Categories
ಭೂಮಿ ವಿಜ್ಞಾನ

ಭೂಮಿಯ ಅಂತರಾಳ

ನೀವು ಯುಧಿಷ್ಠಿರನ ಹೆಸರನ್ನು ಕೇಳಿದ್ದೀರಲ್ಲವೆ? ಪಂಚಪಾಂಡವರಲ್ಲಿ ಅವನು ಹಿರಿಯ. ದ್ವೈತವನದಲ್ಲಿ ಪಾಂಡವರೆಲ್ಲ ಅರಣ್ಯವಾಸ ಮಾಡುತ್ತಿದ್ದ ಸಮಯ. ಒಮ್ಮೆ ಯುಧಿಷ್ಠಿರ ಬೇಟೆಯಾಡಿ ಬಾಯಾರಿ ಬಳಲಿದ. ಹತ್ತಿರದಲ್ಲೇ ಸರೋವರ ಕಂಡಿತು. ಸರಿ, ನೀರು ಕುಡಿಯಲೆಂದು ಸರೋವರಕ್ಕೆ ಬಂದ. ಆಶ್ಚರ್ಯ! ತಮ್ಮಂದಿರೆಲ್ಲ ದಡದ ಮೇಲೆ ನಿರ್ಜೀವವಾಗಿ ಬಿದ್ದಿದ್ದಾರೆ. ಅಷ್ಟರಲ್ಲೇ ಅಶರೀರ ವಾಣಿಯೊಂದು ಮೊಳಗಿತು. ತಾನು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಅನಂತರ ನೀರು ಕುಡಿಯಬೇಕೆಂದು ಕಟ್ಟಪ್ಪಣೆ ಮಾಡಿತು. ಯುಧಿಷ್ಠಿರ ಸಮ್ಮತಿಸಿದ. ‘ಭೂಮಿಗಿಂತ ದೊಡ್ಡವಸ್ತು ಯಾವುದು? ಆಕಾಶಕ್ಕಿಂತ ಎತ್ತರವಾದದ್ದು ಯಾವುದು?’ – ಅಶರೀರಿ ಯಕ್ಷನ ಪ್ರಶ್ನೆಗೆ ಯುಧಿಷ್ಠಿರ ಏನು ಉತ್ತರಿಸಿದ ಗೊತ್ತೆ? ‘ಭೂಮಿಗಿಂತ ತಾಯಿ ದೊಡ್ಡವಳು, ಆಕಾಶಕ್ಕಿಂತ ತಂದೆ ಎತ್ತರದವನು’ ಎಂದು.