Categories
ಆರೋಗ್ಯ ವಿಜ್ಞಾನ ವಿಜ್ಞಾನ ಸಾಮಾನ್ಯ ಆರೋಗ್ಯ

ಸಾಮಾನ್ಯ ಆರೋಗ್ಯ

ಆರೋಗ್ಯದ ಬಗೆಗಿನ ಕಾಳಜಿ ಇಂದು ಸಮಾಜದ ಎಲ್ಲ ವರ್ಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶ. ರೋಗುರುಜಿನಗಳಿಂದ ದೂರವಿದ್ದು, ಆರೋಗ್ಯವಂತರಾಗಿ ಜೀವನ ಸಾಧಿಸುವುದು ಎಲ್ಲರ ಕನಸು. ಇಂಥ ಕನಸನ್ನು ನನಸಾಗಿಸಲು ನೆರವಾಗುವ ವೈದ್ಯಕೀಯ ಸಾಹಿತ್ಯ, ಅದು ಒದಗಿಸುವ ಮಾಹಿತಿ ಹಿಂದೆಂದಿಗಿಂತಲೂ ಇಂದು ಪ್ರಸಕ್ತವಾಗಿದೆ.ವೈದ್ಯಕೀಯ ಸಾಹಿತ್ಯವನ್ನು ಮುದ್ರಣ ಮಾಧ್ಯಮಕ್ಕೆ ಮಾತ್ರ ಅನ್ವಯವಾಗುವುಂತೆ ನಾವಿಂದು ಸೀಮಿತಗೊಳಿಸುವಂತಿಲ್ಲ. ಬಾನುಲಿ, ದೂರದರ್ಶನ, ಅಂತರ್ಜಾಲಗಳಲ್ಲೂ ವಿಫುಲವಾಗಿರುವ ಮಾಹಿತಿಯನ್ನು ಪರಿಗಣಿಸಬೇಕಾಗುತ್ತದೆ. ಹೀಗಾದಾಗ ವೈದ್ಯಕೀಯ ಸಾಹಿತ್ಯದ ಆಯಾಮ ಅಪಾರವಾಗಿ ಹೆಚ್ಚುತ್ತದೆ. ವೈದ್ಯಕೀಯ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಇದುವರೆಗೆ ಪ್ರಕಟವಾಗಿರುವ ಪುಸ್ತಕಗಳ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿದೆ. ಸಂಖ್ಯೆ ಮತ್ತು ಗುಣಮಟ್ಟ ಎರಡರಲ್ಲೂ ಗಣನೀಯ ಪ್ರಗತಿಯಾಗಿರುವುದನ್ನು ಗಮನಿಸಿದ್ದೇವೆ. ಪುಸ್ತಕಗಳ ಜೊತೆಗೆ ವಿವಿಧ ಪತ್ರಿಕೆಗಳಲ್ಲಿನ ಲೇಖನಗಳು, ಪೂರಕ ಪುಟಗಳು, ವಿಶೇಷ ಆವೃತ್ತಿಗಳು ದೀಪಾವಳಿ ಯುಗಾದಿ ಸಂದರ್ಭಗಳಲ್ಲಿ ವಿಶೇಷ ಸಂಚಿಕೆಗಳೊಂದಿಗೆ ಹೊರಬರುವ ಬೋನಸ್ ಕೊಡುಗೆಗಳು ಈ ಎಲ್ಲದರ ಮೂಲಕ ವೈದ್ಯಕೀಯ ಸಾಹಿತ್ಯ ಸಮೃದ್ಧವಾಗಿ ಹೊರಬಂದಿದೆ. ಅನೇಕ ಕೃತಿಗಳು ಮರು ಮುದ್ರಣ ಕಂಡಿರುವ ಅನೇಕ ಉದಾಹರಣೆಗಳಿವೆ. ರೇಡಿಯೇ ದೂರದರ್ಶನಗಳು ಅಕ್ಷರಸ್ಥ-ಅನಕ್ಷರಸ್ಥರ ಗಡಿಯನ್ನು ದಾಟಿ ಉಳಿದ ಮಾಧ್ಯಮಗಳು ಮುಟ್ಟದ ತಾಣಗಳಿಗೆ, ಅಲ್ಲಿನ ಜನರಿಗೆ ವೈದ್ಯಕೀಯ ಸಾಹಿತ್ಯವನ್ನು ಮುಟ್ಟಿಸಿದೆ. ರೇಡಿಯೋ, ದೂರದರ್ಶನಗಳಲ್ಲಿ ಪ್ರಸಾರವಾಗುವ ಪರಿಣಿತ ವೈದ್ಯರೊಂದಿಗೆ ನಡೆಸುವ ನೇರ ಫೋನ್ ಇನ್ ಕಾರ್ಯಕ್ರಮ ಏಕಕಾಲಕ್ಕೆ ಒಂದು ಕೋಟಿ ಜನರನ್ನು ಮುಟ್ಟುವ ಸಾಮರ್ಥ್ಯ ಹೊಂದಿದೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ. ಅಂತರ್ಜಾಲದ ಸೌಲಭ್ಯ ಪಡೆದವರ ಪಾಲಿಗಂತೂ ಆರೋಗ್ಯದ ಬಗೆಗಿನ ಸರ್ವಸಮಸ್ತ ಮಾಹಿತಿಗಳೂ ಕ್ಷಣಕಾಲದಲ್ಲಿ ದೊರೆಯುತ್ತವೆ. ಉಳಿದೆಲ್ಲ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರದಲ್ಲೂ ಇಂದು ಮಾಹಿತಿಯ ಮಹಾಪೂರವನ್ನು ನಾವು ಗಮನಿಸಬಹುದು. ಆದರೆ ಇಂಥ ಮಾಹಿತಿ ಜನಸಾಮಾನ್ಯರ ಆರೋಗ್ಯ ವೃದ್ಧಿಗೆ ಎಷ್ಟರಮಟ್ಟಿಗೆ ನೆರವಾಗಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಯಾವುದೇ ಕ್ಷೇತ್ರದಲ್ಲಿನ ಹೊಸ ಆಲೋಚನೆ, ಪರಿಕಲ್ಪನೆಗಳು ಸಮಾಜ ವ್ಯವಸ್ಥೆಯೊಂದರಲ್ಲಿ ಹೇಗೆ ಪ್ರಸರಿಸುತ್ತವೆ ಎಂಬುದನ್ನು ಸಮಾಜ ವಿಜ್ಞಾನಿ ಎವರೆಟ್ ರೋಜರ್, ೧೯೬೨ರಲ್ಲಿ ಪ್ರಕಟವಾದ ಡಿಫ್ಯೂಶನ್ ಆಫ್ ಇನೋವೇಶನ್ಸ್’ ಎಂಬ ತನ್ನ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಅರಿವು, ಮನೋಭಾವ, ನಿರ್ಧಾರ, ಆಚರಣೆ ಮತ್ತು ಒಪ್ಪಿಗೆ ಈ ಐದು ಹಂತಗಳ ಮೂಲಕ ನೂತನ ಆಲೋಚನೆ, ಮಾಹಿತಿಗಳು ಜನಸಮುದಾಯದ ಭಾಗವಾಗುತ್ತದೆ ಎಂಬುದು ರೋಜರ್ ಸಿದ್ಧಾಂತದ ತಿರುಳು. ಯಾವುದೇ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ಮಾಹಿತಿ ಮೊಟ್ಟ ಮೊದಲಿಗೆ ಆ ವಿಷಯದ ಬಗ್ಗೆ ಅರಿವನ್ನು ಮೂಡಿಸುತ್ತದೆ. ವೈದ್ಯಕೀಯ ಸಾಹಿತ್ಯ ಮಾಡುತ್ತಿರುವ ಕೆಲಸವೂ ಇದೇ. ಆರೋಗ್ಯದ ಪರಿಕಲ್ಪನೆ, ಆರೋಗ್ಯವನ್ನು ನಿರ್ಧರಿಸುವ ಅಂಶಗಳು, ಉತ್ತಮ ಆರೋಗ್ಯವನ್ನು ಸಂಪಾದಿಸಿ, ಸಂರಕ್ಷಿಸಿಕೊಳ್ಳುವ ಉಪಾಯಗಳು, ಆಧುನಿಕ ಜೀವನದಲ್ಲಿ ಒತ್ತಡವನ್ನು ನಿರ್ವಹಿಸುವ ಮಾರ್ಗೋಪಾಯಗಳು, ಸ್ಥೂಲಕಾಯತೆ, ಮಧುಮೇಹ, ಏರಿದ ರಕ್ತದೊತ್ತಡ ಮುಂತಾದವುಗಳು ಬರದಂತೆ ಎಚ್ಚರ ವಹಿಸುವ ಪ್ರಸಂಗ ಬಂದಾಗ ಎದೆಗುಂದದೆ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಬಗೆ ಮುಂತಾದ ಅಸಂಖ್ಯ ಪ್ರಸಕ್ತ ವಿಷಯಗಳ ಬಗೆಗೆ ಜನಸಾಮಾನ್ಯರ ಅರಿವಿನ ಮಟ್ಟವನ್ನು ವೈದ್ಯಕೀಯ ಸಾಹಿತ್ಯ ಎತ್ತರಿಸಿದೆ. ಇದು ಮೊದಲನೆಯ ಹಂತ. ಆದರೆ ಈ ಅರಿವು ಆಚರಣೆಯಲ್ಲಿ ಬರಬೇಕಾದರೆ ಅದಕ್ಕೆ ಸೂಕ್ತ ಮನೋಭಾವ ಬೇಕು. ಯಾವುದೇ ಪೂರ್ವಗ್ರಹವಿಲ್ಲದೇ ದೊರೆತ ಮಾಹಿತಿಯನ್ನು ಪರಿಶೀಲಿಸಿ ಅದರಲ್ಲಿನ ಉಪಯುಕ್ತ ವಿಷಯಗಳನ್ನು ಗುರುತಿಸುವ ಆಕಸ್ತಿಯಿರಬೇಕು. ಎಷ್ಟೆಲ್ಲ ಅರಿವಿದ್ದರೂ, ಅದನ್ನು ಬಳಕೆಗೆ ತರದೇ ಉದಾಸೀನ ಮಾಡುವ ನೂರಾರು ಪ್ರಕರಣಗಳು ನಮಗೆ ತಿಳಿದಿವೆ. ವೈದ್ಯಕೀಯ ಸಾಹಿತ್ಯ ಇಂಥ ಮನೋಭಾವವನ್ನು ಬೆಳೆಸಲೂ ನೆರವಾಗಿದೆಯೆಂಬುದು ಪ್ರಶಂಸನೀಯ. ಇಂಥ ಮನೋಭಾವದಿಂದ ವ್ಯಕ್ತಿ, ವೈದ್ಯಕೀಯ ಸಾಹಿತ್ಯ ಒದಗಿಸುವ ಮಾಹಿತಿಯನ್ನು ತನ್ನ ಜೀವನಕ್ಕೆ ಅನ್ವಯಿಸುವ ನಿರ್ಧಾರ ಮಾಡುತ್ತಾನೆ ಆಚರಣೆಗೆ ತರುತ್ತಾನೆ. ಪ್ರಯೋಜನಗಳನ್ನು ಪರಿಶೀಲಿಸುತ್ತಾನೆ. ಪ್ರಯೋಜನ ಕಂಡುಬಂದು ಆರೋಗ್ಯ ಸಂರಕ್ಷಣೆ ವೃದ್ಧಿಗಳಿಗೆ ನೆರವಾದರೆ ಅದನ್ನು ಮಾಹಿತಿಯ ಉಪಯುಕ್ತತೆಯನ್ನು ಬೇರೆಯವರೊಡನೆ ಹಂಚಿಕೊಳ್ಳುತ್ತಾನೆ ಪ್ರಚಾರ ನೀಡುತ್ತಾನೆ. ಬದಲಾವಣೆಯ ಪ್ರೇರಕ ಶಕ್ತಿಯಾಗುತ್ತಾನೆ. ವೈದ್ಯಕೀಯ ಸಾಹಿತ್ಯವನ್ನು ಓದಿ, ಕೇಳಿ, ಕಂಡು, ಮನನ ಮಾಡಿ ಆಚರಣೆಗೆ ತಂದು ಅದರಿಂದ ಫಲ ಪಡೆದಿರುವ ಸಾವಿರಾರು ವ್ಯಕ್ತಿಗಳನ್ನು ನಾವಿಂದು ನೋಡಬಹುದು. ಆರೋಗ್ಯ ವೃದ್ಧಿಯಲ್ಲಿ ವೈದ್ಯಕೀಯ ಸಾಹಿತ್ಯ ನೀಡಿರುವ ಕೊಡುಗೆಗೆ ಇಂತಹ ವ್ಯಕ್ತಿಗಳು ಪ್ರಬಲ ಸೂಚಿಗಳಾಗುತ್ತಾರೆ. ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಇರುವ ಸಾಮಾನ್ಯ ಅರಿವು ಹಾಗೂ ಅದನ್ನು ಆಚರಣೆಗೆ ತರುವುದರ ನಡುವೆ ಸಾಕಷ್ಟು ಅಂತರವಿದೆ. ಜನಸಮುದಾಯದಲ್ಲಿ ಸಾಕ್ಷರರ ಪ್ರಮಾಣ ಹೆಚ್ಚಿದಷ್ಟು ಈ ಅಂತರವನ್ನು ಕಡಿಮೆ ಮಾಡುವ ಪ್ರಯೋಗಗಳು ಹೆಚ್ಚು ಯಶಸ್ವಿಯಾಗುತ್ತವೆ. ಆರೋಗ್ಯವೃದ್ಧಿಗೆ ಅಗತ್ಯವಾದ ಮಾಹಿತಿಗಳಿದ್ದೂ ಅದನ್ನು ಆಚರಣೆಗೆ ತರದಿರುವ ಸಾವಿರಾರು ವ್ಯಕ್ತಿಗಳ ಮನಸ್ಸನ್ನು ಬದಲಿಸುವಲ್ಲಿ ಎಲ್ಲ ವೈದ್ಯರಿಗೂ ವಿಶೇಷ ಪಾತ್ರವಿದೆ. ಅನಕ್ಷರಸ್ಥರು ಹೆಚ್ಚಾಗಿರುವ ಪ್ರದೇಶಗಳಿಗೂ ಈ ಮಾತು ಅನ್ವಯಿಸುತ್ತದೆ. ಸಮಾಲೋಚನೆಯ ಸಂದರ್ಭದಲ್ಲಿ ವೈದ್ಯರಿಂದ ಸೂಕ್ತ ಸಲಹೆ ಬಂದಲ್ಲಿ ಈಗಾಗಲೇ ಜನರ ಅರಿವಿನಲ್ಲಿರುವ ವೈದ್ಯಕೀಯ ಮಾಹಿತಿಯ ಬಲವರ್ಧನೆಯಾಗುತ್ತದೆ. ಅರಿವನ್ನು ಆಚರಣೆಯತ್ತ ಕೊಂಡೊಯ್ಯುವುದರಲ್ಲಿ ಈ ಬಲವರ್ಧನೆಗೆ ಮಹತ್ವದ  ಸ್ಥಾನವಿದೆ. ವೈದ್ಯರು ಇಂತಹ ಸಲಹೆ ನೀಡಬೇಕಾದಲ್ಲಿ ವೈದ್ಯಕೀಯ ಸಾಹಿತ್ಯ ಪ್ರಕಾರದಲ್ಲಿ ನಾವಿಂದು ನೋಡುತ್ತಿರುವ ಮಾಹಿತಿಯ ಪರಿಚಯ ವೈದ್ಯರಿಗೂ ಇರಬೇಕು. ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಿಂದ ಅಥವಾ ಇನ್ನಾವುದೇ ಮೂಲದಿಂದ ಮಾಹಿತಿ ಪಡೆದುಕೊಂಡ ವ್ಯಕ್ತಿಯೊಬ್ಬ ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಅನುಮಾನ ಪರಿಹರಿಸಿಕೊಳ್ಳಲು ಬಯಸಿದಾಗ ಸೂಕ್ತ ಮಾರ್ಗದರ್ಶನ ದೊರೆಯದಿದ್ದರೆ ಆರೋಗ್ಯ ವೃದ್ಧಿಯ ಎಲ್ಲ ಪ್ರಯತ್ನಗಳೂ ವ್ಯರ್ಥವಾಗುತ್ತವೆ. ವೈದ್ಯಕೀಯ ಸಾಹಿತ್ಯ ಜನರ ಅರಿವಿನ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸಾಹಿತ್ಯವನ್ನು ಪೂರಕ ಸಾಮಗ್ರಿಯನ್ನಾಗಿ ಬಳಸಿಕೊಂಡು ವೈದ್ಯರ  ನೆರವಿನಿಂದ ಗ್ರಾಮಾಂತರ ಪ್ರದೇಶಗಳಲ್ಲಿನ ಸರ್ಕಾರೇತರ ಸಂಸ್ಥೆಗಳು ಸಂಘಟನೆಗಳು ಎಂತಹ ಮಹತ್ತರವಾದ ಬದಲಾವಣೆಗಳನ್ನು ತರಬಲ್ಲವೆಂಬುದನ್ನು ಆಕಾಶವಾಣಿ ಮತ್ತು ಯೂನಿಸೆಫ್ ಸಂಸ್ಥೆಗಳು, ಧಾರವಾಡ, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳ ಹಿಂದುಳಿದ ಬಡ ಜನರಿರುವ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪ್ರಸಾರ ಮಾಡಿರುವ ವಿಶೇಷ ಆಂದೋಲನದ ಕಾರ್ಯಕ್ರಮಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ನಮ್ಮ ಸಮಾಜದಲ್ಲಿ ಇಂದು ವಿಫುಲ ಪ್ರಮಾಣದಲ್ಲಿ ಲಭ್ಯವಿರುವ ವೈದ್ಯಕೀಯ ಸಾಹಿತ್ಯದಿಂದ ಉಂಟಾಗಿರುವ ಪರಿಣಾಮಗಳಿಗೆ ಮತ್ತೊಂದು ಮಗ್ಗಲೂ ಉಂಟು. ತಲೆನೋವು ಬಂದರೆ ಮೆದುಳು ಗಂತಿಯೊಂದು ತಿಳಿಯುವ, ಎಲ್ಲ ಎದೆನೋವು, ಹೃದಯಸ್ತಂಭನದ ಮುನ್ಸೂಚನೆಯೆಂದು ಭಾವಿಸುವ ರೋಗಲಕ್ಷಣಗಳನ್ನು ವಿವರಿಸುವ ವೈದ್ಯಕೀಯ ಸಾಹಿತ್ಯವನ್ನು ಓದಿದಾಗ ಆ ಎಲ್ಲ ಲಕ್ಷಣಗಳೂ ತಮ್ಮಲ್ಲಿವೆಯೆಂದು ತೀರ್ಮಾನಿಸಿ ವೈದ್ಯರಲ್ಲಿಗೆ ಓಡುವವರ ಸಂಖ್ಯೆಗೇನೂ ಕೊರತೆಯಿಲ್ಲ. ಅಂಥವರಿಗೆ ಬೇಕಾಗಿರುವುದು ಸೂಕ್ತಮಾರ್ಗದರ್ಶನ ಮತ್ತು ಭರವಸೆಗಳು; ಅವುಗಳೊಂದಿಗೆ ಬೇಕಾದಾಗ ಅಗತ್ಯ ಚಿಕಿತ್ಸೆ ಮಾಧ್ಯಮಗಳಿಂದ ಮಾಹಿತಿ ಪಡೆದು ಅದನ್ನು ತಮ್ಮ ಮೇಲೆ ಆರೋಪಿಸಿಕೊಂಡು, ಅದರಿಂದ ತಮ್ಮ ವರ್ತನೆಗಳನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗಳನ್ನು ಆಪ್ತ ಸಮಾಲೋಚನೆಯ ಸಂದರ್ಭಗಳಲ್ಲೂಕಾಣುತ್ತೇವೆ ‘ಏಕ ಚಿತ್ತಾಗ್ರತೆಯಿಂದ ಓದಲು ಸಾಧ್ಯವಾಗುತ್ತಿಲ್ಲ’ ವೆಂಬ ಕಾರಣದಿಂದ ತಂದೆ ತಾಯಿ ಕರೆದುಕೊಂಡು ಬಂದ ಪಿಯುಸಿ ವಿದ್ಯಾರ್ಥಿಯೊಬ್ಬ ಹೇಳಿದ್ದು ಇಷ್ಟು; “ಹತ್ತು ವರ್ಷಗಳ ಹಿಂದೆ ಯಾವುದೇ ವಿಷಯದ ಮೇಲೆ ಗಮನವನ್ನು ಕೇಂದ್ರಿಕರಿಸಬಹುದಾಗಿದ್ದ ಅವಧಿ ೧ ನಿಮಿಷಗಳು ಆದರೆ ಆಧುನಿಕ ಜೀವನ ಶೈಲಿಯ ಒತ್ತಡದಿಂದ ಈ ಅವಧಿ ಇಂದು ೫ ನಿಮಿಷ ೭ ಸೆಕೆಂಡುಗಳಿಗೆ ಇಳಿದಿದೆಯೆಂದು ಬ್ರಿಟನ್ನಿನ ಸಂಶೋಧಕರೇ ಈ ವರ್ಷದ ಮಧ್ಯಭಾಗದಲ್ಲಿ ಖಚಿತಪಡಿಸಿದ್ದಾರೆ. ನಾನೇನು ಮಾಡಲಿ ಸಾರ್, ನಾನು ಕೂಡ ಈ ಒತ್ತಡಕ್ಕೆ ಬಲಿಯಾಗಿದ್ದೇನೆ.” ಎಂಥ ಜಾಣತನ ಅಲ್ಲವೇ? ಇದು ಕೂಡ ವಿಪುಲವಾಗಿರುವ ವೈದ್ಯ ಸಾಹಿತ್ಯ ತಂದಿರುವ ಪರಿಣಾಮವೇ! ಆದರೆ ಇಂಥವರ ಸಂಖ್ಯೆ ಅತ್ಯಲ್ಪವೆಂಬುದೇ ಸಮಾಧಾನದ ಸಂಗತಿ. ಕನ್ನಡ ವೈದ್ಯಕೀಯ ಸಾಹಿತ್ಯದ ಅತ್ಯಂತ ಮುಖ್ಯವಾದ ಸಾಧನೆಯೆಂದರೆ ಆರೋಗ್ಯ ವೃದ್ಧಿಗೆ ಸಂಬಂಧಿಸಿದ ನಿಖರವಾದ ಕಾರ್ಯಸೂಚಿಯನ್ನು ಸಿದ್ದಪಡಿಸಿ ಅದನ್ನು ಆಚರಣೆಗೆ ತರಲು ಅಗತ್ಯವಾದ ಮಾಹಿತಿಯನ್ನು ಸೃಜನಾತ್ಮಕ ರೀತಿಯಲ್ಲಿ ಸೃಷ್ಟಿಸಿರುವುದು ಈ ಪ್ರಯತ್ನದಲ್ಲಿ ಸಕ್ರಿಯವಾಗಿ ಶ್ರಮಿಸಿರುವ ಎಲ್ಲ ವೈದ್ಯಸಾಹಿತಿಗಳೂ ಅಭಿನಂದನಾರ್ಹರು.

* * *

Categories
ಆರೋಗ್ಯ ವಿಜ್ಞಾನ ವಿಜ್ಞಾನ ಸಾಮಾನ್ಯ ಆರೋಗ್ಯ

ವೈದ್ಯಸಾಹಿತ್ಯ ಸಮೃದ್ಧ ಆರೋಗ್ಯ

ಕೃತಿ-ಆರೋಗ್ಯ ವಿಜ್ಞಾನ, ವಿಜ್ಞಾನ, ಸಾಮಾನ್ಯ ಆರೋಗ್ಯ
ಸಂಪಾದಕರು-ಡಾ. ಕೆ.ಎಂ. ಮೈತ್ರಿ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಜನಜೀವನದಲ್ಲಿ ವಿಜ್ಞಾನ ವಿಜ್ಞಾನ ವೈದ್ಯಕೀಯ ವಿಜ್ಞಾನ

ಡಾಕ್ಟರ್ ಇಲ್ಲದೆಡೆ

ಕೃತಿ:ಡಾಕ್ಟರ್ ಇಲ್ಲದೆಡೆ
ಲೇಖಕರು: ಡಾ. ಸಿ.ಆರ್. ಚಂದ್ರಶೇಖರ್
ಮನೋವೈದ್ಯ, ನಿಮ್ಹಾನ್ಸ್ ಬೆಂಗಳೂರು – ೨೯
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ ಲೈಂಗಿಕ ಆರೋಗ್ಯ ವಿಜ್ಞಾನ

ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು

ಕೃತಿ:ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು
ಲೇಖಕರು: – ಎನ್. ವಿಶ್ವರೂಪಾಚಾರ್
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ ವಿಜ್ಞಾನ ವೈದ್ಯಕೀಯ ವಿಜ್ಞಾನ

ಯಾವ ಕಾಯಿಲೆಗೆ ಯಾವ ಮನೆ ಔಷಧಿ

ಕೃತಿ-ಯಾವ ಕಾಯಿಲೆಗೆ ಯಾವ ಮನೆ ಔಷಧಿ
ಸರಣಿ-ಆರೋಗ್ಯ ವಿಜ್ಞಾನ, ವಿಜ್ಞಾನ, ವೈದ್ಯಕೀಯ ವಿಜ್ಞಾನ
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ ಲೈಂಗಿಕ ಆರೋಗ್ಯ ವಿಜ್ಞಾನ

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ

ಕೃತಿ-ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ
ಲೇಖಕರು-ಎನ್.ವಿಶ್ವರೂಪಾಚಾರ್
ಸರಣಿ-ಆರೋಗ್ಯ ವಿಜ್ಞಾನ, ಲೈಂಗಿಕ ಆರೋಗ್ಯ, ವಿಜ್ಞಾನ
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ ವಿಜ್ಞಾನ ಸಾಮಾನ್ಯ ಆರೋಗ್ಯ

ಸಂಧಿವಾತ – ಸುಧಾರಿತ ವ್ಯಾಯಾಮ ಚಿಕಿತ್ಸೆ

ಕೃತಿ-ಸಂಧಿವಾತ
ಲೇಖಕರು-ಎನ್. ವಿಶ್ವರೂಪಾಚಾರ್
ಸರಣಿ-ಆರೋಗ್ಯ ವಿಜ್ಞಾನ, ವಿಜ್ಞಾನ, ಸಾಮಾನ್ಯ ಆರೋಗ್ಯ
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ ಲೈಂಗಿಕ ಆರೋಗ್ಯ ವಿಜ್ಞಾನ

ದಾಂಪತ್ಯ ಲೈಂಗಿಕ ಪ್ರಶ್ನೋತ್ತರಗಳು

ಕೃತಿ: ದಾಂಪತ್ಯ ಲೈಂಗಿಕ ಪ್ರಶ್ನೋತ್ತರಗಳು:
ಲೇಖಕರು: ಲೈಂಗಿಕ ಆರೋಗ್ಯ, ವಿಜ್ಞಾನ
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ ಲೈಂಗಿಕ ಆರೋಗ್ಯ ವಿಜ್ಞಾನ

ಗರ್ಭಿಣಿ ಹೆಂಡತಿಯನ್ನು ಗಂಡ ಹೇಗೆ ಪ್ರೀತಿಸಬೇಕು?

ಕೃತಿ:ಗರ್ಭಿಣಿ ಹೆಂಡತಿಯನ್ನು ಗಂಡ ಹೇಗೆ ಪ್ರೀತಿಸಬೇಕು?
ಲೇಖಕರು: ಲೈಂಗಿಕ ಆರೋಗ್ಯ, ವಿಜ್ಞಾನ
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ ಆಹಾರ ವಿಜ್ಞಾನ ವಿಜ್ಞಾನ

ನಮ್ಮ ಆಹಾರ

ಕೃತಿ-ನಮ್ಮ ಆಹಾರ
ಸಂಪಾದಕರು-ಡಾ.ಉಷಾಕಿರಣ್
ಸರಣಿ-ಆರೋಗ್ಯ ವಿಜ್ಞಾನ, ಆಹಾರ ವಿಜ್ಞಾನ, ವಿಜ್ಞಾನ
ಕೃತಿಯನ್ನು ಓದಿ