ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಆರ್ಥಿಕ ಪ್ರವೃತ್ತಿಗಳು ಮತ್ತು ಯೋಜನೆಗಳು ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 60

Download  View

ಬ್ರಿಟಿಷರು ಬರುವ ಪೂರ್ವದಲ್ಲಿ, ಬಟಾಟೆ(ಆಲೂಗಡ್ಡೆ), ಮೆಣಸಿನಕಾಯಿ, ನೆಲಗಡಲೆ ಮತ್ತು ತಂಬಾಕುಗಳಂತಹ ಬೆಳೆಗಳು ಈ ದೇಶವನ್ನು ಪ್ರವೇಶಿಸಿದ್ದರಿಂದ, ವ್ಯವಸಾಯದಲ್ಲಿ ಬೆಳೆಯ ನಮೂನೆ ಸ್ವಲ್ಪ ಮಟ್ಟಿಗೆ ಪರಿವರ್ತಿತವಾಯಿತು. ಈ ಬೆಳೆಗಳನ್ನು ಪೋರ್ಚುಗೀಸರು (ಹೊಸ ಜಗತ್ತಿನಿಂದ) ತಂದರಲ್ಲದೆ, ಯೂರೋಪಿಗೆ ಹೊಸ ಸಮುದ್ರ ಮಾರ್ಗವನ್ನು ಕಂಡು ಹಿಡಿದರು. ಇದರಿಂದ, ಇಲ್ಲಿಯವರೆಗೆ, ಭಾರತದ ಸಾಗರೋತ್ತರ ವಾಣಿಜ್ಯ ವ್ಯವಹಾರದ ಮೇಲೆ ಪೂರ್ಣ ತಮ್ಮದೇ ಆದ ಹತೋಟಿಯನ್ನು ಹೊಂದಿ ನೆಮ್ಮದಿಯಲ್ಲಿದ್ದ ಅರಬರಿಗೆ ಹೊಸ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡರು. ಡಚ್ಚರು ಮತ್ತು ಇಂಗ್ಲೀಷರು ಕರ್ನಾಟಕದ ಸಮುದ್ರ ದಂಡೆಗೆ ಬಂದೊಡನೆ, ಭಾರತದ ಪದಾರ್ಥಗಳಾದ ಅಕ್ಕಿ, ಜವಳಿ, ವಜ್ರ ಮತ್ತು ಸಾಂಬಾರ ಪದಾರ್ಥಗಳಿಗೆ ಸಾಗರೋತ್ತರ ಬೇಡಿಕೆ ಅಧಿಕವಾಯಿತು. ಟಿಪ್ಪು ರೇಷ್ಮೆ ಬೆಳೆಯನ್ನು ಆರಂಭಿಸಿ, ಗಾಜು ಮತ್ತು ಪೇಪರ್ ಉದ್ದಿಮೆಗಳನ್ನು ಸ್ಥಾಪಿಸಿದರು. ತದನಂತರ ಆದಿಲ್‍ಶಾಹಿಗಳು ಉತ್ತರ ಕರ್ನಾಟಕ ಪ್ರದೇಶದಲ್ಲಿ ಅಗರಬತ್ತಿ ತಯಾರಿಸುವುದಕ್ಕೆ ಉತ್ತೇಜನವನ್ನಿತ್ತರು.

ಸಂಬಂಧಿತ ಪುಸ್ತಕಗಳು