಯ ಪ್ರಖ್ಯಾತ ಕ್ರಿಕೆಟ್ ಆಟಗಾರರಾದ ಸೌರವ್ ಗಂಗೂಲಿ ಭಾರತದ ಕಲ್ಕತ್ತಾದಲ್ಲಿ ಜನಿಸಿದರು.

2007: ಭಾರತದ 9ನೇ ಪ್ರಧಾನ ಮಂತ್ರಿಯಾಗಿದ್ದ ಚಂದ್ರಶೇಖರ್ ನಿಧನರಾದರು.

 

Categories
e-ದಿನ

ಜುಲೈ-7

 

ಪ್ರಮುಖ ಘಟನಾವಳಿಗಳು:

1550: ಯೂರೋಪಿನಲ್ಲಿ ಚಾಕೋಲೇಟ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

1753: ಬ್ರಿಟಿಶ್ ವಸ್ತುಸಂಗ್ರಹಾಲಯವನ್ನು ಪಾರ್ಲಿಯಮೆಂಟ್ ಆಕ್ಟ್ ಮೂಲಕ ಸ್ಥಾಪಿಸಲಾಯಿತು.

1753: ಬ್ರಿಟಿಶ್ ಸಂಸತ್ತು ಯಹೂದಿಗಳಿಗೆ ನಾಗರೀಕತ್ವ ನೀಡಿತು.

1754: ನ್ಯೂಯಾರ್ಕಿನಲ್ಲಿ ಕಿಂಗ್ಸ್ ಕಾಲೇಜು ಆರಂಭವಾಯಿತು. ನಂತರ ಇದನ್ನು ಕೊಲಂಬಿಯ ಕಾಲೇಜೆಂದು 30 ವರ್ಷಗಳ ನಂತರ ಮತ್ತೆ ನಾಮಕರಣ ಮಾಡಲಾಯಿತು.

1802: ಮೊದಲ ಹಾಸ್ಯ ಪುಸ್ತಕವನ್ನು ನ್ಯೂಯಾರ್ಕಿನ ಹಡ್ಸನ್ನಿನಲ್ಲಿ ಪ್ರಕಟಿಸಲಾಯಿತು.

1896: ಲೂಮಿಯರ್ ಬ್ರದರ್ಸ್ ಮುಂಬಯಿಯಲ್ಲಿ (ಅಂದಿನ ಬಾಂಬೆ) ವ್ಯಾಟ್ಸನ್ ಹೋಟೆಲ್ಲಿನಲ್ಲಿ ಆರು ಚಲನಚಿತ್ರವನ್ನು ಪ್ರದರ್ಶಿಸಿದರು. ಇದೇ ಭಾರತೀಯ ಸಿನಿ ಚಿತ್ರರಂಗದ ಹುಟ್ಟು ಎಂದು ಪರಿಗಣಿಸಲಾಗಿದೆ.

1905: ವಿಶ್ವದ ಅಂತರರಾಷ್ಟ್ರೀಯ ಕಾರ್ಮಿಕರು ತಮ್ಮ ಕಾರ್ಮಿಕ ಸಂಘಟನೆಯನ್ನು ಚಿಕಾಗೋದಲ್ಲಿ ಸ್ಥಾಪಿಸಿದರು.

1916: ನ್ಯೂಜಿಲ್ಯಾಂಡ್ ಕಾರ್ಮಿಕ ಪಕ್ಷ ರೂಪಿತವಾಯಿತು.

1920: ರೇಡಿಯೋ ದಿಕ್ಸೂಚಿ ಎಂದು ಕರೆಯಲ್ಪಡುವ ಒಂದು ಸಾಧನವನ್ನು ಮೊದಲ ಬಾರಿಗೆ ಅಮೇರಿಕಾದ ನೌಕಾಪಡೆಯ ವಿಮಾನದಲ್ಲಿ ಬಳಸಲಾಯಿತು.

1930: ಕೊಲೊರೆಡಿಯ ನದಿಯ ಕಪ್ಪು ಕಣಿವೆಯಲ್ಲಿನ ಹೂವರ್ ಅಣೆಕಟ್ಟಿನ ನಿರ್ಮಾಣವು ಆರಂಭವಾಯಿತು. ಈ ಯೋಜನೆಯ ಮೂಲ ಹೆಸರು ಬೌಲ್ಡರ್ ಅಣೆಕಟ್ಟು ನಂತರ ಅಧ್ಯಕ್ಷ ಹೂವರವರಿಗೆ ಗೌರವಾರ್ಪಣೆಯಾಗಿ ಇದನ್ನು ಹೂವರ್ ಅಣೆಕಟ್ಟು ಎಂದು ನಾಮಕರಣ ಮಾಡಲಾಯಿತು.

1950: ದಕ್ಷಿಣ ಆಫ್ರಿಕಾದ ಜನಸಂಖ್ಯೆ ನೋಂದಣಿ ಕಾಯಿದೆ ಪ್ರಾರಂಭವಾಯಿತು. ವರ್ಣಭೇದ ನೀತಿಯ ಭಾಗವಾಗಿ ಪ್ರತಿ ನಿವಾಸಿಯೂ ತಮ್ಮ ಜನಾಂಗೀಯ ಗುಣಲಕ್ಷಣಗಳಿಗೆ ಅನುಗುಣವಾಗಿ ವರ್ಗೀಕರಿಸಲ್ಪಟ್ಟು ನೋಂದಾಯಿಸಲ್ಪಡಬೇಕೆಂಬುದು ಅಗತ್ಯವಾಯಿತು.

1981: ಆರಿಜೋನಾದ ನ್ಯಾಯಾಧೀಶರಾಗಿದ್ದ ಸಾಂಡ್ರಾ ಡೇ ಓಕೂನರ್ ಅವರನ್ನು ಅಮೇರಿಕಾದ ಸರ್ವೋಚ್ಛ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.

1981: ಡುಪಾಂಟ್ ಮತ್ತು ಪಾಲ್ ಮಾಕ್ಕರೆಡಿ ಸೇರಿ ಆವಿಶ್ಕರಿಸಿದ ಮೊದಲ ಸೌರ ಶಕ್ತಿ ಚಾಲಿತ ವಿಮಾನವವು ಪ್ಯಾರಿಸಿನಿಂದ ಕ್ಯಾಂಟರ್ಬೆರಿಗೆ ಹಾರಾಡಿತು.

2003: ಆಪರ್ಚುನಿಟಿ ಹೆಸರಿನ ನಾಸಾದ 2ನೇ ಮಾರ್ಸ್ ಲ್ಯಾಂಡರನ್ನು ಹಾರಿಸಲಾಯಿತು.

2007: ನೂತನ 7 ಜಗತ್ತಿನ ಅದ್ಬುತಗಳ ಪ್ರತಿಷ್ಠಾನವು ಆಯೋಜಿಸಿದ್ದ ವಿಶ್ವವಯಾಪಿ ಸಮೀಕ್ಷೆಯಿಂದ ಮಾರ್ಡನ್ ವರ್ಲ್ಡಿನ ಹೊಸ ಏಳು ಅದ್ಬುತಗಳ ಅಧಿಕೃತ ಘೋಷಣೆಯನ್ನು ನಿರ್ಧರಿಸಲಾಯಿತು.

2011: ಸ್ವೀಡೆನ್ನಿನ ಶಸ್ತ್ರವೈದ್ಯರು ವಿಶ್ವದ ಮೊದಲ ಸಿನ್ಥೆಟಿಕ್ ಅಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದರು.

2014: ಇತಿಹಾಸ ಪೂರ್ವ ಪಕ್ಷಿ ಪ್ರಬೇಧಗಳಾದ ಪೆಲಾಗೋರ್ನಿಸ್ ಸ್ಯಾಂಡೆರಿಗಳ ಪಳೆಯುಳಿಕೆಯನ್ನು ಚಾರ್ಲ್ಸ್ಟನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾಯಿತು. ಇಲ್ಲಿಯವರೆಗೆ ಕಂಡ ಅತಿ ದೊಡ್ಡ ಪಕ್ಷಿಯಾಗಿದ್ದು ಅದರ ರೆಕ್ಕೆ 24 ಅಡಿಯಷ್ಟಿದ್ದವೆಂದು ಪತ್ತೆಯಾಯಿತು.

2015: ರಾಷ್ಟ್ರೀಯ ಹೈನು ಅಭೀವೃದ್ಧಿ ಮಂಡಳಿ “ಪಶು ಪೋಷಣೆ” ಎಂಬ ವೆಬ್ ಅಪ್ಲಿಕೇಶನ್ ಮತ್ತು ಆಂಡ್ರಾಯ್ಡ್ ಪ್ಲಾಟ್ಫಾರ್ಮ್ ಅಪ್ಲಿಕೇಶನ್ನನ್ನು ಆರಂಭಿಸಿತು.

ಪ್ರಮುಖ ಜನನ/ಮರಣ:

1752: ನೇಯ್ಗೆ ಮಾದರಿಯನ್ನು ಮಾಡಬಲ್ಲ ಮಗ್ಗವನ್ನು ಕಂಡುಹಿಡಿದ ಸಂಶೋಧಕ ಜೋಸೆಫ್ ಮೇರಿ ಜಾಕ್ವರ್ಡ್ ಜನಿಸಿದರು.

1973: ಭಾರತೀಯ ಖ್ಯಾತ ಗಾಯಕ ಕೈಲಾಶ್ ಖೇರ್ ಜನಿಸಿದರು.

1981: ಭಾರತೀಯ ಪ್ರಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಜನಿಸಿದರು.

 

Categories
e-ದಿನ

ಜುಲೈ-6

 

ಪ್ರಮುಖ ಘಟನಾವಳಿಗಳು:

1573: ಕೊರ್ಡೋಬಾ, ಅರ್ಜೆಂಟೀನಾವನ್ನು ಜೆರೋನಿಮೊ ಲೂಯಿಸ್ ಡಿ ಕ್ಯಾಬ್ರೆರಾ ಕಂಡುಹಿಡಿದರು.

1858: ಶೂ ತಯಾರು ಮಾಡುವ ಯಂತ್ರದ ಪೇಟೆಂಟನ್ನು ಲೇಮಾನ್ ಬ್ಲೇಕ್ ಪಡೆದರು.

1885: ಲೂಯಿಸ್ ಪಾಶ್ಚರ್ ರೇಬೀಸ್-ವಿರೋಧಿ ಲಸಿಕೆಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದರು.

1886: ವಿಸ್ಕನ್ಸಿನ್ನಿನ ಹಾರ್ಲಿಕ್ಸ್ ಸಾರ್ವಜನಿಕರಿಗೆ ಮೊದಲ ಮಾಲ್ಟೆಡ್ ಹಾಲನ್ನು ನೀಡಿತು.

1892: ಬ್ರಿಟಿಶ್ ಸರ್ಕಾರದ ಭಾರತದ ಮೊದಲ ಸಂಸತ್ತಿನ ಸದಸ್ಯರಾಗಿ ದಾದಾಬಾಯಿ ನವರೋಜಿ ಆಯ್ಕೆಯಾದರು.

1922: ಡಚ್ ದೇಶದ ವಿಮಾನ ತಯಾರಕಾದ ಥ್ರಾಂಪೆನ್ ಬರ್ಗ್ ದಿವಾಳಿತನವನ್ನು ಘೋಷಿಸಿದರು.

1924: ಪ್ರಯೋಗಾತ್ಮಕವಾಗಿ ಮೊದಲ ಪೋಟೋವನ್ನು ಅಟ್ಲಾಂಟಿಕ್ಕಿನ ಮೂಲಕ ರೇಡಿಯೋದಲ್ಲಿ ಕಳುಹಿಸಲಾಯಿತು.

1928: ನ್ಯೂಯಾರ್ಕಿನಲ್ಲಿ ಮೊದಲ ಸಂಭಾಷಣೆಯುಳ್ಳ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

1947: ಸೋವಿಯೆಟ್ ಯೂನಿಯನ್ ಒಕ್ಕೂಟದಲ್ಲಿ AK-47 ಉತ್ಪಾದನೆಗೆ ಹಸಿರು ನಿಶಾನೆ ನೀಡಲಾಯಿತು.

1955: ಸಾಂಧರ್ಬಿಕ ವಿಶ್ಲೇಷಣೆ ಮತ್ತು ಕಾರ್-ಎಮಿಶನ್ ಮಾಲಿನ್ಯ ನಿಯಂತ್ರಣದ ಸಂಶೋಧನಕ್ಕೆ ಫೆಡರಲ್ ಏರ್ ಪೊಲ್ಯೂಷನ್ ಕಂಟ್ರೋಲ್ ಆಕ್ಟ್ ಅನ್ನು ಅಳವಡಿಸಲಾಯಿತು.

1972: ಮೇರಿಲ್ಯಾಂಡಿನ ಆನಾಪೋಲಿಸಿನಲ್ಲಿ ಅಮೇರಿಕಾದ ನೇವೆಲ್ ಅಕಾಡೆಮಿ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಿದರು

1983: ಸುಪ್ರೀಂ ಕೋರ್ಟ್ ನೌಕರರ ಸೇವಾನಿವೃತ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಕಡಿಮೆ ಪಾವತಿಸುವಂತಿಲ್ಲವೆಂದು ಕಾನೂನು ಜಾರಿ ಮಾಡಿತು.

2006: ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಮೊಹರು ಮಾಡಿದ ಭಾರತ ಮತ್ತು ಚೀನಾ ನಡುವಿನ ನಥು ಲಾ ಪಾಸ್ 44 ವರ್ಷಗಳ ನಂತರ ವ್ಯಾಪಾರಕ್ಕಾಗಿ ಮತ್ತೆ ತೆರೆಯಿತು.

2006: ಸೋಡಾ ಕಂಪನಿಯ ಕೋಕಾ ಕೋಲಾದಿಂದ ಮೂರು ಉದ್ಯೋಗಿಗಳು ಕಂಪನಿಯಿಂದ ರಹಸ್ಯಗಳನ್ನು ಕದ್ದಿರುವ ಆರೋಪ ಮಾಡಲಾಗಿತ್ತು.

2012: ಯಾಹೂ ಮತ್ತು ಫೇಸ್ ಬುಕ್ ಒಂದು ಪೇಟೆಂಟ್ ವಿವಾದವನ್ನು ಬಗೆಹರಿಸಲು ಒಪ್ಪಿಕೊಳ್ಳುತ್ತದೆ ಹಾಗೂ ಎರಡೂ ಸಂಸ್ಥೆಯ ನಡುವೆ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ವಿಸ್ತರಿಸುವ ಜಾಹಿರಾತು ಮತ್ತು ವಿಷಯ ಹಂಚಿಕೆ ಮೈತ್ರಿಯನ್ನು ರೂಪಿಸಿತು.

ಪ್ರಮುಖ ಜನನ/ಮರಣ:

1837: ಭಾರತೀಯ ಓರಿಯೆಂಟಲಿಸ್ಟ್ ಮತ್ತು ವಿದ್ವಾಂಸರಾದ ಆರ್.ಜಿ.ಬಂಡಾರ್ಕರ್ ಜನಿಸಿದರು.

1901: ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶಾಮಾಪ್ರಸಾದ್ ಮುಖರ್ಜಿ ಕಲ್ಕತ್ತಾದಲ್ಲಿ ಜನಿಸಿದರು.

1986: ಭಾರತದ ನಾಲ್ಕನೇ ಉಪ ಪ್ರಧಾನಿಯಾಗಿದ್ದ ಜಗಜೀವನ್ ರಾಮ್ ನಿಧನರಾದರು.

1997: ಭಾರತೀಯ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಕಾರರಾದ ಚೇತನ್ ಆನಂದ್ ನಿಧನರಾದರು.

2002: ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕರಾದ ಧೀರುಬಾಯಿ ಅಂಬಾನಿ ನಿಧನರಾದರು.

 

Categories
e-ದಿನ

ಜುಲೈ-5

 

ಪ್ರಮುಖ ಘಟನಾವಳಿಗಳು:

1687: ಐಸಾಕ್ ನ್ಯೂಟನ್ ಅವರ “ಫಿಲಾಸಿಫಿಯಾ ನೈಸರ್ಗಿಕ ಪ್ರನ್ಸಿಪಿಯಾ ಗಣಿತಶಾಸ್ತ್ರ” (ನೈತಿಕ ತತ್ವಶಾಸ್ತ್ರದ ಗಣಿತ ತತ್ವಗಳು) ಮೊದಲ ಸಂಪುಟವನ್ನು ಲ್ಯಾಟಿನ್ ಭಾಷೆಯಲ್ಲಿ ಎಡ್ಮಂಡ್ ಹ್ಯಾಲಿ ಪ್ರಕಟಿಸಿದರು.

1776; ಸ್ವಾತಂತ್ರದ ಘೋಷಣೆಯನ್ನು ಮೊದಲ ಬಾರಿಗೆ ಫಿಲಾಡೆಲ್ಫಿಯಾದಲ್ಲಿ ಜಾನ್ ಡನ್ಲಾಪ್ ಮುದ್ರಿಸಿದರು. ಇದರ 200 ಪ್ರತಿಗಳನ್ನು ತಯಾರಿಸಿ ಎಲ್ಲಾ ರಾಜ್ಯಗಳಿಗೆ ವಿತರಿಸಲಾಯಿತು.

1811: ಸ್ಪೇನಿನಿಂದ ಸ್ವಾತಂತ್ರ ಘೋಷಿಸಿಕೊಂಡ ವೆನೆಜುವೆಲಾ ಮೊದಲ ದಕ್ಷಿಣ ಅಮೇರಿಕಾದ ರಾಷ್ಟ್ರವಾಯಿತು.

1841: ಮೊದಲ ಪ್ರಯಾಣ ಸೌಕರ‍್ಯ ಕಲ್ಪಿಸುವ ಏಜೆನ್ಸಿಯನ್ನು ಥಾಮಸ್ ಕುಕ್ ಆರಂಭಿಸಿದರು.

1865: ಗ್ರೇಟ್ ಬ್ರಿಟನ್ ಪ್ರಪಂಚದ ಮೊದಲ ಗರಿಷ್ಢ ವೇಗದ ಕಾನೂನನ್ನು ವಿಧಿಸಿತು.

1892: ರೋಟರಿ ಇಂಜಿನ್ನಿಗೆ ಆಂಡ್ರೂ ಬಿಯರ್ಡ್ ಪೇಟೆಂಟ್ ಪಡೆದರು.

1937: ಸ್ಪ್ಯಾಮ್-ಲಂಚಾನ್ ಮಾಂಸವನ್ನು ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಹಾರ್ಮೆಲ್ ಫುಡ್ಸ್ ಕಾರ್ಪರೇಷನ್ ಪರಿಚಯಿಸಿತು

1943: ಇತಿಹಾಸದಲ್ಲಿ ಅತಿದೊಡ್ಡ ಟ್ಯಾಂಕ್ ಯುದ್ಧವಾದ ಕರ್ಸ್ಕ್ ಯುದ್ದವು ಆರಂಭವಾಯಿತು.

1946: ಮಾಜಿ ಸಿವಿಲ್ ಎಂಜಿನಿಯರ್ ಲೂಯಿಸ್ ರೀಯರ್ಡ್ ರಚಿಸಿದ ಬಿಕಿನಿ (ಈಜುವಾಗ ಧರಿಸುವ ಉಡುಪು)ಯನ್ನು ಪ್ಯಾರಿಸ್ಸಿನ ಫ್ಯಾಷನ್ ಪ್ರದರ್ಶನದಲ್ಲಿ ಮೊದಲ ಬಾರಿಗೆ ಪ್ರದರ್ಶನವಾಯಿತು.

1954: ಬಿಬಿಸಿ ತನ್ನ ಮೊದಲ ದೂರದರ್ಶನದ ಸುದ್ಧಿಯನ್ನು ಪ್ರಕಟಿಸಿತು.

1983: ಮಿದುಳು ಸತ್ತ ಮಹಿಳೆ 84 ದಿನಗಳ ನಂತರ ಮಗುವಿಗೆ ಜನ್ಮ ನೀಡಿದರು.

1994: ಕಿರಣ ಬೇಡಿಯವರಿಗೆ ರೇಮನ್ ಮೆಗಾಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1994: ಜೆಫ್ ಬೆಜಾಸ್ ವಾಷಿಂಗ್ಟನ್ನಿನಲ್ಲಿ “ಅಮೇಜಾನ್.ಕಾಮ್” ಸಂಸ್ಥೆಯನ್ನು ಸ್ಥಾಪಿಸಿದರು.

1996: ಎಡಿನ್ಬರ್ಗ್ ಸ್ಕಾಟ್ಲಾಂಡಿನಲ್ಲಿ ಪ್ರನಾಶಶಿಶು -ಅಬೀಜ ಕುರಿಮರಿ ಡಾಲಿ ಜನಿಸಿತು.

2003: 29 ರಾಷ್ಟ್ರಗಳಲ್ಲಿ 775 ಜನರನ್ನು ಕೊಂದಿದ್ದ ಪ್ರಾಣಾಂತಿಕ SARS (ತೀವ್ರ ತೀವ್ರವಾದ ಉಸಿರಾಟದ ಸಿಂಡ್ರೋಮ್) ಅನ್ನು ವಿಶ್ವ ಆರೋಗ್ಯ ಸಂಸ್ಥೆ ಅಸ್ತಿತ್ವದಲ್ಲಿದೆ ಎಂದು ಘೋಷಿಸಿತು.

2012: ಯೂರೋಪಿನ ಅತ್ಯಂತ ಎತ್ತರದ ಕಟ್ಟಡವಾದ (1016 ಅಡಿ) “ದಿ ಶಾರ್ಡ್” ಲಂಡನ್ನಿನಲ್ಲಿ ತೆರೆಯಿತು.

2012:ಟೋಕಿಯೋದ ಯುಯೆನೋ ಮೃಗಾಲಯದ ಆರು ವರ್ಷದ ದೈತ್ಯ ಪಾಂಡ ಶಿನ್ ಶಿನ್ ಮರಿ ಪಾಂಡಾಗೆ ಜನ್ಮ ನೀಡಿತು.

2013: ಭಾರತದ ರಾಷ್ಟ್ರಪತಿ ಪ್ರಣಾಬ್ ಮುಖರ್ಜಿ ದೇಶದ ಜನಸಂಖ್ಯೆಯ ಮೂರನೇ ಎರಡಷ್ಟು ಭಾಗವನ್ನು ಆಹಾರ ದಹಕ್ಕು ನೀಡುವಆಹಾರ ಭದ್ರತೆ ಕಾಯಿದೆಗೆ ಸಹಿ ಹಾಕಿದರು.

ಪ್ರಮುಖ ಜನನ/ಮರಣ:

1522: ಸ್ಪಾನಿಷ್ ವಿದ್ವಾಂಸರಾದ ಆಂಟೋನಿಯೋ ಡೆ ನೆಬ್ರಿಜಾ ನಿಧನರಾದರು. ಅವರ ಕೃತಿ ಲ್ಯಾಟಿನ್ ಭಾಷೆಯಲ್ಲಿ ಬರೆದ ಸ್ಪಾನಿಷ್ ವ್ಯಾಕರಣವನ್ನು ಒಳಗೊಂಡಿದೆ.

1781: ಸಿಂಗಾಪೂರ್ ದೇಶದ ಸಂಸ್ಥಾಪಕರಾದ ಸ್ಟಾಂಫೋರ್ಡ್ ರಾಫಲ್ಸ್ ಜನಿಸಿದರು.

1794: ಸಸ್ಯಾಹಾರಕ್ಕೆ ಒತ್ತು ನೀಡಿದ ಅಮೇರಿಕಾದ ಪೌಷ್ಟಿಕಾಂಶದ ಸುಧಾರಕರಾಗಿದ್ದ ಸಿಲ್ವೆಸ್ಟರ್ ಗ್ರಹಮ್ ಜನಿಸಿದರು.

1833: ಛಾಯಾಗ್ರಹಣದ ಸಂಶೋಧಕ ಫ್ರೆಂಚ್ ದೇಶದ ಜೋಸೆಫ್ ನೈಸ್ಫೋರ್ ನಿಧನರಾದರು.

1904: ಆಧುನಿಕ ವಿಕಾಸಾತ್ಮಕ ಸಂಶ್ಲೇಷಣೆಯನ್ನು ಪ್ರತಿಪಾದಿಸಿದ ಅರ್ನಸ್ಟ್ ಮೇಯರ್ ಜನಿಸಿದರು.

 

Categories
e-ದಿನ

ಜುಲೈ-4

 

ಪ್ರಮುಖ ಘಟನಾವಳಿಗಳು:

1776: ಎರಡನೇ ಕಾಂಟಿನೆಂಟಲ್ ಕಾಂಗ್ರೆಸ್ಸಿಗಾಗಿ ಜನಪ್ರಿಯ ದಂತಕಥೆಯ ಪ್ರಕಾರ ಲಿಬರ್ಟಿಯ ಗಂಟೆಯನ್ನು ಬಾರಿಸಲಾಯಿತು.

1785: ಜೇಮ್ಸ್ ಹಟ್ಟನ್, ಭೂವಿಜ್ಞಾನಿ ಸಾರ್ವಜನಿಕವಾಗಿ ಎಡಿನ್ಬರ್ಗ್ ರಾಯಲ್ ಸೊಸೈಟಿಯ ಸಭೆಯಲ್ಲಿ ಮೊದಲ ಬಾರಿಗೆ ಏಕರೂಪತಾವಾದದ ಸಿದ್ಧಾಂತವನ್ನು ಓದಿದರು.

1789: ಮೊದಲ ಅಮೇರಿಕಾದ ಸುಂಕದ ಕಾಯ್ದೆ ಜಾರಿಗೆ ತರಲಾಯಿತು.

1802: ಅಮೇರಿಕಾದ ಸೇನೆಯ ಅಕಾಡೆಮಿ ಅಧಿಕೃತವಾಗಿ ತೆರೆಯಿತು.

1817: ಮುಖ್ಯ ಇಂಜಿನಿಯರ್ ಆಗಿದ್ದ ಜೇಮ್ಸ್ ಗೆಡ್ಡೆಸ್ ಎರಿ ಕಾಲುವೆಯ ಮೇಲೆ ನಿರ್ಮಾಣವನ್ನು ಆರಂಭಿಸಿದರು, ಇದು ಉತ್ತರ ಅಮೇರಿಕಾದ ಮೊದಲ ಶ್ರೇಷ್ಠ ಇಂಜನಿನಿಯರಿಂಗ್ ಕೃತಿಗಳಲ್ಲಿ ಒಂದಾಗಿದೆ.

1876: ಸ್ಯಾನ್ ಫ್ರಾನ್ಸಿಸ್ಕೋದ ವಿದ್ಯುತ್ ಬೆಳಕನ್ನು ಮೊದಲ ಬಾರಿಗೆ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಯಿತು.

1884: ಅಮೇರಿಕಾದ ಮೊದಲ ಗೂಳಿಕಾಳಗ (ಬುಲ್ ಫೈಟ್) ಪಂದ್ಯಾವಳಿ ನಡೆಯಿತು.

1911: ನ್ಯೂಯಾರ್ಕ್, ಫಿಲಡೆಲ್ಫಿಯಾ ಮತ್ತು ಇತರ ಹಲವು ನಗರಗಳೂ ಸೇರಿದಂತೆ ಈಶಾನ್ಯ ಅಮೇರಿಕಾದಲ್ಲಿ ಮಾರಣಾಂತಿಕ ಶಾಖ ತರಂಗದಿಂದ 380ಜನರು ನಿಧನರಾದರು.

1914: ಅಮೇರಿಕಾದಲ್ಲಿ ಮೊದಲ ಮೋಟಾರ್ ಸೈಕಲ್ ರೇಸ್ ನಡೆಯಿತು.

1946: ಫಿಲಿಪೀನ್ಸ್ ಅಮೇರಿಕಾದ ಸಾರ್ವಭೌಮತ್ವದ 48 ವರುಷಗಳ ನಂತರ ಸ್ವಯಂ ಆಡಳಿತ ರಾಷ್ಟ್ರವಾಯಿತು.

1959: ಅಲಸ್ಕಾದ ಹೊಸ ರಾಜ್ಯವನ್ನು ಪ್ರತಿನಿಧಿಸಲು 49ನೇ ನಕ್ಷತ್ರವನ್ನು ಅಮೇರಿಕಾದ ಧ್ವಜದಲ್ಲಿ ಅಳವಡಿಸಲಾಯಿತು.

1960: ಹವಾಯಿಯ ಹೊಸ ರಾಜ್ಯವನ್ನು ಪ್ರತಿನಿಧಿಸಲು 50ನೇ ನಕ್ಷತ್ರವನ್ನು ಅಮೇರಿಕಾದ ಧ್ವಜದಲ್ಲಿ ಅಳವಡಿಸಲಾಯಿತು.

1976: ಬ್ರಿಟೀಶರ ಆಳ್ವಿಕೆಯಿಂದ ಅಮೇರಿಕಾ ಸ್ವತಂತ್ರವಾಗಿ 200ನೇ ಜನ್ಮದಿನವನ್ನು ಆಚರಿಸಲಾಯಿತು.

1996: ಉಚಿತ ಇಂಟರ್ ನೆಟ್ ಇ-ಮೇಲ್ ಸೇವೆಯಾದ “ಹಾಟ್ಮೇಲ್” ಆರಂಭವಾಯಿತು.

2008: ಆರು ದಶಕಗಳ ನಂತರ ಚೀನಾ ಮತ್ತು ತೈವಾನ್ ನಡುವೆ ನಿಯಮಿತವಾಗಿ ಸಂಭವಿಸುವ ಮೊದಲ ನೇರ ವಿಮಾನದ ಹಾರಾಟವಾಯಿತು.

2012: ಸರ್ನ್ ಲ್ಯಾಬೊರೇಟರಿಯ ವಿಜ್ಞಾನಿಗಳು ಹಿಗ್ಸ್ ಬೋಸನ್ ಅನ್ನು ಹೋಲುವಂತ ನೂತನ ಬೋಸಾನ್ (ದ್ರವ್ಯರಾಶಿಯನ್ನು ಹೇಗೆ ಪಡೆಯುತ್ತದೆ ಎಂದು ವಿವರಿಸಲು ಸಹಾಯ ಮಾಡುವ ಒಂದು ಕಣ) ಕಂಡುಹಿಡಿದಿದ್ದಾರೆ ಎಂದು ಘೊಷಿಸಿದರು.

2013: ಬ್ರೆಜಿಲ್ಲಿನಲ್ಲಿ ವಿಜ್ಞಾನಿಗಳು ಒಂದು ನಾಣ್ಯದ ಗಾತ್ರದ ಮತ್ತು ತೂಕದಲ್ಲಿ ಒಂದು ಗ್ರಾಂಗಿಂತ ಕಡಿಮೆ ಇರುವ ಹೊಸ ಹಲ್ಲಿಗಳ ಜಾತಿಯನ್ನು ಕಂಡರು.

ಪ್ರಮುಖ ಜನನ/ಮರಣ:

ಇಟಾಲಿಯನ್ ಜೆನೆರಲ್ ಮತ್ತು ರಾಷ್ಟ್ರೀಯತಾವಾದಿ, ಇಟಲಿಯನ್ನು ಏಕೀಕರಿಸುವಲ್ಲಿ ಸಹಾಯ ಮಾಡಿದ ಜಿಯುಸೆಪ್ಪಿ ಗಾರಿಬಾಲ್ಡಿ ಜನಿಸಿದರು.

1898: ಭಾರತದ ಮಾಜಿ ಪ್ರಧಾನ ಮಂತ್ರಿ ಆಗಿದ್ದ ಗುಲ‌ಜಾರಿಲಾಲ್ ನಂದಾ ಪಂಜಾಬಿನಲ್ಲಿ ಜನಿಸಿದರು.

1921: ಪೂರೈಕೆ ಮತ್ತು ಬೇಡಿಕೆಯಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಅರ್ಥಶಾಸ್ತ್ರಜ್ಞ ಗೆರಾಡ್ ದೆಬ್ರು ಜನಿಸಿದರು.

1924: ನೇಪಾಳದ ಮಾಜಿ ಪ್ರಧಾನಿ ಗಿರಿಜಪ್ರಸಾದ್ ಕೊಯಿರಾಲಾ ಭಾರತದ ಬಿಹಾರಿನಲ್ಲಿ ಜನಿಸಿದರು.

 

Categories
e-ದಿನ

ಜುಲೈ-3

 

ಪ್ರಮುಖ ಘಟನಾವಳಿಗಳು:

1608: ಸಾಮ್ಯುಯೆಲ್ ಡಿ ಚಾಂಪ್ಲೇನ್ ಕ್ಯೂಬೆಕ್ ನಗರವನ್ನು ಕಂಡುಹಿಡಿದರು.

1630: ಮಹಾರಾಜ ಫರ್ಡಿನಂಡ್ II ಜರ್ಮನಿಯ ಸಂಸತ್ತನ್ನು ಆರಂಭಿಸಿದರು.

1767: ನಾರ್ವೇಯ ಮೊದಲ ಪತ್ರಿಕೆಯಾದ ಅಡ್ರೆಸಿವಿಸೆನ್ನಿನ ಮೊದಲ ಮುದ್ರಣ ಮಾಡಲಾಯಿತು.

1775: ಅಮೇರಿಕಾ ಜೆನೆರಲ್ ಜಾರ್ಜ್ ವಾಷಿಂಗ್ಟನ್ ಕೇಂಬ್ರಿಡ್ಜಿನಲ್ಲಿ ಕಾಂಟಿನೆಂಟಲ್ ಸೈನ್ಯದ ಮೇಲೆ ಆಜ್ಞೆಯನ್ನು ವಹಿಸಿಕೊಂಡರು

1790: ಪ್ಯಾರೀಸಿನಲ್ಲಿ ಕಾಂಡೋರ್ಸೆಟ್ಟಿನ ಮಾರ್ಕ್ವಿಸ್ ಮಹಿಳೆಯರಿಗೆ ನಾಗರೀಕ ಹಕ್ಕುಗಳನ್ನು ನೀಡುವಂತೆ ಪ್ರಸ್ಥಾಪಿಸಿದರು.

1806: ಮೈಕಲ್ ಕೀನ್ಸ್ ಮೊದಲ ಬೆಳೆಸಿದ ಸ್ಟ್ರಾಬೆರಿಯನ್ನು ಪ್ರದರ್ಶಿಸಿದರು.

1819: ಅಮೇರಿಕಾದ ಮೊದಲ ಉಳಿತಾಯ ಬ್ಯಾಂಕ್ ತೆರೆಯಲಾಯಿತು.

1871: ದಿ ಡೆನ್ವರ್ ಮತ್ತು ರಿಯೋ ಗ್ರಾಂಡ್ ವೆಸ್ಟರ್ನ್ ರೈಲ್ ರೋಡ್ ಸಂಸ್ಥೆಯು ಮೊದಲ ನ್ಯಾರೋ-ಗೇಜ್ ಲೋಕೋಮೋಟಿವ್ ಅನ್ನು ಪರಿಚಯಿಸಿದರು. ಅದನ್ನು “ಮಾಂಟೆಝೂಮ” ಎಂದು ಕರೆಯಲಾಯಿತು.

1880: ಥಾಮಸ್ ಎಡಿಸನ್ ಅವರ ಧನಸಹಾಯದಿಂದ “ಸೈನ್ಸ್” ಪುಸ್ತಕದ ಮುದ್ರಣ ಆರಂಭವಾಯಿತು.

1903: ಪೆಸಿಫಿಕ್ ಸಾಗರಾದ್ಯಂತದ ಮೊದಲ ಕೇಬಲ್ ಹೊನೊಲುಲು, ಮಿಡ್ವೆ, ಗುವಾಂ ಮತ್ತು ಮನಿಲಾದ ನಡುವೆ ವಿಭಜನೆಯಾಯಿತು.

1908: ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ಅವರನ್ನು ದೇಶದ್ರೋಹ ಅಪಾದನೆಯ ಮೇರೆಗೆ ಬ್ರಿಟೀಷರು ಬಂಧಿಸಿದರು.

1924: ಕ್ಲಾರೆನ್ಸ್ ಬರ್ಡ್ಸ್ಐ ಜೆನೆರಲ್ ಸೀಫುಡ್ ಸಂಸ್ಥೆಯನ್ನು ಸ್ಥಾಪಿಸಿದರು.

1928: ಜಾನ್ ಲೋಗಿ ಬೈರ್ಡ್ ಲಂಡನ್ನಿನಲ್ಲಿ ಮೊದಲ ಬಣ್ಣದ ಟೆಲಿವಿಷನ್ ಪ್ರಸರಣವನ್ನು ಪ್ರದರ್ಶಿಸಿದರು.

1929: ಡನ್ಲಾಪ್ ಲೇಟೆಕ್ಸ್ ಡೆವೆಲಪ್ಮೆಂಟ್ ಲಾಬರೇಟರಿಸ್ ಫೋಮ್ ರಬ್ಬರನ್ನು ತಯಾರಿಸಿದರು.

1934: ಯು.ಎಸ್. ಫೆಡರಲ್ ಡೆಪಾಸಿಟ್ ಇನ್ಶುರೆನ್ಸ್ ಕಾರ್ಪರೇಷನ್ (FDIC) ತನ್ನ ಮೊದಲ ಪಾವತಿಯನ್ನು ಲಿಡಿಯಾ ಲೋಸಿಗರ್ ಅವರಿಗೆ ಮಾಡಿತು.

1952: ವೇಯ್ನ್ ಸ್ಟೇಟ್ ಯೂನಿವರ್ಸಿಟಿಯ ವೈದ್ಯರಾದ ಡಾ.ಫಾರೆಸ್ಟ್ ಡೆವೆ ಡೊಡ್ರಿಲ್ ಡೆಟ್ರಾಯಿಟ್ಸ್ ಹಾರ್ಪರ್ ಆಸ್ಪತ್ರೆಯಲ್ಲಿ ರೋಗಿಯ ಮೇಲೆ ಕಾರ್ಯನಿರ್ವಹಿಸಲು ಯಾಂತ್ರಿಕ ಹೃದಯ ಪಂಪನ್ನು ಬಳಸಿದರು. ತೆರೆದ ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಯಾಂತ್ರಿಕ ಪಂಪ್ ಅನ್ನು ವಿಶ್ವದ ಮೊದಲ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗಿದೆ.

1977: ರೇಮಂಡ್ ಡ್ಯಾಮಾಡಿಯನ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಂ ಆರ್ ಐ) ಬಳಸಿ ಮಾನವ ಎದೆಯ ಮೊದಲ ಚಿತ್ರವನ್ನು ನಿರ್ಮಿಸಿದರು

1993: ಜರ್ಮನಿಯ ಸ್ಟೆಫಿ ಗ್ರಾಫ್ ಸತತ ಮೂರನೇ ವಿಂಬಲ್ಟನ್ ಪ್ರಶಸ್ತಿ ಪಡೆದರು

2014: ಜರ್ಮನಿ ಮೊದಲ ಕನಿಷ್ಟ ವೇತನ ಕಾನೂನನ್ನು ರಾಜ್ಯಾದಂತ ಜಾರಿಗೆ ತಂದಿತು.

ಪ್ರಮುಖ ಜನನ/ಮರಣ:

1912: ಕಾದಂಬರಿಕಾರ್ತಿ, ಮತ್ತು ಸಣ್ಣ ಕತೆಗಾರ್ತಿ ಎಲಿಜಿಬತ್ ಟೈಲರ್ ಜನಿಸಿದರು.

1930: ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಕರ್ನಾಟಕದ ಮಾಜಿ ಲೋಕಾಯುಕ್ತ ಎನ್ ವೆಂಕಟಾಚಲ ಜನಿಸಿದರು.

1980: ಭಾರತೀಯ ಕ್ರಿಕೆಟ್ ಆಟಗಾರರಾದ ಹರಭಜನ್ ಸಿಂಗ್ ಜನಿಸಿದರು

 

Categories
e-ದಿನ

ಜುಲೈ-2

 

ಪ್ರಮುಖ ಘಟನಾವಳಿಗಳು:

1505 : ಚಂಡಮಾರುತವನ್ನು ಎದುರಿಸಿದ ನಂತರ ಮಾರ್ಟಿನ್ ಲೂಥರ್ ಸನ್ಯಾಸಿಯಾಗುವುದಾಗಿ ಘೋಷಿಸಿದರು.

1698: ಮೊದಲ ಉಗಿಯಂತ್ರಕ್ಕೆ ಥಾಮಸ್ ಸೇವರಿ ಪೇಟೆಂಟ್ ಪಡೆದರು.

1777: ವರ್ಮಾಂಟ್ ಗುಲಾಮಗಿರಿಯನ್ನು ನಿಷೇಧಿಸಿದ ಅಮೇರಿಕಾದ ಮೊದಲ ವಸಾಹತು.

1843: ಚಾರ್ಲ್ಸನ್ ದಕ್ಷಿಣ ಕಾರೋಲಿನಾದ ಚಂಡಮಾರುತದ ಸಮಯದಲ್ಲಿ ಮೊಸಳೆಯೊಂದು ಆಕಾಶದಿಂದ ಬಿದ್ದಿತ್ತು.

1850: ಉಸಿರಾಟದ ಉಪಕರಣ ಹೊಂದಿರುವ ಅನಿಲ ಮುಖವಾಡಕ್ಕೆ ಬೆಂಜಮಿನ್ ಲೇನ್ ಪೇಟೆಂಟ್ ಪಡೆದರು.

1862: ರಾಜ್ಯ ಕೃಷಿ ಕಾಲೇಜುಗಳಿಗೆ ಭೂಮಿಯನ್ನು ನೀಡುವ ಒಪ್ಪಂದಕ್ಕೆ ಲಿಂಕನ್ ಸಹಿ ಹಾಕಿದರು.

1867: ಅಮೇರಿಕಾದಲ್ಲಿ ಮೊದಲ ಎತ್ತರಿಸಿದ ರೈಲು ರಸ್ತೆಯ ಸೇವೆಯನ್ನು ನ್ಯೂಯಾರ್ಕಿನಲ್ಲಿ ಆರಂಭಿಸಲಾಯಿತು.

1916: ಬಂಡವಾಳ ಶಾಹಿತ್ವದಿಂದ ಸಾಮ್ರಾಜ್ಯಶಾಹಿತ್ವ ಉಂಟಾಗುತ್ತದೆ ಎಂದು ಲೆನಿನ್ ಹೇಳಿದರು.

1940: ಸಿಯಾಟೆಲ್ಲಿನ ಲೇಕ್ ವಾಷಿಂಗ್ಟನ್ನಿನ ಮೇಲೆ ಇರುವ ತೇಲುವ ಸೇತುವೆಯನ್ನು ಸಮರ್ಪಣೆ ಮಾಡಲಾಯಿತು.

1940: ಭಾರತದ ಸ್ವಾತಂತ್ರ ನಾಯಕ ಸುಭಾಷ್ ಚಂದ್ರ ಬೋಸ್ ಅವರನ್ನು ಕಲ್ಕತ್ತಾದಲ್ಲಿ ಬಂಧಿಸಲಾಯಿತು.

1951: ಲೀಡ್ಸ್ ಖಗೋಳಶಾಸ್ತ್ರಜ್ಞರು ಕ್ಷೀರ ಪಥ ವ್ಯವಸ್ಥೆಯಿಂದ ರೇಡಿಯೋ ಸಿಗ್ನಲನ್ನು ಪತ್ತೆ ಮಾಡಿದರು.

1952: ಯುವರಾಣಿ ಬಿಟ್ರಿಸ್ ಮಡುರೋಡಮ್ಮಿನ ಚಿಕಣಿ ನಗರವನ್ನು ಉದ್ಘಾಟಿಸಿದರು.

1957: ಮಾರ್ಗದರ್ಶಿ ಕ್ಷಿಪಣಿಗಳನ್ನು ಉಡಾಯಿಸಲು ಮೊದಲ ಜಲಾಂತರ್ಗಾಮಿಯನ್ನು ವಿನ್ಯಾಸಗೊಳಿಸಲಾಯಿತು.

958: ಅಮೇರಿಕಾ ಬಿಕಿನಿ ದ್ವೀಪದಲ್ಲಿ ವಾತಾವರಣದ ಪರಮಾಣು ಪರೀಕ್ಷೆಯನ್ನು ನಡೆಸಿತು.

1967: ಕ್ಯಾಥೆರೀನ್ ಲಕೊಸ್ಟೆ ಅಮೇರಿಕಾದ ಮಹಿಳಾ ಮುಕ್ತ ಗಾಲ್ಫ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಮೊದಲ ಅತ್ಯಂತ ಕಿರಿಯ, ವಿದೇಶಿ ಮತ್ತು ಹವ್ಯಾಸಿ ಆಟಗಾತಿಯಾಗಿದರು.

1972: ಭಾರತದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕಾರ್ ಅಲಿ ಭುಟ್ಟೊ ಅವರು ಶಿಮ್ಲಾ ಒಪ್ಪಂದಕ್ಕೆ ಸಹಿ ಮಾಡಿದರು.

1976: ಉತ್ತರ ಮತ್ತು ದಕ್ಷಿಣ ವಿಯೆಟ್ನಂ ಅಧಿಕೃತವಾಗಿ ಪುನಃ ಏಕೀಕರಣವಾಯಿತು.

1976: ಸರ್ವೊಚ್ಛ ನ್ಯಾಯಾಲಯವು ಮರಣದಂಡನೆ ಅಂತರ್ಗತವಾಗಿ ಕ್ರೂರ ಅಥವಾ ಅಸಾಮಾನ್ಯವಲ್ಲ ಎಂದು ನಿರ್ಣಯಿಸಿತು.

1990: ಮೆಕ್ಕಾದ ಸುರಂಗದಲ್ಲಿ ಕಾಲ್ತುಳಿತದಿಂದಾಗಿ 1426 ಯಾತ್ರಿಗಳು ಸಾವನ್ನಪ್ಪಿದರು.

1992: ಬ್ರಾನಿಫ್ ವಿಮಾನ ಸಂಸ್ಥೆಯು ವ್ಯಾಪಾರವಿಲ್ಲದೆ ನಷ್ಟದಲ್ಲಿ ಮುಳುಗಿತು.

ಪ್ರಮುಖ ಜನನ/ಮರಣ:

1757: ಮುಹಮದ್ ಬೇಗ್ ನವಾಬ ಸಿರಾಜ್-ಉದ್-ದೌಲಾನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದರು.

1905: ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಶಾಂತಿಸ್ವರೂಪ್ ಧವನ್ ಜನಿಸಿದರು.

1926: ಸಾಮಾಜಿಕ ಸುಧಾರಕ, ರಾಜಕಾರಣಿ ಮತ್ತು ನಾಯಕರಾದ ರಾಮ್ ಸೇವಕ್ ಯಾದವ್ ಉತ್ತರ ಪ್ರದೇಶದ ತಾಲಾ ಗ್ರಾಮದಲ್ಲಿ ಜನಿಸಿದರು.

1928: ಹಿರಿಯ ಒಡಿಯಾ ಕವಿ ನಂದಕಿಶೋರ್ ಬಾಲ್ ನಿಧನರಾದರು.

1929: ಪ್ರಖ್ಯಾತ ಬೆಂಗಾಲಿ ಚಿತ್ರಕಥೆಕಾರರಾಗಿದ್ದ ಅಮೃತಲಾಲ್ ಬಸು ನಿಧನರಾದರು.

 

Categories
e-ದಿನ

ಜುಲೈ-1

 

ಪ್ರಮುಖ ಘಟನಾವಳಿಗಳು:

1200: ಚೀನಾದಲ್ಲಿ “ಸನ್ ಗ್ಲಾಸ್” ಗಳನ್ನು ಕಂಡುಹಿಡಿಯಲಾಯಿತು.

1776: ಬ್ರಿಟನ್ನಿನ ಉತ್ತರ ಅಮೇರಿಕನ್ ವಸಾಹತುಗಳಿಗೆ ಸ್ವಾತಂತ್ರ್ಯದ ಘೋಷಣೆಯನ್ನು ಮತಕ್ಕೆ ಹಾಕಲಾಯಿತು.

1820: ಕರಿಯರ್ ಡೆ ಲಾ ಮ್ಯುಸ್ ಪತ್ರಿಕೆಯ ಮೊದಲ ಆವೃತ್ತಿ ಪ್ರಕಟವಾಯಿತು.

1831: ಅಡ್ಮಿರಲ್ ಜೇಮ್ಸ್ ಸಿ ರಾಸ್ ಕಾಂತೀಯ ಉತ್ತರ ಧ್ರುವವನ್ನು ತಲುಪಿದರು.

1839: ಮಹಮುದ್ II ರ ನಂತರ ಅಬ್ದುಲ್ ಮೆದ್ಜಿದ್ ಟರ್ಕಿಯ ಮುಂದಿನ ಸುಲ್ತಾನನಾಗಿ ಅಧಿಕಾರ ವಹಿಸಿಕೊಂಡರು.

1858: ಮೊದಲ ಕೆನೆಡಿಯನ್ 1,5,10 ಮತ್ತು 20 ಸೆಂಟ್ ಕಾಯಿನ್ನುಗಳನ್ನು ಮುದ್ರಿಸಲಾಯಿತು.

1858: ಚಾರ್ಲ್ಸ್ ಡಾರ್ವಿನ್ ಹಾಗೂ ಆಲ್ಫ್ರೆಡ್ ರಸ್ಸಲ್ ವಾಲ್ಲೇಸ್ ಸೇರಿ ಲಿನ್ನಿಯನ್ ಸಮಾಜದ ವಿಕಸನದ ಬಗ್ಗೆ ಪತ್ರ ಮಂಡಿಸಿದರು.1859: ಮೊದಲ ಅಂತರ ಕಾಲೇಜು ಬೇಸ್ ಬಾಲ್ ಪಂದ್ಯಾವಳಿ ನಡೆಯಿತು.

1862: ರಾಜ ಅಲೆಕ್ಸಾಂಡರ್ II ಯಹೂದಿಗಳಿಗೆ ಪುಸ್ತಕಗಳನ್ನು ಪ್ರಕಟಿಸುವ ಹಕ್ಕು ನೀಡಿದರು.

1862: ರಷ್ಯಾದ ರಾಜ್ಯ ಗ್ರಂಥಾಲಯವನ್ನು ಸ್ಥಾಪಿಸಲಾಯಿತು.

1863: ಸುರಿನಾಮ್ ಮತ್ತು ಡಚ್ ಆಂಟಿಲ್ಸಿನಲ್ಲಿ ಗುಲಾಮಗಿರಿಯನ್ನು ನಿಷೇಧಿಸಲಾಯಿತು.

1869: ಡಚ್ ದಿನಪತ್ರಿಕೆಯ ಅಂಚೆಚೀಟಿಯ ತೆರಿಗೆಯನ್ನು ರದ್ದುಪಡಿಸಲಾಯಿತು.

1869: ನೆವಾಡದ ಕಾರ್ಸನ್ ನಗರದಲ್ಲಿ ಅಮೇರಿಕಾದ ಮುದ್ರಣಾಲಯ ತೆರೆಯಿತು.

1871: ಕೆನಡಾದ ಎಲ್ಲೆಡೆ ಏಕರೀತಿಯ ದಶಾಂಶ ಕರೆನ್ಸಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

1874: ಮೊದಲ ಬಾರಿಗೆ ಬಾಲ ಕಾರ್ಮಿಕ ಪದ್ದತಿಯ ವಿರುದ್ಧ ಕಾನೂನನ್ನು ಜಾರಿಗೆ ತರಲಾಯಿತು.

1874: ಅಮೇರಿಕಾದ ಮೊದಲ ಪಶುಸಂಗ್ರಹಾಲಯ ಫಿಲಾಡೆಲ್ಫಿಯಾದಲ್ಲಿ ತೆರೆಯಿತು.

1875: ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪಿಸಲಾಯಿತು.

1881: ಮೊದಲ ಅಂತರರಾಷ್ಟ್ರೀಯ ದೂರವಾಣಿ ಸಂಭಾಷಣೆಯನ್ನು ಮಾಡಲಾಯಿತು.

1905: ಆಲ್ಬರ್ಟ್ ಐನ್ಸ್ಟೈನ್ ತಮ್ಮ ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸಿದರು.

1920: ಜರ್ಮನಿ ರಾಷ್ಟ್ರದ ಒಟ್ಟು ಸಾಲ 200 ಶತಕೋಟಿಗಳೆಂದು ಘೋಷಿಸಿತು.

1929: ಅಮೇರಿಕಾದ ಕಾರ್ಟೂನಿಸ್ಟ್ ಎಲ್ಜಿ ಸೇಗರ್ “ಪಾಪಯ್” ಕಾರ್ಟೂನನ್ನು ಸೃಷ್ಟಿಸಿದರು.

1963: ಅಮೇರಿಕಾದ ಅಂಚೆ ಕಛೇರಿಯು ಅಂಚೆ ಮೇಲ್ವಿಚಾರಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯವಾಗುವಂತೆ ಪ್ರತಿಯೊಬ್ಬರಿಗೂ ತಮ್ಮ ವಿಳಾಸಗಳಲ್ಲಿ ಜಿಪ್ ಕೋಡುಗಳನ್ನು ಬಳಸಲು ಸೂಚಿಸಿತು.

1997: 156 ವರ್ಷಗಳ ನಂತರ ಬ್ರಿಟೀಷರು ಹಾಂಗ್ ಕಾಂಗನ್ನು ಮತ್ತೆ ಚೀನಿಯರಿಗೆ ಮರಳಿಸಿದರು. ತುಂಗ್-ಚೀ-ವಾ ನೂತನ ನಾಯಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮುಖ ಜನನ/ಮರಣ:

1909: ಸ್ವತಂತ್ರ ಹೋರಾಟಗಾರರಾದ ಮದನಲಾಲ್ ಧಿಂಗ್ರಾ ಅವರನ್ನು ಸರ್ ಕರ್ಜನ್ ವಿಲ್ಲಿಯನ್ನು ಹತ್ಯೆ ಮಾಡಿದರು.

1927: ಭಾರತದ 8ನೇ ಪ್ರಧಾನ ಮಂತ್ರಿಯಾಗಿದ್ದ ಚಂದ್ರಶೇಖರ ಜನಿಸಿದರು.

1938: ಭಾರತದ ಪ್ರಖ್ಯಾತ ಕೊಳಲುವಾದಕರಾದ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅಲಹಬಾದಿನಲ್ಲಿ ಜನಿಸಿದರು.

1961: ಭಾರತದ ಮೊದಲ ಮಹಿಳಾ ಗಗನಯಾತ್ರಿ ಲೇಟ್ ಶ್ರೀಮತಿ ಕಲ್ಪನಾ ಚಾವ್ಲಾ ಜನಿಸಿದರು.

 

Categories
e-ದಿನ

ಜೂನ್-23

 

ಪ್ರಮುಖ ಘಟನಾವಳಿಗಳು:

930 AD: ವಿಶ್ವದ ಅತ್ಯಂತ ಪುರಾತನ ಸಂಸತ್ತಾದ ಐಸ್ಲಾಂಡಿಕ್ ಸಂಸತ್ತನ್ನು ಸ್ಥಾಪಿಸಲಾಯಿತು.

1661: ಇಂಗ್ಲೆಂಡಿನ ಚಾರ್ಲ್ಸ್ II ಮತ್ತು ಪೋರ್ಚುಗಲ್ಲಿನ ಕ್ಯಾಥರೀನ್ ಅವರ ಮದುವೆಯ ಒಪ್ಪಂದವನ್ನು ಮಾಡಲಾಯಿತು.

1775: ಮೊದಲ ವಿಹಾರ ನೌಕಾ ಪಂದ್ಯವನ್ನು ಥೇಮ್ಸ್ ನದಿಯ ಮೇಲೆ ನಡೆಸಲಾಯಿತು.

1784: ಮೊದಲ ಬಲ್ಲೂನ್ ಯಾನವನ್ನು 13 ವರ್ಷದ ಎಡ್ವರ್ಡ್ ವಾರೆನ್ ಅವರು ಆರಂಭ ಮಾಡಿದರು.

1860: ಅಮೇರಿಕಾದ ಕಾಂಗ್ರೆಸ್ ಸರ್ಕಾರಿ ಮುದ್ರಣಾಲಯ ಕಛೇರಿಯನ್ನು ಸ್ಥಾಪಿಸಿತು.

1868: “ಟೈಪ್ ರೈಟರ್” ಅನ್ನು ಕ್ರಿಸ್ಟೋಫರ್ ಲಥಮ್ ಶೋಲ್ಸ್ ಪೇಟೆಂಟ್ ಪಡೆದರು.

1894: ಅಂತರರಾಷ್ಟ್ರೀಯ ಒಪಂಪಿಕ್ ಸಮಿತಿಯನ್ನು ಪ್ಯಾರೀಸಿನಲ್ಲಿ ಸ್ಥಾಪಿಸಲಾಯಿತು.

1917: ಬೊಹೆಮಿಯಾದಲ್ಲಿ ಸಿಡಿಮದ್ದು ತಯಾರಿಸುವ ಕಾರಖಾನೆಯು ಸಿಡಿದು ಸುಮಾರು 1000 ಜನರು ಮೃತಪಟ್ಟರು.

1938: ಸಿವಿಲ್ ಏರೊನಾಟಿಕ್ಸ್ ಅಥಾರಿಟಿ ಸ್ಥಾಪಿಸಲಾಯಿತು.

1949: ಮೊದಲ 12 ಮಹಿಳೆಯರು ಹಾರ್ವರ್ಡಿನ ವೈದ್ಯ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದರು.

1950: ಸ್ವಿಸ್ ಸಂಸತ್ತು ಮಹಿಳೆಯರ ಮತದಾನದ ಹಕ್ಕನ್ನು ತಿರಸ್ಕರಿಸಿತು.

1972: ಚಂಡಮಾರುತ ಆಗ್ನೇಸ್ ಅಮೇರಿಕಾದ ಭಾರಿ ದುಬಾರಿ ನೈಸರ್ಗಿಕ ವಿಕೋಪವಾಗಿದ್ದು 119 ರಾಜ್ಯಗಳು, 3 ಶತಕೋಟಿ ಡಾಲರುಗಳ ನಷ್ಟದೊಂದಿಗೆ 15 ರಾಜ್ಯಗಳ ರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು.

1976: ಟೊರೊಂಟೋದಲ್ಲಿನ ಅತ್ಯಂತ ಎತ್ತರದ ಮಾನವ ನಿರ್ಮಿತ ಕಟ್ಟಡವಾದ CNN ಟವರನ್ನು ಉದ್ಘಾಟಿಸಲಾಯಿತು.

1980: ಮೊದಲ ಸೌರಶಕ್ತಿ ಚಾಲಿತ ಕಡಲ ದ್ವಿಮುಖ ರೇಡಿಯೋ ಸಂಭಾಷಣೆಯನ್ನು ಮಾಡಲಾಯಿತು.

1982: ದಕ್ಷಿಣ ಧ್ರುವದಲ್ಲಿ ಸಾರ್ವಕಾಲಿಕವಾಗಿ ಕನಿಷ್ಟ ಉಷ್ಣಾಂಶ -117o F ದಾಖಲಾಗಿತ್ತು.

1985: ಏರ್ ಇಂಡಿಯಾದ ವಿಮಾನ ಬೋಯಿಂಗ್ 747 “ಕನಿಷ್ಕ” ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗಿತು.

2013: ಹಗ್ಗದ ಮೇಲೆ ನಡೆದುಕೊಂಡು ಗ್ರಾಂಡ್ ಕಣಿವೆಯನ್ನು ಯಶಸ್ವಿಯಾಗಿ ದಾಟಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ನಿಕ್ ವೆಲೆಂಡಾ ಪಾತ್ರರಾದರು.

ಪ್ರಮುಖ ಜನನ/ಮರಣ:

1912: ಕಂಪ್ಯೂಟರ್ ವಿಜ್ಞಾನದ ಪ್ರಮುಖನಾಗಿದ್ದ ಆಲೆನ್ ಟೂರಿಂಗ್ ಜನಿಸಿದರು.

1964: ಅಮೇರಿಕಾದ ಪ್ರಖ್ಯಾತ ಲೇಖಕ ಡಾನ್ ಬ್ರೌನ್ ಜನಿಸಿದರು.

1980: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸುಪುತ್ರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದರು.

1995: ವಿಜ್ಞಾನಿ ಡಾ,ಜಾನಸ್ ಸಾಲ್ಕ್ ನಿಧನರಾದರು.

 

Categories
e-ದಿನ

ಜೂನ್-22

 

ಪ್ರಮುಖ ಘಟನಾವಳಿಗಳು:

1555: ಹುಮಾಯುನ್ ರಾಜ ಅಕ್ಬರನನ್ನು ಮುಂದಿನ ರಾಜನೆಂದು ಘೋಷಿಸಿದನು.

1633: ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂಬ ವಾದವನ್ನು ಗೆಲಿಲಿಯೋ ಮಂಡಿಸಿದಾಗ ತನ್ನ ದೃಷ್ಟಿಕೋನವನ್ನು ಪುನಃ ಪರಿಶೀಲಿಸಲು ಬಲವಂತವಾಗಿ ಪೋಪ್ ಆದೇಶಿಸಿದರು.

1675: ಗ್ರೀನ್ ವಿಚ್ ಅಬ್ಸರ್ವೇಟರಿಯನ್ನು ಇಂಗ್ಲಾಂಡಿನಲ್ಲಿ ಸ್ಥಾಪಿಸಲಾಯಿತು.

1775: ಮೊದಲ ಕಾಂಟಿನೆಂಟಲ್ ಕರೆನ್ಸಿಯನ್ನು ಚಲಾವಣೆ ಮಾಡಲಾಯಿತು.

]1812: ಬ್ರಿಟಿಷರ ಮೇಲೆ ಆಶ್ಚರ್ಯಕರ ದಾಳಿಯನ್ನು ನಡೆಸಲು ಯೋಜನೆ ಹಾಕುತ್ತಿದ್ದ ಅಮೇರಿಕನ್ನರ ಯೋಜನೆ ತಿಳಿದ ಲಾರಾ ಸೆಕಾರ್ಡ್ 32 ಕಿ.ಮೀ. ನಡೆದುಕೊಂಡು ಬ್ರಿಟೀಷರಿಗೆ ವಿಷಯ ತಿಳಿಸಿದರಿಂದ ಬೀವರ್ ಡಾಮ್ಸ್ ನ ಕದನದಲ್ಲಿ ಬ್ರಿಟೀಷರು ಜಯ ಸಾಧಿಸಿದರು.

1832: ಪಿನ್ ಅನ್ನು ತಯಾರು ಮಾಡುವ ಯಂತ್ರಕ್ಕೆ ಜಾನ್ ಹೋವ್ ಪೇಟೆಂಟ್ ಪಡೆದರು.

1847: ಮೊದಲ ವೃತ್ತಾಕಾರದ ಡೋನಟ್ಟನ್ನು ಹಾನ್ಸನ್ ಗ್ರೆಗೊರಿ ತಯಾರಿಸಿದರು.

1874: ಡಾ.ಆಂಡ್ರ್ಯೂ ಟಿ ಸ್ಟಿಲ್ ಮೂಳೆ ವೈದ್ಯ ಪದ್ದತಿಯನ್ನು ಕಂಡುಹಿಡಿದರು.

1874: ಲಾನ್ ಟೆನ್ನಿಸ್ ಆಟವನ್ನು ಪರಿಚಯಿಸಲಾಯಿತು.

1897: ಚೇಪ್ಕರ್ ಸಹೋದರರು ಮತ್ತು ಮಹಾದೇವ್ ವಿನಾಯಕ ರಾನಡೆ ಬ್ರಿಟಿಶ್ ವಸಾಹತು ಅಧಿಕಾರಿಗಳಾದ ಚಾರ್ಲ್ಸ್ ವಾಲ್ಟರ್ ರಾಂಡ್ ಮತ್ತು ಲೆಫ್ಟನೆಂಟ್ ಚಾರ್ಲ್ಸ್ ಎಗೆರ್ಟನ್ ಅಯರ್ಸ್ಟ್ ಅನ್ನು ಹತ್ಯೆ ಮಾಡಿದರು.

1904: ತೀವ್ರ ಕಾರ್ಮಿಕರ ಕೊರತೆಯಿಂದಾಗಿ ಚೀನಿ ಕಾರ್ಮಿಕರು ದಕ್ಷಿಣ ಆಫ್ರಿಕಾಗೆ ಆಗಮಿಸಿದರು.

1915: BMT ಅಂದಿನ ಬ್ರೂಕ್ಲಿನ್ ರಾಪಿಡ್ ಟ್ರಾನ್ಸಿಟ್ ಸಬ್ ವೇ ಸೇವೆಯನ್ನು ಆರಂಭಿಸಿತು.

1918: ಅತ್ಯಂತ ಹಾನಿಕಾರಕ ಅಪಘಾತಗಳಲೊಂದಾದ ಹ್ಯಾಮಂಡ್ ಸರ್ಕಸ್ ರೈಲು ಧ್ವಂಸ ಸಂಭವಿಸಿತು. ರೈಲಿನ ಲೋಕೋಮೋಟಿವ್ ಇಂಜಿನಿಯರ್ ನಿದ್ದೆಗೆ ಜಾರಿದಾಗ ಅವನು ಓಡಿಸುತ್ತಿದ್ದ ರೈಲು ಮತ್ತೊಂದು ರೈಲಿಗೆ ಗುದ್ದಿ 80 ಜನ ಮೃತ ಪಟ್ಟರು.

1970: ಫೆಡರಲ್, ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳಿಗೆ ಮತದಾನದ ವಯಸ್ಸನ್ನು 18ಕ್ಕೆ ಇಳಿಸಲು ಅಧ್ಯಕ್ಷ ನಿಕ್ಸನ್ ಮಸೂದೆಗೆ ಸಹಿ ಹಾಕಿದರು.

1976: ಕೆನೆಡಾನಲ್ಲಿ ಮರಣದಂಡೆಯನ್ನು ನಿಷೇಧಿಸಲು ಕೆನೆಡಾದ ಸಂಸತ್ತು ಮತ ಚಲಾಯಿಸಿತು.

1978: ಪ್ಲೂಟೋನ ಚಂದ್ರನಾದ ಚಾರನ್ ಅನ್ನು ಜೇಮ್ಸ್ ಕ್ರಿಸ್ಟಿ ಪತ್ತೆಮಾಡಿರುವ ಬಗ್ಗೆ ಘೋಷಿಸಲಾಯಿತು.

1982: ಮ್ಯಾನ್ ಹ್ಯಾಟನ್ ಕೇವಲ ಬಸ್ಸುಗಳು ಓಡಾಡುವ ಮಾರ್ಗವನ್ನು ಸ್ಥಾಪಿಸಿತು.

2013: ಜಪಾನಿನ ಸಾಂಸ್ಕೃತಿಕ ಮೌಲ್ಯದ ಕಾರಣ ಯುನೆಸ್ಕೋ ಸಂಸ್ಥೆಯು ಜಪಾನಿನ ಮೌಂಟ್ ಫ್ಯೂಜಿಯನ್ನು ವಿಶ್ವ ಪರಂಪರೆಯ ತಾಣವಾಗಿ ಪಟ್ಟಿ ಮಾಡಿದೆ.

2013:ನ್ಯೂಜಿಲೆಂಡಿನ ಕ್ಯಾಂಟರ್ಬರಿ ಪ್ರದೇಶವು ಕಳೆದ 20 ವರ್ಷಗಳಲ್ಲಿ ಕಾಣದ ಕೆಟ್ಟ ಪ್ರವಾಹವನ್ನು ಅನುಭವಿಸಿತು.

2014: ಮಾಯನ್ಮಾರಿನಲ್ಲಿರುವ ಪಿಯು ಪುರಾತನ ನಗರಗಳು ಮತ್ತು ಇರಾನಿನ ಶಾಹರ್-ಇ-ಸೋಖ್ತಾ (ಬರ್ನ್ಟ್ ಸಿಟಿ)ಯನ್ನು ವಿಶ್ವ ಪರಂಪರೆ ತಾಣಗಳೆಂದು ಹೆಸರಿಸಲಾಗಿದೆ.

ಪ್ರಮುಖ ಜನನ/ಮರಣ:

1910: 1953ರ ಮೌಂಟ್ ಎವೆರೆಸ್ಟ್ ಎಕ್ಸ್ಪೆಡಿಷನ್ ನೇತೃತ್ವ ವಹಿಸಿದ ಬ್ರಿಗೆಡಿಯರ್ ಹೆನ್ರಿ ಸೆಸಿಲ್ ಜಾನ್ ಹಂಟ್ ಜನಿಸಿದರು.

1932: ಭಾರತ ಚಲನಚಿತ್ರದ ಖ್ಯಾತ ಖಳನಾಯಕ ಅಮರೀಶಪುರಿ ಜನಿಸಿದರು.

1974: ತಮಿಳು ಚಲನಚಿತ್ರ ನಟರಾದ ವಿಜಯ್ ಜನಿಸಿದರು.

 

Categories
e-ದಿನ

ಜೂನ್-21

 

ಪ್ರಮುಖ ಘಟನಾವಳಿಗಳು:

1749: ನೋವಾ ಸ್ಕೋಟಿಯಾದಲ್ಲಿ ಹ್ಯಾಲಿಫಾಕ್ಸ್ ಕಂಡುಹಿಡಿಯಾಲಯಿತು.

1768: ಮೊದಲ ಅಮೇರಿಕಾದ “ಬ್ಯಾಚೆಲರ್ ಆಫ್ ಮೆಡಿಸಿನ್ ಡಿಗ್ರಿ” ಅನ್ನು ಡಾ.ಜಾನ್ ಆರ್ಚರ್ ಅವರಿಗೆ ನೀಡಲಾಯಿತು.

1834: ಅಮೇರಿಕಾದ ಸಂಶೋಧಕ ಮತ್ತು ವ್ಯಾಪಾರಿ ಸೈರಸ್ ಹಾಲ್ ಮೆಕಾರ್ಮಿಕ್ ಕೊಯ್ಲು ಮಾಡುವ ಯಂತ್ರವನ್ನು ಕಂಡುಹಿಡಿದರು.

1887: ಬ್ರಿಟನ್ ರಾಣಿ ವಿಕ್ಟೋರಿಯಾಳ ಸುವರ್ಣ ಮಹೋತ್ಸವವನ್ನು ಆಚರಿಸಿತು.

1893: ಮೊದಲ ಫೆರ್ರಿಸ್ ವೀಲ್ ಚಲನಚಿತ್ರದ ಪ್ರಥಮ ಪ್ರದರ್ಶನ ಚಿಕಾಗೋದ ಕೊಲಂಬಿಯನ್ ಎಕ್ಸ್ಪೊಸಿಷನಲ್ಲಿ ಆಯಿತು.

1907: ಇ.ಡಬ್ಲ್ಯು.ಸ್ಕ್ರಿಪಸ್ ಯುನೈಟೆಡ್ ಪ್ರೆಸ್ಸನ್ನು ಸ್ಥಾಪಿಸಿದರು.

1913: ವಿಮಾನದಿಂದ ಪ್ಯಾರಚೂಟಿನಲ್ಲಿ ಹಾರಿದ ಮೊದಲ ಮಹಿಳೆ ಟೈನಿ ಬ್ರಾಡ್ವಿಕ್.

1917: ಹವಾಯಿಯ ರೆಡ್ ಕ್ರಾಸ್ ಸಂಸ್ಥೆ ಸ್ಥಾಪಿತವಾಯಿತು.

1948: ಮೊದಲ ಸಂಗ್ರಹಿಸಲಾದ ಕಂಪ್ಯೂಟರ್ ಪ್ರೋಗ್ರಾಂ ಅನ್ನು ಮ್ಯಾಂಚೆಸ್ಟರ್ ನಲ್ಲಿ ಚಲಾಯಿಸಲಾಯಿತು.

1948: ಲಾರ್ಡ್ ಮೌಂಟ್ ಬ್ಯಾಟೆನ್ ಭಾರತದ ಗವರ್ನರ್ ಜೆನರಲ್ ಸ್ಥಾನಕ್ಕೆ ರಾಜಿನಾಮೆ ನೀಡಿದರು.

1952: ಫಿಲಿಪೈನ್ ಸ್ಕೂಲ್ ಆಫ್ ಕಾಮರ್ಸ್, ರಿಪಬ್ಲಿಕ್ ಆಕ್ಟ್ ಮೂಲಕ ಫಿಲಿಪೈನ್ಸ್ ಕಾಲೇಜ್ ಆಫ್ ಕಾಮರ್ಸ್ ಆಗಿ ಪರಿವರ್ತಿತಗೊಂಡು ನಂತರ ಫಿಲಿಪೈನ್ಸಿನ ಪಾಲಿಟೆಕ್ನಿಕ್ ಯುನಿವರ್ಸಿಟಿಯಾಯಿತು.

1966: ಮಹಾರಾಣಿ ಜುಲಿಯಾನ ಅವರು ಆಂಸ್ಟರ್ಡ್ಯಾಮಿನಲ್ಲಿರುವ ಕೊಯೆನ್ ಸುರಂಗವನ್ನು ಉದ್ಘಾಟಿಸಿದರು.

1983: ಅಲಬಾಮದ 18 ವಯಸ್ಸಿನ ಸ್ಟೆಫ್ನಿ ಕೆ ಆಶ್ಮೋರ್ ಅಮೇರಿಕಾದ ಜುನಿಯರ್ ಮಿಸ್ ಅಮೇರಿಕಾ ಕಿರೀಟ ಪಡೆದರು.

1983: ಟೆನ್ನಿಸ್ ಏಸ್ ಆಟಗಾರ ಆರ್ಥರ್ ಆಶೆ ಎರಡು ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು.

1991: ಭಾರತದ 9ನೇ ಪ್ರಧಾನ ಮಂತ್ರಿಯಾಗಿ ಪಿ.ವಿ.ನರಸಿಂಹ ರಾವ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

2003: ಜೆ.ಕೆ ರೌಲಿಂಗ್ ಅವರ 5ನೇ ಹ್ಯಾರಿ ಪಾಟರ್ ಪುಸ್ತಕ ಶ್ರೇಣಿಯ “ಹ್ಯಾರಿ ಪಾಟರ್ ಆಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್” ಪ್ರಕಟಿಸಲಾಯಿತು.

2006: ಹೊಸದಾಗಿ ಕಂಡ ಪ್ಲೂಟೋದ ಚಂದ್ರಗಳನ್ನು ನಿಕ್ಸ್ ಮತ್ತು ಹೈಡ್ರಾ ಎಂದು ನಾಮಕರಣ ಮಾಡಲಾಯಿತು.

2009: ಭಾರತದ ಬ್ಯಾಟ್ಮಿಂಟನ್ ಆಟಗಾತಿ ಸೈನಾ ನೆಹ್ವಾಲ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಶಸ್ತಿ ಪಡೆದರು. ಅವರು ಈ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ಮಹಿಳೆ.

2013: ತೈವಾನಿನಲ್ಲಿ H6N1 ವೈರಸ್ ಅನ್ನು ಮೊದಲ ಮಾನವ ಪ್ರಕರಣವನ್ನು ಕಂಡುಹಿಡಿಯಲಾಯಿತು.

ಪ್ರಮುಖ ಜನನ/ಮರಣ:

1953: ಮುಸ್ಲಿಮ್ ದೇಶದ ಮೊದಲ ಪ್ರಜಾಪ್ರಭುತ್ವದ ಚುನಾಯಿತ ಮಹಿಳಾ ಮುಖಂಡರಾದ ಬೆನೆಜಿರ್ ಭುಟ್ಟೊ ಜನಿಸಿದರು.

1982: ವೇಲ್ಸ್ ದೇಶದ ರಾಜಕುಮಾರ ಮತ್ತು ರಾಜಕುಮಾರಿ ಡಯಾನ ದಂಪತಿಗಳ ಎರಡನೇ ಮಗನಾದ ಪ್ರಿನ್ಸ್ ವಿಲ್ಲಿಯಂ ಜನಿಸಿದರು.

Categories
e-ದಿನ

ಜೂನ್-20

 

ಪ್ರಮುಖ ಘಟನಾವಳಿಗಳು:

1214: ಆಕ್ಸಫರ್ಡ್ ವಿಶ್ವವಿದ್ಯಾಲಯವು ತನ್ನ ಮಾನ್ಯತಾ ಸನ್ನದನ್ನು (ಹಕ್ಕುಪತ್ರವನ್ನು) ಪಡೆಯಿತು.

1756: ಸುಮಾರು 146 ಬ್ರಿಟಿಶ್ ಯೋಧರನ್ನು ಬಂಗಾಳದ ನವಾಬರ ಸೈನಿಕರು ವಶಪಡಿಸಿಕೊಂಡು ಅವರನ್ನು ಒಂದು ಸಣ್ಣ ಕತ್ತಲೆ ಕೋಣೆಯಲ್ಲಿ ಬಂಧಿಸಿದರು. ಶಾಖದ ಬಳಲಿಕೆಯಿಂದ ಉಸಿರುಗಟ್ಟಿ ಅವರೆಲ್ಲರು ಮರಣ ಹೊಂದಿದರು.

1782: ಅಮೇರಿಕಾದ ಕಾಂಗ್ರೆಸ್ ಅಮೇರಿಕ ಸಂಯುಕ್ತ ಸಂಸ್ಥಾನದ ಗ್ರೇಟ್ ಸೀಲ್ ಅನ್ನು ಅನುಮೋದಿಸಿ, ಬೋಳು ಹದ್ದನ್ನು ಸಂಕೇತವಾಗಿಟ್ಟುಕೊಂಡಿತು.

1793: ಎಲಿ ವೈಟ್ನಿ ಕಾಟನ್ ಜಿನ್ನಿಗೆ ಪೇಟೆಂಟ್ ಪಡೆಯಲು ಅರ್ಜಿ ಹಾಕಿದರು. ಕಾಟನ್ ಜಿನ್ ಅಮೇರಿಕಾದ ಸಾಮೂಹಿಕ ಉತ್ಪಾದನೆಯ ಪರಿಕಲ್ಪನೆಯನ್ನು ಆರಂಭಿಸಿತು.

1819: 320 ಟನ್ ತೂಕದ “ಸವನ್ನಾ” ಉಗಿ ಹಡಗು ಅಟ್ಲಾಂಟಿಕ್ ಸಮುದ್ರವನ್ನು ದಾಟಿದ ಮೊದಲ ಉಗಿ ಹಡಗು ಎಂದು ಮಾನ್ಯವಾಗಿದೆ.

1840: ಸಾಮ್ಯುಲ್ ಮಾರ್ಸ್ ಟೆಲಿಗ್ರಾಫ್ ಅನ್ನು ಪೇಟೆಂಟ್ ಪಡೆದರು.

1863: ನ್ಯಾಷನಲ್ ಬ್ಯಾಂಕ್ ಆಫ್ ಡ್ಯಾವೆನ್ ಪೋರ್ಟ್ ಅಮೇರಿಕಾದ ಮೊದಲ ಬ್ಯಾಂಕ್ ಆಗಿ ಸ್ಥಾಪಿತವಾಯಿತು.

1867: ಅಮೇರಿಕಾದ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ ಅಲಸ್ಕಾವನ್ನು ಕೊಂಡುಕೊಳ್ಳುವ ಬಗ್ಗೆ ಘೋಷಿಸಿದರು.

1874: ಮೊದಲ ಅಮೇರಿಕಾದ “ಲೈಫ್ ಸೇವಿಂಗ್ ಮೆಡಲ್” ಪ್ರಶಸ್ತಿಯನ್ನು ಲೂಸಿಯಾನ್ ಕ್ಲೆಮೆನ್ಸ್ ಅವರಿಗೆ ನೀಡಲಾಯಿತು.

1895: ಅಮೇರಿಕಾದ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪಡೆದ ಮೊದಲ ಮಹಿಳೆ ಕಾರೋಲಿನ್ ವಿಲ್ಲರ್ಡ್ ಬಾಲ್ಡ್ವಿನ್ ಇವರು ವಿಜ್ಞಾನ ಕ್ಷೇತ್ರದಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಪಡೆದರು.

1901: ಶಾರ್ಲೆಟ್ ಅವರು ಅಮೇರಿಕಾದ ಕಾಲೇಜಿನಿಂದ ಪದವಿ ಪಡೆದ ಮೊದಲ ಸ್ಥಳೀಯ ಆಫ್ರಿಕನ್ ಆಗಿದ್ದರು.

1921: ಕಡಿಮೆ ವೇತನ, ಕಾಮಗಾರಿ ಜಾಗದಲ್ಲಿ ಕಳಪೆ ಸ್ಥಿತಿಯನ್ನು ವಿರೋಧಿಸಿ ಚೆನ್ನೈನ  ಬಕಿಂಗ್ಹ್ಯಾಂ ಹಾಗೂ ಕಾರ್ನಾಟಿಕ್ ಮಿಲ್ಸಿನಲ್ಲಿ ನೂಲು ತಯಾರಿಕೆ ಇಲಾಖೆಯ ಕಾರ್ಮಿಕರು ನಾಲ್ಕು ತಿಂಗಳ ಮುಷ್ಕರ ಆರಂಭಿಸಿದರು.

1926: ಹಾವರ್ಡ್ ವಿಶ್ವವಿದ್ಯಾಲಯದ ಮೊದಲ ಕಪ್ಪು ಅಧ್ಯಕ್ಷ ಮೊರ್ಡೆಕೈ ಜಾನ್ಸನ್ ಆಯ್ಕೆಯಾದರು.

1966: ಮೊದಲ ಬಾರಿಗೆ ಗಾಲ್ಫ್ ಪಂದ್ಯಾವಳಿಯನ್ನು ಬಣ್ಣದಲ್ಲಿ ಪ್ರಸಾರ ಮಾಡಲಾಯಿತು.

1968: ಜಿಮ್ ಹೀನ್ಸ್ 10 ಸೆಕೆಂಡಿನಲ್ಲಿ 100 ಮೀಟರ್ ಓಡಿದ ಮೊದಲಿಗರು.

1983: ಅಮೇರಿಕಾದ ಸರ್ವೋಚ್ಛ ನ್ಯಾಯಾಲಯವು ಸಂಸ್ಥೆಗಳ ಮಾಲೀಕರು ತಮ್ಮ ಕೆಲಸಗಾರರಲ್ಲಿ ಸ್ತ್ರೀ ಮತ್ತು ಪುರುಷರಲ್ಲಿ ಯಾವುದೇ ಭೇದವನ್ನು ತೋರದೆ ಇಬ್ಬರಿಗೂ ಸಮಾನವಾಗಿ ತಮ್ಮ ಸಂಗಾತಿಗಳಿಗೆ ಆರೋಗ್ಯದ ಅನುಕೂಲಗಳನ್ನು ಒದಗಿಸಲು ಸೂಚಿಸಿತು.

1985: ಅಮೆರಿಕಾದ ಅಧ್ಯಕ್ಷ  ರೊನಾಲ್ಡ್ ರೇಗನ್ ಅವರು ಮದರ್ ತೆರೆಸಾ ಅವರಿಗೆ ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿ ನೀಡಿದರು.

1990: ಕ್ಷುದ್ರಗ್ರಹ ಯುರೇಕವನ್ನು ಪತ್ತೆ ಮಾಡಲಾಯಿತು.

1996: ಜೆನಿವಾ ಸಮ್ಮೇಳನದಲ್ಲಿ ಸಿಟಿಬಿಟಿಗೆ ಸಹಿ ಹಾಕಲು ಭಾರತವು ನಿರಾಕರಿಸಿತು. CTBT ಯಾವುದೇ ಪರಿಸ್ಥಿತಿಯಲ್ಲಿ, ಮಿಲಿಟರಿ ಅಥವಾ ನಾಗರೀಕ ಉದ್ದೇಶಗಳಿಗಾಗಲಿ ಪರಮಾಣು ಪರೀಕ್ಷೆಗಳನ್ನು ನಿಷೇಧಿಸುವ ಬಗ್ಗೆ ಸಮಾವೇಶಗೊಂಡಿತ್ತು.

ಪ್ರಮುಖ ಜನನ/ಮರಣ:

1869: ಕಿರ್ಲೋಸ್ಕರ್ ಸಂಸ್ಥೆಯ ಸಂಸ್ಥಾಪಕರಾದ ಲಕ್ಷ್ಮಣ್ ರಾವ್ ಕಾಶಿನಾಥ್ ಕಿರ್ಲೋಸ್ಕರ್ ಬೆಳಗಾಂನಲ್ಲಿ ಜನಿಸಿದರು.

1952: ಭಾರತೀಯ ಕಾದಂಬರಿಕಾರ ಮತ್ತು ಕವಿ ವಿಕ್ರಮ್ ಸೇಥ್ ಜನಿಸಿದರು.

1984: ಚಲನಚಿತ್ರ ನಟಿ, ಮಾಡೆಲ್ ಮತ್ತು ಸಮರ ಕಲಾವಿದೆ ನೀತು ಚಂದ್ರ ಬಿಹಾರದ ಪಟ್ನಾದಲ್ಲಿ ಜನಿಸಿದರು.

 

Categories
e-ದಿನ

ಜೂನ್-19

 

ಪ್ರಮುಖ ಘಟನಾವಳಿಗಳು:

1770: ನ್ಯೂ ಜೆರೂಸಲೇಂ ಜೆನರಲ್ ಚರ್ಚ್ ಸ್ಥಾಪನೆಯಾಯಿತು.

1829: ರಾಬರ್ಟ್ ಪೀಲ್ ಲಂಡನ್ ಮೆಟ್ರೊಪಾಲಿಟನ್ ಪೋಲೀಸ್ ಸ್ಥಾಪಿಸಿದರು.

1835: ನ್ಯೂ ಓರ್ಲಿಯಾನ್ಸ್ ಅಮೇರಿಕ ಸರ್ಕಾರಕ್ಕೆ ಹಣ ಮುದ್ರಿಸಲು ಜ್ಯಾಕ್ಸನ್ ಸ್ಕ್ವೇರ್ ನೀಡಿತು.

1846: ಮೊದಲ ಅಧಿಕೃತವಾಗಿ ಗುರುತಿಸಲ್ಪಟ್ಟ   ಆಡಲಾಯಿತು.

1861: ಅನಾಹಿಮ್ ಅಂಚೆ ಕಛೇರಿ ಸ್ಥಾಪನೆಯಾಯಿತು.

1865: ಟೆಕ್ಸಾಸಿನ ಗುಲಾಮರನ್ನು ಬಂಧಮುಕ್ತ ಮಾಡಿ ಸ್ವತಂತ್ರರು ಎಂದು ಘೋಷಿಸಲಾಯಿತು.

1875: ಪ್ರೆಸಿಡಿಯೋದಲ್ಲಿ ಅಮೇರಿಕಾದ ನೌಕಾ ಆಸ್ಪತ್ರೆ ಅಧಿಕೃತವಾಗಿ ಆರಂಭವಾಯಿತು.

1910: ತಂದೆಯರ ದಿನಾಚರಣೆಯನ್ನು ಸ್ಪೊಕೇನ್ ವಾಷಿಂಗ್ಟನ್ನಿನಲ್ಲಿ ಆಚರಿಸಲಾಯಿತು.

1921: ಬ್ರಿಟನ್ನಿನಲ್ಲಿ ಸೆನ್ಸಸ್ (ಜನಗಣತಿ) ಅನ್ನು ಮಾಡಲಾಯಿತು.

1931: ಮೊದಲ ಫೋಟೋ ಎಲೆಕ್ಟ್ರಿಕ್ ಸೆಲ್ ಅನ್ನು ವಾಣಿಜ್ಯವಾಗಿ ವೆಸ್ಟ್ ಹೆವೆನಿನಲ್ಲಿ ಸ್ಥಾಪಿಸಲಾಯಿತು.

1932: ಚೀನಾದಲ್ಲಿ ಆಲಿಕಲ್ಲಿನ ಮಳೆಯಿಂದಾಗಿ 200 ಜನ ಮೃತಪಟ್ಟರು.

1933: ಆಸ್ಟ್ರಿಯದ ಸರ್ಕಾರವು ನಾಜಿ ಸಂಸ್ಥೆಗಳನ್ನು ನಿಷೇಧಿಸಿತು.

1934: ಫೆಡರಲ್ ಕಮ್ಯುನಿಕೇಷನ್ಸ್ ಕಮ್ಮಿಷನ್ ಆರಂಭವಾಯಿತು.

1940: ನಾಜಿಯರ ರಾಜಕಾರಣಿ ಹರ್ಮನ್ ಗೊರಿಂಗ್ ಡಚ್ ದೇಶದ ಕುದುರೆಗಳು, ಕಾರು, ಬಸ್ ಮತ್ತು ಹಡಗುಗಳ ಮೇಲೆ ಮುಟ್ಟುಗೋಲು ಹಾಕಿದರು.

1941: ಚೀರಿಯೋಸ್ ಸೀರಿಯಲ್ ವೃತ್ತಾಕಾರದ ಧಾನ್ಯವನ್ನು ಕಂಡುಹಿಡಿದರು.

1947: ಒಂದು ಗಂಟೆಗೆ 1004 ಕಿಲೋಮೋಟರ್ ಅಷ್ಟು ವೇಗವನ್ನು ತಲುಪಿದ ಮೊದಲ ವಿಮಾನ ಎಫ್-80.

1961: ಯುನೈಟೆಡ್ ಕಿಂಗ್ ಡಂ ಆಳ್ವಿಕೆಯಿಂದ ಕುವೇಟ್ ದೇಶವು ಸ್ವಾತಂತ್ರ ಪಡೆಯಿತು.

1963: ಎರಡು ರಷ್ಯಾದ ಬಾಹ್ಯಾಕಾಶ ಯಾತ್ರೆಗಳು ಯಶಸ್ವಿಯಾಗಿ ಪೂರೈಸಿ ಭೂಮಿಗೆ ಮರಳಿತು.

1963: ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಮಹಿಳೆ ವ್ಯಾಲೆಂಟೀನ ತೆರೆಷ್ಕೋವಾ ಮರಳಿ ಭೂಮಿಗೆ ಹಿಂದಿರುಗಿದರು.

1966: ರಾಜಕೀಯ ಪಕ್ಷ ಶಿವಸೇನೆ ಮುಂಬೈಯಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರ ಬಾಳಾಠಾಕರೆ ಅವರಿಂದ ಸ್ಥಾಪಿತವಾಯಿತು.

1970: ಪೇಟೆಂಟ್ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

1974: ಯೆಮೆನ್ ಅರಾಬ್ ರಿಪಬ್ಲಿಕ್ (ಉತ್ತರ ಯೆಮೆನ್) ಸಂವಿಧಾನವನ್ನು ಸ್ಥಗಿತಗೊಳಿಸಿತು.

1978: ವ್ಯಂಗ್ಯ ಚಿತ್ರ ಗಾರ್ಫೀಲ್ಡ್ ಅಮೇರಿಕಾದ ಎಲ್ಲಾ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡಿತು.

1981: ಆಪಲ್ (ಏರ್ಲೈನ್ ಪ್ಯಾಸೆಂಜರ್ ಪೇಲೋಡ್ ಎಕ್ಸ್ಪಿರಿಮೆಂಟ್) ಭಾರತದ ಮೊದಲ ಮೂರು-ಅಕ್ಷದ ಸ್ಥಿರವಾದ ಪ್ರಾಯೋಗಿಕ ಸಂವಹನ ಉಪಗ್ರಹವನ್ನು ಹಾರಿಸಲಾಯಿತು.

1981: ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ತೂಕದ ಕಿತ್ತಳೆ (2.5ಕೆಜಿ)ಯನ್ನು ಪ್ರದರ್ಶಿಸಲಾಯಿತು.

ಪ್ರಮುಖ ಜನನ/ಮರಣ:

1947: ಬರಹಗಾರ ಸಲ್ಮಾನ್ ರಶ್ದಿ ಅವರು ಜನಿಸಿದರು.

1949: 20ನೇ ಶತಮಾನದ ಖ್ಯಾತ ತತ್ವಜ್ಞಾನಿ ಸೈಯದ್ ಜವಾರುಲ್ ಹಾಸನ್ ನಿಧನರಾದರು.

1970: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿರುವ ರಾಹುಲಗಾಂಧಿ ಅವರು ಜನಿಸಿದರು.

 

Categories
e-ದಿನ

ಜೂನ್-18

ಪ್ರಮುಖ ಘಟನಾವಳಿಗಳು:

1583: ಲಂಡನ್ನಿನ ರಿಚರ್ಡ್ ಮಾರ್ಟಿನ್ ಅವರು ವಿಲಿಯಂ ಗಿಬ್ಬನ್ಸ್ ಅವರ ಮೊದಲ ಜೀವವಿಮೆ ಪಾಲಿಸಿಯನ್ನು ಪಡೆದರು.

1658: ಔರಂಗಜೇಬ್ ಆಗ್ರಾ ಕೋಟೆಯನ್ನು ಮುತ್ತಿಗೆ ಹಾಕಿದರು.

1837: ಸ್ಪೇನ್ ನೂತನ ಸಂವಿಧಾನವನ್ನು ಅಂಗೀಕರಿಸಿತು.

1872: ಮಹಿಳಾ ಮತದಾನದ ಹಕ್ಕಿನ ಸಮಾವೇಶವನ್ನು ಮರ್ಕಂಟೈಲ್ ಲಿಬರ್ಟಿ ಹಾಲಿನಲ್ಲಿ ನಡೆಯಿತು.

1879: ಡಬ್ಲ್ಯೂ.ಹೆಚ್.ರಿಚರ್ಡ್ಸನ್ ಮಕ್ಕಳನ್ನು ಕೊಂಡೊಯ್ಯುವ ಸವಾರಿಬಂಡಿಗೆ ಪೇಟೆಂಟ್ ಪಡೆದರು.

1892: ಮೆಕಡಾಮಿಯ ಬೀಜಗಳನ್ನು ಮೊದಲದಾಗಿ ಹವಾಯಿನಲ್ಲಿ ನೆಡಲಾಯಿತು.

1909: ನ್ಯಾನಿ ಬರೋಸ್ ರಾಷ್ಟ್ರೀಯ ಮಹಿಳಾ ತರಬೇತಿ ಶಾಲೆಯನ್ನು ರೂಪಿಸಿದರು.

1934: ಅಮೇರಿಕಾದ ರಾಷ್ಟ್ರವ್ಯಾಪಿ ಹೆದ್ದಾರಿ ಯೋಜನಾ ಸಮೀಕ್ಷೆಗಳಿಗೆ ಅಧಿಕಾರ ನೀಡಲಾಯಿತು.

1940: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು “ಫಾರ್ವರ್ಡ್ ಬ್ಲಾಕ್” ಅನ್ನು ಸ್ಥಾಪಿಸಿದರು.

1942: ಫ್ರಾನ್ಸಿನ ಎರಿಕ್ ನೆಸ್ಲರ್ ಜಾರುಗದಲ್ಲಿ ಮೇಲ್ಕುಖವಾಗಿ ಸತತ 38ಗಂಟೆ 21 ನಿಮಿಷಗಳ ಕಾಲ ನಿಂತಿದ್ದರು.

1946: ಪೋರ್ಚುಗೀಸ್ ವಸಾಹತಿಗಳ ಆಳ್ವಿಕೆಯಿಂದ ಗೋವಾವನ್ನು ಮುಕ್ತಗೊಳಿಸಲು ಮೊದಲ ಸತ್ಯಾಗ್ರಹ ಚಳುವಳಿ ಆದ ಗೋವಾ ವಿಮೋಚನಾ ಚಳುವಳಿ ಆರಂಭವಾಯಿತು.

1948: ಅಮೇರಿಕನ್ ಲೈಬ್ರರಿ ಅಸೋಸಿಯೇಷನ್ ಗ್ರಂಥಾಲಯ ಹಕ್ಕುಗಳ ಮಸೂದೆಯನ್ನು ಅಳವಡಿಸಿತು.

1948: ರಾಷ್ಟ್ರೀಯ ಭದ್ರತಾ ಮಂಡಳಿಯು ಮೊದಲ ಬಾರಿಗೆ ಗುಪ್ತ ಕಾರ್ಯಾಚರಣೆಗಳಿಗೆ ಅನುಮೋದನೆ ನೀಡಿತು.

1948: ಮಾನವ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಆಯೋಗ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಘೋಷಣೆಯನ್ನು ಅಂಗೀಕರಿಸಿತು.

1956: ಭಾರತದ ಸಂಸತ್ತಿನ ಹಿಂದೂ ಉತ್ತರಾಧಿಕಾರ ಕಾಯಿದೆ ಅಂಗೀಕರಿಸಲ್ಪಟ್ಟಿತು. ಈ ಕಾನೂನು ಏಕರೂಪದ ಅನುವಂಶಿಕ ವ್ಯವಸ್ಥೆಯ ಬಗ್ಗೆ ಇತ್ತು.

1959: ಇಂಗ್ಲೆಂಡಿನಿಂದ ಅಮೇರಿಕಾಗೆ ಪ್ರಸಾರವಾದ ಮೊದಲ ಪ್ರಸಾರ.

1968: ಸರ್ವೋಚ್ಚ ನ್ಯಾಯಾಲಯವು ವಸತಿ ಮಾರಾಟ ಮತ್ತು ಬಾಡಿಗೆಗೆ ಜನಾಂಗೀಯ ತಾರತಮ್ಯವನ್ನು ನಿಷೇಧಿಸಿತು.

1978: ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ 1300 ಕಿಲೋ ಮೀಟರಿನ ಕಾರಾಕೋರಂ ಹೆದ್ದಾರಿಯನ್ನು ತೆರೆಯಲಾಯಿತು.

1991: ಲೋಕಸಭೆಯಲ್ಲಿ ಕಾಂಗ್ರಸ್ ಪಕ್ಷವು ಸ್ಪಷ್ಟ ಬಹುಮತವಿಲ್ಲದಿದ್ದರು ಹೆಚ್ಚಿನ ಸ್ಥಾನ ಪಡೆದ ಅತಿ ದೊಡ್ಡ ಪಕ್ಷವೆನಿಸಿತು.

1997: ಇಂಡಿಯನ್ ಬ್ಯಾಟ್ಮಿಂಟನ್ ಕಾನ್ಫಿಡರೇಷನನ್ನು (IBC) ಪ್ರಕಾಶ್ ಪಡುಕೋಣೆ ಪ್ರಾರಂಭಿಸಿದರು.

ಪ್ರಮುಖ ಜನನ/ಮರಣ:

1928: ದಕ್ಷಿಣ ಧ್ರುವಕ್ಕೆ ಮೊದಲ ದಂಡಯಾತ್ರೆಯನ್ನು ನಡೆಸಿದ ಧ್ರುವ ಪರಿಶೋಧಕ ರೊವಾಲ್ಡ್ ಅಮುಂಡ್ಸೆನ್ ನಿಧನರಾದರು.

2005: ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಟೆಸ್ಟ್ ಆಟಗಾರ ಮುಶ್ತಾಖ್ ಅಲಿ ಅವರು ನಿಧನರಾದರು.

Categories
e-ದಿನ

ಜೂನ್-17

 

ಪ್ರಮುಖ ಘಟನಾವಳಿಗಳು:

1756: ನವಾಬ ಸಿರಾಜುದ್ದೌಲ ತನ್ನ 50000 ಸೈನಿಕರೊಂದಿಗೆ ಕಲ್ಕತ್ತ ನಗರಕ್ಕೆ ಮುತ್ತಿಗೆ ಹಾಕಿ ಅದನ್ನು ವಶಮಾಡಿಕೊಂಡನು.

1837: ಚಾರ್ಲ್ಸ್ ಗುಡ್ಇಯರ್ ರಬ್ಬರಿನ ಪೇಟೆಂಟ್ ಅನ್ನು ಪಡೆದರು.

1863: ಮೊದಲ ಅಪಘಾತ ವಿಮೇದಾರ ಸಂಸ್ಥೆಯಾದ ಹಾರ್ವರ್ಡಿನ ಟ್ರಾವೆಲ್ಲರ್ಸ್ ಇನ್ಶುರೆನ್ಸ್ ಕಂಪನಿ ಆರಂಭವಾಯಿತು.

1864: ವರ್ಜಿನಿಯಾದ ಜೇಮ್ಸ್ ನದಿಯ ಮೇಲೆ 640ಮೀಟರ್ ಉದ್ದದ ಸೇತುವೆಯ ಕಾಮಗಾರಿ ಪೂರ್ಣಗೊಂಡಿತು.

1885: ಫ್ರಾನ್ಸ್ ಹಡಗಾದ “ಇಸೇರಿ”ಯಲ್ಲಿ ತಂದ “ಲಿಬರ್ಟಿಯ ಪ್ರತಿಮೆ” ನ್ಯೂಯಾರ್ಕ್ ನಗರ ತಲುಪಿತು.

1894: ಅಮೇರಿಕಾದ ಮೊದಲ ಪಾರ್ಶ್ವರೋಗ ಸಾಂಕ್ರಾಮಿಕವಾಗಿ ರುತ್ ಲ್ಯಾಂಡಿನಲ್ಲಿ ಹರಡಿತು.

1898: ಅಮೇರಿಕಾದ ನೌಕಾ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು.

1901: ಕಾಲೇಜ್ ಬೋರ್ಡ್ ತನ್ನ ಮೊದಲ ಪ್ರಮಾಣೀಕರಿಸಿದ ಪರೀಕ್ಷೆಯನ್ನು SATಯ ಮುಂಚೂಣಿಯಲ್ಲಿ ಪರಿಚಯಿಸಿತು.

1917: ಮಹಾತ್ಮಗಾಂಧಿ ಮತ್ತು ಅವರ ಪತ್ನಿ ಕಸ್ತೂರಬಾ ಅವರು ಅಹಮದಾಬಾದಿನ ಸಬರ್ಮತಿ ಆಶ್ರಮದಲ್ಲಿ ತಮ್ಮ ವಾಸ್ತವ್ಯ ಹೂಡಿದರು.

1933: ಅಸಹಕಾರ ಚಳುವಳಿಯನ್ನು ಸ್ಥಗಿತಗೊಳಿಸಲಾಯಿತು.

1946: ಎಸ್.ಡಬ್ಲ್ಯೂ.ಬೆಲ್ ಮೊಬೈಲ್ ದೂರವಾಣಿಯ ವಾಣಿಜ್ಯ ಸೇವೆಯನ್ನು ಸೇಂಟ್ ಲೂಯೀಸಿನಲ್ಲಿ ಉದ್ಘಾಟಿಸಿದರು.

1947: ಸಂವಿಧಾನ ಸಭೆಯ ಮೂಲಕ ಬರ್ಮಾವನ್ನು ಗಣರಾಜ್ಯವಾಗಿ ಘೋಷಿಸಿ ದೇಶಕ್ಕೆ ಸಂವಿಧಾನವನ್ನು ಅಳವಡಿಸಲಾಯಿತು.

1947: ಪ್ಯಾನ್ ಆಮ್ ಏರ್ ವೇಸ್ ವಿಶ್ವದಾದ್ಯಂತ ಪ್ರಯಾಣಿಕರ ಮೊದಲ ವಿಮಾನ ಸಂಸ್ಥೆಯಾಗಿತು.

1950: ಶಸ್ತ್ರವೈದ್ಯ ರಿಚರ್ಡ್ ಲಾಲರ್ ಶಿಕಾಗೋದಲ್ಲಿ ತನ್ನ ಮೊದಲ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆ ಮಾಡಿದರು.

1963: ಸಾರ್ವಜನಿಕ ಶಾಲೆಗಳಲ್ಲಿ ಬೈಬಲ್ ಓದುವಿಕೆ/ಪ್ರಾರ್ಥನೆಯ ವಿರುದ್ದ ಸುಪ್ರೀಂ ಪೋರ್ಟ್ ನಿಯಮಗಳನ್ನು ಮಾಡಿತು.

1970: ಎಡ್ವಿನ್ ಲ್ಯಾಂಡ್ ಪೋರಾಯಿಡ್ ಕಾಮೆರಾದ ಪೇಟೆಂಟ್ ಪಡೆದರು.

1987: ಕೊನೆ ಸಾವಿನಿಂದ ಡಸ್ಕಿ ಕಡಲತಲಿಯ ಗುಬ್ಬಿಗಳ ಸಂತತಿ ಅಳಿದುಹೋಗಿವೆ.

1991: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು (ಮರಣೋತ್ತರ) ರಾಜೀವ್ ಗಾಂಧಿಯವರಿಗೆ ನೀಡಲಾಯಿತು.

1991: ದಕ್ಷಿಣ ಆಫ್ರಿಕಾ ತನ್ನ ವರ್ಣಬೇಧದ ನೀತಿಯನ್ನು ಅಮಾನ್ಯ ಮಾಡಿತು.

2008: ಕ್ಯಾಲಿಫೋರ್ನಿಯಾದಲ್ಲಿ ಕಾನೂನು ಬದ್ದವಾಗಿ ಸಲಿಂಗ ಮದುವೆಯನ್ನು ಅಂಗೀಕರಿಸಲಾಯಿತು.

ಪ್ರಮುಖ ಜನನ/ಮರಣ:

1631: ಶಹಜಹಾನನ ಮಡದಿ ಮುಮ್ತಾಜ್ ಮಹಲ್ ತನ್ನ 14ನೇ ಮಗುವಿನ ಜನನದ ಸಮಯದಲ್ಲಿ ನಿಧನರಾದರು.

1839: ಭಾರತದ ಗವರ್ನರ್ ಜೆನೆರಲ್ ಆಗಿದ್ದ ಲಾರ್ಡ್ ವಿಲ್ಲಿಯಂ ಬೆನ್ಟಿಂಕ್ ನಿಧನರಾದರು.

1858: ಝಾನ್ಸಿಯ ಮಹಾರಾಣಿ ಲಕ್ಷ್ಮಿಬಾಯಿ ಸಾವನಪ್ಪಿದರು.

1862: ಭಾರತದ ವೈಸೆರಾಯ್ ಆಗಿದ್ದ ಲಾರ್ಡ್ ಚಾರ್ಲ್ಸ್ ಜಾನ್ ಕಾನಿಂಗ್ ನಿಧನರಾದರು.

1950: ಭಾರತಕ್ಕೆ 7 ಟೆಸ್ಟ್ ಪಂದ್ಯಗಳನ್ನು ಆಡಿದ ಕ್ರಿಕೆಟ್ ಆಟಗಾರ ಸೈಯದ್ ವಾಜೀರ್ ಅಲಿ ನಿಧನರಾದರು.

1973:  ಭಾರತದ ಟೆನ್ನಿಸ್ ಆಟಗಾರರಾದ ಲಿಯಾಂಡರ್ ಪೇಸ್ ಜನಿಸಿದರು.

 

Categories
e-ದಿನ

ಜೂನ್-16

 

ಪ್ರಮುಖ ಘಟನೆಗಳು:

1774: ಹರೋಟ್ಸ್ ಬರ್ಗ್ ನಗರವನ್ನು ಕೆಂಟುಕಿಯಲ್ಲಿ ಕಂಡುಹಿಡಿಯಲಾಯಿತು.

1836: ಲಂಡನ್ನಿನ ಕೆಲಸಕ್ಕೆ ಹೋಗುವ ಪುರುಷರ ಸಂಘವನ್ನು ಸ್ಥಾಪಿಸಲಾಯಿತು.

1858: ಇಲಿನಾಯಿಸ್ ಸ್ಪ್ರಿಂಗ್ಫೀಲ್ಡಿನಲ್ಲಿ ಅಬ್ರಹಾಂ ಲಿಂಕನ್ “ಹೌಸ್ ಡಿವೈಡೆಡ್” ಭಾಷಣವನ್ನು ಮಾಡಿದರು,

1884: ಅಮೇರಿಕಾದ ಮೊದಲ ರೋಲರ್ ಕೋಸ್ಟರ್ ಕೂನಿ ದ್ವೀಪದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು.

1890: ಎರಡನೇ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ತೆರೆಯಲಾಯಿತು.

1903: ಫೋರ್ಡ್ ಮೋಟಾರ್ ಸಂಸ್ಥೆ ಸಂಘಟಿತವಾಯಿತು.

1903: ಪೆಪ್ಸಿ ಕೋಲಾ ಸಂಸ್ಥೆಯು ಆರಂಭವಾಯಿತು.

1909: ಗ್ಲೆನ್ ಹ್ಯಾಮಂಡ್ ಕರ್ಟಿಸ್ ತನ್ನ ಮೊದಲ ವಿಮಾನವಾದ “ಗೋಲ್ಡ್ ಬಗ್”ಅನ್ನು 5000 ಡಾಲರಿಗೆ ನ್ಯೂಯಾರ್ಕ್ ಏರೋನಾಟಿಕಲ್ ಸೊಸೈಟಿಗೆ ಮಾರಿದರು.

1915: ಬ್ರಿಟಿಷ್ ಮಹಿಳಾ ಸಂಸ್ಥೆಯ ಸ್ಥಾಪನೆಯಾಯಿತು.

1922: ಹೆನ್ರಿ ಬರ್ಲೈನರ್ ತನ್ನ ಹೆಲಿಕಾಪ್ಟರನ್ನು ಯೂರೋ ಬ್ಯೂರೋ ಆಫ್ ಏರೋನಾಟಿಕ್ಸ್ ಮುಂದೆ ಪ್ರದರ್ಶಿಸಿದರು.

1933: ರಾಷ್ಟ್ರೀಯ ಕೈಗಾರಿಕಾ ಪುನಶ್ಚೇತನ ಕಾಯಿದೆ ಕಾನೂನಾಗಿ ಮಾರ್ಪಾಟಾಯಿತು. ನಂತರ ಅದನ್ನು ಹಿಂಪಡೆಯಲಾಯಿತು.

1941: ಅಮೇರಿಕಾದ ಮೊದಲ ವಿಮಾನ ನಿಲ್ದಾಣವನ್ನು ವಾಷಿಂಗ್ಟನ್ ಡಿ ಸಿ ನಲ್ಲಿ ತೆರೆಯಲಾಯಿತು.

1943: ಹಾಸ್ಯ ನಟ ಚಾರ್ಲಿ ಚಾಪ್ಲಿನ್ ತನ್ನ ನಾಲ್ಕನೇ ಹೆಂಡತಿಯೊಡನೆ ವಿವಾಹವಾದರು.

1972: ಕೆನೆಡಾದ ಅತಿ ದೊಡ್ಡ ಸಿಂಗಲ್ ಸೈಟ್ ಜಲವಿದ್ಯುತ್ ಯೋಜನೆಯನ್ನು ಚರ್ಚಿಲ್ ಫಾಲ್ಸ್ ನಲ್ಲಿ ಆರಂಭಿಸಲಾಯಿತು,

1977: ಒರಾಕಲ್ ಸಂಸ್ಥಯನ್ನು ಲ್ಯಾರಿ ಎಲ್ಲಿಸನ್, ಬಾಬ್ ಮೈನರ್ ಮತ್ತು ಎಡ್ ಓಏಟ್ಸ್ ಕ್ಯಾಲಿಫೋರ್ರ್ನಿಯಾದಲ್ಲಿ ಸ್ಥಾಪಿಸಿದರು.

1977: ರಷ್ಯಾದ ಮೊದಲ ಸಾವಿಯೆಟ್ ಅಧ್ಯಕ್ಷನಾಗಿ ಲಿಯೋನಿಡ್ ಬ್ರೆಸ್ನೆವ್ ಅವರ ಹೆಸರನ್ನು ಸೂಚಿಸಲಾಯಿತು.

2008: ಸಲಿಂಗ ದಂಪತಿಗಳಿಗೆ ಕ್ಯಾಲಿಫೋರ್ನಿಯ ಮದುವೆ ಅನುಮತಿ ಪತ್ರವನ್ನು ನೀಡಲಾರಂಭಿಸಿತು.

2010: ತಂಬಾಕನ್ನು ಸಂಪೂರ್ಣ ನಿಷೇದಿಸಿದ ಮೊದಲ ದೇಶ ಭೂತಾನ್.

2012: ಚೈನಾ ದೇಶವು ತನ್ನ ಮೊದಲ ಮಹಿಳೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು.

ಪ್ರಮುಖ ಜನನ/ಮರಣ:

1858: ಸಾಂಕ್ರಾಮಿಕಶಾಸ್ತ್ರಜ್ಞ ಎಂದೇ ಪ್ರಖ್ಯಾತಿ ಪಡೆದ ಡಾ.ಜಾನ್ ಸ್ನೋ ನಿಧನರಾದರು.

1888: ರಷ್ಯಾದ ಭೌತಶಾಸ್ತ್ರಜ್ಞ ಮತ್ತು ಗಣಿತಜ್ಞ ಅಲೆಕ್ಸಾಂಡರ್ ಫ್ರೈಡ್ಮಾನ್ ಜನಿಸಿದರು.

1896: ಫ್ರೆಂಚ್ ವಾಹನ ತಯಾರಕರಾದ ಜೀನ್ ಪೀಗಟ್ ಜನಿಸಿದರು.

1950: ಭಾರತದ ಪ್ರಖ್ಯಾತ ನಟ ಮಿಥುನ್ ಚಕ್ರವರ್ತಿ ಜನಿಸಿದರು.

 

Categories
e-ದಿನ

ಜೂನ್-15

 

ಪ್ರಮುಖ ಘಟನೆಗಳು:

1300: ಸ್ಪೇನಿನ ಬಿಲ್ಬಾವೋ ನಗರವನ್ನು ಸ್ಥಾಪಿಸಲಾಯಿತು.

1667: 15 ವರ್ಷದ ಹುಡುಗನಿಗೆ ಕುರಿಯ ರಕ್ತವನ್ನು ವರ್ಗಾವಣೆ ಮಾಡುವ ಮೂಲಕ ಜೀನ್ಸ್ ಬ್ಯಾಪ್ಟಿಸ್ಟ್ ಡೆನಿಸ್ ಮೊದಲ ಸಂಪೂರ್ಣ ದಾಖಲಿತ ರಕ್ತದ ವರ್ಗಾವಣೆಯನ್ನು ನಿರ್ವಹಿಸಿದರು.

1752: ಬೆನ್ಜಾಮಿನ್ ಫ್ರಾಂಕ್ಲಿನ್ ಅವರು “ಮಿಂಚು ಒಂದು ವಿದ್ಯುತ್” ಎಂದು ಸಾಬೀತು ಮಾಡಿದರು.

1762: ಆಸ್ಟ್ರಿಯ ತನ್ನ ಮೊದಲ ಪೇಪರ್ ಕರೆನ್ಸಿಯನ್ನು ಉಪಯೋಗಿಸಿದರು.

1785: ಇಂಗ್ಲೀಷ್ ಚಾನಲ್ ದಾಟಲು ಪ್ರಯತ್ನ ಮಾಡುವಾಗ ಜೀನ್-ಫ್ರಾಂಕೋಯಿಸ್ ಪಿಲಾಟ್ರೆ ಡಿ ರೋಜಿಯರ್ ಮತ್ತು ಅವರ ಸಹವರ್ತಿ ರೋಮೈನ್ ಅವರು ತಮ್ಮ ಬಿಸಿಗಾಳಿಯ ಬಲೂನ್ ಸ್ಪೋಟಿಸಿ ವಿಶ್ವದ ಮೊದಲ ವಾಯುಯಾನ ಅಪಘಾತ ನಡೆಯಿತು.

1795: “ಮಾರ್ಸಿಲ್ಲಾಯಿಸ್” ಫ್ರಾಂಸಿನ ರಾಷ್ಟ್ರಗೀತೆಯಾಯಿತು.

1836: ಅರ್ಕಾನ್ಸಾಸ್ ಅಮೇರಿಕಾದ 25ನೇ ರಾಜ್ಯವಾಯಿತು.

1844: ಪ್ರಸಿದ್ಧ ಅಮೇರಿಕನ್ ರಸಾಯನಶಾಸ್ತ್ರಜ್ಞರಾದ ಚಾರ್ಲ್ಸ್ ಗುಡ್ಇಯರ್ ರಬ್ಬರಿನ ವಲ್ಕನೈಸೇಷನ್ (ರಬ್ಬರನ್ನು ಗಟ್ಟಿಗೊಳಿಸುವ ವಿಧಾನ) ಪೇಟೆಂಟ್ ಪಡೆದರು.

1851: ಜೇಕಬ್ ಫಸೆಲ್, ಹೈನಿಗ ಮೊದಲ ಐಸ್ಕ್ರೀಂ ಕಾರ್ಖಾನೆಯನ್ನು ಸ್ಥಾಪಿಸಿದರು.

1867: ಅಟ್ಲಾಂಟಿಕ್ ಕೇಬಲ್ ಕ್ವಾರ್ಟ್ಜ್ ಲೋಡ್ ಚಿನ್ನದ ಗಣಿಯನ್ನು ಮೊಂಟಾನಾದಲ್ಲಿ ಕಂಡುಹಿಡಿಯಲಾಯಿತು.

1878: ಚಲನೆಯ ಛಾಯಾಚಿತ್ರ ಅಧ್ಯಯನಗಳಲ್ಲಿ ಪ್ರವರ್ತಕ ವ್ಯಕ್ತಿಯಾಗಿದ್ದ ಈಡ್ವೇರ್ಡ್ ಮುಬ್ರಿಡ್ಜ್ ಅವರು ಕುದುರೆಗಳು ಓಡುವಾಗ ಅದರ ನಾಲ್ಕು ಕಾಲುಗಳು ನೆಲದ ಮೇಲೆ ಇರುವುದಿಲ್ಲ ಎಂದು ಛಾಯಾಚಿತ್ರಗಳ ಸರಣಿಯೊಂದಿಗೆ ಸಾಬೀತು ಮಾಡಿದರು.

1911: ದ ಕಂಪ್ಯೂಟಿಂಗ್-ಟ್ಯಾಬುಲೇಟಿಂಗ್-ರೆಕಾರ್ಡಿಂಗ್ ಸಂಸ್ಥೆಯನ್ನು ನ್ಯೂಯಾರ್ಕಲ್ಲಿ ಸ್ಥಾಪಿಸಲಾಯಿತು. ಇದನ್ನು ನಂತರ ಇಂಟರ್‍ ನ್ಯಾಷನಲ್ ಬಿಸಿನೆಸ್ ಮಷೀನ್ಸ್ (IBM) ಎಂದು ಮರುನಾಮಕರಣ ಮಾಡಲಾಯಿತು.

1922: ಬಾತು ಕೋಳಿ ಕೊಕ್ಕಿನ ಪ್ಲಾಟಿಪಸ್ ಪಕ್ಷಿಯನ್ನು ಮೊದಲ ಬಾರಿ ಸಾರ್ವಜನಿಕರ ವೀಕ್ಷಣೆಗೆ ನ್ಯೂಯಾರ್ಕಿನಲ್ಲಿ ಪ್ರದರ್ಶಿಸಲಾಯಿತು.

1924: ಫೋರ್ಡ್ ಮೋಟಾರ್ ಸಂಸ್ಥೆಯು ತನ್ನ 10 ಮಿಲಿಯನ್ನನೇ ಮಾಡೆಲ್ ಟಿ ಕಾರನ್ನು ಉತ್ಪಾದಿಸಿತು.

1929: ಮೊದಲ ವಿಮಾನ ನಿಲ್ದಾಣದಲ್ಲಿ ಹೋಟೆಲ್ ಅನ್ನು ಕ್ಯಾಲಿಫೋರ್ನಿಯಾದಲ್ಲಿ ತೆರೆಯಲಾಯಿತು.

1934: ಅಮೇರಿಕಾದ ಟೆನ್ನೆಸ್ಸಿಯಲ್ಲಿ “ಗ್ರೇಟ್ ಸ್ಮೋಕಿ ಪರ್ವತಗಳ” ರಾಷ್ಟ್ರೀಯ ಉದ್ಯಾನವನವನ್ನು ಸ್ಥಾಪಿಸಲಾಯಿತು.

1947: ಅಖಿಲ ಭಾರತ ಕಾಂಗ್ರೆಸ್ ನವದೆಹೆಲಿಯಲ್ಲಿ ಭಾರತದ ವಿಭಜನೆಗಾಗಿ ಬ್ರಿಟೀಷ್ ಸರ್ಕಾರದ ಯೋಜನೆಯನ್ನು ಸ್ಚೀಕರಿಸಿತು.

1988: ನಾಸಾ ಬಾಹ್ಯಾಕಾಶದ ವಾಹನ “S-213” ಅನ್ನು ಹಾರಿಸಿತು.

1996: ಮೈಕ್ರೋಸಾಫ್ಟ್ ಇಂಟರ್ನೆಟನ್ನು MSNBC ಬಿಡುಗಡೆ ಮಾಡಿತು.

2012: ಅಮೇರಿಕಾದ ಆಕ್ರೋಬ್ಯಾಟ್ ಮತ್ತು ವೈಮಾನಿಕ ಕಲಾವಿದರಾದ ನಿಕ್ ವಾಲೆಂಡಾ ಅವರು ನಯಾಗಾರ ಜಲಪಾತದ ಮೇಲೆ ಬಿಗಿಹಗ್ಗದ ಮೇಲೆ ನಡೆದು ದಾಟಿದ ಮೊದಲ ವ್ಯಕ್ತಿಯಾದರು.

ಪ್ರಮುಖ ಜನನ/ಮರಣ:

1898: ಬಾಹ್ಯಾಕಾಶದ ಔಷಧದ ಪಿತಾಮಹ ಎಂದೆ ಹೆಸರುವಾಸಿಯಾದ ಹ್ಯೂಬರ್ಟಸ್ ಸ್ಟರುಗ್ಹೋಲ್ಡ್ ಜನಿಸಿದರು.

1916: ಕಂಪ್ಯೂಟರ್ ಕೃತಕ ಬುದ್ಧಿಯ ಅಭಿವೃದ್ಧಿಗಾಗಿ ಕೆಲಸ ಮಾಡಿದ ವಿಜ್ಞಾನಿ ಹರ್ಬರ್ಟ್ ಅಲೆಕ್ಸಾಂಡರ್ ಸೈಮನ್ ಜನಿಸಿದರು.

1991: ನೋಬೆಲ್ ಪ್ರಶಸ್ತಿ ಪುರಸ್ಕೃತರು ಹಾಗೂ ಅರ್ಥಶಾಸ್ತ್ರಜ್ಞರಾದ ಸರ್ ವಿಲಿಯಂ ಆರ್ತುರ್ ಲೂಯಿಸ್ ನಿಧನರಾದರು.

 

Categories
e-ದಿನ

ಜೂನ್-14

 

ಪ್ರಮುಖ ಘಟನೆಗಳು:

1642: ಅಮೇರಿಕಾದಲ್ಲಿ ಮೊದಲನೇ ಕಡ್ಡಾಯ ಶಿಕ್ಷಣ ಕಾನೂನನ್ನು ಮ್ಯಾಸಚೂಸೆಟ್ಸ್ ನಲ್ಲಿ ಅಂಗೀಕರಿಸಲಾಯಿತು.

1777: ಸಂಯುಕ್ತ ಧ್ವಜದ ಬದಲಾಗಿ ನಕ್ಷತ್ರಗಳು ಮತ್ತು ಪಟ್ಟಿಗಳನ್ನು ತಮ್ಮ ಧ್ವಜದಲ್ಲಿ ಅಮೇರಿಕಾದ ಕಾಂಟಿನೆಂಟಲ್ ಕಾಂಗ್ರೆಸ್ ಅಳವಡಿಸಿತು.

1834: ಹಾರ್ಡ್ ಹ್ಯಾಟ್ ಡೈವಿಂಗ್ ಉಡುಪಿನ ಪೇಟೆಂಟ್ ಲಿಯೋನಾರ್ಡ್ ನೋರ್ಕ್ರಾಸ್ ಪಡೆದರು.

1834: ಉಪ್ಪುಕಾಗದವನ್ನು ಐಸಾಕ್ ಫಿಸ್ಚರ್ ಪೇಟೆಂಟ್ ಪಡೆದರು.

1841: ಕೆನೆಡಾದ ಮೊದಲ ಸಂಸತ್ತು ಒಂಟಾರಿಯೋದ ಕಿಂಗ್ಸ್ಟನ್ ನಲ್ಲಿ ತೆರೆಯಲಾಯಿತು.

1847: ರಾಬರ್ಟ್ ಬನ್ಸೆನ್ “ಬರ್ನರ್” ಕಂಡುಹಿಡಿದರು.

1872: ಕೆನೆಡಾದಲ್ಲಿ ಕಾರ್ಮಿಕ ಸಂಘಟನೆಗಳನ್ನು ಕಾನೂನುಬದ್ಧಗೊಳಿಸಲಾಯಿತು.

1881: ಪ್ಲೇಯರ್ ಪಿಯಾನೋವನ್ನು ಜಾನ್ ಮೆಕ್ಟಾಮ್ನಿ ಜುನಿಯರ್ ಪೇಟೆಂಟ್ ಪಡೆದರು.

1900: ಹಾವಾಯಿ ಪ್ರಾದೇಶಿಕ ಸರ್ಕಾರ ಪ್ರಾರಂಭವಾಯಿತು.

1901: ಮೊದಲ ಗಾಲ್ಫ್ ಪಂದ್ಯಾವಳಿಯನ್ನು ಆಡಲಾಯಿತು.

1907: ನಾರ್ವೇ ಮಧ್ಯಮ ವರ್ಗದ ಮಹಿಳೆಯರು ಮಾತ್ರ ಸಂಸತ್ತಿನ ಚುನಾವಣೆಯಲ್ಲಿ ಮತದಾನ ಮಾಡಬಹುದಾದ ಮಹಿಳೆಯ ಮತದಾನ ಹಕ್ಕನ್ನು ಅಳವಡಿಸಿಕೊಂಡರು.

1908: ನಾಲ್ಕನೇ ಜರ್ಮನ್ ನೌಕಾಪಡೆ ಮತ್ತೆ ಹೊಸ ನಾಲ್ಕು ಪ್ರಮುಖ ಯುದ್ಧನೌಕೆಗಳನ್ನು ನಿರ್ಮಿಸಲು ಹಣಕಾಸನ್ನು ನೀಡುವ ಬಿಲ್ಲು ಅನುಮೋದಿಸಿತು.

1913: ದಕ್ಷಿಣ ಆಫ್ರಿಕಾದ ಸರ್ಕಾರವು ಏಷ್ಯನ್ನರ ಪ್ರವೇಶ ಮತ್ತು ಮುಕ್ತ ಓಡಾಟದ ನಿರ್ಭಂದಿಸುವ ವಲಸೆ ಕಾಯಿದೆ ತರಲಾಯಿತು.

1916: ಎಂಟು ರಾಷ್ಟ್ರಗಳ ಪ್ರತಿನಿಧಿಗಳು ಸೇರಿ ಪ್ಯಾರಿಸ್ಸಿನಲ್ಲಿ ಆರ್ಥಿಕ ಸಮ್ಮೇಳನವನ್ನು ನಡೆಸಿದರು.

1938: ಕ್ಲೋರೋಫಿಲ್ ಅನ್ನು ಬೆನ್ಜಾಮಿನ್ ಗ್ರುಶ್ಕಿನ್ ಪೇಟೆಂಟ್ ಪಡೆದರು.

1942: ಮೊದಲ ಬಝೂಕಾ ರಾಕೆಟ್ ಬಂದೂಕನ್ನು ಬ್ರಿಡ್ಜ್ಪೋರ್ಟನಲ್ಲಿ ತಯಾರಿಸಲಾಯಿತು.

1946: ಕೆನೆಡಿಯನ್ ಗ್ರಂಥಾಲಯ ಸಂಘ ಸ್ಥಾಪನೆಯಾಯಿತು.

1951: ಮೊದಲ ವಾಣಿಜ್ಯ ಗಣಕಯಂತ್ರವಾದ “UNIVAC 1” ಅನ್ನು ಸೆನ್ಸಸ್ ಬ್ಯೂರೋ ನಲ್ಲಿ ಉಪಯೋಗಿಸಲಾಯಿತು.

1954: ಅಧ್ಯಕ್ಷ ಐಸೆನ್ಹೋವರ್ ಅವರು “ದೇವರ ಅಡಿಯಲ್ಲಿ” ಪದಗಳನ್ನು ಪ್ರತಿಜ್ಞೆಗೆ ಸೇರಿಸುವ ಆದೇಶ ನೀಡಿದ್ದರು.

1962: ಯೂರೋಪಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ ಅನ್ನು ಪ್ಯಾರಿಸ್ಸಿನಲ್ಲಿ ಸ್ಥಾಪಿಸಲಾಯಿತು. ಇದನ್ನು ನಂತರ ಯೂರೋಪಿಯನ್ ಸ್ಪೇಸ್ ಏಜೆನ್ಸಿ ಎಂದು ಮರುನಾಮಕರಣ ಮಾಡಲಾಯಿತು.

1967: ರಷ್ಯಾ ದೇಶ “ಕಾಸ್ಮಾಸ್ 166” ಅನ್ನು ಸೂರ್ಯನ ವೀಕ್ಷಣೆಗಾಗಿ ಭೂಮಿಯ ಕಕ್ಷೆಯಿಂದ ಉಡಾಯಿಸಲಾಯಿತು.

2012: 10 ವರ್ಷ ವಯಸ್ಸಿನ ಹುಡುಗಿಯ ಮೇಲೆ ಪ್ರಪಂಚದ ಮೊದಲ ಕಾಂಡಕೋಶದ ನೆರವಿನ ಅಭಿಧಮನಿ ಕಸಿ ಶಸ್ತ್ರಚಿಕಿತ್ಸೆಯನ್ನು ಸ್ವೀಡಿಶ್ ವೈದ್ಯರು ಕೈಗೊಂಡರು.

ಪ್ರಮುಖ ಜನನ/ಮರಣ:

1825: ವಾಷಿಂಗ್ಟನ್ ಡಿಸಿ ನಿರ್ಮಿಸಿದ ಆರ್ಕಿಟೆಕ್ಟ್ ಪೈರ್ರಿ ಚಾರ್ಲ್ಸ್ ಎಲ್ ಎನ್ಫಾಂಟ್ ನಿಧನರಾದರು.

1920: ಭಾರತೀಯ ಖ್ಯಾತ ನಟ ಭಾರತಭೂಷಣ್ ಜನಿಸಿದರು.

1946: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಿಸಿದರು.

1946: ಟಿವಿಯನ್ನು ಕಂಡು ಹಿಡಿದ ಜಾನ್ ಲೋಗಿ ಬೈರ್ದ್ ನಿಧನರಾದರು.

1969: 22 ಗ್ರಾಂಡ್ ಸ್ಲಾಂ ಟೈಟಲ್ ಗೆದ್ದಿರುವ ಜರ್ಮನಿಯ ಟೆನ್ನಿಸ್ ಆಟಗಾತಿ ಸ್ಟೆಫ್ಫಿ ಗ್ರಾಫ್ ಜನಿಸಿದರು.

 

Categories
e-ದಿನ

ಜೂನ್-13

 

ಪ್ರಮುಖ ಘಟನೆಗಳು:

1659: ಔರಂಗಜೇಬನನ್ನು ಮುಘಲರ ಆರನೇ ರಾಜನೆಂದು ಹಾಗೂ ಭಾರತದ ದೆಹೆಲಿಯ ರಾಜನೆಂದು ಘೋಷಿಸಲಾಯಿತು.

1774: ರೋಡ್ ಐಲಾಂಡ್ ಗುಲಾಮರ ಆಮದು ಮಾಡುವುದನ್ನು  ನಿಷೇಧಿಸಿತು.

1777: ಲಿಯೋನಾರ್ಡ್ ನಾರ್ಕ್ರಾಸ್ ಜಲಾಂತರ್ಗಾಮಿ ಮುಳುಗುಡುಪಿನ ಪೇಟೆಂಟ್ ಪಡೆದರು.

1789: ಶ್ರೀಮತಿ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಸಿಹಿತಿಂಡಿಗೆಂದು “ಐಸ್ಕ್ರೀಮ್”ಅನ್ನು ವಾಷಿಂಗ್ಟನ್ ಅವರಿಗೆ ಉಣಬಡಿಸಿದರು.

1888: ಅಮೇರಿಕಾದ ಕಾಂಗ್ರೆಸ್ ಸರ್ಕಾರವು ಕಾರ್ಮಿಕ ಇಲಾಖೆಯನ್ನು ಸ್ಥಾಪಿಸಿತು.

1908: ಕಲ್ಕತ್ತಾ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್ ಅನ್ನು ಸ್ಥಾಪಿಸಲಾಯಿತು.

1920: ಪಾರ್ಸೆಲ್ ಪೋಸ್ಟಿನಿಂದ ಮಕ್ಕಳನ್ನು ಕಳುಹಿಸಲಾಗುವುದಿಲ್ಲ ಎಂದು ಅಂಚೆ ಕಛೇರಿ ಹೇಳಿತು.

1930: ಮೊದಲ ನಗ್ನಪಂಥಿ ವಸಾಹತು ತೆರೆಯಲಾಯಿತು.

1942: ಅಮೇರಿಕಾ ತನ್ನ ಯುದ್ಧದ ಮಾಹಿತಿ ಕಛೇರಿಯನ್ನು ತೆರೆಯಿತು.

1947: ಅಖಿಲ ಭಾರತ ಕಾಂಗ್ರೆಸ್ ನವ ದೆಹೆಲಿಯಲ್ಲಿ ಭಾರತ ವಿಭಜನೆಗಾಗಿ ಬ್ರಿಟಿಶ್ ಯೋಜನೆಯನ್ನು ಒಪ್ಪಿಕೊಂಡಿತು.

1953: ಆಂತರಿಕ ಏರ್ ರೂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅನ್ನು ಸ್ಥಾಪಿಸಲಾಯಿತು.

1953: ಭಾರತ ಸರ್ಕಾರದ ಸ್ವಾಮ್ಯದ ದೇಶೀಯ ಏರ್ಲೈನ್ಸ್ ಆದ ಇಂಡಿಯನ್ ಏರ್ಲೈನ್ಸ್ ಅನ್ನು ಸ್ಥಾಪಿಸಲಾಯಿತು.

1954: ಆಲ್ಬರ್ಟ್ ಐನ್ಸ್ಟೀನ್ ವೈದ್ಯಕೀಯ ಕಾಲೇಜಿನ ಅಡಿಪಾಯವನ್ನು ಬ್ರಾಂಕ್ಸ್ ನಲ್ಲಿ ಹಾಕಲಾಯಿತು.

1960: ಪಶ್ಚಿಮ ಬಂಗಾಳದಲ್ಲಿ ಬರದ್ವಾನ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1963: ಮಹಿಳಾ ಗಗನಯಾತ್ರಿಯನ್ನು ಹೊತ್ತ ಮೊದಲ ಮಾನವ ಬಾಹ್ಯಾಕಾಶ ನೌಕೆ ವೊಟಾಕ್-6 ನ್ನು ಉಡಾಯಿಸಲಾಯಿತು.

1967: ಥುರುಗೋಡ್ ಮಾರ್ಶಲ್ ಅವರನ್ನು ಮೊದಲ ಸರ್ವೋಚ್ಛ ನ್ಯಾಯಾಲಯದ ಮೊದಲ ಕಪ್ಪು ನ್ಯಾಯಮೂರ್ತಿಯಾಗಿ ನಾಮ ಸೂಚಿಸಲಾಯಿತು.

1980: ಯು ಎನ್. ಭದ್ರತಾ ಮಂಡಳಿಯು ನೆಲ್ಸನ್ ಮಂಡೇಲ ಅವರನ್ನು ಮುಕ್ತಗೊಳಿಸಲು ದಕ್ಷಿಣ ಆಫ್ರಿಕಾಗೆ ಕರೆನೀಡಿತು.

1982: ಪೌರತ್ವ ಹಕ್ಕಿನ ಹೊರತಾಗಿ ಎಲ್ಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣದ ಅರ್ಹತೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

1983: ಪಯೊನೀರ್ 10 ನೆಪ್ಟ್ಯೂನ್ ಅನ್ನು ದಾಟಿದ ನಂತರ ಕೇಂದ್ರ ಸೌರವ್ಯೂಹವನ್ನು ದಾಟಿದ ಮೊಟ್ಟ ಮೊದಲ ಮಾನವ ನಿರ್ಮಿತ ವಸ್ತು.

1990: 1984 ರ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಸ್ವರ್ಣ ಮಂದಿರದಿಂದ ವಶಪಡಿಸಿಕೊಳ್ಳಲಾದ ಅಮೂಲ್ಯ ವಸ್ತುಗಳನ್ನು ಪಂಜಾಬ್ ಸರ್ಕಾರವು ಸ್ವರ್ಣ ಮಂದಿರ ಆಡಳಿತಕ್ಕೆ ಹಿಂದಿರುಗಿಸಿತು.

1991: ಮೊದಲ ಕ್ರೀಡಾ ದಿನಪತ್ರಿಕೆಯಾದ “ದಿ ನಾಷನಲ್” ಪ್ರಕಟಣೆಯನ್ನು ನಿಲ್ಲಿಸಲಾಯಿತು.

1997: ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಉಂಟಾದ ಬೆಂಕಿ ಅನಾಹುತದಿಂದ 59 ಜನರು ಸಾವನಪ್ಪಿದರು.

ಪ್ರಮುಖ ಜನನ/ಮರಣ:

1928: ಅಮೇರಿಕಾದ ಗಣಿತತಜ್ಞ ಮತ್ತು ಅರ್ಥಶಾಸ್ತ್ರಜ್ಞ ಜಾನ್ ನ್ಯಾಶ್ ಜನಿಸಿದರು.

1937:‍ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಭ್ರಷ್ಟಾಚಾರವಿರೋಧಿ ಹೋರಾಟಗಾರ ಅಣ್ಣ ಹಜಾರೆ ಜನಿಸಿದರು.

1944: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಜನಿಸಿದರು.

1948: ಅಣ್ಣಮಲೈ ವಿಶ್ವವಿದ್ಯಾಲಯವನ್ನು ಆರಂಭಿಸಿದ ಅಣ್ಣಾಮಲೈ ಚೆಟ್ಟಿಯಾರ್ ನಿಧನರಾದರು.

 

Categories
e-ದಿನ

ಜೂನ್-12

ಪ್ರಮುಖ ಘಟನೆಗಳು:

1665: ನ್ಯೂ ಆಮ್ಸ್ಟರ್ ಡ್ಯಾಮ್ ಕಾನೂನು ಬದ್ದವಾಗಿ ಇಂಗ್ಲಿಷ್ ವಸಾಹತು ಆಯಿತು ಹಾಗೂ ಇಂಗ್ಲಿಷ್ ಡ್ಯೂಕ್ ಆಫ್ ಯಾರ್ಕ್ ಅವರ ಹೆಸರಿನಿಂದ ನ್ಯೂಯಾರ್ಕ್ ಎಂದು ಮರು ನಾಮಕರಣ ಮಾಡಲಾಯಿತು.

1665: ನ್ಯೂಯಾರ್ಕ್ ನಗರದಲ್ಲಿ ಪುರಸಭಾ ಸರ್ಕಾರವನ್ನು ಇಂಗ್ಲೆಂಡ್ ಸ್ಥಾಪಿಸಿತು.

1776: ವರ್ಜೀನಿಯ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು,

1787: ನ್ಯಾಯಾಧೀಶರ ನೇಮಕಾತಿಯ ಕನಿಷ್ಟ ವಯೋಮಿತಿ 30 ವರ್ಷ ಎಂದು ಅಮೇರಿಕ ಕಾನೂನು ಮಾಡಿತು.

1849: ಗ್ಯಾಸ್ ಮಾಸ್ಕ್ (ಮುಖವಾಡ) ದ ಪೇಟೆಂಟ್ ಅನ್ನು ಲ್ಯೂಇಸ್ ಹ್ಯಾಸ್ಲೆಟ್ ಪಡೆದರು.

1860: ಸ್ಟೇಟ್ ಬ್ಯಾಂಕ್ ಆಫ್ ದಿ ರಷ್ಯನ್ ಎಂಪೈರ್ ಅನ್ನು ಸ್ಥಾಪಿಸಲಾಯಿತು.

1892: ಹಣಕಾಸು ಮತ್ತು ನಾಣ್ಯಗಳ ಸಂಗ್ರಹಿಸುವ ರೂಪಗಳ ನೆಧರ್ಲ್ಯಾಂಡ್ ಸೊಸೈಟಿ ಸ್ಥಾಪಿತವಾಯಿತು.

1898: ಫಿಲಿಪೀನ್ಸ್ ಸ್ವತಂತ್ರ ರಾಷ್ಟ್ರವಾಯಿತು.

1903: “ದಿ ಸಿಗ್ಮಾ ಆಲ್ಫಾ ಲೋಟ” ಅಂತರ ರಾಷ್ಟ್ರೀಯ ಸಂಗೀತ ಸೋದರತ್ವ ಮಿಚಿಗನ್ ಸ್ಕೂಲ್ ಆಫ್ ಮ್ಯೂಸಿಕ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾಯಿತು.

1903: ಒಂಟಾರಿಯೋದ ನಯಗಾರ ಫಾಲ್ಸ್ ಅನ್ನು ಒಂದು ನಗರವಾಗಿ ಸಂಯೋಜಿಸಲಾಯಿತು.

1905: ಭಾರತೀಯ ಸೇವಕ ಸಮಾಜವನ್ನು ಗೋಪಾಲ ಕೃಷ್ಣ ಗೋಖಲೆ ಅವರು ಭಾರತದ ಪುಣೆಯಲ್ಲಿ ಸ್ಥಾಪಿಸಿದರು.

1920: ರೈತ ಕಾರ್ಮಿಕರ ಪಕ್ಷವನ್ನು ಶಿಕಾಗೋದಲ್ಲಿ ಆರಂಭಿಸಲಾಯಿತು.

1933: ಹಣಕಾಸು ಮತ್ತು ಆರ್ಥಿಕತೆ ವಿಶ್ವ ಸಮ್ಮೇಳನವು 66 ದೇಶಗಳ ಪಾಲ್ಗೊಳ್ಳುವಿಕೆಯಿಂದ ತೆರೆಯಿತು.

1935: ಲ್ಯುಸಿಯಾನದ ನ್ಯಾಯಾಧೀಶ ಹ್ಯುಏ ಲಾಂಗ್ ಸತತ 15.5 ಗಂಟೆಗಳ ಕಾಲ ಮಾತನಾಡಿ ಇದು ಅತ್ಯಂತ ದೊಡ್ಡ ಭಾಷಣ ಎಂದು ದಾಖಲಾಯಿತು.

1939: ದಿ ನ್ಯಾಷನಲ್ ಹಾಲ್ ಆಫ್ ಫೇಮ್ ಅಂಡ್ ಮ್ಯೂಸಿಯಂ ನ್ಯೂಯಾರ್ಕಿನ ಕೂಪರ್ಸ್ ಟೌನಿನಲ್ಲಿ ತೆರೆಯಲಾಯಿತು.

1952: ಭಾರತದ ಜಮ್ಮು ಮತ್ತು ಕಶ್ಮೀರವು ತಮ್ಮ ಅನುವಂಶಿಕ ರಾಜಪ್ರಭುತ್ವದ ಕೊನೆಗೊಳಿಸಲು ನಿರ್ಧರಿಸುತ್ತದೆ.

1964: ವರ್ಣ ಭೇದಿ ನೀತಿಯ ವಿರೋಧಿ ನಾಯಕ ನೆಲ್ಸನ್ ಮಂಡೇಲಾ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ‘ವಿಧ್ವಂಸಕ ಆರೋಪ”ದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

1967: ಅಮೇರಿಕಾದ ಸರ್ವೋಚ್ಛ ನ್ಯಾಯಾಲಯವು ಅಂತರ್ಜನಾಂಗೀಯ ವಿವಾಹಗಳಿಗೆ ವಿರುದ್ಧವಾಗಿದ್ದ ಕಾನೂನ್ನು ಕೊನೆಗೊಳಿಸಿತು.

1975: ಲೋಕಸಭೆಗೆ ಇಂದಿರಾ ಗಾಂಧಿಯವರ ಚುನಾವಣೆಯನ್ನು ಅಲ್ಹಾಬಾದ್ ಹೈಕೋರ್ಟ್ ಚುನಾವಣಾ ಭ್ರಷ್ಟಾಚಾರ ಆರೋಪದಡಿ  ನಿರರ್ಥಕ ಎಂದು ಘೊಷಿಸಿತು.

1994: ವಿಶ್ವದ ಅತಿ ದೊಡ್ಡ ಅವಳಿ ಜೆಟ್ ಬೋಯಿಂಗ್ 777 ತನ್ನ ಮೊದಲ ಹಾರಾಟ ಮಾಡಿತು.

2012: ಡೀಸಲಿನ ನಿಷ್ಕಾಸದಿಂದ ಕ್ಯಾನ್ಸರ್ ರೋಗ ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತೀರ್ಮಾನಿಸಿತು.

2013: ರಷ್ಯಾದ ಸಂಸತ್ತು ಸಲಿಂಗಕಾಮಿ ಪ್ರಚಾರವನ್ನು ನಿಷೇಧಿಸುವ ಕಾನೂನನ್ನು ಅನುಮೋದಿಸಿತು.

ಪ್ರಮುಖ ಜನನ/ಮರಣ:

1761: ನಾನಾಸಾಹೇಬ ಪೇಶ್ವೆ ಪಾಣಿಪಟ್ಟಿನ ಯುದ್ಧದಲ್ಲಿ ಅಸುನೀಗಿದರು.

1843: ಖಗೋಳೀಯ ದೂರವನ್ನು ಅಳಿಯಲು ಹೆಸರಾದ ಸ್ಕಾಟಿಶ್ ಖಗೋಳವಿಜ್ಞಾನಿಯಾದ ಸರ್ ಡೇವಿಡ್ ಗಿಲ್ ಜನಿಸಿದರು.

1924: ಅಮೇರಿಕಾದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್ ಬುಶ್ ಜನಿಸಿದರು.

1957: ಪಾಕಿಸ್ತಾನದ ಮಾಜಿ ಕ್ರಿಕೆಟ್ ಬ್ಯಾಟ್ಸ್ ಮ್ಯಾನ್ ಆಗಿದ್ದ ಜಾವೇದ್ ಮಿಯಾನ್ದಾದ್ ಜನಿಸಿದರು.

1972: “ಮಹಾತ್ಮ-ಲೈಫ್ ಆಫ್ ಮೋಹನ್ ದಾಸ್ ಕರಂಚಂದ್ ಗಾಂಧಿ” ಮಹಾತ್ಮಾ ಗಾಂಧಿಯ ಎಂಟು ಸಂಪುಟಗಳ ಜೀವನಚರಿತ್ರೆಯ ಲೇಖಕ ದೀನನಾಥ ಗೋಪಾಲ್ ತೆಂಡುಲ್ಕರ್ ನಿಧನರಾದರು.

1976: ಭಾರತೀಯ ತತ್ವಜ್ಞಾನಿ ಮತ್ತು ಸಂಸ್ಕೃತ ವಿದ್ವಾಂಸ ಗೋಪಿನಾಥ್ ಕವಿರಾಜ್ ಜನಿಸಿದರು.

 

Categories
e-ದಿನ

ಜೂನ್-11

 

ಪ್ರಮುಖ ಘಟನೆಗಳು:

1644: ಫ್ಲೊರಿಂಟೈನ್ ವಿಜ್ಞಾನಿ ಇವಾನ್ಗೆಲಿಸ್ಟಾ ಟೊರಿಸೆಲ್ಲಿ ಅವರು ಮೈಕೆಲಾಂಜೆಲೊ ರಿಕ್ಕಿ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಆವಿಶ್ಕಾರವಾದ ಪಾದರಸದ ಬ್ಯಾರೋಮೀಟರಿನ ಬಗ್ಗೆ ವಿವರಿಸಿದರು.

1742: ಬೆಂಜಾಮಿನ್ ಫ್ರಾಂಕ್ಲಿನ್ “ಫ್ರಾಂಕ್ಲಿನ ಸ್ಟವ್” ಕಂಡುಹಿಡಿದರು.

1770: ಕ್ಯಾಪ್ಟೆನ್ ಜೇಮ್ಸ್ ಕುಕ್ ಆಸ್ಟ್ರೇಲಿಯಾದ “ಗ್ರೇಟ್ ಬ್ಯಾರಿಯರ್ ರೀಫ್” ಅನ್ನು ಕಂಡುಹಿಡಿದರು.

1793: ಮೊದಲ ಅಮೇರಿಕನ್ “ಸ್ಟವ್” ಪೇಟೆಂಟನ್ನು ರಾಬರ್ಟ್ ಹ್ಯಾಟ್ರಿಕ್ಕಿಗೆ ನೀಡಲಾಯಿತು.

1816: ಬಾಲ್ಟಿಮೋರ್ ದೇಶದ ಗ್ಯಾಸ್ ಲೈಟ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1825: ನ್ಯೂಯಾರ್ಕ್ ಸಿಟಿಯ ಹ್ಯಾಮಿಲ್ಟನ್ ಕೋಟೆಯ ಅಡಿಪಾಯ ಹಾಕಲಾಯಿತು.

1859: ಕಾಂಸ್ಟಾಕ್ ಬೆಳ್ಳಿಯ ಹೊರೆಯೊಂದನ್ನು ನೆವಾಡದ ವರ್ಜಿನಿಯಾ ನಗರದ ಬಳಿ ಪತ್ತೆಯಾಯಿತು.

1866: ಆಗ್ರಾ ಉಚ್ಛ ನ್ಯಾಯಾಲಯ (ಇಂದಿನ ಅಲಹಾಬಾದ್ ಉಚ್ಛನ್ಯಾಯಾಲಯ) ಭಾರತದಲ್ಲಿ ಸ್ಥಾಪಿಸಲಾಯಿತು.

1870: ಮೊದಲ ಸರಾಯಿ ಬಟ್ಟಿಯನ್ನು ಆಂಸ್ಟರ್ ಡ್ಯಾಂನಲ್ಲಿ ತೆರೆಯಲಾಯಿತು.

1891: ಪೋರ್ಟೋ ರಿಕನ್ ಧ್ವಜವನ್ನು ಅಳವಡಿಸಿತು.

1892: ವಿಶ್ವದ ಪ್ರಥಮ ಫಿಲ್ಮ್ ಸ್ಟೂಡಿಯೋಗಳಲ್ಲಿ ಒಂದಾದ “ಲೈಮ್ ಲೈಟ್ ಡಿಪಾರ್ಟ್ಮೆಂಟ್” ಅನ್ನು ಅಧಿಕೃತವಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಸ್ಥಾಪಿಸಲಾಯಿತು.

1895: ಗ್ಯಾಸ್ ಚಾಲಿತ ವಾಹನವೊಂದಕ್ಕೆ ಚಾರ್ಲ್ಸ್ ಇ ಡುರ್ಯಾ ಪೇಟೆಂಟ್ ಪಡೆದರು.

1901: ಕುಕ್ ದ್ವೀಪಗಳನ್ನು ನ್ಯೂಜಿಲ್ಯಾಂಡಿನ ಭಾಗವಾಗಿ ಘೋಷಿಸಲಾಯಿತು.

1927: ಚಾರ್ಲ್ಸ್ ಲಿಂಡ್ ಬರ್ಗ್ ಅವರಿಗೆ ಮೊದಲ ಡಿಸ್ಟಿಂಗ್ವಿಶ್ಡ್ ಫ್ಲೈಯಿಂಗ್ ಕ್ರಾಸ್” ನೀಡಿ ಗೌರವಿಸಲಾಯಿತು.

1939: ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಇಂಗ್ಲೆಂಡಿನ ಮಹಾರಾಜ ಮತ್ತು ಮಹಾರಾಣಿ ಅವರು ಮೊದಲ “ಹಾಟ್ ಡಾಗ್ಸ್” ತಿನಿಸಿನ ರುಚಿ ನೋಡಿದ್ದರು.

1955: ಮೊದಲ ಮಾಗ್ನೀಷಿಯಂ ಜೆಟ್ ವಿಮಾನವು ಹಾರಾಡಿತು.

1960: ಪಾಕಿಸ್ತಾನದಲ್ಲಿ ವಿವಾಹದ ಸಂಭ್ರಮದಲ್ಲಿ ತುಂಬಿದ್ದ ಒಂದು ಮನೆ ಕುಸಿದು ಆ ಮನೆಯಲ್ಲಿದ್ದ 30 ಜನರು ಮೃತಪಟ್ಟರು.

1975: ಉತ್ತರ ಸಮುದ್ರ ತೈಲಕ್ಷೇತ್ರದಿಂದ ಮೊದಲನೇ ಬಾರಿಗೆ ತೈಲವನ್ನು ಹೊರತೆಗಿಯಲಾಯಿತು.

1975: ಗ್ರೀಸ್ ದೇಶವು ಸಂವಿಧಾನವನ್ನು ಅಳವಡಿಸಿಕೊಂಡಿತು.

1978: ಲಂಡನ್ನಿನ ಕ್ರಿಸ್ಟಾ ಟೈಬಸ್ “ಹೂಲಾ-ಹುಪ್” ಅನ್ನು ಸತತವಾಗಿ 24.5 ಗಂಟೆಗಳ ಕಾಲ ಆಡಿ ನೂತನ ವಿಶ್ವದಾಖಲೆ ಮಾಡಿದರು.

1980: ಸ್ಯಾನ್ ಫ್ರಾನ್ಸಿಸಕೊದ ಕಿ-ಐಜೆಲ್ಸೈಡ್ ಸ್ಟ್ರೀಟ್ ಕಾರು “ಮೆಟ್ರೋ ಸೇವೆ”ಯಾಗಿ ಮಾರ್ಪಾಡಾಯಿತು,

1981: ನರಭಕ್ಷಕ ಇಸೈ ಸಾಗಾವಾ ಡಚ್ ವಿದ್ಯಾರ್ಥಿಯನ್ನು ಕೊಂದನು.

1991: ಮೈಕ್ರೋಸಾಫ್ಟ್ ಎಂಎಸ್ ಡಾಸ್ 5.0 ಅನ್ನು ಬಿಡುಗಡೆಮಾಡಿತು.

ಪ್ರಮುಖ ಜನನ/ಮರಣ:

1897: ಭಾರತದ ಸ್ವಾತಂತ್ರ ಹೋರಾಟಗಾರ ರಾಮಪ್ರಸಾದ ಬಿಸ್ಮಿಲ್ಲಾ ಜನಿಸಿದರು.

1948: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಜನಿಸಿದರು.

 

Categories
e-ದಿನ

ಜೂನ್-10

 

ಪ್ರಮುಖ ಘಟನೆಗಳು:

1652: ಅಮೇರಿಕಾದ ಬಾಸ್ಟನಲ್ಲಿ ಜಾನ್ ಹಲ್ ಮೊದಲ ನಾಣ್ಯ ಟಂಕಿಸುವ ಮುದ್ರಣಾಲಯ ತೆರೆದರು.

1720: ಇಂಗ್ಲೆಂಡಿನ ಶ್ರೀಮತಿ ಕ್ಲೆಮೆಂಟ್ಸ್  ಮೊದಲ ಪೇಸ್ಟ್ ಶೈಲಿಯ ಟೂತ್ ಪೇಸ್ಟ್ ಅನ್ನು ಮಾರುಕಟ್ಟೆಗೆ ತಂದರು.

1760: ಮಾದಕ ದ್ರವ್ಯ ಬಳಕೆ ನಿಯಂತ್ರಣಕ್ಕೆ ಪರಿಣಾಮಕಾರಿ ಕಾನೂನನ್ನು ನ್ಯೂಯಾರ್ಕಿನಲ್ಲಿ ಅಂಗೀಕರಿಸಲಾಯಿತು.

1776: ಕಾನ್ಟಿನೆಂಟಲ್ ಕಾಂಗ್ರೆಸ್ ಸ್ವಾತಂತ್ರ್ಯದ ಘೋಷಣೆಯನ್ನು ಬರೆಯಲು ಒಂದು ಸಮಿತಿಯನ್ನು ರೂಪಿಸಿತು.

1793: ಮೊದಲ ಸಾರ್ವಜನಿಕ ಪ್ರಾಣಿ ಸಂಗ್ರಹಾಲಯ ಪ್ಯಾರಿಸ್ ನಲ್ಲಿ ತೆರೆಯಿತು.

1809: ಅಮೇರಿಕಾದ ಮೊದಲ ಉಗಿ ದೋಣಿ ಸಮುದ್ರಯಾನ ಮಾಡಲು ನ್ಯೂಯಾರ್ಕಿನಿಂದ ಹೊರಟಿತು.

1829: ಮೊದಲ ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡುವೆ ದೋಣಿ ಓಟದ ಪಂದ್ಯ ನಡೆಯಿತು.

1846: ರಾಬರ್ಟ್ ಥಾಂಸನ್ ರಬ್ಬರ್ ಟೈಯರ್ ಮೇಲೆ ಇಂಗ್ಲೀಷ್ ಪೇಟೆಂಟ್ ಪಡೆದರು.

1848: ಮೊದಲ ಟೆಲಿಗ್ರಾಫ್ ಲಿಂಕನ್ನು ನ್ಯೂಯಾರ್ಕ್ ಸಿಟಿ ಮತ್ತು ಶಿಕಾಗೋ ನಡುವೆ ತೆರೆಯಲಾಯಿತು.

1854: ಜಾರ್ಜ್ ಎಫ್ ಬಿ ರೈಮನ್ ಬಾಹ್ಯಾಕಾಶ ಡೊಂಕಾಗಿದೆ ಎಂದು ಪ್ರಸ್ತಾಪಿಸಿದರು.

1854: ಯುನೈಟೆಡದ ಸ್ಟೇಟ್ಸಿನ ನೌಕಾ ಅಕಾಡೆಮಿಯ ಮೊದಲ ಗುಂಪಿನ ವಿಧ್ಯಾರ್ಥಿಗಳು ಪದವಿ ಹೊಂದಿದರು.

1857: ಕೆನೆಡಾದ ಕರೆನ್ಸಿಯನ್ನು ದಶಮಾಂಶ ಕರೆನ್ಸಿ ವ್ಯವಸ್ಥೆಯಲ್ಲಿ ಹಾಕುವ ಕ್ರಿಯೆಯನ್ನು ಬ್ರಿಟನ್ ಅಂಗೀಕರಿಸಿತು.

1908: ಮೊದಲ ಹಾರುವ ಕ್ಲಬ್ಬನ್ನು ಏರೋನಾಟಿಕಲ್ ಸೊಸೈಟಿ ಆಫ್ ನ್ಯೂಯಾರ್ಕಿನಲ್ಲಿ ತೆರೆಯಲಾಯಿತು.

1909: ತೊಂದರೆಗೀಡಾದಾಗ ಬಳಸುವ ಎಸ್.ಓ.ಎಸ್ ಸಂಕೇತವನ್ನು ಮೊದಲ ಬಾರಿಗೆ ಬಳಸಲಾಯಿತು.

1925: ಟೆನ್ನೆಸ್ಸೀಯ ರಾಜ್ಯ ವಿಕಾಸನ ಸಿದ್ಧಾಂತವನ್ನು ನಿರಾಕರಿಸಿದ ಹೊಸ ಜೀವವಿಜ್ಞಾನದ ಪಠ್ಯ ಪುಸ್ತಕವನ್ನು ಅಳವಡಿಸಿಕೊಂಡಿತು.

1932: ಕೃತಕ ಮಿಂಚಿನ ಮೊದಲ ಪ್ರದರ್ಶನ ಪಿಟ್ಸ್ ಫೀಲ್ಡ್ ಮಾಸಿನಲ್ಲಿ ನಡೆಯಿತು.

1939: ಎಂ.ಜಿ.ಎಂ ಕಾರ್ಟೂನಿನ ಬಾರ್ನೀ ಕರಡಿ ಮೊದಲ ಬಾರಿಗೆ ಪ್ರಸಾರ ಕಂಡಿತು.

1947: ಸಾಬ್ ತನ್ನ ಮೊದಲ ವಾಹನವನ್ನು ಉತ್ಪಾದಿಸಿತು.

1952: ಅಮೇರಿಕ ಅಧ್ಯಕ್ಷ ಹ್ಯಾರಿ ಟ್ರೂಮನ್ ಉಕ್ಕಿನ ಉದ್ಯಮವನ್ನು ರಾಷ್ಟ್ರೀಕರಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

1955: ಮೊದಲ ಬಾರಿಗೆ ವೈರಸನ್ನು ಅಂಶಗಳ ಭಾಗವಾಗಿ ಭಾಗಮಾಡಿದ ವರದಿ ಮಾಡಲಾಯಿತು.

1963: ಅಮೇರಿಕ ಸಮಾನ ವೇತನ ಆಕ್ಟ್ ಅನ್ನು ಸಹಿ ಮಾಡಿ ಕಾನೂನಾಗಿ ತಂದವರು ಅಧ್ಯಕ್ಷ ಜಾನ್ ಎಫ್ ಕೆನ್ನೆಡಿ.

1973: ನಾಸಾ ರೇಡಿಯೋ ಆಸ್ಟ್ರಾನಮಿ ಎಕ್ಸ್ಪ್ಲೋರರ್ 49ಅನ್ನು ಚಂದ್ರನ ಕಕ್ಷೆಗೆ ಹಾರಿಸಿತು.

1977: ಆಪಲ್ ಸಂಸ್ಥೆ ತನ್ನ ಮೊದಲ ಆಪಲ್ ಕಂಪ್ಯೂಟರ್ II ಅನ್ನು ರವಾನಿಸಿತು.

1985: ಕೋಕ ಕೋಲಾ ಸಂಸ್ಥೆಯು ತನ್ನ 99 ವರ್ಷಗಳ ಹಳೆ ಸೂತ್ರವನ್ನು ಮತ್ತೆ ತರುವುದಾಗಿ ಘೋಷಿಸಿತು.

1992: ಉಪಗ್ರಹ ಇಂಟೆಲ್ ಕೆ-ಸಾಟ್ ಅನ್ನು ಹಾರಿಸಲಾಯಿತು.

ಪ್ರಮುಖ ಜನನ/ಮರಣ:

1735: ಅಮೇರಿಕದ ಕಾಂಟಿನೆಂಟಲ್ ಸೈನ್ಯದ ವೈದ್ಯ ಮುಖ್ಯಸ್ಥ ಜಾನ್ ಮೊರ್ಗನ್ ಜನಿಸಿದರು.

1832: ನಿಕೌಲಾಸ್ ಒಟ್ಟೊ ನಾಲ್ಕು ಸ್ಟ್ರೋಕ್ ಚಕ್ರವನ್ನು ಬಳಸಿದ ಮೊದಲ ಆಂತರಿಕ-ದಹನಕಾರಿ ಇಂಜಿನನ್ನು ರಚಿಸಿದ ವಿಜ್ಞಾನಿ ಜನಿಸಿದರು.

1929: ಸಾಮಾಜಿಕ ನಡವಳಿಕೆಯ ಆನುವಂಶಿಕ ಆಧಾರದ ಮೇಲೆ ಸಂಶೋಧನೆ ಮಾಡಿದ ಎಡ್ವರ್ಟ್ ಓ ವಿಲ್ಸನ್ ಜನಿಸಿದರು.

1955: ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಜನಿಸಿದರು.

 

Categories
e-ದಿನ

ಜೂನ್-9

 

ಪ್ರಮುಖ ಘಟನೆಗಳು:

1525: ಹರ್ಟೋಜೆನ್ ಬಾಸ್ಚ್ ನಲ್ಲಿ ತೆರಿಗೆ ದಂಗೆ ಆರಂಭವಾಯಿತು.

1650: ಹಾರ್ವರ್ಡಿನ ಎರಡು ಆಡಳಿತಾತ್ಮಕ ಮಂಡಳಿಗಳಲ್ಲಿ ಅತಿ ಶಕ್ತಿಯುಳ್ಳ ಹಾರ್ವರ್ಡ್ ಕಾರ್ಪೊರೇಷನ್ ಸ್ಥಾಪಿತವಾಯಿತು. ಅಮೇರಿಕಾದ ಮೊದಲ ಕಾನೂನಾತ್ಮಕ ನಿಗಮವಾಯಿತು.

1790: ಸಂವಿಧಾನದ ಅಡಿಯಲ್ಲಿ ಹಕ್ಕುಸ್ವಾಮ್ಯ ಪಡೆದ ಮೊದಲ ಪುಸ್ತಕ “ಫಿಲಡೆಲ್ಫಿಯಾ ಕಾಗುಣಿತ ಪುಸ್ತಕ”.

1822: ಚಾರ್ಲ್ಸ್ ಗ್ರಹಂ ನಕಲಿ ಹಲ್ಲುಗಳ ಪೇಟೆಂಟ್ ಪಡೆದರು.

1869: ಚಾರ್ಲ್ಸ್ ಎಲ್ಮರ್ ಹೈರ್ಸ್ ತನ್ನ ಮೊದಲ ರೂಟ್ ಬೀಯರನ್ನು ಮಾರಲು ಆರಂಭಿಸಿದರು.

1873: ಆಲೆಕ್ಸಾಂಡ್ರ ಅರಮನೆ ತೆರೆದ 16 ದಿನಗಳಿಗೆ ಬೆಂಕಿ ಅನಾಹುತದಿಂದ ಸುಡಲ್ಪಟ್ಟಿತ್ತು.

1902: ಸ್ವಯಂಚಾಲಿತ ಉಪಹಾರ ಗೃಹ ಫಿಲಡೆಲ್ಫಿಯಾದಲ್ಲಿ ತೆರೆಯಲಾಯಿತು.

1919: ಫ್ರಾನ್ಸ್ ನಲ್ಲಿ ಜೆನೆರಲ್ ಸ್ಟೀಲ್ ಮುಷ್ಕರ ನಡೆಯಿತು.

1922: ಯೇಲ್ ವಿಶ್ವವಿದ್ಯಾಲದಲ್ಲಿ ಹಾರ್ಕ್ನೆಸ್ ಸ್ಮಾರಕ ಚೈಮಿನ ರಿಂಗಣ ಮೊದಲ ಬಾರಿ ಕೇಳಿತು.

1923: ಬ್ರಿಂಕ್ಸ್ ಶಸ್ತ್ರ ಸಜ್ಜಿತ ಭದ್ರತಾ ವಾಹನಗಳನ್ನು ಅನಾವರಗೊಳಿಸಲಾಯಿತು.

1931: ಮೊದಲ ರಾಕೆಟ್-ಚಾಲಿತ ವಿಮಾನದ ವಿನ್ಯಾಸದ ಪೇಟೆಂಟ್ ರಾಬರ್ಟ್ ಗಾಡ್ದರ್ಡ್ ಪಡೆದರು.

1931: ಡೊನಾಲ್ಡ್ ಡಕ್ ಕಾರ್ಟೂನಿನ ಮೊದಲ ಪ್ರಸಾರ ಆಗಿತು.

1941: ಫೋರ್ಟ್ ಸ್ಮೆಡೆರೊವೊದಲ್ಲಿ ಮದ್ದುಗುಂಡಿನ ಘಟಕ ಸ್ಫಟಿಸಿ 1500 ಜನ ಸಾವನ್ನಪಿದರು.

1943: ಅಮೇರಿಕಾದ ಆದಾಯ ತೆರಿಗೆ ಕಡಿತಗೊಳಿಸುವುದರ ಬಗ್ಗೆ ನಿರ್ಧರಿಸಲಾಯಿತು.

1949: ಕನ್ಸಾಸಿನ ಶ್ರೀಮತಿ ಜಾರ್ಜಿಯ ನೀಸ್ ಕ್ಲಾರ್ಕ್ ಅಮೇರಿಕಾದ ಮೊದಲ ಮಹಿಳಾ ಕಝಾಂಶಿಯಾಗಿದ್ದರು.

1958: ಯುನೈಟೆಡ್ ಕಿಂಗ್ಡಮಿನ “ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣ”ಕ್ಕೆ ಮಹಾರಾಣಿ ಎಲಿಜಿಬತ್ II ಅಧಿಕೃತವಾಗಿ ಚಾಲನೆ ನೀಡಿದರು,

1970: ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಬಾಬ್ ಡ್ಯಾಲನ್ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಆಫ್ ಮೂಸಿಕ್ ನೀಡಿ ಗೌರವಿಸಿತು.

1986: ಏಡ್ಸ್ ರೋಗದಿಂದ ಉಂಟಾದ ಮೊದಲ ಸಾವಿನ ಸುದ್ದಿ ವರದಿಯಾಯಿತು.

1997: ಸಿಕ್ಕಿಮ್ಮಿನ ಗ್ಯಾಂಗ್ಟಾಕಿನಲ್ಲಿ ಭೂಕುಸಿತ ಉಂಟಾಗಿ ಸುಮಾರು 50 ಜನ ನಿಧನರಾಗಿ 50000 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದರು.

1998: ಗುಜರಾತಿನಲ್ಲಿ ಚಂಡಮಾರುತದಿಂದ ಆರು ದಿನದಲ್ಲಿ 1000 ಜನ ಸಾವನ್ನಪ್ಪಿದರು.

1998: ಡಾಲರ್ ವಿರುದ್ದ ಭಾರತೀಯ ರುಪಾಯಿ ಮೌಲ್ಯ ರೂ. 42.23/25 ಕ್ಕೆ ಕುಸಿಯಿತು.

2014: ಲ್ಯಾವರ್ನೆ ಕಾಕ್ಸ್ “ಟೈಮ್” ಮ್ಯಾಗಜೀನ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಟ್ರಾನ್ಸ್ ಜೆಂಡರ್.

ಪ್ರಮುಖ ಜನನ/ಮರಣ:

1900: ಸ್ವಾತಂತ್ರ ಹೋರಾಟಗಾರ ಬಿರ್ಸ ಮುಂಡ ರಾಂಚಿ ಜೈಲಿನಲ್ಲಿ ನಿಧನರಾದರು.

1909: ಖ್ಯಾತ ಪತ್ತೇದಾರಿ ಹಾಗೂ ಬರಹಗಾರ ಬಾಬುರಾವ್ ಆರ್ನಾಲ್ಕರ್ ಜನಿಸಿದರು.

1949: ಭಾರತದ ಮೊದಲ ಮಹಿಳಾ ಪೋಲಿಸ್ ಆಫಿಸರ್ ಕಿರಣ್ ಬೇಡಿ ಪಂಜಾಬಿನ ಅಮೃತ್ಸರ್ ನಲ್ಲಿ ಜನಿಸಿದರು.

1964: ಭಾರತದ ಎರಡನೇ ಪ್ರಧಾನಮಂತ್ರಿ ಲಾಲಬಹಾದುರ್ ಶಾಸ್ತ್ರಿ ನಿಧನರಾದರು.

2011: ಭಾರತದ ಖ್ಯಾತ ಚಿತ್ರಕಲಾವಿದರಾದ ಎಂ.ಎಫ್.ಹುಸ್ಸೇನ್ ನಿಧನರಾದರು.

 

Categories
e-ದಿನ

ಜೂನ್-8

ಪ್ರಮುಖ ಘಟನೆಗಳು:

1786: ಮಾರಾಟಕ್ಕಾಗಿ ತಯಾರಿಸಿದ ಮೊದಲ ಐಸ್ಕ್ರೀಂ ಅನ್ನು ಜಾಹೀರಾತು ಮಾಡಲಾಯಿತು.

1789: ಅಮೇರಿಕಾದ ಪ್ರತಿನಿಧಿಗಳ ಮನೆ (ಹೌಸ್ ಆಫ್ ರೆಪ್ರೆಸೆಂಟೇಟಿವ್) ನಲ್ಲಿ ಹಕ್ಕುಗಳ ಬಿಲ್ಲನ್ನು ಜೇಮ್ಸ್ ಮೇಡಿಸನ್ ಮೊದಲ ಬಾರಿಗೆ ಪ್ರಸ್ತಾಪಿಸಿದರು.

1809: ವಿಲ್ಲಿಯಂ ಹೈಡ್ ವೊಲ್ಲಾಸ್ಟನ್ ಮೊದಲ ಪ್ರತಿಫಲಿತ ಕೋನಮಾಪಕ (ಗೊನಿಯೋಮೀಟರ್) ಕಂಡುಹಿಡಿದರು.

1824: ಕ್ಯೂಬೆಕ್ಕಿನ ನೋಆ ಕುಶಿಂಗ್ ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಶೀನ್) ಗೆ ಪೇಟೆಂಟ್ ಪಡೆದರು.

1829: ಲಿವರ್ ಪೂಲಿನಲ್ಲಿ ಲಂಡನ್ನಿನ ಹೊರಗಿನ ಮೊದಲ ಯು.ಕೆ ಮುನಿಸಿಪಲ್ ಈಜುಕೊಳವು ತೆರೆಯಿತು.

1861: ಅಮೇರಿಕಾದ ನೈರ್ಮಲ್ಯ ಆಯೋಗಕ್ಕೆ ಕಾರ್ಯನಿರ್ವಾಹಕ ಅನುಮೋದನೆ ನೀಡಲಾಯಿತು.

1869: ಶಿಕಾಗೋದ ಈವ್ಸ್ ಡಬಲ್ಯೂ ಮೆಕ್ ಗೆಫೆ ಮೊದಲ ವ್ಯಾಕ್ಯೂಮ್ ಕ್ಲೀನರಿಗೆ ಪೇಟೆಂಟ್ ಪಡೆದರು.

1872: ಅಮೇರಿಕಾದ ಕಾಂಗ್ರೆಸ್ ಸರ್ಕಾರವು “ಪೆನ್ನಿ ಅಂಚೆ ಕಾರ್ಡನ್ನು” ಅನುಮೋದಿಸಿತು.

1887: ಹರಮನ್ ಹೋಲೆರಿತ್ ತನ್ನ “ಪಂಚ್ ಕಾರ್ಡ್ ಕ್ಯಾಲ್ಕುಲೇಟರ್”ಗೆ ಪೇಟೆಂಟ್ ಪಡೆದರು.

1889: ಲಾಸ್ ಏಂಜೆಲ್ಸ್ ನಲ್ಲಿ ಕೇಬಲ್ ಕಾರುಗಳ ಸೇವೆ ಆರಂಭವಾಯಿತು.

1896: ಬಾರೆನ್ ಡೆ ಜುಯ್ಲೆನ್ ಅವರ “ಪಿರ್ಜೊ” ಕಾರನ್ನು ಅವರ ಮೆಕ್ಯಾನಿಕ್ ಕಳ್ಳತನ ಮಾಡಿದ. ಇದು ಮೊದಲ ಕಾರುಗಳ ಕಳ್ಳತನವಾಗಿ ದಾಖಲಾಯಿತು.

1905: ಅಮೇರಿಕಾ ಅಧ್ಯಕ್ಷ ಥಿಯೋಡರ್ ರೂಸ್ವೆಲ್ಟ್ ಜಪಾನ್ ಮತ್ತು ರಷ್ಯಾ ದೇಶಗಳಿಗೆ ಸಮಾನವಾದ ಟಿಪ್ಪಣಿ ಕಳುಹಿಸಿ ತಮ್ಮ ನಡುವೆ ಇರುವ ಯುದ್ಧವನ್ನು ಸಮಾಲೋಚಿಸಲು ಮತ್ತು ಕೊನೆಗೊಳಿಸಲು ಅವರನ್ನು ಒತ್ತಾಯಿಸಿದರು. ಅಗತ್ಯವಿದ್ದರೆ ತಾನು ಖುದ್ದು ಸಹಾಯ ಹಸ್ತ ನೀಡುವುದಾಗಿ ಹೇಳಿದರು.

1912: ಕಾರ್ಲ್ ಲ್ಯಾಮೆಲ್ಲೆ “ಯುನಿವರ್ಸಲ್ ಪಿಚ್ಚರ್ಸ್” ಅನ್ನು ಸಂಯೋಜಿಸಿದರು.

1915: ಲೋಕಮಾನ್ಯ ತಿಲಕ್ ಅವರು ಬರೆದ ಕೃತಿ “ಗೀತ ರಹಸ್ಯ” ಪ್ರಕಟವಾಯಿತು.

1918: “ಅಕ್ವಿಲ” ನವ್ಯತಾರೆ “ಕೆಪ್ಲರ್” ನವ್ಯತಾರೆ (1604) ಯ ನಂತರ ಕಂಡ ಅತ್ಯಂತ ಪ್ರಕಾಶಮಾನವಾದ ನವ್ಯತಾರೆ.

1936: ಭಾರತೀಯ ರಾಜ್ಯ ಪ್ರಸಾರ ಕೇಂದ್ರವನ್ನು ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಎಂದು ಮರುನಾಮಕರಣ ಮಾಡಲಾಯಿತು.

1936: ಮೊದಲ ಪಾರ್ಕಿಂಗ್ ಮೀಟರನ್ನು ಕಂಡುಹಿಡಿಲಾಯಿತು.

1937: ವಿಶ್ವದ ಅತ್ಯಂತ ದೊಡ್ಡ ಹೂವಾದ ಕಲ್ಲಾ ಲಿಲ್ಲಿ (12 ಇಂಚ್ ಅಗಲ) ನ್ಯೂಯಾರ್ಕಿನ ಬೊಟಾನಿಕಲ್ ಉದ್ಯಾನವನದಲ್ಲಿ ಅರಳಿತು.

1938: ಸ್ಥಳಿಯ ಶಾಲಾ ಹುಡುಗನಾಗಿದ್ದ ಗೆರ್ಟ್ ತೆರ್ಬ್ಲಾಂಚೆ ಅಜ್ಞಾತ ‘ಧೃಡ-ರೀತಿಯ’ ಮಾನವ ಪೂರ್ವಜರ ಪಳಯುಳಿಕೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಕಂಡುಹಿಡಿದನು. ನಂತರ ರಾಬರ್ಟ್ ಬ್ರೂಮ್ ಎಂಬಾತ ಇದನ್ನು “ಪರಾಂತ್ರೋಪಸ್ ರೋಬಸ್ಟಸ್” ಎಂದು ಹೆಸರಿಡುತಾರೆ.

1948: ಏರ್ ಇಂಡಿಯಾ ಸಂಸ್ಥೆಯ ಮೊದಲ ಅಂತರಾಷ್ಟ್ರೀಯ ವಿಮಾನ “ಮಲಬಾರ್ ಪ್ರಿನ್ಸೆಸ್” ಬಾಂಬೆ ಇಂದ ಹೊರಟು ಕಾಯಿರೋ ಹಾಗೂ ಜೆನಿವಾದ ಮೂಲಕ ಲಂಡನನ್ನು ತಲುಪಿತು. ಇದು ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ನಡುವೆ ಸಪ್ತಾಹಿಕ ವಾಯು ಸೇವೆಯಾಗಿತ್ತು.

1949: ಸಿಯಾಂ ದೇಶವು “ಥೈಲಾಂಡ್” ಎಂದು ಮರುನಾಮಕರಣಗೊಂಡಿತು.

1987: ನ್ಯೂಜಿಲ್ಯಾಂಡಿನ ಕಾರ್ಮಿಕ ಸರ್ಕಾರವು ಪರಮಾಣು ಶಸ್ತ್ರಾಸ್ತ್ರದ ವಿರುದ್ಧ ಶಾಸನ ನಡೆಸಿತು. ಪರಮಾಣು ಶಕ್ತಿಯ ವಿರುದ್ಧ ಶಾಸನ ಮಾಡಿದ ಏಕೈಕ ರಾಷ್ಟ್ರ ನ್ಯೂಜಿಲ್ಯಾಂಡ್ ಆಗಿತ್ತು.

1990: ಭಾರತ ಮತ್ತು ನೇಪಾಳವು ಮೊದಲ ಸಂಭಂದವನ್ನು ಪುನಃ ಸ್ಥಾಪಿಸಲು ನಿರ್ಧರಿಸಿತು.

ಪ್ರಮುಖ ಜನನ/ಮರಣ:

1906: ಕ್ರಿಕೆಟ್ ಪಟು ಎಸ್.ನಾಜಿರ್ ಅಲಿ ಜನಿಸಿದರು.

1957: ಖ್ಯಾತ ಚಲನಚಿತ್ರ ನಟಿ ಡಿಂಪಲ್ ಕಪಾಡಿಯಾ ಜನಿಸಿದರು.

 

Categories
e-ದಿನ

ಜೂನ್-7

ಪ್ರಮುಖ ಘಟನೆಗಳು:

1860: ಕಾರ್ಮಿಕರು ಸ್ಯಾನ್ ಫ್ರಾನ್ಸಿಸಿನ ಮಾರ್ಕೆಟ್ ಸ್ಟ್ರೀಟ್ ರೈಲ್ ರೋಡಿಗೆ ಹಳಿಗಳನ್ನು ಹಾಕಲು ಆರಂಭಿಸಿದರು.

1875: ಕ್ಯಾಲಿಫೋರ್ನಿಯ ರೈಫಲ್ ಹಾಗೂ ಪಿಸ್ತೋಲ್ ಅಸೋಸಿಯೇಷನ್ ಸ್ಥಾಪಿಸಲಾಯಿತು.

1887: ಮೋನೊಟೈಪ್ ಮಾದರಿ ಹೊದಿಸುವಿಕೆಯ ಯಂತ್ರದ ಪೇಟೆಂಟನ್ನು ಟಾಲ್ಬರ್ಟ್ ಲಾನ್ಸ್ಟನ್ ಪಡೆದರು.

1893: ಮಹಾತ್ಮ ಗಾಂಧಿಜಿಯವರು ಭಾರತದಲ್ಲಿ ಮೊದಲ ಬಾರಿಗೆ ನಾಗರಿಕ ಅಸಹಕಾರ ಚಳುವಳಿ ನಡೆಸಿದರು.

1929: ವ್ಯಾಟಿಕನ್ ನಗರವು ಸಾರ್ವಭೌಮ ರಾಷ್ಟ್ರವಾಯಿತು.

1929: ಮಾರ್ಗರೆಟ್ ಬಾನ್ ಫೀಲ್ಡ್ ಬ್ರಿಟನ್ ದೇಶದ ಮೊದಲ ಮಹಿಳಾ ಮಂತ್ರಿಯಾದರು (ಕಾರ್ಮಿಕ ಇಲಾಖೆ).

1938: ಮೊದಲ ಹಾರುವ ದೋಣಿ ಬೋಇಂಗ್ 314 ಅನ್ನು ಎಡ್ಡಿ ಆಲೆನ್ ಇಂದ ಹಾರಿಸಲಾಯಿತು.

1941: ರಸಾಯನಶಾಸ್ತ್ರಜ್ಞರಾದ ಆರ್ಚರ್ ಜಾನ್ ಪೋರ್ಟರ್ ಮಾರ್ಟಿನ ಹಾಗೂ ರಿಚರ್ಡ್ ಎಲ್ ಎಂ ಸಿನ್ಜ್ ವಿಭಜನಾ ವರ್ಣರೇಖನದ (ಮಿಶ್ರಣಗಳ ಪ್ರತ್ಯೇಕಿಸುವಿಕೆ) ಮೊದಲ ಪ್ರದರ್ಶನವನ್ನು ನೀಡಿದರು.

1954: ಮೊದಲ ಸೂಕ್ಷ್ಮ ಜೀವ ವಿಜ್ಞಾನದ ಪ್ರಯೋಗಾಲಯವನ್ನು ಸಮರ್ಪಿಸಲಾಯಿತು.

1955: ಭಾರತದ ಪ್ರಧಾನ ಮಂತ್ರಿ ಜವಹರ ಲಾಲ್ ನೆಹರು ಅವರು ರಶ್ಯಾ ದೇಶಕ್ಕೆ ಪ್ರವಾಸ ಮಾಡಿದರು.

1955: ಐನ್ಸೆನ್ ಹೊವರ್ ದೂರದರ್ಶನದಲ್ಲಿ (ಕಲರ್ ಟಿವಿ) ಕಾಣಿಸಿಕೊಂಡ ಮೊದಲ ರಾಷ್ಟ್ರಾಧ್ಯಕ್ಷ.

1965: ಸೋನಿ ಸಂಸ್ಥೆಯು ಮೊದಲ ದೃಶ್ಯಚಿತ್ರವನ್ನು ದಾಖಲಿಸುವ ಮತ್ತು ತೋರಿಸುವ ಉಪಕರಣ (ವೀಡಿಯೋ ಟೇಪ್ ರೆಕಾರ್ಡರ್) ಅನ್ನು ಪರಿಚಯಿಸಿತು.

1965: ಅಮೇರಿಕಾದ ಸರ್ವೋಚ್ಛ ನ್ಯಾಯಾಲಯವು ವೈವಾಹಿಕ ದಂಪತಿಗಳ ಗರ್ಭನಿರೋಧಕಗಳ ಬಳಕೆಯನ್ನು ಕಾನೂನು ಬದ್ಧ ಎಂದು ನಿರ್ಧರಿಸಿತು.

1975: ಸೋನಿ ಸಂಸ್ಥೆಯು ಸಾರ್ವಜನಿಕರಿಗೆ ಮಾರಾಟ ಮಾಡಲು ಬೆಟಾಮ್ಯಾಕ್ಸ್ ವೀಡಿಯೋ ಕ್ಯಾಸೆಟ್ ರೆಕಾರ್ಡರ್ ಅನ್ನು ಪರಿಚಯಿಸಿತು.

1975: ಮೊದಲ ವಿಶ್ವ ಕಪ್ ಪಂದ್ಯಾವಳಿ ಭಾರತ ಮತ್ತು ಇಂಗ್ಲಾಂಡಿನ ನಡುವೆ ಲಾರ್ಡ್ಸ್ ಸ್ಟೇಡಿಯಂನಲ್ಲಿ ಆಡಲಾಯಿತು.

1979: ಭಾಸ್ಕರ-1 ಉಪಗ್ರಹವನ್ನು ಉಡಾಯಿಸಲಾಯಿತು. ಈ ಉಪಗ್ರಹದಲ್ಲಿ ಟಿವಿ ಮತ್ತು ಮೈಕ್ರೋವೇವ್ ಕ್ಯಾಮೆರಾಗಳು ಇದ್ದವು.

1989: ಶೀತಲ್ ಪಾಂಡ್ಯ 5 ವರ್ಷದ ವಯಸ್ಸಿನಲ್ಲೆ ವಿಶ್ವದಾಖಲೆ ಮಾಡಿದರು.

1989: ಒಂದು ಗಳಿಗೆ ಮುಂಜಾನೆ ಸಮಯವು 01:23:45 (1 ಗಂಟೆ 23 ನಿಮಿಷ 45 ಸೆಕೆಂಡಿಗೆ), 6-7-89 (ದಿನಾಂಕ) ಆಗಿತ್ತು.

1990: ಮೈಕೆಲ್ ಜಾಕ್ಸನ್ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದರು.

1996: ಐ.ಏ.ಎಫ್ ನ ಸಂಜಯ್ ಥಾಪರ್ ಪ್ಯಾರಚೂಟಿನಿಂದ ಹಾರಿ ಭಾರತದ ಧ್ವಜವನ್ನು ಉತ್ತರ ಧ್ರುವದಲ್ಲಿ ಹಾರಿಸಿದ ಮೊದಲಿಗ.

1997: ಮಹೇಶ್ ಭೂಪತಿ ಗ್ರಾಂಡ್ ಸ್ಲಾಂ ಟೈಟಲ್ ಪಡೆದ ಮೊದಲ ಭಾರತೀಯ.

ಪ್ರಮುಖ ಜನನ/ಮರಣ:

1606: ಸಿಖ್ಕರ 5ನೇ ಗುರು ಆಗಿದ್ದ ಗುರು ಅರ್ಜುನ್ ದೇವ್ ನಿಧನರಾದರು.

1631: ಮಹಾರಾಜ ಶಹಜಹಾನ್ ಅವರ ಪತ್ನಿ ಮುಮ್ತಾಜ್ ಬೇಗಂ ನಿಧನರಾದರು.

1965: ಮಹಾನ್ ಕ್ರಾಂತಿಕಾರಿ ಆಶುತೋಶ್ ಕಲಿ ನಿಧನರಾದರು.

1974: ಟೆನ್ನಿಸ್ ತಾರೆ ಆದ ಮಹೇಶ್ ಭೂಪತಿ ಜನಿಸಿದರು.

 

Categories
e-ದಿನ

ಜೂನ್-6

 

ಪ್ರಮುಖ ಘಟನೆಗಳು:

1674: ಶಿವಾಜಿ ಮಹಾರಾಷ್ಟ್ರದಲ್ಲಿ ಛತ್ರಪತಿಯಾಗಿ ಆಭಿಷಿಕ್ತರಾಗುತ್ತಾರೆ. .

1844: “ದಿ ಯಂಗ್ ಮೆನ್ಸ್ ಕ್ರಿಷ್ಚಿಯನ್ ಅಸೋಸಿಯೇಷನ್” ಲಂಡನ್ನಿನಲ್ಲಿ ಸ್ಥಾಪಿತವಾಯಿತು.

1882: ಮೊದಲ ವಿದ್ಯುತ್ ಚಾಲಿತ ಇಸ್ತ್ರಿ ಪೆಟ್ಟಿಗೆಯ ಪೇಟೆಂಟ್ ಅನ್ನು ಹೆಚ್.ಡಬ್ಲ್ಯುಲ್ಯು.ಸೀಲೆ ಪಡೆದರು.

1903: ಹಿರಾಲಾಲ್ ಸೇನ್ ಕೂದಲಿನ  ಔಷಧಕ್ಕೆ ಮೊದಲ ಜಾಹಿರಾತನ್ನು ಚಿತ್ರೀಕರಿಸಿದರು.

1904: ರಾಷ್ಟ್ರೀಯ ಕ್ಷಯರೋಗ ಸಂಘವು ಅಟ್ಲಾಂಟಿಕ್ ಸಿಟಿಯ ನ್ಯೂಜರ್ಸಿಯಲ್ಲಿ ರೂಪಿತಗೊಂಡಿತು.

1914: ಮೊದಲ ಬಾರಿಗೆ ವಿಮಾನವೊಂದು ಕಾಣೆಯಾಗಿ ಸಂಪರ್ಕಕ್ಕೆ ಸಿಗದಂತೆ ಕಣ್ತಪ್ಪಿ ಹೋಯಿತು.

1925: ವಾಲ್ಟರ್ ಕ್ರಿಸ್ಲರ್ ಮೋಟಾರು ವಾಹನ ತಯಾರಿಸುವ ಸಂಸ್ಥೆಯಾದ ಕ್ರಿಸ್ಲರ್ ಕಾರ್ಪೋರೇಷನನ್ನು ಸ್ಥಾಪಿಸಿದರು.

1932: ಅಮೇರಿಕಾದಲ್ಲಿ ಗ್ಯಾಸೋಲೀನಿಗೆ ಮೊದಲ ಫೆಡರಲ್ ತೆರಿಗೆ ಜಾರಿಗೆ ಬಂದಿತು.

1933: ಮೊದಲ “ಡ್ರೈವ್-ಇನ್” ಚಿತ್ರಮಂದಿರ ನ್ಯೂಜರ್ಸಿಯ ಕ್ಯಾಂಡೆನ್ ನಲ್ಲಿ ತೆರೆಯಿತು.

1933: ಅಮೇರಿಕಾದ ಉದ್ಯೋಗ ಸೇವೆಯನ್ನು ರಚಿಸಲಾಯಿತು.

1936: ಜರ್ಮನಿಯ ಬೆರ್ಲಿನ್ನಿನ ಒಂದು ಕಟ್ಟಡದಲ್ಲಿ ಮೊದಲ ಹೆಲಿಕಾಪ್ಟರನ್ನು ಪರೀಕ್ಷಿಸಲಾಯಿತು.

1936: ವಿಮಾನಗಳಿಗೆ ಉಪಯೋಗಿಸುವ ಇಂಧನವನ್ನು ಮೊದಲ ಬಾರಿಗೆ ವಾಣಿಜ್ಯವಾಗಿ ಉತ್ಪಾದಿಸಲಾಯಿತು.

1942: ಮೊದಲ ನೈಲಾನ್ ಪ್ಯಾರಚೂಟ್ ಜಿಗಿತವನ್ನು ಅಡಿಲೈನ್ ಗ್ರೇ ಹಾರ್ಟ್ಫೋರ್ಟ್ ನಲ್ಲಿ ಮಾಡಿದರು.

1944: ಅಲಾಸ್ಕ ವಿಮಾನ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು.

1946: “ದಿ ಬಾಸ್ಕೆಟ್ ಬಾಲ್ ಅಸ್ಸೋಸಿಯೇಷನ್ ಆಫ್ ಅಮೇರಿಕ” ನ್ಯೂಯಾರ್ಕಿನಲ್ಲಿ ರೂಪುಗೊಂಡಿತು.

1962: ಭಾರತದ ಮೂರನೆ ಸಾಮಾನ್ಯ ಚುನಾವಣೆ ಪ್ರಕ್ರಿಯೆ ಕೊನೆಗೊಂಡಿತು.

1981:  ಬಿಹಾರದಲ್ಲಿ ರೈಲೊಂದು ಸಮಷ್ಟಿಪುರ ನದಿಯಲ್ಲಿ ಬಿದ್ದು ಸುಮಾರು 1000ಕ್ಕೂ ಹೆಚ್ಚು ಜನ ನಿಧನರಾದರು.

1990: ಭಾರತ ಸರ್ಕಾರವು ಪಾಸ್ಪೋರ್ಟುಗಳ ಸಿಂಧುತ್ವವನ್ನು 10 ವರ್ಷಗಳಿಗೆ ವಿಸ್ತರಿಸಲು ತೀರ್ಮಾನಿಸಿತು.

1993: ಮಂಗೋಲಿಯಾ ತನ್ನ ಮೊದಲ ನೇರ ರಾಷ್ಟ್ರಪತಿ ಚುನಾವಣೆ ನಡೆಸಿತು.

1996: ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಭಾರತದೊಂದಿಗೆ ವ್ಯಾಪಾರ ಆರಂಭಿಸಲು ಹಸಿರು ನಿಷಾನೆ ನೀಡಿದರು.

1997: ಅಮೇರಿಕಾದ ಕಾಂಗ್ರೆಸ್ ಸರ್ಕಾರವು ಮದರ್ ತೆರೆಸಾ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿತು.

1997: ನೂತನ ಆರ್ಥಿಕ ಗುಂಪು BIST-EC (ಬಾಂಗ್ಲಾದೇಶ-ಭಾರತ-ಶ್ರೀಲಂಕ-ಥೈಲಾಂಡ್) ಆರ್ಥಿಕ ಸಹಕಾರ ವೇದಿಕೆ ಸ್ಥಾಪಿತವಾಯಿತು.

1991: ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರು ಟೆನ್ನಿಸ್ ಗ್ರಾಂಡ್ ಸ್ಲಾಂ ಡಬಲ್ಸ್ ಪಂದ್ಯಾವಳಿಯಲ್ಲಿ ಮೊದಲ ಗೆಲುವು ಪಡೆದರು.

2004: “ತಮಿಳು” ಭಾಷೆಯನ್ನು “ಶಾಸ್ತ್ರೀಯ ಭಾಷೆ” ಎಂದು ಭಾರತದ ರಾಷ್ರಪತಿಯಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಮಾನ್ಯ ಮಾಡಿ ಘೋಷಿಸಿದರು.

ಪ್ರಮುಖ ಜನನ/ಮರಣ:

1596: ಸಿಖ್ಖರ ಗುರುಗಳಾದ ಗುರು ಹರ್ ಗೋವಿಂದ್ ಸಿಂಗ್ ಅವರು  ಜನಿಸಿದರು.

1867: ಸ್ವಾತಂತ್ರ ಹೋರಾಟಗಾರರಾದ ಬಾಬಾ ಕರಕ್ ಸಿಂಗ್ ಸಾಯಿಲ್ ಕೋಟಿನಲ್ಲಿ ಜನಿಸಿದರು.

1929: ಪ್ರಖ್ಯಾತ ನಟರಾದ ಸುನಿಲ್ ದತ್ ಜನಿಸಿದರು.

1970: ಭಾರತೀಯ ಕ್ರಿಕೆಟ್ ಆಟಗಾರರಾದ ಸುನಿಲ್ ಜೋಶಿ ಜನಿಸಿದರು.

1984: ಉಗ್ರಗಾಮಿ ಸಿಖ್ ಧಾರ್ಮಿಕ ಬೋದಕರಾಗಿದ್ದ ಜರ್ನಾಯಿಲ್ ಸಿಂಗ್ ನಿಧನರಾದರು.

 

Categories
e-ದಿನ

ಜೂನ್-5

 

ಪ್ರಮುಖ ಘಟನೆಗಳು:

1659: ದಾರೋ ಶಿಕೋಹ್ ಅವರು ತಮ್ಮ ಪಟ್ಟಾಭಿಷೇಕವನ್ನು ಡಿಯೋರೈನಲ್ಲಿ ಆಚರಿಸಿದರು.

1661: ಐಸಾಕ್ ನ್ಯೂಟನ್ ಅವರನ್ನು ಕೇಂಬ್ರಿಡ್ಜ್ ನಲ್ಲಿನ ಟ್ರಿನಿಟಿ ಕಾಲೇಜಿಗೆ ಪ್ರವೇಶ ನೀಡಲಾಯಿತು.

1833: ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದ ಆಡಾ ಲವ್ ಲೇಸ್ ಅವರು ಚಾರ್ಲ್ಸ ಬಾಬೇಜ್ ಅವರನ್ನು ಭೇಟಿ ಮಾಡಿದರು,

1857: ವಾಲ್ಟರ್ ವುಡ್ಬರಿ ಹಾಗೂ ಜೇಮ್ಸ್ ಪೇಜ್ ಸೇರಿ ಬಟಾವಿಯಾದಲ್ಲಿ ಒಂದು ಫೋಟೋ ಸ್ಟುಡಿಯೋ ತೆರೆದರು.

1873: ಸುಲ್ತಾನ್ ಬರ್ಗಶ್ ಜಂಜಿಬಾರಿನ ಗುಲಾಮರ ಮಾರುಕಟ್ಟೆಯನ್ನು ತೆರವುಗೊಳಿಸಿದರು.

1876: ಅಮೇರಿಕಾದಲ್ಲಿ ಬಾಳೆಹಣ್ಣು ಬಹಳ ಪ್ರಸಿದ್ದಿ ಪಡೆಯಿತು.

1882: ಅರಬ್ಬಿ ಸಮುದ್ರದಲ್ಲಿ ಉಂಟಾದ ಚಂಡಮಾರುತದಿಂದ ಬಾಂಬೆನಲ್ಲೆ ಪ್ರವಾಹ ಉಂಟಾಗಿ ಸುಮಾರು 1,00,000 ಜನ ಮುಳುಗಿದರು.

1913: ಡಚ್ ದೇಶದ ಅಂಗವಿಕಲರ ಕಾನೂನನ್ನು ಜಾರಿಗೆ ತರಲಾಯಿತು.

1915: ಡೆನ್ಮಾರ್ಕಿನ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು.

1922: ಬ್ಯಾಂಕರ್ಸ್ ಕಮಿಟಿ ಆಫ್ ದ ರಿಪ್ರೇಷನ್ಸ್ ಕಮಿಷನ್ ಜರ್ಮನಿ ದೇಶಕ್ಕೆ ಅಂತರಾಷ್ಟ್ರೀಯ ಸಾಲ ನೀಡಲು ನಿರಾಕರಿಸಿತು.

1933: ಚಿನ್ನದ ಗುಣಮಟ್ಟದ ಮಾನಕವನ್ನು ರದ್ದುಗೊಳಿಸಲಾಯಿತು.

1937: ಹೆನ್ರಿ ಫೋರ್ಡ್ ಮೊದಲ ಬಾರಿ ವಾರಕ್ಕೆ 32 ಕೆಲಸದ ಗಂಟೆಯ ಪರಿಕಲ್ಪನೆ ಪರಿಚಯಿಸಿದರು.

1940: ಗುಡ್ ಇಯರ್ ಟೈಯರ್ ಮತ್ತು ರಬ್ಬರ್ ಸಂಸ್ಥೆ ಸೇರಿ ಒಂದು ಸಿನ್ಥೆಟಿಕ್ ರಬ್ಬರ್ ಟೈಯರ್ ಅನ್ನು ಪ್ರದರ್ಶಿಸಲಾಯಿತು.

1952: ಮೊದಲ ಕ್ರೀಡಾಕೂಟವನ್ನು ರಾಷ್ಟ್ರೀಯವಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು.

1963: ಯುವರಾಣಿ ಮರಿಜ್ಕೆ ತನ್ನ ಹೆಸರನ್ನು ಕ್ರಿಸ್ಟೀನಾ ಎಂದು ಬದಲಾಯಿಸಿಕೊಂಡರು.

1966: ಭಾರತದ ರೂಪಾಯಿ ಮೌಲ್ಯವು ಶೇಕಡ 36.5 ರಷ್ಟು ಕಡಿಮೆಯಾಯಿತು.

1967: ಕೊಲೆಗಾರ ರಿಚರ್ಡ್ ಸ್ಪೆಕ್ ಅವರನ್ನು ಎಲೆಕ್ಟ್ರಿಕ್ ಚೇರಿನಲ್ಲಿ ಮರಣದಂಡನೆ ನೀಡಲಾಯಿತು.

1974: ಭಾರತ ದೇಶದಲ್ಲಿ “ಸಿಡುಬು” ಸಾಂಕ್ರಾಮಿಕ ರೋಗ ಪತ್ತೆಯಾಗಿತ್ತು.

1980: ಮಣಿಪುರ ವಿಶ್ವವಿದ್ಯಾಲಯವು ಸ್ಥಾಪಿತವಾಯಿತು.

1981: ಮೊದಲ ಬಾರಿಗೆ “ಏಡ್ಸ್” ರೋಗವನ್ನು ಗುರುತಿಸಲಾಯಿತು.

1984: ಅಮೃತಸರದಲ್ಲಿನ ಸಿಖ್ ದೇವಾಲಯವಾದ  ಸ್ವರ್ಣಮಂದಿರದಲ್ಲಿ ಅಡಗಿದ್ದ ಉಗ್ರಗಾಮಿಗಳ ವಿರುದ್ದ ಅಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.

1989:ಯುದ್ಧ ಕ್ಷಿಪಣಿ “ತ್ರಿಶೂಲ್” ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.

1995: ಮೂರು ವಾರಗಳ ಕಾಲದ ಮೊಟ್ಟ ಮೊದಲ ಇಂಡೋ-ಅಮೇರಿಕಾ ಜಂಟಿ ಸೈನ್ಯದ ಕವಾಯತು ಆರಂಭವಾಯಿತು.

1998: ಉರ್ದು ಲೇಖಕರಾದ ಅಲಿ ಜಫ್ರಿ ಅವರಿಗೆ 1997ರ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2003: ಪಾಕಿಸ್ತಾನ ಮತ್ತು ಭಾರತದ ಹಲವು ಪ್ರದೇಶಗಳಲ್ಲಿ ತೀವ್ರವಾದ ಶಾಖ ತರಂಗವು ಉತ್ತುಂಗಕ್ಕೇರಿ ತಾಪಮಾನವು 50o ಸೆಲ್ಸಿಯಸ್ ತಲುಪಿತು.

ಪ್ರಮುಖ ಜನನ/ಮರಣ:

1865: ಪ್ರಖ್ಯಾತ ಭಾರತೀಯ ಶಿಕ್ಷಣ ತಜ್ಞ ಸತೀಶ್ ಚಂದ್ರ ಮುಖರ್ಜಿ ಜನಿಸಿದರು.

1893: 1945-47 ದಲ್ಲಿ ಜಮ್ಮು ಕಾಶ್ಮೀರದ ಪ್ರಧಾನ ಮಂತ್ರಿ ಆಗಿದ್ದ ರಾಮಚಂದ್ರ ಕಕ್ ಜನಿಸಿದರು.

1952: ಭಾರತದ ಚಲನಚಿತ್ರ ನಿರ್ಮಾಪಕರಾದ ಮುಕೇಶ್ ಭಟ್ ಜನಿಸಿದರು.

1961: ಭಾರತದ ಟೆನ್ನುಸ್ ಆಟಗಾರ ರಮೇಶ್ ಕೃಷ್ಣನ್ ಜನಿಸಿದರು.

1973: ಹಿಂದೂ ರಾಷ್ಟ್ರೀಯತಾವಾದಿ ನಾಯಕರಾದ ಎಂ.ಎಸ್.ಗೋಲ್ವಾಲ್ಕರ್ ನಿಧನರಾದರು.

 

Categories
e-ದಿನ

ಜೂನ್-4

 

ಪ್ರಮುಖ ಘಟನೆಗಳು:

ಕ್ರಿ.ಪೂ 781: ಚೀನಿಯರು ಸೂರ್ಯ ಗ್ರಹಣವನ್ನು ದಾಖಲಿಸಿದ್ದರು.

1769: ಶುಕ್ರ ಗ್ರಹದ ಪ್ರಯಾಣದ 5 ಗಂಟೆಗಳಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಉಂಟಾಗಿತ್ತು. ಇದು ಇತಿಹಾಸದಲ್ಲೆ ಅತ್ಯಂತ ಕಡಿಮೆ ಅಂತರದ ಸೂರ್ಯಗ್ರಹಣವಾಗಿ ದಾಖಲಾಗಿದೆ.

1783: ಜೋಸೆಫ್ ಮತ್ತು ಜಾಕ್ವಿಸ್ ಮಾಂಟ್ ಗಾಲ್ಫಿಯರ್ ಮೊದಲ ಬಾರಿ ಸಾರ್ವಜನಿಕವಾಗಿ ಹಾಟ್ ಏರ್ ಬಲೂನಿನಲ್ಲಿ ಸುಮಾರು 1600-2000 ಅಡಿ ಎತ್ತರದಲ್ಲಿ 2 ಕಿಲೋಮೀಟರ್ ಅಷ್ಟು ದೂರವನ್ನು 10 ನಿಮಿಷಗಳಲ್ಲಿ ತಲುಪಿದರು.

1784: ಮ್ಯಾಡಂ ಎಲಿಜಿಬತ್ ಥಿಬಲ್ ಮೊದಲ ಮಹಿಳಾ ಬಲೂನಿಸ್ಟ್ ಆಗಿದರು.

1850: ಸ್ವಯಂ ಸುವಾಸನೆ ತರುವ ಗೊಬ್ಬರದ ಪೇಟೆಂಟ್ ಇಂಗ್ಲೆಂಡಿನಲ್ಲಿ ಪಡೆಯಲಾಯಿತು.

1875: ಪೆಸಿಫಿಕ್ ಸ್ಟಾಕ್ ಎಕ್ಸ್ ಚೇಂಜ್ ತೆರೆಯಲಾಯಿತು.

1896: ಫೋರ್ಡ್ ಸಂಸ್ಥೆಯ ಹೆನರಿ ಫೋರ್ಡ್ ತಮ್ಮ ಮೊದಲ ಫೋರ್ಡ್ ವಾಹನವನ್ನು ಡಿಟ್ರಾಯಿಟ್ ರಸ್ತೆಗಳ ಮೇಲೆ ಚಲಿಸಿದರು.

1911: ಅಲಾಸ್ಕಾದ ಇಂಡಿಯನ್ ಕ್ರೀಕ್ ನಲ್ಲಿ ಮೊದಲ ಬಾರಿಗೆ ಚಿನ್ನವನ್ನು ಕಂಡುಹಿಡಿಯಲಾಯಿತು.

1912: ಅಲಾಸ್ಕಾದ ಮೌಂಟ್ ಕಟ್ಮೈದ ತುದಿ ಕುಸಿಯಿತು.

1912: ಮಸ್ಸಾಚುಸೆಟ್ಸ್ ತನ್ನ ಮೊದಲ ಕನಿಷ್ಟ ವೇತನ ಕಾನೂನನ್ನು ಜಾರಿಗೆ ತಂದಿತು.

1919: ಅಮೇರಿಕಾದ ಸಂವಿಧಾನಕ್ಕೆ 19ನೇ ತಿದ್ದುಪಡಿ ಮಾಡಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಲಾಯಿತು.

1929: ಜಾರ್ಜ್ ಈಸ್ಟ್ ಮಾನ್ ಮೊದಲ ಟೆಕ್ನಿಕಲರ್ ಚಲನಚಿತ್ರವನ್ನು ನ್ಯೂಯಾರ್ಕ್ ನಲ್ಲಿ ಪ್ರದರ್ಶಿಸಿದರು.

1941: ನಾಜಿಗಳು ಯಾಹೂದಿಗಳನ್ನು ಸಮುದ್ರ ತೀರ ಹಾಗೂ ಈಜು ಕೊಳಗಳನ್ನು ಉಪಯೋಗಿಸದಂತೆ  ನಿಷೇದಿಸಿದರು.

1957: ಮೊದಲ ಕಲ್ಲಿದ್ದಲು ಕೊಳವೆ (ಪೈಪ್ಲೈನ್) ಕಾರ್ಯಾಚರಣೆಯನ್ನು ಆರಂಭಿಸಲಾಯಿತು.

1964: ಮಾಲ್ಡೀವ್ಸ್ ಸಂವಿಧಾನವನ್ನು ಅಳವಡಿಸಿಕೊಂಡಿತು.

1969: ಹವಾನದಲ್ಲಿ ನಿಲುಗಡೆಯಾಗಿದ್ದ ಜೆಟ್ ವಿಮಾನ ಒಂದರ ಚಕ್ರದ ಕೆಳಗಿದ್ದ ಪಾಡ್ ಒಳಗೆ ನುಸುಳಿದ 22 ವರ್ಷದ ವ್ಯಕ್ತಿ ಆಮ್ಲಜನಕದ ಕೊರತೆ ನಡುವೆ 29000 ಅಡಿಗಳಲ್ಲಿಯೂ ಸಹ ಸತತ 9 ಗಂಟೆಗಳ ಪ್ರಯಾಣದ ನಂತರವೂ ಜೀವಂತವಾಗಿ ಉಳಿದಿದ್ದರು.

1973: ಡಾನ್ ವೆಟ್ಜೆಲ್, ಟಾಮ್ ಬಾರ್ನಸ್ ಮತ್ತು ಜಾರ್ಜ್ ಚಾಸ್ಟೇನ್ ಗೆ ಎಟಿಎಂ ವಿಷಯವಾಗಿ ಈ ಮೂವರಿಗೂ ಪೇಟೆಂಟ್ ನೀಡಲಾಯಿತು.

1975: ಅತ್ಯಂತ ಹಳೆಯ ಪ್ರಾಣಿಯ ಪಳೆಯುಳಿಕೆಗಳು ಅಮೇರಿಕಾದಲ್ಲಿ ಪತ್ತೆಯಾದವು.

1979: ಕೆನೆಡಾದ ಇತಿಹಾಸದಲ್ಲೇ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯೆಂದು ಹೆಗ್ಗಳಿಕೆ ಪಡೆದವರು ಜೋ ಕ್ಲಾರ್ಕ್.

1984: ಅಳಿದು ಹೋಗಿರುವ ಪ್ರಾಣಿಯಿಂದ ಡಿ.ಎನ್.ಎ ಅನ್ನು ಯಶಸ್ವಿಯಾಗಿ ಅಬೀಜ ಸಂತಾನ ಮಾಡಲಾಯಿತು.

2016: 115ನೇ ಫ್ರೆಂಚ್ ಓಪನ್ ಮಹಿಳೆಯರ ಆಟದ ಪಂದ್ಯದಲ್ಲಿ ಗಾರ್ಬೀನ್ ಮುಗುರುಜ ಸೆರೀನ ವಿಲ್ಲಿಯಂ ಅವರನ್ನು 7-5, 6-4 ಅಂತರದಲ್ಲಿ ಸೋಲಿಸಿ ತನ್ನ ಮೊದಲ ಗ್ರಾಂಡ್ ಸ್ಲಾಂ ಟೈಟಲ್ ಪ್ರಶಸ್ತಿ ಪಡೆದರು.

ಪ್ರಮುಖ ಜನನ/ಮರಣ:

1884: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಜನಿಸಿದರು.

1936: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹೆಸರುವಾಸಿಯಾದ ನೂತನ್ ಜನಿಸಿದರು.

1946: ಬಹು ಭಾಷಾ ಗಯಕ ಎಸ್ ಪಿ ಬಾಲಸುಬ್ರಮಣ್ಯಂ ಜನಿಸಿದರು.

1959: ಭಾರತದ ಪ್ರಖ್ಯಾತ ಉದ್ಯಮಿ ಅನಿಲ್ ಅಂಬಾನಿ ಜನಿಸಿದರು.

 

Categories
e-ದಿನ

ಜೂನ್-3

 

ಪ್ರಮುಖ ಘಟನೆಗಳು:

1621: ಡಚ್ ವೆಸ್ಟ್ ಇಂಡಿಯಾ ಸಂಸ್ಥೆಯು ವೆಸ್ಟ್ ಇಂಡೀಸ್ ನಲ್ಲಿ ಕಾರ್ಯನಿರ್ವಹಿಸಲು ಸನ್ನದು ಪಡೆಯಿತು.

1748: ಆಂಸ್ಟರ್‍ ಡ್ಯಾಮಿನಲ್ಲಿ ಮುನಿಸಿಪಲ್ ಅಂಚೆ ಸೇವೆಗಳಿಗೆ ಚಾಲನೆ ನೀಡಲಾಯಿತು.

1851: ನ್ಯೂಯಾರ್ಕಿನ ಬೇಸ್ ಬಾಲ್ ತಂಡವು ಮೊದಲಬಾರಿಗೆ ಸಮವಸ್ತ್ರ ಧರಿಸಿ ಕ್ರೀಡಾಸ್ಪರ್ಧೆಯಲ್ಲಿ ಪಾಲುಗೊಂಡಿತು.

1856: ಕುಲ್ಲೆನ್ ವಿಫಲ್ ಅವರು ಸ್ಕ್ರೂಗಳನ್ನು ತಯಾರಿಸುವ ಯಂತ್ರಗಳ ಪೇಟೆಂಟ್ ಪಡೆದರು

1860: ಕೋಮಾಂಚೆ ಮತ್ತು ಲೋವಾ ಪ್ರದೇಶಗಳು ಚಂಡಮಾರುತಗಳ ಹೊಡೆತಕ್ಕೆ ಸಿಲುಕಿ ನಾಶವಾದವು.

1929: ಮೊತ್ತ ಮೊದಲ ಉದ್ಯಮಗಳ ಪ್ರದರ್ಶನ ಸಮಾವೇಶ ಅಟ್ಲಾಂಟಿಕ್ ಸಿಟಿ ಕನ್ವೆಂಷನ್ ಸೆಂಟರಿನಲ್ಲಿ ನಡೆಯಿತು.

1929: ಚಿಲಿ ಮತ್ತು ಪೆರು ದೇಶಗಳು ತಮ್ಮ ಗಡಿ ವಿವಾದವನ್ನು ಲೀಮಾ ಒಪ್ಪಂದದಂತೆ ಪರಿಹರಿಸಿಕೊಂಡವು.

1941: ಜರ್ಮನಿಯ ಅತಿಕ್ರಮಣಕಾರರು ಯಹೂದಿಗಳ ಪಾಸ್ ಪೋರ್ಟನ ಮೇಲೆ “ಜೆ” ಎಂಬ ಟಸ್ಸೆಯನ್ನು ನಮೂದು ಮಾಡಲಾರಂಭಿಸಿದರು.

1943: ಯುನೈಟೆಡ್ ನೇಷನ್ಸ್ ರಿಲೀಫ್ & ರಿಹ್ಯಾಬಿಲಿಟೇಷನ್ ಅಡ್ಮಿನಿಸ್ಟ್ರೇಷನ್ ಆರಂಭವಾಯಿತು.

1946: ಮೊದಲ ಒಳ ಉಡುಪುಗಳ ಪ್ರದರ್ಶನ ಮೇಳವನ್ನು ಪ್ಯಾರಿಸ್ ನಲ್ಲಿ ಮಾಡಲಾಯಿತು.

1946: ಅಂತರ ರಾಷ್ಟ್ರೀಯ ಸೇನೆಯ ನ್ಯಾಯಾಧಿಕರಣ ಜಪಾನಿನ ಟೋಕಿಯೋದಲ್ಲಿ ತೆರೆಯಲಾಯಿತು.

1947: ಭಾರತದ ವೈಸೆರಾಯ್ ಲಾರ್ಡ್ ಮೌಂಟ್ ಬ್ಯಾಟೆನ್ ಪಾಕಿಸ್ತಾನಕ್ಕೆ ಭೇಟಿ ನೀಡಿದರು.

1949: ಅಮೇರಿಕದ ನೌಕಾ ತರಬೇತಿ ಸಂಸ್ಥೆಯಿಂದ  ಪ್ರಥಮ ಬಾರಿಗೆ ನೀಗ್ರೋ ಒಬ್ಬ ತೇರ್ಗಡೆಯಾದರು.

1949:ಜಿ ಎನ್ ಕ್ಲಾರ್ಕ್ ಅಮೇರಿಕಾದ ಮೊದಲ ಮಹಿಳ ಖಜಾಂಚಿಯಾದರು.

1953: ಅಲೆಕ್ಸಾಂಡರ್‍ ಕಾರ್ಟರೈಟ್ ಬೇಸ್ ಬಾಲ್ ಕ್ರೀಡೆಯ ಪಿತಾಮಹ ಎಂದು ಅಮೇರಿಕಾದ ಕಾಂಗ್ರೆಸ್  ಅಧಿಕೃತವಾಗಿ ಘೋಷಿಸಿತು.

1959: ಸಿಂಗಾಪೂರ್‍ ದೇಶವು ತನ್ನ ಸಂವಿಧಾನವನ್ನು ಅಂಗೀಕರಿಸಿತು.

1985: ಕೇಂದ್ರ ಸರ್ಕಾರವು ತಮ್ಮ ಸಿಬ್ಬಂದಿಗಾಗಿ ಸರ್ಕಾರಿ ಕಛೇರಿಗಳಲ್ಲಿ ಒಂದು ವಾರಕ್ಕೆ ಐದು ಕೆಲಸದ ದಿನಗಳ ಅವಧಿಯನ್ನು ನಿಗಧಿಪಡಿಸಿತು.

1992: ವಿಶ್ವದ ಅತ್ಯಂತ ದೊಡ್ಡ ಪರಿಸರ ಸಭೆ ಬ್ರಜಿಲ್ ನ ರಿಯೊ ಡೆ ಜನೇರಿಯೋ ದಲ್ಲಿ ನಡೆಯಿತು.

2013: ಇರಾನ್ ದೇಶದ ಮೇಲೆ ಅಮೇರಿಕ ಆರ್ಥಿಕ ನಿರ್ಭಂದಗಳನ್ನು ಹೇರಿತು.

2015: ಡಾ.ಜೆಸ್ಸಿ ಸೆಲ್ಬರ್‍ ಹೌಸ್ಟನ್ ಮೆಥಾಡಿಸ್ಟ್ ಆಸ್ಪತ್ರೆಯಲ್ಲಿ ವಿಶ್ವದ ಮೊದಲ ಭಾಗಶಃ ತಲೆಬುರುಡೆ ಮತ್ತು ನೆತ್ತಿಯ ಶಸ್ತ್ರ ಚಿಕಿತ್ಸೆ ಮಾಡಿದರು.

ಪ್ರಮುಖ ಜನನ/ಮರಣ:

1924: ಭಾರತದ ಪ್ರಮುಖ ರಾಜಕಾರಣಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಜನಿಸಿದರು.

1930: ಕೇಂದ್ರ ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡಿಸ್ ಜನಿಸಿದರು.

2011: ಭಾರತದ ಹರಿಯಾಣದ ಮುಖ್ಯಮಂತ್ರಿ ಭಜನ್ ಲಾಲ್ ನಿಧನರಾದರು.

2013: ಅಮೇರಿಕಾ ಮತ್ತು ಭಾರತ ಖ್ಯಾತಿಯ ನಟಿ, ಹಿನ್ನಲೆ ಗಾಯಕಿ ಜಿಯಾ ಖಾನ್ ಅಸುನೀಗಿದರು.

2014: ಭಾರತೀಯ ರಾಜಕಾರಣಿ ಹಾಗೂ ಮಹಾರಾಷ್ಟ್ರದ ಮೂರನೆ ಉಪ-ಮುಖ್ಯಮಂತ್ರಿ ಗೋಪಿನಾಥ್ ಮುಂಡೆ ನಿಧನರಾದರು.

 

Categories
e-ದಿನ

ಜೂನ್-2

ಪ್ರಮುಖ ಘಟನೆಗಳು:

1797: ಮೊದಲ ಬಾರಿ ಅಡಿರೊಂಡಾಕ್ ನಲ್ಲಿ ಇರುವ “ಗ್ರೇಟ್ ಮೌಂಟೆನ್” ಅನ್ನು ಏರಲಾಗಿತ್ತು.

1835: ಪಿ ಟಿ ಬಾರ್ನಮ್ ಮತ್ತು ತಂಡ ತನ್ನ ಸರ್ಕಸ್ ನ ಪ್ರಯಾಣವನ್ನು ಅಮೇರಿಕಾದಲ್ಲಿ ಆರಂಭಿಸಿದರು.

1851: ಮೊದಲ ಮಧ್ಯಪಾನ ನಿಷೇಧ ಕಾನೂನನ್ನು ಜಾರಿಗೆ ತರಲಾಯಿತು.

1857: ವರ್ಜೀನಿಯಾದ ಜೇಮ್ಸ್ ಗಿಬ್ಸ್ ಏಕ ದಾರದಿಂದ ಸರಪಳಿ ಹೊಲಿಗೆ ಯಂತ್ರವನ್ನು ಕಂಡುಹಿಡಿದು ಅದರ ಪೇಟೆಂಟ್ ಪಡೆದರು.

1873: ವಿಶ್ವದ ಮೊದಲ ಕೇಬಲ್ ರೈಲು ರಸ್ತೆಯ ನಿರ್ಮಾಣ ಆರಂಭವಾಯಿತು.

1875: ಅಲೆಕ್ಸಾಂಡರ್ ಗ್ರಹಮ್ ಬೆಲ್ ಮೊದಲ ಧ್ವನಿ ಪ್ರಸರಣ ಮಾಡಿದರು.

1886: ಗ್ರೂವರ್ ಕ್ಲೀವ್ಲಾಂಡ್ ಅಮೇರಿಕಾದ ಅಧ್ಯಕ್ಷರಾಗಿರುವಾಗಲೇ ವಿವಾಹವಾದ ಮೊದಲ ಅಧ್ಯಕ್ಷರಾಗಿದ್ದರು.

1896: ಗುಲಿಯೆಲ್ಮೋ ಮಾರ್ಕೊನಿ ರೇಡಿಯೋ ಗೆ ಪೇಟೆಂಟ್ ಅರ್ಜಿ ಹಾಕಿದರು.

1904: ದ್ಯುತಿಸಂಶ್ಲೇಷಣೆ ಉಂಟುಮಾಡುವ ಸೂಕ್ಷ್ಮಜೀವಿಯನ್ನು ಪ್ರೊಫೆಸರ್ ಸ್ಕ್ರಾನ್ ಕಂಡುಹಿಡಿದರು.

1910: ಚಾರ್ಲ್ಸ್ ಸ್ಟೀವರ್ಟ್ ರೋಲ್ಸ್ ರೋಲ್ಸ್ ರಾಯೇಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು ತಡೆರಹಿತ ವಿಮಾನದಲ್ಲಿ ಇಂಗ್ಲೀಷ್ ಚಾನಲ್ ದಾಟಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1933: ವೈಟ್ ಹೌಸ್ ನಲ್ಲಿ  ಈಜುಕೊಳವನ್ನು ನಿರ್ಮಾಣ ಮಾಡಲು ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಅನುಮತಿಸಿದರು.

1975: ವಿಜಯವಾಡದಲ್ಲಿ ಭಾರತದ ಮೊದಲ ಸುರುಳಿ ಕಬ್ಬಿಣದ ಸರಳು ತಯಾರಿಕಾ ಯೋಜನೆಯನ್ನು ಉದ್ಘಾಟಿಸಲಾಯಿತು.

1977: ನ್ಯೂಜರ್ಸಿಯ ಅಟ್ಲ್ಯಾಂಟಿಕ್ ಸಿಟಿ ನಲ್ಲಿ ಕ್ಯಾಸಿನೋ ಜೂಜಾಟವನ್ನು ಅನುಮತಿಸಲಾಯಿತು.

1998: ಸಿ.ಐ.ಹೆಚ್ ಗಣಕಯಂತ್ರದ ವೈರಸ್ ಅನ್ನು ತೈವಾನಿನಲ್ಲಿ ಕಂಡುಹಿಡಿಯಲಾಯಿತು.

2014: ತೆಲಂಗಾಣ ಅಧಿಕೃತವಾಗಿ ಭಾರತದ 29ನೇ ರಾಜ್ಯವಾಯಿತು.

2015: ಭೂತಾನಿನಲ್ಲಿ 100 ಜನ ಸ್ವಯಂ ಸೇವಕರು ಸೇರಿ 1 ಗಂಟೆಯಲ್ಲಿ 49672 ಮರಗಳನ್ನು ನೆಟ್ಟು ವಿಶ್ವದಾಖಲೆ ಮಾಡಿದರು.

ಪ್ರಮುಖ ಜನನ/ಮರಣ:

1731: ಯುನೈಟೆಡ್ ಸ್ಟೇಟ್ಸ್ ನ ಮೊದಲ ಪ್ರಥಮ ಮಹಿಳೆ ಮಾರ್ಥಾ ಡ್ಯಾಂಡ್ರಿಡ್ಜ್ ಜನಿಸಿದರು. ಇವರು ಜಾರ್ಜ್ ವಾಷಿಂಗ್ಟನ್ ಅವರನ್ನು 1759ರಲ್ಲಿ ವಿವಾಹವಾದರು.

1903: ನಾಡಿ ಮಿಡಿತ ತಿಳಿಸುವ ಉಪಕರಣವನ್ನು ಕಂಡು ಹಿಡಿದ ರಾಬರ್ಟ್ ಮಾರಿಸ್ ಪೇಜ್ ಜನಿಸಿದರು.

1929: ಪ್ರಖ್ಯಾತ ಹಾಸ್ಯ ಸಾಹಿತಿ, ಕಾದಂಬರಿಕಾರ್ತಿ ಪಂಕಜ ಅವರು ಜನಿಸಿದರು.

1943: ಭಾರತೀಯ ಪ್ರಖ್ಯಾತ ಹಾಡುಗಾರ, ಬರಹಗಾರ, ಸಂಗೀತಗಾರ ಮತ್ತು ನಿರ್ಮಾಪಕರಾದ ಇಳಯರಾಜ ಜನಿಸಿದರು.

1955: ಭಾರತದ ವಾಣಿಜ್ಯೋದ್ಯಮಿ ಹಾಗೂ ರಾಜಕಾರಣಿ ನಂದನ್ ನೀಲೇಕಣಿ ಜನಿಸಿದರು.

1956: ಪ್ರಖ್ಯಾತ ಭಾರತೀಯ ಚಲನಚಿತ್ರ ನಿರ್ದೇಶಕರಾದ ಮಣಿರತ್ನಂ ಜನಿಸಿದರು.

1988: ದಾದಾ ಸಾಹೆಬ್ ಫಾಲ್ಕೆ ಪುರಸ್ಕೃತ ನಟ ನಿರ್ದೇಶಕ ರಾಜ್ ಕಪೂರ್ ನಿಧನರಾದರು.

 

Categories
e-ದಿನ

ಜೂನ್-1

 

ಪ್ರಮುಖ ಘಟನೆಗಳು:

1836: ಚಾರ್ಲ್ಸ್ ಡಾರ್ವಿನ್ ಕೇಪ್ ಟೌನ್ ಗೆ ಮರಳಿದರು.

1862: ಅಮೇರಿಕಾದ ಹಿಡಿತದಲ್ಲಿರುವ ಎಲ್ಲಾ ಜಾಗದಲ್ಲೂ ಗುಲಾಮಗಿರಿಯನ್ನು ನಿಷೇಧಿಸಲಾಯಿತು.

1869: ಥಾಮಸ್ ಎಡಿಸನ್ ವಿದ್ಯುತ್ ಮತ ಯಂತ್ರಕ್ಕೆ ಪೇಟೆಂಟ್ ಪಡೆದರು.

1877: ಅಮೇರಿಕಾದ ಕಲಾವಿದರ ಸಮಾಜ/ಒಕ್ಕೂಟವನ್ನು ರೂಪಿಸಲಾಯಿತು.

1880: ಮೊದಲ ಹಣ ಪಾವತಿಸಿ ಉಪಯೋಗಿಸುವ ದೂರವಾಣಿ ಸ್ಥಾಪಿತವಾಯಿತು.

1881: ಬೆಲ್ ಫೂನ್ ಅವರು ಮೊದಲ ದೂರವಾಣಿ ಎಕ್ಸ್ಚೇಂಜ್ ತೆರೆದರು.

1888: ಕ್ಯಾಲಿಫೋರ್ನಿಯಾಗೆ ಭೂಕಂಪದ ತೀವ್ರತೆಯನ್ನು ಅಳೆಯುವ ಮೊದಲ ಯಂತ್ರ (ಸೆಸ್ಮೊಗ್ರಾಫ್) ದೊರೆಯಿತು.

1907: ಅರ್ಜೆಂಟೀನಾದಲ್ಲಿ ಉಷ್ಣಾಂಶ -27OF (-33oC) ಆಗಿ ಇದು ದಕ್ಷಿಣ ಅಮೇರಿಕಾದ ಅತಿ ಕಡಿಮೆ ಉಷ್ಣಾಂಶ ಎಂದು ದಾಖಲಾಯಿತು.

1908: ಜಾನ್ ಕ್ರೋಹ್ನ್ ಅಮೇರಿಕಾದ ಪರಿಧಿಯ ಸುತ್ತಲೂ ನಡೆದುಕೊಂಡು ಹೋಗುತ್ತಾನೆ. ಈ ಸಂಚಾರವು ಒಟ್ಟು 357 ದಿನಗಳಿಗೆ ಮುಗಿದಿತ್ತು.

1911: ಅಮೇರಿಕಾದ ನ್ಯೂಜರ್ಸಿಯಲ್ಲಿ ಮೊದಲ ಗುಂಪು ವಿಮೆ ಪಾಲಿಸಿಯ ಯೋಜನೆಯ್ನನು ಜಾರ ಮಾಡಲಾಯಿತು

1935: ಇಂಗ್ಲೆಂಡಿನಲ್ಲಿ ಚಾಲಕರಿಗೆ ಪರೀಕ್ಷೆ ಮತ್ತು ಗಾಡಿ ಓಡಿಸಲು ಲೈಸೆನ್ಸ್  ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು.

1938: ಬೇಸ್ ಬಾಲ್ ಆಟದಲ್ಲಿ ಬ್ಯಾಟ್ ಮಾಡುವವರು ತಲೆಯ ರಕ್ಷಣೆಗೆಂದು ಮೊದಲ ಬಾರಿಗೆ ಹೆಲ್ಮೆಟ್ ಧರಿಸಿದ್ದರು.

1940: ಹಾಲೆಂಡಿನಲ್ಲಿ ಕಾಫಿ ಮತ್ತು ಟೀ ಅನ್ನು ದಿನಭತ್ಯೆಯ ಬದಲಿಗೆ ನೀಡಲಾಗುತ್ತಿತ್ತು.

1947: ಫೋಟೋ ಸೆನ್ಸಿಟಿವ್ ಗ್ಲಾಸ್ ಅನ್ನು ಅಭಿವೃದ್ದಿ ಮಾಡಲಾಗಿತ್ತು.

1969: ತಂಬಾಕು ಜಾಹಿರಾತುಗಳನ್ನು ಕೆನೆಡಾದ ದೂರದರ್ಶನ ಮತ್ತು ರೇಡಿಯೋದಿಂದ ನಿಷೇಧಿಸಲಾಯಿತು.

1975: ನೆದರ್ಲ್ಯಾಡ್ ನಲ್ಲಿ ಕಾರುಗಳಿಗೆ ಸೀಟ್ ಬೆಲ್ಟುಗಳು ಕಡ್ಡಾಯಗೊಳಿಸಿ ಆದೇಶಿಸಲಾಯಿತು.

1979: ಭಾರತದ ಆಂದ್ರಪ್ರದೇಶದಲ್ಲಿ ವಿಜಯನಗರ ಜಿಲ್ಲೆಯನ್ನು ಸ್ಥಾಪಿಸಲಾಯಿತು.

1979: ಲಾಸ್ ಏಂಜೆಲಿಸ್ ತನ್ನ ಮೊದಲ ಸಲಿಂಗಕಾಮಿ ಹಕ್ಕುಗಳ ಮಸೂದೆಯನ್ನು ತರಲಾಯಿತು.

1980: ಸಿ.ಎನ್.ಎನ್ ಚಾನೆಲ್ (ಕೆಬಲ್ ನ್ಯೂಸ್ ನೆಟ್ವರ್ಕ್) ಅನ್ನು ಮೊದಲ ಬಾರಿ ಪ್ರಸಾರ ಮಾಡಲಾಯಿತು.

2007: ಯುನೈಟೆಡ್ ಕಿಂಗ್ಡಮ್ ನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇದಿಸಲಾಗಿತ್ತು

2016: ಸ್ವಿಜರ್ಲ್ಯಾಂಡಿನಲ್ಲಿ ವಿಶ್ವದ ಅತ್ಯಂತ ಉದ್ದದ (57ಕಿಲೋಮೀಟರ್) ಮತ್ತು ಅತ್ಯಂತ ದುಬಾರಿ (11 ಬಿಲಿಯನ್) ಸುರಂಗದ ಕಾಮಗಾರಿ ಪೂರ್ಣಗೊಂಡಿತು.

ಪ್ರಮುಖ ಜನನ/ಮರಣ:

1843: ಸ್ಕಾಟಿಶ್ ವೈದ್ಯ ಮತ್ತು ವಿಜ್ಞಾನಿ ಬೆರಳುಗುರುತುಗಳ ಬೆಳವಣಿಗೆಗೆ ಅಡಿಪಾಯ ಹಾಕಿದ ಹೆನ್ರೀ ಫ್ಲಾಉಡ್ಸ್ ಜನಿಸಿದರು.

1872: ನ್ಯುಯಾರ್ಕ್ ಹೆರಾಲ್ಡ್ ಪತ್ರಿಕೆ ಸಂಸ್ಥಾಪಕರಾದ ಜೇಮ್ಸ್ ಗಾರ್ಡನ್ ಬೆನೆಟ್ ನಿಧನರಾದರು.

1907: ಟರ್ಬೊ ಜೆಟ್ ಇಂಜಿನ್ ಕಂಡು ಹಿಡಿದ ವಿಜ್ಞಾನಿ ಫ್ರಾನ್ಕ್ ವಿಟ್ಟಲ್ ಜನಿಸಿದರು.

1926: ಅಮೇರಿಕಾದ ಖ್ಯಾತ ನಟಿ  ಮರ‍್ಲಿನ್ ಮನ್ರೋ ಜನಿಸಿದರು.

1968: ಕುರುಡ ಮತ್ತು ಕಿವುಡರಾಗಿದ್ದ ಜನಪ್ರಿಯ ಲೇಖಕಿ ಹೆಲೆನ್ ಕೆಲ್ಲರ್ ನಿಧನರಾದರು.

 

Categories
e-ದಿನ

ಮೇ-31

 

ಪ್ರಮುಖಘಟನಾವಳಿಗಳು:

1790: ಅಮೇರಿಕಾದ ಹಕ್ಕುಸ್ವಾಮ್ಯ ಕಾನೂನು ಜಾರಿಗೊಳಿಸಲಾಗಿತ್ತು.

1870: ಅಮೆರಿಕನ್ ಕಾಂಗ್ರೆಸ್ ಕರಿಯರ ಹಕ್ಕುಗಳಿಗೆ ಮೊದಲ ಆಕ್ಟ್ ಜಾರಿಗೊಳಿಸಿತು.

1870: ಇ ಜೆ ಡೆಸೆಂಮ್ಟ್ ಪಾದಾಚಾರಿಗಳು ನಡೆಯುವ ಸ್ಥಳಗಳಿಗೆ ಡಾಂಬರು ಹಾಕುವ ಪೇಟೆಂಟ್ ಪಡೆದರು.

1879: ಮೊದಲ ವಿದ್ಯುತ್ ರೈಲು ಬರ್ಲಿನ್ ಟ್ರೇಡ್ಸ್ ಎಕ್ಸ್ಪೊಸಿಷನ್ ನಲ್ಲಿ ತೆರೆಯಿತು.

1880: ಲೀಗ್ ಆಫ್ ಅಮೇರಿಕನ್ ವೀಲ್ಮಾನ್ ಅನ್ನುವ ಬೈಸಿಕಲ್ ಸವಾರರ ಸಂಘ ಆರಂಭವಾಗುತ್ತದೆ.

1884: ಡಾ ಜಾನ್ ಹಾರ್ವೇ “ಫ್ಲೇಕ್ಡ್ ಸಿರಿಯಲ್” ನಿಲುಕಟ್ಟು ಧಾನ್ಯಕ್ಕೆ ಪೇಟೆಂಟ್ ಪಡೆದರು.

1891: ಟ್ರಾನ್ಸ್ ಸೈಬೀರಿಯನ್ ರೈಲು ಕಾಮಗಾರಿ ಆರಂಭವಾಯಿತು.

1893: ವಿಟ್ಕಾಂಬ್ ಜುಡ್ಸನ್ “ಜಿಪ್”ಗೆ ಪೇಟೆಂಟ್ ಪಡೆದರು.

1907: ಮೊದಲ ಟಾಕ್ಸಿ ಸೇವೆಗಳು ನ್ಯೂಯಾರ್ಕ್ ನಗರದಲ್ಲಿ ಆರಂಭವಾಯಿತು.

1911: ಆರ್ ಎಂ ಎಸ್ ಟೈಟಾನಿಕ್ ಹಡಗನ್ನು ಬೆಲ್ಫಾಸ್ಟ್ ನಲ್ಲಿ ನೀರಿಗಿಳಿಸಲಾಗಿತ್ತು.

1929: ಅಟ್ಲಾಂಟಿಕ ಸಿಟಿ ಸಮಾವೇಶ ಕೇಂದ್ರ ತೆರೆಯಿತು.

1930: ಧೂಮಕೇತು 73ಪಿ/1930 (ಶ್ಸ್ವಾಸ್ಮಾನ್ – ವಾಚ್ಮಾನ್ 3) ಭೂಮಿಗೆ 0.0617 AU ಗಳಷ್ಟು ಹತ್ತಿರ ಸಮೀಪಿಸಿತು.

1937: ಒಂದೇ ಹೆರಿಗೆಯಲ್ಲಿ ಒಟ್ಟಿಗೆ ಹುಟ್ಟಿದ ನಾಲ್ಕು ಮಕ್ಕಳು ಕಾಲೇಜಿನ ಓದನ್ನು ಬೇಲರ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.

1943: “ಆರ್ಚೀಸ್” ಅನ್ನುವ ಹಾಸ್ಯ ಸರಣಿ ಮೊದಲ ಬಾರಿಗೆ ರೇಡಿಯೋದಲ್ಲಿ ಪ್ರಸಾರವಾಯಿತು.

1977: ಟ್ರಾನ್ಸ್ ಅಲಾಸ್ಕಾದ ತೈಲಕೊಳವೆ ಕಾಮಗಾರಿ ಪೂರ್ಣಗೊಂಡಿತು.

2008: ಉಸೇನ್ ಬೋಲ್ಟ್ 100 ಮೀಟರ್ ಸ್ಪ್ರಿಂಟ್ ಅನ್ನು ಕೇವಲ 9.72 ಸೆಕೆಂಡುಗಳಲ್ಲಿ ಮುಗಿಸಿ ನೂತನ ವಿಶ್ವದಾಖಲೆ ಬರೆದರು.

2015: 92 ವರ್ಷ 65 ದಿನಗಳ ಹ್ಯಾರಿಟ್ ಥಾಂಸನ್ ಮ್ಯಾರಥಾನ್ ಓಟವನ್ನು ಮುಗಿಸಿದ ಅತ್ಯಂತ ಹಿರಿಯ ಮಹಿಳೆ.

ಪ್ರಮುಖಜನನ/ಮರಣ:

1819: ಮುಕ್ತಪದಗಳಲ್ಲಿ ದಾರ್ಶನಿಕತೆ ಮತ್ತು ವಾಸ್ತವಿಕತೆಯನ್ನು ತೆರೆದಿಟ್ಟ ಕವಿ ವಾಲ್ಟರ್ ವಿಟ್ಮಾನ್ಜನಿಸಿದರು.

1872: ಸೌರಶಕ್ತಿಯಲ್ಲಿ ಸಂಶೋಧನೆ ನಡೆಸಿದ ಖಗೋಳ ವಿಜ್ಞಾನಿ ಚಾರ್ಲ್ಸ್ ಗ್ರೀಲೇ ಆಬ್ಬಾಟ್ ಜನಿಸಿದರು.

1910: ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳೆ ಎಲಿಜಿಬತ್ ಬ್ಲಾಕ್ವೆಲ್ ನಿಧನರಾದರು.

1923: ಯುರೋಪಿನ ಇತಿಹಾಸದಲ್ಲಿ ಅತ್ಯಂತ ಧೀರ್ಘಕಾಲ ಆಳ್ವಿಕೆ (56 ವರ್ಷಗಳು) ನಡೆಸಿದ ದೊರೆ ರಾಜ ರೈನೀರ್ III ಜನಿಸಿದರು.

1931: ಬಿ ಸಿ ಎಸ್ ಥಿಯರಿಯನ್ನು ಪ್ರತಿಪಾದಿಸಿದ ಭೌತವಿಜ್ಞನಾನಿ ಜಾನ್ ರಾಬರ್ಟ್ ಸ್ಕಿಫ್ಫರ್ ಜನಿಸಿದರು.

1939: ಜೈನ ಸಾಹಿತ್ಯ, ಸಿದ್ದಾಂತ, ಚರಿತ್ರೆಗಳ ಬಗ್ಗೆ ವಿದ್ವತ್ಪೂರ್ಣವಾಗಿ ಮಾತನಾಡಬಲ್ಲ ಎಸ್.ಪಿ.ಪಾಟೀಲರು ಜನಿಸಿದರು.

 

Categories
e-ದಿನ

ಮೇ-30

ಪ್ರಮುಖ ಘಟನಾವಳಿಗಳು:

1498: ಕೊಲಂಬಸ್ ಆರು ಹಡಗುಗಳೊಂದಿಗೆ ಮೂರನೇ ಬಾರಿ ಅಮೇರಿಕಾದಪ್ರವಾಸ ಆರಂಭಿಸಿದರು.

1527: ಜರ್ಮನಿಯಲ್ಲಿ ಮಾರ್ಬರ್ಗ್ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.

1539: ಸ್ಪೇನ್ ದೇಶದ ಪರಿಶೋಧಕ ಹೆರ್ನಾಡೋ ಡೆ ಸೋಟೋ ಫ್ಲೋರಿಡಾವನ್ನು ಕಂಡುಹಿಡಿದರು.

1783: ಫಿಲಡೆಲ್ಫಿಯಾದ ಬೆನ್ಜಾಮಿನ್ ಟವರ್ ಮೊದಲ ದಿನಪತ್ರಿಕೆಯನ್ನು ಪ್ರಕಟಿಸಿತ್ತು,

1848: ವಿಲ್ಲಿಯಂ ಜಿ ಯಂಗ್ ಐಸ್ಕ್ರೀಮ್ ಅನ್ನು ಗಟ್ಟಿ ಮಾಡುವ ಯಂತ್ರಕ್ಕೆ ಪೇಟೆಂಟ್ ಪಡೆದರು.

1879: ಮೇ ತಿಂಗಳಲ್ಲಿ ಕ್ಲೀವ್ ಲ್ಯಾಂಡಿನಲ್ಲಿ 92o F ಉಶ್ಣಾಂಶವನ್ನು ದಾಖಲಿಸಲಾಗಿತ್ತು.

1879: ಗಿಲ್ಮೋರ್ ಗಾರ್ಡನ್ ಅನ್ನು ಮೇಡಿಸನ್ ಸ್ಕ್ವೇರ್ ಗಾರ್ಡನ್ ಎಂದು ಮರು ನಾಮಕರಣ ಮಾಡಲಾಯಿತು.

1889: ಸ್ತ್ರೀಯರ ಒಳ ಉಡುಪಾದ (Bra) ಸ್ತನಬಂಧವನ್ನು ರೂಪಿಸಲಾಯಿತು.

1908: ಮೊದಲ ಸಂಯುಕ್ತ ರಾಷ್ಟ್ರದ ಕಾರ್ಮಿಕರ ಪರಿಹಾರ ಕಾನೂನು ಅಂಗೀಕರಿಸಲಾಗಿತ್ತು.

1908: ಪ್ಯಾರೀಸಿನ ವಕೀಲರಾದ ಈ ಆರ್ಚ್ಡೆಕಾನ್ ವಿಮಾನದ ಮೊದಲ ಪ್ರಯಾಣಿಕರಾಗಿದ್ದರು.

1933: ಅಗೋಚರ ಕನ್ನಡಿಯ ಅನುಸ್ಥಾಪನೆಗೆ ಪೇಟೆಂಟ್ ಪಡೆಯಲಾಗಿತ್ತು.

1954: ಎಮಿಲಿ ಜಟೋಪೆಕ್ 5 ಸಾವಿರ ಮೈಲಿ ಓಟವನ್ನು 13 ನಿಮಿಷ 57 ಸೆಕೆಂಡಿನಲ್ಲಿ ಮುಗಿಸಿ ವಿಶ್ವದಾಖಲೆ ಮಾಡಿದರು.

1962: ಭಾರತದ ಅಹಮದಾಬಾದಿನಲ್ಲಿ ಬಸ್ ಅಪಘಾತದಿಂದ 69 ಜನ ಮೃತಪಟ್ಟಿದ್ದರು.

1975: ಯುರೋಪಿಯನ್ ಸ್ಪೇಸ್ ಏಜೆನ್ಸಿ ಆರಂಭವಾಯಿತು.

1987: ಉತ್ತರ ಅಮೇರಿಕಾದ ಫಿಲಿಪ್ಸ್ ಸಂಸ್ಥೆಯು “ಕಾಂಪ್ಯಾಕ್ಟ್ ಡಿಸ್ಕ್” ವೀಡಿಯೋವನ್ನು ಬಿಡುಗಡೆ ಮಾಡಿತು.

2012: ಭಾರತೀಯ ವಿಶ್ವನಾಥನ್ ಆನಂದ್ 5ನೇ ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿ ಗೆದ್ದರು.

ಪ್ರಮುಖ ಜನನ/ಮರಣ:

1808: ವಲಸೆ ಬಂದ ಸ್ತ್ರೀಗಳ ಹಕ್ಕುಗಳ ಹೋರಾಟಗಾರ್ತಿ ಕಾರೋಲಿನ್ ಜೋನ್ಸ್ ಜನಿಸಿದರು.

1814: ರಾಜಕೀಯ ಹೋರಾಟಗಾರ ಮತ್ತು ಲೇಖಕ ಮಿಖಾಯಿಲ್ ಬಕುನಿನ್ ಜನಿಸಿದರು.

1907: ನುಡಿಸೇವಕ ಸಾಹಿತಿ ನರೆಗಲ್ಲ ಪ್ರಹ್ಲಾದರಾಯರು ಜನಿಸಿದರು.

1934: ಬಾಹ್ಯಾಕಾಶಯಾನದಲ್ಲಿ 12 ನಿಮಿಷ ಬಾಹ್ಯಾಕಾಶದಲ್ಲಿ ನಡೆದ ಗಗನಯಾತ್ರಿ ಆಲೆಕ್ಸಿ ಲಿಯನೊವ್ ಜನಿಸಿದರು.

Categories
e-ದಿನ

ಮೇ-29

ಪ್ರಮುಖ ಘಟನಾವಳಿಗಳು:

1721: ದಕ್ಷಿಣ ಕಾರೋಲಿನಾ ಔಪಚಾರಿಕವಾಗಿ ರಾಜಯೋಗ್ಯ ವಸಾಹತು ಆಗಿ ರೂಪಿತಗೊಂಡಿತು.

1851: ಸೊಜೌರ್ನರ್ ಟ್ರುತ್ ಮೊದಲ ಕಪ್ಪು ಮಹಿಳೆಯರ ಹಕ್ಕುಗಳ ಸಮಾವೇಶದಲ್ಲಿ ಮಾತನಾಡಿದರು.

1884: ಮೊದಲ ರಸ್ತೆರೈಲು ಹೈಗೇಟ್‌ನಲ್ಲಿ ಆರಂಭವಾಯಿತು.

1886: ರಸಾಯನಶಾಸ್ತ್ರಜ್ಞ ಜಾನ್ ಪೆಂಬರ್ಟನ್ ಕೋಕಾಕೋಲಾವನ್ನು ಜಾಹೀರಾತು ಪಡಿಸಿದರು.

1900: ಓಟೀಸ್ ಎಲಿವೇಟರ್ ಸಂಸ್ಥೆಯಿಂದ ಎಸ್ಕಲೇಟರ್ ಟ್ರೇಡ್ ಮಾರ್ಕ್ ನೋಂದಾಯಿಸಲ್ಪಟ್ಟಿತು.

1916: ಅಮೇರಿಕಾ ಅಧ್ಯಕ್ಷರ ಅಧಿಕೃತ ಧ್ವಜವನ್ನು ಅಳವಡಿಸಲಾಯಿತು.

1919: ಚಾರ್ಲ್ಸ್ ಸ್ಟ್ರೈಟ್ ಪಾಪ್ ಅಪ್ ಟೋಸ್ಟರ್ ಯಂತ್ರಕ್ಕೆ ಪೇಟೆಂಟ್ ಪಡೆದರು.

1919: ಆಲ್ಬರ್ಟ್ ಐನ್ಸ್ಟೈನ್ ಅವರ ಬೆಳಕು-ಬಾಗುವ ಊಹೆಯನ್ನು ಆರ್ತುರ್ ಎಡ್ಡಿಂಟನ್ ಧೃಡೀಕರಿಸಿದರು.

1935: ಹೇಗ್ ಸ್ಥಳೀಯ ವಸ್ತುಸಂಗ್ರಹಾಲಯ ತೆರೆಯಲಾಯಿತು.

1940: ಅಡಾಲ್ಫ್ ಕೀಫರ್ 58.8 ಸೆಕೆಂಡಿನಲ್ಲಿ 100 ಗಜಗಳಷ್ಟು ಹಿಮ್ಮುಖವಾಗಿ ಈಜಿ ವಿಶ್ವದಾಖಲೆ ನಿರ್ಮಿಸಿದರು.

1943: ಅಮೇರಿಕಾದಲ್ಲಿ ಮಾಂಸ ಮತ್ತು ಚೀಸ್ ಗಳನ್ನು ದಿನಭತ್ಯೆಯಂತೆ ನೀಡಲಾಗಿತ್ತು.

1951: ಏಕ ಇಂಜಿನ್ ವಿಮಾನದಲ್ಲಿ ಮೊದಲ ಬಾರಿಗೆ ಉತ್ತರ ಧ್ರುವಕ್ಕೆ ಪ್ರಯಾಣಿಸಲಾಗಿತ್ತು.

1953: ಎಡ್ಮಂಡ್ ಹಿಲ್ಲರಿ ಮತ್ತು ತೇನ್ ಸಿಂಗ್ ನೋರ್ಜ್ ಅವರುಗಳು ಮೌಂಟ್ ಎವೆರೆಸ್ಟ್ ಶಿಖರಾಗ್ರವನ್ನು ತಲುಪಿದ ಮೊದಲಿಗರು.

1994: ಉತ್ತರ ಸಮುದ್ರದ ಮೇಲೆ ಧೂಮಕೇತು ಕಾಣಿಸಿಕೊಂಡಿತು.

1997: ಸ್ಪೇನ್ ದೇಶದ ವಿಜ್ಞಾನಿಗಳು 780,000 ವರ್ಷಗಳಷ್ಟು ಹಳೆಯ ಪಳೆಯುಳಿಕೆಯಲ್ಲಿ ಹೊಸ ಮಾನವ ಜಾತಿಯ ಅಸ್ಥಿತ್ವವನ್ನು ಘೋಷಿಸುತ್ತಾರೆ.

1999: ಬಾಹ್ಯಾಕಾಶ ನೌಕೆ ಡಿಸ್ಕವರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲ ಡಾಕಿಂಗ್ ಪೂರ್ಣಗೊಳಿಸಿತು

2012: ಅಪರೂಪದ ಗುಲಾಬೀ ಬಣ್ಣದ 12 ಕ್ಯಾರೆಟ್ ವಜ್ರವನ್ನು ಹಾಂಗ್‌ಕಾಂಗಿನಲ್ಲಿ 17.4 ಮಿಲಿಯನ್ ಡಾಲರುಗಳಿಗೆ ಹರಾಜು ಮಾಡಲಾಯಿತು.

2013: ಫ್ರಾನ್ಸ್ ದೇಶದಲ್ಲಿ ಮೊದಲ ಸಲಿಂಗಕಾಮಿ ವಿವಾಹ ನಡೆಯಿತು.

2015: ಭಾರತದ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೇಂದ್ರೀಕೃತವಾದ Heat wavesನಿಂದಾಗಿ ಒಂದು ವಾರದಲ್ಲಿ 1800 ಜನರು ಮೃತರಾದರು.

ಪ್ರಮುಖ ಜನನ/ಮರಣ:

1736: ಅಮೇರಿಕಾ ಸ್ಥಾಪನೆಗೆ ಶ್ರಮಿಸಿದ ಪಿತಾಮಹರಲ್ಲಿ ಒಬ್ಬರಾದ ಪ್ಯಾಟ್ರಿಕ್ ಹೆನ್ರೀ ಜನಿಸಿದರು,

1874: 20ನೇ ಶತಮಾನದ ಪ್ರಮುಖ ಸಾಹಿತಿಯಾಗಿದ್ದ ಜಿ.ಕೆ. ಚೆಸ್ಟರ್ಟನ್ ಜನಿಸಿದರು.

1906: ಮೈಸೂರು ಶೈಲಿಯ ಭರತನಾಟ್ಯದ ಪ್ರವರ್ತಕರಲೊಬ್ಬರಾದ ಡಾ.ಕೆ.ವೆಂಕಟಲಕ್ಷ್ಮಮ್ಮ ಜನಿಸಿದರು.

1914: ನೇಪಾಳದ ಭಾರತೀಯ ಪರ್ವತಾರೋಹಿ ತೇನ್‌ಸಿಂಗ್ ನೋರ್ಜ್ಅವರು ಜನಿಸಿದರು,

1920: ಆಟದ ಸಿದ್ಧಾಂತವನ್ನು ಪ್ರಸ್ತಾಪಿಸಿದ ಅರ್ಥಶಾಸ್ತ್ರಜ್ಞ ಜಾನ್ ಚಾರ್ಲಸ್ ಹರ್ಸಾನಿ ಜನಿಸಿದರು.

Categories
e-ದಿನ

ಮೇ-28

ಪ್ರಮುಖಘಟನಾವಳಿಗಳು:

1742: ಲಂಡನ್ನಿನ ಗುಡ್ ಮ್ಯಾನ್ ಫೀಲ್ಡ್ಸ್ ನಲ್ಲಿ ಮೊದಲ ಒಳಾಂಗಣ ಈಜುಕೊಳ ತೆರೆದಿತ್ತು.

1889: ಎಡ್ವರ್ಡ್ ಮತ್ತು ಆಂಡ್ರೆ ಮಿಶೆಲ್ಲಿನ್ ಸೇರಿ ಮಿಶೆಲಿನ್ ಟೈರ್ ಸಂಸ್ಥೆಯನ್ನು ಆರಂಭಿಸಿದರು.

1892: ನಿಸರ್ಗವನ್ನು ಸಂರಕ್ಷಿಸಲು ಜಾನ್ ಮುಯಿರ್ ಸಿಯೆರ್ರ ಕ್ಲಬ್ ಸ್ಥಾಪಿಸಿದರು.

1900: ಪೂರ್ಣ ಸೂರ್ಯ ಗ್ರಹಣ ಸಂಭವಿಸಿತು.

1938: ಟೆಲ್ ಅವೀವ್ ಬಂದರು ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು.

1952: ಮೆಂಪಿಸ್ ಕಿಡ್ಡಿ ಉದ್ಯಾನದಲ್ಲಿರುವ ಲಿಟಲ್ ಡಿಪ್ಪರ್ ರೋಲರ್ ಕೋಸ್ಟರ್ ಉತ್ತರ ಅಮೇರಿಕಾದ ಅತ್ಯಂತ ಹಳೆಯದಾದ ಮತ್ತು ಕಾರ್ಯನಿರ್ವಹಿಸುತ್ತಿರುವ ಉಕ್ಕಿನ ರೋಲರ್ ಕೋಸ್ಟರ್ ಆಗಿದೆ.

1952: ಗ್ರಿಸ್ ದೇಶದ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ನೀಡಲಾಗಿತ್ತು.

1953:  “ಮೆಲೊಡಿ” ಮೊದಲ 3ಡಿ ವ್ಯಂಗ್ಯ ಚಿತ್ರವನ್ನು ಟೆಕ್ನಿಕಲರ್ ನಲ್ಲಿ ಪ್ರದರ್ಶಿಸಲಾಯಿತು.

1959: ಕೋತಿಗಳಾದ ಏಬಲ್ ಮತ್ತು ಬೇಕರ್ 500 ಕಿಲೋಮೀಟರ್ ಜುಪಿಟರ್ ಕ್ಷಿಪಣಿಯ ಮೇಲೆ ಬಾಹ್ಯಾಕಾಶದ ಯಾತ್ರೆ ಮಾಡಿದ ಮೊದಲ ಪ್ರಾಣಿಗಳು.

1961: ಮಾನವ ಹಕ್ಕುಗಳ ಸಂಘಟನೆಯ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸ್ಥಾಪನೆಯಾಯಿತು.

1964: ಭಾರತದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರು ಅವರ ಅಂತ್ಯಕ್ರಿಯೆಯನ್ನು ನವದೆಹಲಿಯಲ್ಲಿ ನೆರವೇರಿಸಲಾಯಿತು.

1964: ಮಾನವ ರಹಿತ ಅಪೋಲೋ ಉಪಗ್ರಹವನ್ನು ಶನಿಗ್ರಹಕ್ಕೆ ರವಾನಿಸಲು ಭೂಮಿಯ ಕಕ್ಷೆಯಿಂದ ಕಳುಹಿಸಲಾಯಿತು.

1971: ರಷ್ಯಾ ದೇಶದಿಂದ ಭೂಮಿಯಿಂದ ಮಂಗಳ ಗ್ರಹದ ಮೇಲೆ ತಲುಪಿದ ಮೊದಲ ಬಾಹ್ಯಾಕಾಶದ ನೌಕೆ ಮಾರ್ಸ್-3 ಹಾರಿಸಲಾಯಿತು.

1999: 22 ವರ್ಷಗಳ ನಂತರ ಲಿಯನಾರ್ಡೋ ಡಾವಿಂಚಿಯವರ ಮೇರು ಕೃತಿ “ದಿ ಲಾಸ್ಟ್ ಸಪ್ಪರ್” ಅನ್ನು ಮತ್ತೆ ಪ್ರದರ್ಶನಕ್ಕಿಡಲಾಗಿತ್ತು.

2008: ನೇಪಾಳ ತನ್ನ ಎರಡು ನೂರನಲವತ್ತು ವರ್ಷಗಳ ರಾಜಪ್ರಭುತ್ವವನ್ನು ಅಂತ್ಯಗೊಳಿಸಿ ವಿಶ್ವದ ನೂತನ ಗಣರಾಜ್ಯವಾಗಿ ಉದಯವಾಯಿತು.

ಪ್ರಮುಖ ಜನನ/ಮರಣ:

1783: ಫ್ರಾನ್ಸ್ ದೇಶದಲ್ಲಿ ಗಲ್ಲು ಶಿಕ್ಷೆಯ ಸಾಧನೆಯ ಬಳಕೆಯನ್ನು ಪ್ರಸ್ತಾಪಿಸಿದ ಡಾ.ಜೋಸೆಫ್ ಗಿಲೋಟಿನ್ ಜನಿಸಿದರು.

1807: ಜೀವಶಾಸ್ತ್ರಜ್ಞ ಲೂಇಸ್ ಅಗಾಸಿಸ್ ಜನಿಸಿದರು, ಇವರು ನಿರ್ನಾಮವಾಗಿರುವ ಮೀನುಗಳ ಹಾಗೂ ಹಿಮನದಿಗಳ ಮೇಲೆ ಸಂಶೋಧನೆ ಮಾಡಿದ್ದಾರೆ.

1908: ಜೇಮ್ಸ್ ಬಾಂಡ್ ಪತ್ತೇದಾರಿ ಸರಣಿಗಳ ಲೇಖಕರಾದ ಇಯಾನ್ ಫ್ಲೆಮಿಂಗ್ ಅವರು ಜನಿಸಿದರು.

Categories
e-ದಿನ

ಮೇ-27

ಪ್ರಮುಖ ಘಟನಾವಳಿಗಳು:

1679: ಹೇಬಿಯಸ್ ಕಾರ್ಪಸ್ ಆಕ್ಟ್ (ಕಾನೂನುಬಾಹಿರ ಬಂಧನ ಮತ್ತು ಸೆರೆವಾಸವನ್ನು ಪ್ರಶ್ನಿಸುವ ವ್ಯಕ್ತಿಸ್ವಾತಂತ್ರ್ಯ) ಕಾಯಿದೆ ಇಂಗ್ಲೆಂಡಿನಲ್ಲಿ ಜಾರಿಯಾಯಿತು.

1895: ಬ್ರಿಟಿಶ್ ದೇಶದ ಆವಿಷ್ಕಾರಕ ಬರ್ಟ್ ಎಕರ್ಸ್ ಚಲನಚಿತ್ರದ ಕ್ಯಾಮೆರಾ/ಪ್ರಕ್ಷೇಪಕ್ಕೆ ಪೇಟೆಂಟ್ ಪಡೆದರು.

1907: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ಲೇಗ್ ಕಾಯಿಲೆ ಹರಡಿಕೊಂಡಿತು.

1930: ರಿಚರ್ಡ್ ಡ್ರು ಅವರುಮಾಸ್ಕಿಂಗ್ ಟೇಪ್ ಅನ್ನು ಕಂಡು ಹಿಡಿದರು.

1930: ನ್ಯೂಯಾರ್ಕ್ ನಗರದ 1046 ಅಡಿ (319 ಮೀಟರ್) ಮಾನವನಿರ್ಮಿತ ಅತಿ ಎತ್ತರದ ಕಟ್ಟಡ ಕ್ರಿಸ್ಲರ್ ಬಿಲ್ಡಿಂಗ್ ಉದ್ಘಾಟನೆ ಆಯಿತು.

1931: ವಿಮಾನಗಳ ಪರೀಕ್ಷೆಗಾಗಿ ಮೊದಲ ಪೂರ್ಣ ಪ್ರಮಾಣದ ವಿಂಡ್ ಟನ್ನೆಲ್ ಆರಂಭವಾಯಿತು.

1931: ಪಿಕಾರ್ಡ್ ಮತ್ತು ಕ್ನಿಪ್ಪರ್ ಆಕಾಶಬುಟ್ಟಿಯ ಮೂಲಕ ವಾಯುಮಂಡಲದೊಳಗೆ ಹಾರಾಡಿದ ಮೊದಲಿಗರು.

1942: ಹಿಟ್ಲರ್ 10000 ಜೆಕ್ ಜನರನ್ನು ಕೊಲ್ಲಲು ಆದೇಶಿಸಿದರು.

1943: ಲಾಸ್ ಜ್ಲೋ ಬಿರೋ ಬಾಲ್ ಪಾಯಿಂಟ್ ಪೆನ್ನಿನ ಪೇಟೆಂಟ್ ಪಡೆದರು.

1951: ಸ್ಯಾನ್ ಫ್ರಾನ್ಸಿಸ್ಕೋದ ಅಕ್ವಾಟಿಕ್ ಪಾರ್ಕಿನಲ್ಲಿ ಕಡಲ ಮ್ಯೂಸಿಯಂ ಆರಂಭವಾಯಿತು.

1961: ಮೊದಲ ಬಾರಿಗೆ ಕಪ್ಪು ಬೆಳಕನ್ನು(Black light) ಮಾರಲಾಗಿತ್ತು.

1963: ಜೋಮೊ ಕೆನ್ಯಟ್ಟಾ ಅವರು ಕೀನ್ಯಾ ದೇಶದ ಮೊದಲ ಚುನಾಯಿತ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು.

1969: ವಾಲ್ಟ್ ಡಿಸ್ನಿ ವರ್ಲ್ಡ್ ನಿರ್ಮಾಣ ಆರಂಭವಾಯಿತು.

1997: 20 ಬ್ರಿಟಿಷ್‌ ಮಹಿಳೆಯರು ಸೇರಿದಂತೆ ಮೊದಲ ಮಹಿಳೆಯರ ತಂಡವು ಉತ್ತರ ಧ್ರುವ ತಲುಪಿದರು.

2010: 2 ವರ್ಷಗಳ ಹಿಂದೆ ಬೆಂಕಿ ಅನಾಹುತದಿಂದ ಹಾಳಾಗಿದ್ದ “ಯುನಿವರ್ಸಲ್ ಸ್ಟೂಡಿಯೋಸ್” ಪುನಃ ತೆರೆಯಿತು.

2013: ರೊಮೇನಿಯಾದಲ್ಲಿ 44 ಮೈಲಿಗಳಷ್ಟು ಉದ್ದದ 5 ಟನ್ ತೂಕದ ನೂಲಿನಿಂದ ತಯಾರಿಸಲಾದ ಅತೀ ದೊಡ್ಡ ಧ್ವಜವನ್ನು ಅನಾವರಣಮಾಡಲಾಯಿತು.

2016: 3 ದಿನಗಳಲ್ಲಿ 3 ಹಡಗುಗಳು ಮುಳುಗಿ ಸುಮಾರು 700 ಜನರು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ನಿಧನರಾಗಿದ್ದರು.

ಪ್ರಮುಖಜನನ/ಮರಣ:

1332: ಆಧುನಿಕ ಸಮಾಜಶಾಸ್ತ್ರ, ಇತಿಹಾಸಶಾಸ್ತ್ರ ಮತ್ತು ಅರ್ಥಶಾಸ್ತ್ರದ ಸಂಸ್ಥಾಪಕ ಪಿತಾಮಹರಾದ ಐಬಿನ್ ಖಲ್ದಿನ್ ಜನಿಸಿದರು.

1897: ಸಾಹಿತ್ಯ ಮತ್ತು ಕನ್ನಡ ರಂಗಭೂಮಿ ಎರಡರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ ಬಿ.ಪುಟ್ಟಸ್ವಾಮಯ್ಯನವರು ಜನಿಸಿದರು.

1897: ಪರಮಾಣು ನ್ಯೂಕ್ಲಿಯಸ್ ವಿಭಜನೆಯ ಬಗ್ಗೆ ಸಂಶೋಧನೆ ಮಾಡಿದ ಜಾನ್ ಕಾಕ್ರಾಫ್ಟ್ ಎಂಬ ಬ್ರಿಟಿಷ್‌ ಭೌತವಿಜ್ಞಾನಿ ಜನಿಸಿದರು.

1907: ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿದ ಸಂಶೋಧನಾ ಪತ್ರಿಕೆ ಮತ್ತು ಪುಸ್ತಕಗಳ ಲೇಖಕ ರೇಚಲ್ ಕಾರ್ಸನ್ಜನಿಸಿದರು.

1914: ವೀಣಾ ವಿದ್ವಾಂಸರಲ್ಲೇ ಅಗ್ರಗಣ್ಯರೆನಿಸಿದ್ದ ಆರ್.ಆರ್.ಕೇಶವಮೂರ್ತಿ ರುದ್ರಪಟ್ಟಣದಲ್ಲಿ ಜನಿಸಿದರು.

1964: ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ನಿಧನರಾದರು.

Categories
e-ದಿನ

ಮೇ-26

ಪ್ರಮುಖಘಟನಾವಳಿಗಳು:

1805: ಲೂಯೀಸ್ ಮತ್ತು ಕ್ಲಾರ್ಕ್ ಮೊದಲ ಬಾರಿ ರಾಕಿ ಪರ್ವತವನ್ನು ಕಂಡರು.

1835: ರಾಜ್ಯ ಗುಲಾಮಗಿರಿಯ ಕಾನೂನುಗಳ ಮೇಲೆ ಅಮೆರಿಕನ್ ಕಾಂಗ್ರೆಸ್ಸಿಗೆ ಯಾವುದೇ ಅಧಿಕಾರವಿಲ್ಲ ಎಂದು ಸಾರುವ ಅಮೇರಿಕಾದ ಕಾಂಗ್ರೆಸ್ಸಿನಲ್ಲಿ ಒಂದು ನಿರ್ಣಯವನ್ನು ಜಾರಿಗೊಳಿಸಲಾಗಿದೆ.

1887: ನ್ಯೂಯಾರ್ಕ್‌ನಲ್ಲಿ ಓಟ ಪಂದ್ಯದ ಮೇಲೆ ಬಾಜಿ ಕಟ್ಟುವುದು ಕಾನೂನು ಬದ್ಧವಾಯಿತು.

1906: ಅಮೇರಿಕಾದ ಪುರಾತತ್ವ ಸಂಸ್ಥೆ ಆರಂಭವಾಯಿತು.

1913: ಎಮಿಲಿ ಡಂಕನ್ ಗ್ರೇಟ್ ಬ್ರಿಟನ್ ದೇಶದ ಮೊದಲ ಮಹಿಳಾ ಮ್ಯಾಜಿಸ್ಟ್ರೇಟ್ ಆಗಿದ್ದರು,

1927: ಫೊರ್ಡ್ ಮೋಟಾರ್ ಸಂಸ್ಥೆ ಮಾಡೆಲ್ ಟಿ ಫೋರ್ಡ್/ ಟಿನ್ ಲಿಜ್ಜಿಯ ಕಡೆಯ ಕಾರನ್ನು ಉತ್ಪಾದಿಸಿತು.

1937: ಸ್ಯಾನ್ ಫ್ರಾನ್ಸಿಸ್ಕೋದ ಸುವರ್ಣದ್ವಾರ ಸೇತುವೆ (ಗೋಲ್ಡನ್ ಗೇಟ್ ಬ್ರಡ್ಜ್) ತೆರೆಯಿತು.

1946: ಹೈಡ್ರೋಜೆನ್ ಬಾಂಬ್‌ಗೆ ಅಮೇರಿಕಾದಲ್ಲಿ ಪೇಟೆಂಟ್ ಪಡೆಯಲಾಗಿತ್ತು.

1958: ಸ್ಯಾನ್ ಫ್ರಾನ್ಸಿಸ್ಕೋದ ಯೂನಿಯನ್ ಸ್ಕ್ವೇರ್ ಒಂದು ರಾಜ್ಯದ ಐತಿಹಾಸಿಕ ಹೆಗ್ಗುರುತಾಗಿ ಮಾನ್ಯ ಮಾಡಲಾಯಿತು.

1969: ಅಪೋಲೋ ಗಗನಯಾತ್ರಿಗಳು ಮತ್ತೆ ಭೂಮಿಗೆ ಹಿಂದಿರುಗಿದರು.

1989: ಡ್ಯಾನಿಷ್ ಸಂಸತ್ತು ಸಲಿಂಗಿಗಳ ಮದುವೆಯನ್ನು ಮಾನ್ಯ ಮಾಡಿತು.

2003: ಶೆರ್ಪ ಲಕ್ಪ ಗೇಲು ಮೌಂಟ್ ಎವೆರೆಸ್ಟ್ ಶಿಖರವನ್ನು ಕೇವಲ 10 ಗಂಟೆ 56 ನಿಮಿಷಗಳಲ್ಲಿ ಏರಿ ದಾಖಲೆ ನಿರ್ಮಿಸಿದರು.

2006: ಜರ್ಮನಿಯ ಬರ್ಲಿನ್‌ನಲ್ಲಿ ಯೂರೋಪಿನ ಅತಿದೊಡ್ಡ ರೈಲುನಿಲ್ದಾಣ ತೆರೆಯಲಾಯಿತು.

2014: ನರೇಂದ್ರ ಮೊದಿ ಅವರು ಭಾರತದ 15ನೇ ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದರು.

ಪ್ರಮುಖಜನನ/ಮರಣ:

1949: ಅಮೇರಿಕದ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಸಂಶೋಧಕ ವಾರ್ಡ್ ಕನ್ನಿಂಗ್ಯಾಮ್ ಜನಿಸಿದರು.

1951: ಅಮೇರಿಕಾದ ಮೊದಲ ಮಹಿಳಾ ಗಗನಯಾತ್ರಿ ಸ್ಯಾಲಿ ರೈಡ್ ಜನಿಸಿದರು.

1983: ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ತೆಹೆಲಾನ್ ಜನಿಸಿದರು.

Categories
e-ದಿನ

ಮೇ-25

ಪ್ರಮುಖಘಟನಾವಳಿಗಳು:

ಕ್ರಿ.ಪೂ 585: ಗ್ರೀಸ್ ದೇಶದ ಥೇಲ್ಸ್ ಎಂಬುವವರು ಮೊದಲ ಸೂರ್ಯ ಗ್ರಹಣವನ್ನು ಊಹಿಸಿದ್ದರು.

1844: ಮೊದಲನೇ ಟೆಲಿಗ್ರಾಫ್ ಸುದ್ಧ ಪ್ರಸಾರವನ್ನು ಬಾಲ್ಟಿಮೋರ್ ಪೇಟ್ರಿಯಾಟ್ ನಲ್ಲಿ ಪ್ರಕಟಿಸಲಾಯಿತು.

1844: ಗ್ಯಾಸೋಲೈನ್ ಇಂಜಿನ್ನನ್ನು ಸ್ಟುವರ್ಟ್ ಪೆರ್ರಿ ಪೇಟೆಂಟ್ ಪಡೆದರು.

1895: ಬರಹಗಾರ ಮತ್ತು ಕವಿ ಆಸ್ಕರ್ ವೈಲ್ಡ್ ನನ್ನು ಅಸಭ್ಯತೆಗಾಗಿ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

1927: ಹೆನ್ರಿ ಫೊರ್ಡ್ ಅವರು ತಮ್ಮ ಮಾಡೆಲ್ ಆದ “ಟಿ-ಫೋರ್ಡ್”ನ ಉತ್ಪಾದನೆಯನ್ನು ಅಂತ್ಯಗೊಳಿಸುವ ಬಗ್ಗೆ ಘೋಷಿಸಿದರು.

1932: ಗೂಫಿ ಅಕಾ ಡಿಪ್ಪಿ ಡಾಗ್, ವಾಲ್ಟ್ ಡಿಸ್ನಿ ಅವರ “ಮಿಕ್ಕೀಸ್ ರೆವ್ಯೂ”ನಲ್ಲಿ ಮೊದಲನೆ ಬಾರಿಗೆ ಕಾಣಿಸಿಕೊಂಡಿತು.

1935: ಮಿಚಿಗನ್ನಿನ ಆನ್ ಆರ್ಬರ್ ನಲ್ಲಿನ ಫೆರ್ರಿ ಫೀಲ್ಡ್ ನಲ್ಲಿ ನಡೆದ ಬಿಗ್ ಟೆನ್ ಕ್ರೀಡಾ ಸಮಾವೇಶದಲ್ಲಿ ಕ್ರೀಡಾ ಪಟು ಜೆಸ್ಸಿ ಓವೆನ್ಸ್ 45 ನಿಮಿಷಗಳಲ್ಲಿ 4 ವಿಶ್ವ ದಾಖಲೆಗಳನ್ನು ಹಿಮ್ಮೆಟ್ಟಿಸಿ ನೂತನ ದಾಖಲೆ ನಿರ್ಮಿಸಿದರು.

1965: ಭಾರತ ಪಾಕಿಸ್ತಾನದ ನಡುವೆ ಯುದ್ದ ಆರಂಭವಾಯಿತು.

1967: ಜಾನ್ ಲೆನಿನ್ ತನ್ನ ವಿಲಕ್ಷಣ ಬಣ್ಣದಿಂದ ಚಿತ್ರಿಸಿದ ರೋಲ್ಸ್ ರಾಯ್ಸ್ಕಾರನ್ನು ಪಡೆದರು.

1978: ರಾಷ್ಟ್ರದ ಮೊದಲ ಕಾನೂನು ಬದ್ಧವಾದ ಕ್ಯಾಸಿನೋವನ್ನು ನೆವಾಡದ ಹೊರಾಂಗಣದಲ್ಲಿದ್ದ ಅಟ್ಲಾಂಟಿಕ್ ಸಿಟಿಯಲ್ಲಿ ತೆರೆದಿತ್ತು.

1983: ಅಮೇರಿಕಾದ ಮೊದಲ ರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ ಎಂದು ಘೋಷಿಸಲ್ಪಟ್ಟಿದೆ.

2001: ಕೊಲೊರಾಡೋ ದೇಶದ 32 ವರ್ಷದ ಎರಿಕ್ ವೇಹನ್ಮೇಯರ್, ಮೌಂಟ್ ಎವೆರೆಸ್ಟ್ ಶಿಖರ ಏರಿದ ಮೊದಲ ಅಂಧ ವ್ಯಕ್ತಿ ಆಗಿದ್ದಾರೆ.

2005: 1000 ಮೈಲಿ ಅಳತೆಯ ವಿಶ್ವದ ಅತಿ ಉದ್ದದ ತೈಲ ಕೊಳವೆ ಅಜರ್ ಬೈಜಾನಿನಿಂದ ಆರಂಭವಾಗಿ ಮೆಡಿಟರೇನಿಯನ್ ಸಮುದ್ರವನ್ನು ತಲುಪುತ್ತದೆ.

2008: ನಾಸಾದ ಫೀನಿಕ್ಸ್ ಮಾರ್ಸ್ ಲ್ಯಾಂಡರ್ ಮಂಗಳದ ಆರ್ಕ್ಟಿಕ್ ಬಯಲು ಪ್ರದೇಶದಲ್ಲಿ ಇಳಿಯಿತು.

2011: ಸತತ 25 ವರ್ಷಗಳನ್ನು ಪೂರೈಸಿದ “ ಒಪ್ರ ವಿನ್ಫ್ರೀ ಶೋ”ದ ಕೊನೆಯ ಪ್ರದರ್ಶನ ಆಯಿತು.

2012: ಪಾರ್ಕ್ ಎ ಸ್ಪೇಸ್ ಎಕ್ಸ್ ಡ್ರಾಗನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಿಂತ ಮೊದಲ ವಾಣಿಜ್ಯ ಗಗನನೌಕೆಯಾಗಿದೆ.

2013: ಪಾಕಿಸ್ತಾನದ ಗುಜ್ರಾಟ್ನಲ್ಲಿರುವ ಶಾಲಾ ಬಸ್ಸಿನಲ್ಲಿ ಅನಿಲ ಸಿಲೆಂಡರ್ ಸ್ಫೋಟಿಸಿ 17 ಮಕ್ಕಳು ಮೃತಪಟ್ಟಿದ್ದರು.

2013: ಜಪಾನ್ ದೇಶದ ಯುಚಿರೋ ಮಿಯುರ (80 ವರ್ಷ) ಮೌಂಟ್ ಎವೆರೆಸ್ಟ್ ಶಿಖರ ಏರಿದ ಅತ್ಯಂತ ಹಿರಿಯ ವ್ಯಕ್ತಿ.

2013: ಯುಕ್ರೇನಿನ ಮೊದಲ ಸಲಿಂಗಕಾಮಿ ಹೆಮ್ಮೆಯ ಮೆರವಣಿಗೆ ದೇಶದ ರಾಜಧಾನಿ ಕೀವ್‌ನಲ್ಲಿ ಸುಮಾರು 100 ಮಂದಿ ಪಾಲ್ಗೊಂಡರು.

ಪ್ರಮುಖಜನನ/ಮರಣ:

1886: ಭಾರತದಲ್ಲಿ ಬ್ರಿಟೀಶರ ವಿರುದ್ಧ ಹೋರಾಡಿದ ರಾಸಬಿಹಾರಿ ಬೋಸ್ ಜನಿಸಿದರು.

1889: ಮೊದಲ ಯಶಸ್ವಿ ಹೆಲಿಕಾಪ್ಟರ್‌ನ್ನು ತಯಾರಿಸಿದ ಅಮೇರಿಕಾದ ವಾಯುಯಾನ ಇಂಜಿನಿಯರ್ ಇಗೋರ್ ಸಿಕರ್ಸ್ಕಿ ಜನಿಸಿದರು.

1907: ಅಮೇರಿಕಾದ ಸಾಗರ ಜೀವಶಾಸ್ತ್ರಜ್ಞ, ಸಂರಕ್ಷಕ, ಬರಹಗಾರ ರೇಚರ್ ಕಾರ್ಸನ್ ಜನಿಸಿದರು.

1919: ಆಫ್ರಿಕನ್-ಅಮೇರಿಕನ್ ಮೊದಲ ಮಿಲೆನಿಯರ್ ಉದ್ಯಮಿಮ್ಯಾಡಂ ಸಿ.ಜೆ.ವಾಕರ್ ನಿಧನರಾದರು.

1954: ಹಂಗೇರಿಯಾದ ಯುದ್ಧ ಛಾಯಾಗ್ರಾಹಕ ರಾಬರ್ಟ್ ಕಾಪಾ ಅಸುನೀಗಿದರು.

Categories
e-ದಿನ

ಮೇ-24

ಪ್ರಮುಖಘಟನಾವಳಿಗಳು:

1543: ನಿಕೋಲಾಸ್ ಕಾಪರ್ನಿಕಸ್ ಖಗೋಳಶಾಸ್ತ್ರಜ್ಞ ಸೂರ್ಯ ಕೇಂದ್ರಿತ ಬ್ರಹ್ಮಾಂಡದ ಪುರಾವೆಯನ್ನು ಪ್ರಕಟಿಸಿದರು.

1830: ಸಾರಾ ಜೋಸೆಫ್ ಹೇಲ್ ಬರೆದ ಮಕ್ಕಳ ಪದ್ಯವಾದ “ಮೇರಿ ಹಾಡ್ ಅ ಲಿಟಲ್ ಲ್ಯಾಂಬ್” ಪದ್ಯ ಪ್ರಕಟಿಸಿದರು.

1830: ಅಮೇರಿಕಾದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭಿಸಲಾಯಿತು.

1832: ಲಂಡನ್ನಿನ ಸಮ್ಮೇಳನದಲ್ಲಿ ಗ್ರೀಸ್ನ ಮೊದಲ ಸಾಮ್ರಾಜ್ಯವನ್ನು ಘೋಷಿಸಲಾಯಿತು.

1844: ವಿಶ್ವದ ಮೊದಲ ಟೆಲಿಗ್ರಾಫ್ ಸಂದೇಶ ರವಾನಿಸಲಾಗಿತ್ತು.

1883: 14 ವರ್ಷಗಳ ಸುಧೀರ್ಘ ನಿರ್ಮಾಣದ ನಂತರ ನ್ಯೂಯಾರ್ಕಿನ ಬ್ರೂಕ್ಲಿನ್ ಬ್ರಿಡ್ಜ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

1899: ವಾಹನಗಳನ್ನು ದುರಸ್ತಿ ಮಾಡುವ ಅಂಗಡಿಯನ್ನು ಬಾಸ್ಟನ್‌ನಲ್ಲಿ ತೆರೆಯಲಾಗಿತ್ತು.

1915: ದೂರವಾಣಿ ಸಂಭಾಷಣೆಗಳನ್ನು ನಮೂದಿಸಲು/ದಾಖಲಿಸಲು “ಟೆಲಿಸ್ಕ್ರೈಬ್” ನ್ನು ವಿಜ್ಞಾನಿ ಥಾಮಸ್ ಕಂಡು ಹಿಡಿದರು.

1931: ಮೊದಲ ಹವಾ ನಿಯಂತ್ರಿತ ರೈಲನ್ನು ಬಿ&ಓ ರೈಲ್ ರೋಡಿನಲ್ಲಿ ಸ್ಥಾಪಿಸಲಾಯಿತು.

1940: ಇಗೋರ್ ಸಿಕೊರ್ಸ್ಕಿ ಮೊದಲ ಯಶಸ್ವಿ ಏಕ ರೋಟರ್ ಹೆಲಿಕಾಪ್ಟರ್ ವಿಮಾನವನ್ನು ನಿರ್ವಹಿಸಿದ್ದರು.

1954: ವೈಟ್ ಸ್ಯಾಂಡ್ಸ್ ಇಂದ ಹಾರಿಸಿದ್ದ ಮೊದಲ ರಾಕೆಟ್ 150 ಮೈಲಿ (241 ಕಿಲೋ ಮೀಟರ್) ಎತ್ತರ ತಲುಪಿತ್ತು.

1954: ಜರ್ಮನಿಯ ವಿಮಾನ ಸಂಸ್ಥೆಯಾದ ಲುಫ್ತಾಂನ್ಸಾ ಸ್ಥಾಪಿಸಲಾಯಿತು.

1954: ಐಬಿಎಂ ಸಂಸ್ಥೆ ನಿರ್ವಾತ ಕೊಳವೆ (ವ್ಯಾಕ್ಯುಂ ಟ್ಯೂಬ್)ಯನ್ನು ಪ್ರಕಟಿಸಿತು. ಇದು ವಿದ್ಯುಜ್ಜನಿತ ಮಿದುಳಿನಂತಿದ್ದು, ಗಂಟೆಗೆ 10 ಮಿಲಿಯನ್ ದತ್ತಾಂಶಗಳನ್ನು ನಿರ್ವಹಿಸುತ್ತದೆ ಎಂದು ಘೋಷಿಸಿದ್ದರು.

1958: ಯುನೈಟೆಡ್ ಪ್ರೆಸ್ ಮತ್ತು ಇಂಟರ್ ನ್ಯಾಷನಲ್ ನ್ಯೂಸ್ ಸರ್ವೀಸ್ ವಿಲೀನಗೊಂಡು ಯುನೈಟೆಡ್ ಪ್ರೆಸ್ ಇಂಟರ್ ನ್ಯಾಷನಲ್ ಆಗಿ ಮಾರ್ಪಾಡಾಯಿತು.

1976: ಮೊದಲ ವಾಣಿಜ್ಯ ವಿಮಾನ ಉತ್ತರ ಅಮೇರಿಕಾಗೆ ಸಂಚಾರ ಆರಂಭಿಸಿತು.

1983: ಬ್ರೂಕ್ಲಿನ್ ಬ್ರಿಡ್ಜ್ನ ಶತಮಾನೋತ್ಸವನ್ನು ಆಚರಿಸಲಾಯಿತು.

1988: ನಿಮಿಷಕ್ಕೆ 586 ಪದಗಳನ್ನು ಮಾತನಾಡಿದ ಜಾನ್ ಮಾಸ್ಚಿತ್ತ ವಿಶ್ವದಾಖಲೆ ನಿರ್ಮಿಸಿದರು.

1993: ದೂರದರ್ಶನದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮೊದಲ ಗಗನಯಾತ್ರಿಯಾಗಿ ಮೇ ಜೇಮಿಸನ್ ಆಗಮಿಸಿದ್ದರು.

2001: 15 ವರ್ಷದ ಬಾಲಕಿ ಶೆರ್ಪ ತೆಂಬ ಶೆರಿ ಅವರು ಮೌಂಟ್ ಎವೆರೆಸ್ಟ್ಏರಿದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು

2004: ಉತ್ತರ ಕೊರಿಯ ಮೊಬೈಲ್ ಫೋನುಗಳನ್ನು ನಿಷೇಧಗೊಳಿಸಿತು.

2011: ಬಹು ಉಪಯುಕ್ತ ಸಿಬ್ಬಂದಿ ವಾಹನ ಗಗನನೌಕೆಯ ನಿರ್ಮಾಣದ ಪ್ರಗತಿಯ ಬಗ್ಗೆ ನಾಸಾ ಸಂಸ್ಥೆ ಘೋಷಿಸಿತ್ತು.

2011: ದೊಡ್ಡ ಕಾಡಾನೆಗಳ ಸಂರಕ್ಷಣೆಗಾಗಿ 8 ದೇಶದ ಪ್ರತಿನಿಧಿಗಳು ಭಾರತದಲ್ಲಿ ಸೇರಿ ಪ್ರಾಣಿಗಳ ಮೇಲಿನ ಆಕ್ರಮಣವನ್ನು ತಡೆಯಲು ಹಾಗೂ ದಂತಗಳ ಕಳ್ಳಸಾಗಾಣಿಕೆಯ ನಿರ್ಮೂಲನೆಗೆ ಸಂಕಲ್ಪಿಸಿದರು.

2012: ಜಂಬೋ ಜೆಟ್ ಗಾತ್ರದ ಸೋಲಾರ್ ಇಂಪಲ್ಸ್, ಪ್ರಾಯೋಗಿಕ ಸೌರವಿದ್ಯುತ್ ವಿಮಾನವು ಸ್ವಿಜರ್ಲ್ಯಾಂಡ್ ಇಂದ ಉತ್ತರ ಆಫ್ರಿಕಾ ದೇಶಕ್ಕೆ ಒಂದು ವಾರದ ಅವಧಿಯಲ್ಲಿ ತಲುಪಿತು.

2013: ಟರ್ಕಿಯ ಸಂಸತ್ತು ಮದ್ಯದ ಜಾಹಿರಾತುಗಳನ್ನು ನಿಷೇದಿಸಿತು ಮತ್ತು ಅಂತಹ ಪಾನೀಯಗಳ ಮಾರಾಟದ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸುವ ಶಾಸನವನ್ನು ಜಾರಿಗೆ ತಂದಿತು.

ಪ್ರಮುಖಜನನ/ಮರಣ:

1543: ಖಗೋಳಶಾಸ್ತ್ರಜ್ಞ ನಿಕೋಲಾಸ್ ಕೋಪರ್ನಿಕಸ್ ಪೋಲೆಂಡಿನಲ್ಲಿ ನಿಧನರಾದರು.

1544: ವಿದ್ಯುತ್ ಮತ್ತು ಕಾಂತೀಯ ಧ್ರುವಗಳನ್ನು ಕಂಡುಹಿಡಿದ ಭೌತವಿಜ್ಞಾನಿ ವಿಲಿಯಂ ಗಿಲ್ಬರ್ಟ್ ಜನಿಸಿದರು.

1686: ಉಷ್ಣಮಾಪಕದಲ್ಲಿ ಪಾದರಸವನ್ನು ಬಳಸಿ ತಾಪಮಾನವನ್ನು ನೋಡಬಹುದು ಎಂದು ತೋರಿಸಿದ ಜರ್ಮನಿಯ ಭೌತವಿಜ್ಞಾನಿ  ಗೆಬ್ರಿಯಲ್ ಡೇನಿಯಲ್ ಫ್ಯಾರನ್ಹೀಟ್ ಜನಿಸಿದರು.

1819: ಮಹಾರಾಣಿ ವಿಕ್ಟೋರಿಯ ಲಂಡನಿನಲ್ಲಿ ಜನಿಸಿದರು.

Categories
e-ದಿನ

ಮೇ-23

ಪ್ರಮುಖಘಟನಾವಳಿಗಳು:

1533: ಹೆನ್ರೀ VIII ಮತ್ತು ಒರೆಗಾನ್ ರಾಜ್ಯದ ಕ್ಯಾಥರೀನ್ ಮದುವೆಯನ್ನು ಅನೂರ್ಜಿತಗೊಳಿಸಲಾಯಿತು.

1576: ಖಗೋಳಶಾಸ್ತ್ರಜ್ಞ ಟೈಕೋ ಬ್ರಾಹಿ ಅವರಿಗೆ ಹ್ವೀನ್ ದ್ವೀಪನ್ನು ಯುರೇನಿಬೋರ್ಗ್ ವೀಕ್ಷಣಾಲಯ ನಿರ್ಮಿಸಲು ನೀಡಲಾಯಿತು.

1785: ಬೆನ್ಜಾಮಿನ್ ಫ್ರಾಂಕ್ಲಿನ್ ತನ್ನ ಆವಿಷ್ಕಾರವಾದ ಬೈಫೋಕಲ್‌ಗಳನ್ನು ಪ್ರಕಟಿಸಿದ್ದರು.

1827: ಅಮೇರಿಕಾದ ಮೊದಲ ನರ್ಸರಿ ಶಾಲೆ ನ್ಯೂಯಾರ್ಕನಲ್ಲಿ ಸ್ಥಾಪಿಸಲಾಯಿತು.

1865: ಲಿಂಕನ್‌ನನ್ನು ಕೊಂದ ನಂತರ ವೈಟ್ ಹೌಸಿನ ಮೇಲೆ ಮತ್ತೆ ದ್ವಜವನ್ನು ಹಾರಿಸಲಾಯಿತು.

1873: ಅಂಚೆ ಕಾರ್ಡುಗಳನ್ನು ಎಸ್ ಎಫ್ ನಲ್ಲಿ ಮೊದಲ ಬಾರಿಗೆ ಮಾರಾಟ ಮಾಡಲಾಯಿತು.

1879: ಅಯೋವಾ ರಾಜ್ಯ ವಿಶ್ವವಿದ್ಯಾನಿಲಯವು ಮೊಟ್ಟ ಮೊದಲ ಅಮೇರಿಕಾದ ಪಶುವೈದ್ಯ ಶಾಲೆಯನ್ನು ಸ್ಥಾಪಿಸಲಾಯಿತು.

1882: ಪೂರ್ವ ಲೋವನಲ್ಲಿ 6 ಅಂಗುಲದಷ್ಟು ಹಿಮಪಾತವಾಗಿತ್ತು.

1900:  ಮುದ್ರಣ ಸುದ್ಧಿಸೇವೆಗಳ ಸಂಘ ನ್ಯೂಯಾರ್ಕ್‌ನಲ್ಲಿ ಆರಂಭವಾಯಿತು.

1901: ಒಟ್ಟಾವದಲ್ಲಿ ನಾಣ್ಯಗಳನ್ನು ಟಂಕಿಸುವ ಒಟ್ಟಾವ ಮಿಂಟ್ ಆಕ್ಟ್ ರಾಜಪ್ರಭುತ್ವದ ಅನುಮತಿ ಪಡೆಯಿತು.

1903: ಸ್ಯಾನ್ ಫ್ರಾನ್ಸಿಸ್ಕೋಯಿಂದ ನ್ಯೂಯಾರ್ಕಿಗೆ ಮೊದಲ ಮೋಟಾರ್ ವಾಹನದ ಪ್ರವಾಸ ಆರಂಭಗೊಂಡಿತು.

1907: ಫಿನ್ಲ್ಯಾಂಡಿನ ಏಕ ಚೇಂಬರ್ ಸಂಸತ್ತು ತನ್ನ ಮೊದಲ ಪೂರ್ಣಾವಧಿಯ ಅಧಿವೇಶನ ಸಮಾವೇಶಗೊಂಡಿತು.

1915: ಮೊದಲ ವಿಶ್ವಯುದ್ಧದ ಸಮಯದಲ್ಲಿ ಇಟಲಿ ಆಸ್ಟ್ರಿಯ ಮತ್ತು ಹಂಗೇರಿಯ ಮೇಲೆ ಯುದ್ದ ಘೋಷಿಸಿತು.

1918: ಕ್ಯೂರಾಕೋದಲ್ಲಿನ ತೈಲ ಶುದ್ದಿಕರಣ ಸಂಸ್ಕರಣಾಗಾರ ಅಧಿಕೃತವಾಗಿ ತೆರೆಯಲಾಯಿತು.

1922: ಡೇಲೈಟ್ ಸೇವಿಂಗ್ ಟೈಮ್ ಬಗ್ಗೆ ರೇಡಿಯೋದಲ್ಲಿ ಮೊದಲ ಸಾರ್ವಜನಿಕ ‍ಚರ್ಚೆ ನಡೆಸಲಾಯಿತು.

1939: ಹಿಟ್ಲರ್ ತಾನು ಪೋಲೆಂಡಿಗೆ ತೆರಳಲು ಬಯಸುತ್ತೇನೆಂದು ಘೋಷಿಸುತ್ತಾರೆ.

1958: ಚೀನಾದಲ್ಲಿ ಮಾವೋ ಝೆಡಾಂಗ್ ಗ್ರೇಟ್ ಲೀಪ್ ಫಾರ್ವರ್ಡ್ ಚಳುವಳಿಯನ್ನು ಆರಂಭಿಸಿದರು.

1964: ಡೆಲ್ ಗ್ರೆಗ್ ಮಹಿಳೆಯರ ಮ್ಯಾರಥಾನ್ ಓಟದಲ್ಲಿ (3:27:45) ಸಮಯದಲ್ಲಿ.ಓಟ ಪೂರೈಸುವ ಮೂಲಕ ವಿಶ್ವದಾಖಲೆ ಮಾಡುತ್ತಾರೆ.

1967: ಸರ್ಕಾರವು ದಕ್ಷಿಣ ಆಫ್ರಿಕಾದ ಬಳಿ ಜಲಾಂತರ್ಗಾಮಿಗಳ ಸಂಚಾರವನ್ನು ನಿಷೇದಿಸಿತು.

1981: ನಾಸಾ ಇಂಟೆಲ್ ಸಾಟ್-V ಉಪಗ್ರಹವನ್ನು ಹಾರಿಸಿತ್ತು.

1982: ಕಾಲಿನ್ ವಿಲ್ಸನ್ ಸರ್ಫ್ ಬೋರ್ಡ್ನಲ್ಲಿ 294 ಮೈಲಿಗಳು ಸವಾರಿ ಆರಂಭಿಸಿದರು.

2008: ಅಂತರಾಷ್ಟ್ರೀಯ ನ್ಯಾಯಾಲಯ ಮಿಡಲ್ ರಾಕ್ಸ್ ಪ್ರದೇಶವನ್ನು ಮಲೇಷಿಯಾಗೆ ಮತ್ತು ಪಡ್ರಾ ಬ್ರಂಕಾ ಪ್ರದೇಶವನ್ನು ಸಿಂಗಾಪುರಕ್ಕೆ ನೀಡಿ 29 ವರ್ಷಗಳ ಗಡಿ ವಿವಾದಕ್ಕೆ ತೆರೆ ಹಾಕಿತು.

1972: ಇಂದಿನ ಶ್ರೀಲಂಕಾ ದೇಶವು ಸಿಲೋನ್ ಎಂಬ ಹೆಸರಿಂದ ಶ್ರೀಲಂಕಾ ಎಂದು ಹೆಸರು ಬದಲಾವಣೆ ಮಾಡಿತು.

2016: ಬಾರ್ಲಿಯನ್ನು ಕ್ರಿ.ಪೂ 3400-2900ನಲ್ಲೆ ಬಿಯರ್ ಮಾಡಲು ಉಪಯೋಗಿಸುತ್ತಿದ್ದರು ಎಂದು ಚೀನಾದ ಪುರಾತತ್ವಜ್ಞರು ಘೋಷಿಸಿದರು.

ಪ್ರಮುಖಜನನ/ಮರಣ:

1937: ಉದ್ಯಮಿ ಜಾನ್ ಡಿ ರಾಕ್ ಫೆಲ್ಲರ್‍ ನಿಧನರಾದರು.

1707: ಆಧುನಿಕ ಜೈವಿಕ ವರ್ಗೀಕರಣ ವ್ಯವಸ್ಥೆಗಳ ತಂದೆ ಎಂದೇ ಪ್ರಖ್ಯಾತಿಯಾಗಿದ್ದ ಸಸ್ಯವಿಜ್ಞಾನಿ ಕಾರ್ಲ್ ಲಿನೇನಸ್ ಜನಿಸಿದರು.

1890: ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದ ಮೊದಲನೇ ಅಧ್ಯಾಪಕರಾಗಿದ್ದ ಎ.ಎನ್.ನರಸಿಂಹಯ್ಯ ಜನಿಸಿದರು.