ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಅಪಸ್ವರ-ಅಪಜಯ ತ್ರಿವೇಣಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 417

Download  View

Ebook | EpubText

ಜಟಿಕ ಗಾಡಿಯೊಂದು ಚಾಮರಾಜಪೇಟೆ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿತ್ತು. ಗಾಡಿಗೆ ಬಡಕಲು ಮೈಯ ಸೊರಗಿದ ಕುದುರೆಯೊಂದನ್ನು ಕಟ್ಟಿತ್ತು. ಜಟಕಾ ಸಾಬಿ ಆರಾಮವಾಗಿ ಸಿಳ್ಳೆ ಹಾಕುತ್ತ ಕುದುರೆಯನ್ನು ಮೆಲ್ಲಗೆ ಓಡಿಸುತ್ತಿದ್ದ. “ಬೇಗ ಗಾಡಿ ಹೊಡಿ ಸಾಬ್‌. ಆಮೇಲೆ ನಮಗೆ ಟ್ರೈನು ತಪ್ಪಿ ಹೋದೀತು.” ಒಳಗಿನಿಂದ ಗೊಗ್ಗರ ದನಿಯೊಂದು ಆನಂದದಲ್ಲಿ ಮೈಮರೆತಿದ್ದ ಸಾಬಿಯನ್ನು ಎಚ್ಚರಿಸಿತು.