ಕನ್ನಡ ಮತ್ತು ಸಂಸ್ಕೃತಿ ಇಲಾಖೆ e-ಪುಸ್ತಕ ಕಣಜ ಆಧುನಿಕ ಜಗತ್ತು ತಾಳೆಗರಿಯಿಂದ ಟ್ಯಾಬ್ಲೆಟ್’ಗಳವರೆಗೆ ಹರಿದು ಬಂದಿದೆ. ಆಧುನಿಕ ಸಂವಹನ ಮಾಧ್ಯಮಗಳು ಬದುಕಿನ ವಿಧಾನಗಳನ್ನ ಹೊಸಮಾರ್ಗಗಳಲ್ಲಿ ವಿಕಸಿಸಿದೆ. ಈ ಬದಲಾವಣೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು 2016-17ನೆಯ ಸಾಲಿನಲ್ಲಿ ಕನ್ನಡ ಸಾಹಿತ್ಯ ಲೋಕದ ಎಲ್ಲ ಮೌಲಿಕ ಕೃತಿಗಳನ್ನು ಆಸಕ್ತ ಓದುಗರಿಗೆ, ಸಂಶೋಧಕರಿಗೆ, ಮತ್ತು ಇತಿಹಾಸ ಅಧ್ಯಯನಕಾರರಿಗೆ ಒದಗಿಸಿಕೊಡುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕನ್ನಡ ಡಿಜಿಟಲ್ ಲೈಬ್ರರಿ ಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ.ಕನ್ನಡ ಭಾಷೆಸಾಹಿತ್ಯ ಪರಂಪರೆಗೆ ಎರಡು ಸಹಸ್ರಮಾನಗಳ ಇತಿಹಾಸವಿದೆ. ಹತ್ತನೆಯ ಶತಮಾನ ಕನ್ನಡ ಸಾಹಿತ್ಯ ಲೋಕದ ಸುವರ್ಣಯುಗವೆಂದೇ ಖ್ಯಾತವಾದದ್ದು. ಹೀಗೆ ವೈಶಿಷ್ಟ್ಯಪೂರ್ಣವಾಗಿ ಅರಳಿ ನಿಂತಿರುವ ಕನ್ನಡ ಭಾಷೆಯು ತನ್ನದೇ ಸಂಸ್ಕೃತಿಯನ್ನು ಪೊರೆದಿದೆ. ‘ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ’ ಎಂಬ ನುಡಿಗಟ್ಟು ಕನ್ನಡ ಜನಪದರ ವಿಶ್ಲೇಷಣೆಯೂ ಹೌದು.ಇಂತಹ ಪರಂಪರೆಯನ್ನು ಕಾಪಿಡುವ ಮತ್ತು ವಿವಿಧ ಗ್ರಾಹಕಸ್ನೇಹಿ ವಿಧಾನಗಳಲ್ಲಿ ಒದಗಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಎಲ್ಲ ಕನ್ನಡಿಗರು ಬಳಸಲಿ ಮತ್ತು ಪಸರಿಸಲಿ ಎಂಬುದು ಈ ಯೋಜನೆಯ ಮುಖ್ಯ ಆಶಯ.

ಜನಪ್ರಿಯ ಪುಸ್ತಕಗಳು

ವೈಶಿಷ್ಟ್ಯಪೂರ್ಣ ಪುಸ್ತಕಗಳು

ಇತ್ತೀಚಿನ ಪುಸ್ತಕಗಳು