ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ | ಡಾ. ಸಿ.ಜಿ. ಕೇಶವಮೂರ್ತಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 166 |
ಸಮಾಜದ ಮುದಿತನವು ದೇಶದ ಸಾಮಾಜಿಕ ಮತ್ತು ಆರ್ಥಿಕ ಔನ್ನತ್ಯದ ದ್ಯೋತಕವಾಗಿದೆಯೆಂಬುದೇನೋ ನಿಜವೇ. ಆದರೂ ದೇಶವು ಸಾಮಾಜಿಕ ಮುದಿತನದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದೆ. ವಯಸ್ಸು ಏರಿದಂತೆ ವೃದ್ಧರ ಸಂಖ್ಯೆಯೂ ಏರಿ ದೇಶದ ಉತ್ಪಾದನೆ ಕುಂಠಿತಗೊಳ್ಳುತ್ತದೆ. ವ್ಯಕ್ತಿ ಆರ್ಥಿಕವಾಗಿ, ಸಾಮಾಜಿಕವಾಗಿ, ದುಡಿಯುವವರ ಮೇಲೆ ಅವಲಂಬಿತನಾಗುತ್ತಾನೆ. ದೈಹಿಕ ಶಕ್ತಿ ಮತ್ತು ಉತ್ಪಾದನಾಶಕ್ತಿ ಕುಂದುತ್ತದೆ. ವೃದ್ಧ ಸಾಮಾಜಿಕವಾಗಿ ಒಂಟಿಯಾಗುತ್ತಾನೆ. |