ಸಮಗ್ರ ದಾಸ ಸಾಹಿತ್ಯ

ಹರಿದಾಸ ಭಕ್ತಿ ಚಳುವಳಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಮಹತ್ವದ ತಿರುವು ನೀಡಿತ್ತು. ಆರು ಶತಮಾನಗಳ ಅವಧಿಯಲ್ಲಿ ಹಲವು ಸಂತರು ಹಾಗೂ ಯೋಗಿಗಳು ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಸಂಸ್ಕಾರ, ತತ್ವ ಹಾಗೂ ಕಲೆಯನ್ನು ರೂಪಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ. ಅವರು ಸಾಕಷ್ಟು ಧಾರ್ಮಿಕ ಪ್ರಭಾವವನ್ನು ಜನ ಸಮೂಹ ಹಾಗೂ ದಕ್ಷಿಣ ಭಾರತವನ್ನು ಆಳಿದ ರಾಜ್ಯಗಳ ಮೇಲೆ ಬೀರಿದರು.

ಈ ಚಳುವಳಿಯನ್ನು ಪ್ರಾರಂಭಿಸಿದ್ದು ಹರಿದಾಸರು – (ಹರಿಯ ಸೇವಕರು) ಹಾಗೂ ಆಕಾರ ಪಡೆದಿದ್ದು ೧೩-೧೪ ನೆಯ ಶತಮಾನದ ಕಾಲಮಾನದಲ್ಲಿ, ವಿಜಯನಗರ ಸಾಮ್ರಾಜ್ಯ ಆಳ್ವಿಕೆಯ ಕಾಲದಲ್ಲಿ ಹಾಗೂ ಅದರ ಮುನ್ನ.

ಶ್ರೀಪಾದರಾಯ, ವ್ಯಾಸತೀರ್ಥ, ವಾದಿರಾಜತೀರ್ಥ, ಪುರಂದರದಾಸ ಹಾಗೂ ಕನಕದಾಸರಂತಹ ಪ್ರಖ್ಯಾತ ಹಿಂದೂ ತತ್ವಜ್ಞಾನಿಗಳು, ಕವಿಗಳು ಹಾಗೂ ವಿದ್ವಾಂಸರು ಈ ಸಮಯದಲ್ಲಿ ಮುಖ್ಯ ಪಾತ್ರ ವಹಿಸಿದರು.

ಹರಿದಾಸರು ಸಂತರು, ಕೆಲವರು ಅಲೆದಾಡುವ ಹಾಡುಗರು ಹಾಗೂ ತಮ್ಮನ್ನು ತಾವು ಹರಿಯ ಸೇವಕರೆಂದು ಭಾವಿಸುತ್ತಿದ್ದರು. ಹರಿದಾಸ ಚಳುವಳಿ ಕನ್ನಡ ಭಕ್ತಿ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದೆ.

ದಾಸಸಾಹಿತ್ಯ ಈಗ ಮೊಬೈಲ್ ನಲ್ಲೂ ಲಭ್ಯ. ಮೊಬೈಲ್ ಆಪ್-ಗಾಗಿ ಕೆಳಗಿನ ಲಿಂಕನ್ನು ಉಪಯೋಗಿಸಿ.


https://play.google.com/store/apps/details?id=pro.pada.android.haridasa&hl=en_IN&gl=US&pli=1

ದಾಸ ಶ್ರೇಷ್ಠರ ಪರಿಚಯ

ದಾಸರ ರಚನೆಗಳು